Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 188/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:11.07.2021 ರಂದು ಬೆಳಗ್ಗೆ 9.45 ಗಂಟೆಗೆ ಪಿ.ಎಸ್.ಐ ಶ್ರೀ ಗೋಪಾಲರೆಡ್ಡಿರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಅಸಲು ಧಾಳಿ ಪಂಚನಾಮೆ, ಮಾಲು ಮತ್ತು 6 ಜನ ಆರೋಪಿಗಳು ಮತ್ತು ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ: 11/07/2021 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಹೋಬಳಿ, ಪೊಟ್ಲವಾರಿಪಲ್ಲಿ ಗ್ರಾಮದ ಕೃಷ್ಣರೆಡ್ಡಿ ಬಿನ್ ವೆಂಕಟರಾಮಪ್ಪ ರವರ ಅಂಗಡಿಯ ಮುಂಭಾಗದಲ್ಲಿ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-19 ಮಣಿಕಂಠ, ಪಿಸಿ-103 ಬಯ್ಯರೆಡ್ಡಿ, ಪಿಸಿ-278 ಶಬ್ಬೀರ್, ಪಿಸಿ-344 ಮಹಾಂತೇಶ್, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ, ಪಿಸಿ-423 ಬಸವರಾಜು, ಪಿಸಿ-432 ಮಾಳಪ್ಪ ಮತ್ತು ಜೀಪ್ ಚಾಲಕ ಎ.ಪಿ.ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 537 ರಲ್ಲಿ ಕುಳಿತುಕೊಂಡು ಪೊಟ್ಲವಾರಿಪಲ್ಲಿ ಗ್ರಾಮಕ್ಕೆ ಹೋಗಿ ರಸ್ತೆಯ ಪಕ್ಕದ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ವೆಳಿಗ್ಗೆ 8-30 ಗಂಟೆಗೆ ಮೇಲ್ಕಂಡ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಕೃಷ್ಣರೆಡ್ಡಿ ಬಿನ್ ವೆಂಕಟರಾಮಪ್ಪ ರವರ ಅಂಗಡಿಯ ಮುಂಭಾಗದಲ್ಲಿ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದು ಜೂಜಾಟವಾಡುತ್ತಿದ್ದವರಿಗೆ ಓಡಿ ಹೋಗದಂತೆ ಸೂಚನೆ ನೀಡಿದರು ಸಹ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಕೆಲವರು ಓಡಿ ಹೋದರು. ಉಳಿದಂತೆ ಸ್ಥಳದಲ್ಲಿದ್ದ ಇಸ್ಪೀಟ್ ಜೂಜಾಟವಾಡುತ್ತಿದ್ದವರಿಗೆ ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಮದ್ದಿರೆಡ್ಡಿ ಬಿನ್ ಲೇಟ್ ನಾರಾಯಣಪ್ಪ, 35 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2) ಮಂಜುನಾಥ್ ಬಿನ್ ಲೇಟ್ ಪೆದ್ದನ್ನ, 38 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 3) ವೆಂಕಟೇಶಪ್ಪ ಬಿನ್ ಲೇಟ್ ವೆಂಕಟರಾಮಪ್ಪ, 53 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 4) ಸತೀಶ್ ಬಿನ್ ವೆಂಕಟರೆಡ್ಡಿ, 30 ವರ್ಷ, ಒಕ್ಕಲಿಗರು, ಸೆಲ್ಸ್ ಎಕ್ಸಿಕಿಟ್ಯೂವ್ ಕೆಲಸ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 5) ರಘುನಾಥ್ ಬಿನ್ ಆಂಜಿನಪ್ಪ, 24 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 6) ಶಾಮಣ್ಣ ಬಿನ್ ಲೇಟ್ ನಾಗರಾಜಪ್ಪ, 50 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಪೊಟ್ಲವಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 8400/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಬೆಳಿಗ್ಗೆ 9-45 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ. ಇದು ಅಸಂಜ್ಞೇಯ ಪ್ರಕರನವಾಗಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ  ಮನವಿಯನ್ನು ಸಲ್ಲಿಸಿಕೊಂಡಿರುತ್ತದೆ, ದಿ: 13-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 189/2021 ಕಲಂ. 78(3) ಕೆ.ಪಿ ಆಕ್ಟ್:-

  ದಿನಾಂಕ: 12/07/2021 ರಂದು ಸಂಜೆ 6-45 ಗಂಟೆಗೆ ಜಿ.ಆರ್.  ಗೋಪಾಲರೆಡ್ಡಿ  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 12,07.2021 ರಂದು ಶ್ರೀ ಜಿ.ಆರ್.  ಗೋಪಾಲರೆಡ್ಡಿ  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ಸಂಜೆ 5-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಎಸ್ ಎಲ್ ಎನ್ ಕಟಿಂಗ್ ಶಾಪ್ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿ,ಪಿ.ಸಿ-18 ಅರುಣ್,ಸಿ.ಪಿ.ಸಿ-278 ಶಬೀರ್ ಉರಾನಮನಿ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ   ಜೀಪ್ ಚಾಲಕ ವೆಂಕಟೇಶ್ ಎಹೆಚ್ ಸಿ 14 ರವರೊಂದಿಗೆ  ತಾಲ್ಲೂಕು ಕಛೇರಿಯ ಬಳಿ ಇದ್ದ  ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 5.45  ಗಂಟೆಗೆ ಹೋಗಿ ಕುಂಬಾರ ಪೇಟೆ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಎಸ್, ಎಲ್, ಎನ್, ಕಟಿಂಗ್ ಶಾಪ್ನ ಬಳಿ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 150/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಶಂಕರ ಬಿನ್ ಲೇಟ್ ನರಸಿಂಹಮೂರ್ತಿ, 38 ವರ್ಷ, ಭಜಂತ್ರಿ ಜನಾಂಗ, ಕುಲಕಸಬು, ವಾಸ 17 ನೇ, ವಾರ್ಡ್, ಕಂಚಿಕೋಟೆ ಹತ್ತಿರ, ಬಾಗೇಪಲ್ಲಿ ಟೌನ್ ಎಂತ ತಿಳಿಸಿದ್ದು,  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ ಸಂಜೆ  5-45 ಗಂಟೆಯಿಂದ 6.30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 6.45  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮಜರುಗಿಸಲು ನಿಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-185/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರನವಾಗಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ  ಮನವಿಯನ್ನು ಸಲ್ಲಿಸಿಕೊಂಡಿರುತ್ತದೆ. ದಿ: 13-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 307/2021 ಕಲಂ. 457,380 ಐ.ಪಿ.ಸಿ:-

  ದಿನಾಂಕ: 14/07/2021 ರಂದು ಮದ್ಯಾಹ್ನ 1.30 ಗಂಟೆಗೆ ಕೆ.ಲಕ್ಷ್ಮೀನಾರಾಯಣ್ ಬಿನ್ ಲೇಟ್ ಕೃಷ್ಣಮೂರ್ತಿ, 52 ವರ್ಷ, ಬ್ರಾಹ್ಮಣರು ಜಿರಾಯ್ತಿ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 15 ವರ್ಷಗಳಿಂದ ಇದೇ ತಾಲ್ಲೂಕು ಕೈವಾರ ಹೋಬಳಿ ಶ್ಯಾಮರಾವ್ ಹೊಸಪೇಟೆ ಗ್ರಾಮದ ಬಳಿ ಇರುವ ಮುಜರಾಯಿ ಇಲಾಖೆಗೆ ಸೇರಿದ ಗವಿ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲಿ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸಿಕೊಂಡಿರುತ್ತೇನೆ. ಸದರಿ ದೇವಾಲಯಕ್ಕೆ ಅರ್ಚಕರನ್ನಾಗಿ ಕೈವಾರ ಗ್ರಾಮದ ಕೇಶವಪ್ಪ ರವರನ್ನು ಮತ್ತು ವಾಚ್ ಮೆನ್ ಆಗಿ ಅದೇ ಗ್ರಾಮದ ಅರ್ಜುನ್ ಎಂಬುವರನ್ನು ನೇಮಕ ಮಾಡಿದ್ದು, ಕೇಶವಪ್ಪರವರು ಸದರಿ ದೇವಾಯಕ್ಕೆ ಪ್ರತಿ ದಿನ ಬೆಳಿಗ್ಗೆ 06.00 ಗಂಟೆಗೆ ಬಂದು ಪೂಜೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಸಂಜೆ 6.00 ಗಂಟೆಗೆ ಬೇಗವನ್ನು ಹಾಕಿಕೊಂಡು ವಾಚ್ ಮೆನ್ ಗೆ ಹೇಳಿ ಹೋಗುತ್ತಿರುತ್ತಾರೆ. ಸದರಿ ದೇವಾಲಯದ ಒಳಗೆ ಗರ್ಭಗುಡಿಯ ಮುಂದೆ ಮುಜುರಾಯಿ ಇಲಾಖೆಯಿಂದ ಒಂದು ಕಬ್ಬಿಣದ ಹುಂಡಿಯನ್ನು ಇಟ್ಟಿರುತ್ತಾರೆ. ಹೀಗಿರುವಾಗ ದಿನಾಂಕ:12/07/2021 ರಂದು ಬೆಳಿಗ್ಗೆ 06.00 ಗಂಟೆಗೆ ವಾಚ್ ಮೆನ್ ಅರ್ಜುನ್ ರವರು ತನಗೆ ಪೋನ್ ಮಾಡಿ ಯಾರೋ ಕಳ್ಳರು ದೇವಾಲಯದ ಮುಂಭಾಗದ ಬಾಗಿಲಿನ ಬೀಗವನ್ನು ಹೊಡೆದು ಒಳಗೆ ಪ್ರವೇಶಿಸಿ ಹುಂಡಿಯನ್ನು ಹೊಡೆದು ಅದರಲ್ಲಿನ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂತ ತಿಳಿಸಿದ್ದು ಕೂಡಲೇ ತಾನು ಮತ್ತು ಅರ್ಚಕರಾದ ಕೇಶವಪ್ಪರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ಗರ್ಭಗುಡಿಯ ಮುಂದೆ ಇಟ್ಟಿದ್ದ ಕಬ್ಬಿಣದ ಹುಂಡಿಯನ್ನು ಯಾರೋ ಕಳ್ಳರು ಹೊಡೆದು ಹಾಕಿ ಹುಂಡಿಯಲ್ಲಿರಬಹುದಾದ ಅಂದಾಜು 10,000/- ರೂಗಳನ್ನು ಕಳ್ಳತನ ಮಾಡಿರುತ್ತಾರೆ. ತಾನು ಈ ವಿಚಾರವನ್ನು ತಮ್ಮ ದೇವಾಲಯದ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ತಡವಾಗಿ ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಕಳ್ಳತನವು ದಿನಾಂಕ: 12/07/2021 ರಂದು ಸಂಜೆ 6.00 ಗಂಟೆಯಿಂದ ಮಾರನೇ ದಿನ ದಿನಾಂಕ: 13/07/2021 ರಂದು ಬೆಳಿಗ್ಗೆ 06.00 ಗಂಟೆಯವರೆಗೆ ಸಂಬವಿಸಿದ್ದು, ಕಳ್ಳತನ ಮಾಡಿರುವವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 130/2021 ಕಲಂ. 279,337 ಐ.ಪಿ.ಸಿ:-

  ಪಿರ್ಯಾದಿದಾರರಾದ ಅಸ್ಲಂಪಾಷ ಬಿನ್ ಲೇಟ್ ಇಬ್ರಾಹಿಂ ಎಂಡಬ್ಲೂ ಶಾಲೆ ಪಕ್ಕ ನಾರೆಪ್ಪ ಕುಂಟೆ ರಸ್ತೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವನೆಂದರೆ  ನನ್ನ ಅಣ್ಣನಾದ ಶೇಖ್ ಸರ್ದಾರ್ ಬಿನ್ ಇಬ್ರಾಹಿಂ ಸಾಬ್, 60 ವರ್ಷ, ರವರು ದಿನಾಂಕ: 11/07/2021 ರಂದು ರಾತ್ರಿ ಬೆಂಗಳೂರಿನಿಂದ ಚಿಂತಾಮಣಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸಂಖ್ಯೆ ಕೆಎ40ಎಫ್ 1303 ರಲ್ಲಿ ಪ್ರಯಾಣ ಮಾಡುತ್ತಿದ್ದು ಭಾನುವಾರ ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಕಚೇರಿ ಪಕ್ಕದಲ್ಲಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಉಬ್ಬು ನಲ್ಲಿ ಚಾಲಕಮ ನಿರ್ಲಕ್ಷ ಮತ್ತು ಅಜಾಗರೂಕತೆಯಿಂದ ಸಡನ್ ಬ್ರೇಕ್ ಹಾಕಿದ್ದು ವಾಹನದಲ್ಲಿ ನನ್ನ ಅಣ್ಣ ಶೇಖ್ ಸರ್ದಾರ್ ರವರು ಮುಗುಸಿ ಬಿದ್ದು ನನ್ನ ಅಣ್ಣನ ತಲೆಗೆ ಗಂಭೀರಗಾಯಗಳಾಗಿದ್ದು ಮೂಗು ಕಿವಿಯಲ್ಲಿ ರಕ್ತ ಸ್ರಾವವಾಗಿ ತಲೆಯಲ್ಲಿ ನರಗಳು ಕಟ್ಟಾಗಿ ರಕ್ತ ಹೆಪ್ಪುಗಟ್ಟಿರುತ್ತದೆ ಆದುದರಿಂದ ನಮ್ಮ ಅಣ್ಣನನ್ನು  ತಕ್ಷಣವೇ ಬೆಂಗಳೂರಿನ ಲಿಭಿಯಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ದಾಖಲಾತಿ ಮಾಡಿದ್ದು ಸಂಭಂದಪಟ್ಟ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ವೈದ್ಯರು ಪರೀಕ್ಷಿಸಿ 48 ಗಂಟೆಗಳ ಕಾಲ ತೀರ್ವ ನೀಗಾ ಘಟಕದಲ್ಲಿ ಇರಿಸಿದ್ದು ಪ್ರಜ್ನೆ ಬಂದ ನಂತರ ಚಿಕಿತ್ಸೆಗೆ ಸ್ಪಂದಿಸಬಹುದೆಂದು ಆದರೆ ಆದರೆ ರೋಗಿಯ ಸ್ಥಿತಿ ತುಂಬಾ ಗಂಬೀರವಾಗಿದ್ದು ಯಾವುದೇ ಗ್ಯಾರಂಟಿ ಕೊಡುವುದಿಲ್ಲವೆಂದು ತಿಳಿಸಿರುತ್ತಾರೆ ರಕ್ತ ಸ್ರಾವ ಜಾಸ್ತಿಯಾದ ಕಾರಣ ರೋಗಿಯ ಸ್ಥಿತಿಯು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುತ್ತಾರೆ ಆದ್ದರಿಂದ ಸರ್ಕಾರಿ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 87/2021 ಕಲಂ. 160 ಐ.ಪಿ.ಸಿ:-

  ಈ ದಿನ ದಿನಾಂಕ:14/07/2021 ರಂದು ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ  ಸಿ.ಹೆಚ್.ಸಿ 186 ನರಸಿಂಹಯ್ಯ,  ಸಿ,ಪಿ,ಸಿ 91 ಮಂಜುನಾಥ,  ಸಿ,ಹೆಚ್,ಸಿ 32 ಮಂಜುನಾಥ, ಸಿ.ಪಿ.ಸಿ 451 ರಾಮಾಂಜನೇಯ ಹಾಗೂ ಜೀಫ್ ಚಾಲಕರಾಗಿ ಎ.ಪಿ.ಸಿ 94 ಬೈರಪ್ಪ ರವರೊಂದಿಗೆ ಬೆಳಗ್ಗೆ 9-00  ಗಂಟೆಯಲ್ಲಿ ಗಸ್ತು ಮಾಡಲು ಠಾಣೆಯನ್ನು ಬಿಟ್ಟು ಠಾಣಾ ವ್ಯಾಪ್ತಿಯ ಯಲಗಲಹಳ್ಳಿ, ಚಿಕ್ಕದಿಬ್ಬೂರಹಳ್ಳಿ ಗಸ್ತು ಮಾಡಿಕೊಂಡು ದಿಬ್ಬೂರಹಳ್ಳಿ ಸರ್ಕಲ್ ಬಳಿಗೆ  ಬೆಳಗ್ಗೆ 10-00 ಗಂಟೆಯ ಸಮಯಕ್ಕೆ ಹೋಗುವಷ್ಟರಲ್ಲಿ ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ಯಾರೋ 7-8 ಆಸಾಮಿಗಳು  ಗುಂಪು ಸೇರಿಕೊಂಡು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುವ ರೀತಿಯಲ್ಲಿ ಪರಸ್ಪರ ಒಬ್ಬರಿಗೊಬ್ಬರು ಕೈ ಕೈ ಮಿಲಾಸಿಕೊಳ್ಳುತ್ತಾ ಜೋರಾಗಿ ಒಬ್ಬರನ್ನೊಬ್ಬರು ಲೋಪರ್ನಾಕೊಡುಕಾ, ನೀಯಮ್ಮನೇ ದೆಂಗ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದವರನ್ನು ಕಂಡು ಸುಮ್ಮನಿರುವಂತೆ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಯವರು ಎಚ್ಚರಿಕೆ ನೀಡಿದರೂ ಸಹ ಸದರಿಯವರು ಸುಮ್ಮನಿರದೆ ಎರಡು ಕಡೆಯವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ನೆಮ್ಮದಿ ಮತ್ತು  ಶಾಂತಿಗೆ ಭಂಗ ಉಂಟುಮಾಡುತ್ತಾ ಪರಸ್ಪರ ಒಬ್ಬರನ್ನೊಬ್ಬರು ಅವಾಚ್ಯವಾಗಿ ಬೈದಾಡಿಕೊಳ್ಳುತ್ತಾ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಒಬ್ಬರನ್ನೊಬ್ಬರು ಕೈಗಳಿಂದ ಗುದ್ದಾಡಿಕೊಳ್ಳುತ್ತಾ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದವರ ಪೈಕಿ 5 ಜನರನ್ನು ನಾನು ಮತ್ತು ಸಿಬ್ಬಂದಿಯವರು ಹಿಡಿದು ಕೊಂಡು ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ  1 ನೇ ಪಾರ್ಟಿಯ :- 1ನೇ ದಾದಾಪೀರ್ ಬಿನ್ ಫಕೃದ್ದೀನ್, 33 ವರ್ಷ, ಜಿರಾಯ್ತಿ, ಮುಸ್ಲಿಂ ಜನಾಂಗ, ವಾಸ:ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ಪೋನ್ ನಂಬರ್: 7022651054,   2 ನೇ ಶ್ರೀಧರ ಬಿನ್ ರಂಗಪ್ಪ, 29 ವರ್ಷ, ವ್ಯಾಪಾರ, ಬೆಸ್ತರು, ವಾಸ: ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9113034969 , 3 ನೇ ಮಿಥುನ್ ಬಿನ್ ಮುನಿನಾರಾಯಣಪ್ಪ,28 ವರ್ಷ ಕೆ.ಎಂ.ಎಫ್, ನೌಕರ, ಬೆಸ್ತರು, ವಾಸ: ದಿಬ್ಬೂರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:7975322602 ಎಂದು ಹಾಗೂ ಇವರ ಕಡೆಯವರಾದ ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 4 ನೇ ರಾಜು ಬಿನ್ ರಂಗಪ್ಪ, 26 ವರ್ಷ, ವ್ಯಾಪಾರ, ಬೆಸ್ತರು, ವಾಸ: ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು,  5 ನೇ ನಿಕ್ಕಿಲ್  ಬಿನ್ ಶ್ರೀರಂಗಪ್ಪ, 25 ವರ್ಷ, ಬೆಸ್ತರು, ಮೊಬೈಲ್ ಅಂಗಡಿ ವ್ಯಾಪಾರ ,ವಾಸ: ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿದ್ದು  ನಂತರ 2 ನೇ ಪಾರ್ಟಿಯವರ ಹೆಸರು ಮತ್ತು ವಿಳಾಸ ಕೇಳಲಾಗಿ :-  6 ನೇ ಸುನೀಲ್ ಬಿನ್ ಶಿವಣ್ಣ, 35 ವರ್ಷ, ದೇವಸ್ಥಾನದಲ್ಲಿ ವ್ಯವಸ್ಥಾಪಕ ಕೆಲಸ ,ಬೆಸ್ತರು, ವಾಸ: ದಿಬ್ಬೂರಹಳ್ಳಿ ಗ್ರಾಮ , ಶಿಡ್ಲಘಟ್ಟ ತಾಲ್ಲೂಕು ,ಪೋನ ನಂ:9945716215 ,   7ನೇ ನವೀನ್ ಬಿನ್ ವೆಂಕಟರಾಯಪ್ಪ, 35 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್: 9686443242  ಎಂತ ತಿಳಿದು ಬಂದಿರುತ್ತೆ. ನಂತರ ಐದು ಜನರನ್ನು ವಶಕ್ಕೆ ಪಡೆದುಕೊಂಡು ಬೆಳಗ್ಗೆ 11-30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಸ್ವತಃ ಠಾಣಾ ಮೊ.ಸಂಖ್ಯೆ: 87/2021 ಕಲಂ: 160 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:13/07/2021 ರಂದು ಸಂಜೆ 18-45 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿ.ಸಿ-129 ರಾಮಚಂದ್ರ ರವರು ಘನ ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಅನುಮತಿ ಆದೇಶದ ಸಾರಾಂಶವೇನೆಂದರೆ,  ಪಿರ್ಯಾದಿದಾರರಿಗೆ ದಿನಾಂಕ: 23/05/2021 ರಂದು ಮದ್ಯಾಹ್ನ 3-0 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಮುದುಗೆರೆ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿಯಾದ  ಪಿಸಿ 512 ರಾಜಶೇಖರ್ ,ಪಿಸಿ 518 ಆನಂದ್, ಪಿಸಿ 246 ಸಿಂಕಂದ್ ಮುಲ್ಲಾ,ಪಿಸಿ582 ಮಂಜುನಾಥ ಕಾಲೇಲ ರವರೊಂದಿಗೆ ಗಸ್ತು ಮಾಡುತ್ತಿದ್ದಾಗ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಮುದುಗೆರೆ  ಗ್ರಾಮಕ್ಕೆ ಮದ್ಯಾಹ್ನ 3-30 ಹೋಗಿ  ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ ಸರ್ಕಾರಿ ಕೆರೆಯ ಅಂಗಳದಲ್ಲಿ 4 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 200 ರೂ, ಬಾಹರ್ ಗೆ 200 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1)ಶಿವಕುಮಾರ್ ಬಿನ್ ಲೇಟ್ ಮೈಲಾರಪ್ಪ, 29ವರ್ಷ, ಮಡಿವಾಳಜನಾಂಗ ,ವ್ಯವಸಾಯ, ಮುದುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು. 2) ಪಿರೋಷಾ ಬಿನ್ ಬಾಷಾಸಾಬ್ ,43 ವರ್ಷ, ಮುಸ್ಲಿಂ ಜನಾಂಗ, ಕೂಲಿಕೆಲಸ, ಮುದುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು, 3)ಪ್ರಕಾಶ ಬಿನ್ ಸೀನಪ್ಪ,42 ವರ್ಷ,ಭೋವಿ ಜನಾಂಗ,ಚಿಲ್ಲರೆ ಅಂಗಡಿ ವ್ಯಾಪಾರ,ಮುದುಗೆರೆ ಗ್ರಾಮ,ಗೌರಿಬಿದನೂರು ತಾಲ್ಲೂಕು, 4)ರಂಗನಾಥ ಬಿನ್ ಲೇಟ್ ವೆಂಕಟರಾಯಪ್ಪ, 41ವರ್ಷ, ನಾಯಕಜನಾಂಗ, ಜಿರಾಯ್ತಿ ಮುದುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ 6050/- ರೂ ಹಣ , 52 ಸ್ಪೀಟ್ ಎಲೆಗಳು, ಇರುತ್ತೆ. ಸ್ಥಳದಲ್ಲಿ ಮದ್ಯಾಹ್ನ 3-30 ಗಂಟೆಯಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 6050/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನುವಶಪಡಿಸಿಕೊಂಡು, ಠಾಣೆಗೆ ಸಂಜೆ 5-00 ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದು ಠಾಣಾ ಎನ್.ಸಿ.ಆರ್ ನಂ.240/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಆದೇಶ ಪಡೆದು ಠಾಣಾ ಮೊ.ಸಂ.162/2021 ಕಲಂ.87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.154/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ 13/07/2021 ರಂದು ಘನ ನ್ಯಾಯಾಲಯದ ಪೇದೆ 89 ಮಂಜುನಾಥ ರವರು ಠಾಣಾ ಎನ್,ಸಿ.ಆರ್ 179/2021 ರಲ್ಲಿ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ ಆದೇಶವನ್ನು ಸ್ವೀಕರಿಸಿ ದಿನಾಂಕ:11/07/2021 ರಂದು  ಮದ್ಯಾಹ್ನ 3-00  ಗಂಟೆಗೆ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀ ನಂಜುಂಡಶರ್ಮ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:11/07/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಹನುಂಮತರಾಯಪ್ಪ ಸಿ.ಹೆಚ್.ಸಿ-73  ರವರು ತನಗೆ ಪೋನ್ ಮಾಡಿ ಗುಡಿಬಂಡೆ  ತಾಲ್ಲೂಕು ಕಂಬಾಲಹಳ್ಳಿ ಗ್ರಾಮದ ಆಚೆ ಬಾವಿ ಪಕ್ಕ ಸಾರ್ವಜನಿಕ ರಸ್ತೆಯಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿ ಸಿ,ಎಚ್,ಸಿ-102 ಆನಂದ,  ಹೆಚ್.ಸಿ-73 ಹನುಮಂತರಾಯಪ್ಪ, ಹೆಚ್.ಸಿ-29 ಶ್ರೀನಿವವಾಸ, ಪಿ.ಸಿ-141 ಸಂತೋಷ್. ರವರನ್ನು ಕರೆದುಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ  ರವರೊಂದಿಗೆ ಮದ್ಯಾಹ್ನ 12-10 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಮದ್ಯಾಹ್ನ 12-30 ಗಂಟೆಗೆ ಗುಡಿಬಂಡೆ ಟೌನ್ ನಲ್ಲಿರುವ ಸಂಪಂಗಿ ವೃತ್ತಾದಲ್ಲಿ ಪಂಚರನ್ನು ಬರ ಮಾಡಿಕೊಂಡು ಮಾಹಿತಿಯನ್ನು ತಿಳಿಸಿ ನಮ್ಮ ಜೀಪಿನಲ್ಲಿ ಕರೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಕಂಬಾಲಹಳ್ಳಿ ್ಳ ಗ್ರಾಮಕ್ಕೆ  ಹೋಗಿ, ಕಂಬಾಲಹಳ್ಳಿ  ಗ್ರಾಮದಲ್ಲಿ  ಜೀಪ್ ನ್ನು ನಿಲ್ಲಿಸಿ ನಡೆದುಕೊಂಡು ಹೊಗಿ ಮರೆಯಲ್ಲಿ ನಿಂತು ನೋಡಲಾಗಿ, ಗ್ರಾಮದ ಆಚೆ ಬಾವಿ ಪಕ್ಕ ಸಾರ್ವಜನಿಕ ರಸ್ತೆಯಲ್ಲಿ  ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಮದ್ಯಾಹ್ನ 1-00  ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರನ್ನು  ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಸುರೇಶ ಬಿನ್ ಲೇಟ್ ಬೈಯಣ್ಣ, 34  ವರ್ಷ, ಗೊಲ್ಲ ಜನಾಂಗ, ಕೂಲಿ ಕೆಲಸ, ವಾಸ:  ಕಂಬಾಲಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲುಕು , 2) ಶ್ರೀಓನಿವಾಸ ಬಿನ್ ಲೆಟ್ ರಾಮಪ್ಪ ,  52,  ವರ್ಷ, ಬಲಜಿಗರು, ಜಿರಾಯ್ತಿ, ಬುಳ್ಳಸಂದ್ರ ಗ್ರಾಮ, ಗುಡಿಬಂಡೆ  ತಾಲ್ಲುಕು ಎಂದು ತಿಳಿಸಿದ್ದು,  ಓಡಿ ಹೋದ ಆಸಾಮಿಗಳು ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ 3) ಹರಿ ಬಿನ್ ಆದಿನಾರಾಯಣಪ್ಪ, 28 ವರ್ಷ, ಗೊಲ್ಲ ಜನಾಂಗ, ಕೂಲಿ ಕೆಲಸ, ವಾಸ:  ಕಂಬಾಲಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲುಕು ,  4)  ನಾರಾಯಣಸ್ವಾಮಿ ಬಿನ್ ಕಿಟ್ಟಪ್ಪ, 28 ವರ್ಷ,  ಗೊಲ್ಲ ಜನಾಂಗ, ಕೂಲಿ ಕೆಲಸ, ವಾಸ:  ಕಂಬಾಲಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲುಕು ,ಎಂದು ತಿಳಿದುಬಂದಿರುತ್ತೆ. ನಂತರ ಪಂಚರ ಸಮಕ್ಷಮ ವಶದಲ್ಲಿ ಸ್ಥಳದಲ್ಲಿ ಬಿಸಾಡಿದ್ದ ಜೂಜಾಟ ಪಣಕ್ಕೆ ಇಟ್ಟಿದ್ದ ಮಾಲನ್ನು ಪರಿಶೀಲನೆ ಮಾಡಲಾಗಿ 1080 ರೂ ಹಣ,  52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ 1080/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 1-00  ಗಂಟೆಯಿಂದ 2-00  ಗಂಟೆಯವರೆಗೆ  ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಇಬ್ಬರು  ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 2-30 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 3-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿಗಳು  & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ   ದಾಖಲು ಮಾಡಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.155/2021 ಕಲಂ. 379,448 ಐ.ಪಿ.ಸಿ:-

  ದಿನಾಂಕ 13/07/2021 ರಂದು  ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ   ಶ್ರೀಮತಿ ಗಂಗಾದೆವಿ ಕೊಂ ರಾಮಕೃಷ್ಣರೆಡ್ಡಿ, 65 ವರ್ಷ, ವಕ್ಕಲಿಗರು, ರೂರಲ್ ಗುಡಿಬಂಡೆ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಎಲ್ಲೊಡು ಗ್ರಾಮದವಾಸಿ ರಾಮಕೃಷ್ಣಾರೆಡ್ಡಿ ಬಿನ್ ನಂಜರೆಡ್ಡಿ ರವರನ್ನು ಪ್ರೀತಿಸಿ ಮದುವೆಯಾಗಿದ್ದು, ನಂತರ ಸಂಸಾರ ಗಲಾಟೆಯಿಂದ ಎಲ್ಲೋಡು  ಗ್ರಾಮದಿಂದ ಗುಡಿಬಂಡೆ ಪಟ್ಟಣದಲ್ಲಿ ಇಬ್ಬರು ಮಕ್ಕಳೊಂದಿಗೆ  ವಾಸವಾಗಿ ರೂರಲ್ ಗುಡಿಬಂಡೆಯಲ್ಲಿ ಮನೆ ಪಟ್ಟಿ ಸಂ 076ರಲ್ಲಿ ಪೂ-ಪ 60 ಅಡಿ, ಉ-ದ- 40 ಅಡಿಗಳ  ವಿಸ್ತೀರ್ಣದ  ಮನೆ ಕಟ್ಟಿಕೊಂಡು ಸುಮಾರು 30 ವರ್ಷಗಳಿಂದ ವಾಸವಾಗಿರುತ್ತೆ.  ತನ್ನ ಹೆಸರಿನ ಚೌಟಕುಂಟಹಳ್ಳಿ ಗ್ರಾಮದ ಸರ್ವೆ ನಂಬರ್ 51/2ಎ2 ರಲ್ಲಿ ಖುಷ್ಕಿ ಜಮೀನಿನಲ್ಲಿ ಗ್ರಾನೈಟ್ ತೆಗೆಯಲು ಪರವಾನಗೆ ಪಡೆದು ಲಕ್ಷಾಂತರ ರುಪಾಯಿಗಳು ವ್ಯವಹಾರ ಮಾಡುತ್ತಿದ್ದಾಗ ತನಗೆ ತಿಳಿಯದೇ ಸುಜಾತಮ್ಮ ರವರನ್ನು ಎರಡನೇ ಮದುವೆಯಾಗಿದ್ದು ಗ್ರಾಮದ ಹಿರಿಯರು  ಬುದ್ದವಾದ ಹೆಳಿ ಇಬ್ಬರೂ ಬೇರೆ ಬೇರೆ  ವಾಸ ಇರಲು ತಿಳಿಸಿ ಎರಡನೆ ಹೆಂಡತಿಯೊಂದಿಗೆ ಬೆಂಗಳೂರಿನಲ್ಲಿ  ವಾಸವಾಗಿರುತ್ತಾರೆ. ನಂತರ ವ್ಯವಹಾರ ಕುಂಟಿತವಾಗಿ ತನಗೆ ತಿಳಿಯದೇ ಲಕ್ಷಾಂತರ ರುಪಾಯಿಗಳ ವಾಹನಗಲು ಮತ್ತು ಗಣಿಗಾರಿಕೆಯ ಯಂತ್ರೋಪಕರಣಗಳು ನನಗೆ ತಿಳಿಯದಂತೆ  ಮಾರಿಕೊಂಡಿರುತ್ತಾರೆ. ತಾನು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಿದ್ದು ಜೀವನಕ್ಕಾಗಿ ಪ್ಲೋರ್ ಮಿಲ್ ಹಾಕಿಕೊಂಡು ತನ್ನ ಎರಡನೇ ಮಗ ಚಂದ್ರು ಮತ್ತು ಆತನ ಹೆಂಡತಿ ಮಕ್ಕಳೊಂದಿಗೆ ಸದರಿ ಸ್ವತ್ತಿನಲ್ಲಿ ವಾಸವಾಗಿರುತ್ತೇವೆ. ಹೀಗಿರುವಾಗ ದಿನಾಂಕ 18/02/2021 ರಂದು ಏಕಾಏಕಿ ತನ್ನ ಎರಡನೇ ಪತ್ನಿಯ  ಮಕ್ಕಳೊಂದಿಗೆ  ಮನೆ ಹತ್ತಿರ ಬಂದು ಮನೆ ಖಾಲಿ ಮಾಡಲು ಒತ್ತಾಯಿಸಿ ಇಡೀ ತಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಲು ಬಂದಿರುತ್ತಾರೆ. ತಾವು ಅವಕಾಶ ಕೊಡಲಿಲ್ಲ. ಅದಕ್ಕಾಗಿ ಹೊಮಚು ಹಾಕುತ್ತಿದ್ದ ಸುಜಾತಮ್ಮ ಮತ್ತು ಇಬ್ಬರು ಅಕ್ಕಂದಿರು, ಸಜಾತಮ್ಮ ರವರ ಮೂವರು ಹೆಣ್ಣುಮಕ್ಕಳು, ರಾಮಕೃಷ್ಣಾರೆಡ್ಡಿ ರವರ ತಮ್ಮ ಎಲ್ಲೋಡು  ಶಿವಶಂಕರೆಡ್ಡಿ ಮತ್ತಿತರರು ಗುಂಪುಕಟ್ಟಿಕೊಂಡು ಬಂದು ದಿನಾಂಕ 19/05/2021 ರಂದು ತಾನು ವಾಸವಿದ್ದ  ಮನೆಗೆ ಬೀಗ ಹಾಕಿಕೊಂಡು ಬಾಗೇಪಲ್ಲಿಗೆ ಖಾಸಗಿ ಕೆಲಸದ ನಿಮಿತ್ತ  ಹೋಗಿದ್ದಾಗ ಸದರಿ ಮೇಲ್ಕಾಣಿಸಿದವರು ಬೀಗ ಹೊಡೆದು ಮನೆಗೆ ನುಗ್ಗಿ ತನ್ನ ಮನೆಯಲ್ಲಿದ್ದ ವಾಸಪಯೋಗಿ ವಸ್ತುಗಳು, ಸರಕು ಸಾಮಾಗ್ರಿಗಳು, 03 ಕಬ್ಬಿಣದ ಬಿರುಗಳು, ವಾಷಿಂಗ್ ಮಿಷನ್, 250 ಲೀಟರ್ ಪ್ರಿಡ್ಜ್, ಯು.ಪಿ.ಎಸ್. , ಸಿ.ಸಿ ಟಿ.ವಿ ಕ್ಯಾಮೆರಗಳು,-04, ಎರಡು ಮಂಚ, ದಾಕಲೆಗಳು, ಎಲ್.ಇ.ಡಿ ಟಿ.ವಿ, ಪ್ಲೊರ್ ಮಿಲ್ ಯಂತ್ರೋಪಕರಣಗಳು,  ಇವೆಲ್ಲವುಗಳನ್ನು ದೌರ್ಜನ್ಯಪೂರಕವಾಗಿ ಮತ್ತು ಅಕ್ರಮವಾಗಿ ಬೇರೆಡೆಗೆ ಸಾಗಿಸಿರುತ್ತಾರೆ. ತಾವು ಬಾಗೇಪಲ್ಲಿಯಿಂದ ಮನೆಗೆ ವಾಪಸ್ ಮನೆಗೆ ಬಂದು ನೋಡಲಾಗಿ ಇವರನ್ನು ಪ್ರಶ್ನಿಸಲಾಗಿ  ತಮ್ಮ ಮೇಲೆ ಹಲ್ಲೆ  ದೌರ್ಜನ್ಯ ಮಾಡಿರುತ್ತಾರೆ.  ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡಿ ರಾಜಿ ಮಾಡುವುದಾಗಿ  ಹೇಳಿದ್ದು ನಂತರ ಯಾವುದೇ ರಾಜಿಗೆ ಬಾರದ ಕಾರಣ ದೂರು ನೀಡಲು ತಡವಾಗಿರುತ್ತೆ.  ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 14-07-2021 ರಂದು ಮಧ್ಯಾಹ್ನ 12.30 ಗಂಟೆಗೆ ಸಿ.ಹೆಚ್.ಸಿ-116 ಉಮಾಶಂಕರ್ ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:14/07/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ಏನಿಗದಲೆ ಗ್ರಾಮದ ಬಸ್ ನಿಲ್ದಾಣದ ಬಳಿ ಪುಟ್ಪಾತ್ ರಸ್ತೆಯ ಬೋಂಡಾ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಬೋಂಡಾ ಅಂಗಡಿ ಬಳಿ ದಾಳಿ ನಡೆಸುವ ಸಲುವಾಗಿ ತಾನು ಏನಿಗದಲೆ ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಏನಿಗದಲೆ ಗ್ರಾಮದ ಪವನ್ ಬಿನ್ ನಾರಾಯಣಪ್ಪ ರವರ  ಬೋಂಡಾ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿರುವ ಆಸಾಮಿ ಬೊಂಡಾ  ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಸಮವಸ್ತ್ರದಲ್ಲಿದ್ದ ತಮ್ಮನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು,  ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಬೋಂಡಾ ಅಂಗಡಿ ಮಾಲೀಕನು ಸಹ ಓಡಿ ಹೋಗಿರುತ್ತಾನೆ. ಓಡಿಹೋದ ಆತನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಪವನ್ ಬಿನ್ ನಾರಾಯಣಪ್ಪ, 35 ವರ್ಷ, ದೋಬಿ ಜನಾಂಗ, ಅಂಗಡಿ ವ್ಯಾಪಾರ, ವಾಸ ಏನಿಗದಲೆ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು,  ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  ಮದ್ಯದ  ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARDS CHEERS WHISKEY ಮಧ್ಯದ 16 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 16 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 562/-ರೂ ಆಗಿರುತ್ತೆ. ಮದ್ಯ ಒಟ್ಟು 1440 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ   ಬೋಂಡಾ ಅಂಗಡಿ ಮಾಲೀಕ ಪವನ್ ಓಡಿಹೋಗಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಬೆಳಿಗ್ಗೆ 11-15 ರಿಂದ 12-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲನ್ನು ಮತ್ತು ಮಹಜರ್ ನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಪವನ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:14/07/2021 ರಂದು ಬೆಳಗ್ಗೆ 11.00 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ  ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:12/07/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಕೊಲುಮೇನಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಮ್ಮ ದೇವಸ್ಥಾನದ ಹಿಂಭಾಗದಲ್ಲಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-175 ನವೀನ್ ಕುಮಾರ್, ಪಿ.ಸಿ-483 ರಮೇಶ್ ಪಿ.ಸಿ-238 ದಿಲೀಪ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ   ನೀಡಿದ್ದು ಸ್ಥಳದಲ್ಲಿದ್ದವರನ್ನು  ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಪಿ.ವಿಜಯ್  ಬಿನ್ ಪ್ರಕಾಶ್, 26 ವರ್ಷ, ಪ.ಜಾತಿ, ಖಾಸಗಿ ವೃತ್ತಿ, ಕೊಂಗಾಡಿಯಪ್ಪ ಕಾಲೇಜು ಬಳಿ, ದೊಡ್ಡಬಳ್ಳಾಪುರ ನಗರ. 2) ಹರೀಶ ಬಿನ್ ಅಶ್ವತ್ಥಪ್ಪ, 24 ವರ್ಷ, ನಾಯಕರು, ಮೊಗ್ಗದ ಕೆಲಸ, ತೇರಿನ ಬೀದಿ, ದೊಡ್ಡಬಳ್ಳಾಪುರ ನಗರ, 3) ಕೆ.ಎಂ ಮೂರ್ತಿ ಬಿನ್ ಲೇಟ್ ನಾರಾಯಣಪ್ಪ, 30 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಹಳೇಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 4) ಜಗನ್ನಾಥ ಬಿನ್ ಗಂಗಪ್ಪ, 28 ವರ್ಷ, ಪ.ಜಾತಿ, ಚಾಲಕ ವೃತ್ತಿ, ಹಳೇಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು ಎಲ್ಲರನ್ನೂ  ಸಹಾ   ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 7600/- ( ಏಳು ಸಾವಿರದ ಆರು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-45 ಗಂಟೆಯಿಂದ 5-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 6-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 185/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

11. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ: 13/07/2021 ರಂದು ಸಂಜೆ 06.30 ಗಂಟೆಗೆ  ಪಿರ್ಯಾದಿ ನರಸಿಂಹ ಮೂರ್ತಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಮಗ ಹೇಮಂತ್ ಕುಮಾರ್ ರವರೊಂದಿಗೆ ಚಿಂತಾಮಣಿ ರಸ್ತೆಯ ಬಿಜೆಪಿ ಕಛೇರಿಯ ಎದುರು ಸಾಯಿ ರಾಮ್ ಹೋಟೆಲ್ ನಡೆಸಿಕೊಂಡು ಇರುತ್ತೇವೆ, ದಿನಾಂಕ13.07.2021 ರಂದು ಮದ್ಯಾಹ್ನ ಸುಮಾರು 03.15 ಗಂಟೆಯಲ್ಲಿ  ನನ್ನ ಮಗ ಹೇಮಂತ್ ಕುಮಾರ್ ರವರು  ನಮ್ಮ ಹೋಟೆಲ್ ನಿಂದ ಚಿಂತಾಮಣಿ ರಸ್ತೆಯ ಪಂಪ್ ಹೌಸ್  ಬಳಿ ನೀರು ತೆಗೆದು ಬರಲುಹೋಗಿ  ನಗರ ಸಭೆಗೆ ಸೇರಿದ  ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದಾಗ ಶಿಢ್ಲಘಟ್ಟ ನಗರದ ಕಾಮಾಟಿಗರ ಪೇಟೆಯ ವಾಸಿ  ರೇವಂತ್  ಬಿನ್ ಚಂದ್ರಶೇಖರ್ ಮತ್ತು ಆತನ ಇಬ್ಬರು ಸ್ನೇಹಿತರು  KA.40.EE.7003 ಹೋಂಡಾಡಿಯೋ ದ್ವಿಚಕ್ರ ವಾಹನದಲ್ಲಿ ಹೋಗಿ ನನ್ನ ಮಗನಿಗೆ ನೀರಿನ ಬಿಂದಿಗೆಯನ್ನು ಪಕ್ಕಕ್ಕೆ ತೆಗೆಯುವಂತೆ  ಗಲಾಟೆ ಮಾಡಿ  ರೇವಂತ್ ಕಲ್ಲಿನಿಂದ ನನ್ನ ಮಗನ ಬಲಕಣ್ಣಿನ ಕೆಳೆಗೆ ಗುದ್ದಿ ಗಾಯಪಡಿಸಿರುತ್ತಾನೆ,  ಆತನ ಸ್ನೇಹಿತ  ಇಬ್ಬರು  ನನ್ನ ಮಗನನ್ನು ಎಳೆದಾಡಿ  ಕೈಯಿಂದ ಮೈಎಲ್ಲಾ ಗುದ್ದಿ ಕತ್ತಿನ ಬಳಿ ಪರಚಿ ಕೆಳಗೆ ಬಿಳಿಸಿ ಕಾಲುಗಳಿಂದ ಒದ್ದು  ಸಾಯಿಸುವುದಾಗಿ ಪ್ರಾಣ ಬೆದರಿಕೆಹಾಕಿ ಗಲಾಟೆ ಮಾಡುತ್ತಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ  ಸುಬ್ಬಣ್ಣ ದೇವರಾಜ್ ಇತರರು ಜಗಳ ಬಿಡಿಸಿದ ವಿಚಾರ ನನಗೆ ತಿಳಿಸಿದರು  ನಾನು ಸ್ಥಳಕ್ಕೆ ಹೋಗುವಷ್ಟರಲ್ಲಿ  03 ಜನರು ಅವರು ಬಂದಿದ್ದ  ಗಾಡಿಯಲ್ಲಿ ಪರಾರಿಯಾಗಿರುತ್ತಾರೆ.  ನಂತರ ಗಾಯಗೊಂಡಿದ್ದ  ನನ್ನ ಮಗನನ್ನು ಶಿಢ್ಲಘಟ್ಟ  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಆದ್ದರಿಂದ  ನೀರಿನ ವಿಚಾರದಲ್ಲಿ ನನ್ನ ಮಗನ ಮೇಲೆ  ಗಲಾಟೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ  ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 14-07-2021 07:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080