Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 284/2021 ಕಲಂ. 429 ಐಪಿಸಿ & ಸೆಕ್ಷನ್ 11(1) PREVENTION OF CRUELTY TO ANIMALS ACT, 1960 & ಸೆಕ್ಷನ್ 4,5,12 KARNATAKA PREVENTION OF SLAUGHTER AND PRESERVATION OF CATTLE ORDINANCE-2020 & ಸೆಕ್ಷನ್ 177,192(A) INDIAN MOTOR VEHICLES ACT, 1988 :-

     ದಿನಾಂಕ: 12/09/2021 ರಂದು ಬೆಳಿಗ್ಗೆ 5-45 ಗಂಟೆಗೆ  ಶ್ರೀ.ಗೋಪಾಲರೆಡ್ಡಿ, ಪಿಎಸ್ಐ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರು ಮಾಲು ಮತ್ತು ಆರೋಪಿಗಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 11/09/2021 ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದು , ದಿನಾಂಕ 12/09/2021 ರಂದು ಬೆಳಗಿನ ಜಾವ 4-45 ಗಂಟೆಯಲ್ಲಿ  ನಾನು ಪುರ ಗಸ್ತಿನಲ್ಲಿರುವಾಗ  ಯಾರೋ ಆಸಾಮಿಗಳು ಹೈದ್ರಾಬಾದ್ ಕಡೆಯಿಂದ ಯಾವುದೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದು ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಪಿಸಿ-278 ಶಬ್ಬೀರ್,  ಪಿಸಿ-319 ವಿನಾಯಕ ರವರನ್ನು ಜೊತೆಗೆ ಕರೆದುಕೊಂಡು ಹೋಗಿ ಬಾಗೇಪಲ್ಲಿ ಟೋಲ್ ಪ್ಲಾಜಾ  ಬಳಿ  ಕಾಯುತ್ತಿದ್ದಾಗ ಬೆಳಗಿನ ಜಾವ ಸುಮಾರು 5-15 ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ AP-39-TS-3151 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್  ಗೂಡ್ಸ್  ವಾಹನ ಬಂದಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಯವರಾದ ಪಿಸಿ-278 ಶಬ್ಬೀರ್,  ಪಿಸಿ-319 ವಿನಾಯಕ  ರವರು ಹಿಂಬಾಲಿಸಿ ಹಿಡಿದುಕೊಂಡು ಬಂದು ಹಾಜರುಪಡಿಸಿದವರನ್ನು ವಿಚಾರಿಸಲಾಗಿ ಎಸ್.ಸುಬಾನ್ ಬಿನ್ ಲೇಟ್ ಇಮಾಮ್ ಸಾಬ್, 19 ವರ್ಷ, ಚಾಲಕ ವೃತ್ತಿ, ಮುಸ್ಲಿಂ ಜನಾಂಗ, ವಾಸ ಬಿ.ಕೆ.ಎಸ್. ಇಸ್ಲಾಂಪುರ ಕಾಲೋನಿ, ಬುಕ್ಕರಾಯಸಮುದ್ರಂ ಮಂಡಲ್ , ಅನಂತಪುರ ಜಿಲ್ಲೆ, ವಾಹನದಲ್ಲಿದ್ದ ಇನ್ನೊಬ್ಬ ಆಸಾಮಿಯನ್ನು ಹೆಸರು ವಿಳಾಸ ಕೇಳಲಾಗಿ ಸಲೀಮ್ ಬಿನ್ ಬಾಷಾ, 20 ವರ್ಷ, ಕ್ಲೀನರ್ ಕೆಲಸ, ಮುಸ್ಲಿಂ ಜನಾಂಗ, ವಾಸ ಬಿ.ಕೆ.ಎಸ್. ಇಸ್ಲಾಂಪುರ ಕಾಲೋನಿ, ಬುಕ್ಕರಾಯಸಮುದ್ರಂ ಮಂಡಲ್ , ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂದು ತಿಳಿಸಿರುತ್ತಾರೆ. ಆಸಾಮಿಗಳನ್ನು ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ವಾಹನವನ್ನು  ಪರಿಶೀಲಿಸಲಾಗಿ 4 ಎಮ್ಮೆಗಳು ಮತ್ತು 9 ಕರುಗಳು ಇದ್ದು, ಅವುಗಳನ್ನು ಇಕ್ಕಟಿನಲ್ಲಿ  ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು, ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ತುಂಬಿರುವ AP-39-TS-3151 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್  ಗೂಡ್ಸ್  ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳನ್ನು AP-39-TS-3151 ನೊಂದಣೀ ಸಂಖ್ಯೆಯ ಅಶೋಕ್ ಲೈಲ್ಯಾಂಡ್  ಗೂಡ್ಸ್  ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 429 IPC, ಕಲಂ 11(1) PREVENTION  OF  CRUELTY  TO ANIMAL ACT,  U/S  4, 5, 12 THE KARNATAKA PREVENTION OF SLANGHTER AND  PRESERVATION OF  CATTLE ORDINANCE-2020 AND U/S 177, 192(A) INDIAN MOTOR VEHICLE ACT  ರೀತ್ಯಾ ಪ್ರಕರಣದ ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 285/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 11/09/2021 ರಂದು ಸಂಜೆ 6-30 ಗಂಟೆಗೆ ಶ್ರೀ ನಾಗರಾಜ್ ಡಿ ಆರ್. ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾನೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ: 11.09.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ದಾಸಯ್ಯಗಾರಿಪಲ್ಲಿ ಗ್ರಾಮದ ಬಳಿ ಇರುವ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಎಎಸ್ಐ ಶ್ರೀನಿವಾಸ್, ಹೆಚ್ ಸಿ-258 ನಾಗರಾಜ್, ಹೆಚ್ ಸಿ-233 ನಾರಾಯಣರೆಡ್ಡಿ,  ಪಿಸಿ-235 ಅಶ್ವತ್ ನಾರಾಯಣ, ಪಿಸಿ-237 ವಿನಯ್ ಕುಮಾರ್ ಯಾದವ್, ಪಿಸಿ-280 ಮುರಳಿ, ಪಿಸಿ-125 ಫಯಾಜ್, ಪಿಸಿ-134 ಧನಂಜಯ್ ಕುಮಾರ್, ಪಿಸಿ-124 ಆದಿನಾರಾಯಣ, ಪಿಸಿ-344 ಮಹಂತೇಶ್ , ಪಿಸಿ-574 ರಫೀಕ್ ಮತ್ತು ಜೀಪ್ ಚಾಲಕ ಎ.ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ದಾಸಯ್ಯಗಾರಿಪಲ್ಲಿ ಗ್ರಾಮದ ಕ್ರಾಸ್ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ದಾಳಿಯ ಪಂಚನಾಮೆಗೆ ಸಹಕರಿಸಲು  ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 1444 ರಲ್ಲಿ ಕುಳಿತುಕೊಂಡು ಸ್ಥಳಕ್ಕೆ ಹೋಗಿ ರಸ್ತೆಯ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ಸಂಜೆ 5-20 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹುಣಸೇಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಸುರೇಶ್ ಬಿನ್ ಗೋಪಾಲಪ್ಪ, 34 ವರ್ಷ, ಬಲಜಿಗರು, ತರಕಾರಿ ವ್ಯಾಪಾರ, ವಾಸ: ಕೊತ್ತಪಲ್ಲಿ ರೋಡ್, 7 ನೇ ವಾರ್ಡ, ಬಾಗೇಪಲ್ಲಿ ಪುರ 2) ಸತೀಶ್ ನಾಯಕ ಬಿನ್ ರಂಗಪ್ಪ, 31 ವರ್ಷ, ನಾಯಕರು, ಪೆನ್ನಾ ಸಿಮೆಂಟ್ ಲಾರಿ ಚಾಲಕ, ವಾಸ: 6 ನೇ ವಾರ್ಡ, ಲಕ್ಷ್ಮೀ ಲಾಡ್ಜ್ ಮುಂಭಾಗ, ಬಾಗೇಪಲ್ಲಿ ಪುರ 3) ಮನೋಜ್ ಕುಮಾರ್ ಬಿನ್ ಈಶ್ವರರೆಡ್ಡಿ, 26 ವರ್ಷ, ವಕ್ಕಲಿಗರು, ನ್ಯೂ ಸ್ಟಾರ್ ಮಿಲ್ಕ್ ಡೈರಿ ಮಾಲೀಕರು, ವಾಸ: ನ್ಯಾಷನಲ್ ಕಾಲೇಜ್, 1 ನೇ ವಾರ್ಡ, ಬಾಗೇಪಲ್ಲಿ ಪುರ 4) ಶಿವ ಬಿನ್ ನಾರಾಯಣಸ್ವಾಮಿ, 28 ವರ್ಷ, ಆದಿ ಕರ್ನಾಟಕ ಜನಾಂಗ, ಪೈಟಿಂಗ್ ಕೆಲಸ, ವಾಸ: ಸಾಯಿಬಾಬಾ ಗುಡಿಯ ಹತ್ತಿರ, 1 ನೇ ವಾರ್ಡ,  ಬಾಗೇಪಲ್ಲಿ ಪುರ 5) ಮಹೇಶ್ ಬಿನ್ ಈಶ್ವರಪ್ಪ, 26 ವರ್ಷ, ನಾಯಕರು, ಕೊತ್ತಪಲ್ಲಿ ರೋಡ್ ನಲ್ಲಿ ಪ್ಲೋರ್ ಮೀಲ್ ನಲ್ಲಿ ಕೆಲಸ, ವಾಸ: ಕೊತ್ತಪಲ್ಲಿ ರೋಡ್, 6 ನೇ ವಾರ್ಡ, ಬಾಗೇಪಲ್ಲಿ ಪುರ ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 5 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 12,690/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಸಂಜೆ 6-30 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಒಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-260/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.

ದಿ:12-09-2021 ರಂದು ಮದ್ಯಾಹ್ನ 12-15 ಗಂಟೆಗೆ ನ್ಯಾಯಾಲಯದ ಪಿ.ಸಿ  235 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು  ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 286/2021 ಕಲಂ. 279,337,304(A) ಐಪಿಸಿ :-

     ದಿನಾಂಕ: 12/09/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುನಿರೆಡ್ಡಿ ಬಿನ್ ವೆಂಕಟರೆಡ್ಡಿ 30 ವರ್ಷ, ವಕ್ಕಲಿಗರು, ಜಿರಾಯ್ತಿ, ಕೃಷ್ಣಾಪುರ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ-ತಾಯಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಒಟ್ಟು  4 ಜನ ಮಕ್ಕಳಿದ್ದು, 1ನೇ ಬಾಬುರೆಡ್ಡಿ, 2ನೇ ಕೃಷ್ಣವೇಣಿ, 3ನೇ ಲಕ್ಷ್ಮೀ, 4ನೇ ನಾನು ಆಗಿರುತ್ತೇನೆ, ನಮ್ಮ ಅಕ್ಕಂದಿರಿಗೆ ಮದುವೆಯಾಗಿದ್ದು ಅವರವರ ಮನೆಗಳಲ್ಲಿ ವಾಸವಾಗಿರುತ್ತಾರೆ,  ನಮ್ಮ ಅಣ್ಣ ಬಾಬುರೆಡ್ಡಿ ರವರಿಗೆ ಮಮತಮ್ಮ ಎಂಬುವವರೊಂದಿಗೆ ಮದುವೆಯಾಗಿದ್ದು, ಅರವಿಂದರೆಡ್ಡಿ, ಅಭಿಲಾಷ್ ಎಂಬ ಇಬ್ಬರು ಮಕ್ಕಳಿರುತ್ತಾರೆ,  ನಾನು ನಮ್ಮ ಅಣ್ಣ ಬಾಬುರೆಡ್ಡಿ ರವರು ವ್ಯವಸಾಯ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿರುತ್ತೇವೆ,  ಈ ದಿನ ದಿನಾಂಕ:12/09/2021 ರಂದು ಬೆಳಗ್ಗೆ ಸುಮಾರು 9:00 ಗಂಟೆ ಸಮಯದಲ್ಲಿ ನಮ್ಮ ಅಣ್ಣ ಬಾಬುರೆಡ್ಡಿ ರವರು ಕೆಲಸ ಪ್ರಯುಕ್ತ ಪೆಸಲಪರ್ತಿ ಗ್ರಾಮಕ್ಕೆ ಹೋಗಲು ನಮ್ಮ ಬಾಬತ್ತು ಕೆ ಎ 51 ಹೆಚ್ ಕೆ 4693 ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ನಮ್ಮ ಗ್ರಾಮದ ನಮ್ಮ ಸಂಬಂಧಿಯಾದ ಸುಧಾಕರರೆಡ್ಡಿ ಬಿನ್ ಲೇಟ್ ನಂಜುಂಡಪ್ಪ 31 ವರ್ಷ, ವಕ್ಕಲಿಗರು, ಜಿರಾಯ್ತಿ, ರವರನ್ನು ಕುಳ್ಳರಿಸಿಕೊಂಡು ಪೆಸಲಪರ್ತಿ ಗ್ರಾಮದ ಕಡೆಗೆ ಹೋಗಿರುತ್ತಾರೆ, ಬೆಳಗ್ಗೆ ಸುಮಾರು 9:20 ಗಂಟೆ ಸಮಯದಲ್ಲಿ ಪೆಸಲಪರ್ತಿ ಗ್ರಾಮದ ಲಕ್ಷ್ಮೀನಾರಾಯಣರೆಡ್ಡಿ ರವರು ನನಗೆ ದೂರವಾಣಿ ಕರೆ ಮಾಡಿ ನಿಮ್ಮ ಅಣ್ಣ ಬಾಬುರೆಡ್ಡಿ ರವರ ದ್ವಿ ಚಕ್ರ ವಾಹನವು ಅಪಘಾತವಾಗಿದ್ದು ಬಾಬುರೆಡ್ಡಿ ರವರು ಸ್ಥಳದಲ್ಲಿ ಮೃತಪಟ್ಟಿದ್ದು, ಸುಧಾಕರ್ ರವರಿಗೆ ಮೈಮೇಲೆ ಗಾಯಗಳಾಗಿರುತ್ತವೆ ಎಂದು ತಿಳಿಸಿದರು, ನಾನು ಮತ್ತು ನಮ್ಮ ಸಂಬಂಧಿ ಬಾಬುರೆಡ್ಡಿ ಬಿನ್ ಆದಿಮೂರ್ತಿರೆಡ್ಡಿ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ, ಅಪಘಾತದ ಬಗ್ಗೆ ವಿಚಾರಿಸಲಾಗಿ ನಮ್ಮ ಅಣ್ಣ ಬಾಬುರೆಡ್ಡಿ ರವರು ಪೆಸಲಪರ್ತಿ ಗ್ರಾಮಕ್ಕೆ ಹೋಗಲು ಪೆಸಲಪರ್ತಿ ಸಮೀಪ ಹೋಗುತ್ತಿದ್ದಾಗ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರ ಮಾಡಿಕೊಂಡು ಹೋಗಿ ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆ ಬದಿಯಲ್ಲಿನ ಗುಣಿಯಲ್ಲಿರುವ ಕಲ್ಲುಗಳ ಮೇಲೆ ಬಿದ್ದ ಪರಿಣಾಮ, ನಮ್ಮ ಅಣ್ಣ ರವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುದಾಕರ್ ರವರಿಗೆ ತಲೆಗೆ, ಮೈಮೇಲೆ ತೀವ್ರ ಸ್ವರೂಪದ ಗಾಯಗಳಾಗಿತ್ತು, ತಕ್ಷಣ ನಾನು ಮತ್ತು ನಮ್ಮ ಸಂಬಂಧಿ ಬಾಬುರೆಡ್ಡಿ ಬಿನ್ ಆದಿಮೂರ್ತಿರೆಡ್ಡಿ ರವರು ಸುಧಾಕರ್ ರವರನ್ನು ಯಾವುದೂ ವಾಹನದಲ್ಲಿ ಬಾಗೇಪಲ್ಲಿ ಅಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ, ನಮ್ಮ ಅಣ್ಣ ಬಾಬುರೆಡ್ಡಿ ಮೃತ ದೇಹವನ್ನು ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಸಾಗಿಸಿರುತ್ತೆ, ಈ ಅಪಘಾತಕ್ಕೆ ಕಾರಣವಾಗಿರುವ ನಮ್ಮ ಅಣ್ಣ ಬಾಬುರೆಡ್ಡಿ ಬಿನ್ ವೆಂಕಟರೆಡ್ಡಿ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 154/2021 ಕಲಂ. 279,304(A) ಐಪಿಸಿ :-

     ದಿನಾಂಕ: 11-09-2021 ರಂದು  ರಾತ್ರಿ 8-30  ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ. ಅನ್ಸರ್ ಪಾಷ ಬಿನ್  ಲೇಟ್ ಜಬಿವುಲ್ಲಾ 55ವರ್ಷ  ಮುಸ್ಲಿಂ  ಜನಾಂಗ  ರೇಷ್ಮೆ ವ್ಯಾಪಾರ  ವಾಸ: ವಾರ್ಡ್ ನಂಬರ್: 13 ಕದಿರೇಪಾಳ್ಯ ಶಿಡ್ಲಘಟ್ಟ ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ  ಸಾರಾಂಶವೇನೆಂದರೆ  ತನ್ನ ಅಣ್ಣನಾದ  ಲೇಟ್  ಸಾಬೀರ್ ಪಾಷ ರವರಿಗೆ  ಒಬ್ಬನೇ ಮಗನಾದ ಸುಮಾರು 32 ವರ್ಷ  ವಯಸ್ಸಿನ ಮಹಮದ್ ತನ್ಜೀಮ್ ರವರು  ಶಿಡ್ಲಘಟ್ಟ ನಗರದ ಕದಿರೇಪಾಳ್ಯ   ವಾರ್ಡ್ ನಂಬರ್ 13 ರಲ್ಲಿ  ತನ್ನ ಪತ್ನಿ  ಮತ್ತು ಸುಮಾರು  02 ವರ್ಷದ  ಹೆಣ್ಣು ಮಗುವಿನೊಂದಿಗೆ  ವಾಸವಾಗಿದ್ದು  ಶ್ರೀ ಮಹಮದ್ ತನ್ಜೀಮ್ ರವರು  ಸುಮಾರು 04 ವರ್ಷಗಳಿಂದ  ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲವಾರಹಳ್ಳಿ  ಹತ್ತಿರ ಇರುವ ಕನ್ ಕಾರ್ಡೆ  ಕಂಪನಿಯಲ್ಲಿ ಸೇಲ್ಸ್ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು  ಪ್ರತಿ ದಿನ  ಮಹಮದ್ ತನ್ಜೀಮ್ ರವರು ಶಿಡ್ಲಘಟ್ಟ   ನಗರದಿಂದ  ತನ್ನ ದ್ವಿ ಚಕ್ರ ವಾಹನ ನಂಬರ್:   KA-53-EC-7786  ನಂಬರಿನ ಪಲ್ಸರ್  ವಾಹನದಲ್ಲಿ ರೆಡ್ಡಿಗೊಲ್ಲವಾರಹಳ್ಳಿ  ಹತ್ತಿರ ಇರುವ ಕನ್ ಕಾರ್ಡೆ  ಕಂಪನಿಯ ಕೆಲಸಕ್ಕೆ  ಹೋಗಿ ಬರುತ್ತಿದ್ದು  ಅದೇ ರೀತಿ ದಿನಾಂಕ: 11/09/2021 ರಂದು  ಬೆಳಗ್ಗೆ 09-00 ಗಂಟೆಯಲ್ಲಿ  ಮಹಮದ್ ತನ್ಜೀಮ್ ರವರು  ಶಿಡ್ಲಘಟ್ಟ ನಗರದಿಂದ  ಕೆಲಸಕ್ಕೆ ಹೋಗಿದ್ದು ನಂತರ  ಕೆಲಸ ಮುಗಿಸಿಕೊಂಡು ಸಂಜೆ 5-30 ಗಂಟೆಯಲ್ಲಿ  ಕೆಲಸದ ಸ್ಥಳದಿಂದ ತನ್ನ ದ್ವಿ ಚಕ್ರ ವಾಹನ KA-53-EC-7786   ನಂಬರಿನ ಪಲ್ಸರ್  ವಾಹನದಲ್ಲಿ  ಶಿಡ್ಲಘಟ್ಟ  ನಗರದ ಕಡೆ ವಾಪಸ್ಸು  NH 44  ರಸ್ತೆಯಲ್ಲಿ  ದ್ವಿ ಚಕ್ರ ವಾಹನವನ್ನು  ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಸಂಜೆ ಸುಮಾರು 5-50 ಗಂಟೆಯ ಸಮಯದಲ್ಲಿ  ಲಿಂಗಶೆಟ್ಟಿಪುರ  ಗೇಟ್  ಕಡೆಯಿಂದ  KA-04-A-9499 ನಂಬರಿನ ಲಾರಿಯ ಚಾಲಕನು ಲಾರಿಯನ್ನು ಲಿಂಗಶೇಟ್ಟಿಪುರ  ಗ್ರಾಮದ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ವಿರುದ್ದ ದಿಕ್ಕಿನಲ್ಲಿ  ಹೋಗಿ  NH 44 ರಸ್ತೆಯಲ್ಲಿ ಹುನೆಗಲ್  ಗ್ರಾಮದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ  ಮಹಮದ್ ತನ್ಜಿಮ್ ರವರ ಸವಾರಿ ಮಾಡಿಕೊಂಡು  ಬರುತ್ತಿದ್ದ  KA-53-EC-7786   ನಂಬರಿನ ಪಲ್ಸರ್  ದ್ವಿ ಚಕ್ರ  ವಾಹನಕ್ಕೆ  ಅಪಘಾತ ಪಡಿಸಿದ್ದು  ಇದರ ಪರಿಣಾಮ ದ್ವಿ ಚಕ್ರ ವಾಹನದ ಸವಾರ  ವಾಹನದ ಸಮೇತ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು  ತನ್ನ ಸ್ನೇಹಿತನಾದ ಗಪೂರ್ ರವರು ತನಗೆ  ಮಾಹಿತಿಯನ್ನು  ನೀಡಿರುತ್ತಾರೆಂದು  ಈ ಬಗ್ಗೆ ತಾನು ಮತ್ತು ಇತರರು ಅಪಘಾತ ನಡೆದ ಸ್ಥಳಕ್ಕೆ  ಬಂದು ನೋಡಿ ವಿಚಾರ  ಮಾಡಿ  ನಂತರ ಆಸ್ಪತ್ರೆಗೆ  ಹೋಗಿ ನೋಡಲಾಗಿ  ವಿಷಯ  ನಿಜವಾಗಿರುತ್ತದೆ.  ಅಪಘಾತದಲ್ಲಿ  ದ್ವಿ ಚಕ್ರ ವಾಹನವು ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ  ಕಾರಣವಾದ KA-04-A-9499  ನಂಬರಿನ ಲಾರಿಯ  ಚಾಲಕನ  ವಿರುದ್ದ ಕಾನೂನು ರೀತಿಯ  ಕ್ರಮ ಜರುಗಿಸಬೇಕೆಂದು  ಕೋರಿದ್ದರ ಮೇರೆಗೆ  ಈ ಪ್ರ.ವ.ವರದಿ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 170/2021 ಕಲಂ. 279 ಐಪಿಸಿ :-

     ದಿನಾಂಕ: 11/09/2021 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:11/09/2021 ರಂದು ಮದ್ಯಾಹ್ನ ಬಿ.ಕೊತ್ತಕೋಟೆ ವಾಸಿ ಖಲೀಲ್ ಅಹಮದ್ ಷೇಕ್ ಬಿನ್ ಪಿ.ಜಾಫರ್ ಸಾಹೇಬ್ ರವರ ಬಾಬತ್ತು ಎ.ಪಿ-39-ಈಎಸ್-0666 ಟಯೋಟಾ ಪಾರ್ಚೂನರ್ ಕಾರನ್ನು ಬೆಂಗಳೂರಿಗೆ ತರುವಂತೆ ಹೇಳಿದ್ದು, ಅದರಂತೆ ದಿನಾಂಕ:11/09/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಾನು ನನ್ನ ಸ್ನೇಹಿತ ಜಾಬೀರ್ ರವರೊಂದಿಗೆ ಮೇಲ್ಕಂಡ ಕಾರಿನಲ್ಲಿ ಬಿ.ಕೊತ್ತಕೋಟೆ ಬಿಟ್ಟು ಚಿಂತಾಮಣಿ-ಬೆಂಗಳೂರು ಡಬಲ್ ರಸ್ತೆಯಲ್ಲಿ ಅಂಜನಿ ಚಿತ್ರಮಂದಿರ ಮುಂಭಾಗ ಬರುತ್ತಿರುವಾಗ ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ನನ್ನ ಮುಂದೆ ಕೆ.ಎ-07-ಎ-9721 ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿ ರೋಡ್ ಹಂಪ್ಸ್ ನ್ನು ಗಮನಿಸದೆ ಬ್ರೇಕ್ ಹಾಕಿದ ಪರಿಣಾಮ, ಹಿಂದೆ ಬರುತ್ತಿದ್ದ ನಮ್ಮ ಕಾರಿನ ಮುಂಭಾಗ ಲಾರಿಯ ಹಿಂಭಾಗಕ್ಕೆ ತಗುಲಿ ಕಾರಿನ ಮುಂಭಾಗ ಪೂರ್ತಿ ಜಖಂ ಆಗಿರುತ್ತೆ. ಕಾರಿನಲ್ಲಿದ್ದ ನನಗೆ ಮತ್ತು ನನ್ನ ಸ್ನೇಹಿತ ಜಾಬೀರ್ ರವರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಆದ್ದರಿಂದ  ಲಾರಿಯ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 229/2021 ಕಲಂ. 379 ಐಪಿಸಿ :-

     ದಿನಾಂಕ: 11/09/2021 ರಂದು ಪಿರ್ಯಾದಿ ಆಂಜಿನೆಯಲು ಬಿನ್ ಹನುಮಂತಪ್ಪ, 42 ವರ್ಷ, ೆರಕುಲ ಜನಾಂಗ, ಬೊಯಪೇಟ್, ಹಿಂದುಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದ್ವಿಪಗಳ ವ್ಯಾಪಾರ ಮಾಡುತ್ತಿದ್ದು, ದಿನಾಂಕ: 02/06/2021 ರಂದು ವ್ಯಾಪಾರ ಮಾಡಲು ಕರ್ನಾಟಕದ ಗೌರಿಬಿದನೂರು ತಾಲ್ಲೂಕಿನ ಮೆಳ್ಯ, ಜಗರೆಡ್ಡಿಹಳ್ಳಿ ಹುದುಗುರು ಇನ್ನು ಮುಂತಾದ ಕಡೆ ವ್ಯಾಪಾರ ಮಾಡಿಕೊಂಡು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ವಾಟದಹೊಸಹಳ್ಳಿ ಅರಳಿ ಕಟ್ಟೆಯ ಪಕ್ಕದಲ್ಲಿ ನನ್ನ ಬಾಬತ್ತು TVS XL 100 ನೋಂದಣಿ ಸಂಖ್ಯೆ AP 39 GY 5984 ಯನ್ನು ನಿಲ್ಲಿಸಿ ಕಟ್ಟೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೊ ಕಳ್ಳರು ಕಳುವು ಮಾಡಿಕೊಂಡು ಹೊಗಿರುತ್ತಾರೆ, ವಾಹನದ ಚಾರ್ಸಿ ಸಂಖ್ಯೆ MD621BP27L2L4, ಇಂಜಿನ ಸಂಖ್ಯೆBP2LL2125915 ಸದರಿ ದ್ವಿಚಕ್ರ ವಾಹನವನ್ನು ಎಲ್ಲಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ ಮತ್ತು ಕೊರೊನಾ ಇದ್ದ ಕಾರಣ ಠಾಣೆಗೆ ಬಂದು ದೂರು ನೀಡಲು ಆಗದ ಕಾರನ ಈ ದಿನ ತಡವಾಗಿ ದೂರು ನೀಡಿರುತ್ತೆ. ಕಳುವಾಗಿರುವ ನನ್ನ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೊರುತ್ತೆನೆ.

 

7. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 141/2021 ಕಲಂ. 32,34,36(B) KARNATAKA EXCISE ACT, 1965 :-

     ದಿ:11-09/20212 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿರರಾದ ಶ್ರೀಮತಿ ಸರಸ್ವತಮ್ಮ, ಮ.ಪಿ.ಎಸ್.ಐ ಡಿಸಿಬಿ-ಸಿಇಎನ್ ಪೊಲೀಸ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ಜಿ್ಲ್ಲೆ, ಡಿ.ಸಿ.ಬಿ. ಸಿ.ಇ.ಎನ್ ಪೊಲೀಸ್ ಠಾಣೆಯ  ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀಮತಿ ಸರಸ್ವತಮ್ಮ ರವರು ನೀಡುವ ವರಧಿಯ ಸಾರಾಂಶವೆನೆಂದರೆ, ಈ ದಿನ ದಿ:11-09-2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯಾದ ಎಚ್.ಸಿ.80-ಕೃಷ್ಣಪ್ಪ, ಪಿ.ಸಿ.152 ಜಯಣ್ಣ ಹಾಗು ಜೀಪ್ ಚಾಲಕರಾದ ಸಿ.ಪಿ.ಸಿ-527 ಮಧುಸೂದನ್  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ-ಕೆ.ಎ.40-ಜಿ-270ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ 3-30  ಗಂಟೆಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ನಗರದ ಹಿಂದೂಪುರ –ಬೆಂಗಳೂರು ರಸ್ತೆಯ ಇಸ್ತೂರಿ ರವರ ಹೆಚ್,ಪಿ ಪೆಟ್ರೋಲ್ ಬಂಕ್ ಮುಂಭಾಗ ಯಾರೋ ಒಬ್ಬ ಆಸಾಮಿ ಒಂದು ಬಳಿ ಬ್ಯಾಗ್ ನಲ್ಲಿ ಅಕ್ರಮವಾಗಿ ಮದ್ಯೆವನ್ನ ಮಾರಟ ಮಾಡುವ ಸಲುವಾಗಿ ನಡೆದುಕೊಂಡು ರಸ್ತೆಯಲ್ಲಿ ಹೋಗುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಸ್ಥಳಕ್ಕೆ ಪಂಚರನ್ನು ಬರ ಮಾಡಿಕೊಂಡು   ಪಂಚರ ಸಮಕ್ಷಮ ದಾಳಿ ಮಾಡಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಗಂಗಯ್ಯ  ಬಿನ್ ಲೇಟ್ ನರಸಿಂಹಯ್ಯ,55 ವರ್ಷ,ಆದಿಕರ್ನಾಟಕ ,ವ್ಯವಸಾಯ .ವಾಸ;ಇಡಗೂರು ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು ನಂತರ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಬ್ಯಾಗಿನ ತುಂಬಾ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 90 ಎಮ್ ಎಲ್ ನ 96 ಟೆಟ್ರಾ ಪಾಕೆಟ್ ಗಳು ಇದ್ದು ಇದರ ದ್ರವ್ಯ ಪ್ರಮಾಣ 8 ಲೀಟರ್ 640 ಎಮ್.ಎಲ್ ಇದ್ದು ಇದರ ಒಟ್ಟು ಬೆಲೆ 3372/ ರೂ ಗಳಾಗಿರುತ್ತೆ  ಸದರಿ ಮಧ್ಯವನ್ನು ರಾಘವೇಂದ್ರ ವೈನ್ಸ್ ನ ಪುನಿತ್ ರವರ ಹತ್ತಿರ ಖರೀದಿ ಮಾಡಿರುತ್ತಾನೆಂದು ತಿಳಿಸಿರುತ್ತಾನೆ ಸದರಿ ಮಧ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿ, ಮಾಲನ್ನು ಅಸಲು ಪಂಚನಾಮೆಯೊಂದಿಗೆ   ನಿಮ್ಮ ವಶಕ್ಕೆ  ನೀಡುತ್ತಿದ್ದು,ಸದರಿ ಆರೋಪಿ ಮತ್ತು ರಾಘವೇಂದ್ರ ವೈನ್ಸ್ ಹಾಗೂ ಕ್ಯಾಷಿಯರ್ ಪುನಿತ್ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿ ದೂರಿನ ವರದಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 217/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 12.09.2021 ರಂದು ಬೆಳಿಗ್ಗೆ 11-00 ಗಂಟೆಗೆ ನ್ಯಾಯಾಲಯದ ಸಿಬ್ಬಂದಿಂ ಪಿ.ಸಿ. 198 ರವರು ಠಾಣಾ ಎನ್ ಸಿ ಆರ್ ನಂ: 280/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:11-09-2021 ರಂದು ಅರ್ಜಿದಾರರಾದ ಶ್ರೀನಂಜುಂಡಶರ್ಮ ಎ.ಎಸ್.ಐ ಗುಡಿಬಂಡೆ ಪೊಲೀಸ್ ಠಾಣೆ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ದಿನಾಂಕ:11.09.2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ, ಗುಡಿಬಂಡೆ ಟೌನಿನ ಸಂಪಂಗಿ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯಾದ ಹೆಚ್.ಸಿ. 102, ಆನಂದರವರನ್ನು ಕರೆದುಕೊಂಡು ಸಂಪಂಗಿ ಸರ್ಕಲ್ ಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ ಬೆಳಿಗ್ಗೆ 10-00 ಗಂಟೆಯಲ್ಲಿ ಪಂಚರೊಂದಿಗೆ ಹೋಗಿ ಮರೆಯಲ್ಲಿ ನಿಂತು ಸಂಪಂಗಿ ಸರ್ಕಲ್ ನಲ್ಲಿ ಹಂಪಸಂದ್ರ ಕಡೆಗೆ ಹೋಗುವ ರಸ್ತೆಯ ಕಡೆಗೆ ನೋಡಲಾಗಿ ರಸ್ತೆಯ ಪುಟ್ ಪಾತ್ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು. ಆ ಪೈಕಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದವನು ಸ್ಥಳದಲ್ಲಿಯೇ ಇದ್ದು ಅವನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ಶ್ರೀನಿವಾಸ ಬಿನ್ ಲೇಟ್ ರಾಮಪ್ಪ, 42 ವರ್ಷ, ಜಿರಾಯ್ತಿ, ನಾಯಕರು. ಅರಮಾಕಲಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಅನಂದಪುರ ಜಿಲ್ಲೆ ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದನು. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾಡ್ರ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 3 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಡಿರುವಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಒಂದು ಖಾಲಿ ವಾಟರ್ ಬಾಟಲ್ ಇದ್ದವು. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 11-20  ಗಂಟೆಗೆ ಠಾಣೆಗೆ ಹಾಜರಾಗಿ, ಬೆಳಿಗ್ಗೆ 11-45 ಗಂಟೆಗೆ ವರದಿಯನ್ನು ಸಿದ್ದ ಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದೆ ಎಂದು ನೀಡಿದ ದೂರಿನ ಮೇರೆಗೆ  ಪ್ರ.ವ.ವರದಿ.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 218/2021 ಕಲಂ. 87 ಕೆ.ಪಿ. ಆಕ್ಟ್ :-

     ದಿ:12.09.2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿ.ಸಿ. 198 ರವರು ಠಾಣಾ ಎನ್ ಸಿ ಆರ್ ನಂ 281/2021 ರಲ್ಲಿ ಘನ ನ್ಯಾಯಾಲಯದಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರು ಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ ಐ ಶ್ರೀ ನಂಜುಂಡಶರ್ಮ ರವರು ನೀಡಿದ ವರದಿಯ ಸಾರಾಂಸವೇನೆಂಧರೆ ದಿನಾಂಕ 11/09/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಹೆಚ್.ಸಿ.-73 ಶ್ರೀ ಹನುಮಂತರಾಯಪ್ಪ ರವರು ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ  ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿರುತ್ತೆಂತ ತಿಳಿಸಿದರು ಅದರಂತೆ ನಾನು, ಠಾಣೆಯಲ್ಲಿದ್ದ ಸಿಬ್ಬಂದಿಗಳಾದ ಪಿಸಿ-141 ಸಂತೋಷ್ ಕುಮಾರ್ ಹೆಚ್.ಸಿ-127 ಕರಿಬಾಬು, ಹೆಚ್.ಸಿ-102 ಶ್ರೀ ಆನಂದ ದ್ವಿಚಕ್ರವಾಹನಗಳಲ್ಲಿ  ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 11-15 ಗಂಟೆಗೆ ಹೋಗಿ ಅಲ್ಲಿದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ, ರವರನ್ನು ಹಾಗೂ ಅಲ್ಲಿಯೇ ಇದ್ದ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ  ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ  ಮಾಹಿತಿ ಬಂದಿದ್ದು,  ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ನಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸುತ್ತುವರೆದು 100/-ರೂ ಅಂದರ್ ಎಂತಲೂ 100/- ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಬೆಳಿಗ್ಗೆ 11-30 ಗಂಟೆಗೆ  ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ದಾಳಿ ಮಾಡಿದಾಗ ಕೆಲವಲು ಸ್ಥಳದಿಂದ ಹೋಡಿ ಹೋಗಿದ್ದು, ಸ್ಥಳದಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಲಕ್ಷ್ಮಣ ಬಿನ್ ಲೇಟ್ ಕನಕ ಸುಂದರರಾವ್, 60 ವರ್ಷ, ಮರಾಠಿ ಜನಾಂಗ, ವ್ಯಾಪಾರ, ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು ಓಡಿಹೋದವರ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 2) ಗಂಗಪ್ಪ ಬಿನ್ ಕೃಷ್ಣಪ್ಪ, 50 ವರ್ಷ, ಕೂಲಿ ಕೆಲಸ, ನಾಯಕರು, ಬೋಗೇನಹಳ್ಳಿ  ಗುಡಿಬಂಡೆ ತಾಲ್ಲೂಕು 3) ರಮೇಶ @ ಬುಸ್ಸು ಬಿನ್ ಲಕ್ಷ್ಮಯ್ಯ, ಕೂಲಿ ಕೆಲಸ, ಎಸ್ ಸಿ ಜನಾಂಗ, ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 4) ನವೀನ ಬಿನ್ ಆವುಲಪ್ಪ, 20 ವರ್ಷ, ನಾಯಕರು. ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, 5) ಮಂಜುನಾಥ ಬಿನ್ ಚೆನ್ನಪ್ಪ, 23 ವರ್ಷ, ಕುರುಬರು, ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು. 6) ಚಿನ್ನಪ್ಪ ಬಿನ್ ವೆಂಕಟರಾಯಪ್ಪ, 48 ವರ್ಷ, ಬಲಜಿಗರು. ಜಿರಾಯ್ತಿ ಬಾಲೇನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, 7) ನಾಗರಾಜ @ ಸಂಗೀತ, ಪಟ್ರವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 8) ಮುರಳಿ ಬಿನ್ ಮುನಿಯಪ್ಪ, 28 ವರ್ಷ, ಕುರುಬರು, ಚಾಲಕ ವೃತ್ತಿ, ಕಾರಕೂರು ಗ್ರಾಮ, ಬಾಗೇಪ್ಲಲಿ ತಾಲ್ಲೂಕು ಎಂತ ತಿಳಿಸಿದ್ದು,   ಸ್ಥಳದಲ್ಲಿ ಪಣವಾಗಿಟ್ಟಿದ್ದ 1130/- (ಒಂದು ಸಾವಿರದ ನೂರ ಮುವತ್ತು) ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಬೆಳಿಗ್ಗೆ 11-30 ಗಂಟೆಯಿಂದ 12-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿತನನ್ನು ಮಾಲನ್ನು ಪಂಚನಾಮೆ ಯೊಂದಿಗೆ ಮದ್ಯಾಹ್ನ 1-00  ಗಂಟೆಗೆ ಠಾಣೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಮದ್ಯಾಹ್ನ 1-30 ಗಂಟೆಗೆ ನೀಡುತ್ತಿದ್ದು ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರ.ವ.ವರದಿಯನ್ನು ದಾಖಲಿಸಿರುತ್ತೆ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 163/2021 ಕಲಂ. 279,337 ಐಪಿಸಿ & ಸೆಕ್ಷನ್ 187 INDIAN MOTOR VEHICLES ACT, 1988 :-

     ದಿನಾಂಕ:11/09/2021 ರಂದು ಪಿರ್ಯಾದಿದಾರರಾದ ಪರಮೇಶ್ ಬಿನ್ ವೆಂಕಟರಾಯಪ್ಪ, 28 ವರ್ಷ, ಬೋವಿ ಜನಾಂಗ, ಕಲ್ಲಿನಾಯಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:11/09/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಮ್ಮ ತಂದೆಯಾದ ವೆಂಕಟರಾಯಪ್ಪ ಬಿನ್ ಲೇಟ್ ನ್ಯಾತಪ್ಪ 55 ವರ್ಷ, ರವರು ಹೊಲದ ಕಡೆಗೆ ಹೋಗಿ ಮನೆಗೆ ಬರುವಾಗ ಸೌದೆ ಹೊರೆಯನ್ನು ಸೈಕಲ್ಲಿನಲ್ಲಿ ಹಿಂಬದಿಯಲ್ಲಿಟ್ಟು, ಸೈಕಲ್ಲನ್ನು ತಳ್ಳಿಕೊಂಡು ಗೌರಿಬಿದನೂರು ದೊಡ್ಡಬಳ್ಳಾಪುರ ರಸ್ತೆಯ ಎಡ ಬದಿಯಿಂದ ಮನೆಗೆ ಬರುವಾಗ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೋಗುತ್ತಿದ್ದ ಕೆ.ಎ-02, ಎಂ.ಪಿ-9866 ನೊಂದಣಿ ಸಂಖ್ಯೆಯ ಕಾರು ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರು ಸ್ಥಳದಲ್ಲಿ ನಿಲ್ಲಿಸದೆ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ಟೋಲ್ ಬಳಿ ಸಹ ವಾಹನವನ್ನು ನಿಲ್ಲಿಸದೆ ಸರ್ವೀಸ್ ರಸ್ತೆಯಲ್ಲಿ ಹೊರಟು ಹೋಗಿದ್ದು, ಅಲ್ಲೇ ಟೋಲ್ ಬಳಿ ಇದ್ದ ಅಂಬ್ಯೂಲೇನ್ಸ್ ಚಾಲಕನು ಸುಮಾರು 5-6 ಕಿ.ಮಿ ಹಿಂಬಾಲಿಸಿಕೊಂಡು ಹೋದರೂ ಸಹ ನಿಲ್ಲಿಸದೆ ಹೊರಟು ಹೋಗಿದ್ದು, ನಾನು ಟೋಲ್ ಬಳಿ ಕೆಲಸ ಮಾಡುತ್ತಿದ್ದು, ನಮ್ಮ ತಂದೆಗೆ ಕಲ್ಲಿನಾಯಕನಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಕಾರು ಡಿಕ್ಕಿ ಹೊಡೆದಿರುವುದು ಅಲ್ಲಿದ್ದವರು ನನಗೆ ಫೋನ್ ಮಾಡಿ ತಿಳಿಸಿದ್ದು, ಆಗ ನಾನು ತಕ್ಷಣ ಬಂದು ನಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದು, ನಮ್ಮ ತಂದೆಗೆ ಎರಡೂ ಕಾಲುಗಳಿಗೆ ರಕ್ತಗಾಯಗಳಾಗಿದ್ದು, ಮತ್ತು ಕೈಗಳಿಗೆ ಹಣೆಗೆ ಮತ್ತು ತಲೆಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಈಗ ನಮ್ಮ ತಂದೆಯವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದ್ದರಿಂದ ನಮ್ಮ ತಂದೆಗೆ ಅಪಘಾತ ಪಡಿಸಿದ KA-02, MP-9866 ನೊಂದಣಿ ಸಂಖ್ಯೆಯ ಕಾರು ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

11. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 164/2021 ಕಲಂ. 15(A),32(3) KARNATAKA EXCISE ACT, 1965 :-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:12/09/2021 ರಂದು ಬೆಳಿಗ್ಗೆ 09-30 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಕೋಡಿಗಾನಹಳ್ಳಿ, ಗ್ರಾಮದ  ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪರವರು ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.311 ಗೂಳಪ್ಪ ಹಾಗೂ  ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ  ಕೋಡಿಗಾನಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪ, 32 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ ಕೋಡಿಗಾನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 14  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 03 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  3 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಬೆಳಿಗ್ಗೆ 10-15 ಗಂಟೆಯಿಂದ 11-15 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 532/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಾಸ್ ಬಂದು 164/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

12. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 98/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:11.09.2021 ರಂದು ಸಂಜೆ 5-10 ಗಂಟೆಗೆ ಪಿರ್ಯಾದಿದಾರರಾದ  ಶ್ರೀ ಖಲಂದರ್ ಎಫ್  ಸಿ.ಹೆಚ್.ಸಿ -209 ರವರು ಠಾಣೆಗೆ ಅಸಲು ಪಂಚನಾಮೆ ಮತ್ತು ಮಾಲಿನೊಂದಿಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ದಿನಾಂಕ:11-09-2021 ರಂದು ಮದ್ಯಾಹ್ನ 15-00 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ., ಚೇಳೂರು ವೃತ್ತ ರವರು ನನ್ನನ್ನು ಕರೆದು ಬಾಗೇಪಲ್ಲಿ ತಾಲ್ಲೂಕು ಗೊಂದಿಪಲ್ಲಿ ಗ್ರಾಮದ ಬಾಲಕೃಷ್ಣ ಬಿನ್ ನಾರಾಯಣಪ್ಪ ರವರು ತಮ್ಮ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ನನ್ನನ್ನು ಮತ್ತು ಸಿಪಿಸಿ-281 ಶಂಕ್ರಪ್ಪ ಕಿರವಾಡಿ ರವರನ್ನು ಕಳುಹಿಸಿಕೊಟ್ಟಿದ್ದು, ಅದರಂತೆ ನಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಬಾಲಕೃಷ್ಣ ಬಿನ್ ನಾರಾಯಣಪ್ಪ ರವರು ತಮ್ಮ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಹಾಗೂ ಅಂಗಡಿ ಮಾಲೀಕರು ಅಲ್ಲಿಂದ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ಬಾಲಕೃಷ್ಣ ಬಿನ್ ನಾರಾಯಣಪ್ಪ, 50 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಗೊಂದಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್   ಚಿಯರ್ಸ್ ವಿಸ್ಕಿಯ 22 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 980 ಎಂ.ಎಲ್, ಅದರ ಬೆಲೆ 770/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 16-00 ಗಂಟೆಯಿಂದ 16-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಬಾಲಕೃಷ್ಣ ಬಿನ್ ನಾರಾಯಣಪ್ಪ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು  ಕೋರಿ ನೀಡಿದ ದೂರು.

Last Updated: 12-09-2021 08:02 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080