ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.235/2021 ಕಲಂ. 380,457 ಐ.ಪಿ.ಸಿ:-

    ದಿನಾಂಕ: 13/08/2021 ರಂದು ಬೆಳಿಗ್ಗೆ 10.30ಎಂ.ನೂರ್ ಬಾಷಾ ಬಿನ್ ಮಹಬೂಬ್ ಸಾಬ್, 40 ವರ್ಷ, ಮುಸ್ಲಿಂ ಜನಾಂಗ, ಆಟೋ ಕನ್ಸ್ಲ್ಟೆಂಟ್ ಕೆಲಸ, ವಾಸ ಮದರಾಸದ ಬಳಿ, ಬಾಗೇಪಲ್ಲಿ ಟೌನ್. ನಾನು ಬಾಗೇಪಲ್ಲಿ ಟೌನ್ ಬಳಿ ಹಾದು ಹೋಗಿರುವ ಎನ್.ಹೆಚ್.-44 ರಸ್ತೆಯ ಪಕ್ಕ  ಮದರಾಸದ ಬಳಿ ವಾಸವಾಗಿರುತ್ತೆನೆ. ದಿನಾಂಕ.12/08/2021 ರಂದು ಬೆಂಗಳೂರಿನಲ್ಲಿ ನಮ್ಮ ಮಾವನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ನಾನು ಮತ್ತು ನನ್ನ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ದಿನಾಂಕ 10/08/2021 ರಂದು ಸಂಜೆ 6-00 ಗಂಟೆಗೆ ಬೆಂಗಳೂರಿಗೆ ಹೋಗಿರುತ್ತೇನೆ.  ನಂತರ ಈ ದಿನ  ದಿನಾಂಕ.13/08/2021 ರಂದು ಬೆಳಿಗ್ಗೆ ಸುಮಾರು 8-00 ಗಂಟೆಯಲ್ಲಿ ನಾನು ಬಾಗೇಪಲ್ಲಿಗೆ ಬರಲು ಪರಗೋಡು ಬಳಿ ಬರುತ್ತಿದ್ದಾಗ ನಮ್ಮ ಮನೆಯ ಬಳಿ ಇರುವ ಸರ್ವೀಸ್ ಸ್ಟೇಷನವರಾದ ಇಮ್ರಾನ್ ರವರು  ನನಗೆ ಪೋನ್ ಮಾಡಿ ನಿಮ್ಮ ಮನೆಯ ಕಾಂಪೌಂಡ್ ಗೇಟಿನ ಬೀಗ ಮುರಿದಿದ್ದು ಹಾಗೂ ಬಾಗಿಲನ್ನು ಮುರಿದು ಮನೆಯಲ್ಲಿ ಕಳ್ಳತನ ಆಗಿರುವುದಾಗಿ ತಿಳಿಸಿರುತ್ತಾರೆ. ನಾನು ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಗೇಟಿನ ಬೀಗ ಮುರಿದು ಹಾಗೂ ಮನೆಯ ಬಾಗಿಲನ್ನು ಗಡಾರಿಯಿಂದ ಅಥವಾ ಯಾವುದೋ ಆಯುಧದಿಂದ ಮೀಟಿ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ, ಮನೆಯ ಬೆಡ್ ರೂಂ ನಲ್ಲಿರುವ ಕಬೋರ್ಡ ನಲ್ಲಿನ ಡ್ರಾದಲ್ಲಿ ಇಟ್ಟಿದ್ದ  ಕ್ಯಾಂಟರ್ ಅನ್ನು ಮಾರಾಟ ಮಾಡಿದ್ದ  6 ಲಕ್ಷ ರೂ ನಗದು ಹಣ  ಮತ್ತು ಪಕ್ಕದ ಕಬೋರ್ಡ ನಲ್ಲಿಟ್ಟಿದ್ದ  6  ಸಾವಿರ ನಗದು ಹಣ ಮತ್ತು  ಮನೆಯ ಮುಂದೆ ನಿಲ್ಲಿಸಿದ್ದ ಕೆ.ಎ-40-ಇ.ಎ-0395 ನೊಂದಣಿ ಸಂಖ್ಯೆಯ ಸುಮಾರು 35,000/- ರೂ ಬೆಲೆ ಬಾಳುವ ಹೋಂಡಾ ಡಿಯೋ ದ್ವಿ ಚಕ್ರ ವಾಹವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ. ಆದ್ದರಿಂದ ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ದಿನಾಂಕ 12/08/2021 ರಂದು ರಾತ್ರಿ ನಮ್ಮ ಮನೆಯ ಗೇಟಿನ ಬೀಗ ಮುರಿದು ಹಾಗೂ ಮನೆಯ ಬಾಗಿಲನ್ನು ಮುರಿದು 35000/- ಬೆಲೆಬಾಳುವ ಹೋಂಡಾ ಡಿಯೋ ದ್ವಿ ಚಕ್ರ ವಾಹನ ಮತ್ತು 6,06,000/- ರೂ ನಗದು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ಹಣವನ್ನು ಪತ್ತೆ ಮಾಡಿಕೊಡಲು ಹಾಗೂ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಿಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.236/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 13/08/2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟರೆಡ್ಡಿ ಬಿನ್ ಲೇಟ್ ಆದಿನಾರಾಯಣರೆಡ್ಡಿ, 66 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಚಿನ್ನೇಪಲ್ಲಿ ಗ್ರಾಮ, ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ ನಾನು ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯ ಚಿನ್ನೇಪಲ್ಲಿ ಗ್ರಾಮದಲ್ಲಿ ವ್ಯವಸಾಯದಿಂದ ಜೀವನ ಮಾಡಿಕೊಂಡಿರುತ್ತೇನೆ, ನನಗೆ ಗೂಳೂರು ಹೋಬಳಿಯ ಕೊಲಿಂಪಲ್ಲಿ ಗ್ರಾಮದ ಸ ನಂ-41/5 ರಲ್ಲಿ 1-29 ಎಕರೆ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಒಂದು ನೀರಿನ ಬಾವಿಯಿದ್ದು, ಬಾವಿಗೆ ಸಬ್ ಮಾರ್ಸೆಬಲ್ ಮೋಟರ್, ಪಂಪ್ ಮತ್ತು ಸ್ಟೀಲ್ ಪೈಪ್ಗಳನ್ನು ಹಾಗೂ 30 ಮೀಟರ್ ಕೇಬಲ್ ವೈರ್ ನ್ನು ಅಳವಡಿಸಿರುತ್ತೇವೆ. ದಿನಾಂಕ: 09/08/2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ನಾವು ತೋಟದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದು ಸರಿಯಷ್ಠೆ. ನಂತರ ನಾನು ದಿನಾಂಕ: 10/08/2021 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ತೋಟದ ಬಾವಿಯ ಬಳಿ ಹೋಗಿ ನೋಡಲಾಗಿ ಬಾವಿಗೆ ಅಳವಡಿಸಿರುವ ಸುಮಾರು 40,000/- ರೂ ಬೆಲೆ ಬಾಳುವ ಸಬ್ ಮಾರ್ಸೆಬಲ್ ಮೋಟರ್, ಪಂಪ್ ಮತ್ತು ಸ್ಟೀಲ್ ಪೈಪ್ಗಳನ್ನು ಹಾಗೂ 30 ಮೀಟರ್ ಕೇಬಲ್ ವೈರ್ ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ. ಆದ್ದರಿಂದ  ದಿನಾಂಕ 09/08/2021 ರಂದು ರಾತ್ರಿ ವೇಳೆಯಲ್ಲಿ ನಮ್ಮ ಬಾವಿಗೆ ಅಳವಡಿಸಿರುವ ಮೋಟರ್, ಪಂಪ್, ಕೇಬಲ್ ಮತ್ತು ಸ್ಟೀಲ್ ಪೈಪ್ ಗಳನ್ನು  ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ  ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೊರಿ ನೀಡಿದ ದೂರು.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 15(A),32(3) ಕೆ.ಇ ಆಕ್ಟ್:-

    ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:13/08/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾನು ಹೆಚ್.ಸಿ 139 ಶ್ರೀನಾಥ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಹಗಲು ಗಸ್ತು ಕರ್ತವ್ಯದಲ್ಲಿದ್ದಾಗ ನನಗೆ ಯರ್ರಯ್ಯಗಾರಹಳ್ಳಿ ಗ್ರಾಮದ ವಾಸಿಯಾದ ಆನಂದ ಬಿನ್ ವೆಂಕಟರವಣಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಮತ್ತು ಹೆಚ್ ಸಿ-139 ಶ್ರೀನಾಥ ರವರು ಯರ್ರಯ್ಯಗಾರಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 11-30 ಗಂಟೆಗೆ ನಾವು ಪಂಚಾಯ್ತಿದಾರರೊಂದಿಗೆ ಯರ್ರಯ್ಯಗಾರಹಳ್ಳಿ ಗ್ರಾಮದ ವಾಸಿ ಆನಂದ ಬಿನ್ ವೆಂಕಟರವಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ವ್ಯಕ್ತಿಯನ್ನು  ಹಿಡಿದುಕೊಂಡು ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಆನಂದ ಬಿನ್ ವೆಂಕಟರವಣಪ್ಪ 25 ವರ್ಷ.ಆದಿಕರ್ನಾಟಕ ಜನಾಂಗ,ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಯರ್ರಯ್ಯಗಾರಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಡಲು ಯಾವುದಾದರೂ ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ತಿಳಿಸಿದರ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 351.03 ರೂಗಳ 900 ಎಂ.ಎಲ್ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 11-45 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡು ಅಮಾನತ್ತುಪಡಿಸಿಕೊಂಡ ಮಾಲು, ಅಮಾನತ್ತು ಪಂಚನಾಮೆ ಮತ್ತು ಆರೋಪಿಯೊಂದಿಗೆ ಮಧ್ಯಾಹ್ನ 01-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣಾ ಮೊ.ಸಂ 109/2021 ಕಲಂ 15(ಎ) 32(3) K.E ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 323,324,504,506,447,34 ಐ.ಪಿ.ಸಿ:-

     ದಿನಾಂಕ:13/08/2021 ರಂದು ಬೆಳಗ್ಗೆ 00-15 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಶ್ರೀ.ಮಂಜುನಾಥಲಾಲ್ ಹೆಚ್.ಸಿ.160 ರವರು ಬೆಂಗಳೂರು ನಗರದ ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ  ಗಾಯಾಳು ಸಿ.ಎನ್.ಗಂಗಾಧರ ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಗ್ಗೆ 03-00 ಗಂಟೆಯಲ್ಲಿ  ಠಾಣೆಯಲ್ಲಿ ಹಾಜರುಪಡಿಸಿದ  ಹೇಳಿಕೆಯ ದೂರಿನ  ಸಾರಾಂಶವೇನೆಂದರೆ,  ತನ್ನ ತಂದೆಯವರಿಗೆ 1ನೇ ಲಕ್ಷ್ಮಮ್ಮ 2ನೇ ಕಮಲಮ್ಮ ಎಂಬ ಇಬ್ಬರು ಹೆಂಡತಿಯರಿದ್ದು  1ನೇ ಲಕ್ಷ್ಮಮ್ಮ ರವರಿಗೆ  ಮುನಿರಾಮಯ್ಯ  ಸುಶೀಲಮ್ಮ ನಾಗರಾಜ ಎಂಬ ಮೂರು ಜನ ಮಕ್ಕಳಿರುತ್ತಾರೆ. 2ನೇ  ಕಮಲಮ್ಮರವರಿಗೆ ವಿಜಯಲಕ್ಷ್ಮೀ. ಗುರುರಾಜ್ ಮತ್ತು ನಾಗರಾಜ ಆದ ತಾನು ಸೇರಿ 03 ಮಕ್ಕಳಿರುತ್ತೇವೆ. ತಮ್ಮ ತಂದೆಯವರು  ಆಸ್ತಿಯನ್ನು ಎಲ್ಲರಿಗೂ  ಸಮವಾಗಿ  ಭಾಗಗಳನ್ನು ಮಾಡಿಕೊಟ್ಟಿದ್ದರು.  ಹೀಗಿರುವಲ್ಲಿ ಮೇಲ್ಕಂಡ  ನಾಗರಾಜ ರವರ  ಮಗಳಾದ ಶ್ರೀಮತಿ ಜ್ಯೋತಿ ಮತ್ತು ಆಕೆಯ ಮಗ ಸತ್ಯಜಿತ್ ರವರು ಗುರುರಾಜ್ ರವರ ಜಮೀನನ್ನು ಖರೀದಿಸಿದ್ದರು.  ಈ ಜಮೀನು ಮಂಚನಬಲೆ ಅಮಾನಿ ಕೆರೆಯ ಬಳಿ ಸರ್ವೆ ನಂಬರ್:162/1 ರ ಜಮೀನಾಗಿರುತ್ತದೆ. ಸದರರಿ  ಜಮೀನು  ಬಳಿ ನಮ್ಮ ಜಮೀನುಗಳಿಗೆ ಹೋಗಲು 10 ಅಡಿಗಳಷ್ಟು ದಾರಿ ಬಿಡಲು ಘನ ನ್ಯಾಯಾಲಯದಲ್ಲಿ ಆದೇಶವಾಗಿದ್ದು ದಿನಾಂಕ: 12/08/2021 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ತಾನು ಜಮೀನಿಗೆ  ಹೋಗಲು ದಾರಿಯನ್ನು  ಮಾಡಿಸುತ್ತಿದ್ದಾಗ  ಶ್ರೀಮತಿ ಜ್ಯೋತಿ ಮತ್ತು ಅವರ ಮಗ ಸತ್ಯಜಿತ್ ರವರು ನಮ್ಮ ಜಮೀನುನೊಳಕ್ಕೆ ಅಕ್ರಮ ಪ್ರವೇಶ ಮಾಡಿ  ಏಕಾಏಕಿ ತನ್ನ ಮೇಲೆ ಜಗಳ ತೆಗೆದು  ಈ ಜಮೀನಿನಲ್ಲಿ  ಏನಾದರೂ ಕೆಲಸ ಮಾಡಿಸಿದರೆ  ನಿನ್ನನ್ನು  ಮುಗಿಸಿಬಿಡುತ್ತೇನೆ. ಲೋಪರ್ ನನ್ನ ಮಗನೇ ಎಂತ ಅವಾಚ್ಯ ಶಬ್ದಗಳಿಂದ ಬೈದು. ಪ್ರಾಣ ಬೆದರಿಕೆಯನ್ನು ಹಾಕಿ ಜ್ಯೋತಿ ಕೈಗಳಿಂದ  ತನ್ನ ಎದೆಗೆ ತಲೆಗೆ ಹೊಡೆದಳು. ಸತ್ಯಜಿತ್   ಕಲ್ಲುನಿಂದ ತನ್ನ  ಬೆನ್ನಿನ ಮೇಲೆ  ಹೊಟ್ಟೆಯ ಮೇಲೆ ಹೊಡೆದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ಗುರುಮೂರ್ತಿ ಮತ್ತು ಮುನಿಕೃಷ್ಣಪ್ಪರವರು ಬರುವಷ್ಟರಲ್ಲಿ ಅವರು  ಓಡಿ ಹೋಗಿರುತ್ತಾರೆಂತ  ಸದರಿಯವರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ  ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.357/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 12/08/2021 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಯಶೋದಮ್ಮ ಕೋಂ ರಮೇಶ್, 46 ವರ್ಷ, ಗೃಹಣಿ, ನಾಯಕ ಜನಾಂಗ, ಅಕ್ಕಿಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಮಕ್ಕಳಿದ್ದು ಮೊದಲನೇ ಪ್ರಿಯಾಂಕ ಮತ್ತು ಎರಡನೇ ಪವನ್.ಆರ್ ರವರಾಗಿರುತ್ತಾರೆ. ತನ್ನ ಮಗನಾದ ಪವನ್.ಆರ್ ರವರಿಗೆ 21 ವರ್ಷ ವಯಸ್ಸಾಗಿದ್ದು ಈತನು ಹೊಸಕೋಟೆ ತಾಲ್ಲೂಕು, ಪಿಲ್ಲಗುಪ್ಪೆ ಕೈಗಾರಿಕಾ ಪ್ರದೇಶದ ಒಂದು ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ: 11/08/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಪವನ್ ರವರು ಮನೆಗೆ ತರಕಾರಿ ತರುವ ಸಲುವಾಗಿ ತಮ್ಮ ಬಾಬತ್ತು ಕೆಎ-40 ಎಸ್-1224 ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಗೆ ಹೋಗಿರುತ್ತಾನೆ. ನಂತರ ಸಂಜೆ ಸುಮಾರು 7.30 ಗಂಟೆ ಸಮಯದಲ್ಲಿ ತನ್ನ ಮೈದುನನಾದ ನರಸಿಂಹಮೂರ್ತಿ ರವರು ತನಗೆ ಕರೆ ಮಾಡಿ ಪವನ್ ಕುಮಾರ್ ರವರಿಗೆ ಸಂತೇಕಲ್ಲಹಳ್ಳಿ ಗೇಟ್ ಬಳಿ ಅಪಘಾತವಾಗಿದ್ದು ತಾನು ಆಂಬುಲೆನ್ಸ್ ನಲ್ಲಿ ಹೊಸಕೋಟೆ ಆಸ್ವತ್ರೆಗೆ ಕರೆದುಕೊಂಡು ಹೋಗುತಿರುವುದಾಗಿ ಹೇಳಿರುತ್ತಾರೆ. ಕೂಡಲೇ ತಾನು ಮತ್ತು ತನ್ನ ಅಳಿಯ ಅವಿನಾಷ್ ರವರು ಹೋಸಕೋಟೆಯ ಸರ್ಕಾರಿ ಆಸ್ವತ್ರೆಗೆ ಹೋಗಿ ನೋಡಲಾಗಿ ತನ್ನ ಮಗ ಮೃತನಾಗಿದ್ದು, ಅಲ್ಲಿದ ತನ್ನ ಮೈದುನ ನರಸಿಂಹಮೂರ್ತಿ ರವರನ್ನು ಸದರಿ ಅಫಘಾತದ ಬಗ್ಗೆ ವಿಚಾರ ಮಾಡಿಲಾಗಿ ಆತನು “ನಾನು ಈ ದಿನ ಸಂಜೆ 7.15 ಗಂಟೆ ಸಮಯದಲ್ಲಿ ಸಂತೇಕಲ್ಲಹಳ್ಳಿ ಗೇಟ್ ಬಳಿ ನಿಂತಿದ್ದಾಗ ಪವನ್ ರವರು ಆತನ ಬಾಬತ್ತು ಕೆಎ-40 ಎಸ್-1224 ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಕಡೆಯಿಂದ ಬಂದು ಸಂತೇಕಲ್ಲಹಳ್ಳಿ ಗ್ರಾಮದ ಒಳಗೆ ಹೋಗಲು ತನ್ನ ವಾಹನವನ್ನು ಎಡಕ್ಕೆ ತಿರುಗಿಸಿದ್ದು ರಸ್ತೆಯ ಎಡ ಭಾಗದಲ್ಲಿ ಬರುತ್ತಿದ್ದ ಕೆಎ-53 ಡಿ-7699 ನೊಂದಣಿ ಸಂಖ್ಯೆಯ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪವನ್ ರವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ಪವನ್ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಪವನ್ ರವರಿಗೆ ತಲೆಗೆ ಮತ್ತು ಬಲಗೈ ಗೆ ರಕ್ತಗಾಯವಾಗಿದ್ದು ತಾನು ಕೂಡಲೇ ಪವನ್ ರವರನ್ನು ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಪವನ್ ರವರು ಮೃತ ಪಟ್ಟಿರುವುದಾಗಿ ತಿಳಿಸಿದರು ಎಂದು ತಿಳಿಸಿದರು. ಹಾಲಿ ಪವನ್ ರವರ ಮೃತ ದೇಹ ಹೋಸಕೋಟೆ ಸರ್ಕಾರಿ ಆಸ್ವತ್ರೆಯ ಶವಾಗಾರದಲ್ಲಿರುತ್ತೆ. ರಾತ್ರಿ ಆ ವೇಳೆಯಾದ್ದರಿಂದ ತಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಮಗನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಮೇಲ್ಕಂಡ ಕೆಎ-53 ಡಿ-7699 ನೊಂದಣಿ ಸಂಖ್ಯೆಯ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ:12/08/2021 ರಮದು ಮಧ್ಯಾಹ್ನ 15-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಮಲಕ್ಷ್ಮಮ್ಮ ಕೊಂ ಚನ್ನಕೃಷ್ಣಪ್ಪ,35 ವರ್ಷ, ವಕ್ಕಲಿಗರು,ಗೃಹಿಣಿ, ವಾಸ:ಚಾಕಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನಿಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೆನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಈಗ್ಗೆ 18   ವರ್ಷಗಳ ಹಿಂದೆ ಚಾಕಪ್ಪನಹಳ್ಳಿ ಗ್ರಾಮದ ಪಾಪಣ್ಣ ರವರ ಮಗನಾದ  ಚನ್ನಕೃಷ್ಣಪ್ಪ ರವರೊಂದಿಗೆ ಮದುವೆಯಾಗಿದ್ದು ನಮಗೆ ಇಬ್ಬರು ಮಕ್ಕಳು ಇರುತ್ತಾರೆ. ನಮ್ಮ ಮಾವ ಪಾಪಣ್ಣ ರವರಿಗೆ  10 ಎಕೆರೆ ಜಮೀನು ಇದ್ದು  ನಮ್ಮ ಮಾವ ರವರು ಮರಣ ಹೊಂದಿದ  ನಂತರ ಊರಿನ ಹಿರಿಯರ ಸಮಕ್ಷಮದಲ್ಲಿ ಪಂಚಾಯ್ತಿ ಮಾಡಿ ಜಮೀನಿನನ್ನು ವಿಭಾಗ ಮಾಡಿಕೊಂಡು ಬೇರೆ ಬೇರೆಯಾಗಿ ಉಳುಮೆ ಮಾಡಿಕೊಂಡಿರುತ್ತೇವೆ. ನಮ್ಮಭಾಗಕ್ಕೆ ಬಂದ ಜಮೀನಿನ ಮೇಲ್ಬಾಗದಲ್ಲಿ ದಕ್ಷಿಣ ಕಡೆಗೆ ನಮ್ಮ ಭಾವನಾದ ವೆಂಕಟರೆಡ್ಡಿ ರವರ ಭಾಗದ ಜಮೀನು ,ಉತ್ತರ ಭಾಗಕ್ಕೆ ದೇವರಾಜ ರವರ ಭಾಗದ ಜಮೀನು ಇರುತ್ತೆ.  ಮಳೆ ಬಂದರೆ ನಮ್ಮ ಭಾವನಾದ ವೆಂಕಟರೆಡ್ಡಿ ರವರ ಜಮೀನಿನ ಮೇಲೆ ಬೀಳುವ ನೀರು ನಮ್ಮ ಜಮೀನಿನ ಮೇಲೆ ಬರುತ್ತೆ ಅದಕ್ಕೆ  ಅಡ್ಡವಾಗಿ ಇಬ್ಬರ ಜಮೀನುಗಳ ಮಧ್ಯದಲ್ಲಿ ದೊಡ್ಡದಾಗಿ ಒಂದು ಬದುವನ್ನು ನಿರ್ಮಿಸಿಕೊಂಡಿರುತ್ತೇವೆ.  ಈಗ್ಗೆ 2 ದಿನಗಳ ಹಿಂದೆ ಬಂದ ಮಳೆಯ ನೀರಿಗೆ ನಿರ್ಮಿಸಿದ್ದ ಬದು (ಗಣಿಮೆ)  ಕೊಚ್ಚಿಕೊಂಡು ಹೋಗಿ  ಮೇಲ್ಬಾದ ನೀರು  ನಮ್ಮ ಜಮೀನಿನ ಮೇಲೆ ಬಿದ್ದು ಸ್ವಲ್ಪ ಈರುಳ್ಳಿ  ಬೆಳೆ ಕೊಚ್ಚಿ ಹೋಗಿರುತ್ತೆ. ನಮ್ಮ ಮನೆಯ ಪಕ್ಕದಲ್ಲಿಯೇ ನಮ್ಮ ಜಮೀನು ಇರುತ್ತೆ.ದಿನಾಂಕ:11/08/2021 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ  ಕೊಚ್ಚಿ ಹೋಗಿದ್ದ  ಬದುವನ್ನು ನಾನು ಸರಿ ಮಾಡುತ್ತಿದ್ದಾಗ ನಮ್ಮ ಭಾವ ವೆಂಕಟರೆಡ್ಡಿ ರವರು ಅಲ್ಲಿಗೆ  ಬಂದು ಬದುವನ್ನು ಕಟ್ಟಬಾರದೆಂದು ವಿನಾಕಾರಣ  ಜಗಳ ತೆಗೆದು ಎ ಸೂಳೆ ಮುಂಡೆ,ಬೇವರ್ಸಿ ನಿನಗೆ ಎಷ್ಟು ಸಾರಿ ಹೇಳುವುದು ಈ ಬದುವಿನ ತಂಟೆಗೆ ಬರಬೇಡ ಎಂದು ಅವಾಚ್ಯ ಶಬ್ದಗಳಿಂದ ಬೈದು, ಈ ಗಣಿಮೆಯ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ ನಾನು ಸರಿ ಮಾಡಿದ್ದ ಬದು (ಗಣಿಮೆ)ವನ್ನು ಕೆಡವಿ ಬಿಟ್ಟಿರುತ್ತಾರೆ. ನಾನು ಮಳೆ ಬಂದರೆ ನಮ್ಮ ಜಮೀನಿನ ಮೇಲೆ ಮಳೆ ನೀರು ಬಂದು ಬೆಳೆ ನಾಶವಾಗುತ್ತೆಂದು ಹಾಕಿದ್ದು ಬದುವನ್ನು ಯಾಕೆ ಕೆಡಿವಿದ್ದು ಎಂದು ಕೇಳಿದ್ದಕ್ಕೆ  ವೆಂಕಟರೆಡ್ಡಿ ರವರು ಕೈಗಳಿಂದ ನನ್ನ ಮೈ ಮೇಲೆ ಹೊಡೆದು ಸೊಂಟಕ್ಕೆ ಕಾಲಿನಿಂದ ಒದ್ದು ನನ್ನನ್ನು ಕೆಳಕ್ಕೆ ಬೀಳಿಸಿರುತ್ತಾನೆ. ನಂತರ ನಾನು ತೆಗೆದುಕೊಂಡು ಹೋಗಿದ್ದ ಸನಿಕೆಯ ದೊಣ್ಣೆಯಿಂದ  ನನ್ನ ತಲೆಯ ಬಲಭಾಗಭಾಗದ ಹಣೆಗೆ  ಹೊಡೆದು ರಕ್ತಗಾಯ ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ನನ್ನ  ಗಂಡ  ಚನ್ನಕೃಷ್ಣಪ್ಪ ರವರು ಮತ್ತು ನನ್ನ ತಮ್ಮನಾದ ಗಣೇಶ್ ಬಿನ್  ವೆಂಕಟೇಶಪ್ಪ,28 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ತಟ್ಟಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರುಗಳು ಗಲಾಟೆಯನ್ನು ಬಿಡಿಸಲು ಬಂದಾಗ ವೆಂಕಟರೆಡ್ಡಿ ರವರ ಅದೇ  ದೊಣ್ಣೆಯಿಂದ ನನ್ನ ಗಂಡ ಚನ್ನಕೃಷ್ಣಪ್ಪ ರವರ ಎಡಕಾಲಿನ ಹಿಮ್ಮಡಿಗೆ ಹೊಡೆದು ಮೂಗೇಟನ್ನುಂಟು ಮಾಡಿರುತ್ತಾನೆ ಅಷ್ಟರಲ್ಲಿ ಅಲ್ಲಿಗೆ ನಮ್ಮ ಗ್ರಾಮದ ಅಂಜಿನಪ್ಪಬಿನ್ ಪೋತುಲಪ್ಪ ರವರು ಬಂದು ಗಲಾಟೆ ಬಿಡಿಸಿರುತ್ತಾರೆ. ನಂತರ ನನ್ನ ತಮ್ಮ ಗಣೇಶ್ ರವರು ಗಾಯಗೊಂಡಿದ್ದ ನಮ್ಮಗಳನ್ನು  108 ಅಂಬ್ಯೂಲೆನ್ಸ್ ನಲ್ಲಿ ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು  ದಿನಾಂಕ:12/08/2021 ರಂದು ಮಧ್ಯಾಹ್ನ ಠಾಣೆಗೆ ಹಾಜರಾಗಿ ನಮ್ಮ ಮೇಲೆ ಗಲಾಟೆ ಮಾಡಿರುವ ವೆಂಕಟರೆಡ್ಡಿ ಬಿನ್ ಲೇಟ್ ಪಾಪಣ್ಣ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:108/2021 ಕಲಂ:323,324,504,506 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.189/2021 ಕಲಂ. 279,337 ಐ.ಪಿ.ಸಿ:-

       ದಿನಾಂಕ:12/08/2021 ರಂದು ಪಿರ್ಯಾದಿದಾರರಾದ ಇಬ್ರಾಹಿಂ ಬಿನ್ ಅಲ್ಲಾಬಕಾಷ್, 50 ವರ್ಷ, ಮುಸ್ಲೀಂ ಜನಾಂಗ, ಚಾಲಕ ವೃತ್ತಿ,  ವಾಸ ವಿರುಪಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು  ಸಂಜೆ 4-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲನೆ ಮಗಳಾದ  ನೂರ್ ಆಯಿಷಾ ರವರನ್ನು 07 ವರ್ಷಗಳ ಹಿಂದೆ ಗೌರೀಬಿದನೂರು ತಾಲ್ಲೂಕು ಹಿರೇಬಿದನೂರು ಗ್ರಾಮದ ವಾಸಿ ಸಾದಿಕ್ ಬಿನ್ ಚಾಂದ್ ಭಾಷಾ, 35 ವರ್ಷ, ಮುಸ್ಲೀಂ ಜನಾಂಗ, ಹೊಸೂರು ಭಾರತ್ ಕ್ಲೀನಿಕ್ ಗೌರೀಬಿದನೂರು ಟೌನ್, ಆಸ್ಪತ್ರೆಯಲ್ಲಿ ಕೆಲಸ ರವರಿಗೆ ಕೊಟ್ಟು ವಿವಾಹ ಮಾಡಿಕೊಟ್ಟಿರುತ್ತೇನೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮೊದಲನೆ ಮಗಳು ಸಹನಾ, 2 ನೇ ಗಂಡು ಮಗು ಷಾಯಾನ್ ಇದ್ದು ಮಗು ಹುಟ್ಟಿದ ನಂತರ ವಿರುಪಸಂದ್ರ  ಗ್ರಾಮದ ತನ್ನ ಮನೆಯಲ್ಲಿ ಇರುತ್ತಾಳೆ. ಹೀಗಿರುವಾಗ ಅಳಿಯನಾದ ಸಾದಿಕ್ ಪ್ರತಿ ವಾರಕ್ಕೊಮ್ಮೆ ತನ್ನ ಹೆಂಡತಿ ಮತ್ತು ಮಗುವನ್ನು ನೋಡಲು ಬಂದು ಹೋಗುತ್ತಿದ್ದರು. ಅದೇ ರೀತಿ ದಿನಾಂಕ:09/08/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮಕ್ಕೆ K.A-40, U-2065 ಹೋಂಡಾ ಶೈನ್  ದ್ವಿ ಚಕ್ರವಾಹನದಲ್ಲಿ ಒಬ್ಬನೇ ನಮ್ಮ ಗ್ರಾಮಕ್ಕೆ ಬರುವಾಗ ಬಾದಿಮರಳೂರು ಕೆರೆ ಹತ್ತಿರ ಆಕಸ್ಮಿಕವಾಗಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರವಾಹನ ರಸ್ತೆ ಪಕ್ಕದ ಗುಂಡಿಗೆ ಬಿದ್ದು, ತನ್ನ ಅಳಿಯ ರಸ್ತೆಯ ಮೇಲೆ ಬಿದ್ದಾಗ ಅದೇ ಸಮಯಕ್ಕೆ ನನ್ನ ಮಗಳು ನೂರ್ ಆಯೆಷಾ ಸಾದಿಕ್ ರವರ ಮೊಬೈಲ್ ಗೆ ಕರೆ ಮಾಡಿರುತ್ತಾಳೆ . ಆ ವೇಳೆಗೆ ದಾರಿಯಲ್ಲಿ ಹೋಗುವರು ನೋಡು ಮೊಬೈಲ್ ಪೋನ್ ಅನ್ನು ರಿಸೀವ್ ಮಾಡಿ ಮಾತನಾಡಿದ್ದು ಯಾರೂ ಅಂತಾ ಕೆಳಲಾಗಿ ನಾವು ಬಾದಿಮರಳೂರು ಗ್ರಾಮದವರು ಎಂದು ಹೇಳಿ, ಈ ಮೊಬೈಲ್ ನ ವ್ಯಕ್ತಿಯು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರುತ್ತಾನೆ ಎಂದು ತಿಳಿಸಿದಾಗ ಪಕ್ಕದಲ್ಲೇ ಇದ್ದ ನನಗೆ ವಿಚಾರ ತಿಳಿಸಿದಳು, ತಕ್ಷಣ ತಾನು ಮತ್ತು ತನ್ನ ಬಾವಮೈದ ಚಾಂದು ಇಬ್ಬರೂ ಅಪಘಾತವಾಗಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಅಳಿಯ ಸಾದಿಕ್ ರವರು ರಸ್ತೆಯಲ್ಲಿ ಬಿದ್ದಿದ್ದು, ಹತ್ತಿರ ಹೋಗಿ ನೋಡಲಾಗಿ ಬಲಭಾಗದ ಹಣೆಗೆ ರಕ್ತಗಾಯವಾಗಿ ಕೆಳಗಡೆ ಬಿದ್ದಿರುತ್ತಾನೆ. ತಕ್ಷಣ ನಾವು 108 ಸರ್ಕಾರಿ ಆಂಬುಲೆನ್ಸ್ ಗೆ ಕರೆ ಮಾಡಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲಿಸಿರುತ್ತೇವೆ. ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ಕೊಟ್ಟಿದ್ದು ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪಾದರಾಯನಪುರ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ದಿನಾಂಕ:09/08/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಅಳಿಯ K.A-40, U-2065 ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸ್ವಯಂ ಚಾಲನೆ ಮಾಡಿಕೊಂಡು ಹೋಗಿರುವುದೇ ಈ ಅಪಘಾತಕ್ಕೆ ಕಾರಣವಾಗಿರುತ್ತೆಂದು ನೀಡಿದ ದೂರಾಗಿರುತ್ತದೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.190/2021 ಕಲಂ. 15(A),32(3) ಕೆ.ಇ ಆಕ್ಟ್:-

       ದಿನಾಂಕ:26/07/2021 ರಂದು ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ವಿಜಯಕುಮಾರ್ ಕೆ.ಸಿ   ಆದ ನಾನು  ಸೂಚಿಸುವುದೇನೆಂದರೆ,  ಈ ದಿನ ದಿನಾಂಕ: 26/07/2021 ರಂದು  ಸಂಜೆ 4-45 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯ ಕುಡುಮಲಕುಂಟೆ ಗ್ರಾಮದಲ್ಲಿ, ನಾಗರಾಜ ಬಿನ್ ಲೇಟ್ ನ್ಯಾತಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಧುರಾಶ್ವತ್ಥ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-179 ಶಿವಶೇಖರ, ಮತ್ತು ಠಾಣೆಯ ಪಿ.ಸಿ-312 ಸೋಮನಾಥ ಮಾಲಗಾರ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಸಂಜೆ 5-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಗಳನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ನಾಗರಾಜು ಬಿನ್ ಲೇಟ್ ನ್ಯಾತಪ್ಪ, 38 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಕುಡುಮಲಕುಂಟೆ ಗ್ರಾಮ, ಗೌರೀಬಿದನೂರು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 5-30 ಗಂಟೆಯಿಂದ 6-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ  7-20 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.ನ್ಯಾಯಾಲಯದ ಪಿಸಿ 205 ರವರು ನೀಡಿದ ನ್ಯಾಯಾಲಯದ ಪಿಸಿ ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.191/2021 ಕಲಂ. 302,201 ಐ.ಪಿ.ಸಿ:-

        ದಿನಾಂಕ 13-08-2021 ರಂದು ಬೆಳಿಗ್ಗೆ 11-00 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಕೆ.ಸಿ.ವಿಜಯಕುಮಾರ್ ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ: 05/08/2021 ರಂದು ರಾತ್ರಿ8-30 ಗಂಟೆಗೆ ಫಿರ್ಯಾದು ದಾರರಾದ ಚಿಕ್ಕಗಂಗಪ್ಪ ಬಿನ್ ಲೇಟ್ ಆಂಜಿನಪ್ಪ, 55 ವರ್ಷ, ಆದಿಕರ್ನಾಟಕ, ಅರಣ್ಯ ವೀಕ್ಷಕರು, ಗೌರಿಬಿದನೂರು ಸಾಮಾಜಿಕ ಅರಣ್ಯ, ವಾಸ ರಾಮಚಂದ್ರಪುರ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ತಾನು 30 ವರ್ಷಗಳಿಂದ ಗೌರಿಬಿದನೂರು ಸಾಮಾಜಿಕ ಅರಣ್ಯವಲಯದಲ್ಲಿ ಅರಣ್ಯವೀಕ್ಷಕನಾಗಿ ಕೆಲಸ ಮಾಡುತ್ತಿರುತ್ತೇನೆ. ಈ ದಿನ ದಿನಾಂಕ:05/08/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತಾನು ಕಛೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಯಾರೋ ಸಾರ್ವಜನಿಕರು ತನಗೆ ದೂರವಾಣಿ ಕರೆಯನ್ನು ಮಾಡಿ ರಾಮಚಂದ್ರ ಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯಾರೋ ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಬಿದ್ದಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ತಾನು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಸ್ಥಳವು ರಾಮಚಂದ್ರಪುರ ಗ್ರಾಮದಿಂದ ಬೈಚಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ರಾಮಚಂದ್ರಪುರ ಗ್ರಾಮದ ಸಾಮಾಜಿಕ ಅರಣ್ಯ ಪ್ರದೇಶ ವಾಗಿರುತ್ತೆ.  ಅರಣ್ಯ ಇಲಾಖೆಯ ವತಿಯಿಂದ ತೊಡಿಸಿರುವ ನೀರು ಇಂಗುವ ಗುಣಿಯೊಳಕ್ಕೆ ಯಾರೋ ಒಬ್ಬ ಗಂಡಸಿನ ಶವ ಬಿದ್ದಿದ್ದು ಮೃತ ದೇಹವು ಅರ್ಧ ಮುಚ್ಚಿರುವ  ಸ್ಥಿತಿಯಲ್ಲಿ ಹಾಗೂ ಕೊಳೆತ ಸ್ಥತಿಯಲ್ಲಿರುತ್ತೆ. ಮೃತ ದೇಹವು ಗುರುತು ಸಿಗದ ಸ್ಥಿತಿಯಲ್ಲಿರುತ್ತೆ. ಹಾಗೂ ಮೃತ ದೇಹದ ಸಾವಿನ ಮೇಲೆ ಅನುಮಾನವಿದ್ದು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಲಿಖಿತ ದೂರನ್ನು ಪಡೆದುಕೊಂಡು ಠಾಣಾ ಯು.ಡಿ.ಆರ್. ಸಂಖ್ಯೆ 24/2021 ಕಲಂ 174(ಸಿ) ಸಿ,ಆರ್.ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಪ್ರ.ವ.ವರದಿಯನ್ನು ತಾಲ್ಲೂಕು ದಂಡಾಧೀಕಾರಿಗಳ ನ್ಯಾಯಾಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ನಿವೇದಿಸಿಕೊಂಡಿರುತ್ತೆ. ದಿನಾಂಕ 06-08-2021 ರಂದು ಈ ಕೇಸಿನ ಕಡತವನ್ನು ಮುಂದಿನ ತನಿಖೆಯ ಬಗ್ಗೆ ಪಡೆದುಕೊಂಡು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪಂಚರನ್ನು ಬರಮಾಡಿಕೊಂಡು ಶವತನಿಖಾ ವರದಿಯನ್ನು ಕೈಗೊಂಡಿದ್ದು ನಂತರ  ಗೌರಿಬಿದನೂರು ಸರ್ಕಾರಿ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಶವಪರೀಕ್ಷೆಯನ್ನು ಮಾಡಿಸಿರುತ್ತೆ. ದಿನಾಂಕ:13-8-2021 ರಂದು ಗೌರಿಬಿದನೂರು ಸರ್ಕಾರಿ ಅಸ್ಪತ್ರೆಯ ವೈದ್ಯಾಧಿಕಾರಿಗಳು  ಶವಪರೀಕ್ಷಾ ವರದಿಯನ್ನು ರವಾನಿಸಿಕೊಂಡಿದ್ದು ಪಡೆದುಕೊಂಡು ಪರಿಶೀಲಿಸಲಾಗಿ A Linear Crack (Fracture) noted Over Posterior Portion of the Skull (Occipital Bone), A Ligature Mark Partially Identified Over Decomposed Neck Skin Lateral Portion rightsided and Over posterior Portion nope Of Neck  ಅಪರಿಚಿತ ವ್ಯಕ್ತಿಗೆ  ಯಾವುದೋ ಬಲವಾದ ಆಯುಧದಿಂದ  ತಲೆಯ ಹಿಂಭಾಗಕ್ಕೆ ಹೊಡೆದು ತಲೆ ಬುರಡೆ ಮೂಳೆಯಲ್ಲಿ ಒಂದು  ಸೀಳು ಗಾಯವನ್ನು ಮಾಡಿದ್ದು ಮತ್ತು ಕುತ್ತಿಗೆಗೆ ಯಾವುದೋ ವಸ್ತುವಿನಿಂದ ಬಿಗಿದಿರುವ ಗುರುತುಗಳು ಕಂಡುಬಂದಿರುತ್ತೆಂದು ವೈದ್ಯರು ಅಭಿಪ್ರಾಯದಲ್ಲಿ ತಿಳಿಸಿರುತ್ತಾರೆ. ದಿನಾಂಕ 05-08-2021 ರಂದು 19-30 ಗಂಟೆಗೆ  ಮುಂಚೆ ಸುಮಾರು 30-40 ವರ್ಷ ವಯಸ್ಸಿನ ಅಪರಿಚಿತ ಪುರುಷನನ್ನು ಯಾರೋ ದುಷ್ಕರ್ಮಿಗಳು  ಯಾವುದೋ ಬಲವಾದ ಆಯುಧದಿಂದ  ತಲೆಯ ಹಿಂಭಾಗಕ್ಕೆ ಹೊಡೆದು ತಲೆ ಬುರಡೆ ಮೂಳೆಯಲ್ಲಿ ಒಂದು  ಸೀಳು ಗಾಯವನ್ನು ಮಾಡಿದ್ದು ಮತ್ತು ಕುತ್ತಿಗೆಗೆ ಯಾವುದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿರುವುದಾಗಿ ಶವಪರೀಕ್ಷಾ ವರದಿಯಲ್ಲಿ ವೈದ್ಯರು ಅಭಿಪ್ರಾಯದಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ಸದರಿ ಪ್ರಕರಣದಲ್ಲಿ ಅಪರಿಚಿತವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ  ತಲೆಯ ಹಿಂಭಾಗಕ್ಕೆ  ಹೊಡೆದು ತಲೆ ಬುರಡೆ ಮೂಳೆಯಲ್ಲಿ ಒಂದು  ಸೀಳು ಗಾಯವನ್ನು ಮಾಡಿದ್ದು ಮತ್ತು ಕುತ್ತಿಗೆಗೆ ಯಾವುದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿರುತ್ತಾರೆ. ಯಾರೋ ದುಷ್ಕರ್ಮಿಗಳ ವಿರುದ್ದ  ಕಲಂ 302, 201 ಐ.ಪಿ.ಸಿ. ರೀತ್ಯಾ ಪ್ರಕರಣವನ್ನು ದಾಖಲಿಸಲು  ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.87/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ:12/08/2021 ರಂದು ಸಂಜೆ 7:20 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:12-08-2021 ರಂದು ಸಂಜೆ 5-45  ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವ ಮೂರ್ತಿ ಮತ್ತು ಪಿಸಿ-240 ಮಧುಸೂದನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ದೊಡ್ಡಮರಳಿ ಗ್ರಾಮದ ಮೂರ್ತಿ ಬಿನ್ ಮುನಿನಾರಾಯಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಮನೆಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ದೊಡ್ಡಮರಳಿ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 6:05 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮೂರ್ತಿ ಬಿನ್ ಮುನಿನಾರಾಯಣಪ್ಪ , 38 ವರ್ಷ, ಪ.ಜಾತಿ, ಕೂಲಿ ಕೆಲಸ , ದೊಡ್ಡಮರಳಿ ಗ್ರಾಮ, ನಂದಿ ಹೋಬಳಿ ,ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 15 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 15 ಟೆಟ್ರಾ ಪ್ಯಾಕೇಟುಗಳ ಬೆಲೆ 526 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 350 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 6:15 ಗಂಟೆಯಿಂದ ಸಂಜೆ 6:50 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

11. ಶಿಡ್ಲ‍ಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ.13.08.2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿ ಸಿರಾಜ್ ಅಹಮದ್ 2ನೇ ನಗರ್ತಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ತಾನು ರೇಷ್ಮೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನಗೆ 4 ಜನ ಮಕ್ಕಳಾಗಿದ್ದು, ಆ ಪೈಕಿ 3ನೇ ಮಗನಾದ ರಿಜ್ವಾನ್ ಪಾಷ ಸುಮಾರು 28 ವರ್ಷ ರವರು ದಿನಾಂಕ.03.08.2021 ರಂದು ಸಂಜೆ ಸುಮಾರು 4.00 ಗಂಟೆಯಲ್ಲಿ ಮನೆಯಿಂದ ಹೊರಗೆ ಹೋದವನು ರಾತ್ರಿ 9.00 ಗಂಟೆಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ರಾತ್ರಿ 9.30 ಗಂಟೆಯಲ್ಲಿ ನನಗೆ ಅತನ ಮೊಬೈಲ್ ನಂ. 9738093466, ನಂಬರಿನಿಂದ ಕರೆ ಮಾಡಿ ನಾನು ಅಜ್ಮೀರ್ ಹೋಗುತ್ತಿದ್ದೇನೆ ಮನೆ ವಾಪಸ್ಸು ಬರಲು ಆಗುವುದಿಲ್ಲ ಎಂದು ತಿಳಿಸಿದ. ನಂತರ ನಾವು ಆತನ ಮೊಬೈಲ್ ನಂಬರ್ 9738093466 ಮತ್ತು 8073269197 ಗೆ ಕರೆ ಮಾಡಿದರೆ ಪೋನ್ ಗಳು ಸ್ವೀಚ್ ಆಫ್ ಆಗಿರುತ್ತೆ. ನನ್ನ ಮಗ ಸರಿಯಾದ ಮಾಹಿತಿ ತಿಳಿಸದೆ ಎಲ್ಲಿಯೋ ಹೊರಟು ಹೋಗಿ ಕಾಣೆಯಾಗಿರುತ್ತಾನೆ. ನಾವು ಆತನ ಸ್ನೇಹಿತರು ಪರಿಚಯಸ್ಥರ ಬಳಿ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ಕಾಣೆಯಾದ ಮಗನನ್ನು ಪತ್ತೆ ಮಾಡಿಕೊಡಲು ಈ ದಿನ ತಡವಾಗಿ ಠಾಣೆಗೆ ಬಂದು ದೂರಿನ ಮೇರೆಗೆ ಠಾಣಾ ಮೊ.ಸಂ.100/2021 ಕಲಂ. ಮನುಷ್ಯ ಕಾಣೆಯಾಗಿರುತ್ತಾನೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 13-08-2021 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080