Feedback / Suggestions

1.ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 429 ಐ.ಪಿ.ಸಿ & 11 (PREVENTION OF CRUELTY TO ANIMALS ACT, 1960 & 8,9,11 KARNTAKA PREVENTION OF COW SLANGHTER & CATTLE PREVENTION ACT-1964:-

          ದಿನಾಂಕ: 13/05/2021 ರಂದು ಮದ್ಯಾಹ್ನ 2-05 ಗಂಟೆಗೆ  ಶ್ರೀ ಜಿ.ಪಿ. ರಾಜು, ಪೊಲೀಸ್ ವೃತ್ತ ನಿರೀಕ್ಷಕರು, ಬಾಗೇಪಲ್ಲಿ ವೃತ್ತ ರವರು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೈನರ್ ವಾಹನ ಮತ್ತು ಜಾನುವಾರಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೇನೆಂದರೆ. ದಿನಾಂಕ 13/05/2021 ರಂದು ಮದ್ಯಾಹ್ನ 1-00  ಗಂಟೆಯಲ್ಲಿ ಸರ್ಕಾರಿ ಜೀಪಿನಲ್ಲಿ  ನಾನು ಮತ್ತು ಅಪರಾಧ ವಿಭಾಗದ ಸಿಬ್ಬಂಧಿಯವರಾದ  ಹೆಚ್.ಸಿ 156 ನಟರಾಜ್, ಪಿಸಿ-276 ಸಾಗರ್, ಪಿಸಿ-214 ಅಶೋಕ್ ರವರು  ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ   ಹೈದ್ರಾಬಾದ್ ಕಡೆಯಿಂದ  ಕಂಟೈನರ್ ನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಿಕೊಂಡು ಬರುತ್ತಿರುವುದಾಗಿ  ಖಚಿತ ಮಾಹಿತಿ ಬಂದಿದ್ದು  ಮಾಹಿತಿ ಮೇರೆಗೆ ನಾವು ಬಾಗೇಪಲ್ಲಿಯ  ಟೋಲ್ ಪ್ಲಾಜಾ ಬಳಿ ಹೋಗಿ ಕಾಯುತ್ತಿದ್ದಾಗ, ಮದ್ಯಾಹ್ನ ಸುಮಾರು 1-30  ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ ಕೆ.ಎ-02-ಎ.ಡಿ-7713  ನೊಂದಣಿ ಸಂಖ್ಯೆಯ ಕಂಟೈನರ್ ವಾಹನ ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ಕಂಟೈನರ್ ವಾಹನದ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ, ವಾಹನದಿಂದ ಚಾಲಕನು  ಇಳಿದು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಪಿಸಿ-156 ನಟರಾಜ, ಪಿಸಿ-276 ಸಾಗರ್ ರವರು  ಹಿಂಬಾಲಿಸಲಾಗಿ ಚಾಲಕನು  ಕೈಗೆ ಸಿಗದೇ ಪರಾರಿಯಾಗಿರುತ್ತಾನೆ.  ನಂತರ ಸದರಿ ವಾಹನವನ್ನು  ಪರಿಶೀಲಿಸಲಾಗಿ ಸದರಿ ಕಂಟೈನರ್ ವಾಹನದಲ್ಲಿ 17 ಜಾನುವಾರುಗಳು ಇದ್ದು, ಜಾನುವಾರುಗಳನ್ನು ಒಂದರ ಮೇಲೊಂದರಂತೆ ಇಕ್ಕಟ್ಟಿನಲ್ಲಿ ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಕೆ.ಎ-02-ಎ.ಡಿ-7713 ನೊಂದಣಿ ಸಂಖ್ಯೆಯ ವಾಹನವನ್ನು ಜಾನುವಾರುಗಳ ಸಮೇತ ಠಾಣೆಯ ಬಳಿಗೆ ತಂದು ನಿಲ್ಲಿಸಿರುತ್ತೆ. ಆದ್ದರಿಂದ ಕೆ.ಎ-02-ಎ.ಡಿ-7713 ನೊಂದಣಿ ಸಂಖ್ಯೆಯ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.40/2021 ಕಲಂ. 143,144,353,504,188,149 ಐ.ಪಿ.ಸಿ & 5(2),5(4) THE KARNATAKA EPIDEMIC DISEASES ACT, 2020:-

     ದಿನಾಂಕ-13/05/2021 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿದಾರರಾದ ಮ.ಪಿ.ಸಿ-595 ರವರು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೆನೆಂದರೆ ತಾನು  ಈ ದಿನದಂದು ಕೋವಿಡ್ 2 ನೇ ಅಲೆಯ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಲಾಕ್ ಡೌನ್ ಹೊರಡಿಸಿರುವ ಸಂಬಂಧ ನಗರದ ಕಂದವಾರ ಬಾಗಿಲು ಬಳಿ ಬಂದೋಬಸ್ತ್ ಕರ್ತವ್ಯಕ್ಕೆ ತನ್ನನ್ನು ಮತ್ತು ಚಿಕ್ಕಬಳ್ಳಾಪುರ ನಗರ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ-ಮಂಜುನಾಯ್ಕ್ ರವರು ನೇಮಿಸಿದ್ದು ಅದರಂತೆ ನಾವಿಬ್ಬರೂ ಸದರಿ ಸ್ಥಳದಲ್ಲಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 05:30 ಗಂಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಕಂದವಾರ ಕೆರೆ ಕಟ್ಟೆಯ ಪಕ್ಕ ಯಾರೋ ಗುಂಪು-ಗುಂಪಾಗಿ ಇದ್ದುದ್ದನ್ನು ನೋಡಿ ತಾನು ಅಲ್ಲಿಗೆ ಹೋಗಿ ಕರ್ಪ್ಯೂ ಜಾರಿಯಿದೆ ಹಾಗೂ ಕೋವಿಡ್-19 ಸಾಂಕ್ರಮಿಕ ರೋಗವು ಹೆಚ್ಚಾಗುತ್ತಿರುವ ಕಾರಣ ಗುಂಪು ಗುಂಪಾಗಿ ಕೂಡಬಾರದು,ಮನೆಗಳಿಗೆ ಹೋಗಿ ಎಂದು ತಿಳಿ ಹೇಳುತ್ತಿದ್ದಾಗ ಗುಂಪಿನಲ್ಲಿದ್ದಅಶೋಕ್ ,ಅನಿಲ್ ಮತ್ತು ಮಂಜುನಾಥ್ ರವರು ಏಕಾಏಕಿ ಬಂದು ತನಗೆ ಅವಾಚ್ಯ ಶಬ್ದಗಳಿಂದ ನಿನ್ನಮ್ಮನ್ ನೀನು ಯಾರು ನನಗೆ ಹೇಳೊಕೆ ನನ್ನಿಷ್ಟ ಎಂದು ಹೋಗೆಲೆ ಎಂದು ಕೂಗಾಡಿ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಗ ಅಲ್ಲೇ ಕರ್ತವ್ಯದಲ್ಲಿದ್ದ ಸಿ.ಪಿ.ಸಿ-203 ಮಂಜುನಾಯ್ಕ್ ರವರು ಸ್ಥಳಕ್ಕೆ ಬಂದು ಯಾಕೆ ಗಲಾಟೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಅಶೋಕ್ ರವರು ಅಲ್ಲೇ ಇದ್ದ ಕಲ್ಲು ಗುಂಡನ್ನು ತೆಗೆದುಕೊಂಡು ಹೊಡೆಯಲು ಬಂದು ಯಾರ್ ನೀನು ನಿನ್ನಮ್ಮನ್ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಇತರರು ಗುಂಪು ಕಟ್ಟಿಕೊಂಡು ಬಂದು ತನಗೂ ಮತ್ತು ಮಂಜುನಾಯ್ಕ್ ರವರಿಗೆ ಹಲ್ಲೆ ಮಾಡಿರುತ್ತಾರೆ  ಹಾಗೂ ಹೆಚ್ಚಿನ ಸಿಬ್ಬಂದಿಗಾಗಿ ಕರೆ ಮಾಡಿದಾಗ ಪಿ,ಸಿ-138 ಮುರಳಿ ರವರು ಬರುವಷ್ಟರಲ್ಲಿ ನೋಡಿ ಗುಂಪಿನಲ್ಲಿದ್ದ ಎಲ್ಲಾರು ಓಡು ಹೋಗಿರುತ್ತಾರೆ. ತನ್ನ ಮೇಲೆ ಹಾಗೂ ತನ್ನ ಜೊತೆಯಲ್ಲಿದ್ದ ಸಿ.ಪಿ.ಸಿ-203 ಮಂಜುನಾಯ್ಕ್ ರವರಿಗೆ ಅಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು,ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವ ಅಶೋಕ್,ಅನಿಲ್, ಮಂಜುನಾಥ್ ಮತ್ತು ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಹಾಗೂ ಸದರಿ  ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳ ಅನುಮತಿಯ ಮೇರೆಗೆ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ,ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.207/2021 ಕಲಂ. 323,324,504,506 ಐ.ಪಿ.ಸಿ :-

     ದಿನಾಂಕ 13-05-2021 ರಂದು ಸಂಜೆ 5-00 ಗಂಟೆಗೆ ಪ್ರಮೀಳಮ್ಮ ಕೊಂ ವೇಣುಗೋಪಾಲರೆಡ್ಡಿ, 48 ವರ್ಷ, ಮನೆ ಕೆಲಸ, ವಕ್ಕಲಿಗರು, ರಾಯಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 12-05-2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿ ತಮ್ಮ ಮನೆ ಬಳಿ ಕುಳಿತುಕೊಂಡಿದ್ದಾಗ ತಮ್ಮ ಗ್ರಾಮದ ತಮ್ಮ ಜನಾಂಗದ ವಾಸಿ ವೆಂಕಟಲಕ್ಷ್ಮಮ್ಮ ಕೊಂ ಲೇಟ್ ವೆಂಕಟರಾಮರೆಡ್ಡಿ ರವರು ತನ್ನ ಬಳಿ ಏಕಾಏಕಿ ತನ್ನನ್ನು ಕುರಿತು ಲೋಪರ್ ಮುಂಡೆ ನಿಮ್ಮ ವಂಶ ಹಾಳಾಗಲಿ ನೀವು ತಮ್ಮ ಜಮೀನಿನಲ್ಲಿ ಟ್ರಾಕ್ಟರ್ ಓಡಿಸಿ ತಮ್ಮ ಜಮೀನನ್ನು ಹಾಳುಮಾಡುತ್ತಿದ್ದರಾ ಎಂದು ಅವಾಶ್ಚ ಶಬ್ದಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ಬೆನ್ನ ಮೇಲೆ ಹೊಡೆದು ನೋವುಂಟು ಮಾಡಿದಳು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿ ನಾಗರಾಜಪ್ಪ ಮತ್ತು ಶಿವಾನಂದರೆಡ್ಡಿ ರವರು ಬಂದು ತನ್ನನ್ನು ಆಕೆಯಿಂದ ರಕ್ಷಸಿದರು. ಆಕೆ ಅಲ್ಲಿಂದ ಹೋಗುವಾಗ ಈ ದಿನ ಉಳಿದುಕೊಂಡಿದ್ದಿಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದಳು. ನಂತರ ತನಗೆ ಮೈ ಕೈ ನೋವು ಜಾಸ್ತಿ ಇದ್ದರಿಂದ ತನ್ನ ಗಂಡ ವೇಣುಗೋಪಾಲರೆಡ್ಡಿ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿರುತ್ತಾರೆ. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ತಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ವೆಂಕಟಲಕ್ಷ್ಮಮ್ಮ ಕೊಂ ಲೇಟ್ ವೆಂಕಟರಾಮರೆಡ್ಡಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.208/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ 13-05-2021 ರಂದು ಸಂಜೆ 6-00 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ  ಕೆ.ನಾರಾಯಣಸ್ವಾಮಿ ರವರು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-13-05-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ  ನಾನು ಮತ್ತು ತನ್ನ ಸಿಬ್ಬಂದಿಯವರಾದ ಹೆಚ್.ಸಿ 249 ಸಂದೀಪ್ ಕುಮಾರ್, ಮತ್ತು ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ನನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-326 ಜೀಪ್ನಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ಮಾಡಿಕೊಂಡು ಅನಕಲ್ಲು ಗ್ರಾಮಕ್ಕೆ ಬಂದಾಗ ಸದರಿ ಗ್ರಾಮದ ಚಿಲ್ಲರೆ ಅಂಗಡಿಯ ಮಾಲೀಕ ನಟರಾಜ್ ರವರು ಸಕರ್ಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 4-5 ಜನರನ್ನು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಸದರಿ ಚಿಲ್ಲರೆ ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸಕರ್ಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸಮವಸ್ರದಲ್ಲಿದ್ದ ನಮ್ಮನ್ನು ಕಂಡು ಅಲ್ಲಿದ್ದ ಸಾರ್ವಜನಿಕರು ಮತ್ತು ಚಿಲ್ಲರೆ ಅಂಗಡಿಯ ಮಾಲೀಕನು ಸ್ಥಳದಿಂದ ಓಡಿ ಹೋಗಿದ್ದು ಅಲ್ಲಿದ್ದ ಸಾರ್ವಜನಿಕನ್ನು ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಟರಾಜ್ ಬಿನ್ ಲೇಟ್ ರಾಮಚಂದ್ರಪ್ಪ, 60 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಅನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಮೋ: 63621132099 ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತಾರೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.209/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ 13-05-2021 ರಂದು ಸಂಜೆ 19-15 ಗಂಟೆಗೆ ಠಾಣೆಯ ಸಿ.ಹೆಚ್.ಸಿ 09 ಅಮರೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 13/05/2021 ರಂದು ಪಿಎಸ್ಐ ಕೆ.ನಾರಾಯಣಸ್ವಾಮಿ ರವರು ಹೆಚ್.ಸಿ.09 ಪಿ.ಎನ್.ಅಮರೇಶ ಆದ ತನಗೆ ಮತ್ತು ಪಿಸಿ 339 ಕರಿಯಪ್ಪ ರವರನ್ನು ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ತಾವು ನಾಯನಹಳ್ಳಿ, ಶ್ರೀನಿವಾಸಪುರ, ನಲಮಾಚನಹಳ್ಳಿ, ವೆಂಕಟಾಪುರ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.45 ಗಂಟೆಗೆ ಮಸಿಲಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿಯಾದ ಸುಜಯ್ ಬಿನ್ ನಾರಾಯಣಸ್ವಾಮಿ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಮೇರೆಗೆ, ಸದರಿ ಸುಜಯ್ ರವರ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ವ್ಯಕ್ತಿ ಓಡಿ ಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಎರಡು ನೀರಿನ ಬಾಟಲುಗಳಿದ್ದು, 4) ಓಪನ್ ಆಗಿದ್ದ  90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೆಟ್ ಗಳು ಇದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮದ್ಯಮಿಶ್ರಿತ ನೀರು ಇದ್ದು, ನೀರಿನ ಬಾಟಲಿಗಳಲ್ಲಿ ಸುಮಾರು ಅರ್ಧ ಭಾಗದಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಸುಜಯ್ ಬಿನ್ ನಾರಾಯಣಸ್ವಾಮಿ, 25 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಮಸಿಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6.00 ರಿಂದ 6.45 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸುಜಯ್ ಬಿನ್ ನಾರಾಯಣಸ್ವಾಮಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.210/2021 ಕಲಂ. 323,324,504,506 ಐ.ಪಿ.ಸಿ :-

     ದಿನಾಂಕ: 14/05/2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾಧಿದಾರರಾದ ನಾಗರಾಜಪ್ಪ ಬಿನ್ ಲೇಟ್ ಹನುಮಂತರಾಯಪ್ಪ, 62 ವರ್ಷ, ಜಿರಾಯ್ತಿ, ವಕ್ಕಲಿಗರು, ಬೂರಗಮಾಕಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ: 13/05/2021 ರಂದು ತಮ್ಮ ತೋಟದಲ್ಲಿ ಹೂವಿನ ಗಿಡಗಳಿಗೆ ಗುಣಿ ಅಗೆಯುವ ಕೆಲಸವಿದ್ದರಿಂದ ತಾನು ಚಿಂತಾಮಣಿ ನಗರದಿಂದ ಕೂಲಿ ಕೆಲಸಕ್ಕಾಗಿ ನಾರಾಯಣಪ್ಪ ಎಂಬುವವರನ್ನು ಕರೆಸಿಕೊಂಡು ತೋಟದಲ್ಲಿ  ಕೆಲಸ ಮಾಡಿಸಿರುತ್ತೇನೆ. ಹೀಗಿರುವಾಗ ಅದೇ ದಿನ ಸಂಜೆ 7.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತನ್ನ ತಮ್ಮ ಅಶ್ವಥರೆಡ್ಡಿ ಬಿನ್ ಲೇಟ್ ಹನುಮಂತರಾಯಪ್ಪ (55 ವರ್ಷ) ರವರು ತಮ್ಮ ಮನೆ ಬಳಿ ಬಂದು ತನ್ನನ್ನು ಕುರಿತು “ಏನೋ ಬೋಳಿ ಮಗನೇ ಚಿಂತಾಮಣಿಯಿಂದ ಕೂಲಿಯವರನ್ನು ಕರೆಸಿ ನಮ್ಮ ಗ್ರಾಮದಲ್ಲಿ ಕೆಲಸ ಮಾಡಿಸುತ್ತಿಯಾ” ಎಂದು ತನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈ ಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಗೆ ಮತ್ತು ಎಡ ಕಣ್ಣಿನ ಬಳಿ ಹೊಡೆದು ರಕ್ತಗಾಯ ಪಡಿಸಿದನು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿ ಮಂಜುನಾಥ ಬಿನ್ ನಾರಾಯಣಸ್ವಾಮಿ ಮತ್ತು ಲಕ್ಷ್ಮಿಪತಿ ಬಿನ್ ರಾಮಾಂಜಿನಪ್ಪ ರವರು ಆತನಿಂದ ನನ್ನನ್ನು ರಕ್ಷಿಸಿದರು. ಆಗ ಆಶ್ವಥರೆಡ್ಡಿ ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದ್ದಿಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು. ನಂತರ ಗಾಯಗೊಂಡಿದ್ದ ತನ್ನನ್ನು ತನ್ನ ಮಗ ಶ್ರೀಧರ್ ರವರು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ದಾಖಲಿಸಿದರು. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಅಶ್ವಥರೆಡ್ಡಿ ಬಿನ್ ಲೇಟ್ ಹನುಮಂತರಾಯಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.211/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005  :-

     ದಿನಾಂಕ: 14-05-2021 ರಂದು ಮದ್ಯಾಹ್ನ 12-30 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ನಾರಾಯಣಸ್ವಾಮಿ ಕೆ. ರವರು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 14-05-2021  ರಂದು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ನಾನು ನಮ್ಮ ಸಿಬ್ಬಂದಿಯವರಾದ ಸಿಪಿಸಿ 430 ನರಸಿಂಹಯ್ಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40-ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅನಕಲ್ಲು ಗ್ರಾಮದ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಬೆಳಗ್ಗೆ 11-15 ಗಂಟೆಗೆ ಅನಕಲ್ಲು  ಗ್ರಾಮದ ಕದಿರಪ್ಪ ರವರ ಅಂಗಡಿ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸಕರ್ಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ, 60 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಅನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳತಕ್ಕದ್ದು.

 

8. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ.188 ಐ.ಪಿ.ಸಿ & 51(b) THE DISASTER MANAGEMENT ACT, 2005  :-

     ದಿನಾಂಕ:13/05/2021 ರಂದು  ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಆನಂದ ಕುಮಾರ್ ಜೆ ಎನ್ ಪೊಲೀಸ್ ನಿರೀಕ್ಷಕರು, ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:13/05/2021 ರಂದು ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಫ್ಲವರ್ ವೃತ್ತದಿಂದ ಚೇಳೂರು ವೃತ್ತದ ಕಡೆ ಗಸ್ತು ಮಾಡುತ್ತಿದ್ದಾಗ ರಸ್ತೆಯ ಎಡಗಡೆಗೆ ಇರುವ ಕಲ್ಪವೃಕ್ಷ ಸ್ಟೋರ್ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಸದರಿ ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಪ್ರಾವಿಜನ್ ಸ್ಟೋರ್/ದಿನಸಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಪ್ರಶಾಂತ್ ಬಿನ್ ಲೇಟ್ ಮಲ್ಲಿಕಾರ್ಜುನಪ್ಪ, 45 ವರ್ಷ, ವ್ಯಾಪಾರ, ವಾಸ ಅಂಜನಿ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಕಲ್ಪವೃಕ್ಷ ಸ್ಟೋರ್ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ.188 ಐ.ಪಿ.ಸಿ & 51(b) THE DISASTER MANAGEMENT ACT, 2005  :-

     ದಿನಾಂಕ:13/05/2021 ರಂದು ಬೆಳಿಗ್ಗೆ 10-15 ಗಂಟೆಗೆ  ಶ್ರೀ.ನಾರಾಯಣಸ್ವಾಮಿ ಪಿಎಸ್ಐ(ಕಾ&ಸು-1) ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ನಾನು ಈ ದಿನ ದಿನಾಂಕ:13/05/2021 ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿ ಹೆಚ್.ಸಿ-245 ಸೋಮಶೇಖರಚಾರಿ  ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಫ್ಲವರ್ ವೃತ್ತದಿಂದ ಚೇಳೂರು ವೃತ್ತದ ಕಡೆ ಗಸ್ತು ಮಾಡುತ್ತಿದ್ದಾಗ ರಸ್ತೆಯ ಬಲಗಡೆ ಇರುವ ಪ್ರಾವಿಷನ್ ಸ್ಟೋರ್/ದಿನಸಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಸದರಿ ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಪ್ರಾವಿಜನ್ ಸ್ಟೋರ್/ದಿನಸಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ರಾಘವೇಂದ್ರ ಬಿನ್ ಕೆ.ಆರ್.ಸತ್ಯನಾರಾಯಣಶೆಟ್ಟಿ, 38 ವರ್ಷ, ವೈಶ್ಯರು, ವ್ಯಾಪಾರ, ವಾಸ ಕೆ.ಪಿ.ಸ್ಟ್ರೀಟ್ ಅಜಾದ್ ಚೌಕ್ ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಪ್ರಾವಿಜನ್ ಸ್ಟೋರ್/ದಿನಸಿ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.57/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 13/05/2021 ರಂದು ಠಾಣಾ ಎ.ಎಸ್.ಐ ಕೃಷ್ಣಪ್ಪ ಜಿ.ವಿ ರವರು ಆರೋಪಿಗಳು, ಪಂಚನಾಮೆ, ನಗದು ಹಣ, ದ್ವಿ-ಚಕ್ರ ವಾಹನಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ,  ದಿನಾಂಕ:12/05/2021 ರಂದು ಮದ್ಯಾಹ್ನ 2.10 ಗಂಟೆಯಲ್ಲಿ ಮಾನ್ಯ ಪಿ.ಎಸ್.ಐ ರವರು ಗಡಿಮಿಂಚೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಬೈಯಣ್ಣ ರವರ ಮಾವಿನ ತೋಟದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಮೌಖಿಕವಾಗಿ ಸೂಚಿಸಿದ್ದು, ಅದರಂತೆ  ಎ.ಎಸ್.ಐ ಕೃಷ್ಣಪ್ಪ ಜಿ.ವಿ ಆದ ತಾನು ಪಂಚರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ ಪಂಚರೊಂದಿಗೆ ಹಾಗೂ ಕೋವಿಡ್-19 ಬಂದೋಬಸ್ತ್ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿಯವರಾದ ಮಂಜುನಾಥ, ಸಿ.ಹೆಚ್.ಸಿ-32 ಠಾಣಾ ಸಿಬ್ಬಂದಿಯಾದ  ಪಿ.ಸಿ -196 ದೇವರಾಜ್ ಬಡಿಗೇರ್, ಪಿ.ಸಿ 490 ಸೋಮಶೇಖರ್, ಪಿ.ಸಿ 200 ಚಂದ್ರಶೇಖರ್, ಪಿ.ಸಿ 434 ಹೊಣ್ಣಪ್ಪ ತಲವಾರ್, ಪಿ.ಸಿ 521 ನಾಗರಾಜ್, ಪಿ.ಸಿ-557 ಶ್ರೀನಿವಾಸ ಮೂರ್ತಿ ಮತ್ತು ಪಿ.ಸಿ-91 ಮಂಜುನಾಥ ರವರನ್ನು ಠಾಣಾ ಜೀಪ್ ಸಂಖ್ಯೆ KA 40 G 60 ರ ವಾಹನದಲ್ಲಿ ಹಾಗೂ ದ್ವಿ-ಚಕ್ರ ವಾಹನಗಳಲ್ಲಿ ತಾವು ಗಡಿಮಿಂಚೇನಹಳ್ಳಿ ಗ್ರಾಮಕ್ಕೆ ಬೇಟಿ ಮಾಡಿ  ಪಿ.ಎಸ್.ಐ ರವರು ತಿಳಿಸಿದ ಗಡಿಮಿಂಚೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಬೈಯಣ್ಣ ರವರ ಮಾವಿನ ತೋಟದಲ್ಲಿ ಮದ್ಯಾಹ್ನ 2.30 ಗಂಟೆಗೆ ಹೋಗಿ ಮಾವಿನ ಮರದ ಕೆಳಗೆ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಮಾವಿನ ಮರದ ಕೆಳಗೆ ಅಂದರ್ ಎಂದು 500 ರೂ ಬಾಹರ್ ಎಂದು 1000 ರೂಗಳು ಎಂದು ಜೋರಾಗಿ ಕೂಗಾಡಿಕೊಂಡು ಅಕ್ರಮವಾಗಿ ಇಸ್ವಟ್ಟು ಜೂಜಾಟ ಆಡುತ್ತಿದ್ದು, ಸದರಿ ಸ್ಥಳಕ್ಕೆ ಪಂಚರೋಂದಿಗೆ ನಾವು ಹೋಗಿ ದಾಳಿ ಮಾಡಲಾಗಿ ಜೂಜಾಟ ಆಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಲು ಪ್ರಾರಂಭಿಸಿದ್ದು ತಾವು ಹೋಗಿ ಅವರನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದು, ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 1) ಮಂಜುನಾಥ ಬಿನ್ ಚಿಕ್ಕ ಅಕ್ಕುಲಪ್ಪ, 40 ವರ್ಷ, ವಕ್ಕಲಿಗರು. ಬಿ.ಎಂ.ಟಿ.ಸಿ ಚಾಲಕ ಮತ್ತು ನಿರ್ವಾಹಕ, ಉಪ್ಪಕುಂಟಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು,  2) ಗಂಗರಾಜು ಬಿನ್ ವೆಂಕಟರಾಯಪ್ಪ, 35 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಮರಪಲ್ಲಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ವೆಂಕಟೇಶ ಬಿನ್ ದೊಡ್ಡ ವೆಂಕಟರಾಯಪ್ಪ, 35 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಕಮ್ಮತ್ತನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ಭಾಸ್ಕರ ಬಿನ್ ಶಿವಶಂಕರಪ್ಪ, 35 ವರ್ಷ, ಲಿಂಗಾಯತರು, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 5) ವೆಂಕಟನಾರಾಯಣ ಬಿನ್ ಕೃಷ್ಣಾರೆಡ್ಡಿ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ಗಡಿಮಿಂಚೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 6) ನಾಗರಾಜ ಬಿನ್ ಚನ್ನಪ್ಪ, 28 ವರ್ಷ, ನಾಯಕರು, ಜಿರಾಯ್ತಿ, ಚಾಕಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 7) ಶಿವಾನಂದ ಬಿನ್ ಅಶ್ವತ್ಥಪ್ಪ, 29 ವರ್ಷ, ನಾಯಕರು, ಜಿರಾಯ್ತಿ, ಗಡಿಮಿಂಚೇನಹಳ್ಳಿ ಗ್ರಾ, ಶಿಡ್ಲಘಟ್ಟ ತಾಲ್ಲೂಕು, 8) ಆನಂದ ಬಿನ್ ನಾರಾಯಣಪ್ಪ, 28 ವರ್ಷ, ಬಲಜಿಗರು, ಕೂಲಿ ಕೆಲಸ,  ಶೆಟ್ಟಿವಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 9) ಗೋಪಾಲರೆಡ್ಡಿ ಬಿನ್ ಕೃಷ್ಣಾರೆಡ್ಡಿ, ವಕ್ಕಲಗರು, ಜಿರಾಯ್ತಿ, ಕಮ್ಮತ್ತನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು 10) ನಾರಾಯಣಸ್ವಾಮಿ ಬಿನ್ ನಾರೆಪ್ಪ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗಳ ಬಳಿ ಪರಿಶೀಲಿಸಲಾಗಿ ಒಟ್ಟು 30,500/-ರೂಗಳು ನಗದು ಹಣ ಇದ್ದು, ನಂತರ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಪೇಪರ್ ಮೇಲೆ ಇಸ್ವಿಟ್ಟು ಎಲೆಗಳು ಅಲ್ಲಲ್ಲಿ ಬಿದ್ದಿದ್ದು, ಅವುಗಳನ್ನು ಪರಿಶಿಲಿಸಲಾಗಿ 52 ಇಸ್ವಿಟ್ಟು ಎಲೆಗಳು ಇದ್ದು, ಪೇಪರ್ ಮೇಲೆ ಒಟ್ಟು 3600/- ರೂ ಹಣ ಬಿದ್ದಿದ್ದು, ಆರೋಪಿಗಳ ಬಳಿ ಇದ್ದ ಹಣ ಮತ್ತು ಸ್ಥಳದಲ್ಲಿದ್ದ ಹಣ ಒಟ್ಟು 34,100/-ರೂಗಳಿರುತ್ತೆ. ನಂತರ ಸದರಿ ಸ್ಥಳದಲ್ಲಿ 5 ದ್ವಿ-ಚಕ್ರ ವಾಹನಗಳು ನಿಲ್ಲಿಸಿದ್ದು ಸದರಿಯವುಗಳನ್ನು ಪರಿಶೀಲಿಸಲಾಗಿ 1) AP-02 BS-8895 Hero Passion pro, 2) KA-01 HD 4740 Honda Activa, 3) KA 40 H 6223 Hero Honda Splendor +, 4) KA 40 EB 4728 Honda Activa ಮತ್ತು 5) KA 40 EF 3045 Hero Splendor +  ವಾಹನಗಳಾಗಿದ್ದು, ನಂತರ ಪಂಚರ ಸಮಕ್ಷಮ ನಗದು ಹಣ 34,100/-ರೂಗಳನ್ನು, 52 ಇಸ್ವಿಟ್ಟು ಎಲೆಗಳನ್ನು ಮತ್ತು ಒಂದು ಪ್ಲಾಸ್ಟಿಕ್  ಪೇಪರನ್ನು ಹಾಗೂ ದ್ವಿ-ಚಕ್ರ ವಾಹನಗಳನ್ನು ಮದ್ಯಾಹ್ನ 2.45 ಗಂಟೆಯಿಂದ 3.45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡುತ್ತಿದ್ದು, ಆರೋಪಿಗಳ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು  ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂಖ್ಯೆ:57/2021 ಕಲಂ:87 ಕ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.94/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿನಾಂಕ 13/05/2021 ರಂದು ಸಂಜೆ 5-30 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ 89 ರವರು ಠಾಣೆಗೆ ಹಾಜರಾಗಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದನ್ನು ಹಾಜರುಪಡಿಸಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ:11/05/2021 ರಂದು ಬೆಳಿಗ್ಗೆ 08-30 ಗಂಟೆಯ ಸಮಯದಲ್ಲಿ ಪಿರ್ಯಾಧಿ ಶ್ರೀ ನಂಜುಂಡ ಶರ್ಮ ಎ.ಎಸ್.ಐ ರವರು ಹೆಚ್.ಸಿ. 102 ಶ್ರೀ ಆನಂದ ರವರೊಂದಿಗೆ ಹಗಲು ಗಸ್ತಿನಲ್ಲಿ ಗುಡಿಬಂಡೆ ಟೌನ್ ನಲ್ಲಿ ಗಸ್ತು ಮಾಡುತ್ತಿದ್ದಾಗ ತನಗೆ 1ನೇ ಗ್ರಾಮ ಗಸ್ತು ಸಿಬ್ಬಂದಿ ಹೆಚ್.ಸಿ.73 ಶ್ರೀ ಹನುಮಂತರಾಯಪ್ಪ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ಟೌನ್ ನ ಶ್ರೀ ಏಳು ಅಕ್ಕಯ್ಯಮ್ಮಗಾರಿ ದೇವಸ್ಥಾನದ ಬಳಿ  ಒಬ್ಬ ಆಸಾಮಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ತಾನು ಹೆಚ್.ಸಿ. 102 ಶ್ರೀ ಆನಂದ ರವರೊಂದಿಗೆ ಗುಡಿಬಂಡೆ ಟೌನ್ ನ ಮಾರುತಿ ಸರ್ಕಲ್ ಬಳಿ ಬೆಳಿಗ್ಗೆ 8-40 ಗಂಟೆಗೆ ಹೋಗಿ ಅಲ್ಲಿದ್ದ ಹೆಚ್.ಸಿ.73 ಶ್ರೀ ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿ ಶ್ರೀ ಏಳು ಅಕ್ಕಯ್ಯಮ್ಮಗಾರಿ ದೇವಸ್ಥಾನದ ಬಳಿಯಿಂದ  ಸ್ವಲ್ಪ ದೂರದಲ್ಲಿ ದ್ವಿಚಕ್ರವಾಹನಗಳಲ್ಲಿ ಹೋಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ  ಶ್ರೀ ಏಳು ಅಕ್ಕಯ್ಯಮ್ಮಗಾರಿ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡಿ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜುನಾಥ ಬಿನ್ ನಾರಾಯಣರೆಡ್ಡಿ 28  ವರ್ಷ, ವಕ್ಕಲಿಗ ಜನಾಂಗ ಜಿರಾಯ್ತಿ, ವಾಸ ಬೋಡಿಬಂಡಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರೀಬಿದನೂರು  ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀರ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 9-00 ಗಂಟೆಯಿಂದ ಬೆಳಿಗ್ಗೆ 10-00 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಮಂಜುನಾಥ ಬಿನ್ ನಾರಾಯಣರೆಡ್ಡಿ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10-15 ಘಂಟೆಗೆ ಠಾಣೆಗೆ ಬಂದು 10-45 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿನಾಂಕ 13/05/2021 ರಂದು ಸಂಜೆ 6-15 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ 89 ರವರು ಠಾಣೆಗೆ ಹಾಜರಾಗಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದನ್ನು ಹಾಜರುಪಡಿಸಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,  ದಿನಾಂಕ:11/05/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ಪಿರ್ಯಾಧಿ ಶ್ರೀ ನಂಜುಂಡ ಶರ್ಮ ಎ.ಎಸ್.ಐ ರವರು ಮತ್ತು ಹೆಚ್.ಸಿ. 102 ಶ್ರೀ ಆನಂದ ರವರೊಂದಿಗೆ ಹಗಲು ಗಸ್ತಿನಲ್ಲಿ ಗುಡಿಬಂಡೆ ಟೌನ್ ನಲ್ಲಿ ಗಸ್ತು ಮಾಡುತ್ತಿದ್ದಾಗ ತನಗೆ ಗುಪ್ತ ಮಾಹಿತಿ ಸಿಬ್ಬಂದಿ ಹೆಚ್.ಸಿ.73 ಶ್ರೀ ಹನುಮಂತರಾಯಪ್ಪ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು  ನ ಚಿಕ್ಕತಮ್ಮನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಆದಿನಾರಾಯಣಪ್ಪ ಎಂಬುವರು ಅವರ ಮನಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ತಾನು ಮತ್ತು ಹೆಚ್.ಸಿ. 102 ಶ್ರೀ ಆನಂದ ರವರೊಂದಿಗೆ ಚಿಕ್ಕತಮ್ಮನಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಬೆಳಿಗ್ಗೆ 11-30 ಗಂಟೆಗೆ ಹೋಗಿ ಅಲ್ಲಿದ್ದ ಹೆಚ್.ಸಿ.73 ಶ್ರೀ ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿ ನರಸಿಂಹಪ್ಪ ಬಿನ್ ಲೇಟ್ ಆದಿನಾರಾಯಣಪ್ಪ ರವರ ಮನಯಿಂದ ಸ್ವಲ್ಪ ದೂರದಲ್ಲಿ ದ್ವಿಚಕ್ರವಾಹನಗಳಲ್ಲಿ ಹೋಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಮಾಹಿತಿಯಂತೆ ನರಸಿಂಹಪ್ಪ ಬಿನ್ ಲೇಟ್ ಆದಿನಾರಾಯಣಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡಿ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಆದಿನಾರಾಯಣಪ್ಪ,  40  ವರ್ಷ, ಬೋವಿ ಜನಾಂಗ ಜಿರಾಯ್ತಿ, ವಾಸ ಚಿಕ್ಕತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾರ್ಡ್ಸ್ ಚೀರ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 11 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*11 =386 ರೂಗಳು (990 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-45 ಗಂಟೆಯಿಂದ ಮದ್ಯಾಹ್ನ 12-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ನರಸಿಂಹಪ್ಪ ಬಿನ್ ಲೇಟ್ ಆದಿನಾರಾಯಣಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 1-00 ಘಂಟೆಗೆ ಠಾಣೆಗೆ ಬಂದು ಮದ್ಯಾಹ್ನ 1-45 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 34,504,324 ಐ.ಪಿ.ಸಿ :-

     ದಿನಾಂಕ 13/05/2021 ರಂದು ಸಂಜೆ 7-00 ಗಂಟೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಲಕ್ಷ್ಮೀನಾರಾಯಣಪ್ಪ ಬಿನ್ ಲೇಟ್ ಮುನಿಯಪ್ಪ ಭತ್ತಲಹಳ್ಳಿ ಗ್ರಾಮ ಗುಡಿಬಂಡೆ ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ 13/05/2021 ರಂದು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ತಾನು ತನ್ನ ಮನೆಯ ಬಳಿ ಸೀಮೆ ಹಸುಗೆ ನೀರನ್ನು ಕುಡಿಸುತ್ತಿದ್ದಾಗ ಆರೋಪಿತರು ತನ್ನ ಮನೆಯ ಮುಸುರೆ ನೀರು, ಮತ್ತು ಗಲೀಜು ನೀರನ್ನು ತಮ್ಮ ಮನೆಯ ಕಡೆ ಬಿಡುತ್ತಿದ್ದರಿಂದ ಈ ನೀರನ್ನು ತಮ್ಮ ಮನೆಯ ಕಡೆ ಬಿಡಬೇಡಿ ಎಂತ ಹೇಳಿದ್ದಕ್ಕೆ ಏ ಬೋಳಿ ನನ್ನ ಮಕ್ಕಳೇ ನಾವು  ಗಲೀಜ್ ನೀರು ಬಿಡುತ್ತೇವೆ, ನೀವು ಏನು ಬೇಕಾದರು ಮಾಡಿಕೊಳ್ಳಿ ಎಂತ ಗಲಾಟೆ ಮಾಡಿ ಕಲ್ಲುನಿಂದ, ಸ್ಪಾನರ್, ಕಬ್ಬಿಣ ರಾಡ್ ನಿಂದ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುತ್ತಾರೆಂತ ನೀಡಿದ ದೂರಿನ ಮೇರೆಗೆ ರಾತ್ರಿ 8-00 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.40/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ:13-05-2021 ರಂದು ಸಂಜೆ 17-30 ಗಂಟೆಗೆ ಪಿ.ಎಸ್.ಐ., ಪಾತಪಾಳ್ಯ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:13-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಪಾತಕೋಟ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ   ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳಲು ಚಿಲ್ಲರೆ ಅಂಗಡಿ ಮುಂದೆ ಬಾಕ್ಸ್ಗಳನ್ನು ಹಾಕಿ ಸದರಿ ಬಾಕ್ಸ್ಗಳಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸಿರುವಾಗ ಸಂಜೆ 5-15 ಗಂಟೆಯಲ್ಲಿ ಪಾತಕೋಟ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿ ಬಳಿ ಜನರು ಗುಂಪಾಗಿ ಸೇರಿದ್ದರು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಅಂಜಿನಪ್ಪ ಬಿನ್ ಲಕ್ಷ್ಮನ್ನ, 55 ವರ್ಷ, ಗಾಣಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಪಾತಕೋಟ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊಬೈಲ್ ಸಂಖ್ಯೆ: 9632238679 ಎಂತ ತಿಳಿಸಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ಅಂಜಿನಪ್ಪ ರವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಅಂಗಡಿ ಮಾಲೀಕ ಅಂಜಿನಪ್ಪ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.157/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 13-05-2021 ರಂದು ಸಂಜೆ 4.00 ಗಂಟೆಯಲ್ಲಿ ಫಿರ್ಯಾದಿದಾರರಾದ ರಂಜಿತ್ .ಕೆ.ಎಂ ಬಿನ್ ಲೇಟ್ ಮುನಿರಾಜು, 28 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನ್ನ ಅಣ್ಣನಾದ ರವಿಚಂದ್ರ ಕೆ.ಎಂ ರವರಿಗೆ 33 ವರ್ಷ ವಯಸ್ಸಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತಾರೆ, ತಮ್ಮ ಬಾಬತ್ತು ಕೆಎ-40-ಎಕ್ಸ್-6352 ಯುನಿಕಾರ್ನ್ ದ್ವಿಚಕ್ರ 0ವಾಹನವಿದ್ದು ಸದರಿ ದ್ವಿಚಕ್ರವಾಹನದ ದಾಖಲಾತಿಗಳು ತನ್ನ ಹೆಸರಿನಲ್ಲಿರುತ್ತೆ, ಸದರಿ ದ್ವಿಚಕ್ರವಾಹವನ್ನು ತಾನು ಮತ್ತು ತನ್ನ ಅಣ್ಣ ರವಿಚಂದ್ರ.ಕೆ.ಎಂ ರವರು ಉಪಯೋಗಿಸುತ್ತಿರುತ್ತೇವೆ. ಈಗಿರುವಲ್ಲಿ  ದಿನಾಂಕ: 06-05-2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತನ್ನ ಅಣ್ಣ ರವಿಚಂದ್ರ.ಕೆ.ಎಂ ಮನೆಗೆ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಕೆಎ-40-ಎಕ್ಸ್-6352 ಹೋಂಡಾ ಯುನಿಕಾರ್ನ್ ದ್ವಿಚಕ್ರ ವಾಹನದಲ್ಲಿ ಕಾಚಹಳ್ಳಿ-ವಿಜಯಪುರ ರಸ್ತೆಯ ನಮ್ಮ ಗ್ರಾಮದ ದೇವರಾಜ ರವರ ಅಂಗಡಿಯ ಮುಂಭಾಗ ಹೋಗುತ್ತಿದ್ದಾಗ ಕಾಚಹಳ್ಳಿ ಗ್ರಾಮದ ಮಣ್ಣಿನ ರಸ್ತೆಯಿಂದ ನಮ್ಮ ಗ್ರಾಮದ ಪ್ರಜ್ವಲ್ ಬಿನ್ ರಮೇಶ್ ರವರು ಆತನ ಬಾಬತ್ತು ಕೆಎ-02-ಜೆ-7252 ಬಜಾಜ್ ಚೇತಕ್ ದ್ವಿಚಕ್ರ ವಾಹನವನ್ನು  ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಅಣ್ಣ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಅಡ್ಡಲಾಗಿ ಬಂದು ಡಿಕ್ಕಿಹೊಡೆಸಿದ ಪರಿಣಾಮ ತನ್ನ ಅಣ್ಣ ಕೆಳಗಡೆ ಬಿದ್ದು ಹೋಗಿ ಆತನಿಗೆ ಮುಖಕ್ಕೆ, ಮೂಗು, ತುಟಿಗೆ  ಎರಡೂ ಕಣ್ಣುಗಳ ಮೇಲೆ ರಕ್ತಗಾಯಗಳಾಗಿರುತ್ತೆ, ಆಗ ಅಲ್ಲಿಯೆ ಇದ್ದ ತಾನು ಮತ್ತು ತಮ್ಮ ಗ್ರಾಮದ ರಾಜಣ್ಣ ಬಿನ್ ಪೂಜಾರಪ್ಪ ಹಾಗೂ ರಾಮಚಂದ್ರ ಬಿನ್ ಗೋವಿಂದಪ್ಪ ರವರುಗಳು ತನ್ನ ಅಣ್ಣ ರವಿಚಂದ್ರ.ಕೆ.ಎಂ ರವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿ ದೇವನಹಳ್ಳಿ ಲೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಹೋಗಿ ಅಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ನಂತರ ವಾಪಸ್ಸು ದೇವನಹಳ್ಳಿ ಮಾನಸ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತೇವೆ. ತನ್ನ ಅಣ್ಣನಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಕೊಪಡಿಸಿಕೊಂಡು ಅರೈಕೆಯಲ್ಲಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಅಣ್ಣ ರವಿಚಂದ್ರ ಕೆ.ಎಂ ರವರಿಗೆ ಅಪಘಾತವುಂಟುಮಾಡಿದ ತಮ್ಮ ಗ್ರಾಮದ ಪ್ರಜ್ವಲ್ ಬಿನ್ ರಮೇಶ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 157/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.158/2021 ಕಲಂ. 353,504,506,34 ಐ.ಪಿ.ಸಿ :-

     ದಿನಾಂಕ:14-05-2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಪಿರ್ಯಾದಿದಾರರಾದ ಮಂಜುನಾಥ ವೈ.ಎನ್. ಬಿನ್ ವೈ.ಎಸ್. ನಾಗರಾಜು. ಕೆ.ಹೆಚ್.ಜಿ-647, ಸುಮಾರು 31 ವರ್ಷ,ವಾಸ:ಜೌಗ್ಪೇಟೆ ಶಿಡ್ಲಘಟ್ಟ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ 10 ವರ್ಷದ ಹಿಂದೆ ಶಿಡ್ಲಘಟ್ಟ ಘಟಕದಲ್ಲಿ ಗೃಹ ರಕ್ಷಕ ದಳಕ್ಕೆ ನೇಮಕವಾಗಿದ್ದು ಅಂದಿನಿಂದ ತಾನು ಶಿಡ್ಲಘಟ್ಟ ಘಟಕದಲ್ಲಿ ಗೃಹ ರಕ್ಷಕನಾಗಿ ಕರ್ತವ್ಯನಿರ್ವಹಿಸುತ್ತಿರುತ್ತೇನೆ, ತನ್ನ ಮೆಟಲ್ ನಂ:647 ಆಗಿರುತ್ತೆ, ತಮ್ಮ ಗೃಹ ಇಲಾಖೆಯ ಶಿಡ್ಲಘಟ್ಟ ಘಟಕಾಧಿಕಾರಿಗಳು ತನಗೆ ಪೊಲೀಸ್ ಇಲಾಖೆ, ಡಿ.ಸಿ.ಕಛೇರಿ, ಆರ್.ಟಿ.ಓ. ಇಲಾಖೆ, ಅಬಕಾರಿ ಇಲಾಖೆ, ಭೂ ಮತ್ತು ಗಣಿ ಇಲಾಖೆ ,ಕಾರಗೃಹ ಇಲಾಖೆ, ಆಸ್ಪತ್ರೆಗಳಲ್ಲಿ, ಕರ್ತವ್ಯಕ್ಕೆ ನೇಮಿಸುತ್ತಿದ್ದು ಸದರಿ ಇಲಾಖೆಗಳಲ್ಲಿ ನಾನು ಕರ್ತವ್ಯ ನಿರ್ವಹಿಸಿರುತ್ತೇನೆ. ತನಗೆ  ಸರ್ಕಾರ ದಿಂದ ದಿನಕ್ಕೆ 380-00 ರೂ ಸಂಬಳದ ಹಣವನ್ನು ನೀಡುತ್ತಿದ್ದರು,ಈಗಿರುವಲ್ಲಿ ದಿನಾಂಕ:06-05-2021 ರಂದು ಶಿಡ್ಲಘಟ್ಟ ಘಟಕಾಧಿಕಾರಿಗಳು ನನಗೆ  ಕೋವಿಡ್-19 ತಡೆಗಟ್ಟುವ ಸಲುವಾಗಿ ಶಿಡ್ಲಘಟ್ಟ ತಾಲ್ಲೂಕು ಪಂಚಾಯ್ತಿ ಕಛೇರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನೇಮಿಸಿದ್ದು ಅದರಂತೆ ತಾನು ಶಿಡ್ಲಘಟ್ಟ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇನೆ.ನಂತರ ಶಿಡ್ಲಘಟ್ಟ ತಾಲ್ಲೂಕು ಪಂಚಾಯ್ತಿಯಲ್ಲಿ ತನಗೆ ಶಿಡ್ಲಘಟ್ಟ ತಾಲ್ಲೂಕು ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಬಂದೋಬಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ದಿನಾಂಕ:07-05-2021 ರಂದು ಮಳ್ಳೂರು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಪಿ.ಡಿ.ಓ ರವರ ಬಳಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇನೆ. ಅಂದಿನಿಂದ ತಾನು ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್-19 ತಡೆಗಟ್ಟುವ ಬಗ್ಗೆ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಈಗಿರುವಲ್ಲಿ ದಿನಾಂಕ:09-05-2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ತಾನು ಮಳ್ಳೂರು ಗ್ರಾಮದ ಬಸ್ಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಮೂರು ಜನ ಅಸಾಮಿಗಳು ಬಂದು ಮಳ್ಳೂರು ಗ್ರಾಮದ ಬಸ್ಸ್ ನಿಲ್ದಾಣದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು ಆಗ ತಾನು ಅವರಿಗೆ ಕೋವಿಡ್ ಇದೇ ಅನಾವ್ಯಶಕವಾಗಿ ಹೊರಗಡೆ ಇರಬೇಡಿ ಮನೆಗಳಿಗೆ ಹೋಗಿ ಎಂದು ಹೇಳಿದ್ದು ಸದರಿ ಮೂರು ಜನ ಅಸಾಮಿಗಳು ಒಟ್ಟಿಗೆ ಸೇರಿಕೊಂಡು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಏ ನೀನು ಯಾವನೋ ನಮ್ಮನ್ನು ಕೇಳುವುದಕ್ಕೆ ನಮ್ಮ ಗ್ರಾಮದಲ್ಲಿ ನಾವು ಯಾವಾಗ ಬೇಕಾದರೂ ಎಲ್ಲಿಬೇಕಾದರೂ ಓಡಾಡುತ್ತೇವೆ ಅದನ್ನು ಕೇಳುವುದಕ್ಕೆ ನೀನು ಯಾರೋ ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದಿದ್ದು ಆಗ ಅವರ ಹೆಸರುಗಳು ತಿಳಿದುಕೊಳ್ಳಲಾಗಿ ಶಿವ ಬಿನ್ ಮುನಿರಾಜು, ಕೃಷ್ಣಮೂರ್ತಿ ಬಿನ್ ಆಂಜಿನಪ್ಪ ಮತ್ತು ಡಿ. ಚಿನ್ನ ಬಿನ್ ದ್ಯಾವಪ್ಪ  ಎಲ್ಲರೂ ಮಳ್ಳೂರು ಗ್ರಾಮ ಎಂತ ತಿಳಿದು ಬಂದಿರುತ್ತೆ.  ಮೂರು ಜನ ಸೇರಿಕೊಂಡು ತಾನು ಧರಿಸಿದ್ದ ಖಾಕಿ ಸಮವಸ್ತ್ರದ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿರುತ್ತಾರೆ, ಅ ಪೈಕಿ ಶಿವ ತನ್ನ ಕೈಯಲ್ಲಿದ್ದ ಲಾಟಿಯನ್ನು ಕಿತ್ತುಕೊಂಡಿರುತ್ತಾನೆ, ಕೃಷ್ಣಮೂತರ್ಿ ಮತ್ತು ಚಿನ್ನಿ ರವರುಗಳಿ ಅಲ್ಲಿಯೇ ಇದ್ದ ಯಾವುದೋ ದೊಣ್ಣೆಗಳನ್ನು ಎತ್ತಿಕೊಂಡು ತನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾರೆ,ತಮ್ಮ ಗ್ರಾಮದಲ್ಲಿ ತಾವು ಎಲ್ಲಿ ಬೇಕಾದರೂ ಓಡಾಡಿಕೊಂಡಿರುತ್ತೇವೆ. ಅದನ್ನೆಲ್ಲಾ ಕೇಳಲು ನೀನು ಯಾವನೋ ಎಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನೀನೇನಾದರೂ ನಮ್ಮನ್ನು ಕೇಳಿದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಗಲಾಟೆಯನ್ನು ಅಲ್ಲಿಯೇ ಇದ್ದ ಮಳ್ಳೂರು ಗ್ರಾಮದ ಪಿಳ್ಳಪ್ಪ ಬಿನ್ ನಲ್ಲಪ್ಪ ಮತ್ತು ಮುನಿಯಪ್ಪ ಬಿನ್ ಬಡಿಗೆಪ್ಪ ರವರು ಕಣ್ಣಾರೆ ನೋಡಿರುತ್ತಾರೆ. ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿದ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ. ನನ್ನ ಮೇಲೆ ಗಲಾಟೆಯಾದ ಬಗ್ಗೆ ನಮ್ಮ ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆಂದು ಇದ್ದ ದೂರಿನ ಮೇರೆಗೆ ಠಾಣಾ ಮೊ.ಸಂ: 158/2021 ಕಲಂ:353,504,506, ರೆ/ವಿ 34 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 15-05-2021 05:13 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080