Feedback / Suggestions

1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 143,323,427,448,504,506 ರೆ/ವಿ 149 ಐಪಿಸಿ :-

     ದಿನಾಂಕ:13/04/2021 ರಂದು ಸಂಜೆ 4:00 ಗಂಟೆಗೆ  ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:09/04/2021  ರಂದು ರಾತ್ರಿ 11:45 ರಲ್ಲಿ  ನನ್ನ ಮಗನಾದ ಶಿವಪ್ಪ ಜಿಎನ್ ಎಂಬುವರು ಮೂತ್ರ ವಿಸರ್ಜನೆಗೆಂದು ಹೋಗಿದ್ದಾಗ  ನಾಯಿ ಬಂದು ಬೊಗಳಿದೆ ಹಾಗೂ ಆ ನಾಯಿ  ಇದೇ ಗ್ರಾಮದ ವಾಸಿಯಾದ ವಾಸಿಯಾದ  ಚಿನ್ನ ನಾರಾಯಣಪ್ಪ ಮತ್ತು  ನರಸಮ್ಮ  ಎಂಬುವರು ಮಲಗಿದ್ದಾಗ  ಅವರ ಮೇಲೆ ಬಿದ್ದಿದೆ  ಇದರಿಂದ ಸದರಿ  ಚಿನ್ನನಾರಾಯಣಪ್ಪ ರವರು  ಶಿವಪ್ಪ ರವರು ನರಸಮ್ಮ ರವರ ಮೇಲೆ ಅತ್ಯಾಚಾರ ಮಾಡಲು ಬಂದಿದ್ದಾರೆಂದು ಸುಳ್ಳು ನೆಪ ಇಟ್ಟುಕೊಂಡು ಅಪ ಪ್ರಚಾರ ಮಾಡಿರುತ್ತಾರೆ. ಈ ವಿಚಾರ ಮುಂದೆಯಿಟ್ಟು 1) ಚಿನ್ನನಾರಾಯಣಪ್ಪ ಬಿನ್ ಮುತ್ತಪ್ಪ 2) ನರಸಮ್ಮ ಕೊಂ ಚಿನ್ನನಾರಾಯಣಪ್ಪ, 3) ಲಕ್ಷ್ಮೀ ನರಸಮ್ಮ ಕೊಂ ಚಿನ್ನ ನಾರಾಯಣಪ್ಪ 4) ರಘು ಬಿನ್ ಚಿನ್ನ ನಾರಾಯಣಪ್ಪ  ರವರು ಮನೆಗೆ ನುಗ್ಗಿ   ಪಾತ್ರೆಗಳನ್ನು ಚೆಲ್ಲಾಪಿಲ್ಲಿಯಾಗಿ  ಮಾಡಿ ಬಟ್ಟೆ ನಾಶಪಡಿಸಿ  ನನಗೆ ಅಶ್ಲೀಲ ಮಾತುಗಳಿಂದ ಬೈದಿರುತ್ತಾರೆ ಹಾಗೂ ದಿನಾಂಕ: 10/04/2021 ರಂದು   5) ನವೀನ್ ಬಿನ್ ಚಿನ್ನ ನಾರಾಯಣಪ್ಪ ರವರು  ಮತ್ತೆ  ಮನೆಗೆ ನುಗ್ಗಿ  ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ  ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:25/2021 ಕಲಂ 143,448,427,323,504,506 ರೆ/ವಿ 149 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 58/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ;13.04.2021 ರಂದು ಮದ್ಯಾಹ್ನ 15:40 ಗಂಟೆಗೆ ಮಾನ್ಯ ಪಿ,ಎಸ್,ಐ ರವರು ಗ್ರಾಮಾಂತರ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:13.04.2021 ರಂದು ಮದ್ಯಾಹ್ನ 15:30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಆನೆಮಡಗು ಕೊತ್ತೂರು ಗ್ರಾಮದ ವಾಸಿ ಶ್ರೀ ಆನಂದ ಬಿನ್ ಲೇಟ್ ಪಾಪಣ್ಣ.32 ವರ್ಷ,ದಿ ಕರ್ನಾಟಕ ಜನಾಂಗ ಕೂಲಿ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ,ವ,ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2021 ಕಲಂ. 87 ಕೆ.ಪಿ. ಆಕ್ಟ್ :-

     ಈ ದಿನ ದಿನಾಂಕ: 14.04.2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಮೈಲಪ್ಪನಹಳ್ಳಿ ಗ್ರಾಮದಿಂದ ಬಚ್ಚಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಜಯರಾಮಪ್ಪರವರ ಜಮೀನು ಬಳಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಹಲಸಿನ ಮರದ ಕೆಳಗಡೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಹೆಚ್.ಸಿ 38 ಸುರೇಶ್ ಪಿ.ಸಿ-264 ನರಸಿಂಹಮೂರ್ತಿ , ಪಿಸಿ 244 ಶಶಿಕುಮಾರ್ , ಪಿಸಿ 180 ಬಾಲಚಂದ್ರ, ಪಿಸಿ 191 ಶಿವರಾಜಕುಮಾರ್ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮೈಲಪ್ಪನಹಳ್ಳಿ ಗ್ರಾಮದಿಂದ ಬಚ್ಚಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಜಯರಾಮಪ್ಪರವರ ಜಮೀನು ಬಳಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಹಲಸಿನ ಮರದ ಬಳಿ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಹಲಸಿನ ಮರದ ಕೆಳಗೆ ಸುಮಾರು 5 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 500/- ರೂ. ಬಾಹರ್ 500/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಓಡಿ ಹೋಗಲು ಪ್ರಯತ್ನಿಸಿದ್ದು, ನಾನು ಮತ್ತು ಸಿಬ್ಬಂದಿಗಳು ಓಡಿ ಹೋಗಿ ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1. ಅರ್ಜುನ್ ಬಿನ್ ಶ್ರೀನಿವಾಸ 25 ವರ್ಷ ಜಿರಾಯ್ತಿ ಆದಿ ಕರ್ನಾಟಕ ಜನಾಂಗ, ಚಾಲಕ ವೃತ್ತಿ ಮೈಲಪ್ಪನಹಳ್ಳಿ ಗ್ರಾಮ  , 2. ಲಕ್ಷ್ಮಣ ಬಿನ್ ಮುನಿಯಪ್ಪ , 30 ವರ್ಷ ಪ.ಜಾತಿ ಗಾರೆ ಕೆಲಸ ವಾಸ ಮೈಲಪ್ಪನಹಳ್ಳಿ ಗ್ರಾಮ , 3. ಸುನೀಲ್ ಬಿನ್ ಕೃಷ್ಣಪ್ಪ , 27 ವರ್ಷ, ಆದಿ ಕರ್ನಾಟಕ ಗಾರೆ ಕೆಲಸ ಮೈಲಪ್ಪನಹಳ್ಳಿ ಗ್ರಾಮ , 4. ಎಂ ಗೋಪಾಲ ಬಿನ್ ಲೇಟ್ ಮಾರಪ್ಪ ಆದಿ ಕರ್ನಾಟಕ ಜನಾಂಗ, 40 ವರ್ಷ ಗಾರೆ ಕೆಲಸ ವಾಸ ಮೈಲಪ್ಪನಹಳ್ಳಿ ಗ್ರಾಮ , 5. ಶ್ರೀನಿವಾಸ ಬಿನ್ ಲೇಟ್ ಮುನಿಶಾಮಪ್ಪ 45 ವರ್ಷ ಪ.ಜಾತಿ ಮೈಲಪ್ಪನಹಳ್ಳಿ ಗ್ರಾಮ ಎಂದು ತಿಳಿಸಿದ್ದು, ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 3100/- ರೂ. ಗಳಿದ್ದು, ಮೇಲ್ಕಂಡ 5 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 3100/- ರೂ. ನಗದು ಹಣವನ್ನು ಮದ್ಯಾಹ್ನ 1-30 ಗಂಟೆಯಿಂದ 2-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.152/2021 ಕಲಂ. 279,337 ಐಪಿಸಿ :-

     ದಿನಾಂಕ 13-04-2021 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಗಂಗಿರೆಡ್ಡಿ ಬಿನ್ ನಾರಾಯಣಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ಗೌನಿಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಸಂಜೆ 7-30 ಗಂಟೆಗೆ ವಾಪಸ್ಸು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ಈ ದಿನ ದಿನಾಂಕ 13-04-2021 ರಂದು ತಾನು ತನ್ನ ಬಾಬತ್ತು ಕೆಎ 40 ಯು 2133 ನೊಂದಣಿ ಸಂಖ್ಯೆಯ ಹಿರೋ ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಬಂದು ಅಲ್ಲಿ ಗೊಬ್ಬರ ಮೂಟೆಯನ್ನು ಹಾಕಿಕೊಂಡು ಊರಿಗೆ ವಾಪಸ್ಸು ಹೋಗಲು  ಇದೇ ದಿನ ಸಂಜೆ  5-00 ಗಂಟೆ ಸಮಯದಲ್ಲಿ ಚಿಂತಾಮಣಿ-ಬಾಗೇಪಲ್ಲಿ ಮುಖ್ಯರಸ್ತೆಯ ಧನಮಿಟ್ಟೇನಹಳ್ಳಿ ಕ್ರಾಸ್ ಸಮೀಪ ಮೇಲ್ಕಂಡ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದರುಗಡೆಯಿಂದ ಬರುತ್ತಿದ್ದ  ಕೆಎ 53 ಎ 2735 ನೊಂದಣಿ ಸಂಖ್ಯೆಯ ಮಹೇಂದ್ರ ರೆನಾಲ್ಪ್ ಲೋಗನ್ ಕಾರ್ ನ ಚಾಲಕ ತನ್ನ ಕಾರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು ತನ್ನ ಬಲ ಹಣೆಗೆ, ಬಲ ಕೆನ್ನೆಗೆ , ಎರಡೂ ಕೈ ಮತ್ತು ಕಾಲುಗಳಿಗೆ ತರಚಿದ ಗಾಯಗಳಾಗಿ ಎಡ ಕಾಲಿಗೆ ಊತಗಾಯವಾಗಿರುತ್ತೆ. ತನ್ನ ದ್ವಿಚಕ್ರ ವಾಹನ ಜಖಂ ಆಗಿರುತ್ತೆ. ಆದ್ದರಿಂದ ತನಗೆ ಅಪಘಾತಪಡಿಸಿದ ಮೇಲ್ಕಂಡ ಕೆಎ 53 ಎ 2735 ನೊಂದಣಿ ಸಂಖ್ಯೆಯ ಮಹೇಂದ್ರ ರೆನಾಲ್ಪ್ ಲೋಗನ್  ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 54/2021 ಕಲಂ. 143,147,341,353,504,506 ರೆ/ವಿ 149 ಐಪಿಸಿ :-

     ದಿನಾಂಕ:13/04/2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ವಿ.ಶಿವಪ್ಪ ಬಿನ್ ವೆಂಕಟರಾಮಪ್ಪ, 56 ವರ್ಷ, ಘಟಕ ವ್ಯವಸ್ಥಾಪಕರು, ಕ.ರಾ.ರ.ಸಾ. ಸಂಸ್ಥೆ, ಗೌರಿಬಿದನೂರು ಘಟಕ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ಗೌರಿಬಿದನೂರು ಘಟಕದ ಘಟಕ ವ್ಯವಸ್ಥಾಪಕನಾದ ವಿ.ಶಿವಪ್ಪ  ಆದ ತಾನು ತಮ್ಮಲ್ಲಿ ದೂರು ನಿಡುತ್ತೀರುವುದೆನೆಂದರೆ ದಿನಾ 12-04-2021 ಶ್ರೀ ಬಾಲಾಜಿ ಚಾಲಕ ಕಂ ನಿರ್ವಾಹಕ  ಬಿಲ್ಲೆ ಸಂಖ್ಯೆ 768 ಅನುಸೂಚಿ ಸಂಖ್ಯೆ 74 ರಲ್ಲಿ ವಾಹನದ ಸಂಖ್ಯೆ ಕೆ.ಎ-40 ಎಫ್-1513 ವಾಹನದಲ್ಲಿ ಮಂಚೇನಹಳ್ಳಿಯಿಂದ ಗೌರಿಬಿದನೂರಿಗೆ ಕಾರ್ಯಚರನೆ ಮಾಡುತ್ತಿದ್ದಾಗ ಸುಮಾರು 16-30 ಗಂಟೆ ಸಮಯದಲ್ಲಿ ಹಿರೇಬಿದನೂರು ಬಳಿ ಇದ್ದಕ್ಕಿದಂತೆ ಸಂಸ್ಥೆಯ ಇತರೆ ಸಿಬ್ಬಂದಿಗಳು ಮತ್ತು ಘಟಕದ ಸಾರಿಗೆ ನೌಕರರ ಒಕ್ಕೂಟದ ಸದಸ್ಯರಾದ 1) ಶ್ರೀ ನಾಗರಾಜ್ ಎಸ್. ಚಾಲಕ ಕಂ ನಿರ್ವಹಕ, ಬಿಲ್ಲೆ ಸಂಖ್ಯೆ 2615 ರವರ ಪತ್ನಿ ಹೆಚ್. ವಿ ಸೌಬಾಗ್ಯ, 2) ಮಹಾಂತೇಶ್ ಚಾಲಕ ಕಂ ನಿರ್ವಾಹಕ, ಬಿಲ್ಲೆ  ಸಂಖ್ಯೆ 376 ರವರ ಪತ್ನಿ ಶ್ರೀಮತಿ ಜ್ಯೋತಿ,  3) ಪ್ರೇಮಾನಂದ ನಾಯ್ಕ ಚಾಲಕ ಕಂ ನಿರ್ವಾಹಕ ಬಿಲ್ಲೆ ಸಂಖ್ಯೆ 670 ರವರ ಪತ್ನಿ ಸೋನು ಬಯಿ ಎಫ್ ನಾಯ್ಕ 4) ಶ್ರೀ ನಾಗರಾಜ ಬೇಗಾರ ಚಾಲಕ ಬಿಲ್ಲೆ ಸಂಖ್ಯೆ 941 ರವರ ಪತ್ನಿ ಶ್ರೀಮತಿ ರೆಷ್ಮ, 5)ಶ್ರೀ ಕೃಷ್ಣೋಜಿ ನಾಯ್ಕ, ಚಾಲಕ ಬಿಲ್ಲೆ ಸಂಖ್ಯೆ5222 ರವರ ಪತ್ನಿಯಾದ ಶ್ರೀಮತಿ ಅನಿತಾ ನಾಯ್ಕ ಹಾಗು ಇನ್ನಿತರ ಸಿಬ್ಬಂದಿಗಳು ಕುಟುಂಬಸ್ಥರು ಗಲಾಭೆಯಲ್ಲಿ ಪಾಲ್ಗೋಂಡಿರುತ್ತಾರೆ, ಸದರಿ ವಾಹನದಲ್ಲಿ ಘಟಕ ವ್ಯವಸ್ಥಾಪಕನಾದ ತಾನು, ಮತ್ತು  ಶ್ರೀ ಎಂ ನಾರಾಯಣಸ್ವಾಮಿ ಪಾರುಪತ್ತೇದಾರರು, ಶ್ರೀ ಸತ್ಯ ನಾರಾಯಣ, ಕಛೇರಿ ಸಹಾಯಕ, ಮತ್ತಿತರರು ಹಾಗೂ 11 ಮಂದಿ ಪ್ರಯಾಣಿಕರು ಇದ್ದರು, ಈ ಘಟನೆ ಸಂಬಂಸಿದಂತೆ ದೃಶ್ಯವಾಳಿಗಳನ್ನು  ಸಂಗ್ರಹಿಸಿ ಈ ದೂರಿನೊಂದಿಗೆ ಲಗತ್ತಿಸಿಲಾಗಿದೆ. ಸದರಿ ವಿಡಿಯೋ ದೃಶ್ಯಾವಳಿಗಳಲ್ಲಿ ಕಂಡು ಬರುವ  ವ್ಯಕ್ತಿಗಳು ಕಂಡು ಬರುವ ವ್ಯಕ್ತಿಗಳನ್ನು ಸಹ ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಲಾಗಿದೆ. ಕರ್ನಾಟಕ ಅಗತ್ಯ ಸೇವ ನಿರ್ವಹಣೆ ಕಾಯ್ದೆ-2013 ರ ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತೀದ್ದು, ಸ್ವ- ಇಚ್ಚೆಯಿಂದ ಕರ್ತವ್ಯಕ್ಕೆ ಹಾಜರಾಗುವ ನಿಷ್ಠಾವಂತ ಸಿಬ್ಬಂದಿಗಳಿಗೆ ಅಡ್ಡಿ ಪಡಿಸಿ ಭಯದ ವಾತಾವರನ ಸರಷ್ಟಿಸುವ ಮತ್ತು ವಾಹನಗಳ ಕಾರ್ಯಚರನೆಗೆ ತೊಂದರೆ ಮಾಡಿ ಸಂಸ್ಥೆಗೆ ನಷ್ಟವುಂಟಾಗಲು ಕಾರಣರಾಗಿರುವ ಹಾಗೂ ಮುಷ್ಕರಕ್ಕೆ ಪ್ರೇರೇಪಿಸುವಂತಹ ಮೇಲ್ಕಂಡ ಸಾರಿಗೆ ನೌಕರರ ಒಕ್ಕೋಟದ ಸದಸ್ಯರು ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ. ಸದರಿ ಘಟನೆಯು ದಿನಾಂಕ:12/04/2021 ರಂದು ಸಂಜೆ ಜರುಗಿದ್ದು ಸದರಿ ಮಾರ್ಗ ಕಾರ್ಯಚರಣೆಯು 13/04/2021 ರಮದು ಮುಗಿದ ನಂತರ ವಾಹನವು ಘಟಕ್ಕೆ ಬಂದ ಕಾರಣ ದರನ್ನು ತಡವಾಗಿ ದಾಖಲಿಸಲು ನೀಡಿದ ದೂರಾಗಿದೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 68/2021 ಕಲಂ. 279,304(ಎ) ಐಪಿಸಿ :-

     ದಿನಾಂಕ:13-04-2021 ರಂದು ರಾತ್ರಿ 9-30 ಗಂಟೆಯಲ್ಲಿ ಪಿರ್ಯಾದಿದಾರರಾದ ಸತೀಶ್  ಬಿನ್ ಅಣ್ಣೇಗೌಡ 38 ವರ್ಷ ವಕ್ಕಲಿಗರು ಬೇಕರಿ ಕೆಲಸ ವಾಸ ಪೆರೇಸಂದ್ರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಸ್ವಂತಃ ಸ್ಥಳ ಮಲ್ಲಾಪುರ ಗ್ರಾಮ ಬೇಲೂರು ತಾಲ್ಲೂಕು ಹಾಸನ ಜಿಲ್ಲೆ ಪೊ:9008860955 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ತನ್ನ ಬಾವನಾದ  ಅಶೋಕ ಬಿನ್ ಸಣ್ಣೇಗೌಡ 40 ವರ್ಷ ರವರು ಈಗ್ಗೆ ಸುಮಾರು 11 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರ ಕ್ರಾಸ್ ನಲ್ಲಿ ನಂದಿನಿ ಬೇಕರಿಯನ್ನು ಪ್ರಾರಂಬಿಸಿ ಪೆರೇಸಂದ್ರ ಕ್ರಾಸ್ ನಲ್ಲಿ ವಾಸವಾಗಿದ್ದು  ಹೀಗಿರುವಾಗ ಈ ದಿನ ದಿನಾಂಕ:13-04-2021 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ ಪೆರೇಸಂದ್ರ ಕ್ರಾಸ್ ನಲ್ಲಿರುವ ನಂದಿನಿ ಬೇಕರಿ ಬಳಿ ಅಶೋಕ ರವರ ಸ್ನೇಹಿತನಾದ ಶಿವಶಂಕರ ಬಿನ್ ವೆಂಕಟರಾಮಪ್ಪ 42 ವರ್ಷ ಆದಿಕರ್ನಾಟಕ ಜನಾಂಗ ಕೂಲಿ ಕೆಲಸ  ವಾಸ ಗರುಡಚಾರ್ಲಹಳ್ಳಿ ಗ್ರಾಮ ರವರು ಬಂದಿದ್ದು  ತಮ್ಮ ಬಾವ ಅಶೋಕ  ಮತ್ತು ಶಿವಶಂಕರ ರವರು ಕೆಲಸದ  ನಿಮಿತ್ತ ಶಿವಶಂಕರ ರವರ ಬಾಬ್ತು KA-40 EA-3179  ನೊಂದಣಿ ಸಂಖ್ಯೆಯ ಹೊಂಡಾ ಶೈನ್ ದ್ವಿ ಚಕ್ರವಾಹನದಲ್ಲಿ  ಮೇಲ್ಕಂಡ ದ್ವಿ ಚಕ್ರವಾಹನವನ್ನು ಶಿವಶಂಕರ ರವರು ಚಾಲನೆ ಮಾಡಿಕೊಂಡು ಹಿಂದೆ ತಮ್ಮ ಬಾವ ಅಶೋಕ ರವರು ಕುಳಿತುಕೊಂಡು ಚಿಕ್ಕಬಳ್ಳಾಪುರ ಕ್ಕೆ ಹೋಗಿದ್ದು ನಂತರ ಇದೇ ದಿನ ದಿನಾಂಕ:13-04-2021 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ತಮಗೆ ಪರಿಚಯಸ್ಥರಾದ ನಾಗರಾಜ್ ಬಿನ್ ಯಾಮನ್ನ 34 ವರ್ಷ ಯಲಗಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ತಮ್ಮ ಬೇಕರಿ ಹತ್ತಿರ ಬಂದು ತಿಳಿಸಿದ್ದೆನೆಂದರೆ ನಾಗರಾಜ್ ರವರು ತಮ್ಮ ಬಾಬ್ತು ಕಾರಿನಲ್ಲಿ ಈ ದಿನ ದಿನಾಂಕ:13-04-2021 ರಂದು ಚಿಕ್ಕಬಳ್ಳಾಪುರದಿಂದ ತಮ್ಮ ಊರಿಗೆ ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಬರುತ್ತಿರುವಾಗ ನಾಗರಾಜ್ ರವರ ಮುಂದೆ ಅದೇ ರಸ್ತೆಯಲ್ಲಿ KA-40 EA-3179  ನೊಂದಣಿ ಸಂಖ್ಯೆಯ ಹೊಂಡಾ ಶೈನ್ ದ್ವಿಚಕ್ರವಾಹನವನ್ನು  ಶಿವಶಂಕರ ರವರು ಚಾಲನೆ ಮಾಡಿಕೊಂಡು ಹಿಂದೆ ಅಶೋಕ ರವರು ಕುಳಿತುಕೊಂಡು ಬರುತ್ತಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಕ್ರಾಸ್ ಸಮೀಪ ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ  ಈ ದಿನ ದಿನಾಂಕ:13-04-2021 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ಬಂದ TN-81 A-2496 ನೊಂದಣಿ ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಅಶೋಕ ಮತ್ತು ಶಿವಶಂಕರ ರವರು ಹೋಗುತ್ತಿದ್ದ KA-40  EA-3179  ನೊಂದಣಿ ಸಂಖ್ಯೆಯ ಹೊಂಡಾ ಶೈನ್ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ದ್ವಿ ಚಕ್ರವಾಹನ ಜಖಂಗೊಂಡು KA-40 EA-3179  ನೊಂದಣಿ ಸಂಖ್ಯೆಯ ಹೊಂಡಾ ಶೈನ್ ದ್ವಿ ಚಕ್ರವಾಹನದಲ್ಲಿದ್ದ ಅಶೋಕ ಮತ್ತು ಶಿವಶಂಕರ ರವರಿಗೆ ತೀವ್ರವಾದ ರಕ್ತಗಾಯಗಳಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರವುದಾಗಿ ತಿಳಿಸಿದ್ದು ಕೂಡಲೆ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಈ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಬಾವ ಅಶೋಕ ಮತ್ತು ಶಿವಶಂಕರ ರವರ ಮೃತದೇಹಗಳನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದು ಮೇಲ್ಕಂಡಂತೆ ಅಪಘಾತಪಡಿಸಿದ TN-81  A-2496 ನೊಂದಣಿ ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಾರಿ ಮತ್ತು ಅದರ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 40/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ 13-04-2021 ರಂದು ಸಂಜೆ 06.00 ಗಂಟೆಗೆ ಪಿ.ಎಸ್.ಐ, ಡಿ. ರಂಜನ್ ಕುಮಾರ್ ,ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರುಪಡಿಸಿದ ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ 13/04/2021 ರಂದು ಮಧ್ಯಾಹ್ನ 16-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಕಟ್ಟಿಗೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ರಾಮರೆಡ್ಡಿ ರವರ ಜಮೀನಿನಲ್ಲಿನ ಬೇವಿನ ಮರದ ಕೆಳಗೆ  ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡುವ ಸಲುವಾಗಿ ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ತಾನು ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ, ಸಿಹೆಚ್ಸಿ-56 ಅಶ್ವಥಪ್ಪ,  ಸಿಹೆಚ್ಸಿ-210 ಕೆ.ಬಿ.ಶಿವಪ್ಪ, ಸಿಪಿಸಿ-519 ಚಂದ್ರಶೇಖರ್ ರವರೊಂದಿಗೆ ಕಟ್ಟಿಗೇನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಕಟ್ಟಿಗೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ರಾಮರೆಡ್ಡಿ ರವರ ಜಮೀನಿನ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿನ ಬೇವಿನ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂದು ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ. ಹಣವನ್ನು ಸ್ಥಳದಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಉಳಿದವರು ಓಡಿಹೋಗಿರುತ್ತಾರೆ. ಸದರಿಯವರನ್ನು  ಸ್ಥಳಕ್ಕೆ ಕರೆದುಕೊಂಡು ಬಂದು ಹೆಸರು ಮತ್ತು ವಿಳಾಸ ಕೇಳಲಾಗಿ 1) ನಾರಾಯಣಸ್ವಾಮಿ ಬಿನ್ ರಾಮರೆಡ್ಡಿ, 41 ವರ್ಷ, ವಕ್ಕಲಿಗರು, ಗಾರೆ ಕೆಲಸ, ವಾಸ ಕಟ್ಟೀಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  2) ದೇವರಾಜ್ ಬಿನ್ ಕದಿರೆಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಕಟ್ಟೀಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ಓಡಿಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 3) ಶಂಕರಪ್ಪ ಬಿನ್ ಲೇಟ್ ಮುನಿಶಾಮಿ, 50 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಕಟ್ಟೀಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 4) ಶ್ರೀನಿವಾಸ@ಸೀನಾ ಬಿನ್ ನಾರಾಯಣಪ್ಪ, 30 ವರ್ಷ, ಜಿರಾಯ್ತಿ, ವಾಸ ಕಟ್ಟೀಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 5) ಮಂಜುನಾಥ ಬಿನ್ ಜಯನ್ನ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 6) ರಾಮಸುಬ್ಬು ಬಿನ್ ವೆಂಕಟರವಣಪ್ಪ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿದರು. ಸ್ಥಳದಲ್ಲಿ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 3800/- ರೂ ನಗದು ಹಣ, 52 ಇಸ್ಟೀಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸದರಿಯವುಗಳನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಸಂಜೆ 4-30 ರಿಂದ 5-30 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 35/2021 ರಂತೆ ದಾಖಲು ಮಾಡಿಕೊಂಡು  ಘನ ನ್ಯಾಯಾಲಯದ ಅನುಮತಿ ಪಡೆದು ರಾತ್ರಿ 09.00 ಗಂಟೆಗೆ ಠಾಣಾ ಮೊ.ಸಂ 40/2021  ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ .39/2021 ಕಲಂ. 78(II) ಕೆ.ಪಿ. ಆಕ್ಟ್ :-

     ದಿನಾಂಕ 13-04-2021 ರಂದು ರಾತ್ರಿ 22-00 ಗಂಟೆಗೆ ಮಾನ್ಯ ಆರಕ್ಷಕ  ವೃತ್ತ ನಿರೀಕ್ಷಕರು ದಾಳಿಯಿಂದ ಠಾಣೆಗೆ ಪಂಚನಾಮೆ. ಇಬ್ಬರು ಆರೋಪಿಗಳು ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಸಾಹೇಬರು ಇದೇ ದಿನ ರಾತ್ರಿ 8-00 ಗಂಟೆಯ ಸಮಯದಲ್ಲಿ ಕಛೇರಿಯಲ್ಲಿದ್ದಾಗ ಅವರಿಗೆ ಬಂದ ಖಚಿತವಾದ ಮಾಹಿತಿ ಏನೆಂದರೆ  ಕೆ ವಿ ಕ್ಯಾಂಪಸ್ ಬಳಿಯ ಮುನಿರಾಜು ಬಿನ್ ದೊಡ್ಡನರಸಿಂಹಯ್ಯ ರವರ ಚ ಟೀ ಅಂಗಡಿಯಲ್ಲಿ ಐಪಿಎಲ್ ಸರಣಿಯ ಕೊಲ್ಕತ್ತಾ –ಮುಂಬೈ ತಂಡಗಳ ಮದ್ಯೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಹಣವನ್ನು ಪಣವಾಗಿ ಕಟ್ಟಿ ಜೂಜಾಟವನ್ನು ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ  ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ  ನೋಟಿಸನ್ನು ಜಾರಿ ಮಾಡಿ ಅವರು ಪಂಚರಾಗಿರಲು ಒಪ್ಪಿದ ನಂತರ  ಠಾಣೆಯಲ್ಲಿದ್ದ ಹೆಚ್ ಸಿ 114 ರವಿಕುಮಾರ್, ಪಿಸಿ 517 ಅಂಬರೀಶ  ರೊಂದಿಗೆ ಸರ್ಕಾರಿ ಜೀಪು ಸಂಖ್ಯೆ  ಕೆಎ-40-ಜಿ-6633 ರಲ್ಲಿ ಅದರ ಚಾಲಕ ಮಂಜುನಾಥ ರವರೊಂದಿಗೆ ಹೊರಟು  ಜಡಲತಿಮ್ಮನಹಳ್ಳಿ  ಗ್ರಾಮದ  ಗೇಟಿನಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಅಲ್ಲಿಂದ ಎಲ್ಲರೂ  ನಡೆದುಕೊಂಡು ಮುನಿರಾಜು ರವರ ಟೀ ಅಂಗಡಿಯ ಬಳಿ ಹೋದಾಗ ಅಂಗಡಿಯಲ್ಲಿ 4 ಜನ ಆಸಾಮಿಗಳು  ಮೊಬೈಲಿನಲ್ಲಿ ಪಂದ್ಯವನ್ನು  ನೋಡಿಕೊಂಡು  ತಂಡಗಳ ಪಂದ್ಯದ ಮೇಲೆ ಒಬ್ಬ ಆಸಾಮಿಯು 500/- ರೂ ಗಳಿಗೆ 1000/- ರುಪಾಯಿಗಳನ್ನು ಕೊಡುವುದಾಗಿ ಹಣವನ್ನು ಪಣವಾಗಿ ಕಟ್ಟಿ ಎಂದು ಸಾವಜನಿಕರಿಗೆ ಪ್ರೇರೆಪಿಸುತ್ತಾ  ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದು ದನ್ನು ಖಚಿತ ಪಡಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ದಂದೆಯ ಮೇಲೆ ದಾಳಿ ನಡೆಯಿಸಿದಾಗ ಸದರಿ ಆಸಾಮಿಗಳ ಪೈಕಿ ಇಬ್ಬರು ಓಡಿ ಹೋಗಿದ್ದು ಮತ್ತಿಬ್ಬರು ಓಡಿಹೋಗಲು ಪ್ರಯತ್ನಿಸಿದ್ದು  ಜೊತೆಯಲ್ಲಿದ್ದ ನಮ್ಮ ಸಿಬ್ಬಂದಿಯವರು ಹಿಡಿದುಕೊಂಡು ಬಂದು ನನ್ನ ಮುಂದೆ ಹಾಜರ್ಪಡಿಸಿದ್ದು ಅವರ ಹೆಸರು ವಿಳಾಸ ಕೇಳಲಾಗಿ 1) ನವೀನ್ ಕುಮಾರ್ ಬಿನ್ ಮುನಿರಾಜು 21 ವರ್ಷ ಪಜಾತಿ ಜನಾಂಗ ವ್ಯಾಪಾರ ವೃತ್ತಿ ಚೊಕ್ಕಹಳ್ಳಿ ಗ್ರಾಮ ಎಂತಲೂ ಮತ್ತೊಬ್ಬ 2) ಅರುಣ್ಕುಮಾರ್ ಬಿನ್ ಅಶ್ವತ್ಥಪ್ಪ 23 ವರ್ಷ ಬಲಜಿಗರು ವ್ಯವಸಾಯ ಚೊಕ್ಕಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲುಕು ಎಂತಲೂ  ತಾವು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದು ಓಡಿಹೋದವರು ಕ್ರಿಕೆಟ್ ಬೆಟ್ಟಿಂಗ್ ಕಟ್ಟಲು ಬಂದಿರುವುದಾಗಿ  ಅವರ ಹೆಸರು ವಿಳಾಸ ತಿಳಿದಿರುವುದಿಲ್ಲಾವೆಂತಲೂ ಪಣಕ್ಕೆ ಇಟ್ಟಿದ್ದ 4000/- ರುಪಾಯಿ ನಗದು ಹಣ ಹಾಗೂ OPPO ಮೋಬೈಲ್ ಪೋನ್ ಇದೆ ಎಂದು ತಿಳಿಸಿದ್ದರ ಮೇರೆಗೆ ನಾವುಗಳು ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು  ವರದಿಯನ್ನು ನೀಡುತ್ತಿದ್ದು  ಆರೋಪಿತರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದುಕೊಂಡು ಸದರಿ ದೂರು ಅಸಂಜ್ಞೀಯ ಪ್ರಕರಣ ವಾಗಿರುವುದರಿಂದ ಎನ್.ಸಿ.ಆರ್ 38/2021 ರೀತ್ಯಾ ದಾಖಲು ಮಾಡಿಕೊಂಡು, ಸದರಿ ಪ್ರಕರಣವು ಅಸಂಜ್ಞೀಯ ಪ್ರಕರಣವಾಗಿರುವುದರಿಂದ ಎನ್ ಸಿ ಆರ್  ಪ್ರಕರಣದಲ್ಲಿ  78(3) ಕೆಪಿ ಆಕ್ಟ್ ರೀತ್ಯಾ ಪ್ರವವರದಿ ದಾಖಲಿಸಿ ಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿ ನೀಡಬೇಕಾಗಿ  ಘನ ನ್ಯಾಯಾದೀಶರಿಗೆ ಮನವಿಯನ್ನು ಸಲ್ಲಿಸಿಕೊಂಡಿದ್ದು  ನ್ಯಾಯಾಲಯದ ಹೆಚ್ ಸಿ 195 ರವರು ನ್ಯಾಯಾದೀಶರಿಂದ ಅನುಮತಿಯನ್ನು ಪಡೆದುಕೊಂಡು  ಬೆಳಗ್ಗೆ 7-30 ಗಂಟೆಗೆ ಠಾಣೆಯಲ್ಲಿ ಹಾಜರ್ಪಡಿಸಿದನ್ನು  ಠಾಣೆಯಲ್ಲಿ ಸ್ವೀಕರಿಸಿ  ಆರೋಫಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 103/2021 ಕಲಂ. 435 ಐಪಿಸಿ :-

     ದಿನಾಂಕ:-13/04/2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ದೇವರಾಜ ಬಿನ್ ಮುನಿಯಪ್ಪ, 26 ವರ್ಷ, ನಾಯಕರು, ಜಿರಾಯ್ತಿ, ವಾಸ-ಕನ್ನಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಕಸಬಾ ಹೋಬಳಿಗೆ ಸೇರಿದ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 11 ರಲ್ಲಿ 5 ಎಕರೆ 25 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ತಾನು ಮತ್ತು ಅಣ್ಣಂದಿರುಗಳು ವಿಭಾಗ ಮಾಡಿಕೊಂಡು ಜಿರಾಯ್ತಿ ಮಾಡಿಕೊಂಡಿರುತ್ತೇವೆ. ತನ್ನ ಅಣ್ಣನಾದ ಆಂಜಿನಪ್ಪ ರವರು ಇತ್ತೀಚೆಗೆ ತನ್ನ ಜಮೀನಿನಲ್ಲಿ ರಾಗಿಯನ್ನು ಬೆಳೆದು ಸುಮಾರು 3 ಟ್ರಾಕ್ಟರ್ ನಷ್ಟು 35000 ರೂ ಬೆಲೆ ಬಾಳುವ ರಾಗಿ ಹುಲ್ಲನ್ನು ತನ್ನ ಜಮೀನಿನಲ್ಲಿ ವಾಮೆಯನ್ನು ಹಾಕಿರುತ್ತಾನೆ. ಹೀಗಿರುವಾಗ ದಿನಾಂಕ 10/04/2021 ರಂದು ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ತಮ್ಮ ಪಕ್ಕದ ಜಮೀನಿನಲ್ಲಿರುವ ತಮ್ಮ ಸಂಬಂಧಿಕನಾದ ಮಂಜುನಾಥ ಬಿನ್ ಚಿಕ್ಕ ಯಲ್ಲಪ್ಪ @ ಚಿಕ್ಕ ಮುನಿಯಪ್ಪ ರವರು ತಮ್ಮ ಜಮೀನಿನಲ್ಲಿದ್ದ ಹುಲ್ಲುವಾಮೆಗೆ ಬೆಂಕಿ ಯನ್ನು ಇಟ್ಟಿದ್ದು, ಆಗ ತನ್ನ ಅಣ್ಣ ಆಂಜಿನಪ್ಪ ರವರು ಸ್ಥಳಕ್ಕೆ ಹೋಗುವಷ್ಟರಲ್ಲಿ ಮಂಜುನಾಥ ರವರು ಅಲ್ಲಿಂದ ಓಡಿ ಹೋಗಿರುತ್ತಾನೆ. ಮಂಜುನಾಥ ರವರು ಬೆಂಕಿ ಇಟ್ಟ ಪರಿಣಾಮ ಜಮೀನಿನಲ್ಲಿದ್ದ ಹುಲ್ಲುವಾಮೆಯು ಪೂರ್ತಿ ಸುಟ್ಟು ಹೋಗಿರುತ್ತದೆ. ಈ ಹಲ್ಲುವಾಮೆಯ ಪಕ್ಕದಲ್ಲಿಯೇ ತನ್ನ ಚಿಕ್ಕಪ್ಪನಾದ ವೆಂಕಟೇಶಪ್ಪ ರವರು ಸುಮಾರು 30.000 ರೂ ಬೆಲೆ ಬಾಳುವ 1500 ಟಮಾಟೋ ಕಡ್ಡಿಗಳನ್ನು ಹಾಕಿದ್ದು, ಅವು ಸಹ ಬೆಂಕಿಯಿಂದ ನಾಶವಾಗಿರುತ್ತದೆ. ಆದರೂ ತಾವು ಈ ಬಗ್ಗೆ ತಮ್ಮ ಗ್ರಾಮದ ಹಿರಿಯರಿಗೆ ತಿಳಿಸಿದ್ದು ಅವರುಗಳು ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಮಂಜುನಾಥ ರವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಮಂಜುನಾಥ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 104/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ 14-04-2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮುತ್ತೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಸರ್ಕಾರಿ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ.ವ. ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯಕ್ಕೆ ಪಿಸಿ-90 ರಾಜಕುಮಾರ್ ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮದ್ಯಾಹ್ನ 1-40 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮನವಿಯ ಮೇರೆಗೆ ಆರೋಪಿಗಳ ವಿರುದ್ದ ಠಾಣಾ ಮೊ.ಸಂ. 104/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಪ್ರ ವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೇನೆ.

 

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ .41/2021 ಕಲಂ. 323,504 ಐಪಿಸಿ :-

     ದಿನಾಂಕ-08.04.2021 ರಂದು ಪಿರ್ಯಾದಿದಾರರಾದ ಶ್ರೀ. ರಾಮಪ್ಪ ಬಿನ್ ಆಂಜಿನಪ್ಪ, ಗೊಲ್ಲರು, ಜಿರಾಯ್ತಿ, ವಾಸ-ನಲ್ಲಿಮರದಹಳ್ಳಿ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ತನ್ನ ತಮ್ಮನಾದ ಕೃಷ್ಣಪ್ಪ ರವರು ಆಗಾಗ ವಿನಾಕಾರಣ ನಮ್ಮ ಮೇಲೆ ಗಲಾಟೆ ಮಾಡುತ್ತಿದ್ದು ಅದರಂತೆ ದಿನಾಂಕ-06.04.2021 ರಂದು ರಾತ್ರಿ 07.00 ರಿಂದ 07.30 ಗಂಟೆಯ ಸಮಯದಲ್ಲಿ ನನ್ನ ಮಕ್ಕಳು ಹಾಗೂ ಹೆಂಡತಿಯ ಮೇಲೆ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಹೊಡೆದು ಗಾಯ ಮಾಡಿದ್ದು, ಸದರಿಯವರನ್ನು ಠಾಣೆಗೆ ಕರೆಸಿ ತನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಬೇಕೆಂದು ನೀಡಿದ ದೂರಿನಂತೆ ಠಾಣಾ  ಪ್ರಭಾರದಲ್ಲಿದ್ದ ಎ.ಎಸ್.ಐ ರಾಮಕೃಷ್ಣಪ್ಪ ನವರು ಎನ್.ಸಿ.ಆರ್ ನಂ-35/2021 ರಂತೆ ಪ್ರಕರಣ ದಾಖಲಿಸಿರುತ್ತಾರೆ. ಪಿರ್ಯಾದಿದಾರರು ನೀಡಿರುವ ದೂರಿನಲ್ಲಿನಲ್ಲಿನ ಅಂಶಗಳು ಅಸಂಜ್ಞೆಯ ಅಪರಾಧಗಳಾಗಿದ್ದು, ಪಿರ್ಯಾದಿ ಮತ್ತು ಗಾಯಾಳುಗಳು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಇವರು ನೀಡಿರುವ ದೂರಿನ ಬಗ್ಗೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಕಲಂ 323, 504 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ದಿನಾಂಕ: 12/04/2021 ರಂದು ಘನ ನ್ಯಾಯಾಲಯಕ್ಕೆ ಅನುಮತಿಯನ್ನು ನೀಡಲು ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ಘನ ನ್ಯಾಯಾಲಯವು ಅದೇ ದಿನ ಅನುಮತಿ ನೀಡಿದ್ದು, ಈ ದಿನ 13/04/2021 ರಂದು ಮದ್ಯಾಹ್ನ 3-30 ಗಂಟೆಗೆ ಮುಂದಿನ ಕಾನೂನು ಕ್ರಮಕ್ಕಾಗಿ ಈ ಪ್ರಕರಣ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 42/2021 ಕಲಂ. 323,504 ರೆ/ವಿ 34 ಐಪಿಸಿ :-

     ದಿನಾಂಕ-08.04.2021 ರಂದು ಪಿರ್ಯಾದಿದಾರರಾದ ಶ್ರೀ. ಕೃಷ್ಣಪ್ಪ ಬಿನ್ ಆಂಜನಪ್ಪ, 45ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ನಲ್ಲಿಮರದಹಳ್ಳಿ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನಾವು 100 ಕುರಿಗಳನ್ನು ಸಾಕಿಕೊಂಡಿದ್ದು ನಮ್ಮ ಪಕ್ಕದ ಮನೆಯ ವಾಸಿ ನಮ್ಮ ಅಣ್ಣನಾದ ರಾಮಪ್ಪ ರವರು ಸಾಕಿರುವ ನಾಯಿ 3 ದಿನಗಳ ಹಿಂದೆ ನಮ್ಮ ಕುರಿಗಳಿಗೆ ಕಚ್ಚಿದ್ದು, ಆಗ ನಾಯಿಯನ್ನು ಸರಿಯಾಗಿ ಭದ್ರಿಸಿಕೊಳ್ಳಿ ಎಂದು ನಮ್ಮ ಅಣ್ಣ ಮತ್ತು ಅವರ ಮನೆಯವರಿಗೆ ತಿಳಿಸಿದ್ದೆ ಆದರೂ ದಿನಾಂಕ-06.04.2021 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ನಮ್ಮ ಅಣ್ಣನವರ ನಾಯಿ ನಮ್ಮ ಕುರಿಗಳನ್ನು ಕಚ್ಚಲು ಓಡಿಸಿಕೊಂಡು ಬಂದಿದ್ದು, ಆಗ ನಾನು ನಾಯಿಗೆ ಕೋಲಿನಿಂದ ಹೊಡೆಯಲು ಹೋದಾಗ ನಾಯಿ ತಪ್ಪಿಸಿಕೊಂಡು ಓಡಿ ಹೋಯಿತು. ಇದನ್ನು ನೋಡಿದ ನಮ್ಮ ಅಣ್ಣ ರಾಮಪ್ಪ, ಅತ್ತಿಗೆ ಅಕ್ಕಯಮ್ಮ ಮತ್ತು ಮಗಳಾದ ಮಾಲಾಶ್ರೀ ರವರು ನನ್ನ ಮೇಲೆ ಜಗಳ ಮಾಡಿ ನೀವು ಯಾರು ನಮ್ಮ ನಾಯಿಯನ್ನು ಹೊಡೆಯಲು ಎಂದು ಕೆಟ್ಟ ಮಾತುಗಳಿಂದ ಬೈದು ನನ್ನನ್ನು ಕೈಗಳಿಂದ ಹೊಡೆದು ಕೆಳಗೆ ಬೀಳಿಸಿ 3 ಜನ ನನ್ನನ್ನು ಹೊಡೆದು ಗಲಾಟೆ ಮಾಡಿರುತ್ತಾರೆ ಆದ್ದರಿಂದ ಇವರನ್ನು ಠಾಣೆಗೆ ಕರೆಸಿ ಸೂಕ್ತ ಬಂದೋಬಸ್ತ್ ಮಾಡಲು ಕೋರಿ ನೀಡಿದ ದೂರಿನಂತೆ  ಠಾಣಾ  ಪ್ರಭಾರದಲ್ಲಿದ್ದ ಎ.ಎಸ್.ಐ ರಾಮಕೃಷ್ಣಪ್ಪ ನವರು ಎನ್.ಸಿ.ಆರ್ ನಂ-36/2021 ರಂತೆ ಪ್ರಕರಣ ದಾಖಲಿಸಿರುತ್ತಾರೆ. ಪಿರ್ಯಾದಿದಾರರು ನೀಡಿರುವ ದೂರಿನಲ್ಲಿನಲ್ಲಿನ ಅಂಶಗಳು ಅಸಂಜ್ಞೆಯ ಅಪರಾಧಗಳಾಗಿದ್ದು, ಪಿರ್ಯಾದಿದಾರರು ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಇವರು ನೀಡಿರುವ ದೂರಿನ ಬಗ್ಗೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಕಲಂ 323, 504 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ದಿನಾಂಕ: 12/04/2021 ರಂದು ಘನ ನ್ಯಾಯಾಲಯಕ್ಕೆ ಅನುಮತಿಯನ್ನು ನೀಡಲು ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ಘನ ನ್ಯಾಯಾಲಯವು ಅದೇ ದಿನ ಅನುಮತಿ ನೀಡಿದ್ದು, ಈ ದಿನ 13/04/2021 ರಂದು ಸಂಜೆ 4-00 ಗಂಟೆಗೆ ಮುಂದಿನ ಕಾನೂನು ಕ್ರಮಕ್ಕಾಗಿ ಈ ಪ್ರಕರಣ ದಾಖಲಿಸಿರುತ್ತೆ.

Last Updated: 14-04-2021 06:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080