ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 186/2021 ಕಲಂ. 279,337,304(A) ಐ.ಪಿ.ಸಿ:-

  ದಿನಾಂಕ:12/07/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಂದಿನಿ ಕೋಂ ಸಿ.ಆದಿನಾರಾಯಣಪ್ಪ, 33 ವರ್ಷ, ಅಗಸರು, ಗೃಹಿಣಿ, ಸಂತೆ ಗೇಟ್ ಬಳಿ, 16 ನೇ ವಾರ್ಡ್, ಬಾಗೇಪಲ್ಲಿ ಟೌನ್ ನಾನು ಈಗ್ಗೆ ಸುಮಾರು 13 ವರ್ಷಗಳ ಹಿಂದೆ ಸಿ.ಆದಿನಾರಾಯಣಪ್ಪ ರವರನ್ನು ವಿವಾಹ ಮಾಡಿಕೊಂಡಿರುತ್ತೇನೆ. ನಮಗೆ ಇಬ್ಬರು ಮಕ್ಕಳಿದ್ದು, 1ನೇ ಸುಮ, 2ನೇ ವರುಣ್ ಕುಮಾರ್ ಆಗಿರುತ್ತಾರೆ. ನಾನು ನನ್ನ ಗಂಡ ಮಕ್ಕಳೊಂದಿಗೆ ಹಾಗೂ ನಮ್ಮ ಅತ್ತೆ ಮಾವನವರೊಂದಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದೆನು.  ನನ್ನ ಗಂಡ ಸಿ. ಆದಿನಾರಾಯಣಪ್ಪ ರವರು ಗೃಹರಕ್ಷಕ ಇಲಾಖೆಯಲ್ಲಿ ಹೋಂ ಗಾರ್ಡ್ ಕೆಲಸವನ್ನು ಮಾಡಿಕೊಂಡಿದ್ದರು. ನಂತರ ಇತ್ತೀಚೆಗೆ ಸುಮಾರು 4-5 ವರ್ಷಗಳಿಂದ ಡಿಶ್ ಕೇಬಲ್ ಅನ್ನು ಇಟ್ಟುಕೊಂಡಿದ್ದು ಅದರ ಜೊತೆಗೆ ಚಿಲ್ಲರೆ ಅಂಗಡಿ ವ್ಯಾಪಾರವನ್ನು ಮಾಡಿಕೊಂಡಿದ್ದರು.  ಹೀಗಿರುವಾಗ್ಗೆ ನನ್ನ ಗಂಡನಾದ ಸಿ.ಆದಿನಾರಾಯಣಪ್ಪ ರವರು ದಿನಾಂಕ:12/07/2021 ರಂದು ಬೆಳಿಗ್ಗೆ ಸುಮಾರು 7:00 ಗಂಟೆಯಲ್ಲಿ ವಾಕಿಂಗ್ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋದರು. ನಂತರ ಬೆಳಿಗ್ಗೆ ಸುಮಾರು 8:10 ಗಂಟೆಯಲ್ಲಿ ನಮ್ಮ ಪಕ್ಕದ ಮನೆಯ ನಾಗೆನಾಯ್ಕ ರವರ ಮನೆಯವರು ನಮ್ಮ ಮನೆಯ ಬಳಿ ಬಂದು ಭೂವೆನ್ನಲತಾಂಡಾದ ಬಳಿ ರಸ್ತೆಯಲ್ಲಿ ಸಿ.ಆದಿನಾರಾಯಣಪ್ಪನಿಗೆ ಅಪಘಾತವಾಗಿರುವುದಾಗಿ ತಿಳಿಸಿದರು. ಕೂಡಲೇ ನಾನು ನಮ್ಮ ಮಾವನೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ  ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಟ್ಟಿದ್ದರು. ಅಪಘಾತವನ್ನುಂಟು ಮಾಡಿದ ವಾಹನ ಎಂ.ಹೆಚ್-12 ಕೆ.ಪಿ-2195  ಸ್ಥಳದಲ್ಲಿಯೇ ಇತ್ತು. ವಿಚಾರ ಮಾಡಲಾಗಿ ನನ್ನ ಗಂಡ  ಭೂವೆನ್ನ ತಾಂಡದ ಬಳಿ ರಸ್ತೆಯಲ್ಲಿ ವಾಕಿಂಗ್ ಹೋಗುವಾಗ ಬೆಳಿಗ್ಗೆ ಸುಮಾರು 7:45 ಗಂಟೆಯಲ್ಲಿ ಎದುರುಗಡೆಯಿಂದ ಎಂ.ಹೆಚ್-12 ಕೆ.ಪಿ-2195 ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ನನ್ನ ಗಂಡನ ತಲೆಗೆ ಬಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಯಿತು. ನನ್ನ ಗಂಡನ ಮೃತದೇಹವನ್ನು ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿರುತ್ತೆ. ನನ್ನ ಗಂಡನಿಗೆ ಅಪಘಾತವನ್ನುಂಟು ಮಾಡಿರುವ ಎಂ.ಹೆಚ್-12 ಕೆ.ಪಿ-2195 ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

2. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 127/2021 ಕಲಂ. 505(1)(B) ಐ.ಪಿ.ಸಿ & 66 INFORMATION TECHNOLOGY ACT 2008:-

  ದಿನಾಂಕ: 11/07/2021 ರಂದು ಮದ್ಯಾಹ್ನ 2:45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಂತಾಮಣಿ ಮಾಜಿ ಶಾಸಕರಾದ ಡಾ/ ಎಂ.ಸಿ ಸುಧಾಕರ್ ರವರಿಗೆ ಅವಮಾನ ಮಾಡುವ ಹಾಗೂ ಸಾರ್ವಜನಿಕ ವಲಯದಲ್ಲಿ ಅವರ ಬಗ್ಗೆ ಕೆಟ್ಟ ಭಾವನೆ ಬರಿಸುವ ದುರುದ್ದೇಶದಿಂದ, ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಜಿ ಶಾಸಕ ಡಾ/ ಎಂ.ಸಿ ಸುಧಾಕರ್ ರವರು ,ಅವರ ಸ್ನೇಹಿತರ ಜೊತೆ ಕುಳಿತುಕೊಂಡಿರುವ ಚಿತ್ರಗಳನ್ನು ಎಡಿಟ್ ಮಾಡಿ ವಿರೂಪಗೊಳಿಸಿ, ಫೇಸ್ ಬುಕ್ ನಲ್ಲಿ ಪ್ರಕಟಿಸಿ ಅವರ ಘನತೆಗೆ ಧಕ್ಕೆ ತರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ, ಈ ಕೆಳಕಂಡ ಫೇಸ್ ಬುಕ್ ಖಾತೆ  ಹೊಂದಿರುವವರು  1) Jk fans jk fans 2) ಚಿಂತಾಮಣಿ ಯುವಕರ ಬಳಗ 3) chinthamani Karanataka 4) ಕೃಷ್ಣ ಸಿ ಎಂ ಯಾದವ್ ಅಗ್ರಹಾರ ಮತ್ತು ಇನ್ನು ಮುಂತಾದವರು  ನಿರಂತರವಾಗಿ ಈ ಕೃತ್ಯಗಳನ್ನು ಭಾಗಿಯಾಗುತ್ತಿದ್ದು ಇವರೆನ್ನೆಲ್ಲ ವಿಚಾರಣೆಗೊಳಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.64/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:11-07-2021 ರಂದು ಮಧ್ಯಾಹ್ನ 1-45 ಗಂಟೆಗೆ ಪಿ.ಎಸ್.ಐರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:12-07-2021 ರಂದು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಬುಕ್ಕನಪಲ್ಲಿ ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ ಎಂಬುವವರು ತನ್ನ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ವರ್ತಮಾನ ಬಂದಿದ್ದು, ಪಂಚರೊಂದಿಗೆ ದಾಳಿ ಮಾಡಲಾಗಿ ಮದ್ಯಪಾನ ಮಾಡುತ್ತಿದ್ದ ಯಾರೋ ಆಸಾಮಿಗಳು ಸ್ಥಳದಿಂದ ಓಡಿಹೋಗಿದ್ದು,  ಸ್ಥಳದಲ್ಲಿದ್ದ 90 ಎಂ.ಎಲ್ ಸಾಮರ್ಥ್ಯದ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು, ಒಂದು ಲೀಟರ್ ನ ಒಂದು ವಾಟರ್ ಬಾಟಲ್, ಒಂದು  ಖಾಲಿ ಗ್ಲಾಸ್  ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೆಟ್ ನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.228/2021 ಕಲಂ. 302 ಐ.ಪಿ.ಸಿ:-

  ದಿನಾಂಕ: 12-07-2021 ರಂದು  ಗಂಟೆಯಲ್ಲಿ ಬೆಳಿಗ್ಗೆ 11-45 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಅಖಿಲ ಕೋಂ ನವೀನ್ ಕುಮಾರ್, ಸುಮಾರು 30 ವರ್ಷ, ನಾಯಕರು, ಗ್ರಾಮ ಪಂಚಾಯ್ತಿ ಸದಸ್ಯರು, ವಾಸ: ಗಿಡ್ನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳ ಗ್ರಾಮದ ಸಮೀಪದ ಅಮಾನಿ ಕೆರೆ ಕಟ್ಟೆಯ ಸಮೀಪ ನೀಡಿದ ಲಿಖಿತ ದೂರನ್ನು ಪಡೆದು ಮದ್ಯಾಹ್ನ 12.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತಾನು ಹೊಸಹುಡ್ಯ ಗ್ರಾಮ ಪಂಚಾಯ್ತಿ ಸೇರಿದ ಗಿಡ್ನಹಳ್ಳಿ ಗ್ರಾಮದ ಚುನಾಯಿತ ಸದಸ್ಯೆಯಾಗಿದ್ದು, ತಮ್ಮ ಗ್ರಾಮದ ಸರ್ಕಾರಿ ಜಾಗದಲ್ಲಿ ಸುಮಾರು ಹತ್ತು ಜನ ತಿಪ್ಪೆಯನ್ನು ಹಾಕಿಕೊಂಡಿದ್ದು ಸದರಿ ಜಾಗವು ಗ್ರಾಮದ ಸರ್ಕಾರಿ ರಸ್ತೆಯಾಗಿದ್ದರಿಂದ ಎಲ್ಲರೂ ತೆರವುಗೊಳಿಸಿದ್ದು ಅ ಪೈಕಿ ತಮ್ಮ ಗ್ರಾಮದ ನರಸಿಂಹಪ್ಪ ಬಿನ್ ರಂಗಪ್ಪ, ನಾರಾಯಣಪ್ಪ ಬಿನ್ ರಂಗಪ್ಪ, ಮತ್ತು ಮಂಜುನಾಥ ಬಿನ್ ಮುನಿಯಪ್ಪ  ರವರುಗಳು ತಿಪ್ಪೆಯನ್ನು ತೆರವು ಗೊಳಿಸದೇ ಇದ್ದು ಈ ವಿಚಾರದಲ್ಲಿ ತನ್ನ ಗಂಡನಾದ ನವೀನ್ ಕುಮಾರ್ ರವರು ದಿನಾಂಕ: 08-07-2021 ರಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ತಿಪ್ಪೆಗಳನ್ನು ತೆರವುಗೊಳಿಸುವ ಬಗ್ಗೆ ದೂರನ್ನು ನೀಡಿದ್ದು ಇದೇ ವಿಚಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ: 09-07-2021 ರಂದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿ ಗ್ರಾಮದಲ್ಲಿ ತೀರ್ಮಾನ ಮಾಡಿಕೊಳ್ಳುವಂತೆ ಅಥವಾ ಠಾಣೆಯ ಬಳಿ ಬರುವಂತೆ ಸೂಚಿಸಿರುತ್ತಾರೆ, ಅದೇ ದಿನ ರಾತ್ರಿ ತಮ್ಮ ಗ್ರಾಮದ ಜೆ.ಬಿ ನಾರಾಯಣಸ್ವಾಮಿ ರವರ ಮನೆಯ ಬಳಿ ತಮ್ಮ ಗ್ರಾಮದ ಹಿರಿಯರು ಪಂಚಾಯ್ತಿ ಸೇರಿದ್ದು ಆಗ ಒಂದು ಗ್ರಾಮದ ಹಿರಿಯರು ಊರಿನ ಪ್ರಮುಖರ ಬಳಿ ಚರ್ಚಿಸದೆ ಏಕೆ ದೂರನ್ನು  ನೀಡಿರುತ್ತಾರೆಂದು ಹೇಳಿರುತ್ತಾರೆಂದು ತನ್ನ ಗಂಡನು ಆ ದಿನ ರಾತ್ರಿ ಮನೆಗೆ ಬಾರದೆ ಹೋಗಿದ್ದು ಪುನಃ ದಿನಾಂಕ: 10-07-2021 ರಂದು ಶನಿವಾರ ಬೆಳಿಗ್ಗೆ ಮನೆಗೆ ಬಂದು ಮನೆಯ ಬಳಿ ಕೆಲಸಗಳನ್ನು ಮಾಡಿಕೊಂಡು ಬೆಳಿಗ್ಗೆ ಸುಮಾರು 11.00 ಗಂಟೆಗೆ ಮನೆಯಿಂದ ಹೋಗಿರುತ್ತಾನೆ. ನಂತರ ತನಗೆ ಆಗ ಆತನ ಸ್ನೇಹಿತರಾದ ಸತೀಶ್ ಬಿನ್ ರಾಜಣ್ಣ ಮತ್ತು ತಮ್ಮ ಗ್ರಾಮದ ಅಶೋಕ್ ಬಿನ್ ಮುನಿಯಪ್ಪ ರವರಿಗೆ ಪೋನ್ ಮಾಡಿ ನರಸಿಂಹಪ್ಪನ ಮಗನಾದ ಬಾಬು ಎಂಬುವರು ಪೋನ್ ಮಾಡಿ ತಮ್ಮ ಮೇಲೆ ಕೇಸು ಹಾಕಿದ್ದೀಯ ನಿನ್ನ ಕೈಯಲ್ಲಿ ಏನು ಆಗುತ್ತದೋ ಮಾಡಿಕೊ, ನನ್ನ ಕೈಯಲ್ಲಿ ಆಗುವುದನ್ನು ಮಾಡಿ ತೋರಿಸುತ್ತೇನೆಂದು ಹೇಳಿದ್ದು ಪುನಃ ಯಾರು ಪೋನ್ ಮಾಡಿದರೂ ಸಹ ತೆಗೆದಿರುವುದಿಲ್ಲ, ತಮ್ಮ ಮನೆಯವರು ತನ್ನ ಗಂಡನನ್ನು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ, ಈ ದಿನ ದಿನಾಂಕ: 12-07-2021 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ತಮ್ಮ ಗ್ರಾಮದ ಪ್ರವೀಣ್ ಬಿನ್ ಮಹದೇವಪ್ಪ ರವರಿಗೆ ಹಂಡಿಗನಾಳ ಗ್ರಾಮದ ನಾಗರಾಜ ಎಂಬುವರು ಪೋನ್ ಮಾಡಿ ನಮ್ಮ ಗ್ರಾಮದ ಬಳಿಯಿರುವ ಮಾವಿನ ತೋಪಿನಲ್ಲಿ ಯಾರೋ ನೇಣು ಹಾಕಿಕೊಂಡಿರುವುದಾಗಿ ವಿಚಾರ ತಿಳಿಸಿದ್ದು ಕೂಡಲೇ ತಾನು ಹಾಗೂ ತಮ್ಮ ಮನೆಯವರು ಬಂದು ನೋಡಲಾಗಿ ತನ್ನ ಗಂಡ ಮಾವಿನ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದು ಮೃತಪಟ್ಟಿರುತ್ತಾನೆ, ತನ್ನ ಗಂಡ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಯಾರೋ ತನ್ನ ಗಂಡನನ್ನು ನೇಣು ಹಾಕಿ ಸಾಯಿಸಿದ್ದು ಈ ಬಗ್ಗೆ ತಮ್ಮ ಗ್ರಾಮದ ನರಸಿಂಹಪ್ಪ ಬಿನ್ ರಂಗಪ್ಪ, ನಾರಾಯಣಪ್ಪ ಬಿನ್ ರಂಗಪ್ಪ ಮತ್ತುಮಂಜುನಾಥ ಬಿನ್ ಮುನಿಯಪ್ಪ ರವರ ಮೇಲೆ ಅನುಮಾನವಿದ್ದು, ತನ್ನ ಗಂಡನ ದ್ವಿಚಕ್ರ ವಾಹನ ಹಂಡಿಗನಾಳ ಕ್ರಾಸ್ ಸಾತ್ವಿಕ್ ರೆಡ್ಡಿ ಹೋಟೆಲ್ ಬಳಿ ನಿಲ್ಲಿಸಿರುತ್ತೆ, ತಾವು ಸ್ಥಳಕ್ಕೆ ಬೇಟಿ ಮಾಡಿ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 228/2021 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 12-07-2021 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080