Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 290/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:14/09/2021 ರಂದು ಮದ್ಯಾಹ್ನ 12-45 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 14-09-2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಹೆಚ್ ಸಿ-178 ಶ್ರೀಪತಿ, ಪಿಸಿ-235 ಅಶ್ವತ್ಥನಾರಾಯಣ, ಪಿಸಿ-305 ಹರೀಶ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ನಲ್ಲಪರೆಡ್ಡಿಪಲ್ಲಿ, ಗೂಳೂರು, ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಮಾರ್ಗಾನುಕುಂಟೆ ಗ್ರಾಮದಲ್ಲಿ  ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಹೆಚ್ ಸಿ-178 ಶ್ರೀಪತಿ, ಪಿಸಿ-235 ಅಶ್ವತ್ಥನಾರಾಯಣ, ಪಿಸಿ-305 ಹರೀಶ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಗೂಳೂರು ಗ್ರಾಮದಲ್ಲಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಬೆಳಿಗ್ಗೆ 11-15 ಗಂಟೆಗೆ ಮರ್ಗಾನುಕುಂಟೆ ಗ್ರಾಮದಲ್ಲಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿರವರು ಹಿಡಿದುಕೊಂಡಿದ್ದು, ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಈರಪ್ಪ ಬಿನ್ ವೆಂಕಟಪ್ಪ, 47ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ,ವಾಸ: ಮರ್ಗಾನುಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 12-45 ಗಂಟೆಗೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನಮ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 291/2021 ಕಲಂ. 32,34 KARNATAKA EXCISE ACT, 1965 :-

     ದಿನಾಂಕ: 14/09/2021 ರಂದು ಮದ್ಯಾಹ್ನ 1-45 ಗಂಟೆಗೆ ಪಿಎಸ್ಐ ಡಿಸಿಬಿ-ಸಿಇಎನ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ:14.09.2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ-50 ನರಸಿಂಹಮೂರ್ತಿ, ಪಿಸಿ-531 ಮಂಜುನಾಥ ಸಿ.ಕೆ ಮತ್ತು ಪಿಸಿ-142 ಅಶೋಕ ಹಾಗೂ ಕೆಎ-40-ಜಿ-58 ಜೀಪ್ ಚಾಲಕರಾದ ಎಹೆಚ್ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಂದು ಬೆಳಿಗ್ಗೆ 8.00 ಗಂಟೆಯ ಸಮಯದಲ್ಲಿ ಮಿಟ್ಟೇಮರಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಮಾಹಿತಿಯೇನೆಂದರೆ, ಬಾಗೇಪಲ್ಲಿ ತಾಲ್ಲೂಕಿನ ಹನುಮಂತರಾಯನಪಲ್ಲಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಮದ್ಯವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ತಲೆಯ ಮೇಲೆ ಎತ್ತಿಕೊಂಡು ನಡೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾವು ಪಂಚರೊಂದಿಗೆ ಸ್ಥಳಕ್ಕೆ ಬೆಳಿಗ್ಗೆ 8.30 ಗಂಟೆಗೆ ಹೋಗಿದ್ದು, ಆತನನ್ನು ತಡೆದು ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಾಂಜಿಲು ಬಿನ್ ವೆಂಕಟರವಣಪ್ಪ, 33 ವರ್ಷ, ದೊಂಬರು ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ, ವಾಸ: ದೊಂಬರಹಟ್ಟಿ(ದೊಂಬರಗುಡಿಸಲು) ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದವರನ್ನು ವಶಕ್ಕೆ ಪಡೆದು ಸದರಿ ಮದ್ಯದ ಬಗ್ಗೆ ವಿಚಾರಮಾಡಲಾಗಿ ಮಿಟ್ಟೇಮರಿ ಗ್ರಾಮದ ಸುನಿಲ್ ವೈನ್ಸ್ನಿಂದ ವೈನ್ಸ್ನ ಕ್ಯಾಷಿಯರ್ ಆದ ರಾಮಾಂಜಿರವರಿಂದ ಹೆಚ್ಚಿನ ಮಾರಾಟಕ್ಕಾಗಿ ತೆಗೆದುಕೊಂಡು ತನ್ನ ಸ್ವಂತ ಗ್ರಾಮಕ್ಕೆ ಹೋಗುತ್ತಿರುವುದಾಗಿ ಹಾಗೂ ಮದ್ಯವನ್ನು ಮಾರಾಟಮಾಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿರುತ್ತಾನೆ. ಚೀಲದಲ್ಲಿ ಒಂದು ರಟ್ಟಿನ ಬಾಕ್ಸ್ನಲ್ಲಿದ್ದ 90 ಎಂ.ಎಲ್ 96 ಮದ್ಯ ತುಂಬಿರುವ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳು ಇದ್ದು, ಒಂದು ಟೆಟ್ರಾ ಪಾಕೆಟ್ ನ ಬೆಲೆ 35.13 ರೂ ಆಗಿರುತ್ತೆ. ಒಟ್ಟು ಮದ್ಯವು 8 ಲೀಟರ್ 640 ಎಂ.ಎಲ್ ಇದ್ದು, ಒಟ್ಟು ಬೆಲೆ 3372.48 ರೂ ಆಗಿರುತ್ತೆ. ಸದರಿ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿ ಮತ್ತು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತಿದ್ದು, ಈ ಬಗ್ಗೆ ತಾವು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 292/2021 ಕಲಂ. 32,34 KARNATAKA EXCISE ACT, 1965 :-

     ದಿನಾಂಕ: 14/09/2021 ರಂದು ಮದ್ಯಾಹ್ನ 2-00 ಗಂಟೆಗೆ ಪಿಎಸ್ಐ ಡಿಸಿಬಿ-ಸಿಇಎನ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ:14.09.2021 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ-50 ನರಸಿಂಹಮೂರ್ತಿ, ಪಿಸಿ-531 ಮಂಜುನಾಥ ಸಿ.ಕೆ ಮತ್ತು ಪಿಸಿ-142 ಅಶೋಕ ಹಾಗೂ ಕೆಎ-40-ಜಿ-58 ಜೀಪ್ ಚಾಲಕರಾದ ಎಹೆಚ್ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಂದು ಹನುಮಂತರಾಯನಪಲ್ಲಿ ಮತ್ತು ಕಾನಗಮಾಕಲಹಳ್ಳಿ ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಮಾಹಿತಿಯೇನೆಂದರೆ, ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿಯಿಂದ ಕಾಟೇನಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಮದ್ಯವನ್ನು ಒಂದು ಬಟ್ಟೆ ಬ್ಯಾಗನ್ನು ತಲೆಯ ಮೇಲೆ ಎತ್ತಿಕೊಂಡು ನಡೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾವು ಪಂಚರೊಂದಿಗೆ ಸ್ಥಳಕ್ಕೆ ಬೆಳಿಗ್ಗೆ 10.00 ಗಂಟೆಗೆ ಹೋಗಿದ್ದು, ಆತನನ್ನು ತಡೆದು ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ನಾರಾಯಣಪ್ಪ, 55 ವರ್ಷ, ಈಡಿಗರು, ಜಿರಾಯ್ತಿ, ಕಾಟೇನಹಳ್ಳಿ ಗ್ರಾಮ, ಸೋಮೇನಹಳ್ಳಿ ಹೋಬಳಿ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದವರನ್ನು ವಶಕ್ಕೆ ಪಡೆದು ಸದರಿ ಮದ್ಯದ ಬಗ್ಗೆ ವಿಚಾರಮಾಡಲಾಗಿ ಮಿಟ್ಟೇಮರಿ ಗ್ರಾಮದ ಸುನಿಲ್ ವೈನ್ಸ್ನಿಂದ ವೈನ್ಸ್ನ ಕ್ಯಾಷಿಯರ್ ಆದ ರಾಮಾಂಜಿರವರಿಂದ ಹೆಚ್ಚಿನ ಮಾರಾಟಕ್ಕಾಗಿ ತೆಗೆದುಕೊಂಡು ತನ್ನ ಸ್ವಂತ ಗ್ರಾಮಕ್ಕೆ ಹೋಗುತ್ತಿರುವುದಾಗಿ ಹಾಗೂ ಮದ್ಯವನ್ನು ಮಾರಾಟಮಾಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿರುತ್ತಾನೆ. ಒಂದು ಬಟ್ಟೆ ಬ್ಯಾಗನ ಒಳಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ 90 ಎಂ.ಎಲ್ 48 ಮದ್ಯ ತುಂಬಿರುವ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳು ಇದ್ದು, ಒಂದು ಟೆಟ್ರಾ ಪಾಕೆಟ್ ನ ಬೆಲೆ 35.13 ರೂ ಆಗಿರುತ್ತೆ. ಒಟ್ಟು ಮದ್ಯವು 4 ಲೀಟರ್ 320 ಎಂ.ಎಲ್ ಇದ್ದು, ಒಟ್ಟು ಬೆಲೆ 1686.24 ರೂ ಆಗಿರುತ್ತೆ. ಸದರಿ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿ ಮತ್ತು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತಿದ್ದು, ಈ ಬಗ್ಗೆ ತಾವು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 126/2021 ಕಲಂ. 15(A),32(3) KARNATAKA EXCISE ACT, 1965 :-

     ಈ ದಿನ ದಿನಾಂಕ 13/09/2021 ರಂದು ಸಂಜೆ 04-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ.ವೆಂಕಟರವಣಪ್ಪ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಟ್ಲಹಳ್ಳಿ ಪೊಲೀಸ್ ಠಾಣೆ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ಈ ದಿನ ದಿನಾಂಕ:13/09/2021 ರಂದು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಠಾಣಾ ಸಿಬ್ಬಂದಿ ಹೆಚ್.ಸಿ- 36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 65 ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಗ್ರಾಮಗಳ ಗಸ್ತು ಕರ್ತವ್ಯದಲ್ಲಿದ್ದಾಗ ನನಗೆ ಇರಗಂಪಲ್ಲಿ ಗ್ರಾಮದ ವಾಸಿಯಾದ ವೆಂಕಟಾಚಲಪತಿ @ ಪೆದ್ದೋಡು ಬಿನ್ ಗೋಪಾಲಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಹೆಚ್ ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ರವರೊಂದಿಗೆ ಮಧ್ಯಾಹ್ನ 02-30 ಗಂಟೆಗೆ ಇರಗಂಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಇರಗಂಪಲ್ಲಿ ಗ್ರಾಮದ ವೆಂಕಟಾಚಲಪತಿ @ ಪೆದ್ದೋಡು ಬಿನ್ ಗೋಪಾಲಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ವೆಂಕಟಾಚಲಪತಿ @ ಪೆದ್ದೋಡು ಬಿನ್ ಗೋಪಾಲಪ್ಪ 45 ವರ್ಷ ಗಾಣಿಗ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಇರಗಂಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 351.3 ರೂಗಳ 900 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 02-45 ಗಂಟೆಯಿಂದ ಮಧ್ಯಾಹ್ನ 03-30 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡಿದ್ದು ಮೇಲ್ಕಂಡಂತೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯು ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂಖೈ 126/2021 ಕಲಂ 15(ಎ) 32(3) KE ACT ರೀತ್ಯ ಕೇಸು ದಾಖಲಿಸಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 127/2021 ಕಲಂ. 15(A),32(3) KARNATAKA EXCISE ACT, 1965 :-

     ಈ ದಿನ ದಿನಾಂಕ 13/09/2021 ರಂದು ಸಂಜೆ 04-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ.ವೆಂಕಟರವಣಪ್ಪ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಟ್ಲಹಳ್ಳಿ ಪೊಲೀಸ್ ಠಾಣೆ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ಈ ದಿನ ದಿನಾಂಕ:13/09/2021 ರಂದು ಸಂಜೆ 04-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಕೃಷ್ಣಾಪುರ ಗ್ರಾಮದ ವಾಸಿ ಆನಂದ ಬಿನ್ ಲೇಟ್ ವೆಂಕಟರವಣಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಠಾಣಾ ಸಿಬ್ಬಂದಿ ಹೆಚ್ ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ರವರೊಂದಿಗೆ ಸಂಜೆ 05-00 ಗಂಟೆಗೆ ಕೃಷ್ಣಾಪುರ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಕೃಷ್ಣಾಪುರ ಗ್ರಾಮದ ಆನಂದ ಬಿನ್ ಲೇಟ್ ವೆಂಕಟರವಣಪ್ಪ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಆನಂದ ಬಿನ್ ಲೇಟ್ ವೆಂಕಟರವಣಪ್ಪ 35 ವರ್ಷ ಆದಿಕರ್ನಾಟಕ ಜನಾಂಗ ಕೂಲಿಕೆಲಸ ವಾಸ ಕೃಷ್ಣಾಪುರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 15 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 526.95 ರೂಗಳ 1 ಲೀಟರ್ 350 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 05-15 ಗಂಟೆಯಿಂದ ಸಂಜೆ 06-00 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡಿದ್ದು ಮೇಲ್ಕಂಡಂತೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ಆಸಾಮಿಯು ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂಖೈ 127/2021 ಕಲಂ 15(ಎ) 32(3) KE ACT ರೀತ್ಯ ಕೇಸು ದಾಖಲಿಸಿರುತ್ತೆ.

 

6. ಚೇಳೂರು ಪೊಲೀಸ್ ಠಾಣೆ ಮೊ.ಸಂ. 87/2021 ಕಲಂ. 323,324,504 ಐಪಿಸಿ :-

     ದಿನಾಂಕ 13/09/2021 ರಂದು ಗಾಯಾಳು ಶ್ರೀಮತಿ  ಸಾಲೆಮ್ಮ ಕೋಂ ಲೇಟ್ ವೆಂಕಟರವಣಪ್ಪ, 55 ವರ್ಷ, ದಬ್ಬರವಾರಪಲ್ಲಿ ಗ್ರಾಮ, ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೇ, ನನಗೆ ಈಗ್ಗೆ 36 ವರ್ಷಗಳ ಹಿಂದೆ ಮದುವೆಯಾಗಿದ್ದು ನನಗೆ ಇಬ್ಬರು ಮಕ್ಕಳಿರುತ್ತಾರೆ. ಒಂದನೆ ನಾಗೇಂದ್ರ ಮತ್ತು ಮಲ್ಲಿಕಾರ್ಜುನ ಆಗಿರುತ್ತಾರೆ ನನ್ನ ಹಿರಿಮ ಮಗ ನಾಗೇಂದ್ರ ರವರಿಗೆ ಮದವೆಯಾಗಿದ್ದು ಸಂಸಾರದಲ್ಲಿ ಅನ್ಯೋನ್ಯವಾಗಿರದ ಕಾರಣ ಬೇರೆಯಾಗಿ ಜೀವನ ಮಾಡಿಕೊಂಡಿರುತ್ತಾರೆ ದಿನಾಂಕ 12/09/2021 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ನಾನು ಊಟ ಮಾಡಿಕೊಂಡು ಮನೆಯಲ್ಲಿದ್ದಾಗ ನನ್ನ ಹಿರಿಯ ಮಗ ನಾಗೇಂದ್ರ ರವರು ಅಲಲ್ಇಗೆ ಬಂದು ಬಚ್ಚಲು ಮನೆಯನ್ನು ಏಕೆ ಸ್ವಚ್ಚಗೊಳಿಸಿಲ್ಲ ಎಂದು ಏಕಾಏಕಿ ಜಗಳ ತೆಗೆದು ಬಾಯಿಗೆ ಬಂದಂತೆ ಕೈಗಳಿಂದ ಹೊಡೆದು ಇಲ್ಲಿಯೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆ ಭಾಗಕ್ಕೆ ಹೊಡೆದು ರಕ್ತಗಾಯಡಿಸಿರುತ್ತಾನೆ. ನನ್ನನ್ನು ಬಿಡಸಲು ಬಂದ ಶ್ರೀರಂಗನ್ನು ಸಹ ಹೊಡೆದಿರುತ್ತಾನೆ ನಂತರ ನನಗೆ ಸುಸ್ತಾಗಿ ಅಲ್ಲಿಯೆ ಬಿದ್ದಿರುತ್ತೇನೆ ಅಂಬ್ಯುಲೆನ್ಸ್ ನಲ್ಲಿ ಚಿಂತಾಮಣಿ ಅರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಆದ್ದರಿಂದ ನಾಗೇಂದ್ರನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 155/2021 ಕಲಂ. 279,337 ಐಪಿಸಿ :-

     ದಿನಾಂಕ: 13-09-202 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ಪಿರ್ಯಾದಿ  ನಾರೆಪ್ಪರೆಡ್ಡಿ  ಮಲ್ಲಿಕಾರ್ಜುನರೆಡ್ಡಿ  ಬಿನ್  ಎನ್. ಶಿವಶಂಖರರೆಡ್ಡಿ   37ವರ್ಷ   ರೆಡ್ಡಿ  ಜನಾಂಗ. ಚಾಲಕ ಕೆಲಸ ವಾಸ: 3-50. ಕೋಟಾ ಸ್ಟ್ರೀಟ್. ನಂದಿಕೊಟ್ಕೂರ್ ಟೌನ್  ಕರ್ನೂಲ್  ಜಿಲ್ಲೆ,  ಆಂದ್ರ ಪ್ರದೇಶ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ತಾನು 02 ವರ್ಷಗಳಿಂದ ಕರ್ನೂಲ್ ವಾಸಿ ಶಶಿಧರ್  ಎಂಬುವವರ  ಬಾಬತ್ತು  AP-07-CY-9590  ನಂಬರಿನ  ಕಾರಿನ  ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:12-09-2021 ರಂದು  ಶಶಿಧರ ರವರ ಸಂಬಂಧಿ  ರಘು ಎಂಬುವರನ್ನು  ಮೇಲ್ಕಂಡ  ಕಾರಿನಲ್ಲಿ  ಕರ್ನೂಲ್ ನಿಂದ ಬೆಂಗಳೂರುಗೆ ಕರೆದುಕೊಂಡು ಹೋಗಿ ಅವರನ್ನು ಬೆಂಗಳೂರಿನಲ್ಲಿ ಬಿಟ್ಟು ತಾನು ವಾಪಸ್ಸು ಕರ್ನೂಲ್ ಗೆ ಹೋಗಲು ಚಿಕ್ಕಬಳ್ಳಾಪುರ ತಾಲ್ಲೂಕು ದೊಡ್ಡಪ್ಯಾಯಲಗುರ್ಕಿ ಗ್ರಾಮದ ಗೇಟ್ ಬಳಿ NH-44 ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ದಿನಾಂಕ:13/09/2021 ರಂದು ರಾತ್ರಿ ಸುಮಾರು 00-30 ಗಂಟೆಯ ಸಮಯದಲ್ಲಿ ದೊಡ್ಡಪ್ಯಾಯಲ ಗುರ್ಕಿ ಗ್ರಾಮದ ಬಳಿ  NH-44 ರಸ್ತೆಯ ಉಬ್ಬುನ  ಬಳಿ ನನ್ನ ಎಡಭಾಗದಲ್ಲಿ ಒಂದು ಓಮಿನಿ ವ್ಯಾನ್ ಸಹ ಹೋಗುತ್ತಿತ್ತು. ಆ ಸಮಯಕ್ಕೆ ತನ್ನ ಹಿಂದುಗಡೆಯಿಂದ KA-50-MA-8064 ನಂಬರಿನ ಹೊಂಡಾಸಿಟಿ ಕಾರು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊದಲಿಗೆ ಮಾರುತಿ ವ್ಯಾನಿನ ಹಿಂಬಾಗಕ್ಕೆ ಡಿಕ್ಕಿ ಹೊಡೆಯಿಸಿದನು. ನಂತರ ತನ್ನ ಕಾರಿನ ಹಿಂಬಾಗಕ್ಕೆ ಡಿಕ್ಕಿಹೊಡೆಸಿದನು. ಅದರ ಪರಿಣಾಮ ತನ್ನ ಕಾರಿನ  ಹಿಂಬಾಗದಲ್ಲಿ ಜಖಂಗೊಂಡು ಕಾರು ಹಿಂದಕ್ಕೆ ಮುಖ ಮಾಡಿ ತಿರುಗಿತು. ಕಾರಿನಲ್ಲಿದ್ದ ತನಗೆ  ಮೂಗಿನ ಮೇಲೆ. ಎದೆಯ ಮೇಲೆ, ಬಲ ಕೈ ಮುಂಗೈ ಮೇಲೆ ಒತ್ತಡದ ಗಾಯಗಳಾಯಿತು. ತನ್ನ ಕಾರಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ನಂತರ  ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಂದು ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದನು. ಈ ಅಪಘಾತದಲ್ಲಿ ಮಾರುತಿ ವ್ಯಾನ್ ಮತ್ತು ಸ್ವಿಪ್ಟ್ ಕಾರುಗಳಿಗೆ ಹೆಚ್ಚಿನ ಜಖಂ ಆಗದೇ ಇದ್ದುದರಿಂದ ಆ ವಾಹನಗಳ ಚಾಲಕರು ಅಲ್ಲಿಂದ ಚಾಲನೆ ಮಾಡಿಕೊಂಡು ಹೊರಟು ಹೋದರು. ತಾನು ಅಪಘಾತವಾಗಿದ್ದ ವಿಚಾರವನ್ನು ಕಾರಿನ ಮಾಲೀಕರಿಗೆ ತಿಳಿಸಿ, ಅವೇಳೆಯಲ್ಲಿ ಎಲ್ಲಿಗೆ ಹೋಗಲು ತಿಳಿಯದೇ ಕಾರನ್ನು ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡಿದ್ದು ಈ ದಿನ ದಿನಾಂಕ:13/09/2021 ರಂದು ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ತನಗೆ ಆಗಿದ್ದ ಗಾಯಗಳಿಗೆ ಚಿಕಿತ್ಸೆ ಪಡಿಸಿಕೊಂಡಿರುತ್ತೇನೆ. ತನ್ನ ಕಾರಿಗೆ ಅಪಘಾತ ಪಡಿಸಿದ KA-50-MA-8064 ನಂಬರಿನ ಕಾರು ಚಾಲಕ ಡಾಕ್ಟರ್ ಎಂದು ಹೇಳಿಕೊಳ್ಳುತ್ತಿದ್ದು ಆತನನ್ನು ನೋಡಿರುತ್ತೇನೆ. ಆತನ ಹೆಸರು ವಿಳಾಸ ತಿಳಿದಿರುವುದಿಲ್ಲ. ತಾನು ಅಪಘಾತದ ವಿಚಾರವನ್ನು ವಾಹನದ ಮಾಲೀಕರಿಗೆ  ತಿಳಿಸಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಳ್ಳುತ್ತಿದ್ದರಿಂದ  ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಈ ಅಪಘಾತವನ್ನುಂಟು ಮಾಡಿದ KA-50-MA-8064 ನಂಬರಿನ ಕಾರು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

8. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 68/2021 ಕಲಂ. 420 ಐಪಿಸಿ :-

     ದಿನಾಂಕ 13-09-2021 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿ ಎಸ್ ಪಿ ಗೋವಿಂದಪ್ಪ ಬಿನ್ ಲೇಟ್ ಪಿಳ್ಳಪ್ಪ, 69 ವರ್ಷ, ವಕ್ಕಲಿಗರು  ಸೊಪ್ಪಿನ ಬೀದಿ ನಂದಿ ರಸ್ತೆ ಚಿಕ್ಕಬಳ್ಳಾಪುರ  ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಈ ಹಿಂದೆ ನಗರದ ವಿಶ್ವೇಶ್ವರಯ್ಯ ಶಾಲೆಯಲ್ಲಿ ವಾಚ್ ಮೆನ್ ಅಗಿ ಕೆಲಸ ಮಾಡಿಕೊಂಡಿದ್ದು ಕೆಲಸದ ಸಂಬಳ 8000/-ರೂ ಮತ್ತು ಸರ್ಕಾರದ ವೃದ್ಯಾಪ್ಯ ವೇತನ ತಿಂಗಳಿಗೆ 1000/-ರೂಗಳನ್ನು ನೀಡುತ್ತಿದ್ದು ಸದರಿ ಹಣವನ್ನು ತನ್ನ ಎಸ್.ಬಿ.ಐ ಬ್ಯಾಂಕ್ ಖಾತೆ ಸಂಖ್ಯೆ 64034154172 ಅಗಿದ್ದು ಅದರಲ್ಲಿ  ಸಂಬಳದ ಮತ್ತು ವೃದ್ಯಾಪ್ಯ ವೇತನದ ಹಣವನ್ನು ಹಾಕಿಕೊಂಡು ಉಳಿತಾಯ ಮಾಡಿ ಮುಂದೆ ಒಂದು ಚಿಕ್ಕ ಮನೆಯನ್ನು ಕಟ್ಟಿಕೊಳ್ಳುಬೇಕೆಂದು ಅಲೋಚಿಸಿ  ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಟ್ಟಿಕೊಂಡಿದ್ದು. ದಿನಾಂಕ:15/06/2021 ರಂದು ಬೆಳಗ್ಗೆ:9-00 ರಿಂದ 11-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಕೆನರಾ ಬ್ಯಾಂಕ್ ಪಕ್ಕದಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ ಕೊಠಡಿಯಲ್ಲಿ 10.000/-ರೂ ಗಳನ್ನು ಡ್ರಾ ಮಾಡಲು ಹೋಗಿದ್ದು ಕೊಠಡಿಯಲ್ಲಿ ಸಾಕಷ್ಟು ಜನರು ಇದ್ದು ತನಗೆ ವಯಸ್ಸಾಗಿದ್ದು ಅವರ ಹಿಂದೆ ಸರದಿಯಲ್ಲಿ ನಿಂತಿರುವಾಗ ತನ್ನ ಮುಂದೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಬಳಿ ಎ.ಟಿಎಂ ಕಾರ್ಡ ಆನ್ನು ಕೊಡಿ ಹಣವನ್ನು ತೆಗೆದುಕೊಡುತ್ತೇನೆ ಎಂದು ತೆಗೆದುಕೊಂಡು ಎ.ಟಿ.ಎಂ ಪಿನ್ ಕೋಡ್ ಹೇಳುವಂತೆ ತಿಳಿಸಿದನು ಅದರಂತೆ ಎ.ಟಿ.ಎಂ ಪಿನ್ ಕೋಡ್ ಸಂಖ್ಯೆಯನ್ನು ಒತ್ತಿರುತ್ತೇನೆ ನಂತರ ಅಪರಿಚಿತ ವ್ಯಕ್ತಿ 10000/- ರೂ ಗಳನ್ನು ಡ್ರಾ ಮಾಡಿ ಹಣವನ್ನು ಪಡೆದುಕೊಳ್ಳಿ ಎಂದು ಹಣವನ್ನು ನೀಡಿದ  ಹಣವನ್ನು ಏಣಿಸುವಷ್ಟರಲ್ಲಿ  ನಿಮ್ಮ ಎ.ಟಿ.ಎಂ.ಕಾರ್ಡ ಮಿಷಿನಲ್ಲಿ ಇದೆ ತೆಗೆದುಕೋ ಎಂದು ಹೇಳಿ ನನ್ನ ಗಮನವನ್ನ ಬೇರೆಡೆ ಸೆಳೆದು ನನ್ನ ಎ.ಟಿ.ಎಂ ಕಾರ್ಡ ತೆಗದುಕೊಂಡು ಯಾವುದೋ ಬೇರೆ ಎ.ಟಿ.ಎಂ ಕಾರ್ಡ ಅನ್ನು ಮಿಷಿನಲ್ಲಿಯಿಟ್ಟು ಹೋರಟು ಹೋಗಿರುತ್ತಾನೆ ನಂತರ ದಿನಾಂಕ:15/06/2021 ರಿಂದ 23/06/2021 ರವರೆವಿಗೂ ನನ್ನ ಬ್ಯಾಂಕ್ ಖಾತೆಯಲ್ಲಿದ್ದ 2,00,000 ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿ ಡ್ರಾ ಮಾಡಿಕೊಂಡಿರುತ್ತಾರೆ. ತನಗೆ ಇದು  ಗೋತ್ತಿರುವುದಿಲ್ಲ  ತಾನು  ಸುಮಾರು  ಒಂದು ತಿಂಗಳ ಬಳಿಕ ತನಗೆ ಹಣಬೇಕಾಗಿದ್ದು ಅ ಸಮಯದಲ್ಲಿ ತಾನು ಎ.ಟಿ.ಎಂಗೆ ಹೋಗಿ ಹಣವನ್ನು ಡ್ರಾ ಮಾಡುವ ಸಮಯದಲ್ಲಿ ತನ್ನ ಎ.ಟಿ.ಎಂ ಕಾರ್ಡ ಕೆಲಸ ಮಾಡುತ್ತಿರಲಿಲ್ಲ ಅಗ ತಾನು ಸದರಿ ಎ.ಟಿ.ಎಂ ಕಾರ್ಡ ಅನ್ನು ನೋಡಲಾಗಿ ಅದು ತನ್ನ ಕಾರ್ಡ ಅಗಿರುವುದಿಲ್ಲ. ತನ್ನ ಗಮನವನ್ನು ಬೇರೆಡೆ ಸೆಳೆದು ತನ್ನ ಎ.ಟಿ.ಎಂ ಕಾರ್ಡ ಅನ್ನು ತೆಗೆದುಕೊಂಡು ಬೇರೆ ಬೇರೆ  ಎ.ಟಿ.ಎಂ ನಲ್ಲಿ ಹೋಗಿ ಹಣವನ್ನು ಡ್ರಾ ಮಾಡಿ ತನಗೆ ಮೋಸ ಮಾಡಿರುವ ಅಪರಿಚಿತ  ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

9. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 48/2021 ಕಲಂ. 279,337 ಐಪಿಸಿ :-

     ದಿನಾಂಕ;14-09-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಗಣಿಕೀಕೃತ ದೂರಿನ ಸಾರಾಂಶವೆನೇಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ತಾನು ಮತ್ತು ತನ್ನ ತಮ್ಮ ಕೇಶವರವರು ಪ್ರತಿದಿನ ಚಿಕ್ಕಬಳ್ಳಾಪುರಕ್ಕೆ ಹೂಗಳನ್ನು ತೆಗೆದುಕೊಂಡು ಮಾರ್ಕೆಟ್ ಗೆ ಬರುತ್ತಿರುತ್ತೇವೆ. ಅದರಂತೆ ಈ ದಿನ ದಿನಾಂಕ: 14/09/2021 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದು ಕೇಶವ ರವರು ಬೇಗ ಮನೆಗೆ ಹೋಗಬೇಕೆಂದು ಕೆಎ-51-ಹೆಚ್ ಹೆಚ್-2128 ಬುಲೇಟ್ ದ್ವಿ-ಚಕ್ರ ವಾಹನದಲ್ಲಿ ಹೋಗಿದ್ದು, ತಾನು ಮಾರ್ಕೆಟ್ ನಲ್ಲಿಯೇ ಇದ್ದೆ, ತಮ್ಮ ಚಿಕ್ಕಪ್ಪನ ಮಗನಾದ ಮಹೇಶ ರವರು ತನಗೆ ದೂರವಾಣಿ ಕರೆ ಮಾಡಿ ಚಿಕ್ಕಬಳ್ಳಾಪುರ ನಗರದ ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣ ಬಳಿ ಕೇಶವರವರಿಗೆ ಅಪಘಾತವಾಗಿದ್ದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಸಿರುವುದಾಗಿ ತಿಳಿಸಿದ್ದು, ತಕ್ಷಣ ನಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ಹೋಗಿ  ನೋಡಲಾಗಿ ವಿಚಾರ  ನಿಜವಾಗಿದ್ದು, ಕೇಶವ ರವರಿಗೆ ಬಲಕೈ ಬೆರಳು ತೀವ್ರತರ ಗಾಯವಾಗಿದ್ದು, ಬಲಕಾಲು ಪಾದ ಮತ್ತು ಬಲಮೊಣಕಾಲಿನ ಕೆಳಬಾಗ ರಕ್ತಗಾಯವಾಗಿರುತ್ತದೆ. ತಾನು ತನ್ನ ತಮ್ಮ ಕೇಶವ ರವರನ್ನು ವಿಚಾರ ಮಾಡಲಾಗಿ ಮನೆಯಲ್ಲಿ ದಿನಸಿ ಸಾಮಾಗ್ರಿಗಳು ತರುವಂತೆ ಕೇಳಿದ್ದರಿಂದ ನಾನು ವಾಪಸಂದ್ರ ಬಳಿ ಹೋಗಿ ನಂತರ ಮತ್ತೆ ವಾಪಸ್ಸು ಬರುವುದಕ್ಕಾಗಿ ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 8-30 ಗಂಟೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣದ ಬಳಿ ಇದ್ದಕ್ಕಿದ್ದಂತೆ ಬೆಂಗಳೂರು ಕಡೆಯಿಂದ ಬಂದ ನಂ: ಕೆ.ಎ-40-ಎಫ್-1252 ರ ಬಸ್ಸನ್ನು ಯಾವುದೇ ಸೂಚನೆಗಳನ್ನು ನೀಡದೇ ಬಸ್ ಸ್ಟಾಂಡಿನೊಳಗೆ ತಿರುಗಿಸಿದ್ದರಿಂದ ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ನನಗೆ ಗಾಯಗಳಾಗಿರುವುದಾಗಿ ತಿಳಿಸಿದನು. ಈಗ ತನ್ನ ತಮ್ಮ ಕೇಶವ ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ತನ್ನ ತಮ್ಮ ಕೇಶವ ರವರ ನಂ: ಕೆ.ಎ-51-ಹೆಚ್.ಹೆಚ್-2128 ರ ಬುಲೆಟ್ ದ್ವಿಚಕ್ರ ವಾಹನಕ್ಕೆ ಅಪಘಾತವುಂಟು ಮಾಡಿರುವ ನಂ: ಕೆ.ಎ-40-ಎಪ್ 1252 ರ ಬಸ್ಸಿನ ಚಾಲಕನ ವಿರುದ್ದ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 405/2021 ಕಲಂ. 279,337 ಐಪಿಸಿ & ಸೆಕ್ಷನ್ 134(A&B) INDIAN MOTOR VEHICLES ACT 1988 :-

     ದಿನಾಂಕ: 13/09/2021 ರಂದು ಮದ್ಯಾಹ್ನ 3.30 ಗಂಟೆಗೆ ನಾಗರಾಜ್ ಬಿನ್ ಸೀನಪ್ಪ, 55 ವರ್ಷ, ಶಿಕ್ಷಕ ವೃತ್ತಿ, ಗಾಣಿಗ ಜನಾಂಗ, ವೆಂಕಟೇಶ್ವರ ಬಡಾವಣೆ, ಶ್ರೀನಿವಾಸಪುರ ನಗರ, ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಮ್ಮನಾದ ಶ್ರೀನಿವಾಸ ಬಿನ್ ಸೀನಪ್ಪ, 48 ವರ್ಷ, ಜಿರಾಯ್ತಿ, ರವರು ಆತನ ಹೆಂಡತಿ ತುಳಸಿ ಕೊಂ ಶ್ರೀನಿವಾಸ, 40 ವರ್ಷ, ಗೃಹಣಿ ಮತ್ತು ಮಗನಾದ ಶ್ರೀವತ್ಸ ಬಿನ್ ಶ್ರೀನಿವಾಸ, 09 ವರ್ಷ, ವಿದ್ಯಾರ್ಥಿ, ರವರೊಂದಿಂಗೆ ಶ್ರೀನಿವಾಸಪುರ ತಾಲ್ಲೂಕು ದಳಸನೂರು ಗ್ರಾಮದಲ್ಲಿ ವಾಸವಾಗಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ 13/09/2021 ರಂದು ಬೆಳಗ್ಗೆ 9.30 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಕರೆ ಮಾಡಿ ನಿಮ್ಮ ತಮ್ಮ, ಆತನ ಹೆಂಡತಿ ಮತ್ತು ಮಗನಿಗೆ ಚಿಂತಾಮಣಿ- ಶ್ರೀನಿವಾಸಪುರ ಮುಖ್ಯ ರಸ್ತೆಯ ಶಿಂಗನಹಳ್ಳಿ ಗೇಟ್ ಬಳಿ ಅಪಘಾತವಾಗಿದೆ ಮೂರು ಜನರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದರು. ತಾನು ಕೂಡಲೇ ಆಸ್ವತ್ರೆ ಬಳಿ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಶ್ರೀನಿವಾಸ ರವರಿಗೆ ಬಲಕಾಲು ಮತ್ತು ತಲೆಗೆ ರಕ್ತಗಾಯವಾಗಿರುತ್ತೆ. ತುಳಿಸಿ ರವರಿಗೆ ಬಲಕಾಲಿಗೆ ರಕ್ತಗಾಯವಾಗಿ, ಶ್ರೀವತ್ಸ ರವರಿಗೆ ಬಲಕಾಲು ಮತ್ತು ಬಲಕೈಗೆ ರಕ್ತಗಾಯವಾಗಿರುತ್ತೆ. ನಂತರ ಸದರಿ ಅಪಘಾತದ ಬಗ್ಗೆ ಶ್ರೀನಿವಾಸ ರವರನ್ನು ವಿಚಾರಿಸಲಾಗಿ ಆತನು ಈ ದಿನ ಬೆಳಗ್ಗೆ 09.15 ಗಂಟೆ ಸಮಯದಲ್ಲಿ ನಾನು, ನನ್ನ ಹೆಂಡತಿ ಮತ್ತು ಮಗ ನಮ್ಮ ಬಾಬತ್ತು ಕೆಎ-07 ಇಬಿ-2120 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ನಾನು ಚಾಲನೆ ಮಾಡಿಕೊಂಡು ಚಿಂತಾಮಣಿ- ಶ್ರೀನಿವಾಸಪುರ ಮುಖ್ಯ ರಸ್ತೆಯ ಶಿಂಗನಹಳ್ಳಿ ಗೇಟ್ ಬಳಿ ಶ್ರೀನಿವಾಸಪುರ ಕಡೆಗೆ ಬರುತ್ತಿದ್ದಾಗ ನಮ್ಮ ಎದರುಗಡೆಯಿಂದ ಬಂದ ಕೆಎ-07 ಬಿ-2443 ನೊಂದಣಿ ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರ್ ನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿದ್ದು ನಾವು ಮೂರು ಜನ ದ್ವಿ ಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ನಮಗೆ ಗಾಯಗಳಾಗಿರುತ್ತೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಯಾರೋ ಸಾರ್ವಜನಿಕರು ನಮ್ಮನ್ನು ಉಪಚರಿಸಿ ಆಂಬುಲೆನ್ಸ್ ನಲ್ಲಿ ಆಸ್ವತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದನು. ನಂತರ ಸದರಿ ಆಸ್ವತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡಿದ್ದ ಮೂರು ಜನರನ್ನು ಕೋಲಾರದ ಗೌರವ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತೇನೆ. ಸದರಿ ಅಪಘಾತ ಪಡಿಸಿದ ಮೇಲ್ಕಂಡ ಕೆಎ-07 ಬಿ-2443 ನೊಂದಣಿ ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರ್ ನ ಚಾಲಕ ಗಾಯಾಳುಗಳನ್ನು ಉಪಚರಿಸದೇ ಹಾಗೂ ಪೋಲಿಸರಿಗೆ ಮಾಹಿತಿಯನ್ನು ಸಹ ನೀಡದೆ ಕಾರನ್ನು ಸ್ಥಳದಲ್ಲಿ ಬಿಟ್ಟು ಹೋದ ಮೇಲ್ಕಂಡ ಕಾರು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 406/2021 ಕಲಂ. 279,337 ಐಪಿಸಿ & ಸೆಕ್ಷನ್ 134(A&B) INDIAN MOTOR VEHICLES ACT 1988 :-

     ದಿನಾಂಕ: 14/09/2021 ರಂದು ಬೆಳಿಗ್ಗೆ 11.30 ಗಂಟೆಗೆ ರತ್ನಪ್ಪ ಬಿನ್ ಮುನಿವೆಂಕಟರಾಮಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:10/09/2021 ರಂದು ತನ್ನ ಅಣ್ಣನಾದ ಮುನಿಯಪ್ಪ ಬಿನ್ ನಾರಾಯಣಪ್ಪ, 52 ವರ್ಷ, ಜಿರಾಯ್ತಿ ರವರು ಗಣೇಶ ಹಬ್ಬಕ್ಕೆಂದು ಹಿರೇಕಟ್ಟಿಗೇನಹಳ್ಳಿ ಗ್ರಾಮದಿಂದ ಇದೇ ತಾಲ್ಲೂಕು ಎಂ.ಗೊಲ್ಲಹಳ್ಳಿ ಗ್ರಾಮದ ತಮ್ಮ ಮಗಳ ಮನೆಗೆ ಹೋಗಲು ತಮ್ಮ ಬಾಬತ್ತು ಕೆಎ-04 ಇಬಿ-5083 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾರೆ. ನಂತರ 3 ದಿನಗಳ ಕಾಲ ಮಗಳ ಮನೆಯಲ್ಲಿಯೇ ಇದ್ದು ಪುನಃ ತಮ್ಮ ಗ್ರಾಮಕ್ಕೆ ಬರಲು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ದಿನಾಂಕ:13/09/2021 ರಂದು ಮದ್ಯಾಹ್ನ ಬರುವುದಾಗಿ ತಮಗೆ ತಿಳಿಸಿರುತ್ತಾರೆ. ನಂತರ ಅದೇ ದಿನ ಮದ್ಯಾಹ್ನ 2.15 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಬೈರೇಗೌಡ ಬಿನ್ ಜಯರಾಮಪ್ಪರವರು ತನಗೆ ಪೋನ್ ಮಾಡಿ ಕಡಪ-ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ನಿಮ್ಮ ಅಣ್ಣನಾದ ಮುನಿಯಪ್ಪರವರಿಗೆ ಅಪಘಾತವಾಗಿದೆ ಗಾಯಗೊಂಡಿದ್ದ ಮುನಿಯಪ್ಪರವರನ್ನು ದಾರಿಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಆಗ ತಾನು ಮತ್ತು  ಮುನಿಯಮ್ಮರವರ ಅಳಿಯನಾದ ಶಿವರಾಜ್ ಬಿನ್ ಕೃಷ್ಣಪ್ಪರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಅಣ್ಣ ಮುನಿಯಪ್ಪರವರ ಎಡಮೊಣಕಾಲಿನ ಕೆಳಗೆ ಮೂಳೆ ಮರಿತದ ರಕ್ತಗಾಯವಾಗಿ, ತಲೆಗೆ ತರಚಿದ ರಕ್ತಗಾಯ ಮತ್ತು ಮೈ ಮೇಲೆ ತರಚಿದ ರಕ್ತಗಾಯಗಳಾಗಿರುತ್ತದೆ. ಈ ಅಪಘಾತದ ಬಗ್ಗೆ ಮುನಿಯಪ್ಪರವರನ್ನು ವಿಚಾರ ಮಾಡಲಾಗಿ ತಾನು ತನ್ನ ಮಗಳ ಮನೆಯಿಂದ ಊರುಗೆ ಬರಲು ತನ್ನ ಬಾಬತ್ತು ಕೆಎ-04 ಇಬಿ-5083 ನೊಂದಣಿ ಸಂಖ್ಯೆಯ ಹಿರೊ ಹೊಂಡಾ ಸ್ಲ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ 1.50 ಗಂಟೆ ಸಮಯದಲ್ಲಿ ಕಪಡ-ಬೆಂಗಳೂರು ರಸ್ತೆಯ ಮಾರ್ಗವಾಗಿ ನಾಯಿಂದ್ರಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ಅದೇ ಸಮಯದಲ್ಲಿ ತನ್ನ ಎದುರುಗಡೆಯಿಂದ ಅಂದರೆ ಬೆಂಗಳೂರಿನ ಕಡೆಯಿಂದ ಬಂದ ಕೆಎ-01 ಎಇ-7154 ನೊಂದಣಿ ಸಂಖ್ಯೆ ಟಾಟಾ ಏಸ್ ವಾಹನದ ಚಾಲಕನು ತನ್ನ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ತಾನು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿ ಗಾಯಗಳಾಗಿರುವುದಾಗಿ ಅಪಘಾತಗೊಂಡ ತಮ್ಮ ದ್ವಿಚಕ್ರ ವಾಹನ ಮತ್ತು ಅಪಘಾತಪಡಿಸಿದ ಟಾಟಾ ಏಸ್ ಸ್ಥಳದಲ್ಲಿಯೇ ಇರುವುದಾಗಿ ತಿಳಿಸಿರುತ್ತಾರೆ. ನಂತರ ಗಾಯಗೊಂಡಿದ್ದ ಮುನಿಯಪ್ಪರವರನ್ನು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಬಳಿ ಇರುವ ಎಂ.ವಿ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತೇನೆ. ತಾನು ಗಾಯಾಳು ಮುನಿಯಪ್ಪರವರ ಅರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಕೆಎ-01 ಎಇ-7154 ನೊಂದಣಿ ಸಂಖ್ಯೆಯ ಟಾಟಾ ಏಸ್ ವಾಹನದ ಚಾಲಕನು ಗಾಯಾಳುವನ್ನು ಉಪಚರಿಸದೆ ಹಾಗೂ ಪೊಲೀಸರಿಗೂ ಸಹ ಮಾಹಿತಿಯನು ನೀಡದೇ ಸ್ಥಳದಲ್ಲಿ ವಾಹವನ್ನು ಬಿಟ್ಟು ಹೋಗಿರುವ ಈ ಮೇಲ್ಕಂಡ ಕೆಎ-01 ಎಇ-7154 ನೊಂದಣಿ ಸಂಖ್ಯೆಯ ಟಾಟಾ ಏಸ್ ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

12. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 172/2021 ಕಲಂ. 279,337 ಐಪಿಸಿ & ಸೆಕ್ಷನ್ 187 INDIAN MOTOR VEHICLES ACT 1988 :-

     ದಿನಾಂಕ: 12/09/2021 ರಂದು ಚಿಂತಾಮಣಿ ನಗರ ಪೊಲೀಸ್ ಠಾಣೆಯ ಕರ್ತವ್ಯ ನಿರ್ವಹಿಸುವ ಮಂಜುನಾಥ್ ಹೆಚ್.ಸಿ 37 ರವರು ಗಾಯಾಳುವಾದ ರಾಜೇಶ್ ಬಿನ್ ಕೆ.ವಿ ನಾರಾಯಣಸ್ವಾಮಿ, 38 ವರ್ಷ, ಆದಿ ದ್ರಾವಿಡ, ಸುಮಶ್ರೀ ಶಾಲೆಯಲ್ಲಿ ಸೆಕ್ಯೂರಿಟಿ ಕೆಲಸ, ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ  ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಸಾರಾಂಶವೆನೆಂದರೆ ದಿನಾಂಕ: 12/09/2021 ರಂದು ಕುರುಟಹಳ್ಳಿಯ ಸುಮಶ್ರೀ ಶಾಲೆಯಲ್ಲಿ ಸೆಕ್ಯೂರಿಟಿ ಕೆಲಸ ಮುಗಿಸಿಕೊಂಡು 8:00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದ ಮಸೀದಿಯ ರಸ್ತೆಯಲ್ಲಿ ತನ್ನ ಬಾಬತ್ತು ಕೆಎ-07-ಹೆಚ್-3774 ದ್ವಿ ಚಕ್ರ ವಾಹನದಲ್ಲಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಹಿಂದುಗಡೆಯಿಂದ ಕೆಎ-67-6971 ಆಕ್ಟಿವಾ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಹೊಡೆಸಿದ ಪರಿಣಾಮ ತಾನು ದ್ವಿ ಚಕ್ರ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿ ನನ್ನ ಬಲ ಕಾಲಿನ ಎರಡು ಬೆರಳು ಕಟ್ ಆಗಿ ರಕ್ತ ಗಾಯವಾಗಿರುತ್ತೇ ಹಾಗೂ ಮೈ ಕೈ ಮೇಲೆ ತರಚಿದ ಗಾಯಗಳಾಗಿದ್ದು ತನಗೆ ಅಪಘಾತವನ್ನುಂಟು ಮಾಡಿದ ಸವಾರವದ್ವಿ ಚಕ್ರ ವಾಹನದ ಸಮೇತ ಹೊರಟು ಹೋಗಿರುತ್ತಾನೆ ಅಷ್ಟರಲ್ಲಿ ಗಾಯಗೊಂಡಿದ್ದ ತನ್ನನ್ನು ಅಲ್ಲಿಯೇ ಇದ್ದ ಪೆದ್ದೂರು ಗ್ರಾಮದ ಶ್ರೀಕಾಂತ್ ಬಿನ್ ಶ್ರೀರಾಮಪ್ಪ ಹಾಗೂ ಪೋಶಪ್ಪ ಐಮರೆಡ್ಡಿಹಳ್ಳಿ ರವರು ಉಪಚರಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡಿಸಿ ವೈದ್ಯರ ಸಲಹೆಯ ಮೇರೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಬಂದು ದಾಖಲಿಸಿರುತ್ತಾರೆ ಆದ್ದರಿಂದ ತನಗೆ ಅಪಘಾತವನ್ನುಂಟು ಮಾಡಿದ ಕೆ ಎ 67 6971 ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

13. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 173/2021 ಕಲಂ. 447,427,504,506 ರೆ/ವಿ 34 ಐಪಿಸಿ :-

     ಪಿರ್ಯಾದಿದಾರರಾದ ಶ್ರೀನಿವಾಸಮೂರ್ತಿ.ಆರ್ ಬಿನ್ ಲೇಟ್ ರಾಮಣ್ಣ, 69 ವರ್ಷ, ವಕ್ಕಲಿಗರು, ನಿವೃತ್ತ ಸಹಕಾರ ಸಂಘದ ನೌಕರ, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಮ್ಮ ಬಾಬತ್ತು ಸ್ವಂತ ಸ್ವಾಧೀನಾನುಭವದಲ್ಲಿರುವ ಚಿಂತಾಮಣಿ ತಾಲ್ಲೂಕು ಕಸಬಾ ಹೋಬಳಿ ಚಿಂತಾಮಣಿ ಗ್ರಾಮದ ಸ. ನಂ 26 ರ ಖುಷ್ಕಿ ಪೈಕಿ 0.06.00 ಗುಂಟೆ ಜಮೀನು ದಿನಾಂಕ: 21/02/1997 ರಲ್ಲೂ ಎಸ್ .ಆರ್ ನಂ 3026 ರಂತೆ ತನ್ನ ಪತ್ನಿ ಶ್ರೀಮತಿ.ಎಸ್.ಎನ್ ವಿಜಯಲಕ್ಷ್ಮೀ ಎಂಬುವವರಿಗೆ ನೊಂದಣಿ ಆಗಿದ್ದು, ತದ ನಂತರ ದಿನಾಂಕ:28/12/1999 ರಲ್ಲೂ ಜಿಲ್ಲಾಧಿಕಾರಿಗಳು ಕೋಲಾರ ಜಿಲ್ಲೆ ಕಛೇರಿ ಸಂಖ್ಯೆ ಎ.ಎಲ್.ಎನ್.ಎಸ್.ಆರ್ 101/98-99 ರಂತೆ ಭೂ ಪರಿವರ್ತನೆ ಆಗಿದ್ದು, ತದನಂತರ ಭೂ ಪರಿವರ್ತನೆ ಪ್ರದೇಶದಲ್ಲಿ ಸೈಟುಗಳನ್ನು ವಿಂಗಡಿಸಿ ಒಟ್ಟು ಖಾತೆಯಂತೆ ಭೂ ಅಭಿವೃಧ್ದಿ ಶುಲ್ಕ ರೂ 6855-00 ಗಳನ್ನು ಪಾವತಿ ಮಾಡಿ ರಶೀದಿ ನಂ 151639 ರಂತೆ ದಿನಾಂಕ: 19/07/2002 ರಲ್ಲೂ ಚಿಂತಾಮಣಿ ನಗರಸಭೆಯಲ್ಲಿ ಖಾತೆ ದಾಖಲು ಮಾಡಿದ್ದು ಖಾತೆ ನಂ 8214 ಆಗಿದ್ದು, ಖಾತೆ ಆಗಿರುವ ಪ್ರದೇಶದಲ್ಲಿ ತನ್ನ ಪತ್ನಿ ಎಸ್ ,ಎನ್ ವಿಜಯಲಕ್ಷ್ಮೀ ರವರ ಹೆಸರಿಗೆ ಅಶ್ವಿನಿ ಬಡಾವಣೆಗೆ ಖಾತೆ ದಾಖಲಾಗಿರುವ ಒಟ್ಟು ಪ್ರದೇಶದ ಪೈಕಿ ಎಸ್ .ಎನ್ ವಿಜಯಲಕ್ಷ್ಮೀ ರವರಿಗೆ ಕ್ರಯವಾಗಿದ್ದು ಎಸ್ ,ಎನ್ ವಿಜಯಲಕ್ಷ್ಮೀ ರವರಿಂದ ಪಾತಿಮಾ ಸಾದತ್ ವುಲ್ಲಾ ರವರಿಗೆ ಸೈಟ್ ನಂ 1 ಕ್ರಯವಾಗಿದ್ದು ನಂತರ ಪಾತಿಮಾ ಸಾದತ್ ವುಲ್ಲಾ ರವರಿಂದ  ತನಗೆ ಕ್ರಯವಾಗಿರುವ ಖಾತೆ ನಂ 8214/1 ರಂತೆ ಪೂರ್ವ-ಪಶ್ಚಿಮ 36¼ ಉತ್ತರ-ದಕ್ಷಿಣ 40 ಅಡಿ ನಿವೇಶನ ಖಾತೆ ನಂ 8214/2 ಎಸ್ .ಎನ್ ವಿಜಯಲಕ್ಷ್ಮೀ ರವರಿಂದ 2-ನೇ ಪತ್ನಿ ಲೀಲಾವತಿ ರವರಿಗೆ ಕ್ರಯವಾಗಿರುವ ನಿವೇಶನ ಖಾತೆ ನಂ 8214/2 ರಪೈಕಿ ಕ್ರಯವಾಗಿರುವಂತೆ 2-ನೇ ಸೈಟ್  ಪೂರ್ವ-ಪಶ್ಚಿಮ 33½ * ಉತ್ತರ-ದಕ್ಷಿಣ 40 ಅಡಿ ನಿವೇಶನ , ಖಾತೆ ನಂ 8214/3 3-ನೇ ಸೈಟ್ ಲೀಲಾವತಿ ರವರಿಗೆ ಕ್ರಯವಾಗಿರುವ ನಿವೇಶನ ಪೂರ್ವ-ಪಶ್ಚಿಮ 39, ಉತ್ತರ-ದಕ್ಷಿಣ 40 ಅಡಿ ಇರುತ್ತೆ.  4-ನೇ ನಿವೇಶನ ತನ್ನ ಮೊದಲ ಪತ್ನಿ ವಿಜಯಲಕ್ಷ್ಮಿ ರವರ ಹೆಸರಿನಲ್ಲಿ ಖಾತೆ ನಂ 8214/4 ಪೂರ್ವ-ಪಶ್ಚಿಮ 36 ¼  ಉತ್ತರ-ದಕ್ಷಿಣ 40 ಅಡಿ ನಿವೇಶನಗಳು ತಮ್ಮ ಸ್ವಾಧೀನಾನುಭವದಲ್ಲಿರುತ್ತೇವೆ. ಹೀಗಿರುವಲ್ಲಿ  ಇದೇ ಅಶ್ವಿನಿ ಬಡಾವಣೆಯ ವಾಸಿ ಪರಿಶಿಷ್ಟ ಜಾತಿಗೆ ಸೇರಿದ ರಾಮಕ್ರಿಷ್ಣ ಬಿನ್ ಲೇಟ್ ವೆಂಕಟಪ್ಪ ಅವರ ಪತ್ನಿ ಶ್ರೀಮತಿ.ಪದ್ಮಾವತಿ ಕೋಂ ರಾಮಕೃಷ್ಣ, ಹಾಗು ಅವರು ಕುಟುಂಬದವರು ದಿನಾಂಕ: 13/08/2021  ರಂದು ಮದ್ಯಾಹ್ನ 2:30 ಸಮಯದಲ್ಲಿ ಅಕ್ರಮವಾಗಿ ಮೇಲ್ಕಂಡ ನಮ್ಮ ಬಾಬತ್ತು ನಿವೇಶನಗಳಿಗೆ ಹಾಕಿಕೊಂಡಿದ್ದ   ಕಲ್ಲು ಕೂಚದ ಕಾಂಪೌಂಡ್ ಹಾಗೂ ಮುಳ್ಳು ಕಂಬಿಯನ್ನು ಜೆ .ಸಿ .ಬಿ ಯಂತ್ರವನ್ನು ಕರೆಸಿ ದ್ವಂಸ ಮಾಡಿಸುತ್ತಿದ್ದಾಗ ಈ ವಿಚಾರವನ್ನು ತಿಳಿದು ತಾನು ಮತ್ತು ತನ್ನ ಮಗ ಕಿರಣ್ ಕುಮಾರ್ ಹಾಗು ತಮಗೆ ಪರಿಚಯವರುವ ಪ್ರಭು.ವೈ.ವಿ, ಕೆ.ಎಂ.ಶ್ರೀನಿವಾಸರೆಡ್ಡಿ ರವರು ಸ್ಥಳಕ್ಕೆ ಹೋಗಿ ರಾಮಕೃಷ್ಣಪ್ಪ ಹಾಗು ಅವರ ಮನೆಯವರನ್ನು ಕೇಳಲಾಗಿ ನಮ್ಮ ಮೇಲೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ನಿಮ್ಮ ಕೈಯಲ್ಲಿ ಏನಾಗುತ್ತೋ ಮಾಡಿಕೊಳ್ಳಿ ನಾವು ಹರಿಜನರು ತಮ್ಮ ತಂಟೆಗೆ ಬಂದರೆ ನಿನ್ನನ್ನು ಮತ್ತು ನಿಮ್ಮ ಮನೆಯವರನ್ನು ಇದೇ ನಿವೇಶನದಲ್ಲಿ ಸಾಯಿಸುತ್ತೇವೆಂದು ಪ್ರಾಣಬೆದರಿಕೆ ಹಾಕಿದ್ದು, ಹಾಗು ನಿಮ್ಮ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆಂದು ದೌರ್ಜನ್ಯ ಮಾಡಿರುತ್ತಾರೆ. ತಮ್ಮ ಬಾಬತ್ತು ನಿವೇಶನಗಳಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ  ಕಲ್ಲು ಕೂಚಗಳ ಕಾಂಪೌಂಡ್ನ್ನು ದ್ವಂಸ ಮಾಡಿದ್ದು, ನಮಗೆ ಸುಮಾರು 2,00,000 ರೂಗಳಷ್ಟು ನಷ್ಟ ಮಾಡಿರುತ್ತಾರೆ.     ಈ ಗಲಾಟೆ ವಿಚಾರದಲ್ಲಿ ದಿನಾಂಕ:17/08/2021 ಠಾಣೆಯಲ್ಲಿ ದೂರು ನೀಡಿದ್ದು, ಠಾಣಾ ಎನ್.ಸಿ.ಆರ್ 337/2021 ರಂತೆ ದೂರು ದಾಖಲಾಗಿರುತ್ತೆ. ವಿಚಾರದಲ್ಲಿ ಹಿರಿಯರು ಸೇರಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆವಿಗೂ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ನಮ್ಮ ಮೇಲೆ ದೌರ್ಜನ್ಯ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

14. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 174/2021 ಕಲಂ. 302 ಐಪಿಸಿ :-

     ದಿನಾಂಕ: 13/09/2021 ರಂದು ಪಿರ್ಯಾದಿದಾರರಾದ ಸೈಯದ್ ಸದ್ದಾಂ ಹುಸೇನ್ ಬಿನ್ ಸೈಯದ್ ಮಹಬೂಬ್ ಪಾಷ, 25 ವರ್ಷ, ಸೆಂಟ್ ವ್ಯಾಪಾರ, ಎಂ.ಎಸ್. ಪಾಳ್ಯ, ವಿಧ್ಯಾರಣ್ಯ ಪುರ ಸಂಬ್ರಮ್ ಕಾಲೇಜ್ ಬಳಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಚಿಂತಾಮಣಿ ನಗರಕ್ಕೆ ವಾರಕ್ಕೋಮ್ಮೇ ಪ್ರತಿ ಶುಕ್ರವಾರ ಮಸೀದಿಗಳ ಬಳಿ ಬಂದು ಸೆಂಟ್ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ತಂದೆಯವರಿಗೆ 05 ಜನ ಮಕ್ಕಳಿದ್ದು, 01ನೇ ಅಣ್ಣ ಸೈಯದ್ ಮುಸ್ಟಾಕ್ 02ನೇ ಅಕ್ಕ ಅಯಿಷಾ, 03ನೇ ಸಲ್ಮಾ, 04ನೇ ಅಸ್ಮಾ, ತಾನು 05ನೇಯವನಾಗಿರುತ್ತೇನೆ. ಮೇಲ್ಕಂಡ 04 ಜನರಿಗೂ ವಿವಾಹವಾಗಿರುತ್ತೇ. ನಮ್ಮ ಅಣ್ಣನಾದ ಸೈಯದ್ ಮುಸ್ಟಾಕ್ ರವರು ಈಗ್ಗೆ ಸುಮಾರು 20 ವರ್ಷಗಳಿಂದ ಚಿಂತಾಮಣಿ ನಗರದ ಅಗ್ರಹಾರದಲ್ಲಿ ವಾಸವಾಗಿದ್ದು, ಚಿಂತಾಮಣಿ ನಗರದಲ್ಲಿ ಚಾಲಕ ವೃತ್ತಿ ಮಾಡಿಕೊಂಡಿರುತ್ತಾರೆ. ನಮ್ಮಣ್ಣ ಸೈಯದ್ ಮುಸ್ಟಾಕ್ ರವರು ಸುಮಾರು 18 ವರ್ಷಗಳ ಹಿಂದೆ ಚಿಂತಾಮಣಿ ನಗರ ಟಿಪ್ಪು ನಗರ ವಾಸಿಯಾದ ಬಾಬು ರವರ 01ನೇ ಮಗಳಾದ ನಸೀಮಾ ರವರನ್ನು ಹಿರಿಯರ ನಿಶ್ಚಯದಂತೆ ವಿವಾಹ ಮಾಡಿಕೊಂಡಿದ್ದು ಅವರ ದಾಂಪತ್ಯದಲ್ಲಿ ಒಟ್ಟು 03 ಜನ ಮಕ್ಕಳಾಗಿದ್ದು, 01ನೇ ಸೈಯದ್ ರಿಹಾನ್ 16 ವರ್ಷ, 02ನೇ ಅಯಿಮಾನ್ ಕುಬ್ರಾ 03ನೇ ಸೈಯದ್ ಪೈಜಾನ್ ರವರಾಗಿರುತ್ತಾರೆ. ಈಗ್ಗೆ 02 ವರ್ಷಗಳಿಂದ ತಮ್ಮ ಅಣ್ಣನ ಹೆಂಡತಿಯಾದ ನಸೀಮಾ ರವರು ಟಿಪ್ಪು ನಗರದ ವಾಸಿಯಾದ ಮೆಕಾನಿಕ್ ಕೆಲಸ ಮಾಡುವ ನವೀದ್ ಎಂಬುವವರೊಂದಿಗೆ ಅಕ್ರಮ ಸಂಭಂಧ ಇಟ್ಟುಕೊಂಡಿರುವ ಬಗ್ಗೆ ತಮ್ಮ ಅಣ್ಣ ತನಗೆ ತಿಳಿಸಿದ್ದು, ತಾನು ಚಿಂತಾಮಣಿಗೆ ಬಂದಾಗ ನಸೀಮಾ ರವರಿಗೆ ಹಲವು ಬಾರಿ ಬುದ್ದಿವಾದ ಹೇಳಿದ್ದೆ ಆದರೂ ಸಹ ಅವರು ಸರಿ ಹೋಗಿರುವುದಿಲ್ಲ. ಈಗ್ಗೆ ಮೂರು ತಿಂಗಳ ಹಿಂದೆ ತನ್ನ ಅತ್ತಿಗೆ ನಸೀಮಾ ರವರು ನವೀದ್ ನೊಂದಿಗೆ ಪಟಾಲಮ್ಮ ದೇವಸ್ಥಾನದ ಹಿಂಭಾಗ ಮಾತನಾಡುತ್ತಿದ್ದು ತಾನು ಅವರನ್ನು ನೋಡಿ ವಿಚಾರವನ್ನು ತಮ್ಮ ಅಣ್ಣ ಸೈಯದ್ ಮುಸ್ಟಾಕ್ ರವರಿಗೆ ತಿಳಿಸಿದ್ದು, ನಮ್ಮಣ್ಣ ಸಹ ಅಲ್ಲಿಗೆ ಬಂದು ಇಬ್ಬರಿಗೂ ತಾವು ಬುದ್ದಿವಾದ ಹೇಳಿರುತ್ತೇವೆ. ದಿನಾಂಕ: 13/09/2021 ರಂದು ರಾತ್ರಿ ಸುಮಾರು 9:00 ಗಂಟೆ ಸಮಯದಲ್ಲಿ ತಮ್ಮ ಅಣ್ಣನ ಮಗನಾದ ಸೈಯದ್ ರಿಹಾನ್ ರವರು ನನಗೆ ಪೋನ್ ಮಾಡಿ ನಮ್ಮ ತಂದೆ ಸೈಯದ್ ಮುಸ್ಟಾಕ್ ರವರನ್ನು ನವೀದ್ ಎಂಬುವವನು ಚಾಕುವಿನಿಂದ ಚಿಂತಾಮಣಿ ನಗರದ ಅಜಾದ್ ಚೌಕ್ ಬಳಿ ಹೊಟ್ಟೆಗೆ ತಿವಿದು ರಕ್ತಗಾಯ ಪಡಿಸಿದ್ದು ನಮ್ಮ ತಂದೆಯನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ನಮ್ಮ ತಂದೆ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಬೆಂಗಳೂರಿನಿಂದ ತಾನು ಮತ್ತು ತಮ್ಮ ತಂದೆಯಾದ ಸೈಯದ್ ಮಹಬೂಬ್ ಪಾಷ ರವರು ಚಿಂತಾಮಣಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತೆ. ನಂತರ ಸೈಯದ್ ರಿಹಾನ್ ನನ್ನು ಈ ಬಗ್ಗೆ ವಿಚಾರ ಮಾಡಲಾಗಿ ದಿನಾಂಕ: 13/09/2021 ರಂದು ರಾತ್ರಿ 8:30 ಗಂಟೆ ಸಮಯದಲ್ಲಿ ತನ್ನ ತಂದೆ ನನಗೆ ಪೋನ್ ಮಾಡಿ ನವೀದ್ ಅಜಾದ್ ಚೌಕ್ ನಲ್ಲಿ ತನ್ನ ಮೇಲೆ ಗಲಾಟೆ ಮಾಡುತ್ತಿದ್ದಾನೆ ಕೂಡಲೇ ನೀನು ಬರುವಂತೆ ತಿಳಿಸಿದ್ದು ಅದರಂತೆ ತಾನು ಅಜಾದ್ ಚೌಕ್ ಗೆ ಬಂದು ನೋಡಲಾಗಿ ನವೀದ್ ನಮ್ಮ ತಂದೆಯ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ನೀನು ಬದುಕಿದ್ದರೆ ನಿನ್ನ ಹೆಂಡತಿ ನಸೀಮಾ ಜೊತೆ ಸಂಭಂಧ ಇಟ್ಟುಕೊಳ್ಳಲು ಕಷ್ಠವಾಗುತ್ತೇ ಎಂತ ತಮ್ಮ ತಂದೆ ಸೈಯದ್ ಮುಸ್ಟಾಕ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ನವೀದ್ ಆತನ ಕೈಯಲ್ಲಿದ್ದ ಮಟನ್ ಕೊಯುವ ಚಾಕುವಿನಲ್ಲಿ ತಮ್ಮ ತಂದೆ ಹೊಟ್ಟೆಯ ಮೇಲ್ಭಾಗ ಮತ್ತು ಹೊಟ್ಟೆ ಎಡ ಭಾಗದಲ್ಲಿ ಬಲವಾಗಿ ಚುಚ್ಚಿ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಆದ್ದರಿಂದ ನಮ್ಮ ಅಣ್ಣನನ್ನು ಕೊಲೆ ಮಾಡಿರುವ ನವೀದ್ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

15. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 127/2021 ಕಲಂ. 323,324,341,504,506,307 ಐಪಿಸಿ :-

     ದಿನಾಂಕ:13/09/2021 ರಂದು ರಾತ್ರಿ 19-00 ಗಂಟೆಗೆ ಪಿರ್ಯಾದಿದಾರರಾದ ಗಂಗರಾಜ ಬಿನ್ ರಂಗಪ್ಪ, 52 ವರ್ಷ, ಬೋವಿ ಜನಾಂಗ, ಬಂಡೆ ಕೆಲಸ, ವಾಸ: ವಲಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ಗಣಕಯಯಂತ್ರ ಮುದ್ರಿತ ದೂರಿನ ಸಾರಾಂಶವೆನೇಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮಗೆ ರಾಮಲಿಂಗ ಬೆಟ್ಟದ ಬದಿಯಲ್ಲಿ  ಜಮೀನು ಇರುತ್ತೆ. ಸದರಿ ಜಮೀನಿನಲ್ಲಿ  ಕಡಲೆಕಾಯಿ ಬೆಳೆ ಹಾಕಿರುತ್ತೇನೆ. ಸದರಿ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳು ಬಂದು ಹಾಳು ಮಾಡುತ್ತಿದ್ದು ಅದಕ್ಕೆ ನಾನು ಪ್ರತಿ ದಿನ ರಾತ್ರಿ  ಜಮೀನಿನ ಬಳಿ ಕಾವಲಿಗಾಗಿ ಹೋಗಿ ಬರುತ್ತಿರುತ್ತೇನೆ. ಈಗಿರುವಲ್ಲಿ ಕೊಂಡಕಿಂದಪಲ್ಲಿ @ ನಲ್ಲರಾಳ್ಳಪಲ್ಲಿ  ಗ್ರಾಮದ ನರಸಿಂಹಪ್ಪ ಮತ್ತು ಆತನ ತಮ್ಮಂದಿರಾದ ಮುನಿಯಪ್ಪ,ಎದ್ದುಲ ನರಸಿಂಹಪ್ಪ ,ದೇವರಾಜ, ನರಸಿಂಹಮೂರ್ತಿ@ ಮಿಟಾಯಿ, ಗಂಗಾಧರ ರವರುಗಳು ತಮ್ಮ ಕುಟುಂಬಗಳ ಸಮೇತ ನಮ್ಮ ಜಮೀನಿನಿಂದ ಸ್ವಲ್ಪ ದೂರದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದು ನನಗೆ ಪರಿಚಯದವರಾಗಿರುತ್ತಾರೆ. ನರಸಿಂಹಮೂರ್ತಿ@ ಮಿಟಾಯಿ ರವರ ದೊಡ್ಡ ಅಣ್ಣನಾದ ನರಸಿಂಹಪ್ಪ ಬಿನ್ ಲಗುಮಪ್ಪ, 50 ವರ್ಷ, ರವರು  ತನ್ನ ತಮ್ಮನಾದ ದೇವರಾಜ್ ರವರ ಹೆಂಡತಿಯಾದ ಲಕ್ಷ್ಮೀದೇವಮ್ಮ ರವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರದಲ್ಲಿ ಅವರ  ತಮ್ಮಂದಿರು ಸೇರಿಕೊಂಡು ನರಸಿಂಹಪ್ಪ ಬಿನ್ ಲಗುಮಪ್ಪ ರವರನ್ನು ಬೈದು ಗಲಾಟೆ ಮಾಡಿ ಬುದ್ದಿವಾದ ಹೇಳಿದ್ದ ವಿಚಾರವು ನರಸಿಂಹಮೂರ್ತಿ @ ಮಿಟಾಯಿ ರವರ ಮೂಲಕ ನನಗೆ ತಿಳಿದಿತ್ತು. ನಂತರ  ನರಸಿಂಹಪ್ಪ ಬಿನ್ ಲಗುಮಪ್ಪ ರವರು ನಲ್ಲರಾಳ್ಳಪಲ್ಲಿ ಗ್ರಾಮವನ್ನು ಬಿಟ್ಟು ಶಿಡ್ಲಘಟ್ಟ ತಾಲ್ಲೂಕಿನ ಅಂಗರೇಖನಹಳ್ಳಿ ಗ್ರಾಮಕ್ಕೆ ಸಂಸಾರ ಸಮೇತ ಹೊರೆಟು ಹೋಗಿದ್ದರು. ಈಗ್ಗೆ 15 ದಿನಗಳ ಹಿಂದೆ  ನರಸಿಂಹಪ್ಪ ಬಿನ್ ಲಗುಮಪ್ಪ ರವರ ಮತ್ತೆ ನಲ್ಲರಾಳ್ಳಪಲ್ಲಿ ಗ್ರಾಮಕ್ಕೆ  ವಾಪಸ್ಸು ಬಂದು ತನ್ನ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಈಗ್ಗೆ 10 ದಿನಗಳ ಹಿಂದೆ  ನರಸಿಂಹಪ್ಪ ರವರ ಕೊನೆಯ ತಮ್ಮನಾದ ಗಂಗಾಧರ ಬಿನ್ ಲಗುಮಪ್ಪ ರವರು ತಮ್ಮ ಅಣ್ಣನಾದ ನರಸಿಂಹಪ್ಪ ರವರು ಮತ್ತೇ ಇಲ್ಲಿಗೆ ಬಂದಿದ್ದ ಬಗ್ಗೆ ಆತನನ್ನು ಕುರಿತು ನೀನು ಪುನಃ ಗ್ರಾಮಕ್ಕೆ ಬಂದಿದ್ದೀಯಾ  ಹೆಣ್ಣು ಮಕ್ಕಳ ವಿಚಾರದಲ್ಲಿ ಹುಷಾರಾಗಿರು  ಸಂಸಾರಗಳನ್ನು ಹಾಳು ಮಾಡಬೇಡ ಎಂದು  ಬುದ್ದಿವಾದ ಹೇಳಿದ್ದ ವಿಚಾರ ನನಗೆ ಗಂಗಾಧರ ರವರು ತಿಳಿಸಿದನು. ಸದರಿ ತನ್ನ ತಮ್ಮನಾದ ಗಂಗಾಧರ ರವರ ಅಣ್ಣನಾದ ನರಸಿಂಹಪ್ಪ ರವರಿಗೆ ಬುದ್ದೀವಾದ ಹೇಳಿದ್ದ ವಿಚಾರದಲ್ಲಿ ನರಸಿಂಹಪ್ಪ ಗಂಗಾಧರನ್ನು ಏನಾದರೂ ಮಾಡಿ ಕೊಲೆ ಮಾಡಬೇಕೆಂತ ಅಲ್ಲಲ್ಲಿ ಮಾತನಾಡಿಕೊಂಡಿದ್ದ ವಿಚಾರ ಸಹ ಗಂಗಾಧರ ಮತ್ತು ಆತನ ಇತರೆ ಅಣ್ಣಂದಿರ ಗಮನಕ್ಕೂ ಸಹ ತಂದಿದ್ದರು, ಆಗ ನಾನು ನೀವು ಅಣ್ಣ ತಮ್ಮಂದಿರು ಗಲಾಟೆ ಮಾಡಿಕೊಳ್ಳುತ್ತೀರಿ  ಮುಂದೆ ಒಂದಾಗುತ್ತೀರಿ ಅದೆಲ್ಲಾ ಮನಸ್ಸಿನಲ್ಲಿ ಇಟ್ಟಿಕೊಳ್ಳಬಾರೆಂತ  ಹೇಳಿದ್ದೆನು. ದಿನಾಂಕ: 12/09/2021 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ನಾನು ನಮ್ಮ ಜಮೀನಿಲ್ಲಿರುವ ಕಡಲೇ ಬೆಳೆಗೆ ಕಾವಲುಗಾಗಿ  ವಲಸೇನಹಳ್ಳಿ ಗ್ರಾಮದಿಂದ ನಡೆದುಕೊಂಡು ಹೋಗುತ್ತಿದ್ದಾಗ  ನನಗೆ  ಗಂಗಾಧರ  ಬಿನ್ ಲಗುಮಪ್ಪ ರವರ  ನಮ್ಮ ಗ್ರಾಮದಲ್ಲಿ ಸಿಕ್ಕಿದ್ದು ಊರಿಗೆ ಬರುತ್ತೀಯಾ ಎಂತ ನಾನು ಕೇಳಿದಾಗ ಗಂಗಾಧರರವರು ಸ್ವಲ್ಪ ತಡವಾಗಿ ಮನಗೆ ಬರುತ್ತೇನೆಂದು ಹೇಳಿದ  ಆದರೆ ನಾನು ಒಬ್ಬನೇ ರಾಮಲಿಂಗ ಬೆಟ್ಟದ ಬಳಿ ಇರುವ ನಮ್ಮ ಜಮೀನಿನ ಬಳಿಗೆ ಹೋಗಲು ರಾತ್ರಿ ಸುಮಾರು 7-45 ಗಂಟೆಯ ಸಮಯದಲ್ಲಿ ಚಳಿಗಾಗಿ ತಲೆಯ ಮೇಲೆ ಟವಲ್ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ನರಸಿಂಹಪ್ಪ ರವರ ಮನೆಯ ಹತ್ತಿರ ಹೋಗುತ್ತಿದ್ದಂತೆ ಯಾರೋ ಒಬ್ಬ ಆಸಾಮಿಯು ಓಡಿ ಬಂದು ನಾನು ತಲೆಯ ಮೇಲೆ ಹಾಕಿಕೊಂಡಿದ್ದ ಟವಲ್ ನ್ನು ಮುಖ ಮುಚ್ಚುವಂತೆ  ಹಾಕಿ ಎರಡು ಕೈಗಳಿಂದ ನನ್ನ ಕತ್ತು ಬಿಗಿಯಾಗಿ ಹಿಡಿದುಕೊಂಡು ಈ ದಿನ ನಿನ್ನನ್ನು ಇಲ್ಲಿಯೇ ಸಾಯಿಸಿಬಿಡುತ್ತೇಂದು ಹೇಳಿ  ತನ್ನ ಕೈಯಲ್ಲಿದ್ದ ಕಲ್ಲಿನಿಂದ  ನನ್ನ  ಎಡಭಾಗದ ಕಂಕಳ ಕೆಳಗೆ ಪಕ್ಕೆಎಲುಬುಗಳಿಗೆ  ಜೋರಾಗಿ ಹೊಡೆದನು ನಾನು ತಪ್ಪಿಸಿಕೊಳ್ಳಲು ಟವಲ್ ನ್ನು ಎಳೆದಾಗ ಆತನ ಮುಖ ಸ್ವಲ್ಪ ಭಾಗ ಕಾಣಿಸಿದ್ದು ಅದು ನಲ್ಲರಾಳ್ಳಪಲ್ಲಿ ಗ್ರಾಮದ ವಾಸಿಯಾದ ನರಸಿಂಹಪ್ಪನಾಗಿದ್ದನು ನಾನು ನರಸಿಂಹಪ್ಪ ರವರನ್ನು ಕುರಿತು ನಾನು ವಲಸೇನಹಳ್ಳಿ ಗ್ರಾಮದ ಗಂಗರಾಜು ಯಾಕೆ ನನ್ನನ್ನು ಹೊಡೆಯುತ್ತಿದ್ದೀಯಾ ಎಂದು ಕೇಳುತ್ತಿದ್ದಂತೆಯೇ  ನೀನು ನನ್ನ ಮಗ ನಮ್ಮ  ಗಂಗಾಧರ ಅಲ್ಲಾವಾ ನೀನು ವಲಸೇನಹಳ್ಳಿ ಗ್ರಾಮದ ಗಂಗರಾಜನಾ ಎಂದು ಹೇಳುತ್ತಿದ್ದಂತೆಯೇ ಅದೇ ವೇಳೆಗೆ ಸರಿಯಾಗಿ  ಒಂದು ಆಟೋ ಬಂದಿದ್ದು ಆಟೋವಿನ ಬೆಳಕು ನಮ್ಮ ಮೇಲೆ ಬಿಳುತ್ತಿದ್ದಂತೆಯೇ ನರಸಿಂಹಪ್ಪ ರವರು ಭಯಬೀತರಾಗಿ ನನ್ನನ್ನು ಅಲ್ಲಿಯೇ ಬಿಟ್ಟು  ಅಲ್ಲಿಂದ ಓಡಿ ಹೋಗಿರುತ್ತಾನೆ. ಆಟೋ ನನ್ನ ಬಳಿ ಬಂದು ನಿಂತುಕೊಳ್ಳಿತು  ಆಗ ಆಟೋವಿನಿಂದ ನನಗೆ ಪರಿಚಯವಿದ್ದ ನರಸಿಂಹಮೂರ್ತಿ @ ಮಿಟಾಯಿ ರವರು ಇಳಿದು  ಬಂದು ನನ್ನನ್ನು ಉಪಚರಿಸಿದರು ಅದೇ ವೇಳೆಗೆ ಸಮಯಕ್ಕೆ ಗಂಗಾಧರ ಬಿನ್ ಲಗುಮಪ್ಪ ರವರು ಸಹ ಅಲ್ಲಿಗೆ ವಲಸೇನಹಳ್ಳಿ ಕಡೆಯಿಂದ ನಡೆದುಕೊಂಡು ಬಂದರು ಅದೇ ವೇಳೆಗೆ ಗಂಗಾಧರ ರವರ ಹೆಂಡತಿಯಾದ ನಾರಾಯಣಮ್ಮ ರವರು  ಒಂದು ಗ್ಲಾಸ್ ನಲ್ಲಿ ನೀರನ್ನು ತಂದು ನನಗೆ ಕುಡಿಸಿದರು. ನಂತರ ಗಂಗಾಧರ ರವರ ಸಂಬಂಧಿಕರು ಸಹ ಅಲ್ಲಿಗೆ ಬಂದರು ಎಲ್ಲರೂ ಸೇರಿ ನನ್ನನ್ನು ಉಪಚರಿಸಿ ಗಲಾಟೆಯ ವಿಚಾರವನ್ನು ತಿಳಿದುಕೊಂಡರು. ನಂತರ ನನ್ನನ್ನು ನರಸಿಂಹಮೂರ್ತಿ @ ಮಿಟಾಯಿ ರವರು  ತನ್ನ ಆಟೋವಿನಲ್ಲಿ ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದರು ನಾನು  ಚಿಕಿತ್ಸೆ ಪಡಿಸಿಕೊಂಡು ಈ ದಿನ ದಿನಾಂಕ:13/09/2021 ರಂದು ಸಂಜೆ  ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು ನರಸಿಂಹಪ್ಪ ರವರು ತನ್ನ ತಮ್ಮನಾದ ಗಂಗಾಧರ ರವರೇ ನಡೆದುಕೊಂಡು ಬರುತ್ತಿರುತ್ತಾರೆಂತ ತಿಳಿದು ಹಿಂದಿನ ದ್ವೇಷದಿಂದ ಗಂಗಾಧರನನ್ನು ಸಾಯಿಸುವ ಉದ್ದೇಶ ಹೊಂದಿದ್ದವನು ಆತನ ಬದಲಾಗಿ ನಾನು ನಡೆದುಕೊಂಡು ಬಂದಾಗ ಗಂಗಾಧರನೇ ನಾನು ಎಂತ ತಿಳಿದು ಕೊಲೆ ಮಾಡುವ ಉದ್ದೇಶದಿಂದ ನಲ್ಲರಾಳ್ಳಪಲ್ಲಿ ಗ್ರಾಮದ  ನರಸಿಂಹಪ್ಪ ಬಿನ್ ಲಗುಮಪ್ಪ, 50 ವರ್ಷ, ನಾಯಕರು ರವರು ನನಗೆ ಒಂದು ಕಲ್ಲಿನಿಂದ ಎಡಭಾಗದ ಕಂಕಳ ಕೆಳಗೆ ಪಕ್ಕಎಲುಬುಗಳಿಗೆ ಕಲ್ಲಿನಿಂದ ಹೊಡೆದು ಗಾಯವನ್ನುಂಟು ಮಾಡಿರುವವನ ವಿರುದ್ದ  ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:127/2021 ಕಲಂ:341,323,324,504,506,307 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

16. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 230/2021 15(A),32(3) KARNATAKA EXCISE ACT, 1965 :-

     ದಿನಾಂಕ:23/08/2021 ರಂದು ಫಿರ್ಯಾದುದಾರರಾದ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ  ರವರಾದ ವಿಜಯ್ ಕುಮಾರ್ ಕೆ.ಸಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ: 23/08/2021 ರಂದು  ಮದ್ಯಾಹ್ನ 3-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ನಗರಗೆರೆ ಹೋಬಳಿ ಕದಿರೇನಹಳ್ಳಿ  ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-460 ಷೇಕ್ ಸನಾವುಲ್ಲಾ, ಪಿ.ಸಿ-33 ಕೃಷ್ಣಪ್ಪ ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಕದಿರೇನಹಳ್ಳಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 4-00   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ರಾಮಾಂಜಿನಪ್ಪ ಬಿನ್ ಲೇಟ್ ರಾಮಪ್ಪ, 44 ವರ್ಷ, ನಾಯಕರು, ಕೂಲಿ ಕೆಲಸ, ಕದಿರೇನಹಳ್ಳಿ ಗ್ರಾಮ,  ನಗೆರೆಗೆರೆ ಹೋಬಳಿ,  ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 20   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ   ಸಂಜೆ 5-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ಮೆಮೋ ದೂರಾಗಿರುತ್ತೆ.

 

17. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 231/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ :31/08/2021 ರಂದು  ಮದ್ಯಾಹ್ನ 2.00 ಗಂಟೆಗೆ ಗೌರಿಬಿದನೂರು ತಾಲೂಕು ನಗರಗೆರೆ ಹೋಬಳಿಯ ವೆಳಪಿ ಗ್ರಾಮದ ವಾಸಿ  ಕೃಷ್ಣಪ್ಪ  ಬಿನ್ ಅಶ್ವತ್ಥಪ್ಪ ಬಾಬತ್ತು  ಅಂಗಡಿಯ  ಮುಂಭಾಗದಲ್ಲಿ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಇದೇ ದಿನ ಮದ್ಯಾಹ್ನ 2.00   ಪಂಚರು ಮತ್ತು ಪೋಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ ವೆಳಪಿ  ಗ್ರಾಮಕ್ಕೆ ಹೋಗಿ ಸರ್ಕಾರಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ದೂರ ನಡೆದುಕೊಂಡು ಹೋಗುವಷ್ಠರಲ್ಲಿ ಸಮವಸ್ರದಲ್ಲಿದ್ದ ನಮ್ಮಗಳನ್ನು ಕಂಡು ಮನೆಯ ಮುಂದೆ ಮದ್ಯಪಾನ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು,ಮತ್ತೊಬ್ಬ ಆಸಾಮಿ ಅಂಗಡಿಯ ಮುಂಭಾಗ ನಿಂತಿದ್ದವನನ್ನು  ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಕೃ಼ಷ್ಣಪ್ಪ ಬಿನ್  ಅಶ್ವತ್ಥಪ್ಪ  53 ವರ್ಷ  ನಾಯಕರು ಅಂಗಡಿ ವ್ಯಾಪಾರ ವಾಸ: ವೆಳಪಿ ಗ್ರಾಮ ನಗರಗೆರೆ  ಹೋಬಳಿ ಗೌರಿಬಿದನೂರು ತಾ. ಅಂತ ತಿಳಿಸಿದ್ದು,  ಅಂಗಡಿಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 1) 90 ಎಂ ಎಲ್ ಸಾಮರ್ಥ್ಯದ  ಮದ್ಯ ತುಂಬಿದ  ಓರಿಜನಲ್ ಚಾಯ್ಸ್ ವಿಸ್ಕಿಯ 7 ಪ್ಯಾಕೆಟ್ಟ ಗಳು. 2) ಮದ್ಯ ತುಂಬಿದ 90  ಎಂಲ್ ನ Hay wards cheers whiskey ಯ  8   ಟೆಟ್ರಾ ಪ್ಯಾಕೆಟ್ ಗಳು ಒಟ್ಟು ಮದ್ಯ  1350  ಎಂ ಎಲ್ ನದ್ದಾಗಿದ್ದು, ಇದರ ಬೆಲೆ 525  ರೂ ಆಗಿರುತ್ತೆ , ಅಂಗಡಿಯ ಮುಂದೆ  ಪರಿಶೀಲಿಸಲಾಗಿ 3) 90 ಎಂ ಎಲ್ ನ 5 ಖಾಲಿ ಟೆಟ್ರಾ ಪ್ಯಾಕೆಟ್ ಗಳು 4)  ಐದು ಪ್ಲಾಸ್ಟಿಕ್ ಲೋಟಗಳು ಇರುತ್ತವೆ. ಸದರಿ ಆಸಾಮಿಯನ್ನು ಮದ್ಯಪಾನ ಮಾಡಿಕೊಡಲು ಸ್ಥಳಾವಾಕಾಶ ಮಾಡಿಕೊಡಲು ಯಾವುದೇ ಪರವಾನಿಗೆ ಇದೇಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾನೆ. ಮಾಲಾದ  1) 90 ಎಂ ಎಲ್ ಸಾಮರ್ಥ್ಯದ  ಮದ್ಯ ತುಂಬಿದ  ಓರಿಜನಲ್ ಚಾಯ್ಸ್ ವಿಸ್ಕಿಯ 7 ಪ್ಯಾಕೆಟ್ಟ ಗಳು. 2) ಮದ್ಯ ತುಂಬಿದ 90  ಎಂಲ್ ನ Hay wards cheers whiskey ಯ  8   ಟೆಟ್ರಾ ಪ್ಯಾಕೆಟ್ ಗಳು  3) 90 ಎಂ ಎಲ್ ನ 5 ಖಾಲಿ ಟೆಟ್ರಾ ಪ್ಯಾಕೆಟ್ ಗಳು 4)  ಐದು ಪ್ಲಾಸ್ಟಿಕ್ ಲೋಟಗಳನ್ನು  ಪಂಚರ ಸಮಕ್ಷಮ  ಮದ್ಯಾಹ್ನ 2.30 ಗಂಟೆಯಿಂದ  3.00 ಗಂಟೆಯವರೆವಿಗು  ಪಂಚರ ಸಮಕ್ಷಮ ಅಮಾನತ್ತು  ಪಡಿಸಿಕೊಂಡಿರುತ್ತೆ. ಮಾಲನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ವಶಕ್ಕೆ ನೀಡಿ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ದೂರಾಗಿರುತ್ತೆ.ದಿನಾಂಕ: 13/09/2021 ರಂದು ಬೆಳಿಗ್ಗೆ 11-30 ಗಂಟೆಗೆ  ಘನ ನ್ಯಾಯಾಲಯದ ಸಿಬ್ಬಂದಿ ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ 231/2021 ಕಲಂ 15 (A) 32 ಕ್ಲಾಸ್ (3) ಕೆ ಇ ಆಕ್ಟ್ ರಿತ್ಯಾ ಪ್ರಕರಣ ದಾಖಲಿಸಿರುತ್ತೆ.

 

18. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 232/2021 ಕಲಂ. 323,504 ಐಪಿಸಿ :-

     ದಿನಾಂಕ:13/09/2021 ರಂದು ಸಂಜೆ 5-15 ಗಂಟೆಗೆ ಗೌರೀಬಿದನೂರು ಘನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-205 ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ನ್ಯಾಯಾಲಯದ ಅನುಮತಿ ಆದೇಶದ ಸಾರಾಂಶವೇನೆಂದರೆ, ಗೌರೀಬಿದನೂರು ತಾಲ್ಲೂಕು, ಕಲ್ಲಿನಾಯಕನಹಳ್ಳಿ ಗ್ರಾಮದ ವಾಸಿ ಕೆ.ಟಿ ಹರ್ಷವರ್ಧನರೆಡ್ಡಿ ಬಿನ್ ತಿಮ್ಮಾರೆಡ್ಡಿ ಶ್ರೀ ವಿನಾಯಕ ಪ್ಯೂಯಲ್ಸ್ ಸ್ಟೇಷನ್, ಮಾಲಿಕರು, ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 10/09/2021 ರಂದು ರಾತ್ರಿ 10-15 ಗಂಟೆಗೆ ಕೊಟಾಲದಿನ್ನೆಯ ಬಳಿ ಇರುವ ಶ್ರೀ ವಿನಾಯಕ ಪ್ಯೂಯಲ್ ಸ್ಟೇಷನ್ ನಲ್ಲಿ ಯಾರೋ ಹುಡುಗರು ಪೇಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು, KA 04 KE 4272 ದ್ವಿಚಕ್ರ ವಾಹನದಲ್ಲಿ ಬಂದ ಪೆಟ್ರೋಲ್ ಹಾಕಿಸಿಕೊಂಡು ನಂತರ ದ್ವಿ ಚಕ್ರವಾಹನದಲ್ಲಿರುವ ಹುಡುಗರು ನಮ್ಮ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸುಧರ್ಶನರೆಡ್ಡಿ ಎಂಬುವ ಹುಡುಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಮತ್ತು ಅವನ ಕಪಾಳಕ್ಕೆ ಹೊಡೆದು, ಬಂಕ್ ನಲ್ಲಿ ದೂಮಪಾನ ಮಾಡಿ ಅದೇ ಹುಡುಗರು ಲಾಂಗ್ ಅರುಣ್ ಎಂಬುವವನಿಗೆ ಕರೆ ಮಾಡಿ ಲಾಂಗ್ ಅರುಣ್ ಬಳಿ ಮಾತನಾಡು ಎಂದು ನಮ್ಮ ಬಂಕ್ ನ ಇನ್ನೋಬ್ಬ ಹುಡುಗನಾದ ಸಿದ್ದರಾಜು ಬಳಿ ಮಾತನಾಡಿಸಿದ್ದಾನೆ, ಆದ್ದರಿಂದ ತಾವು ಈ ಹುಡುಗರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಂಡು ನಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ.411/2021 ರಂತೆ ದಾಖಲಿಸಿ ಸಂಜ್ಞೇಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಈ ದಿನ ಠಾಣಾ ಮೊ.ಸಂ.232/2021 ಕಲಂ. 323, 504 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

19. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 233/2021 ಕಲಂ. 379 ಐಪಿಸಿ :-

     ದಿನಾಂಕ 13-09-2021 ರಂದು 22-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿಜಯಕುಮಾರ್ ಕೆ.ಸಿ.  ಪಿ.ಎಸ್.ಐ.ರವರು ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರೈಲರ್ ಹಾಗೂ ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13-09-2021 ರಂದು ರಾತ್ರಿ 08-00 ಗಂಟೆಯಲ್ಲಿ ನಾನು ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಸಾಗಾನಹಳ್ಳಿ ಗ್ರಾಮದಲ್ಲಿ  ಕಡಬೂರು ಕಡೆಯಿಂದ ಗೊಟಕನಾಪುರ ಕೆರೆಗೆ ಬರುವ ಸರ್ಕಾರಿ ಹಳ್ಳದಲ್ಲಿ ಯಾವುದೆ ಅನುಮತಿಯಿಲ್ಲದೇ ಅಕ್ರಮವಾಗಿ  ಮರಳನ್ನು ಕಳುವು ಮಾಡುತ್ತಿದ್ದಾನೆಂದು  ಖಚಿತವಾದ ಮಾಹಿತಿ ಬಂದಿದ್ದು ಸದರಿ ಮಾಹಿತಿಯ ಮೇರೆಗೆ ನಾನು ಸಿಬ್ಬಂದಿಯವರಾದ  ಹೆಚ್.ಸಿ. 60 ರಿಜ್ವಾನುಲ್ಲಾ, ಪಿ.ಸಿ. 115 ಕೆಂಪರಾಜು ಮತ್ತು ಪಿ.ಸಿ. 179 ಶಿವಶೇಖರ್ ರವರೊಂದಿಗೆ ಕೆ.ಎ.-40-ಜಿ-538 ಸರ್ಕಾರಿ ವಾಹನದಲ್ಲಿ  ಮಾಹಿತಿ ಬಂದ ಸ್ಥಳಕ್ಕೆ  ಪಂಚರೊಂದಿಗೆ  ಹೋಗಿ  ಸ್ವಲ್ಪ ದೂರದಲ್ಲಿ  ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ  ಸದರಿ ಸ್ಥಳವು ಕಡಬೂರು ಕಡೆಯಿಂದ ಗೊಟಕನಾಪುರ ಕೆರೆಗೆ ಸೇರುವ ಸರ್ಕಾರಿ ಹಳ್ಳವಾಗಿದ್ದು  ಸದರಿ ಹಳ್ಳದಲ್ಲಿ ಹೊಂಗೆ ತೋಪು ಮುಂಭಾಗ  ಒಂದು  ಟ್ರ್ಯಾಕ್ಟರ್  ನಿಂತಿದ್ದು ನೋಡಲಾಗಿ ಕೆ.ಎ.-51-ಟಿ-1459 ಎಂದು ಮುಂಭಾಗದಲ್ಲಿ ನೊಂದಣಿ ಸಂಖ್ಯೆಯಿದ್ದು  ಕೆಂಪು ಬಣ್ಣದ ಮಹಿಂದ್ರಾ ಭೂಮಿಪುತ್ರ  ಟ್ರ್ಯಾಕ್ಟರ್ ಆಗಿರುತ್ತೆ. ಚಾಸ್ಸಿ ನಂ. RLCW00259  ಆಗಿರುತ್ತೆ. ಟ್ರ್ಯಾಕ್ಟರ್ ನ ಟ್ರೈಲರ್ ಅನ್ನು ಎಳೆಯಲು ಇರುವ ಹುಕ್ ಮುರಿದಿರುತ್ತೆ. ಹಿಂಭಾಗದಲ್ಲಿ ಟ್ರೈಲರ್ ಇದ್ದು ಯಾವುದೇ ನೊಂದಣಿ ಸಂಖ್ಯೆಯಾಗಲೀ ಚಾಸ್ಸಿ ಸಂಖ್ಯೆಯಾಗಲೀ ಇರುವುದಿಲ್ಲ. ಟ್ರೈಲರ್ ನಲ್ಲಿ  ಸ್ವಲ್ಪ ಮರಳು ಇರುತ್ತೆ. ಸ್ಥಳದಲ್ಲಿ ಮರಳನ್ನು ತುಂಬುತ್ತಿದ್ದವನು  ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೊಲೀಸ್ ವಾಹನವನ್ನು ನೋಡಿ ಸ್ಥಳದಿಂದ ಓಡಿಹೋಗಿರುತ್ತಾನೆ.  ನಂತರ ಸದರಿ ಟ್ರ್ಯಾಕ್ಟರ್ ಗೆ ಮರಳನ್ನು ತುಂಬುತ್ತಿದ್ದವನು ಟ್ರ್ಯಾಕ್ಟರ್ ನ ಚಾಲಕನೆಂದು ಭಾತ್ಮಿದಾರರಿಂದ ತಿಳಿದುಬಂದಿದ್ದು  ಚಾಲಕನ ಹೆಸರು ವಿಳಾಸವನ್ನು ಭಾತ್ಮಿದಾರರಿಂದ  ತಿಳಿಯಲಾಗಿ ಕಿರಣ್ ಬಿನ್ ಓಬಳೇಶಪ್ಪ, ಸುಮಾರು 23 ವರ್ಷ, ಆದಿ ಕರ್ನಾಟಕ, ಟ್ರ್ಯಾಕ್ಟರ್ ಡ್ರೈವರ್, ವಾಸ ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ಸದರಿ ಮರಳು ತುಂಬಿಸಿಕೊಳ್ಳುತ್ತಿದ್ದ ಕೆ.ಎ.-51-ಟಿ-1459 ನೊಂದಣಿ ಸಂಖ್ಯೆಯ ಟ್ರ್ಯಾಕ್ಟರ್ ಸದರಿ ಮರಳು ತುಂಬಿದ ನೊಂದಣಿ ಸಂಖ್ಯೆ ಇಲ್ಲದ ಟ್ರೈಲರ್ ಅನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 20-30 ಗಂಟೆಯಿಂದ 21-30 ಗಂಟೆಯವರೆಗೆ ಪಂಚನಾಮೆಯನ್ನು ಸರ್ಕಾರಿ ವಾಹನದ ಹೆಡ್ ಲೈಟ್ ಬೆಳಕಿನಲ್ಲಿ  ಜರುಗಿಸಿ ಅಮಾನತ್ತು ಪಡಿಸಿಕೊಂಡಿದ್ದು ಸದರಿ ಟ್ರೈಲರ್ ಅನ್ನು ಎಳೆಯಲು ಕೆ.ಎ.-51-ಟಿ-1459 ಟ್ರ್ಯಾಕ್ಟರ್ ನ  ಹಿಂಭಾಗದಲ್ಲಿರುವ  ಹುಕ್ ಮುರಿದಿದ್ದರಿಂದ  ಸದರಿ ಮರಳು ಇರುವ ನೊಂದಣೀ ಸಂಖ್ಯೆಇಲ್ಲದ ಟ್ರೈಲರ್ ಅನ್ನು ಸಾಕ್ಷೀದಾರರಾದ ನರಸಿಂಹಮೂರ್ತಿ ಸಾಗಾನಹಳ್ಳಿ ರವರ ಕೆ.ಎ.-40-ಟಿ-6677 ರ ಟ್ರ್ಯಾಕ್ಟರ್ ನ ಸಹಾಯದಿಂದ ಠಾಣೆಯ ಬಳಿಗೆ ಸಾಗಿಸಿರುತ್ತೆ. ಯಾವುದೇ ಪರವಾನಗಿಯಿಲ್ಲದೇ ಅಕ್ರಮವಾಗಿ  ಸರ್ಕಾರಿ ಹಳ್ಳದಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳುವು ಮಾಡಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ. ಸದರಿ  ಕೆ.ಎ.-51-ಟಿ-1459 ಟ್ರ್ಯಾಕ್ಟರ್ ಮತ್ತು  ನೊಂದಣಿ ಸಂಖ್ಯೆಯಿಲ್ಲದ ಟ್ರೈಲರ್ ಹಾಗೂ ಮರಳನ್ನು 22-00 ಗಂಟೆಗೆ ಹಾಜರುಪಡಿಸುತ್ತಿದ್ದು  .ಎ.-51-ಟಿ-1459 ಟ್ರ್ಯಾಕ್ಟರ್ ಮತ್ತು  ನೊಂದಣಿ ಸಂಖ್ಯೆಯಿಲ್ಲದ ಟ್ರೈಲರ್ ನ ಮಾಲೀಕ ಮತ್ತು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ದೂರಾಗಿರುತ್ತೆ.

 

20. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 234/2021 ಕಲಂ. 78(I),78(3) KARNATAKA POLICE ACT, 1963 :-

     ದಿನಾಂಕ:14/09/2021 ರಂದು ಮಾನ್ಯ ಘನನ ನ್ಯಾಯಾಲಯದ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರುಪಡಿಸಿದ ಅನುಮತಿಯ ಸಾರಾಂಶವೇನೆಂದರೆ: ದಿನಾಂಕ 06/09/2021 ರಂದು  ಸಂಜೆ 6-30  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ಕದಿರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ-205 ಮೋಹನ್,  ಪಿ.ಸಿ-179 ಶಿವಶೇಖರ್  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40 ಜಿ.538 ರಲ್ಲಿ ಗ್ರಾಮಕ್ಕೆ   ಸಂಜೆ 7-00  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ  ಆಸಾಮಿಯು  ಕದಿರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಗಳನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು,   ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು   ವೆಂಕಟೇಶ್ ಬಿನ್ ಲೇಟ್ ತಿಮ್ಮಪ್ಪ, 43 ವರ್ಷ, ತಿಗಳರು, ಕದಿರೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ವೆಂಕಟೇಶ್ ಬಿನ್ ಲೇಟ್ ತಿಮ್ಮಪ್ಪ, ರವರ ಬಳಿ   ನಗದು ಹಣ 5040-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ವೆಂಕಟೇಶ್ ಬಿನ್ ಲೇಟ್ ತಿಮ್ಮಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 5040-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 7-30 ಗಂಟೆಯಿಂದ 8-30 ಗಂಟೆಯವರೆಗೆ  ಬೀದಿ ದೀಪದ ಬೆಳಕಿನಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ರಾತ್ರಿ  9-00 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಠಾಣಾ ಎನ್.ಸಿ.ಆರ್ ಸಂಖ್ಯೆ:399/2021 ರಂತೆ ದಾಖಲಿಸಿ ನಂತರ ಮಾನ್ಯ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ಪ್ರಕರಣ ದಾಖಲು ಮಾಡಿರುವುದಾಗಿದೆ.

 

21. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 235/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:07/09/2021 ರಂದು ಸಂಜೆ 5-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:07/09/2021  ರಂದು  ಮದ್ಯಾಹ್ನ 3-30  ಗಂಟೆಯಲ್ಲಿ  ಪಿ.ಎಸ್.ಐ ಸಾಹೇಬರು ಮಂಚೇನಹಳ್ಳಿಯಲ್ಲಿದ್ದಾಗ  ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಂಗಸಂದ್ರ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಸಿಹೆಚ್ ಸಿ-235 ರವಿಕುಮಾರ, ಸಿ.ಹೆಚ್.ಸಿ-184 ಅನ್ಸರ್ ಬಾಷಾ, ಸಿ.ಹೆಚ್.ಸಿ-170, ಜೂಲಪ್ಪ ಎನ್, ಸಿ.ಪಿ.ಸಿ- 205 ಮೋಹನ್ ಕುಮಾರ್ ವೈ, ಸಿಪಿ.ಸಿ-179 ಶಿವಶೇಖರ ಹಾಗೂ ಚಾಲಕ ಎ.ಪಿ.ಸಿ- 143 ಮಹೇಶ್ ರವರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಗಂಗಸಂದ್ರ ಗ್ರಾಮಕ್ಕೆ ಸಾಯಂಕಾಲ 4-00  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಗಂಗಸಂದ್ರ ಗ್ರಾಮದ ಕೆರೆಯ ಬಳಿ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗಂಗಸಂದ್ರ ಗ್ರಾಮದ ಕೆರೆಯ ಅಂಗಳದಲ್ಲಿ  ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ, ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು ಮೇಲೆ ಎದ್ದೇಳದಂತೆ ಸೂಚಿಸಿದರೂ ಕೆಲವರು ಸ್ಥಳದಿಂದ ಓಡಿಹೋಗಿದ್ದು, ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸವನ್ನು ಕೆಳಲಾಗಿ 1) ಭರತ್ ಕುಮಾರ್ ಬಿನ್ ಲೇಟ್ ವೇಣುಗೋಪಾಲ, 30 ವರ್ಷ, ಸಾದರ ಗೌಡರ ಜನಾಂಗ, ಜಿರಾಯ್ತಿ, ವಾಸ ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು ಮೊ.ನಂ.9900579323, 2) ಮಧುಸೂಧನ ಬಿನ್ ನಾಗರಾಜ, 21 ವರ್ಷ, ಸಾದರಗೌಡರ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ ವಾಸ ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು, ಮೊ.ನಂ.7019698695 3) ವಿಜಯ್ ಕುಮಾರ್ ಬಿನ್ ನಾಗರಾಜಪ್ಪ, 28 ವರ್ಷ, ಸಾದರ ಗೌಡರ ಜನಾಂಗ, ವಾಸ ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  ಮೊ.ನಂ.9686217823. 4) ಶ್ರೀನಿವಾಸ ಬಿನ್ ಲೇಟ್ ನಾರಾಯಣಪ್ಪ, 43 ವರ್ಷ, ಸಾದರ ಗೌಡರ ಜನಾಂಗ, ವಾಸ ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  ಮೊ.ನಂ.9113666127, 5) ಮಂಜುನಾಥ ಹೆಚ್.ಎನ್ ಬಿನ್ ನಾಗರಾಜಪ್ಪ, 23 ವರ್ಷ, ಸಾದರ ಗೌಡರ ಜನಾಂಗ, ವಾಸ ಈಶ್ವರದೇವಸ್ಥಾನ ಹಿಂದೆ, ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  ಮೊ.ನಂ.8792811382. 6) ಲಕ್ಷ್ಮೀಪತಿ ಬಿನ್ ಲೇಟ್ ಚನ್ನಯ್ಯ, 63 ವರ್ಷ, ಸಾದರಗೌಡರ ಜನಾಂಗ, ಕೂಲಿ ಕೆಲಸ, ವಾಸ ಹಿರೇಬಿದನೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  ಮೊ.ನಂ.9741991113 ಎಂದು ತಿಳಿಸಿರುತ್ತಾರೆ, ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 2750/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಾಯಂಕಾಲ 4-15 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ಮೆಮೋನೊಂದಿಗೆ ಮೇಲ್ಕಂಡ ಮಾಲುಗಳು, ಆಸಾಮಿಗಳನ್ನು ಮತ್ತು ಅಸಲು ಪಂಚನಾಮೆಯನ್ನು ನೀಡುತ್ತಿದ್ದು  ಮೇಲ್ಕಂಡ ಆರೋಪಿಗಳ ವಿರುದ್ಧ  ಕಲಂ.87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.401/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ: 14/09/2021 ರಂದು 10-15 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೊಹನ್ ಕುಮಾರ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿಯ ಪತ್ರ ಪಡೆದು ಠಾಣಾ ಮೊ.ಸಂ 235/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಕಲಿಸಿಕೊಂಡಿರುತ್ತೆ.    

 

22. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 236/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ :31/08/2021 ರಂದು  ಮದ್ಯಾಹ್ನ 2.00 ಗಂಟೆಗೆ ಗೌರಿಬಿದನೂರು ತಾಲೂಕು ನಗರಗೆರೆ ಹೋಬಳಿಯ  ಜೀಲಾಕುಂಟೆ  ಗ್ರಾಮದ ವಾಸಿ  ಗಂಗಾಧರಪ್ಪ  ಬಿನ್ ಗಂಗಪ್ಪ  ರವರ ಬಾಬತ್ತು  ಅಂಗಡಿಯ  ಮುಂಭಾಗದಲ್ಲಿ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಇದೇ ದಿನ ಮದ್ಯಾಹ್ನ 2.00 ಗಂಟೆಗೆ  ಪಂಚರು ಮತ್ತು ಪೋಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ ಗ್ರಾಮಕ್ಕೆ ಹೋಗಿ ಸರ್ಕಾರಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ದೂರ ನಡೆದುಕೊಂಡು ಹೋಗುವಷ್ಠರಲ್ಲಿ ಸಮವಸ್ರದಲ್ಲಿದ್ದ ನಮ್ಮಗಳನ್ನು ಕಂಡು ಮನೆಯ ಮುಂದೆ ಮದ್ಯಪಾನ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು,ಮತ್ತೊಬ್ಬ ಆಸಾಮಿ ಅಂಗಡಿಯ ಮುಂಭಾಗ ನಿಂತಿದ್ದವನನ್ನು ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಗಂಗಾಧರಪ್ಪ ಬಿನ್ ಗಂಗಪ್ಪ 62 ವರ್ಷ ಬೋವಿ ಜನಾಂಗ ಅಂಗಡಿ  ವ್ಯಾಪಾರ ವಾಸ ;ಜೀಲಾಕುಂಟೆ ಗ್ರಾಮ ನಗರಗೆರೆ  ಹೋಬಳಿ ಗೌರಿಬಿದನೂರು ತಾ. ಅಂತ ತಿಳಿಸಿದ್ದು, ಆತನ ಬಳಿ   1) 180 ಎಂ ಎಲ್ ಸಾಮರ್ಥ್ಯದ  ಮದ್ಯ ತುಂಬಿದ   ಓಲ್ಡ್ ತವರಿನ್ ವಿಸ್ಕಿಯ 5 ಟೆಟ್ರಾ ಪ್ಯಾಕೆಟಟ್ ಗಳು  2) ಮದ್ಯ ತುಂಬಿದ 90  ಎಂ ಎಲ್ ನ Hay wards cheers whiskey ಯ  5   ಟೆಟ್ರಾ ಪ್ಯಾಕೆಟ್ ಗಳು  ಇದ್ದು,  ಒಟ್ಟು ಮದ್ಯ  1350  ಎಂ ಎಲ್ ನದ್ದಾಗಿದ್ದು, ಇದರ ಬೆಲೆ 608  ರೂ ಆಗಿರುತ್ತೆ , ಅಂಗಡಿಯ ಮುಂದೆ  ಪರಿಶೀಲಿಸಲಾಗಿ 3) 90 ಎಂ ಎಲ್ ನ 3 ಖಾಲಿ ಟೆಟ್ರಾ ಪ್ಯಾಕೆಟ್ ಗಳು 4)  ಮೂರು  ಪ್ಲಾಸ್ಟಿಕ್ ಲೋಟಗಳು ಇರುತ್ತವೆ. ಸದರಿ ಆಸಾಮಿಯನ್ನು ಮದ್ಯಪಾನ ಮಾಡಿಕೊಡಲು ಸ್ಥಳಾವಾಕಾಶ ಮಾಡಿಕೊಡಲು ಯಾವುದೇ ಪರವಾನಿಗೆ ಇದೇಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾನೆ. ಮಾಲಾದ  1) 180 ಎಂ ಎಲ್ ಸಾಮರ್ಥ್ಯದ  ಮದ್ಯ ತುಂಬಿದ   ಓಲ್ಡ್ ತವರಿನ್ ವಿಸ್ಕಿಯ 5 ಟೆಟ್ರಾ ಪ್ಯಾಕೆಟಟ್ ಗಳು  2) ಮದ್ಯ ತುಂಬಿದ 90  ಎಂಲ್ ನ Hay wards cheers whiskey ಯ  5   ಟೆಟ್ರಾ ಪ್ಯಾಕೆಟ್ ಗಳು 3) 90 ಎಂ ಎಲ್ ನ 3 ಖಾಲಿ ಟೆಟ್ರಾ ಪ್ಯಾಕೆಟ್ ಗಳು 4)  ಮೂರು  ಪ್ಲಾಸ್ಟಿಕ್ ಲೋಟಗಳು ಇರುತ್ತವೆ  ಪಂಚರ ಸಮಕ್ಷಮ  ಮದ್ಯಾಹ್ನ 2.30 ಗಂಟೆಯಿಂದ  3.00 ಗಂಟೆಯವರೆವಿಗು  ಪಂಚರ ಸಮಕ್ಷಮ ಅಮಾನತ್ತು  ಪಡಿಸಿಕೊಂಡಿರುತ್ತೆ. ಮಾಲನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ವಶಕ್ಕೆ ನೀಡಿ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ 14/09/2021 ರಂದು 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 302 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರ ಪಡೆದು ಠಾಣಾ ಮೊ.ಸಂ 236/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

23. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 222/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:12/09/2021 ರಂದು  ಸಂಜೆ 5-00 ಗಂಟೆಗೆ ಗುಡಿಬಂಡೆ  ಪೊಲೀಸ್ ಠಾಣೆಯ ಎ.ಎಸ್.ಐ. ಚಂದ್ರಶೇಖರ್ ರವರು ಠಾಣೆಯಲ್ಲಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:12/09/2021 ರಂದು  ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ತನಗೆ  ಠಾಣಾ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಹೆಚ್.ಸಿ.-73 ಶ್ರೀ ಹನುಮಂತರಾಯಪ್ಪ ರವರು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಚಿಕ್ಕಬಳ್ಳಾಪುರ ತಾಲ್ಲೂಕು ಉಪ್ಪಕುಂಟಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿರುತ್ತೆಂತ ತಿಳಿಸಿದರು ಅದರಂತೆ ನಾನು, ಠಾಣೆಯಲ್ಲಿದ್ದ ಸಿಬ್ಬಂದಿಗಳಾದ ಪಿಸಿ-141 ಸಂತೋಷ್ ಕುಮಾರ್ ಹೆಚ್.ಸಿ-127 ಕರಿಬಾಬು, ಹೆಚ್.ಸಿ-102 ಶ್ರೀ ಆನಂದ, ಹೆಚ್.ಸಿ 23 ಕುಮಾರ ನಾಯಕ, ಪಿಸಿ 198 ನಾಗೇಶ ರವರು ದ್ವಿಚಕ್ರವಾಹನಗಳಲ್ಲಿ  ಚಿಕ್ಕಬಳ್ಳಾಪುರ ತಾಲ್ಲೂಕು ಉಪ್ಪಕುಂಟಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಮದ್ಯಾಹ್ನ 2-30 ಗಂಟೆಗೆ ಹೋಗಿ ಅಲ್ಲಿದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ, ರವರನ್ನು ಹಾಗೂ ಅಲ್ಲಿಯೇ ಇದ್ದ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ಉಪ್ಪಕುಂಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ  ಮಾಹಿತಿ ಬಂದಿದ್ದು,  ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ನಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸುತ್ತುವರೆದು 100/-ರೂ ಅಂದರ್ ಎಂತಲೂ 100/- ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಮದ್ಯಾಹ್ನ 2-45 ಗಂಟೆಗೆ  ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ದಾಳಿ ಮಾಡಿದಾಗ ಕೆಲವರು ಸ್ಥಳದಿಂದ ಹೋಡಿ ಹೋಗಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಆದಿನಾರಾಯಣ ಬಿನ್ ಲೇಟ್ ಚಿಕ್ಕಹನುಮಂತಪ್ಪ, 68 ವರ್ಷ, ಹರಿಜನ ಜನಾಂಗ, ಜಿರಾಯ್ತಿ, ಉಪ್ಪಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 2) ಹುಸೇನ್ ಬಿನ್ ಹಸೇನ್ 34 ವರ್ಷ, ಮುಸ್ಲಿಂ ಜನಾಂಗ, ಬಡಗಿ ಕೆಲಸ, ರೇಣುಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 3) ನೂರುಲ್ಲಾ ಬಿನ್ ಸುಬಾನ್ ಸಾಬ್, 32 ವರ್ಷ, ಮುಸ್ಲಿಂ ಜನಾಂಗ, ಬಡಗಿ ಕೆಲಸ, ರೇಣುಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ಜಯರಾಮಪ್ಪ ಬಿನ್ ಅಶ್ವತ್ಥಪ್ಪ 38 ವರ್ಷ, ಬೋವಿ ಜನಾಂಗ, ವೀಳ್ಯದೆಲೆ ವ್ಯಾಪಾರ, ಉಪ್ಪಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂತ ತಿಳಿಸಿದ್ದು, ಸದರಿಯವರನ್ನು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಮನ್ಸೂರ್ ಬಿನ್ ಮಹಬೂಬ್ 25 ವರ್ಷ, ಮುಸ್ಲಿಂ ಜನಾಂಗ, ಬಡಗಿ ಕೆಲಸ, ರೇಣುಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ವೆಂಕಟೇಶ 25 ವರ್ಷ, ಬೋವಿಜನಾಂಗ, ಚಿಕ್ಕಥಮ್ಮನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು 3) ಆನಂದ ಬಿನ್ ವೆಂಕಟರಾಯಪ್ಪ, 25 ವರ್ಷ, ಬೋವಿ ಜನಾಂಗ, ಬೊಮ್ಮಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 4) ರಾಜೇಶ್ ಬಿನ್ ಕಾಮರೆಡ್ಡಿ 25 ವರ್ಷ ವಕ್ಕಲಿಗರು ಭತ್ತಲಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, 5) ಮುನೇಂದ್ರ ಬಿನ್ ನಾರಾಯಣಪ್ಪ, 22 ವರ್ಷ, ವಕ್ಕಲಿಗರು ಚಾಲಕ ವೃತ್ತಿ ಕೊಮ್ಮಲಮರಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 6) ಜಮೀರ್ ಬಿನ್ ಶಮೀ  32 ವರ್ಷ, ಮುಸ್ಲಿಂ ಜನಾಂಗ, ಪೇಟಿಂಗ್  ಕೆಲಸ, ರೇಣುಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 7) ನಾಗ ಬಿನ್ ಶಿವಪ್ಪ 30 ವರ್ಷ, ವಕ್ಕಲಿಗರು ಕೊಮ್ಮಲಮರಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು 8) ವೆಂಕಟೇಶ ಬಿನ್ ಬುಡ್ಡಪ್ಪ, 35 ವರ್ಷ, ಬಂಡೆ ಕೆಲಸ ಉಪ್ಪಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  9) ನವೀನ ಬಿನ್ ವೆಂಕಟೇಶಪ್ಪ, 28 ವರ್ಷ, ಬೋವಿ ಜನಾಂಗ, ಉಪ್ಪಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂದು ತಿಳಿಸಿದರು, ಸ್ಥಳದಲ್ಲಿ ಪಣವಾಗಿಟ್ಟಿದ್ದ 1050/- (ಒಂದು ಸಾವಿರ ಐವತ್ತು) ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಮದ್ಯಾಹ್ನ  3-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ಮಾಲನ್ನು ಪಂಚನಾಮೆಯೊಂದಿಗೆ ಸಂಜೆ 4-00 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 5-00 ಗಂಟೆಗೆ ನೀಡುತ್ತಿದ್ದು, ಆರೋಪಿತರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ದೂರಿನ ಮೇರೆಗೆ ಠಾಣಾ NCR No 285/2021 ರಂತೆ ದಾಖಲು ಮಾಡಿಕೊಂಡು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಳ್ಳುಲು ಅನುಮತಿಯನ್ನು ಪಡೆದುಕೊಂಡು ಈ ದಿನ ದಿನಾಂಕ 13/09/2021 ರಂದು ಸಂಜೆ 4-00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

24. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 223/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:12/09/2021 ರಂದು  ಸಂಜೆ 7-30 ಗಂಟೆಗೆ ಗುಡಿಬಂಡೆ  ಪೊಲೀಸ್ ಠಾಣೆಯ ಎ.ಎಸ್.ಐ. ಚಂದ್ರಶೇಖರ್ ರವರು ಠಾಣೆಯಲ್ಲಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:12/09/2021 ರಂದು  ಸಂಜೆ 5-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ನನಗೆ  ಠಾಣಾ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಹೆಚ್.ಸಿ.-73 ಶ್ರೀ ಹನುಮಂತರಾಯಪ್ಪ ರವರು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ತಾಲ್ಲೂಕು ಚದಮನಹಳ್ಳಿ ಗ್ರಾಮದ ಅರಣ್ಯದಲ್ಲಿ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿರುತ್ತೆಂತ ತಿಳಿಸಿದರು ಅದರಂತೆ ನಾನು, ಠಾಣೆಯಲ್ಲಿದ್ದ ಸಿಬ್ಬಂದಿಗಳಾದ ಪಿಸಿ-141 ಸಂತೋಷ್ ಕುಮಾರ್ ಹೆಚ್.ಸಿ-127 ಕರಿಬಾಬು, ಹೆಚ್.ಸಿ-102 ಶ್ರೀ ಆನಂದ, ಪಿಸಿ 198 ನಾಗೇಶ ರವರು ದ್ವಿಚಕ್ರವಾಹನಗಳಲ್ಲಿ  ಗುಡಿಬಂಡೆ ಟೌನ್ ಮಾರುತಿ ಸರ್ಕಲ್ ಬಳಿ  ಸಂಜೆ 5-15 ಗಂಟೆಗೆ ಹೋಗಿ ಅಲ್ಲಿದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ, ರವರನ್ನು ಹಾಗೂ ಅಲ್ಲಿಯೇ ಇದ್ದ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ಗುಡಿಬಂಡೆ ತಾಲ್ಲೂಕು ಚದಮನಹಳ್ಳಿ ಗ್ರಾಮದ ಅರಣ್ಯದಲ್ಲಿ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ  ಮಾಹಿತಿ ಬಂದಿದ್ದು,  ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ನಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸುತ್ತುವರೆದು 100/-ರೂ ಅಂದರ್ ಎಂತಲೂ 100/- ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಂಜೆ 5-30 ಗಂಟೆಗೆ  ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ದಾಳಿ ಮಾಡಿದಾಗ ಕೆಲವರು ಸ್ಥಳದಿಂದ ಹೋಡಿ ಹೋಗಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶ್ರೀನಿವಾಸ ಬಿನ್ ಲೇಟ್ ಜಿ.ವಿ ಮುನಿಯಪ್ಪ, 46 ವರ್ಷ, ಬಲಜಿಗ ಜನಾಂಗ, ಲಾರಿಚಾಲಕ  7 ನೇ ವಾರ್ಡ್  ಗುಡಿಬಂಡೆ ಟೌನ್, 2) ವೆಂಕಟೇಶ ಬಿನ್ ಅಶ್ವತ್ಥಪ್ಪ 39 ವರ್ಷ, ಬೋವಿ ಜನಾಂಗ, ಬಂಡೆ ಕೆಲಸ, 1ನೇ ವಾರ್ಡ್ ಇಂದ್ರಾನಗರ ಗುಡಿಬಂಡೆ ಟೌನ್  ಎಂತ ತಿಳಿಸಿದ್ದು, ಸದರಿಯವರನ್ನು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಹರೀಶ ಬಿನ್ ನರಸಿಂಹರೆಡ್ಡಿ  30 ವರ್ಷ, ವಕ್ಕಲಿಗ ಜನಾಂಗ, ಹಳೇಗುಡಿಬಂಡೆ  ಗ್ರಾಮ, ಗುಡಿಬಂಡೆ  ತಾಲ್ಲೂಕು, 2) ಹರೀಶ ಬಿನ್ ಶ್ರೀನಿವಾಸ ಅಲಿಯಾಸ್ ಕಂಬಿ ಸೀನಪ್ಪ 25 ವರ್ಷ, 1ನೇ ವಾರ್ಡ್ ಇಂದ್ರಾನಗರ ಗುಡಿಬಂಡೆ ಟೌನ್ 3) ಸೋಮಶೇಖರ್  ಬಿನ್ ಮುನಿಸ್ವಾಮಿ 25 ವರ್ಷ, ಬಲಜಿಗ ಜನಾಂಗ, ಚಾಲಕ ವೃತ್ತಿ 11ನೇ ವಾರ್ಡ್ ಗುಡಿಬಂಡೆ ಟೌನ್  ಎಂದು ತಿಳಿಸಿದರು, ಸ್ಥಳದಲ್ಲಿ ಪಣವಾಗಿಟ್ಟಿದ್ದ 2250/- (2 ಸಾವಿರ ಇನ್ನೂರ ಐವತ್ತು) ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಸಂಜೆ 5-30 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ಮಾಲನ್ನು ಪಂಚನಾಮೆಯೊಂದಿಗೆ ಸಂಜೆ 7-00 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 7-30 ಗಂಟೆಗೆ ನೀಡುತ್ತಿದ್ದು, ಆರೋಪಿತರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ NCR No 287/2021 ರಂತೆ ದಾಖಲು ಮಾಡಿಕೊಂಡು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಳ್ಳುಲು ಅನುಮತಿಯನ್ನು ಪಡೆದುಕೊಂಡು ಈ ದಿನ ದಿನಾಂಕ 13/09/2021 ರಂದು ಸಂಜೆ 4-30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

25. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ .94/2021 ಕಲಂ. 4,6 EXPLOSIVE SUBSTANCES ACT, 1908 :-

     ದಿನಾಂಕ 13/09/2021 ರಂದು ಕೆಂಚಾರ್ಲ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಎಂ. ನಾರಾಯಣಪ್ಪ ಆದ ತಾನು ಘನ ನ್ಯಾಯಾಲಯದ ಸನ್ನಿಧಾನದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ 13/09/2021 ರಂದು ತಾನು ಮತ್ತು ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 210 ಕೆ.ಬಿ.ಶಿವಪ್ಪ ರವರೊಂದಿಗೆ ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ಠಾಣಾ ವ್ಯಾಪ್ತಿಯ ಗ್ರಾಮಗಳಾದ ನಡಂಪಲ್ಲಿ, ಮೋಟಮಾಕಲಹಳ್ಳಿ, ಏನಿಗದಲೆ ಕಡೆ ಗಸ್ತು ಮಾಡುತ್ತಿದ್ದಾಗ ಸಂಜೆ 17-00 ಗಂಟೆಯ ಸಮಯದಲ್ಲಿ ಏನಿಗದಲೆ ಗ್ರಾಮದ ಪಂಚಾಯ್ತಿ ಬಳಿಯ ಟಾರ್ ರಸ್ತೆಯಲ್ಲಿ ಯಾರೋ ಒಬ್ಬಾತ  ದ್ವಿಚಕ್ರವಾಹನದಲ್ಲಿ ಏನೋ ವಸ್ತುವನ್ನು ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಅನುಮಾನಾಸ್ವದವಾಗಿ ಬಂದಿದ್ದು  ತಮಗೆ ಅನುಮಾನ ಬಂದು ಸದರಿ ವಾಹನ ಸವಾರರನ್ನು ನಿಲ್ಲಿಸಿ ಪ್ರಶ್ನಿಸಿ ವಾಹನದಲ್ಲಿದ್ದ ಪ್ಲಾಸ್ಟಿಕ್ ಕವರ್ ನಲ್ಲಿನ ವಸ್ತುಗಳನ್ನು ಪರಿಶೀಲಿಸಲಾಗಿ ಅದರಲ್ಲಿ 10 ಒಂದೇ ಗಾತ್ರದ ಆಟಂಬಾಂಬ್ ಪಟಾಕಿಯಂತಹ ಉಂಡೆಗಳು ಇರುವುದು ಕಂಡು ಬಂದಿದ್ದು ಅವುಗಳಲ್ಲಿ ಇರುವುದು ಏನು ಎಂತ ಕೇಳಲಾಗಿ ಸದರಿಯವರು ಕೇಪ್ ( ನಲ್ಲಮಂದು) ಸ್ಪೋಟಕಗಳು ಇರುವುದಾಗಿ ತಿಳಿಸಿದ್ದು ಸದರಿ ಆಸಾಮಿಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ಬೈರೆಡ್ಡಿ ಬಿನ್ ರಾಮಪ್ಪ, 51  ವರ್ಷ, ವಕ್ಕಲಿಗರು, ಅಡುಗೆ ಕಾಂಟ್ರಾಕ್ಟರ್, ಕರಿಯಪ್ಪಲ್ಲಿ ಗ್ರಾಮ, ಕೋಡಿಗಲ್ ಪೋಸ್ಟ್, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿದ್ದು ಸದರಿಯವರನ್ನು ಸ್ಪೋಟಕಗಳ ಸಾಗಾಣಿಕೆ ಬಗ್ಗೆ ವಿಚಾರಿಸಲಾಗಿ ತಾನು ತಮ್ಮ ಜಮೀನಿನಲ್ಲಿ ಬೆಳೆದಿರುವ ಕಡಲೇಕಾಯಿ ಗಿಡಗಳನ್ನು ಕಾಡು ಹಂದಿಗಳು ನಾಶ ಮಾಡುತ್ತಿದ್ದರಿಂದ ಅವುಗಳನ್ನು ಹೇಗಾದರೂ ಸಾಯಿಸಿ ಬೆಳೆ ಕಾಪಾಡಬೇಕೆಂದು ತಿಮರ್ಾನ ಮಾಡಿದ್ದು, ಈ ದಿನ ದಿನಾಂಕ 13/09/2021 ರಂದು ಮಧ್ಯಾಹ್ನ 16-30 ಗಂಟೆ ಸಮಯದಲ್ಲಿ ತಾನು ಏನಿಗದಲೆ ಗ್ರಾಮಕ್ಕೆ ಅಡುಗೆ ಪಟ್ಟಿ ಮಾಡಲು ಹೋಗಿ ಅಲ್ಲಿನ ಹೋಟೆಲ್ ಟೀ ಅಂಗಡಿ ಬಳಿ ಟೀ ಕುಡಿಯುತ್ತಿದ್ದಾಗ ಅಲ್ಲಿದ್ದ ಆಂಧ್ರದ ಪಿಲೇರು ಮೂಲದ ಶ್ರೀನಿವಾಸ ಬಿನ್ ರೆಡ್ಡೆಪ್ಪ, 35 ವರ್ಷ, ಕೊರಚ ಜನಾಂಗ, ಹಾಲಿ ವಾಸ ಏನಿಗದಲೆ ಗ್ರಾಮ ಪೋನ್ ನಂ 7019768986 ರವರು ತನ್ನ ಜೊತೆ ಮಾತಿಗೆ ಮಾತು ಬೆಳಿಸಿದ್ದು, ತಾನು ಕಡಲೇಕಾಯಿ ಗಿಡಗಳನ್ನು ಕಾಡುಹಂದಿಗಳು ನಾಶ ಮಾಡುತ್ತಿರುವ ಬಗ್ಗೆ ತಿಳಿಸಿದಾಗ ಆತನು ತನ್ನ ಬಳಿ ಕೇಪ್ (ನಲ್ಲಮಂದು)  ಸ್ಪೋಟಕಗಳು ಇರುವುದಾಗಿ ಅವುಗಳನ್ನು ಭೂಮಿಯಲ್ಲಿ ಹುದುಗಿಸಿಟ್ಟರೆ ಅಹಾರ ಅರಿಸಿಕೊಂಡು ಬರುವ ಕಾಡುಹಂದಿಗಳು ಸ್ಟೋಟಕಗಳನ್ನು ತಿಂದು ಸಾಯುವುದಾಗಿ  ತಿಳಿಸಿ ತನ್ನೊಂದಿಗೆ ಗುಡಿಸಲು ಬಳಿಗೆ ಕರೆದುಕೊಂಡು ಹೋಗಿ ಅಲ್ಲಿ 2000/- ರೂ ಪಡೆದುಕೊಂಡು 10  ಕೇಪ್ (ನಲ್ಲಮಂದು)  ಸ್ಪೋಟಕಗಳನ್ನು ನೀಡಿದಾಗ ಸದರಿಯವುಗಳನ್ನು  ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾರೆ. ಸದರಿಯವರನ್ನು ಸ್ಪೋಟಕಗಳನ್ನು ಸಾಗಾಣಿಕೆ ಮಾಡಲು ಯಾವುದಾದರು ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಮ್ಮ ಬಳಿ ಯಾವುದೇ ರೀತಿಯ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು ಅವರುಗಳು ಬಂದಿದ್ದ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ದ್ವಿಚಕ್ರ ವಾಹನವು  ಹಿರೋಹೋಂಡಾ ಸಿಡಿ-100 ದ್ವಿಚಕ್ರ ವಾಹನವಾಗಿದ್ದು ನೊಂದಣಿ ಸಂಖ್ಯೆ ಕೆಎ-02-ಇ-5233 ಆಗಿದ್ದು ಸದರಿ ಆಸಾಮಿ ಯಾವುದೇ ಪರವಾನಿಗೆ ಇಲ್ಲದೆ ಸ್ಪೋಟಕಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದರ ಮೇರೆಗೆ ಸಂಜೆ 17-15 ರಿಂದ 18-15 ಗಂಟೆಯವರೆಗೆ ಮಹಜರ್ ಮೂಲಕ ಸದರಿ ಸ್ಟೋಟಕಗಳು ಹಾಗೂ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆಸಾಮಿಯ  ಮುಖಾಂತರ ಆತನು ತಂದಿದ್ದ ಸ್ಪೋಟಕಗಳನ್ನು ಠಾಣೆಯ ಬಳಿಗೆ ದ್ವಿಚಕ್ರವಾಹನದಲ್ಲಿ ತಂದು ಠಾಣೆಯ ಹಿಂಭಾಗದಲ್ಲಿ ಇರುವ ಖಾಲಿ ಕಟ್ಟಡದಲ್ಲಿ ದಾಸ್ತಾನು ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಸಂಜೆ 19-00 ಗಂಟೆಗೆ ಠಾಣೆಗೆ ಬಂದು ಸದರಿ ಆರೋಪಿಗಳ ವಿರುದ್ದ ಠಾಣಾ ಮೊ.ಸಂ 94/2021 ಕಲಂ 4.6 Explosive Substances act 1908 ರೀತ್ಯ ಕೇಸು ದಾಖಲಿಸಿರುವುದಾಗಿರುತ್ತೆ.

Last Updated: 14-09-2021 07:02 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080