ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 67/2021 ಕಲಂ. 323,324,504,506,34 ಐಪಿಸಿ :-

  ದಿನಾಂಕ: 13-03-2021 ರಂದು ರಾತ್ರಿ 8-30ಗಂಟೆ ಸಮಯದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ, ನಾನು ಈಗ್ಗೆ 16 ವರ್ಷಗಳ ಹಿಂದೆ ಆಂದ್ರಪ್ರದೇಶದ ಹಿಂದೂಪುರ ತಾಲ್ಲೂಕು ಸಿಂಗರೆಡ್ಡಿಪಲ್ಲಿ ಗ್ರಾಮದ ತುಂಗ ವೆಂಕಟರವಣಪ್ಪರವರ ಮಗಳಾದ ನಾಗಮಣಿ ಎನ್ ಗಡಿದಂ ದೇವಾಲಯದಲ್ಲಿ ಮಧುವೆಯಾಗಿದ್ದು ನಮಗೆ ಇಬ್ಬರು ಮಕ್ಕಳಿದ್ದು, ಈಗ್ಗೆ 6 ವರ್ಷಗಳಿಂದ ನನ್ನ ಹೆಂಡತಿ ನಾಗಮಣಿರವರ ಮನೆ ಕಡೆಯಿಂದ ಯಾವಾಗಲೂ ಜಗಳ ತೆಗೆದು ಹೊಡೆದು ಹೋಗುತ್ತಿದ್ದರು, ಸದರಿ ಜಗಳದ ವಿಚಾರದಲ್ಲಿ ನನ್ನ ಮನೆಯವರು ಹಾಗೂ ನನ್ನ ಹೆಂಡತಿಯ ಮನೆಯವರು ಸಂದಾನ ಮಾಡಿ ಹೋಗಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ:13-03-2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ  1,ಗಂಗರತ್ನಮ್ಮ @ಗಂಗೂ ಕೋಂ ರಮೇಶ್. 2, ರಾಧಮ್ಮ @ ರಂಗಮ್ಮ .3,ಶಾಂತಿ ಕೋಂ ಸೀನಪ್ಪ 4, ರಮೇಶ್ ರವರು ನಮ್ಮ ಮನೆಗೆ ಬಂದು ನನ್ನನ್ನು ಹೊರಗಡೆ ಕರೆದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ರಮೇಶ ರವರು ಮನೆಯ ಮುಂದೆ ಬಿದ್ದಿದ್ದ ಇಟ್ಟಿಗೆ ಚೂರಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟು ಉಂಟುಮಾಡಿರುತ್ತಾರೆ, ನಂತರ ನನ್ನ ಹೆಂಡತಿ ನಾಗಮಣಿ ಮತ್ತು ನನ್ನ ಹೆಂಡತಿಯ ಅಕ್ಕಂದಿರಾದ 1,ಗಂಗರತ್ನಮ್ಮ @ಗಂಗೂ ಕೋಂ ರಮೇಶ್. 2, ರಾಧಮ್ಮ @ ರಂಗಮ್ಮ .3,ಶಾಂತಿ ಕೋಂ ಸೀನಪ್ಪ ರವರು ನನ್ನನ್ನು ಹಿಡಿದು ಎಳೆದಾಡಿ ಅವರ ಕೈಗಳಿಂದ ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ, ನಂತರ ಮೇಲ್ಕಂಡವರೆಲ್ಲರೂ ಸೇರಿ ನಾಗಮಣಿಗೆ ವಿವಾಹ ವಿಚ್ಛೇದನ ಕೊಡು ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿ ಹೋಗಿರುತ್ತಾರೆ, ನಂತರ ನಾನು ಈ ದಿನ ಸಂಜೆ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 17/2021 ಕಲಂ. 419,420 ಐಪಿಸಿ & 66(D),66(C) (INFORMATION TECHNOLOGY ACT 2008 :-

  ದಿನಾಂಕ:13/3/2021 ರಂದು ಪಿರ್ಯಾದಿ ಶ್ರೀ ಬಿ.ಚನ್ನಕೃಷ್ಣಪ್ಪ ಬಿನ್ ಲೇಟ್ ಭೈರಪ್ಪ,51 ವರ್ಷ, ಪ ಜಾತಿ, ಸಿಮೆಂಟ್ ವ್ಯಾಪಾರ ಚೊಕ್ಕಂಡಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಮೊ ಸಂಖ್ಯೆ:9902952962 ಠಾಣೆಗೆ ಹಾಜರಾಗಿ ನೀಡಿದ  ದೂರು ಏನೆಂದರೆ ನಾನು ವಿಜಯಪುರ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ನಂ:31072243927 ರಂತೆ ಖಾತೆಯನ್ನು ಮಾಡಿಕೊಂಡಿದ್ದು, ಸದರಿ ಖಾತೆಗೆ ಎ ಟಿ ಎಂ ಕಾರ್ಡನ್ನು ಮಾಡಿಸಿಕೊಂಡಿದ್ದು, ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ ದಿನಾಂಕ:13/3/2021 ರಂದು ನಾನು ಮದ್ಯಾನಃ ಸುಮಾರು 04-00 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿ ಇದ್ದಾಗ ಮೊ ಸಂಖ್ಯೆ:8167771870 ಸಂಖ್ಯೆಯಿಂದ ನನ್ನ ಮೊಬೈಲ್ ಗೆ ಕರೆ ಬಂದಿದ್ದು, ನಾನು ಕರೆಯನ್ನು ಸ್ವೀಕರಿಸಲಾಗಿ, ನಾವು ಬ್ಯಾಂಕ್ ನಿಂದ ಮಾತಾಡುತ್ತಿರುವುದಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಲಾಕ್ ಆಗಿರುತ್ತದೆ. ಅದರಿಂದ ನಾವು ನಿಮ್ಮ ಪೊನ್  ನಂಬರ್ ನ್ನು ಸರಿ ಇದಿಯ  ಎಂತ ಕೇಳಿದ.ಹೌದು ಅಂತ ಹೇಳಿದೆ.ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ನಂಬರ್ ಕಳುಹಿಸುತ್ತೇನೆ. ಅದನ್ನು ನೀವು ಹೇಳಿದರೆ ನಿಮ್ಮ ಅಕೌಂಟ್ ಆಕ್ಟೀವ್ ಅಂದರೆ ರಿನಿವಲ್ ಮಾಡುವುದಾಗಿ  ತಿಳಿಸಿದ, ನಾನು ಬ್ಯಾಂಕ್ ಅಧಿಕಾರಿಯಂತ ಹೇಳಿದ್ದಕ್ಕೆ ಇರಬಹುದೆಂತ ನಾನು ನಂಬಿ ನನ್ನ ಮೊಬೈಲ್ ಗೆ ಬಂದಿದ್ದ, ಓ ಟಿ ಪಿ ನಂಬರ್ ನ್ನು ಒಂದು ಭಾರಿ ಹೇಳಿದೆ. ಆದರೆ ಇದು ಸರಿಯಾಗಲಿಲ್ಲ, ಪುನಃ ಹೇಳುವಂತೆ ಮತ್ತೊಂದು ಓಟಿಪಿ ನಂಬರ್ ನ್ನು ಕಳುಹಿಸಿದ, ಅದೇ ರೀತಿ ನನ್ನಿಂದ 05 ಭಾರಿ ಓ ಟಿ ಪಿ ನಂಬರ್ ಪಡೆದು ನನ್ನ ಬ್ಯಾಂಕ್ ಖಾತೆಯಿಂದ ಒಟ್ಟು 84,991/- ರೂಗಳನ್ನು ಐದು ಭಾರಿ ವರ್ಗಾಯಿಸಿಕೊಂಡಿರುವ ಬಗ್ಗೆ ನನ್ನ ಮೊಬೈಲ್ ಗೆ  ಸಂದೇಶಗಳು ಬಂದವು.ಆಗ ನನಗೆ ತಿಳಿಯಿತು ಯಾರೋ ಸೈಬರ್ ಕಳ್ಳರು ನನಗೆ ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ನನ್ನ ಖಾತೆಯಲ್ಲಿದ್ದ ಹಣದ ಫೈಕಿ ಒಟ್ಟು 84,991/- ರೂಗಳನ್ನು ವರ್ಗಾಯಿಸಿ ಕೊಂಡಿರುವುದಾಗಿರುತ್ತದೆ. ಆದುದರಿಂದ ತಾವಂದಿರು ನನಗೆ  ವಂಚಿಸಿರುವ ಮೇಲ್ಕಂಡ  ವ್ಯಕ್ತಿಗಳನ್ನು ಪತ್ತೆ ಮಾಡಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರಗಿಸಲು ತಮ್ಮಲ್ಲಿ ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 36/2021 ಕಲಂ. 279,337 ಐಪಿಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ:13.03.2021 ರಂದು ಪಿರ್ಯಾದಿದಾರರಾದ ಕಿರಣ್ ಕುಮಾರ್ ಎಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07.03.2021 ರಂದು ತಮ್ಮ ತಾಯಿಯವರಾದ ಮುನಿಯಮ್ಮರವರಿಗೆ ಉಷಾರಿಲ್ಲದ ಕಾರಣ ತಮ್ಮ ಬಾಬತ್ತು ಕೆಎ 02 ಇ.ಎನ್ 9921 ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ತಾನು , ತಮ್ಮ ತಾಯಿ ಮುನಿಯಮ್ಮ , ತಮ್ಮ ಅತ್ತೆ ಮುನಿರತ್ನಮ್ಮರವರುಗಳು ಚಿಕ್ಕಬಳ್ಳಾಪುರಕ್ಕೆ ಬರಲು ಸಂಜೆ 4-45 ರಿಂದ 5-00 ಗಂಟೆ ಸಮಯದಲ್ಲಿ ಲಕ್ಕಹಳ್ಳಿ ಗೇಟ್ ನಿಂದ ಸ್ವಲ್ಪ ಮುಂದೆ ಚಿಕ್ಕಬಳ್ಳಾಪುರ ಕಡೆ ರಸ್ತೆಯ ಎಡಗಡೆ ತಾನು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಎಪಿ 39 ಟಿ.ಎನ್ 3616 ಬುಲೇರೋ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರ ಪರಿಣಾಮ ಎಲ್ಲರೂ ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ದ್ವಿ ಚಕ್ರ ವಾಹನ ಜಖಂಗೊಂಡಿದ್ದು, ತಮಗೆ ಅಪಘಾತ ಪಡಿಸಿದ ಎಪಿ 39 ಟಿ.ಎನ್ 3616 ಬುಲೇರೋ ಗೂಡ್ಸ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆಂದು ತನಗೆ ತಲೆಯ ಬಲಗಡೆ , ಬಲಕೆನ್ನೆಯ ಮೇಲೆ ಎರಡೂ ಮೊಣಕಾಲುಗಳಿಗೆ ಮತ್ತು ಇತರೆ ಕಡೆಗಳಲ್ಲಿ ರಕ್ತ ಗಾಯಗಳಾಗಿದ್ದು, ತಮ್ಮ ತಾಯಿಯವರ ತಲೆಯ ಎಡಗಡೆ , ಎಡತೊಡೆಗೆ , ಎರಡೂ ಮೊಣಕಾಲುಗಳಿಗೆ ಮತ್ತು ಇತರೆ ಕಡೆಗಳಲ್ಲಿ ರಕ್ತ ಗಾಯಗಳಾಗಿದ್ದು, ತಮ್ಮ ಅತ್ತೆ ಮುನಿರತ್ನಮ್ಮರವರಿಗೆ ಬಲಕೆನ್ನೆಯ ಮೇಲೆ & ಮೊಣಕೈಗಳಿಗೆ ತರಚಿದ ಗಾಯಗಳಾಗಿರುತ್ತೆ. ತಕ್ಷಣ ಸ್ಥಳದಲ್ಲಿದ್ದವರು ತಮ್ಮನ್ನು ಉಪಚರಿಸಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತನ್ನನ್ನು & ತಮ್ಮ ತಾಯಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೊಗಲು ತಿಳಿಸಿದ್ದು, ಅದರಂತೆ ತಾನು & ತಮ್ಮ ತಾಯಿ ಬ್ಯಾಟರಾಯನಪುರದ ಬಳಿ ಇರುವ ಪ್ರೋ ಲೈಫ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ತಮ್ಮ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಎಪಿ 39 ಟಿ.ಎನ್ 3616 ಬುಲೇರೋ ಗೂಡ್ಸ್ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 37/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:13-03-2021 ರಂದು ಸಂಜೆ 6-45 ಗಂಟೆಗೆ  ಶ್ರೀ ಕೆ.ರವಿಶಂಕರ್ ಡಿವೈ.ಎಸ್.ಪಿ. ಚಿಕ್ಕಬಳ್ಳಾಪುರ  ಉಪ ವಿಭಾಗ ರವರು ಠಾಣೆಗೆ ಹಾಜರಾಗಿ ಆರೋಪಿತರು, ಮಾಲು ಮತ್ತು ಪಂಚನಾಮೆಯನ್ನು  ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:13-03-2021 ರಂದು ತನಗೆ ಬಂದ ಖಚಿತ  ಮಾಹಿತಿಯ ಮೇರೆಗೆ ತಾನು  ಸಿಬ್ಬಂದಿಯೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಹೊಸಹಳ್ಳಿ ಗ್ರಾಮದಿಂದ ಅಂಗರೇಖನಹಳ್ಳಿ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆ ಪಕ್ಕದ ಶ್ರೀ ಚಿಕ್ಕರಂಗಪ್ಪ ರವರ ಜಮೀನಿನಲ್ಲಿ ಇರುವ ಹೊಂಗೆಮರದ ಕೆಳಗೆ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಪಂಚಾಯ್ತಿದಾರರ ಸಮಕ್ಷಮ ದಾಳಿ ಮಾಡಿ ಪಂಚನಾಮೆಯ ಕಾಲದಲ್ಲಿ 52 ಇಸ್ಪೀಟು ಎಲೆಗಳು, ಪಣಕ್ಕೆ ಹಾಕಿದ್ದ ಒಟ್ಟು 21500/-ರೂಗಳ ನಗದು ಹಣ, ಒಂದು ನ್ಯೂಸ್ ಪೇಪರ್ ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಜೂಜಾಟವಾಡುತ್ತಿದ್ದ 1) ಮುನಿಯಪ್ಪ ಬಿನ್ ವೆಂಕಟಪ್ಪ, 46 ವರ್ಷ, ಆಟೋ ಡ್ರೈವರ್, ವಾಸ: ಅಡವಿಗೊಲ್ಲಾರಹಳ್ಳಿ, 2) ಗೋಪಿ ಬಿನ್ ಸಲ್ಲಣ್ಣ, 45 ವರ್ಷ, ಬಲಜಿಗರು, ಜಿರಾಯ್ತಿ, ವಾಸ ಅಜ್ಜವಾರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ಜಯರಾಮಪ್ಪ ಬಿನ್ ಹನುಮಂತಪ್ಪ, 58 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಪಟ್ರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ರಾಜಗೋಪಾಲ ಬಿನ್ ಕೃಷ್ಣಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ,  ವಾಸ ಪಟ್ರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡು ಜೂಜಾಟವಾಡುತ್ತಿದ್ದು ಸ್ಥಳದಿಂದ ಓಡಿ ಹೋದ ಆಸಾಮಿಗಳ ಬಗ್ಗೆ ಸಿಕ್ಕಬಿದ್ದ ಆಸಾಮಿಗಳ ಬಗ್ಗೆ ಕೇಳಲಾಗಿ ತಾಂಡ್ರಮರದಹಳ್ಳಿ ಸುರೇಶ್ ಪೋನ್ ನಂ.8746087539, ಜೂಜಾಟವನ್ನು ಆಡಿಸುತ್ತಿದ್ದ ಆಸಾಮಿ ಮುನಿಯಪ್ಪ @ ಜಾಕ್ವೋಡು, ಅಜ್ಜವಾರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಪೋನ್ ನಂ 9686044828, ಮುನಿಕೃಷ್ಣ ಬಿನ್ ಮುನಿಯಪ್ಪ, 40 ವರ್ಷ, ಪ.ಜಾತಿ, ನಾಯನಹಳ್ಳಿ ಗ್ರಾಮ ಎಂತ ತಿಳಿಸಿರುತ್ತಾರೆ.  ಮೇಲ್ಕಂಡ ಮಾಲುಗಳಾದ 52 ಇಸ್ಪೀಟು ಎಲೆಗಳು, ಪಣಕ್ಕೆ ಹಾಕಿದ್ದ ಒಟ್ಟು 21500/- ರೂಗಳ ನಗದು ಹಣ, ಒಂದು ನ್ಯೂಸ್ ಪೇಪರ್ ನ್ನು ಅಮಾನತ್ತು ಪಡಿಸಿಕೊಂಡಿದ್ದು ಸದರಿ ಮಾಲುಗಳನ್ನು ಮತ್ತು ಜೂಜಾಟದಲ್ಲಿ ಸಿಕ್ಕಿಬಿದ್ದ ಮೇಲ್ಕಂಡ 4 ಜನ ಆಸಾಮಿಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ  ವರದಿಯ ಮೇರೆಗೆ ಈ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 106/2021 ಕಲಂ. 279,337  ಐಪಿಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ: 13/03/2021 ರಂದು ಠಾಣೆಯ ಸಿ.ಹೆಚ್.ಸಿ-03 ರಾಜಣ್ಣ ರವರು ಕೋಲಾರ ನಗರದ ಆಕ್ಸಿಡೆಂಟ್ ಅಂಡ್ ಟ್ರಾಮಾ ಕೇರ್ ಸೆಂಟರ್ ಮತ್ತು ಅಮೂಲ್ಯ ಆರ್ಥೋಪೆಡಿಕ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹರೀಶ್.ಬಿ.ಎನ್ ಬಿನ್ ನಾರಾಯಣಸ್ವಾಮಿ, 25 ವರ್ಷ, ಆದಿ ಕರ್ನಾಟಕ ಜನಾಂಗ, ಕಾರ್ಪೆಂಟರ್ ಕೆಲಸ, ಬಿಟ್ಟಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರು ಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 11/03/2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತಾನು ಆಲಂಬಗಿರಿ ಗ್ರಾಮದ ತನ್ನ ಬಾಮೈದ ಆದರ್ಶ ರವರೊಂದಿಗೆ ಆತನ ಬಾಬತ್ತು ನಂಬರ್ KA-07 1829 ಹೊಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ಕೆಲಸ ನೀಮಿತ್ತ ಮೈಲಾಂಡ್ಲಹಳ್ಳಿ ಗೇಟ್ ಗೆ ಬಂದು ನಂತರ ವಾಪಸ್ ತಮ್ಮ ಗ್ರಾಮಕ್ಕೆ ಬರಲು ಸಂಜೆ 4.00 ಗಂಟೆ ಸಮಯದಲ್ಲಿ ಗಡದಾಸನಹಳ್ಳಿ ಗೇಟ್ ನಿಂದ ಸುಮಾರು 100 ಮೀಟರ್ ಮುಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಬೊಲೇರೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದಾಗ ತಾನು ಮತ್ತು ತನ್ನ ಬಾಮೈದ ಆದರ್ಶ ರವರು ದ್ವಿಚಕ್ರ ವಾಹನದಿಂದ ಕೆಳಕ್ಕೆ ಬಿದ್ದು ಹೋಗಿರುತ್ತೇವೆ. ಕೆಳಗೆ ಬಿದ್ದಾಗ ಅಪಘಾತಪಡಿಸಿದ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ ನಂಬರ್ AP-39 TC-9764 ಬೊಲೇರೋ ವಾಹನ ಆಗಿರುತ್ತೆ. ಆದರೆ ಅದರ ಚಾಲಕ ತಮ್ಮನ್ನು ಉಪಚರಿಸದೆ ವಾಹನ ಸಮೇತ ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ಅಪಘಾತದ ಪರಿಣಾಮ ತಮ್ಮ ದ್ವಿಚಕ್ರ ವಾಹನ ಜಖಂ ಗೊಂಡು, ತನ್ನ ಬಾಮೈದ ಆದರ್ಶನಿಗೆ ಕೈ ಕಾಲು ಮತ್ತು ಮೈ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತೆ ಹಾಗೂ ತನಗೆ ಎಡಕಾಲಿನ ಪಾದಕ್ಕೆ, ಎರಡೂ ಕಾಲಿನ ಮೊಣಕಾಲುಗಳೀಗೆ, ತೊಡೆಗಳಿಗೆ ಮತ್ತು ಕೈ ಕಾಲುಗಳಿಗೆ ಗಾಯಗಳಾಗಿ, ಬಲಕೈ ಭುಜಕ್ಕೆ ರಕ್ತಗಾಯವಾಗಿರುತ್ತೆ. ಎಡಕೈಗೆ ತರಚಿದ ಗಾಯಗಳಾಗಿರುತ್ತೆ. ಮುಖಕ್ಕೆ ತರಚಿಕೊಂಡಿದ್ದು, ತುಟಿಗಳಿಗೆ ಸೀಳಿದ್ದು 5 ಹೊಲಿಗೆ ಹಾಕಿರುತ್ತಾರೆ. ತಲೆಯ ಬಲಭಾಗಕ್ಕೆ, ಎಡಭಾಗಕ್ಕೆ ಮತ್ತು ಹಿಂದಕ್ಕೆ ರಕ್ತಗಾಯಗಳಾಗಿರುತ್ತೆ. ನಂತರ ಆದರ್ಶ ತನ್ನನ್ನು ಯಾವುದೋ ವಾಹನದಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಲ್ಲಿಂದ ಕೋಲಾರ ನಗರದ ಆಕ್ಸಿಡೆಂಟ್ ಅಂಡ್ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ಮೇಲ್ಕಂಡಂತೆ ತಮಗೆ ಅಪಘಾತವನ್ನುಂಟು ಮಾಡಿ, ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುವ ನಂಬರ್ AP-39 TC-9764 ಬೊಲೇರೋ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 50/2021 ಕಲಂ. ಮನುಷ್ಯ ಕಾಣೆ:-

  ದಿನಾಂಕ: 13/03/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಬಿ ಗಂಗಾಧರಪ್ಪ ಬಿನ್ ಹನುಂತಪ್ಪ, 65 ವರ್ಷ, ಕುರುಬ ಜನಾಂಗ, ಜಿರಾಯ್ತಿ ಕೆಲಸ, ತೇಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನಗೆ ಐದು ಜನ ಮಕ್ಕಳಿದ್ದು  ನಾಲ್ಕನೇ ಮಗನಾದ ತಿರುಮಲೇಶ್ 25 ವರ್ಷ ರವರು ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದು, ಮಾತುಗಳನ್ನು ಸ್ಪಷ್ಟವಾಗಿ ಆಡುತ್ತಿರಲಿಲ್ಲ ಆದ್ದರಿಂದ ಇವನು ಮನೆಯಲ್ಲಿ ಇರುತ್ತಿದ್ದನು ಹಿಗೀರುವಲ್ಲಿ ದಿನಾಂಕ: 05/03/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ನಾವು ಯಾರೂ ಇಲ್ಲದಿದ್ದಾಗ ನನ್ನ ಮಗ ತಿರುಮಲೇಶ್ ರವರು ನಮ್ಮ ಮನೆಯಿಂದ ಕಾಣೆಯಾಗಿರುತ್ತಾನೆ, ನಾವು ಬಂದುಗಳ ಮನೆಯಲ್ಲಿ ಹಾಗೂ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಆದರೂ ಮನೆಗೆ ಬರುತ್ತಾನೆ ಎಂದು ಇಲ್ಲಿಯವರೆಗೂ ದೂರನ್ನು ನೀಡಿರುವುದಿಲ್ಲ ಆದರೂ ಮನೆಗೆ ಬಾರದ ಕಾರಣ ದೂರು ನೀಡುತ್ತಿದ್ದು ಕಾಣೆಯಾದ ನನ್ನ ಮಗನನ್ನು ಹುಡುಕಿಕೊಡಬೇಕಾಗಿ ಕೋರಿ ನೀಡಿದ ದೂರು.

 

7. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:14/03/2021 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ಉಮಾದೇವಿ ಕೋಂ ನರಸಿಂಹಮೂರ್ತಿ,32 ವರ್ಷ, ಗೊಲ್ಲರು, ಕೋಲಿ, ವಾಸ:ಜಕ್ಕಲಮಡಗು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ 15 ವರ್ಷಗಳ ಹಿಂದೆ ನರಸಿಂಹಮೂರ್ತಿ ಎಂಬುವರೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಮೊದಲನೇ ಮಗಳಾದ ಸುಪ್ರಿತ-13 ವರ್ಷ, 2ನೇ ಮಗಳಾದ ಕುಶ್ಮಿತ-9 ವರ್ಷ, ಮಕ್ಕಳು ಮತ್ತು ತಾವೆಲ್ಲರೂ ಒಟ್ಟಿಗೆ ವಾಸವಾಗಿದ್ದು, ತನ್ನ ಗಂಡ ತಾನು ಕೂಲಿಯಿಂದ ಜೀವನ ನಡೆಸುತ್ತಿದ್ದು, ಅದರಂತೆ ದಿನಾಂಕ:13/03/2021 ರಂದು ತನ್ನ ಗಂಡನಾದ ನರಸಿಂಹಮೂರ್ತಿ ರವರು ಬೆಳ್ಳಿಗ್ಗೆ ತಮ್ಮ ಗ್ರಾಮದಿಂದ ಬನ್ನಿಕುಪ್ಪೆ ಗ್ರಾಮದಲ್ಲಿ ತನ್ನ ಮಕ್ಕಳು, ಸುಪ್ರಿತಾ ಮತ್ತು ಕುಶ್ಮಿತಾ ರವರನ್ನು ಕರೆದುಕೋಂಡು ಬರಲು ತಮ್ಮ ಗಂಡನ ಬಾಬತ್ತು KA-40 H-4373 ಹೀರೋ ಹೋಂಡಾ ಸ್ಪ್ಲೆಂಡರ್ ವಾಹನದಲ್ಲಿ ಹೋಗಿ ಸಂಜೆ 6:15 ಗಂಟೆಗೆ ತನ್ನ ಗಂಡ ಮಕ್ಕಳನ್ನು ಕರೆದುಕೂಂಡು ಗ್ರಾಮಕ್ಕೆ ಬರುವಾಗ ಕಣಿವೆನಾರಾಯಣಪುರದ ಗ್ರಾಮದ ಬಳಿ ಅಪಘಾತವಾಗಿದೆ, ಎಂದು ವಿಚಾರ ದೂರವಾಣಿ ಮೂಲಕ ಗ್ರಾಮಸ್ಥರು ತಿಳಿಸಿದಾಗ ತಾನು ಮತ್ತು ತನ್ನ ಅಣ್ಣನಾದ ರಮೇಶ್ ರವರು  ಸ್ಥಳಕ್ಕೆ ಹೋಗಿ ನೋಡಲಾಗಿ 2 ವಾಹನಗಳು ಸ್ಥಳದಲ್ಲಿದ್ದು ತನ್ನ ಗಂಡ ನರಸಿಂಹಮೂರ್ತಿ ಮತ್ತು ಮಕ್ಕಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಡ್ಡಿರುತ್ತೆ, ಎಂದು ತಿಳಿಸಿದರು ಆಗ ತಾವುಗಳು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಬಳಿ ಹೋದಾಗ ತನ್ನ ಗಂಡ ಮತ್ತು ತನ್ನ ಮಕ್ಕಳಿಗೆ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ತನ್ನ ಗಂಡ ನರಸಿಂಹಮೂರ್ತಿರವರನ್ನು ಕುರಿತು ಅಪಘಾತದ ಬಗ್ಗೆ ಕೇಳಲಾಗಿ ಅವರು ನಾನು ಸಂಜೆ ಬನ್ನಿಕುಪ್ಪೆ ಗ್ರಾಮದಿಂದ ಸಂಜೆ 5:00 ಗಂಟೆಗ ನನ್ನ ದ್ವಿಚಕ್ರ ವಾಹನ ಕೆ.ಎ 40 ಹೆಚ್ 4373 ವಾಹನದಲ್ಲಿ ಸುಪ್ರಿತಾ ಮತ್ತು ಕುಶ್ಮಿತಾ ರವರನ್ನುಹಿಂಬಾಗದಲ್ಲಿ ಕುಳಿಸಿಕೊಂಡು ನಾನು ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಮುದ್ದೇನಹಳ್ಳಿ ಮಾರ್ಗವಾಗಿ ಕಣಿವೆನಾರಾಯಣಪುರ ಗ್ರಾಮದ ಮೂರ್ತಿ ರವರ ಮನೆಯ ಬಳಿ 6:15 ಗಂಟೆಗೆ ಹೋಗುತ್ತಿದ್ದ ಹಾಗೆಯೇ ಕ್ರಷರ್ ಗಳ ಕಡೆಯಿಂದ ಮುದ್ದೇನಹಳ್ಳಿ ಕಡೆಗೆ KA-03 AE 3429 ಬೋಲೋರೋ ಲಗೇಜ್ ಗೂಡ್ಸ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಗಾರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ನನ್ನ ದ್ವಿಚಕ್ರ ವಾಹನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾವು 3 ಜನರೂ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ನನಗೆ ಬಲಕಾಲಿನ ತೊಡೆಗೆ ಮತ್ತು ಬಲಕೈಗೆ ರಕ್ತಗಾಯಗಳಾಗಿರಯತ್ತೆ, ನನ್ನ ಮಕ್ಕಳಾದ ಸುಪ್ರಿತಾ ರವರಿಗೆ ಬಲಕಾಲಿನ ಮೊಣಕಾಲಿನ ಕೆಳಭಾಗ ರಕ್ತಗಾಯವಾಗಿರುತ್ತೆ, ಸುಷ್ಮಿತಾ ರವರಿಗೆ ಬಲಕಾಲಿಗೆ ರಕ್ತಗಾಯಗಳಾಗಿರುತ್ತೆ, ಆಗ ಅಲ್ಲೆ ಇದ್ದ ಸಾರ್ವಜನಿಕರು 108 ಆಂಬ್ಯುಲೆನ್ಸ್ ಗೆ ಕರೆಮಾಡಿ ನಮ್ಮನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಎಂದು ತಿಳಿಸಿದನು. ನಂತರ ಸರ್ಕಾರಿ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿ ನಗರದ ಬೋರಿಂಗ್ ಆಸ್ಪತ್ರೆಗೆ ತನ್ನ ಗಂಡ ನರಸಿಂಹಮೂರ್ತಿ, ತನ್ನ ಮಗಳಾದ ಸುಪ್ರಿತಾರವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದಾಗ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿ ನಗರದ ಅಗ್ರಹಾರ ದಾಸರಹಳ್ಳಿಯಲ್ಲಿರುವ ಮಧು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ನಂತರ ಈ ದಿನ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ ತನ್ನ ಗಂಡ ನರಸಿಂಮೂರ್ತಿ ಮತ್ತು ತನ್ನ ಮಕ್ಕಳಾದ ಸುಪ್ರಿತಾ ಮತ್ತು ಕುಶ್ಮಿತಾ ರವರಿಗೆ ಅಪಘಾತ ಪಡಿಸಿದ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ, ಅಪಘಾತ ಪಡಿಸಿದ KA-03 AE 3429 ಬೋಲೋರೋ ವಾಹನ ಮತ್ತು ಅದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಿ ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 60/2021 ಕಲಂ. 143,147,323,324,504,506,149 ಐ.ಪಿ.ಸಿ:-

  ದಿನಾಂಕ: 13-03-2021 ರಂದು ರಾತ್ರಿ 8-45 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊವನ್ನು ಪಡೆದುಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಅನೀಲ್ ಕುಮಾರ್ ಬಿನ್ ಲೇಟ್ ರಾಜ, 21 ವರ್ಷ, ವಕ್ಕಲಿಗರು, ವಾಸ: 3ನೇ ವಾರ್ಡ್, ವಾಸವಿ ರಸ್ತೆ, ಶಿಡ್ಲಘಟ್ಟ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ: 11-03-2021 ರಂದು ರಾತ್ರಿ 10.30 ಗಂಟೆ ಸಮಯದಲ್ಲಿ ತಾನು ಹಾಗೂ ತನ್ನ ಸ್ನೇಹಿತನಾದ ಮುನಿರಾಜು ರವರು ಮಯೂರ ಸರ್ಕಲ್ ನಲ್ಲಿದ್ದಾಗ ಇದ್ಲೂಡು ಗ್ರಾಮದ ದೇವರಾಜ ರವರು ಆತನ ದ್ವಿಚಕ್ರ ವಾಹನದಲ್ಲಿ ಬಂದು ತಮಗೆ ಚಮಕ್ ನೀಡಿದ್ದು ಈ ವಿಚಾರದಲ್ಲಿ ತಮಗೆ ಮತ್ತು ದೇವರಾಜ ರವರಿಗೆ ಮಾತುಕತೆ ನಡೆದಿರುತ್ತದೆ, ಹೀಗಿದ್ದು ಈ ದಿನ ದಿನಾಂಕ: 13-03-2021 ರಂದು ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ತಾನು, ಮುನಿರಾಜು, ದನಂಜಯ ಹಾಗೂ ನಂದನ್ ರವರುಗಳು ಸ್ವಂತ ಕೆಲಸದ ಸಲುವಾಗಿ ಇದ್ಲೂಡು ಗ್ರಾಮದ ಕಡಗೆ ಹೋಗುತ್ತಿದ್ದಾಗ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಇದ್ಲೂಡು ಗ್ರಾಮದ ದೇವರಾಜ ರವರು ತಮ್ಮನ್ನು ಕುರಿತು ಏನೋ ಲಫರ್ ನನ್ನ ಮಗನೆ ನಮ್ಮ ಏರಿಯಾಗೆ ಬಂದಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಬೈದುದ್ದು, ಆಗ ತಾನು ಸುಮ್ಮನೆ ಇದ್ದರೂ ಸಹ ದೇವರಾಜ, ಆತನ ಜೊತೆಯಲ್ಲಿದ್ದ ಇದ್ಲೂಡು ಗ್ರಾಮದ ವಾಸಿಗಳಾದ ಮುರಳಿ, ಆನಂದ, ಪುನೀತ್, ಮಂಜುನಾಥ ಹಾಗೂ ಹಂದಿ ಮಂಜು ರವರು ಸೇರಿಕೊಂಡು ತನಗೆ ಹಾಗೂ ತನ್ನ ಜೊತೆಯಲ್ಲಿದ್ದ ನಂದನ್, ದನಂಜಯ್ ಮತ್ತು ಮುನಿರಾಜು ರವರಿಗೆ ಕೈಗಳಿಂದ ಹೊಡೆದಿದ್ದು ಅಷ್ಟರಲ್ಲಿ ದೇವರಾಜ ಯಾವುದೋ ಒಂದು ದೊಣ್ಣೆಯನ್ನು ಎತ್ತಿಕೊಂಡು ತನ್ನ ಎಡಭಾಗದ ಭುಜಕ್ಕೆ ಹೊಡೆದಿದ್ದು ಆಗ ಮುರಳಿ ರವರು ದೇವರಾಜನ ಕೈಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ತನ್ನ ಬಲಭಾಗದ ಕಣ್ಣಿನ ಬಳಿ ಹೊಡೆದು ಗಾಯಗೊಳಿಸಿದ್ದು ಉಳಿದವರೆಲ್ಲರೂ ಸಹ ತನಗೆ ಹಾಗೂ ತನ್ನ ಸ್ನೇಹಿತರಿಗೆ ಕೈಗಳಿಂದ ಹೊಡೆದು ನೀವೇನಾದರೂ ನಮ್ಮ ಏರಿಯಾಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದು ಅಷ್ಟರಲ್ಲಿ ಅಲ್ಲಿ ಇದ್ದ ಯಾರೋ ಸಾರ್ವಜನಿಕರು ಗಲಾಟೆ ಬಿಡಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಗಾಯಾಳು ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ. 60/2021 ಕಲಂ 143, 147, 323, 324, 504, 506 ರೆ/ವಿ 149 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 61/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ: 13-03-2021 ರಂದು ರಾತ್ರಿ 9-45 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊವನ್ನು ಪಡೆದುಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಂಜುನಾಥ ಬಿನ್ ಸೀನಪ್ಪ, ಸುಮಾರು 35 ವರ್ಷ, ಗೊಲ್ಲರು, ಕೂಲಿ ಕೆಲಸ, ಇದ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನಮ್ಮ ಗ್ರಾಮದ ಮುರಳಿ, ದೇವರಾಜು, ಆನಂದ್, ಪುನೀತ್ ಹಾಗೂ ಇತರರಿಗೆ ಶಿಡ್ಲಘಟ್ಟ ಟೌನ್ ವಾಸಿಯಾದ ಅನೀಲ್ ಕುಮಾರ್ ಮತ್ತು ಆತನ ಜೊತೆಯಲ್ಲಿದ್ದ ಮೂರು ನಾಲ್ಕು ಜನ ಹುಡಗರಿಗೆ ಪರಸ್ಪರ ಗಲಾಟೆಗಳು ಆಗುತ್ತಿದ್ದು ತಾನು ಹೋಗಿ ಎರಡು ಕಡೆಯವರಿಗೆ ಬುದ್ದಿವಾದ ಹೇಳಿ ಗಲಾಟೆ ಬಿಡಿಸಲು ಹೋದಾಗ ಅನಿಲ್ ಕುಮಾರ್ ರವರು ಆತನ ಕೈಯಲ್ಲಿದ್ದ ಯಾವದೋ ಚೂಪಾದ ಆಯುಧದಿಂದ ಹೊಡೆದಿದ್ದು ತನಗೆ ಎಡಭಾಗದ ಕಣ್ಣು ಉಬ್ಬಿನ ಮೇಲ್ಬಾಗ ಗಾಯವಾಗಿದ್ದು, ಆಗ ನಮ್ಮ ಗ್ರಾಮದ ಚನ್ನಕೇಶವ ಬಿನ್ ಚನ್ನರಾಯಪ್ಪ ಹಾಗೂ ಇತರರು ಗಲಾಟೆ ಬಿಡಿಸಿ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಗಲಾಟೆ ಬಗ್ಗೆ ವಿಚಾರ ತಿಳಿಯಲಾಗಿ ದಿನಾಂಕ: 11-03-2021 ರಂದು ಅನಿಲ್ ಕುಮಾರ್ ರವರಿಗೆ ಹಾಗೂ ನಮ್ಮ ಗ್ರಾಮದ ಶ್ರೀಕಂಠ ಬಿನ್ ಶ್ರೀನಿವಾಸ, ಮತ್ತು ದೇವರಾಜ ರವರಿಗೆ ಗಲಾಟೆಗಳು ಆಗಿದ್ದು ಈ ಹಿನ್ನಲೆಯಲ್ಲಿ ಅನಿಲ್ ಕುಮಾರ್ ಆತನ ಸ್ನೇಹಿತರಾದ ಮುನಿರಾಜು, ಧನಂಜಯ್, ಮತ್ತು ನಂದನ್ ರವರೊಂದಿಗೆ ನಮ್ಮ ಗ್ರಾಮಕ್ಕೆ ಬಂದು ಈ ದಿನ ದಿನಾಂಕ: 13-03-2021 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಲಾಯದ ಬಳಿ ಗಲಾಟೆಗಳನ್ನು ಮಾಡಿಕೊಳ್ಳುತ್ತಿದ್ದು ಗಲಾಟೆ ಬಿಡಿಸಲು ಹೋದ ತನ್ನನ್ನು ಮೇಲ್ಕಂಡವರು ನೀನು ಯಾವನೋ ಲೋಪರ್ ನನ್ನ ಮಗನು ಗಲಾಟೆ ಬಿಡಿಸಲು ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ಕೈಗಳಿಂದ ಹೊಡೆದು ಗಾಯಗೊಳಿಸಿದ್ದು ಇನ್ನೇನಾದರೂ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದು ಅಷ್ಟರಲ್ಲಿ ಅಲ್ಲಿಯೆ ಇದ್ದ ನಮ್ಮ ಗ್ರಾಮದ ಚನ್ನಕೇಶವ ಹಾಗೂ ಇತರರು ಗಲಾಟೆ ಬಿಡಿಸಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ರಾತ್ರಿ 10-30 ಗಂಟೆಗೆ ಠಾಣೆಗೆ ವಾಪಸ್ಸುಬಂದು ಠಾಣಾ ಮೊ.ಸಂ. 61/2021 ಕಲಂ 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 14-03-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080