Feedback / Suggestions

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 506,504,143,147,149,323,324 ಐ.ಪಿ.ಸಿ:-

          ದಿನಾಂಕ:12/04/2021 ರಂದು ಬೆಳಗ್ಗೆ 07-00 ಗಂಟೆಗೆ ಪಿರ್ಯಾದುದಾರರಾದ ವೆಂಕಟಲಕ್ಷ್ಮಮ್ಮ ಕೋಂ ಬೈಯ್ಯಪ್ಪ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಜಾಗ ವಿಚಾರದಲ್ಲಿ ನನ್ನ ಮಗ ವೆಂಕಟರವಣಪ್ಪ ಖಾತೆ ಹೌಸ್ ಲೀಸ್ಟ್ ನಂ 146 ರಲ್ಲಿ 75*75 ಅಡಿಗಳ ಜಾಗ ಇದ್ದು ಈ ಜಾಗ ನಮ್ಮದು ಎಂದು ಇದೇ ಗ್ರಾಮದ ವಾಸಿ ಪೆದ್ದ ನಾರಾಯಣ ಬಿನ್ ಈರಪ್ಪ ರೆಡ್ಡಿ ಎಂಬುವವರು ಕುರಿಗಳ ಬೇಲಿ ಹಾಕಿದ್ದಾರೆ ದಿನಾಂಕ:08/04/2021 ರಂದು ಈ ವಿಚಾರದಲ್ಲಿ ಇದೇ ಗ್ರಾಮದ ವಾಸಿ 1) ಪೆದ್ದ ನಾರಾಯಣ ಬಿನ್ ಈರಪ್ಪ 2) ೀರಪ್ಪರೆಡ್ಡಿ ಬಿನ್ ಪೆದ್ದ ನಾರಾಯಣಪ್ಪ 3) ನರಸಮ್ಮ ಕೋಂ ಈರಪ್ಪರೆಡ್ಡಿ 4) ಅಶೋಕ ಬಿನ್ ಈರಪ್ಪರೆಡ್ಡಿ 5) ಸೀನಾ ಬಿನ್ ಚಿನ್ನ ನಾರಾಯಣಪ್ಪ 6) ವೆಂಕಟರೆಡ್ಡಿ ಬಿನ್ ಚಿನ್ನ ನಾರಾಯಣಪ್ಪ  ಎಂಬುವವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ನಮ್ಮ ಮನೆಗೆ ಕಲ್ಲು ತೂರಾಟ ನಡೆಸಿ ನನಗೆ ಹೊಡೆದು ದೊಣ್ಣೆಗಳಿಂದ ಹಲ್ಲೆ ನಡೆಸಿ ಅಶ್ಲೀಲ ಮಾತುಗಳಿಂದ ಬೈದಿರುತ್ತಾರೆ, ನನಗೆ ತಲೆಗೆ ಕೈಗೆ ತೀವ್ರ ಪೆಟ್ಟುಬಿದ್ದು ಮೂಳೆಗೆ ಗಾಯವಾಗಿರುತ್ತದೆ, ಸದರಿಯವರು ನನಗೆ ಸಾಯಿಸುವುದಾಗಿ ಬೆದರಿಸಿರುತ್ತಾರೆ, ಈ ಸಮಯದಲ್ಲಿ ನನ್ನ ಮಗ ವೆಂಕಟರಮಣ ಇರುವುದಿಲ್ಲ, ನಿಷ್ಕಾರಣವಾಗಿ ಬೆದರಿಸಿ ಗಲಾಡೆಗೆ ಬಂದು ನಮ್ಮ ಜಾಗದಲ್ಲೇ ದೌರ್ಜನ್ಯ ನಡೆಸಿಗೂಮಡಾಗಿರಿ ಮಾಡಿರುತ್ತಾರೆ, ಆದ್ದರಿಂದ ಇವರ ಮೇಲೆ ಮುಂದಿನ ಕ್ರಮ ಜರುಗಿಸಲು ಮನವಿ, ಬಾಗೆಪಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಈ ದಿನ ಬಂದು ತಡವಾಗಿ ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾನಾ ಮೊ,ಸಂ 20/2021 ಕಲಂ 143,147,323,324,504,506,ರೆ/ವಿ 149 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 506,34,504,323,324 ಐ.ಪಿ.ಸಿ:-

          ದಿನಾಂಕ:12/04/2021 ರಂದು ಬೆಳಗ್ಗೆ 07-30 ಗಂಟೆಗೆ ಪಿರ್ಯಾದುದಾರರಾದ ಈರಪರೆಡ್ಡಿ  ಬಿನ್ ಪೆದ್ದನಾರಾಯಣಪ್ಪರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:11/04/2021 ರಂದು ಸಾಯಂಕಾಲ ಸುಮಾರು 05-30 ಗಂಟೆ ಸಮಯದಲ್ಲಿ ನಾನು ನಮ್ಮ ಕುರಿಯ ದೊಡ್ಡಿಯಲ್ಲಿ ಕಸ ಗೂಡಿಸುತ್ತಿದ್ದಾಗ ಇದೇ ನಮ್ಮ ಗ್ರಾಮದ ವಾಸಿ 1) ವೆಂಕಟರವಣಪ್ಪ ಬಿನ್ ಬೈಯ್ಯಪ್ಪ 50 ವರ್ಷ 2) ವೆಂಕಟಲಕ್ಷ್ಮಮ್ಮ ಕೋಂ ಬೈಯ್ಯಪ್ಪ 3) ಗಂಗಿರೆಡ್ಡಿ ಬಿನ್ ಬೈಯ್ಯಪ್ಪ 30 ವರ್ಷ ಎಂಬುವವರು ಗುಂಪು ಕಟ್ಟಿಕೊಂಡು ಬಂದು ನನ್ನನ್ನು ವೆಂಕಟರವಣಪ್ಪ ಎಂಬುವವರು ದೊಣ್ಣೆಯಿಂದ ಹೊಡೆದು ಊತದ ಗಾಯಗೊಳಿಸಿ ರುತ್ತಾನೆ ವೆಂಕಟಲಕ್ಷ್ಮಮ್ಮ ಮತ್ತು ಗಂಗಿರೆಡ್ಡಿ ನನ್ನನ್ನು ಅವಾಚ್ಯ ಶಬ್ದಗಳಿಮದ ಬೈದು ಕೈ ಕಾಲುಗಳಿಂದ ಹೊಡೆದಿರುತ್ತಾರೆ, ನೀನು ಇಲ್ಲಿಗೆ ಬಂದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಪ್ರಣ ಬೆದರಿಕೆ ಹಾಕಿರುತ್ತಾರೆ  ಆದ್ದರಿಂದ ಇವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ,ಸಂ 21/2021 ಕಲಂ 323,324,504,506,ರೆ/ವಿ 34 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 143,147,506,149 ಐ.ಪಿ.ಸಿ:-

          ದಿನಾಂಕ:12-04-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ.ಲಕ್ಷ್ಮೀದೇವಮ್ಮ ಕೋಂ ನರಸಿಂಹಪ್ಪ, ಗಡ್ಡಂಪಲ್ಲಿ ಗ್ರಾಮ, ರಾಶ್ಚೆರುವು  ಗ್ರಾಮ ಪಂಚಾಯ್ತಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:07-04-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ತಮ್ಮ ಗ್ರಾಮದ ವಾಸಿಗಳಾದ 1)ಆದಿನಾರಾಯಣ ಬಿನ್ ಈರಪ್ಪ 2)ಜನಾರ್ಧನ ಬಿನ್ ವೆಂಕಟರವಣಪ್ಪ 3)ಆದಿಲಕ್ಷ್ಮಮ್ಮ  ಕೋಂ ಲೇಟ್ ವೆಂಕಟರವಣ 4)ನರಸಮ್ಮ ಕೋಂ ಆದಿನಾರಯಣಪ್ಪ 5)ಸುಬ್ಬಮ್ಮ ಕೋಂ ಈರಪ್ಪ 6)ನಾಗರಾಜ ಬಿನ್ ನರಸಿಂಹಪ್ಪ 7)ಅಂಜಿ ಬಿನ್ ನರಸಿಂಹಪ್ಪ ಎಂಬುವವರು ದೌರ್ಜನ್ಯವಾಗಿ ಗುಂಪು ಕಟ್ಟಿಕೊಂಡು ಬಂದು ಮುಸ್ಲಿಗಾನಪಲ್ಲಿ ಗ್ರಾಮದ ಸ.ನಂ.54 ರಲ್ಲಿ 6-00 ಎಕರೆ ಜಮೀನನ್ನು ಉಳುಮೆ ಮಾಡಿರುವುದಾಗಿ, ಸಾಯಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿ ಅನ್ಯಾಯ ಮಾಡಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

4. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008 :-

          ದಿನಾಂಕ:12/4/2020 ರಂದು ಪಿರ್ಯಾಧಿ ಶ್ರೀ,ರಾಮಾನುಜಂ, ಹೆಚ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ .ತನಗೆ  ದಿನಾಂಕ:03/04/2020 ರಂದು ನಮ್ಮ ವಿಳಾಸಕ್ಕೆ ಅಂಚೆಯ ಮೂಲಕ SPEED POST ಒಂದು NAAPTOL  ಕಂಪನಿಯ ಹೆಸರಿನಲ್ಲಿ ಒಂದು ಕೂಪನ್ & ಒಂದು ಲೆಟರ್ ಬಂದಿದ್ದು,ಆ ಕೂಪನ್ ಮೇಲೆ (SCRARCH CARD) ಎಂದು ಇತ್ತು ನಂತರ ನಾನು ಅದನ್ನು ಕ್ರ್ಯಾಚ್ ಮಾಡಲಾಗಿ ಅದರ   KIA-SELTUS CAR FIRST PRIZE ಬಂದಿದೆ ಎಂದು ಇತ್ತು, ನಂತರಲ್ಲಿ ಇದ್ದ ಹೆಲ್ಪಲೈನ್ ನಂಬರ್ ಗೆ ಕರೆ ಮಾಡಿದಾಗ ನಿಮಗೆ    KIA-SELTUS CAR FIRST PRIZE NAPTOOL ಸಂಸ್ಥೆಯಿಂದ ಬಂದಿದೆ. CAR VALUE 14,80000/- ರೂಗಳು. ಅದಕ್ಕೆ ಸೆಕ್ಯೋರಿಟಿ ಡಿಪಾಸಿಟ್ 1% ಕಟ್ಟಬೇಕು ಅಂತ ತಿಳಿಸಿದರು.  ನಂತರ ನಾನು ಲೆಕ್ಕೆ ಹಾಕಿ 14,800/- ರೂಗಳ  ಕಟ್ಟಿ ಅಂದರು, ನಾನು ತನ್ನ ಎಸ್ ಬಿ ಐ ಅಕೌಂಟ್ ನಂ:64139076771 ಖಾತೆಯಿಂದ  ಅವರು ನೀಡಿದ್ದ  ಅಕೌಂಟ್ ನಂ:40062558374 ಮೀಷ್ಟರ್ ಲಿಷಾನ್ ರಾಯ್ ರವರ ಖಾತೆಗೆ 1% ನಂತೆ 14,800/- ರೂಗಳನ್ನು  ಡಿಪಾಸಿಟ್ ಮಾಡಿದೆ.ನಂತರ ನಿಮ್ಮ 14,80,000/- ರೂಗಳನ್ನು  ON CHECK DEPOSIT  ಮಾಡಿದ್ದೇವೆ. ಇನ್ನು ಸದರಿ ಮೊತ್ತಕ್ಕೆ 2% ಸೆಂಟ್ರಲ್ ಟ್ಯಾಕ್ಸ್ ಕಟ್ಟುವಂತೆ ತಿಳಿಸಿದ. ನಂತರ ನಾನು 29,600/- ರೂಗಳನ್ನು ಮೇಲ್ಕಂಡ  ಅವರ ಖಾತೆಗೆ ನನ್ನ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ.ನಂತರ ಪುನಃ ಅವರು ಮೊ ಸಂಖ್ಯೆ: 8001428096,8017952094  ಸಂಖ್ಯೆಗಳಿಂದ ಕರೆ ಮಾಡಿ CGST 51,200/- ರೂಗಳನ್ನು ಕಟ್ಟುವಂತೆ ತಿಳಿಸಿದ ಆಗ ತನಗೆ ಅನುಮಾನ ಬಂದು ನನ್ನ ಸ್ನೇಹಿತರನ್ನು ವಿಚಾರಿಸಿದಾಗ ಯಾರೋ ನಿನಗೆ ಪ್ರಾಡ್ ಮಾಡುತ್ತಿದ್ದಾರೆ ಎಂತ ತಿಳಿಸಿದರು. ಆದ ಕಾರಣ ನನಗೆ ಲಾಟರಿ ಹೊಡೆದಿದೆ ಅಂತ SPEED POST ನಲ್ಲಿ ಕೂಪನ್ ಕಳುಹಿಸಿ ನನ್ನಿಂದ ಒಟ್ಟು 44,400/ ರೂಗಳನ್ನು  ಮೇಲ್ಕಂಡ ಎಸ್ ಬಿ ಐ ಖಾತೆಗೆ ಜಮೆ ಮಾಡಿಸಿಕೊಂಡು, ನನಗೆ ಲಾಟರಿ ಹಣವನ್ನು ನೀಡದೆ ಹಾಗೂ ನನ್ನ ಹಣವನ್ನು ವಾಪಸ್ಸು ನೀಡದೆ ಮೋಸ ಮಾಡಿರುತ್ತಾನೆ. ಸದರಿ NAAPTOL ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.56/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:11.04.2021 ರಂದು ಮದ್ಯಾಹ್ನ 3-10 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:11.04.2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಠಾ ಸರಹದ್ದಿಗೆ ಸೇರಿದ ಮಂಚನಬಲೆ ಗ್ರಾಮದ ವಾಸಿ ನರಸಿಂಹಪ್ಪ @ ಅಚ್ಚಪ್ಪ ಬಿನ್ ಲೇಟ್ ಮದ್ದಪ್ಪ 55 ವರ್ಷ ಆದಿ ಕರ್ನಾಟಕ ಜನಾಂಗ, ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:11.04.2021 ರಂದು ಸಂಜೆ 6-15 ಗಂಟೆಗೆ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ. (ಕಾಸು) ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:11.04.2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಠಾ ಸರಹದ್ದಿಗೆ ಸೇರಿದ ಆನೆಮೊಡಗು ಕೊತ್ತೂರು ಗ್ರಾಮದ ವಾಸಿ  ಶ್ರೀನಿವಾಸ  ಬಿನ್ ಲೇಟ್  ನರಸಿಂಹಪ್ಪ 28 ವರ್ಷ, ಆದಿ ಕರ್ನಾಟಕ  ಜನಾಂಗ ಜಿರಾಯ್ತಿ ಕೆಲಸ ರವರು ತಮ್ಮ ಮನೆಯ ಬಳಿ ಸಾರ್ವಜನಿಕರಿಗೆ  ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15(ಎ) , 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.149/2021 ಕಲಂ. 15(A)  ಕೆ.ಇ ಆಕ್ಟ್:-

          ದಿನಾಂಕ: 11/04/2021 ರಂದು ಸಂಜೆ 7.30 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಸುಬ್ರಮಣಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:11/04/2021 ರಂದು ಪಿ.ಎಸ್.ಐ ಎಸ್.ನರೇಶ್ ನಾಯ್ಕ್ ರವರು ಎ.ಎಸ್.ಐ ವಿ.ಸುಬ್ರಮಣಿ ಆದ ತನಗೆ ಮತ್ತು ಸಿ.ಪಿ.ಸಿ-430 ನರಸಿಂಹಯ್ಯ ರವರಿಗೆ ಗ್ರಾಮಗಳ ಗಸ್ತಿಗೆ ನೇಮಿಸಿದ್ದು, ಅದರಂತೆ ತಾವು ಠಾಣಾ ಸರಹದ್ದಿನ ಕುರುಟಹಳ್ಳಿ, ಕಾಚಹಳ್ಳಿ, ಬಿಡಗಾನಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಕುರುಬೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಕುರುಬೂರು ಫಾರಂ ಬಳಿ ಸಂಜೀವಪ್ಪ ಬಿನ್ ಮುನಿವೆಂಕಟಪ್ಪ ಎಂಬುವವರು ತನ್ನ ಪೆಟ್ಟಿಗೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಪೆಟ್ಟಿಗೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಸಂಜೀವಪ್ಪ ಬಿನ್ ಮುನಿವೆಂಕಟಪ್ಪ ರವರ ಪೆಟ್ಟಿಗೆ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಅಂಗಡಿಯ ಬಳಿ ಇದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯಲ್ಲಿ ನೋಡಲಾಗಿ 1).ಕಿಂಗ್ ಪಿಶರ್ ಸ್ಟ್ರಾಂಗ್ ಪ್ರೀಮಿಯಮ್ ಕಂಪನಿಯ 650 ಎಂ.ಎಲ್ ನ ಮದ್ಯ ತುಂಬಿರುವ 4 ಬೀರ್ ಬಾಟಲ್ ಗಳು, 2).ಟುಬರ್ಗ್ ಪ್ರೀಮಿಯಮ್ ಕಂಪನಿಯ 650 ಎಂ.ಎಲ್ ಮದ್ಯ ತುಂಬಿರುವ 2 ಬೀರ್ ಬಾಟಲ್ ಗಳಿದ್ದು, ಅಂಗಡಿಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 1).ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ 2 ಖಾಲಿ ಟೆಟ್ರಾ ಪಾಕೆಟ್ ಗಳು 2).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3).ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಟೆಟ್ರಾ ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಆವುಗಳಲ್ಲಿ ಸ್ವಲ್ವ ಮದ್ಯವಿರುತ್ತೆ. ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಸಂಜೀವಪ್ಪ ಬಿನ್ ಮುನಿವೆಂಕಟಪ್ಪ 37 ವರ್ಷ, ನಾಯಕರು, ಪೆಟ್ಟಿಗೆ ಅಂಗಡಿ ವ್ಯಾಪಾರ, ತೆರ್ನಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ಎಂದು ತಿಳಿದು ಬಂದಿದ್ದು, ಒಟ್ಟು ಮದ್ಯವು 3 ಲೀಟರ್ 900 ಮಿಲಿ ಇದ್ದು, ಅವುಗಳ ಓಟ್ಟು ಮೌಲ್ಯ 890/- ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6.00 ಗಂಟೆಯಿಂದ 6.45 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಪೆಟ್ಟಿಗೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸಂಜೀವಪ್ಪ ಬಿನ್ ಮುನಿವೆಂಕಟಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.150/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ: 12/04/2021 ರಂದು ಬೆಳಿಗ್ಗೆ 10.15 ಗಂಟೆಗೆ ವಿ.ಆರ್. ಪುರುಷೋತ್ತಮ್ ಬಿನ್ ಲೇಟ್ ರಾಮಚಂದ್ರಪ್ಪ, 22 ವರ್ಷ, ಬೆಸ್ತರು, ಕೆ.ಇ.ಬಿ ಯಲ್ಲಿ ಲೈನ್ ಮ್ಯಾನ್ ಕೆಲಸ, ವೆಲಗಲಬುರ್ರೆ, ಕೋಲಾರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ದೊಡ್ಡಮ್ಮ ನಾಗವೇಣಮ್ಮರವರನ್ನು ಕೊಡಿಚೆರವು ಗ್ರಾಮದ ಕೃಷ್ಣಪ್ಪರವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರಿಗೆ 5 ಜನ ಹೆಣ್ಣು ಮಕ್ಕಳಿದ್ದು 1ನೇ ಅಮರಾವತಿ, 2ನೇ ಅರುಣಾ 3ನೇ ಅನಿತ 4ನೇ ಅಶ್ವಿನಿ, 5ನೇ ಮಮತ ರವರಾಗಿರುತ್ತಾರೆ. ಮೇಲ್ಕಂಡ 5 ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿರುತ್ತದೆ. ಈ ಪೈಕಿ 4ನೇ ರವರಾದ ಅಶ್ವಿನಿಯನ್ನು ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಬಳಿ ಇರುವ ಬೆಸ್ತಪಲ್ಲಿ ಗ್ರಾಮದ ಸುಬ್ರಮಣಿರವರಿಗೆ ಕೊಟ್ಟು  ಮದುವೆ ಮಾಡಿದ್ದೆವು. ಇವರಿಗೆ 5 ವರ್ಷದ ಲಕ್ಷ್ಮೀ, 3 ವರ್ಷದ ಮೌನಿಷ್ ಎಂಬ ಇಬ್ಬರು ಮಕ್ಕಳಿರುತ್ತಾರೆ. ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ ಕುಟುಂಬ ಸಮೇತ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿಯಲ್ಲಿರುವ ಅನುಗ್ರಹ ಇಂಡಸ್ರ್ಟೀಸ್ ಕಾರ್ಖಾನೆಯಲ್ಲಿ ಸುಬ್ರಮಣಿ ಕೆಲಸ ಮಾಡಿಕೊಂಡು ಅದೇ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಈಗಿರುವಲ್ಲಿ ದಿನಾಂಕ:11/04/2021 ರಂದು ಸಂಜೆ ಸುಮಾರು 6.00 ಗಂಟೆಯಲ್ಲಿ ತಮ್ಮ ದೊಡ್ಡಮ್ಮನ ಮಗಳಾದ ಅಶ್ವಿನಿರವರ ಗಂಡ ಸುಬ್ರಮಣಿ ರವರು ಪೋನ್ ಮಾಡಿ ಅಶ್ವಿನಿ ಈ ದಿನ ಸಂಜೆ  5.00 ಗಂಟೆಯಲ್ಲಿ ಕಡಪ-ಬೆಂಗಳೂರು ರಸ್ತೆಯ ಕುರುಟಹಳ್ಳಿ-ಮಾಡಿಕೆರೆ ಮಾರ್ಗ ಮದ್ಯೆ ಇರುವ ಪೆಟ್ರೋಲ್ ಬಂಕ್ ನಲ್ಲಿ ದ್ವಿಚಕ್ರ ವಾಹನ ನಂ ಕೆಎ-70-ಇ-1454 ಹೊಂಡಾ ಡಿಯೋ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋಗಿ ಪೆಟ್ರೋಲ್ ಹಾಕಿಸಿಕೊಂಡು ವಾಪಸ್ಸು ಬರುತ್ತಿದ್ದಾಗ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯಲ್ಲಿ ಆಯತಪ್ಪಿ ಟಾರ್ ರಸ್ತೆಯ ಮೇಲೆ ಬಿದ್ದು, ಎಡಕೈ ಮತ್ತು ಎದೆಗೆ ಗಾಯಗೊಂಡಿದ್ದು, ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಂತರ ಅದೇ ದಿನ ರಾತ್ರಿ 10.30 ಗಂಟೆಗೆ ಮತ್ತೆ ತನ್ನ ಭಾವ ಸುಬ್ರಮಣಿ ರವರು ಪೋನ್ ಮಾಡಿ ನಿಮ್ಮ ಅಕ್ಕ ಚಿಕಿತ್ಸೆ ಪಲಕಾರಿಯಾಗದೇ ರಾತ್ರಿ 10.20 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ನೀನು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಬರಲು ತಿಳಿಸಿದರು. ತನ್ನ ಅಕ್ಕ ಅಶ್ವಿನಿಯವರಿಗೆ ಸರಿಯಾಗಿ ಚಾಲನೆ ಮಾಡಲು ಬಾರದೆ ಇದ್ದುದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಆಯಾತಪ್ಪಿ ತನ್ನಷ್ಟಕ್ಕೆ ತಾನೇ ರಸ್ತೆಯ ಮೇಲೆ ವಾಹನ ಸಮೇತ ಬಿದ್ದು ಮೇಲ್ಕಂಡಂತೆ ರಕ್ತಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ತಾವುಗಳು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 506,504,323,324 ಐ.ಪಿ.ಸಿ:-

          ದಿನಾಂಕ;12/042021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಪಿರ್ಯಾದಿದಾರರಾದ ನರಸಿಂಹಮೂರ್ತಿ ಬಿನ್ ನರಸಿಂಹಯ್ಯ ,ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ತಾಲ್ಲೂಕು ಪಂಚಾಯ್ತ್ ಗೌರಿಬಿದನೂರು ಕಾರ್ಯಾಲಯದಲ್ಲಿ ನರೇಗಾ ಯೋಜನೆ ತಾಂತ್ರಿಕ ಸಂಯೋಜಕರಾಗಿ  ಒಂದು ವಷ೵ ದಿಂದ ಕರ್ತವ್ಯ ನಿರ್ವಹಿಸುತ್ತಿರುವ ಈ ದಿನ  ದಿನಾಂಕ;12/04/2021 ರ ಮದ್ಯಾಹ್ನ ಸುಮಾರು  12-00 ಗಂಟೆಗೆ ಸರಿಯಾಗಿ ಮಂಜುನಾಥರೆಡ್ಡಿ ,ಜಿ ಕೊತ್ತೂರು ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಕಚೇರಿಗೆ ಬಂದು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನಗೆ  ಜಾಬ್  ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಒತ್ತಡ ಹಾಕಿ ಸದರಿ ವಿಷಯವು ಗ್ರಾಮ ಪಂಚಾಯ್ತಿಗೆ ಸಂಬಂದಿಸಿರುವುದಾಗಿರುವದರಿಂದ ಅಲ್ಲಿ ವಿಚಾರಿಸಲು ತಿಳಿಸುತ್ತಿರುವಾಗ ಏಕಾ ಏಕಿ ಅಚಾಚ್ಯ ಶಬ್ದಗಳಿಂದ ಬೈದು ಪಕ್ಕದಲ್ಲೇ ಇದ್ದು ಕಟ್ಟಿಗೆ ಯಿಂದ ಎಡ ತೊಡೆಗೆ ಹೊಡೆದು ,.ಕೈಗಳಿಂದ ಗುದ್ದಿ ತನ್ನನ್ನು ಜೀವ ಸಮೇತ ಉಳಿಸುವುದಿಲ್ಲಾ ವೆಂದು ಪ್ರಾಣ ಬೆದರಿಕೆ ಹಾಕಿ ಕಛೇರಿಯಲ್ಲಿದ್ದ ಪಿರೋಪಕರಣಗಳನ್ನು ಕೆಡವಿ ಕೂಗಡಿ ಜಗಳ ಮಾಡುತ್ತಿದ್ದಾ ಅಲ್ಲಿಯೇ ಇದ್ದ ಕಚೇರಿ  ಜವಾನ ನರಸಿಂಹಮೂರ್ತಿ ಜಗಳ ಬಿಡಿಸಿದ ತನ್ನ ಮೇಲೆ ಹಲ್ಲೆ ವಿನಾ ಕಾರಣ ಜಗಳ ತೆಗೆದ  ಸದರಿ ಆಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10 ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 420 ಐ.ಪಿ.ಸಿ:-

          ದಿನಾಂಕ 11/04/2021 ರಂದು ಸಂಜೆ 7-00 ಗಂಟೆಗೆ ಪಿರ್ಯಾಧಿ ಶ್ರೀ ಚಂದ್ರಶೇಖರ್ ಎ.ಎಸ್.ಐ. ಗುಡಿಬಂಡೆ ಠಾಣೆ ರವರು ಠಾಣೆಗೆ ಹಾಜರಾಗಿ ಆರೋಪಿತರು ಮತ್ತು ಮಾಲಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ,  ನಾನು ಈಗ್ಗೆ ಸುಮಾರು ಒಂದು ವರ್ಷದಿಂದ ಠಾಣಾಧಿಕಾರಿಗಳ ಆದೇಶದಂತೆ ಪೆರೆಸಂದ್ರ ಪೊಲೀಸ್ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಈ ದಿನ ದಿನಾಂಕ 11/04/2021 ರಂದು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ ತಾನು ಮತ್ತು ಪಿಸಿ 272 ಶ್ರೀನಿವಾಸ ರವರು ಪೆರೆಸಂದ್ರ ಕ್ರಾಸ್ ನ ಮುತ್ತಕದಹಳ್ಳಿ ಗೇಟ್ ಬಳಿ ಗಸ್ತು ಮಾಡುತ್ತಿದ್ದಾಗ ಅಲ್ಲಿ 3 ದ್ವಿಚಕ್ರವಾಹನಗಲ್ಲಿ ಒಟ್ಟು 8 ಜನರು  ಆಸಾಮಿಗಳು ನಿಂತಿದ್ದು, ಅವರ ಹತ್ತಿರ ಹೋದಾಗ ನಮ್ಮನ್ನು ನೋಡಿ 2 ದ್ವಿಚಕ್ರವಾಹನಗಳಲ್ಲಿ 6 ಜನ ಓಡಿ ಹೋಗಿದ್ದು, ಕೆಎ17-ಇಡಿ-5080 ರ ದ್ವಿಚಕ್ರವಾಹನದಲ್ಲಿದ್ದ ಇಬ್ಬರನ್ನು ಗಟ್ಟಿಯಾಗಿ ಹಿಡಿದುಕೊಂಡು  ವಿಚಾರಿಸಿದಾಗ ಸದರಿ ಆಸಾಮಿಗಳು ನಕಲಿ ಚಿನ್ನವನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಹಾಗೂ ಮಾಲು ಎಲ್ಲಿ ಎಂದು ಕೇಳಿದಾಗ ಪೆಟ್ರೋಲ್ ಬಂಕ್ ಬಳಿ ಕಾರಿನಲ್ಲಿರುವುದಾಗಿ ತಿಳಿಸಿದರು.  ಇವರುಗಳು ಹೆಸರು ಮತ್ತು ವಿಳಾಸ ಕೇಳಲಾಗಿ 1) ವಿಶ್ವನಾಥ ಬಿನ್ ವೆಂಕಟೇಶ, 23 ವರ್ಷ, ಹಕ್ಕಿಪಿಕ್ಕಿ ಜನಾಂಗ, ಹೂವಿನ ವ್ಯಾಪಾರ ಬಾಲೇಗೌಡನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು, 2) ವಿಷ್ಣು ಬಿನ್ ಮೋಹನ್ ರಾಜ್, 20 ವರ್ಷ, ಹಕ್ಕಿಪಿಕ್ಕಿ ಜನಾಂಗ, ಹೂವಿನ ವ್ಯಾಪಾರ ಬಾಲೇಗೌಡನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿ ಓಡಿ ಹೋದವರ ಹೆಸರು ವಿಳಾಸ ತಿಳಿಯಲಾಗಿ 1) ವಿಜಯ್ ಬಿನ್ ಶಾಗಿರಾಂ 26 ವರ್ಷ, ಹಕ್ಕಿಪಿಕ್ಕಿ ಜನಾಂಗ, ಪ್ಲಾಸ್ಟಿಕ್ ಹೂವಿನ ವ್ಯಾಪಾರ ಬಾಲೇಗೌಡನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು 2) ರವಿ ಬಿನ್ ದಿಲ್ವಾರ್, 35 ವರ್ಷ, ಹಕ್ಕಿಪಿಕ್ಕಿ ಜನಾಂಗ, ಜಿರಾಯ್ತಿ, ಕಾಶಾಪುರ ಗ್ರಾಮ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ. 3) ಅಶೋಕ@ಏಷಪ್ಪ ರಾಯಚೂಟಿ ಕಡಪ ಜಿಲ್ಲ, 4) ಆಂಜಿನಪ್ಪ ಬಿನ್ ಬಾಬುಜಾನ್ 25 ವರ್ಷ, ಹಕ್ಕಿಪಿಕ್ಕಿ ಜನಾಂಗ, ಹೂವಿನ ವ್ಯಾಪಾರ ಬಾಲೇಗೌಡನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು 5) ಜಯಚಂದ್ರ @ಬಾಬು ಬಿನ್ ಜಯರಾಜ್ , 30 ವರ್ಷ ಹಕ್ಕಿಪಿಕ್ಕಿ ಜನಾಂಗ, ಹೂವಿನ ವ್ಯಾಪಾರ ಹಕ್ಕಿಪಿಕ್ಕಿ ಕಾಲೋನಿ ಬಾಲೇಗೌಡನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು 6) ಶಿವಯ್ಯ ಬಿನ್ ಪೇಜಟ್, 24 ವರ್ಷ,ಹಕ್ಕಿಪಿಕ್ಕಿ ಜನಾಂಗ, ಕಾಶಾಪುರ ಗ್ರಾಮ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.  ಎಂತ ತಿಳಿಸಿದರು ಅದರಂತೆ ನಾವುಗಳು ಪೆಟ್ರೋಲ್ ಬಂಕ್ ಬಳಿ ನಿಂತಿದ ಟಿಎಸ್03-ಇಎಸ್ 6294 ರ ಟಾಟಾ ಜೆಸ್ಟ್ ಕಾರಿನ ಹತ್ತಿರ ಹೋಗಿ ನೋಡಲಾಗಿ ಅದರಲ್ಲಿ ನಾಲ್ಕು ಜನರು ಇದ್ದು ಅವರನ್ನು ಹಿಡಿದು ಕೊಂಡು ಸದರಿ ಕಾರನ್ನು ಪರಿಶೀಲಿಸಲಾಗಿ ಕಾರಿನ ಡ್ಯಾಶ್ ಬೋಡ್ರ್  ಬಾಕ್ಸ್ ನಲ್ಲಿ ಬಂಗಾರ ತರಹ ಕಾಣುವ ಮಣಿಗಳ ಸರ ಮತ್ತು 3 ಬಂಗಾರ ತರಹ ಕಾಣುವ 3 ಮಣಿಗಳಿದ್ದವು. ಹಾಗೂ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ರಾಮ್ ಬಾಬು ಬಿನ್ ಲೇಟ್ ಬ್ರಹ್ಮಚಾರಿ 36 ವರ್ಷ, ಕಮ್ಮರಿ ಜನಾಂಗ, ರಿಯಲ್ ಎಸ್ಟೇಟ್ #2-33, ಕಮ್ಮರಿವಾಡ ಬೀದಿ, ದುಗ್ಗೊಂಡಿ ಗ್ರಾಮ ನರಸಮ್ಮಪೇಟೆ ತಾಲ್ಲೂಕು ವರಂಗಲ ಜಿಲ್ಲೆ ತೆಲಂಗಾಣ ರಾಜ್ಯ ಪೋನ್ ನಂ 963023125. ಗುಗುಲೋತ್ ಹತಿರಾಮ್ ಬಿನ್ ಶಂಕರ್ 30ವರ್ಷ,  ಲಂಬಾಣಿ ಜನಾಂಗ, ಚಾಲಕ ವೃತ್ತಿ ಸಿ-13 ತಾಟಿವಾರಿವೆಂಪಲ್ಲಿ ಗ್ರಾಮ, ಕೋತಗುಡ್ಡ ಮಂಡಲಂ ಬಾತುಲಪಲ್ಲೆ ಪೋಸ್ಟ್ ವಾರಂಗಲ್ ಜಿಲ್ಲೆ ತೆಲಂಗಣ ರಾಜ್ಯ, 3) ಕರ್ನಕಂಟೆ ಈಶ್ವರ ಬಿನ್ ಬ್ರಹ್ಮಚಾರಿ 34 ವರ್ಷ, ಆಚಾರಿ ಜನಾಂಗ, ಖಾಸಗೀ ಕಂಪನಿಯಲ್ಲಿ ಕೆಲಸ #13-9-1/3/39 ರಾಧಕೃಷ್ಣನಗರ ಎಸ್.ಟಿ.ಐ.ಎಸ್.ಎಸ್.ಎ.ಸಿ. ಅದೆವತ್ ಫ್ರೌಢಶಾಲೆ ಹತ್ತಿರ ಬೋರಬಂಡ ರಂಗರೆಡ್ಡಿ ಜಿಲ್ಲೆ ಆಂದ್ರ ಪ್ರದೇಶ. 4) ಮೂಲ ಪ್ರದೀಪ ಬಿನ್ ರಾಮ್ ಬಾಬು 27 ವರ್ಷ, ಗೌಡ ಜನಾಂಗ, ಚಾಲಕ ವೃತ್ತಿ ವರಂಗಲ್ ಜಿಲ್ಲೆ ಎಂತ ತಿಳಿಸಿದರು. ನಾವು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಅಸಲಿ ಬಂಗಾರದ ಮಣಿಗಳನ್ನು ತೋರಿಸಿ ಕಡಿಮೆ ರೇಟ್ ಗೆ ಬಂಗಾರದ ಮಣಿಗಳನ್ನು ಕೊಡುತ್ತೇವೆಂದು ಹೇಳಿ ಅವರುಗಳಿಗೆ ನಕಲಿ ಮಣಿಗಳನ್ನು ಕೊಟ್ಟು ಹಣವನ್ನು ಪಡೆದುಕೊಳ್ಳಲು ಬಂದಿರುವುದಾಗಿ ಎಂತ ತಿಳಿಸಿದರು. ಇವರುಗಳು ಸಾರ್ವಜನಿಕರಿಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ 3 ಬಂಗಾರದ ಮಣಿಗಳನ್ನು ತೋರಿಸಿ ಹಣವನ್ನು ಪಡೆದುಕೊಂಡು ನಕಲಿ ಬಂಗಾರದ ಮಣಿಗಳನ್ನು ಕೊಡಲು ಬಂದಿರುವರಾಗಿರುತ್ತಾರೆ. ಆದ್ದರಿಂದ ಸದರಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 323,324,504,149 ಐ.ಪಿ.ಸಿ:-

          ದಿನಾಂಕ:11/2021 ರಂದು ಸಂಜೆ 7-30 ಗಂಟೆಯ ಸಮಯದಲ್ಲಿ ಹೆಚ್,ಸಿ-29 ನಾಗೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಂಗರಾಜು ಬಿನ್ ಕೂರ್ಲಪ್ಪ ರವರು ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ:10/04/2021 ರಂದು ತಾನು ಬೆಳಿಗ್ಗೆ 8-30 ಗಂಟೆಗೆ ಸೌತೇಕಾಯಿಯನ್ನು ಕೀಳಲು ನಮ್ಮ ಹೊಲದ ಹತ್ತಿರ ಹೋಗಿ ನಂತರ ಮದ್ಯಾಹ್ನ 12-00ಗಂಟೆಗೆ ಪೆರೇಸಂದ್ರ ಗ್ರಾಮಕ್ಕೆ ಹೋಗಿ ಪುನಃ ಮದ್ಯಾಹ್ನ 3-30 ಗಂಟೆಗೆ ತಮ್ಮ ಹೊಲದ ಹತ್ತಿರ ಹೋಗಿ ಸೌತೇಕಾಯಿ ಕೀಳುತ್ತಿದ್ದಾಗ ಸಂಜೆ ಸುಮಾರು 8-00 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯಾದ ಬೈರಪ್ಪ ಬಿನ್ ಅಚ್ಚಪ್ಪ ರವರು ತನಗೆ ಪೋನ್ ಮಾಡಿ ತಿಮ್ಮ ಅಕ್ಕ ಮಂಜುಳಮ್ಮ ರವರಿಗೆ ನಿಮ್ಮ ಭಾವ ಹರೀಶರವರು ಗಲಾಟೆ ಮಾಡಿ ಹೊಡೆಯುತ್ತಿದ್ದಾರೆಂದು  ಹೇಳಿದರು ನಂತರ ತಾನು ತಮ್ಮ ತಂದೆ-ಕೂರ್ಲಪ್ಪ ಮತ್ತು ತಾಯಿ-ವೆಂಕಟಮ್ಮ ರವರು ಮನೆಯ ಹತ್ತಿರ ಹೋಗಿ ನೋಡಿದಾಗ ಹೊಡೆದಾಡುತ್ತಿದ್ದರು. ನಾವು ಯಾಕೇ ಈ ರೀತಿಯಾಗಿ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ತಮ್ಮ ಮಾವ ಹನುಮಪ್ಪ ರವರು ತನ್ನ ಕೆನ್ನೆಗೆ  ಕೈಯಿಂದ ಹೊಡೆದರು. ನಂತರ ತಮ್ಮ ತಂದೆ-ಕೂರ್ಲಪ್ಪ, ತಾಯಿ-ವೆಂಕಟಮ್ಮ ರವರು ಯಾಕೇ ಅವನಿಗೆ ಹೊಡೆಯುತ್ತಿದ್ದೀಯಾ ಎಂದು  ಕೇಳಿದಾಗ ತಮ್ಮ ಮಾವ-ಹನುಮಪ್ಪ,ಅತ್ತೆ-ರಾಮಲಕ್ಷ್ಮಮ್ಮ,ಮತ್ತು ವೆಂಕಟೇಶಪ್ಪ ಬಿನ್ ಬಡಿಗಪ್ಪ,ಹಾಗು ಹಿರೇನಾಗವಲ್ಲಿ ಗ್ರಾಮದ ಗಿರೀಶರವರು ದೊಣ್ಣೆಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಂದು ತನಗೆ ಬೆನ್ನಿಗೆ, ಸೊಂಟಕ್ಕೆ, ಬಲ ತೊಡೆಗೆ ಹೊಡೆದರು. ತಮ್ಮ ತಂದೆಯವರಾದ ಕೂರ್ಲಪ್ಪ ರವರಿಗೆ ಬೆನ್ನಿಗೆ ಹಾಗೂ ಸೊಂಟಕ್ಕೆ ದೊಣ್ಣೆಯಿಂದ ಹೊಡೆದರು.ಅಡ್ಡ ಬಂದ ತಮ್ಮ ತಾಯಿ-ವೆಂಕಟಮ್ಮ ರವರಿಗೆ ಬಲ ಕೆನ್ನೆಗೆ, ಎಡ ಕಿವಿಗೆ, ಬಲ ಮೊಣಕಾಲಿಗೆ ದೊಣ್ಣೆಯಿಂದ ಹೊಡೆದು ಮೂಗೇಟು ಉಂಟು ಮಾಡಿದರು.ನಂತರ ಸಾರ್ವಜನಿಕರು 108 ಅಂಬುಲೇನ್ಸ್ ನಲ್ಲಿ ಗಾಯಗೊಂಡಿದ್ದ ತಮ್ಮಗಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ತಮಗೆ ದೊಣ್ಣೆಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುವ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:12/04/2021 ರಂದು ಮದ್ಯಾಹ್ನ 12-05 ಗಂಟೆಯಲ್ಲಿ ಪಿರ್ಯಾದಿ ವಿ ಬಾಬು ಬಿನ್ ಕೆ ವೆಂಕಟರಮಣಪ್ಪ 43 ವರ್ಷ, ವ್ಯಾಪಾರ, ಭೋವಿ ಜನಾಂಗ,  ವಾಸ: ನಂ 53, 11 ನೆ ಕ್ರಾಸ್ ಬಾಲಾಜಿನಗರ ಮಲತ್ತ್ ಹಳ್ಳಿ ವಿಶ್ವೇಶ್ವರಯ್ಯ ಲೇ ಔಟ್ ಬೆಂಗಳೂರು-56 ಮೊ:8762344499 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿ ರವರಿಗೆ 1 ನೇ ತಾನು 2 ನೇ ಸುರೇಶ್ ಎಂಬ ಮಕ್ಕಳಿದ್ದು ತಾವುಗಳು ಬೆಂಗಳೂರಿನಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದು ಈಗಿರುವಾಗ ಸುಮಾರು 6 ತಿಂಗಳ ಹಿಂದೆ ತನ್ನ ತಮ್ಮ ಸುರೇಶ್ ರವರು ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಕ್ರಾಸ್ ಬಳಿ  ವ್ಯವಸಾಯ ಮಾಡಲು 09 ಎಕರೆ ಜಮೀನು ತೆಗದುಕೊಂಡಿದ್ದು ತಮ್ಮ ತಂದೆ ವೆಂಕಟರಮಣಪ್ಪ ರವರು ದಪ್ಪರ್ತಿ ಕ್ರಾಸ್ ಬಳಿ ಇರುವ ಜಮೀನಿನಲ್ಲಿ ಮನೆಯನ್ನು ಕಟ್ಟಲು ಅಲ್ಲಿಯೇ ಒಬ್ಬರೇ ಶೆಡ್ ಕಟ್ಟಿಕೊಂಡು ವಾಸವಾಗಿದ್ದುಕೊಂಡು ಕೂಲಿ ಕಾಮರ್ಿಕರಿಂದ ಮನೆಯನ್ನು ಕಟ್ಟಿಸುತ್ತಿದ್ದು. ದಿನಾಂಕ:09/04/2021 ರಂದು ಸಂಜೆ 7-30 ಗಂಟೆ ಸಮಯದಲ್ಲಿ ತಮ್ಮ ಮನೆಯನ್ನು ಕಟ್ಟುತ್ತಿದ್ದ ಬೀಚಗಾನಹಳ್ಳಿ ಗ್ರಾಮದ ಗಾರೆ ಮೇಸ್ತ್ರಿ ಆವುಲ ಮೂರ್ತಿ ಬಿನ್ ವೆಂಕಟಸ್ವಾಮಿ ರವರು ತನಗೆ ಕರೆ ಮಾಡಿ ತಿಳಿಸಿದ್ದೇನೆಂದರೆ, ದಿನಾಂಕ:09/04/2021 ರಂದು ಸಂಜೆ ತಮ್ಮ ತಂದೆ ವೆಂಕಟರಮಣಪ್ಪ ರವರು ತಮ್ಮ ಬಾಬತ್ತು ಕೆ,ಎ-41 ಇ,ಜಿ-8146 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ವಿಚಕ್ರವಾಹನದಲ್ಲಿ ಊಟ ಮಾಡಲು ಬೀಚಗಾನಹಳ್ಳಿ ಕ್ರಾಸ್ ಗೆ ಹೋಗಲು ಹೋಗುತ್ತಿರುವಾಗ ತಾನು ಕೆಲಸದ ನಿಮ್ಮಿತ್ತ ಬೀಚಗಾನಹಳ್ಳಿ ಕ್ರಾಸ್ ಗೆ ಹೋಗಲು ತಮ್ಮ ತಂದೆಯವರ ಹಿಂದೆ ಆವುಲ ಮೂರ್ತಿ ರವರು ಅವರ ದ್ವಿ ಚಕ್ರವಾಹನದಲ್ಲಿ ಸ್ವಲ್ಪ ಹಿಂದೆ ದೂರದಲ್ಲಿ ಹೋಗುತ್ತಿರುವಾಗ ಸಂಜೆ ಸುಮಾರು 7-15 ಗಂಟೆ ಸಮಯದಲ್ಲಿ ಬೀಚಗಾನಹಳ್ಳಿ ಗ್ರಾಮದಿಂದ ಬೀಚಗಾನಹಳ್ಳಿ ಕ್ರಾಸ್ ಗೆ ಹೋಗುವ ರಸ್ತೆಯ ರಾಮಗಾನಹಳ್ಳಿ ಕ್ರಾಸ್ ನಲ್ಲಿ ಮುಂದೆ ಹೋಗುತ್ತಿದ್ದ ರಾಮಗಾನಹಳ್ಳಿ ಗ್ರಾಮದ ಆನಂದ ರವರು ತಮ್ಮ ಕೆ,ಎ-40 ಎಸ್-8645 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ದ್ವಿಚಕ್ರವಾಹನವನ್ನು ಯಾವುದೇ ಮುನ್ಸೋಚನೇ ಇಲ್ಲದೇ ರಾಮಗಾನಹಳ್ಳಿ ಗ್ರಾಮಕ್ಕೆ ಹೋಗಲು ತಿರುಗಿಸಿದಾಗ ನಮ್ಮ ತಂದೆಯವರ ಹೋಗುತ್ತಿದ್ದ ಕೆ,ಎ-41 ಇ,ಜಿ-8146 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ವಿಚಕ್ರವಾಹನವು ಕೆ,ಎ-40 ಎಸ್-8645 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಫಘಾತವಾಗಿ ತಮ್ಮ ತಂದೆ ವೆಂಕಟರಮಣಪ್ಪ ರವರಿಗೆ ತಲೆಗೆ ರಕ್ತಗಾಯವಾಗಿ ಕೈ ಕಾಲುಗಳಿಗೆ ರಕ್ತಗಾಯವಾಗಿರುವುದಾಗಿ ಆನಂದ ರವರಿಗೂ ಎಡ ಮೊಣ ಕಾಲಿಗೆ , ಎಡ ಮುಂಬೈ ಬಳಿ ಎಡ ಭುಜದ ಬಳಿ ತರಚಿದ ಗಾಯಗಾಳಾಗಿರುವುದಾಗಿ ತಿಳಿಸಿ ತಮ್ಮ ತಂದೆಯವರನ್ನು ಚಿಕಿತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು ನಂತರ ತಾನು ಮತ್ತು ತನ್ನ ತಮ್ಮ ಸುರೇಶ ರವರು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ತಮ್ಮ ತಂದೆಯವರಿಗೆ ಅಪಘಾತವಾಗಿರುವುದು ನಿಜವಾಗಿದ್ದು ನಂತರ ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ನಿಮ್ಹಾನ್ಸ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಮತ್ತೆ ಅಲ್ಲಿಂದ ಪೋತಿಸ್ ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಮಾರುತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾಗ ತಮ್ಮ ತಂದೆ ವೆಂಕಟರಮಣಪ್ಪ ರವರು ಈ ದಿನ ದಿನಾಂಕ;12/04/2021 ರಂದು ಬೆಳಿಗ್ಗೆ:9-00 ಗಂಟೆಯಲ್ಲಿ ಅಫಘಾತದಲ್ಲಿಯಾದ ಗಾಯ ಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು. ಈ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಇಲ್ಲದ ಕಾರಣ ನಮ್ಮ ತಂದೆಯವರ ಮೃತದೇಹವನ್ನು ನಮ್ಮ ಕೋರಿಕೆಯ ಮೇರೆಗೆ ನಮ್ಮ ವಶಕ್ಕೆ ಪಡೆದುಕೊಂಡು ಬಂದು ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಯ ಶವಗಾರದಲ್ಲಿಟ್ಟಿದ್ದು ತಮ್ಮ ತಂದೆ ವೆಂಕಟರವಣಪ್ಪ ರವರಿಗೆ ಆಸ್ಪತ್ರೆಯ ಲ್ಲಿ ಚಿಕಿತ್ಸೆಕೊಡಿಸುತ್ತಿದ್ದರಿಂದ ದೂರು ನೀಡಲು ತಡವಾಗಿದ್ದು ನಾನು ಆಪಘಾತವಾದ ಸ್ಥಳವನ್ನು ನೋಡಿಕೊಂಡು ಬಂದು ನಮ್ಮ ತಂದೆಯವರೆಗೆ ಅಪಘಾತವಾಗಲು ಕಾರಣವಾದ ಕೆ,ಎ-40 ಎಸ್-8645 ನೊಂದಣಿ ಸಂಖ್ಯೆಯ ಸ್ಪ್ಲೆಂಡರ್ ದ್ವಿಚಕ್ರವಾಹನದ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.67/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:12/04/2021 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:11/04/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ರಾಯರೇಖಲಹಳ್ಳಿ ಗ್ರಾಮದ ಬಳಿ ಇರುವ ಉತ್ತರ ಪಿನಾಕಿನಿ ನದಿಯಲ್ಲಿ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ, ಪಿಸಿ-537 ಆನಂದ್ ಕುಮಾರ್, ಪಿ.ಸಿ.111 ಲೋಕೇಶ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.238 ದಿಲೀಪ್ ಕುಮಾರ್, ಪಿ.ಸಿ.100 ಮಹೇಶ್, ಪಿ.ಸಿ.336 ಉಮೇಶ್.ಬಿ.ಶಿರಶ್ಯಾಡ್, ಪಿ.ಸಿ.483 ರಮೇಶ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 4-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಶೌಕತ್ ಬಿನ್ ಅಕ್ಬರ್ ಸಾಬಿ, 49 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ನಂದ ಕುಮಾರ್ ಬಿನ್ ರಂಗೇಗೌಡ, 27 ವರ್ಷ, ಸಾದರು ಜನಂಗ, ಜಿರಾಯ್ತಿ, ವಾಸ ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ರಂಜಿತ್ ಬಿನ್ ಸುರೇಶ, 22 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  4) ಗೋವಿಂದರಾಜು ಬಿನ್ ಅಶ್ವತ್ಥಪ್ಪ, 30 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 4200/- (ನಾಲ್ಕು ಸಾವಿರದ ಎರಡು ನೂರು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 108/2021 ರಂತೆ ದಾಖಲಿಸಿಕೊಂಡು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

14. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.68/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:12/04/2021 ರಂದು ಮಾನ್ಯ ಶಶಿಧರ.ಎಸ್.ಡಿ ಸಿಪಿಐ ಗೌರಿಬಿದನೂರು ಪೊಲೀಸ್ ವೃತ್ತ ರವರು ಮಾಲು ಮಹಜರ್ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 12/04/2021 ರಂದು  ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಹೆಚ್.ಸಿ.224 ವೆಂಕಟೇಶ ರವರು ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಗ್ರಾಮದ ಕಡೆ ಅಕ್ರಮ ಚಟುವಟಿಕೆಗಳ ಬಗ್ಗೆ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ತಿಪ್ಪಾಗಾನಹಳ್ಳಿ  ಗ್ರಾಮದ ಸುಬ್ರಮಣಿ ಬಿನ್ ಬೇಲೂರಪ್ಪ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ದಾಳಿ ಮಾಡುವ ಸಲುವಾಗಿ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ  ಬೆಳಿಗ್ಗೆ 11-30  ಗಂಟೆಯ ಸಮಯದಲ್ಲಿ ತಿಪ್ಪಾಗಾನಹಳ್ಳಿ ಗ್ರಾಮದ ಸುಬ್ರಮಣಿ ಬಿನ್ ಬೇಲೂರಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುಬ್ರಮಣಿ ಬಿನ್ ಬೇಲೂರಪ್ಪ, 45 ವರ್ಷ, ವಿಶ್ವಕರ್ಮ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ತಿಪ್ಪಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 12 ಮದ್ಯದ ಟೆಟ್ರಾ ಪಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 3  ಪ್ಲಾಸ್ಟಿಕ್  ಲೋಟಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 12-00 ಗಂಟೆಯಿಂದ 1-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 432/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಸುಬ್ರಮಣಿ ಬಿನ್ ಬೇಲೂರಪ್ಪ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರು.

 

15. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 420 ಐ.ಪಿ.ಸಿ:-

          ದಿನಾಂಕ 11-04-2021 ರಂದು ಸಂಜೆ 17-30  ಗಂಟೆಗೆ ಚಿಕ್ಕಬಳ್ಳಾಪುರ ನಗರದ ಪಿಸಿ 458 ಪರಶುರಾಮ ರವರು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ಅವರ ಠಾಣೆಯಲ್ಲಿ ದಾಖಲಾಗಿದ್ದ  ಮೊಸಂ 06/2021 ರ ಕಡತವನ್ನು ಠಾಣೆಯಲ್ಲಿ ಹಾಜರ್ಪಡಿಸಿದನ್ನು  ಪಡೆದುಕೊಂಡು ಪರಿಶೀಲಿಸಲಾಗಿ  ದಿನಾಂಕ 14/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಶ್ರೀಮತಿ ಶಶಿಕಲಾ ಕೋಂ ಚಕ್ರಪಾಣಿ ಎಂಬುವವರು ನಗರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 13/02/2021 ರಂದು ಬೆಂಗಳೂರಿನ ಮಾದನಾಕನಹಳ್ಳಿ ವಾಸವಾಗಿರುವ ಮೊಮ್ಮಗಳ ನಾಮಕರಣಕ್ಕೆ  ಹೋಗಿದ್ದು,  ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನಿಂದ ಬಾಗೇಪಲ್ಲಿಗೆ  ಹೋಗಲು ಬೆಂಗಳೂರಿನ ಹೆಬ್ಬಾಳಾದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹತ್ತಿದ್ದು, ನಾಮಕರಣಕ್ಕೆಂದು ತಂದಿದ್ದ 40 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಕರಿಮಣಿ ಸರ ಎರಡು ಎಳೆ ಸರ ಮತ್ತು 750/- ರೂ ಗಳನ್ನು ಪರ್ಸ್ನಲ್ಲಿ ಇಟ್ಟು, ಅದನ್ನು ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಬಸ್ಸಿನಲ್ಲಿ ಬರುತ್ತಿದ್ದಾಗ ದೇವನಹಳ್ಳಿ ಬಿಟ್ಟಿ ಆವತಿಯ ನಾಗರ್ಜುವ ಕಾಲೆಜು ಬಳಿ ಬರುತ್ತಿದ್ದಂತೆ ಮೂರು ಜನ ಹೆಂಗಸರು ಮತ್ತು ಒಂದು ಮಗು  ಪಿರ್ಯಾದಿಯವರ  ಬಳಿ ಬಂದಿದ್ದು, ಪಿರ್ಯಾಧಿದಾರರ ಮುಂದೆ ಒಬ್ಬ ಹೆಂಗಸು ಚಿಲ್ಲರೆ ಹಣವನ್ನು ಬಿಳಿಸಿದ್ದು, ಅದನ್ನು ಎತ್ತಿಕೊಳ್ಳಲು ಬಗ್ಗಿದಾಗ 5*ಮತ್ತು 1 ರೂಗಳ ನಾಣ್ಯಗಳು ಸಿಕ್ಕಿದ್ದುವುಗಳನ್ನು ಎತ್ತಿ ಆಕೆಗೆ ಕೊಟ್ಟಿದ್ದು, ಆದರೂ ಇನ್ನೂ ಹಣ ಇದೆ ಎಂದು ಸೀಟಿನ ಕೆಳಗೆ ತೋರಿಸಿ ಹುಡುಕಾಡುವಂತೆ ನಾಟಕಮಾಡಿದ್ದು, ಶಶಿಕಲಾರವರು ಕಾಲಿನ ಕೆಳಗಡೆ ಹಣ ಇರಬಹುದೆಂದು ಹುಡುಕಾಡುತ್ತಿದ್ದಾಗ ವ್ಯಾನಿಟಿ ಬ್ಯಾನಗ್ನ  ಜೀಪ್ ನ್ನು ತೆಗೆದು ಅದರಲ್ಲಿದ್ದ ಚಿನ್ನದ ಒಡವೆ ಹಾಗೂ ಹಣವಿದ್ದ ಪರ್ಸನ್ನು ಕಳವು ಮಾಡಿರುತ್ತಾರೆ. ನಂತರ ಎಸ್.ಜೆ.ಸಿ.ಐ.ಟಿ ಕಾಲೇಜು ಬಳಿ ಆ ಮೂರು ಜನ ಹೆಂಗಸರು ಮತ್ತು ಒಂದು ಮಗು ಬಲವಂತವಾಗಿ ಬಸ್ಸನ್ನು ನಿಲ್ಲಿಸಿ ಬಸ್ಸಿನಿಂದ ಇಳಿದು ಹೋಗಿರುತ್ತಾರೆ. ನಂತರ ಚಿಕ್ಕಬಳ್ಳಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಮೊಮ್ಮಗನಿಗೆ ನೀರನ್ನು ಖರೀದಿ ಮಾಡಲು ಪರ್ಸ್ ನ್ನು ಹುಡುಕಾಡಲಾಗಿ ವ್ಯಾನಿಟಿ ಬ್ಯಾಗ್ ನಲ್ಲಿ ಪರ್ಸ್ ಕಂಡುಬಂದಿರುವುದಿಲ್ಲ. ಪಿರ್ಯಾಧಿದಾರರು ನಿದಾನವಾಗಿ ಯೋಚಿಸಲಾಗಿ ತನ್ನೊಂದಿಗೆ ಬಸ್ಸಿನಲ್ಲಿ ಬಂದ  ಮೂರು ಜನ ಹೆಂಗಸರು ಮತ್ತು ಒಂದು ಮಗು ತನ್ನ ಮುಂದೆ ಚಿಲ್ಲರೆ ಹಣ ಚೆಲ್ಲಿ ಹುಡುಕಾಟದ ನೆಪದಲ್ಲಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನದ ಒಡವೆ ಹಾಗೂ ಹಣವನ್ನು ಗಮನ ಬೇರೆ ಕಡೆ ಸೆಳೆದು ಕಳುವು ಮಾಡಿರುವುದು ಕಂಡು ಬಂದಿರುತ್ತದೆ.  ಸದರಿ ಒಂದು ಚಿನ್ನದ ಚೈನ್ ಹಾಗೂ  ಮತ್ತೊಂದು ಕರಿಮಣಿಸರದೊಂದಿಗೆ ಚಿನ್ನದ ಗುಂಡುಗಳಿರುವ ಸುಮಾರು 40 ಗ್ರಾಂ ತೂಕದ ಚಿನ್ನದ ಒಡವೆಗಳಿದ್ದು, ಇವುಗಳ ಬೆಲೆ ಸುಮಾರು 1,60,000/- ಹಾಗೂ 750/- ರೂ ನಗದು ಹಣವನ್ನು ತನ್ನ ಗಮನ ಬೇರೆ ಕಡೆ ಸೆಳೆದು ಕಳುವು ಮಾಡಿರುವ ಮೂರು ಜನ ಹೆಂಗಸರು ಮತ್ತು ಒಂದು ಹೆಣ್ಣು ಮಗುವನ್ನು ಪತ್ತೆ ಮಾಡಿ ಅವರು ಕಳುವು ಮಾಡಿರುವ ತನ್ನ ವಸ್ತುಗಳನ್ನು ವಾಪಾಸ್ ಮಾಡಿಸಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರವವರದಿ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.100/2021 ಕಲಂ. 457,380,511 ಐ.ಪಿ.ಸಿ:-

          ದಿನಾಂಕ: 11-04-2021 ರಂದು ಸಂಜೆ 6.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ಬ್ಯಾಟರಾಯಶೆಟ್ಟಿ ಬಿನ್ ಲೇಟ್ ತುಪ್ಪದ ಗಂಗಪ್ಪ, ಸುಮಾರು 67 ವರ್ಷ, ನಗರ್ತರು, ಜಿರಾಯ್ತಿ, ವಾಸ: ಚಿಕ್ಕದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆ, ತಾನು ಇದೇ ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಾಸರಹಳ್ಳಿ ಗ್ರಾಮದಲ್ಲಿರುವ ಶ್ರೀ ಬ್ಯಾಟರಾಯ ಸ್ವಾಮಿ ದೇವಾಲಯದ ಅಭಿವೃದ್ದಿ ಸಮಿತಿಯ ಅಧ್ಯಕ್ಷನಾಗಿದ್ದು, ದಿನಾಂಕ: 10-04-2021 ರಂದು ಸಂಜೆ 6.30 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಿದ ನಂತರ ಯಾರೋ ಕಳ್ಳರು ಚಿಕ್ಕದಾಸರಹಳ್ಳಿ ಗುಟ್ಟದ ಮೇಲೆ ನೆಲೆಸಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಬ್ಯಾಟರಾಯ ಸ್ವಾಮಿ ದೇವಾಲಯದ ಮುಖ್ಯ ದ್ವಾರದ ಬಾಗಿಲು ಮತ್ತು ಅದರ ಬೀಗಗಳನ್ನು ಕಿತ್ತು ದೇವಾಲಯದ ಒಳಗೆ ಪ್ರವೇಶ ಮಾಡಿ ದೇವಾಲಯದಲ್ಲಿದ್ದ ಹುಂಡಿಯನ್ನು ಹೊಡೆದು ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಈ ದಿನ ದಿನಾಂಕ: 11-04-2021 ರಂದು ಬೆಳ್ಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ತಾನು ದೇವಾಲಯದ ಕಡೆಗೆ ವಾಕಿಂಗ್ ಹೋದಾಗ ಈ ಕೃತ್ಯವು ಕಂಡು ಬಂದಿದ್ದು, ನಂತರ ತಾನು ಅದೇ ಸಮಯದಲ್ಲಿ ದೇವಾಲಯದ ಕಡೆ ವಾಕಿಂಗ್ ಬಂದಿದ್ದ ನಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸಹ ಸ್ಥಳಕ್ಕೆ ಬಂದು ನೋಡಿರುತ್ತಾರೆ. ನಂತರ ತಾನು ದೇವಾಲಯದ ಅರ್ಚಕರಿಗೆ, ಗ್ರಾಮಸ್ಥರಿಗೆ ಮತ್ತು ತಹಶೀಲ್ದಾರ್ ರವರಿಗೆ ವಿಷಯ ತಿಳಿಸಿ ದೂರನ್ನು ನೀಡುತ್ತಿದ್ದು, ಆದ ಕಾರಣ ನಮ್ಮ ಗ್ರಾಮದ ಗುಟ್ಟದ ಮೇಲೆ ನೆಲೆಸಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಬ್ಯಾಟರಾಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುವ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 100/2021 ಕಲಂ 457, 380, 511 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.101/2021 ಕಲಂ. 429 ಐ.ಪಿ.ಸಿ & 11,4,8,9 KARNTAKA PREVENTION OF COW SLANGHTER & CATTLE PREVENTION ACT & 177,192  INDIAN MOTOR VEHICLES ACT & 11 PREVENTION OF CRUELTY TO ANIMALS ACT, 125(E) The Central Motor Vehicle Rules:-

          ದಿನಾಂಕ: 12-04-2021 ರಂದು ಬೆಳಗಿನ ಜಾವ 1.00 ಗಂಟೆಯ್ಲಲಿ ಸಿ.ಹೆಚ್.ಸಿ-21 ಎಂ.ಪಿ.ರಂಗನಾಥ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 11-04-2021 ರಂದು ಪಿ.ಎಸ್.ಐ. ರವರು ತನಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಮತ್ತು ಸಿಪಿಸಿ-143 ಶಿವರಾಜಕುಮಾರ ರವರು ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಸರಹದ್ದಿನ ಜೆ.ವೆಂಕಟಾಪುರ, ಅಂಕತಟ್ಟಿ, ಮಳ್ಳೂರು ಕಡೆಗಳಲ್ಲಿ ಗಸ್ತನ್ನು ನಿರ್ವಹಿಸಿಕೊಂಡು ದಿನಾಂಕ: 12-04-2021 ರಂದು 00.00 ಗಂಟೆಯಲ್ಲಿ ಜಂಗಮಕೋಟೆ ಗ್ರಾಮದಿಂದ ಸುಗಟೂರು ಗ್ರಾಮದ ಕಡೆಗೆ ಗಸ್ತಿಗೆ ಹೋಗುತ್ತಿದ್ದಾಗ ಜಂಗಮಕೋಟೆ ಕ್ರಾಸ್ ಕಡೆಯಿಂದ ಒಂದು ಕ್ಯಾಂಟರ್ ಮತ್ತು ಒಂದು ಮಹಿಂದ್ರ ಬೊಲೇರೋ ವಾಹನ ಬರುತ್ತಿದ್ದು ಸದರಿ ವಾಹನಗಳನ್ನು ನಿಲ್ಲಿಸಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಸದರಿ ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ವಾಹನಗಳ ಚಾಲಕರು ಸ್ಥಳದಿಂದ ಪರಾರಿಯಾದರು, ಎರಡೂ ವಾಹನಗಳನ್ನು ಪರಿಶೀಲಿಸಲಾಗಿ ನೊಂದಣಿ ಸಂಖ್ಯೆಯಿಲ್ಲದ ಆದರೆ ಮುಂಭಾಗದ ಗ್ಲಾಸ್ ಮೇಲ್ಬಾಗ ಬಿಳಿ ಬಣ್ಣದ ಪೇಪರ್ ನಲ್ಲಿ ನಂ. ಕೆಎ-52-ಬಿ-1600 ಎಂಬುದಾಗಿ ಬರೆದು ನಂಬರ್ ಅಂಟಿಸಿದ್ದು ಸದರಿ ವಾಹನದಲ್ಲಿ 8 ಎಮ್ಮೆಗಳಿರುತ್ತೆ, ಮತ್ತೊಂದು ಮಹಿಂದ್ರಾ ಬೊಲೇರೋ ವಾಹನವನ್ನು ಪರಿಶೀಲಿಸಲಾಗಿ ನಂ. ಕೆಎ-17-ಸಿ-7617 ಮಹೀಂದ್ರಾ ಬೊಲೇರೋ ಆಗಿದ್ದು ಸದರಿ ಮಹೀಂದ್ರಾ ಬೊಲೇರೋ ವಾಹನದಲ್ಲಿ ಪರಿಶೀಲಿಸಲಾಗಿ 6 ಎಮ್ಮೆಗಳಿದ್ದು ಆ ಪೈಕಿ ಒಂದು ಎಮ್ಮೆ ಸುಸ್ತಾಗಿ ವಾಹನದಲ್ಲಿಯೇ ಕೆಳಕ್ಕೆ ಬಿದ್ದು ಹೋಗಿದ್ದು, ಆರೋಪಿಗಳು ಎಮ್ಮೆಗಳನ್ನು ಸಾಗಿಸಲು ಸಂಬಂಧಪಟ್ಟ ಇಲಾಖೆಗಳ ಕಡೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಸದರಿ ಪ್ರಾಣಿಗಳನ್ನು ಕಟಾವು ಮಾಡಿ ಮಾಂಸವನ್ನು ಮಾರಾಟ ಮಾಡಲು ಎಲ್ಲಿಂದಲೋ ಮೇಲ್ಕಂಡ ವಾಹನಗಳಲ್ಲಿ ತುಂಬಿ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ಪ್ರಾಣಿಗಳನ್ನು ಸಾಗಾಣಿಕೆ ಮಾಡಲು ಪಶು ಸಂಗೋಪನೆ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ, ಸದರಿ ಪ್ರಾಣಿಗಳನ್ನು ಅವುಗಳ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು, ಸದರಿ ನಂ. ಕೆಎ-52-ಬಿ-1600 ಕ್ಯಾಂಟರ್ ಮತ್ತು ನಂ ಕೆಎ-17-ಸಿ-7617 ಮಹೀಂದ್ರಾ ವಾಹನಗಳನ್ನು ಹಾಗೂ ವಾಹನದಲ್ಲಿದ್ದ ಎಮ್ಮೆಗಳ ಸಮೇತ ವಶಕ್ಕೆ ಪಡೆದುಕೊಂಡು ದಿನಾಂಕ: 12-04-2021 ರಂದು 01.00 ಗಂಟೆಗೆ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ವಾಹನಗಳ ಮಾಲೀಕರು/ಆರೋಪಿಗಳನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

18. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.102/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ: 12-04-2021 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಫಿರ್ಯಾದಿದಾರರಾದ ಜೆ.ಜಿ. ಕಿರಣ್ ಕುಮಾರ್ ಬಿನ್ ಗೌರಾಜ್ ಡಿ., 29 ವರ್ಷ, ಗಾಣಿಗರು, ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ, ಬ್ರಾಹ್ಮಣರ ಬೀದಿ, ಗಾಂದಿ ಚೌಕ, ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಅಣ್ಣನಾದ ಸುದರ್ಶನ್ ಬಾಬು ರವರಿಗೆ ಸುಮಾರು 32 ವರ್ಷ ವಯಸ್ಸಾಗಿದ್ದು ಆತನು ಬೆಂಗಳೂರಿನ ಹೆಬ್ಬಾಳದ ಮಾನ್ಯತ ಟೆಕ್ ಪಾರ್ಕ್ ನಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಪ್ರತಿ ದಿನ ಬೆಳಗಿನ ಜಾವ 5.00 ಗಂಟೆಗೆ ಮನೆಯಿಂದ ಕೆಲಸಕ್ಕೆ ಆತನ ಬಾಬತ್ತು ನಂ. ಕೆಎ-40-ಇಎಫ್-1485 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋಗಿ ಮದ್ಯಾಹ್ನ ಸುಮಾರು 3.00 ಗಂಟೆಗೆ ವಾಪಸ್ಸು ಮನೆಗೆ ಬರುತ್ತಿದ್ದನು. ಎಂದಿನಂತೆ ದಿನಾಂಕ: 12-04-2021 ರಂದು ಬೆಳಗಿನ ಜಾವ 4.45 ಗಂಟೆ ಸಮಯದಲ್ಲಿ ತಮ್ಮ ಅಣ್ಣನಾದ ಸುದರ್ಶನ್ ಬಾಬು ರವರು ಆತನ ಬಾಬತ್ತು ನಂ. ಕೆಎ-40-ಇಎಫ್-1485 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು ಬೆಳಗಿನ ಜಾವ 5.00 ಗಂಟೆಗೆ ಆತನ ಮೊಬೈಲ್ ನಂಬರ್ ನಿಂದ ತನಗೆ ಪೋನ್ ಮಾಡಿ ಆತನಿಗೆ ಜಂಗಮಕೋಟೆ ಕ್ರಾಸ್-ಜೆ.ವೆಂಕಟಾಪುರ ಮದ್ಯೆ ಇರುವ ಜೆ.ವೆಂಕಟಾಪುರ ಭದ್ರನ ಕೆರೆ ಕಟ್ಟೆಯ ಮೇಲೆ ಅಪಘಾತವಾಗಿರುವುದಾಗಿ ಹೇಳಿದ್ದು ಕೂಡಲೇ ತಾನು ಸ್ಥಳಕ್ಕೆ ಹೋಗಿದ್ದು ವಿಚಾರ ನಿಜವಾಗಿದ್ದು ಅಪಘಾತದಲ್ಲಿ ಗಾಯಗೊಂಡಿದ್ದು ತಮ್ಮ ಅಣ್ಣ ಸುದರ್ಶನ್ ಬಾಬು ರವರಿಗೆ ಉಪಚರಿಸಿ 108 ಆಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ದೇವನಹಳ್ಳಿ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ದಿನಾಂಕ: 12-04-2021 ರಂದು ತಮ್ಮ ಅಣ್ಣನಾದ ಸುದರ್ಶನ್ ಬಾಬು ರವರು ಆತನ ಬಾಬತ್ತು ನಂ. ಕೆಎ-40-ಇಎಫ್-1485 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 4.45 ಗಂಟೆ ಸಮಯದಲ್ಲಿ ಮನೆಯನ್ನು ಬಿಟ್ಟು ಜಂಗಮಕೋಟೆಯಿಂದ ಜೆ.ವೆಂಕಟಾಪುರ ಕೆರೆ ಕಟ್ಟೆಯ ಮೇಲೆ ಶ್ರೀ ದುಗ್ಗಲಮ್ಮ ದೇವಿ ದೇವಾಲಯದಿಂದ ಸ್ವಲ್ಪ ಮುಂಭಾಗ ಹೋಗುತ್ತಿದ್ದಾಗ ಆತನ ಮುಂಭಾಗ ಹೋಗುತ್ತಿದ್ದ ನಂ. ಕೆಎ-53-ಬಿ-9081 ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು ಇದ್ದಕ್ಕಿದ್ದಂತೆ ಯಾವುದೇ ಸೂಚನೆಯನ್ನು ನೀಡದೆ ವಾಹನವನ್ನು ನಿಲ್ಲಿಸಿದ್ದರಿಂದ ಹಿಂಬಾಗದಲ್ಲಿ ಹೋಗುತ್ತಿದ್ದ ತಮ್ಮ ಅಣ್ಣನ ದ್ವಿಚಕ್ರ ವಾಹನಕ್ಕೆ ತಾಗಿ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು ಅಪಘಾತದಲ್ಲಿ ವಾಹನವು ಜಖಂಗೊಂಡಿದ್ದು, ತಮ್ಮ ಅಣ್ಣನಿಗೆ ಬಾಯಿ, ಗಡ್ಡ, ತಲೆ, ಕೈಗಳು ಹಾಗೂ ಕಾಲುಗಳಿಗೆ ಗಾಯಗಳಾಗಿರುವುದಾಗಿರುತ್ತೆ. ನಂ. ಕೆಎ-53-ಬಿ-9081 ಲಾರಿಯನ್ನು ಅತಿವೇಗವಾಗಿ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೆ ಇದ್ದಕ್ಕಿದ್ದಂತೆ ನಿಲ್ಲಿಸಿ ಅಪಘಾತಕ್ಕೆ ಕಾರಣವಾದ ಆರೋಪಿ ಲಾರಿಯ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 102/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

19. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ.11-04-2021 ರಂದು ಮದ್ಯಾಹ್ನ 1-00 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.11-04-2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ತಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ತೈಬಾನಗರದಲ್ಲಿರುವ ನ್ಯಾಮತ್ ರವರ ಖಾಲಿ ಜಮೀನಿನಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಪಿಸಿ-308 ಚಂದಪ್ಪ ಯಲಿಗಾರ್, ಪಿಸಿ-278 ನಾರಾಯಣ, ಪಿಸಿ-554 ಪ್ರವೀಣ್ ಕುಮಾರ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-50 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 200/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ  ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಸುನ್ನುಬಾ ಬಿನ್ ಜಹೀರ್ವುದ್ದೀನ್ ಕೂಲಿ ಕೆಲಸ, ವಾಸ-24 ನೇ ವಾರ್ಡು, ಅನ್ಸಾರಿಯಾ ಮೊಹಲ್ಲಾ, ಶಿಡ್ಲಘಟ್ಟ ನಗರ 2] ಇರ್ಪಾನ್ ಬಿನ್ ಪಾಷ,  ರೇಷ್ಮೆಕೆಲಸ, ವಾಸ-24 ನೇ ವಾರ್ಡು, ಅನ್ಸಾರಿಯಾ ಮೊಹಲ್ಲಾ, ಶಿಡ್ಲಘಟ್ಟ ನಗರ 3] ನೂರ್ ಅಹಮದ್ ಬಿನ್ ಅಮೀರ್ ಜಾನ್, 22 ವರ್ಷ, ಮುಸ್ಲೀಂರು, ರೇಷ್ಮೆ ಕೆಲಸ, 24 ನೇ ವಾರ್ಡು, ಅನ್ಸಾರಿಯಾ ಮೊಹಲ್ಲಾ ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1420/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮದ್ಯಾಹ್ನ 12-00 ಗಂಟೆಯಿಂದ 12-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 03 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಸದರಿಯವರ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.35/2021 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

20. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ.11-04-2021 ರಂದು ಮದ್ಯಾಹ್ನ 3-00 ಗಂಟೆಗೆ ಪಿ.ಎಸ್.ಐ ಕೆ.ಸತೀಶ್ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ.11-04-2021 ರಂದು ಮಧ್ಯಾಹ್ನ 01-15 ಗಂಟೆಯಲ್ಲಿ  ತಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಅನ್ಸಾರಿ ಮಸೀದಿ ಹಿಂಭಾಗದಲ್ಲಿ ಜೈಲುಬುದ್ದೀನ ರವರ ಖಾಲಿ ನಿವೇಶನದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಪಿಸಿ-308 ಚಂದಪ್ಪ ಯಲಿಗಾರ್, ಪಿಸಿ-278 ನಾರಾಯಣ, ಪಿಸಿ-554 ಪ್ರವೀಣ್ ಕುಮಾರ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 01-45 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವನನ್ನ್ನು ಹಿಂಬಾಲಿಸಿ ಹಿಡಿದುಕೊಂಡು ಅವನ ಹೆಸರು ವಿಳಾಸ ಕೇಳಲಾಗಿ 1] ಮೌಲ ಬಿನ್ ಲೇಟ್ ಸಿಕ್ಬತ್ತುಲ್ಲಾ, 30 ವರ್ಷ, ಮುಸ್ಲೀಂರು, ರೇಷ್ಮ ಕೆಲಸ, ವಾಸ- 24 ನೇ ವಾಡರ್್, ಅನ್ಸಾರಿಯಾ ಮೊಹಲ್ಲಾ, ಶಿಡ್ಲಘಟ್ಟ ಟೌನ್ ಎಂದು ಉಳಿದ ಓಡಿಹೋದ 03 ಜನರ ಹೆಸರುಗಳನ್ನು ತಿಳಿಯಲಾಗಿ 1)ನಾಸೀರ್ 2) ಮಜರ್ 3) ಯಾರಬ್ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1000/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮಧ್ಯಾಹ್ನ 01-50 ಗಂಟೆಯಿಂದ 02-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ ಒಬ್ಬ ಆಸಾಮಿ ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.36/2021 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

21.ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ.11-04-2021 ರಂದು ಸಂಜೆ 5.45 ಗಂಟೆಗೆ ಪಿ.ಎಸ್.ಐ ಕೆ.ಸತೀಶ್ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ.11-04-2021 ರಂದು ಮಧ್ಯಾಹ್ನ 03-30 ಗಂಟೆಯಲ್ಲಿ  ತಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಖಾಸಿಂಪಾಳ್ಯದ ಬಿಲಾಲ್ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ-61, ಶ್ರೀನಿವಾಸ್, ಪಿಸಿ-126, ವೆಂಕಟೇಶ್, ಪಿಸಿ-570 ನರಸಿಂಹಪ್ಪ, ಪಿಸಿ-556, ಧರಣೇಶ್ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 4-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 300/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 300/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ  ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಉಮದ್ ಅಲಿ ಬಿನ್ ಏಜಾಜ್ ಪಾಷ, 23 ವರ್ಷ, ಮುಸ್ಲೀಂರು, ಡ್ರೈವರ್ ಕೆಲಸ, ವಾಸ-ಗಾಂಧಿ ನಗರ, ಶಿಡ್ಲಘಟ್ಟ ನಗರ 2] ಸಾದಿಕ್ ಬಿನ್ ಬಹುದೂರ್, 18 ವರ್ಷ, ಮುಸ್ಲೀಂರು, ರೇಷ್ಮೆ ಕೆಲಸ, ವಾಸ-ರಹಮತ್ ನಗರ, ಶಿಡ್ಲಘಟ್ಟ ಟೌನ್ 3] ನವಾಜ್ ಬಿನ್ ಪೈಯಾಜ್ ಖಾನ್, 278 ವರ್ಷ, ಮುಸ್ಲೀಂರು, ರೇಷ್ಮೆ ಕೆಲಸ, ರಹಮತ್ ನಗಹರ, ಶಿಡ್ಲಘಟ್ಟ ನಗರ 4] ನೈಯು ಬಿನ್ ಲೇಟ್ ಜಾಕೀರ್, 23 ವರ್ಷ, ರೇಷ್ಮೆ ಕೆಲಸ, ಮುಸ್ಲೀಂರು, ಗಾಂಧಿನಗರ, ಶಿಡ್ಲಘಟ್ಟ ಟೌನ್ ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3540/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮಧ್ಯಾಹ್ನ 4-40 ಗಂಟೆಯಿಂದ 5-15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 04 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.37/2021 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

Last Updated: 12-04-2021 07:08 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080