ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.233/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ:11/08/2021 ರಂದು ಬೆಳಿಗ್ಗೆ 10-30 ಗಂಟೆಗೆ  ಶ್ರೀ. ನಾಗರಾಜ್ ಡಿ ಆರ್. ಪೊಲೀಸ್ ಇನ್ಸ್ ಪೆಕ್ಟರ್, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವ, ದಿನಾಂಕ:11-08-2021 ರಂದು ಬೆಳಗ್ಗೆ 9.00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ ಗೂಳೂರು ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ ಇಬ್ಬರು  ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಗೂಳೂರು  ಠಾಣೆಯ ಸಿಬ್ಬಂದಿಗಳಾದ ಸಿಹೆಚ್ ಸಿ -212 ಶ್ರೀನಾಥ್ ಮತ್ತು ಪಿಸಿ-387 ಮೂಹನ್ ಕುಮಾರ್ ಮತ್ತು  ಜೀಪ್ ಚಾಲಕ ನೂರ್ ಬಾಷಾ ಎಹೆಚ್ ಸಿ 57 ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ರ ಜೀಪಿನಲ್ಲಿ ಗೂಳೂರು  ಗ್ರಾಮದ ಗ್ರಾಮಪಂಚಾಯ್ತಿಯ ಬಳಿ  ಹೋಗಿ ಅಲ್ಲಿಯೇ ಇದ್ದ ಪಂಚರನ್ನು  ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಬೆಳಗ್ಗೆ 9.20 ಗಂಟೆಗೆ ಗೂಳೂರು ಬಸ್ ನಿಲ್ದಾಣದ ಬಳಿ ಹೋಗಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು  ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ ಅಂಕಿಗಳ 2 ಮಟ್ಕಾ ಚೀಟಿ, ಎರಡು ಬಾಲ್ ಪೆನ್ ಹಾಗೂ ಅವರ  ಬಳಿ  ಇದ್ದ 450/-  ಮತ್ತು  490/- ರೂಗಳನ್ನು ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಮಂಜುನಾಥ ಬಿನ್ ಲೇಟ್ ಚೆನ್ನರಾಯಪ್ಪ, 54 ವರ್ಷ, ಆದಿಕರ್ನಾಟಕ ಜನಾಂಗ, ಕೊಲಿಕೆಲಸ, ವಾಸ ಗೂಳೂರು ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು, 2] ಜಬೀಉಲ್ಲಾ ಬಿನ್ ಲೇಟ್ ಖಾಜಾಸಾಬ್, 40 ವರ್ಷ, ಮುಸ್ಲಿಂ ಜನಾಂಗ, ದ್ವಿಚಕ್ರವಾಹನದ ಮೆಕಾನಿಕ್ ಕೆಲಸ, ವಾಸ ಗೂಳೂರು ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ಇಬ್ಬರು ತಿಳಿಸಿರುತ್ತಾರೆ.  ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದುಅಸಲು ಧಾಳಿ ಪಂಚನಾಮೆ ಮಾಲು ಮತ್ತು ಆರೋಪಿಯೊಂದಿಗೆ ಬೆಳಗ್ಗೆ 10.30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-227/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 11-08-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 279,337,304(A) ಐ.ಪಿ.ಸಿ & 187 INDIAN MOTOR VEHICLES ACT, 1988:-

    ದಿನಾಂಕ:11-08-2021 ರಂದು 19-00 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಸುಮಾರು 16 ವರ್ಷದ ಭಾನುತೇಜ ಮತ್ತು 15 ವರ್ಷದ ಸಹನಾ ಎಂಬ ಮಕ್ಕಳಿರುತ್ತಾರೆ. ದಿನಾಂಕ:11-08-2021 ರಂದು ನನ್ನ ಮಗನಾದ ಭಾನುತೇಜ ಮತ್ತು ನಮ್ಮ ಗ್ರಾಮದ ವಾಸಿ ರೆಡ್ಡಪ್ಪರೆಡ್ಡಿ ರವರ ಮಗನಾದ ತರುಣ್ R. ರವರು ಬಟ್ಟೆಗಳನ್ನು ತೆಗೆದುಕೊಂಡು ಬರಲು KA-40 ED-4136 ಸೂಪರ್ ಎಕ್ಸಲ್ ಹೆವಿಡ್ಯೂಟಿ ದ್ವಿಚಕ್ರವಾಹನದಲ್ಲಿ  ಚೇಳೂರು ಹೋಗಿದ್ದರು. ನಂತರ ಬಟ್ಟೆಗಳನ್ನು ಚೇಳೂರು ಅಂಗಡಿಯಲ್ಲಿ ತೆಗೆದುಕೊಂಡು ನಂತರ ನಮ್ಮ ಗ್ರಾಮ ಗೊಟ್ಲಪಲ್ಲಿಗೆ ಬರಲು ನಮ್ಮ ಗ್ರಾಮದ ವಾಸಿ ತರುಣ್ R. ರವರು ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ನನ್ನ ಮಗನಾದ ಭಾನುತೇಜ ರವರು ದ್ವಿಚಕ್ರವಾಹನದಲ್ಲಿ ಹಿಂದುಗಡೆ ಕುಳಿತುಕೊಂಡು ಮೂಗಿರೆಡ್ಡಿಪಲ್ಲಿ ಗ್ರಾಮದ ಬಳಿ ಕೆರೆಯ ಕಟ್ಟೆಯ ಮೇಲೆ ಮುಖ್ಯ ರಸ್ತೆಯಲ್ಲಿ ಸುಮಾರು  ಸಂಜೆ 4-30 ಗಂಟೆಯ ಸಮಯದಲ್ಲಿ ಬರುತ್ತಿದ್ದಾಗ ಎದರುಗಡೆಯಿಂದ ಯಾವುದೋ 407 ಟೆಂಪೋ ವಾಹನವನ್ನು ಚಾಲಕ ಅತೀವೇಗ ಮತ್ತು ಅಜಾಗುರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗ ಭಾನುತೇಜ ಮತ್ತು ತರುಣ್ ಆರ್ ರವರು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಟೆಂಪೋವಿನ ಚಾಲಕ ಟೆಂಪೋವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಟೆಂಪೋ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ದ್ವಿಚಕ್ರವಾಹನವು ಕೆಳಗೆ ಬಿದ್ದು ಹೋಗಿದ್ದು ಜಕ್ಕಂಗೊಂಡಿದ್ದು, ಹಾಗೂ ಪೂರ್ತಿ ಸುಟ್ಟುಹೋಗಿರುತ್ತದೆ. ದ್ವಿಚಕ್ರವಾಹನದಲ್ಲಿ ಇದ್ದ ನನ್ನ ಮಗನಿಗೆ ಎದೆಯ ಮೇಲೆ ಬಲಭಾಗದ ಕೆನ್ನೆಯ ಮೇಲೆ ಹಾಗೂ ಬಲಗಾಲಿನ ತೊಡೆಯ ಮೇಲೆ ರಕ್ತಗಾಯಗಳಾಗಿದ್ದರ ಪರಿಣಾಮ ಮೃತಪಟ್ಟಿರುತ್ತಾನೆ. ಹಾಗೂ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತರುಣ್ ಆರ್ ರವರಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ. ಟೆಂಪೋವಿನ ನೊಂದಣಿ ಸಂಖ್ಯೆ ಮತ್ತು ಚಾಲಕನ ಹೆಸರು ಮತ್ತು ವಿಳಾಸವನ್ನು ತಿಳಿಯಬೇಕಾಗಿರುತ್ತದೆ. ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಟೆಂಪೋವಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ್ದರ ಮೇರೆಗೆ ಠಾಣಾ ಮೊ.ಸಂ:75/2021 ಕಲಂ: 279, 337, 304 (ಎ) ಐಪಿಸಿ ಮತ್ತು 187 ಐ.ಎಂ.ವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.356/2021 ಕಲಂ. 323,324,341,504,506 ಐ.ಪಿ.ಸಿ :-

     ದಿನಾಂಕ: 11/08/2021 ರಂದು ಸಂಜೆ 5.30 ಗಂಟೆಗೆ ಪಿರ್ಯಾಧಿದಾರರಾದ ಸುರೇಶ್ ಬಿನ್ ಲೇಟ್ ಮುನಿರಾಮಪ್ಪ, 30 ವರ್ಷ, ಕೂಲಿ ಕೆಲಸ, ಕೊರಚ ಜನಾಂಗ, ಕಡಶಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೂ ಮತ್ತು ತಮ್ಮ ಗ್ರಾಮದ ವಾಸಿ ಡೇವಿಡ್ ಬಿನ್ ಆಂತೋಣಿಸ್ವಾಮಿ ಎಂಬುವವರಿಗೆ ಈ ಹಿಂದೆ 3-4 ಬಾರಿ ವಿನಾಕಾರಣ ಸಣ್ಣ ಪುಟ್ಟ ಗಲಾಟೆಗಳಾಗಿದ್ದು ನಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ಆತನಿಗೆ ಬುದ್ದಿವಾದ ಹೇಳಿರುತ್ತಾರೆ. ಹೀಗಿರುವಾಗ ದಿನಾಂಕ: 10/08/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ತಾನು ತಮ್ಮ ತೋಟಕ್ಕೆ ಹೋಗುವ ಸಲುವಾಗಿ ತಮ್ಮ ಗ್ರಾಮದ ಆಂಜಿನಪ್ಪ ರವರ ಜಮೀನಿನ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ಡೇವಿಡ್ ರವರು ತನ್ನನ್ನು ಅಡ್ಡಗಟ್ಟಿ, ತನ್ನನು ಕುರಿತು “ಏನೋ ಬೋಳಿ ನನ್ನ ಮಗನೇ ನೀನು ನಮ್ಮ ತಾಯಿ ಮರಿಯಮ್ಮ ರವರಿಗೆ ನನ್ನ ಮೇಲೆ ಇಲ್ಲ ಸಲ್ಲದ ದೂರುಗಳನ್ನು ಹೇಳೀದ್ದಿಯಾ” ಎಂದು ಅವಾಶ್ಚ ಶಬ್ದಗಳಿಂದ ಬೈದು, ಕೈ ಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಷ್ಟರಲ್ಲಿ ತಮ್ಮ ಗ್ರಾಮದ ವಾಸಿ ಆಂತೋಣಿಸ್ವಾಮಿ ಬಿನ್ ಅರುಳಪ್ಪ ಮತ್ತು ಚಿನ್ನಪ್ಪ ಬಿನ್ ಗ್ಯಾನಪ್ಪ ರವರು ಬಂದು ಆತನಿಂದ ತನ್ನನ್ನು ರಕ್ಷಿಸಿದರು. ನಂತರ ಡೇವಿಡ್ ತನ್ನನ್ನು ಕುರಿತು “ಈ ದಿನ ಉಳಿದುಕೊಂಡಿದ್ದಿಯಾ ಇನ್ನೋಂದು ಸಾರಿ ನನ್ನ ಬಗ್ಗೆ ನನ್ನ ತಾಯಿಗೆ ಏನಾದರೂ ದೂರು ಹೇಳಿದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು. ಆಗ ತಾನು ಅಲ್ಲಿಯೇ ಕುಸಿದು ಬಿದ್ದಿದ್ದು ನಂತರ ತನ್ನ ಹೆಂಡತಿ ಗಾಯಿತ್ರಿ ರವರು ತನ್ನನ್ನು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರು ಇಲ್ಲಿನ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ವತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ಸು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಮೇಲ್ಕಂಡ ತಮ್ಮ ಗ್ರಾಮದ ವಾಸಿ ಡೇವಿಡ್ ಬಿನ್ ಆಂತೋಣಿಸ್ವಾಮಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.357/2021 ಕಲಂ. 279,304(A) ಐ.ಪಿ.ಸಿ :-

     ದಿನಾಂಕ: 12/08/2021 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಯಶೋದಮ್ಮ ಕೋಂ ರಮೇಶ್, 46 ವರ್ಷ, ಗೃಹಣಿ, ನಾಯಕ ಜನಾಂಗ, ಅಕ್ಕಿಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಮಕ್ಕಳಿದ್ದು ಮೊದಲನೇ ಪ್ರಿಯಾಂಕ ಮತ್ತು ಎರಡನೇ ಪವನ್.ಆರ್ ರವರಾಗಿರುತ್ತಾರೆ. ತನ್ನ ಮಗನಾದ ಪವನ್.ಆರ್ ರವರಿಗೆ 21 ವರ್ಷ ವಯಸ್ಸಾಗಿದ್ದು ಈತನು ಹೊಸಕೋಟೆ ತಾಲ್ಲೂಕು, ಪಿಲ್ಲಗುಪ್ಪೆ ಕೈಗಾರಿಕಾ ಪ್ರದೇಶದ ಒಂದು ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ: 11/08/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಪವನ್ ರವರು ಮನೆಗೆ ತರಕಾರಿ ತರುವ ಸಲುವಾಗಿ ತಮ್ಮ ಬಾಬತ್ತು ಕೆಎ-40 ಎಸ್-1224 ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಗೆ ಹೋಗಿರುತ್ತಾನೆ. ನಂತರ ಸಂಜೆ ಸುಮಾರು 7.30 ಗಂಟೆ ಸಮಯದಲ್ಲಿ ತನ್ನ ಮೈದುನನಾದ ನರಸಿಂಹಮೂರ್ತಿ ರವರು ತನಗೆ ಕರೆ ಮಾಡಿ ಪವನ್ ಕುಮಾರ್ ರವರಿಗೆ ಸಂತೇಕಲ್ಲಹಳ್ಳಿ ಗೇಟ್ ಬಳಿ ಅಪಘಾತವಾಗಿದ್ದು ತಾನು ಆಂಬುಲೆನ್ಸ್ ನಲ್ಲಿ ಹೊಸಕೋಟೆ ಆಸ್ವತ್ರೆಗೆ ಕರೆದುಕೊಂಡು ಹೋಗುತಿರುವುದಾಗಿ ಹೇಳಿರುತ್ತಾರೆ. ಕೂಡಲೇ ತಾನು ಮತ್ತು ತನ್ನ ಅಳಿಯ ಅವಿನಾಷ್ ರವರು ಹೋಸಕೋಟೆಯ ಸರ್ಕಾರಿ ಆಸ್ವತ್ರೆಗೆ ಹೋಗಿ ನೋಡಲಾಗಿ ತನ್ನ ಮಗ ಮೃತನಾಗಿದ್ದು, ಅಲ್ಲಿದ ತನ್ನ ಮೈದುನ ನರಸಿಂಹಮೂರ್ತಿ ರವರನ್ನು ಸದರಿ ಅಫಘಾತದ ಬಗ್ಗೆ ವಿಚಾರ ಮಾಡಿಲಾಗಿ ಆತನು “ನಾನು ಈ ದಿನ ಸಂಜೆ 7.15 ಗಂಟೆ ಸಮಯದಲ್ಲಿ ಸಂತೇಕಲ್ಲಹಳ್ಳಿ ಗೇಟ್ ಬಳಿ ನಿಂತಿದ್ದಾಗ ಪವನ್ ರವರು ಆತನ ಬಾಬತ್ತು ಕೆಎ-40 ಎಸ್-1224 ಸ್ಲೆಂಡರ್ ಪ್ರೋ ದ್ವಿಚಕ್ರ ವಾಹನದಲ್ಲಿ ಹೆಚ್.ಕ್ರಾಸ್ ಕಡೆಯಿಂದ ಬಂದು ಸಂತೇಕಲ್ಲಹಳ್ಳಿ ಗ್ರಾಮದ ಒಳಗೆ ಹೋಗಲು ತನ್ನ ವಾಹನವನ್ನು ಎಡಕ್ಕೆ ತಿರುಗಿಸಿದ್ದು ರಸ್ತೆಯ ಎಡ ಭಾಗದಲ್ಲಿ ಬರುತ್ತಿದ್ದ ಕೆಎ-53 ಡಿ-7699 ನೊಂದಣಿ ಸಂಖ್ಯೆಯ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪವನ್ ರವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ಪವನ್ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಪವನ್ ರವರಿಗೆ ತಲೆಗೆ ಮತ್ತು ಬಲಗೈ ಗೆ ರಕ್ತಗಾಯವಾಗಿದ್ದು ತಾನು ಕೂಡಲೇ ಪವನ್ ರವರನ್ನು ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಪವನ್ ರವರು ಮೃತ ಪಟ್ಟಿರುವುದಾಗಿ ತಿಳಿಸಿದರು ಎಂದು ತಿಳಿಸಿದರು. ಹಾಲಿ ಪವನ್ ರವರ ಮೃತ ದೇಹ ಹೋಸಕೋಟೆ ಸರ್ಕಾರಿ ಆಸ್ವತ್ರೆಯ ಶವಾಗಾರದಲ್ಲಿರುತ್ತೆ. ರಾತ್ರಿ ಆ ವೇಳೆಯಾದ್ದರಿಂದ ತಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನ್ನ ಮಗನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಮೇಲ್ಕಂಡ ಕೆಎ-53 ಡಿ-7699 ನೊಂದಣಿ ಸಂಖ್ಯೆಯ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 143,147,148,323,324,504,506,149 ಐ.ಪಿ.ಸಿ :-

     ದಿನಾಂಕ: 11/08/2021 ರಂದು ರಾತ್ರಿ 11:00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸೈಯದ್ ಅಪ್ಜಲ್ ಬಿನ್ ಸೈಯದ್ ಸಲೀಂ ರವರು ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 11:30 ಗಂಟೆಗೆ ವಾಪಸ್ಸಾಗಿ ಸಾರಾಂಶವೇನೆಂದರೆ  ನಾನು ಬಾಡಿಗೆ ಮನೆ ಮಾಡಿಕೊಂಡು ಜೆ ಜೆ ಕಾಲೋನಿಯಲ್ಲಿ ವಾಸವಿದ್ದು, ಈ ದಿನ ದಿ: 11/08/2021 ರಂದು ರಾತ್ರಿ ಸುಮಾರು 7:30 ಗಂಟೆ ಸಮಯದಲ್ಲಿ ನಾನು ನನ್ನ ತಮ್ಮ ಸೈಯದ್ ಆರೀಪ್ ರವರು ಕೆಲಸ ಮುಗಿಸಿಕೊಂಡು ನಮ್ಮ ಮನೆಯ ಬಳಿ ಬಂದಾಗ  ಇದೇ ಕಾಲೋನಿಯ ಹುಡುಗರು 10 ರಿಂದ  15 ಜನ ನಮ್ಮ ಮನೆಯ ಕೆಳಗಡೆ ಮನೆಯಲ್ಲಿ ವಾಸವಿರುವ ಹೆಂಗಸರ ಬಳಿ ಬಂದು ಗಾಂಜಾ ಸೇವನೆ , ದೂಮಪಾನ ಮಾಡಿಕೊಂಡು ಹರಟೆ ಒಡೆಯುತ್ತಿದ್ದರು ನಾನು ಆ ಹುಡುಗರನ್ನು ನೋಡಿ ಏ ಯಾಕಪ್ಪ ನೀವು ಮನೆಯ ಬಳಿ ಬಂದು ಈ ರೀತಿ ನಡೆದುಕೊಳ್ಳುತ್ತೀರಿ ನಾವು ಸಂಸಾರಸ್ಥರು ಈಗೆಲ್ಲಾ ಇಲ್ಲಿ ಮಾಡಬೇಡಿ ಎಂದು ಹೇಳಿದ್ದಕ್ಕೆ ಅಲ್ಲಿದ್ದ ವಿಜಯ @ ಬೋಟಿ, ಚಂದ್ರು, ಹರೀಶ್, ನವೀನ್, ಮೂರ್ತಿ ಇನ್ನು ಕೆಲವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ನೀನು ಯಾರೋ ಬೋಲಿ ಮಗನೆ ಕೇಳುವುದಕ್ಕೆ ಎಂತ ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ನವೀನ್ ಎಂಬುವವರು ತನ್ನ ಕೈಯಲ್ಲಿದ್ದ ಯಾವುದೋ ತರಹದ ಚಾಕುವಿನಿಂದ ನನ್ನ  ಎದೆಯ ಬಳಿ, ಹೊಟ್ಟೆಯ ಬಳಿ ತಿವಿದು ರಕ್ತಗಾಯಪಡಿಸಿದನು ಮತ್ತು ಇವನ ಜೊತೆಯಲ್ಲಿಯೇ ಇದ್ದ ಚಂದ್ರು, ಹರೀಶ್, ಮೂರ್ತಿ, ವಿಜಯ ರವರು ನನ್ನನ್ನು ಎಳೆದಾಡಿಕೊಂಡು ಕೈಗಳಿಂದ ಮೈ ಮೇಲೆ ಹೊಡೆಯುತ್ತಿದ್ದಾಗ ಅಡ್ಡ ಬಂದ ನನ್ನ ತಮ್ಮ ಸೈಯದ್ ಆರೀಪ್ ರವರನ್ನು ಸಹ ಮೇಲ್ಕಂಡರವರು ಕೈಗಳಿಂದ ಹೊಡೆದು ಬೆನ್ನಿನ ಹಿಂಭಾಗ ಗಾಯಗೊಳಿಸಿದರು ನಂತರ ಅಲ್ಲಿಯೇ ಇದ್ದ ಇರ್ಫಾನ್ ರವರು ಜಗಳ ಬಿಡಿಸಲು ಬಂದಾಗ ಅವನಿಗೂ ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿ ಈ ನನ್ನ ಮಕ್ಕಳನ್ನು ಸುಮ್ಮನೆ ಬಿಡಬಾರದು ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ಅಲ್ಲಿಯೇ ಇದ್ದ ಪೈರೋಜ್ ರವರು ಬಂದು ನಮ್ಮನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ನಮ್ಮಗಳ ಮೇಲೆ ವಿನಾಃ ಕಾರಣ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ ಮೇಲ್ಕಂಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.183/2021 ಕಲಂ. ಮನುಷ್ಯ ಕಾಣೆ :-

     ದಿ:11.08.2021 ರಂದು ಮದ್ಯಾಹ್ನ 15-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ವೆಂಕಟೇಶ್ ಬಿನ್ ಚಿಕ್ಕ ಆವುಲಕೊಂಡಪ್ಪ. 42 ವರ್ಷ, ವಕ್ಕಲಿಗರು,ಕದಿರದೇವರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ. ನನ್ನ ಮಗನಾದ ಅಂಬರೀಷನು ದಿ:16.07.2021 ರಂದು ಬೆಳಿಗ್ಗೆ 9-00 ರಿಂದ   10-00 ಗಂಟೆಯೊಳಗೆ ಮನೆಯಿಂದ ಹೊರಗೆ ಹೋದವನು ಇಲ್ಲಿಯ ತನಕ ಮನೆಗೆ ಬಂದಿರುವುದಿಲ್ಲ. ನಾವು ನಮ್ಮ ಸಂಬಂದಿಕರು ಹಾಗೂ ಹಾಗೂ ಇತರೆ ಕಡೆಗಳಲ್ಲಿ ಇಲ್ಲಿಯ ತನಕ ಹುಡುಕಿದರು ಪತ್ತೆಯಾಗಿರುವುದಿಲ್ಲ. ಹುಡಗನ ಹೆಸರು. ಅಂಬರೀಶ, ವಯಸ್ಸು 20 ವರ್ಷ, ಮಾತನಾಡುವ ಬಾಷೆ, ಕನ್ನಡ. ಸಾದಾರಣ ಮೈಬಣ್ಣ, ಬಿಸ್ಕತ್ ಕಲರ್ ಪ್ಯಾಂಟ್, ಬ್ಲಾಕ್ ಬಣ್ಣದ ಟೀ ಷರಟು, ಧರಿಸಿರುತ್ತಾನೆ.  ಆದ್ದರಿಂದ ನನ್ನ ಮಗನನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

7. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 279,337 ಐ.ಪಿ.ಸಿ:-

      ದಿನಾಂಕ 11/08/2021 ರಂದು ಸಂಜೆ 6.00 ಗಂಟೆಯಲ್ಲಿ ಎಂ.ಎನ್ ವೆಂಕಟರೆಡ್ಡಿ ಬಿನ್ ನರಸಿಂಹನ್ನ, 44 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ವಾಸ ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನಂದರೆ,ತನ್ನ ತಮ್ಮನಾದ ಸುಬ್ಬರಾಯಪ್ಪ ರವರಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ದಿನಾಂಕ 02/08/2021 ರಂದು ಸಂಜೆ ಮುರಗಮಲ್ಲಾ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬರಲು ಕೆಎ-07-ಕೆ-5027 ನೋಂದಣಿ ಸಂಖ್ಯೆಯ ಸ್ಲೇಂಡರ್ ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳಿತುಕೊಂಡು ತಮ್ಮ ಗ್ರಾಮದ ಶಿವಾರೆಡ್ಡಿ ರವರು ದ್ವಿಚಕ್ರವಾಹನವನ್ನುಚಾಲನೆ ಮಾಡಿಕೊಂಡು ಹೋಗಿದ್ದು, ಅದೇ ದಿನ ಸಂಜೆ ಶಿವಾರೆಡ್ಡಿ ತನಗೆ ಪೋನ್ ಮಾಡಿ ಚಿಕ್ಕಕರಕಮಾಕಲಹಳ್ಳಿ ಗ್ರಾಮದ ಸಮೀಪ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಜೆ 4-30 ಗಂಟೆ ಸಮಯದಲ್ಲಿ ಮುರಗಮಲ್ಲಾ ಕಡೆಯಿಂದ ಕೆಎ-03-ಎಆರ್-9738 ನೋಂದಣಿ ಸಂಖ್ಯೆಯ ಆಟೋ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ದ್ವಿಚಕ್ರವಾಹನ ಜಖಂಗೊಂಡು ದ್ವಿಚಕ್ರವಾಹನದಲ್ಲಿದ್ದ ನಿನ್ನ ತಮ್ಮ ಸುಬ್ಬರಾಯಪ್ಪ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ವಿಚಾರ  ತಿಳಿಸಿದಾಗ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸುಬ್ಬರಾಯಪ್ಪನಿಗೆ ಬಲಕಾಲು ಮುರಿದು ಗಾಯವಾಗಿದ್ದು, ಬಲಕೆನ್ನೆಗೂ ಸಹ ಗಾಯಗಳಾಗಿರುತ್ತವೆ. ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಶಿವಾರೆಡ್ಡಿಗೆ ಮೂಗೇಟುಗಳಾಗಿರುತ್ತವೆ. ಆಟೋದಲ್ಲಿದ್ದವರಿಗೆ ಸಣ್ಣಪುಟ್ಟಗಾಯಗಳಾಗಿರುತ್ತವೆ.  ಕೂಡಲೇ ತಾನು ಮತ್ತು ಅಲ್ಲಿಯೇ ಇದ್ದ ನಂದಿಗಾನಹಳ್ಳಿ ಗ್ರಾಮದ ಕ್ರೀಷ್ಣಾರೆಡ್ಡಿ ಬಿನ್ ಸೊಣ್ಣಪ್ಪ ರವರು ಗಾಯಾಳು ಸುಬ್ಬರಾಯಪ್ಪ ರವರನ್ನು  ಉಪಚರಿಸಿದ್ದು, ನಂತರ ನಾನು ತನ್ನ ತಮ್ಮನನ್ನು 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು  ತನ್ನ ತಮ್ಮನಿಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರಿಂದ ಕೋಲಾರದ ನರೇಂದ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡಿಸಿರುತ್ತೇನೆ. ತನ್ನ ತಮ್ಮನಿಗೆ ಶಸ್ತ್ರಚಿಕಿತ್ಸೆ ಆಗಿ ಆಸ್ಪತ್ರೆಯಲ್ಲಿ ಯಾರೂ ನೋಡಿಕೊಳ್ಳುವವರು ಇಲ್ಲದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಅಪಘಾತಪಡಿಸಿದ ಕೆಎ-03-ಎಆರ್-9738 ನೋಂದಣಿ ಸಂಖ್ಯೆಯ ಆಟೋ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 323,324,355,504 ಐ.ಪಿ.ಸಿ:-

     ದಿನಾಂಕ:12.08.2021 ರಂದು ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ  ಚಂದ್ರ ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ  ತಾನು  ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ಉಪ್ಪಾರ್ಲಪಲ್ಲಿ  ಗ್ರಾಮದ ವಾಸಿಯಾಗಿದ್ದು ನಾವು ನಮ್ಮ ಗ್ರಾಮದ ಚೌಡಿರೆಡ್ಡಿ ರವರ ಜಮೀನಿನಲ್ಲಿ  ಗುತ್ತಿಗೆಗೆ ಜಮೀನು ಉಳುಮೆ ಮಾಡಿ ಅದರಲ್ಲಿ ಬೆಳೆದಿದ್ದ 75 ಮೂಟೆ ಭತ್ತವನ್ನು ಅವರ ಮನೆಯಲ್ಲಿಯೇ ಇಟ್ಟಿದ್ದೆವು. ಆದರೆ ನಮಗೆ ತಿಳಿಯದೆ ಚೌಡರೆಡ್ಡಿ ರವರ ಮಗ ಕಿರಣ್ ಕುಮಾರ್ ರೆಡ್ಡಿ ರವರು ಭತ್ತವನ್ನು ಮಾರಾಟ ಮಾಡಿರುತ್ತಾನೆ. ನಾನು ಮತ್ತು ನನ್ನ ತಮ್ಮ ವೆಂಕಟರವಣ ಬಿನ್ ಶಂಕರಪ್ಪ ರವರು ಭತ್ತದ ಬಾಬತ್ತು ಭತ್ತದ ಹಣವನ್ನು ಕೇಳಿದರೂ ಸಹ ಕೊಡುತ್ತಿರಲಿಲ್ಲ. ಅದರಂತೆ ದಿನಾಂಕ: 9/08/2021 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಶ್ರೀ ರಾಮಸ್ವಾಮಿ ದೇವಾಲಯದ ಮುಂಬಾಗ ಕಿರಣ್ ಕುಮಾರ್ ರೆಡ್ಡಿ ರವರು ಕುಳಿತಿರುವುದನ್ನು ಕಂಡು ನಾನು ಮತ್ತು ನನ್ನ ತಮ್ಮ ವೆಂಕಟರವಣ ರವರುಗಳು ಹೋಗಿ ಹಣವನ್ನು ಕೇಳಿದರೆ ಅದಕ್ಕೆ ಅವರು ನಮ್ಮನ್ನು ಏ ನೀವ್ಯಾರೋ ನನ್ನನ್ನು ಹಣ ಕೇಳುವುದಕ್ಕೆ ಎಂದು ಅವಾಚ್ಯವಾಗಿ ಬೈಯ್ದು ಕೈಗಳಿಂದ ನಮ್ಮ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಚಪ್ಪಲಿಯಿಂದ ನನ್ನನ್ನು ಹೊಡೆದ, ನಂತರ ಅಲ್ಲಿಯೇ ಇದ್ದ ಕಟ್ಟಿಗೆಯಿಂದ ನನ್ನ ಮೈಮೇಲೆ ಹೊಡೆದ.  ಆವೇಳೆಗೆ ನಮ್ಮ ಗ್ರಾಮದ ಪ್ರಕಾಶ ಬಿನ್ ರಾಮಸ್ವಾಮಿ, ತುಮ್ಮಲಪ್ಪ ಬಿನ್ ವೆಂಕಟಪ್ಪ ರವರು ಜಗಳವನ್ನು ಬಿಡಿಸಿದರು. ನಾವು ನಮ್ಮ ಮನೆಗಳಿಗೆ ಹೊರಟು ಹೋದೆವು. ನಂತರ ತಿಳಿಯಲಾಗಿ ಕಿರಣ್ ಕುಮಾರ ರೆಡ್ಡಿ ರವರು ಪೋನ್ ಮಾಡಿ ಆಂದ್ರದವರನ್ನು ಕರೆಸಿದ್ದು, ನಾನು ಮನೆಯಲ್ಲಿದ್ದರೆ ಆಂದ್ರದವರು ನಮ್ಮ ಬೋರ್ ವೆಲ್ ಬಳಿಗೆ 3 ದ್ವಿಚಕ್ರ ವಾಹನಗಲ್ಲಿ ನಮ್ಮ ಬೋರ್ ವೆಲ್ ಬಳಿಗೆ ಬಂದು ಹೋಗಿರುವುದಾಗಿ ತಿಳಿಯಿತು.  ಈ ಸಂಬಂಧ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡುತ್ತೇವೆಂದು ತಿಳಿಸಿದ್ದು, ಅವರು ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ನನ್ನನ್ನು ಹೊಡೆದ ಮೇಲ್ಕಂಡ ಕಿರಣ್ ಕುಮಾರ್ ರೆಡ್ಡಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.264/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 11-08-2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಕೆ.ಎಂ. ಭಾಗ್ಯಮ್ಮ ಕೋಂ ವಿಶ್ವನಾಥ, 45 ವರ್ಷ, ಲಿಂಗಾಯಿತರು, ವಾಸ: ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತನ್ನ ಗಂಡನಾದ ವಿಶ್ವನಾಥ ರವರಿಗೆ 1ನೇ ಪವನ್ ಕುಮಾರ್ ಮತ್ತು 2ನೇ ಪಣಿಕುಮಾರ್ ರವರಾಗಿರುತ್ತಾರೆ, ತಮ್ಮ ಮನೆಯ ಮುಂದೆ ತಮ್ಮ ಬಾಬತ್ತು ಖಾಲಿ ಜಾಗ ಇದ್ದು ಸದರಿ ಖಾಲಿ ಜಾಗದ ವಿಚಾರದಲ್ಲಿ ತಮಗೆ ಮತ್ತು ತನ್ನ ಗಂಡನ ತಮ್ಮನಾದ ಶಿವಕುಮಾರ್ ರವರುಗಳಿಗೆ ವಿವಾದಗಳಿರುತ್ತೆ, ಹೀಗಿರುವಲ್ಲಿ ತಾವು ತಮ್ಮ ಬಾಬತ್ತು ಖಾಲಿ ಜಾಗದಲ್ಲಿ ನೀರಿನ ಸಂಪ್ ಮಾಡಿಕೊಳ್ಳಲು ಹೋದಾಗ ಈ ವಿಚಾರದಲ್ಲಿ ನಾಗರತ್ನಮ್ಮ ಕೋಂ ಶಿವಕುಮಾರ್ ರವರು ತಮ್ಮ ಮೇಲೆ ಗಲಾಟೆ ಮಾಡಿರುತ್ತಾರೆ, ದಿನಾಂಕ: 11-08-2021 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ತಮ್ಮ ಮನೆಯ ಮುಂದೆ ಇರುವ ಖಾಲಿ ಜಾಗದಲ್ಲಿ ನೀರಿನ ಸಂಪ್ ಮಾಡಿಕೊಳ್ಳುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ನಾಗರತ್ನಮ್ಮ ಕೋಂ ಶಿವಕುಮಾರ್, ದಿವ್ಯ ಬಿನ್ ಶಿವಕುಮಾರ್, ರಾಕೇಶ್ ಬಿನ್ ಶಿವಕುಮಾರ್ ರವರುಗಳು ಬಂದು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಈ ಜಾಗ ನಮ್ಮದು ಇಲ್ಲಿ ಸಂಪ್ ಮಾಡಬೇಡಿ ಎಂದು ಹೇಳಿ ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ನಾಗತ್ನಮ್ಮ ತನ್ನನ್ನು ಹಿಡಿದು ಕೆಳಗಡೆ ತಳ್ಳಿ ತನ್ನ ಕೈಯಲ್ಲಿದ್ದ ತರಕಾರಿ ಕೊಯ್ಯುವ ಚಾಕುವಿನಿಂದ ತನ್ನ ಎಡಗೈ ಮೇಲೆ ಕೊಯ್ದು ರಕ್ತಗಾಯವುಂಟುಮಾಡಿದ್ದು, ದಿವ್ಯ ತನ್ನ ಬಲಗೈ ಬೆಳರನ್ನು ಹಿಡಿದು ಮುರಿದು ನೋವಿನ ಗಾಯವನ್ನು ಉಂಟುಮಾಡಿರುತ್ತಾರೆ, ನಾಗರತ್ನಮ್ಮ ತನ್ನ ಸೀರೆಯನ್ನು ಹಿಡಿದು ಕೆಳಗಡೆ ತಳ್ಳಿರುತ್ತಾಳೆ, ಎಲ್ಲರೂ ಸೇರಿ ಈ ಜಮೀನಿನಲ್ಲಿ ನೀರಿನ ಸಂಪ್ ಮಾಡಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ದ್ಯಾವೀರಮ್ಮ ಕೋಂ ಸಿ.ಡಿ. ಶಿವಣ್ಣ ಮತ್ತು ಸುಮಾ ಕೋಂ ಮಂಜುನಾಥ ರವರು ಬಂದು ಅವರಿಂದ ತನ್ನನ್ನು ಬಿಡಿಸಿಕೊಂಡಿರುತ್ತಾರೆ, ವಿಚಾರ ತಿಳಿದು ಸ್ಥಳಕ್ಕೆ ಬಂದ ತನ್ನ ಮಗನಾದ ಪವನ್ ಕುಮಾರ್ ಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾನೆ. ತನ್ನ ಮೇಲೆ ಗಲಾಟೆ ಮಾಡಿದ ನಾಗರತ್ನಮ್ಮ, ದಿವ್ಯ ಮತ್ತು ರಾಕೇಶ್ ರವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ: 264/2021 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 12-08-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080