ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.94/2021 ಕಲಂ. 34,324 ಐ.ಪಿ.ಸಿ:-

          ದಿನಾಂಕ: 12/04/2021 ರಂದು ಸಂಜೆ 17-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು 18-15 ಗಂಟೆಗೆ ಆಸ್ಪತ್ರೆಗೆ ಹೋಗಿ ಗಾಯಾಳುವಿನ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ:12/04/2021 ರಂದು ಬೆಳಿಗ್ಗೆ 9-30 ಗಂಟೆಗೆ ಹಬ್ಬದ ಪ್ರಯುಕ್ತ ನಾನು ಮತ್ತು ನನ್ನ ಹೆಂಡತಿಯಾದ ಭಾಗ್ಯಲಕ್ಷ್ಮೀ ರವರು ನಮ್ಮ ಮಾವನಾದ ಚಂದ್ರಪ್ಪ ರವರ ಮನೆಯಾದ ಬಾಗೇಪಲ್ಲಿ ಪುರದ 2ನೇ ವಾರ್ಡ್ ನಲ್ಲಿರುವ  ಮನೆಗೆ ಬಂದಿರುತ್ತೇನೆ,ಈಗ್ಗೆ ಸುಮಾರು 20 ದಿನಗಳ ಹಿಂದೆ ನಮ್ಮ ಮಾವನಾದ ಈಶ್ವರಪ್ಪ ರವರ ಮಗನಾದ ಆನಂದ ಎಂಬುವವರು ಹಂಸಲೇಖ ರವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರವಾಗಿ ನಮ್ಮ ಮಾವ ಚಂದ್ರಪ್ಪ, ಅತ್ತೆ ಮಂಜಮ್ಮ ರವರುಗಳು ಹಾಗೂ ಹಂಸಲೇಖ ರವರ ತಂದೆ ಅಶ್ವತ್ಥಪ್ಪ, ಕಿಟ್ಟ,ನಾರಾಯಣ, ರತ್ನಮ್ಮ, ಶಿವಮ್ಮ ರವರುಗಳು ಜಗಳ ಮಾಡಿಕೊಳ್ಳುತ್ತಿದ್ದು ನಾನು ಅದೇ ಸಮಯಕ್ಕೆ ಯಾಕೆ ಜಗಳ ಮಾಡಿಕೊಳ್ಳಿತ್ತಿದ್ದೀರಿ ಎಂದು ಹೇಳಿದ್ದಕ್ಕೆ ವೆಂಕಟೇಶ್ ಪ್ರಸಾದ್ ಬಿನ್ ಅಶ್ವತ್ಥಪ್ಪ ರವರು ಏಕಾಏಕಿ ನನಗೆ ಯಾವುದೋ ಪೈಪ್ ನಿಂದ ತಲೆಗೆ ಹೊಡೆದಿದ್ದು, ನಂತರ ನಮ್ಮ ಮಾವನಾದ ಈಶ್ವರಪ್ಪ ರವರಿಗೂ ಸಹ ವೆಂಕಟೇಶ್ ಪ್ರಸಾದ್ ರವರು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ನಂತರ ನಾನು ಮತ್ತು ನಮ್ಮ ಮಾವನಾದ ಈಶ್ವರಪ್ಪ ರವರನ್ನು ಚಿಕಿತ್ಸೆಗಾಗಿ ನಮ್ಮ ಸ್ವಂತ ಮಾವನ ತಮ್ಮನಾದ ರಂಗಪ್ಪರವರು ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ನಂತರ ನಾವು ಚಿಕಿತ್ಸೆ ಪಡೆಯುತ್ತಿರುತ್ತೇವೆ. ಆದ್ದರಿಂದ ನನ್ನನ್ನು ನಮ್ಮ ಮಾವನಾದ ಈಶ್ವರಪ್ಪ ರವರನ್ನು ಹೊಡೆದು ರಕ್ತಗಾಯ ಪಡಿಸಿದ ವೆಂಕಟೇಶ ಪ್ರಸಾದ್ ಮತ್ತು ಕಿಟ್ಟಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಮತ್ತು ಸೂಕ್ತ ಬಂದೋಬಸ್ತ್ ಪಡಿಸಲು ಕೋರಿ ನೀಡಿದ ಹೇಳಿಕೆಯಾಗಿರುತ್ತದೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:13-04-2021 ರಂದು ಬೆಳಿಗ್ಗೆ 08-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:08-04-2021 ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ಪಿರ್ಯಾದಿಯ ತಾಯಿ ವೆಂಕಟರವಣಮ್ಮ ರವರು ಸ್ವಂತ ಗ್ರಾಮವಾದ ಗೆರಿಗಿರೆಡ್ಡಿಪಾಳ್ಯ  ಗ್ರಾಮದ ಅಂಗಡಿಯ ಬಳಿ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಗ್ರಾಮದ ಮುಖ್ಯರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದಾಗ KA07B2593 TATA ACE INTRA  ವಾಹನದ ಚಾಲಕ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ ತಮ್ಮ ತಾಯಿ ಸ್ಥಳದಲ್ಲಿಯೇ ಬಿದ್ದು ಎರಡೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ 108 ಆಂಬ್ಯೂಲೆನ್ಸ್ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಆಂದ್ರಪ್ರದೇಶದ  ಮದನಪಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಈ ವಿಚಾರದಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ; 12-04-2021 ರಂದು ರಾತ್ರಿ 9.30 ಗಂಟೆಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೊಟ್ಟ ದಾಳಿ ಪಂಚನಾಮೆ, ಆರೋಪಿತರು, ಮಾಲು, ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ, ದಿನಾಂಕ; 12-04-2021 ರಂದು ಪಿ.ಎಸ್.ಐ ಹೊನ್ನೇಗೌಡ ಆದ ತಾನು, ಮತ್ತು ಡಿ.ವೈ.ಎಸ್.ಪಿ ಶ್ರೀ ಕೆ.ರವಿಶಂಕರ್ ಹಾಗೂ ಸಿಬ್ಬಂದಿಯೊಂದಿಗೆ ನಗರದಲ್ಲಿ ಕೊರೋನಾ ಪ್ರಯುಕ್ತ ಇಲಾಖೆಗೆ ಒದಗಿಸಿರುವ ಜೀಪ್ ಗಳಲ್ಲಿ ಗಸ್ತು ಮಾಡುತ್ತಿದ್ದಾಗ ರಾತ್ರಿ ಸುಮಾರು 7.15 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಬಾತ್ಮಿ ಮೇರೆಗೆ ಚಿಕ್ಕಬಳ್ಳಾಪುರ ನಗರದ ದೊಡ್ಡಬಜನೆಯ ರಸ್ತೆಯ ಮಂಜುನಾಥ ಆಸ್ಪತ್ರೆಯ ಮುಂಭಾಗ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಪಂದ್ಯಗಳ ಜೂಜಾಟ ಆಡುತ್ತಿದ್ದ ಈ ದಿನದ ಪಂದ್ಯಗಳಾದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ 1) ಗಗನ್ ಬಿನ್ ಶ್ರೀನಿವಾಸ, 18 ವರ್ಷ, ವಕ್ಕಲಿಗರು, ಡಿಪ್ಲೊಮೊ, ವಿದ್ಯಾಬ್ಯಾಸ, ವಾಸ: ದೊಡ್ಡಭಜನೆ ಮನೆ ರಸ್ತೆ, ಚಿಕ್ಕಬಳ್ಳಾಪುರ ನಗರ. 2) ಭರತ್ ಬಿನ್ ವಿಜಯ್ ಕುಮಾರ್, 21 ವರ್ಷ, ಬಿಸಿಎ ವಿದ್ಯಾಬ್ಯಾಸ, ವಾಸ: ದೊಡ್ಡಭಜನೆ ಮನೆ ರಸ್ತೆ ಚಿಕ್ಕಬಳ್ಳಾಪುರ ನಗರ ರವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಕಟ್ಟಿದ್ದ 4000/- ರೂಪಾಯಿ ನಗದು ಹಣ, ಮೇಲ್ಕಂಡ ಎರಡು ಮೊಬೈಲ್ ಪೋನ್ ಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಹಾಗೂ ಆರೋಪಿತರು ನಿಕಿಲ್ ಗೌಡ ಎಂಬುವವರ ಐ.ಪಿ.ಎಲ್ ಟಿಪ್ಸ್ ಮತ್ತು ಪ್ರಿಡೆಕ್ಷನ್ ಎಂಬ ವಾಟ್ಸ್ ಆಫ್ ನಲ್ಲಿ ಸದಸ್ಯರಾಗಿದ್ದು, ಆತನಿಗೆ ಕಮಿಷನ್ ಕೊಟ್ಟು ಗೆಲ್ಲುವ ಮ್ಯಾಚ್ ಗಳ ಬಗ್ಗೆ ಟಿಪ್ಸ್ ಪಡೆಯುತ್ತಿದ್ದರು. ಮೇಲ್ಕಂಡ ಆರೋಪಿತರಾದ ಗಗನ್, ಭರತ್ ರವರನ್ನು ಮತ್ತು ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ನಿಕಿಲ್ ಗೌಡ ರವರ ಮೇಲೂ ಸಹ ಕ್ರಮ ಜರುಗಿಸಿ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.151/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ 12-04-2021 ರಂದು ಸಂಜೆ 7-30 ಗಂಟೆಗೆ ಠಾಣೆಯ ಸಿ.ಹೆಚ್.ಸಿ 167 ವಿಜಯ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:12/04/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ಸಿ.ಪಿ.ಸಿ-534 ನಂದೀಶ್ ಕುಮಾರ್ ಮತ್ತು ಸಿಪಿಸಿ-464 ಅರುಣ್ ಕುಮಾರ್ ರವರು ಠಾಣಾ ಸರಹದ್ದಿನ ತಳಗವಾರ, ಟಿ.ಹೊಸಹಳ್ಳಿ, ವೈಜಕೂರು ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5-00 ಗಂಟೆಯ ಸಮಯದಲ್ಲಿ ಮಲ್ಲಿಕಾಪುರ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನರಸಿಂಹಪ್ಪ ಬಿನ್ ವಸಂತಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಮಲ್ಲಿಕಾಪುರ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ವಸಂತಪ್ಪ, 45ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಮಲ್ಲಿಕಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5-15 ರಿಂದ 6-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನರಸಿಂಹಪ್ಪ ಬಿನ್ ವಸಂತಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 

5. ಚಿಂತಾಮಣಿ ಪುರ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ:13/04/2021 ರಂದು ಮದ್ಯಾಹ್ನ 2030 ಗಂಟೆಗೆ ಪಿರ್ಯಾದಿ ಎನ್ ನಾಗೇಶ್ ಬಿನ್ ನಾರಾಯಣಸ್ವಾಮಿ, ವಿನಾಯಕ ನಗರ ಚಿಂತಾಮಣಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ತಾನು ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ತನಗೆ ಒಂದು ಗಂಡು ಮತ್ತು ಹೆಣ್ಣು ಮಗಳಿದ್ದು  ನನ್ನ ದೊಡ್ಡ ಮಗ ಎನ್.ಪುರುಷೋತ್ತಮ್-19 ವರ್ಷ ವಯಸ್ಸಾಗಿದ್ದು, ಚಿಂತಾಮಣಿ ನಗರ ವಿಜೇತ ಕಾಲೇಜಿನಲ್ಲಿ ಪಿ.ಯು.ಸಿ ವಿದ್ಯಾಬ್ಯಾಸ ಮಾಡುತ್ತಿರುತ್ತಾನೆ. ಇತ್ತೀಚೆಗೆ ಕಾಲೇಜು ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದು, ದಿನಾಂಕ:12/04/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ನನ್ನ ಮಗ ಎನ್.ಪುರುಷೋತ್ತಮ್ ತಾನು ಪಾನ್ ಕಾರ್ಡ್ ಮಾಡಿಸಿಕೊಂಡು ಬರುವುದಾಗಿ ನನಗೆ ಹೇಳಿದ್ದು, ಅದರಂತೆ ನಾನು ಮನೆಯ ಬೀರುವಿನಲ್ಲಿ 200 ರೂ ಹಣ ತೆಗೆದುಕೊಂಡು ಹೋಗಿ ಪಾನ್ ಕಾರ್ಡ್  ಮಾಡಿಸಿಕೊಳ್ಳುವಂತೆ ಹೇಳಿದ್ದು, ಅದರಂತೆ ಪಾನ್ ಕಾರ್ಡ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾನು ಸಂಜೆ ಮನೆಯ ಬೀರುವಿನಲ್ಲಿ ನೋಡಲಾಗಿ ನಾನು ತಂದಿಟ್ಟಿದ್ದ ಚೀಟಿ ಹಣ ಒಟ್ಟು 1,50,000 ರೂ ಇರುವುದಿಲ್ಲ. ನಂತರ ನಾನು ನಮ್ಮ ನೆಂಟರಿಸ್ಟರ ಮನೆಗಳಲ್ಲಿ ಸ್ನೇಹಿತರಲ್ಲಿ ನನ್ನ ಮಗನ ಬಗ್ಗೆ ವಿಚಾರಣೆ ಮಾಡಿದ್ದು, ಪತ್ತೆಯಾಗದೇ ಇದ್ದ ಕಾರಣ ಈ ದಿನ ಠಾಣೆಯಲ್ಲಿ ನನ್ನ ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡುತ್ತಿದ್ದು, ನನ್ನ ಮಗ ಉಪಯೋಗಿಸುತ್ತಿದ್ದ ಮೊಬೈಲ್ ಐಇಎಂಐ ಸಂಖ್ಯೆಗಳು:1)8684090444158137. 2)86840904441581 ಆಗಿದ್ದು, ಸದರಿ ಮೊಬೈಲ್ ನಲ್ಲಿ ಸಿಮ್ ನಂ: 1)9632107084, 2)9080684014, ಸಂಖ್ಯೆಗಳು ಆಗಿರುತ್ತೆ. ಆದ್ದರಿಂದ ಕಾಣೆಯಾಗಿರುವ ನನ್ನ ಮಗ ಎನ್.ಪುರುಷೋತ್ತಮ್ ನನ್ನು ಪತ್ತೆ ಮಾಡಿಕೊಡಲು ಕೋರಿದೆ. 

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 323,324,307,504,34 ಐ.ಪಿ.ಸಿ:-

          ದಿನಾಂಕ:12/04/2021 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಪಿರ್ಯಾದಿ ಅಜ್ಮತುಲ್ಲಾ ಬಿನ್ ಟಿ ರಹಮ್ಮತ್ ವುಲ್ಲಾ 39 ವರ್ಷ, ಮುಸ್ಲೀಂ ಜನಾಂಗ, ಹಣ್ಣಿನ ಅಂಗಾಡಿ ವ್ಯಾಪಾರ ವಾಸ:7 ನೇ ವಾರ್ಡ, ಖಾಜೀಪೇಟೆ ಸಂತೆ ಬೀದಿ ರಸ್ತೆ, ಗುಡಿಬಂಡೆ ಟೌನ್ ಮೊ:9663836047 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿರವರಿಗೆ 1 ನೇ ತಾನು 2 ನೇ ಇನಾಯಿತುಲ್ಲಾ 3 ನೇ ಖಲಿಂ ವುಲ್ಲಾ 4 ನೇ ಬರ್ಕತ್ ವುಲ್ಲಾ ಎಂಬ ಮಕ್ಕಳಿದ್ದು ತಮ್ಮ ತಂದೆ ಟಿ ರಹಮ್ಮತ್ ವುಲ್ಲಾ ತಾನು ತಮ್ಮ ತಮ್ಮಂದಿರಾದ ಖಲೀಂ ವುಲ್ಲಾ, ಬರ್ಖತ್ವುಲ್ಲಾ ರವರು ಗುಡಿಬಂಡೆ ಟೌನ್ ಸಾರ್ವಜನಿಕ ಗ್ರಂಥಾಲಯ ಮುಂದೆ ತಲ್ಲುವ ಗಾಡಿಗಳಲ್ಲಿ ಹಣ್ಣು ಅಂಗಡಿಯನ್ನು ಇಟ್ಟಿಕೊಂಡು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು ಈಗಿರುವಾಗ ತಮ್ಮ ತಂದೆಯವರಿಗೆ ಮತ್ತು ಗುಡಿಬಂಡೆ ಟೌನ್ ನ ಸನಾವುಲ್ಲಾ ರವರಿಗೆ ಈ ಮೊದಲೇ ಹಣ ಕಾಸಿನ ವಿಚಾರದಲ್ಲಿ ಗಲಾಟೆಗಳಾಗಿ ಹಳೇಯ ದ್ವೇಷಗಳಿದ್ದು ದಿನಾಂಕ:12/04/2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ತಮ್ಮ ತಂದೆಯವರು ರಾಮಪಟ್ಟನ ರಸ್ತೆಯಲ್ಲಿ ದ್ವಿ ಚಕ್ರವಾಹನದಲ್ಲಿ ಬರುತ್ತಿರುವಾಗ ಹಿಂದೆಗಡೆಯಿಂದ ಸನಾವುಲ್ಲಾ ರವರು ದ್ವಿ ಚಕ್ರವಾಹನದಲ್ಲಿ ಬಂದು ಬೇಕು ಎಂತಲೇ ಹಾರನ್ ಹೊಡೆದು ಗುದ್ದಲು ಬಂದಿದ್ದು ಕೇಳಿದಾಗ ಸನಾವುಲ್ಲಾ ರವರು ಜಗಳ ಮಾಡಿದ್ದು ಈ ವಿಚಾರವನ್ನು ತಮ್ಮ ಬಿಳಿ ಬಂದು ತಿಳಿಸಿದ್ದು ನಂತರ ಇದೇ ದಿನ ಸಂಜೆ 6-15 ಗಂಟೆಯಲ್ಲಿ ತಾನು ತಮ್ಮ ತಂದೆ ತನ್ನ ತಮ್ಮಂದಿರಾದ ಖಲಿಂವುಲ್ಲಾ, ಬರ್ಕತ್ ವುಲ್ಲಾ, ರವರು ಎಸ್,ಬಿ,ಎಮ್ ಎ,ಟಿ,ಎಮ್ ಬಳಿ ಇರುವ ಸನಾವುಲ್ಲಾ ರವರ ತಲ್ಲುವ ಹಣ್ಣಿನ ಅಂಗಡಿಯ ಬಳಿ ಹೋದೆವು ಅಲ್ಲಿ ಸನಾವುಲ್ಲಾ ಅವರ ಅಣ್ಣಂದಿರಾದ ಶಬ್ಬೀರ್ ಮತ್ತು ಶೌಕತ್ ರವರಿದ್ದು ತಾನು ಯಾಕೇ ತಮ್ಮ ತಂದೆಯವರ ಮೇಲೆ ಗಲಾಟೆ ಮಾಡಿದೆ ಎಂದು ಕೇಳಿದಾಗ ಹೋಗು ತೇರಮಾಕಿ ಚೋದು ಎಂದು ಉದರ್ು ಭಾಷೆಯಲ್ಲಿ ಬೈದು ಸನಾವುಲ್ಲಾ ರವರು ತಮ್ಮ ತಂದೆಯವರ ಶಟರ್ು ಹಿಡಿದುಕೊಂಡು ಎಳೆದಾಡಿ ಕೆಳಗೆ ಬಿಳಿಸಿದರು ಅಡ್ಡ ಹೋದ ತನ್ನ ತಮ್ಮ ಖಾಲೀಂ ರವರಿಗೆ ಸನಾವುಲ್ಲಾ ರವರ ಅಣ್ಣ ಶಬ್ಬೀರ್ ರವರು ಕೈಗಳಿಂದ ಮುಖಕ್ಕೆ ಎದೆಗೆ ಹೊಡೆದನು ಶೌಖತ್ ರವರು ತನ್ನ ತಮ್ಮ ಬರ್ಕತ್ ವುಲ್ಲಾ ರವರಿಗೆ ಕಬ್ಬಿಣದ ಚೇರ್ನ್ನು ತೆಗೆದು ಕಾಲಿಗೆ ಎಸೆದು ಎರಡು ಕಾಲುಗಳ ಮೊಣಕಾಲಿನ ಕೆಳಗೆ ತರಚಿದ ಗಾಯಪಡಿಸಿದ್ದು ಬಿಡಿಸಲು ಅಡ್ಡ ಹೋದ ತನಗೆ ಸನಾವುಲ್ಲಾ ರವರು ಹಾರೇ ಮೇರಾ ಬೆಟಾ ಎಂದು ನಿನ್ನನ್ನು ಸಾಯಿಸುವವರೆಗೂ ಬಿಡುವುದಿಲ್ಲ ಎಂತ ಹೇಳಿ ಕೊಲೆ ಮಾಡುವ ಉದ್ದೇಶದಿಂದ ಚಾಕು ಹಿಡಿದುಕೊಂಡು ಬಂದು ತನಗೆ ಚಾಕುವಿನಲ್ಲಿ ಹಾಕಲು ಬಂದನು ಆಗ ತಾನು ಕೈ ಅಡ್ಡ ಇಟ್ಟಾಗ ಎಡ ಕೈನ ಮುಂಗೈ ಮತ್ತು ಮೊಣಕೈ ಮದ್ಯೆ ತಗುಲಿ ರಕ್ತಗಾಯವಾಯಿತು ಆಗ ಅಲ್ಲಿದ್ದ ನಮ್ಮ ಗುಡಿಬಂಡೆ ಟೌನ್ ನ ಜಬೀ ವುಲ್ಲಾ ಬಿನ್ ಅಲ್ಲಾಬಕಾಶ್ ರವರು ಜಗಳ ಬಿಡಿಸಿದರು ನಮ್ಮ ತಮ್ಮ ಬರ್ಖತ್ ರವರು ಬಂದು ನನ್ನನ್ನು ಚಿಕಿತ್ಸೆಗಾಗಿ ಗುಡಿಬಂಡೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು ತಾನು ಚಿಕಿತ್ಸೆ ಪಡೆದುಕೊಂಡು ಬಂದು ಠಾಣೆಯಲ್ಲಿ ದೂರು ನೀಡುತ್ತಿದ್ದು ತಮ್ಮ ಮೇಲೆ ಜಗಳ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಹಲ್ಲೆ ಮಾಡಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.67/2021 ಕಲಂ. 34,504,307,323,324 ಐ.ಪಿ.ಸಿ:-

          ದಿನಾಂಕ 12/04/2021 ರಂದು ರಾತ್ರಿ 9-45 ಗಂಟೆಗೆ ಪಿರ್ಯಾಧಿ ಶೌಕತ್ .ಎಸ್. ಬಿನ್ ಅಜಮತುಲ್ಲಾ  43 ವರ್ಷ, ಮುಸ್ಲಿಂ ಜನಾಂಗ     ಹಣ್ಣಿನ ವ್ಯಾಪಾರ,  8ನೇ ವಾರ್ಡ್ ಕುಂಬಾರಪೇಟೆ ಗುಡಿಬಂಡೆ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ಮುದ್ರಿತ ದೂರಿನ ಸಾರಾಂಶವೇನೆಂದರೆ,, ದಿನಾಂಕ 12/04/2021 ರಂದು ಸಂಜೆ ಸುಮಾರು 6-15 ಗಂಟೆಯ ಸಮಯದಲ್ಲಿ ತಾನು ಮಸೀದಿಯಿಂದ ತಾಲ್ಲೂಕು ಆಪೀಸ್ ಹತ್ತಿರ ಇರುವ ತನ್ನ ಅಂಗಡಿಗೆ ಬರಲು ತಾಲ್ಲೂಕು ಆಫೀಸ್ ಹತ್ತಿರ ಇರುವ ನಂದಿನಿ ಹಾಲಿನ ಭೂತ್ ಹತ್ತಿರ ಬರುತ್ತಿದ್ದಾಗ ಅಲ್ಲಿ ತನ್ನ ತಮ್ಮಂದಿರಾದ ಶಬ್ಬೀರ್ ಬಿನ್ ಅಜಮತುಲ್ಲಾ ಮತ್ತು ಸನಾವುಲ್ಲಾ ಬಿನ್ ಅಜಮತುಲ್ಲಾ ರವರುಗಳಿಗೆ 7ನೇ ವಾರ್ಡ್ನ ಬಾಪೂಜಿ ನಗರ ವಾಸಿಗಳಾದ ಟಿ. ರಹಮತುಲ್ಲಾ ಬಿನ್ ನವಾಬ್ ಸಾಬ್, ಕಲೀಂವುಲ್ಲಾ ಬಿನ್ ಟಿ. ರಹಮತುಲ್ಲಾ ಮತ್ತು ಬರ್ಕಾತ್  ಬಿನ್ ಟಿ. ರಹಮತುಲ್ಲಾ, ಹಾಗೂ ಅಜಮಾತುಲ್ಲಾ ಬಿನ್ ಟಿ. ರಹಮತುಲ್ಲಾ ರವರುಗಳು ಸೇರಿಕೊಂಡು ತನ್ನ ಇಬ್ಬರು ತಮ್ಮಂದಿರುಗೆ ಕಟ್ಟಿಗೆಯಿಂದ ಮತ್ತು ಕೈಗಳಿಂದ ಹೊಡೆಯುತ್ತಿದ್ದು, ಆಗ ತಾನು ಬಿಡಿಸಲು ಹೋದಾಗ ತನಗೆ ಟಿ. ರಹಮತುಲ್ಲಾ ಬಿನ್ ನವಾಬ್ ಸಾಬ್ ರವರು  ನೀಯಮ್ಮ ನಾಕೊಡುಕಾಲಾ ಅಂಗಡಿತಕಿ ಉಂಡು ಏಸಾಸ್ತನು ಎಂತ ತೆಲುಗಿನಲ್ಲಿ ಬೈದು ಇವನು ಮತ್ತು ಕಲೀಂವುಲ್ಲಾ ಬಿನ್ ಟಿ. ರಹಮತುಲ್ಲಾ ರವರು ತನಗೆ ಕೈಗಳಿಂದ ತಳ್ಳಿದರು ಆಗ ತಾನು ಕೆಳಗೆ ಬಿದ್ದಾಗ ಬರ್ಕಾತ್ ತನಗೆ ಬೋಳಿನನ್ನ ಮಗನೇ ನೀನು ಅಡ್ಡ ಬರುತ್ತೀಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂತ ಹೇಳಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ತನ್ನ ಹಟ್ಟೆಗೆ ತಿವಿಯಲು ಬಂದಿದ್ದು, ಆಗ ತಾನು ತಪ್ಪಿಸಿಕೊಂಡಾಗ ಸದರಿ ಏಟು ತನ್ನ ಬಲಕಾಲು ಪಾದದ ಮೇಲೆ ಬಿದ್ದು ತರಚಿದ ಗಾಯವಾಯಿತು. ಆಗ ಅಲ್ಲಿದ್ದ ತಮ್ಮ ಗ್ರಾಮದ ವೆಂಕಟೇಶ ಬಿನ್ ರಾಮಪ್ಪ, ಗಂಗಪ್ಪ ರವರು ಜಗಳವನ್ನು ಬಿಡಿಸಿದರು. ವಿಚಾರಣೆ ಮಾಡಲಾಗಿ ಇದೇ ದಿನ ದಿನಾಂಕ 12/04/2021 ರಂದು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ ಬಾಪೂಜಿ ನಗರದ ಬಳಿ ಟಿ. ರಹಮತುಲ್ಲಾ ರವರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಇವರ ಹಿಂದೆ ಹೋದ ತನ್ನ ತಮ್ಮ ಸನಾವುಲ್ಲಾ ರವರು ಆರನ್ ಮಾಡಿದಾಗ ಟಿ. ರಹಮತುಲ್ಲಾ ರವರು ಏನೋ ಆರನ್ ಮಾಡುತ್ತೀಯಾ ನಿನಗೆ ಒಂದು ಗತಿ ಕಾಣಿಸುತ್ತೇನೆ ಬಾ ಎಂದು ಹೇಳಿ ಬಂದು ಗಲಾಟೆ ಮಾಡಿರುವ ವಿಚಾರ ತಿಳಿಯಿತು. ಇದಕ್ಕೂ ಮೊದಲು ತಾನು ತಮ್ಮ ಬಾಳೆ ಮಂಡಿಯಿಂದ ಟಿ. ರಹಮತುಲ್ಲಾ ಸಾಲ ತೆಗೆದುಕೊಂಡಿದ್ದನು, ಈ ಸಾಲದ ಹಣವನ್ನು ಕೇಳಿದರೂ ಸಹ ವಾಪಸ್ಸು ಕೊಟ್ಟಿರಲಿಲ್ಲ. ಇದನ್ನು ಸಹ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ. ಗಾಯಾಳು ಆದ ನಾನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ತನ್ನ ತಮ್ಮಂದಿರು ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಪಡೆದುಕೊಂಡು ಬಂದು ಠಾಣೆಯಲ್ಲಿ ದೂರು ನೀಡುತ್ತಿದ್ದು ತಮ್ಮ ಮೇಲೆ ಜಗಳ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಹಲ್ಲೆ ಮಾಡಿದ ಮೇಲ್ಕಂಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡಿರುತ್ತೆ.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 143,147,148,323,324,447,504,506,149 ಐ.ಪಿ.ಸಿ:-

          ದಿನಾಂಕ.12-04-2021 ರಂದು ಮದ್ಯಾಹ್ನ 14-15 ಗಂಟೆಗೆ ಪಿರ್ಯಾದುದಾರರು  ಠಾಣೆಗೆ ಹಾಜರಾಗಿ ನೀಡಿದ ಕಂಫ್ಯೂಟರ್ ಮುದ್ರಿತ  ದೂರಿನ ಸಾರಾಂಶವೇನೆಂದರೆ  ಪಿರ್ಯಾದಿದಾರರ ಬಾಬತ್ತು ಸರ್ವೆ ನಂ 88/2 ರಲ್ಲಿ 4 ಎಕರೆ ಜಮೀನಿದ್ದು  ಸದರಿ ಜಮೀನಿನ ಉತ್ತರದ  ಬದಿಯಲ್ಲಿ ಈ ಕೇಸಿನ ಆರೋಫಿತರ ಜಮೀನಿರುತ್ತದೆ.ಜಮೀನಿನ ವಿಚಾರದಲ್ಲಿ ಪಿರ್ಯಾದಿದಾರರಿಗೂ ಮತ್ತು ಆರೋಪಿತರಿಗೂ ತಕರಾರುಗಳಿದ್ದು ಸದರಿ ಜಮೀನಿನ ವಿಚಾರದಲ್ಲಿ ಓಎಸ್ ನಂ 232/2018 ರೀತ್ಯಾ  ತಡೆಯಾಜ್ಞೆ ಇರುತ್ತದೆ,  ಈ ವಿಚಾರದಲ್ಲಿ  ಈ ದಿನ ದಿನಾಂಕ,8-30 ಗಂಟೆಯ ಸಮಯದಲ್ಲಿ  ಆರೋಪಿತರಾದ 1) ದೊಡ್ಡನರಸಿಂಹಯ್ಯ 2) ಅಕ್ಕಮ್ಮ ಕೊಂ ದೊಡ್ಡನರಸಿಂಹಯ್ಯ  3) ಗಂಗರಾಜು ಬಿನ್ ದೊಡ್ಡನರಸಿಂಹಯ್ಯ 4) ನರಸಮ್ಮ ಕೋಮ ಗಂಗರಾಜು  5) ವೆಂಕಟೇಶ್ ಬಿನ್ ಜಾಲಾರಪ್ಪ 6) ಗಿರೀಶ್ ಬಿನ್ ಜಾಲಾರಪ್ಪ  7) ಶೈಲಜಾಕೊಂ ಗಿರೀಶ್ 8) ನಾಗರಾಜು ಬಿನ್ ನರಸಪ್ಪ 9) ವೇಣುಗೋಪಾಲ್ ಬಿನ್ ನರಸಪ್ಪ 10) ಮಹೇಶ್ ಬಿನ್ ಮುನಿಯಪ್ಪ 11) ಮುನಿಯಮ್ಮ ಕೋಂ ಮುನಿಯಪ್ಪ 12) ಮಲ್ಲಪ್ಪ ಕೊಂ ಚಿನ್ನಪ್ಪ 13) ನಾಗರತ್ನ ಕೊಂ ವೆಂಕಟಪ್ಪ 14) ನಾಗರಾಜು  ಬಿನ್ ವೆಂಕಟಪ್ಪ  ರವರು ಅಕ್ರಮವಾಗು ಗುಂಪನ್ನು ಕಟ್ಟುಕೊಂಡು ಬಂದು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಜಮೀನಿನೋಳಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಡ್ರಿಪ್ ಪೈಪುಗಳನ್ನು ದ್ರಾಕ್ಷಿ ಬುಡಗಳನ್ನು ಹೂವಿನ ಗಿಡಗಳನ್ನು  ಹಾಗೂ ಹುಲ್ಲಿನ ಬುಡಗಳನ್ನು  ನಾಶಪಡಿಸಿ ನಮ್ಮ ಜಮೀನಿನಲ್ಲಿ ಹಾಕಿದ್ದ ಮಣ್ಣನ್ನು ತೆಗದು ಅವರ ಜಮೀನಿನೊಳಗೆ ಹಾಕಿಕೊಂಡು ಸೌದೆಗಳನ್ನು ರಸ್ತೆಗೆ ಹಾಕುತ್ತಿದ್ದಾಗ  ತಾನು ತನ್ನ ತಾಯಿ ತಂಗಿ  ಸೋನಿಯಾ ರವರ ಕೂದಲನ್ನು ಹಿಡಿದುಕೊಂಡು ಎಳೇದಾಡಿ ಕಾಲಿನಿಂದ ಒದ್ದು ನಮ್ಮ ಮೇಲೆ ಎಕಾ ಎಕಿ ದೊಣ್ಣೆಗಳಿಂದ ಹೊಡೆದು ಕಲ್ಲುಗಳನ್ನು ಎಸೆದು ಗಾಯಪಡಿಸಿ ನಮ್ಮ ಮೇಲೆ ಮಾರಣಾಂತಿಕವಾಗಿ ಗಾಯಗೊಳಿಸರುತ್ತಾರೆ, ಅವಾಚ್ಯವಾಗಿ ನಿಂದಿಸುತ್ತಾ, ನಿವೇನಾದರೂ ಜಮೀನಿನ ಬಳಿ ಬಂದು ಮಾತನಾಡಿದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ಇವರ ವಿರುದ್ದ ಕಾನೂನು ರೀತಿಯ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 143,147,323,324,427,447,504,506,34 ಐ.ಪಿ.ಸಿ:-

          ದಿನಾಂಕ:12/04/2021 ರಂದು ಮದ್ಯಾಹ್ನ 2:00 ಗಂಟೆಗೆ ಆಸ್ಪತ್ರೆಯಲ್ಲಿ ಗಾಯಾಳು ಮೇಮೋವನ್ನು ಹೆಚ್,ಸಿ-133 ರವರು ಪಡೆದು ಗಾಯಾಳುವಾದ ನಾಗರಾಜ ಎನ್ ಬಿನ್ ನರಸಪ್ಪ, 27 ವರ್ಷ, ಪ.ಜಾತಿ, ಡ್ರೈವರ್ ಕೆಲಸ, ಕೊತ್ತನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 3:00 ಗಂಟೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ಕೊತ್ತನೂರು ಗ್ರಾಮದ ಸರ್ವೆ ನಂ:71/ 10 ನೇ ಬ್ಲಾಕ್ ರಲ್ಲಿ ಒಂದು ಎಕರೆ ಜಮೀನು ಇದ್ದು ಸುಮಾರು 50 ವರ್ಷಗಳಿಂದ ಅನುಭೋಗದಲ್ಲಿರಯತ್ತೇವೆ ಹಾಗೂ ಇದಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳು ತಮ್ಮ ಹೆಸರಿನಲ್ಲಿರುತ್ತವೆ. ಈಗಿರುವಾಗ ನಿನ್ನೆ ದಿನ ದಿನಾಂಕ:11/04/2021 ರಂದು ರಾತ್ರಿ ಸಮಯದಲ್ಲಿ ತಮ್ಮ ಪಕ್ಕದ ಜಮೀನುವರಾದ ಮುನಿಯಪ್ಪ ಬಿನ್ ಲೇಟ್ ಗ್ಯಾಂಗ್ ಮುನಿಯಪ್ಪ ಎಂಬುವರು ತಮ್ಮ ಜಮೀನಿನ ಬದುವಿಗೆ ಹೊಂದಿಕೊಂಡಂತೆ ಈ ಹಿಂದೆ ಅವರ ಜಮೀನಿನಲ್ಲಿ ಕಾಂಕ್ರಿಟ್ ರಸ್ತೆ ಮಾಡಿಸಿದ್ದು ಅದೇ ರಸ್ತೆ ಮೇಲೆ ನಿನ್ನೆ ರಾತ್ರಿ ಮಣ್ಣು ಹೊಡೆಸಿ ಸದರಿ ಮಣ್ಣ ನಮ್ಮ ಜಮೀನಿನೊಳಗೆ ತಳ್ಳಿ ಅಕ್ರಮವಾಗಿ ಇತ್ತುವರಿ ಮಾಡಿಕೊಂಡು ರಸ್ತೆಯನ್ನು ತಮ್ಮ ಜಮೀನಿನೊಳಗೆ ಅಗಲ ಮಾಡುತ್ತಾ ಒತ್ತುವರಿ ಮಾಡಿಕೊಂಡಿರುತ್ತಾರೆ. ಈ ವಿಚಾರವಾಗಿ ಈ ದಿನ ಬೆಳಿಗ್ಗೆ ಸುಮಾರು 10:00 ಗಂಟೆ ಸಮಯದಲ್ಲಿ ತಾನು ತಮ್ಮ ತಂದೆ ನರಸಪ್ಪ, ತಮ್ಮ ದೊಡ್ಡಪ್ಪನ ಮಗ ಗಿರೀಶ್, ಗಂಗರಾಜು, ನರಸಮ್ಮ ಕೋಂ ಗಂಗರಾಜು ರವರುಗಳು ಸೇರಿಕೊಂಡು ತಮ್ಮ ಜಮೀನಿನೊಳಗೆ ಅಕ್ರಮವಾಗಿ ಹಾಕಿದ್ದ ಮಣ್ಣನ್ನು ತೆಗೆದು ರಸ್ತೆಯ ಮೇಲೆ ಹಾಕುತ್ತಿದ್ದಾಗ ಪಕ್ಕದ ಜಮೀನಿನವರಾದ ಮುನಿಯಪ್ಪ ರವರ ಮಗ ರಾಘವೇಂದ್ರ, ಮುನಿಯಪ್ಪ ರವರ ಹೆಂಡತಿ ನಾಗಲಕ್ಷ್ಮಿ, ಮಕ್ಕಳು ರಂಜಿತಾ ಮತ್ತು ಸೋನಿ ಹಾಗೂ ಇತರರು ಬಂದು ಏಕೆ ನಮ್ಮ ಜಮೀನಿನಲ್ಲಿರುವ ಮಣ್ಣನ್ನು ಎತ್ತಿಹಾಕುತ್ತಿದ್ದಿರಾ ನಮ್ಮ ಜಮೀನು ಎಲ್ಲಿಯವರಿಗೆ ಇದೆಯೋ ಅಲ್ಲಿಯವರಿಗೆ ನಾವು ಮಣ್ಣನ್ನು ಹಾಕಿದ್ದೇವೆ ಎಂದು ತಮ್ಮ ಮೇಲೆ ಗಲಾಟೆ ಮಾಡತೋಡಗಿದರು. ಅಷ್ಟರಲ್ಲಿ ಮುನಿಯಪ್ಪನ ಮಗ ರಾಘವೇಂದ್ರ ತನ್ನ ಬಳಿ ಬಂದು ಕುತ್ತಿಗೆ ಹಿಡಿದುಕೊಂಡು ಬಲಗೈನಿಂದ ತನ್ನ ಎಡ ಭಾಗದ ಹಣೆಗೆ ಗುದ್ದಿ ಮೂಗೇಟು ಮಾಡಿರುತ್ತಾನೆ. ಪಕ್ಕದಲ್ಲಿದ್ದ ಮುನಿಯಪ್ಪನ ಹೆಂಡತಿ ನಾಗಲಕ್ಷ್ಮಮ್ಮ, ಮಗಳು ಸೋನು ಮತ್ತು ರಂಜಿತಾ ರವರುಗಳು ಸೇರಿಕೊಂಡು ತಮ್ಮ ಅತ್ತಿಗೆ ನರಸಮ್ಮ ರವರನ್ನು ಕೆಳಗೆ ಬಿಳಿಸಿಕೊಂಡು ಕೈಗಳಿಂದ ಹೊಡೆದು ಮೈಕೈ ಕಾಲುಗಳಿಗೆ ಮತ್ತು ಮುಖಕ್ಕೆ ಕಾಲಿನಿಂದ ಒದ್ದಿರುತ್ತಾರೆ. ನಂತರ ಈ ಎಲ್ಲರು ಸೇರಿಕೊಂಡು ತಮ್ಮಿಬ್ಬರನ್ನು ತಳ್ಳಾಡಿ ಕೈಕಾಲುಗಳಿಂದ ಹೊಡೆದು, ಒದ್ದು ಮಣ್ಣು ಪೆಂಟೆಯಿಂದ ಹೊಡೆದು ತರಚಿದ ಗಾಯಗಳನ್ನು ಉಂಟು ಮಾಡಿ ರಸ್ತೆಯೂ ನಮ್ಮದೇ ಅದರ ಪಕ್ಕದಲ್ಲಿರೋ ಜಮೀನು ನಮ್ಮದೇ ಇದರ ವಿಚಾರಕ್ಕೆ ಬಂದರೆ ಈ ನನ್ನ ಮಕ್ಕಳನ್ನು ಸಾಯಿಸಿಬಿಡುತ್ತೇವೆಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ಗಿರೀಶ್, ಗಂಗರಾಜ, ನರಸಪ್ಪ ಮತ್ತು ಮಹೇಶ ರವರುಗಳು ಸೇರಿಕೊಂಡು ಗಲಾಟೆ ಬಿಡಿಸಿರುತ್ತಾರೆ. ಮೇಲ್ಕಂಡ ಎಲ್ಲರು ತಮ್ಮ ಗ್ರಾಮದವರೇ ಆಗಿದ್ದು ತಮ್ಮ ಜನಾಂಗದವರೇ ಆಗಿರುತ್ತಾರೆ. ತಮ್ಮ ಜಮೀನಿಗೆ ಅಕ್ರಮವಾಗಿ ಮಣ್ಣು ಹೊಡೆಸಿ ಆ ಮಣ್ಣನ್ನು ತಾವು ಎತ್ತಿ ಹಾಕಿದ್ದಕ್ಕೆ ತಮ್ಮ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ, ಕೈ, ಕಾಲುಗಳಿಂದ ಮಣ್ಣು ಪೆಂಟೆಗಳಿಂದ ಹೊಡೆದು ತಮಗೆ ಗಾಯಪಡಿಸಿರುವ ರಾಘವೇಂದ್ರ, ನಾಗಲಕ್ಷ್ಮಿ, ರಂಜಿತಾ ಮತ್ತು ಸೋನು ಹಾಗೂ ಇತರರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆಯ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 13-03-2021 ರಂದು  14:00 ಗಂಟೆಗೆ ಪಿಎಸ್.ಐ ರವರಾದ ಶ್ರೀ ಸುನೀಲ್ ಕುಮಾರ್ ರವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದ 7 ಜನ ಅಸಾಮಿಗಳನ್ನು, ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ಅಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:13/04/2021 ರಂದು ಮದ್ಯಾಹ್ನ ಸಮಯದಲ್ಲಿ ಠಾಣೆಯ ಸಿಬ್ಬಂದಿಯಾದ ಎ.ಎಸ್.ಐ ಗೋಪಾಲ, ಹೆಚ್.ಸಿ-118 ಪೆಂಚಲಪ್ಪ, ಹೆಚ್.ಸಿ-133 ಪುರುಷೋತ್ತಮ, ಹೆಚ್.ಸಿ-230 ಕೆ.ಪಿ ನಾಗರಾಜ, ಪಿಸಿ-06 ರಾಮಕೃಷ್ಣ, ಪಿಸಿ-207 ನವೀನ್ ಕುಮಾರ್, ಪಿಸಿ-550 ನಾಗಾಜರ್ುನ, ಜೀಪ್ ಚಾಲಕ ಪಾರುಕ್ ರವರೊಂದಿಗೆ ಕೆ.ಎ-40 ಜಿ-1555 ಬೊಲೆರೋ ಜೀಪ್ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಕುಪ್ಪಹಳ್ಳಿ ಗ್ರಾಮದ ಕಡೆ ಮಾಡುತ್ತಿದ್ದಾಗ ಮದ್ಯಾಹ್ನ 12:15 ಗಂಟೆಗೆ ಬಾತ್ಮಿದಾರರಿಂದ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ, ನಂದಿ ಗ್ರಾಮದ ಸಕರ್ಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಅಪ್ಪೋಜಪ್ಪ ರವರ ಜಮೀನಿನಲ್ಲಿರುವ ಹೊಂಗೆ ಮರದ ಕೆಳಭಾಗದಲ್ಲಿ ಯಾರೋ ಅಸಾಮಿಗಳು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ಸದರಿ ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲು ಕುಪ್ಪಹಳ್ಳಿ ಗ್ರಾಮದಲ್ಲಿ ಮದ್ಯಾಹ್ನ 12:20 ಗಂಟೆಗೆ ಪಂಚರನ್ನು ಬರಮಾಡಿಕೊಂಡು ಅವರಿಗೆ ಈ ಮೇಲ್ಕಂಡ ವಿಚಾರ ತಿಳಿಸಿ ಅಂದರ್-ಬಾಹರ್ ಇಸ್ಫೀಟ್ ಜೂಜಾಟದ ಮೇಲೆ ದಾಳಿ ಮಾಡಲು ನಮ್ಮೊಂದಿಗೆ ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರು ಪಂಚರಾಗಲು ಒಪ್ಪಿದ್ದು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಮದ್ಯಾಹ್ನ 12:35 ಗಂಟೆಗೆ ಹೋಗಿ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮೊರೆಯಲ್ಲಿ ನಿಂತು ನೋಡಲಾಗಿ ಸುಮಾರು ಜನರು ಗುಂಪಾಗಿ ಕುಳಿತುಕೊಂಡು ಕೆಲವರು ಅಂದರ್ಗೆ 100/-ರೂ ಗಳೆಂದು, ಇನ್ನೂ ಕೆಲವರು ಬಾಹರ್ 100/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಒಮ್ಮಲೇ ದಾಳಿ ಮಾಡಿ ಮೇಲೆಕ್ಕೆ ಏಳದಂತೆ ಸೂಚನೆ ನೀಡಿದಾಗ ಇಸ್ಪಿಟ್ ಜೂಜಾಟವಾಡುತ್ತಿದ್ದ ಜನರು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದು ಅವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಸಾದೀಕ್ ಬಿನ್ ಮೆಹಬೂಬ್, 37 ವರ್ಷ, ಮುಸ್ಲಿಂ ಜನಾಂಗ, ಪೈಂಟ್ ಕೆಲಸ, ವಾಸ: ನಂದಿ ಗ್ರಾಮ, 2) ಮಧು ಬಿನ್ ಲೇಟ್ ಕೃಷ್ಣಪ್ಪ, 34 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ: ನಂದಿ ಗ್ರಾಮ, 3) ಮುನಿನಾರಾಯಣಪ್ಪ ಬಿನ್ ಲೇಟ್ ರಾಮಯ್ಯ, 64 ವರ್ಷ, ಒಕ್ಕಲಿಗರು, ಡ್ರೈವರ್ ಕೆಲಸ, ವಾಸ: ನಂದಿ ಗ್ರಾಮ, 4) ಅಶೋಕ ಬಿನ್ ಲೇಟ್ ವೆಂಕಟೇಶ, 28 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ನಂದಿ ಗ್ರಾಮ, 5) ಗೋವಿಂದ ಬಿನ್ ಲೇಟ್ ನಾರಾಯಣಪ್ಪ, 48 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ: ನಂದಿ ಗ್ರಾಮ, 6) ಸೈಯದ್ ಜಂಗೀರ್ ಬಿನ್ ರೆಹಮಾನ್, 40 ವರ್ಷ, ಆಟೋ ಚಾಲಕ, ವಾಸ: ನಂದಿ ಗ್ರಾಮ, 7) ಶ್ರೀಕಾಂತ ಬಿನ್ ಶ್ರೀನಿವಾಸರೆಡ್ಡಿ, 25 ವರ್ಷ, ಒಕ್ಕಲಿಗರು, ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಕೆಲಸ, ವಾಸ: ಬಸವಾಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ. ಜೂಜಾಟದ ಸ್ಥಳದಲ್ಲಿ ಇಸ್ಪೀಟ್ ಎಲೆಗಳು ಮತ್ತು ಹಣವು ಪ್ಲಾಸ್ಟಿಕ್ ಚೀಲದ ಮೇಲೆ ಇದ್ದು, ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ಜೊಡಿಸಿ ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಮತ್ತು 6300/- ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 6300/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 12:40 ಗಂಟೆಯಿಂದ ಮದ್ಯಾಹ್ನ 13:40 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 14:00 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ-12.04.2021 ರಂದು ಬೆಳಿಗ್ಗೆ 11-00 ಗಂಟೆಗೆ ಹೆಚ್.ಸಿ 97 ರವರು ಆರೋಪಿ ಮತ್ತು ಮಾಲನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12/04/2021 ರಂದು ಬೆಳಗಿನ ಹಾಜರಾತಿಯಲ್ಲಿ ಹೆಚ್.ಸಿ.97 ಸುಬ್ರಮಣಿ ರವರಿಗೆ ಶಿಡ್ಲಘಟ್ಟ ನಗರದಲ್ಲಿ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದೇಶದಂತೆ ನಾನು ಪಿ.ಸಿ.278 ರವರೊಂದಿಗೆ ಬೆಳಿಗ್ಗೆ 09-00 ಗಂಟೆಯಲ್ಲಿ ಅಶೋಕ ರಸ್ತೆ ಮತ್ತು ಟಿ.ಬಿ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಸಂತೆ ಬೀದಿಯಲ್ಲಿರುವ ಚಿಲ್ಲರೆ ಅಂಗಡಿಯ ಬಳಿ  ನಾರಾಯಣ್ ಸಿಂಗ್ ಬಿನ್ ಲೇಟ್ ರಾಮ್ ಸಿಂಗ್ ಎಂಬುವರು ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 09-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಈತನ ಹೆಸರು ವಿಳಾಸ ಕೇಳಲಾಗಿ ನಾರಾಯಣ್ ಸಿಂಗ್ ಬಿನ್ ಲೇಟ್ ರಾಮ್ ಸಿಂಗ್, 50 ವರ್ಷ, ರಜಪೂತರು, ಚಿಲ್ಲರೆ ಅಂಗಡಿ ವ್ಯಾಪಾರ, ಸಂತೆ ಬೀದಿ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ಇವರು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು, ಸದರಿ ಬ್ಯಾಗಿನಲ್ಲಿ ಪರಿಶೀಲಿಸಲಾಗಿ Original Choice 90 ML 5 ಮದ್ಯದ ಪಾಕೆಟ್ ಗಳಿದ್ದು, ಒಂದರ ಬೆಲೆ 35.13 ರೂಗಳಾಗಿದ್ದು, 05 ರ ಬೆಲೆ ಒಟ್ಟು 175-65 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ 2 ಖಾಲಿ Original Choice 90 ML ನ 2 ಮದ್ಯದ ಪಾಕೆಟ್ ಗಳಿರುತ್ತೆ. ಹಾಗೂ 2 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳು ಇರುತ್ತೆ. ಇವುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಮಹಜರ್ ಮಾಡಿ ಮುಂದಿನ ತನಿಖೆ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಅಮಾನತ್ತು ಪಡಿಸಿದ ಮಾಲುಗಳು ಮತ್ತು ನಾರಾಯಣ್ ಸಿಂಗ್ ರವರನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸುತ್ತಿದ್ದು, ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ನಾರಾಯಣ್ ಸಿಂಗ್ ಬಿನ್ ಲೇಟ್ ರಾಮ್ ಸಿಂಗ್, ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ-12.04.2014 ರಂದು ಸಂಜೆ 5-00 ಗಂಟೆಗೆ ಎ.ಎಸ್.ಐ ಕೃಷ್ಣಪ್ಪ ಪಿವಿ ರವರು ಠಾಣೆಗೆ ಹಾಜರಾಗಿ ದಿನಾಂಕ:12/04/2021 ರಂದು ಮಧ್ಯಾಹ್ನ 03-30 ಗಂಟೆಯಲ್ಲಿ ನಾನು ಪಿಎಸ್ಐ ರವರ ಆದೇಶದಂತೆ ಸಿಬ್ಬಂದಿಯವರಾದ ವೆಂಕಟೇಶ್ ಪಿ.ಸಿ.126 ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಚಿಂತಾಮಣಿ ರಸ್ತೆಯ ಅಪ್ಪಿ ಪೆಟ್ರೋಲ್ ಬಂಕ್ ಮುಂಭಾಗದ ಖಾಲಿ ಜಾಗದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 3-45 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ 4 ಜನರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಈತನ ಹೆಸರು ವಿಳಾಸ ಕೇಳಲಾಗಿ ರಾಮಾಂಜಿ ಬಿನ್ ಕೃಷ್ಣಪ್ಪ, 35 ವರ್ಷ, ನಾಯಕರು, ಕೂಲಿ ಕೆಲಸ, ವಾಸ- ಎ.ಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಇವರು ಒಂದು ಬ್ಯಾಗ್ ನಲ್ಲಿ ಮದ್ಯದ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು, ಬ್ಯಾಗ್ ನಲ್ಲಿ ಪರಿಶೀಲಿಸಲಾಗಿ ಔಡಿರಟಿಚಿಟ ಅಠಛಿಜ 90 ಒಐ ನ 12 ಮದ್ಯದ ಪಾಕೆಟ್ ಗಳಿದ್ದು, ಒಂದರ ಬೆಲೆ 35.13 ರೂ ಗಳಾಗಿದ್ದು, 12 ರ ಬೆಲೆ ಒಟ್ಟು 422-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ಔಡಿರಟಿಚಿಟ ಅಠಛಿಜ 90 ಒಐ ನ 04 ಖಾಲಿ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 4 ಪ್ಲಾಸ್ಟೀಕ್ ಗ್ಲಾಸ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ರಾಮಾಂಜಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 13-04-2021 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080