ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 87 ಕೆ.ಪಿ ಆಕ್ಟ್ :-

   ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:13/08/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಬೇಟಿ ಕರ್ತವ್ಯದಲ್ಲಿ ಇರಗಂಪಲ್ಲಿ ಗ್ರಾಮದಲ್ಲಿ ಇದ್ದಾಗ ಠಾಣಾ ವ್ಯಾಪ್ತಿಯ ಯಗವಕೋಟೆ ಗ್ರಾಮದ ಕೆರೆಯ ಅಂಗಳದಲ್ಲಿ ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಗೆ ಪೋನ್ ಮಾಡಿ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ, ಹೆಚ್.ಸಿ 176 ಶ್ರೀ.ಮುನಿರಾಜು, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿಸಿ 262 ಶ್ರೀ.ಅಂಬರೀಶ್, ಪಿ.ಸಿ 416 ಸಚಿನ್ ಕುಮಾರ್ ಬೋಲ್ಗೊಂಡ ರವರುಗಳನ್ನು ಇರಗಂಪಲ್ಲಿ ಗ್ರಾಮದ ಬಳಿಗೆ ಬರಮಾಡಿಕೊಂಡು ನಾನು ಸಿಬ್ಬಂದಿಯೊಂದಿಗೆ ಯಗವಕೋಟೆ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯೊಂದಿಗೆ ನಾವುಗಳು ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನ 4-00  ಗಂಟೆಗೆ  ಯಗವಕೋಟೆ ಗ್ರಾಮದ ಕೆರೆಯ ಅಂಗಳಕ್ಕೆ ಹೋಗಿ ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನಾವುಗಳು ಸ್ವಲ್ಪ ದೂರ ಮುಂದೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಗವಕೋಟೆ ಗ್ರಾಮದ ಕೆರೆಯ ಅಂಗಳದಲ್ಲಿ ಒಂದು ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ವೃತ್ತಾಕಾರದಲ್ಲಿ ಗುಂಪಾಗಿ ಕುಳಿತುಕೊಂಡು ಅಂದರ್ 100 ರೂ ಬಾಹರ್ 100 ರೂ ಎಂದು ಕೂಗುಗಳನ್ನು ಇಡುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಗುಂಪನ್ನು ಸುತ್ತುವರೆದು ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಸೂಚಿಸಿದರೂ ಸಹ ಸದರಿಯವರು ಓಡಿ ಹೋಗಲು ಯತ್ನಿಸಿದ್ದು ಅವರುಗಳನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು ಅವರುಗಳ ಹೆಸರು ಮತ್ತು ವಿಳಾಸಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಲಾಗಿ 1)ಶ್ರೀ.ಲೋಕೇಶ್ ಬಿನ್ ವೆಂಕಟರವಣಪ್ಪ, 35ವರ್ಷ, ನಾಯಕರು, ಕೂಲಿ ಕೆಲಸ, ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು 997284884, 2) ಶ್ರೀ.ಮುರಳಿ ಬಿನ್ ಲೇಟ್ ವಿಶ್ವೇಶ್ವರ ರಾವ್, 45ವರ್ಷ, ಬ್ರಾಹ್ಮಣರು, ಅಡುಗೆ ಕೆಲಸ, ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು 9686338772, 3) ಶ್ರೀ.ಅಂಬರೀಶ ಬಿನ್ ನಾರಾಯಣಸ್ವಾಮಿ, 26ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು 9591154024, 4) ಶ್ರೀ.ಪ್ರಸಾದ್ ಬಿನ್ ಲೇಟ್ ನಾರಾಯಣಸ್ವಾಮಿ, 28ವರ್ಷ. ನಾಯಕರು, ಕೂಲಿ ಕೆಲಸ, ಯಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು 8861460130, 5) ವೆಂಕಟರವಣಪ್ಪ ಬಿನ್ ಲೇಟ್ ಗೋವಿಂದಪ್ಪ, 40ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವೈ ಕುರುಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, 9611356579, 6) ಶ್ರೀ.ಹರೀಶ ಬಿನ್ ಶ್ರೀರಾಮಪ್ಪ, 24ವರ್ಷ, ಈಡಿಗ ಜನಾಂಗ, ಕೂಲಿ ಕೆಲಸ, ಗುಂತೂರುಗಡ್ಡ ಗ್ರಾಮ, ಚಿಂತಾಮಣಿ ತಾಲ್ಲೂಕು 7) ಶ್ರೀ.ಲಕ್ಷ್ಮಿನಾರಾಯಣ ಬಿನ್ ಚಿನ್ನಪ್ಪ, 30ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ತಮ್ಮನಾಯಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 9964014995 ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಪೀಟ್ ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಪೀಟ್ ಎಲೆಗಳಿದ್ದು, ನಗದು ಹಣ ಒಟ್ಟು 2760/- ರೂಗಳಿರುತ್ತೆ ನಂತರ ಇಸ್ಪೀಟ್ ಜೂಜಾಟವಾಡುತ್ತಿದ್ದ 7 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 2760 /- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 4-15 ಗಂಟೆಯಿಂದ ಸಂಜೆ 5-15 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 6-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 150/2021 ರಂತೆ ದಾಖಲಿಸಿಕೊಂಡು ನಂತರ ಸದರಿ ಎನ್.ಸಿ.ಆರ್ ನಲ್ಲಿ ಕಂಡ ಮಾಲು ಮತ್ತು ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡಂತೆ ಪ್ರಕರಣ ದಾಖಲಿಸಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.359/2021 ಕಲಂ. 323,324,504,506,34 ಐ.ಪಿ.ಸಿ :-

    ದಿನಾಂಕ: 13/08/2021 ರಂದು ಸಂಜೆ 6.00 ಗಂಟೆಗೆ ಪಿರ್ಯಾಧಿದಾರರಾದ ಅನಿಲ್ ಕುಮಾರ್ ಬಿನ್ ಶಿವಾರೆಡ್ಡಿ, 26 ವರ್ಷ, ವಕ್ಕಲಿಗರು, ಜಿರಾಯ್ತಿ, ಸಿಂಗಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯವರು ಒಟ್ಟು ನಾಲ್ಕು ಜನ ಗಂಡು ಮಕ್ಕಳಿದ್ದು ಮೊದಲನೇ ತಮ್ಮ ತಂದೆ ಶಿವಾರೆಡ್ಡಿ, ಎರಡನೇ ವೆಂಕಟೇಶಪ್ಪ, ಮೂರನೇ ನಾಗರಾಜು ಮತ್ತು ನಾಲ್ಕನೇ ಆಂಜನೇಯರೆಡ್ಡಿ ರವರಾಗಿರುತ್ತಾರೆ. ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತಮ್ಮ ಪಿತ್ರಾರ್ಜಿತ ಆಸ್ತಿ ಇನ್ನೂ ವಿಭಾಗಗಳು ಆಗದೇ ಇದ್ದು, ಎಲ್ಲಾ ಆಸ್ತಿ ತಮ್ಮ ತಾತನ ಹೆಸರಿನಲ್ಲಿಯೇ ಇರುತ್ತದೆ. ಆ ಪೈಕಿ ತಾವು ಸುಮಾರು 09 ಗುಂಟೆ ಜಮೀನಿನಲ್ಲಿ ಕುಂಬಳಕಾಯಿ ಬೆಳೆಯನ್ನು ಇಟ್ಟಿರುತ್ತೇವೆ. ಸದರಿ ತಾವು ಬೆಳೆ ಇಟ್ಟಿರುವ ಜಮೀನಿನಲ್ಲಿ ತಮ್ಮ ಚಿಕ್ಕಪ್ಪನಾದ ವೆಂಕಟೇಶಪ್ಪ ಮತ್ತು ಆತನ ಮಗ ಮನೋಜ್ ರವರು ಟ್ರಾಕ್ಟರ್ ಅನ್ನು ಓಡಿಸಿದ್ದು ಇದರಿಂದ ತಮ್ಮ ಬೆಳೆ ಹಾಳಾಗಿದ್ದು ಈ ಹಿನ್ನಲೆಯಲ್ಲಿ ತಾನು ಮತ್ತು ತನ್ನ ತಂದೆ ಶಿವಾರೆಡ್ಡಿರವರು ದಿನಾಂಕ: 07/08/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಮೇಲ್ಕಂಡ ತಮ್ಮ ಕುಂಬಳಕಾಯಿ ಬೆಳೆಯ ಜಮೀನಿನ ಬಳಿ ಇದ್ದಾಗ ಮೇಲ್ಕಂಡ ವೆಂಕಟೇಶಪ್ಪ ಮತ್ತು ಆತನ ಮಗ ಮನೋಜ್ ರವರು ಅಲ್ಲಿಗೆ ಬಂದಿದ್ದು ಆಗ ತಾನು ಅವರನ್ನು ಕುರಿತು “ಏಕೆ ನಮ್ಮ ಬೆಳೆಯಲ್ಲಿ ಓಡಾಡಿ ಬೆಳೆ ನಾಶ ಮಾಡುತ್ತಿದ್ದಿರಾ” ಎಂದು ಕೇಳಿದ್ದು ಆಗ ವೆಂಕಟೇಶಪ್ಪ ಮತ್ತು ಆತನ ಮಗ ಮನೋಜ್ ರವರು ತಮ್ಮನ್ನು ಕುರಿತು “ಏನೋ ಬೋಳಿ ನನ್ನ ಮಕ್ಕಳೆ ನಮಗೆ ಇಲ್ಲಿ ಓಡಾಡ ಬೇಡ ಎಂದು ಹೇಳುತ್ತಿರಾ ಎಷ್ಟು ದೈರ್ಯ ನಿನಗೆ” ಎಂದು ಅವಾಶ್ಚ ಶಬ್ದಗಳಿಂದ ಬೈದು, ಆ ಪೈಕಿ ತನ್ನ ಚಿಕ್ಕಪ್ಪರವರಾದ ವೆಂಕಟೇಶಪ್ಪ ರವರು ಯಾವುದೋ ನೀಲಗಿರಿ ದೊಣ್ಣೆಯಿಂದ ತನ್ನ ಬಲಗೈಗೆ ಹೊಡೆದು ಗಾಯವನ್ನುಂಟು ಮಾಡಿದರು ನಂತರ ಮನೋಜ್ ರವರು ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತನ್ನ ತಾತ ವೆಂಕಟರೆಡ್ಡಿ, ತನ್ನ ಮತ್ತೊಬ್ಬ ಚಿಕ್ಕಪ್ಪರವರಾದ ಆಂಜನೇಯರೆಡ್ಡಿ ರವರು ಸ್ಥಳಕ್ಕೆ ಬಂದು ಬಂದು ಅವರು ಸಹ ತಮ್ಮನ್ನು ಅವಾಶ್ಚ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಕೈಗಳಿಂದ ತನಗೆ ಮತ್ತು ತನ್ನ ತಂದೆ ಶಿವಾರೆಡ್ಡಿರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ವೆಂಕಟರೆಡ್ಡಿ ಬಿನ್ ವೆಂಕಟೇಶಪ್ಪ ಮತ್ತು ಮುನಿರಾಜು ಬಿನ್ ಕೃಷ್ಣಾರೆಡ್ಡಿ ರವರು ಬಂದು ಜಗಳ ಬಿಡಿಸಿದರು. ನಂತರ ಮೇಲ್ಕಂಡವರು ಅಲ್ಲಿಂದ ಹೋಗುವಾಗ “ಈ ದಿನ ಉಳಿದುಕೊಂಡಿದ್ದಿರಾ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ನಂತರ ಗಾಯಗೊಂಡಿದ್ದ ತಾವು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ಸದರಿ ಗಲಾಟೆಯ ವಿಚಾರವಾಗಿ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆಗೂ ಸಹ ಮೇಲ್ಕಂಡವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.185/2021 ಕಲಂ. 279 ಐ.ಪಿ.ಸಿ :-

     ದಿನಾಂಕ 13/06/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ   ಶ್ರೀ ಸತೀಶ್ ಬಿನ್ ರಾಜಾರಾಂ,     26 ವರ್ಷ,  ಜಾಟ್ ಜನಾಂಗ,  ಎಸ್.ಬಿ.ಸಿ   ಲಾಜಿಸ್ಟಿಕ್ ಕಂಪನಿಯಲ್ಲಿ ಕೆಲಸ,  ವಾಸ ತುಮಕೂರು ರಸ್ತೆ,  ಮಾದನಾಯಕನಹಳ್ಳಿ,  ನೆಲಮಂಗಲ , ಬೆಂಗಳೂರು     ಗ್ರಾಮಾಂತರ ಜಿಲ್ಲೆ. ಮೊ. 9467775553 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು  ಬೆಂಗಳೂರು  ಗ್ರಾಮಾಂತರ ಜಿಲ್ಲೆ ನೆಲಮಂಗಲ ,  ಮಾದನಾಯಕನಹಳ್ಳಿ ತುಮಕೂರು ರಸ್ತೆಯಲ್ಲಿ  ಇರುವ  ಎಸ್.ಬಿ.ಸಿ   ಲಾಜಿಸ್ಟಿಕ್ ಕಂಪನಿಯಲ್ಲಿ ಕೆಲಸ  ಮಾಡುತ್ತಿದ್ದು  ದಿನಾಂಕ  12/06/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಗೆ ತಮ್ಮ ಕಂಪನಿಯ ಹೆಚ್.ಆರ್-38-ಎಬಿ-6135 ನೊಂದಣೀ ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಾರಿ ಚಾಲಕ ತನಗೆ  ದೂರವಾಣಿ ಕರೆ ಮಾಡಿ ತಾನು ಹೈದರಾಬಾದ್ ನಿಂದ  ಕೊಚ್ಚೀನ್ ಗೆ ಹೋಗಲು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಜಯಂತಿ ಗ್ರಾಮದ ಬಳಿ  ಹೈದರಾಬಾದ್ ನಿಂದ ಬೆಂಗಳೂರು ಕಡೆಗೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಇದೇ ದಿನ  ಸುಮಾರು 6-00  ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಎಡಭಾಗದ ರಸ್ತೆಯಲ್ಲಿ ಎ.ಪಿ.-29-ಟಿಬಿ-9200  ನೊಂದಣಿ ಸಂಖ್ಯೆಯ ಲಾರಿ ವಾಹನದ ಚಾಲಕ ತನ್ನ ವಾಹನವನ್ನು ಯಾವುದೇ  ಮುನ್ಸೂಚನೆಗಳನ್ನು ನೀಡದೇ  ಅಜಾಗರೂಕತೆಯಿಂದ ನಿಲ್ಲಿಸಿದ್ದು, ಹೆಚ್.ಆರ್-38-ಎಬಿ-6135 ನೊಂದಣೀ ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಾರಿ ಚಾಲಕ ತನ್ನ ಲಾರಿ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮೇಲ್ಕಂಡ  ಎ.ಪಿ.-29-ಟಿಬಿ-9200  ನೊಂದಣಿ ಸಂಖ್ಯೆಯ ಲಾರಿಗೆ  ಹಿಂಬದಿಯಲ್ಲಿ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು  ಯಾರಿಗೂ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ತಾನು ಈ ವಿಚಾರವನ್ನು ತಮ್ಮ ಕಂಪನಿಯಲ್ಲಿ ತಿಳಿಸಿದ್ದು  ತನಗೆ ತಮ್ಮ ಕಂಪನಿಯು ದಿನಾಂಕ 13/08/2021 ರಂದು ದೂರು ನೀಡಲು ತಿಳಿಸಿದ್ದರಿಂದ  ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು  ಅಜಾಗರೂಕತೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಎ.ಪಿ.-29-ಟಿಬಿ-9200  ನೊಂದಣಿ ಸಂಖ್ಯೆಯ ಲಾರಿ ವಾಹನದ  ಚಾಲಕನ ವಿರುದ್ದ ಮತ್ತು ಅತಿವೇಗವಾಗಿ ಚಾಲನೆ ಮಾಡಿದ ಹೆಚ್.ಆರ್-38-ಎಬಿ-6135 ನೊಂದಣೀ ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಾರಿ ಚಾಲಕನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

4. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.186/2021 ಕಲಂ. ಮನುಷ್ಯ ಕಾಣೆ :-

      ದಿನಾಂಕ 14/08/2021 ರಂದು  ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಮಲಕ್ಷ್ಮಮ್ಮ ಕೊಂ ರಾಮಚಂದ್ರಪ್ಪ, 45 ವರ್ಷ, ದೊಂಬರ ಜನಾಂಗ, ಕೂಲಿ ಕೆಲಸ, ವಾಸ ಚದರ್ಲಹಳ್ಳಿ ಗ್ರಾಮ, ಸೋಮೇನಹಳ್ಳಿ ಹೋಬಳಿ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ  ತನಗೆ ಒಂದು ಶ್ರೀನಿವಾಸ , ಎರಡನೇ ಮಗಳಾದ ಶ್ಯಾಮಲಾ  ಎಂಬ ಬ್ಬರು ಮಕ್ಕಳಿದ್ದು,  ತನ್ನ ಮಗ ಗಾರೆ ಕೆಲಸ ಮಾಡುತ್ತಿದ್ದು ಬೇರೆ ಗ್ರಾಮಗಳಿಗೆ ಹೋಗಿ ಕೆಲಸ ಮಾಡಿಕೊಂಡು ವಾಪಸ್ಸು ಮನೆಗೆ ಬರುತ್ತಿದ್ದನು. ದಿನಾಂಕ 09/08/2021 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುತ್ತೆನಂತ ಹೇಳಿ ಹೋದವನು ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲ.  ವಿಚಾರ ಕೆಳಿ ತಿಳಿಯಲಾಗಿ ನಮ್ಮ ಗ್ರಾಮದ ಶಾಂತಮ್ಮ  ರವರ ಬಾಬತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ಭಾಗಿಯಾಗಿದ್ದು ವಾಹನವನ್ನು  ಬಿಡಿಸಿಕೊಂಡು ಬರುತ್ತೇನೆಂದು ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ  ಬಂಡೋಳಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ವೆಂಕಟರವಣಪ್ಪ ರವರ ಮೆನಯಿಂದ ದಿನಾಂಕ 12/08/2021 ರಂದು ಯಾವುದೋ ಸಮಯದಲ್ಲಿ ತನ್ನ ಮಗ ಶ್ರೀನಿವಾಸ ಕಾಣೆಯಾಗಿರುತ್ತಾನೆ. ಶ್ರೀನಿವಾಸ ಕಾಣೆರಯಾಗಿರುವ ಬಗ್ಗೆ ತಮ್ಮ ನೆಂಟರ ಮತ್ತು ಶ್ರೀನಿವಾಸ ಗಾರೆ ಕೆಲಸ ಮಾಡುವವರ ಜೊತೆ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗದೇ ಇದ್ದು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ತನ್ನ ಮಗ ಶ್ರೀನಿವಾಸ  ರವರನ್ನು ಪತ್ತೆ ಮಾಡಲು ಕೋರಿ ದೂರು.

 

5. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ: 13-08-2021 ರಂದು ಸಂಜೆ 5-45 ಗಂಟೆಗೆ ಪಿ ಎಸ್ ಐ ಸಾಹೇಬರು ಮಾಲು , ಆರೋಪಿ,ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯನ್ನು ಪಡೆದು ದಾಖಲಿಸಿದ ವರದಿಯ ಸಾರಾಂಶವೇನಂದರೆ,  ದಿನಾಂಕ :13-08-2021ರಂದು ಸಂಜೆ 4-00 ಗಂಟೆಯಲ್ಲಿ ತಾವು ಸಿಬ್ಬಂದಿಯಾದ ಸಿಪಿಸಿ-119 ಗಿರೀಶ್, ಹಾಗೂ ಚಾಲಕ ಎಪಿಸಿ-98 ಶ್ರೀನಾಥ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ- ಕೆಎ-40 ಜಿ-59 ರಲ್ಲಿ ಸೋಮನಾಥಪುರ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ರಾಚವಾರಪಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಪೆಟ್ಟಿಗೆ ಅಂಗಡಿ ಮುಂಭಾಗದಲ್ಲಿ ಸೋಮಶೇಖರರೆಡ್ಡಿ ಬಿನ್ ಸುಬ್ಬಾರೆಡ್ಡಿ ಎಂಬುವವರು ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲವಾಗಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲ್ಕಂಡ ಸೋಮಶೇಖರರೆಡ್ಡಿ ಬಿನ್ ಸುಬ್ಬಾರೆಡ್ಡಿ ರವರ ಪೆಟ್ಟಿಗೆ ಅಂಗಡಿಯ ಬಳಿ ಹೋಗಿ ಜೀಪನ್ನು ನಿಲ್ಲಿಸುತ್ತಿದಂತೆ ಜೀಪನ್ನು ಕಂಡು ಅಂಗಡಿಯ ಮುಂಭಾಗದಲ್ಲಿ ಮಧ್ಯಪಾನ ಮಾಡುತ್ತಿದ್ದ ಯಾರೋ ಒಬ್ಬ ಆಸಾಮಿಯು ಓಡಿ ಹೋಗಿದ್ದು, ಅಂಗಡಿ ಮಂದೆ ಒಬ್ಬ ಆಸಾಮಿಯು ಇದ್ದು ಹೆಸರು ವಿಳಾಸ ಕೇಳಲಾಗಿ ಸೋಮಶೇಖರರೆಡ್ಡಿ ಬಿನ್ ಸುಬ್ಬಾರೆಡ್ಡಿ 41 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ: ಬುದ್ದಲವಾರಿಪಲ್ಲಿ ಗ್ರಾಮ, ಚೇಳೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ML ನ 12 ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಟೆಟ್ರಾ ಪಾಕೇಟಗಳು ( 1 ಲೀಟರ್ 80 MLಮಧ್ಯ, ಅದೆ ಬೆಲೆ ಸುಮಾರು 421/- ರೂ) ಒಂದು ಲೀಟರನ 01 ಖಾಲಿ ಬಾಟಲ್ , 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90ML ನ 02 ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಟೆಟ್ರಾ ಪಾಕೇಟ್ ಇದ್ದು ಸೋಮಶೇಖರರೆಡ್ಡಿ ರವರನ್ನು ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು, ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಸಂಜೆ 04-30 ಗಂಟೆಯಿಂದ 05-15 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಪಂಚನಾಮೆ , ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತದೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.266/2021 ಕಲಂ. 379 ಐ.ಪಿ.ಸಿ:-

      ದಿನಾಂಕ:14-08-2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಪಿರ್ಯಾದಿದಾರರಾದ  ಜೆ.ಕೆ.ಪ್ರಕಾಶ್ ಬಿನ್ ಕೃಷ್ಣಪ್ಪ .ಹೆಚ್  ಸುಮಾರು 41  ವರ್ಷ, ತಿಗಳ, ಕೂಲಿಕೆಲಸ,ವಾಸ: ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ತಾನು ಈಗ್ಗೆ 8 ವರ್ಷದ ಹಿಂದೆ ನಂ: KA-40 U-0440 HERO PASSION PRO  ದ್ವಿಚಕ್ರವಾಹನವನ್ನು ತೆಗೆದುಕೊಂಡಿದ್ದು ಸದರಿ ದ್ವಿಚಕ್ರವಾಹನದ ದಾಖಲಾತಿಗಳು ತನ್ನ ಹೆಸರಿನಲ್ಲಿಯೇ ಇರುತ್ತೆ,  ತಾನು  ತನ್ನ ಬಾಬತ್ತು ದ್ವಿಚಕ್ರವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿಕೊಳ್ಳುತ್ತಿದ್ದು,  ಎಂದಿನಂತೆ  ದಿನಾಂಕ:13-08-2021 ರಂದು ರಾತ್ರಿ ತಾನು ತನ್ನ ಬಾಬತ್ತು ದ್ವಿಚಕ್ರವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ರಾತ್ರಿ 11-30 ಗಂಟೆಯಲ್ಲಿ ತಾನು ತಮ್ಮ ಮನೆಯಲ್ಲಿ ಟಿ.ವಿ.ನೋಡುತ್ತಿದ್ದಾಗ ಮನೆಯ ಹೊರಗಡೆ ತನ್ನ ದ್ವಿಚಕ್ರವಾಹನ ಸ್ಟಾಟ್ ಆದ ಶಬ್ದ ಕೇಳಿಬಂದಿದ್ದು ಆಗ ತಾನು ತಕ್ಷಣ ಮನೆಯಿಂದ ಹೊರಗಡೆ ಬಂದು ನೋಡಲಾಗಿ ಯಾರೋ ಒಬ್ಬ ಆಸಾಮಿ ತನ್ನ ಬಾಬತ್ತು KA-40 U-0440 HERO PASSION PRO ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ತಾನು ಸ್ವಲ್ಪದೂರು ಹಿಂಬಾಲಿಸಿಕೊಂಡು ಹೋಗಿದ್ದು ತಪ್ಪಿಸಿಕೊಂಡು ಹೊರಟು ಹೋಗಿರುತ್ತಾನೆ ಆಗ ತಾನು   ಸುತ್ತಮುತ್ತಲು ಹುಡುಕಾಡಿದರೂ ಪತ್ತೆ ಯಾಗಿರುವುದಿಲ್ಲ ತನ್ನ ಬಾಬತ್ತು KA-40 U-0440 HERO PASSION PRO ದ್ವಿಚಕ್ರವಾಹನವನ್ನು ಯಾರೋ ಒಬ್ಬ ಆಸಾಮಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ತಾನು ತನ್ನ ದ್ವಿಚಕ್ರವಾಹನವನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ದ್ವಿಚಕ್ರವಾಹನವನ್ನು ಮತ್ತು ಕಳ್ಳತನ ಮಾಡಿಕೊಂಡು ಹೋದ ಆಸಾಮಿಯನ್ನು ಪತ್ತೆ ಮಾಡಿ ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:266/2021 ಕಲಂ:379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 14-08-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080