ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ: 11/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ. ಎನ್. ಪಾಪಣ್ಣ  ಆದ ನಾನು,  ಸಿಬ್ಬಂದಿಯವರಾದ ಸಿ ಹೆಚ್ ಸಿ 36 ವಿಜಯ್ ಕುಮಾರ್ ರವರನ್ನು ಜೀಪನಲ್ಲಿ ಜೊತೆಯಲ್ಲಿ ಕರೆದುಕೊಂಡು ಬೆಳಿಗ್ಗೆ 10 - 00 ಗಂಟೆಯ ಸಮಯದಲ್ಲಿ ಕರೋನ ಸಂಕ್ರಾಮಿಕ ಖಾಯಿಲೆಯ ಲಾಕ್ ಡೌನ ನಿಮಿತ್ತ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಎಸ್. ರಾಗುಟ್ಟಹಳ್ಳಿ ಗ್ರಾಮದಲ್ಲಿ ರೌಂಡ್ಸ್  ಕರ್ತವ್ಯದಲ್ಲಿದ್ದಾಗ, ನನಗೆ    ಎಸ್. ರಾಗುಟ್ಟಹಳ್ಳಿ ಗ್ರಾಮದ ವಾಸಿಗಳಾದ ರಾಮಲಕ್ಷ್ಮಮ್ಮ ಕೊಂ ನಾಗರಾಜು ಮತ್ತು ನಾರಾಯಣಮ್ಮ ಕೊಂ ಕೋನಪ್ಪರೆಡ್ಡಿ ರವರುಗಳು ಚಿಲ್ಲರೆ ಅಂಗಡಿಗಳ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಎಸ್ ರಾಗುಟ್ಟಹಳ್ಳಿ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಂತರ ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಿಗ್ಗೆ 10-30 ಗಂಟೆಗೆ ರಾಮಲಕ್ಷ್ಮಮ್ಮ ಕೊಂ ನಾಗರಾಜು  ರವರ ಚಿಲ್ಲರೆ ಅಂಗಡಿಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಅಂಗಡಿಯಲ್ಲಿದ್ದ ಆಸಾಮಿತಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ನಂತರ ಗ್ರಾಮಸ್ಥರಲ್ಲಿ  ಅಂಗಡಿಯ ಮುಂದ ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿಕೊಟ್ಟಿದ್ದ ಆಸಾಮಿತಳ  ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಲಕ್ಷ್ಮಮ್ಮ ಕೊಂ ನಾಗರಾಜು, 48 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಎಸ್ ರಾಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.  ಮೊ ನಂ: 9902843090 ಎಂದು ತಿಳಿಸಿದ್ದು. ಈಕೆಯು ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾಳೆಯೇ ಎಂಬುದರ ಗ್ರಾಮಸ್ಥರಲ್ಲಿ ವಿಚಾರಿಸಲಾಗಿ ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 10-45 ಗಂಟೆಯಿಂದ ಬೆಳಿಗ್ಗೆ 11-45  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 900 ಎಂ.ಎಲ್ ನ 351 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 10 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ಮಧ್ಯಾಹ್ನ 13-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:71/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 11/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ. ಎನ್. ಪಾಪಣ್ಣ  ಆದ ನಾನು,  ಸಿಬ್ಬಂದಿಯವರಾದ ಸಿ ಹೆಚ್ ಸಿ 36 ವಿಜಯ್ ಕುಮಾರ್ ರವರನ್ನು ಜೀಪನಲ್ಲಿ ಜೊತೆಯಲ್ಲಿ ಕರೆದುಕೊಂಡು ಬೆಳಿಗ್ಗೆ 10 - 00 ಗಂಟೆಯ ಸಮಯದಲ್ಲಿ ಕರೋನ ಸಂಕ್ರಾಮಿಕ ಖಾಯಿಲೆಯ ಲಾಕ್ ಡೌನ ನಿಮಿತ್ತ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಎಸ್.ರಾಗುಟ್ಟಹಳ್ಳಿ ಗ್ರಾಮದಲ್ಲಿ ರೌಂಡ್ಸ್  ಕರ್ತವ್ಯದಲ್ಲಿದ್ದಾಗ, ನನಗೆ   ಎಸ್. ರಾಗುಟ್ಟಹಳ್ಳಿ ಗ್ರಾಮದ ವಾಸಿಗಳಾದ ರಾಮಲಕ್ಷ್ಮಮ್ಮ ಕೊಂ ನಾಗರಾಜು ಮತ್ತು ನಾರಾಯಣಮ್ಮ ಕೊಂ ಕೋನಪ್ಪರೆಡ್ಡಿ ರವರುಗಳು ಚಿಲ್ಲರೆ ಅಂಗಡಿಗಳ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಎಸ್ ರಾಗುಟ್ಟಹಳ್ಳಿ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಂತರ ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಿಗ್ಗೆ 10-30 ಗಂಟೆಗೆ ರಾಮಲಕ್ಷ್ಮಮ್ಮ ಕೊಂ ನಾಗರಾಜು  ರವರ ಚಿಲ್ಲರೆ ಅಂಗಡಿಯ  ಬಳಿಗೆ ಹೋಗಿ ಪಂಚರ ಸಮಕ್ಷಮ  ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿದ್ದ ಮದ್ಯದ ಮಾಲುಗಳನ್ನು ಬೆಳಿಗ್ಗೆ 10-45 ಗಂಟೆಯಿಂದ ಬೆಳಿಗ್ಗೆ 11-45  ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ನಂತರ ಪಂಚರೊಂದಿಗೆ ನಾರಾಯಣಮ್ಮ ಕೊಂ ಕೋನಪ್ಪರೆಡ್ಡಿ ರವರ ಅಂಗಡಿಯ ಬಳಿಗೆ ಮದ್ಯಾಹ್ನ 12-00 ಗಂಟೆಗೆ ಹೋಗಿ ನೋಡಲಾಗಿ ನಾರಾಯಣಮ್ಮ ಕೊಂ ಕೋನಪ್ಪರೆಡ್ಡಿ,  ರವರು ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮದ್ಯ ಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಅಂಗಡಿಯ ಮಾಲೀಕಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಿಂದ ಓಡಿ ಹೋದ ಆಸಾಮಿತಳ  ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಮ್ಮ ಕೊಂ ಕೋನಪ್ಪರೆಡ್ಡಿ, 60 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಎಸ್ ರಾಗುಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.  ಎಂದು ತಿಳಿಸಿದ್ದು. ಈಕೆಯು ಮದ್ಯದ ಪ್ಯಾಕೇಟಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾಳೆಯೇ ಎಂಬುದರ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಲಾಗಿ ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ಮದ್ಯಾಹ್ನ 12-15 ಗಂಟೆಯಿಂದ 13-00  ಗಂಟೆಯವರೆಗೆ ಪಂಚನಾಮೆ ಕ್ರಮ  ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 900 ಎಂ.ಎಲ್ ನ 351 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 10 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ವಾಪಸ್ಸು ಬಂದು ಮಧ್ಯಾಹ್ನ 14-00 ಗಂಟೆಗೆ ಠಾಣೆಯ ಮೊ,ಸಂಖ್ಯೆ:72/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.42/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ:12-05-2021 ರಂದು ಬೆಳಗ್ಗೆ 10-15 ಗಂಟೆಗೆ ಪಿರ್ಯಾಧಿದಾರರಾದ ಶ್ರೀ.ಪ್ರತಾಪ್ ಕೆ.ಆರ್ ಪಿ.ಎಸ್.ಐ ರವರು  ಮಾಲುಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ್ದರ ವರದಿಯ ಸಾರಾಂಶವೇನೆಂದರೆ ದಿನಾಂಕ:12-05-2021 ರಂದು ಬೆಳಗ್ಗೆ 7-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಪುಲಗಲ್ ಗ್ರಾಮದಲ್ಲಿ ರಾಜಪ್ಪ ಬಿನ್ ಲೇಟ್ ಲಕ್ಷ್ಮಣ್ ಪುಲಿಗಲ್ ಗ್ರಾಮ ರವರುಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಮಧ್ಯವನ್ನು ಅಕ್ರಮವಾಗಿ ತಮ್ಮ ಮನೆಯಲ್ಲಿ ದಾಸ್ತಾನು ಮಾಡಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಹೆಚ್-ಸಿ-129 ರವಣಪ್ಪ, ಸಿಪಿಸಿ-468 ಅಂಜಿನಪ್ಪ, ಸಿಪಿಸಿ-437 ಸತೀಶ್, ಸಿಪಿಸಿ-365 ಶ್ರೀಕಾಂತ ಗುಡದನಾಳ ರವರನ್ನು ಕರೆದುಕೊಂಡು ಜೀಪ್ ಚಾಲಕ ಎಪಿಸಿ-87 ಮೊಹನ್ ಕುಮಾರ್ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-42 ಜಿ-0061 ರಲ್ಲಿ ಬೆಳಗ್ಗೆ 8.00 ಗಂಟೆಗೆ ಪುಲಿಗಲ್ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ರಾಜಪ್ಪ ಬಿನ್ ಲೇಟ್ ಲಕ್ಷ್ಮಣ್ ರವರ ಅಂಗಡಿಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ಅಂಗಡಿಯ ಬಳಿ ನೋಡಲಾಗಿ ಅಂಗಡಿಯ ಬಾಗಿಲು ತೆರೆದಿದ್ದು, ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ರಾಜಪ್ಪ ರವರು ಅಂಗಡಿಯಿಂದ ಓಡಿ ಹೋಗಿರುತ್ತಾನೆ. ನಂತರ ಪಂಚರ ಸಮಕ್ಷಮ ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯ ಮುಂದೆ ಸಾರ್ವಜನಿಕರು ಕುಳಿತುಕೊಳ್ಳಲು ಕಲ್ಲು ಚಪ್ಪಡಿ ಹಾಕಿದ್ದು, ಸದರಿ ಕಲ್ಲು ಚಪ್ಪಡಿಯ ಕೆಳಗೆ ಒಂದು ಪ್ಲಾಸ್ಟಿಕ್ ಚೀಲ ಇದ್ದು, ಸದರಿ ಚೀಲವನ್ನು ತೆಗೆದು ಪರಿಶೀಲಿಸಲಾಗಿ 1) 180 ಎಂ.ಎಲ್ ಸಾಮಥ್ರ್ಯದ OLD ADMIRAL VSOP Brandy ಕಂಪನಿಯ 19 ಟೆಟ್ರಾ ಪಾಕೆಟ್ಗಳಿರುತ್ತವೆ. ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 86.75 ರೂ ಎಂದು ಇದ್ದು ಇವುಗಳ ಬೆಲೆ 1648.25 ರೂ ಆಗುತ್ತದೆ, 2) 90 ಎಂ.ಎಲ್ ಸಾಮಥ್ರ್ಯದ HAYWARDS CHEERS whisky ಕಂಪನಿಯ ಒಟ್ಟು 25 ಟೆಟ್ರಾ ಪಾಕೆಟ್ಗಳಿರುತ್ತವೆ. ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 35.13 ರೂ ಎಂದು ಬೆಲೆ ಇರುತ್ತದೆ, ಇವುಗಳ ಒಟ್ಟು ಬೆಲೆ 878.25 ರೂ ಆಗುತ್ತದೆ. 3) 180 ಎಂ.ಎಲ್ ಸಾಮಥ್ರ್ಯದ IMPERIAL BLUE SUPERIOR GRAIN WHISKY ಕಂಪನಿಯ 02 ಬಾಟಲ್  ಗಳಿದ್ದು, ಪ್ರತಿ ಬಾಟಲ್ ಮೇಲೆ 198.21/- ರೂ ಎಂದು ಬೆಲೆಯಿದ್ದು ಇವುಗಳ ಬೆಲೆ 396.42/- ರೂ ಆಗುತ್ತದೆ, ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳ ಒಟ್ಟು ಬೆಲೆ 2,922=92 (ಎರಡು ಸಾವಿರದ ಒಂಬೈನೂರ ಇಪ್ಪತ್ತೆರೆಡು ರೂಪಾಯಿ ತೊಂಬತ್ತೆರಡು ಪೈಸೆ)ರೂಗಳಾಗಿರುತ್ತೆ. ಎಫ್.ಎಸ್.ಎಲ್ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಮೇಲ್ಕಂಡ ಎಲ್ಲಾ ಮಧ್ಯದ ಟೆಟ್ರಾ ಪಾಕೆಟ್ಗಳು ಮತ್ತು ಬಾಟಲ್ಗಳ ಪೈಕಿ ತಲಾ ಒಂದೊಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಣ್ಣದ ಬಟ್ಟೆಯ ಚೀಲದಲ್ಲಿ ಇಟ್ಟು ಮೂತಿಯನ್ನು ದಾರದಿಂದ ಕಟ್ಟಿ "D" ಎಂಬ ಆಂಗ್ಲಭಾಷೆಯ ಅಕ್ಷರದಿಂದ ಸೀಲ್ ಮಾಡಿರುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳನ್ನು ಹಾಗೂ ಮಾದರಿ ವಸ್ತುಗಳನ್ನು ಬೆಳಗ್ಗೆ 8-30 ರಿಂದ ರಾತ್ರಿ 9-45 ಗಂಟೆಯವರೆಗೂ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಅಂಗಡಿಯ ಬಳಿ ಇದ್ದ ಸಾರ್ವಜನಿಕರನ್ನು ಸದರಿ ಅಂಗಡಿಯ ಮಾಲೀಕರ ಹೆಸರು ವಿಳಾಸ ಕೇಳಲಾಗಿ ರಾಜಪ್ಪ ಬಿನ್ ಲೇಟ್ ಲಕ್ಷ್ಮಣ್, 48 ವರ್ಷ  ಈಡಿಗರು, ವ್ಯಾಪಾರ, ಪುಲಿಗಲ್ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ಸದರಿ ಆಸಾಮಿಯು ಅಂಗಡಿಯಿಂದ ಓಡಿ ಹೋಗಿದ್ದು, ಆತನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಅಂಗಡಿಯ ಮುಂದೆ ಕಲ್ಲುಚಪ್ಪಡಿಯ ಕೆಳಗೆ ಮಧ್ಯವನ್ನು ದಾಸ್ತಾನು ಮಾಡಿರುವುದಾಗಿ ತಿಳಿಸಿರುತ್ತಾರೆ. ಮೇಲ್ಕಂಡ ಮದ್ಯದ ವಸ್ತುಗಳು ಮತ್ತು ಪಂಚನಾಮೆಯೊಂದಿಗೆ ಬೆಳಗ್ಗೆ 10-15 ಗಂಟೆಗೆ ಠಾಣೆಗೆ ಬಂದು ವರದಿಯೊಂದಿಗೆ ಅಸಲು ಪಂಚನಾಮೆಯನ್ನು ಮತ್ತು ಮಾಲನ್ನು ನೀಡುತ್ತಿದ್ದು, ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಮೇಲ್ಕಂಡ ಆಸಾಮಿಯ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿ  ನೀಡಿದ್ದರ ಮೇರೆಗೆ ಠಾಣಾ ಮೊ.ಸಂ: 42/2021 ಕಲಂ: 32,34 ಕೆ.ಇ ಆಕ್ಟ್ ರೀತ್ಯ ಪ್ರರಕಣ ದಾಖಲು ಮಾಡಿರುತ್ತೆ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.30/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-11/05/2021 ರಂದು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಶ್ರೀ.ಶಿವಶಂಕರ್ ಬಿ ಆರ್ ಬಿನ್ ರಾಜಪ್ಪ ಎನ್ 38  ವರ್ಷ ನಾಯಕರು ಎಮ್ ಜಿ ರಸ್ತೆಯಲ್ಲಿರುವ ಹೆಚ್ ಪಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಬೈಚಾಪುರ ಗ್ರಾಮ ,ಕಸಭಾ ಹೋಬಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ರವರು ನೀಡಿದ ಹೇಳಿಕೆಯ  ದೂರಿನ ಸಾರಾಂಶವೇನೆಂದರೆ ತಾನು  ದಿನಾಂಕ 11-05-2021 ರಂದು ತನ್ನ ಸ್ನೇಹಿತನ ಬಾಬತ್ತುKA-40-EE-7964 ರ ಫ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಹೋಗಿ ಕೆಲಸನ್ನು ಮುಗಿಸಿಕೊಂಡು ಪುನಃ ವಾಪಸ್ಸು ಎಮ್.ಜಿ ರಸ್ತೆಯಲ್ಲಿರುವ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿಗೆ ಬರಲು ಬೆಳಿಗ್ಗೆ ಸುಮಾರು 10:00 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ – ಚಿಕ್ಕಬಳ್ಳಾಪುರ ಎನ್.ಹೆಚ್-44 ಬಿ.ಬಿ ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಡಿ.ವೈ.ಎಸ್.ಪಿ ಸಾಹೇಬರ ವಸತಿ ಗೃಹದ ಮುಂಭಾಗದ ಠಾರ್ ರಸ್ತೆಯಲ್ಲಿ ಬರುತ್ತಿದ್ದಾಗ ಎದುರಿಗೆ ಬಾಗೇಪಲ್ಲಿ ವೃತ್ತದ ಕಡೆಯಿಂದ ಬಂದ KA-40-EE-3456 ರ ಹೊಂಡಾ ಡಿಯೋ ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನಕ್ಕೆ  ಡಿಕ್ಕಿ ಹೊಡಿಸಿ ವಾಹನ ಸಮೇತ ಸ್ಥಳದಿಂದ ಹೊರಟು ಹೋದ ಪರಿಣಾಮ ತಾನು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತನ್ನ ಎಡಕಾಲಿನ ಪಾದಕ್ಕೆ ಗಾಯ ಉಂಟಾಗಿ ಊತ ಬಂದಿದ್ದು ಸದರಿ ಸ್ಥಳಕ್ಕೆ ತಮ್ಮ ಪೆಟ್ರೋಲ್ ಬಂಕ್ನ್ ಮ್ಯಾನೇಜರ್ ಆದ ಶ್ರೀ.ಶಶಿಕುಮಾರ್ ಬಿನ್ ಪಾಂಡುರಂಗ 35 ವರ್ಷ ರವರು ಬಂದು  ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತಕ್ಕೆ ಕಾರಣನಾದ KA-40-EE-3456 ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಮಧ್ಯಾಹ್ನ 12-15 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.203/2021 ಕಲಂ. 143,147,148,323,324,504,506,149 ಐ.ಪಿ.ಸಿ :-

     ದಿನಾಂಕ 11-05-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಉಮಾಶ್ರೀ ಬಿನ್ ಹನುಮಂತಪ್ಪ, 22 ವರ್ಷ, ಕೂಲಿ ಕೆಲಸ, ನಾಯಕ ಜನಾಂಗ, ಕಟಮಾಚನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ತನ್ನ ತಂದೆ ಹನುಮಂತಪ್ಪ ರವರಿಗೆ ಎರಡು ಮದುವೆಯಾಗಿದ್ದು ಮೊದಲನೆ ಹೆಂಡತಿ ಚಿನ್ನಮ್ಮಯ್ಯ ಮತ್ತು ಎರಡನೇ ಹೆಂಡತಿ ಲಲಿತಮ್ಮ ರವರಾಗಿರುತ್ತಾರೆ.  ತಾನು ಚಿನ್ನಮ್ಮಯ್ಯ ರವರ ಮಗಳಾಗಿರುತ್ತೇನೆ. ಹೀಗಿರುವಾಗ ಲಲಿತಮ್ಮ ರವರ ಮಗನಾದ ಪವನ್ ರವರು ಈಗ್ಗೆ ಒಂದು ವರ್ಷದ  ಹಿಂದೆ ಮನೆ ಬಿಟ್ಟು ಹೋರಟು ಹೋಗಿದ್ದು ಈ ದಿನ ದಿನಾಂಕ 11-05-2021 ರಂದು ವಾಪಸ್ಸು ಮನೆಗೆ ಬಂದಿರುತ್ತಾನೆ. ಈ ದಿನ  ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಲಲಿತಮ್ಮ ರವರು ಪವನ್ ರವರ ಬಟ್ಟೆಗಳನ್ನು ಒಗೆಯುತ್ತಿದ್ದು ತಾನು ಲಲಿತಮ್ಮ ರವರನ್ನು ಕುರಿತು  ಪವನ್  ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದಾನೆ ಅವನಿಗೆ ಏಕೆ ಸಹಾಯ ಮಾಡುತ್ತಿಯಾ  ಎಂದು ಕೇಳಿದ್ದು  ಆಗ  ಪವನ್ ತನ್ನನ್ನು ಕುರಿತು ನೀನು ಇವತ್ತೋ ನಾಳೆ  ಮದುವೆ ಮಾಡಿಕೊಂಡು ಹೋಗುತ್ತಿಯಾ ನಮ್ಮ ಮನೆಯ ವಿಷಯ ನಿನಗೆ ಏಕೆ ಎಂದು ತನ್ನ ಮೇಲೆ ಗಲಾಟೆ ಮಾಡಿದ್ದು ಆಗ ತಾನು,  ನಾನು ಈ ಮನೆಯ ಮಗಳು ನನಗೂ ಮಾತನಾಡಲೂ ಹಕ್ಕಿದೆ ಎಂದು ಹೇಳಿದ್ದು  ಆಗ ಪವನ್ ಮತ್ತು ಅವರ ಕಡೆಯವರಾದ ಲಿಲಿತಮ್ಮ ಕೋಂ ಹನುಮಂತಪ್ಪ, ನಾರಾಯಣಸ್ವಾಮಿ ಬಿನ್ ಪೆದ್ದಪ್ಪಯ್ಯ, ರಾಮಪ್ಪ ಬಿನ್ ಪೆದ್ದಪ್ಪಯ್ಯ, ಮನೋಜ್ ಬಿನ್ ನಾರಾಯಣಸ್ವಾಮಿ ಮತ್ತು ಬಾಲಾಜಿ ಬಿನ್  ರಾಮಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು  ತನಗೆ ಅವಾಶ್ಛ ಶಬ್ದಗಳಿಂದ ಬೈದು ಆ ಪೈಕಿ ಪವನ್ ರವರು ಅಲ್ಲಿಯೇ ಬಿದ್ದಿದ್ದ ಯಾವುದೋ ನೀಲಗಿರಿ ದೊಣ್ಣೆಯಿಂದ ತನ್ನ ಮೈ ಕೈ ಮೇಲೆ ಹೊಡೆದು ಗಾಯಪಡಿಸಿದನು.  ಲಲಿತಮ್ಮ ರವರು  ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಳು. ಉಳಿದವರು ಸಹ ತನಗೆ ಅವಾಶ್ಚ ಶಬ್ದಗಳಿಂದ ಬೈದು ಇನ್ನೋಂದು ಸಾರಿ ತಮ್ಮ ಬಗ್ಗೆ ಮಾತನಾಡಿದರೆ ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 379  ಐ.ಪಿ.ಸಿ :-

     ದಿನಾಂಕ 11/05/2021ರಂದು ಸಂಜೆ 6-00 ಗಂಟೆಗೆ ಪಿರ್ಯಾದುದಾರರಾದ ಧನುಷ್ ರೆಡ್ಡಿ ಡಿ ವಿ  ಬಿನ್   ವಿಶ್ವನಾಥರೆಡ್ಡಿ, 26 ವರ್ಷ, ವಕ್ಕಲಿಗರು, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯಾದ ವಿಶ್ವನಾಥರೆಡ್ಡಿ ರವರ ಹೆಸರಿನಲ್ಲಿ KA-40 X-0334 ACTIVA 3G  (ENGINE NO- JF50ET2355871, CHASSIS NO- ME4JF504EFT354888) ದ್ವಿ-ಚಕ್ರ ವಾಹನವನ್ನು ಹೊಂದಿರುತ್ತಾರೆ. ದಿನಾಂಕ 09/05/2021 ರಂದು ಬೆಳಿಗ್ಗೆ 9-55 ಗಂಟೆ ಸಮಯದಲ್ಲಿ ನಮ್ಮ ಮನೆಗೆ ದಿನನಿತ್ಯದ ಸಾಮಗ್ರಿಗಳನ್ನು ತರಲು ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯಲ್ಲಿರುವ ಮೋರ್ ಸೂಪರ್ ಮಾರ್ಕೇಟ್ ಗೆ ಹೋಗಿ ಮೋರ್ ಮುಂಭಾಗದಲ್ಲಿ  ನಿಲ್ಲಿಸಿ  ಮೋರ್ ಸೂಪರ್ ಮಾರ್ಕೇಟ್ ಒಳಗಡೆ ಹೋಗಿ  ನಂತರ ವಾಪಸ್ಸು ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಸ್ಥಳಲ್ಲಿ ದ್ವಿ-ಚಕ್ರ ವಾಹನ ಇಲ್ಲದೆ ಇದ್ದು ನನಗೆ ಗಾಬರಿಯಾಗಿ ಸುತ್ತಮುತ್ತಲು ವಿಚಾರಿಸಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ದ್ವಿ-ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದುವರೆಗೂ ಹುಡುಕಾಡಿಕೊಂಡು ಈ ದಿನ ತಡವಾಗಿ ಠಾಣೆಯಲ್ಲಿ ದೂರು ನೀಡುತ್ತಿರುತ್ತೇನೆ. ಸದರಿ ದ್ವಿ ಚಕ್ರ ವಾಹನ ಬೆಲೆ ಸುಮಾರು 25,000-00 ರೂ.ಗಳಷ್ಟಿರುತ್ತೆ. ಆದ್ದರಿಂದ ಕಳುವಾಗಿರುವ ದ್ವಿ-ಚಕ್ರ ವಾಹನ ಮತ್ತು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರು.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.55/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ 12/5/2021 ರಂದು ಠಾಣಾ ಸಿಬ್ಬಂಧಿ-143, ಶ್ರೀನಾಥ ಕೆ.ಎಸ್ ರವರು ಆರೋಪಿ, ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:12/05/2021 ರಂದು ಬೆಳಗ್ಗೆ 9.00 ಗಂಟೆಯಲ್ಲಿ ತಾನು ಠಾಣಾ ಸಿಬ್ಬಂದಿಯಾದ  ಪಿ.ಸಿ -196 ದೇವರಾಜ್ ಬಡಿಗೇರ್ ರವರನ್ನು ಕರೆದುಕೊಂಡು ಈ.ತಿಮ್ಮಸಂದ್ರ ಗ್ರಾಮದ ಕಡೆಗೆ ಕೋವಿಡ್-19 ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಗಾಂಡ್ಲಚಿಂತೆ ಗ್ರಾಮದ ಬಳಿ ಹೋಗುತ್ತಿದ್ದಂತೆ ಯಾರೋ ಬಾತ್ಮಿದಾರರು ಗಾಂಡ್ಲಚಿಂತೆ ಗ್ರಾಮದ ದೇವರಾಜ ಬಿನ್ ಲೇಟ್ ನಾರಾಯಣಪ್ಪ ರವರು ತಮ್ಮ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು, ತಾವು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಗಾಂಡ್ಲಚಿಂತೆ ಗ್ರಾಮದ ದೇವರಾಜ ಬಿನ್ ಲೇಟ್ ನಾರಾಯಣಪ್ಪರವರ ವಾಸದ ಮನೆಯ ಬಳಿ ಬೆಳಗ್ಗೆ 9.30 ಗಂಟೆಗೆ ಹೋಗಿ ನೋಡುವಷ್ಟರಲ್ಲಿ ಸದರಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯಲ್ಲಿದ್ದ ಆಸಾಮಿಯನ್ನು ಕರೆದು ಅವರ ಹೆಸರು ಮತ್ತು ವಿಳಾಸ ಕೇಳಲಾಗಿ ದೇವರಾಜ ಬಿನ್ ಲೇಟ್ ನಾರಾಯಣಪ್ಪ, 40 ವರ್ಷ, ಭಜಂತ್ರಿ ಜನಾಂಗ, ಕೂಲಿ ಕೆಲಸ, ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮೊ.ಸಂ-9740442854 ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಸಾರ್ವಜನಿಕರಿಗೆ ಸಾರ್ವಜನಿಕರ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಆತ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಸಿದರು. ನಂತರ ಪಂಚರ ಸಮಕ್ಷಮ ಬೆಳಗ್ಗೆ 9.45 ಗಂಟೆಯಿಂದ 10.30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 990 ಎಂ.ಎಲ್ ನ 386.43  ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 11 ಟೆಟ್ರಾ ಪ್ಯಾಕೇಟ್ಗಳು ಹಾಗೂ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.93/2021 ಕಲಂ. 394 ಐ.ಪಿ.ಸಿ :-

     ದಿನಾಂಕ:12-05-2021 ರಂದು ಮದ್ಯಾಹ್ನ:2-15 ಗಂಟೆಗೆ ಪಿರ್ಯಾದಿದಾರರಾದ ಮಹೇಶ್ ಕುಮಾರ್ ಬಿನ್ ಮುನ್ಸಿಲಾಲ್ 56 ವರ್ಷ ಪ.ಜಾತಿ. ಜನಾಂಗ ಲಾರಿ ಚಾಲಕ ವೃತ್ತಿ ವಾಸ ಭರತನಾ ಗ್ರಾಮ ಇಟಾವಾ ಜಿಲ್ಲೆ ಉತ್ತರ ಪ್ರದೇಶ ರಾಜ್ಯ ಪೊ:9342060295.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ: ತಾನು ಎನ್.ಎಲ್-01 ಕ್ಯೂ-4060 ನೊಂದಣಿ ಸಂಖ್ಯೆಯ ಟಾಟಾ ಕಂಪನಿಯ ಕಂಟೈನರ್ ಲಾರಿ ಚಾಲಕನಾಗಿದ್ದು ತಾನು ದಿನಾಂಕ:07-05-2021 ರಂದು ಛತ್ತಿಸಘಡ್ ರಾಜ್ಯದ ರಾಯಪುರದಿಂದ ಮೇಲ್ಕಂಡ  ಕಂಟೈನರ್ ಲಾರಿಯಲ್ಲಿ ಗೀಸರ್ ಸಂಬಂದಿಸಿದ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಅವುಗಳನ್ನು ಕೇರಳ ರಾಜ್ಯಕ್ಕೆ ತಗೆದುಕೊಂಡು ಹೋಗಲು ಮೇಲ್ಕಂಡ ಕಂಟೈನರ್ ಲಾರಿಯನ್ನು ತಾನು ಒಬ್ಬನೇ ಚಾಲನೆ ಮಾಡಿಕೊಂಡು ಎನ್.ಹೆಚ್-44 ರಸ್ತೆಯಲ್ಲಿ  ಹೋಗುತ್ತಿದ್ದಾಗ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ತಟ್ಟಹಳ್ಳಿ ಕ್ರಾಸ್ ಹತ್ತಿರ  ಹೈದರಾಬಾದ್  ಕಡೆಯಿಂದ ಬೆಂಗಳೂರು ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಈ ದಿನ ದಿನಾಂಕ:12-05-2021 ರಂದು ಬೆಳಗ್ಗೆ ಸುಮಾರು 4-30 ಗಂಟೆಯಲ್ಲಿ ತಾನು ಚಾಲನೆ ಮಾಡುತ್ತಿದ್ದ ಮೇಲ್ಕಂಡ ಕಂಟೈನರ್ ಲಾರಿಯ ಚಕ್ರಗಳ ಗಾಳಿಯನ್ನು ಚೆಕ್ ಮಾಡಲು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಗಾಳಿಯನ್ನು ಚೆಕ್ ಮಾಡಿ ಪುನಃ ತಾನು ಮೇಲ್ಕಂಡ ಲಾರಿಯನ್ನು ಹತ್ತಿದ್ದಾಗ ಅದೇ ಸಮಯಕ್ಕೆ 03 ಜನ ಅಪರಿಚಿತರು ತನ್ನ ಬಳಿ ಬಂದು ಅ ಪೈಕಿ ಒಬ್ಬ ವ್ಯಕ್ತಿ ತನಗೆ ಚಾಕುವನ್ನು ತೋರಿಸಿ ಹಿಂದಿ ಬಾಷೆಯಲ್ಲಿ ಹಣವನ್ನು ಕೇಳಿದ್ದು ತಾನು ಹಣವನ್ನು ನೀಡದಿದ್ದಾಗ ಚಾಕುವಿನಿಂದ ತನ್ನ ಬಲ ಪಾದಕ್ಕೆ ತಿವಿದು ರಕ್ತಗಾಯಪಡಿಸಿ ನಂತರ 03 ಜನ ಅಪರಿಚಿತರು ತನ್ನ ಬಳಿ ಇದ್ದ  15000/- (ಹದಿನೈದು ಸಾವಿರ) ರೂಪಾಯಿ ಹಣವನ್ನು. ಮತ್ತು ತನ್ನ ಎಸ್.ಬಿ.ಐ. ಬ್ಯಾಂಕ್ ಪಾಸ ಬುಕ್, ಚಾಲನಾ ಪರವಾನಿಗೆ, ಆಧಾರ ಕಾರ್ಡ, ಪಿನ್ ಕಾರ್ಡ, ಹಾಗೂ ತನ್ನ ಒಂದು ಜೊತೆ ಬಟ್ಟೆಗಳು ಇರುವ ಒಂದು ಬ್ಯಾಗ್ ನ್ನು  ಕಿತ್ತುಕೊಂಡು ಹೋಗಿರುತ್ತಾರೆ. ಆದ್ದರಿಂದ ತನಗೆ ಚಾಕುವಿನಿಂದ ಹಲ್ಲೆ ಮಾಡಿ ತನ್ನ ಬಳಿ ಇದ್ದ ಹಣವನ್ನು ಮತ್ತು ಮೇಲ್ಕಂಡ ವಸ್ತುಗಳನ್ನು ಕಿತ್ತುಕೊಂಡು ಹೋಗಿರುವ 03 ಜನ ಅಪರಿಚಿತರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

9. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.37/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ:11-05-2021 ರಂದು ಸಂಜೆ 17-00 ಗಂಟೆಗೆ ಪಿರ್ಯಾದುದಾರರಾದ ಎನ್.ರತ್ನಯ್ಯ, ಪಿ.ಎಸ್.ಐ., ಪಾತಪಾಳ್ಯ ಪೊಲೀಸ್ ಠಾಣೆ ರವರು ನೀಡಿದ ವರದಿ ಯನ್ನು ಪಡೆದು ದಾಖಲಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:11-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಸಂಜೆ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ತೋಳ್ಳಪಲ್ಲಿ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳಲು ಚಿಲ್ಲರೆ ಅಂಗಡಿ ಮುಂದೆ ಬಾಕ್ಸ್ ಗಳನ್ನು ಹಾಕಿ ಸದರಿ ಬಾಕ್ಸ್ಗಳಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸಿದ್ದು, ದಿನಾಂಕ:11-05-2021 ರಂದು ಸಂಜೆ 4-30 ಗಂಟೆಯಲ್ಲಿ ತೋಳ್ಳಪಲ್ಲಿ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿ ಬಳಿ ಜನರು ಗುಂಪಾಗಿ ಸೇರಿದ್ದರು, ತಾವು  ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಮುನಿರತ್ನಂಚಾರಿ ಬಿನ್ ಲೇಟ್ ನಾರಾಯಣಾಚಾರಿ, 62 ವರ್ಷ, ವಿಶ್ವಕರ್ಮ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ತೋಳ್ಳಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊಬೈಲ್ ಸಂಖ್ಯೆ:9353136643 ಎಂತ ತಿಳಿಸಿರುತ್ತಾರೆ. ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ಮುನಿರತ್ನಂಚಾರಿ ರವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸಕರ್ಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

10. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.38/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ:12-05-2021 ರಂದು ಬೆಳಿಗ್ಗೆ 11-45 ಗಂಟೆಗೆ ಪಾತಪಾಳ್ಯ ಠಾಣೆ ಪಿ.ಎಸ್.ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:12-05-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ತೋಳ್ಳಪಲ್ಲಿ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳಲು ಚಿಲ್ಲರೆ ಅಂಗಡಿ ಮುಂದೆ ಬಾಕ್ಸ್ ಗಳನ್ನು ಹಾಕಿ ಸದರಿ ಬಾಕ್ಸ್ ಗಳಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸಿರುವುದಾಗಿ, ಹೀಗಿರುವಾಗ ದಿನಾಂಕ:12-05-2021 ರಂದು ಬೆಳಿಗ್ಗೆ 11-15 ಗಂಟೆಯಲ್ಲಿ ತೋಳ್ಳಪಲ್ಲಿ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿ ಬಳಿ ಜನರು ಗುಂಪಾಗಿ ಸೇರಿದ್ದರು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ಅಲ್ಲಾಬಕಾಷ್ ಬಿನ್ ಮಹಮ್ಮದ್ ಹುಸೇನ್ ಸಾಬ್, 50 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ತೋಳ್ಳಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊಬೈಲ್ ಸಂಖ್ಯೆ: 7760639377 ಎಂತ ತಿಳಿಸಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ಅಲ್ಲಬಕಾಷ್ ರವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಆಸಾಮಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.156/2021 ಕಲಂ. 279,304(A) ಐ.ಪಿ.ಸಿ :-

     ದಿನಾಂಕ: 11-05-2021 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿದಾರರಾದ ಮುನಿಶಾಮಿ ಬಿನ್ ಲೇಟ್ ಲಕ್ಷ್ಮಯ್ಯ, ಸುಮಾರು 68 ವರ್ಷ, ಒಕ್ಕಲಿಗರು, ಚಂದಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮೂರು ಜನ ಮಕ್ಕಳಿದ್ದು 1ನೇ ಲಕ್ಷ್ಮೀಪತಿ, 2ನೇ ನಾರಾಯಣಸ್ವಾಮಿ, 3ನೇ ಅನಿಲ್ @ ಅನಿಲ್ ಕುಮಾರ್ ಆಗಿರುತ್ತಾರೆ. ನನ್ನ ಇಬ್ಬರು ಹಿರಿಯ ಮಕ್ಕಳು ಜಿರಾಯ್ತಿ ಮಾಡುತ್ತಿದ್ದು ನನ್ನ ಕೊನೆಯ ಮಗ ಅನಿಲ್ ಕುಮಾರ್ ರವರಿಗೆ ಸುಮಾರು 22 ವರ್ಷ ವಯಸ್ಸಾಗಿದ್ದು ಜಿರಾಯ್ತಿ ಜತಗೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ನಮ್ಮ ಸಂಸಾರವನ್ನು ಅವನೇ ನಿಭಾಯಿಸುತ್ತಿದ್ದು ತನ್ನ ಮಕ್ಕಳಿಗೆ ಯಾರಿಗೂ ಇನ್ನೂ ಮದುವೆಯಾಗಿರುವುದಿಲ್ಲ. ನಾವೆಲ್ಲಾ ಒಂದೇ ಮನೆಯಲ್ಲಿಯೇ ವಾಸವಾಗಿರುತ್ತೇವೆ. ಈಗಿರುವಲ್ಲಿ ದಿನಾಂಕ:11-05-2021 ರಂದು ಬೆಳಿಗ್ಗೆ ತನ್ನ ಮಗ ನಮಗೆ ಶಿಡ್ಲಘಟ್ಟ ತಾಲ್ಲೂಕು ಮಳಮಾಚನಹಳ್ಳಿ ಗ್ರಾಮದಲ್ಲಿ ಯಾರದೋ ಮನೆಯ ಎಲೆಕ್ಟ್ರಿಕಲ್ ಕೆಲಸವಿದೆ ತನ್ನ ಜತೆಯಲ್ಲಿ ಕೆಲಸ ಮಾಡುವ ವೆಂಕಟೇಶ ಬಿನ್ ಲೇಟ್ ಚಿಕ್ಕನಾರಾಯಣಪ್ಪ, ಚಂದಗಾನಹಳ್ಳಿ ಗ್ರಾಮ ರವರ ಜತೆಯಲ್ಲಿ ಹೋಗುವುದಾಗಿ ತಿಳಿಸಿ ವೆಂಕಟೇಶನ ಬಾಬತ್ತು ಕೆಎ-67-ಹೆಚ್-1396 ಟಿ.ವಿ.ಎಸ್ ರೆಡಾನ್ ದ್ವಿ ಚಕ್ರ ವಾಹನದಲ್ಲಿ ಮುಂಜಾನೆ ಹೋದರು. ನಂತರ ತನಗೆ ಬೆಳಿಗ್ಗೆ ಸುಮಾರು 7.00 ಗಂಟೆ ಸಮಯದಲ್ಲಿ ಯಾರೋ ತನಗೆ ಪೋನ್ ಮಾಡಿ ತನ್ನ ಮಗ ಹಾಗೂ ವೆಂಕಟೇಶ ರವರು ಹೋಗುತ್ತಿದ್ದ ದ್ವಿ ಚಕ್ರ ವಾಹನವು ಶಿಡ್ಲಘಟ್ಟದಿಂದ ಜಂಗಮಕೋಟೆಗೆ ಹೋಗುವ ರಸ್ತೆಯ ಆನೂರು ಕೆರೆ ಕಟ್ಟೆಯ ಮೇಲೆ ಅಪಘಾತವಾಗಿ ತನ್ನ ಮಗನಿಗೆ ತಲೆಗೆ ತೀವ್ರವಾಗಿ ಗಾಯವಾಗಿರುವುದಾಗಿ ಗಾಯಾಳುವನ್ನು 108 ಆಂಬುಲೆನ್ಸ್ ಮೂಲಕ ಶಿಡ್ಲಘಟ್ಟ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದರು ಕೂಡಲೇ ತಾನು ತನ್ನ ಮಗನಾದ ನಾರಾಯಣಸ್ವಾಮಿ ಹಾಗೂ ಸಂಬಂಧಿಕರಾದ ಬೈರೆಡ್ಡಿ ಬಿನ್ ಅಪ್ಪಿರೆಡ್ಡಿ ರವರ ಜತೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತದಿಂದ ತನ್ನ ಮಗನ ತಲೆಯ ಹಿಂಬಾಗ ಗಾಯವಾಗಿ ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಅದರಂತೆ ನಾವು ಆಂಬುಲೆನ್ಸ್ ನಲ್ಲಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಬೆಳಿಗ್ಗೆ ಸುಮಾರು 9.30 ಗಂಟೆಗೆ ಹೋಗಿದ್ದು ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ ಸುಮಾರು 1.15 ಗಂಟೆಗೆ ತನ್ನ ಮಗ ಮೃತಪಟ್ಟಿರುತ್ತಾರೆ. ತನ್ನ ಮಗನ ಲಾಷು ಬೆಂಗಳೂರು ನಿಮ್ಹಾನ್ ಆಸ್ಪತ್ರೆಯಲ್ಲಿರುತ್ತದೆ. ಈ ದಿನ ಬೆಳಿಗ್ಗೆ ತನ್ನ ಮಗ ಅನಿಲ್ @ ಅನಿಲ್ ಕುಮಾರ್ ಹಾಗೂ ವೆಂಕಟೇಶ ರವರು ದ್ವಿ ಚಕ್ರ ವಾಹನದಲ್ಲಿ ಶಿಡ್ಲಘಟ್ಟದಿಂದ ಜಂಗಮಕೋಟೆ ಕಡೆಗೆ ಹೋಗುವ ಅನೂರು ಕೆರೆ ಕಟ್ಟೆಯ ಮೇಲೆ ದ್ವಿ ಚಕ್ರ ವಾಹನವನ್ನು ವೆಂಕಟೇಶ ರವರು ಚಾಲನೆ ಮಾಡುತ್ತಾ ಹಿಂಬದಿಯಲ್ಲಿ ತನ್ನ ಮಗನನ್ನು ಕೂರಿಸಿಕೊಂಡು ಮೇಲ್ಕಂಡ ಸ್ಥಳದಲ್ಲಿ ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿ ಆನೂರು ಕೆರೆ ಕಟ್ಟೆಯ ಮೇಲೆ ರಸ್ತೆಯಲ್ಲಿರುವ ಹಂಪ್ಸ್ನ ಮೇಲೆ ವಾಹನವನ್ನು ಹತ್ತಿಸಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದು ಹೋದ ಪರಿಣಾಮ ಹಿಂಬದಿ ಕುಳಿತಿದ್ದ ತನ್ನ ಮಗನಿಗೆ ಮೇಲ್ಕಂಡಂತೆ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಈ ಅಪಘಾತಕ್ಕೆ ಕಾರಣವಾದ ಕೆಎ-67-ಹೆಚ್-1396 ಟಿ.ವಿ.ಎಸ್ ರೆಡಾನ್ ದ್ವಿ ಚಕ್ರ ವಾಹನದ ಸವಾರ ವೆಂಕಟೇಶ ಬಿನ್ ಲೇಟ್ ಚಿಕ್ಕನಾರಾಯಣಪ್ಪ, ಚಂದಗಾನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 156/2021 ಕಲಂ 279, 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 12-05-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080