Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.156/2021 ಕಲಂ. 408,409,419,420,34 ಐ.ಪಿ.ಸಿ :-

          ದಿನಾಂಕ: 13/06/2021 ರಂದು ಸಂಜೆ 16-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ಬಿನ್ ನಾರಾಯಣಪ್ಪ, 34 ವರ್ಷ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತ ಚಿಕ್ಕಬಳ್ಳಾಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:11/06/2020 ರಂದು ಉಪನಿರ್ದೇಶಕರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಚಿಕ್ಕಬಳ್ಳಾಪುರ ಹಾಗೂ ನಮ್ಮ ಸಮಕ್ಷಮದಲ್ಲಿ ಬಾಗೇಪಲ್ಲಿ ಸಗಟು ಮಳಿಗೆ ಭೌತಿಕ ತಪಾಸಣೆ ನಡೆಸಲಾಗಿದ್ದು, ಸದರಿ ಭೇಟಿ ಸಮಯದಲ್ಲಿ ಫಿಸ್ಟ್ ತಂತ್ರಾಂಶದ ಅನ್ವಯ ಪಡಯಲಾದ ದಾಸ್ತಾನಿನ ತಃಖ್ತೆಯ ಅನ್ವಯ ಭೌತಿಕ ತಪಾಸಣಾ ಸಮಯದಲ್ಲಿ ವ್ಯವಸ್ಥಾಪಕರಾದ ಶ್ರೀ. ಜೈಹನುಮಯ್ಯ ಕಿರಿಯ ಸಹಾಕಯರು ಹಾಗೂ ಆಹಾರ ಶಿರಸ್ತೇದಾರರು, ಶ್ರೀ. ಆರ್. ರಾಜಣ್ಣ, ರವರ ಸಮ್ಮುಖದಲ್ಲಿ ಬೌತಿಕ ತಪಾಸಣಾ ಕಾರ್ಯ ಕೈಗೊಂಡು ಪಡಿತರ/ ಅಕ್ಷರ ದಾಸೋಹ ದಾಸ್ತಾನು ಹಾಗೂ ಎಂ.ಎಸ್.ಪಿ ರಾಗಿ ಕೇಂದ್ರದ ದಾಸ್ತಾನಿನ ಭೌತಿಕ ತಪಾಸಣೆ ಮಾಡಲಾಗಿರುತ್ತದೆ. ಸದರಿ ಸಮಯದಲ್ಲಿ ದಾಸ್ತಾನು ಪರಿಶೀಲಿಸಲಾಗಿ ದಾಸ್ತಾನಿನ ವ್ಯತ್ಯಾಸದ ವಿವರಗಳು ಈ ಕೆಳಕಂಡಂತೆ ಇರುತ್ತದೆ.

(ಫಿಸ್ಟ್ ತಂತ್ರಾಂಶದ ದಾಸ್ತಾನಿನ ಅನ್ವಯ)

ಕ್ರ.ಸಂ     ಪಡಿತರ ವಿವರ    ಫಿಸ್ಟ್ ತಂತ್ರಾಂಸದ ಅನ್ವಯ ನಮೂದಿಸಿರುವ ದಾಸ್ತಾನು     ಭೌತಿಕ ದಾಸ್ತಾನು     ದಾಸ್ತಾನು ವ್ಯತ್ಯಾಸ

1    ಅಕ್ಕಿ    7529.18 ಕ್ವಿಂಟಾಲ್     7090.93 ಕ್ವಿಂಟಾಲ್     - 438.25 ಕ್ವಿಂಟಾಲ್ ಕೊರತೆ

2    ಗೋಧಿ    1530.15 ಕ್ವಿಂಟಾಲ್    1508.47 ಕ್ವಿಂಟಾಲ್    -21.68 ಕ್ವಿಂಟಾಲ್ ಕೊರತೆ

3    ಎಂ.ಡಿ.ಎಂ ಖಾದ್ಯತೈಲ    44364 ಲೀಟರ್     44360 ಲೀಟರ್    -4 ಲೀ.

4    ಎಂ.ಎಸ್.ಪಿ ರಾಗಿ    15650.04 ಕ್ವಿಂಟಾಲ್    14849 ಕ್ವಿಂಟಾಲ್    -801.04 ಕ್ವಿಂಟಾಲ್ ಕೊರತೆ

ಮೇಲ್ಕಂಡ ಬಾಗೇಪಲ್ಲಿ ಸಗಟು ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ. ನಂಜಪ್ಪ ಕಿರಿಯ ಸಹಾಯಕ ರವರು ಹಠಾತ್ ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಕಛೇರಿಯ ಆದೇಶದ ಅನ್ವಯ ನಿಗಮದ ಸಿಬ್ಬಂದಿಯಾದ ಶ್ರೀ. ಜೈಹನುಮಯ್ಯ ಕಿರಿಯ ಸಹಾಕಯರು ರವರನ್ನು ಬಾಗೇಪಲ್ಲಿ ಸಗಟು ಮಳಿಗೆ ವ್ಯವಸ್ಥಾಪಕರನ್ನಾಗಿ ನಿಯೋಜಿಸಲಾಗಿತ್ತು. ಶ್ರೀ. ನಂಜಪ್ಪ ಕಿರಿಯ ಸಹಾಯಕರು ರವರು ನಿಧನ ಹೊಂದಿದ ದಿನದಿಂದ ಹಾಗೂ ಶ್ರೀ. ಜೈಹನುಮಯ್ಯ ವ್ಯವಸ್ಥಾಪಕರು ನಿಯೋಜನೆಯ ಸಮಯದ ಮಧ್ಯದ ಅವದಿಯಲ್ಲಿ ಶ್ರೀ. ಅಜರುದ್ದೀನ್ ಡೇಟಾ ಎಂಟ್ರಿ ಆಪರೇಟರ್ ರವರು ಕಾರ್ಯ ನಿರ್ವಹಿಸುತ್ತಿದ್ದು, ಆ ಅವಧಿಯಲ್ಲಿ ಉಂಟಾಗಿರುವ ಕೊರತೆ ದಾಸ್ತಾನಿಗೆ ನಾನೇ ಜವಾಬ್ದಾರಿ ವಹಿಸುತ್ತೇನೆಂದು ದಿನಾಂಕ:11/06/2021 ರಂದು ಪತ್ರ ಬರೆದುಕೊಟ್ಟಿರುತ್ತಾರೆ. ಹಾಗೂ ಸಗಟು ಮಳಿಗೆ ವ್ಯವಸ್ಥಾಪಕರಾದ ಶ್ರೀ ಜೈ ಹನುಮಯ್ಯ ಕಿರಿಯ ಸಹಾಯಕರು, ಮತ್ತು ಹಿಂದಿನ ಸಗಟು ಮಳಿಗೆ ವ್ಯವಸ್ಥಾಪಕರಾದ ಶ್ರೀ ಲೇಟ್ ನಂಜಪ್ಪ ಹಾಗೂ ಇತರರು ಸಹ ಮೇಲ್ನೋಟಕ್ಕೆ ಕಾರಣಕರ್ತರಾಗಿರುತ್ತಾರೆ.  ಮೇಲ್ಕಂಡ ಕೊರತೆ  ದಾಸ್ತಾನಿನ ಬಗ್ಗೆ ಕಾರಣಗಳನ್ನು ನಿಖರವಾಗಿ ತಿಳಿಸದಿರುವ ಹಾಗೂ ಗೊಂದಲಮಯ ಹೇಳಿಕೆಯನ್ನು ನೀಡುತ್ತಿರುವ ಮಹಮದ್ ಅಜರುದ್ದೀನ್ ಬಿನ್ ವಲೀಭಾಷ, 31 ವರ್ಷ, ಡಾಟಾ ಎಂಟ್ರಿ ಆಪರೇಟರ್, ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ಬಾಗೇಪಲ್ಲಿ, ವಾಸ - ಜಾಮಿಯಾ ಮಸೀದಿ ಬಳಿ, 19ನೇ ವಾರ್ಡ್, ಬಾಗೇಪಲ್ಲಿ ಟೌನ್, ಹಾಗೂ ಸಗಟು ಮಳಿಗೆ ವ್ಯವಸ್ಥಾಪಕರಾದ ಶ್ರೀ ಜೆ ಹನುಮಯ್ಯ ಕಿರಿಯ ಸಹಾಯಕರು. ಶ್ರೀ ಲೇಟ್ ನಂಜಪ್ಪ ಹಾಗೂ ಇತರರ  ವಿರುದ್ದ ನಿಯಮಾನುಸಾರ ಅಗತ್ಯಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 323,324,504,506,34 ಐ.ಪಿ.ಸಿ :-

          ಈ ದಿನ ದಿನಾಂಕ 13-06-2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೆ  ದಿನಾಂಕ 12-06-2021ರಂದು ನಮ್ಮ ಅನುಬೋಗದಲ್ಲಿದ್ದ ಸರ್ವೇ ನಂ: 61 ರಲ್ಲಿ ನ:3 ಗುಂಟೆ  ಜಮೀನಿನಲ್ಲಿ  ಜಾಲಿಮರಗಳು ಬೆಳೆದಿದ್ದು  ಇದೇ ಗ್ರಾಮದ 1) ಬೀರಪ್ಪ 2)ಮಲ್ಲಪ್ಪ 3)ಬೀರಮ್ಮ ಎಂಬುವವರು ಆಕ್ರಮವಾಗಿ ಮರಗಳನ್ನು ಕಡಿದು  ಅವಾಚ್ಯವಾಗಿ  ನನ್ನನ್ನು ಬೈದು ಮಲ್ಲಪ್ಪ  ಎಂಬುವವರು ದೊಣ್ಣೆಯಿಂದ  ಬಲಗಾಲಿಗೆ ಹೊಡೆದು ಸಾಯಿಸುವುದಾಗಿ  ಪ್ರಾಣ ಬೆದರಿಕೆ ಹಾಕಿರುತ್ತಾರೆ .ಗಲಾಟೆ ಯಲ್ಲಿ ನನ್ನ ಮಗ ಕಿಶೋರ್ ಅಡ್ಡ ಬಂದಾಗ  ಬೈದ್ದು ಹಲ್ಲೆ ನಡೆಸಿರುತ್ತಾರೆ .   ಆಸ್ವತ್ರೆಗೆ ಚಿತ್ಸೆಗೆ ಹೋಗಿದ್ದ  ಕಾರಣ   ಈ ದಿನ ತಡವಾಗಿ ಬಂದು  ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ   ದೂರು ನೀಡಿರುತ್ತಾರೆ.

 

3. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.118/2021 ಕಲಂ. 302,201,506,34 ಐ.ಪಿ.ಸಿ :-

          ದಿನಾಂಕ:13-06-2021 ರಂದು ಸಂಜೆ:4-30 ಗಂಟೆಗೆ ಪಿರ್ಯಾದಿದಾರರಾದ ಸೈಯಿಂಷಾ ಸಾಬ್ ಬಿನ್ ಬಿಲಾಲ್, 24 ವರ್ಷ,ಮುಸ್ಲೀಂ ಜನಾಂಗ,ಕೂಲಿ ಕೆಲಸ ವಾಸ ಮಹಾರಾಜಪುರ ಗ್ರಾಮ ಮಲದ ರುತುವ ಜಿಲ್ಲೆ ಪಶ್ಚಿಮ ಬಂಗಾಳ ರಾಜ್ಯ  ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ: ತಾನು ಮತ್ತು ತಮ್ಮ  ಗ್ರಾಮದ ವಾಸಿ ಅಬೀದ್ ಆಲಿ ಬಿನ್ ಮೈದುರ ರಹಮಾನ್ 19 ವರ್ಷ ಮುಸ್ಲಿಂ ಜನಾಂಗ  ರವರು ಈಗ್ಗೆ ಸುಮಾರು 20 ದಿನಗಳ ಹಿಂದೆ ಈ ಮೊದಲೆ ತನಗೆ ಪರಿಚಯವಿದ್ದ ಲೇಬರ್ ಕಾಂಟ್ರಕ್ಟರ್ ಲೋಕೇಶ ರವರ ಮುಖಾಂತರ ಕನರ್ಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಸಾದಲಿ ಕ್ರಾಸ್ ನಿಂದ ವರ್ಲಕೊಂಡ ಮದ್ಯ ಹೊಸದಾಗಿ ನಿಮರ್ಾಣ ಮಾಡುತ್ತಿರುವ ಸವರ್ಿಸ್ ರಸ್ತೆಯ ಕಾಮಗಾರಿಯ ಕೂಲಿ ಕೆಲಸಕ್ಕೆ ಬಂದಿದ್ದು ಲೋಕೇಶ್ ರವರು ತಮ್ಮಗಳಿಗೆ ವಾಸ ಮಾಡಲು ಚಿಕ್ಕಬಳ್ಳಾಪುರ ತಾಲ್ಲೂಕು ಶೀಗಮಾಕಲಹಳ್ಳಿ ಗ್ರಾಮದ ವಾಸಿಯಾದ ಪೋತುಲಪ್ಪ ಬಿನ್ ಗಂಗಪ್ಪ ಸುಮಾರು 50 ವರ್ಷ ಆದಿಕನರ್ಾಟಕ ಜನಾಂಗ ರವರ ಬಾಬ್ತು ಚಿಕ್ಕಬಳ್ಳಾಪುರ ತಾಲ್ಲೂಕು ಸಾದಲಿ ಕ್ರಾಸ್ನಿಂದ ಯಲಗಲಹಳ್ಳಿ ಕ್ರಾಸ್ ಮದ್ಯ ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಪಕ್ಕದಲ್ಲಿರುವ ಜಮೀನಿನಲ್ಲಿ ಶೆಡ್ ಹಾಕಿಕೊಟ್ಟಿದ್ದು ಅದರಲ್ಲಿ ತಾನು ಮತ್ತು  ಅಬೀದ್ ಆಲಿ ರವರು ವಾಸವಿದ್ದು ರಸ್ತೆಯ ಕೆಲಸ ಮಾಡಿಕೊಂಡು ಅ ಶೆಡ್ ನಲ್ಲಿ ವಾಸವಿದ್ದುದ್ದಾಗಿ. ಹೀಗಿರುವಾಗ ಲೇಬರ್ ಕಾಂಟ್ರಕ್ಟರ್ ಲೋಕೇಶ ರವರು ತಮಗೆ ಕೂಲಿ ಹಣವನ್ನು ಕೊಡದೇ ಇದ್ದುದರಿಂದ ತಾವು ದಿನಾಂಕ:03-06-2021 ನಿಂದ  ರಸ್ತೆ ಕೆಲಸಕ್ಕೆ ಹೋಗದೇ ತಾವು ವಾಸವಿದ್ದ ಶೆಡ್ ನಲ್ಲಿ ಇದ್ದುದ್ದಾಗಿ  ನಂತರ ದಿನಾಂಕ:07-06-2021 ರಂದು ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ ತನ್ನ ಜೊತೆಯಲ್ಲಿ ಇದ್ದ ಅಬೀದ್ ಆಲಿ ಶೆಡ್ ನಿಂದ ಆಚೇ ಬಂದು ಶೆಡ್ ನ ಮಾಲೀಕರಾದ ಪೋತುಲಪ್ಪ ರವರ ಜಮೀನಿನಲ್ಲಿ ಓಡಾಡಿಕೊಂಡಿದ್ದು ಅದೇ ಜಮೀನಿನಲ್ಲಿ ಪೋತುಲಪ್ಪ ರವರ ಮಗಳಾದ  ಅಪರ್ಣ ಸುಮಾರು 21 ವರ್ಷ  ಎಂಬುವರು  ಹಸುಗಳನ್ನು ಮೇಯಿಸುತ್ತಿದ್ದರು ಜಮೀನಿನಲ್ಲಿ ಸುತ್ತಾಡುತ್ತಿದ್ದ ಅಬೀದ್ ಆಲಿ ಅಪರ್ಣ ರವರನ್ನು ರೇಗಿಸಿದ್ದಕ್ಕೆ ಅಪರ್ಣ ರವರು  ಬೈದಿದ್ದಕ್ಕೆ ಅಬೀದ್ ಆಲಿ ನಂತರ ಶೆಡ್ ಗೆ ಬಂದನು ತಾನು ಸಹ ಅವನಿಗೆ ಬುದ್ದಿ ಹೇಳಿ ಶೆಡ್ ನ ಹೊರಗಡೆ ಕುಳಿತುಕೊಂಡಿದ್ದಾಗ ಅದೇ ಸಮಯಕ್ಕೆ ಪೊತುಲಪ್ಪ ರವರ ಮಗ ಮನು ರವರು ಜಮೀನಿನ ಬಳಿ ಬಂದಿದ್ದು ಅಪರ್ಣ ರವರು ಆಕೆಯ ಅಣ್ಣನಾದ ಮನುಗೆ ಗಾಬರಿಯಿಂದ ಅಬೀದ್ ಆಲಿಯ ಬಗ್ಗೆ ಹೇಳುತ್ತಿರುವುದನ್ನು ತಾನು ಗಮನಿಸಿದ್ದು ತಕ್ಷಣ ತಾನು ಅಬೀದ್ ಆಲಿ ಯನ್ನು ಕರೆದುಕೊಂಡು ಅಬೀದ್ ಆಲಿ ಮತ್ತು ತಾನು ಸಾದಲಿ ಕ್ರಾಸ್ ಕಡೆ ನಡೆದುಕೊಂಡು ಹೊದೇವು. ತಾವಿಬ್ಬರು ಸಾದಲಿ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿಗೆ ಪೋತುಲಪ್ಪ ರವರ ಮಗನಾದ ಮನು ಮತ್ತು ಆತನ ಜೊತೆಯಲ್ಲಿ ಇನ್ನೂ 03 ಜನರು ದ್ವಿ ಚಕ್ರವಾಹನಗಳಲ್ಲಿ ಬಂದು ತಮ್ಮನ್ನು ಕರೆದುಕೊಂಡು ಪುನಃ ನಾವಿದ್ದ ಶೆಡ್ ಬಳಿ ಕರೆದುಕೊಂಡು ಬಂದಿದ್ದು ಅದೇ ದಿನ ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ ಮನು ರವರು ಆತನ ತಂಗಿಯನ್ನು ಅಬೀದ್ ಆಲಿ ರವರು ರೇಗಿಸಿದ್ದಕ್ಕೆ ಅಬೀದ್ ಆಲಿಯೊಂದಿಗೆ ಜಗಳ ತೆಗದು ಅಲ್ಲಿಯೇ ಇದ್ದ ಒಂದು ದೋಣ್ಣೆಯಿಂದ ಅಬೀದ್ ಆಲಿಯ ತಲೆಗೆ ಜೋರಾಗಿ ಹೊಡೆದಿದ್ದು ಉಳಿದ ಮೂರು ಜನರು  ಕೈಗಳಿಂದ ಮುಖಕ್ಕೆ ಹೊಟ್ಟೆಗೆ. ಹೊಡೆದರು ಮತ್ತು ಕಾಲುಗಳಿಂದ ಅಬೀದ್ ಆಲಿಯ ಮೈ ಮೇಲೆ ಹೊದ್ದರು ಅಷ್ಟರಲ್ಲಿ ಅಲ್ಲೇಯೇ ಇದ್ದ ತಾನು ಮತ್ತು ತಮ್ಮ ಶೆಡ್ ಪಕ್ಕದ ಶೆಡ್ ನಲ್ಲಿ ಇದ್ದ ಯಶವಂತ ಬಿನ್ ಮಾದೇವಯ್ಯ ಸುಮಾರು 21 ವರ್ಷ ಎಸ್.ಸಿ.ಜನಾಂಗ ಚಾಲಕ ಕೆಲಸ ವಾಸ ನರೇಗನಹಳ್ಳಿ ಗ್ರಾಮ ಸೂಸಲೆ ಹೋಬಳಿ ಟಿ.ನರಸಿಪುರ ತಾಲ್ಲೂಕು ಮೈಸೂರು ಜಿಲ್ಲೆ ರವರು ಜಗಳ ಬಿಡಿಸಿದ್ದು ನಂತರ ಅಬೀದ್ ಆಲಿ ಮೇಲೆ ಹಲ್ಲೆ ಮಾಡಿದವರ ಪೈಕಿ  ಮನು  ತನ್ನ ಬಳಿ ಬಂದು ತಾವು ಅಬೀದ್ ಆಲಿಯನ್ನು ಹೊಡೆದಿರುವ ಬಗ್ಗೆ ಪೊಲೀಸರಿಗಾಗಲಿ ಅಥವಾ ಯಾರಿಗಾದರೂ  ಹೇಳಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ತಮಗೆ  ಪ್ರಾಣ ಬೆದರಿಕೆ ಹಾಕಿದರು ಅದಕ್ಕೆ ತಾನು ಭಯಬಿದ್ದು ಲೇಬರ್ ಕಾಂಟ್ರಕ್ಟರ್ ಲೋಕೇಶ ರವರಿಗೆ ಪೋನ್ ಮಾಡಿ ವಿಚಾರ ತಿಳಿಸಿ ಲೋಕೇಶ ರವರ ಸೂಚನೆ ಮೇರಿಗೆ ಗಾಯಗೊಂಡಿದ್ದ ಅಬೀದ್ ಆಲಿಯನ್ನು ತಾನು ಯಾವುದೋ ಆಟೋದಲ್ಲಿ ಹಾಕಿಕೊಂಡು ಬೆಂಗಳೂರಿನ ಕೊಡಿಗೇನಹಳ್ಳಿಗೆ ಹೋಗಿ ಲೋಕೇಶ ರವರು ತಿಳಿಸಿದ ಲೇಬರ್ ಶೆಡ್ ನಲ್ಲಿ ಉಳಿದುಕೊಂಡು ನಂತರ ಬೆಳಗ್ಗೆ ಲೋಕೇಶ್ ರವರು ನಾವಿದ್ದ ಸ್ಥಳಕ್ಕೆ ಒಂದು ಕಾರನ್ನು ಕಳುಹಿಸಿದ್ದು ಅದರಲ್ಲಿ ತಾನು ಗಾಯಗೊಂಡಿದ್ದ ಅಬೀದ್ ಆಲಿಯನ್ನು ಕರೆದುಕೊಂಡು ದಿನಾಂಕ:08-06-2021 ರಂದು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿಗೆ ಲೇಬರ್ ಕಾಂಟ್ರಕ್ಟರ್ ಲೋಕೇಶ ರವರು ಬಂದಿದ್ದು  ಲೋಕೇಶ್ ರವರು ಅಭಿದ್ ಆಲಿಯನ್ನು ಯಾವಗಾಲು ತೌಷಿಪ್ ಎಂದು ಕರೆಯುತ್ತಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸುವಾಗ ತೌಷಿಪ್ ಎಂದು  ಮತ್ತು ಮದ್ಯಪಾನ ಮಾಡಿ ಬಿದ್ದಿರವುದಾಗಿ  ವೈದ್ಯರಿಗೆ ತಿಳಿಸಿರುವುದಾಗಿ.  ನಂತರ ಅಬೀದ್ ಆಲಿಯನ್ನು ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿಸಿ ನಂತರ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಅಲ್ಲಿನ ವೈದ್ಯರ ಸಲಹೆ ಮೇರಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಅಬೀದ್ ಆಲಿ ರವರು ಚಿಕತ್ಸೆಯನ್ನು ಪಡೆಯುತ್ತಿದ್ದಾಗ ದಿನಾಂಕ:12-06-2021 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಅಬೀದ್ ಆಲಿ ರವರ ಮೃತದೇಹ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವುದಾಗಿ. ಅಬೀದ್ ಆಲಿ ರವರ  ಮೇಲೆ ಹಲ್ಲೆ ಮಾಡಿದ ಮನು ರವರ ಜೊತೆಯಲ್ಲಿದ್ದ ಉಳಿದವರ ಹೆಸರು ಮತ್ತು ವಿಳಾಸವನ್ನು ತಿಳಿದುಕೊಳ್ಳಲಾಗಿ ಸುನಿಲ್. ನವೀನ್. ಶ್ರೀಕಾಂತ. ಎಂದು ತಿಳಿದಿದ್ದು ಆದ್ದರಿಂದ ಅಬೀದ್ ಆಲಿ ರವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಮತ್ತು ತನಗೆ  ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರವುದಾಗಿ  ತಾನು ಅಬೀದ್ ಆಲಿ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿಸುತ್ತಿದ್ದರಿಂದ ತಾನು  ತಡವಾಗಿ ದೂರನ್ನು ನೀಡುತ್ತಿರುವುದಾಗಿ ದೂರು.

 

4. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 323,324,427,447,504,506,34 ಐ.ಪಿ.ಸಿ :-

          ದಿನಾಂಕ:14-06-2021 ರಂದು ಬೆಳಿಗ್ಗೆ 11:00 ಗಂಟೆಗೆ ಘನ ನ್ಯಾಯಾಲಯದ ಹೆಚ್.ಸಿ-195 ಮುರಳಿಧರ್ ರವರು ಘನ ನ್ಯಾಯಾಲಯದ ಆದೇಶದಂತೆ PCR NO:210/2020 ಸಾದರಾದ ದೂರನ್ನು ತಂದು ಹಾಜರ್ಪಡಿಸಿದ್ದನ್ನು ಪಡೆದು ದಾಖಲಿಸಿಕೊಂಡ ದೂರಿನ ಸಾರಾಂಶವೇನೆಂದರೆ ಪರ್ಯಾದಿ ಶ್ರೀಮತಿ ಅಶ್ವಥ್ಥಮ್ಮ ಕೋಂ ಗಂಗಾಧರಪ್ಪ, 40 ವರ್ಷ, ವಾಸ: ಬೀಡಿಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರಿಗೆ ಸೇರಿದ ಬೀಡಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್:88 ರಲ್ಲಿ 3 ಗುಂಟೆ ಜಮೀನು ಮತ್ತು ಸರ್ವೆ ನಂಬರ್:88/4 ರಲ್ಲಿ 25 ಗುಂಟೆ ಜಮೀನು ಇದ್ದು ಅದರಲ್ಲಿ ವ್ಯವಸಾಯ ಮಾಡಿಕೊಂಡಿದ್ದು ಈ ಜಮೀನಿನ ಪಕ್ಕದಲ್ಲಿ ಅದೇ ಗ್ರಾಮದ ಈ ಕೇಸಿನ ಆರೋಪಿತರ ಜಮೀನು ಇದ್ದು, ಪಿರ್ಯಾದಿದಾರರಿಗೂ ಮತ್ತು ಆರೋಪಿತರಿಗೆ ಜಮೀನುಗಳ ವಿಚಾರದಲ್ಲಿ ತಕರಾರುಗಳಿದ್ದು, 2019 ನೇ ಇಸವಿ  ಆಕ್ಟೋಬರ್ ಮಾಹೆಯ ಮೊದಲ ವಾರದಲ್ಲಿ ಪಿರ್ಯಾದಿದಾರರ ಜಮೀನಿನಲ್ಲಿ ಜೋಳ ಬೆಳೆ ಇಟ್ಟಿದ್ದ ಜಮೀನನ್ನು ಬಿಡಬೇಕೆಂದು ಈ ಕೇಸಿನ ಆರೋಪಿತರಾದ ಬಸವರಾಜು, ಮಹೇಶ್ ಬಾಬು, ಶ್ರೀಮತಿ ಅಶ್ವಥ್ಥಮ್ಮ, ಶ್ರೀಮತಿ ಮಾಲ ರವರುಗಳು ಕೈಗಳಲ್ಲಿ ದೊಣ್ಣೆ, ಅಪಾಯಕರವಾದ ಆಯುಧಗಳನ್ನು ಹಿಡಿದುಕೊಂಡು ಅಕ್ರಮ ಗುಂಪು ಕಟ್ಟಿಕೊಂಡು ಜಮೀನಿನೊಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಹೊಡೆದು ಬೆಳೆ ನಾಶ ಮಾಡಿರುತ್ತಾರೆ. ಈ ವಿಚಾರದಲ್ಲಿ ಪಿರ್ಯಾದಿ ಮತ್ತು ಆರೋಪಿತರ ಮದ್ಯೆ ಓ.ಎಸ್ ನಂ: 393/2019 ರಂತೆ ಜಿಲ್ಲಾ ಪ್ರಧಾನ ನ್ಯಾಯಲಯದಲ್ಲಿ ಸಿವಿಲ್ ಕೇಸು ನಡೆಯುತ್ತಿದ್ದರು ಸಹ ಈ ರೀತಿ ಅಕ್ರಮ ಕೃತ್ಯವೆಸಗಿದ್ದು ಆರೋಪಿತರ ವಿರುದ್ದ ನ್ಯಾಯಲಯ ನಿರ್ದೇಶಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿದ್ದರ ಮೇರೆಗೆ ಈ ಪ್ರ.ವ.ವರದಿ.

 

5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.197/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ: 13-06-2021 ರಂದು ಸಂಜೆ 5.30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಪವನ್ ಕುಮಾರ್ ಹೆಚ್.ಎಂ. ಬಿನ್ ಮಂಜುನಾಥ ಹೆಚ್.ಎನ್., 27 ವರ್ಷ, ಗಾಣಿಗ, ವ್ಯಾಪಾರ ವೃತ್ತಿ, ಹಿಂಡಿಗನಾಳ ಗ್ರಾಮ, ನಂದಗುಡಿ ಹೋಬಳಿ, ಹೊಸಕೋಟೆ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಂಗಮಕೋಟೆ ಕ್ರಾಸ್ ನಲ್ಲಿ ರಮ್ಯಾ ಪ್ಯಾಷನ್ಸ್ ಎಂಬ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ರೆಡಿಮೇಟ್ ಬಟ್ಟೆಗಳನ್ನು ವ್ಯಾಪಾರ ಮಾಡಿಕೊಂಡಿರುತ್ತೇನೆ. ಪ್ರತಿ ದಿನ 9.00 ಗಂಟೆಗೆ ಬಾಗಿಲನ್ನು ತೆಗೆದು ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ 7.00 ಗಂಟೆಗೆ ಬಾಗಿಲನ್ನು ಮುಚ್ಚುತ್ತಿದ್ದೆವು. ತಾನು ಹಾಗೂ ತಮ್ಮ ತಂದೆಯವರಾದ ಮಂಜುನಾಥ ಹೆಚ್.ಎನ್ ಬಿನ್ ನಾರಾಯಣಪ್ಪ ರವರು ಪ್ರತಿ ದಿನ ಅಂಗಡಿಯನ್ನು ನೋಡಿಕೊಳ್ಳುತ್ತಿರುತ್ತೇವೆ. ಕೋವಿಡ್-19 ಪ್ರಯುಕ್ತ ಲಾಕ್ ಡೌನ್ ಇರುವುದರಿಂದ ಅಂಗಡಿಯ ಬಾಗಿಲನ್ನು ತೆಗೆದಿರುವುದಿಲ್ಲ. ಹೀಗಿದ್ದು ಈ ದಿನ ದಿನಾಂಕ: 13-06-2021 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ನಿಮ್ಮ ಅಂಗಡಿ ತೆಗೆದಿರುವುದಾಗಿ ಹೇಳಿದ್ದು, ತಾನು ಹಾಗೂ ತಮ್ಮ ತಂದೆಯವರಾದ ಮಂಜುನಾಥ ರವರು ಕೂಡಲೇ ಅಂಗಡಿಯ ಬಳಿ ಬಂದು ನೋಡಲಾಗಿ ಅಂಗಡಿಯ ಮುಂಭಾಗದ ಡೋರ್ ಗೆ ಅಳವಡಿಸಿದ್ದ ಬೀಗವನ್ನು ಕಿತ್ತು ಹಾಕಿ ಒಳಗಡೆ ಇದ್ದಂತಹ ಸುಮಾರು 9,500-00 ರೂ ನಗದು ಹಣ, ಸುಮಾರು 14,000-00 ರೂ ಬೆಲೆ ಬಾಳುವ ರೆಡಿಮೇಟ್ ಬಟ್ಟೆಗಳನ್ನು ಹಾಗೂ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರದ ಡಿವಿಆರ್ ನ್ನು ದಿನಾಂಕ: 12-06-2021 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಹಾಗೆಯೇ ಬಿಟ್ಟಿರುತ್ತಾರೆ. ಆರೋಪಿಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 197/2021 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ.13.06.2021 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿ ಕೆ.ಸತೀಶ್ ಪಿ.ಎಸ್.ಐ (ಕಾ.ಸು) ರವರು ಆರೋಪಿ ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ದಿನಾಂಕ:13-06-2021 ರಂದು ರಾತ್ರಿ ಸುಮಾರು 7-45 ಗಂಟೆಯಲ್ಲಿ ಪಿ.ಸಿ.280 ಶಶಿಕುಮಾರ್, ಹೆಚ್.ಸಿ.97 ಸುಬ್ರಮಣಿ ಜೀಪ್ ಚಾಲಕ ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಕೆ.ಕೆ.ಪೇಟೆ ಅಯಿಲ್ ಮಿಲ್ ರಸ್ತೆ ಪಕ್ಕದಲ್ಲಿ ಸಾ-ಮಿಲ್ ಆವರಣದಲ್ಲಿ ಒಬ್ಬ ಆಸಾಮಿ ಯಾರೋ ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ರಾತ್ರಿ 8-00 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ನಾಲ್ಕು ಜನರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿದ್ದ ಆಸಾಮಿಯನ್ನು ಹಿಡಿದು ಅವರ ಹೆಸರು ವಿಳಾಸ ಕೇಳಲಾಗಿ ಗಂಗಾ @ ಗಂಗಾಧರ ಬಿನ್ ವೆಂಕಟರಾಯಪ್ಪ ಲೇಟ್, 41 ವರ್ಷ, ಗಾಣಿಗರು ಟೈಲರ್ ಕೆಲಸ, ಲಾಯರ್ ಪ್ರಭಾಕರ ಮನೆಯಲ್ಲಿ ಬಾಡಿಗೆ ವಾಸ ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇವರು ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಪರಿಶೀಲಿಸಲಾಗಿ Raja Whisky 90 ML  ನ 14 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 14 ರ ಬೆಲೆ ಒಟ್ಟು 491-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ Raja Whisky 90 ML  ನ 04 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 04 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಮದ್ಯಪಾನ ಮಾಡಲು ಪರವಾನಗಿ ಇದೆಯೇ ಎಂದು ಪ್ರಶ್ನಿಸಿಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಸ್ಥಳದಲ್ಲಿ ಸಿಕ್ಕಿದ ಮದ್ಯದ ಪಾಕೇಟ್ ಖಾಲಿ ಪಾಕೇಟ್ & ಖಾಲಿ ಗ್ಲಾಸ್ಗಳನ್ನು ಮುಂದಿನ ತನಿಖೆ ಬಗ್ಗೆ ರಾತ್ರಿ 8-10 ರಿಂದ 8-40 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಗಂಗಾ @ ಗಂಗಾಧರ ರವರನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ. 

Last Updated: 14-06-2021 05:53 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080