ಅಭಿಪ್ರಾಯ / ಸಲಹೆಗಳು

1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 420 ಐ.ಪಿ.ಸಿ:-

     ದಿನಾಂಕ 14/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಶ್ರೀಮತಿ ಶಶಿಕಲಾ ಕೋಂ ಚಕ್ರಪಾಣಿ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 13/02/2021 ರಂದು ಬೆಂಗಳೂರಿನ ಮಾದನಾಕನಹಳ್ಳಿ ವಾಸವಾಗಿರುವ ಮೊಮ್ಮಗಳ ನಾಮಕರಣ ಹೋಗಿದ್ದು, ನಂತರ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನಿಂದ ಬಾಗೇಪಲ್ಲಿ ಹೋಗಲು ಬೆಂಗಳೂರಿನ ಹೆಬ್ಬಾಳಾದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹತ್ತಿದ್ದು, ನಾಮಕರಣಕ್ಕೆಂದು ತಂದಿದ್ದ 40 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಕರಿಮಣಿ ಸರಸ ರಡು ಎಳೆ ಸರ ಮತ್ತು 750/- ರೂ ಗಳನ್ನು ಪರ್ಸ್ನಲ್ಲಿ ಇಟ್ಟು, ಅದನ್ನು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಬಸ್ಸಿನಲ್ಲಿ ಬರುತ್ತಿದ್ದಾಗ ದೇವನಹಳ್ಳಿ ಬಿಟ್ಟಿ ಆವತಿಯ ನಾಗರ್ಜುವ ಕಾಲೆಜು ಬಳಿ ಬರುತ್ತಿದ್ದಂತೆ ಮೂರು ಜನ ಹೆಂಗಸರು ಮತ್ತು ಒಂದು ಮಗು ಶಶಿಕಲಾ ರವರ ಬಳಿ ಬಂದಿದ್ದು, ಪಿರ್ಯಾಧಿದಾರರ ಮುಂದೆ ಒಬ್ಬ ಹೆಂಗಸು ಚಿಲ್ಲರೆ ಹಣವನ್ನು ಬಿಳಿಸಿದ್ದು, ಅದನ್ನು ಎತ್ತಿಕೊಳ್ಳಲು ಬಗ್ಗಿದಾಗ 5*1ರೂಗಳ ನಾಣ್ಯಗಳು ಸಿಕ್ಕಿದ್ದುವುಗಳನ್ನು ಎತ್ತಿ ಆಕೆಗೆ ಕೊಟ್ಟಿದ್ದು, ಆದರೂ ಇನ್ನೂ ಹಣ ಇದೆ ಎಂದು ಸೀಟಿನ ಕೆಳಗೆ ತೋರಿಸಿ ಹುಡುಕಾಡುವಂತೆ ನಾಟಕಮಾಡಿದ್ದು, ಶಶಿಕಲಾ ರವರುಕಾಲಿನ ಕೆಳಗಡೆ ಹಣ ಇರಬಹುದೆಂದು ಹುಡುಕಾಡುತ್ತಿದ್ದಾಗ ವ್ಯಾನಿಟಿ ಬ್ಯಾನ್ ನ ಜೀಪ್ ನ್ನು ತೆಗೆದು ಅದರಲ್ಲಿದ್ದ ಚಿನ್ನದ ಒಡವೆ ಹಾಗೂ ಹಣವಿದ್ದ ಪರ್ಸ ನ್ನು ಕಳವು ಮಾಡಿರುತ್ತಾರೆ. ನಂತರ ಸ.ಜೆ.ಸಿ.ಐ.ಟಿ ಕಾಲೇಜು ಬಳಿ ಆ ಮೂರು ಜನ ಹೆಂಗಸರು ಮತ್ತು ಒಂದು ಮಗು ಬಲವಂತವಾಗಿ ಬಸ್ಸನ್ನು ನಿಲ್ಲಿಸಿ ಬಸ್ಸಿನಿಂದ ಇಳಿದು ಹೋಗಿರುತ್ತಾರೆ. ನಂತರ ಶಶಿಕಲಾರವರು ಚಿಕ್ಕಬಳ್ಳಾಪುರಕ್ಕೆ ಬಂದು ಮೊಮ್ಮಗನಿಗೆ ನೀರನ್ನು ಖರೀದಿ ಮಾಡಲು ಪರ್ಸ್ ನ್ನು ಹುಡುಕಾಡಲಾಗಿ ವ್ಯಾನಿಟಿ ಬ್ಯಾಗ್ ನಲ್ಲಿ ಕಂಡುಬಂದಿರುವುದಿಲ್ಲ. ಪಿರ್ಯಾಧಿದಾರರು ನಿದಾನವಾಗಿ ಯೋಚಿಸಲಾಗಿ ತನ್ನೊಂದಿಗೆ ಬಸ್ಸಿನಲ್ಲಿ ಬಂದ  ಮೂರು ಜನ ಹೆಂಗಸರು ಮತ್ತು ಒಂದು ಮಗು ತನ್ನ ಮುಂದೆ ಚಿಲ್ಲರೆ ಹಣ ಚೆಲ್ಲಿ ಹುಡುಕಾಟದ ನೆಪದಲ್ಲಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನದ ಒಡವೆ ಹಾಗೂ ಹಣವನ್ನು ಗಮನ ಬೇರೆ ಕಡೆ ಸೆಳೆದು ಕಳುವು ಮಾಡಿರುವುದು ಕಂಡು ಬಂದಿರುತ್ತದೆ. ಸದರಿ ಒಂದು ಚಿನ್ನದ ಚೈನ್ ಹಾಗೂ  ಮತ್ತೊಂದು ಕರಿಮಣಿಯೊಂದಿಗೆ ಚಿನ್ನದ ಗುಂಡುಗಳಿರುವ ಸುಮಾರು 40 ಗ್ರಾಂ ತೂಕದ ಚಿನ್ನದ ಒಡವೆಗಳಿದ್ದು, ಇವುಗಳ ಬೆಲೆ ಸುಮಾರು 1,60,000/- ಹಾಗೂ 750/- ರೂ ನಗದು ಹಣವನ್ನು ತನ್ನ ಗಮನ ಬೇರೆ ಕಡೆ ಸೆಳೆದು ಕಳುವು ಮಾಡಿರುವ ಮೂರು ಜನ ಹೆಂಗಸರು ಮತ್ತು ಒಂದು ಹೆಣ್ಣು ಮಗುವನ್ನು ಪತ್ತೆ ಮಾಡಿ ಅವರು ಕಳುವು ಮಾಡಿರುವ ತನ್ನ ವಸ್ತುಗಳನ್ನು ವಾಪಾಸ್ ಮಾಡಿಸಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದು, ಈ ದೂರನ್ನು ಪಡೆದು ಠಾಣಾ ಮೊ.ಸಂ-06/2021 ರಂತೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ;13/02/2021 ರಂದು ಸಂಜೆ 5-00 ಗಂಟೆಗೆ ಘನ ನ್ಯಾಯಾಲಯದ ಮಪಿಸಿ 364 ರವರು ಠಾಣಾ ಎನ್, ಸಿ,ಅರ್ 37/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದು ತಂದು ಹಾಜರುಪಡಿಸಿದರ ಸರಾಂಶವೇನಂದರೆ ದಿನಾಂಕ 11/02/2021 ರಂದು ಮದ್ಯಾಹ್ನ 12:00 ಗಂಟೆಯಲ್ಲಿ ಶ್ರೀಮತಿ N ಚಂದ್ರಕಲಾ-PSI ರವರು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 11-02-2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಸರ್ಕಾರಿ ಜೀಪಿನಲ್ಲಿ PC 201 ಸುರೇಶ್ ರವರೊಂದಿಗೆ ಗೌರಿಬಿದನೂರು ನಗರದ ಗಸ್ತಿನಲ್ಲಿರುವಾಗ ನಗರದ ಹಿಂದೂಪುರ ಬಸ್ ನಿಲ್ದಾಣದ ಪಕ್ಕದ ಕಾಲುದಾರಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಎನ್.ಆರ್ ವೃತ್ತದಲ್ಲಿ ಜೀಪನ್ನು ನಿಲ್ಲಿಸಿ ಪಂಚರನ್ನು ಬರಮಾಡಿಕೊಂಡು ಆಟೋ ನಿಲ್ದಾಣದ ರಸ್ತೆಯಲ್ಲಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಶೌಚಾಲಯದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿರುತ್ತೆ. ನಂತರ ಸಿಬ್ಬಂದಿಯ ಸಹಕಾರದಿಂದ ಅವರಿಗೆ ಓಡಿಹೋಗದಂತೆ ಸೂಚನೆಗಳನ್ನು ನೀಡಿ ಹಿಡಿಯಲು ಹೋದಾಗ ಮದ್ಯಪಾನ ಮಾಡುತ್ತಿದ್ದವರು ಓಡಿಹೋಗಿದ್ದು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರು CT ಶ್ರೀನಿವಾಸ್ ಬಿನ್ ತಿಮ್ಮಯ್ಯ, 39 ವರ್ಷ, ಉಪ್ಪಾರ ಜನಾಂಗ, S ಸಾದ್ಲಪಲ್ಲಿ ಹಿಂದೂಪುರ ಫೋ: 7032693241 ಎಂದು ತಿಳಿಸಿದ್ದು ಅವನಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು ಸ್ಥಳದಲ್ಲಿ 90 ML Haywards Cheers Whiskey ಯ 15 Tetra Pockets, 4 Empty Haywards Cheers Whiskey Tetra Pockets, 4 ಪ್ಲಾಸ್ಟಿಕ್ ಲೋಟಗಳು ಮತ್ತು 2 ಲೀಟರ್ ಖಾಲಿ ವಾಟರ್ ಬಾಟಲ್ ಇದ್ದು ಮದ್ಯ ತುಂಬಿರುವ ಪಾಕೆಟ್ ಗಳ ಮೇಲೆ 35.13 ರೂಪಾಯಿಗಳ ಬೆಲೆ ಇದ್ದು ಅವುಗಳ ಒಟ್ಟು ಬೆಲೆ 527 ರೂಪಾಯಿಗಳಾಗಿರುತ್ತೆ. ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿರುತ್ತೇನೆ. ನ್ಯಾಯಾಲಯದಿಂದ ಅನುಮತಿ ಬಂದ ನಂತರ ಪ್ರಕರಣವನ್ನು ದಾಖಲಿಸಿಕೊಂಡು ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು  ಪಡೆದು ಪ್ರಕರಣ ದಾಖಲಿಸಿರುತ್ತೆ.

 

3. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 87  ಕೆ.ಪಿ ಆಕ್ಟ್:-

     ದಿನಾಂಕ:13/02/2021 ರಂದು ಠಾಣಾ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:13/02/2021 ರಂದು ಪಿರ್ಯಾದಿದಾರರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ರವರು ಈ ದಿನ ದಿನಾಂಕ:13/02/2021 ರಂದು  ಸಿಬ್ಬಂದಿಯವರಾದ ಎ.ಎಸ್.ಐ. ನಾರಾಯಣರೆಡ್ಡಿ, ಹೆಚ್.ಸಿ.85 ನರಸಿಂಹ, ಹೆಚ್.ಸಿ-80 ಕೃಷ್ಣಪ್ಪ ಹೆಚ್.ಸಿ 192  ರಾಜಗೋಪಾಲ್ ಹೆಚ್.ಸಿ 208 ಗಿರೀಶ್ ಪಿ.ಸಿ 152 ಜಯ್ಯಣ್ಣ, ಹಾಗೂ ಜೀಪ್ ಚಾಲಕ ಎ.ಪಿ.ಸಿ. 138 ಮೆಹಬೂಬ್ ಬಾಷಾ ರವರೊಂದಿಗೆ ಸರ್ಕಾರಿ ಜೀಪ್ ನಂ-ಕೆ.ಎ40-ಜಿ-270 ರಲ್ಲಿ ಗೌರಿಬಿದನೂರು ತಾಲ್ಲೂಕಿನ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಗಾಗಿ ಬಂದಿದ್ದು ಮದ್ಯಾಹ್ನ 2-00 ಗಂಟೆಗೆ ತೊಂಡೇಬಾವಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ 2-15 ಗಂಟೆಗೆ  ಭಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ತರಿದಾಳು ಗ್ರಾಮಕ್ಕೆ ಬಂದು ಪಂಚರನ್ನು ಬರಮಾಡಿಕೊಂಡು ತಿಳಿಸಿದ್ದೇನೆಂದರೆ ತರಿದಾಳು ಗ್ರಾಮದ ರವಿ ರವರ ಜಮೀನಿನಲ್ಲಿ ಯಾರೋ ಕೆಲವರು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಸದರಿ ಜೂಜಾಟದ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸುವಂತೆ ಕೋರಿದ್ದು ಅದಕ್ಕೆ ಪಂಚರು ಒಪ್ಪಿಕೊಂಡು ಪಂಚರೊಂದಿಗೆ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಹುಣಸೆ ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳಿಂದ ಹಣವನ್ನು ಪಣಕ್ಕೆ ಹಾಕಿ ಆ ಪೈಕಿ ಒಬ್ಬ ವ್ಯಕ್ತಿ ಅಂದರ್ ಗೆ 200/- ರೂ ಮತ್ತೊಬ್ಬ ವ್ಯಕ್ತಿ ಬಾಹಾರ್ ಗೆ 200/- ರೂ ಎಂದು ಕೂಗುತ್ತ ಬಾಹಾರ್ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಸ್ವಲ್ಪ ದೂರದ ಮರೆಯಲ್ಲಿ ನಿಂತು ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದ್ದು ಸದರಿ ಸ್ಥಳದಲ್ಲಿದ್ದ ಅಸಾಮಿಗಳನ್ನು ಓಡಿಹೋಗದಂತೆ ಎಚ್ಚರಿಸಿ ಸುತ್ತಿವರೆದು ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಹೆಸರು ವಿಳಾಸ ಕೇಳಲಾಗಿ 1) ರಾಮಾಂಜಿನಪ್ಪ.ಟಿ.ಎನ್ ಬಿನ್ ಲೇಟ್ ನರಸೀಯಪ್ಪ, 45 ವರ್ಷ, ಮಡಿವಾಳ ಜನಾಂಗ, ಜಿರಾಯ್ತಿ, ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಶ್ರೀನಿವಾಸ ಬಿನ್ ಚಿಕ್ಕಪ್ಪಯ್ಯ, 45 ವರ್ಷ, ಪ.ಜಾತಿ, ಜಿರಾಯ್ತಿ, ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಗಂಗರಾಜು ಬಿನ್ ಲೇಟ್ ನರಸೀಯಪ್ಪ, 38 ವರ್ಷ, ಗೊಲ್ಲರು, ಟೈಲರ್ ವೃತ್ತಿ, ಪುಲಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 4) ಮುನಿರಾಜು ಬಿನ್ ಲೇಟ್ ಮುನಿಯಪ್ಪ 35 ವರ್ಷ, ನಾಯಕರು, ಜಿರಾಯ್ತಿ, ತರಿದಾಳು ಗ್ರಾಮ ಗೌರಿಬಿದನೂರು ತಾಲ್ಲೂಕು 5) ರಾಮಾಂಜಿ ಬಿನ್ ಲೇಟ್ ಸಂಜೀವಪ್ಪ, 48 ವರ್ಷ, ನಾಯಕರು, ಜಿರಾಯ್ತಿ, ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿ ಸ್ಥಳವನ್ನು ಪರಿಶೀಲಿಸಲಾಗಿ ಪ್ಲಾಸ್ಟಿಕ್ ಚೀಲವನ್ನು ಹಾಕಿದ್ದು ಅದರ ಮೇಲೆ ಚೆಲ್ಲಾಪಿಲ್ಲಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಎಣಿಸಲಾಸಿ 52 ಇಸ್ಪೀಟ್ ಎಲೆಗಳಿದ್ದು ಅದರ ಪಕ್ಕದಲ್ಲಿ ಅಂದರದ ಬಾಹರ್ ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ ಹಣ ರೂ 8560-00 ರೂ ಗಳಿದ್ದು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಮೇಲ್ಕಂಡ ಮಾಲುಗಳು ಮತ್ತು ಅಸಾಮಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ  ಕೊಟ್ಟ ದೂರು.

 

4. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 304(A) ಐ.ಪಿ.ಸಿ:-

     ದಿನಾಂಕ;-13-02-2021 ರಂದು ರಾತ್ರಿ 20-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಕೂಲಿಯಿಂದ ಜೀವನ ಮಾಡುತ್ತಿರುತ್ತೇನೆ. ನಮ್ಮ ವಿಜಯಪುರ ನಗರದ ಟೌನಿನ ದುರ್ಗಾತಾಯಿ ಕಾಲೋನಿಯ ನಮ್ಮ ಜನಾಂಗದ ವೆಂಕಟೇಶಪ್ಪ ಬಿನ್ ಲೇ.ಚಿಕ್ಕಪ್ಪಯ್ಯ (9740917446) ರವರು ಮೇಸ್ತ್ರಿ ಕೆಲಸ ಮಾಡಿಸುತ್ತಿದ್ದು ನಾವು ಸಿಮೆಂಟ್ ಮತ್ತು ಕಾಂಕ್ರೀಟ್ ಗಾರೆ ಕೆಲಸ ಮಾಡುತ್ತಿರುತ್ತೇವೆ.ಸದರಿ ವೆಂಕಟೇಶಪ್ಪ ರವರು ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ತೌಡನಹಳ್ಳಿ-ತಿಮ್ಮನಹಳ್ಳಿ ಮಧ್ಯೆ ಬೆಂಗಳೂರಿನವರ ತೋಟದ ಜಮೀನಿನಲ್ಲಿ ಸಂಪ್ ನಿರ್ಮಾಣ ಕಾರ್ಯದ ಕಾಮಗಾರಿ ಒಪ್ಪಿಕೊಂಡು ದಿನಾಂಕ-09/02/2021 ರಿಂದ ಸಂಪ್ ನಿರ್ಮಾಣದ ಕೆಲಸಕ್ಕೆ ನಾನು ವಿಜಯಪುರದ ಏ.ಕೆ ಕಾಲೋನಿಯ ನರಸಿಂಹ, ಮೇಸ್ರ್ತಿ ತಮ್ಮನಾದ ಲಕ್ಷೀನಾರಾಯಣ, ಹಂದಿಗನಾಳದ ವೆಂಕಟೇಶಪ್ಪ, ವಿಜಯಪುರದ ಸುಣಕಲ್ ಬೀದಿಯ  ಚೈತ್ರ ಕೋಂ ರಾಜಾ,ಬೆಸ್ತರು ಲಕ್ಷ್ಮ್ಮಮ್ಮ ಕೋಂ ಲೇಟ್ ಹನುಮಂತರಾಯಪ್ಪ, ನಾಯಕರು 6 ಜನರು ಮೇಸ್ತ್ರಿ ಬಳಿ ಕೆಲಸ ಮಾಡುತ್ತಿದ್ದೆವು. ಸಂಪ್ ಮಾಡುವ ಜಾಗವನ್ನು ಮೊದಲೇ ಜೆ.ಸಿ.ಬಿ.ಯಂತ್ರದಿಂದ ಪೂರ್ವ-ಪಶ್ಶಿಮ 12 ಅಡಿ,ಉತ್ತರ-ದಕ್ಶಿಮ 21 ಅಡಿ ಅಳತೆ ಹಾಗೂ 10 ಅಡಿ ಆಳದ ವಿಸ್ತ್ರೀರ್ಣದಲ್ಲಿ ತೋಡಿಸಿದ್ದು 8 ಇಂಚು ದಪ್ಪದ ಸಿಮೆಂಟ್ ಇಟ್ಟಿಗೆಗಳಿಂದ ಸುತ್ತಲೂ ಸಂಪ್ ಒಳಭಾಗದಲ್ಲಿ ಗೋಡೆಗಳನ್ನು ನಿರ್ಮಾಣಮಾಡುತ್ತಿದ್ದೆವು. ಗೋಡೆ ನಿರ್ಮಾಣ ಕಾರ್ಯವು ದಿ-12/02/2021 ಕ್ಕೆ ಮುಗಿದ್ದಿತ್ತು ನಾವು ಪ್ರತಿದಿನ ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 05-30 ರವರೆಗೆ ಕೆಲಸ ಮಾಡಿ ಊರಿಗೆ ಹೋಗುತ್ತಿದ್ದೆವು.  ದಿನಾಂಕ-13/02/2021 ರಂದು ನಾವು ಬೆಳಿಗ್ಗೆ 09.00 ಗಂಟೆಗೆ ಬಂದಾಗ ಸಂಪಿನಲ್ಲಿ  ಸುಮಾರು ಅರ್ದ ಅಡಿ ನೀರಿದ್ದು ಭೂಮಿ ನೀರನ್ನು ಹೀರಿ ಚೆನ್ನಾಗಿ ನೆನೆದಿತ್ತು . ನಾನು ಮತ್ತು  ನರಸಿಂಹ  ಹಾಗೂ ಲಕ್ಷ್ಮೀನಾರಾಯಣ  ರವರು  ಎರಡು  ಸ್ಟೆಪ್ ಗೋಡೆಯನ್ನು ಕಟ್ಟಿದ್ದೆವು, ಮಧ್ಯಾಹ್ನ ಸುಮಾರು 01.00 ಗಂಟೆವರೆಗೆ ಕೆಲಸಮಾಡಿ ಊಟ ಮಾಡಿಕೊಂಡು ಮೇಸ್ತ್ರಿಗಳಾಧ ,ನರಸಿಂಹ,ಲಕ್ಷೀನಾರಾಯಣ,ಚೈತ್ರ ಮತ್ತು ಲಕ್ಷ್ಮಮ್ಮ ರವರು ಒಳಗಡೆ ಪ್ಲಾಸ್ಟಿಂಗ್ ಕೆಲಸದಲ್ಲಿ ನಿರತರಾಗಿದ್ದು ವೆಂಕಟೇಶಪ್ಪನು ಸಿಮೆಂಟ್ ಗೋಡೆ ಮತ್ತು ಮಣ್ಣಿನ ಗೋಡೆ ಮಧ್ಯೆ ಮಣ್ಣನ್ನು ಮೇಲ್ಬಾಗದಿಂದ ಜೆಸಿಬಿಯಿಂದ  ತುಂಬಿದ್ದನು. ಮದ್ಯಾಹ್ನ ಸುಮಾರು 03.00 ರಿಂದ 03.15 ರ ಮಧ್ಯೆ ಸಂಪಿನೊಳಗಿದ್ದ 4 ಜನರೂ ಮರಳನ್ನು ಜರಡಿಗೆ ಹಾಕುತ್ತಿದ್ದರು ನಾನು ಮೇಲೆ ಕಂಬಿಯನ್ನು ಹಿಡಿದುಕೊಂಡಿದ್ದೆನು,  ಇದ್ದಕ್ಕಿದ್ದಂತೆ ದಕ್ಷಿಣ ಮತ್ತು ಪಶ್ಶಿಮದ ಬದಿಯ ಸಿಮೆಂಟ್ ಗೋಡೆಗಳು ಹಠಾತ್ತಾಗಿ ಮಣ್ಣು ಹಾಕಿದ್ದ ಕಾರಣ ಒಮ್ಮೆಲೆ ಉರುಳಿಕೊಂಡಿತು. ಗೋಡೆಯ ಇಟ್ಟಿಗೆಗಳ ಕೆಳಗೆ ನರಸಿಂಹ, ಲಕ್ಷೀನಾರಾಯಣ, ಚೈತ್ರ ಮತ್ತು ಲಕ್ಷ್ಮಮ್ಮ ಸಿಕ್ಕಿಹಾಕಿಕೊಂಡರು ಕೂಡಲೇ ನಾನು,ಮೇಸ್ತ್ರಿ ವೆಂಕಟೇಶಪ್ಪ ಮತ್ತು ಹಂದಿಗನಾಳ ವೆಂಕಟೇಶಪ್ಪನು ಕೂಗಾಡಿ ಕಿರುಚಾಡಿಕೊಂಡು ಸಿಮೆಂಟ್ ಗೋಡೆಗಳ ಅಡಿಯಲ್ಲಿ ಮಧ್ಯೆ ಸಿಕ್ಕಿಹಾಕಿಕೊಂಡವರನ್ನು, ಇಟ್ಟಿಗೆಗಳನ್ನು ಪಕ್ಕಕ್ಕೆ ಹಾಕಿ. ಅದರಡಿಯಲ್ಲಿನ  ನರಸಿಂಹ, ಲಕ್ಷೀನಾರಾಯಣ, ಮತ್ತು ಚೈತ್ರ ಹಾಗೂ ಲಕ್ಷ್ಮಮ್ಮ ರವರನ್ನು ಮೇಲಕ್ಕೆ ಎತ್ತಲಾಗಿ  ರತ್ನಮ್ಮಳ ಸ್ದಿತಿ ಚಿಂತಾಜನಕವಿದ್ದು ಉಳಿದ ಮೂರು ಜನರಿಗೂ  ರಕ್ತ ಗಾಯಗಳು  ಆಗಿದ್ದವು, ಉಪಚರಿಸುತ್ತಿದ್ದಾಗ ಸುತ್ತಮುತ್ತಲ ಜನ ಸೇರಿ ಅವರನ್ನು ಯಾವುದೋ ಕಾರಿನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ 4 ಜನರನ್ನೂ ಸಾಗಿಸಿದರು.ರತ್ನಮ್ಮಳು ಉಸಿರುಗಟ್ಟಿ ತುಂಬಾ ಅಸ್ವಸ್ಥಳಾಗಿದ್ದಳು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರತ್ನಮ್ಮಳು ಆಸ್ಪತ್ರೆ ಬಳಿ ಸಂಜೆ ಮೃತ ಪಟ್ಟಳೆಂದು ತಿಳಿಯಿತು. ಈ ಅವಘಡಕ್ಕೆ ಮತ್ತು ಲಕ್ಷ್ಮಮ್ಮಳ ಸಾವಿಗೆ ಸಂಪ್ ನಿರ್ಮಾಣ ಮಾಡಿಸುತ್ತಿದ್ದ ಜಮೀನಿನ ಮಾಲೀಕ  ಹಾಗೂ ಕೆಲಸಕ್ಕೆ ಕರೆದುಕೊಂಡು ಬಂದಿದ್ದ  ಮೇಸ್ತ್ರಿ ವೆಂಕಟೇಶ್ ರವರು ಯಾವುದೇ  ಸುರಕ್ಷತಾ ಕ್ರಮಗಳನ್ನು ಅನುಸರಿಸದೆ  ನಿರ್ಲಕ್ಷತನದಿಂದ  ಕೆಲಸ ಮಾಡಿಸಿದ್ದರ ಪರಿಣಾಮವೆ  ಈ ಅವಘಡ ನಡೆದಿದ್ದು ಅವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವರದಿ.

ಇತ್ತೀಚಿನ ನವೀಕರಣ​ : 14-02-2021 04:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080