ಅಭಿಪ್ರಾಯ / ಸಲಹೆಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.68/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 13/02/2021 ರಂದು ಬೆಳಿಗ್ಗೆ 10.30 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 13/02/2021 ರಂದು ಪಿ.ಎಸ್.ಐ ಎಸ್.ನರೇಶ್  ನಾಯ್ಕ ರವರು ತನಗೆ  ಮತ್ತು ಠಾಣೆಯ ಸಿ.ಹೆಚ್.ಸಿ-03 ರಾಜಣ್ಣ, ಸಿ.ಹೆಚ್.ಸಿ-39 ಬಾಬಾಜಾನ್ ರವರನ್ನು ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ತಾವು ಮಾಡಿಕೆರೆ ಕ್ರಾಸ್, ಚೀಮನಹಳ್ಳಿ ಮತ್ತು ಹೆಬ್ಬರಿ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 09.00 ಗಂಟೆಗೆ  ಊಲವಾಡಿ ಕ್ರಾಸ್ ನಿಂದ ಐಮರೆಡ್ಡಿಹಳ್ಳಿ ಮಾರ್ಗಮದ್ಯೆ ರಸ್ತೆ ಬದಿಯಲ್ಲಿರುವ ಬಾಲಾಜಿ ಪ್ಯಾಮಿಲಿ ರೆಸ್ಟೋರೆಂಟ್ ಬಳಿ ಬಂದಾಗ ಮಂಜುಳಮ್ಮ ಕೋಂ ಶಿವಣ್ಣ, ಐಮರೆಡ್ಡಿಹಳ್ಳಿ ಗ್ರಾಮ ರವರು ಬಾಲಾಜಿ ರೆಸ್ಟೋರೆಂಟ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ  ಮೇರೆಗೆ ಸದರಿ ರೆಸ್ಟೋರೆಂಟ್  ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಮೇಲ್ಕಂಡ ರೆಸ್ಟೋರೆಂಟ್ ಬಳಿ ಹೋಗುವಷ್ಟರಲ್ಲಿ ರೆಸ್ಟೋರೆಂಟ್ ಮುಂದೆ ಕುಳಿತಿದ್ದ ವ್ಯಕ್ತಿಗಳು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ವ್ಯಕ್ತಿ ಓಡಿ ಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಎಡರು ನೀರಿನ ಬಾಟಲುಗಳಿದ್ದು, 4) ಓಪನ್ ಆಗಿದ್ದ  90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೇಟ್ ಗಳು ಇದ್ದವು. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಮಂಜುಳಮ್ಮ ಕೋಂ ಶಿವಣ್ಣ, 38 ವರ್ಷ, ಪಟ್ರ ಜನಾಂಗ, ಹೋಟಲ್ ಮಾಲೀಕರು, ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಬೆಳಿಗ್ಗೆ 09.15 ರಿಂದ ಬೆಳಿಗ್ಗೆ 10.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ರೆಸ್ಟೋರೆಂಟ್ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜುಳಮ್ಮ ಕೋಂ ಶಿವಣ್ಣ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.69/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 13/02/2021 ರಂದು ಮದ್ಯಾಹ್ನ 1.00 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 13/02/2021 ರಂದು ಪಿ.ಎಸ್.ಐ ರವರು ಗ್ರಾಮಗಳ ಗಸ್ತಿಗಾಗಿ ತನ್ನನ್ನು ಹಾಗೂ ಬಾಬಜಾನ್ ಸಿ.ಹೆಚ್.ಸಿ-39 ರವರನ್ನು ನೇಮಿಸಿ ಕಳುಸಿದ್ದು, ಅದರಂತೆ ತಾವು ಮಾಡಿಕರೆ ಕ್ರಾಸ್, ಚೀಮನಹಳ್ಳಿ, ಹೆಬ್ಬರಿ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 11.00 ಗಂಟೆಗೆ ಐಮರೆಡ್ಡಿಹಳ್ಳಿ ಕ್ರಾಸ್ ಬಳಿ ಬಂದಾಗ ನರಸಿಂಹಮೂರ್ತಿ@ಮೂರ್ತಿ ಬಿನ್ ಮುನಿರೆಡ್ಡಿ ಎಂಬುವವರ ಅರ್.ಅರ್ ರೆಸ್ಟೋರೆಂಟ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ಸದರಿ ರೆಸ್ಟೋರೆಂಟ್ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಮೇಲ್ಕಂಡ ರೆಸ್ಟೋರೆಂಟ್ ಬಳಿ ಹೋಗುವಷ್ಟರಲ್ಲಿ ರೆಸ್ಟೋರೆಂಟ್ ಮುಂದೆ ಕುಳಿತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಮುಂಭಾಗದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 3) ಒಂದು ಲೀಟರ್ ನ ಒಂದು ನೀರಿನ ಬಾಟಲಿಗಳಿದ್ದು, 4) ಓಪನ್ ಆಗಿದ್ದ 90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೇಟ್ ಗಳಿದ್ದವು. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ನರಸಿಂಹ ಮೂರ್ತಿ@ ಮೂರ್ತಿ ಬಿನ್ ಮುನಿರೆಡ್ಡಿ, 38 ವರ್ಷ, ಗೊಲ್ಲರು, ವ್ಯಾಪಾರ ದಂಡುಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಬೆಳಿಗ್ಗೆ 11.30 ರಿಂದ ಮದ್ಯಾಹ್ನ 12.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ರೆಸ್ಟೋರೆಂಟ್ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನರಸಿಂಹಮೂರ್ತಿ@ ಮೂರ್ತಿ ಬಿನ್ ಮುನಿರೆಡ್ಡಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.38/2021  ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ 12/02/2021 ರಂದು ಸಂಜೆ 7-15 ಗಂಟೆಗೆ ಪಿರ್ಯಾಧಿದಾರರಾದ ರಾಜಶೇಖರ ಬಿನ್ ಚನ್ನಪ್ಪ , 28 ವರ್ಷ, ಸಾದರ ಜನಾಂಗ ,ವಾಸ ಜೀಲಾಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ತನ್ನ ಮಾವನಾದ ವೆಂಕಟಶಾಮಪ್ಪ ಬಿನ್ ರಾಮಯ್ಯ ರವರಿಗೆ ಮುದ್ದಲೋಡು ಗ್ರಾಮ ಪಂಚಾಯಿತಿ ಯಿಂದ ಇಗ್ಗೆ ಸುಮಾರು 20 ವರ್ಷಗಳ ಹಿಂದೆ ACCECSTMENT NUMBER  -400  ರ ನಿವೇಶನವು ಮಂಜೂರಾಗಿರುತ್ತೆ. ಈ ನಿವೇಶನದ ಪಕ್ಕದಲ್ಲೇ ನಮ್ಮ ಮಾವನ ವಾಸದ ಮನೆಯು ಇರುತ್ತೆ . ನಮ್ಮ ಮಾವನಿಗೆ ಮಂಜೂರಾಗಿರುವ ಪಕ್ಕದಲ್ಲಿ ನಮ್ಮ ಜನಾಂಗದವರೆ ಆದ ಪುಟ್ಟರಂಗಯ್ಯನ ಮಕ್ಕಳಾದ ನಂಜೇಗೌಡ 55 ವರ್ಷ, ಗೋಪಾಲ 50 ವರ್ಷ, ಹಾಗೂ ಮಂಜುನಾಥ , 52 ವರ್ಷ, ಇವರುಗಳು ನಮ್ಮ ಮಾವನಿಗೆ ಮಂಜೂರಾಗಿರುವ ನಿವೇಶನವು ತಮ್ಮದೇ ಎಂದು ಹೇಳಿ ಪದೇ ಪದೇ ನಮ್ಮ ಮಾವ ಅತ್ತೆ ಮೇಲೆ ಗಲಾಟೆ ಮಾಡುತ್ತಾ ಇರುತ್ತಾರೆ. ದಿನಾಂಕ 12/02/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಮೇಲ್ಕಂಡ ಮೂರು ಜನರು ನಮ್ಮ ಮಾವನಿಗೆ ಸೇರಿದ ನಿವೇಶನದಲ್ಲಿ ಸೌದೆಯನ್ನು ಹಾಕಲು ಬಂದಿದ್ದು ಆಗ ನಮ್ಮ ಅತ್ತೆ ಸುಜಾತಮ್ಮ ನಮ್ಮ ಮಾವ ವೆಂಕಟಶ್ಯಾಮಪ್ಪ ರವರು ನಿವೇಶನದಲ್ಲಿ ಸೌದೆ ಹಾಕಬಾರದೆಂದು ನಿಲ್ಲಿಸಲು ಹೋಗಿದ್ದಕ್ಕೆ ಸೂಳೆ ಮುಂಡೆ, ಈ ಸೈಟು ನಮ್ಮದು , ಲೋಪರ್ ಮುಂಡೆ ಹೋಗು ಎಂದು ಅವಾಚ್ಯ ಶಬ್ದಗಳಿಂದ  ಬೈದು ಕಬ್ಬಿಣದ ರಾಡ್ ನಿಂದ ಬೆನ್ನಿಗೆ  ಹೊಡೆದು ಊತ ಗಾಯವಾಗಿರುತ್ತೆ. ಗಲಾಟೆ ಕೇಳಿ ನಮ್ಮ ಮಾವ ವೆಂಕಟಶ್ಯಾಮಪ್ಪ ರವರು ಅಡ್ಡ ಹೋದಾಗ ಅವರಿಗೂ ಸಹ ಹೊಡೆದಿರುತ್ತಾರೆ. ಇದನ್ನು ನೋಡಿ ನಾನು  ನಮ್ಮ ಗ್ರಾಮದ ಲಕ್ಷ್ಮೀ ಪತಿ ಬಿನ್ ವೆಂಕಟರಮಣಪ್ಪ , ಸಾದರ ಜನಾಂಗ, ಹಾಗೂ ಶ್ರೀನಿವಾಸ ಬಿನ್ ವೆಂಕಟಶ್ಯಾಮಪ್ಪ , 51 ವರ್ಷ, ಸಾದರ ಜನಾಂಗ ವರೊಂದಿಗೆ ಇನ್ನು ಇತರರು ನಮ್ಮ ಅತ್ತೆ ಹಾಗೂ ಮಾವನನ್ನು ಬಿಡಿಸಿಕೊಂಡೆವು ಈ ಮೇಲ್ಕಂಡವರು  ಹೋಗುವಾಗ ಈ ನಿವೇಶನದ ಸುದ್ದಿಗೆ ಬಂದರೆ ನಿಮ್ಮನ್ನು ಮುಗಿಸಿ ಇಲ್ಲೆ ಉತುಹಾಕುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿ ಹೋಗಿರುತ್ತಾರೆ. ಆದ್ದರಿಂದ ನಮ್ಮ ಅತ್ತೆ ಸುಜಾತಮ್ಮ ಹಾಗೂ ನಮ್ಮ ಮಾವ ವೆಂಕಟಶ್ಯಾಮಪ್ಪ ಮೇಲೆ ಅಲ್ಲೆ ಮಾಡಿರುವ ನಂಜೇಗೌಡ , ಗೋಪಾಲ ಹಾಗೂ ಮಂಜುನಾಥ ಇವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ದೂರು.

 

4. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 279  ಐ.ಪಿ.ಸಿ:-

     ದಿನಾಂಕ;-13-02-2021 ರಂದು  ಸಂಜೆ 15-00 ಗಂಟೆಗೆ ಪಿರ್ಯಾದಿಯಾದ ಜಿ.ಎಂ.ಪ್ರವೀಣ್ ಬಿನ್ ಮುತ್ತಪ್ಪ, 40 ವರ್ಷ, ವಕ್ಕಲಿಗ ಜನಾಂಗ, ಪಂಚಮಿ ಕ್ರಷರ್ ಮ್ಯಾನೇಜ್ಮೆಂಟ್, ನಂ-32, ಗಡೇನಹಳ್ಳಿ ಗ್ರಾಮ, ಜಾಲ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ಕಂಪ್ಲೆಂಟ್ ಏನೆಂದರೆ ತಾನು ಸಮಾರು 10 ವರ್ಷಗಳಿಂದ ಕಣೆವೆನಾರಾಯಣಪುರ ಗ್ರಾಮದಲ್ಲಿರುವ ಪಂಚಮಿ ಕ್ರಷರ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯಲ್ಲಿ ಸುಮಾರು 12 ಟಿಪ್ಪರ್ ಲಾರಿಗಳು ಕೆಲಸ ಮಾಡುತ್ತಿದ್ದು,  ದಿನಾಂಕ: 12.02.2021 ರಂದು ನಮ್ಮ ಕಂಪನಿಗೆ ಸಂಬಂದಿಸಿದ ಕೆಎ-40-ಬಿ-0902 ಲಾರಿಯಲ್ಲಿ 12 ಎಂಎಂ ಜೆಲ್ಲಿ ತುಂಬಿಕೊಂಡು ಸಾದಹಳ್ಳಿ ಗೇಟ್ ಹೋಗಿ ಅನ್ಲೋಡ್ ಮಾಡಿಕೊಂಡು ವಾಪಸ್ ಕ್ರಷರ್ ಗೆ ಬರುತ್ತಿದ್ದಾಗ ದಿನಾಂಕ: 13.02.2021 ರಂದು ಮುಂಜಾನೆ 12-10 ಗಂಟೆ ಸಮಯದಲ್ಲಿ ಕಣಿವೆನಾರಾಯಣ ಪುರ ಗ್ರಾಮದ ಸಮೀಪದಲ್ಲಿ ನಾನು ಮತ್ತು ಚಾಲಕ ರವಿ ರವರು ಟಿಪ್ಪರ್ ಲಾರಿಯಲ್ಲಿ  ಬರುತ್ತಿದ್ದಾಗ, ನಮ್ಮ ಮುಂದೆ ಹೋಗುತ್ತಿದ್ದ ಕೆಎ-35-ಬಿ-9795 ಟಿಪ್ಪರ್ ಲಾರಿಯ ಚಾಲಕ ಅಜಾಗರೂಕತೆಯಿಂದ ತನ್ನ ಲಾರಿಯನ್ನು ಚಾಲನೆ ಮಾಡಿ, ಯಾವುದೇ ಮುನ್ಸೂಚನೆಯನ್ನು ನೀಡದೆ ಸಡನ್ನಾಗಿ ಬ್ರೇಕ್ ಹಾಕಿ ರಸ್ತೆಯ ಮದ್ಯಭಾಗದಲ್ಲಿ ನಿಲ್ಲಿಸಿದ್ದರಿಂದ ನಮ್ಮ ಲಾರಿಯು ಸಡನ್ನಾಗಿ ಹತೋಟಿಗೆ ಬಾರದೆ ನಮ್ಮ ಲಾರಿಯ ಮುಂದೆ ನಿಲ್ಲಿಸಿದ  ಕೆಎ-35-ಬಿ-9795 ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ ಅಪಘಾತವಾಯಿತು. ಅದು ತನ್ನ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಕೆಎ-50-ಎ-6389 ಟಿಪ್ಪರ್ ಲಾರಿಗೆ ಹೋಗಿ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ವಾಹನದ ಮುಂಭಾಗ ಕ್ಯಾಬಿನ್ ಜಖಂ ಆಗಿ ಬಂಪರ್, ರೇಡಿಯೇಟರ್, ಕೂಲರ್ ಇತ್ಯಾದಿಗಳು ಡ್ಯಾಮೇಜ್ ಆಗಿರುತ್ತವೆ. ಅದೇ ರೀತಿಯಾಗಿ ನನ್ನ ಮುಂದೆ ಇದ್ದ ಟಾಟಾ ಟಿಪ್ಪರ್ ಕೆಎ-35-ಬಿ-9795 ಚಲಿಸಿ ಮುಂದಿದ್ದ ಲಾರಿಗೆ ಡಿಕ್ಕಿಯಾಗಿ ಅದರ ಮುಂಬಾಗ ಕ್ಯಾಬಿನ್ ಡ್ಯಾಮೇಜ್ ಆಗಿ ಮತ್ತು ಹಿಂಬಾಗದಲ್ಲಿ ಸಣ್ಣ ಪುಟ್ಟ ಡ್ಯಾಮೇಜ್ ಆಗಿರುತ್ತದೆ. ಹಾಗೂ ಅದರ ಮುಂದೆ ನಿಲ್ಲಿಸಿದ್ದ ಕೆಎ-50-ಎ-6389 ಮಹೆಂದ್ರ ಟಿಪ್ಪರ್ ಲಾರಿಗೆ ಯಾವುದೇ ಡ್ಯಾಮೇಜ್ ಆಗಿರುವುದಿಲ್ಲ. ಕಾರಣ ಅವರು ವಾಹನವನ್ನು ತೆಗೆದುಕೊಂಡು ಹೊರಟುಹೋಗಿರುತ್ತಾರೆ. ಈ ಅಪಘಾತದಿಂದ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ.  ನಮ್ಮ ಮುಂದೆ ಹೋಗುತ್ತಿದ್ದ ಕೆಎ-35-ಬಿ-9795 ಟಿಪ್ಪರ್ ಲಾರಿಯ ಚಾಲಕ ಅಯೂಬ್ ಬಿನ್ ಮಿಯಾಸಾಬ್, 29 ವರ್ಷ, ಚಿಲಕನಹಳ್ಳಿ ಗ್ರಾಮ, ಮರಿಯಮ್ಮನಹಳ್ಳಿ ಹೋಬಳಿ, ಬಳ್ಳಾರಿ ಜಿಲ್ಲೆಯಾಗಿದ್ದು, ಇವನು ಅಜಾಗರೂಕತೆಯಿಂದ ತನ್ನ ಲಾರಿಯನ್ನು ಚಾಲನೆ ಮಾಡಿ, ಯಾವುದೇ ಮುನ್ಸೂಚನೆಯನ್ನು ನೀಡದೆ ಸಡನ್ನಾಗಿ ಬ್ರೇಕ್ ಹಾಕಿ ರಸ್ತೆಯ ಮದ್ಯಭಾಗದಲ್ಲಿ ಹಠಾತ್ತಾಗಿ ನಿಲ್ಲಿಸಿದ್ದರಿಂದಲೇ ಈ ಅಪಘಾತವಾಗಿರುತ್ತದೆ. ಈ ವಿಚಾರವನ್ನು ನಾವು ಕಂಪನಿಯಲ್ಲಿ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ-35-ಬಿ-9795 ಟಿಪ್ಪರ್ ಲಾರಿಯ ಚಾಲಕ ಅಯೂಬ್ ನ  ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ .

 

5. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 279,337,304(A)  ಐ.ಪಿ.ಸಿ:-

     ದಿನಾಂಕ:12/02/2021 ರಂದು ರಾತ್ರಿ 23-00 ಘಂಟೆಯಲ್ಲಿ ಹೆಚ್.ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಹೇಳಿಕೆ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಿ ದಾಖಲಿಸಿದ ಗಾಯಾಳು ಹೇಳಿಕೆಯ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 25 ದಿನಗಳಿಂದ KA40A7062 ಲಾರಿಯ ಸಹ ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ಸದರಿ ಲಾರಿಗೆ ವೆಂಕಟೇಶ ಎಂಬುವವರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಸದರಿ ಲಾರಿಯಲ್ಲಿ ಟೈಲ್ಸ್ ಲೋಡ್ ಮಾಡಿಕೊಂಡು ಬರಲು ಆಂದ್ರಪ್ರದೇಶದ ರಾಜಮಂಡ್ರಿಗೆ ಹೋಗಿ ದಿನಾಂಕ:11-02-2021 ರಂದು ಸಂಜೆ 5-30 ಘಂಟೆಯಲ್ಲಿ ಟೈಲ್ಸ್ ಲೋಡ್ ಮಾಡಿಕೊಂಡು ಬಾಗೇಪಲ್ಲಿ ಪಟ್ಟಣದಲ್ಲಿ ಅನ್ ಲೋಡ್ ಮಾಡಲು ಕದಿರಿ ಮಾರ್ಗವಾಗಿ ಬರುತ್ತಿದ್ದಾಗ ದಿನಾಂಕ:12-02-2021 ರಂದು ರಾತ್ರಿ 9-15 ಘಂಟೆಯಲ್ಲಿ ಘಂಟ್ಲಮಲ್ಲಮ್ಮನ ಕಣಿವೆಯಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಚಾಲಕ ವೆಂಕಟೇಶ ರವರು ಲಾರಿಯನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಣಿವೆಯ ತಿರುವಿನಲ್ಲಿ ಕಲ್ಲು ಕಟ್ಟಡಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರ ಪರಿಣಾಮ ಲಾರಿ ಪಲ್ಟಿ ಹೊಡೆದು ರಸ್ತೆಯ ಪಕ್ಕದ ಹಳ್ಳಕ್ಕೆ ಬಿದ್ದಿದ್ದು, ತನ್ನ ಸೊಂಟಕ್ಕೆ, ಎಡಕೈಗೆ, ಎಡಭಾಗದ ಬೆನ್ನಿಗೆ ಗಾಯಗಳಾಗಿದ್ದು, ಚಾಲಕ ವೆಂಕಟೇಶ ರವರಿಗೆ ಮಾರಣಾಂತಿಕ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು, ಪಕ್ಕದ ಗ್ರಾಮದ ಗ್ರಾಮಸ್ಥರು 108 ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಆಂಬ್ಯುಲೆನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ಈ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

6. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 415, 416, 417, 418, 419, 420, 463, 464, 465, 466, 467, 468, 511, 34 ಐ.ಪಿ.ಸಿ:-

     ದಿನಾಂಕ.13-01-2021 ರಂದು ಸಂಜೆ 5-00 ಗಂಟೆಗೆ ನ್ಯಾಯಾಲಯದ ಪಿ.ಸಿ.20 ಪ್ರಶಾಂತ್ ರವರ ಮೂಲಕ ಶಿಡ್ಲಘಟ್ಟ ಘನ ನ್ಯಾಯಾಲಯದ ಪಿ.ಸಿ.ಆರ್.ನಂ.122/2019 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ಕೇಸಿನ ಪಿರ್ಯಾದಿ  ನಾಗಪ್ಪ ಬಿನ್ ತಿಮ್ಮಪ್ಪ ರವರು ಶಿಡ್ಲಘಟ್ಟ ತಾಲ್ಲೂಕು ಎ.ಹುಣಸೇನಹಳ್ಳಿ ಗ್ರಾಮದ ವಾಸಿಯಾಗಿದ್ದು, ಇವರು ತಮ್ಮ ಹಿರಿಯರ ಕಾಲದಿಂದ ಅನುಭವದಲ್ಲಿರುವ ಎ.ಹುಣಸೇನಹಳ್ಳಿ ಗ್ರಾಮದ ಸ.ನಂ.34 ಬ್ಯಾಕ್-8 ರಲ್ಲಿ 3-00 ಎಕರೆ ಜಮೀನು ಪಿರ್ಯಾದಿ ನಾಗಪ್ಪ ರವರಿಗೆ ದರಖಾಸ್ತು ಮೂಲಕ LND.UC/CR/82/78-79 ದಿನಾಂಕ.01.07.1978 ಓ.ಎ.ನಂ.158/77-78 ದಿನಾಂಕ.31.07.1978 ರ ಅಧಿಕೃತ ಜ್ಞಾಪನಾ ಪತ್ರ ಕ್ರ.ಸಂ.8ನೇ ಸಂಖ್ಯೆಯಲ್ಲಿ ನಮೂದಾಗಿರುವ ಸ್ವತ್ತು ಸರ್ಕಾರದಿಂದ ಮಂಜೂರು ಆಗಿದ್ದು, ಸಾಗುವಳಿ ಚೀಟಿ ದಿನಾಂಕ.26.08.1978 ರಂದು ವಿತರಣೆಯಾಗಿ ಅಂದಿನಿಂದ ಕೈ ಬರವಣಿಗೆ ಪಹಣಿ ಪತ್ರ ಇತರ ದಾಖಲೆಗಳು ಬಂದು ಪಿರ್ಯಾದಿದಾರರೇ ಅನುಭವದಲ್ಲಿರುತ್ತಾರೆ. ಹೀಗಿರುವಾಗ ಪಿರ್ಯಾದಿದಾರರು ತನ್ನ ಸ್ವತ್ತಿಗೆ ಸಂಬಂದಿಸಿದ ಪಹಣಿ ಪತ್ರವನ್ನು ಪಡೆಯಲು ಕಂಪ್ಯೂಟರ್ ಕೇಂದ್ರದ ಬಳಿ ಹೋದಾಗ ಯಾವುದೇ ಪಹಣಿಯು ಸದರಿ ನಂಬರಿನಲ್ಲಿ ಬರುತ್ತಿರುವುದಿಲ್ಲ ಉತ್ತರಿಸಿ ವಾಪಸ್ಸು ಕಳುಹಿಸುತ್ತಿದ್ದು, ಈ ಕಾರಣದಿಂದ ದಿನಾಂಕ.24.01.2019 ರಂದು ಶಿಡ್ಲಘಟ್ಟ ಮಾನ್ಯ ತಹಸಿಲ್ದಾರ್ ಕಚೇರಿಗೆ ಕಂಪ್ಯೂಟರಿಕೃತ ಪಹಣಿಯಲ್ಲಿ ತನ್ನ ಹೆಸರು ನಮೂದು ಮಾಡಿಕೊಡಲು ಸೂಕ್ತ ಅದೇಶ ಮಾಡಲು ಕೋರಿ ಅರ್ಜಿ ಸಲ್ಲಿಸಿದಾಗ ಸದರಿ ರಾಜಸ್ವ ಇಲಾಖೆಯಿಂದ ಸ್ವೀಕೃತಿ ನೀಡಿದ್ದು, ಪರಿಶೀಲಿಸಿದಾಗ ಎ.ಹುಣಸೇನಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಮಲ್ಲಪ್ಪ ಎಂಬುವರ ಹೆಸರಿಗೆ ಖೊಟ್ಟಿ ದಾಖಲೆ ಸೃಷ್ಠಿಸಿಕೊಂಡು ಇವರ ಮಕ್ಕಳಾದ ಅಂದರೆ ಈ ಕೇಸಿನ ಆರೋಪಿಗಳಾದ 1ನೇ ಮುನಿಕೃಷ್ಣಪ್ಪ, 2ನೇ ಗಣೇಶಪ್ಪ ಎಂಬುವರು ಪಿರ್ಯಾದಿದಾರರಿಗೆ ಸೇರಿದ ಜಮೀನನ್ನು ಅವರ ತಂದೆಯಾದ ಮುನಿಯಪ್ಪ ಎಂಬುವರ ಹೆಸರಿನಲ್ಲಿ ಸೃಷ್ಠಿಸಿರುವ ದಾಖಲೆಯ ಅಧಾರದ ಮೇಲೆ ಮೃತಪಟ್ಟಿರುವ ಮುನಿಯಪ್ಪ ಬಿನ್ ಮಲ್ಲಪ್ಪ ರವರ ಹೆಸರಿಗೆ ಸ.ನಂ.34/ಪಿ.36 ಎನ್ನುವ ಸ್ವತ್ತನ್ನು ಹಾಗೂ ಪಿರ್ಯಾದಿ ನಾಗಪ್ಪ ರವರ ಹೆಸರಿಗೆ ಸೇರಿದ ಸ.ನಂ.34 ಬ್ಲಾಕ್ 8 ರ ಸ್ವತ್ತನ್ನು ಒಂದೇ ದಿನ MRH-14/2018-19, ದಿ:23.02.2019 ಕ್ರಯ ಹಾಗೂ ಸ.ನಂ.34 ಬ್ಲಾಕ್ 8 ಕ್ಕೆ ಸಂಬಂದಿಸಿದಂತೆ MRH-18/2018-19 ರಂತೆ ಪಹಣಿ ಪತ್ರಿಕೆಗಳನ್ನು ಸಂಬಂದಪಟ್ಟ ಇಲಾಖೆಯವರಿಂದ ಪಡೆದಿದ್ದು, ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ದಾಖಲೆಗಳನ್ನು ನೀಡಿ ಖೊಟ್ಟಿ ದಾಖಲೆಗಳ ಅಧಾರದ ಮೇಲೆ ಪಿರ್ಯಾದಿದಾರರ ಜಮೀನು ಲಪಟಾಯಿಸುವ ಉದ್ದೇಶದಿಂದ ಅವರ ಹೆಸರಿಗೆ ಖಾತೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂತ ಅದರೆ ಮುನಿಯಪ್ಪ ಬಿನ್ ಬಿನ್ ವೆಂಕಟರಾಯಪ್ಪ ಎಂಬ ವ್ಯಕ್ತಿ ಯಾವುದೇ ವ್ಯಕ್ತಿಗೂ ಯಾವುದೇ ಕಾರಣಕ್ಕೂ ಯಾವುದೇ ರೀತಿಯಲ್ಲಿ ಮಾರಾಟ ಮಾಡಿರುವುದಿಲ್ಲ. ಸದರಿ ವ್ಯಕ್ತಿ  ಗ್ರಾಮದಲ್ಲಿ ಯಾರೂ ಇರುವುದಿಲ್ಲ. ಸದರಿ ಹೆಸರಿಗೆ ಖೊಟ್ಟಿ ಕ್ರಯ ಪತ್ರವನ್ನು ಮುನಿಯಪ್ಪ ಬಿನ್ ಮಲ್ಲಪ್ಪ ಎಂಬ ಹೆಸರಿಗೆ ಸದರಿ ಗ್ರಾಮದ ಆರೋಪಿ-1 ಮತ್ತು 2 ರವರು ಅವರ ತಂದೆ ಹೆಸರಿಗೆ ಜಮೀನು ಇದೆ ಎಂದು ದಾಖಲೆಗಳನ್ನು ಸೃಷ್ಟಿಸಿ ಪಿರ್ಯಾದಿದಾರರಿಗೆ ಸೇರಿದ ಜಮೀನಿನ ಖಾತೆಯು ಈಗ ಹಾಲಿ ಮುನಿಯಪ್ಪ ಬಿನ್ ವೆಂಕಟರಾಯಪ್ಪ ಹೆಸರಿನಲ್ಲಿದ್ದು, ಸದರಿಯವರು ಕಾನೂನಿಗೆ ವಿರುದ್ದವಾಗಿ ಕ್ರಯ ಮಾಡಿಕೊಂಡಿರುತ್ತಾರೆಂತ, ಸದರಿಯವರ ಮೇಲೆ ಕಲಂ.415,416,417,418,419,420,463,464,465,466,467,468,511 ರೆ/ವಿ 34 ಐಪಿಸಿ ರೀತ್ಯಾ ಕಾನೂನು ಕ್ರಮ ಜರುಗಿಸಲು ಸಲ್ಲಿಸಿಕೊಂಡಿರುವ ದೂರಿನ ಸಾರಾಂಶದ ಮೇರೆಗೆ ಠಾಣಾ ಮೊ.ಸಂ.16/2021  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 13-02-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080