ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 104/2021 ಕಲಂ. 279,337 ಐಪಿಸಿ :-

  ದಿನಾಂಕ: 12/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಮಸ್ವಾಮಿ ಬಿನ್ ಲೇಟ್ ನಂಜುಂಡಪ್ಪ, 70 ವರ್ಷ, ನಾಮದಾರಿ ನಗರ್ತಕ ಜನಾಂಗ, ಜಿರಾಯ್ತಿ, ಟಿ.ವಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳೀಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 12/03/2021 ರಂದು ತಾನು ತನ್ನ ಬಾಬತ್ತು KA-07 L-6654 ನೊಂದಣಿ ಸಂಖ್ಯೆಯ TVS XL ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಕೈವಾರ ಕ್ರಾಸ್ ಗೆ ಬಂದು ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಸ್ ಹೋಗಲು ಇದೇ ದಿನ ಮದ್ಯಾಹ್ನ 3.10 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಕೈವಾರ ಕ್ರಾಸ್-ತಳಗವಾರ ಮಾರ್ಗ ಮದ್ಯೆ ಇರುವ ಒಂದು ವೆಲ್ಡಿಂಗ್ ಶಾಪ್ ಮುಂಭಾಗ ರಸ್ತೆಯಲ್ಲಿ ಹೋಗುತ್ತಿದ್ದಾಗ ತನ್ನ ಹಿಂದುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತಾನು ಮತ್ತು ತನಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ಸವಾರನು ರಸ್ತೆಯ ಮೇಲೆ ಬಿದ್ದು ಹೋಗಿದ್ದರಿಂದ ತನ್ನ ಎಡಬುಜಕ್ಕೆ ಮೂಗೇಟಾಗಿ, ಎಡ ಮೊಣಕಾಲಿಗೆ ಮತ್ತು ಬಲಕಾಲಿನ ಹೆಬ್ಬೆರಳಿಗೆ ರಕ್ತಗಾಯಗಳಾಗಿರುತ್ತೆ. ಸ್ಥಳದಲ್ಲಿದ್ದ ತನಗೆ ಅಪಘಾತ ಪಡಿಸಿದ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ KA-40 EE-8196 ಬಜಾಜ್ CT-100 ದ್ವಿಚಕ್ರ ವಾಹನವಾಗಿರುತ್ತೆ. ಸದರಿ ವಾಹನದ ಸವಾರನಿಗೂ ಗಾಯಗಳಾಗಿರುತ್ತೆ. ಆತನ ಹೆಸರು ಹಾಗೂ ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ತನಗೆ ಅಪಘಾತವನ್ನುಂಟು ಮಾಡಿರುವ ಮೇಲ್ಕಂಡ KA-40 EE-8196 ಬಜಾಜ್ CT-100 ದ್ವಿಚಕ್ರ ವಾಹನದ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 105/2021 ಕಲಂ. 279,304(ಎ) ಐಪಿಸಿ & 187 ಐ.ಎಂ.ವಿ ಆಕ್ಟ್ :-

  ದಿನಾಂಕ: 12/03/2021 ರಂದು ರಾತ್ರಿ 8.30 ಗಂಟೆಗೆ ಕೆ.ಎಂ.ಶ್ರೀನಿವಾಸ ಬಿನ್  ಲೇಟ್ ಕೆ.ಎಂ ಮುನಿವೆಂಕಟರೆಡ್ಡಿ, 46 ವರ್ಷ, ವಕ್ಕಲಿಗರು, ವ್ಯವಸಾಯ, ಕೋಡಿಹಳ್ಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆ ಕೆ.ಎಂ.ಮುನಿವೆಂಕಟರೆಡ್ಡಿ ಮತ್ತು ತಾಯಿ ಸಂಪಂಗೆಮ್ಮ ರವರಿಗೆ 3 ಜನ ಮಕ್ಕಳು, 1ನೇ ಜಯರಾಮರೆಡ್ಡಿ ಮೃತಪಟ್ಟಿರುತ್ತಾನೆ, 2ನೇ ಕೆ.ಎಂ ಗೋಪಾಲಕ್ರಿಷ್ಣಾರೆಡ್ಡಿ, 3ನೇ ತಾನು ಆಗಿದ್ದು, ಎಲ್ಲರೂ ಸಂಸಾರಗಳು ಬೇರೆ ಬೇರೆ ವಾಸವಾಗಿರುತ್ತೇವೆ. ತನ್ನ ಅಣ್ಣ ಕೆ.ಎಂ ಗೋಪಾಲಕ್ರಿಷ್ಣಾರೆಡ್ಡಿ, 48 ವರ್ಷ ರವರಿಗೆ ಇಬ್ಬರು ಮಕ್ಕಳು, 1ನೇ ಜಿ ಲಕ್ಷ್ಮಿ, 2ನೇ ಮಹೇಶ ಎಂಬುವರಿದ್ದು, ತನ್ನ ಅಣ್ಣ ವ್ಯವಸಾಯ ಮತ್ತು ಮಾಡಿಕೆರೆ ಕ್ರಾಸ್ ನಲ್ಲಿರುವ ಮ್ಯಾಂಗೋ ಶೇಖರಣಾ ಕೇಂದ್ರದಲ್ಲಿ ವಾಚ್ ಮ್ಯಾನ್ ಕೆಲಸ ಮಾಡಿಕೊಂಡಿದ್ದನು. ಈ ದಿನ ದಿನಾಂಕ: 12/03/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಮಾಡಿಕೆರೆ ಕ್ರಾಸ್ ನಲ್ಲಿರುವ ಮ್ಯಾಂಗೋ ಶೇಖರಣಾ ಕೇಂದ್ರದಲ್ಲಿ ವಾಚ್ಮ್ಯಾನ್ ಕೆಲಸಕ್ಕೆ ಹೋದನು, ಈ ದಿನ ಸಂಜೆ 7.15 ಗಂಟೆ ಸಮಯದಲ್ಲಿ ದೊಡ್ಡಗಂಜೂರು ಗ್ರಾಮದ ಅಂಗಡಿ ಮಂಜುನಾಥ ಎಂಬುವರು ತನಗೆ ಪೋನ್ ಮಾಡಿ ನಿನ್ನ ಅಣ್ಣ ಕೆ.ಎಂ.ಗೋಪಾಲಕ್ರಿಷ್ಣಾರೆಡ್ಡಿ ರವರಿಗೆ ಮಾಡಿಕೆರೆ ಕ್ರಾಸ್ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆಸಿ ಪರಾರಿಯಾದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡು ಆತನ ತಲೆಗೆ ತೀವ್ರಗಾಯಗೊಂಡು ರಸ್ತೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು. ತಾನು ಮತ್ತು ನಮ್ಮೂರಿನವರು ತಕ್ಷಣ ಕೃತ್ಯ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಅಣ್ಣನಿಗೆ ತಲೆಗೆ ತೀವ್ರಗಾಯವಾಗಿ ಮೆದುಳು ಹೊರಬಂದು ಮೂಳೆ ಮಾಂಸ  ಹೊರಬಂದು ಮೃತಪಟ್ಟಿದ್ದನು. ತನ್ನ ಅಣ್ಣ ಪ್ರತಿದಿನ ಸಂಜೆ 5.00 ಗಂಟೆಗೆ ಕೆಲಸಕ್ಕೆ ಹೋಗಿ ನಂತರ ಸಂಜೆ 7.00 ಗಂಟೆಗೆ ಊಟಕ್ಕೆ ಬಂದು ಮತ್ತೆ ಕೆಲಸಕ್ಕೆ ಹೋಗುತ್ತಿದ್ದವನು. ಎಂದಿನಂತೆ ಈ ದಿನ ದಿನಾಂಕ: 12/03/2021 ರಂದು ಸಂಜೆ 5.00 ಗಂಟೆಗೆ ಕೆಲಸಕ್ಕೆ ಹೋಗಿದ್ದವನು. ಸಂಜೆ 7.00 ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು ಬರಲು ಗ್ರಾಮಕ್ಕೆ ತನ್ನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-02-ಜೆ.ವೈ-2260 ಎಫ್.ಜೆಡ್ ಯಮಹಾ ಕಂಪನಿಯ ದ್ವಿಚಕ್ರ ವಾಹನದಲ್ಲಿ ಮಾಡಿಕೆರೆ ಕ್ರಾಸ್ ನಿಂದ ಶ್ರೀನಿವಾಸಪುರ-ಚಿಂತಾಮಣಿ ಹೆದ್ಧಾರಿ ರಸ್ತೆಯ ನರಸಿಂಹರೆಡ್ಡಿ ಮಾವಿನ ತೋಟದ-ಮಾಡಿಕೆರೆ ಹೊನ್ನಪ್ಪಗಾರಿ ಮಾವಿನ ತೋಪಿನ ಮದ್ಯೆ ರಸ್ತೆಯಲ್ಲಿ ಬರುತ್ತಿದ್ದಾಗ ಶ್ರೀನಿವಾಸಪುರ ಕಡೆಯಿಂದ ಬಂದ ಯಾವುದೋ ಅಪರಿಚಿತ ವಾಹನ ಅಪಘಾತಪಡಿಸಿ ಪರಾರಿಯಾಗಿದ್ದ ಪರಿಣಾಮ ತನ್ನ ಅಣ್ಣ ತೀವ್ರಗಾಯಗೊಂಡು ಮೃತಪಟ್ಟಿರುತ್ತಾನೆ. ನಂತರ ತಾವುಗಳು ಮೃತಪಟ್ಟಿದ್ದ ತನ್ನ ಅಣ್ಣನ ಶವವನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ಆದ್ದರಿಮದ ತನ್ನ ಅಣ್ಣನ ಸಾವಿಗೆ ಅಪರಿಚಿತ ವಾಹನದ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಚಾಲನೆ ಕಾರಣವಾಗಿದ್ದು, ಅಪಘಾತಪಡಿಸಿದ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 13-03-2021 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080