ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 97/2021 ಕಲಂ. 143,147,148,323,324,506,149 ಐಪಿಸಿ :-

     ದಿನಾಂಕ:15/04/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರವಿಂದ್ರನಾಥ ಬಿನ್ ಆರ್.ಬಿ. ನಾರಾಯಣಪ್ಪ, 42 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಕಾನಗಮಾಕಲಪಲ್ಲಿ ಗ್ರಾಮ, ಮಿಟ್ಟೆಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ 14/04/2021 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ನಮ್ಮ ಮನೆಯ ಹತ್ತಿರ ನಮ್ಮ ಗ್ರಾಮದ ಗಣೇಶ ಬಿನ್ ಚಿಕ್ಕನಂಜಪ್ಪ ಮತ್ತು ಅರುಣ್ ಬಿನ್ ವೆಂಕಟರವಣಪ್ಪ ರವರು ಗಲಾಟೆ ಮಾಡಿಕೊಳ್ಳುತ್ತಿದ್ದು ನಾನು ಮದ್ಯ ಪ್ರವೇಶಿಸಿ  ಜಗಳ ಬಿಡಿಸಿ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಿಕೊಟ್ಟಿರುತ್ತೇನೆ. ನಂತರ ಸುಮಾರು ಸಂಜೆ 6-00 ಗಂಟೆಯಲ್ಲಿ ಮಿಟ್ಟೆಮರಿ ಗ್ರಾಮದ ಅರವಿಂದ ಬಿನ್ ಆದಿನಾರಾಯಪ್ಪ, ಅಜಯ್ ಬಿನ್ ಪ್ರಕಾಶ, ರಘು ಬಿನ್ ನಾಗರಾಜು, ಗಿರೀಶ ಬಿನ್ ಮಣಿ, ಪ್ರಶಾಂತ್ ಕುಮಾರ ಬಿನ್ ಮಂಜುನಾಥ ಮತ್ತು ಸುರೇಶ ಬಿನ್ ನಾಗರಾಜು ರವರು ಅರುಣ್ ನ ಮೇಲೆ ಗಲಾಟೆ ಮಾಡಲು ಬಂದಾಗ, ನಾನು ನನ್ನ ಮೊಬೈಲ್ ಪೋನ್ ನಲ್ಲಿ ವಿಡಿಯೋ ಮಾಡಲು ಹೋದಾಗ ನನ್ನ ಮೇಲೆ ಗಲಾಟೆ ಮಾಡಿ ಅರವಿಂದನು ನನಗೆ ಗಲ್ಲ ಪಟ್ಟಿ ಹಿಡಿದುಕೊಂಡಿದ್ದು, ರಘು ಎಂಬುವವನು ಬ್ಲೇಡ್ ನಿಂದ ನನ್ನ ಎಡಕೈಗೆ ಹೊಡೆದು ರಕ್ತ ಗಾಯ ಮಾಡಿದ್ದು, ಅಜಯ್ ಮತ್ತು ಗಿರೀಶ ರವರು ಕಲ್ಲು ಮತ್ತು ಕಟ್ಟಿಗೆಯಿಂದ ನನ್ನ ಮೈಮೇಲೆ ಹೊಡೆದಿರುತ್ತಾರೆ. ಹಾಗೂ ಪ್ರಶಾಂತ ಕುಮಾರ ಮತ್ತು ಸುರೇಶ ರವರು ಕೈಗಳಿಂದ ಮತ್ತು ಕಾಲುಗಳಿಂದ ನನಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ನಮ್ಮ ಗ್ರಾಮದ ಶಂಕರ ಬಿನ್ ನಾಗರಾಜಪ್ಪ,  ಜಯರಾಮ ಬಿನ್ ಲೇಟ್ ನರಸಪ್ಪ, ಮಹೇಶ. ಬಿನ್ ಲೇಟ್ ಬಯ್ಯಣ್ಣ, ವೆಂಕಟೇಶ ಬಿನ್ ಲೇಟ್ ಟಿ..ನಾಗಪ್ಪ ರವರು ಬಂದು ಜಗಳ ಬಿಡಿಸಿದ್ದು, ಮೇಲ್ಕಂಡ ಆರು ಜನರು  ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಶಂಕರ, ಮಂಜುನಾಥ ಇಬ್ಬರು ನನ್ನನ್ನು ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.  ಆದ್ದರಿಂದ ಅಕ್ರಮ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಹೊಡೆದು ರಕ್ತಗಾಯವನ್ನುಂಟು ಮಾಡಿ, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ಹಾಗೂ ನಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡುತ್ತಾರೆ ಎಂದು ಹೇಳಿ ಮಾಡಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ದೂರನ್ನು ನೀಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 53/2021 ಕಲಂ. 87 ಕೆ.ಪಿ ಆಕ್ಟ್ :-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರಿ ವೆಂಕಟರವಣಪ್ಪ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ನಾನು ಈ ದಿನ ಮಧ್ಯಾಹ್ನ 11-00 ಗಂಟೆಯಲ್ಲಿ  ಠಾಣೆಯಲ್ಲಿದ್ದಾಗ ನನಗೆ ಠಾಣೆಯ  ಪಿ ಎಸ್ ಐ  ರವಾರಾದ ಶ್ರೀ ಟಿ ಎನ್ ಪಾಪಣ್ಣ  ರವರು ದೂರವಾಣಿ  ಕರೆಮಾಡಿ  ಠಾಣಾ ವ್ಯಾಪ್ತಿಯ ಮುಂಗಾನಹಳ್ಳಿ  ಗ್ರಾಮದ ಕೆರೆಯ  ಪಕ್ಕದ ನೀರಿನ ಒವರ್ ಟ್ಯಾಂಕ್ ಕೆಳಗಡೆ ಯಾರೋ ಆಸಾಮಿಗಳು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ  ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ,ಮಾಹಿತಿ ಬಂದಿದ್ದು  ನಾನು  ಎಸ್  ಸಿ 58/2018 ರ ಗುಡಿಬಂಡೆ ಕೇಸಿನಲ್ಲಿ  ಘನ ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೆ ಸಾಕ್ಷತ್ವ ನುಡಿಯಲು ಬಂದಿದ್ದು,  ನೀವು ಈ ಬಗ್ಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಇಸ್ಪೀಟ್ ಜೂಜಾಟ ಆಡುತ್ತಿರುವ ಸ್ಥಳದ ಮೇಲೆ  ದಾಳಿಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರ ಮೇರೆಗೆ, ನಾನು ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-36 ವಿಜಯ್ ಕುಮಾರ್, ಸಿಪಿಸಿ - 262 ಅಂಬರೀಶ್, ಸಿಪಿಸಿ-02 ಅರುಣ್.ಎ ರವರೊಂದಿಗೆ ದ್ವಿಚಕ್ರವಾಹನಗಳಲ್ಲಿ ಮುಂಗಾನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು  ಕರೆದುಕೊಂಡು ಮುಂಗಾನಹಳ್ಳಿ ಗ್ರಾಮದಿಂದ ಚಿಂತಪಲ್ಲಿಗೆ ಹೋಗುವ ಕೆರೆ ಕಟ್ಟೆಯ ಮೇಲಿರುವ ಥಾರ್ ರಸ್ತೆಯ ಪಶ್ಚಿಮ ದಿಕ್ಕಿಗಿರುವ ನೀರಿನ ಓವರ್ ಟ್ಯಾಂಕ್ ಬಳಿಗೆ ಮದ್ಯಾಹ್ನ 11-30 ಗಂಟೆಗೆ ದ್ವಿಚಕ್ರವಾಹನಗಳನ್ನು   ನಿಲ್ಲಿಸಿ ನೋಡಲಾಗಿ ಯಾರೋ ಆಸಾಮಿಗಳು ನೀರಿನ ಓವರ್ ಟ್ಯಾಂಕ್ ಕೆಳಗಡೆ ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿ ಅಲ್ಲಿದ್ದ 3 ಜನ ಆಸಾಮಿಗಳನ್ನು  ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ಎಂ.ಕೆ ವೆಂಕಟರವಣ ಬಿನ್ ಕೋನಪ್ಪ 34 ವರ್ಷ ಪೈಂಟರ್ ಕೆಲಸ. ಆದಿಕರ್ನಾಟಕ ಜನಾಂಗ, ವಾಸ:  ಮುಂಗಾನಹಳ್ಳಿ ಗ್ರಾಮ ಮತ್ತು ಹೋಬಳಿ  ಚಿಂತಾಮಣಿ  ತಾಲ್ಲೂಕು  ಮೊ ನಂ: 9480859054 2). ಒಬಳೇಶಪ್ಪ ಆರ್ ಬಿನ್ ಲೇಟ್ ರಾಮಣ್ಣ, 55 ವರ್ಷ, ಜಿರಾಯ್ತಿ,   ಆದಿಕರ್ನಾಟಕ  ಜನಾಂಗ, ವಾಸ: ಮುಂಗಾನಹಳ್ಳಿ ಗ್ರಾಮ  ಮತ್ತು ಹೋಬಳಿ  ಚಿಂತಾಮಣಿ  ತಾಲ್ಲೂಕು,  ಮೊ.ನಂ-9591270329. 3.) ಓಬಣ್ಣ ಬಿನ್ ಪೆದ್ದನ್ನ 60 ವರ್ಷ, ಜಿರಾಯ್ತಿ, ಆದಿಕರ್ನಾಟಕ ಜನಾಂಗ, ವಾಸ: ಮುಂಗಾನಹಳ್ಳಿ ಗ್ರಾಮ, ಮತ್ತು ಹೋಬಳಿ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಪೇಪರ್  ನೆಲದಲ್ಲಿ ಹಾಸಿದ್ದು, ಸದರಿ ಪ್ಲಾಸ್ಟಿಕ್ ಪೇಪರ್ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇರುತ್ತೆ.  ಪಂಚರ ಸಮಕ್ಷಮ ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 1050/- ರೂಗಳಿರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 3 ಜನ ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 1050/-  ರೂಗಳ ನಗದು ಹಣವನ್ನು, ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 11-30 ಗಂಟೆಯಿಂದ 12-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡ ಮಾಲುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮದ್ಯಾಹ್ನ 13-00 ಗಂಟೆಗೆ ಸ್ವತಃ ಠಾಣೆಯ ಎನ್ ಸಿ ಆರ್ ನಂ: 49/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಹೆಚ್ ಸಿ 107 ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು ಮದ್ಯಾಹ್ನ 16-00 ಗಂಟೆಗೆ ಠಾಣೆಗೆ ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ ಸಂಖ್ಯೆ: 53/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 60/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:14/04/2021 ರಂದು ಸಾಯಂಕಾಲ 4-15 ಗಂಟೆಗೆ ಪಿ.ಎಸ್.ಐ ಸಾಹೇಬರು ಆರೋಪಿಗಳು ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 14/04/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಮೈಲಪ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಣವನ್ನು ಪಣವಾಗಿಟ್ಟುಕೊಂಡು ಯಾರೋ ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಹೆಚ್.ಸಿ-38 ಸುರೇಶ್, ಪಿ.ಸಿ-260 ಮುತ್ತಪ್ಪ ನಿಗರಿ, ಪಿ.ಸಿ-108 ರಾಜಶೇಖರ್, ಪಿ.ಸಿ-292 ಸಲೀಂಖಾ ಅಬ್ದುಲ್ ಖಾದರ್ ಖಾ ಮುಲ್ಲಾರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮೈಲ್ಲಪನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹೋಗಿ ಮರೆಯಲ್ಲಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ದೇವಸ್ಥಾನದ ಬಳಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ದೇವಸ್ಥಾನದ ಮುಂದೆ 4 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಗಂಗಾಧರ ಬಿನ್ ಲೇಟ್ ಮುನಿಯಪ್ಪ, 38 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ಗಾರೆ ಕೆಲಸ, ಮೈಲಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2] ಇಮ್ರಾನ್ ಬಿನ್ ಪ್ಯಾರಾಜಾನ್, 30 ವರ್ಷ, ಮುಸ್ಲೀಂ ಜನಾಂಗ, ಡ್ರೈವರ್ ಕೆಲಸ, ಪ್ರಶಾಂತನಗರ, 5 ನೇ ವಾರ್ಡ್, ಚಿಕ್ಕಬಳ್ಳಾಪುರ ನಗರ, 3] ರಘುರಾಮಯ್ಯ, ಬಿನ್ ಲೇಟ್ ಮರಿಯಪ್ಪ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ಮೈಲಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4] ಮಂಜುನಾಥ ಬಿನ್ ಕೊಂಡಪ್ಪ, 35 ವರ್ಷ, ನಾಯಕ ಜನಾಂಗ, ಮೆಡಿಕಲ್ ಸ್ಟೋರ್ಸ್ ನಲ್ಲಿ ಕೆಲಸ, ಮೈಲಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 2400/ -ರೂ. ಗಳಿದ್ದು, ಮೇಲ್ಕಂಡ 4 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 2400/-ರೂ. ನಗದು ಹಣವನ್ನು ಮದ್ಯಾಹ್ನ 3-15 ಗಂಟೆಯಿಂದ ಸಾಯಂಕಾಲ 4-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ ಜ್ಞಾಪನವನ್ನು ಪಡೆದುಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಈ ಪ್ರಕರಣವನ್ನು ದಾಖಲಿಸಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 61/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ: 14/04/2021  ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ  ಶ್ರೀಮತಿ ಸರಸ್ವತಮ್ಮ ಮ.ಪಿ.ಎಸ್.ಐ. ಡಿಸಿಬಿ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ಈ ದಿನ ತಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 85. ನರಸಿಂಹ. ಹೆಚ್.ಸಿ.192 ರಾಜಗೋಪಾಲ.  ಹೆಚ್.ಸಿ. 208  ಗಿರೀಶ. ಪಿಸಿ.152 ಜಯಣ್ಣ. ಪಿಸಿ 527 ಮಧು. ಪಿಸಿ 142 ಅಶೋಕ.  ರವರೊಂದಿಗೆ  ಕೆ.ಎ.40.ಜಿ.270 ನಂಬರಿನ  ಜೀಪಿನಲ್ಲಿ  ಚಿಕ್ಕಬಳ್ಳಾಪುರ  ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ  ಗಸ್ತು ನಿರ್ವಹಿಸುತ್ತಿದ್ದಾಗ ಸಂಜೆ 6-30 ಗಂಟೆಯ ಸಮಯದಲ್ಲಿ  ಮುಸ್ಟೂರು ಗ್ರಾಮದಲ್ಲಿ  ಗಸ್ತು ನಿರ್ವಹಿಸುತ್ತಿದ್ದಾಗ  ಹನುಮಂತಪುರ ಗ್ರಾಮದ  ಕೃಷ್ಣಪ್ಪ ಬಿನ್  ನರಸಪ್ಪ ಎಂಬುವವರ ಜಮೀನುನಲ್ಲಿ   ಅಂದರ್ ಬಾಹರ್ ಇಸ್ವೀಟು ಜೂಜಾಟ ಆಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿಯ ಮೇರೆಗೆ  ಪಂಚಾಯ್ತಿದಾರರೊಂದಿಗೆ  ದಾಳಿ  ಕ್ರಮ ಜರುಗಿಸಿ  ಅಂದರ್ ಬಾಹರ್ ಇಸ್ವೀಟು  ಜೂಜಾಟ  ಆಡುತ್ತಿದ್ದ ಮೇಲ್ಕಂಡ  04 ಜನ ಆಸಾಮಿಗಳನ್ನು  ವಶಕ್ಕೆ  ಪಡೆದು  ಜೂಜಾಟ  ಆಡಲು ಉಪಯೋಗಿಸಿದ್ದ (1) ದು ಪ್ಲಾಸ್ಟಿಕ್ ಚೀಲ. (2) 52 ಇಸ್ವೀಟು ಎಲೆಗಳು. (3) ಫಣಕ್ಕಿಟ್ಟಿದ್ದ  6200/-ರೂ ನಗದು ಹಣವನ್ನು   ಪಂಚನಾಮೆಯ  ಮೂಲಕ  ವಶಕ್ಕೆ  ಪಡೆದುಕೊಂಡು ಆರೋಪಿತರು, ಮಾಲು ಮತ್ತು  ಪಂಚನಾಮೆಯೊಂದಿಗೆ ನೀಡಿದ  ವರದಿಯನ್ನು ಪಡೆದುಕೊಂಡು  ಠಾಣಾ ಎನ್.ಸಿ.ಆರ್. ನಂಬರ್: 71/2021 ರಂತೆ ಅಸಂಜ್ಞೆಯ  ಪ್ರಕರಣ  ದಾಖಲು ಮಾಡಿಕೊಂಡಿರುತ್ತೆ. ಅಸಂಜ್ಞೆಯ  ಪ್ರಕರಣದಲ್ಲಿ ಆರೋಫಿತರ ವಿರುದ್ದ  ಕಲಂ: 87 ಕೆ.ಪಿ. ಆಕ್ಟ್ ರೀತ್ಯಾ ಕೇಸು  ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯಕ್ಕೆ  ಮನವಿಯನ್ನು ಸಲ್ಲಿಸಿಕೊಂಡು, ಘನ ನ್ಯಾಯಾಲಯದಲ್ಲಿ   ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು  ಪಡೆದುಕೊಂಡು  ಮೊ.ಸಂ. 61/2021 ಕಲಂ: 87 ಕೆ.ಪಿ. ಆಕ್ಟ್ ರೀತ್ಯಾ ಕೇಸನ್ನು   ದಾಖಲಿಸಿಕೊಂಡಿರುತ್ತೆ.  ಆದುದರಿಂದ  ಈ ಪ್ರ.ವ.ವರದಿ .

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 62/2021 ಕಲಂ. 511,392 ಐ.ಪಿ.ಸಿ:-

     ದಿನಾಂಕ: 15/04/2021 ರಂದು  ಬೆಳಗ್ಗೆ 10-30 ಗಂಟೆಯ ಸಮಯದಲ್ಲಿ ಕುಮಾರಿ ಅರ್ಚನ  ಎಂ ಬಿನ್  ಎಸ್.ಟಿ. ಮುನಿರಾಜು ಹೆಚ್.ಎಸ್. ಗಾರ್ಡೆನ್   ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ  ನೀಡಿದ  ದೂರಿನ ಸಾರಾಂಶವೇನೆಂದರೆ ದಿನಾಂಕ: 15/04/2021 ರಂದು ತನ್ನ ಬಾಬತ್ತು  ಕೆ.ಎ.40.ಇ.7188 ನಂಬರಿನ ಸ್ಕೂಟಿಯಲ್ಲಿ ತನ್ನ ತಂಗಿ ಎಂ. ಅಕ್ಷಯ ರವರನ್ನು  ಹೆಚ್.ಎಸ್. ಗಾರ್ಡೆನ್ ನಲ್ಲಿರುವ ತನ್ನ ಮನೆಯಿಂದ ಬಿಜಿಎಸ್ ಅಗಲಗುರ್ಕಿ ಶಾಲೆಯಲ್ಲಿ ಬಿಟ್ಟು ಬರಲು ಬೆಳಗ್ಗೆ07-40 ಗಂಟೆಯಲ್ಲಿ ಮನೆಯನ್ನು  ಬಿಟ್ಟು ಬಿಜಿಎಸ್ ಶಾಲೆಗೆ 07-55 ಗಂಟೆಗೆ ತಲುಪಿ ಅಕ್ಷಯ ರವರನ್ನು ಶಾಲೆಯಲ್ಲಿ ಬಿಟ್ಟು ನಂತರ  ಮನೆಗೆ  ವಾಪಸ್ಸು  ಬರಲು ಬೆಳಗ್ಗೆ 07-59 ಗಂಟೆಯ ಸಮಯದಲ್ಲಿ ತನ್ನ ತಂದೆಗೆ  ಕರೆ ಮಾಡಿ ಬನ್ನಿಕುಪ್ಪೆ  - ಅಗಲಗುರ್ಕಿ ಮದ್ಯದ  ನರ್ಸಿರಿ  ಬಳಿ ಸೇವಾ ರಸ್ತೆಯಲ್ಲಿ  ಬರುತ್ತಿದ್ದಾಗ  ಹಿಂದೆಯಿಂದ  ಇಬ್ಬರು ಆಸಾಮಿಗಳು ದ್ವಿ ಚಕ್ರ ವಾಹನದಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಚೈನನ್ನು ಕಿತ್ತುಕೊಳ್ಳಲು  ಪ್ರಯತ್ನಿಸಿದ್ದು ಆಗ ನಾನು ಕೂಗಿಕೊಂಡಾಗ ತನ್ನ  ಮನೆಯ ಬಳಿ ಇದ್ದ ಒಬ್ಬರು ಅಲ್ಲಿಗೆ  ಬರುವಷ್ಟರಲ್ಲಿ  ಆಸಾಮಿಗಳು ಅವರು ಬಂದಿದ್ದ ಬೈಕಿನಲ್ಲಿ  ಪರಾರಿಯಾಗಿರುತ್ತಾರೆ. ಸದರಿ  ಆಸಾಮಿಗಳನ್ನು  ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 448,307 ಐ.ಪಿ.ಸಿ:-

     ದಿನಾಂಕ: 14-04-2021 ರಂದು ಬೆಳಗ್ಗೆ 10-30 ಗಂಟೆಗೆ ಈ ಕೇಸಿನ ಪಿರ್ಯಾಧಿದಾರರಾದ ಶ್ರೀ ಕೋದಂಡ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿರುತ್ತಾರೆ ತನ್ನ 2 ನೇ ಮಗಳಾದ ಸಂಗೀತಾಳನ್ನು ಸುಮಾರು 7 ವರ್ಷಗಳ ಹಿಂದೆ ಗಂಗಾಧರಪ್ಪ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ಒಂದು ಹೆಣ್ಣು ಮಗಳಿರುತ್ತಾಳೆ. ಗಂಡ ಹೆಂಡತಿಗೆ  ಹೊಂದಾಣಿಕೆಯಾಗದೆ  ಗಂಗಾಧರಪ್ಪ ತನ್ನ ಮಗಳನ್ನು ಬಿಟ್ಟುಹೋಗಿರುತ್ತಾನೆ. ನಂತರ ತನ್ನ ಮಗಳು ನಮ್ಮೊಂದಿಗೆ ಇದ್ದು  ಗಾರ್ಮೆಂಟ್ಸ್ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಳು ಆ ಸಮಯದಲ್ಲಿ  ಚಿಂತಾಮಣಿಯ ಹೆಮಂತ್ ಕುಮಾರ್ ಎಂಬುವವನು  ತನ್ನ ಮಗಳನ್ನು  ಪರಿಚಯ ಮಾಡಿಕೊಂಡು ಬಸ್ಸಿನಲ್ಲಿ  ಗಾರ್ಮೆಂಟ್ಸ್ ಹತ್ತಿರ ಇತರೆ ಕಡೆಗಳಲ್ಲಿ  ಹಿಂಬಾಲಿಸಿ ಅಸಭ್ಯವಾಗಿ  ನಡೆದುಕೊಳ್ಳುತ್ತಿದ್ದ  ಈ ಬಗ್ಗೆ  ತನ್ನ ಮಗಳು ಮನೆಯಲ್ಲಿ ಹೇಳಿದ್ದು  ಅವನನ್ನು ಅನೇಕ ಬಾರಿ  ಠಾಣೆಗೆ ಕರೆಸಿ  ಅವನಿಗೆ ಬುದ್ದಿವಾದ ಹೇಳಿ ಕಳುಹಿಸಿದರೂ ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು  ಒಂದು ದಿನ ರಾತ್ರಿ ತನ್ನ ದ್ವಿಚಕ್ರವಾಹನಕ್ಕೆ ಬೆಂಕಿ ಇಟ್ಟು ಹೋಗಿದ್ದ  ಆ ಸಮಯದಲ್ಲಿ ಠಾಣೆಗೆ  ಕರೆಸಿ ವಿಚಾರಣೆ ಮಾಡಿ ಹಿರಿಯರ ಸಮಕ್ಷಮ ರಾಜಿ ಮಾಡಿದ್ದು ಆಗ ಅವನಿಗೆ  ಎಚ್ಚರಿಕೆ ಕೊಟ್ಟಿದ್ದರೂ ಕೇಳದೆ ತನ್ನ ಮಗಳಿಗೆ ಅಸಭ್ಯವಾಗಿ ಕಿರುಕುಳ ಕೊಡುತ್ತಿದ್ದರಿಂದ  ತನ್ನ ಮಗಳು  ಪೆಬ್ರವರಿಯಲ್ಲಿ  ಹೇಮಂತನ ವಿರುದ್ದ  ಮಹಿಳಾ ಠಾಣೆಗೆ  ದೂರನ್ನು  ಕೊಟ್ಟಿರುತ್ತಾಳೆ.  ಪೊಲೀಸರು  ಹೆಮಂತನ ಮೇಲೆ ಕೇಸು ದಾಖಲಿಸಿಕೊಂಡು  ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿರುತ್ತಾರೆ.  ಆ ಸಮಯದಲ್ಲಿ ತನ್ನ ಮಗಳಿಗೆ ನಿನ್ನನ್ನು ಬಿಡುವುದಿಲ್ಲ ನೀನು ನನ್ನ ಕೈಯಲ್ಲೆ ಸಾಯುತ್ತೀಯ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು  ಬೆದರಿಕೆ ಹಾಕಿದ್ದ. ನಂತರ ತನ್ನ ಮಗಳು ಸಂಗೀತಾಳು ಬೆಂಗಳೂರಿಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಳು. ಒಂಟಿಯಾಗಿ ಯಾಕೆ ಇರುತ್ತೀಯ ನಿನ್ನ ಗಂಡನ ಮನೆಗೆ ಹೋಗಿ ಇರುವಂತೆ ಹೇಳಿದ್ದರಿಂದ ಅಕೆ  ತಾನು ಪ್ರತ್ಯೇಕವಾಗಿ ಇರುವುದಾಗಿ ಭಗತ್ ಸಿಂಗ್ ನಗರದ  ಭಾಗ್ಯಮ್ಮ ಎಂಬುವರ ಮನೆಯಲ್ಲಿ ಬಾಡಿಗೆ ವಾಸವಾಗಿದ್ದಳು. ಹೇಮಂತನು  ಈಗ್ಗೆ ಸುಮಾರು 4 ದಿನಗಳ  ಹಿಂದೆ  ಪ್ರಕರಣದಲ್ಲಿ  ಜಾಮೀನು ಪಡೆದುಕೊಂಡು ಜೈಲಿನಿಂದ  ಹೊರಗೆ ಬಂದಿದ್ದು  ತನ್ನ ಮಗಳು ಬಾಡಿಗೆ ಮನೆ ಮಾಡಿಕೊಂಡು ಒಂಟಿಯಾಗಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡಿರುತ್ತಾನೆ.    ದಿನಾಂಕ: 13-04-2021 ರಂದು  ಹೆಮಂತನು ತನ್ನ ದ್ವಿಚಕ್ರವಾಹನದಲ್ಲಿ   ಚಿಕ್ಕಬಳ್ಳಾಪುರಕ್ಕೆ ಬಂದು ಸಂಗೀತಾಳು ಬಾಡಿಗೆ ಮನೆ ಮಾಡಿದ್ದ  ಭಗತ್ ಸಿಂಗ್ ನಗರದಲ್ಲಿ ಹೆಮಂತನ ಸ್ನೇಹಿತ ವೆಂಕಟೇಶ ಎಂಬುವವನ ಬಾಡಿಗೆ ರೂಂ ಮಾಡಿದ್ದು ಅವನ  ರೂಂನಲ್ಲಿದ್ದು  ನನ್ನ ಮಗಳು ಯುಗಾದಿ ಹಬ್ಬದ ಪ್ರಯುಕ್ತ ರಜೆ ಮೇಲೆ ಬಂದು ಹಬ್ಬ ಮುಗಿಸಿಕೊಂಡು ಮನೆಯಲ್ಲಿದ್ದು  ಅದನ್ನು ಹೇಮಂತನು ಖಚಿತ ಪಡಿಸಿಕೊಂಡು  ರಾತ್ರಿಯಾಗುವ ವರೆಗೆ ಕಾದಿದ್ದು  ರಾತ್ರಿ  ಸುಮಾರು 7-30 ಗಂಟೆಯಲ್ಲಿ ತನ್ನ ಮಗಳು ವಾಸವಿದ್ದ ಮನೆಯ ಮೆಟ್ಟಿಲು ಮುಖಾಂತರ  ಮನೆಯ ಒಳಗೆ ಪ್ರವೇಶ ಮಾಡಿ ಹೇಮಂತನು ತನ್ನ ಬಳಿ ಇಟ್ಟುಕೊಂಡಿದ್ದ ಒಂದು ಹರಿತವಾದ ಚಾಕುವಿನಿಂದ ಮನೆಯಲ್ಲಿ ಒಂಟಿಯಾಗಿದ್ದ ಸಂಗೀತಾಳನ್ನು ಕೆಟ್ಟ ಮಾತುಗಳಿಂದ ‘’ನನ್ನೊಂದಿಗೆ ಸಂಸಾರ ಮಾಡು ಎಂದರೆ ನನ್ನ ಮೇಲೆ  ಸುಳ್ಳು ಕೇಸುಗಳನ್ನು ಕೊಟ್ಟು ನನ್ನ ಜೈಲಿಗೆ ಕಳುಹಿಸಿದ್ದೀಯೇನೆ ನಿನ್ನ ಈ ದಿನ ಬಿಡಲ್ಲ’’  ಎಂದು ಬೈದು  ಸಂಗೀತಾಳ ಕೂದಲನ್ನು ಹಿಡಿದು ಎಳೆದು ಬಗ್ಗಿಸಿಕೊಂಡು ಚಾಕುವಿನಿಂದ ಬೆನ್ನು ಹೊಟ್ಟೆ ಹಾಗೂ ಇತರೆ ಕಡೆಗಳಲ್ಲಿ ಬಲವಾಗಿ ತಿವಿದು ತೀವ್ರವಾಗಿ ಹಲ್ಲೆ ಮಾಡಿದ್ದು ತನ್ನ ಮಗಳು ಕಿರುಚಿಕೊಂಡಾಗ  ಹೆಮಂತನು ಸ್ಥಳದಿಂದ ಓಡಿ ಹೋಗಿರುತ್ತಾನೆ.  ಅಷ್ಟರಲ್ಲಿ  ಅಕ್ಕ ಪಕ್ಕದ ಮನೆಯವರು  ನಮಗೆ ಪೋನ್ ಮಾಡಿ ತಿಳಿಸಿದ್ದು ಮನೆಯಲ್ಲಿದ್ದ ನಮ್ಮ ಬಾವ ಶಿವಪ್ಪ ಹಾಗೂ ಮಗ ನಂದಾ ನೊಂದಿಗೆ ಮನೆಗೆ ಹೋಗುವಷ್ಟರಲ್ಲಿ  ಹೆಮಂತನು  ತನ್ನ ಮಗಳನ್ನು ಚಾಕುವಿನಿಂದ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದು ತೀವ್ರವಾಗಿ ಗಾಯಗಳಾಗಿದ್ದ ಸಂಗೀತಾಳನ್ನು  ಸ್ಥಳಿಯರ ಸಹಾಯದಿಂದ  ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನಾನು ಆಸ್ಪತ್ರೆಗೆ ಹೋಗಿ ತನ್ನ ಮಗಳನ್ನು ವಿಚಾರಿಸಲಾಗಿ  ಮೇಲ್ಕಂಡಂತೆ ತಿಳಿಸಿರುತ್ತಾಳೆ. ನಂತರ ವೈದ್ಯರ ಸಲಹೆ ಮೇರೆಗೆ ದೇವನಹಳ್ಳಿ  ಮಾನಸ ಆಸ್ಪತ್ರೆ ನಂತರ  ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ತನ್ನ ಮಗಳು ಸಂಗೀತಾಳಿಗೆ ಮದುವೆಯಾಗಿ ಒಂದು ಮಗುವಿದ್ದರೂ ಹೆಮಂತನು  ತನ್ನ ಮಗಳಿಗೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸುವಂತೆ  ಬಲವಂತ ಪಡಿಸಿ ತೊಂದರೆ ಕೊಡುತ್ತಿದ್ದರಿಂದ  ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿರುತ್ತೇವೆ ಎಂದು ದ್ವೇಶವನ್ನು ಇಟ್ಟುಕೊಂಡು ತನ್ನ ಮಗಳನ್ನು ಕೊಲೆ ಮಾಡುವ ಉದ್ದೇಶದಿಂದ ಒಬ್ಬಳೆ ಮನೆಯಲ್ಲಿದ್ದಾಗ ಮನೆಗೆ ಪ್ರವೇಶ ಮಾಡಿ  ಚಾಕುವಿನಿಂದ  ತೀವ್ರವಾಗಿ ತಿವಿದು ಹಲ್ಲೆ ಮಾಡಿ ಪರಾರಿಯಾಗಿರುವ ಹೆಮಂತ @ ಹೆಮಂತ್ ಕುಮಾರ್ ನ ಮೇಲೆ  ಕ್ರಮ ಕೈಗೊಳ್ಳಬೇಕಾಗಿ  ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತೆ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 26/2021 ಕಲಂ. 341 ಐ.ಪಿ.ಸಿ & 6,5  ESSENTIAL SERVICES MAINTENANCE ACT, 1981:-

     ದಿನಾಂಕ: 14-04-2021 ರಂದು ಸಂಜೆ 05:30 ಗಂಟೆಗೆ ಚಿಕ್ಕಬಳ್ಳಾಪುರ ವಿಭಾಗೀಯ ಕಾರ್ಯಾದ್ಯಕ್ಷರಾದ ಎನ್.ಮನ್ಮಥನ್ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ,ತಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ಘಟಕ ಮತ್ತು ವಿಭಾಗೀಯ ಕಾರ್ಯಗಾರ ಹಾಗೂ ಇತರೇ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿಗಳಿಗೆ ಆರೋಪಿಗಳಾದ ಕೆ,ಎಸ್,ಆರ್,ಟಿ,ಸಿ ಮುಷ್ಕರದಲ್ಲಿ ನಿರತರಾಗಿರುವ 1)ಸುನೀಲ್ ಕುಮಾರ್,2)ಡಿ,ವಿ ಗಂಗಾಧರ 3) ಶರವಣ ಎಂಬುವವರು  ಕರ್ತವ್ಯಕೆ ಹಾಜರಾಗಿದ್ದ ಕೆ,ಎಸ್,ಆರ್,ಟಿ,ಸಿ ಸಿಬ್ಬಂದಿಗೆ ದೂರವಾಣಿ ಮುಖಾಂತರ  ಕರ್ತವ್ಯಕ್ಕೆ ಹಾಜರಾಗದಂತೆ ಬೆದರಿಕೆ ಹಾಕಿ ಕರ್ನಾಟಕ ಸೇವೆಗಳ ನಿರ್ವಹಣಾ ಕಾಯ್ದೆ-2013 ರೀತ್ಯಾ ಸರ್ಕಾರಿ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 86/2021 ಕಲಂ. 143,147,323,324,504,506,149 ಐ.ಪಿ.ಸಿ:-

     ದಿನಾಂಕ:14/04/2021 ರಂದು ಮದ್ಯಾಹ್ನ 14-00 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ ರುಕ್ಮಣಮ್ಮ ಕೋಂ ಎಳೇಮಲ್ಲಪ್ಪ, 50 ವರ್ಷ, ಕುರುಬರು ಜಿರಾಯ್ತಿ, ವಾಸ ದ್ರೋಣಕುಂಟೆ ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ:14/04/2021 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಮಗಳ ಮಕ್ಕಳಾದ ಮನೋಜ್, ಶ್ರವಂತ್, ಕಿಶೋರ್ ಎಂಬುವರು ಪಿರ್ಯಾದಿದಾರರ ಹೊಲದಲ್ಲಿ ಬಾತ್ ರೂಂ ಮಾಡುತ್ತಿರುವಾಗ ರೇವಣ್ಣ ಸಿದ್ದೇಶ್ವರ ರವರ ಮಗ ದಿಲೀಪ್ ಪಿರ್ಯಾದಿದಾರರ ಮೊಮ್ಮಕ್ಕಳಿಗೆ ಷೇಮ್ ಷೇಮ್ ಎಂದು ಕೂಗಿದಾಗ ಪಿರ್ಯಾದಿದಾರರು ಏಕೆ ಆ ರೀತಿ ಕೂಗುತ್ತೀಯ ಎಂದು ಕೇಳಿದ್ದಕ್ಕೆ ಪಿರ್ಯಾದಿದಾರರ ಮನೆಯ ಹಿಂದಿರುವ ಭಾಗ್ಯಮ್ಮ ಕೋಂ ಶಿವಪ್ಪ , ನಿಂಗಮ್ಮ ಕೋಂ ರೇವಣ್ಣಸಿದ್ದೇಶ್ವರ ಎಂಬುವರು ಪಿರ್ಯಾದಿದಾರರ ಮನೆಯ ಬಳಿ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಊರಲ್ಲಿ ಹೋಗಿ ರೇವಣ್ಣ ಸಿದ್ದೇಶ್ವರ ಬಿನ್ ಗೋವಿಂದಪ್ಪ, ಶಿವಪ್ಪ ಬಿನ್ ಲೇಟ್ ಎರ್ರಿ ಮಲ್ಲಯ್ಯ, ಸಂದೇಶ್ ಬಿನ್ ಶಿವಪ್ಪ ರವರು ಅಕ್ರಮ ಗುಂಪು ಸೇರಿ  ಪಿರ್ಯಾದಿದಾರರ ಮನೆಯ ಬಳಿ 12-30 ಗಂಟೆಗೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಕೋಲನ್ನು ತೆಗೆದುಕೊಂಡು ಪಿರ್ಯಾದಿದಾರರ ಬಲಕಣ್ಣಿನ ಮೇಲೆ ಹೊಡೆದು ಊತಬರುವಂತೆ ಮಾಡಿದ್ದು ನಂತರ ಮಗ ಗಂಗರಾಜು ಏಕೆ ಬೈಯುತ್ತೀರ ಎಂತ ಅಡ್ಡ ಹೋದಾಗ ರೇವಣ ಸಿದ್ದೇಶ್ವರ, ಸಂದೇಶ, ಮತ್ತು ಶಿವಪ್ಪ, ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಕೆಳಕ್ಕೆ ತಳ್ಳಿ ಮೂರು ಜನ ಕಾಲುಗಳಿಂದ ಒದ್ದು, ಕಿವಿಯ ಕೆಳಗೆ ರಕ್ತಗಾಯ ಆಗುವಂತೆ ಹೊಡೆದಿರುತ್ತಾರೆಂದು, ನಂತರ ಪಿರ್ಯಾದಿದಾರರ ಮಗ ಗಂಗರಾಜು ಮಗಳು ಕಲ್ಪನ ಜಗಳ ಬಿಡಿಸಿದ್ದು, ಪಿರ್ಯಾದಿದಾರರಿಗೆ ಪ್ರಜ್ಞೆ ಇಲ್ಲದ ಹಾಗೆ ಆಗಿದ್ದು, ನಂತರ ಪಿರ್ಯಾದಿದಾರರ ಮಗ ಗಂಗರಾಜು ಎಂಬುವನು ಪಿರ್ಯಾದಿದಾರರ ಮುಖದ ಮೇಲೆ ನೀರು ಹೊಡೆದು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ರೇವಣ ಸಿದ್ದೇಶ್ವರ, ಸಂದೇಶ, ಶಿವಪ್ಪ ಕೊಲೆ ಮಾಡುತ್ತೇವೆಂದು ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆಂದು ಮಗ ಗಂಗರಾಜು ಮತ್ತು ಮಗಳು ಕಲ್ಪನಾ ಯಾವುದೋ ಆಟೋವಿನಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 55/2021 ಕಲಂ. 323,324,34 ಐ.ಪಿ.ಸಿ:-

     ದಿನಾಂಕ 14/04/2021 ರಂದು ಸಂಜೆ 4:30 ಗಂಟೆಯಲ್ಲಿ ಪಿರ್ಯಾದಿ ಲೋಕೇಶ್ ಬಿನ್ ನಂಜೇಗೌಡ, 28 ವರ್ಷ, ಹಿಂದೂಸಾದರು, ಹಿರೇಬಿದನೂರು, ಗೌರಿಬಿದನೂರು ನಗರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 14/04/2021 ರಂದು ಮದ್ಯಾಹ್ನ 2:45 ಗಂಟೆಯಲ್ಲಿ ತಾನು ಹಿರೇಬಿದನೂರಿನ ತಮ್ಮ ಮನೆ ಪಕ್ಕದ ಜಗಲೀಕಟ್ಟೆ ಬಳಿ ಇರುವಾಗ ಅಲ್ಲಿಗೆ ಬಂದ ಶಶಿ, ಪ್ರಮೋದ, ಶಿವ, ಮಂಜುನಾಥ ರವರು ತನ್ನ ಬಳಿ ಬಂದು ನೀನು ಟ್ರಾಕ್ಟರ್ ನ್ನು ಸೈಡ್ ನಲ್ಲಿ ಹಾಕು ಎಂದು ಪ್ರಮೋದ ಎಂಬುವನು ಕೈಯಿಂದ ಹಾಗೂ ಕಲ್ಲಿನಿಂದ ತನ್ನ ಕಣ್ಣಿನ ಬಲಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ ಬಾಯಿ ಮೇಲೆ ಸಹ ಹೊಡೆದಿರುತ್ತಾನೆ. ನಂತರ ಶಶಿ, ಪ್ರಮೋದ ಮತ್ತಿತರರು ತನ್ನನ್ನು ಹಿಡಿದುಕೊಂಡು ಗುದ್ದಿ ಮೂಗೇಟು ಮಾಡಿರುತ್ತಾರೆ. ತನ್ನ ಮೇಲೆ ವಿನಾಕಾರಣ ಜಗಳ ತೆಗೆದು ಹೊಡೆದಿರುವ ಶಶಿ, ಪ್ರಮೋದ, ಶಿವ ಹಾಗೂ ಮಂಜುನಾಥ ರವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

10. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 41/2021 ಕಲಂ. 323,324,34 ಐ.ಪಿ.ಸಿ:-

     ದಿನಾಂಕ 14-04-2021 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನರಸಿಂಹ ಬಿನ್ ಚಿನ್ನಪ್ಪಯ್ಯ, 28 ವರ್ಷ, ಭಜಂತ್ರಿ ಜನಾಂಗ, ಕುಲಕಸಬು, ವಾಸ ದಿಗವ ಮಿಂಡಿಗಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ  ಹೇಳಿಕೆಯನ್ನು ಪಡೆದು ಠಾಣೆಗೆ ಮಧ್ಯಾಹ್ನ 02.00 ಗಂಟೆಗೆ ಹಾಜರುಪಡಿದ್ದರ ಸಾರಾಂಶವೇನೆಂದರೆ,  ತಾನು ಈಗ್ಗೆ ಸುಮಾರು 10 ವರ್ಷಗಳಿಂದ ಬೆಂಗಳೂರಿನಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡು ಅಲ್ಲಿಯೇ ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿಕೊಂಡಿರುತ್ತೇನೆ. ದಿನಾಂಕ 13-04-2021 ರಂದು ಯುಗಾದಿ ಹಬ್ಬದ ಕಾರಣ ತಮ್ಮ ತಂದೆ-ತಾಯಿಯನ್ನು ನೋಡಿಕೊಂಡು ಹೋಗಲು ತಮ್ಮ ಸ್ವಂತ ಗ್ರಾಮವಾದ ದಿಗವ ಮಿಂಡಿಗಲ್ ಗ್ರಾಮಕ್ಕೆ ಬೆಂಗಳೂರು ಬಿಟ್ಟು ಸಂಜೆ  05.30 ಗಂಟೆ ಸಮಯದಲ್ಲಿ ಚೇಳೂರು-ಚಿಂತಾಮಣಿ ಮುಖ್ಯರಸ್ತೆಯ ಗುಡಿಸಲಹಳ್ಳಿ ಗೇಟ್ ಆಂಜನೇಯಸ್ವಾಮಿ ಗುಡಿಯ ಬಳಿ ತನ್ನ ಬಾಬತ್ತು ನೊಂದಣಿ ಸಂಖ್ಯೆ  KA-53,EQ-7145 ಪಲ್ಸರ್  ದ್ವಿಚಕ್ರ ವಾಹನದಲ್ಲಿ ಚೇಳೂರು ಮಾರ್ಗವಾಗಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ KA-53,R-7010  ನೊಂದಣಿ ಸಂಖ್ಯೆಯ ಪಲ್ಸರ್ ದ್ವಿಚಕ್ರ ವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ವಾಹನಕ್ಕೆ ಡಿಕ್ಕಿ ಹೊಡೆದು ಅಫಘಾತ ಪಡಿಸಿದ ಪರಿಣಾಮ ತಾನು ವಾಹನ ಸಮೇತ ಕೆಳಕ್ಕೆ ಬಿದ್ದಿದ್ದರಿಂದ ತನಗೆ ಎಡ ಹಣೆಗೆ, ಎಡಕೈಗೆ, ಎಡಕಾಲಿಗೆ, ಬಲಮೊಣಕೈ ಮತ್ತು ಬಲಕಾಲು ಬೆರಳುಗಳಿಗೆ ತರುಚಿದ ರಕ್ತಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದು, KA-53,R-7010 ರ ದ್ವಿಚಕ್ರ ವಾಹನ ಸವಾರನಿಗೂ ಸಹ ಗಾಯಗಳಾಗಿರುತ್ತೆ. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಇಬ್ಬರನ್ನು ಉಪಚರಿಸಿ 108 ಅಂಬ್ಯೂಲೇನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಸಾಗಿಸಿರುತ್ತಾರೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತ ಪಡಿಸಿದ KA-53,R-7010  ಪಲ್ಸರ್ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಸಾರಾಂಶವಾಗಿರುತ್ತೆ.

 

11. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 323,504,506,34 ಐ.ಪಿ.ಸಿ:-

     ದಿನಾಂಕ:15-04-2021 ರಂದು ಸಂಜೆ 16-30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯವರಾದ CPC-174 ಯಮನೂರಪ್ಪ.ಜಿ.ಹದರಿ ರವರು NCR NO.29/2021 ರಲ್ಲಿ ಘನ ನ್ಯಾಯಾಲಯದ ಅನುಮತಿ ಆದೇಶ ಪತ್ರವನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು, ಘನ ನ್ಯಾಯಾಲಯದ ಆದೇಶದಂತೆ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶ್ರೀಮತಿ.ರೇಣುಕ ಕೋಂ ನರಸಿಂಹಮೂರ್ತಿ, ಆರ್.ನಲ್ಲಗುಟ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ತಮ್ಮ ತಂದೆಗೆ ಕಾಲಿಗೆ ಚಿಕಿತ್ಸೆ ಕೊಡಿಸಲು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ತಮ್ಮ ಅಕ್ಕನ ಮನೆಯಲ್ಲಿ ತಮ್ಮ ತಂದೆಯನ್ನು ಬಿಟ್ಟು ತಾನು ತನ್ನ ಸ್ವಂತ ಊರಾದ ಆರ್.ನಲ್ಲಗುಟ್ಲಪಲ್ಲಿಗೆ ದಿನಾಂಕ:15/03/2021 ರಂದು ಸಂಜೆ ಬಂದಿರುವುದಾಗಿ, ಆಗ ತನ್ನ ಅಜ್ಜಿಯಾದ ರಾಮಕ್ಕರವರು “ನನ್ನ ಮಗನನ್ನೂ ಸಹ ನಿಮ್ಮ ತಾಯಿಯಂತೆ ಸಾಯಿಸಲು ಕರೆದುಕೊಂಡು ಹೋಗಿದ್ದಿಯಾ” ಎಂದು ಮನೆಗೆ ಬಂದು ಗಲಾಟೆ ಮಾಡಿರುವುದಾಗಿ,  ತಮ್ಮ ಚಿಕ್ಕಪ್ಪನಾದ ವೆಂಕಟರಮಣಪ್ಪ ಬಿನ್ ವೆಂಕಟರಾಯಪ್ಪ, ಅವರ ಮಕ್ಕಳಾದ ಕಾಮೇಶ ಮತ್ತು ಕಾರ್ತಿಕ್ ಹಾಗೂ ನಮ್ಮ ಚಿಕ್ಕಮ್ಮ ದೇವಮ್ಮರವರು ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ತನ್ನ ಚಿಕ್ಕಪ್ಪ ವೆಂಕಟರಮಣಪ್ಪ ಕಟ್ಟಿಗೆಯಿಂದ ತನ್ನ ಎಡಗೈ ಭುಜ, ತಲೆ ಮೇಲೆ ಹೊಡೆದು ನಂತರ ತನ್ನ ಬಲಗೈ ಬೆರಳು ಸಹ ತಿರುಚಿರುವುದಾಗಿ, ತಮ್ಮ ಚಿಕ್ಕಮ್ಮನಾದ ದೇವಮ್ಮರವರು ತನ್ನ ಕೂದಲನ್ನು ಹಿಡಿದು ಎಳೆದಾಡಿ ಕೆಳಗಡೆ ತಳ್ಳಿರುವುದಾಗಿ, ಹಾಗೂ ಅವರ ಮಕ್ಕಳೂ ಸಹ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ, ಹೀಗಾಗಿ ಈ ಮೇಲ್ಕಂಡರವರನ್ನು ಠಾಣೆಗೆ ಕೆರೆಯಿಸಿ ವಿಚಾರಣೆ ಮಾಡಿ ತನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಿಕೊಡಲು ಕೋರಿ ಪಿರ್ಯಾದು.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 105/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 14-04-2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಎ.ಹುಣಸೇನಹಳ್ಳಿ ಗ್ರಾಮದ ಸಮೀಪದ ಸರ್ಕಾರಿ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ.ವ. ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯಕ್ಕೆ ಪಿಸಿ-90 ರಾಜಕುಮಾರ್  ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಂಜೆ 4-45 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮನವಿಯ ಮೇರೆಗೆ ಆರೋಪಿಗಳ ವಿರುದ್ದ ಠಾಣಾ ಮೊ.ಸಂ. 105/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಪ್ರ ವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೇನೆ.

 

13. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 43/2021 ಕಲಂ. 279,504,353 ಐ.ಪಿ.ಸಿ:-

     ಘನ ಸನ್ನಿದಾನದಲ್ಲಿ ಪಿ.ಸಿ.316 ಹರಿನಾಥ ಮತ್ತು ಪಿ.ಸಿ.563 ಹರೀಶ ಆದ ನಾವು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:14-04-2021 ರಂದು ನಾವು ರಾತ್ರಿ ಸುಮಾರು 8-00 ಗಂಟೆಗೆ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದು, ಪಿ.ಎಸ್.ಐ ರವರು ನಮಗೆ ಹಾಜರಾತಿಯನ್ನು ಪಡೆದುಕೊಂಡು ನನಗೆ ಮತ್ತು ಪಿ.ಸಿ.563 ಹರೀಶ ರವರಿಗೆ ಶಿಡ್ಲಘಟ್ಟ ನಗರದ 5 ಮತ್ತು 6 ನೇ ರಾತ್ರಿ ಗಸ್ತಿಗಾಗಿ ನೇಮಿಸಿದ್ದು, ಅದರಂತೆ ನಾವು ರಾತ್ರಿ 9-00 ಗಂಟೆಗೆ ಠಾಣೆಯನ್ನು ಬಿಟ್ಟು ನಮ್ಮ ಗಸ್ತಿನಲ್ಲಿರುವ ಅಂಗಡಿಗಳನ್ನು ಮುಚ್ಚಿಸಿಕೊಂಡು ರಾತ್ರಿ ಸುಮಾರು 10-30 ಗಂಟೆಗೆ ಮಯೂರ ಸರ್ಕಲ್ ಬಳಿ ಗಸ್ತು ಮಾಡುತ್ತಿದ್ದಾಗ  ಚಿಂತಾಮಣಿ ರಸ್ತೆಯಿಂದ ಒಬ್ಬ ಆಸಾಮಿ ಅತಿವೇಗದಿಂದ ಅಪಾಯಕರ ರೀತಿಯಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದನು. ನಾವು ಸದರಿ ದ್ವಿಚಕ್ರವಾಹನವನ್ನು ನಿಲ್ಲಿಸುವಂತೆ ಸೂಚನೆಗಳನ್ನು ನೀಡುತ್ತಿದ್ದರು ಸಹ ದ್ವಿಚಕ್ರವಾಹನವನ್ನು ನಿಲ್ಲಿಸದೇ ಮುಂದೆ ಹೋಗಿ ದ್ವಿಚಕ್ರವಾಹನವನ್ನು ನಿಲ್ಲಿಸಿ ನೀವು ಯಾವ ಸೀಮೆ ಪೊಲೀಸರು ನನ್ನನ್ನು ನಿಲ್ಲಿಸಲು ನಿಮಗೆ ಎಷ್ಟು ಧೈರ್ಯ ಎಂದು ಕೂಗಾಡಿದನು. ನಾವು ಸದರಿ ದ್ವಿಚಕ್ರ ಆಸಾಮಿಯ  ಬಳಿ ಹೋಗಿ ನಾವು ವಾಹನವನ್ನು ನಿಲ್ಲಿಸುವಂತೆ ಸೂಚನೆಗಳನ್ನು  ನೀಡುತ್ತಿದ್ದರು ನಿಲ್ಲಿಸಿರುವುದಿಲ್ಲ ಏಕೆ ಎಂದು ನಾವು ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಕೆ.ಭರತ್ ಬಿನ್ ಕೃಷ್ಣಪ್ಪ, 26 ವರ್ಷ, ನಾಯಕರು, ಅಡಿಗೆ ಕೆಲಸ, ವಾಸ: ಮಳಮಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿ, ಪೊಲೀಸ್ ಬೋಳಿ ನನ್ನ ಮಕ್ಕಳೇ ನನಗೆ ನಿವೇನು ಮಾಡಲು ಸಾಧ್ಯ ಎಂದು ಅಶ್ಲೀಲ ಪದಗಳಿಂದ ಬೈದು ನೀವು ನನ್ನನ್ನು ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಕಿರುಚಾಡಿದನು. ಆಗ ನಾವು ಸದರಿ ಆಸಾಮಿಯನ್ನು ಠಾಣೆಯ ಬಳಿ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ತಾನು ಏಕೆ ಠಾಣೆಯ ಬಳಿ ಬರಬೇಕು ಎಂದು ಕೂಗಾಡುತ್ತಿದ್ದನು. ಆಗ ನಾವು ಭರತ್ ರವರನ್ನು ಠಾಣೆಯ ಬಳಿ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ನಮ್ಮನ್ನು ನೂಕಿ ನಮ್ಮ ಸಮವಸ್ತ್ರವನ್ನು ಹರಿದು ಹಾಕಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದನು. ಆಗ ನಾವು ಠಾಣೆಯ ಠಾಣಾಧೀಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಸಿಬ್ಬಂದಿಯವರುಗಳಾದ ಪಿ.ಸಿ.132 ವಿನಯ್ ಕುಮಾರ್, ಪಿ.ಸಿ.327 ಮುರಳಿಕೃಷ್ಣೇಗೌಡ ರವರುಗಳನ್ನು ಕಳುಹಿಸಿಕೊಟ್ಟಿದ್ದು, ನಂತರ ನಾವು ಎಲ್ಲರೂ ಸೇರಿ ಸದರಿ ಆಸಾಮಿಯನ್ನು ಠಾಣೆಗೆ ಕರೆದುಕೊಂಡು ಬಂದಿರುತ್ತೇವೆ. ಆಸಾಮಿಯ ಹೊಂಡಾ ಡಿಯೋ ದ್ವಿಚಕ್ರವಾಹನವನ್ನು ಪಿ.ಸಿ. 132 ವಿನಯ್ ಕುಮಾರ್ ರವರು ಠಾಣೆಯ ಬಳಿ ಚಾಲನೆ ಮಾಡಿಕೊಂಡು ಬಂದಿರುತ್ತಾರೆ. ಸದರಿ ದ್ವಿಚಕ್ರವಾಹನಕ್ಕೆ ನೊಂದಣಿ ಸಂಖ್ಯೆ ನಮೂದಿಸಿದರುವುದಿಲ್ಲ. ನಂತರ ಭರತ್ ರವರ ಮೇಲೆ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿ ನೀಡಿದ್ದರ ಮೇರೆಗೆ ಠಾಣಾ ಮೊ.ಸಂ: 43/2021 ಕಲಂ: 279, 504, 353 ಐಪಿಸಿ ರೀತ್ಯ  ರಾತ್ರಿ 10-45 ಗಂಟೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 15-04-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080