ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 68/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:14-03-2021 ರಂದು ರಾತ್ರಿ 8:30 ಗಂಟೆಗೆ ಶ್ರೀ ಸುನಿಲ್ ಕುಮಾರ್,ಜಿ.ಕೆ, ಪಿ.ಎಸ್.ಐ.ಬಾಗೇಪಲ್ಲಿ ಪೊಲೀಸ್ ಠಾಣೆರವರು ಮಾಲು, ಅಸಲು ಪಂಚನಾಮೆ ಹಾಗೂ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ  ವರಧಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ; 14-03-2021 ರಂದು ಸಂಜೆ ಗಸ್ತು ಕರ್ತವ್ಯ ಮುಗಿಸಿಕೊಂಡು ರಾತ್ರಿ 7-00 ಗಂಟೆ ಸಮಯದಲ್ಲಿ ಗೂಳೂರು ಹೊರಪೊಲೀಸ್ ಠಾಣೆಯ ಬಳಿ ಇದ್ದಾಗ ಯಾರೋ ಆಸಾಮಿಯು ಬಾಗೇಪಲ್ಲಿ ತಾಲ್ಲೂಕು ಜಿಲಾಜಿರ್ಲಾ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು  ಮತ್ತು ಸಿಬ್ಬಂದಿಯವರಾದ  ಪಿ.ಸಿ-134 ಧನಂಜಯ್ , ಪಿಸಿ-131 ರಾಜಪ್ಪ   ಹಾಗೂ ಜೀಪ್ ಚಾಲಕ  ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಹೊರಟು ಗೂಳೂರು ಬಸ್ ನಿಲ್ದಾಣ ಬಳಿ  ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ದಾಳಿ  ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾವು ಮತ್ತು ಪಂಚರು ಜಿಲಾಜಿರ್ಲ ಗ್ರಾಮದ ಬಳಿ ಜೀಪಿನಲ್ಲಿ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೆ ಅಂಗಡಿ  ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವು ಮತ್ತು ಪಂಚರು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ತಿಳಿಯಲಾಗಿ ಶಿವಪ್ಪ @ ಶಿವ ಬಿನ್ ಒಂಟಿ ನರಸಿಂಹಪ್ಪ, 42 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಜಿಲಾಜಿರ್ಲ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮದಲ್ಲಿ  ಸ್ಥಳದಲ್ಲಿ ಪರಿಶೀಲಿಸಲಾಗಿ 1] 90 ಎಂ ಎಲ್  HAYWARDS CHEERS WHISKY ಯ 18  ಟೆಟ್ರಾ ಪಾಕೇಟ್ ಗಳಿದ್ದು, 2] 90ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 3] ಮದ್ಯ ಕುಡಿದಿರುವ ಖಾಲಿ 4 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 620 ಎಂ.ಎಲ್ ಆಗಿದ್ದು, ಇದರ ಬೆಲೆ 632/- ರೂಗಳಾಗಿರುತ್ತೆ,  ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರಧಿಯ ಮೇರೆಗೆ ಠಾಣಾ ಮೊ ಸಂ-68/2021 ಕಲಂ 15(ಎ), 32(3) ಕೆ ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 69/2021 ಕಲಂ. 11,14,32,34 ಕೆ.ಇ ಆಕ್ಟ್:-

  ದಿನಾಂಕ:15-03-2021 ರಂದು ಬೆಳಗಿನ ಜಾವ 00-15 ಗಂಟೆಗೆ  ಜಯರಾಂ ಎಎಸ್ ಐ,  ಠಾಣೆಗೆ ಆರೋಪಿ, ಅಸಲು ಪಂಚನಾಮೆ, ಮತ್ತು ಮಾಲಿನೊಂದಿಗೆ ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ; 14-03-2021 ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಎಸ್ ಬಿ ಎಂ ಸರ್ಕಲ್ ನಲ್ಲಿ ಇದ್ದಾಗ ಯಾರೋ ಆಸಾಮಿಯು ಲಾರಿಯಲ್ಲಿ ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು  ಮತ್ತು ಸಿಬ್ಬಂದಿಯವರಾದ  ಪಿ.ಸಿ-214 ಅಶೋಕ, ಪಿಸಿ- 134 ಧನಂಜಯ್ ರವರೊಂದಿಗೆ ಹೊರಟು ಬಾಗೇಪಲ್ಲಿ ಟಿ.ಬಿ.ಕ್ರಾಸ್ ಬಳಿ  ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ದಾಳಿ  ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾವು ಮತ್ತು ಪಂಚರು ಎನ್.ಹೆಚ್.44 ರಸ್ತೆಯಲ್ಲಿ  ಹೋಗುತ್ತಿದ್ದ, ಲಾರಿಯನ್ನು   ಟೋಲ್ ಪ್ಲಾಜಾದ ಬಳಿ ತಡೆದು ನಿಲ್ಲಿಸಿದಾಗ  ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಲಾರಿಯಿಂದ ಇಳಿದು ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವು ಮತ್ತು ಪಂಚರು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ತಿಳಿಯಲಾಗಿ ದೇವರಾಜ ಬಿನ್ ಚಲಪತಿ, 24 ವರ್ಷ, ನಾಯಕ ಜನಾಂಗ, ಲಾರಿ ಚಾಲಕ, ವಾಸ ದೊಡ್ಡನಂಚರ್ಲು ಹಳ್ಳಿ ಗ್ರಾಮ, ತಿರುಮಣಿ ಹೋಬಳಿ, ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮದಲ್ಲಿ  ಲಾರಿಯನ್ನು  ಪರಿಶೀಲಿಸಲಾಗಿ ಎನ್.ಎಲ್ -01 ಎ.ಸಿ-8251 ನೊಂದಣಿ ಸಂಖ್ಯೆ  ಇಚರ್ ಕಂಪೆನಿಯ ಬಲ್ಕರ್ ಲಾರಿಯಾಗಿದ್ದು ಲಾರಿಯ ಕ್ಯಾಬಿನ್ ನಲ್ಲಿ ಪರಿಶೀಲಿಸಲಾಗಿ ಮದ್ಯದ ಆರು ಬಾಕ್ಸ್ ಗಳಿದ್ದು, ಆರು ಬಾಕ್ಸ್ ಗಳನ್ನು ತೆಗೆದು ನೋಡಲಾಗಿ  90 ಎಂ ಎಲ್  HAYWARDS CHEERS WHISKY ಯ   ಟೆಟ್ರಾ ಪಾಕೇಟ್ ಗಳಿದ್ದು, ಪ್ರತಿ ಬಾಕ್ಸ್ ನಲ್ಲಿ   90 ಎಂ ಎಲ್  ಸಾಮರ್ಥ್ಯದ  96  HAYWARDS CHEERS WHISKY ಟೆಟ್ರಾ ಪಾಕೇಟ್ ಗಳಿರುತ್ತವೆ. ಆರು ಬಾಕ್ಸ್ ಗಳಲ್ಲಿ  ಒಟ್ಟು 576 HAYWARDS CHEERS WHISKY ಟೆಟ್ರಾ ಪಾಕೇಟ್ ಗಳಿದ್ದು, ಇದು 51 ಲೀಟರ್ 840 ಎಂ.ಎಲ್ ಇದ್ದು ಇದರ ಬೆಲೆ 20.234/- ರೂ ಗಳಾಗಿರುತ್ತದೆ. ಸದರಿ ಆಸಾಮಿಯನ್ನು ಮದ್ಯ ಮಾರಾಟ ಮಾಡಲು ಹಾಗೂ ಸಾಗಾಣಿಕೆ ಮಾಡಲು  ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ಹಾಗೂ ಬಾಗೇಪಲ್ಲಿ ಅಗ್ನಿಶಾಮಕ ಠಾಣೆಯ ಬಳಿ ಇರುವ ತಿರುಮಲ ಬಾರ್ ನ ಮಾಲೀಕರಾದ ಮೋಹನ್ ರವರಿಂದ  ಮದ್ಯವನ್ನು ಖರೀದಿಸಿರುತ್ತೇನೆ.  ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 00-10 ಗಂಟೆಗೆ ಠಾಣೆಗೆ ಹಾಜರಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ  ಆರೋಪಿ ದೇವರಾಜ ಮತ್ತು ಬಾರ್ ಮಾಲೀಕರಾದ ಮೋಹನ ರವರ ಮೇಲೆ ಕಾನೂನು  ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 38/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ:14.03.2021 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ತನ್ನ ಚಿಕ್ಕಪ್ಪ ನರಸಿಂಹುಡು ಬಿನ್ ಚಿನ್ನ ಆದೆಪ್ಪ, 50 ವರ್ಷ ರವರು ಬೆಂಗಳೂರು ನಗರದ ಅಗರದಲ್ಲಿ ವಾಸವಾಗಿದ್ದು, ಹೆಚ್.ಎಸ್.ಆರ್ ಲೇಔಟ್ ನಲ್ಲಿರುವ ಖಾಸಗೀ ಬ್ಯಾಂಕ್ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ: 14/03/2021 ರಂದು ಬೆಳಿಗ್ಗೆ ಚಿಕ್ಕಪ್ಪ ನರಸಿಂಹುಡು ರವರು ತಮ್ಮ ಸ್ವಂತ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು. ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಸಿಬ್ಬಂದಿಯವರು ಮನೆಗೆ ಪೋನ್ ಮಾಡಿ ಈ ದಿನ ಬೆಳಿಗ್ಗೆ ಸುಮಾರು 6-30 ಗಂಟೆ ಸಮಯದಲ್ಲಿ ಬೆಂಗಳೂರು-ಹೈದರಾಬಾದ್ NH-44 ರಸ್ತೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕಲ್ಲುಕುಂಟೆ ಕ್ರಾಸ್ ಸಮೀಪ AP-39, CV-1091 ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನರಸಿಂಹುಡು ಎಂಬುವವರಿಗೆ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಯಾರೋ ದಾರಿಯಲ್ಲಿ ಬಂದ ಬೇರೆ ವಾಹನಗಳವರು 108 ಆಂಬುಲೆನ್ಸ್ ಗೆ ಪೋನ್ ಮಾಡಿದ್ದು, 108 ಆಂಬುಲೆನ್ಸ್ ರವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿ ತನ್ನ ಚಿಕ್ಕಪ್ಪನ ಪೋನ್ ಮುಖಾಂತರ ತಿಳಿಸಿದರು. ತಕ್ಷಣ ತಾನು ತನ್ನ ಚಿಕ್ಕಮ್ಮ ವೆಂಕಟನರಸಮ್ಮ, ಅವರ ಮಗ ಭಾನು ಪ್ರಸಾದ್, ಮಗಳು ರಮಾದೇವಿ, ಅಳಿಯ ರಾಜು ಮತ್ತು ಇತರರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಚಿಕ್ಕಪ್ಪರವರಿಗೆ ತಲೆಗೆ, ಬಲಮೊಣಕೈ, ಬಲಸೊಂಟದ ಬಳಿ ಮತ್ತು ಇತರ ಕಡೆಗಳಲ್ಲಿ ರಕ್ತಗಾಯಗಳಾಗಿದ್ದು, ಪ್ರಜ್ಞಾ ಹೀನರಾಗಿದ್ದರು. ನಂತರ ವೈದ್ಯರ ಸಲಹೆಯಂತೆ ತನ್ನ ಚಿಕ್ಕಪ್ಪರವರನ್ನು ನಾವು ಬೆಂಗಳೂರು ನಗರದ ನಿಮ್ಹಾನ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಸಿ ನಂತರ ತಡವಾಗಿ ಸಂಜೆ 18:15 ಗಂಟೆಗೆ ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದು ತನ್ನ ಚಿಕ್ಕಪ್ಪರವರು AP-39, CV-1091 ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಸ್ವಂತ ಗ್ರಾಮವಾದ ಪುಟ್ಟಪರ್ತಿ ಮಂಡಲಂ ಕತ್ತಿವಾರಪಲ್ಲಿ ಗ್ರಾಮಕ್ಕೆ ಹೋಗಲು ದೇವನಹಳ್ಳಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು-ಹೈದರಾಬಾದ್ NH-44 ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 6-30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕಲ್ಲುಕುಂಟೆ ಕ್ರಾಸ್ ಸಮೀಪ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಸದರಿ ವಾಹನವನ್ನು ಪತ್ತೆ ಮಾಡಿ ಅದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ:-14/03/2021 ರಂದು ಸಂಜೆ 5-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಉಬೇದುಲ್ಲಾ ಬಿನ್ ಅಬ್ದುಲ್ ಬಸೀದ್ 38 ವರ್ಷ, ಮುಸ್ಲಿಂ ಜನಾಂಗ, ಎಲೆಕ್ಟ್ರಿಷಿಯನ್ ವೃತ್ತಿ, ಹಾರೋಬಂಡೆ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, ಹಾಲೀ ವಾಸ :-ವಾರ್ಡ್ ನಂ-01, ವಾಪಸಂಧ್ರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ದಿನಾಂಕ:-14/03/2021 ರಂದು ತಮ್ಮ ತಂದೆ ಅಬ್ದುಲ್ ಬಸೀದ್ ಬಿನ್ ಸಾಬು ಸಾಬ್ 75 ವರ್ಷ, ವಾಸ:-ಹಾರೋಬಂಡೆ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಹಾರೋಬಂಡೆ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಬರಲು ತಮ್ಮ KA-43-J-3141 ರ ಟಿವಿಎಸ್ ಎಕ್ಸ್.ಎಲ್ ದ್ವಿಚಕ್ರವಾಹವನ್ನು ಸುಮಾರು ಬೆಳಿಗ್ಗೆ 08-20 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಹೈವೇ ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ಇರುವ ಸಿ.ಎಸ್.ಎನ್ ಹೆಚ್.ಪಿ ಪೆಟ್ರೋಲ್ ಬಂಕ್ ನ ಮುಂಭಾಗದ ರಸ್ತೆಯ ಬಳಿ ಬರುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ  AP-02-BE-3674 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತಮ್ಮ ತಂದೆ ಅಬ್ದುಲ್ ಬಸೀದ್ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಮ್ಮ ತಂದೆ ರವರು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ಎರಡೂ ಕಾಲುಗಳೂ ಮುರಿದು ಹೋಗಿ ಗಾಯಗಳಾಗಿದ್ದು, ತಕ್ಷಣ ಅಲ್ಲಿನ ಸ್ಥಳೀಯರ ಸಹಾಯದಿಂದ ಅವರನ್ನು ಹಾರೋಬಂಡೆ ಗ್ರಾಮದ ಶ್ರೀ. ಏಜೇಜ್ ಪಾಷ ಬಿನ್ ಇಮಾನ್ ಸಾಬ್ 40 ವರ್ಷ ರವರು ಉಪಚರಿಸಿ ಅಪಘಾತ ಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಕಳುಹಿಸುತ್ತಿರುವುದಾಗಿ ಪಿರ್ಯಾಧಿದಾರರಿಗೆ ಮೊಬೈಲ್ ಕರೆಮಾಡಿ ತಿಳಿಸಿದ್ದು, ತಾನು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಅಪಘಾತ ಪಡಿಸಿದ AP-02-BE-3674 ರ ಕಾರಿನ ಚಾಲಕನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಸದರಿ ಅಪಘಾತ ಪಡಿಸಿದ ಕಾರಿನ ಚಾಲಕ ಗಾಯಾಳುವನ್ನು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ವಾಹನ ಸಮೇತ ಹೊರಟು ಹೋಗಿರುವುದಾಗಿ ತಿಳಿದಿದ್ದು, ನಂತರ ಗಾಯಾಳು ತಮ್ಮ ತಂದೆರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ AP-02-BE-3674 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಕೊಂಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 107/2021 ಕಲಂ. 20B NARCOTIC DRUGS AND PSYCHOTROPIC SUBSTANCES ACT, 1985:-

  ದಿನಾಂಕ: 14/03/2021 ರಂದು ಸಂಜೆ 6.15 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ, ಶ್ರೀ ಕೆ.ಎಂ.ಶ್ರೀನಿವಾಸಪ್ಪ ರವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ಕಳುಹಿಸಿಕೊಟ್ಟ ವರದಿಯ ಸಾರಾಂಶವೇನೆಂದರೆ, ದಿನಾಂಕ: 14/03/2021 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ತಾನು ತನ್ನ ಕಛೇರಿಯಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಚಿಂತಾಮಣಿ ತಾಲ್ಲೂಕು ಮಾಡಿಕೆರೆ ಕ್ರಾಸ್ ನಲ್ಲಿ ಮೂವರು ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ಒಂದು ಬ್ಯಾಗ್ ನಲ್ಲಿ ಇಟ್ಟುಕೊಂಡು ಓಡಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು, ತನ್ನ ಮಾಹಿತಿಯನ್ನು ತನ್ನ ಡೈರಿಯಲ್ಲಿ ನಮೂದಿಸಿಕೊಂಡು, ಸದರಿ ಆಸಾಮಿಗಳು ಗಾಂಜಾವನ್ನು ಎಲ್ಲಿಯಾದರೂ ಮಾರಾಟ ಮಾಡುವ ಸಂಶಯ ಇದ್ದು, ತಕ್ಷಣ ಮಾನ್ಯ ಡಿವೈಎಸ್.ಪಿ ಸಾಹೇಬರ ಮಾರ್ಗದರ್ಶನ ಪಡೆದು ತಾನು ಮತ್ತು ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ನರೇಶ್ ನಾಯ್ಕ್ ಹಾಗು ಸಿಬ್ಬಂದಿಯವರಾದ ಹೆಚ್ ಸಿ 41 ಜಗದೀಶ, ಹೆಚ್.ಸಿ 249 ಸಂದೀಪ್ ಕುಮಾರ್, ಹೆಚ್.ಸಿ 87 ಚಂದ್ರಶೇಖರ್, ಪಿಸಿ 544 ವೆಂಕಟರವಣ, ಪಿಸಿ 430 ನರಸಿಂಹಪ್ಪ ಪಿಸಿ 239 ಮಣಿಕಂಠ, ಪಿಸಿ 197 ಅಂಬರೀಶರವರೊಂದಿಗೆ ಮಾಡಿಕೆರೆ ಕ್ರಾಸ್ ಗೆ ಹೋಗಿ ಅನುಮಾನಾಸ್ಪದವಾಗಿ ಒಂದು ಬ್ಯಾಗ್ ನಲ್ಲಿ ಏನೋ ಎತ್ತಿಕೊಂಡು ಓಡಾಡುತ್ತಿದ್ದ ಮೂರು ಜನರನ್ನು ಸಂಜೆ 5.30 ಗಂಟೆಯಲ್ಲಿ ವಶಕ್ಕೆ ಪಡೆದು ಅವರುಗಳ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಸದರಿ ಆಸಾಮಿಗಳು 1).ಶಶಿಕಾಂತ್ ಬಿನ್ ಲಕ್ಷ್ಮಿನಾರಾಯಣಪ್ಪ, 27 ವರ್ಷ, ವಕ್ಕಲಿಗರು, ಡ್ರೈವರ್ ಕೆಲಸ, ಮಸ್ತೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 2).ವಿಜಯ್ ಬಿನ್ ಲಕ್ಷ್ಮಪ್ಪ, 25 ವರ್ಷ, ಗೊಲ್ಲರು, ವ್ಯವಸಾಯ, ಬಂದಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3).ಮಧು ಬಿನ್ ವೆಂಕಟೇಶ, 28 ವರ್ಷ, ವಕ್ಕಲಿಗರು, ಹೆಚ್.ಡಿ.ಎಫ್.ಸಿ ನಲ್ಲಿ ಕೆಲಸ, ವಾಸ: ದೇವಲಾಪುರ ಗ್ರಾಮ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ. ಹಾಲಿ ವಾಸ: ಮಾಚೋಹಳ್ಳಿ ಗ್ರಾಮ, ಮಾಗಡಿ ರಸ್ತೆ, ಬೆಂಗಳೂರು ಎಂತ ತಿಳಿಸಿದ್ದು, ಶಶಿಕಾಂತ್ ರವರ ಬಳಿ ಇದ್ದ ಬ್ಯಾಗ್ ಅನ್ನು ಪರಿಶೀಲನೆ ಮಾಡಲಾಗಿ ಅದರಲ್ಲಿ ಸುಮಾರು 2.ಕೆ.ಜಿ ಯಷ್ಟು ತೂಕದ ಮಾದಕ ವಸ್ತುವಾದ ಗಾಂಜಾ ಇದ್ದು, ಇದನ್ನು ಕೈವಾರದ ಗೌತಮ್ ರಾಜ್ @ ಬಂಟಿ ಬಲಜಿಗರಪೇಟೆ ರವರು ಆಂದ್ರಪ್ರದೇಶದಿಂದ ತಂದು ಪ್ರವಾಸಿಗರ ತಾಣವಾದ ಕೈವಾರದಲ್ಲಿ ಮಾರಾಟ ಮಾಡುವ ಸಲುವಾಗಿ ನಮಗೆ ತಂದು ಕೊಟ್ಟು ತನಗೆ ಬೂರಗಮಾಕಲಹಳ್ಳಿ ಸ್ವಲ್ಪ ಕೆಲಸ ಇದೆ, ಇಲ್ಲಿಯೇ ಇರಿ ನಂತರ ನಾವೆಲ್ಲರೂ ಸೇರಿ ಈ ಗಾಂಜಾವನ್ನು ಕೈವಾರದಲ್ಲಿ ಮಾರಾಟ ಮಾಡೋಣವೆಂತ ತಿಳಿಸಿರುತ್ತಾರೆ. ನಂತರ ತಾನು ಸ್ಥಳದಲ್ಲಿಯೇ ಲ್ಯಾಪ್ ಟ್ಯಾಪ್ ಮೂಲಕ ವರದಿ ತಯಾರಿಸಿ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ, ವರದಿಯನ್ನು ಪಿಸಿ 430 ರವರ ಮೂಲಕ ಠಾಣೆಗೆ  ಕಳುಹಿಸಿಕೊಟ್ಟಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 108/2021 ಕಲಂ. 143,147,148,323,324,504,506,149 ಐ.ಪಿ.ಸಿ:-

  ದಿನಾಂಕ: 14/03/2021 ರಂದು ಠಾಣೆಯ ಮ.ಎ.ಎಸ್.ಐ ಪದ್ಮ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚಲಪತಿ ಬಿನ್ ರಾಜಪ್ಪ, 27 ವರ್ಷ, ಬೋವಿ ಜನಾಂಗ, ಪ್ಲಂಬರ್ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಸಂಬಂಧಿಯಾದ ಸುಕನ್ಯಾ ರವರನ್ನು ತಮ್ಮ ಗ್ರಾಮದ ಕಲ್ಯಾಣ್ ಬಿನ್ ಲೇಟ್ ದೇವರಾಜ್ ರವರು ಪ್ರೀತಿಸಿ ಮದುವೆಯಾಗಿರುತ್ತಾರೆ. ದಿನಾಂಕ: 11/03/2021 ರಂದು ರಾತ್ರಿ 7.45 ಗಂಟೆಯಲ್ಲಿ ಕಲ್ಯಾಣ್ ಹಾಗೂ ಆತನ ಸ್ನೇಹಿತರು ತಮ್ಮ ಮನೆಯ ಬಳಿ ಬಂದು ತಮ್ಮನ್ನು ಹೊಡೆದಿದ್ದು ಸದರಿ ಸಂಬಂಧ ಪ್ರಕರಣ ದಾಖಲಾಗಿರುತ್ತೆ. ಇದಕ್ಕೆ ವಿರುದ್ದವಾಗಿ ತನ್ನ ತಮ್ಮ ರಮೇಶ್ ರವರು ಸಹ ಕಲ್ಯಾಣ್ ರವರ ವಿರುದ್ದ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತೆ. ತಾನು ಗಲಾಟೆಯಾದ ದಿನದಿಂದ ಗ್ರಾಮದಲ್ಲಿ ಇಲ್ಲದೆ ಹೊರಗಡೆ ಹೋಗಿದ್ದು, ಈ ದಿನ ದಿನಾಂಕ: 14/03/2021 ರಂದು ಮದ್ಯಾಹ್ನ ಸುಮಾರು 2.00 ಗಂಟೆಯಲ್ಲಿ ಮನೆಗೆ ಬಂದೆನು. ತಾನು ಮನೆಗೆ ಬರುವುದನ್ನೇ ಕಾಯುತ್ತಿದ್ದ ತಮ್ಮ ಗ್ರಾಮದ ವಾಸಿಗಳಾದ ಕಲ್ಯಾಣ್ ಬಿನ್ ಲೇಟ್ ದೇವರಾಜ್, ಜಯರಾಜ್ ಬಿನ್ ಗೋವಿಂದಪ್ಪ, ಮಣಿ ಬಿನ್ ವೆಂಕಟೇಶಪ್ಪ, ಮಾಳಪಲ್ಲಿಯ ವಾಸಿಯಾದ ಅಪ್ಪು, ಕಲ್ಯಾಣ್ ರವರ ತಾಯಿ ರತ್ನಮ್ಮ ಕೋಂ ಲೇಟ್ ದೇವರಾಜ್ ಹಾಗೂ ಇತರರು ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಮನೆಯ ಬಳಿ ಬಂದು ಲೇ ಲೋಫರ್ ನನ್ನ ಮಗನೇ ಎರಡು ದಿನಗಳಿಂದ ಎಲ್ಲಿ ಬಚ್ಚಿಟ್ಟುಕೊಂಡಿದ್ದೆ, ಹೊರಗೆ ಬಾ ಎಂದು ಗಲಾಟೆ ತೆಗೆದು, ಅವಾಚ್ಯಶಬ್ದಗಳಿಂದ ಬೈಯ್ಯುತ್ತಾ ಮೊನ್ನೆ ತಪ್ಪಿಸಿಕೊಂಡಿದ್ದೀಯಾ ಈ ದಿನ ನಿನ್ನನ್ನು ಸಾಯಿಸುವ ತನಕ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿದರು. ಆ ಪೈಕಿ ಅಪ್ಪು ಕಲ್ಲಿನಿಂದ ತನ್ನ ತಲೆಯ ಹಣೆಯ ಎಡಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದನು. ಕಲ್ಯಾಣ್ ರವರು ದೊಣ್ಣೆಯಿಂದ ಎಡಕೈ ಹಸ್ತಕ್ಕೆ ಹೊಡೆದು ರಕ್ತಗಾಯಪಡಿಸಿದನು. ಉಳಿದವರೆಲ್ಲರೂ ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 32/2021 ಕಲಂ. 380 ಐ.ಪಿ.ಸಿ:-

  ದಿನಾಂಕ:14/03/2021 ರಂದು ಪಿರ್ಯಾದಿದಾರರಾದ ಅಮರ್ ರಾಮ್ ಬಿನ್ ನೇಮರಾಜ್ , 25 ವರ್ಷ, ಸಿರ್ವಿ ಜನಾಂಗ, ಬಾಲಾಜಿ ಜ್ಯೂಯಲ್ಸ್ ಅಂಡ್ ಬ್ಯಾಂಕರ್ಸ್ ಎಂ.ಜಿ. ರೋಡ್ ವಾಸ: ವಿವಿ ಪುರಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಬಾಲಾಜಿ ಜ್ಯೂಯಲ್ಸ್ ಅಂಗಡಿಯಲ್ಲಿ ಕೆಲಸವನ್ನು  ಮಾಡಿಕೋಂಡು ಇರುವುದಾಗಿ ಪ್ರತಿ ನಿತ್ಯ ಬೆಳಿಗ್ಗೆ 9-00 ಗಂಟೆಗೆ ಅಂಗಡಿಯನ್ನು ತೆಗೆದು ಮತ್ತೆ ಸಂಜೆ 8-00 ಗಂಟೆಗೆ ಬೀಗ ಹಾಕುತ್ತೇನೆ ಎಂದಿನಂತೆ ಈ ದಿನ ದಿನಾಂಕ:14/03/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಅಂಗಡಿಯ ಬಾಗಿಲನ್ನು ತೆಗೆದು ವ್ಯಾಪಾರ ಮಾಡುತ್ತೀದ್ದಾಗ ಬೆಳಿಗ್ಗೆ11-30 ಗಂಟೆಯಲ್ಲಿ ಸುಮಾರು 9 ರಿಂದ 10 ಗಿರಾಕಿಗಳು ಬಂದಿದ್ದು ಅವರಿಗೆ ಬೇಕಾಗಿರುವ ಒಡವೆಗಳಾದ ಚೈನ್, ಉಂಗುರ, ಡಾಲರ್ ಗಳನ್ನು  ನೋಡುತ್ತೀದ್ದರು, ಇವರು ಒಂದು ಚೈನ್ ಸುಮಾರು 12 ಗ್ರಾಂ, ಇದಕ್ಕೆ 03 ಗ್ರಾಂ, ಡಾಲರ್ ಇದ್ದು ಇದನ್ನು ನಮ್ಮ ಅಂಗಡಿಯ ಟ್ರೈಯಲ್ಲಿ ಇಟ್ಟು ಬೇರೆ ಒಡವೆಗಳನ್ನು ನೋಡಿ ಮುಗಿದ ನಂತರ ಬಿಲ್ ಮಾಡುವಾಗ ಚೈನ್ ಮತ್ತು ಡಾಲರ್ ಕಾಣಿಸುವುದಿಲ್ಲ, ಇದನ್ನು ಎಲ್ಲಾ ಕಡೆಯಲ್ಲಿ ಹುಡುಕಿದರು ಪತ್ತೆಯಗಿರುವುದಿಲ್ಲ ಇದರ ಅಂದಾಜು ಬೆಲೆ ಸುಮಾರು 49,000-00 ರೂಗಳು ಬಾಳುವುದಾಗಿರಿತ್ತೇ. ಇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಅನುಮಾನ ಇರುತ್ತೆ. ಆದ್ದರಿಂದ ಈ ಚೈನ್ ನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಾಗಿದೆ.

 

8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:14/03/2021 ರಂದು ರಾತ್ರಿ 10-30 ಗಂಟೆಯಲ್ಲಿ ಪಿರ್ಯಾದಿದಾರರಾದ ಎನ್.ಎಸ್ ಬಾಬುರೆಡ್ಡಿ ಬಿನ್ ಲೇಟ್ ಎನ್. ಬಿ.ಶ್ರೀನಿವಸರೆಡ್ಡಿ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ; ಚಿಕ್ಕಕುರುಗೋಡು ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗು  ನೀಡಿದ ದೂರಿನ ಸಾರಾಂಶವೆನೆಂದರೆ ತನಗೆ ಭರತ್ ಕುಮಾರ್ ಮತ್ತು ಮಾಧುರಿ ಎಂಬ ಇಬ್ಬರು ಮಕ್ಕಳಿರುತ್ತಾರೆ, ತನ್ನ ಮಗ ಭರತ್ ಕುಮಾರ್ ರವರು ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡಿಕೋಂಡು ತಮ್ಮ ಮನೆಯಲ್ಲಿರುತ್ತಾನೆ. ದಿನಾಂಕ;11/03/2021 ರಂದು ಸಂಜೆ ಸುಮಾರು 7-30 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತನ್ನ ಮಗ ಭರತ್ ಕುಮಾರ್ ರವರು ಶಿವರಾತ್ರಿ ಹಬ್ಬದ ಪ್ರಯುಕ್ತ ಗೌರಿಬಿದನೂರಿನಲ್ಲಿ ನಡೆಯುತ್ತೀರುವ ಟೂರ್ನಿಮೇಂಟ್ ನೊಡಿಕೊಂಡು ನಂತರ ಅಲಕಾಪುರ ಶ್ರೀ ಚೆನ್ನಸೋಮೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ತನ್ನ ಬಾಬತ್ತು KA-04 JF-6237 KTM DUKE BIKE   ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮದ ವಾಸಿಯಾದ ಹರ್ಷವರ್ದನ್ ರೆಡ್ಡಿ. ಎನ್.ಆರ್. ಬಿನ್ ರಾಜಶೇಖರ್ ರೆಡ್ಡಿ, ಎನ್.ಬಿ, 26 ವರ್ಷ, ಜಿರಾಯ್ತಿ,ರವರು ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ  ತನ್ನ ಮಗ ಕುಳಿತುಕೊಂಡು ಗೌರಿಬಿದನೂರಿಗೆ ಹೋದರು. ನಂತರ ಇದೇ ದಿನ ರಾತ್ರಿ ಸುಮಾರು 10-45 ಗಂಟೆಯಲ್ಲಿ ತನ್ನ ಮಗ ಭರತ್ ಕುಮಾರ್ ರವರು ಪೊನ್ ಮಾಡಿ ತನಗೆ ಗೌರಿಬಿದನೂರು ನಗರ  PWD ಕಛೇರಿಯ ಮುಂಭಾಗದ ರಸ್ತೆಯಲ್ಲಿ ಅಪಘಾತವಾಗಿದ್ದು ತನ್ನನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ಗೌರಿಬಿದನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದು ತಾನು ಕೂಡಲೇ ಯಾವುದೋ ವಾಹನದಲ್ಲಿ ಅಸ್ಪತ್ರೆಗೆ ಬಂದು ನೋಡಲಾಗಿ ವಿಚಾರವು ನಿಜವಾಗಿದ್ದು ತಾನು ತನ್ನ ಮಗ ಭರತ್ ಕುಮಾರ್ ರವರು ವಿಚಾರಿಸಲಾಗಿ ತಾನು ಮತ್ತು ಹರ್ಷವರ್ದನ್ ರೆಡ್ಡಿ ರವರು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಟೂರ್ನಿಮೇಂಟ್ ನ್ನು ನೋಡಿಕೊಂಡು ತನ್ನ ದ್ವಿ ಚಕ್ರ ವಾಹನವನ್ನು ಹರ್ಷವರ್ದನ್ ರೆಡ್ಡಿ ರವರು ಚಾಲನೆ ಮಾಡುತ್ತಾ ಮತ್ತು ತಾನು ಹಿಂಬದಿಯಲ್ಲಿ ಕುಳಿತುಕೊಂಡು ಅಲಕಾಪುರದ ಶ್ರೀ ಚೆನ್ನಸೋಮೇಶ್ವರ ದೇವಸ್ಥಾನಕ್ಕೆ ಹೋಗಲು ರಾತ್ರಿ ಸುಮಾರು 10-30 ಗಂಟೆಯಲ್ಲಿ ಗೌರಿಬಿದನೂರು ನಗರ  PWD ಕಛೇರಿಯ ಮುಂಭಾಗದ ಏಕಮುಖ ರಸ್ತೆಯಲ್ಲಿ ಎಡ ಬದಿಯಲ್ಲಿ ಹೋಗುತ್ತೀದ್ದಾಗ ತನ್ನ ಎದರುಗಡೆಯಿಂದ ಬಂದು KA-40 A-1739 Auto  ಚಾಲಕ ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾವು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ ತನಗೆ ಎಡ ಕಾಲಿನ ತೊಡೆಯ ಮೂಳೆ ಮುರಿತ ಗಾಯವಾಗಿದ್ದು ಬಲಕಾಲಿಗೆತರಚಿದ ಗಾಯವಾಗಿದ್ದು ಹರ್ಷವರ್ದನ್ ರೆಡ್ಡಿ ರವರಿಗೆ ಎಡ ಕಾಲಿನ ತೊಡೆ ಮತ್ತು  ಎಡ ಕೈನ ಮೂಗೈಗೆ ಮೂಳೆ ಮುರಿತದ ಗಾಯ, ಮುಖಕ್ಕೆ ರಕ್ತಗಾಯ ಮತ್ತು ತಲೆ ಮೂಗೇಟು ಆಗಿರುವುದಾಗಿ ಮತ್ತು ದ್ವಿ ಚಕ್ರ ವಾಹನವು ಜಕಂಗೊಂಡಿರುವುದಾಗಿ ತಿಳಿಸಿದ್ದು ಪ್ರಥಮ ಚಿಕಿತ್ಸೆಯನ್ನು ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ ಹರ್ಷವರ್ದನ್ ರೆಡ್ಡಿ ರವರನ್ನು ಅವರ ತಂದೆ ಬೆಂಗಳೂರಿನ MARVEL HOSPITAL  ಮತ್ತು ತಾನು ಬಸವನಗುಡಿ ಮೆಡಿಕಲ್ HOSPITAL ಗೆ ಚಿಕಿತ್ಸೆಗಾಗಿ ದಾಖಲು ಮಾಡಿ ಚಿಕಿತ್ಸೆಯನ್ನು ಕೋಡಿಸಿತ್ತೀದ್ದರಿಂದ ದೂರು ನೀಡಲು ತಡವಾಗಿರುತ್ತೆ.  ಆದ್ದರಿಂದ ತನ್ನ ಮಗ ಭರತ್ ಕುಮಾರ್ ಮತ್ತು ಹರ್ಷವರ್ದನ್ರೆಡ್ಡಿ ರವರು ಹೋಗುತ್ತೀದ್ದ ದ್ವಿ ಚಕ್ರ ವಾಹನಕ್ಕೆ KA-40 A-1739 Auto  ಚಾಲಕ ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಡಿಕ್ಕಿ ಹೊಡೆಸಿ ರಸ್ತೆ ಅಪಘಾತ ಮಾಡಿದ ಚಾಲಕ ಮತ್ತು ಆಟೋ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿದೆ.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 26/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:14/03/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿ ರಾಘವೇಂದ್ರ ಆರ್ ಬಿನ್ ಲೇಟ್ ರಾಮಕೃಷ್ಣಪ್ಪ, 37 ವರ್ಷ, ಆಗಸರು, ಬೊಮ್ಮನಹಳ್ಳಿ ಗ್ರಾಮ, ಪೋಶೆಟ್ಟಿಹಳ್ಳಿ ಪೋಸ್ಟ್, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ, ತಾಯಿ ರವರಿಗೆ ಮೂರು ಜನ ಮಕ್ಕಳಿದ್ದು 1 ನೇ ರಾಘವೇಂದ್ರ ಆದ ತಾನು, 2 ನೇ ಸುಷ್ಮ, 3 ನೇ ಮಹೇಶ್ ಎಂಬುವರಾಗಿದ್ದು ತನ್ನ ತಮ್ಮ ಮಹೇಶ್ ರವರು ಗ್ರೋಮರ್ ಕಂಪನಿಯಲ್ಲಿ ಸೇಲ್ಸ್ ಎಕ್ಸಗ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಹಳ್ಳಿಗಳ ಕಡೆ ಕೆಲಸಕ್ಕೆ ತನ್ನ ಹೆಸರಿನಲ್ಲಿರುವ ಕೆ.ಎ-40 ಎಸ್-7788 ಹೋಂಡಾ ಡ್ರೀಮ್ ಯುಗ ದ್ವಿಚಕ್ರ ವಾಹನದಲ್ಲಿ ಚಾಲನೆ ಮಾಡಿಕೊಂಡಿರುತ್ತಾನೆ. ದಿನಾಂಕ:11/03/2021 ರಂದು ರಾತ್ರಿ ಸುಮಾರು 12:30 ಗಂಟೆಯಲ್ಲಿ ತನ್ನ ತಮ್ಮ ಬೈರನಾಯಕನಹಳ್ಳಿ-ಅರಸನಹಳ್ಳಿ ಗೇಟ್ ಮದ್ಯೆ ರಸ್ತೆಯಲ್ಲಿ ಅಪಘಾತವಾಗಿ ಗಾಯಾಳಾಗಿ ಸ್ಥಳದಲ್ಲಿಯೇ ಇರುವುದಾಗಿ ತಿಳಿಸಿದ ತಕ್ಷಣ ತಾನು ದ್ವಿಚಕ್ರ ವಾಹನದಲ್ಲಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಿದಾಗ ತನ್ನ ತಮ್ಮ ಮಹೇಶ್ ರವರ ಮುಖ, ಮೈಮೇಲೆ ರಕ್ತವಾಗಿ ಮೂಗೇಟುಗಳು ಉಂಟಾಗಿದ್ದು ತನ್ನ ದ್ವಿಚಕ್ರ ವಾಹನ ರಸ್ತೆಯ ಪೂರ್ವದ ಕಡೆ ಮುಖ ಮಾಡಿ ಜಖಂಗೊಂಡಿರುತ್ತೆ. ತನ್ನ ತಮ್ಮನನ್ನು ವಿಚಾರಿಸಲಾಗಿ ನಾನು ಚಿಕ್ಕಬಳ್ಳಾಪುರದಿಂದ ನಂದಿ ದೇವಸ್ಥಾನಕ್ಕೆ ಕೆ.ಎ-40 ಎಸ್-7788 ದ್ವಿಚಕ್ರ ವಾಹನದಲ್ಲಿ ಚಾಲನೆ ಮಾಡಿಕೊಂಡು ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ರಾತ್ರಿ 11:45 ಗಂಟೆಯಲ್ಲಿ ನಂದಿ ಗ್ರಾಮದ ಕಡೆಯಿಂದ ಕೆ.ಎ-01 ಯು-600 ಟಿ.ವಿ.ಎಸ್ ವಿಕ್ಟರ್ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಎರಡು ದ್ವಿಚಕ್ರ ವಾಹನದಲ್ಲಿದ್ದವರು ಕೆಳಕ್ಕೆ ಬಿದ್ದು ಹೋಗಿ ನನಗೆ ಗಾಯಗಳಾಗಿದ್ದು ಡಿಕ್ಕಿ ಹೊಡೆಸಿದ ವ್ಯಕ್ತಿಗೂ ಸಹ ಗಾಯಗಳಾಗಿರುತ್ತೆಂದು ತಿಳಿಸಿದ ಕೂಡಲೆ ತಾನು ಆಂಬ್ಯೂಲೇನ್ಸ್ಗೆ ಕರೆ ಮಾಡಿ ಗಾಯಗೊಂಡ ತನ್ನ ತಮ್ಮ ಮಹೇಶ ಮತ್ತು ಡಿಕ್ಕಿ ಹೊಡೆಸಿದ ಜಯಂತ್ ಕುಮಾರ್ ರವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಅಲ್ಲಿನ ವೈದ್ಯರು ನೀಡಿದ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಜಯಂತ್ ಕುಮಾರ ರವರ ಸಂಬಂದಿಕರ ಸಹ ವಿಷಯ ತಿಳಿದುಕೊಂಡು ಬಂದ ತಮ್ಮ ಜೊತೆ ಸೇರಿಕೊಂಡರು ಆಂಬ್ಯೂಲೇನ್ಸ್ನಲ್ಲಿ ಜಯಂತ್ ಕುಮಾರ ರವರಿಗೆ ರಕ್ತಸಮೇತ ವಾಂತಿಯಾಗುತ್ತಿದ್ದರಿಂದ ಆತನ ಸಂಬಂದಿಕರು ಬ್ಯಾಟರಾಯನಪುರದ ಪ್ರೋಲೈಪ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ತನ್ನ ತಮ್ಮ ಮಹೇಶ ರವರನ್ನು ತಾನು ನಿಮಾನ್ಸ್ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆಪಡಿಸಿ ವೈದ್ಯರ ಸಲಹೆಯ ಮೇರೆಗೆ ಮನೆಗೆ ಕರೆದುಕೊಂಡು ಬಂದು ನಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಹೆಚ್ಚುವರಿ ಚಿಕಿತ್ಸೆಗಾಗಿ ಚಿಕಿತ್ಸೆಗಾಗಿ ಇ.ಎಸ್.ಐ ಕರೆದುಕೊಂಡು ಹೋಗಬೇಕಾಗಿರುತ್ತೆ. ಈಗ ಪ್ರಸ್ತುತ ತನ್ನ ತಮ್ಮ ಯಲಹಂಕದಲ್ಲಿ ತಮ್ಮ ಸಂಬಂದಿಕರ ಮನೆಯಲ್ಲಿ ಇರುತ್ತಾನೆ. ತನ್ನ ತಮ್ಮನಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿರುತ್ತೆ. ತನ್ನ ತಮ್ಮ ಮಹೇಶ ರವರಿಗೆ ಅಪಘಾತ ಪಡಿಸಿದ ಕೆ.ಎ-01 ಯು-600 ದ್ವಿಚಕ್ರ ವಾಹನದ ಚಾಲಕ ಜಯಂತ್ ಕುಮಾರ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 27/2021 ಕಲಂ. ಮನುಷ್ಯ ಕಾಣೆ:-

  ದಿನಾಂಕ:15/03/2021 ರಂದು ಬೆಳಿಗ್ಗೆ 11:50 ಗಂಟೆಗೆ ಪಿರ್ಯಾದಿ ಶ್ರೀ ಮಲ್ಲಿಕಾರ್ಜುನ ಬಿನ್ ಶಂಕರ, 30 ವರ್ಷ, ಲಿಂಗಾಯಿತರು, ಲಾರಿ ಚಾಲಕ, ಕುಂಗಟೋಳಿ ಗ್ರಾಮ, ಬೊಮ್ಮಳವಾಡ್ ಪೋಸ್ಟ್, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ತಾನು 4 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕು ಕಟಕಬಾವಿ ಗ್ರಾಮದ ಚಿದಾನಂದ ನಿಂಗಪ್ಪ ಪಾಟೀಲ ರವರಿಗೆ ಸೇರಿದ ಕೆ.ಎ-23 ಬಿ-3994 ಲಾರಿಗೆ ಚಾಲಕನಾಗಿದ್ದು ಹುಕ್ಕೇರಿ ತಾಲ್ಲೂಕಿನ ಕಮತ್ತನೂರು ಗ್ರಾಮದ ವಾಸಿ ವಿಠ್ಠಲ ರಾಮಪ್ಪ ಪಾಟೀಲ ಬಿನ್ ಲೇಟ್ ರಾಮಪ್ಪ, 30 ವರ್ಷ, ಲಿಂಗಾಯಿತರು, ಇವನು ಸಹ ತಮ್ಮ ಮಾಲಿಕರ ಮತ್ತೊಂದು ಲಾರಿ ಕೆ.ಎ-23 ಎ-9664 ಲಾರಿ ಚಾಲಕನಾಗಿದ್ದು ಈತನಿಗೆ ಮದುವೆಯಾಗಿರಲಿಲ್ಲ ಇವನು ಆಗಾಗ ಮದ್ಯಪಾನ ಮಾಡುತಿದ್ದನು. ಇವನಿಗೆ ತಾಯಿ ಮತ್ತು ಅಕ್ಕ ಇದ್ದು ಅವರು ಊರಿನಲ್ಲಿ ವಾಸವಾಗಿರುತ್ತಾರೆ. ದಿನಾಂಕ:05/03/2021 ರಂದು ತಾನು ಕೊಲ್ಲಾಪುರದಿಂದ ಬೆಂಗಳೂರಿಗೆ ಪಾರ್ಸಲ್ ಲೋಡ್ ಮಾಡಿಕೊಂಡು ದಿನಾಂಕ:06/03/2021 ರಂದು ಮುಂಜಾನೆ 06:00 ಗಂಟೆಗೆ ಹಾವೇರಿ ಬಳಿ ಬಂದಾಗ ವಿಠ್ಠಲ ರಾಮಪ್ಪ ಪಾಟೀಲ ರವರು ಪೋನ್ ಮಾಡಿ ತಾನು ಬೆಳಗಾವಿ ಜಿಲ್ಲೆಯ ರಾಯಭಾಗದಿಂದ ಮದ್ಯದ ಬಾಟಲುಗಳನ್ನು ಲೋಡ್ ಮಾಡಿಕೊಂಡು ಚಿಕ್ಕಬಳ್ಳಾಪುರದ ಬಳಿ ಜಡಲತಿಮ್ಮನಹಳ್ಳಿಯ ಸರ್ಕಾರಿ ಉಗ್ರಾಣಕ್ಕೆ ತರುತ್ತಿದ್ದಾಗ ರಾತ್ರಿ ಹೊಸಪೇಟೆ-ಕೂಡ್ಲಗಿ ಮದ್ಯೆ ರಾತ್ರಿ ಸ್ವಲ್ಪ ಕಳ್ಳತನವಾಗಿರುವುದಾಗಿ ತನ್ನನ್ನು ಬರುವಂತೆ ಹೇಳಿದನು. ಈ ವಿಚಾರವನ್ನು ತಾನು ಲಾರಿ ಮಾಲಿಕರಿಗೆ ತಿಳಿಸಿದಾಗ ಅಲ್ಲಿಗೆ ಹೋಗುವಂತೆ ತಿಳಿಸಿದರು. ತಾನು ಲಾರಿಯನ್ನು ಶಿರಾ ಡಾಬಾದ ಬಳಿ ಬಿಟ್ಟು ತಾನು ಕೂಡ್ಲಗಿ ಬಳಿ ಹೋಗಿ ಪರಿಶೀಲನೆ ಮಾಡಿ ಮಾಲಿಕರಿಗೆ ವರದಿ ಮಾಡಿದಾಗ ತಮ್ಮ ಮಾಲಿಕ ತನ್ನ ಲಾರಿಗೆ ಬೇರೊಬ್ಬ ಚಾಲಕನನ್ನು ಕಳುಹಿಸಿರುವುದಾಗಿ ಅಲ್ಲಿ ವ್ಯವಹಾರ ಮಾಡಿ ಮುಗಿಸು ಇಬ್ಬರು ಲೋಡನ್ನು ಜಡಲತಿಮ್ಮನಹಳ್ಳಿಗೆ ಸಾಗಿಸುವಂತೆ ಹೇಳಿದರು. ಅದರಂತೆ ದಿನಾಂಕ:09/03/2021 ರಂದು ನಾವಿಬ್ಬರು ಲೋಡನ್ನು ಬೆಳಿಗ್ಗೆ 10:00 ಗಂಟೆಗೆ ಜಡಲತಿಮ್ಮನಹಳ್ಳಿ ಸಕರ್ಾರಿ ಮದ್ಯದ ಡಿಪೋ ಬಳಿ ತಂದು ದಾಖಲೆಗಳನ್ನು ಕೊಟ್ಟು ವಿಚಾರ ತಿಳಿಸಿದಾಗ ಅವರು ಅನ್ಲೋಡ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಸದರಿ ಉಗ್ರಾಣದ ಬಳಿ ಎರಡು ದಿನ ಇದ್ದೇವು ದಿನಾಂಕ:11/03/2021 ರಂದು ರಾತ್ರಿ ಸುಮಾರು 8:45 ಗಂಟೆಯಲ್ಲಿ ಉಗ್ರಾಣದ ಮುಂದಿರುವ ಹೋಟೆಲ್ ಮುಂದೆಕುಳಿತಿದ್ದನು. ತಾನು ಲಾರಿಯಲ್ಲಿ ಕುಳಿತಿದ್ದು ವಿಠ್ಠಲ ರಾಮಪ್ಪ ಪಾಟೀಲ ಪೋನನ್ನು ಅವನ ಲಾರಿಯಲ್ಲಿ ಇಟ್ಟಿದ್ದು ಅದು ಕರೆ ಬಂದು ರಾತ್ರಿ 9:00 ಗಂಟೆಯಲ್ಲಿ ಕರೆ ಬಂದಾಗ ವಿಠ್ಠಲ ರಾಮಪ್ಪ ಪಾಟೀಲ ರವರು ಅಲ್ಲಿ ಇರಲಿಲ್ಲ ಅವನೆಲ್ಲೋ ಊಟಕ್ಕೆ ಹೋಗಿರಬಹುದೆಂದು ಉಹಿಸಿ ರಾತ್ರಿ 11:30 ಗಂಟೆ ವರೆಗೆ ಕಾದು ನೋಡಿದರು ಬರಲಿಲ್ಲ. ಈ ವಿಚಾರವನ್ನು ಮಾಲಿಕರಿಗೆ ಕರೆ ಮಾಡಿ ತಿಳಿಸಿದೇನು. ಆ ದಿನ ರಾತ್ರಿ ತಾನು ಲಾರಿಯಯೇ ಮಲಗಿದ್ದು ಮರು ದಿನ ದಿನಾಂಕ:12/03/2021 ರಂದು ಬೆಳಿಗ್ಗೆ ಎದ್ದು ನೋಡಿದಾಗ ಬಂದಿರಲಿಲ್ಲ ಮೋಬೈಲ್ ಪೋನ್ ಲಾರಿಯಲ್ಲಿಯೇ ಉಳಿದಿತ್ತು ನಂತರ ತಾನು ಸುತ್ತಮುತ್ತ ಎಲ್ಲಾ ಹುಡುಕಾಡಿ ತಮ್ಮ ಮಾಲಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ವಿಠ್ಠಲ ರಾಮಪ್ಪ ಪಾಟೀಲನ ಊರಿಗೆ ತಮ್ಮ ಮಾಲಿಕರೇ ಹೋಗಿ ನೋಡಿ ವಿಚಾರ ಮಾಡಿಕೊಂಡು ಬಂದಿದ್ದು ಕಾಣೆಯಾದವನು ಪತ್ತೆಯಾಗಲಿಲ್ಲ. ಈ ತಹಲ್ವರೆವಿಗೂ ಎಷ್ಟು ಹುಡುಕಾಡಿದರು ವಿಠ್ಠಲ ರಾಮಪ್ಪ ಪಾಟೀಲ ಸಿಕ್ಕಿರುವುದಿಲ್ಲ.  ಇವನು 5.7 ಅಡಿ ಎತ್ತರ, ಸಾದಾರಣ ಮೈಬಣ್ಣ, ದೃಡಕಾಯ ಶರೀರ, ಕೋಲು ಮುಖ, ಸುಮಾರು 30 ವರ್ಷ ವಯಸ್ಸು, ಕಾಣೆಯಾದಾಗ ಕೆಂಪು ಬಣ್ಣದ ಶರ್ಟ, ಖಾಕಿ ಪ್ಯಾಂಟು ತೊಟ್ಟಿದ್ದು, ಈತನು ಕನ್ನಡ ಮಾತನಾಡುತ್ತಿದ್ದು ಅಲ್ಪಸ್ವಲ್ಪ ಹಿಂದಿ ಮಾತನಾಡುತ್ತಾನೆ. ತಮಗೆ ಅನುಮಾನ ಇದ್ದ ಸ್ಥಳಗಳಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಆದ್ದರಿಂದ ದೂರು ನೀಡಲು ತಡವಾಗಿರುತ್ತೆ, ಆದ್ದರಿಂದ ಕಾಣೆಯಾದ ವಿಠ್ಠಲ ರಾಮಪ್ಪ ಪಾಟೀಲ ರವರನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ. 

ಇತ್ತೀಚಿನ ನವೀಕರಣ​ : 15-03-2021 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080