ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 15(A),32 ಕೆ.ಇ ಆಕ್ಟ್ :-

          ದಿನಾಂಕ:13-05-2021 ರಂದು ಬೆಳಿಗ್ಗೆ 10-15 ಗಂಟೆಗೆ ಶ್ರೀಮುರುಳಿ ಸಿ.ಹೆಚ್.ಸಿ-14 ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ; 13-05-2021 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಗುಪ್ತ ಮಾಹಿತಿಯ ಸಂಗ್ರಹಣೆಗಾಗಿ ಗ್ರಾಮಗಳ ಗಸ್ತಿನಲ್ಲಿ ಇದ್ದಾಗ ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ, ಬೂರಗಮಡಗು ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-237 ವಿನಯ್ ಕುಮಾರ್ ಯಾದವ್ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟು, ಆಚೇಪಲ್ಲಿ ಕ್ರಾಸ್ ನ ಬಳಿ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಬೆಳಿಗ್ಗೆ 9-00 ಗಂಟೆಗೆ ಬೂರಗಮಡಗು ಗ್ರಾಮದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿಯ ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಸುತ್ತಿದ್ದವನ್ನು ನಾವು ಮತ್ತು ಪಂಚರು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಮದ್ದನ್ನ, 40 ವರ್ಷ, ನಾಯಕ ಜನಾಂಗ,  ಚಿಲ್ಲರೆ ಅಂಗಡಿ ವ್ಯಾಪಾರ,  ವಾಸ ಬೂರಗಮಡಗು ಗ್ರಾಮ, ಮೀಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 18 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 620 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 632/-ರೂ ಗಳಾಗಿರುತ್ತೆ. ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ  10-15 ಗಂಟೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.39/2021 ಕಲಂ. 447,269,120B,188 ಐ.ಪಿ.ಸಿ & 60  THE DISASTER MANAGEMENT ACT, 2005:-

     ದಿನಾಂಕ-12/05/2021 ರಂದು ಮದ್ಯಾಹ್ನ 03:00 ಗಂಟೆಗೆ  ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಿ.ಪಿ.ಸಿ-144 ಮುತ್ತುರಾಜ್ ರವರು  ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಸರ್ಕಾರಿ ಬಾಲಕಿಯರ ಶುಶ್ರೂಷಕಿಯರ ತರಬೇತಿ ಕೇಂದ್ರವನ್ನು ಜಿಲ್ಲಾ ಕಾರಾಗೃಹದಲ್ಲಿರುವ ಬಂಧಿತ ಆರೋಪಿತರಿಗೆ ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಮಾಡಿರುತ್ತಾರೆ. ಸಾರ್ವಜನಿಕರಿಗೆ ಪ್ರವೇಶ ನಿಷಿದ್ದವಾಗಿರುತ್ತದೆ. ಅದರಂತೆ ಈ ದಿನ ದಿನಾಂಕ; 12-05-2021 ರಂದು ತನಗೆ ಬೆಳಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಹಗಲು ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಅದರಂತೆ ತಾನು, ಸಿಬ್ಬಂದಿಯಾದ  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಸಿ-180 ಬಾಲಚಂದ್ರ, ಜಿಲ್ಲಾ  ಶಸಸ್ತ್ರ ಮೀಸಲು ಪಡೆಯ ಎ.ಹೆಚ್.ಸಿ-06 ಶ್ರೀ ರಾಮ್, ಎ.ಹೆಚ್.ಸಿ-36 ಶ್ರೀ ಶೇಷಾದ್ರಿ, ಎ.ಪಿ.ಸಿ-21 ಪೃಥ್ವಿರಾಜ್, ರವರು ಕ್ವಾರೈಂಟೈನ್ ಸೆಂಟರ್ ಬಳಿ ಕರ್ತವ್ಯಕ್ಕೆ ಹಾಜರಿದ್ದು, ಕರ್ತವ್ಯ  ನಿರ್ವಹಿಸುತ್ತಿದ್ದಾಗ ಯಾರೋ ಕೆಲವು ಆಸಾಮಿಗಳು ಮದ್ಯಾಹ್ನ  ಸುಮಾರು 2.00 ಗಂಟೆ ಸಮಯದಲ್ಲಿ ಕ್ವಾರೈಂಟೈನ್ ಸೆಂಟರ್ ಕಾಂಪೌಂಡ್ ಹಾರಿ ಕಟ್ಟಡದ ಮೇಲ್ಬಾಗದಲ್ಲಿರುವ ಕೋವಿಡ್ ಪಾಸಿಟಿವ್ ಇರುವ ಆರೋಪಿಯೊಂದಿಗೆ ಮಾತನಾಡಲು ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದರು ಅಷ್ಟರಲ್ಲಿ ತಾನು, ಮತ್ತು ಸಿಬ್ಬಂದಿಯವರು ಕ್ವಾರೈಂಟೈನ್ ಸೆಂಟರ್ ನ ಕೆಳಗಡೆ ಬಂದು ನೋಡುವಷ್ಟರಲ್ಲಿ ಅವರು ಕ್ವಾರೈಂಟೈನ್ ಸೆಂಟರ್ ಪಕ್ಕದಲ್ಲಿರುವ ದಕ್ಷಿಣದ ಕಡೆ ಇರುವ ಖಾಲಿ ಜಾಗದಲ್ಲಿ ಒಂದು ಕಾರನ್ನು ಹತ್ತಲು ಪ್ರಯತ್ನಿಸುತ್ತಿದ್ದರು, ನಾವು ಓಡಿ ಹೋಗುವಷ್ಟರಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿರುತ್ತಾರೆ. ನಂತರ ಸದರಿ ಕಾರನ್ನು ಪರಶೀಲಿಸಲಾಗಿ ಇದರ ನಂಬರ್: ಕೆ.ಎ-50-ಎಂ.ಎ-2126 ಕೆಂಪು ಬಣ್ಣದ ಬ್ರೀಜ್ಜಾ ಕಾರಾಗಿರುತ್ತೆ. ಕ್ವಾರೈಂಟೈನ್ ಸೆಂಟರ್ ನಲ್ಲಿರುವ ಆರೋಪಿತರನ್ನು ವಿಚಾರಿಸಲಾಗಿ ಅದರಲ್ಲಿ ಒಬ್ಬ ಆರೋಪಿಯು ಅವರು ನಮ್ಮ ಕಡೆಯವರಾಗಿರುತ್ತಾರೆ ಎಂದು ತಿಳಿಸಿದ್ದು, ಆರೋಪಿಯ ಹೆಸರು ಮಂಜುನಾಥ ಬಿನ್ ವೆಂಕಟರೆಡ್ಡಿ, 26 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ; ಅರೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಈತನು ಗುಡಿಬಂಡೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣದ ಆರೋಪಿ-1 ಆಗಿರುತ್ತಾನೆ. ಈತನನ್ನು ಕಾಂಪೌಂಡ್ ಹಾರಿ ಹಿಂದಿನಿಂದ ಕೋವಿಡ್ ಕೇರ್ ಸೆಂಟರ್ ನ ಕಟ್ಟಡ ಕಾಂಪೌಂಡ್ ಒಳಗೆ ಪ್ರವೇಶಿಸಿರುವವರ ಹೆಸರು ವಿಳಾಸ ಕೇಳಲಾಗಿ, 1) ಸಂತೋಷ ಬಿನ್ ಚಿಕ್ಕ ಅಶ್ವತ್ಥಪ್ಪ, 2) ದಿಲಿಪ್ ಬಿನ್ ಲೋಕೇಶ, 3) ಮಹೇಶ ಬಿನ್ ಶಿವಣ್ಣ, ಅರೂರು ಗ್ರಾಮ, 4) ಚಿಕ್ಕ ಮಂಜುನಾಥ ಬಿನ್ ದೊಡ್ಡ ಅಶ್ವತ್ಥಪ್ಪ, ಆವುಲನಾಗೇನಹಳ್ಳಿ ಗ್ರಾಮ, 5) ಚೇತನ್ ಬಿನ್ ಮಂಜುನಾಥ, ತೀಲಕುಂಟೆನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದನು. ಕೊಲೆ ಆರೋಪಿ ಮಂಜುನಾಥ ರವರು ಕೋವಿಡ್ ಪಾಸಿಟಿವ್ ರೋಗಿಯಾಗಿದ್ದು, ಆರೋಪಿ ಮಂಜುನಾಥ ರವರು ಕೋವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ಬೇರೆಯವರಿಗೆ ಹರಡಿಸುವ ಉದ್ದೇಶದಿಂದಲೋ ಅಥವಾ ಯಾವುದೋ ಕೃತ್ಯವನ್ನು ಎಸಗಲು ಒಳಸಂಚನ್ನು ರೂಪಿಸಲು, ಆತನ ಕಡೆಯವರು ಅಕ್ರಮವಾಗಿ ಕೋವಿಡ್ ಕ್ವಾರೈಂಟೈನ್ ಸೆಂಟರ್ ಕಾಂಪೌಂಡ್ ಒಳಗೆ ಯಾವುದೇ ಅನುಮತಿಯಿಲ್ಲದೇ ಕಟ್ಟಡದ ಹಿಂಭಾಗದಿಂದ ಕಾಂಪೌಂಡ್ ಹಾರಿ ಕೋವಿಡ್ ಕೇರ್ ಸೆಂಟರ್ ಗೆ ಪ್ರವೇಶಿಸಿ ಕೋವಿಡ್ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ಕ್ವಾರೈಂಟೈನ್ ಸೆಂಟರ್ ನಲ್ಲಿ ಕಾರಾಗೃಹದ ಬಂಧಿತ ಆರೋಪಿತರು ಇರುವುದರಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದ್ದರೂ ಸಹ ಅಕ್ರಮವಾಗಿ ಪ್ರವೇಶಿಸಿರುತ್ತಾರೆ. ಆದ್ದರಿಂದ ಕ್ವಾರೈಂಟೈನ್ ಸೆಂಟರ್ ನಲ್ಲಿರುವ ಕೋವಿಡ್ ಪಾಸಿಟಿವ್ ಆಗಿರುವ ಕೊಲೆ ಆರೋಪಿ ಮಂಜುನಾಥ ಹಾಗೂ ಅಕ್ರಮವಾಗಿ ಕೋವಿಡ್ ಸೆಂಟರ್ ಕಾಂಪೌಂಡ್ ಒಳಗೆ ಪ್ರವೇಶಿಸಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.204/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 12/05/2021 ರಂದು ಸಂಜೆ 7.15 ಗಂಟೆಗೆ ಸುರೇಶ್ ಬಿನ್ ಶ್ರೀನಿವಾಸ, 26 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ: 12/05/2021 ರಂದು ಬೆಳಿಗ್ಗೆ 09.30 ಗಂಟೆ ಸಮಯದಲ್ಲಿ ಚಿಂತಾಮಣಿಗೆ ಹೋಗುವ ಸಲುವಾಗಿ ಚಿಂತಾಮಣಿ-ಕೋಲಾರ ಮುಖ್ಯ ರಸ್ತೆಯ ತಮ್ಮ ಗ್ರಾಮದ ಗೇಟ್ ಬಳಿ ನಿಂತಿದ್ದಾಗ ಅದೇ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ವೆಂಕಟರವಣ ಬಿನ್ ಲೇಟ್ ಗಂಗುಲಪ್ಪ, 26 ವರ್ಷ ರವರು ಆತನ ಬಾಬತ್ತು ಕೆಎ-67 ಇ-2960 ನೊಂದಣಿ ಸಂಖ್ಯೆಯ ಹಿರೋ ಸ್ಲ್ಪಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಕಡೆಯಿಂದ ತಮ್ಮ ಗ್ರಾಮದ ಕಡೆ ಬರುತ್ತಿದ್ದಾಗ ಆತನ  ಹಿಂಬದಿಯಿಂದ ಅಂದರೆ ಚಿಂತಾಮಣಿ ಕಡೆಯಿಂದ  ಬಂದ ಕೆಎ-67 ಎಂ-0282 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಬ್ರಿಜಾ ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟರವಣರವರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ್ದು ಅಪಘಾತಪಡಿಸಿದ ಪರಿಣಾಮ ವೆಂಕಟರವಣರವರು ತನ್ನ ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದು ಹೋಗಿರುತ್ತಾರೆ. ಕೂಡಲೇ ತಾನು ಅಲ್ಲಿಗೆ ಹೋಗಿ ವೆಂಕಟರವಣರವರನ್ನು ಉಪಚರಿಸಲಾಗಿ ವೆಂಕಟರವಣರವರ ತಲೆಗೆ, ಎಡ ಭುಜಕ್ಕೆ ರಕ್ತಗಾಯವಾಗಿದ್ದು ಹಾಗೂ ದೇಹದ ಇತರೆ ಕಡೆ ತರಚಿದ ರಕ್ತಗಾಯಗಳಾಗಿರುತ್ತದೆ. ನಂತರ ತಾನು ದಾರಿಯಲ್ಲಿ ಬರುತ್ತಿದ್ದ ಯಾವುದೋ ಆಟೋವಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿ ಸದರಿ ಅಪಘಾತದ ವಿಚಾರವನ್ನು ವೆಂಕಟರವಣರವರ ಹೆಂಡತಿಯಾದ ಕವಿತಾರವರಿಗೆ ತಿಳಿಸಿದ್ದು ಕವಿತಾರವರು ಆಸ್ಪತ್ರೆಗೆ ಬಂದು ವೆಂಕಟರವಣರವರನ್ನು ಉಚಪರಿಸಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-67 ಎಂ-0282 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಬ್ರಿಜಾ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.205/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 12/05/2021 ರಂದು ರಾತ್ರಿ 8.10 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ.ಕೆ.ಎಂ.ಶ್ರೀನಿವಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 12/05/2021 ರಂದು ಬೆಳಿಗ್ಗೆ 06.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 06.30 ಗಂಟೆ ಸಮಯದಲ್ಲಿ ಕುರುಟಹಳ್ಳಿ ಗ್ರಾಮದಲ್ಲಿ ಮದೀನಾ ಬೇಕರಿ ಅಂಗಡಿಯನ್ನು ಮತೀನ್ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಕಾನೂನು ಬಾಹಿರವಾಗಿ ಅಂಗಡಿ ತೆರೆದು ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮತೀನ್ ಬಿನ್ ಅಬ್ದುಲ್ ಜಬ್ಬಾರ್, 29 ವರ್ಷ, ಟಿಪ್ಪುನಗರ, ಚಿಂತಾಮಣಿ ನಗರ ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ, ಲಾಕ್ ಡೌನ್ ಆದೇಶ ಇದ್ದರೂ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.206/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ 13-05-2021 ರಂದು ಮದ್ಯಾಹ್ನ 13-15 ಗಂಟೆಗೆ ವೆಂಕಟಲಕ್ಷ್ಮಮ್ಮ ಕೋಂ ಲೇಟ್ ವೆಂಕಟರಾಮರೆಡ್ಡಿ, 50 ವರ್ಷ, ವಕ್ಕಲಿಗರು, ಮನೆಕೆಲಸ, ರಾಯಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಜಮೀನಿನಲ್ಲಿ ತಾವು ಬೆಳೆ ಇಡಲು ಜಮೀನನ್ನು ಉಳುಮೆ ಮಾಡಿರುತ್ತೇವೆ. ದಿನಾಂಕ 12/05/2021 ರಂದು ಸಂಜೆ 7.00 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಇದ್ದಾಗ, ತಮ್ಮ ಗ್ರಾಮದ ವಾಸಿಗಳಾದ ವೇಣುಗೋಪಾಲರೆಡ್ಡಿ ಬಿನ್ ಲೇಟ್ ರಾಮಕೃಷ್ಣಾರೆಡ್ಡಿ, ಚಂದ್ರಶೇಖರರೆಡ್ಡಿ ಬಿನ್ ವೇಣುಗೋಪಾಲರೆಡ್ಡಿ ಮತ್ತು ರವಿಕುಮಾರ್ ಬಿನ್ ವೇಣುಗೋಪಾಲರೆಡ್ಡಿ ರವರು ತಮ್ಮ ಟ್ರ್ಯಾಕ್ಟರ್ನಲ್ಲಿ ಟಮ್ಯಾಟೋ ಸೀಡ್ಸ್ ಕೋಲುಗಳನ್ನು ಹಾಕಿಕೊಂಡು ಅವರ ಜಮೀನಿನಲ್ಲಿ ಹೋಗಲು ತಮ್ಮ ಜಮೀನಿನಲ್ಲಿ ಹೋಗುತ್ತಿದ್ದಾಗ ತಾನು ಅವರನ್ನು ಕುರಿತು ತಾವು ಜಮೀನನ್ನು ಉಳುಮೆ ಮಾಡಿರುತ್ತೇವೆ ತಮ್ಮ ಜಮೀನಿನಲ್ಲಿ ಹೋಗಬೇಡಿ ಪಕ್ಕದಲ್ಲಿ ಹೋಗಿ ಎಂದು ಹೇಳಿದಾಗ ಅವರು ಟ್ರ್ಯಾಕ್ಟರ್ ಇಳಿದು ಬಂದು ತನ್ನನ್ನು ಕುರಿತು ಏನೇ ಬೇವರ್ಷಿ ಮುಂಡೆ ನಿಮ್ಮ ಜಮೀನಿನಲ್ಲಿ ಹೋಗದೆ ಎಂಗೆ ಹೋಗುವುದು ಎಂದು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ವೇಣುಗೋಪಾಲರೆಡ್ಡಿ ದೊಣ್ಣೆಯಿಂದ ತನ್ನ ಮುಖ ಮತ್ತು ಕೈ-ಕಾಲುಗಳ ಮೇಲೆ ಹೊಡೆದು ಗಾಯಪಡಿಸಿರುತ್ತಾರೆ. ಚಂದ್ರಶೇಖರರೆಡ್ಡಿ ಮತ್ತು ರವಿಕುಮಾರ್ ರವರು ಕೈಗಳಿಂದ ತನ್ನ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ತಮಗೆ ಅಡ್ಡಿಪಡಿಸಿದರೆ ನಿನ್ನನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಯಾದ ಸುಬ್ರಮಣಿ ಬಿನ್ ಲೇಟ್ ವೆಂಕಟರೆಡ್ಡಿ ಮತ್ತು ಶಂಕರ ಬಿನ್ ಲೇಟ್ ಶ್ರೀರಾಮರೆಡ್ಡಿ ರವರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದಿರುತ್ತೇನೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೆ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿದೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.56/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ 12/05/2021 ರಂದು ನಾನು ಹಾಗೂ ಠಾಣಾ ಸಿಬ್ಬಂದಿ ಹೆಚ್.ಸಿ 32 ಮಂಜುನಾಥ, ಹೆಚ್.ಸಿ-143 ಶ್ರೀನಾಥ, ಹೆಚ್.ಸಿ-154 ಅಶ್ವತ್ಥಯ್ಯ,  ಪಿ.ಸಿ 196 ದೇವರಾಜ್ ಬಡಿಗೇರ್, ಪಿ.ಸಿ-434 ಹೊಣ್ಣಪ್ಪ ತಲವಾರ್, ಪಿ.ಸಿ 521 ನಾಗರಾಜ್ ರವರೊಂದಿಗೆ  ಮದ್ಯಾಹ್ನ 2.15 ಗಂಟೆಗೆ ಗ್ರಾಮಗಳ ಗಸ್ತು ಚೊಕ್ಕನಹಳ್ಳಿ, ಗೊರ್ಲಗುಮ್ಮನಹಳ್ಳಿ, ಗೋಣಿಮರದಹಳ್ಳಿ, 11 ನೇ ಮೈಲಿ, ಮುಮ್ಮನಹಳ್ಳಿ, ಲಗಿನಾಯಕನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಬಾತ್ಮಿದಾರರಿಂದ ರಾಚನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಸರ್ಕಾರಿ ಜಮೀನಿನಲ್ಲಿ ಯಾರೋ ಕೆಲವರು ಕೋಳಿ ಪಂದ್ಯವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಸದರಿ ಸ್ಥಳದಲ್ಲಿ ದಾಳಿ ಮಾಡಲು ಪಂಚರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿ ಪೊಲೀಸರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ 40 ಜಿ 60 ಜೀಪ್ ನಲ್ಲಿ ಹಾಗೂ ದ್ವಿ-ಚಕ್ರ ವಾಹನಗಳಲ್ಲಿ ಮದ್ಯಾಹ್ನ 2.25 ಗಂಟೆಗೆ ರಾಚನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಸರ್ಕಾರಿ ಜಮೀನಿನಲ್ಲಿ ಮರದ ಕೆಳಗೆ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಆಡುತ್ತಿರುವುದಾಗಿ ಕಂಡುಬಂದಿದ್ದು, ಅಲ್ಲಿದ್ದವರ ಪೈಕಿ ಒಬ್ಬ ಆಸಾಮಿ ನನ್ನ ಕೋಳಿ ಗೆಲ್ಲುತ್ತದೆಂದು 200 ರೂ ಮತ್ತೋಬ್ಬ ಆಸಾಮಿ ನನ್ನ ಕೋಳಿ ಗೆಲ್ಲುತ್ತದೆಂದು 300 ರೂಗಳನ್ನು ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಕಂಡು ಬಂದಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ಪೊಲೀಸರೊಂದಿಗೆ ನಾವು ಹೋಗಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿದ್ದವರು ಓಡಿ ಹೋಗಲು ಪ್ರಾರಂಬಿಸಿದ್ದು ಅವರನ್ನು ಹಿಂಭಾಲಿಸಿ ಹಿಡಿದುಕೊಳ್ಳಲಾಗಿ ಒಬ್ಬ ಆಸಾಮಿ ಸಿಕ್ಕಿದ್ದು ಅವರ ಹೆಸರು ಮತ್ತು ವಿಳಾಸ ತಿಳಿಯಲಾಗಿ ವೆಂಕಟರೆಡ್ಡಿ ಬಿನ್ ನರಸಿಂಹಪ್ಪ, 29 ವರ್ಷ, ನಾಯಕರು, ಎಲೆಕ್ತ್ರಿಕಲ್ ಕೆಲಸ, ರಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು ನಂತರ ಓಡಿ ಹೋದ ಆಸಾಮಿಗಳ ಹೆಸರುಗಳು ಮತ್ತು ವಿಳಾಸವನ್ನು ಕೇಳಲಾಗಿ ಹರೀಶ್ @ ಹರಿ ಬಿನ್ ಲೇಟ್ ಚಿಕ್ಕ ಗಂಗಪ್ಪ, 35 ವರ್ಷ, ಗೊಲ್ಲರು. ಜಿರಾಯ್ತಿ, ಪಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ವೆಂಕಟೇಶ ಬಿನ್ ನರಸಿಂಹಪ್ಪ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ರಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ನವೀನ್ ಬಿನ್ ವೆಂಟಕರವಣ, 25 ವರ್ಷ, ಭಜಂತ್ರಿ ಜನಾಂಗ, ಕು ಕಸುಬು, ಪಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಪೊಲೀಸರು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಜೀವಂತ ಕೋಳಿ ಹುಂಜಗಳು ಸಿಕ್ಕಿದ್ದು ಹಾಗೂ ವಶಕ್ಕೆ ಪಡೆದುಕೊಂಡ ಆಸಾಮಿಗಳ ಬಳಿ ಪರಿಶೀಲಿಸಲಾಗಿ ಜೂಜಾಟಕ್ಕೆ ತಂದಿದ್ದ ಒಟ್ಟು 1200-00 ರೂ ನಗದು ಹಣ ಇದ್ದು ಪಂಚರ  ಸಮಕ್ಷಮ ಮುಂದಿನ ತನಿಖೆ ಸಲುವಾಗಿ ಪಂಚನಾಮೆಯ ಮೂಲಕ ಅಮಾನತು ಪಡಿಸಿಕೊಂಡು  ಮಾಲು, ಪಂಚನಾಮೆ ಹಾಗೂ ಆಸಾಮಿಗಳೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಮೊ.ಸಂಖ್ಯೆ:56/2021 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

ಇತ್ತೀಚಿನ ನವೀಕರಣ​ : 13-05-2021 05:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080