ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.136/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ: 15/05/2021 ರಂದು ಬೆಳಿಗ್ಗೆ 10-20 ಗಂಟೆಗೆ ಶ್ರೀ ರೆಡ್ಡಪ್ಪ ಎಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ.  ಈ ದಿನ ದಿನಾಂಕ; 15-05-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ ನಾನು ಮತ್ತು ಸಿಬ್ಬಂದಿಯವರಾದ   ಪಿಸಿ-276 ಸಾಗರ್ ಎಸ್ ವಿ, ರವರೊಂದಿಗೆ ದ್ವಿ ಚಕ್ರ ವಾಹನದಲ್ಲಿ ಗಸ್ತು ಮಾಡುತ್ತಿದ್ದಾಗ, ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ಬಾಗೇಪಲ್ಲಿ ಪುರದ ಎಸ್ ಬಿ ಎಂ ವೃತ್ತದ ಬಳಿ  ಯಾರೋ ಒಬ್ಬ  ಆಸಾಮಿಯು ಸರಕುಗಳ ಚೀಲವನ್ನು ತನ್ನ ಹೆಗಲಿಗೆ ಹಾಕಿಕೊಂಡು ತೀಮಾಕಲಪಲ್ಲಿ ಗ್ರಾಮದ  ಕಡೆಗೆ ಹೋಗುತ್ತಿದ್ದು, ಆಸಾಮಿಯು ಸಮವಸ್ತ್ರದಲ್ಲಿ ನಮ್ಮನ್ನು ಕಂಡು ಚೀಲವನ್ನು  ಸ್ಥಳದಲ್ಲಿ ಬಿಟ್ಟು ಓಡಿ ಹೋಗಲು ಪ್ರಯತ್ನಿಸುತ್ತಿದವನ್ನು ಸಿಬ್ಬಂದಿಯಾದ ಸಾಗರ ಪಿ.ಸಿ 276 ರವರು ಅವನನ್ನು ಹಿಡಿಯಲು ಬೆನ್ನತ್ತಿದರೂ ಸಹ ಕೈಗೆ ಸಿಗದೆ ಓಡಿ ಹೋಗಿರುತ್ತಾನೆ. ಓಡಿಹೋದ ಆಸಾಮಿಯ ಹೆಸರು ಮತ್ತು ವಿಳಾಸ   ಕಿಶೋರ್ ನಾಯ್ಕ ಬಿನ್ ಬಾಬೇನಾಯ್ಕ, 35 ವರ್ಷ, ಲಂಬಾಣಿ ಜನಾಂಗ, ವಾಸ: ಭೂವೆನ್ನಲ ತಾಂಡ ಗ್ರಾಮ.  ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಯಲಾಗಿರುತ್ತೆ. ನಂತರ ಎಸ್ ಬಿ ಎಂ ವೃತ್ತದಲ್ಲಿ ಇದ್ದ ಪಂಚರಿಗೆ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಸಹಕರಿಸಲು ಕೋರಿ ಪಂಚರ ಸಮಕ್ಷಮದಲ್ಲಿ ಚೀಲವನ್ನು ಪರಿಶೀಲಿಸಲಾಗಿ,  1  ಪ್ಲಾಸ್ಟಿಕ್ ಚೀಲವಿದ್ದು, ಚೀಲವನ್ನು ಪರಿಶೀಲಿಸಲಾಗಿ ಇದರಲ್ಲಿ 90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೇಟ್ ಗಳಿರುತ್ತೆ. ಒಟ್ಟು 8 ಲೀಟರ್ 640 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು  ಅಂದಾಜು ಮೌಲ್ಯ 3,371/- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಸಾಗಾಣಿಕೆ ಮಾಡಲು ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿದಿದ್ದು. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಬೆಳಿಗ್ಗೆ 10-20 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು,  ಓಡಿಹೋದ ಆಸಾಮಿಯಾದ  ಕಿಶೋರ್ ನಾಯ್ಕ ಬಿನ್ ಬಾಬೇನಾಯ್ಕ, 35 ವರ್ಷ, ಲಂಬಾಣಿ ಜನಾಂಗ, ವಾಸ: ಭೂವೆನ್ನಲ ತಾಂಡ ಗ್ರಾಮ.  ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ವಿರುದ್ದ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 324,504,506 ಐ.ಪಿ.ಸಿ:-

          ದಿನಾಂಕ: 15/05/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ನಾಗರಾಜ ಬಿನ್ ಲೇಟ್ ಸಹದೇವಪ್ಪ, 63ವರ್ಷ, ಉಪ್ಪಾರ ಜನಾಂಗ, ವ್ಯವಸಾಯ,  ವಾಸ: ಮಿಟ್ಟೇಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ನಾನು ವ್ಯವಸಾಯದಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:11/05/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಮ್ಮ ಜಮೀನಿನ ಹತ್ತಿರ ಹೋದಾಗ ನಮ್ಮ ಜಮೀನಿನಲ್ಲಿ ಹಂದಿಗಳು ಬಂದಿದ್ದು ನಾನು ಅವುಗಳನ್ನು ನೋಡಿ ಓಡಿಸಿಕೊಂಡು ಹೋದೆ. ಆಗ ನಮ್ಮ ಗ್ರಾಮದ ವಾಸಿಯಾದ ಪವನ್ ಬಿನ್ ಲೇಟ್ ಬಾಲಾಜಿ ರವರು ಹಂದಿಗಳನ್ನು ಏಕೆ ಓಡಿಸುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ನಾನು ನಮ್ಮ ಜಮೀನಿನಲ್ಲಿ ಕೊತ್ತುಂಬರಿ ಸೊಪ್ಪು ಮತ್ತು ಜೋಳದ ಸೊಪ್ಪುಗಳನ್ನು ತಿನ್ನಲು ನುಗ್ಗುತ್ತಿದ್ದವು ಎಂದು ಹೇಳಿದ್ದಕ್ಕೆ  ಪವನ್ ಎಂಬುವವರು ಏಕಾಏಕಿ ಕಲ್ಲಿನಿಂದ ನನ್ನ ಭುಜಕ್ಕೆ ಹಾಗೂ ಬಲಕೈಗೆ ಹೊಡೆದು ಹಾಗೂ ನನ್ನ ಬೆನ್ನಿಗೆ ಹೊಡೆದು ನನ್ನನ್ನು ಕೆಳಗಡೆ ಬೀಳಿಸಿ ನನ್ನ ಮೇಲೆ ಕೂತು ಹೊಡೆದಿರುತ್ತಾನೆ. ನಂತರ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಈ ದಿನ ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ನನ್ನ ಮಕ್ಕಳಾದ ಮಧುಸೂದನ ಮತ್ತು ಶ್ರೀನಾಥ ರವರು ಬಂದು ಏಕೆ ನಮ್ಮ ತಂದೆಯನ್ನು ಹೊಡೆಯುತ್ತಿದ್ದೀಯಾ ಎಂದು ಕೇಳಿದಾಗ ಅವರನ್ನೂ ಸಹ ಹೊಡೆಯಲು ಹೊಗಿರುತ್ತಾನೆ.  ನಂತರ ನಮ್ಮ ಗ್ರಾಮದ ವಿಕ್ಕಿ ಎಂಬುವವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ನನ್ನ ಮಗನಾದ ಮಧೂಸೂದನ ರವರು ಚಿಕಿತ್ಸೆಗಾಗಿ ಯಾವುದೋ ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ನಾನು ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ. ಆದ್ದರಿಂದ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹೊಡೆದು, ಪ್ರಾಣ ಬೆದರಿಕೆಯನ್ನು ಹಾಕಿರುವ ಪವನ್ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ  ಕೋರಿ ನೀಡಿದ ದೂರು.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.212/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 14/05/2021 ರಂದು ಮದ್ಯಾಹ್ನ 2.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 14/05/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನ ನೆಲಮಾಚನಹಳ್ಳಿ, ಮಸಿಲಹಳ್ಳಿ, ಶೇಟ್ಟಿಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 1.00 ಗಂಟೆಯ ಸಮಯದಲ್ಲಿ ಅನಕಲ್ಲು ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಪ್ರಭಾಕರ್ ಬಿನ್ ಲೇಟ್ ಗಂಗುಲಪ್ಪ ರವರು ಆತನ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಅನಕಲ್ಲು ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿ ಮುಂದೆ  ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2) ಕಿಂಗ್ ಪಿಶ್ಚರ್ ಸ್ಟ್ರಾಂಗ್ ಪ್ರೀಮಿಯಮ್ ಬೀರ್ 650 ಎಂ.ಎಲ್- 06 ಬಾಟಲ್, 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4) ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಪ್ರಭಾಕರ್ ಬಿನ್ ಲೇಟ್ ಗಂಗುಲಪ್ಪ, 28 ವರ್ಷ, ಆದಿ ಕರ್ನಾಟಕ, ಚಿಲ್ಲರೆ ಅಂಗಡಿ ವ್ಯಾಪಾರ, ಅನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 1.15 ರಿಂದ 2.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಪ್ರಭಾಕರ್ ಬಿನ್ ಲೇಟ್ ಗಂಗುಲಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 302 ಐ.ಪಿ.ಸಿ:-

          ದಿನಾಂಕ: 14/05/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀನರಸಮ್ಮ ಕೋಂ ಲೇಟ್ ವೀರಪ್ಪ, 60 ವರ್ಷ, ಗಾಣಿಗರು, ಗೃಹಿಣಿ, ಕುಂಬಾರಪೇಟೆ, ಶಿಢ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ದಿನಾಂಕ:19/03/2021 ರಂದು ಬೆಳಿಗ್ಗೆ 11-30 ಗಂಟೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು ನಳಿನಾ ಸಾವಿನ ಬಗ್ಗೆ ದೂರು ನೀಡಿದ್ದು, ಸಾರಾಂಶವೆನೆಂದರೇ, ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 1-ನೇ ಪ್ರೇಮ 2-ನೇ ನಳಿನಾ ಆಗಿದ್ದು ಈಕೆಯನ್ನು  14 ವರ್ಷಗಳ ಹಿಂದೆ ಚಿಂತಾಮಣಿ ತಾಲ್ಲೂಕು ದೊಡ್ಡಹಳ್ಳಿ ಗ್ರಾಮದ ರಾಮಕೃಷ್ಣಪ್ಪರವರ ಮಗನಾದ ಶ್ರೀರಾಮ ಎಂಬುವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ದಾಂಪತ್ಯದಲ್ಲಿ 1-ನೇ ಅಮೃತಾ 12 ವರ್ಷ, 2-ನೇ ಚಂದನಾ 6 ವರ್ಷ ಇಬ್ಬರು ಹೆಣ್ಣು ಮಕ್ಕಳಾಗಿರುತ್ತಾರೆ. ಇವರು ಸುಮಾರು 10 ವರ್ಷಗಳ ಕಾಲ ನಾರಾಯಣಹಳ್ಳಿ ಗೇಟ್ ಬಳಿ ಹೋಟೆಲ್ ಇಟ್ಟುಕೊಂಡಿದ್ದು, ನಂತರ ಮಕ್ಕಳ ವಿದ್ಯಾಬ್ಯಾಸದ ಸಲುವಾಗಿ ಚಿಂತಾಮಣಿ ಟೌನ್ ಪ್ರಭಾಕರ ಬಡಾವಣೆ ಮಂಜುನಾಥ ರವರ ಮನೆಯನ್ನು ಲೀಜ್ ಗೆ ಹಾಕಿಕೊಂಡು ವಾಸವಾಗಿರುತ್ತಾರೆ. ಈಗ್ಗೆ ಸುಮಾರು 4-5 ವರ್ಷಗಳಿಂದ ನನ್ನ ಅಳಿಯ ಮತ್ತು ಮಗಳು ಆಗಾಗ ಗಲಾಟೆಗಳು ಮಾಡಿಕೊಳ್ಳುತ್ತಿದ್ದು, ಈ ವಿಚಾರದಲ್ಲಿ ನಾನು ಮತ್ತು ನನ್ನ ತಮ್ಮ ಜಿ.ಕೆ.ಗಣೇಶ್ ಹಾಗು ಜಿ.ಎನ್.ನರಸಿಂಹ ಇತರರು ಸೇರಿ ಬುದ್ದಿವಾದ ಹೇಳಿದ್ದೇವು. ಆದರೂ ಸಹ ಅವರು ಸರಿಹೋಗದೇ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಜಗಳ ಮಾಡಿಕೊಳ್ಳುತ್ತಿದ್ದರು. ಈಗ್ಗೆ ಸುಮಾರು ಮೂರು ತಿಂಗಳ ಹಿಂದೆ ತನ್ನ ಮಗಳು ಮನೆಯಲ್ಲಿ ಜಗಳ ಮಾಡಿಕೊಂಡು ಆಕೆಯ ಗಂಡ ನಳಿನಾಳ ಬಲಕಾಲಿಗೆ ಹೊಡೆದು ಗಾಯ ಮಾಡಿದ್ದ ಹಿನ್ನೆಲೆಯಲ್ಲಿ ನಳಿನಾ ನಮ್ಮ ಮನೆಗೆ ಬಂದಿದ್ದು,  ನಾನು ನಳಿನಾಳಿಗೆ ಬುದ್ದಿ ಹೇಳಿ ಆಕೆಯ ಗಂಡನ ಮನೆಗೆ ಬಿಟ್ಟು ಹೋಗಿರುತ್ತೇನೆ. ದಿನಾಂಕ:19/03/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ   ಚಿಂತಾಮಣಿಯಲ್ಲಿ ವಾಸವಿರುವ ನನ್ನ ತಮ್ಮ ಗಣೇಶ್ ರವರು ಪೋನ್ ಮಾಡಿ ನಳಿನಾ ಆಕೆಯ ಮನೆಯಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡು ಸತ್ತುಹೋಗಿರುತ್ತಾಳೆಂತ ಹೇಳಿದ್ದು, ಕೂಡಲೇ ನಾನು ನನ್ನ ತಮ್ಮ ಜಿ.ಎನ್.ನರಸಿಂಹ ರವರು ಬಂದು ನೋಡಲಾಗಿ ನನ್ನ ಮಗಳು ರೂಂನಲ್ಲಿದ್ದ ಪ್ಯಾನಿಗೆ ಸೀರೆಯಿಂದ ನೇಣು ಬಿಗುದುಕೊಂಡ ರೀತಿಯಲ್ಲಿ ಕಂಡು ಬಂದಿದ್ದು, ತನ್ನ ಮಗಳು ನಳಿನಾಳನ್ನು ಅಳಿಯ ಶ್ರೀರಾಮನೇ ದಿನಾಂಕ:19/03/2021 ರಂದು ಬೆಳಿಗ್ಗೆ 6 ರಿಂದ 10-00 ಗಂಟೆ ಸಮಯದಲ್ಲಿ ನೇಣು ಹಾಕಿ ಮನೆಯ ಬೀಗವನ್ನು ಹಾಕಿಕೊಂಡು ಹೋಗಿರುತ್ತಾನೆಂತ ನನ್ನ ಮಗಳು ನಳಿನಾಳ ಸಾವಿಗೆ ಬಗ್ಗೆ ಅನುಮಾನವಿದ್ದು, ಈ ವಿಚಾರದಲ್ಲಿ ನಾನು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ನಂ:07/2021 ಕಲಂ 174(ಸಿ) ಸಿ,ಆರ್,ಪಿ.ಸಿ ರೀತ್ಯಾ ಕೇಸು ದಾಖಲಾಗಿರುತ್ತೆ. ಈಗ ನಮ್ಮ ಸಂಬಂಧಿಕರಿಂದ ವಿಚಾರ ತಿಳಿದುಕೊಳ್ಳಲಾಗಿ ನನ್ನ ಮಗಳು ನಳಿನಾ ಕಟಮಾಚನಹಳ್ಳಿ ಮಂಜುನಾಥ ರವರೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತಾಳೆಂತ ಆಕೆಯ ಗಂಡ ಶ್ರೀರಾಮ ರವರು ಅನುಮಾನಪಟ್ಟು ನನ್ನ ಮಗಳು ನಳಿನಾಳ ಮೇಲೆ ಗಲಾಟೆ ಮಾಡಿ ಉದ್ದೇಶಪೂರ್ವಕವಾಗಿ ನಳಿನಾಳನ್ನು ಕೊಲೆ ಮಾಡುವ ಉದ್ದೇಶದಿಂದ ದಿನಾಂಕ:18/03/2021 ರ ರಾತ್ರಿ 9-00 ಗಂಟೆಯಿಂದ ದಿನಾಂಕ:19/03/2021 ರ ಬೆಳಿಗ್ಗೆ 10-00 ಗಂಟೆಯ ಮದ್ಯೆ ಯಾವುದೋ ವೇಳೆಯಲ್ಲಿ ನಳಿನಾಳನ್ನು ಆಕೆಯ ಗಂಡ ಶ್ರೀರಾಮ ರವರೇ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ. ಈ ದಿನ ನಾನು ವಿಚಾರ ತಿಳಿದುಕೊಂಡು ತಡವಾಗಿ ದೂರು ನೀಡುತ್ತಿದ್ದು, ನನ್ನ ಮಗಳನ್ನು ಕೊಲೆ ಮಾಡಿರುವ ಶ್ರೀರಾಮ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 323,324,307,504,506,34  ಐ.ಪಿ.ಸಿ:-

          ದಿನಾಂಕ 14-05-2021 ರಂದು  19-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ಪಡೆದುಕೊಂಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನಾನೇ ನಾಯ್ಕ ಬಿನ್ ಲೇಟ್ ಸೋಮ್ಲಾನಾಯ್ಕ, 60 ವರ್ಷ, ಲಂಬಾಣಿ ಜನಾಂಗ, ವ್ಯವಸಾಯ, ವಾಸ ಎನ್, ತಾಂಡ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕುರವರ ಹೇಳಿಕೆಯನ್ನು 19-45 ಗಂಟೆಯಿಂದ 20-15 ಗಂಟೆಯವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂಧರೆ  ನಾನು ಸುಮಾರು ವರ್ಷಗಳಿಂದ ನಗರಗೆರೆ ಹೋಬಳಿ ಎನೆ. ತಾಂಡಾ ಸರ್ವೇ ನಂ. 180 ರಲ್ಲಿ 3 ಎಕರೆ 20 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಬೆಳೆಯನ್ನು ಇಟ್ಟುಕೊಂಡಿರುತ್ತೇನೆ.  ಸದರಿ ಜಮೀನಿನ ವಿಚಾರದಲ್ಲಿ ನಮಗೂ ಮತ್ತು ನಮ್ಮ ಗ್ರಾಮದ ವಾಸಿ ಆದಿನಾರಾಯಣ ನಾಯ್ಕ ಬಿನ್ ಲೇಟ್ ಸೂರ್ಯಾ ನಾಯ್ಕ ರವರಿಗೆ ಗಲಾಟೆಯಾಗುತ್ತಿದ್ದು ಗುಡಿಬಂಡೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತೆ. ಗಲಾಟೆಯಾದಾಗಲೆಲ್ಲಾ ಹಿರಿಯರು ಸಮಾಧಾನ ಮಾಡುತ್ತಿದ್ದರು. ದಿನಾಂಕ 14-05-2021 ರಂದು ಸಂಜೆ 04-00 ಗಂಟೆಯಲ್ಲಿ ತಾನು ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ವಾಸಿ ಆದಿನಾರಾಯಣ ನಾಯ್ಕ ಬಿನ್ ಲೇಟ್ ಸೂರ್ಯಾ ನಾಯ್ಕ ಹೋಗುತ್ತಿದ್ದು ತಾನು ಯಾಕೆ ನಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೀಯಾ,ಎಂದು ಕೇಳಿದಾಗ ಆದಿನಾರಾಯಣ ನಾಯ್ಕ ಬಿನ್ ಲೇಟ್ ಸೂರ್ಯಾ ನಾಯ್ಕ ನನಗೆ ಕೆಟ್ಟ ಮಾತುಗಳಿಂದ ಲೋಫರ್ ನನ್ನ ಮಗನೇ  ಎಂದು ಬೈದು ;ನಿನ್ನನ್ನು ಈಗಲೇ ಮುಗಿಸಿಬಿರುತ್ತೇನೆಂಧು ಹೇಳಿ ಮನೆಗೆ ಹೋಗಿ ಮೆಯಿಂದ ಮಚ್ಚನ್ನು ತೆಗೆದುಕೊಂಡು ತನ್ನ ಹೆಂಡತಿ ಮಕ್ಕಳನ್ನು  ಕರೆದುಕೊಮಡು ಮನೆಯ ಬಳಿಗೆ ಬಂದು ಜಗಳ ಮಾಡುತ್ತಾ  ಆದಿನಾರಾಯಣ ನಾಯ್ಕ ಬಿನ್ ಲೇಟ್ ಸೂರ್ಯಾ ನಾಯ್ಕ ತನ್ನ ಕೈಯಲ್ಲಿದ್ದ ಮಚ್ಚಿನಿಂದ  ಕೊಲೆ ಮಾಡುವ ಉದ್ದೇಶದಿಂದ  ತಲೆಯ ಮೇಲೆ ಹೊಡೆದು ರಕ್ತಗಾಯವನ್ನು ಮಾಡಿದನು. ಆತನ ಮಗನಾದ  ಬಾಲಾಜಿ ನಾಯ್ಕ ಎಂಬುವನು ದೊಣ್ಣೆಯಿಂದ ಬಲಗೈ ಮುಂಗೈಗೆ ಹೊಡೆದು ರಕ್ತಗಾಯವನ್ನು ಮಾಡಿದ್ದು, ಪುತ್ರ ನಾಯ್ಕ ಬಿನ್ ಆದಿನಾರಾಯಣ ನಾಯ್ಕ  ದೊಣ್ಣೆಯಿಂದ ಎಡಗಾಲಿಗೆ, ಕಿವಿಗೆ, ಎದೆಗೆ ಹೊಡೆದು ರಕ್ತಗಾಯವನ್ನು ಮಾಡಿದನು. ಆತನ ಹೆಂಡತಿ ಜಯಾಬಾಯಿ ಕೈಗಳಿಂದ ಹೊಡೆದು ಕೆಟ್ಟಮಾತುಗಳಿಂದ ಬೈದರು. ಮೇಲ್ಕಂಡವರು ಜಮೀನಿನ ವಿಚಾರದಲ್ಲಿ ಕೈಗಳಲ್ಲಿ ಮಚ್ಚು ದೊಣ್ಣೆಗಳಿಂದ ಹೊಡೆದು ರಕ್ತಗಾಯವನ್ನು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಯಿಂದ ಹೊಡೆದಿರುತ್ತಾರೆ ಮುಂದಿನ ಕ್ರಮವನ್ನು ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ  20-30 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿರುವುದು.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.69/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 15/05/2021 ರಂಧು ಮದ್ಯಾಹ್ನ 12:00 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ 364 ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 27/04/2021 ರಂದು ಪಿ.ಎಸ್.ಐ ರವರು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿರುವಾಗ ಗೌರಿಬಿದನೂರು ನಗರದ NR ಸರ್ಕಲ್ ಬಳಿ ಮಧುಗಿರಿ ರಸ್ತೆಯ ಸಾರ್ವಜನಿಕ ಶೌಚಾಲಯದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾನೆಂದು ಮಾಹಿತಿ ಬಂದಿದ್ದು, ಕೂಡಲೇ ಪಿ.ಸಿ 102 ಪ್ರತಾಪ್ ಕುಮಾರ್ ಹಾಗೂ ಜೀಪ್ ಚಾಲಕ ಎ.ಪಿ.ಸಿ 105 ಅಶ್ವತ್ಥಪ್ಪ ರವರ ಜೊತೆ NR ವೃತ್ತದ ಬಳಿ ಹೋಗಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ  ಅವರನ್ನು ಕರೆದುಕೊಂಡು ಸ್ವಲ್ಪ ದೂರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಸಾರ್ವಜನಿಕ ಶೌಚಾಲಯದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತದೆ. ಅವನನ್ನು ಸುತ್ತುವರೆದು ಓಡಿಹೋಗದಂತೆ ಸೂಚನೆಯನ್ನು ನೀಡಿ ಹಿಡಿಯಲು ಹೋದಾಗ ಮದ್ಯಪಾನ ಮಾಡುತ್ತಿದ್ದವರು ಅಲ್ಲಿಂದ ಓಡಿಹೋಗಿದ್ದು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆಸಾಮಿಯನ್ನು ಹಿಡಿಕೊಂಡು ಆತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ಸಿದ್ದಪ್ಪ ಬಿನ್ ಹುಡಿಪೆಲ್ಲಪ್ಪ @ ಗುಡಿ ಪೆಲ್ಲಪ್ಪ, 50 ವರ್ಷ, ಉಪ್ಪಾರ ಜನಾಂಗ, ವ್ಯಾಪಾರ, ಶೂರನಾಗೇನಹಳ್ಳಿ, ಕೊಡಿಗೇನಹಳ್ಳಿ ಮಧುಗಿರಿ ತಾಲ್ಲೂಕು ಎಂದು ವಿಳಾಸವನ್ನು ತಿಳಿಸಿರುತ್ತಾನೆ. ಸ್ಥಳದಲ್ಲಿ 1)Old Tavern Whiskey ಎಂದು ನಮೂಧಿಸಿರುವ 180 ಎಂ.ಎಲ್ ನ 10 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 4 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 86.75/- ರೂಪಾಯಿಗಳು ಆಗಿದ್ದು, ಮತ್ತು 2 ಲೀಟರ್ ಸಾಮರ್ಥದ ಒಂದು ನೀರಿನ ಬಾಟಲ್ ಇರುತ್ತೆ. ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 520/- ರೂಪಾಯಿಗಳು ಆಗಿರುತ್ತವೆ. ಅವುಗಳೆಲ್ಲವನ್ನು ಪಂಚರ ಸಮ್ಮುಖದಲ್ಲಿ ಪಂಚನಾಮೆಯ ಮೂಲಕ ವಶಕ್ಕೆ ಪಡೆದು ನೀಡಿದ ವರದಿಯನ್ನು ನೀಡಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.49/2021 ಕಲಂ. 506,504,270,271,353 ಐ.ಪಿ.ಸಿ:-

          ದಿನಾಂಕ: 15-05-2021 ರಂದು ಮಧ್ಯಾಹ್ನ 13-45 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ನಾಗಮಣಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ , ತಾನು 3 ತಿಂಗಳನಿಂದ ಕುಪ್ಪಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿ ನಿಯೋಜನೆಗೊಂಡ ಕೆಲಸ ನಿರ್ವಹಿಸುತ್ತಿರುತ್ತೇನೆ. ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯ್ತಿಗೆ ಸೇರಿದ ಹಳ್ಳಿಗಳ ನೀರುಗಂಟಿಗಳು ಕರಾವಾಸೂಲಿಗಾರರು ಹಾಗೂ ಕಛೇರಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಹೀಗಿರುವಲ್ಲಿ 14 ದಿನಗಳ ಹಿಂದೆ ನಮ್ಮ ಪಂಚಾಯ್ತಿ ಕಛೇರಿಯಲ್ಲಿ ಸ್ವೀಪರ್ ಕೆಲಸ ಮಾಡುವ ಲಕ್ಷ್ಮಮ್ಮ ಎಂಬುವರ ಮಗ ಮೂರ್ತಿ ಕೆಎಂ ಎಂಬುವರಿಗೆ ಕೊವೀಡ್ ಕಾಯಿಲೆ ದೃಡಪಟ್ಟಿದ್ದು ಲಕ್ಷ್ಮಮ್ಮಳ ಮನೆಯು ಸಹ ಕಛೇರಿಯ ಸಮೀಪವೆ ಇದ್ದು ಲಕ್ಷ್ಮಮ್ಮ ರವರು ತನ್ನ ಮಗನಿಗೆ ಮೊದಲ ಸಂಪರ್ಕಿತ ವ್ಯಕ್ತಿಯಾಗಿದ್ದರಿಂದ ನಾನು ಲಕ್ಷ್ಮಮ್ಮ ರವರಿಗೆ ಮನೆಯಲ್ಲಿದ್ದು ಕೊವೀಡ್ ಪರೀಕ್ಷೆ ಮಾಡಿಸಿ ನೇಗಟಿವ್ ಬಂದ ನಂತರವೆ ಕೆಲಸಕ್ಕೆ ಹಾಜರಾಗಲು ತಿಳಿಸಿದ್ದ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಮಗ ಮೂರ್ತಿ ಈ ದಿನ ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಕೈಯಲ್ಲಿ ದೊಣ್ಣೆಯನ್ನು ಹಿಡುದುಕೊಂಡು ಕರೋನಾ ಕಾಯಿಲೆಯ ನಿರ್ಭಂದ ನಿಯಮಗಳನ್ನು ಉಲ್ಲಂಘಸಿ ಪಂಚಾಯ್ತಿ ಕಛೇರಿ ಒಳಗಡೆ ಬಂದು ತನ್ನನ್ನು ಕುರಿತು ನಮ್ಮ ತಾಯಿಯನ್ನು ಕೆಲಸಕ್ಕೆ ಬರಬೇಡ ಅಂತ ಹೇಳುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ನನಗೆ ಸರ್ಕಾರಿ ಕೆಲಸ ಮಾಡಲು ಅಡ್ಡಿ ಪಡಿಸುತ್ತಿದ್ದಾಗ ಕಛೇರಿಯಲ್ಲಿನ ಸಿಬ್ಬಂದಯಾದ ನಾಗರಾಜ, ಮುನೇಗೌಡ ರವರುಗಳು ಅವನನ್ನು ಹಿಡಿದು ಹೊರಗಡೆ ಕಳಿಸಿದರು ಹೋಗುವ ಸಮಯದಲ್ಲಿ ನಮ್ಮ ತಂಟೆಗೆ ಬಂದರೆ ನಿನ್ನನ್ನು ಬಿಡುವದಿಲ್ಲವೆಂದು ಪ್ರಾಣಾ ಬೆದರಿಕೆ ಹಾಕಿ ಹೋಗಿದ್ದು ಮೂರ್ತಿ ರವರಿಗೆ ಪ್ರಾಣಾ ಹಾನಿಕಾರಕ ಕೊವೀಡ್ ಕಾಯಿಲೆ ದೃಡಪಟ್ಟು ಮನೆಯಲ್ಲಿರದೆ ಕೊವೀಡ್ ಕಾಯಿಲೆ ರೋಗ ಹರಡಲು ಹಾಗೂ ರಾಜ್ಯ ಸರ್ಕಾರ ವಿದಿಸಿರುವ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತನೆಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಾ ಬೆದರಿಕೆ ಹಾಕಿ ಸರ್ಕಾರಿ ಕೆಲಸ ಮಾಡಲು ಅಡ್ಡಿ ಪಡಿಸಿದ ಮೂರ್ತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವರದಿ.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.41/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ:14-05-2021 ರಂದು ಸಂಜೆ 18-15 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಬಂದು ನೀಡಿದ   ವರದಿಯ ಸಾರಾಂಶವೇನೆಂದರೆ, ದಿನಾಂಕ:14-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಬೆಳಿಗ್ಗೆ  06-00 ಗಂಟೆ ಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾತ್ರ ವ್ಯಾಪಾರ ಮಾಡಲು ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಸೂಚಿಸುತ್ತಿರುವಾಗ ಸಂಜೆ 5-30 ಗಂಟೆಯಲ್ಲಿ ಚಿನ್ನಗಾನಪಲ್ಲಿ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿ ಬಳಿ ಜನರು ಗುಂಪಾಗಿ ಸೇರಿದ್ದು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯ ವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿ ಕೊಂಡು ವ್ಯಾಪಾರ ಮಾಡುತ್ತಿದ್ದು, ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಗಂಗುಲಪ್ಪ ಬಿನ್ ವೆಂಕಟರಾಯಪ್ಪ, 48 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಚಿನ್ನಗಾನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ನಿಗಧಿತ ಅವಧಿ ಮುಗಿದ ನಂತರ ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಆಸಾಮಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.42/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ:15-05-2021 ರಂದು ಮಧ್ಯಾಹ್ನ 12-45 ಗಂಟೆಗೆ ಪಿ.ಎಸ್.ಐರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿ:15-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆ ಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಬೆಳಿಗ್ಗೆ  06-00 ಗಂಟೆಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾತ್ರ ವ್ಯಾಪಾರ ಮಾಡಲು ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಸೂಚಿಸುತ್ತಿರುವಾಗ ಮಧ್ಯಾಹ್ನ 12-00 ಗಂಟೆಯಲ್ಲಿ ಗ್ಯಾದವಾಂಡ್ಲಪಲ್ಲಿ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿಯ ಬಳಿ ಜನರು ಗುಂಪಾಗಿ ಸೇರಿದ್ದು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿ  ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾ ರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಶ್ರೀನಿವಾಸ ಬಿನ್ ಸೂರ್ಯನಾರಾಯಣ, 30 ವರ್ಷ, ಪಿಚ್ಚಗುಂಟ್ಲ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಗ್ಯಾದವಾಂಡ್ಲಪಲ್ಲಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾನೆ. ಸದರಿ ಚಿಲ್ಲರೆ ಅಂಗಡಿ ಮಾಲೀಕ ಶ್ರೀನಿವಾಸರವರು ಕೋವಿಡ್-19 ಹಿನ್ನೆಲೆ ಯಲ್ಲಿ ಸರ್ಕಾರ ಹೊರಡಿ ಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಅಂಗಡಿಯ ಮಾಲೀಕ ಶ್ರೀನಿವಾಸರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 15-05-2021 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080