ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 287/2021 ಕಲಂ. 324,504,506 ಐಪಿಸಿ :-

     ದಿನಾಂಕ: 12/09/2021 ರಂದು ರಾತ್ರಿ 8-10 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಜಬೀವುಲ್ಲಾ ಬಿನ್ ವಲೀಸಾಬ್ 40ವರ್ಷ, ಮುಸ್ಲಿಂ ಜನಾಂಗ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ವಾಸ: ಗೂಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 12/09/2021 ರಂದು ಸುಮಾರು 7-00 ಗಂಟೆ ಸಮಯದಲ್ಲಿ ಗೂಳೂರು ಎಸ್ಸಾರ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವಾಗ ಇದೇ ಗೂಳೂರು ಗ್ರಾಮದ ವಾಸಿಯಾದ ಪ್ರಸನ್ನಕುಮಾರ್ ಬಿನ್ ವಿಜಿಕುಮಾರ್ ಅಲ್ಲಿಗೆ ಬಂದು ಅವರಿಗೂ ನನಗೂ ಹಳೆಯ ದ್ವೇಷವಿದ್ದು ಈ ವಿಚಾರವಾಗಿ ನನ್ನ ಮಗನೇ ನಿನನ್ನು ಸಾಯಿಸಿಬಿಡುತ್ತೇನೆ, ಎನ್ನುತ್ತಾ ಬೈದಾಡಿ ಅಷ್ಟರಲ್ಲಿ ನಾನು ಆತನನ್ನು ನೋಡಿ ಯಾಕೊ ಪ್ರಸನ್ನ ಈ ರೀತಿ ಮಾತಾಡ್ತೀಯಾ ಎಂದು ಕೇಳಿದ್ದಕ್ಕೆ ನನ್ನ ಮಗನೆ ನಿನ್ನ ಕೈಯಲ್ಲಿ ಏನಾಗುತ್ತೋ ಎಂದು ಹೇಳಿ ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ನನ್ನ ತಲೆಯ ಮಧ್ಯಭಾಗದಲ್ಲಿ ಹೊಡೆದಿರುತ್ತಾನೆ. ರಕ್ತಗಾಯವಾಗಿರುತ್ತದೆ. ಅಷ್ಟರಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ವೆಂಕಟೇಶ ಬಿನ್ ಆದಿಮೂರ್ತಿ, ಅಜ್ಮತ್ತುಲ್ಲಾ ಬಿನ್ ಬಾಜೀಸಾಬ್ ರವರು ಆತನಿಗೂ ನನಗೂ ಬುದ್ದಿವಾದ ಹೇಳಿ ಗಲಾಟೆಯನ್ನು ಬಿಡಿಸಿರುತ್ತಾರೆ. ನನಗೆ ರಕ್ತಗಾಯವಾಗಿರುವುದರಿಂದ ನನ್ನನ್ನು ನನ್ನ ದ್ವಿಚಕ್ರವಾಹನದಲ್ಲಿ ಮೌಲಾ ಬಿನ್ ಸುಭಾನ್ ಸಾಬ್ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಆದ್ದರಿಂದ ನನಗೆ ಹೊಡೆದು ಗಾಯಪಡಿಸಿದ ಪ್ರಸನ್ನಕುಮಾರ್ ಬಿನ್ ವಿಜಿಕುಮಾರ್ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ವಾಪಸ್ಸು 8-45 ಗಂಟೆಗೆ ಬಂದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

 

2. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 171/2021 ಕಲಂ. 143,323,324,504,506 ರೆ/ವಿ 149 ಐಪಿಸಿ :-

     ದಿನಾಂಕ: 12/09/2021 ರಂದು ಸಂಜೆ 5:30  ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಸ್ವಂತ ಗ್ರಾಮ ಮುರಗಮಲ್ಲಾ ಗ್ರಾಮವಾಗಿರುತ್ತದೆ. ನಾನು ಕೂಲಿ ಕೆಲಸ ಮಾಡಿಕೊಂಡು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ 2010 ರಲ್ಲಿ ಬೆಂಗಳೂರು ನಗರದ ವಾಸಿ ಯಾಕಬಲ್ ರವರ ಮಗಳಾದ ನೂರಿ ಎಂಬುವವರನ್ನು ಮದುವೆ ಯಾಗಿ ನಮಗೆ ಇಬ್ಬರು ಮಕ್ಕಳು ಸಹ ಇರುತ್ತಾರೆ. ನಂತರ ನಾನು ಕೋಲಾರದ 2 ನೇ ಮದುವೆಯನ್ನು ಆಯಿಷಾ ನಜೀಯಾ ರವರನ್ನು ಮದುವೆಯಾಗಿ ಮುರಗಮಲ್ಲಾ ಗ್ರಾಮದಲ್ಲಿ ಸಂಸಾರ ಮಾಡಿಕೊಂಡಿರುತ್ತೇವೆ. ಮನಗೆ 3 ಜನ ಮಕ್ಕಳು ಸಹ ಇರುತ್ತಾರೆ. ಹೀಗಿರುವಾಗ ಈಗ್ಗೆ 2 ವರ್ಷಗಳ ಹಿಂದೆ ನನ್ನ 2 ನೇ ಹೆಂಡತಿ ಆಯಿಷಾ ನಜೀಯಾ ರವರು ಬೇರೆ ಹುಡುಗನ ಜೊತೆ ಸಲಿಗೆಯಿಂದ  ಮಾತನಾಡುತ್ತಿದ್ದು, ಈ ಬಗ್ಗೆ ನಾನು ನನ್ನ ಹೆಂಡತಿಯನ್ನು ಕೇಳಿದ್ದಕ್ಕೆ ಆಕೆ ನನ್ನ ಮೇಲೆಯೇ ಗಲಾಟೆ ಮಾಡಿಕೊಂಡು ಅವರ ತವರು ಮನೆ ಕೋಲಾರ ನಗರಕ್ಕೆ ಹೊರಟು ಹೋಗಿ ಅಲ್ಲಿಯೇ ವಾಸವಾಗಿರುತ್ತಾಳೆ. ನಂತರ ನನ್ನ ಮೇಲೆ  ಕೋಲಾರದ ಕೌಂಟುಬಿಕ ನ್ಯಾಯಾಲಯದಲ್ಲಿ ಕ್ರಿಮಿನಾಲ್ ಮಿಸ್ ಎಫ್.ಸಿ ನಂ 53/2021 ರಂತೆ  ಕೇಸುನ್ನು ಹಾಕಿರುತ್ತಾಳೆ. ಹೀಗಿರುವಾಗ ಈ ದಿನ ದಿ: 11/09/2021 ರಂದು ರಾತ್ರಿ 11:00 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ ನನ್ನ 2 ನೇ ಹೆಂಡತಿ ಆಯಿಷಾ ನಜೀಯಾ ಮತ್ತು ಇವರ ಜೊತೆ  ಅವರ ತಂದೆ ಮುಜಾಯಿದ್ ತಾಯಿ ರಿಜ್ವಾನಾ , ಅಸೀಪ್, ಜುಬೇರ್, ಬಾಬಾಜಾನ್ ರವರುಗಳು ಕ್ವಾಲೀಸ್ ಕಾರಿನಲ್ಲಿ ಅಕ್ರಮ ಗುಂಪು ಕಟ್ಟಿಕೊಂಡು ಮನೆಯ ಬಳಿ ಬಂದು ಬಾರೋ ನವಾಜ್ ಆಚೆಗೆ ಎಂದು ಕೂಗಾಡುತ್ತಿದ್ದು ನಾನು ಯಾರೋ ಈ ರೀತಿಯಾಗಿ ಕಿರುಚಾಡುತ್ತಿರುವುದು ಎಂದು ಬಂದು ನೋಡಿದಾಗ ಮೇಲ್ಕಂಡ ಎಲ್ಲರೂ ನನ್ನ ಮೇಲೆ ಗಲಾಟೆ ಮಾಡಿ ನನ್ನ ಹೆಂಡತಿಯಾದ ಆಯಿಷಾ ರವರು ನೀನು ಇಲ್ಲಿ ಬಂದು ಇದ್ದರೆ ನನ್ನನ್ನು ಯಾರೋ ನೋಡುವುದು ಎಂದು ಲೋಪರ್ ನನ್ನ ಮಗನೇ ಬೇವರಿಸಿ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ಮುಜಾಯಿದ್, ಅಸೀಪ್, ಜುಬೇರ್, ಬಾಬಾಜಾನ್, ರಿಜ್ವಾನಾ ರವರು ಸೇರಿಕೊಂಡು ಕೆಟ್ಟ ಮಾತುಗಳಿಂದ ಬೈದು ನನ್ನ ಶಟರ್್ನ್ನು ಹಿಡಿದುಕೊಂಡು ಹರಿದುಹಾಕಿ ಕೈಗಳಿಂದ ನನ್ನ ಮೈಮೇಲೆ ಕೋಲಿನಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿ ಪೆಟ್ರೋಲ್ ಎತ್ತಿಕೊಂಡು ಬಂದು ನಿನ್ನ ಮನೆಯನ್ನು ಸುಟ್ಟುಹಾಕಿ ನಿನ್ನನ್ನು ಮತ್ತು ನಿನ್ನ ಹೆಂಡತಿಯನ್ನು ಸಾಯಿಸಿ ಹಾಕುತ್ತೇವೆಂದು ಪ್ರಾಣಬೆದರಿಕೆ ಹಾಕಿ  ನನ್ನ ಬಳಿಯಿದ್ದ ಮೊಬೈಲ್ ನ್ನು ಸಹ ಕಿತ್ತುಕೊಂಡು ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ನನಗೆ ಮೈ ಕೈ ನೋವು ಜಾಸ್ತಿಯಾದ್ದರಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿಸಿಕೊಂಡು ಮನೆಗೆ ಹೊರಟು ಹೋಗಿ ಈ ದಿನ ತಡವಾಗಿ ಬಂದು ದೂರುನ್ನು ನೀಡುತ್ತಿದ್ದು, ಆದ್ದರಿಂದ ಸದರಿ ನನ್ನ ಮೇಲೆ ವಿನಾಃ ಕಾರಣ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಪ್ರಾಣಬೆದರಿಕೆ ಹಾಕಿದ  ಮೇಲ್ಕಂಡ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

3. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 219/2021 ಕಲಂ. 32,34,36(B) KARNATAKA EXCISE ACT, 1965 :-

     ದಿನಾಂಕ:12/09/2021 ರಂದು ¸ ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿದಾರರಾದ ಪೆರೇಸಂದ್ರ  ಪೊಲೀಸ್ ಠಾಣೆಯ ಪಿ,ಎಸ್,ಐ ಮಂಜುನಾಥ ಡಿ.  ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 12/09/2021 ರಂದು ಸಂಜೆ 4-00 ಸಮಯದಲ್ಲಿ  ಪೆರೇಸಂದ್ರ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಪೆರೇಸಂದ್ರ ಕ್ರಾಸ್ ನ ಮಂಡಿಕಲ್ಲು ರಸ್ತೆಯಲ್ಲಿ ಇರುವ  ಮಂಜುನಾಥ ಸಮುದಾಯ ಭವನ ಮುಂದೆ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿಯು  ರಸ್ತೆಯಲ್ಲಿ ನಿಂತು   ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದ್ದು ,  ಸದರಿ ಮಾಹಿತಿಯ ಮೇರೆಗೆ ಸದರಿ ರವರ ಮೇಲೆ ದಾಳಿ ಮಾಡಲು ಪೆರೇಸಂದ್ರ ಕ್ರಾಸ್ ನಲ್ಲಿದ್ದ   ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿಕೊಂಡರು. ನಂತರ  ನಾವು ಕೆ.ಎ-40-ಜಿ-1777 ನೊಂದಣಿ ಸಂಖ್ಯೆಯ ಜೀಪಿನಲ್ಲಿ ಚಾಲಕ ಮಧುಕುಮಾರ್ ರವರೊಂದಿಗೆ ಪೆರೇಸಂದ್ರ ಕ್ರಾಸ್ ನ ಮಂಡಿಕಲ್ಲು ರಸ್ತೆಯಲ್ಲಿ ಇರುವ ಮಂಜುನಾಥ ಸಮುದಾಯ ಭವನ ಬಳಿ ಸ್ವಲ್ಪ ದೂರದಲ್ಲಿಯೇ ಜೀಪ್ ಅನ್ನು ನಿಲ್ಲಿಸಿ ಸಂಜೆ 4-15 ಗಂಟೆ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ದಾಳಿ ಮಾಡಲು ಹೋಗುತ್ತಿದ್ದಾಗ ದೂರದಲ್ಲಿಯೇ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ನಿಂತಿದ್ದ   ಆಸಾಮಿಯು  ಸ್ಥಳದಲ್ಲಿ ಮದ್ಯವನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು  ನಾವುಗಳು ಬೆನ್ನಟ್ಟಿ ಹಿಡಿದುಕೊಂಡು ಆಸಾಮಿಯನ್ನು  ವಶಕ್ಕೆ ಪಡೆದುಕೊಂಡು  ಹೆಸರು ಮತ್ತು ವಿಳಾಸ ತಿಳಿಯಲಾಗಿ ಅಂಜಿನಪ್ಪ ಬಿನ್ ಲೇಟ್ ನಂಜಪ್ಪ, 50 ವರ್ಷ, ನಾಯಕರು, ಜಯಲಕ್ಷ್ಮಿ ವೈನ್ಸ್ ನಲ್ಲಿ ಸಪ್ಲಯರ್ ಕೆಲಸ, ವಾಸ ಮಂಡಿಕಲ್ಲು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು ಎಂದು ತಿಳಿಸಿರುತ್ತಾನೆ. ಇಲ್ಲಿ ಇರುವಿಕೆಯ ಬಗ್ಗೆ ಪ್ರಶ್ನಿಸಿದಾಗ ತನಗೆ ಜಯಲಕ್ಷ್ಮಿ ವೈನ್ಸ್ ನ ಕ್ಯಾಷಿಯರ್  ವೀರ ಭದ್ರ,  ರವರು ವೈನ್ಸ್ ಶಾಪ್ ನಲ್ಲಿ ಇರುವ ಒರಿಜಿನಲ್   ಚಾಯ್ಸ್ ಡಿಲಕ್ಸ್  ವೀಸ್ಕಿ 90 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ ಒಂದು ಬಾಕ್ಸ್ ಅನ್ನು ತೆಗೆದುಕೊಂಡು ಮಂಡಿಕಲ್ಲು ರಸ್ತೆಯಲ್ಲಿ ಇರುವ ಸಮುದಾಯ ಭವನ ಮುಂದೆ ಇದ್ದರೆ ಒಬ್ಬ ಆಸಾಮಿಯು ಬಂದು ತೆಗೆದುಕೊಂಡು ಹೋಗುತ್ತಾನೆಂದು ಹೇಳಿದ್ದು ಅದರಂತೆ ತಾನು ಇಲ್ಲಿ ಇರುವುದಾಗಿ ತಿಳಿಸಿರುತ್ತಾನೆ.  ಸ್ಥಳದಲ್ಲಿ ಪರಿಶೀಲಿಸಿದಾಗ ಒಂದು ಬಾಕ್ಸ್ ಇದ್ದು  ತೆರೆದು ನೋಡಿದಾಗ ಬಾಕ್ಸ್ ನಲ್ಲಿ   1) ಒರಿಜಿನಲ್   ಚಾಯ್ಸ್ ಡಿಲಕ್ಸ್  ವೀಸ್ಕಿ  90 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 96 ಟೆಟ್ರಾ ಪಾಕೇಟ್ಗಳು, ಇದ್ದು ಇದರ ಒಟ್ಟು ಮದ್ಯ 8 ಲೀಟರ್ 100 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 35.13 ರೂಗಳಿದ್ದು ಇದರ ಒಟ್ಟು ಮೌಲ್ಯವು 35.13*96 =3372.48 ರೂಗಳಾಗಿರುತ್ತೆ. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವುದು  ಕಂಡು ಬಂದಿದ್ದರಿಂದ ಮತ್ತು ಜಯಲಕ್ಷ್ಮಿ ವೈನ್ಸ್ ನ ಕ್ಯಾಷಿಯರ್  ವೀರ ಭದ್ರ,  ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿ ಮದ್ಯವನ್ನು ಮಾರಾಟ ಮಾಡಲು ಕಳುಹಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಬಾಕ್ಸ್ ನಲ್ಲಿ ಇದ್ದ  ಎರಡು ಒರಿಜಿನಲ್   ಚಾಯ್ಸ್ ಡಿಲಕ್ಸ್  ವೀಸ್ಕಿ  90 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ  ಟೆಟ್ರಾ ಪಾಕೇಟ್ಗಳು,  ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ 'ಕ' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್. ಗೆ ಪರೀಕ್ಷೆಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಸಂಜೆ 4-30  ಗಂಟೆಯಿಂದ 5-30 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಸದರಿ ಮಾಲನ್ನು ಅಸಲು ಪಂಚನಾಮೆ ಯೊಂದಿಗೆ ಸಂಜೆ  6-00 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ  6-30  ಗಂಟೆಗೆ ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ದೂರು.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 220/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:13/09/2021 ರಂದು ಬೆಳಗ್ಗೆ 10-30 ಗಂಟೆಯ ಸಮಯದಲ್ಲಿ ಘನ ನ್ಯಾಯಾಲಯದ ಪಿಸಿ-430 ಪ್ರದೀಪ್ ರವರು ಠಾಣಾ NCR NO-282/2021  ರಲ್ಲಿ ಪ್ರಕರಣ ದಾಖಲಿಸಲು ಅನಯಮತಿ ಆದೇಶ ವನ್ನು ತಂದು ಕೊಟ್ಟಿದ್ದರ ಸಾರಾಂಶವೆನೆಂದರೆ , ದಿನಾಂಕ 11/09/2021 ರಂದು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಮಂಜುನಾಥ ಡಿ.  ಸಂಜೆ 5-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ  ದೂರು ಏನೆಂದರೆ, ತಮಗೆ ಈ ದಿನ ದಿನಾಂಕ:11/09/2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿದ್ದಾಗ  ಠಾಣಾ ಗುಪ್ತ ಮಾಹಿತಿ  ಸಿಬ್ಬಂದಿ ಶ್ರೀನಿವಾಸ ಸಿ,ಹೆಚ್ಸಿ-59 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ: 11/09/2021 ರಂದು ನಾನು ಮುದ್ದರೆಡ್ಡಿಹಳ್ಳಿ , ವರ್ಲಕೊಂಡ ಗ್ರಾಮಗಳ   ಕಡೆ ಗಸ್ತು ಮಾಡುತ್ತಿರುವಾಗ ಗುಡಿಬಂಡೆಯಿಂದ ಪೋಲಂಪಲ್ಲಿ ಕಡೆಗೆ ಹೋಗುವ ರಸ್ತೆಯಲ್ಲಿರುವ    ಚಿಕ್ಕಪ್ಪಯ್ಯ ರವರ ಜಮೀನಿನ ಪಕ್ಕದಲ್ಲಿ   ವರ್ಲಕೊಂಡ ಬೆಟ್ಟದ ತಪ್ಪಲಿನಲ್ಲಿನ ಬಂಡೆಯ ಕೆಳಗೆ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಎ.ಎಸ್.ಐ ಗಂಗಾಧರಪ್ಪ , ಸಿ.ಪಿ.ಸಿ-272 ಶ್ರೀನಿವಾಸ ,  ಜೀಪಿನ ಚಾಲಕ ಎ.ಪಿ.ಸಿ-05 ಮದುಕುಮಾರ್ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಮದ್ಯಾಹ್ನ 3-00 ಗಂಟೆಗೆ ಪೆರೇಸಂದ್ರ ಪೊಲೀಸ್ ಠಾಣೆಯಿಂದ ಬಿಟ್ಟು ಸರ್ಕಾರಿ ಜೀಪ್ ಕೆ.ಎ-40-ಜಿ-1777 ರಲ್ಲಿ ಮದ್ಯಾಹ್ನ 3-15 ಗಂಟೆಗೆ ಶ್ರೀನಿವಾಸ ಸಿ,ಹೆಚ್ಸಿ-59 ರವರನ್ನು ಮತ್ತು ವರ್ಲಕೊಂಡ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಮದ್ಯಾಹ್ನ 3-30  ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದ 05 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ವೆಂಕಟೇಶ್ ಬಾಬು ಬಿನ್ ಲೇಟ್  ಸುಬ್ಬರಾಯಪ್ಪ,  45 ವರ್ಷ, ಬಲಜಿಗರು, ಜಿರಾಯ್ತಿ,  ವಾಸ ವರ್ಲಕೊಂಡ     ಗ್ರಾಮ, ಗುಡಿಬಂಡೆ  ತಾಲ್ಲೂಕು, 2) ಶ್ರೀನಿವಾಸ ಬಿನ್ ವೆಂಕಟರಮಣಪ್ಪ, 33 ವರ್ಷ, ನಾಯಕರು,  ಚಾಲಕ ವೃತ್ತಿ, ವಾಸ ವರ್ಲಕೊಂಡ     ಗ್ರಾಮ, ಗುಡಿಬಂಡೆ  ತಾಲ್ಲೂಕು, 3) ಮುನಿಯಪ್ಪ ಬಿನ್ ನರಸಿಂಹಪ್ಪ, 50 ವರ್ಷ, ಎಸ್.ಸಿ ಜನಾಂಗ, ಆಟೋ ಚಾಲಕ, ವಾಸ ವರ್ಲಕೊಂಡ ಗ್ರಾಮ, ಗುಡಿಬಂಡೆ  ತಾಲ್ಲೂಕು, 4) ಗಂಗರಾಜು ಬಿನ್ ಪುಟ್ಟರಾಯಪ್ಪ, 36 ವರ್ಷ, ಆದಿ ಕರ್ನಾಟಕ, ಚಾಲಕ, ವಾಸ ವರ್ಲಕೊಂಡ     ಗ್ರಾಮ, ಗುಡಿಬಂಡೆ  ತಾಲ್ಲೂಕು, 5) ವೆಂಕಟೇಶಪ್ಪ ಬಿನ್ ವೆಂಕಟರಾಯಪ್ಪ, 53 ವರ್ಷ, ಆದಿ ಕನರ್ಾಟಕ, ಕೂಲಿ ಕೆಲಸ,  ವಾಸ ವರ್ಲಕೊಂಡ   ಗ್ರಾಮ, ಗುಡಿಬಂಡೆ  ತಾಲ್ಲೂಕು, ಎಂದು ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ವಶದಲಿದ್ದ್ಲ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ 1) ಶ್ರೀನಿವಾಸ  ರವರ ಬಳಿ 5750 ರೂ 2) ವೆಂಕಟೇಶ್ ಬಾಬು ರವರ ಬಳಿ 2440/- ರೂ 3)ಗಂಗರಾಜು ರವರ ಬಳಿ 420/- ರೂ  4) ಮುನಿಯಪ್ಪ ರವರ ಬಳಿ 610/- ರೂ 5) ವೆಂಕಟೇಶಪ್ಪ  ರವರ ಬಳಿ 1060/-  ರೂ ಇದ್ದು ಒಟ್ಟು ಲೆಕ್ಕ ಮಾಡಲಾಗಿ 10280/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 10280/- ರೂ & 52 ಇಸ್ಪೀಟ್ ಎಲೆಗಳನ್ನು ಹಾಗೂ  ಸ್ಥಳದಲ್ಲಿದ್ದ ಕೃತ್ಯಕ್ಕೆ ಬಳಿಸಿದ 1) ಕೆ.ಎ-50-ಇಜಿ-2495 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಸ್ಕೂಟಿ  ದ್ವಿಚಕ್ರ ವಾಹನ, 2) ಕೆ.ಎ-04-ಜೆಜೆ-9036 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಲೆಂಡರ್ ದ್ವಿಚಕ್ರ ವಾಹನ  3) ಕೆ.ಎ-40-ಇಡಿ-5812 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಪ್ಯಾಷನ್ ದ್ವಿಚಕ್ರ ವಾಹನ,  4) ಕೆ.ಎ-40-ಇಸಿ-7999 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಎಕ್ಸೆಲ್ ದ್ವಿಚಕ್ರವಾಹನಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-30  ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-15  ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಾಗಿದೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 221/2021 ಕಲಂ. 379 ಐಪಿಸಿ :-

     ದಿನಾಂಕ 13/09/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾಧಿ ಮೇಡಿಮಾಕಲಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕಿನ ಎಂ.ಎಲ್. ಪ್ರಭಾಕರ ಬಿನ್ ಎಂ.ಪಿ. ಲಕ್ಷ್ಮೀನಾರಾಯಣರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ಬಾಬತ್ತು ಸುಮಾರು 35000/- ರೂ ಬೆಲೆ ಬಾಳು ಕೆಎ40-ಇಡಿ-3308 ರ ಪ್ಯಾಷನ್ ಪ್ರೋ ದ್ವಿಚಕ್ರವಾಹನವನ್ನು ತಾನು ದಿನಾಂಕ 07/09/2021 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ವರ್ಲಕೊಂಡ ಗ್ರಾಮ ಸರ್ವೇ ನಂ 12/01 ರಲ್ಲಿ ತೋಟದ ಮನೆಯ ಬಳಿ ನಿಲ್ಲಿಸಿ ಹೊಲದಲ್ಲಿ ಚಂಡುಮಲ್ಲಿಗೆ ಬಿಡಿಸಿ ಕೆಲಸ ಮುಗಿಸಿಕೊಂಡು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ನಾನು ನಿಲ್ಲಿದ್ದ ದ್ವಿಚಕ್ರವಾಹನದ ಬಳಿ ಬಂದು ನೋಡಲಾಗಿ ದ್ವಿಚಕ್ರವಾಹನ ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಈ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ತಾನು ಈ ದಿನದ ವರೆಗೆ ಎಲ್ಲಾ ಕಡೆ ಹುಡಿಕಿದರೂ ಪತ್ತೆಯಾಗದಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ .92/2021 ಕಲಂ. 279,337,304(A) ಐಪಿಸಿ :-

     ದಿನಾಂಕ 12/09/2021 ರಂದು ರಾತ್ರಿ 9-00 ಗಂಟೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಯಶೋದಮ್ಮ ಕೋಂ  ಮುನಿನಾರಾಯಣಪ್ಪ, 30 ವರ್ಷ, ಕೂಲಿ ಕೆಲಸ, ವಾಸ ಅಂಬೇಡ್ಕರ್ ಕಾಲೋನಿ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ: ತನ್ನ ಗಂಡ ಈಗ್ಗೆ 3 ವರ್ಷದ ಹಿಂದೆ ಮೃತನಾಗಿದ್ದು, ತಾನು ಈತ್ತೀಚಿಗೆ ಬೆಂಗಳೂರಿನಲ್ಲಿ ಲೇಔಟ್  ಕಾಂಪೌಂಡ್ ಕೂಲಿ ಕೆಲಸಕ್ಕೆಹೋಗುತ್ತಿದ್ದು, ಸದರಿ ಕೂಲಿ ಕೆಲಸದ ಹಣವನ್ನು ತೆಗದುಕೊಂಡು ಬರಲು ಈ ದಿನ ದಿನಾಂಕ 12/09/2021 ರಂದು ಶ್ರೀನಿವಾಸಪುರ ತಾಲ್ಲೂಕು ಲಕ್ಷ್ಮೀಪುರ ಕ್ರಾಸ್ ಬಳಿಗೆ ಮಧ್ಯಾಹ್ನ ಬಂದಿದ್ದು, ಹಣ ತೆಗದುಕೊಂಡು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ರಾಯಲ್ಪಾಡು ರಸ್ತೆ ಕಡೆಯಿಂದ ಪ್ರಾಯಾಣಿಕರನ್ನು ತುಂಬಿಕೊಂಡು ಬಂದ ಜೀಪ್ ಸಂಖ್ಯೆ ಕೆಎ-07-ಎಂ-2017 ರಲ್ಲಿ ಹತ್ತಿದೆ. ಜೀಪಿನಲ್ಲಿ ತುಂಬಾ ಜನ ಪ್ರಯಾಣಿಕರಿದ್ದರೂ ಜೀಪ್ ಚಿಂತಾಮಣಿ ಕಡೆಗೆ ಹೋಗುವಾಗ ಅಲ್ಲಲ್ಲಿ ಹಳ್ಳಿಗಳ ಗೇಟುಗಳ ಬಳಿ ಜನರನ್ನು ಹತ್ತಿಸಿಕೊಳ್ಳುವುದು ಇಳಿಸುವುದು ಮಾಡುತ್ತಾ ಚಾಲಕ  ಜೀಪು ಚಲಾಯಿಸುತ್ತಿದ್ದ. ಮಧ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ಜೀಪ್ ನ್ನು ಚಾಲಕ ರಸ್ತೆ ಎಡಬದಿಯಲ್ಲಿ ಚಿಂತಾಮಣಿ ರಸ್ತೆಯ ಮರಿನಾಯಕನಹಳ್ಳಿ ಗೇಟ್ ಸಮೀಪ ಹೋಗುತ್ತಿರುವಾಗ ಎದುರಿನ ಬೆಂಗಳೂರು ರಸ್ತೆಯಿಂದ ಯಾವುದೋ ಒಂದು ಲಾರಿಯನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಾರಿಯನ್ನು ಬಲಗಡೆಗೆ ತಿರುಗಿಸಿ ತಾವು ಹೋಗುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಸಿದ್ದು, ಇದರ ಪರಿಣಾಮ ಜೀಪನಲ್ಲಿದ್ದ 16-17 ಜನರು ಎಲ್ಲರೂ ಬಿದ್ದು ಹೋಗಿದ್ದು, ಕೆಲವು ಜೀಪಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅಪೈಕಿ 6 ಜನರು ತೀವ್ರವಾದ ಗಾಯಗಳಿಂದ ಸ್ಥಳದಲ್ಲಿಯೇ ಸತ್ತುಹೋಗಿರುತ್ತಾರೆ. ಉಳಿದಂತೆ ಜೀಪಿನಲ್ಲಿದ್ದ ಮೂವರು ಮಕ್ಕಳು, ದೊಡ್ಡವರು, ಹೆಂಗಸರಿಗೆ ರಕ್ತಗಾಯಗಳಾಗಿರುತ್ತೆ. ತನಗೆ ಎಡಭುಜಕ್ಕೆ ಬೆನ್ನಿಗೆ ಮೂಗೇಟುಗಳು ಉಂಟಾಯಿತು. ಜೀಪ್ ಪಲ್ಟಿ ಹೊಡೆದಿದ್ದು, ಪೂರ್ತಿ ಜಖಂ ಆಗಿರುತ್ತೆ., ಲಾರಿ ಸಿಮೆಂಟ್ ಲಾರಿಯಾಗಿದ್ದು, ಲಾರಿ ಚಾಲಕ ಲಾರಿಯಿಂದ ಇಳಿದು ಅಲ್ಲಿಂದ ಓಡಿಹೋದ, ಆಗ ಅಲ್ಲಿಗೆ ಸುತ್ತಮುತ್ತಲ ಗ್ರಾಮದವರು ರಸ್ತೆಯಲ್ಲಿ ಬರುತ್ತಿದ್ದವರು ಬಂದು ಗಾಯಗಳಾಗಿದ್ದವರನ್ನು ಅಂಬ್ಯೂಲೆನ್ಸ್ ಮತ್ತು ಇತರೆ ವಾಹನಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತನ್ನನ್ನು ಸಹ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಸೇರಿಸಿರುತ್ತಾರೆ. ತಮ್ಮ ಜೀಪ್ ಗೆ ಡಿಕ್ಕಿ ಹೊಡೆಸಿದ ಲಾರಿ ಸಂಖ್ಯೆ ಎನ್ಎಲ್-01-ಎಡಿ 2376 ಆಗಿರುತ್ತೆ, ತನ್ನೊಂದಿಗೆ ಸುಮಾರು 6-7 ಜನರು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಗಾಯಾಳುಗಳಲ್ಲಿ 2 ವರ್ಷದ ಹೆಣ್ಣು ಮಗು ಹಾಗೂ ಇತರೇ ಇಬ್ಬರು ಮಕ್ಕಳು ಸಹ ಇರುತ್ತಾರೆ. ಅಪಘಾತ ನಡೆದ ಸ್ಥಳದಿಂದ ಆಸ್ಪತ್ರೆಗೆ ಸೇರಿಸಿದ್ದವರಲ್ಲಿ ಪುನಃ ಇಬ್ಬರು ಮೃತಪಟ್ಟರೆಂಬ ವಿಷಯ ಗೊತ್ತಾಯಿತು. ಈ ಅಪಘಾತದಲ್ಲಿ ಜೀಪ್ ನಲ್ಲಿ 3 ಜನ ಹೆಂಗಸರು, 5 ಜನ ಗಂಡಸರು ಮೃತಪಟ್ಟರೆಂಬ ವಿಷಯ ತಿಳಿದು ಬಂತು. ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಹೆಸರು ತನಗೆ ತಿಳಿದಿರುವುದಿಲ್ಲಾ. ತಿಳಿಯಬೇಕಾಗಿದೆ. ಈ ರೀತಿ ಅಪಘಾತಪಡಿಸಿ ಸ್ಥಳದಿಂದ ಪರಾರಿಯಾದ ಎನ್.ಎಲ್-01-ಎಡಿ2376 ರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 93/2021 ಕಲಂ. 143,144,147,148,448,323,324,325,504,506 ರೆ/ವಿ 149 ಐಪಿಸಿ :-

     ದಿನಾಂಕ 13/09/2021 ರಂದು ಮದ್ಯಾಹ್ನ 1.45 ಗಂಟೆಗೆ ಹೆಚ್.ಸಿ 200 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪಿರ್ಯಾದಿ ಶ್ರೀಮತಿ ಪಾರ್ವತಮ್ಮ ಕೋಂ ರಾಮಕೃಷ್ಣಪ್ಪ,32 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ಬಿ.ಭತ್ತಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ  ತಮ್ಮ ಮನೆಯ ಮುಂದೆ ಸರ್ಕಾರಿ ಕೊಳಾಯಿ ಇದ್ದು, ಕೊಳಾಯಿ ಬಳಿ ತಮ್ಮ ಗ್ರಾಮದ ಎಲ್ಲರೂ ನೀರು ಹಿಡಿದುಕೊಂಡು ಹೋಗುತ್ತಿರುತ್ತಾರೆ.. ತಮ್ಮ ಗ್ರಾಮದ ನಾಯಕ ಜನಾಂಗದವರು ತಾವು ಮೊದಲು ನೀರು ಹಿಡಿಯಬೇಕು ನೀವು ಮತ್ತೇ ಹಿಡಿಯಿರಿ ಎಂತ ಗಲಾಟೆ ಮಾಡುತ್ತಿದ್ದರು. ಇದೇ ವಿಚಾರದಲ್ಲಿ ತಮಗೂ ಅವರಿಗೂ ಮನಸ್ಥಾಪಗಳಿದ್ದು, ದಿನಾಂಕ 12/09/2021 ರಂದು  ಸಂಜೆ ಸುಮಾರು 4.30 ಗಂಟೆಯಲ್ಲಿ ತಮ್ಮ ಮನೆಯಲ್ಲಿ ತಾನೊಒಬ್ಬಳೇ ಇದ್ದಾಗ ಆನಂದ ಬಿನ್ ರಾಮಚಂದ್ರಪ್ಪ ಎಂಬುವನು ಮನೆಯೊಳಗೆ ಬಂದು ಏನೇ ಮುಂಡೆ ತಮ್ಮ ಜನಾಂಗದವರು ನೀರು ಹಿಡಿಯುವಾಗ ಗಲಾಟೆ ಮಾಡಿ ಬೈದಿದ್ದೀಯ ಎಂತ ಜಗಳ ಕಾದು ಕೆಟ್ಟ ಮಾಡತುಗಳಿಂದ ಬೈಯುತ್ತಿದ್ದಾಗ ತಾನು ಕಿರುಚಿಕೊಂಡಾಗ ಆನಂದ ಕೋಲಿನಿಂದ ತನ್ನ ಬಲಭುಜಕ್ಕೆ ಹೊಡೆದು ಮೈನೋವುಂಟು ಮಾಡಿದ, ತಾನು ಮನೆಯಿಂದ ಆಚೆ ಬಂದಾಗ ಕೈಗಳಿಮದ ಮೈಮೇಲೆ ಹೊಡೆದ ಅಷ್ಟರಲ್ಲಿ ಮನೆಯ ಪಕ್ಕದ ವಾಸಿಗಳಾದ ರವಣಮ್ಮ, ಶಂಕರಮ್ಮರವರು ಅಡ್ಡ ಬಂದಾಗ ಆನಂದ ಕೋಲಿನಿಂದ ಮೈಮೇಲೆ ಹೊಡೆದು ಕೈ ಮುಷ್ಠಿಯಿಂದ ಮುಖಕ್ಕೆ ಗುದ್ದಿ ಮುಂಭಾಗದ ಹಲ್ಲು ಅಲುಗಾಡಿ ಮೇಲ್ಫದರದ ಒಂದು ಹಲ್ಲು ಬಿದ್ದುಹೋಗಿರುತ್ತೆ. ಶಂಕರಮ್ಮನಿಗೆ ಕೈಗಳಿಂದ ಮತ್ತು ಕಾಲುಗಳಿಂದ ಒದ್ದು,ಮೈನೋವುಂಟು ಮಾಡಿ ಕೆಳಕ್ಕೆ ತಳ್ಳಿ ಮೈನೋವುಪಡೆಸಿರುತ್ತಾನೆ. ತಾವು ಕೂಗಿಕೊಂಡಾಗ ಮುರಳಿ ಬಿನ್ ಈರಪ್ಪ ಮನೆಗೆ ನುಗ್ಗಿ ಕೈಗಳಿಂದ ಶಂಕರಮ್ಮನಿಗೆ ಹೊಡೆದು ಮೈನೋವು ಪಡಿಸಿರುತ್ತಾನೆ. ರಘು ಬಿನ್ ಭೀಮಪ್ಪಈ ಮುಂಡೆಗಳಿಗೆ ಇಲ್ಲಿ ಇರಲು ಬಿಡಬಾರದು ಎಂತ ಬೆದರಿಕೆ ಹಾಕಿರುತ್ತಾನೆ. ಆಗ ರವಿ ಎಂಬುವನು ತನ್ನ ತಮ್ಮ ಅಡ್ಡ ಬಂದಾಗ ನರಸಿಂಹಪ್ಪ ಬಿನ್ ಪಾಪನ್ನ, ಹರೀಶ ಬಿನ್ ನರಸಿಂಹಪ್ಪ ರವರು ಕೋಲಿನಿಂದ ಮತ್ತು ಕೈಗಳಂದ ಮೈಮೇಲೆ ಹೊಡೆದು ಮೈನೋವುಂಟು ಮಾಡಿ ಬಲಕಾಲಿಗೆ ಗಾಯಪಡೆಸಿರುತ್ತಾರೆ. ರಾಮಚಂದ್ರಪ್ಪ ಬಿನ್ ಪಾಪನ್ಣ ಮುಂಡೆಗಳು ಈ ಊರಿನಲ್ಲಿ ಇರಬಾರದು ಎಂತ ಕೆಟ್ಟ ಮಾತುಗಳಿಮದ ಬೈದಿರುತ್ತಾರೆ. ಈ ಮೇಲ್ಕಂಡ ಲ್ಲರೂ ಕೆಟ್ಟ ಮಾತುಗಳಿಂದ ಬೈದು ಈ ದಿನವೇ ಇವರನ್ನು ಸಾಯಿಸಬೇಕೆಂತ ಬೆದರಿಕೆ ಹಾಕಿ ಕೂಗಾಡುತ್ತಿದ್ದಾಗ ಇದೇ ಗ್ರಾಮದ ವೆಂಕಟಸ್ವಾಮಿ, ರಮೇಶ, ಮುನೆಮ್ಮ, ಮಂಗಮ್ಮ ಮತ್ತಿತರರು ಜಗಳ ಬಿಡಿಸಿ ಸಮಾಧಾನ ಮಾಡಿ ಉಪಚರಿಸಿ ಗಾಯಾಳುಗಳಾದ ತಮ್ಮನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಯಾವುದೋ ಒಂದು ವಾಹನದಲ್ಲಿ ಸಾಗಿಸಿ ಚಿಕಿತ್ಸೆ ಕೊಡೆಸಿರುತ್ತಾರೆ. ಈ ಮೇಲ್ಕಂಡವರು ಈ ಮಾದಿಗ ಜನಾಂಗದ ಮುಂಡೆಗಳನ್ನು ಊರಾಚೆ ಕಳುಹಿಸಬೇಕು ನೀವು ನಮಗೆ ಏನು ಮಾಡಿಕೊಳ್ಳಲು ಆಗುವುದಿಲ್ಲ ನೀವು ಎಲ್ಲಿಗೆ ಹೋಗುತ್ತೀರೋ ಹೋಗಿ ಎಂತ ಬೆದರಿಕೆ ಹಾಕಿರುತ್ತಾರೆ. ಗಲಾಟೆಯಲ್ಲಿ ರವರಣಮ್ಮರವರ ತಾಳಿ(02) ಮಾಂಗಲ್ಯ ಚೈನು ಎಲ್ಲಿಯೋ ಬಿದ್ದುಹೋಗಿರುತ್ತೆ. ಈ ಮೇಲ್ಕಂಡವರು ಹಳೇ ಜಿದ್ದಿನಿಂದ ಮನೆಗಳಲ್ಲಿ ಯಾರೂ ಇಲ್ಲದೇ ಇದ್ದಾಗ ತಮ್ಮ ಮನೆಗೆ ನುಗ್ಗಿ ಬಂದು ಜಗಳ ಕಾದು ಗಲಾಟೆ ಮಾಡಿ ಕೈಗಳಿಂದ, ಕೋಲುಗಳಿಂದ ಹೊಡೆದು ಗಾಯಪಡೆಸಿ ಪ್ರಾಣಬೆದರಿಕೆ ಹಾಕಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂತ ದೂರಿನ ಸಾರಾಂಶವಾಗಿರುತ್ತೆ.

ಇತ್ತೀಚಿನ ನವೀಕರಣ​ : 13-09-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080