ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 188,269,271 ಐ.ಪಿ.ಸಿ :-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಟಿ.ಎನ್.ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:13/06/2021 ರಂದು  ಬೆಳಿಗ್ಗೆ ನಾನು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಬಿ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಣ ಹಾನಿ ಉಂಟುಮಾಡುವಂತಹ ಕರೋನಾ ಸಾಂಕ್ರಾಮಿಕ ಖಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಹಾಗೂ ವಾರಾಂತ್ಯದ ಕರ್ಪ್ಯೂ ಸಂಬದ ಕೊರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣಾ ವ್ಯಾಪ್ತಿ ಗುಂದಿಗೆರೆ, ಸೀತಾರಾಂಪುರ, ಬೈರಾಬಂಡ, ಐ.ಕುರವಪಲ್ಲಿ ಗ್ರಾಮಗಳ ಕಡೆ ಗಸ್ತುಮಾಡಿಕೊಂಡು ಬೆಳಿಗ್ಗೆ 7-45  ಗಂಟೆ ಸಮಯದಲ್ಲಿ ಇರಗಂಪಲ್ಲಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಕರೋನ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಗುಂಪು ಸೇರದಂತೆ, ಸಾರ್ವಜನಿಕವಾಗಿ ಅನಗತ್ಯವಾಗಿ ಸಂಚರಿಸದಂತೆ, ಪೇಸ್ ಮಾಸ್ಕ್ ಧರಿಸುವಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸರ್ಕಾರವು ಯಾವುದೇ ವಾಣಿಜ್ಯ ವಹಿವಾಟುಗಳನ್ನು ನಡೆಸದಂತೆ ಲಾಕ್ ಡೌನ್ ಮತ್ತು ವಾರಂತ್ಯದ ಕರ್ಪ್ಯೂವನ್ನು ಜಾರಿಮಾಡಿ ಆದೇಶಿಸಿದ್ದರೂ ಸಹ ಇರಗಂಪಲ್ಲಿ ಗ್ರಾಮದಲ್ಲಿ ಅಮ್ರಾನ್ ಚಿಕನ್ ಸೆಂಟರ್ ನ ಅಂಗಡಿಯನ್ನು ತೆಗೆದುಕೊಂಡು ಕೋವಿಡ್ -19 ಲಾಕ್ ಡೌನ್ ಮತ್ತು ವಾರಾಂತ್ಯದ ಕರ್ಪ್ಯೂ ಆದೇಶವಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಪ್ರಾಣ ಹಾನಿಕಾರಕ ಕೋವಿಡ್ 19 ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಗ್ರಾಹಕರನ್ನು ಒಬ್ಬರಿಗೊಬ್ಬರು ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಅಂಗಡಿಯ ಮಾಲೀಕ ಮತ್ತು ಆತನೊಂದಿಗೆ ಒಬ್ಬ ವ್ಯಕ್ತಿ ಹಾಗೂ ಒಬ್ಬ ಮಹಿಳೆ ಮಾಸ್ಕ್ ಧರಿಸದೇ, ಸಾಮಾಜಿಕ ಹಂತರವನ್ನು ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಾ ಸರ್ಕಾರದ ಕೋವಿಡ್-19 ಲಾಕ್ ಡೌನ್ ಹಾಗೂ ವಾರಂತ್ಯದ ಕರ್ಪ್ಯೂ ಆದೇಶಗಳನ್ನು ಉಲ್ಲಂಘನೆ ಮಾಡಿದ್ದು ಸದರಿ ಚಿಕನ್ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ಶ್ರೀ.ಮುಭಾರಕ್ ಪಾಷ ಬಿನ್ ಮೆಹಬೂಬ್ ಪಾಷ, 32ವರ್ಷ, ಮುಸ್ಲಿಂ ಜನಾಂಗ, ಚಿಕನ್ ಅಂಗಡಿ ವ್ಯಾಪಾರ, ವಾಸ ಎನ್.ಕೊತ್ತೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತಲೂ ಅಂಗಡಿಯ ಮಾಲೀಕನೊಂದಿಗೆ ವ್ಯಾಪರಮಾಡಲು ಸಹಕರಿಸುತ್ತಿದ್ದವರ ಹೆಸರು ವಿಳಾಸವನ್ನು ತಿಳಿಯಲಾಗಿ ಶ್ರೀ.ಅಶ್ವಥನಾರಾಯಣ ಬಿನ್ ಲೇಟ್ ಗೋವಿಂದಪ್ಪ, 48ವರ್ಷ, ಬಲಜಿಗರು, ಖಾಸಗಿ ಬಸ್ ಕಂಡೆಕ್ಟರ್, ವಾಸ ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತಲೂ, ಮಹಿಳೆಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ಶ್ರೀಮತಿ.ಜ್ಯೋತಿ ಕೋಂ ಅಶ್ವಥನಾರಾಯಣ, 38ವರ್ಷ, ಬಲಜಿಗರು,  ಹಾಲಿ ವಾಸ ಇರಗಂಪಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿಯವರು ಪ್ರಾಣ ಹಾನಿಯನ್ನು ಉಂಟುಮಾಡಬಹುದಾದಂತಹ ಕೋವಿಡ್-19 ರೋಗಾಣುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೆ ಇರಗಂಪಲ್ಲಿ ಗ್ರಾಮದ ಅಮ್ರಿನ್ ಚಿಕನ್ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಲಾಕ್ ಡೌನ್ ಮತ್ತು ವಾರಾಂತ್ಯದ ಕರ್ಪ್ಯೂ ಅದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ನಾನು ಬೆಳಿಗ್ಗೆ 10-30 ಗಂಟೆಗೆ ಗಸ್ತು ಕರ್ತವ್ಯದಿಂದ ಠಾಣೆಗೆ ವಾಪಸ್ ಬಂದು ಸದರಿ ಆಸಾಮಿಗಳ ವಿರುದ್ದ ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖೈ 85/2021 ಕಲಂ 188,269.271 ಐಪಿಸಿ ಮತ್ತು ಕಲಂ 51(ಬಿ) THE DISASTER MANAGEMENT ACT-2005 ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.86/2021 ಕಲಂ. 454,457,380 ಐ.ಪಿ.ಸಿ :-

     ದಿನಾಂಕ 13/06/2021 ರಂದು ಫಿರ್ಯಾಧಿದಾರರಾದ ಜೆ.ವೆಂಕಟೇಶ್ವರರಾವ್ ಬಿನ್ ಲೇಟ್ ಹೆಚ್.ಜಯರಾಮಯ್ಯ ಮನೆ ಸಂಖೈ 60 ಎ ವಾರ್ಡ್ ಸಂಖೈ 29 ಕಿದ್ವಾಯಿ ನಗರ ಚಿಂತಾಮಣಿ ನಗರ ಶ್ರೀರಾಮೇಶ್ವರ ಫ್ರೌಢಶಾಲೆ ಮುಖ್ಯೋಪಾಧ್ಯಾಯರು ಇರಗಂಪಲ್ಲಿ ಗ್ರಾಮ ಮೊ.ನಂ-9902030738 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 11/06/2021 ರ ಶುಕ್ರವಾರ ಮಧ್ಯಾಹ್ನ 12-30 ಗಂಟೆಗೆ ಇರಗಂಪಲ್ಲಿಯ ಶ್ರೀರಾಮೇಶ್ವರ ಫ್ರೌಢಶಾಲೆಗೆ ಬಂದಾಗ ಶಾಲೆಯ ಹೆಬ್ಬಾಗಿಲು ಗೇಟಿನ ಬೀಗ ಒಡೆದು ಶಾಲಾ ಕಛೇರಿ ಮತ್ತು ಕಂಪ್ಯೂಟರ್ ಕೊಠಡಿಗಳ ಬೀಗಗಳನ್ನು ಹಾಗೂ ಕೊಠಡಿಯ ಬಾಗಿಲುಗಳನ್ನು ಒಡೆದು ಹಾಕಿ ಸಿಸಿ ಕ್ಯಾಮೆರಾ ರೆಕಾರ್ಡರ್,UPS ಸೆಟ್,ಮೈಕ್ ಸೆಟ್ ನ ಆಂಪ್ಲೀಪೈಯರ್ ಹಾಗೂ ಕಂಪ್ಯೂಟರ್ ರೂಮ್ ನಲ್ಲಿ ಅಳವಡಿಸಿದ್ದ 14 ಬ್ಯಾಟರಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಕಳ್ಳತನವನ್ನು ಜೂನ್ 6 ರ ಭಾನುವಾರ ಬೆಳಿಗ್ಗೆ 9 ರಿಂದ ದಿನಾಂಕ 11/06/2021 ರ ಶುಕ್ರವಾರ ಮಧ್ಯಾಹ್ನ 12-30 ರ ಒಳಗೆ ಮಾಡಿರುತ್ತಾರೆ ಶಾಲಾ ಕಛೇರಿಯ ಬೀರುವನ್ನು ಹಾರೆಯಿಂದ ಮೀಟಿರುತ್ತಾರೆ ಬೀರುವಿನಿಂದ ಯಾವುದೇ ದಾಖಲೆಗಳು ಕಳುವಾಗಿರುವುದಿಲ್ಲ. ಕಳುವಾಗಿರುವ ಮಾಲಿನ ಪಟ್ಟಿಗಳು 1) ಸರ್ಕಾರದಿಂದ ಮಂಜೂರಾಗಿರುವ ಕಂಪ್ಯೂಟರ್ ಕೊಠಡಿಯ PANASONIC ಕಂಪನಿಯ 14 ಬ್ಯಾಟರಿಗಳು,2) AHUJA ಕಂಪನಿಯ ಮೈಕ್ ಸೆಟ್ ನ ಆಂಪ್ಲೀಪೈಯರ್ 1 ,3) ಕಂಪ್ಯೂಟರ್ ಕೊಠಡಿಯಲ್ಲಿ ಅಳವಡಿಸಿದ್ದ LUMINOUS UPS ಸೆಟ್ 1 4) CCTV ಯ CITY PLUS ಕಂಪನಿಯ DVR 1 ಇವುಗಳ ಒಟ್ಟು ಬೆಲೆ 1.12.500/- ರೂಗಳಾಗಿರುತ್ತದೆ.ಬೆಲೆ ಬಾಳುವ ವಸ್ತುಗಳು ಕಳುವಾಗಿದ್ದು ಕಳವು ಮಾಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ನಮ್ಮ ಸಾಮಾಗ್ರಿಗಳನ್ನು ನಮಗೆ ಕೊಡಿಸಿ ಕಳವು ಮಾಡಿರುವವರ ವಿರುದ್ದ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿದೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 323,324,447,504,506,34 ಐ.ಪಿ.ಸಿ :-

     ಈ ದಿನ ದಿನಾಂಕ 12-06-2021 ರಂದು ಠಾಣಾ ಸಿಬ್ಬಂದಿಯಾದ ಪಿಸಿ 07 ರವರು  ಚಿಂತಾಮಣಿ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬೆಲ್ಲಾಲಂಪಲ್ಲಿ ಗ್ರಾಮದ ಬೀರಪ್ಪ ರವರು ನೀಡಿದ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದ್ದರ  ಸಾರಾಂಶವೆನಂದರೆ  ನಮಗೂ ಮತ್ತು ನಮ್ಮ ಗ್ರಾಮದವರಾದ ಮಂಜುನಾಥ  ಬಿನ್ ರಾಮದಾಸ್  ಮತ್ತು ಅತನ ಮಗ ಕೀಶೋರ್ ರವರಿಗೂ ಜಮೀನಿನ ವಿಚಾರದಲ್ಲಿ ಆಗ್ಗಾಗೆ ಗಲಾಟೆಗಳಾಗುತ್ತಿದ್ದವು  ದಿನಾಂಕ:11-06-2021 ರಂದು  ನನ್ನ ಸ್ವಂತ ಬಾಬತ್ತು ಜಮೀನಿನಲ್ಲಿನ  ಎರಡು ಜಾಲಿ ಮರಗಳನ್ನು ಕತ್ತರಿಸಿದ್ದೆವು  ನಂತರ ದಿನಾಂಕ 12-06-2021 ರಂದು  ಬೆಳಿಗ್ಗೆ ಸುಮಾರು 7:30 ರ ಸಮಯದಲ್ಲಿ ಮೇಲ್ಕಂಡ ಮಂಜುನಾಥ್ ಮತ್ತು ಕಿಶೋರ್ ರವರು ನಮ್ಮ ಜಮೀನಿನ ಬಳಿ ಬಂದು ಅಲ್ಲಿಯೆಯಿದ್ದ ನಮ್ಮ ತಾಯಿಯವರ ಬಳಿ ಬಂದು ಈ ಜಾಲಿ ಮರಗಳು ನಿಮ್ಮ ಅಪ್ಪನ ಸ್ವತ್ತ ಎಂದು  ನಮ್ಮ ತಾಯಿಯವರಿಗೆ  ಆವಾಚ್ಯಶಬ್ದದಿಂದ ಬೈದು  ಮಂಜುನಾಥ್ ರವರು ನಮ್ಮ ತಾಯಿಯ ಕೆನ್ನೆಗೆ ಹೊಡದು ಕೆಳಕ್ಕೆ ತಳ್ಳಿ  ಮೂಗೆಟುಗಳನ್ನುಂಟು ಮಾಡಿರುತ್ತಾರೆ  ಆಗ ಅಲ್ಲಿಯೆ ಇದ್ದ ನಾನು ಏಕೆ ಗಲಾಟೆ ಮಾಡುತ್ತಿರ  ಎಂದು ಕೇಳುವಷ್ಟರಲ್ಲಿ ಮಂಜುನಾಥ್ತ  ರವರು ಯವುದೋ ಕಬ್ಬಿಣದ ರಾಡ್ ನಿಂದ ನನ್ನ ಬಲ ಮೊಣಕಾಲಿನ ಕೆಳಗೆ ಹೊಡೆದು ಆವಾಚ್ಯವಾಗಿ ಬೈಯುತ್ತಿದ್ದಾಗ  ಅಡ್ಡ ಬಂದ ನಮ್ಮ ತಂದೆಯವರಾದ ಮಲ್ಲಪ್ಪ ರವರಿಗೆ ಮಂಜುನಾಥ್ ರವರ ಮಗ ಕಿಶೋರ್ ರವರು ಯಾವುದೋ ದೊಣ್ಣೆಯಿಂದ  ಎಡ ಕೈಗೆ ಮತ್ತು ಎಡ ಕಣ್ಣಿನ ಕೆಳ ಭಾಗಕ್ಕೆ ಹೊಡೆದ ಪರಿಣಾಮ ರಕ್ತಗಾಯಗಳಾಗಿರುತ್ತೆ ಮತ್ತು ನಮ್ಮ ತಂದೆಯವರನ್ನು ಕುರಿತು ಈ ದಿನ ನಿನ್ನನ್ನು ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ಗ್ರಾಮದ ವಾಸಿಗಳಾದ ಆಗಸ ನಾರಾಯಣ ಸ್ವಾಮಿ , ಬೋರ್ಲಪಲ್ಲಿ ವೆಂಕಟರವಣಪ್ಪ, ಶಿವಣ್ಣ ರವರು ಜಗಳ ಬಿಡಿಸಿರುತ್ತಾರೆ  ನಮ್ಮ ಸೋದರ ಮಾವ ಗಂಗಿರೆಡ್ಡಿ ರವರು ಗಾಯಾಳುಗಳಾದ ನಮ್ಮನ್ನು  ಯಾವುದೋ ವಾಹನದಲ್ಲಿ ಕರೆತಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ದಾಖಲಿಸಿರುತ್ತಾರೆ  ಆದ್ದರಿಂದ  ನಮ್ಮನ್ನು ಹೊಡದು ,ಆವಾಚ್ಯಶಬ್ದಗಳಿಂಧ ಬೈದು ಪ್ರಾಣ ಬೆದರಿಕೆ ಹಾಕಿದವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:13.06.2021 ರಂದು ಬೆಳಿಗ್ಗೆ 9-10 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:13.06.2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ವಡ್ರೇಪಾಳ್ಯ ಗ್ರಾಮದ ವಾಸಿ  ವನಜಾಕ್ಷಮ್ಮ ಕೋಂ ನಟರಾಜ್ , 45 ವರ್ಷ ಲಿಂಗಾಯಿತರು ಕೂಲಿ ಕೆಲಸ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ ವ ವರಧಿ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.108/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ಪಿರ್ಯಾದಿದಾರರಾದ ಆನಂದ ಕುಮಾರ್ ಜೆ ಎನ್ ಪೊಲೀಸ್ ಇನ್ಸ್ ಪೆಕ್ಟರ್ ಚಿಂತಾಮಣಿ ನಗರ ಠಾಣೆ ರವರು ನೀಡಿದ ವರದಿಯೇನೆಂದರೆ, ಈ ದಿನ ದಿನಾಂಕ:12/06/2021 ರಂದು ಬೆಳಿಗ್ಗೆ ನಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ ರವರೊಂದಿಗೆ ಠಾಣೆಗೆ  ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3369 ರಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 08-00 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಗಜಾನನ ವೃತ್ತದ ಬಳಿಯಿರುವ ಅಯೂಬಿಯಾ ಮಸೀದಿ ಮುಂಭಾಗದಲ್ಲಿರುವ ಮಟನ್ ಅಂಗಡಿಯ ಮಾಲೀಕರು ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ ಉಲ್ಲಂಘಣೆ ಮಾಡಿ ಹೇರ್ ಸೆಲೂನ್ ಶಾಪ್ ನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಜಿಲ್ಲೆಯಲ್ಲಿ ಕೋವಿಡ್-19 ರೋಗಾಣು ಹರಡುವಿಕೆಯನ್ನು ತಡೆಯುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಆರೀಫ್ ಬಿನ್ ಅನ್ವರ್ ಸಾಬ್, 32ವರ್ಷ, ಮುಸ್ಲಿಂರು, ಮಟನ್  ಅಂಗಡಿಯ ಮಾಲೀಕ, ವಾಸ ಅಯೂಬಿಯ ಮಸೀದಿ ಗಜಾನನ, ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ ಉಲ್ಲಂಘಣೆ ಮಾಡಿ ಹೇರ್ ಸೆಲೂನ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಸದರಿಯವರ ವಿರುದ್ದ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.109/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ಪಿರ್ಯದಿದಾರರಾದ ಮುಕ್ತಿಯಾರ್ ಪಾಷ ಎ.ಎಸ್.ಐ ಚಿಂತಾಮಣಿ ನಗರ ಠಾಣೆ  ರವರು ನೀಡಿದ ವರದಿಯೇನೆಂದರೆ, ಈ ದಿನ ದಿನಾಂಕ:12/06/2021 ರಂದು ಬೆಳಿಗ್ಗೆ ನಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-275 ಸಂಪತ್ತು ರವರೊಂದಿಗೆ ಠಾಣೆಗೆ  ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-61 ರಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-30 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದ ಟಿಪ್ಪುನಗರದ ರಸ್ತೆಯಲ್ಲಿ ಎಸ್.ಎಲ್.ಎನ್. ಹೇರ್ ಸೆಲೂನ್ ಅಂಗಡಿಯ ಮಾಲೀಕರು ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ ಉಲ್ಲಂಘಣೆ ಮಾಡಿ ಹೇರ್ ಸೆಲೂನ್ ಶಾಪ್ ನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಜಿಲ್ಲೆಯಲ್ಲಿ ಕೋವಿಡ್-19 ರೋಗಾಣು ಹರಡುವಿಕೆಯನ್ನು ತಡೆಯುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ನಾಗೇಂದ್ರ ಬಿನ್ ಲಕ್ಷ್ಮಿನಾರಾಯಣ, 29ವರ್ಷ, ಭಜಂತ್ರಿ, ಎಸ್.ಎಲ್.ಎನ್. ಹೇರ್ ಸೆಲೂನ್ ಮಾಲೀಕ, ವಾಸ ಟಿಪ್ಪುನಗರ ರಸ್ತೆ, ಚೌಡರೆಡ್ಡಿಪಾಳ್ಯ ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ  ಉಲ್ಲಂಘಣೆ ಮಾಡಿ ಹೇರ್ ಸೆಲೂನ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಸದರಿಯವರ ವಿರುದ್ದ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.117/2021 ಕಲಂ. 324,427,506,34 ಐ.ಪಿ.ಸಿ :-

     ದಿನಾಂಕ:12/06/2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ ಬಿನ್  ನಾರಾಯಣಪ್ಪ 44 ವರ್ಷ, ಬಲಜಿಗ ಜನಾಂಗ, ಸೋಮೇಶ್ವರ ಗ್ರಾಮ ಹಾಲು ಉತ್ಪಾದಕ ಸಹಕಾರ ಸಂಘ ಕಾರ್ಯದರ್ಶಿ ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12/06/2021 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಹಾಲು ಶೇಖರಣೆ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಗ್ರಾಮದ ವಾಸಿಗಳಾಧ ಕಿರಣ್ ಬಾಬು ಬಿನ್ ಈಶ್ವರಪ್ಪ, ಈಶ್ವರಪ್ಪ ಬಿನ್ ನಂಜುಂಡಪ್ಪ , ಸೈದಾಬಿ ಕೊಂ ಈಶ್ವರಪ್ಪ ರವರು ಮೂವರು ಅಕ್ರಮವಾಗಿ ಕೂಟ ಕಟ್ಟಿಕೊಂಡು ನಮ್ಮ ಹಾಲು ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡ ಒಳಗೆ ಪ್ರವೇಶಿಸಿ ತಾನು ಹಾಲು ಶೇಖರಣೆ ಮಾಡುತ್ತಿದ್ದ ಸಂದರ್ಬದಲ್ಲಿ ಎಲ್ಲಾ ಹಾಲು ಉತ್ಪಾದಕರ ಸಮ್ಮುಖದಲ್ಲಿ ಸಂಘದ ಗಣಕಯಂತ್ರಕ್ಕೆ ಅಳವಡಿಸಿರುವ ಗಾಜು ಟೇಬಲ್ ಸೇರಿದಂತೆ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ದೊಣ್ಣೆಯಿಂದ ಒಡೆದು ಹಾಕಿ ತನ್ನ ಎಡ ಕಣ್ಣುಗೆ ದೊಣ್ಣೆಯಿಂದ ಕಣ್ಣು ಗುಡ್ಡೆಗೆ ಗಾಯಗೊಳಿಸಿರುತ್ತಾರೆ ಹಾಗೂ ಈ ಮೂವರು ಒಟ್ಟಾಗಿ ತಮ್ಮ ಸಂಘದ ಸಿಬ್ಬಂದಿಯನ್ನು ಸಹ ಏಳೆದಾಡಿ ದೊಣ್ಣೆಗಳಿಂದ ಹಲ್ಲೆ ಮಾಡುತ್ತಾ ಶೇಖರಣೆಗೆ ಅಡ್ಡಿಪಡಿಸಿರುತ್ತಾರೆ. ನೀನು ಕೂಡಲೇ ಹಾಲು ಉತ್ಪಾದಕ ಸಹಕಾರ ಸಂಘ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ದರೆ ನಿನ್ನನ್ನು ಇದೇ ಡೈರಿಯಲ್ಲಿ ಸಾಯಿಸುತ್ತೇನೆಂದು ತನ್ನ ಮೇಲೆ ಹೊಡೆದಿರುತ್ತಾರೆ, ಕೂಡಲೇ ಅಲ್ಲಿದ್ದ ಸಂಘಕ್ಕೆ ಹಾಲು ಉತ್ಪಾದನೆ ಮಾಡಿಕೊಡುವ ರೈತರಾದ ಎಸ್,ವಿ ಪಾಪಣ್ಣ ಬಿನ್ ವೆಂಕಟರಾಯಪ್ಪ, ಶ್ರೀರಾಮರೆಡ್ಡಿ ಬಿನ್ ವೈ ವೆಂಕಟರಮಣಪ್ಪ, ಶಿವಪ್ಪ ಬಿನ್ ಗೋಪಾಲಪ್ಪ ಮುಂತಾದವರು ತನ್ನನ್ನು ಸುತ್ತುವರೆದುರಕ್ಷಣೆ ಮಾಡಿದರು  ಆಸಮಯದಲ್ಲಿ ಕಿರಣ್ ಬಾಬು ರವರು ಸಂಘಕ್ಕೆ ಸೇರಿದ ಸುಮಾರು 10,000/ ರೂ ಗಳಷ್ಟು ನಷ್ಟ ಉಂಟು ಮಾಡಿರುತ್ತಾನೆ.ತನ್ನ ಕಣ್ಣಿಗೆ ರಕ್ತ ಸೋರುತ್ತಿದ್ದು ಗಮನಿಸಿದ ಗ್ರಾಮಸ್ಥರು ತನ್ನನ್ನು ಚಿಕ್ಕಬಳ್ಳಾಪುರ ಸೌಮ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ವೈದ್ಯರು ಕಣ್ಣು ಗುಡ್ಡೆಗೆ ಹೊಲಗೆಯನ್ನು ಸಹ ಹಾಕಿರುತ್ತಾರೆ. ಆದ್ದರಿಂದ  ತನ್ನ ಮೈಲೆ ಹಲ್ಲೆ ಮಾಡಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರು.

 

8. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 323,504,506,34 ಐ.ಪಿ.ಸಿ :-

     ದಿನಾಂಕ 12-06-2021 ರಂದು ಮಧ್ಯಾಹ್ನ 12.45 ಗಂಟೆಗೆ ನ್ಯಾಯಾಲಯದ ಮುಖ್ಯ ಪೇದೆ ಹೆಚ್.ಸಿ-216 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 28/05/2021 ರಂದು ಮಧ್ಯಾಹ್ನ 03.00 ಗಂಟೆಗೆ ಅರ್ಜಿದಾರರಾದ ಪಿ.ಎಸ್ ಸುಬಾನಿ ಬಿನ್ ರೆಹಮಾನ್ ಕಲಂದರ್ ಪಾಷ, 33 ವರ್ಷ, ಮುಸ್ಲೀಂ ಜನಾಂಗ, ವ್ಯಾಪಾರ, ವಾಸ ನಿಮ್ಮಕಾಯಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಅರ್ಜಿ ದೂರಿನ ಸಾರಾಂಶವೇನೆಂದರೆ, ಮುರುಗಮಲ್ಲಾ ಸಮೀಪದ ಕೊಲಿಮಿವಾರಹಳ್ಳಿ ಸರ್ವೆ ನಂ 6 ರ ತಮ್ಮ ಭಾಗಕ್ಕೆ ಬರುವ ಜಮೀನಿನ ತೋಟದಲ್ಲಿ ತಾವು ಮಾವಿನ ಹಣ್ಣು ಕೀಳಿಸುತ್ತಿದ್ದಾಗ ತಮ್ಮ ಚಿಕ್ಕಪ್ಪನಾದ ದಾದಾಪೀರ್ ಮತ್ತು ಆತನ ಮಗನಾದ ಷೇಕ್ ಹಬೀಬ್ ರವರು ತನ್ನ ಕತ್ತಿನ ಭಾಗಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದು, ತಮ್ಮ ತಂದೆ ಮತ್ತು ತಮ್ಮಂದಿರಿಗೂ ಸಹ ಜೀವ ಬೆದರಿಕೆ ಹಾಕಿರುತ್ತಾರೆ. ಸದರಿಯವರಿಂದ ಪ್ರಾಣ ರಕ್ಷಣೆ ಮಾಡಿ ಸೂಕ್ತ ಬಂದೊಬಸ್ತ್ ಪಡಿಸಲು ಕೋರಿದ್ದರ ಮೇರೆಗೆ ಠಾಣಾ  ಎನ್.ಸಿ.ಆರ್ 43/2021 ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೆ.  ಸದರಿ ದೂರಿನ ವಿಚಾರವಾಗಿ ಸಂಜ್ಞೆಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು  ಮಧ್ಯಾಹ್ನ 12.45 ಗಂಟೆಗೆ ಠಾಣಾ ಮೊ.ಸಂ 60/2021 ಕಲಂ 323,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.196/2021 ಕಲಂ. 341,504,506 ಐ.ಪಿ.ಸಿ :-

     ದಿನಾಂಕ:13-06-2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ  ಪಿರ್ಯಾದಿದಾರರಾದ ಶ್ರೀಮತಿ. ಗಿರಿಜಮ್ಮ ಕೋಂ ಮುನಿನಾರಾಯಣಪ್ಪ,  50 ವರ್ಷ, ವಕ್ಕಲಿಗರು, ಗೃಹಿಣಿ,ವಾಸ:ಗುಡಿಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಗ್ರಾಮದ ಮುರಳಿ ಬಿನ್ ಪಿಳ್ಳವೆಂಕಟಪ್ಪ ರವರು ತನಗೆ ಕೆಟ್ಟ ಕೆಟ್ಟ ಮಾತುಗಳಿಂದ ಬೈದಿದ್ದು ಈ ವಿಚಾರವಾಗಿ ತಾನು ದಿನಾಂಕ:25-05-2021 ರಂದು  ಮುರಳಿ ರವರನ್ನು ಠಾಣೆಗೆ ಕರೆಯಿಸಿ ಬಂದೋಬಸ್ತು ಮಾಡುವಂತೆ ಠಾಣೆಯಲ್ಲಿ ದೂರನ್ನು ನೀಡಿದ್ದು ಅದರಂತೆ ಠಾಣಾ ಎನ್.ಸಿ.ಆರ್ ನಂ:250/2021 ರಂತೆ ದಾಖಲಾಗಿದ್ದು ಪೊಲೀಸರು ತಮ್ಮ ಗ್ರಾಮದ ಮುರಳಿ ರವರನ್ನು ಠಾಣೆಗೆ ಕರೆಯಿಸಿ ಬುದ್ದಿವಾದ ಹೇಳಿ ಮತ್ತೆ ತನ್ನ ತಂಟೆಗೆ ಬರದಂತೆ ಬಂದೋಬಸ್ತು ಮಾಡಿ ಕಳುಹಿಸಿರುತ್ತಾರೆ.  ಈಗಿರುವಲ್ಲಿ ದಿನಾಂಕ:09-06-2021 ರಂದು  ಮದ್ಯಾಹ್ನ 2-00 ಗಂಟೆಯಲ್ಲಿ  ತಾನು ತಮ್ಮ ಗ್ರಾಮದಲ್ಲಿ ಅಂಗಡಿಗೆ ಹೋಗಿ ಪತ್ತೆ ವಾಪಸ್ಸು ಮನೆಗೆ ಹೋಗಲು ತಮ್ಮ ಗ್ರಾಮದ ಮಹೇಶ್ವರಮ್ಮ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ತಮ್ಮ ಗ್ರಾಮದ ಮುರಳಿ ಬಿನ್ ಪಿಳ್ಳವೆಂಕಟಪ್ಪ ರವರು ಬಂದು ತನ್ನನ್ನು ಅಡ್ಡಗಟ್ಟಿ ಏ ನನ್ನ ಮೇಲೆ ನೀನು ಪೊಲೀಸರಿಗೆ ದೂರು ನೀಡಿ ತನ್ನನ್ನು ಠಾಣೆಗೆ ಕರೆಸುತ್ತೀಯಾ ಎಂದು ತನ್ನ ಮೇಲೆ ಗಲಾಟೆ ಮಾಡಿ ನಿನ್ನಮ್ಮನೇ ಕ್ಯಾಯ ಎಂದು ಅವಾಚ್ಯಶಬ್ದಗಳಿಂದ ಬೈದು ಮತ್ತೆ ನನ್ನ ಮೇಲೆ ನೀನು ಪೊಲೀಸರಿಗೆ ದೂರು ನೀಡಿದರೇ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ ತಾನು ಈ ವಿಚಾರವನ್ನು ತಮ್ಮ ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಮೇಲೆ ಗಲಾಟೆ ಮಾಡಿ ಅಡ್ಡಗಟ್ಟಿ, ಅವಾಚ್ಯಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿದ ತಮ್ಮ ಗ್ರಾಮದ ಮುರಳಿ ಬಿನ್ ಪಿಳ್ಳವೆಂಕಟಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 196/2021 ಕಲಂ 341,504,506, ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 13-06-2021 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080