ಅಭಿಪ್ರಾಯ / ಸಲಹೆಗಳು

 

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.272/2021 ಕಲಂ. 143,147,148,323,324,506,149 ಐ.ಪಿ.ಸಿ :-

          ದಿನಾಂಕ: 11/06/2021 ರಂದು ರಾತ್ರಿ 8.30 ಗಂಟೆಗೆ ಬಿ.ಎಸ್.ವಿಜಯಕುಮಾರ್ ಬಿನ್ ಶ್ರೀರಾಮರೆಡ್ಡಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ಬೂರಗಮಾಕಲಹಳ್ಳಿ ಗ್ರಾಮ, ಅಂಬಾಜಿದುರ್ಗ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ದೊಡ್ಡಪ್ಪನಾದ ನಾಗರಾಜಪ್ಪ ರವರು ತನ್ನ ಜಮೀನಿನಲ್ಲಿ ಟಮ್ಯಾಟೋ ಬೆಳೆ ಇಟ್ಟಿದ್ದು, ತನ್ನ ದೊಡ್ಡಪ್ಪ ತನ್ನ ಜಮೀನಿಗೆ ಹೋಗಬೇಕಾದರೆ ತಮ್ಮ ಗ್ರಾಮದ ಲಕ್ಷ್ಮೀಪತಿರೆಡ್ಡಿ ರವರ ಜಮೀನಿನ ಪಕ್ಕದಲ್ಲಿರುವ ರಸ್ತೆಯ ಮುಖಾಂತರ ಹೋಗುತ್ತಿದ್ದರು. ಈಗ್ಗೆ ಸುಮಾರು 4-5 ದಿನಗಳಿಂದ ಲಕ್ಷ್ಮೀಪತಿರೆಡ್ಡಿ ರವರು ಮೇಲ್ಕಂಡ ರಸ್ತೆಗೆ ಜೆಸಿಬಿಯಿಂದ ಟ್ರಂಚ್ ಹೊಡೆದಿರುತ್ತಾರೆ. ಈ ಬಗ್ಗೆ ತನ್ನ ದೊಡ್ಡಪ್ಪ ನಾಗರಾಜಪ್ಪ ರವರು ಲಕ್ಷ್ಮೀಪತಿರೆಡ್ಡಿ ರವರನ್ನು ಕುರಿತು ನೀನು ದಾರಿಯಲ್ಲಿ ಟ್ರಂಚ್ ಹೊಡೆದಿದ್ದರಿಂದ ನಮಗೆ ತೊಂದರೆ ಆಗಿದ್ದು, ಅದನ್ನು ಮುಚ್ಚುವಂತೆ ತಿಳಿಸಿರುತ್ತಾರೆ. ಆದರೂ ಸಹ ಆತನು ಟ್ರಂಚ್ ನ್ನು ಮುಚ್ಚಿರುವುದಿಲ್ಲ. ಈ ದಿನ ದಿನಾಂಕ 11/06/2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತಾನು, ತನ್ನ ಮಾವ ತಮ್ಮರೆಡ್ಡಿ ಬಿನ್ ಲೇಟ್ ನಾರಾಯಣಪ್ಪ, ಬಾಮೈದನಾದ ಸನತ್ ರೆಡ್ಡಿ ಬಿನ್ ರಾಜನ್ನ ಮತ್ತು ತಮ್ಮನಾದ ಶ್ರೀಧರ ಬಿನ್ ಲೇಟ್ ತಮ್ಮರೆಡ್ಡಿ ರವರು ತಮ್ಮ ಗ್ರಾಮದ ಕೃಷ್ಣಪ್ಪ ರವರ ಮನೆಯ ಬಳಿ ನಡೆದುಕೊಂಡು ಬರುತ್ತಿದ್ದಾಗ, ತಮ್ಮ ಗ್ರಾಮದ ನಾಗೇಶ ಬಿನ್ ಅಶ್ವಥರೆಡ್ಡಿ ಮತ್ತು ಅವರ ಕಡೆಯವರು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿದ್ದರಿಂದ ತಾವು ಸ್ಥಳದಲ್ಲಿದ್ದ ನಾಗೇಶನನ್ನು ಕುರಿತು ಏಕೆ ನೀವು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿದ್ದೀರ ಎಂದು ಕೇಳಿದಾಗ ನಾಗೇಶ ಬಿನ್ ಅಶ್ವಥರೆಡ್ಡಿ, ಆನಂದ ಬಿನ್ ಚಿಕ್ಕಚೊಕ್ಕಪ್ಪ, ಅಂಬರೀಶ ಬಿನ್ ಪಿಲ್ಲಪ್ಪ, ಶಿವಕುಮಾರ್ ಬಿನ್ ಅಶ್ವಥರೆಡ್ಡಿ ಮತ್ತು ಬಾಲರಾಜು ಬಿನ್ ಸೂರ್ಯನಾರಾಯಣರೆಡ್ಡಿ ರವರು ಅಕ್ರಮಗುಂಪು ಕಟ್ಟಿಕೊಂಡು ಬಂದು ತಮ್ಮ ಮೇಲೆ ಜಗಳ ತೆಗೆದು, ಆ ಪೈಕಿ ನಾಗೇಶ ಎಂಬುವನು ತನ್ನ ಕೈಯಲ್ಲಿದ್ದ ಕಬ್ಬಿಣದ ಕಂಬಿಯಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಆನಂದ ದೊಣ್ಣೆಯಿಂದ ಸನತ್ ರೆಡ್ಡಿ ರವರ ಬೆನ್ನಿನ ಮೇಲೆ ಹೊಡೆದು ಊತ ಗಾಯಪಡಿಸಿರುತ್ತಾನೆ. ಅಂಬರೀಶ ದೊಣ್ಣೆಯಿಂದ ಶ್ರೀದರ್ ರವರ ಕಾಲು ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿರುತ್ತಾರೆ. ಉಳಿದ ಶಿವಕುಮಾರ್ ಮತ್ತು ಬಾಲರಾಜು ರವರು ಕೈಗಳಿಂದ ತಮ್ಮ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿ ಪ್ರಕಾಶ್ ಬಿನ್ ತಿರುಮಲಪ್ಪ ರವರು ಬಿಡಿಸಲು ಬಂದಾಗ ನಾಗೇಶ ರವರು ದೊಣ್ಣೆಯಿಂದ ಆತನ ಎಡಕೈಗೆ ಹೊಡೆದು ರಕ್ತಗಾಯಪಡಿಸಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತನ್ನ ಮಾವ ತಮ್ಮರೆಡ್ಡಿ ಮತ್ತು ನಮ್ಮ ಗ್ರಾಮದ ವಾಸಿಗಳಾದ ರಾಜನ್ನ ಬಿನ್ ಶ್ರೀನಿವಾಸಪ್ಪ, ಮಂಜುನಾಥ ಬಿನ್ ನರಸಿಂಹಪ್ಪ ಮತ್ತಿತರರು ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತನ್ನನ್ನು ತನ್ನ ಮಾವ ತಮ್ಮರೆಡ್ಡಿ ರವರು ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆಸಿ ವೈದ್ಯರ ಸಲಹೆಯ ಮೇರೆಗೆ ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆಸಿರುತ್ತಾರೆ. ಸನತ್ ರೆಡ್ಡಿ ಮತ್ತು ಶ್ರೀಧರ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತಾರೆ. ತಾನು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಿಂದ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.273/2021 ಕಲಂ. 143,147,148,323,324,504,506,149 ಐ.ಪಿ.ಸಿ :-

          ದಿನಾಂಕ: 11/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅಶ್ವಥರೆಡ್ಡಿ ಬಿನ್ ಲೇಟ್ ಮುನಿನಾರಾಯಣಪ್ಪ, 62 ವರ್ಷ, ವಕ್ಕಲಿಗರು, ಜಿರಾಯ್ತಿ, ಬೂರಗಮಾಕಲಹಳ್ಳಿ ಗ್ರಾಮ, ಅಂಬಾಜಿದುರ್ಗಾ ಹೋಬಳಿ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.40 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನಿಗೆ ಓಡಾಡಲು ಸಾರ್ವಜನಿಕ ದಾರಿ ಇದ್ದು, ಸದರಿ ದಾರಿಯನ್ನು ತಮ್ಮ ಗ್ರಾಮದ ವಾಸಿಯಾದ ಅಶ್ವಥರೆಡ್ಡಿ ಕಡೆಯವರು ಜೆಸಿಬಿಯಿಂದ ಹಳ್ಳ ತೆಗೆದು ದಾರಿ ಮುಚ್ಚಿರುತ್ತಾರೆ. ಈ ಹಿನ್ನಲೆಯಲ್ಲಿ ತಾವು ತಮ್ಮ ಜಮೀನಿನ ಬಳಿ ದಾರಿಯಲ್ಲಿ ಕಲ್ಲುಗಳನ್ನು ಹಾಕಿರುತ್ತೇವೆ. ಹೀಗಿರುವಾಗ ದಿನಾಂಕ: 11/06/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ಮೇಲ್ಕಂಡ ಅಶ್ವಥರೆಡ್ಡಿ ಕಡೆಯವರಾದ ತಮ್ಮ ಗ್ರಾಮದ 1).ರಾಜಣ್ಣ ಬಿನ್ ಶ್ರೀನಿವಾಸಪ್ಪ, 2).ಪ್ರಕಾಶ್ ಬಿನ್ ತಿರುಮಲಪ್ಪ, 3).ಸನತ್ ಬಿನ್ ರಾಜಣ್ಣ, 4).ವಿಜಯ್ ಕುಮಾರ್ ಬಿನ್ ಶ್ರೀರಾಮರೆಡ್ಡಿ, 5).ವೆಂಕಟರೆಡ್ಡಿ ಬಿನ್ ನಾರಾಯಣಸ್ವಾಮಿ, 6).ಮಂಜುನಾಥ ಬಿನ್ ನರಸಿಂಹಪ್ಪ, 7).ನಿರ್ಮಲಮ್ಮ ಕೋಂ ಶ್ರೀರಾಮರೆಡ್ಡಿ, 8).ತಮ್ಮರೆಡ್ಡಿ ಬಿನ್ ನಾರಾಯಣಪ್ಪ ಮತ್ತು 9).ಸಂತೇಕಲ್ಲಹಳ್ಳಿ ಗ್ರಾಮದ ಮುನಿರಾಜು ಎಂಬುವವರು ಅಕ್ರಮ ಗುಂಪುಕಟ್ಟಿಕೊಂಡು, ತಾವು ಹಾಕಿದ್ದ ಕಲ್ಲುಗಳನ್ನು ಎತ್ತಿ ಪಕ್ಕಕ್ಕೆ ಹಾಕುತ್ತಿದ್ದು, ತಾನು ಅಲ್ಲಿಗೆ ಹೋಗಿ ಏಕೆ ನಮ್ಮ ಕಲ್ಲುಗಳನ್ನು ಎತ್ತಿ ಹಾಕುತ್ತಿದ್ದೀರಾ ಎಂದು ಕೇಳಿದ್ದು ಆಗ ರಾಜಣ್ಣ ರವರು ತನ್ನನ್ನು ಕುರಿತು ಬೋಳಿ ನನ್ನ ಮಗನೇ ಏಕೆ ಇಲ್ಲಿ ಕಲ್ಲುಗಳನ್ನು ಹಾಕಿದ್ದೀಯಾ ಎಂದು ಅವಾಚ್ಯಶಬ್ದಗಳಿಂದ ಬೈದು, ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತನ್ನ ಹಣೆ, ಕಣ್ಣಿನ ಬಳಿ ಮತ್ತು ಬಲಗೈ ಬಳಿ ಹೊಡೆದು ರಕ್ತಗಾಯ ಪಡಿಸಿದನು. ನಂತರ ಪ್ರಕಾಶ್ ಮತ್ತು ಸನತ್ ರವರು ತನ್ನನ್ನು ಕೆಳಕ್ಕೆ ತಳ್ಳಿ ಅವರಿಬ್ಬರು ದೊಣ್ಣೆಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ಅಷ್ಠರಲ್ಲಿ ತನ್ನ ಅಣ್ಣನ ಹೆಂಡತಿ ಲಕ್ಷ್ಮಮ್ಮ ಮತ್ತು ಆಕೆಯ ಮಗ ಜಯರಾಮ ಅಲ್ಲಿಗೆ ಬಂದಿದ್ದು, ಆಗ ವಿಜಯ್ ಕುಮಾರ್, ವೆಂಕಟರೆಡ್ಡಿ, ಮಂಜುನಾಥ, ತಮ್ಮರೆಡ್ಡಿ, ಮುನಿರಾಜು ರವರು ಜಯರಾಮ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ನಿರ್ಮಲಮ್ಮ ರವರು ಲಕ್ಷ್ಮಮ್ಮ ರವರ ತಲೆ ಕೂದಲನ್ನು ಹಿಡಿದು ಎಳೆದಾಡಿ, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ಅಷ್ಠರಲ್ಲಿ ತಮ್ಮ ಗ್ರಾಮದ ಸೂರ್ಯನಾರಾಯಣರೆಡ್ಡಿ ಮತ್ತು ಕೃಷ್ಣಪ್ಪ ರವರು ಅಡ್ಡ ಬಂದು ಮೇಲ್ಕಂಡವರಿಂದ ತಮ್ಮನ್ನು ಬಿಡಿಸಿದರು. ನಂತರ ಮೇಲ್ಕಂಡವರು ತಮ್ಮನ್ನು ಕುರಿತು ಈ ದಿನ ಉಳಿದುಕೊಂಡಿದ್ದೀರಾ, ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.106/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ: 11/06/2021 ರಂದು ಪಿರ್ಯಾದಿದಾರರಾದ ಮುಕ್ತಿಯಾರ್ ಪಾಷ ಎ.ಎಸ್.ಐ. ಚಿಂತಾಮಣಿ ನಗರ ಠಾಣೆ ರವರು  ನೀಡಿದ ವರದಿಯೇನೆಂದರೆ, ಈ ದಿನ ದಿನಾಂಕ:11/06/2021 ರಂದು ಸಂಜೆ ನಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-190 ವೇಣು ರವರೊಂದಿಗೆ ಠಾಣೆಗೆ  ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138  ರಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 06-00 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಕೋಳಿ ಹಟ್ ಅಂಗಡಿಯ ಮಾಲೀಕರು ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ ಉಲ್ಲಂಘಣೆ ಮಾಡಿ ಕೋಳಿ ಹಟ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಜಿಲ್ಲೆಯಲ್ಲಿ  ಕೋವಿಡ್-19 ರೋಗಾಣು ಹರಡುವಿಕೆಯನ್ನು ತಡೆಯುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ರಮೇಶ್ ಬಿನ್ ನಾರಾಯಣಸ್ವಾಮಿ, 26ವರ್ಷ, ಕುರುಬರು, ಕೋಳಿಹಟ್ ಅಂಗಡಿ ಮಾಲೀಕರು, ವಾಸ ಪ್ರಭಾಕರ ಬಡಾವಣೆ ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ  ಉಲ್ಲಂಘಣೆ ಮಾಡಿ ಫ್ರೂಟ್ಸ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಸದರಿಯವರ ವಿರುದ್ದ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.ಮೇರೆಗೆ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.107/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ಪಿರ್ಯದಿದಾರರಾದ ಆನಂದ ಕುಮಾರ್ ಜೆ.ಎನ್  ಪಿ.ಐ ಚಿಂತಾಮಣಿ ನಗರ ಠಾಣೆ ರವರು . ನೀಡಿದ ವರದಿಯೇನೆಂದರೆ, ಈ ದಿನ ದಿನಾಂಕ:11/06/2021 ರಂದು ಸಂಜೆ ನಾನು ಠಾಣಾ ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ  ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3369  ರಲ್ಲಿ ಚಿಂತಾಮಣಿ ನಗರದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ  06-15 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಎಂ.ಜಿ. ರಸ್ತೆಯಲ್ಲಿರುವ ಜಿ.ಕೆ. ಫ್ರೂಟ್ಸ್ ಅಂಗಡಿಯ ಮಾಲೀಕರು ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ ಉಲ್ಲಂಘಣೆ ಮಾಡಿ ಫ್ರೂಟ್ಸ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಜಿಲ್ಲೆಯಲ್ಲಿ  ಕೋವಿಡ್-19 ರೋಗಾಣು ಹರಡುವಿಕೆಯನ್ನು ತಡೆಯುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಜಾವೀದ್ ಖಾನ್ ಬಿನ್ ಜಿ.ಕೆ.ಗಫಾರ್ ಖಾನ್, 45ವರ್ಷ, ಮುಸ್ಲಿಂರು, ಫ್ರೂಟ್ ಅಂಗಡಿ ಮಾಲೀಕರು, ವಾಸ 1ನೇ ಕ್ರಾಸ್ ಚೌಡರೆಡ್ಡಿಪಾಳ್ಯ ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಕೋವಿಡ್-19 ರೋಗಾಣು ತಡೆಯುವ ಸಲುವಾಗಿ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶಗಳನ್ನು ಪಾಲಿಸದೇ  ಉಲ್ಲಂಘಣೆ ಮಾಡಿ ಫ್ರೂಟ್ಸ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಸದರಿಯವರ ವಿರುದ್ದ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.113/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:11/06/2021 ರಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಾಘವೇಂದ್ರ ಬಿನ್ ಪೆಮ್ಮರೆಡ್ಡಿ  45 ವರ್ಷ ವಕ್ಕಲಿಗರು ಜಿರಾಯ್ತಿ ವಾಸ:ಬ್ರಾಹ್ಮಣರಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊ:9964095557 ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತಾನು ಪೋಲಿಯೋ ಅಂಗವಿಕಲನಾಗಿದ್ದು , ತಮ್ಮ ಜಮೀನಿನಲ್ಲಿ ತಮ್ಮ ಚಿಕ್ಕಪ್ಪರವರು ಕಳೆ ಔಷದಿಯನ್ನು ಹೋಡೆದಿದ್ದು ತಾನು ದಿನಾಂಕ:11-06-2021 ರಂದು ಬೆಳಗ್ಗೆ ಸುಮಾರು 9-20 ಗಂಟೆಯ ಸಮಯದಲ್ಲಿ ತಮ್ಮ ಜಮೀನಿನ ಬಳಿ ಹೊಗಿ ನೋಡಿದಾಗ ತಮ್ಮ ಚಿಕ್ಕಪ್ಪ ಪೋತಲಪ್ಪರವರನ್ನು  ಯಾಕೇ ನೀನು ಕಳೆ ಔಷದಿಯನ್ನು ಹೋಡೆದಿದ್ದಿಯಾ ನಾನು ಬೆಳೆಯನ್ನು ಹಾಕಬೇಕು ಎಂದಾಗ ಇದು ನಮ್ಮ ಜಮೀನು ನಿನು ಯಾವನೋ ಕೇಳಕ್ಕೆ ನಿನ್ನಮ್ಮ ಕೇಯಾ ಲೋಪರ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಚಿಕ್ಕಪ್ಪ ಪೋತಲಪ್ಪ ವರ ಮಗ ಮಹೇಶ ,ಹೆಂಡತಿ ಜಯಮ್ಮ ರವರು  ಬಂದು ಏಕೋದ್ದೇಶದಿಂದ ಪೋತಲಪ್ಪರವರು ತನಗೆ ಕೈಗಳಿಂದ ಹೊಡೆದು ತನ್ನ ಶರ್ಟಿನ ಕಾಲರನ್ನು ಹಿಡಿದು ಎಳೆದಾಡಿ ಕೇಳಗೆ ಬಿಳಿಸಿದನು ಆಗ ಜಯಮ್ಮರವರು ಕುಂಟಿನನ್ನ ಮಗನನ್ನು ಬೀಡಬೇಡಿ ಹೊಡೆಯಿರಿ ಎಂದು ಕೈಗಳಿಂದ ಹೊಡೆದರು, ಮಹೇಶರವರು ಸ್ಥಳದಲ್ಲಿದ್ದ ಕಲ್ಲನ್ನು ತೆಗೆದು ತನ್ನ ಎಡಕಾಲಿನ ಮೊಣಕಾಲಿನ ಕೆಳಗೆ ಹೊಡೆದು ಮೂಗೇಟು ಉಂಟು ಮಾಡಿ ಈ ಎಲ್ಲರು ಸೇರಿ ಈ ಕುಂಟಿ ನನ್ನಮಗನ ಇನ್ನೋಂದು ಖಾಲನ್ನು ಮುರಿಯುತ್ತೆವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತಮ್ಮ ಗ್ರಾಮದ ಮಂಜುನಾಥ ಬಿನ್ ಮೂರ್ತಿ ಹಾಗೂ ತನ್ನ ತಂಗಿ ಮಮತ ಕೋಂ ರಮೇಶ್ ರವರು ಬಂದು ಗಲಾಟೆಯನ್ನು ಬಿಡಿಸಿ ತನ್ನನ್ನು ಚಿಕಿತ್ಸೆ ಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಆದ್ದರಿಂದ  ಮೇಲ್ಕಂಡಂತೆ ತನ್ನ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆಯಾಗಿರುತ್ತೆ.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.99/2021 ಕಲಂ. 324 ಐ.ಪಿ.ಸಿ:-

          ದಿನಾಂಕ:11/06/2021 ರಂದು ಬೆಳಗ್ಗೆ 11.00  ಗಂಟೆಗೆ ಹೆಚ್.ಸಿ-137 ರವರು ಠಾಣೆಗೆ ಹಾಜರಾಗಿ ನೀಡಿದ ಆಸ್ಪತ್ರೆಯ ಮೆಮೊ ಮತ್ತು ಗಾಯಾಳು  ನರಸಿಂಹಮೂರ್ತಿ @ ಮಾಸ್ ಬಿನ್ ರಂಗನಾಥಪ್ಪ, 32 ವರ್ಷ, ಪ.ಜಾತಿ, ಕೂಲಿ/ಹಪ್ಪಳ ವ್ಯಾಪಾರ, ವಾಸ: ಹಾಲಿ ತೊಂಡೇಬಾವಿ ರೈಲ್ವೆ ಸ್ಟೇಷನ್, ಸ್ವಂತ ಸ್ಥಳ: ಗಂಗಸಂದ್ರ  ಗ್ರಾಮ,  ಗೌರೀಬಿದನೂರು ತಾಲ್ಲೂಕು ರವರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ಕೂಲಿ/ಹಪ್ಪಳ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.ತಾನು ಕದಿರದೇವರಹಳ್ಳಿ ಗ್ರಾಮದ ಮಂಜುಳನನ್ನು(ನಾಯಕ) ಪ್ರೀತಿಸಿ ವಿವಾಹವಾಗಿರುತ್ತೇನೆ. ಈಗ್ಗೆ 2 ತಿಂಗಳ ಹಿಂದೆ ತನ್ನ ಹೆಂಡತಿ ಮಂಜುಳ ಮತ್ತು ಅವರ ದೊಡ್ಡಪ್ಪ-ಚಿಕ್ಕಪ್ಪ ರವರುಗಳು ಜಮೀನು ವಿಷಯವಾಗಿ ಪರಸ್ಪರ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ಈ ಸಮಯದಲ್ಲಿ ನನ್ನ ಹೆಂಡತಿ ಮಂಜುಳಾನನ್ನು ಆಕೆಯ ಸಂಬಂಧಿ ಹನುಮಂತರಾಯಪ್ಪ ಬಿನ್ ಲೇಟ್ ಕೊತ್ತ ನರಸಪ್ಪ ಎಂಬುವವರು ನೀನು ಪರಿಶಿಷ್ಟ ಜಾತಿಗೆ ಸೇರಿದವರನ್ನು ಮದುವೆಯಾಗಿದ್ದೀಯ ಎಂತ ಹೇಳಿದ್ದನೆಂದು ನನ್ನ ಹೆಂಡತಿ ನನ್ನ ಬಳಿ ತಿಳಿಸಿರುತ್ತಾರೆ. ಅದಕ್ಕೆ ಬೇಸರವಾಗಿ ದಿನಾಂಕ:10/06/2021 ರಂದು ರಾತ್ರಿ ಸುಮಾರು 12.30 ಗಂಟೆ ಸಮಯದಲ್ಲಿ ನಾನು ನನ್ನ ಸ್ನೇಹಿತರಾದ ಕಾರ್ತಿಕ್  ಮತ್ತು ನವೀನ್ ರವರೊಂದಿಗೆ KA-01-D-1951 ಆಟೋದಲ್ಲಿ ಹನುಮಂತರಾಯಪ್ಪ ರವರ ಮನೆಯ ಬಳಿ ಹೋಗಿ ಮಲಗಿದ್ದ ಹನುಮಂತರಾಯಪ್ಪ ನನ್ನು ಎಚ್ಚರಿಸಿ ಏಕೆ ನನ್ನ ಹೆಂಡತಿ ಬಳಿ ನನ್ನ ಜಾತಿಯ ಬಗ್ಗೆ ಮಾತನಾಡಿದೆ ಎಂತ ಕೇಳುವಷ್ಟರಲ್ಲಿ ಏಲಾಏಕಿ ಹಲ್ಲೆ ಮಾಡಿದರು. ಹನುಮಂತರಾಯಪ್ಪ ಮಚ್ಚಿನಿಂದ ಎಡಭುಜದ ಬಳಿ ಹೊಡೆದು ರಕ್ತಗಾಯಪಡಿಸಿದರು. ಅಷ್ಟರಲ್ಲಿ ಗಾಯಗೊಂಡ ನನ್ನನ್ನು ಯಾರೋ ಉಪಚರಿಸಿ  ಗೌರಿಬಿದನೂರು  ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ನನಗೆ ಹಲ್ಲೆ ಮಾಡಿ ಗಾಯ ಪಡಿಸಿದ ಹನುಮಂತರಾಯಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.194/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:11-06-2021 ರಂದು ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶಿವರಾಜ ಟಿ ಬಿನ್ ಲೇಟ್ ತಿರುಮಳಪ್ಪ,45 ವರ್ಷ, ವಕ್ಕಲಿಗರು, ಜಿರಾಯ್ತಿ,ವಾಸ: ತಿಮ್ಮನಹಳ್ಳಿ ಗ್ರಾಮ,ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ  ನೀಡಿದ  ಗಣಕೀಕೃತ ದೂರಿನ ಸಾರಾಂಶವೇನೆಂದರೆ  ತಾನು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಡಿಕೊಂಡಿದ್ದು, ತಮ್ಮ ತಂದೆಯವರಾದ ತಿರುಮಳಪ್ಪ ರವರಿಗೆ ಶಿಡ್ಲಘಟ್ಟ ತಾಲ್ಲೂಕು ಬಂಡಮ್ಮನಹಳ್ಳಿ ಗ್ರಾಮದ ಸರ್ವೆ ನಂ. 12/1ಡಿ ರಲ್ಲಿ 18 ಗುಂಟೆ ಜಮೀನು ಬಂದಿದ್ದು, ಸದರಿ ಜಮೀನು ತಮ್ಮ ತಂದೆಯವರ ಮರಣ ನಂತರ ಪವತಿ ವಾರಸು ಖಾತೆಯ ಮೂಲಕ ತನ್ನ ಹೆಸರಿಗೆ ದಾಖಲೆಯನ್ನು ಮಾಡಿಸಿಕೊಂಡು ತಾವೆ ಸ್ವಾದೀನಾನುಭವದಲ್ಲಿರುತ್ತೇವೆ. ತಮ್ಮ ಚಿಕ್ಕಪ್ಪನಾದ ತಿಮ್ಮಪ್ಪ ರವರು ಸದರಿ ಬಂಡಮ್ಮನಹಳ್ಳಿ ಗ್ರಾಮದ ಸರ್ವೆ ನಂ. 12/1ಡಿ ರ ಜಮೀನಿನಲ್ಲಿ ಆತನಿಗೂ ಸಹ ಭಾಗ ಬರಬೇಕೆಂದು ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ಹಾಕಿಕೊಂಡಿದ್ದು, ಸದರಿ ಕೇಸು ತಮ್ಮ ಪರವಾಗಿ ಆಗಿದ್ದು, ತಿಮ್ಮಪ್ಪ ರವರು ಪುನಃ ಶಿಡ್ಲಘಟ್ಟ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಪೀಲ್ ಹೋಗಿರುತ್ತಾರೆ.     ಹೀಗಿದ್ದು ಈ ದಿನ ದಿನಾಂಕ: 11-06-2021 ರಂದು ಮದ್ಯಾಹ್ನ ಸುಮಾರು 1.00 ಗಂಟೆಯಲ್ಲಿ ಮೇಲ್ಕಂಡ ಜಮೀನನ್ನು ಉಳುಮೆ ಮಾಡಿಸುವ ಸಲುವಾಗಿ ಸದರಿ ಜಮೀನಿನ ಬಳಿ ಇದ್ದಾಗ ತಮ್ಮ ಗ್ರಾಮದ ತಿಮ್ಮಪ್ಪ ಬಿನ್ ನಾರಾಯಣಪ್ಪ ಮತ್ತು ನವೀನ್ ಕುಮಾರ್ ಬಿನ್ ಆಂಜನಪ್ಪ ರವರು ನೀನು ಯಾರೋ ಈ ಜಮೀನಿನಲ್ಲಿ ಬರುತ್ತೀಯ ಲೋಪರ್ ನನ್ನ ಮಗನೆ, ಈ ಜಮೀನಿನ ವಿಚಾರದಲ್ಲಿ  ಕೋರ್ಟ್ ನಲ್ಲಿ ಕೇಸು ನಡೆಯುತ್ತಿದ್ದು ನೀನು ಈ ಜಮೀನಿಗೆ ಬರಬೇಡ ಬಂದರೆ ನಿನ್ನನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದು ಆ ಪೈಕಿ ತಿಮ್ಮಪ್ಪ ರವರು ಯಾವುದೋ ದೊಣ್ಣೆಯಲ್ಲಿ ತನ್ನ  ತಲೆಗೆ, ಬೆನ್ನಿಗೆ ಹೊಡೆದಿದ್ದು ನವೀನ್ ಕುಮಾರ್ ರವರು ಸಹ ಅದೇ ದೊಣ್ಣೆಯನ್ನು ತೆಗೆದುಕೊಂಡು ತನ್ನ ಕೈಗಳಿಗೆ ಮತ್ತು ಕಾಲುಗೆಳಿಗೆ ಹೊಡೆದು ಗಾಯಗೊಳಿಸಿದ್ದು ಆ ಸಮಯದಲ್ಲಿ ತಮ್ಮ ಗ್ರಾಮದ ವೆಂಕಟೇಶಪ್ಪ ಬಿನ್ ಗಂಗಪ್ಪ ಮತ್ತು ತಿರಮಲೇಶ ಬಿನ್ ನಾರಾಯಣಪ್ಪ ರವರು ಗಲಾಟೆ ಬಿಡಿಸಿ ತನ್ನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ತಾನು ಜಮೀನಿನಲ್ಲಿದ್ದಾಗ ವಿನಾ ಕಾರಣ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ತನ್ನನ್ನು ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದಿರುವ ತಿಮ್ಮಪ್ಪ ಮತ್ತು ನವೀನ್ ಕುಮಾರ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು  ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ.194/2021 ಕಲಂ 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.195/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ: 11-06-2021 ರಂದು ರಾತ್ರಿ 7.30 ಗಂಟೆಗೆ ಶ್ರೀಮತಿ ನೇತ್ರಾವತಿ ಬಿನ್ ತಿಮ್ಮಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ತಾತನಾದ ನಾರಾಯಣಪ್ಪ ರವರಿಗೆ ಶಿಡ್ಲಘಟ್ಟ ತಾಲ್ಲೂಕು ಬಂಡಪ್ಪನಹಳ್ಳಿ ಗ್ರಾಮದ ಸರ್ವೆ ನಂ. 12/1ಡಿ ರಲ್ಲಿ 18 ಗುಂಟೆ ಜಮೀನು ಇದ್ದು ಸದರಿ ಜಮೀನು ತಮ್ಮ ತಂದೆಯವರ ಸಹೋದರರಾದ ಮುನಿಶಾಮಪ್ಪ, ಈರಪ್ಪ, ತಿರುಮಳಮ್ಮ ಮತ್ತು ತಿಮ್ಮಪ್ಪ ರವರಿಗೆ ಭಾಗ ಬರಬೇಕಾಗಿದ್ದು ಸದರಿ ವಿಚಾರದಲ್ಲಿ ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ನ್ನು ಹಾಕಿಕೊಂಡಿರುತ್ತೇವೆ. ಹೀಗಿದ್ದು ಈ ದಿನಾಂಕ: 11-06-2021 ರಂದು ಮದ್ಯಾಹ್ನ ಸುಮಾರು 12.30 ಗಂಟೆಯಲ್ಲಿ ತಾನು, ತಮ್ಮ ತಂದೆ ತಿಮ್ಮಪ್ಪ ಮತ್ತು ತಮ್ಮ ಅಣ್ಣನ ಮಗನಾದ ನವೀನ್ ರವರು ಮೇಲೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಮೇಲ್ಕಂಡ ಜಮೀನಿನನ್ನು ಶಿವರಾಜ್ ಹಾಗೂ ಅವರ ಕುಟುಂಬದವರು ಉಳುಮೆ ಮಾಡಲು ಬಂದಿದ್ದು ಆಗ ತಮ್ಮ ತಂದೆಯಾದ ತಿಮ್ಮಪ್ಪ ರವರು ಈ ಜಮೀನು ಇನ್ನು ವಿಭಾಗಗಳು ಆಗಿಲ್ಲ ಉಳುಮೆ ಮಾಡುವುದು ಬೇಡ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ ಯಾರೂ ಉಳುಮೆ ಮಾಡುವುದು ಬೇಡ ಎಂದು ಹೇಳಿದ್ದಕ್ಕೆ ಶಿವರಾಜ ಬಿನ್ ತಿರುಮಳಪ್ಪ, ಆನಂದ ಬಿನ್ ಹನುಮಪ್ಪ, ಮುನಿಯಪ್ಪ ಬಿನ್ ಹನುಮಪ್ಪ ಮತ್ತು ಶ್ರೀಮತಿ ಸುಶೀಲ ಕೋಂ ಆನಂದ ರವರು ತಮ್ಮ ತಂದೆಯವರಿಗೆ ಈ ಜಮೀನಿನ ವಿಚಾರವನ್ನು ಕೇಳುವುದಕ್ಕೆ ನೀನು ಯಾವನೋ ಲೋಪರ್, ಇದು ನಮ್ಮ ಜಮೀನು ನಮ್ಮ ಇಷ್ಟ ಉಳುಮೆ ಮಾಡುತ್ತೇವೆ ಎಂದು ಹೇಳಿ ಬೈಯುತ್ತಿದ್ದ ಆಗ ಗಲಾಟೆ ಬಿಡಿಸಲು ಹೋದ ನವೀನ್ ರವರಿಗೆ ಶಿವರಾಜ್ ರವರು ಯಾವುದೋ ಒಂದು ದೊಣ್ಣೆಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು ಆನಂದ ರವರು ಯಾವುದೋ ಒಂದು ಮಚ್ಚಿನಲ್ಲಿ ನವೀನ್ ರವರ ಎಡಗೈ ಮುಂಗೈಗೆ ಹೊಡೆದು ಗಾಯಗೊಳಿಸಿದ್ದು ಉಳಿದವರು ನವೀನ್ ಮತ್ತು ತಿಮ್ಮಪ್ಪ ರವರನ್ನು ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿ ಕಾಲಿನಲ್ಲಿ ಒದ್ದಿರುತ್ತಾರೆ. ತಿಮ್ಮಪ್ಪ ರವರನ್ನು ಸಹ ಮೇಲ್ಕಂಡವರೆಲ್ಲರೂ ಕೈಗಳಿಂದ ಹೊಡೆದು ಗಾಯಗೊಳಿಸಿರುತ್ತಾರೆ ಆಗ ತಾನು ಹಾಗೂ ತಮ್ಮ ಗ್ರಾಮದ ಜಯಕುಮಾರ್ ಬಿನ್ ನಾರಾಯಣಸ್ವಾಮಿ ಮತ್ತು ವೆಂಕಟೇಶ ಬಿನ್ ಮುತ್ತೂರು ಗಂಗಪ್ಪ ರವರು ಗಲಾಟೆ ಬಿಡಿಸಿ ಗಾಯಗೊಂಡಿದ್ದ ತಮ್ಮ ತಂದೆ ತಿಮ್ಮಪ್ಪ @ ತಿಮ್ಮಯ್ಯ ಮತ್ತು ತಮ್ಮ ಅಣ್ಣನ ಮಗನಾದ ನವೀನ್ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಜಮೀನು ವಿಭಾಗಗಳಾಗುವ ವರೆಗೂ ಉಳುಮೆ ಮಾಡುವುದು ಬೇಡ ಎಂದು ಹೇಳಿದ್ದಕ್ಕೆ ತಮ್ಮ ತಂದೆ ತಿಮ್ಮಪ್ಪ ಮತ್ತು ತಮ್ಮ ಅಣ್ಣನ ಮಗ ನವೀನ್ ಕುಮಾರ್ ರವರ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಹೊಡೆದು ಗಾಯಗೊಳಿಸಿರುವ ಶಿವರಾಜ ಬಿನ್ ತಿರುಮಳಪ್ಪ, ಆನಂದ ಬಿನ್ ಹನುಮಪ್ಪ, ಮುನಿಯಪ್ಪ ಬಿನ್ ಹನುಮಪ್ಪ ಮತ್ತು ಶ್ರೀಮತಿ ಸುಶೀಲ ಕೋಂ ಆನಂದ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 195/2021 ಕಲಂ 323, 324, 504, 506 ರ/ಜೊ 34 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 12-06-2021 04:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080