Feedback / Suggestions

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ. 67/2021 ಕಲಂ. 379 ಐ.ಪಿ.ಸಿ:-

  ದಿನಾಂಕ:13/07/2021 ರಂದು ಬೆಳಗ್ಗೆ 10:00 ಗಂಟೆಗೆ ಪಿರ್ಯಾಧಿದಾರರು ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಬೂಡದಿಗಡ್ಡಪಲ್ಲಿ ಗ್ರಾಮದ ವಾಸಿಯಾಗಿದ್ದು ಬೊಮ್ಮ ಸಂದ್ರ ಗ್ರಾಮದ ಸರ್ವೇ ನಂ 73/16 ರಲ್ಲಿ ನನ್ನ ಬಾಬತ್ತು 2 ½ ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಕೃಷಿ ಹೊಂಡಾ ನಿರ್ಮಾಣ ಮಾಡಿದ್ದು ಅದೇ ಜಮೀನಿನಲ್ಲಿ  ಇತ್ತೀಚೆಗೆ ಈರುಳ್ಳಿ ಬೆಳೆಯನ್ನು ಇಟ್ಟಿರುತ್ತೇವೆ. ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಬೋರ್ ವೆಲ್ ಅನ್ನು ಕೊರೆಸಿದ್ದು, ಸದರಿ ಬೋರ್ ವೆಲ್ ನಿಂದ ಬರುತ್ತಿದ್ದ ನೀರನ್ನು ಕೃಷಿ ಹೊಂಡಾದಲ್ಲಿ ಶೇಖರಿಸಿಕೊಂಡು ಕೃಷಿ ಚಟುವಟಿಕೆಗಳಿಗೆ  ಬಳಸಿಕೊಳ್ಳುತ್ತಿರುತ್ತೇವೆ.  ನಾನು ಪ್ರತಿನಿತ್ಯ ನಮ್ಮ  ಜಮೀನಿಗೆ ಹೋಗಿ ಬರುತ್ತಿದ್ದು ಎಂದಿನಂತೆ ದಿನಾಂಕ:29/06/2021 ರಂದು ಬೆಳಗ್ಗೆ 7:30 ಗಂಟೆ ಸಮಯದಲ್ಲಿ ನಮ್ಮ ಜಮೀನಿನ ಬಳಿ ಹೋಗಿದ್ದಾಗ   ಕೃಷಿ ಹೊಂಡಾಕ್ಕೆ ಅಳವಡಿಸಿದ್ದ ಮೋಟಾರ್ ಪಂಪ್ ಇರಲಿಲ್ಲ.  ದಿನಾಂಕ:28/06/2021 ರ ರಾತ್ರಿ ಯಾವುದೋ ಸಮಯದಲ್ಲಿ  ಯಾರೋ ದುಷ್ಕರ್ಮಿಗಳು  ಕಳವು ಮಾಡಿಕೊಂಡು  ಹೋಗಿರುತ್ತಾರೆ. ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ನನಗೆ 12,000/- ರೂಪಾಯಿಗಳಷ್ಟು ನಷ್ಟ ಉಂಟಾಗಿರುತ್ತೆ. ನಮ್ಮ ಮೋಟಾರ್ ಪಂಪ್ ಕಳುವಾಗಿರುವ ವಿಚಾರದಲ್ಲಿ ನನಗೆ ನಮ್ಮ ಬೂಡದಿಗಡ್ಡಪಲ್ಲಿ ಗ್ರಾಮದ ವಾಸಿಗಳಾದ ಹಾಗೂ ನಮ್ಮ ಪಕ್ಕದ  ಜಮೀನಿನವರಾದ 1) ವೆಂಕಟರವಣಪ್ಪ ಬಿನ್ ಜಡಮಡುಗಪ್ಪ 2) ಜಡಮಡುಗಪ್ಪ ಬಿನ್ ಜಡುಮಡುಗಪ್ಪ  ಎಂಬುವರ  ಮೇಲೆ ಅನುಮಾನವಿರುತ್ತೆ. ಆದ್ದರಿಂದ  ಕಳುವಾಗಿರುವ ನನ್ನ ಬಾಬತ್ತು ಮೋಟಾರ್ ಪಂಪ್ ಅನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:67/2021 ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 105/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT, 1988:-

  ದಿನಾಂಕ;12.07.2021 ರಂದು ಮದ್ಯಾಹ್ನ 14-30 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ಸ್ವಂತ ಸ್ಥಳ ಮಂಡಿಕಲ್ ಹೋಬಳಿ ಕಮ್ಮಗುಟ್ಟಹಳ್ಳಿ ಗ್ರಾಮವಾಗಿದ್ದು  ತಾನು ಸುಮಾರು 30 ವರ್ಷದಿಂದ   ಗುಂಡ್ಲಗುರ್ಕಿ ಗ್ರಾಮದಲ್ಲಿ ವಾಸವಾಗಿರುತ್ತೇನೆ. ತಾನು ಶ್ರೀ. ಮದ್ದಪ್ಪ ಬಿನ್ ಲೇಟ್ ತಿಮ್ಮಪ್ಪ ರವರ ಮಗಳಾದ ಕಾಂತಮ್ಮ ಎಂಬಾಕೆಯನ್ನು ಮದುವೆಯಾಗಿದ್ದು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕೂಲಿ ಕೆಲಸದಿಂದ  ಜೀವನ ಮಾಡಿಕೊಂಡಿರುತ್ತಾರೆ. ತನ್ನ ಮಾವನಾದ ಶ್ರೀ. ಮದ್ದಪ್ಪ ಬಿನ್ ಲೇಟ್ ತಿಮ್ಮಪ್ಪ ಮತ್ತು ಅತ್ತೆಯಾದ ಶ್ರೀಮತಿ.ಮುನಿಯಮ್ಮ ರವರು ತಮ್ಮೊಂದಿಗೆ  ವಾಸವಾಗಿರುತ್ತಾರೆ. ದಿನಾಂಕ:11-07-2021 ರಂದು ಬಾನುವಾರ ನನ್ನ ಮಾವ ಶ್ರೀ. ಮದ್ದಪ್ಪ  ರವರು ಶಿಡ್ಡಘಟ್ಟ ತಾಲ್ಲೂಕು ಚಿಕ್ಕದಾಸರಹಳ್ಳಿ ಗ್ರಾಮದಲ್ಲಿರುವ ತನ್ನ ಮಗಳಾದ ಶ್ರೀಮತಿ.ಮುನಿಯಮ್ಮ ರವರ ಮನೆಗೆ ಹೋಗಲು ಸಂಜೆ ಸುಮಾರು 6.00 ಗಂಟೆಯಲ್ಲಿ ಊರಿನಿಂದ ಹೋಗಿದ್ದು ದಿನಾಂಕ:12-07-2021 ರಂದು ಬೆಳಿಗ್ಗೆ ಸುಮಾರು 8.00 ಗಂಟೆ ಸಮಯದಲ್ಲಿ ತಾನು ಊರಿನಲ್ಲಿ ಇದ್ದಾಗ ತನ್ನ ಬಾಮೈದನಾದ ಜಿ.ಎಂ. ವೆಂಕಟೇಶ ರವರು ತನಗೆ ಪೋನ್ ಮಾಡಿ ಈ ದಿನ   ಬೆಳಿಗ್ಗೆ ಸುಮಾರು 5.00 ಗಂಟೆಯಲ್ಲಿ ತನ್ನ ಮಾವನಾದ  ಶ್ರೀ. ಮದ್ದಪ್ಪ ಬಿನ್ ಲೇಟ್ ತಿಮ್ಮಪ್ಪ ರವರು ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಚಿತ್ರಾವತಿ ಹತ್ತಿರ  ಬಾಲಾಜಿ ಟಯರ್ಸ್ J K TYRES ಅಂಗಡಿ ಮುಂಬಾಗದ NH-44 ಹೈವೇ ಯಲ್ಲಿ ಪಶ್ಚಿಮದ ಕಡೆಯಿಂದ ಪೂರ್ವದ ಕಡೆ  ರಸ್ತೆ ದಾಟುತ್ತಿದ್ದಾಗ  ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ  AP 21 Z-0811 ಬಸ್ಸಿನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ತಂದೆ ಮದ್ದಪ್ಪ ಬಿನ್ ಲೇಟ್ ತಿಮ್ಮಪ್ಪ ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿಕೊಂಡು ಹೋಗಿದ್ದು ಗಾಯಾಳುವನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುವುದಾಗಿ ಸಾರ್ವಜನಿಕರೊಬ್ಬರು ದೂರವಾಣಿ ಮೂಲಕ ವಿಷಯ ತಿಳಿಸಿರುತ್ತಾರೆ. ಅಪಘಾತ ಮಾಡಿದ ಬಸ್ಸ ನಂಬರ್ AP-21 Z-0811 ಎಂಬುದಾಗಿ ತಿಳಿಸಿದ. ವಿಷಯ ತಿಳಿದ ತಾನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಕೊಡಿಸುತ್ತಿರುವಷ್ಟರಲ್ಲಿ ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೇ  ಶ್ರೀ. ಮದ್ದಪ್ಪ ಬಿನ್ ಲೇಟ್ ತಿಮ್ಮಪ್ಪ  ರವರು  ಮೃತಪಟ್ಟಿರುತ್ತಾರೆ.  ಅಪಘಾತ ಮಾಡಿ ಪರಾರಿಯಾದ ಬಸ್ಸ ನಂಬರ್ AP-21 Z-0811 ರ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 106/2021 ಕಲಂ. 15(A),32(2) ಕೆ.ಇ ಆಕ್ಟ್:-

  ದಿನಾಂಕ:-12/07/2021 ರಂದು ಮದ್ಯಾಹ್ನ 14-15 ಗಂಟೆ ಸಮಯದಲ್ಲಿ  ಚಿಕ್ಕಬಳ್ಳಾಪುರ ಉಪ ವಿಭಾಗದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ 205 ರಮೇಶ್ ರವರು ಮಾಲು ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಚಿಕ್ಕಬಳ್ಳಾಪುರ ಉಪ ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ 205 ರಮೇಶ್ ಮತ್ತು ಹೆಚ್.ಸಿ 59 ಶ್ರೀನಿವಾಸ ರವರಿಗೆ ಚಿಕ್ಕಬಳ್ಳಾಪುರದ ಕಡೆ ಅಕ್ರಮ ಚಟುವಟಿಕೆಗಳ ದಾಳಿ ಮತ್ತು ಮಾಹಿತಿಗಾಗಿ ನೇಮಿಸಿದ್ದು ಅದರಂತೆ ಗಸ್ತಿನಲ್ಲಿದ್ದಾಗ ಸುಮಾರು  12-00 ಗಂಟೆ ಸಮಯದಲ್ಲಿ ಅಗಲಗುರ್ಕಿ ಗ್ರಾಮದ ಗೇಟ್ ನಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ ಅಗಲಗುರ್ಕಿ ಗ್ರಾಮದ ಹರಿಜನ ಕಾಲೋನಿ ಕಡೆ ಹೋಗುವ ರಸ್ತೆ ಪಕ್ಕದಲ್ಲಿರುವ ಚನ್ನಕೃಷ್ಣ ಬಿನ್ ಲೇಟ್ ರಾಮಸ್ವಾಮಿ 40 ವರ್ಷ. ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ. ಅಗಲಗುರ್ಕಿ ಗ್ರಾಮ ರವರು ಬಾಬತ್ತು ಅಂಗಡಿ ಮುಂಬಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುದಾಗಿ ಮಾಹಿತಿ ಬಂದಿದ್ದು ಅಲ್ಲಿಯೇ ಇದ್ದ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಈ ಬಗ್ಗೆ ಪಂಚಾಯ್ತಿದಾರರೊಂದಿಗೆ ದಾಳಿ ಮಾಡಿದ್ದು ಸದರಿ ಸ್ಥಳದಲ್ಲಿದ್ದ ಅಂಗಡಿ ಮಾಲಿಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಚನ್ನಕೃಷ್ಣ ಬಿನ್ ಲೇಟ್ ರಾಮಸ್ವಾಮಿ 40 ವರ್ಷ. ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ. ಅಗಲಗುರ್ಕಿ ಗ್ರಾಮ ಎಂದು ತಿಳಿಸಿದ್ದು ಪರವಾನಗಿಯನ್ನು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ಸ್ಥಳದಲ್ಲಿದ್ದ ಮಾಲುಗಳು ಮತ್ತು ಆರೋಪಿಯನ್ನು ಪಂಚನಾಮೆಯ ಮುಖಾಂತರ ವಶಕ್ಕೆ ಪಡೆದುಕೊಂಡು ಮಾಲನ್ನು ಪರಿಶೀಲಿಸಲಾಗಿ 1] 90 ML ನ 24 HAYWARDS CHEERS WHISKY TETRA POCKETS ಇದರ ಬೆಲೆ 843/- ರೂಗಳು ಅಗಿರುತ್ತೆ. 2] 90 ML ನ 02 ಖಾಲಿ HAYWARDS CHEERS WHISKY TETRA POCKETS 3] 02 ಖಾಲಿ ನೀರಿನ ಪ್ಲಾಸ್ಟಿಕ್ ಗ್ಲಾಸುಗಳು 4] 04 ಖಾಲಿ ಪ್ಲಾಸ್ಟಿಕ್ ವಾಟರ್ ಪಾಕೆಟ್ ಗಳು ಇದ್ದು  ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 107/2021 ಕಲಂ. 353,504,506,34 ಐ.ಪಿ.ಸಿ:-

  ದಿನಾಂಕ:12.07.2021 ರಂದು ಸಂಜೆ 18:15 ಗಂಟೆಗೆ ಪಿರ್ಯಾದಿ ನೀಡಿದ ದೂರಿನ ಸಾರಾಂಶವೆನೆಂದರೆ ಈ ದಿನ ಮದ್ಯಾಹ್ನ  2-00 ಗಂಟೆ ಸಮಯದಲ್ಲಿ ಹುನೇಗಲ್ ಗ್ರಾಮದ ಗಂಗಾಧರ ಬಿನ್ ಗೋಪಾಲಪ್ಪ ಹಾಗೂ ಗುವ್ವಲಕಾನಹಳ್ಳಿ ಗ್ರಾಮದ ಸುರೇಶ್ ಬಿನ್ ಸುಬ್ಬಣ್ಣ ಮತ್ತು ಹೇಮ ಬಿ.ಎ ಕೊಂ ಸುರೇಶ್ ರವರು ಪಂಚಾಯ್ತಿಗೆ ಬಂದು ನೋಟಿಸ್ ಹಾಗೂ ಕೋರ್ಟ್ ಕಾಫಿ ಎಂದು ನೀಡಲು ಬಂದಿದ್ದು ಇದನ್ನು ತನಗೆ ನೀಡಲು ಬಂದಾಗ ಕೋರ್ಟ್ ನೋಟಿಸ್ ಎಂದರೆ ಅಮೀನಾ ಬಂದು ಕೊಡಬೇಕು ನೀವು ಏಕೆ ಬಂದಿದ್ದಿರಾ, ಎಂದು ಕೇಳಿದಾಗ ಹುನೇಗಲ್ ಗ್ರಾಮದ ಗಂಗಾಧರ ರವರು ಏಯ್ ನೀನು ಹೇಗೆ ಅಲ್ಲಿ ತೆರವುಗೊಳಿಸುತ್ತಿಯಾ ನೋಡುತ್ತೇನೆ ನಿನಗೆ ತಾಕತ್ತಿದಿಯಾ ಲಂಚ ಪಡೆದು ಈ ರೀತಿ ಮಾಡುತ್ತಿದಿಯಾ ಮೊನ್ನೆ ದೇವರೆಡ್ಡಿ ನಿನಗೆ ಚಪ್ಪಲಿಯಲ್ಲಿ ಹೊಡೆದಿದಾನೆ ಅಜಾಮ ಕೆಲಸ ಮಾಡಲು ಬಂದಿದ್ದಿಯಾ, ನಿನ್ನನ್ನು ನೋಡಿಕೊಳ್ತಿನಿ ಎಂದು ಕಛೇರಿಯಲ್ಲಿ ಬೈದಿದ್ದು, ತಾನು ಸಾರ್ವಜನಿಕರ ಸಮಸ್ಯೆಗಳನ್ನು ಕೇಳಲು ಸಾರ್ವಜನಿಕರು ಕೊಠಡಿಗೆ ಬರದಂತೆ ಹಾಗೂ ಪಿ.ಡಿ.ಓ ಆದ ತಾನು ಹೊರಗೆ ಹೋಗದಂತೆ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಗಂಗಾಧರ ಮತ್ತು ಸುರೇಶ್ ಇಬ್ಬರು ಅಡ್ಡಿಪಡಿಸಿದ್ದು ನಂತರ ಗುವ್ವಲಕಾನಹಳ್ಳಿ ಸುರೇಶ್ ರವರು ನೀನು ಲಂಚ ಪಡೆಯುತ್ತಿದ್ದಿಯಾ, ನೀನು ಹೇಗೆ ತೆಗೆಸುತ್ತಿದ್ದಿಯಾ ನೋಡುತ್ತೀನಿ, ನಿನಗೆ ತಾಕತ್ತಿದ್ದರೆ ತೆಗೆಸೊ ಎಂದು ಹಾಗೂ ಅಜಾಮ ಕೆಲಸ ಮಾಡಲು ಬಂದಿದ್ದಿಯಾ, ಎಂದಿರುತ್ತಾರೆ ನಂತರ ತಾನು ಹೊರಗೆ ಹೊಸ ಪಂಚಾಯ್ತಿ ಕಟ್ಟಡದಲ್ಲಿ ಗಾಡಿ ತೆಗೆಯುತ್ತಿದ್ದಾಗ ಹೇ ಅಲ್ಲಿಗೆ ಬಂದರೆ ಏನು ಮಾಡುತ್ತಿಯಾ ಎಂದು ಹೊಡೆಯಲು ಬಂದಿದ್ದು, ನಂತರ ಮತ್ತೆ ಲಂಚ ಪಡೆದು ಕೆಲಸ ಮಾಡುತ್ತಿದ್ದೆಯಾ,ಅಜಾಮ ಕೆಲಸ ಮಾಡುತ್ತಿದ್ದಿಯಾ, ಏನು ನಾವೇ ಕಂಪ್ಲೇಂಟ್ ಕೊಡಿಸಿ ನಿನಗೆ ಏನು ಮಾಡುತ್ತೀನಿ ನೋಡುತ್ತಿರು ಎಂದು ಬೆದರಿಕೆ ಹಾಕಿರುತ್ತಾನೆ ಅಲ್ಲಿ ಹಾಜರಿದ್ದ ಪಂಚಾಯ್ತಿ ಕಾರ್ಯದರ್ಶಿ ಕೆ,ಎನ್ ಗೋವಿಂದಯ್ಯ, ಬಿಲ್ ಕಲೆಕ್ಟರ್ ಗಳಾದ ಅಂಬರೀಶ್ ಕೆ ಮತ್ತು ವೆಂಕಟೇಶ್ ಅಟೆಂಡರ್ ನವೀನ್ ಕುಮಾರ್ ಗುವ್ವಲಕಾನಹಳ್ಳಿ ಗ್ರಾಮ ಕೇಶವರೆಡ್ಡಿ ಹಾಗೂ ಮಣಿ ರವರು ಹಾಜರಿರುತ್ತಾರೆ, ನಂತರ ಮರೆಸನಹಳ್ಳಿಗೆ ಹೋಗಿ ಅದ್ಯಕ್ಷರಾದ ಯಶೋದಮ್ಮ, ರವರ ಮನೆಗೆ ಹೋಗಿ ಪಿ.ಡಿ.ಓ ಕಾರ್ಯದರ್ಶಿ ಅದ್ಯಕ್ಷರ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಹಾಗೂ ಅದ್ಯಕ್ಷರು ನ್ಯಾಯಾಲಯದ ನೋಟಿಸ್ ಗೆ ನೀವು ಬಂದ್ದಿದಿರಾ ಎಂದಾಗ ಗಂಗಾಧರ ಮತ್ತು ಸುರೇಶ್ ರವರು ಹಾಕಮ್ಮ ಸಹಿ ಯಾವನನ್ನು ಏನು ಕೇಳೊದು ಎಂದು ಬೆದರಿಕೆ ಹಾಕಿರುತ್ತಾರೆ. ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.51/2021 ಕಲಂ. 392 ಐ.ಪಿ.ಸಿ:-

  ದಿನಾಂಕ; 12-07-2021 ರಂದು ಮದ್ಯಾಹ್ನ 13.30 ಗಂಟೆಗೆ ಪಿರ್ಯಾದಿಯಾದ ಶ್ರೀ ಮತಿ ರೇಖಾ ಕೋಂ ಶಿವಪ್ರಸಾದ್. ಟಿ.ಎಸ್, 40 ವರ್ಷ, ಲಿಂಗಾಯತ ಜನಾಂಗ, ಸಹ ಶಿಕ್ಷಕಿ ಭಾರತಿ ಪ್ರೌಡಶಾಲೆ, ಹಾಲಿ ವಿಳಾಸ: ಪಾಲಸಂದ್ರಂ ಲೇ ಔಟ್, ಕೋಲಾರ ಟೌನ್ ಮತ್ತು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಚಿಕ್ಕಬಳ್ಳಾಪುರ ನಗರದ ಭಾರತಿ ವಿದ್ಯಾಸಂಸ್ಥೆ ಭಾರತಿ ನಗರದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ; 12-07-2021 ರಂದು ಶಾಲೆಯ ಕರ್ತವ್ಯಕ್ಕೆ ಕೋಲಾರದಿಂದ ಬರುತ್ತಿದ್ದಾಗ ಬೆಳಗ್ಗೆ 11.15 ಗಂಟೆಗೆ ಜೂನಿಯರ್ ಕಾಲೇಜ್ ಬಸ್ ನಿಲ್ದಾಣದಲ್ಲಿ ಇಳಿದು ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಭಾರತಿ ನಗರದ ರಸ್ತೆಯಲ್ಲಿ ಇರುವ ಕದಮ್ ಆಸ್ಪತ್ರೆಯನ್ನು ದಾಟಿ ಶಾಲೆಯ ದಾರಿಗೆ ಇಳಿದು ಹೋಗುತ್ತಿರುವಾಗ ಸರಿಯಾಗಿ ಅಲ್ಲಿಯೇ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ನಿಂತಿದ್ದು, ತನ್ನನ್ನು ಒಬ್ಬ ಬೈಕ್ ನಿಂದ ಕೆಳಗೆ ಇಳಿದು ತಡೆದು ತನ್ನನ್ನು ಅಡ್ಡಗಟ್ಟಿ ತನ್ನ ಕುತ್ತಿಗೆಗೆ ಕೈ  ಹಾಕಿ ತನ್ನ ಕೊರಳಿನಲ್ಲಿರುವ ಕತ್ತಿನ ಸರ, 2 ತಾಳಿ, 8 ಪ್ಲೇಟ್ ಗಳನ್ನು ಕಿತ್ತುಕೊಂಡು ಅದೇ ದಾರಿಯಲ್ಲಿ ನಿಲ್ಲಿಸಿಕೊಂಡಿದ್ದ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ವಾಹನ ಹತ್ತಿಕೊಂಡು ತನ್ನನ್ನು ತಳ್ಳಿ ಚಿನ್ನದ ಕತ್ತಿನ ಸರ, 2 ತಾಳಿಗಳು, 8 ಪ್ಲೇಟ್ ಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಪ್ರಯತ್ನದಲ್ಲಿ ತಾನು ಅವರನ್ನು ಪಕ್ಕಕ್ಕೆ ನೂಕಲು ಯತ್ನಿಸಿ ತನ್ನಸರವನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡಿದ್ದು, ಆಗ ಸರದ ಸ್ವಲ್ಪ ಭಾಗ ತನ್ನ ಕೈಯಲ್ಲಿಯೇ ಉಳಿದಿರುತ್ತದೆ.ಸರ ಸುಮಾರು 40 ಗ್ರಾಂ ಇದ್ದು, 2 ತಾಳಿ ಮತ್ತು 8 ಪ್ಲೇಟ್ ಗಳು, ಗುಂಡುಗಳು ಎಲ್ಲಾ ಸೇರಿ 50 ಗ್ರಾಂ ನಷ್ಟು ಒಟ್ಟು ಚಿನ್ನ ತ್ತು ತನ್ನ ಸರವನ್ನು ಕೀಳುವಾಗ ತಾನು ಒಂದು ಕೈಯಲ್ಲಿ ತನ್ನ ಸರವನ್ನು ಹಿಡಿದುಕೊಂಡಿದ್ದು, ಕಳ್ಳನು ಸುಮಾರು 45 ಗ್ರಾಂ ಗಿಂತಲೂ ಹೆಚ್ಚಿನ ಚಿನ್ನದ ಸರವನ್ನು ಮತ್ತು 2 ತಾಳಿ, 8 ಪ್ಲೇಟ್ ಗಳು ಗುಂಡುಗಳನ್ನು ತನ್ನಿಂದ ಕಿತ್ತುಕೊಂಡು ಪರಾರಿಯಾಗಿರುತ್ತಾನೆ. ಆ ಪ್ರಯತ್ನದಲ್ಲಿ 15 ರಿಂದ 16 ಗ್ರಾಂ ನಷ್ಟು ಚಿನ್ನದ ಸರ ಚಿಕ್ಕ ಭಾಗ ತನ್ನ ಬಳಿ ಉಳಿದಿರುತ್ತದೆ. ಆದ್ದರಿಂದ ಕಳುವಾಗಿರುವ ತನ್ನ ಸರ, ತಾಳಿಗಳು, ಪ್ಲೇಟ್ ಗಳು ಹಾಗೂ ಗುಂಡುಗಳನ್ನು ಕಿತ್ತುಕೊಂಡು ಹೋಗಿರುವ ಆರೋಪಿತರನ್ನು ಪತ್ತೆ ಮಾಡಿ, ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.306/2021 ಕಲಂ. 429 ಐ.ಪಿ.ಸಿ, KARNTAKA PREVENTION OF COW SLANGHTER & CATTLE PREVENTION ACT-1964 U/s 4,8,9,11 ; INDIAN MOTOR VEHICLES ACT, 1988 U/s 192,177:-

  ದಿನಾಂಕ: 12/07/2021 ರಂದು ಮದ್ಯಾಹ್ನ 2.40 ಗಂಟೆಗೆ ಠಾಣೆಯೆ ಸಿ.ಹೆಚ್.ಸಿ-39 ಬಾಬಾಜಾನ್ ರವರು ಒಂದು ಎತ್ತು, ವಾಹನ ಮತ್ತು ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 12/07/2021 ರಂದು ಪಿ.ಎಸ್.ಐ ರವರು ತನಗೆ ಮತ್ತು ರಾಜೇಶ್, ಸಿ.ಪಿ.ಸಿ-458 ರವರಿಗೆ ಬೆಳಗಿನ ಹಾಜರಾತಿಯಲ್ಲಿ ಮಾಡಿಕೆರೆ ಚೆಕ್ ಪೋಸ್ಟ್ ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಅದರಂತೆ ತಾವು ಬೆಳಿಗ್ಗೆ 08.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಮಾಡಿಕೆರೆ ಚೆಕ್ ಪೋಸ್ಟ್ ಕರ್ತವ್ಯ ಮಾಡುತ್ತಿದ್ದೆವು. ಮದ್ಯಾಹ್ನ ಸುಮಾರು 2.15 ಗಂಟೆಗೆ ಯಾರೋ ವ್ಯಕ್ತಿಯು ಶ್ರೀನಿವಾಸಪುರ ಕಡೆಯಿಂದ ಕೆಎ-52-4767 ಟಾಟಾ ಎಸ್ ನಲ್ಲಿ ಒಂದು ಎತ್ತನ್ನು ಹಾಕಿಕೊಂಡು ಬಂದಿದ್ದು, ಅನುಮಾನಗೊಂಡ ತಾವು ಸದರಿ ಟಾಟಾ ಏಸ್ ವಾಹನವನ್ನು ನಿಲ್ಲಿಸಿ ಚಾಲಕನನ್ನು ಜಾನುವಾರಿನ ಬಗ್ಗೆ ಹಾಗೂ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಇನಾಯಿತುಲ್ಲಾ ಬಿನ್ ಸೈಯದ್ ಅನ್ವರ್, 23 ವರ್ಷ, ಚಾಲಕ ವೃತ್ತಿ, ವಾಸ ಶ್ರೀನಿವಾಸಪುರ ತಾಲ್ಲೂಕು, ಎಸ್.ವಡಗಪಲ್ಲಿ ಗ್ರಾಮದ ವಾಸಿಯೆಂದು, ದಿನಾಂಕ:11/07/2021 ರಂದು ಮದ್ಯಾಹ್ನ ಉತ್ತನೂರು ಗ್ರಾಮದ ಸುಂದರಪ್ಪ ಬಿನ್ ಲೇಟ್ ಸುಬ್ಬಣ್ಣ ರವರ ಮನೆಯಲ್ಲಿದ್ದ ಒಂದು ಎತ್ತನ್ನು ತನ್ನ ಅಣ್ಣನಾದ ಲಿಯಾಖತ್ ಬಿನ್ ಸೈಯದ್ ಅನ್ವರ್ ರವರು 35000/- ರೂಗಳಿಗೆ ಖರೀದಿ ಮಾಡಿಕೊಂಡು ಬಂದು ರಾತ್ರಿ ತಮ್ಮ ಮನೆಯಲ್ಲಿ ಇಟ್ಟಿದ್ದರು. ಈ ದಿನ ಬೆಳಿಗ್ಗೆ ತನ್ನ ಅಣ್ಣನಾದ ಲಿಯಾಖತ್ ರವರು ತನಗೆ ಸದರಿ ಎತ್ತನ್ನು ನಮ್ಮ ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗಿ ಚಿಂತಾಮಣಿ ನಗರದ ಅಗ್ರಹಾರದ ವಾಸಿ ಚಾಂದ್ ಪಾಷ ಬಿನ್ ಇಮಾಮ್ ಸಾಬ್ ರವರು ಬಾಗೇಪಲ್ಲಿ ಸರ್ಕಲ್ ಗೆ ಬರುತ್ತಾರೆ ನೀನು ಈ ಎತ್ತನ್ನು ಆತನಿಗೆ ಒಪ್ಪಿಸು ಆತನು ಸದರಿ ಎತ್ತನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಾನೆಂದು ತಿಳಿಸಿದರು. ಅದರಂತೆ ತಾನು ಈ ದಿನ ಬೆಳಿಗ್ಗೆ ತಮ್ಮ ಅಣ್ಣನ ಬಾಬತ್ತು ಕೆಎ-52-4767 ಟಾಟಾ ಏಸ್ ವಾಹನದಲ್ಲಿ ಎತ್ತನ್ನು ಹಾಕಿಕೊಂಡು ಚಿಂತಾಮಣಿಗೆ ಚಾಂದ್ ಪಾಷರವರಿಗೆ ಒಪ್ಪಿಸಲು ಬರುತ್ತಿರುವುದಾಗಿ ಚಾಲಕ ಇನಾಯತುಲ್ಲಾ ತಿಳಿಸಿರುತ್ತಾನೆ. ಮೇಲ್ಕಂಡ ಎತ್ತು (ಜಾನುವಾರು) ವಧೆ ಮಾಡಲು ಸಂಬಂದಪಟ್ಟ ಇಲಾಖೆಗಳ ಕಡೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಸದರಿ ಪ್ರಾಣಿಯನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲು ಅಕ್ರಮವಾಗಿ ಟಾಟಾ ಏಸ್ ನಲ್ಲಿ ಸಾಗಿಸಿಕೊಂಡು ಬರುತ್ತಿರುವುದಾಗಿ ತಿಳಿದು ಬಂದಿರುತ್ತೆ. ಮೇಲ್ಕಂಡಂತೆ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆಯದೆ ಜಾನುವಾರು (ಎತ್ತು) ವಧೆ ಮಾಡಲು ಸಾಗಿಸಿಕೊಂಡು ಬರುತ್ತಿದ್ದ ಟಾಟಾ ಏಸ್, ಎತ್ತು ಮತ್ತು ಚಾಲಕನನ್ನು ಠಾಣೆಯ ಬಳಿಗೆ ಕರೆತಂದು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಿದ ವರದಿಯ ಸಾರಾಂಶವಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.153/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ 13/07/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಂಜುಂಡಪ್ಪ ಬಿನ್ ಲೇಟ್ ನಲ್ಲಚಿನ್ನಪ್ಪ, 60 ವರ್ಷ, ನಾಯಕರು, ಜಿರಾಯ್ತಿ, ವಾಸ ಜಂಗಾಲಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲುಕು  ರವರು ಠಾಣೆಗೆ ಹಾಜರಾಗಿ ನಿಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತನ್ನ ಮಗನಾದ ಜೆ.ಎನ್. ಹರೀಶ, 30 ವರ್ಷ ರವರು ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಕೆಲಸ ತಿರುಮಣಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮಾಡುತ್ತಿದ್ದು  ದಿನಾಂಕ 13/07/2021 ರಂದು ತನ್ನ ಸ್ವಂತ ಗ್ರಾಮ ಜಂಗಾಲಹಳ್ಳಿಯಿಂದ ತಿರುಮಣಿಗೆ ಕೆಲಸಕ್ಕೆ ಹೋಗಿದ್ದು ಬೆಳಗ್ಗೆ 10-30 ಗಂಟೆ  ಸಮಯದಲ್ಲಿ  ಬೀಚಗಾನಹಳ್ಳಿಯಿಂದ- ದಿನ್ನಹಳ್ಳಿ ರಸ್ತೆಯ ಮದ್ಯದಲ್ಲಿ ತನ್ನ ಮಗನ ಬಾಬತ್ತು ಕೆ.ಎ-40-ಆರ್- 1863 ನೊಂದಣಿ ಸಂಖ್ಯೆಯ  ದ್ವಿಚಕ್ರ  ವಾಹನದಲ್ಲಿ ಹೋಗುತ್ತಿದ್ದಾಗ ವಿರುದ್ದ ದಿಕ್ಕಿನಲ್ಲಿ ಎ.ಪಿ-39-ಟಿಪಿ-7696 ನೊಂದಣಿ ಸಂಖ್ಯೆಯ ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ತನ್ನ ಮಗನ ಬಲ ಕಾಲು ಮುರಿದಿದ್ದು ಕೂಡಲೇ ಪ್ರಥಮ ಚಿಕಿತ್ಸೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು  ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ  ಹಾಸ್ಮೆಟ್ ಆಸ್ಪತ್ರೆಗೆ ದಾಖಲು ಮಾಡಿದ್ದು ತನ್ನ ಮಗನಿಗೆ ಅಪಘಾತ ಮಾಡಿರುವ ಟಿಪ್ಪರ್ ವಾಹನ ಮತ್ತು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 504,506,324 ಐ.ಪಿ.ಸಿ:-

  ದಿನಾಂಕ: 12/07/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ಸುರೇಶ್ ಬಿನ್ ಕಸುವಪ್ಪ, 43 ವರ್ಷ, ಈಡಿಗರು, ಚಾಲಕ ವೃತ್ತಿ, ವಾಸ: ಗುವ್ವಲಹಳ್ಳಿ [ಚನ್ನಬೈರೇನಹಳ್ಳಿ] ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 09/07/2021 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನಮ್ಮ ತಂದೆ ಕಸುವಪ್ಪ ರವರು ನನ್ನ ತಮ್ಮ ಚಂದ್ರಣ್ಣರವರ ಮನೆಯ ಬಳಿ ಇದ್ದ ಸಮಯದಲ್ಲಿ ನನ್ನ ಮತ್ತೊಬ್ಬ ತಮ್ಮ ಗಂಗರಾಜು ಬಂದು ನಮ್ಮ ತಂದೆಗೆ ನಿನ್ನ ಪಿಂಚಣಿ ಹಣದಲ್ಲಿ ನನಗೆ ಖರ್ಚಿಗಾಗಿ ಸ್ವಲ್ಪ ಹಣ ಕೊಡು ನಾನು 3-4 ದಿನಗಳಿಂದ ಕೆಲಸಕ್ಕೆ ಹೋಗಿಲ್ಲ ಎಂದು ಕೇಳಿದ್ದು, ನಮ್ಮ ತಂದೆ ನನ್ನಬಳಿ ಈಗ ಹಣವಿಲ್ಲ ಇದ್ದುದ್ದೆಲ್ಲಾ ಆಸ್ಪತ್ರೆಯ ಖರ್ಚಿಗೆ ಆಗಿ ಹೋಯಿತು. ನೀನು ಒಂದು ಕಾಲು ಮುರಿದು ಹಾಕಿ ಅಂಗಲವಿಕಲನಾಗಿ ಮಾಡಿಬಿಟ್ಟಿದ್ದಿಯಾ ಈಗ ನಾನು ಹಣ ಎಲ್ಲಿಂದ ತಂದು ಕೊಡಲಿ ಎಂದು ಹೇಳಿದ್ದಕ್ಕೆ ಗಂಗರಾಜು ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನಗೆ ಸಾಯಿಸಿ ನದಿಯಲ್ಲಿ ಹೂಣಿ ಬಿಡುತ್ತೇನೆ ಎಂದು ಹೇಳಿ ನಮ್ಮ ತಂದೆಯ ವಾಕರ್ ಸ್ಟ್ಯಾಂಡನ್ನು ತೆಗೆದುಕೊಂಡು ಅವರ ಎಡಕೈಗೆ ಬಲವಾಗಿ ಹೊಡೆದಿದ್ದು, ನಂತರ ಕೋಲಿನಿಂದ ಅವರ ಮೈಮೇಲೆ ಹೊಡೆದಿದ್ದರಿಂದ ನಮ್ಮ ತಂದೆಯ ಎಡಕೈಗೆ ರಕ್ತಗಾಯವಾಗಿದ್ದು, ಕೆಳಗೆ ಬಿದ್ದು ಒದ್ದಾಡುತ್ತಿದ್ದ ನಮ್ಮ ತಂದೆಯನ್ನು ಬಿಡಿಸಿಕೊಳ್ಳಲು ಅಡ್ಡ ಹೋದ ನನ್ನ ನಾದಿನಿ ಶ್ರೀಮತಿ ರಾಜಮ್ಮಳಿಗೂ ಸಹಾ ಗಂಗರಾಜ ಅದೇ ಕೋಲಿನಿಂದ ಸೊಂಟಕ್ಕೆ, ಬಲಗೈಗೆ ಮತ್ತು ಬಲಕಣ್ಣಿಗೆ ಹೊಡೆದು ರಕ್ತಗಾಯಪಡಿಸಿದ್ದು, ಆಗ ನಮ್ಮ ಗ್ರಾಮದ ನರಸಿಂಹಮೂರ್ತಿಯ ಮಗ ಗಂಗೂಲಿ ಇದನ್ನು ನೋಡಿ ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ನಾನು, ನನ್ನ ಮತ್ತೊಬ್ಬ ತಮ್ಮ ಚಂದ್ರಣ್ಣ ಇಬ್ಬರೂ ಬರುವಷ್ಟರಲ್ಲಿ ಗಂಗೂಲಿ 108 ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಅದರಲ್ಲಿ ನಮ್ಮ ತಂದೆ ಕಸುವಪ್ಪ ಮತ್ತು ನಾದಿನಿ ಶ್ರೀಮತಿ ರಾಜಮ್ಮರವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಬಳಿ ಕರೆದುಕೊಂಡು ಬಂದಿದ್ದು, ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮ ತಂದೆಗೆ ಮತ್ತು ನಾದಿನಿಗೆ ಚಿಕಿತ್ಸೆ ನೀಡಿದ ವೈದ್ಯರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಇಬ್ಬರನ್ನೂ ಅದೇ ಆಂಬುಲೆನ್ಸ್ ನಲ್ಲಿ ನಾನು, ನನ್ನ ತಮ್ಮ ಚಂದ್ರಣ್ಣ ರವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನಮ್ಮ ತಂದೆ ಜೊತೆಯಲ್ಲಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಈ ಗಲಾಟೆಗೆ ಕಾರಣನಾದ ನನ್ನ ತಮ್ಮ ಗಂಗರಾಜುರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರನ್ವಯ ಪ್ರ.ವ.ವರದಿ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ: 12/07/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದುದಾರರಾದ ಸಂಜೀವಪ್ಪ ಬಿನ್ ಲೇಟ್ ಸಿದ್ದಪ್ಪ, 50 ವರ್ಷ, ಮಡಿವಾಳ ಜನಾಂಗ, ಕೊಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 07/07/2021 ರಂದು ನನ್ನ ಮಗನಾದ ಶ್ರೀನಿವಾಸ್, 28 ವರ್ಷ ರವರು ಆತನ ಸ್ನೇಹಿತ ಕಾರ್ತಿಕ್ ಬಿನ್ ಶ್ರೀನಿವಾಸ್, 20 ವರ್ಷ ರವರೊಂದಿಗೆ ನನ್ನ ಮಗನ ಬಾಬತ್ತು ಕೆ.ಎ-43, ಕ್ಯೂ-9146 ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ನೆಲಮಂಗಲಕ್ಕೆ ಹೋಗಲು ನಮ್ಮ ಗ್ರಾಮದಿಂದ ತೊಂಡೇಬಾವಿ, ದೊಡ್ಡಬಳ್ಳಾಪುರ ಮಾರ್ಗವಾಗಿ ಹೋಗುತ್ತಿದ್ದಾಗ ಬಸವಾಪುರ ಗೇಟ್ ಬಳಿ ಹೋದಾಗ ಬಸವಾಪುರ ಗ್ರಾಮದ ಒಳಗಡೆಯಿಂದ ಬಂದ ಕೆ.ಎ-40, ಇ.ಡಿ-4707 ನಂಬರಿನ ದ್ವಿಚಕ್ರ ವಾಹನ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಮಗನ ಎಡಕಾಲಿಗೆ ಪೆಟ್ಟು ಬಿದ್ದು, ಹಿಂಬದಿ ಕುಳಿತಿದ್ದ ಕಾರ್ತಿಕ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಜಖಂಗೊಂಡಿದ್ದು, ಸ್ಥಳದಲ್ಲಿದ್ದವರು ಯಾವುದೋ ದ್ವಿಚಕ್ರ ವಾಹನದಲ್ಲಿ ನನ್ನ ಮಗನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ನಂತರ ನನ್ನ ಮಗ ನನಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ನಾನು ತಕ್ಷಣ ಆಸ್ಪತ್ರೆಯ ಬಳಿ ಬಂದಿದ್ದು, ಚಿಕಿತ್ಸೆ ನೀಡಿದ ವೈದ್ಯರು ನನ್ನ ಮಗನನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಗೌರಿಬಿದನೂರಿನ ಆರ್ಥೋಪಿಟಿಕ್ ಖಾಸಗೀ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ನಾನು ನನ್ನ ಮಗನೊಂದಿಗೆ ಇದ್ದು, ಈ ದಿನ ತಡವಾಗಿ ಠಾಣೆಗೆ ಬಂದಿದ್ದು, ಈ ಅಪಘಾತಕ್ಕೆ ಕಾರಣನಾದ ಕೆ.ಎ-40, ಇ.ಡಿ-4707 ನಂಬರಿನ ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರನ್ವಯ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 341,447,323,324,504,506,34 ಐ.ಪಿ.ಸಿ:-

  ದಿನಾಂಕ: 12.07.2021 ರಂದು ಸಂಜೆ 5-30 ಗಂಟೆ ಗೆ ಪಿರ್ಯಾದುದಾರರಾದ ಶ್ರೀ ಎಸ್.ಗೋಪಾಲಕೃಷ್ಣ ಬಿನ್ ಬಿ.ಟಿ.ಶ್ರೀನಿವಾಸ, 40 ವರ್ಷ, ಬಲಿಜಗರು ಜನಾಂಗ, ವಕೀಲ ವೃತ್ತಿ, ಚಿಕ್ಕಬಳ್ಳಾಪುರ ನಗರ, ಪ್ರಶಾಂತ ನಗರ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಸುಮಾರು 3 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿ, ತಿರ್ನಹಳ್ಳಿ ಗ್ರಾಮದ ಸರ್ವೆ ನಂಬರ್ 129/4 (ಹಳೇ ಸರ್ವೆ ನಂಬರ್ 129/2) ರ ವಿಸ್ತೀರ್ಣ 1-21 ಎ/ಗುಂಟೆ ಜಮೀನನ್ನು ಟಿ.ಎನ್ ರಾಜ್ ನಿವಾಸ @ ಟಿ.ಎನ್ ಶ್ರೀನಿವಾಸ ರವರಿಂದ ಶುದ್ದ ಕ್ರಯಕ್ಕೆ ನನ್ನ ಧರ್ಮ ಪತ್ನಿಯಾದ ಶ್ರೀಮತಿ ಅಮೃತರವರ ಹೆಸರಿಗೆ ಕ್ರಯವಾಗಿದ್ದು, ಅಂದಿನಿಂದ ನಾವೇ ಸ್ವಾದೀನಾನುಭವದಲ್ಲಿದ್ದು, ಸೇವಂತಿ ಇತ್ಯಾದಿ ಹೂಗಿಡಗಳನ್ನು ಬೆಳೆಯುತ್ತಿರುತ್ತೇವೆ. ಅದಾಗಿ ದಿನಾಂಕ: 11.07.2021 ರಂದು ಬೆಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ನಾನು ಮೇಲ್ಕಂಡ ನಮ್ಮ ಬಾಬ್ತು ಜಮೀನಿನ ಬಳಿ ಕೆಲಸ ಕಾರ್ಯ ಮಾಡಲು ಹೋದಾಗ ತಿರ್ನಹಳ್ಳಿ ಗ್ರಾಮದ ವಾಸಿಗಳಾದ ಸಂಪಂಗಿರಾಮಯ್ಯನ ಮಕ್ಕಳಾದ ಮಂಜುನಾಥ ಮತ್ತು ನಗಟರಾಜ್ ಎಂಬುವರುಗಳು ಬಂದು ನನ್ನನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು  ಕೈಗಳಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ನನ್ನ ಬಲಗೈ, ಎಡಗಾಲು, ಎದೆಯ ಭಾಗಕ್ಕೆ ಮಂಜುನಾಥ ಹೊಡೆದು ಗಾಯಗೊಳಿಸಿರುತ್ತಾನೆ. ನಂತರ ನಟರಾಜ್ ರವರು ಅವರ ಅಣ್ಣನ ಕೈಯಲ್ಲಿ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಬಲಗೈ, ಎಡಗಾಲಿನ ಮೊಣಕಾಲು ಹಾಗೂ ಎದೆಯ ಭಾಗಕ್ಕೆ ಹೊಡೆದು ಮೂಗೇಟು ಉಂಟು ಮಾಡಿ  ಇಬ್ಬರೂ ಸೇರಿಕೊಂಡು ಈ ಜಮೀನಿನ ಬಳಿ ಬಂದರೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರುಗಳಾದ ರಾಮಸ್ವಾಮಿ, ಬೀಡಗಾನಹಳ್ಳಿ ಬಾಬು @ ಮಹೇಶ್ ಬಾಬು ರವರುಗಳು ಬಂದು ಅವರಿಂದ ನಮ್ಮನ್ನು ಬಿಡಿಸಿ ಅವರಿಗೆ ಬುದ್ದಿ ಹೇಳಿ ಪಂಚಾಯಿತಿಗೆ ಬಂದು ಮಾತುಕತೆ ಮಾಡಿಕೊಳ್ಳೋಣವೆಂದು ಸೂಚಿಸಿದ್ದರು ಆದರೆ ಮಂಜುನಾಥ ಮತ್ತು ನಟರಾಜ ರವರು ಮಾತುಕತೆಗೆ ಬರದೇ ಇದ್ದುದರಿಂದ  ಈ ದಿನ ತಡವಾಗಿ ಠಾಣೆಗೆ ದೂರು ನೀಡುತ್ತಿದ್ದು, ಮೇಲ್ಕಂಡ ವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

Last Updated: 13-07-2021 06:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080