ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.274/2021 ಕಲಂ. 15(ಎ) ಕೆ.ಇ ಆಕ್ಟ್ :-

          ದಿನಾಂಕ: 14/06/2021 ರಂದು ಮದ್ಯಾಹ್ನ 2.10 ಗಂಟೆಗೆ ಠಾಣೆಯ ಸಿ.ಹೆಚ್.ಸಿ-167 ವಿಜಯಕುಮಾರ್‌ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 14/06/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಮತ್ತು ಕರಿಯಪ್ಪ ಸಿ.ಪಿ.ಸಿ-339 ರವರು ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಠಾಣಾ ವ್ಯಾಪ್ತಿಯ ನಿಡಗುರ್ಕಿ, ಬ್ಯಾಲಹಳ್ಳಿ, ಚಿಕ್ಕಕಟ್ಟಿಗೇನಹಳ್ಳಿ, ಜೀಡರಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 12.00 ಗಂಟೆಗೆ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಬಳಿಗೆ ಹೋದಾಗ ಸದರಿ ಗ್ರಾಮದ ವಾಸಿಯಾದ ಶ್ರೀಮತಿ ಲಕ್ಷ್ಮೀದೇವಮ್ಮ ಕೊಂ  ನರಸಿಂಹಯ್ಯ ಎಂಬುವರು ಅವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಲಕ್ಷ್ಮೀದೇವಮ್ಮ ಕೊಂ  ನರಸಿಂಹಯ್ಯ, 33 ವರ್ಷ, ಗೊಲ್ಲರು, ಗೃಹಿಣಿ, ವಾಸ ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) 180 ಎಂ .ಎಲ್ ನ  ಬ್ಯಾಗ್ ಪೇಪರ್ ವಿಸ್ಕೀಯ 10  ಟೆಟ್ರಾ ಪ್ಯಾಕೆಟ್ ಗಳು, 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 12.30 ಗಂಟೆಯಿಂದ 13.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಲಕ್ಷ್ಮೀದೇವಮ್ಮ ಕೊಂ  ನರಸಿಂಹಯ್ಯ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.275/2021 ಕಲಂ. 15(ಎ) ಕೆ.ಇ ಆಕ್ಟ್ :-

          ದಿನಾಂಕ: 14/06/2021 ರಂದು ಸಂಜೆ 4.20 ಗಂಟೆಗೆ ಠಾಣೆಯ ಸಿ.ಹೆಚ್.ಸಿ-41 ಜಗದೀಶ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:14/06/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಮತ್ತು ಸಿ.ಪಿ.ಸಿ-185 ಶ್ರೀನಿವಾಸಮೂರ್ತಿರವರು ಠಾಣಾ ಸರಹದ್ದಿನ ದೊಡ್ಡಗಂಜೂರು, ಸೀಕಲ್ಲು, ದೊಡ್ಡಬೊಮ್ಮನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಆನೂರು ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಹರೀಶ ಬಿನ್ ಲೇಟ್ ನಾಗೇಶ್ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಆನೂರು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಹರೀಶ್ ಬಿನ್ ಲೇಟ್ ನಾಗೇಶ್, 24ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3-15 ರಿಂದ 4-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಹರೀಶ್ ಬಿನ್ ಲೇಟ್ ನಾಗೇಶ್ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.276/2021 ಕಲಂ. 15(ಎ) ಕೆ.ಇ ಆಕ್ಟ್ :-

          ದಿನಾಂಕ: 14/06/2021 ರಂದು ಸಂಜೆ 6.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-165 ಚಂದ್ರಪ್ಪ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 14/06/2021 ರಂದು ಪಿ.ಎಸ್.ಐ ಎಸ್.ನರೇಶ್ ನಾಯ್ಕ ರವರು ಹೆಚ್.ಸಿ.165 ಟಿ.ಎಂ.ಚಂದ್ರಪ್ಪ ಆದ ತನಗೆ ಮತ್ತು ಮ.ಪಿ.ಸಿ-479 ಡಿ.ಎಸ್.ರೇಖಾ ರವರನ್ನು ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ನಾವು ಬುಕ್ಕನಹಳ್ಳಿ, ಸಿಂಗಸಂದ್ರ ಮತ್ತು ಮುಂತಕದಿರೇನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಗೆ ಎನ್.ಕೊತ್ತೂರು ಗ್ರಾಮಕ್ಕೆ ಹೋಗಲಾಗಿ, ಸದರಿ ಗ್ರಾಮದ ವಾಸಿಯಾದ ಲಕ್ಷ್ಮಮ್ಮ ಕೋಂ ನರಸಿಂಹಮೂರ್ತಿ ರವರು ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಮೇರೆಗೆ, ಸದರಿ ಲಕ್ಷ್ಮಮ್ಮ ಕೋಂ ನರಸಿಂಹಮೂರ್ತಿ ರವರ ಮನೆಯ ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಲಕ್ಷ್ಮಮ್ಮ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 3) ಒಂದು ಲೀಟರ್ ನ ಎಡರು ನೀರಿನ ಬಾಟಲುಗಳಿದ್ದು, 4) ಓಪನ್ ಆಗಿದ್ದ  90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೆಟ್ ಗಳು ಇದ್ದವು. ಸ್ಥಳದಲ್ಲಿದ್ದ ಮನೆಯ ಮಾಲೀಕರ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ, ಲಕ್ಷ್ಮಮ್ಮ ಕೋಂ ನರಸಿಂಹಮೂರ್ತಿ, 32 ವರ್ಷ, ಆದಿ ಕರ್ನಾಟಕ ಜನಾಂಗ, ಮನೆಕೆಲಸ, ಎನ್..ಕೊತ್ತೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಲಕ್ಷ್ಮಮ್ಮ ರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದರಿಂದ ಪಂಚರ ಸಮಕ್ಷಮ ಸಂಜೆ 5.10 ರಿಂದ 6.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲುಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಲಕ್ಷ್ಮಮ್ಮ ಕೋಂ ನರಸಿಂಹಮೂರ್ತಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾದಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.110/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ಪಿರ್ಯಾದಿದಾರರಾದ ಆನಂದ್ ಕುಮಾರ್ ಜೆ.ಎನ್ ಪಿ ಐ ಚಿಂತಾಮಣಿ ನಗರ ಠಾಣೆ ರವರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:14/06/2021 ರಂದು ಬೆಳಿಗ್ಗೆ  ನಾನು ಮತ್ತು ಠಾಣಾ  ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಎಂ.ಜಿ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಫ್ಲವರ್ ವೃತ್ತದ ಬಳಿಯಿರುವ ಸಂಗೀತ ಮೊಬೈಲ್ಸ್ ಅಂಗಡಿ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ  ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಚಂದ್ರಶೇಖರ್ ಬಿನ್ ಚನ್ನರಾಯಪ್ಪ, 27 ವರ್ಷ, ವಕ್ಕಲಿಗ, ಸಂಗೀತಾ ಮೊಬೈಲ್ ಅಂಗಡಿ ಫ್ಲವರ್ ವೃತ್ತ, ವಾಸ: ವಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣದ ದಾಖಲಿಸಿರುತ್ತೆ .

 

5. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.82/2021 ಕಲಂ. 379 ಐ.ಪಿ.ಸಿ:-

          ದಿನಾಂಕ:14/06/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ  ಉಮೇಶ್ ಹೆಚ್ ಎನ್, ಬಿನ್ ನರಸಿಂಹಯ್ಯ, 43 ವರ್ಷ, ಈಡೀಗರು, ಬೇಕರಿ ಕೆಲಸ, ಲಹರಿ ಬೇಕರಿ, ನ್ಯಾಷನಲ್ ಕಾಲೇಜು ಹತ್ತಿರ, ವಾಸ  ವಿ.ವಿ.ಪುರಂ ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ದಿನಾಂಕ:08/06/2021 ರಂದು ಮಂಗಳವಾರ ಬೆಳಿಗ್ಗೆ 7-15 ಗಂಟೆ ಸಮಯದಲ್ಲಿ ಬಿ ಹೆಚ್ ರಸ್ತೆಯಲ್ಲಿರುವ ಎಸ್.ವಿ ಸನ್ಸ್ ಕಾಫೀ ವರ್ಕ್ಸ್ ಮುಂದೆ ತನ್ನ ಬಾಬತ್ತು KA-40 S-0682 ನೊಂದಣಿ ಸಂಖ್ಯೆ ಹಿರೋ ಪ್ಯಾಷನ್ ಪ್ರೋ ಬಣ್ಣ ಗ್ರೇ ಮತ್ತು ಬ್ಲಾಕ್  ಬಣ್ಣದ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಕಾಫಿ ಪುಡಿಯನ್ನು ತರಲು ಹೋಗಿ ತೆಗೆದುಕೊಂಡು ಬರುವುಷ್ಟರಲ್ಲಿ  ಯಾರೋ ಕಳ್ಳರು ತನ್ನ ಬಾಬತ್ತು KA-40 S-0682  ನೊಂದಣಿ ಸಂಖ್ಯೆಯ ಹಿರೋ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕರೋನಾ ಲಾಕ್ ಡೌನ್ ಇದ್ದ ಕಾರಣ ದೂರು ನೀಡಲು ತಡವಾಗಿರುತ್ತೆ. ಮತ್ತು ತನ್ನ ದ್ವಿ ಚಕ್ರ ವಾಹನವನ್ನು ಹುಡುಕಿ ಕೊಡಲು ನೀಡಿದ ದೂರಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.119/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:14/06/2021 ರಂದು ಮದ್ಯಾಹ್ನ 03-00 ಗಂಟೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಠಾಣಾ ಎನ್,ಸಿ,ಆರ್ 134/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದಲ್ಲಿ  ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ ಪಿರ್ಯಾದಿದಾರರು ದಿನಾಂಕ:19/05/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಸಂಪಂಗಿ ಸರ್ಕಲ್ ಬಳಿ ಬಂದೋಬಸ್ತ್ ಮಾಡುತ್ತಿರುವಾಗ ಠಾಣಾ ಕ್ರೈಂ ಸಿಬ್ಬಂದಿ ಸಿ,ಪಿ,ಸಿ-141 ಸಂತೋಷ್ ಕುಮಾರ್ ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲ್ಲೂಕು ರೂರಲ್ ಗುಡಿಬಂಡೆಯ ಕಡೆ ಗಸ್ತುನಲ್ಲಿರುವಾಗ ಅಂಜಿನಪ್ಪ ಬಿನ್ ಲೇಟ್ ವೆಂಕಟಪ್ಪ ರವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-92 ರವಿ ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 9-15 ಗಂಟೆ ಸಮಯಕ್ಕೆ ರೂರಲ್ ಗುಡಿಬಂಡೆ ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಅಂಜಿನಪ್ಪ ರವರ ಮನೆಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 9-25 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ಅಂಜಿನಪ್ಪ ಬಿನ್ ಲೇಟ್ ವೆಂಕಟಪ್ಪ 45 ವರ್ಷ, ಬೋವಿ ಜನಾಂಗ, ಬಂಡೆ ಕೆಲಸ ವಾಸ:ರೂರಲ್ ಗುಡಿಬಂಡೆ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 9-30 ಗಂಟೆಯಿಂದ ಬೆಳಿಗ್ಗೆ 10-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 10-45 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಬೆಳಿಗ್ಗೆ:11-15 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.198/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 14-06-2021  ರಂದು ಸಂಜೆ 7.30 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಸುಗಟೂರು ಗ್ರಾಮದ ಬಳಿ ಇರುವ ಲೇಔಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯಕ್ಕೆ ಪಿಸಿ-90 ರಾಜಕುಮಾರ್  ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಸಿಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ರಾತ್ರಿ  8-40 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರುಪಡಿಸಿದ  ಮೇರೆಗೆ ಆರೋಪಿಗಳ ವಿರುದ್ದ ಠಾಣಾ ಮೊ.ಸಂ. 198/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಪ್ರ ವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೇನೆ.

 

8. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 379 ಐ.ಪಿ.ಸಿ:-

          ದಿನಾಂಕ:14-06-2021 ರಂದು ಸಂಜೆ 16-30 ಗಂಟೆಗೆ ಪಿರ್ಯಾದಿ ದರ್ಶನ್ ವಿ.ಎನ್ ಬಿನ್ ವೆಂಕಟನಾರಾಯಣ, ಮುತ್ತೂರು ಬೀದಿ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯಾದ ವೆಂಕಟನಾರಾಯಣ ರವರು ಪ್ರತಿ ದಿನ ನನ್ನ ಬಾಬತ್ತು KA.67. E.0650 ಹೀರೊ ಹೊಂಡಾ ಸ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟ ಅಶೋಕ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯಕ್ಕೆ ದೇವರ ದರ್ಶನಕ್ಕೆಂದು ಹೋಗಿ ಬರುತ್ತಿದ್ದರು. ಎಂದಿನಂತೆ ದಿನಾಂಕ-11.06.2021 ರಂದು ಬೆಳಗ್ಗೆ ಸುಮಾರು 09-00 ಗಂಟೆ ಸಮಯಕ್ಕೆ ನನ್ನ ದ್ವಿಚಕ್ರ ವಾಹನದಲ್ಲಿ ದೇವಾಲಯಕ್ಕೆ ಹೋಗಿ ದ್ವಿಚಕ್ರ ವಾಹನವನ್ನು ದೇವಾಲಯದ ಮುಂದೆ ರಸ್ತೆ ಬದಿ ನಿಲ್ಲಿಸಿ ದೇವರ ದರ್ಶನ ಮಾಡಿಕೊಂಡು ಬೆಳಿಗ್ಗೆ ಸುಮಾರು 09-00 ಗಂಟೆಗೆ ವಾಪಸ್ಸು ಬರುವಷ್ಟರಲ್ಲಿ ನನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂತ ಮನೆಗೆ ವಾಪಸ್ಸು ಬಂದು ತಿಳಿಸಿರುತ್ತಾರೆ. ಅಂದಿನಿಂದ ನಾವು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ. ಆದುದರಿಂದ ಕಳುವಾದ ನನ್ನ ದ್ವಿಚಕ್ರವಾಹನವನ್ನು ಹುಡುಕಿ ಕೊಡಬೇಕೆಂದು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 379 ಐ.ಪಿ.ಸಿ:-

          ದಿನಾಂಕ:14-06-2021 ರಂದು ಸಂಜೆ 17-15 ಗಂಟೆಗೆ ಪಿರ್ಯಾದಿ ಟಿ ನಾರಾಯಣಸ್ವಾಮಿ, ಶಿಕ್ಷಕರು, ಸರಸ್ವತಿ ವಿದ್ಯಾಸಂಸ್ಥೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ-11.06.2021 ರಂದು ನನ್ನ ಬಾಬತ್ತು KA.40.ED.4731 ಆಕ್ಟಿವ್ ಹೋಂಡಾ 4 ಜಿ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರದಿಂದ ನಾನು ಕರ್ತವ್ಯ ನಿರ್ವಹಿಸುತ್ತಿರುವ ಶಿಡ್ಲಘಟ್ಟ ನಗರದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯ ಮುಂದೆ ಬೆಳಿಗ್ಗೆ 8.30 ಗಂಟೆಗೆ ಬಂದು ನಿಲ್ಲಿಸಿ ಮಕ್ಕಳಿಗೆ ಅಕ್ಕಿ ವಿತರಣೆಯಲ್ಲಿ ತೊಡಗಿದ್ದು ನಂತರ ಬೆಳಿಗ್ಗೆ 10.30 ಗಂಟೆಗೆ ಹೊರಗೆ ಬಂದು ನೋಡಲಾಗಿ ಸದರಿ ನನ್ನ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಸುತ್ತ-ಮುತ್ತ ಅಕ್ಕಪಕ್ಕದ ಪರಿಚಯಸ್ಥರಲ್ಲಿ ವಿಚಾರಿಸಿ, ಪೋಷಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿ ಹುಡುಕಾಡಿದರೂ ನನ್ನ ದ್ವಿಚಕ್ರವಾಹನ ಪತ್ತೆಯಾಗಲಿಲ್ಲ ಆದುದರಿಂದ ಕಳುವಾದ ನನ್ನ ದ್ವಿಚಕ್ರವಾಹನವನ್ನು ಹುಡುಕಿ ಕೊಡಬೇಕೆಂದು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ.14.06.2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ಕೆ.ಸತೀಶ್ ಪಿ.ಎಸ್.ಐ (ಕಾ.ಸು) ರವರು ಆರೋಪಿ ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಕೋವಿಡ-19 ಲಾಕ್ ಡೌನ್ ಪ್ರಯುಕ್ತ ದಿನಾಂಕ:14-06-2021 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ಹೆಚ್.ಸಿ.97 ಸುಬ್ರಮಣಿ ಜೀಪ್ ಚಾಲಕ ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಜೌಗುಪೇಟೆಯ ನಾಗರಾಜು ರವರ ಅಂಗಡಿ ಮುಂದೆ ಯಾರೋ ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ರಾತ್ರಿ 7-00 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಮೂರು ಜನರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿದ್ದ ಆಸಾಮಿಯನ್ನು ಹಿಡಿದು ಅವರ ಹೆಸರು ವಿಳಾಸ ಕೇಳಲಾಗಿ ನಾಗರಾಜ್ ಬಿನ್ ಲೇಟ್ ವೆಂಕಟರೊಣಪ್ಪ, 65 ವರ್ಷ, ಬೆಸ್ತರು, ಚಿಲ್ಲರೆ ಅಂಗಡಿ ವ್ಯಾಪಾರ, ಜೌಗುಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇವರು ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಪರಿಶೀಲಿಸಲಾಗಿ Haywards cheers Whisky 90 ML ನ 22 ಮದ್ಯದ ಪಾಕೆಟ್ ಗಳಿದ್ದು, ಒಂದರ ಬೆಲೆ 35.13 ರೂಗಳಾಗಿದ್ದು, 22 ರ ಬೆಲೆ ಒಟ್ಟು 772-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ Haywards cheers Whisky 90 ML ನ 03 ಖಾಲಿ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 03 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಮದ್ಯಪಾನ ಮಾಡಲು ಪರವಾನಗಿ ಇದೆಯೇ ಎಂದು ಪ್ರಶ್ನಿಸಿಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಸ್ಥಳದಲ್ಲಿ ಸಿಕ್ಕಿದ ಮದ್ಯದ ಪಾಕೇಟ್ ಖಾಲಿ ಪಾಕೇಟ್ & ಖಾಲಿ ಗ್ಲಾಸ್ ಗಳನ್ನು ಮುಂದಿನ ತನಿಖೆ ಬಗ್ಗೆ ರಾತ್ರಿ 7-10 ರಿಂದ 7-40 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ನಾಗರಾಜ ರವರನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 15-06-2021 05:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080