ಅಭಿಪ್ರಾಯ / ಸಲಹೆಗಳು

1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ:-14/02/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಮಂಜುನಾಥ ಬಿನ್ ಲೇಟ್ ವೀರಭದ್ರಪ್ಪ 46 ವರ್ಷ, ಲಿಂಗಾಯಿತರು, ಗೋಪಿಕಾ ಚಾಟ್ಸ್ ಅಂಗಡಿಯಲ್ಲಿ ಕೆಲಸ, ಕಾಮಶೇಟ್ಟಹಳ್ಳಿ ಗ್ರಾಮ, ಮಂಚನಬಲೆ ಹೋಬಳಿ, ಗುಂಡ್ಲಗುರ್ಕಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಮ್ಮ ಅಕ್ಕನ ಮಗನಾದ ಶ್ರೀ.ಸಿದ್ಧರಾಜು ಬಿನ್ ಲೇಟ್ ತೋಟದಪ್ಪ 45 ವರ್ಷ, ಲಿಂಗಾಯಿತ ಜನಾಂಗ, ಚಿಕ್ಕಬಳ್ಳಾಪುರ ನಗರದ ಲೋಹಿತ್ ಹೋಟೇಲ್ ನಲ್ಲಿ ಕೆಲಸ, ಕಾಮಶೇಟ್ಟಹಳ್ಳಿ ಗ್ರಾಮ, ಮಂಚನಬಲೆ ಹೋಬಳಿ, ಗುಂಡ್ಲಗುರ್ಕಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ದಿನಾಂಕ:-14/02/2021 ರಂದು ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಲು ತಮ್ಮ KA-50-U-2741 ರ ಟಿ.ವಿ.ಎಸ್. ಎಕ್ಸ್.ಎಲ್  ಹೆವಿಡ್ಯೂಟಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬೆಳಿಗ್ಗೆ ಸುಮಾರು 7-00 ಗಂಟೆಯ ಸಮಯದಲ್ಲಿ ಮನೆಯಿಂದ ಹೋಗಿದ್ದು, ಅದೇ ದಿನ ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ಸಿದ್ಧರಾಜು ರವರ ತಮ್ಮ ಮಂಜುನಾಥ ರವರು ಪಿರ್ಯಾಧಿದಾರರಿಗೆ ಮೊಬೈಲ್ ಕರೆ ಮಾಡಿ ಸಿದ್ಧರಾಜು ರವರಿಗೆ ಹೊನ್ನೇನಹಳ್ಳಿ ಗೇಟ್ ಬಳಿ ಅಪಘಾತವಾಗಿದ್ದು ಚಿಕಿತ್ಸೆಗಾಗಿ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗುತ್ತಿರುದಾಗಿ ತಿಳಿಸಿದ್ದು, ತಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಸಿದ್ಧರಾಜು ರವರಿಗೆ ತಲೆಯ ಹಿಂಭಾಗ, ಬಲ ಕಾಲಿನ ಮೊಣಕಾಲಿನ ಬಳಿ ಹಾಗೂ ಎಡ ಕೈಗೆ ರಕ್ತಗಾಯಗಳಾಗಿದ್ದು, ಸದರಿ ಅಪಘಾತದ ಬಗ್ಗೆ ಕೇಳಲಾಗಿ ತಮ್ಮ ಅಕ್ಕನ ಮಗನಾದ ಶ್ರೀ.ಸಿದ್ಧರಾಜು ರವರು ಚಿಕ್ಕಬಳ್ಳಾಪುರದಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಗ್ರಾಮಕ್ಕೆ ಬರಲು ದಿನಾಂಕ:-14/02/2021 ರಂದು ಸಂಜೆ ಸುಮಾರು 5-45 ಗಂಟೆಯ ಸಮಯದಲ್ಲಿ ತನ್ನ KA-50-U-2741 ರ ಟಿ.ವಿ.ಎಸ್. ಎಕ್ಸ್.ಎಲ್  ಹೆವಿಡ್ಯೂಟಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಚಿಕ್ಕಬಳ್ಳಾಪುರ - ಬಾಗೇಪಲ್ಲಿ ಎನ್.ಎಚ್-44 ಹೈವೇ ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ಯೂ-ಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಬೆಂಗಳೂರು ಕಡೆಯಿಂದ ಬಂದ KA-05-AF-2816 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯೂ-ಟರ್ನ್ ಮಾಡುತ್ತಿದ್ದ KA-50-U-2741 ರ ಟಿ.ವಿ.ಎಸ್. ಎಕ್ಸ್.ಎಲ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಸಿದ್ಧರಾಜು ರವರು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ವಾಹನಗಳು ಜಕಂಗೊಂಡು ಸಿದ್ಧರಾಜು ರವರಿಗೆ ತಲೆಯ ಹಿಂಭಾಗ, ಬಲ ಮೊಣಕಾಲಿನ ಬಳಿ ಹಾಗೂ ಎಡ ಕೈಗೆ ರಕ್ತಗಾಯಗಳಾಗಿದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಚಿಂತಾಮಣಿ ಟೌನ್ ನ ಪಿ.ವೈ.ವೆಂಕೋಬಾ ರಾವ್ ಬಿನ್ ಆರ್.ಎಸ್ ಯಲ್ಲಪ್ಪ 47 ವರ್ಷ, ಬುಡಬುಡಕೆ ಜನಾಂಗ ಎಂತ ತಿಳಿಸಿದ್ದು, ನಂತರ ಸಿದ್ಧರಾಜು ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವೈಧ್ಯರ ಸಲಹೆ ಮೇರೆಗೆ 108 ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದರಿ ಅಪಘಾತಕ್ಕೆ ಕಾರಣನಾದ KA-05-AF-2816 ರ ಕಾರಿನ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡಿರುತ್ತೆ.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 14-02-2021 ರಂದು ಸಂಜೆ 4.00 ಘಂಟೆ ಸಮಯದಲ್ಲಿ ನ್ಯಾಯಾಲಯದ ಕರ್ತವ್ಯದ ಕುಮಾರ್ ನಾಯ್ಕ ಪಿಸಿ 302 ರವರು ಘನ ನ್ಯಾಯಾಲಯದಿಂದ ಅನುಮತಿ ಆದೇಶವನ್ನು ಪಡೆದು  ಸಾದರು ಪಡಿಸಿದ್ದರ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಶರತ್ ಕುಮಾರ್ ಬಿ.ಎನ್ ರವರು ತಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ 40-ಜಿ-270 ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಸಂಗ್ರಹಣೆಗಾಗಿ ಗುಡಿಬಂಡೆ,ಯಲ್ಲೂಡು, ಇತರೆ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮಧ್ಯಾಹ್ನ 2-30 ಗಂಟೆಗೆ ಗುಂಡ್ಲಕೊತ್ತೂರು ಗ್ರಾಮಕ್ಕೆ ಬಂದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ನಗರಗೆರೆ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ನಂತರ ಪಂಚರೊಂದಿಗೆ ಜೀಪ್ ನಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ನಗರಗೆರೆ ಕೆರೆ ಅಂಗಳಕ್ಕೆ ಹೋಗಿ ಮರೆಯಲ್ಲಿ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಸ್ವಲ್ಪ ದೂರದಲ್ಲಿ ಒಂದು ಜಾಲಿ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡಿದ್ದು ಅದರಲ್ಲಿ ಒಬ್ಬ ಆಸಾಮಿ ಅಂದರ್ ಗೆ 200 ರೂ ಎಂತಲೂ ಬಾಹರ್ ಗೆ 200 ರೂ ಎಂತಲೂ ಉಳಿದವರು ಸಹ ಅದೇ ರೀತಿ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಇಸ್ವೀಟು ಜೂಜಾಟವಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯನ್ನು ಸದರಿ ಸ್ಥಳವನ್ನು ಸುತ್ತುವರೆಯಲು ತಿಳಿಸಿ ಪಂಚರ ಸಮಕ್ಷಮ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 15 ಜನ ಸ್ಥಳದಲ್ಲಿ ಸಿಕ್ಕಿರುತ್ತಾರೆ ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ನೆಲದ ಮೇಲೆ ಜಾಲಿ ಮರದ ಕೆಳಗೆ ಒಂದು ನ್ಯೂಸ್ ಪೇಪರ್ ಹಾಸಿದ್ದು ಅದರ ಮೇಲೆ ವಿವಿದ ಮುಖ ಬೆಲೆಯ ನೋಟುಗಳು ಮತ್ತು ಇಸ್ವೀಟು ಎಲೆಗಳು ಚಲ್ಲಾ-ಪಿಲ್ಲಿ ಆಗಿ ಬಿದ್ದಿದು ಅವುಗಳನ್ನು ಎಣಿಸಲಾಗಿ 52 ಇಸ್ವೀಟು ಎಲೆಗಳಿದ್ದು ,20600/- ರೂಪಾಯಿ ಹಣವಿರುತ್ತೆ.ನಂತರ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದು ಕೊಂಡಿರುತ್ತೆ.ಮೇಲ್ಕಂಡ ಮಾಲು ಮತ್ತು ಆಸಾಮಿಗಳನ್ನು ಠಾಣೆಗೆ ಕರೆ ತಂದು ವರದಿ ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:14/02/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಲಕ್ಷ್ಮೀನಾರಾಯಣ ಬಿನ್ ಲೇಟ್ ಜಯರಾಮಪ್ಪ, 36 ವರ್ಷ, ಬೋಯ ಜನಾಂಗ, ಆಟೋ ಚಾಲಕ, ಕಂಚಿ ಸಮುದ್ರಂ, ಹಿಂದೂಪುರ ತಾಲ್ಲೂಕು,  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ತಮ್ಮನಾದ ನಾರಾಯಣಸ್ವಾಮಿ ಬಿನ್ ಲೇಟ್ ಜಯರಾಮಪ್ಪ, ಎಂಬುವವನು ಕೆಲಸದ ಮೇಲೆ ಈ ದಿನ ದಿನಾಂಕ: 14/02/2021 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ತನ್ನ ಬಾಬತ್ತು.AP02-BB-5325 TVS XL. HEAVY DUTY ದ್ವಿಚಕ್ರ ವಾಹನದಲ್ಲಿ  ಗೌರೀಬಿದನೂರು ತಾಲ್ಲೂಕು, ನಗರಗೆರೆ  ಗ್ರಾಮದ ಕಡೆಗೆ  ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದನು.  ನಂತರ ಸಂಜೆ ಸುಮಾರು 4-30 ಗಂಟೆಯಲ್ಲಿ  ತನ್ನ ತಮ್ಮ ನಾರಾಯಣಸ್ವಾಮಿ ಬಳಿ ಇದ್ದ ಮೊಬೈಲ್ ನಂಬರಿನಿಂದ ಪಿರ್ಯಾದಿದಾರರಿಗೆ ಯಾರೋ  ಕರೆ ಮಾಡಿ, ತಮ್ಮ ನಾರಾಯಣಸ್ವಾಮಿ ಗೆ   ಗೌರೀಬಿದನೂರು ತಾಲ್ಲೂಕು, ನಗರಗೆರೆ ಗ್ರಾಮದ ಬಳಿ ಲೇಪಾಕ್ಷಿ ರಸ್ತೆ ಜೀಲಾಕುಂಟೆ ಕ್ರಾಸ್ ಬಳಿ  ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿರುವುದಾಗಿ, ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ  ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು ಕೂಡಲೇ ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ, ತನ್ನ ತಮ್ಮ ನಾರಾಯಣಸ್ವಾಮಿಗೆ ತಲೆಗೆ ಮುಖಕ್ಕೆ ತೀವ್ರವಾದ ರಕ್ತಗಾಯಗಳಾಗಿ ಮೃತ ಪಟ್ಟಿದ್ದನು. ಪಿರ್ಯಾದಿದಾರರ ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದವರನ್ನು ವಿಚಾರಿಸಿದಾಗ, ಇದೇ ದಿನ ದಿನಾಂಕ:14/02/2021 ರಂದು  ಸಂಜೆ ಮನೆಯಿಂದ ಬಂದ ತನ್ನ ತಮ್ಮ AP02-BB-5325 TVS XL. HEAVY DUTY ದ್ವಿಚಕ್ರ ವಾಹನದಲ್ಲಿ  ಹಿಂದೆ ನಮ್ಮ ಗ್ರಾಮದ ಚಿನ್ನಾದೆಪ್ಪ ಎಂಬುವರನ್ನು ಕೂರಿಸಿಕೊಂಡು, ನಗರಗೆರೆ ಗ್ರಾಮದ ಕಡೆಗೆ  ನಗರಗೆರೆ ಸಮೀಪ, ಲೇಪಾಕ್ಷಿ ರಸ್ತೆ, ಜೀಲಾಕುಂಟೆ ಕ್ರಾಸ್ ಬಳಿ, ಬರುತ್ತಿದ್ದಾಗ,  ಎದುರಾಗಿ ನಗರಗೆರೆ  ಕಡೆಯಿಂದ ಬಂದ AP39-TK.3644 ಆಟೋ ವಾಹನವನ್ನು ಅದರ ಚಾಲಕ ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, AP02-BB-5325 TVS XL. HEAVY DUTY ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತನ್ನ ತಮ್ಮ ನಾರಾಯಣಸ್ವಾಮಿ ಗೆ ಡಿಕ್ಕಿ ಹೊಡೆಸಿದ್ದರಿಂದ ನಾರಾಯಣಸ್ವಾಮಿಗೆ ತಲೆಗೆ ಹಾಗು ದೇಹದ ಮೇಲೆ ತೀವ್ರವಾದ ಗಾಯಗಳಾಗಿರುವುದಾಗಿ, ಚಿನ್ನಾದೆಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ, ತೀವ್ರವಾಗಿ ಗಾಯಗೊಂಡಿರುವ ತನ್ನ ತಮ್ಮ ನಾರಾಯಣಸ್ವಾಮಿಯನ್ನು ಸಂಜೆ 5-00 ಗಂಟೆಗೆ ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿರುತ್ತಾನೆಂದು ತಿಳಿಯಿತು. ತನ್ನ ತಮ್ಮನ ಟಿ.ವಿ.ಎಸ್. ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತಿದ್ದ ಚಿನ್ನಾದೆಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿಯಿತು. ತನ್ನ ತಮ್ಮನ ಮೃತದೇಹವು ಹಾಲಿ ಹಿಂದೂಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತೆ. ಅಪಘಾತ ಮಾಡಿರುವ . AP39-TK.3644 ಆಟೋ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ.  ಆದುದರಿಂದ ಅಪಘಾತಕ್ಕೆ ಕಾರಣನಾದ AP39-TK.3644 ಆಟೋ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ದೂರು.

 

4. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ 14/02/2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಪಿರ್ಯಾದಿ ರವಿಕುಮಾರ್ ಸಿ.ಎಲ್ ಬಿನ್ ಲಕ್ಷ್ಮೀನರಸಿಂಹಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 13/02/2021 ರಂದು ರಾತ್ರಿ ಸುಮಾರು 07-40 ಗಂಟೆ ಸಮಯದಲ್ಲಿ ತಮ್ಮ ಅಕ್ಕನಾದ ನಳಿನಾಕ್ಷಿರವರು ತನಗೆ ಪೋನ್ ಮಾಡಿ ನಿಮ್ಮ ಭಾವನಿಗೆ ಅಪಘಾತವಾಗಿದೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆಂದು ತಿಳಿಸಿದರು. ತಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ತಮ್ಮ ಭಾವ ಸುಧೀಂದ್ರ ಆಚಾರ್ (35 ವರ್ಷ) ರವರಿಗೆ ಬಲಕಾಲು ಮತ್ತು ಹಣೆಯ ಮೇಲೆ ರಕ್ತ ಗಾಯಗಳಾಗಿದ್ದು ಮಾತನಾಡುತ್ತಿರಲಿಲ್ಲ. ನಂತರ ತಾನು ಅಪಘಾತದ ಬಗ್ಗೆ ವಿಚಾರಿಸಲಾಗಿ ತಮ್ಮ ಭಾವ ಸುಧೀಂದ್ರ ಆಚಾರ್ ರವರು ಗೌರಿಬಿದನೂರಿನಿಂದ ತನ್ನ ಬಾಬತ್ತು KA-40-J-9998 TVS XL  ದ್ವಿಚಕ್ರವಾಹನದಲ್ಲಿ ತಮ್ಮ ಅಕ್ಕನನ್ನು ತಮ್ಮ ಊರಾದ ಬೊಮ್ಮೇನಹಳ್ಳಿಗೆ ಬಿಟ್ಟು ವಾಪಸ್ಸು ಅದೇ ದ್ವಿಚಕ್ರವಾಹನದಲ್ಲಿ ಗೌರಿಬಿದನೂರಿನಲ್ಲಿರುವ ಮನೆಗೆ ಬರುತ್ತಿರುವಾಗ ಕರೇಕಲ್ಲಹಳ್ಳಿಯ ಸಾಯಿ ಲೇಔಟ್ ಹತ್ತಿರ ಸಂಜೆ 7:00 ಘಂಟೆಗೆ ಎದುರುಗಡೆಯಿಂದ KA-40-M-2464 OMNI ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಭಾವ ಸುಧೀಂದ್ರರವರು ಚಾಲನೆ ಮಾಡುತ್ತಿದ್ದ KA-40-J-9998  TVS XL ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಕಾಲು ಮತ್ತು ಹಣೆಯ ಮೇಲೆ ರಕ್ತಗಾಯಗಳಾಗಿರುತ್ತದೆ. ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ  ದಾಖಲು ಮಾಡಿರುತ್ತಾರೆಂದು ತಿಳಿಸಿರುತ್ತಾರೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದು ಅದರಂತೆ ತಾನು ಹಿಂದೂಪುರದ  A.R. ಅರ್ಥೋ ಆಸ್ಪತ್ರೆಗೆ ದಾಖಲು ಮಾಡಿದ್ದು ತನ್ನ ಭಾವನಾದ ಸುಧೀಂದ್ರ ಆಚಾರ್ ರವರಿಗೆ ಅಪಘಾತವುಂಟು ಮಾಡಿದ KA-40-M-2464 OMNI ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿಬೇಕೆಂದು ಈ ದಿನ ಠಾಣೆಗೆ ಹಾಜರಾಗಿ ತಡವಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 32,34 ಕೆ.ಇ ಆಕ್ಟ್:-

     ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಲಕ್ಷ್ಮೀನಾರಾಯಣ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 14/02/2021 ರಂದು ಮದ್ಯಾಹ್ನ 2-00 ಗಂಟೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ 219 ಶ್ರೀನಿವಾಸ ಮೂರ್ತಿ, ಪಿ.ಸಿ 537 ಆನಂದ ಕುಮಾರ್ ಹಾಗೂ ಜೀಪ್ ಚಾಲಕ .ಪಿ.ಸಿ 120 ನಟೇಶ್ ರವರೊಂದಿಗೆ ಕೆಎ-40-ಜಿ-395 ರ ಸರ್ಕಾರಿ ಜೀಪ್ ನಲ್ಲಿ ತೊಂಡೆಬಾವಿ, ಇಂದಿರಾನಗರ, ಬೇವಿನಹಳ್ಳಿ ಅಲ್ಲೀಪುರ ಗ್ರಾಮಗಳ ಕಡೆ ಗಸ್ತುಮಾಡಿಕೊಂಡು  ಮದ್ಯಾಹ್ನ 2-30  ಗಂಟೆಯಲ್ಲಿ  ಪುಲಗಾನಹಳ್ಳಿ ಗ್ರಾಮದ ಮೂರ್ತಿ ಬಿನ್ ಲೇಟ್ ಓಬಳಪ್ಪ ರವರ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ  ರೀತಿಯ ಲೈಸನ್ಸ್ ಮತ್ತು ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸದರಿ ದಾಳಿಗೆ ಪಂಚರನ್ನು ಕರೆದುಕೊಂಡು ನಾವು ಮತ್ತು ಪಂಚರು ಮದ್ಯಾಹ್ನ 3-00 ಗಂಟೆಗೆ ಪುಲಗಾನಹಳ್ಳಿ ಗ್ರಾಮಕ್ಕೆ  ಹೋಗಿ  ಜೀಪನ್ನು ಮರೆಯಲ್ಲಿ ನಿಲ್ಲಿಸಿ ಬಾತ್ಮೀಯಬಂದ  ಸ್ಥಳಕ್ಕೆ ಹೋಗಿ  ಬಾತ್ಮೀಯಂತೆ  ಗೌರೀಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಪುಲಗಾನಹಳ್ಳಿ ಗ್ರಾಮದ ಮೂರ್ತಿ ಬಿನ್ ಲೇಟ್ ಓಬಳಪ್ಪ 50 ವರ್ಷ ಪ.ಜಾತಿ ರವರ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ  ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಗಡಿಯಲ್ಲಿ ದಾಸ್ತಾನು ಮಾಡಿಕೊಂಡಿದ್ದ  ಮದ್ಯದ ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಚೀಲದಲ್ಲಿ 90 ML ಸಾಮರ್ಥ್ಯದ HAYWARDS CHEERS WHISKY  02 ಕಾಟನ್ ಬಾಕ್ಸ್ ಗಳಿದ್ದು. ಮತ್ತೊಂದು ಪ್ಲಾಸ್ಟಿಕ್ ಚೀಲದಲ್ಲಿ  15 , 90 ML ಸಾಮರ್ಥ್ಯದ HAYWARDS CHEERS WHISKY  ಟೆಟ್ರಾ ಪ್ಯಾಕೆಟ್ ಗಳಿದ್ದು ಅಸಾಮಿಯನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡಲು ನಿನ್ನ ಬಳಿ ಲೈಸನ್ಸ್, ಪರ್ಮಿಟ್ ಇತ್ಯಾದಿ ದಾಖಲೆಗಳು ಇದ್ದರೆ ತೋರಿಸು ಎಂದು ಕೇಳಿದಾಗ ಇಲ್ಲವೆಂದು ಉತ್ತರಿಸಿದ್ದು.  ಸದರಿ ಮನೆಯಲ್ಲಿದ್ದ ಒಟ್ಟು 207 90 ML ಸಾಮರ್ಥ್ಯದ HAYWARDS CHEERS WHISKY  ಟೆಟ್ರಾ ಪ್ಯಾಕೆಟ್ ಗಳಿದ್ದು. ಸದರಿ ಮಧ್ಯವನ್ನು ಸ್ಥಳದಲ್ಲೇ ಮಹಜರ್ ಕ್ರಮವನ್ನು ಜರುಗಿಸಿ ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-30 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿದ್ದು ಸದರಿ ಮಧ್ಯದ ಬೆಲೆ ಒಟ್ಟು ಸುಮಾರು 7271 /- ರುಪಾಯಿ ಬೆಳೆಬಾಳುವುದಾಗಿದ್ದು, 90 ML ಸಾಮರ್ಥ್ಯದ HAYWARDS CHEERS WHISKY ಯ 207  ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ಮತ್ತು ಮಾಲನ್ನು ವಶಕ್ಕೆ ಪಡೆದುಕೊಂಡು ಸಂಜೆ 5-15 ಗಂಟೆಗೆ ಠಾಣೆಗೆ ಹಿಂತಿರುಗಿ ಬಂದು ಆರೋಪಿಯ ವಿರುದ್ಧ ಠಾಣಾ ಮೊ,ಸಂ: 34/2021 ಕಲಂ,32 ಮತ್ತು 34 ಕೆ.ಇ ಆಕ್ಟ್ ರೀತ್ಯ ಸ್ವತಃ ಕೇಸನ್ನು ದಾಖಲುಮಾಡಿರುತ್ತದೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 143,147,323,324,504,506,149 ಐ.ಪಿ.ಸಿ:-

     ದಿನಾಂಕ: 15-02-2021 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶಿವರಾಜ ಬಿನ್ ವೆಂಕಟೇಶಪ್ಪ, 29 ವರ್ಷ, ಪ.ಜಾತಿ, ಪಲ್ಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಬೆಳಿಗ್ಗೆ 9.30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಗಾಯಾಳುವಿನ ಹೇಳಿಕೆ ಸಾರಾಂಶವೆನೆಂದರೆ, ತಾನು ಜಿರಾಯ್ತಿಯೊಂದಿಗೆ ಗ್ರಾಮದಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ವಾಸವಾಗಿದ್ದು, ಈಗ್ಗೆ 3 ತಿಂಗಳುಗಳ ಹಿಂದೆ 7 ಕುರಿಗಳನ್ನು ಬಾಲ್ಯಪುರದ ಶ್ರೀನಿವಾಸ ಎಂಬುವರಿಗೆ ತಮ್ಮ ಬಾವನಾದ ಚೀಮರಸನಹಳ್ಳಿ ಗ್ರಾಮದ ಮುನಿರಾಜು ರವರ ಮುಖಾಂತರ ಮಾರಾಟ ಮಾಡಿದ್ದು, ಇನ್ನು ಹಣ ಕೊಟ್ಟಿರಲಿಲ್ಲ, ತಾನು ಹಲವಾರು ಬಾರಿ ಹಣ ಕೇಳಿದರೂ ಸಹ ಹಣ ಕೊಡದೆ ಸತಾಯಿಸುತ್ತಿದ್ದರು, ಆದ್ದರಿಂದ ತಾನು ಈಗ್ಗೆ ಸುಮಾರು 20 ದಿನಗಳ ಹಿಂದೆ ಶ್ರೀನಿವಾಸ ರವರಿಗೆ ಮಾರಾಟ ಮಾಡಿದ್ದ ಕುರಿಗಳನ್ನು ವಾಪಸ್ಸು ಎತ್ತಿಕೊಂಡು ಬಂದಿದ್ದು, ತಾನು ಮುನಿರಾಜು ರವರ ಮುಖಾಂತರ ಕುರಿ ಮಾರಾಟ ಮಾಡಿದ್ದು ಹಣ ಕೊಡದ ಕಾರಣ ಸದರಿ ಕುರಿಗಳನ್ನು ವಾಪಸ್ಸು ಎತ್ತಿಕೊಂಡು ಬಂದಿದ್ದು ಮುನಿರಾಜು ರವರಿಗೆ ತಾನು ಮರ್ಯಾದೆ ಕೊಡಲಿಲ್ಲವೆಂದು ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ: 15-02-2021 ರಂದು 00.50 ಗಂಟೆಯಿಂದ 01.00 ಗಂಟೆ ಮದ್ಯದಲ್ಲಿ ತಮ್ಮ ತೋಟದಲ್ಲಿರುವ ತೋಟದ ಮನೆಯ ಬಳಿ ಬಂದು ತನ್ನ ಭಾವನಾದ ಚೀಮರಸನಹಳ್ಳಿ ಗ್ರಾಮದ ರಾಜಣ್ಣ ಬಿನ್ ಮುನಿಯಪ್ಪ, ತಮ್ಮ ಅಕ್ಕ ರೇಣುಕ ಕೋಂ ರಾಜಣ್ಣ, ಅವರ ಮಗನಾದ ನಿತಿನ್ ಕುಮಾರ್ ಬಿನ್ ರಾಜಣ್ಣ, ತಮ್ಮ ಮೊತ್ತೊಬ್ಬ ಬಾವನಾದ ಮುನಿರಾಜ ಬಿನ್ ಮುನಿವೆಂಕಟಪ್ಪ, ಯಡಿಯೂರು ಗ್ರಾಮದ ವಾಸಿಗಳಾದ ನಾಗರಾಜ @ ಡಿಂಗ್ರಿ ನಾಗರಾಜ ಮತ್ತು ನಾಗರಾಜ @ ಮದುರಂ ನಾಗರಾಜ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಹಿಡಿದುಕೊಂಡು ತನ್ನನ್ನು ಕೈಗಳಿಂದ ಹೊಡೆದು ಎಳೆದುಕೊಂಡು ಹೋಗಿ ತಮ್ಮ ಮನೆಯ ಬಳಿಯಿರುವ ಹಳ್ಳದಲ್ಲಿ ತಳ್ಳಿ ಲೋಪರ್ ನನ್ನ ಮಗನೆ ನಿನ್ನಿಂದ ನನಗೆ ಊರಿನಲ್ಲಿ ಮರ್ಯಾದೆ ಇಲ್ಲದೆ ಆಯಿತು ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ನಿತಿನ್ ಕುಮಾರ್ ರವರು ತನಗೆ ದೊಣ್ಣೆಯಲ್ಲಿ ಮುಖಕ್ಕೆ, ಬುಜದ ಮೇಲೆ, ಬೆನ್ನಿನ ಮೇಲೆ, ಕೈಗಳಿಗೆ, ಕಾಲುಗಳಿಗೆ ಹೊಡೆದಿದ್ದು ಉಳಿದವರೆಲ್ಲರೂ ಸಹ ಕೈಗಳಿಂದ ತನ್ನನ್ನು ಹೊಡೆದು ಕಾಲಿನಲ್ಲಿ ಒದ್ದು ಗಾಯಗಳನ್ನು ಉಂಟು ಮಾಡಿದ್ದು, ಆಗ ತಾನು ಕಿರುಚಿಕೊಂಡ ಶಬ್ದ ಕೇಳಿ ತಮ್ಮ ತಂದೆ ವೆಂಕಟೇಶಪ್ಪ ಮತ್ತು ತಮ್ಮ ತಾಯಿ ಶ್ರೀಮತಿ ವೆಂಕಟಮ್ಮ ರವರುಗಳು ಬಂದು ಗಲಾಟೆ ಬಿಡಿಸಿದ್ದು ಆಗ ತಮ್ಮ ಭಾವ ರಾಜಣ್ಣ ಮತ್ತು ತಮ್ಮ ಅಕ್ಕ ರೇಣುಕ ರವರು ಈ ದಿನ ನಿನ್ನ ಟೈಮ್ ಚೆನ್ನಾಗಿದೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದು, ಅಷ್ಟರಲ್ಲಿ ಅಲ್ಲಿಗೆ ಬಂದ ತನ್ನ ಮಾವನಾದ ದ್ಯಾವಪ್ಪ ಬಿನ್ ಮುನಿವೆಂಕಟಪ್ಪ ರವರು ತನ್ನನ್ನು ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ, ಹಣಕಾಸಿನ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ. 36/2021 ಕಲಂ 143, 147, 323, 324, 504, 506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 15-02-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080