ಅಭಿಪ್ರಾಯ / ಸಲಹೆಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 101/2021 ಕಲಂ. 143,147,148,323,324,427,504,506 ರೆ/ವಿ 149 ಐಪಿಸಿ :-

     ದಿನಾಂಕ: 12/03/2021 ರಂದು ಮದ್ಯಾಹ್ನ 12.00 ಗಂಟೆಗೆ ಶ್ರೀಮತಿ ರತ್ನಮ್ಮ ಕೋಂ ಲೇಟ್ ದೇವರಾಜ್, 40 ವರ್ಷ, ಬೋವಿ ಜನಾಂಗ, ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಮಗನಾದ ಕಲ್ಯಾಣ್ ಈಗ್ಗೆ ಒಂದು ವರ್ಷದಿಂದ ಶ್ರೀನಿವಾಸಪುರ ತಾಲ್ಲೂಕಿನ ತೊಟ್ಲಿಗಾನಹಳ್ಳಿ ಗ್ರಾಮದ ವಾಸಿ ಸುಕನ್ಯ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನು ತನ್ನ ಮಗ ತನಗೆ ಮತ್ತು ಚಿಂತಾಮಣಿ ನಗರದ ಮಾಳಪ್ಪಲ್ಲಿಯಲ್ಲಿ ವಾಸವಾಗಿರುವ ಆತನ ಸ್ನೇಹಿತರಾದ ಆದಿಕರ್ನಾಟಕ ಜನಾಂಗದ ಮುರಳಿ ಮತ್ತು ಇತರರಿಗೆ ತಿಳಿಸಿದ್ದ. ಈಗ್ಗೆ 2 ತಿಂಗಳ ಹಿಂದೆ ತಾನು ಮತ್ತು ತಮ್ಮ ಮಗನ ಸ್ನೇಹಿತರೆಲ್ಲರೂ ಸೇರಿ ತನ್ನ ಮಗ ಕಲ್ಯಾಣ್ ರವರಿಗೆ ಆತನ ಪ್ರೀತಿಸುತ್ತಿದ್ದ ಹುಡುಗಿ ಸುಕನ್ಯಾ ಎಂಬಾಕೆಯೊಂದಿಗೆ ಚಿಂತಾಮಣಿಯ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಸಿ. ನಂತರ ಕನಂಪಲ್ಲಿಯಲ್ಲಿರುವ ಶ್ರೀ.ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದೆವು. ತಮ್ಮ ಸೊಸೆ ಸುಕನ್ಯಾ ತಮ್ಮ ಗ್ರಾಮದ ವಾಸಿಗಳಾದ ತಮ್ಮ ಜನಾಂಗದ ರಾಜಪ್ಪ ಎಂಬುವರಿಗೆ ಸಂಬಂಧಿಯಾಗಿದ್ದು, ಈಕೆಯನ್ನು ಅವರೇ ಅವರ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದರು. ಆದರೆ ಸುಕನ್ಯಾಳನ್ನು ತಾವು ತಮ್ಮ ಮಗನಿಗೆ ಮದುವೆ ಮಾಡಿಕೊಂಡಾಗಿನಿಂದಲೂ ರಾಜಪ್ಪ ಮತ್ತು ಅವರ ಕಡೆಯವರು ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಆಗಾಗ ತಮ್ಮ ಮೇಲೆ ವಿನಾ ಕಾರಣ ಜಗಳ ತೆಗೆಯುತ್ತಿದ್ದರು. ಹೀಗಿರುವಾಗ ನಿನ್ನೆಯ ದಿನ ದಿನಾಂಕ:11/03/2021 ರಂದು ಸಂಜೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಮ್ಮ ಮಗ ಕಲ್ಯಾಣ್ ಚಿಂತಾಮಣಿಯ ಮಾಳಪ್ಪಲ್ಲಿಯಲ್ಲಿರುವ ಆತನ ಸ್ನೇಹಿತರಾದ ಮುರಳಿ ಹಾಗೂ ಇತರರಿಗೆ ತಮ್ಮ ಮನೆಗೆ ಊಟಕ್ಕೆ ಕರೆದಿದ್ದ. ಅದರಂತೆ ಅದೇ ದಿನ ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಮಾಳಪ್ಪಲ್ಲಿ ವಾಸಿಗಳಾದ ಮುರಳಿ ಬಿನ್ ತಮ್ಮಣ್ಣ, ರಾಮಾಂಜಿ ಬಿನ್ ರಾಮದಾಸು ಮತ್ತು  ನಾಗೇಶ ಬಿನ್ ಮುನಿಸ್ವಾಮಿ ರವರುಗಳು ಅವರ ಬಾಬತ್ತು ದ್ವಿಚಕ್ರವಾಹನದಲ್ಲಿ ಚಿಂತಾಮಣಿಯಿಂದ ತಮ್ಮ ಮನೆಗೆ ಊಟಕ್ಕೆ ಬಂದಿರುತ್ತಾರೆ. ನಂತರ ಅದೇ ದಿನ ಸಂಜೆ ಸುಮಾರು 7-45 ಗಂಟೆಯ ಸಮಯದಲ್ಲಿ ತಾವೆಲ್ಲರೂ ತಮ್ಮ ಮನೆಯಲ್ಲಿದ್ದಾಗ, ಅದೇ ಸಮಯಕ್ಕೆ ತಮ್ಮ ಗ್ರಾಮಸ್ಥರೊಬ್ಬರು ತಮ್ಮ ಮನೆಯ ಬಳಿಗೆ ಬಂದು ಕಲ್ಯಾಣ್ ನನ್ನು ರಾಜಪ್ಪನ ಕಡೆಯವರು ಅವರ ಮನೆಯ ಬಳಿ ಹೊಡೆಯುತ್ತಿದ್ದಾರೆ ಬೇಗ ಹೋಗಿ ಎಂದು ಹೇಳಿದರು. ಕೂಡಲೇ ತಾನು ಮತ್ತು ಮನೆಯಲ್ಲಿದ್ದ ಮಾಳಪ್ಪಲ್ಲಿ ವಾಸಿಗಳಾದ ಮುರಳಿ, ರಾಮಾಂಜಿ ಮತ್ತು ನಾಗೇಶ ಅಲ್ಲಿಗೆ ಹೋದೆವು. ನೋಡಲಾಗಿ ರಾಜಪ್ಪನವರ ಮನೆಯ ಬಳಿ ತನ್ನ ಮಗ ಕಲ್ಯಾಣ್ ನನ್ನು ನಮ್ಮ ಗ್ರಾಮದ ವಾಸಿಗಳಾದ ತಮ್ಮ ಜನಾಂಗದ ರಮೇಶ ಬಿನ್ ರಾಜಪ್ಪ, ಅವರ ತಾಯಿ ಯಲ್ಲಮ್ಮ, ಅಕ್ಕ ವನಜಾಕ್ಷಿ, ಶಿವಪ್ಪ ಬಿನ್ ಮುನಿಯಪ್ಪ, ಇವರ ಮಕ್ಕಳಾದ ಶ್ರೀಕಾಂತ್, ಸುರೇಂದ್ರ, ವೆಂಕಟಸ್ವಾಮಿ ಬಿನ್ ಲೇಟ್ ಚಿಕ್ಕರಾಮಯ್ಯ, ಚಲಪತಿ, ವೆಂಕಟಾಚಲಪತಿ, ಜಗದೀಶ ಹಾಗೂ ಇತರರು ಸೇರಿಕೊಂಡು ಅಕ್ರಮ ಗುಂಪು ಕಟ್ಟಿಕೊಂಡು ಸುತ್ತುವರಿದು, ತನ್ನ ಮಗನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಹೊಡೆಯುತ್ತಿದ್ದರು. ಆಗ ಜಗಳ ಬಿಡಿಸಲು ಅಡ್ಡ ಹೋದ ತನಗೆ ರಮೇಶ ನಿಮ್ಮಮ್ಮನ್ನೇ ಕೇಯ ನೀನು ಬಂದಿದ್ದೀಯೇನೇ, ಬಾರೆ ನಿಮಗೆ ಇವತ್ತು ಒಂದು ಗತಿಯನ್ನು ಕಾಣಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಆತನ ಕೈಯ್ಯಲ್ಲಿದ್ದ ಬ್ಲೇಡಿನಿಂದ ತನ್ನ ಬಲಗೈ ಮತ್ತು ಎಡಗೈ ಮೇಲೆ ಹಲ್ಲೆ ಮಾಡಿದ. ಇದರಿಂದ ತನಗೆ ಸ್ವಲ್ಪ ತರಚಿದ ಗಾಯವಾಯಿತು. ವನಜಾಕ್ಷಿ ಮತ್ತು ಯಲ್ಲಮ್ಮ ತನ್ನ ಜುಟ್ಟನ್ನು ಹಿಡಿದು ಎಳೆದಾಡಿ, ಕೈಗಳಿಂದ ತನಗೆ ಮೈಮೇಲೆ ಹೊಡೆದರು. ಮುರಳಿ, ರಾಮಾಂಜಿ ಮತ್ತು ನಾಗೇಶ ರವರಿಗೆ ಶಿವಪ್ಪ, ಶ್ರೀಕಾಂತ್, ಸುರೇಂದ್ರ ರವರುಗಳು ಅವರ ಕೈಗಳಲ್ಲಿದ್ದ ದೊಣ್ಣೆಗಳಿಂದ ತಲೆಗೆ, ಮೈ-ಕೈ ಮೇಲೆ ಹೊಡೆದಿದ್ದು, ವೆಂಕಟಸ್ವಾಮಿ, ಚಲಪತಿ ರವರುಗಳು ಕಲ್ಲುಗಳಿಂದ ಮುರಳಿ, ರಾಮಾಂಜಿ ಮತ್ತು ನಾಗೇಶ ರವರಿಗೆ ಮೈಮೇಲೆ ಹೊಡೆದು ಹಲ್ಲೆ ಮಾಡಿದ್ದು, ಉಳಿದವರೆಲ್ಲರೂ ಸೇರಿಕೊಂಡು ತಮ್ಮನ್ನು ಸುತ್ತುವರಿದು ಕೈಗಳಿಂದ ಮೈಮೇಲೆ ಹೊಡೆದು, ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಶಿವಪ್ಪ, ಶ್ರೀಕಾಂತ್, ಸುರೇಂದ್ರ ರವರುಗಳು ದೊಣ್ಣೆಗಳಿಂದ ಮುರಳಿ ಮತ್ತು ಅವರ ಸ್ನೇಹಿತರು ಬಂದಿದ್ದ ದ್ವಿಚಕ್ರವಾಹನವನ್ನು ಹೊಡೆದು ಜಖಂಗೊಳಿಸಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮವರು ಅಡ್ಡ ಬಂದು ಜಗಳ ಬಿಡಿಸಿ, ತಮ್ಮನ್ನು ಉಪಚರಿಸಿರುತ್ತಾರೆ. ನಂತರ ಗಾಯಾಳುಗಳಾಗಿದ್ದ ಮುರಳಿ, ರಾಮಾಂಜಿ ಮತ್ತು ನಾಗೇಶ ರವರನ್ನು ಮೇಲ್ಕಂಡ ವೆಂಕಟೇಶಪ್ಪ ಹಾಗೂ ಇತರರು ದ್ವಿಚಕ್ರವಾಹನಗಳಲ್ಲಿ ತನಮ್ಮ ಗ್ರಾಮದಿಂದ ಕರೆದುಕೊಂಡು ಚಿಂತಾಮಣಿಗೆ ಬಂದು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ರಮೇಶ ಮತ್ತು ಅವರ ಕಡೆಯವರು ಅಲ್ಲಿಂದ ಹೋಗುವಾಗ ತಮ್ಮನ್ನು ಕುರಿತು ಈ ದಿನ ತಪ್ಪಿಸಿಕೊಂಡಿದ್ದೀರಿ, ನಿಮಗೆ ಒಂದು ಗತಿಯನ್ನು ಕಾಣಿಸುವವರೆಗೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿ ಹೋದರು. ತನಗೆ ಮತ್ತು ತನ್ನ ಮಗನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದರಿಂದ ತಾವುಗಳು ಯಾವುದೇ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿರುವುದಿಲ್ಲ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 102/2021 ಕಲಂ. 143,147,148,323,324,427,504,506 ರೆ/ವಿ 149 ಐಪಿಸಿ :-

     ದಿನಾಂಕ: 12/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಮೇಶ ಬಿನ್ ರಾಜಣ್ಣ, 35 ವರ್ಷ, ಬೋವಿ ಜನಾಂಗ, ಕೂಲಿಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತನ್ನ ಅತ್ತೆಯ ಮಗಳಾದ ಶ್ರೀನಿವಾಸಪುರ ತಾಲ್ಲೂಕು, ರೋಜರಪಲ್ಲಿ ಗ್ರಾಮದ ಸುಕನ್ಯ ಎಂಬುವರನ್ನು ತಮ್ಮ ಗ್ರಾಮದ ವಾಸಿಯಾದ ಕಲ್ಯಾಣ್ ಬಿನ್ ದೇವರಾಜ್ ಎಂಬುವವನು ಪ್ರೀತಿಸಿ ಮದುವೆಯಾಗಿರುತ್ತಾನೆ. ಈ ವಿಚಾರದಲ್ಲಿ ತಮಗೂ ಹಾಗೂ ಕಲ್ಯಾಣ್ ರವರ ನಡುವೆ ವೈಷಮ್ಯ ಇರುತ್ತದೆ. ಹೀಗಿರುವಾಗ ದಿನಾಂಕ: 11/03/2021 ರಂದು ರಾತ್ರಿ 11.45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ಕಲ್ಯಾಣ್ ಬಿನ್ ದೇವರಾಜ್, ರೆಡ್ಡಪ್ಪ ಬಿನ್ ಮುನಿಯಪ್ಪ, ವೆಂಕಟರವಣ ಬಿನ್ ಮುನಿಯಪ್ಪ, ಅನಿತಾ ಕೋಂ ವೆಂಕಟರವಣ, ಮಣಿ ಬಿನ್ ವೆಂಕಟೇಶಪ್ಪ, ಮಂಜುನಾಥ ಬಿನ್ ವೆಂಕಟಮ್ಮ, ಮಂಜಮ್ಮ ಕೋಂ ಮಂಜುನಾಥ ಮತ್ತು ಚಿಂತಾಮಣಿ ನಗರದ ಮಾಳಪಲ್ಲಿಯ ವಾಸಿಗಳಾದ ನಾಗರಾಜ್, ಮುರಳಿ, ಪವನ್ ಎಂಬುವವರು ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಮನೆಯ ಬಳಿ ಬಂದು ತಮ್ಮ ಮೇಲೆ ಜಗಳ ತೆಗೆದು ಆ ಪೈಕಿ ಕಲ್ಯಾಣ್ ತನ್ನನ್ನು ಕುರಿತು ಏನೋ ಬೋಳಿ ನನ್ನ ಮಗನೇ ನಾನು ಸುಕನ್ಯಳನ್ನು ಮದುವೆ ಮಾಡಿಕೊಂಡಿರುವುದು ನಿಮಗೆ ಇಷ್ಠ ಇಲ್ಲ ಅಂದರೆ ಸುಮ್ಮನೆ ಇರಬೇಕು, ಊರಲ್ಲಿ ನನ್ನ ಮೇಲೆ ಏಕೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಕೊಂಡಿದ್ದೀಯಾ ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ತಲೆಗೆ, ಹೊಟ್ಟೆಯ ಬಳಿ ಹೊಡೆದು ರಕ್ತಗಾಯಪಡಿಸಿದ. ಆಗ ಅಲ್ಲಿದ್ದ ತಮ್ಮ ತಂದೆ ರಾಜಣ್ಣ ಬಿನ್ ಚಿಕ್ಕರಾಮಯ್ಯ ಮತ್ತು ತಮ್ಮ ಮನೆಗೆ ಹಬ್ಬಕ್ಕೆ ಬಂದಿದ್ದ ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದ ತಮ್ಮ ಮಾವ ಶಿವರಾಜ್ ಬಿನ್ ವೆಂಕಟೇಶಪ್ಪ, ತಮ್ಮ ತಾಯಿ ಯಲ್ಲಮ್ಮ, ತನ್ನ ಅಕ್ಕ ವನಜಾಕ್ಷಿ ಮತ್ತು ತನ್ನ ಮಾವ ಮುನಿರೆಡ್ಡಿ ಬಿನ್ ಮುನಿವೆಂಕಟಪ್ಪ ರವರು ಜಗಳ ಬಿಡಿಸಲು ಬಂದಾಗ ರೆಡ್ಡಪ್ಪ, ಅನಿತಾ ಕಲ್ಲುಗಳಿಂದ ತಮ್ಮ ತಂದೆ ರಾಜಣ್ಣ ರವರಿಗೆ ಮೈ ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಮಣಿ ಎಂಬುವವನು ಕೈಗಳಿಂದ ಶಿವರಾಜ್ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಕೆಳಕ್ಕೆ ತಳ್ಳಿದ್ದು ಆಗ ಶಿವರಾಜ್ ರವರ ಎಡಕಣ್ಣಿಗೆ ಮೇಲ್ಬಾಗ ಮತ್ತು ಬಲ ಕಿರು ಬೆರಳಿಗೆ ಗಾಯವಾಗಿರುತ್ತದೆ. ಮಂಜುನಾಥ ದೊಣ್ಣೆಯಿಂದ ಮುನಿರೆಡ್ಡಿ ರವರ ಎಡ ಮೊಣಕಾಲಿನ ಮೇಲೆ ಹೊಡೆದು ಊತಗಾಯವನ್ನುಂಟು ಮಾಡಿರುತ್ತಾನೆ. ಉಳಿದವರು ತಮ್ಮ ಮನೆಯ ಬಾಗಿಲನ್ನು ಹೊಡೆದು ಕಿತ್ತು ಹಾಕಿ ನಷ್ಟಪಡಿಸಿ, ಕೈಗಳಿಂದ ತನ್ನ ತಾಯಿ ಯಲ್ಲಮ್ಮ ಮತ್ತು ತನ್ನ ಅಕ್ಕ ವನಜಾಕ್ಷಿ ರವರ ಮೈ ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ, ಇನ್ನೊಂದು ಅಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 103/2021 ಕಲಂ. 279,337 ಐಪಿಸಿ :-

     ದಿನಾಂಕ: 12/03/2021 ರಂದು ಸಂಜೆ 5.00 ಗಂಟೆಗೆ ಮುನಿರಾಜು ಬಿನ್ ಚಿಕ್ಕಪಾಪಣ್ಣ, 45 ವರ್ಷ, ಗೊಲ್ಲರು, ಟೆಂಪೋ ಟ್ರೈವರ್ ಕೆಲಸ, ಮಾದರಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣ ನಾರಾಯಣಸ್ವಾಮಿ ರವರಿಗೆ 1ನೇ ಸುಧಾಕರ್, 28 ವರ್ಷ ಮತ್ತು 2ನೇ ದರ್ಶನ್ ಎಂಬ ಹೆಸರಿನ ಇಬ್ಬರು ಗಂಡು ಮಕ್ಕಳಿರುತ್ತಾರೆ. ಸುಧಾಕರ್ ಕೈವಾರ ಕ್ರಾಸ್ ನಲ್ಲಿರುವ ಸೌತೆಕಾಯಿ ಫ್ಯಾಕ್ಟರಿಯಲ್ಲಿ ಟಾಟಾ ಸುಮೋ ವಾಹನಕ್ಕೆ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ನಿನ್ನೆಯ ದಿನ ದಿನಾಂಕ:11/03/2021 ರಂದು ರಾತ್ರಿ ಸುಮಾರು 9.00 ಗಂಟೆಯ ಸಮಯದಲ್ಲಿ ತಾನು ತನ್ನ ಸ್ವಂತ ಕೆಲಸದ ಸಲುವಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿದ್ದಾಗ, ಅದೇ ಸಮಯಕ್ಕೆ ತನ್ನ ತಂಗಿಯಾದ ಹಿರೇಪಾಳ್ಯ ಗ್ರಾಮದ ವಾಸಿ ಶಾಂತಮ್ಮ ಕೋಂ ದ್ಯಾವಪ್ಪ ರವರು ತನಗೆ ಪೋನ್ ಮಾಡಿ ಸುಧಾಕರನಿಗೆ ವೈಜಕೂರು ಗೇಟ್ ಬಳಿ ದ್ವಿಚಕ್ರವಾಹನವೊಂದು ಅಪಘಾತಪಡಿಸಿದ್ದು, ಈ ಅಪಘಾತದಿಂದ ಸುಧಾಕರನಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತಗಾಯಗಳಾಗಿವೆ ಈ ವಿಚಾರವನ್ನು ತಮ್ಮ ಗ್ರಾಮದ ವಾಸಿ ಗಂಗಪ್ಪ ಬಿನ್ ಸುಬ್ಬರಾಯಪ್ಪ ಎಂಬುವರು ತನಗೆ ಪೋನ್ ಮಾಡಿ ತಿಳಿಸಿದ್ದಾರೆ. ತಾನು ಮತ್ತು ತನ್ನ ಗಂಡ ಇಬ್ಬರು ಅಪಘಾತದ ಸ್ಥಳಕ್ಕೆ ಹೋಗುತ್ತಿದ್ದೇವೆ. ಬೇಗ ಬಾ ಎಂದು ವಿಚಾರ ತಿಳಿಸಿದರು. ನಂತರ ತಾನು ದ್ವಿಚಕ್ರವಾಹನದಲ್ಲಿ ಅದೇ ದಿನ ರಾತ್ರಿ ಚಿಂತಾಮಣಿಗೆ ಬರುವಷ್ಟರಲ್ಲಿ ಯನ್ನ ತಂಗಿ ಶಾಂತಮ್ಮ ಮತ್ತು ಆಕೆಯ ಗಂಡ ದ್ಯಾವಪ್ಪ ರವರು ಗಾಯಾಳು ಸುಧಾಕರನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಗಾಯಾಳು ಸುಧಾಕರನನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗಿಸಿದ್ದು, ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಆಸ್ಪತ್ರೆಯಲ್ಲಿದ್ದ ತನ್ನ ತಂಗಿ ಶಾಂತಮ್ಮ ಳನ್ನು ತಾನು ನಡೆದ ಘಟನೆಯ ಬಗ್ಗೆ ಕೇಳಲಾಗಿ ಇದೇ ದಿನ ರಾತ್ರಿ 8.30 ಗಂಟೆಯ ಸಮಯದಲ್ಲಿ ತಾನು, ತನ್ನ ಗಂಡ ದ್ಯಾವಪ್ಪ ತಮ್ಮ ಮನೆಯಲ್ಲಿದ್ದಾಗ, ತಮ್ಮ ಗ್ರಾಮದ ಗಂಗಪ್ಪ ಎಂಬುವರು ತನಗೆ ಪೋನ್ ಮಾಡಿ ಸುಧಾಕರನಿಗೆ ವೈಜಕೂರು ಗೇಟ್ ಬಳಿ ದ್ವಿಚಕ್ರವಾಹನವೊಂದು ಅಪಘಾತಪಡಿಸಿದೆ, ಸದರಿ ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರ ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಕತ್ತಲಲ್ಲಿ ಪರಾರಿಯಾಗಿದ್ದಾನೆ. ಸುಧಾಕರನಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತಗಾಯಗಳಾಗಿವೆ ಬೇಗ ಬನ್ನಿ ಎಂದು ತಿಳಿಸಿದ್ದು, ಕೂಡಲೇ ತಾನು, ತನ್ನ ಗಂಡ ದ್ವಿಚಕ್ರವಾಹನದಲ್ಲಿ ಅಪಘಾತದ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ತನ್ನ ಅಳಿಯ ಸುಧಾಕರನಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತಗಾಯಗಳಾಗಿರುವುದು ಕಂಡುಬಂದಿದ್ದು, ಪಕ್ಕದಲ್ಲಿ ನೋಂದಣಿ ಸಂಖ್ಯೆ:ಕೆಎ-51 ಕ್ಯೂ-7727 ನಂಬರಿನ ಒಂದು ದ್ವಿಚಕ್ರವಾಹನ ಇತ್ತು. ಅಲ್ಲಿದ್ದ ತಮ್ಮ ಗ್ರಾಮದ ವಾಸಿ ಗಂಗಪ್ಪ ಗಾಯಾಳುವನ್ನು ಉಪಚರಿಸುತ್ತಿದ್ದರು. ತಾನು ಗಂಗಪ್ಪನನ್ನು ನಡೆದ ಘಟನೆಯ ಬಗ್ಗೆ ವಿಚಾರ ಮಾಡಲಾಗಿ ಸುಧಾಕರ ವೈಜಕೂರು ಗೇಟ್ ನಲ್ಲಿ ಚಿಂತಾಮಣಿ ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಇಳಿದು ಹಿರೇಪಾಳ್ಯ ಗ್ರಾಮಕ್ಕೆ ಬರಲೆಂದು ರಸ್ತೆಯ ಎಡಬದಿಯಲ್ಲಿ ಪುಟ್ಪಾತ್ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದಾಗ, ಅದೇ ಸಮಯಕ್ಕೆ ಚಿಂತಾಮಣಿ ಕಡೆಯಿಂದ ಬಂದ ನೋಂದಣಿ ಸಂಖ್ಯೆ:ಕೆಎ-51 ಕ್ಯೂ-7727 ನಂಬರಿನ ದ್ವಿಚಕ್ರವಾಹನ ಸವಾರ ದ್ವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪುಟ್ಪಾತ್ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸುಧಾಕರನಿಗೆ ಹಿಂಬದಿಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಆಗ ಸುಧಾಕರ ರಸ್ತೆಯ ಮೇಲೆ ಬಿದ್ದು ಹೋಗಿದ್ದು, ಈ ಅಪಘಾತದಿಂದ ಸುಧಾಕರನಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತಗಾಯಗಳಾಗಿದ್ದು, ದ್ವಿಚಕ್ರವಾಹನ ಸವಾರ ಭಯಗೊಂಡು ಆತನ ದ್ವಿಚಕ್ರವಾಹನವನ್ನು ಸ್ಥಳದಲ್ಲಿ ನಿಲ್ಲಿಸಿ ಕತ್ತಲಲ್ಲಿ ಪರಾರಿಯಾಗಿದ್ದು, ನಂತರ ತಾನು ಈ ವಿಚಾರವನ್ನು ನಿಮಗೆ ಪೋನ್ ಮಾಡಿ ತಿಳಿಸಿರುವುದಾಗಿ ವಿಚಾರ ತಿಳಿಸಿರುತ್ತಾರೆಂದು ತಿಳಿಸಿದರು. ನಂತರ ತಾವುಗಳು ಗಾಯಾಳು ಸುಧಾಕರನನ್ನು ಯಾವುದೋ ಕಾರೊಂದರಲ್ಲಿ ಹಾಕಿಕೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ವಿಚಾರ ತಿಳಿಸಿದರು. ತಾವು ಇದುವರೆಗೂ ಆಸ್ಪತ್ರೆಯಲ್ಲಿ ಗಾಯಾಳುವಿನ ಆರೈಕೆಯನ್ನು ನೋಡಿಕೊಂಡಿದ್ದರಿಂದ ಪೊಲೀಸ್ ಠಾಣೆಗೆ ಕಂಪ್ಲೆಂಟ್ ನೀಡಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ನೋಂದಣಿ ಸಂಖ್ಯೆ:ಕೆಎ-51 ಕ್ಯೂ-7727 ನಂಬರಿನ ದ್ವಿಚಕ್ರವಾಹನ ಸವಾರನ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 35/2021 ಕಲಂ. 504 ಐಪಿಸಿ :-

     ದಿನಾಂಕ 11/03/2021 ರಂದು ಮದ್ಯಾಹ್ನ 3-30 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಪಿಸಿ 367 ರವರು  ಠಾಣಾ ಎನ್ ಸಿ.ಆರ್ ನಂ 35/2021 ರ ಅಸಂಜ್ಞಾ ಅಪರಾಧವನ್ನು ಘನ ನ್ಯಾಯಾಲಯದ ಅದೇಶದಂತೆ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ,  ದಿನಾಂಕ 07/03/2021 ರಂದು ರಾತ್ರಿ  ಸುಮಾರು 7-30 ಗಂಟೆ ಸಮಯದಲ್ಲಿ ಎ. ಎನ್ ಎಂ ಆರ್ ಯೂಟ್ಯೂಬ್ ಚಾನಲ್ ನಲ್ಲಿ ಜೈ ಬೀಮ್ ನಾಗರಾಜ್ ಬಿನ್ ಲಕ್ಷ್ಮೀ ನಾರಾಯಣಪ್ಪ, ವಾರ್ಡ್ ನಂ 21, ಜೆಜೆ ಕಾಲೋನಿ, ಚಿಂತಾಮಣಿ ನಗರ ಹಾಗೂ ಬ್ಲೂ ಬಾಯ್ಸ್  ಅಪ್ಪು, ವಾರ್ಡ್ ನಂ 09, ಮಾಳಪಲ್ಲಿ ಚಿಂತಾಮಣಿ ನಗರ ರವರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರದ ಜನಪ್ರೀಯ ಶಾಸಕರನ್ನು ರಾಜಕೀಯ ದುರುದ್ದೇಶದಿಂದ  ಬ್ರೋಕರ್ ಎಂದು ನಿಂದಿಸಿ ಅವರ ಹೆಸರಿಗೆ ಕಪ್ಪು ಚುಕ್ಕೆ  ಬರುವಂತೆ ಅವಾಚ್ಯ ಶಬ್ದಗಳಿಂದ ಮಾತನಾಡಿರುತ್ತಾರೆ.  ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಕಲಂ 504 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 36/2021 ಕಲಂ. 323,324,342,366,504,506 ರೆ/ವಿ 34 ಐಪಿಸಿ ಮತ್ತು ಸೆಕ್ಷನ್ 3(1)(r),3(1)(s) ಎಸ್.ಸಿ./ಎಸ್.ಟಿ. ಪಿಓಎ ಆಕ್ಟ್ :-

     ಪಿರ್ಯಾದುದಾರರಾದ  ವಿಜಯ ಸಿಂಹ ಬಿನ್ ಲೇಟ್ ವೆಂಕಟರವಣಪ್ಪ, 28 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಯರ್ರಯ್ಯಗಾರನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು  ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನಾನು ರಾಯಪಲ್ಲಿ ಗ್ರಾಮದ ವಾಸಿಯಾದ ವೀರಪ್ಪರೆಡ್ಡಿ ರವರ ಬಳಿ 60,000/- ರೂ ಹಣವನ್ನು ಬಡ್ಡಿಗೆ ಈಗ್ಗೆ 15 ತಿಂಗಳ ಹಿಂದೆ ಪಡೆದುಕೊಂಡು ಆತನಿಗೆ ನಾನು ತಿಂಗಳಿಗೆ 12000/- ರೂ ಗಳನ್ನು ಕಟ್ಟುತ್ತಾ ಬಂದಿದ್ದು  ವೀರಪ್ಪ ರೆಡ್ಡಿ ರವರು ನಮ್ಮ ಮನೆಯ ಬಳಿ ಬಂದು ನೀನು ಕಟ್ಟುತ್ತಿರುವ ಬಡ್ಡಿ ಹಣ ನನಗೆ ಸಾಕಾಗುತ್ತಿಲ್ಲವೆಂದು ನನ್ನ ಮೇಲೆ ದೌರ್ಜನ್ಯ ಮಾಡಿದ್ದು  ನಾನು ಬಡ್ಡಿ ಹಣ ಜಮಾ ಮಾಡಲು 60,000/- ರೂ ಬೆಲೆ ಬಾಳುವ ಹಸುವನ್ನು ಹಿಡಿದುಕೊಟ್ಟಿರುತ್ತೇನೆ, ನಂತರ ಆತನು ಪುನಃ ಬಂದು ಗಲಾಟೆ ಮಾಡಿದ್ದರಿಂದ  ನನ್ನ ಬಳಿ ಇದ್ದ ಕೆಎ- 40 ಬಿ -0298 ಟಾಟಾ ಏಸ್ ವಾಹನವನ್ನು ಬಡ್ಡಿ ಹಣಕ್ಕೆ ಜಮಾ ಮಾಡಿಕೊಳ್ಳುತ್ತೇನೆಂದು ನನ್ನ ಬಳಿ 29-30 ಪಾರಂ ಗಳಿಗೆ ಸಹಿ ಮಾಡಿಸಿಕೊಂಡು ಹೋಗಿರುತ್ತಾನೆ.  ಈಗ್ಗೆ ಒಂದು ವಾರದ ಹಿಂದೆ  ವೀರಪ್ಪರೆಡ್ಡಿ ರವರು ನಮ್ಮ ಮನೆಯ ಬಳಿ ಬಂದು ನೀನು ನನಗೆ ಹಣವನ್ನು ವಾಪಸ್ಸು ಕೊಡು ಇಲ್ಲವಾದಲ್ಲಿ ಬಡ್ಡಿ ಹಣ ಕಟ್ಟು ಎಂದು ಹೆಳಿದ್ದು ಅದಕ್ಕೆ ನಾನು ನಿನ್ನ ಹಣಕ್ಕೆ  ಜಮಾ ಮಾಡಿಕೊಳ್ಳಲು ಹಸು ಹಾಗೂ ಟಾಟಾ ಏಸ್ ನ್ನು ಕೊಟ್ಟಿರುತ್ತೇನೆ ಎಮದು ಹೇಳಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ದಿನಾಂಕ 11/03/2021 ರಂದು ಬೆಳಿಗ್ಗೆ 5-00 ಗಂಟೆಗೆ ನಮ್ಮ ಗ್ರಾಮದಿಂದ ಮೆಣಸಿನ ಕಾಯಿ ಹಾಗೂ ಕೊತ್ತಂಬ್ಬರಿ ಸೊಪ್ಪನ್ನು ಮಾರಾಟ ಮಾಡಲು ಚಿಂತಾಮಣಿ ಎ.ಪಿ.ಎಂ.ಸಿ ಮಾರುಕಟ್ಟೆಗೆ ಬಂದು ನಂತರ ಬೆಳಿಗ್ಗೆ 7-30 ಗಂಟೆಗೆ  2118 ರೂ ಹಣವನ್ನು  ಮಂಡಿಯಲ್ಲಿ ಪಡೆದು  ನನ್ನ ಬಳಿ ಪಂಪು ಹಾಗೂ ಮೋಟಾರನ್ನು ಖರೀಧಿ ಮಾಡಲು 40000/- ರೂ ಹಣ ಇಟ್ಟುಕೊಂಡಿದ್ದು ಚಿಂತಾಮಣಿ ನಗರದ ಚೇಳೂರು  ರಸ್ತೆಯ ಎ.ಪಿ.ಎಂ,.ಸಿ ಮಾರುಕಟ್ಟೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಬಂದಾಗ  ರಾಯಪಲ್ಲಿಯ ವೀರಪ್ಪರೆಡ್ಡಿರವರು ಇಬ್ಬರು ವ್ಯಕ್ತಿಗಳೊಂದಿಗೆ  ಕಾರಿನಲ್ಲಿ ಬಂದು  ನನ್ನನ್ನು ಕುರಿತು ಏ ಲೋಪರ್ ನನ್ನ ಮಗನೇ ನನಗೆ ನೀಡಬೇಕಾದ ಹಣವನ್ನು ಕೊಡು ಎಂದು ಗಲ್ಲಾಪಟ್ಟಿಯನ್ನು ಹಿಡಿದು ಕಾರಿನಲ್ಲಿ ನನ್ನನ್ನು ಅಪಹರಿಸಿಕೊಂಡು ಸಿದ್ದೆಪಲ್ಲಿ ಕ್ರಾಸ್ ಮುಖಾಂತರ ಬೊಮ್ಮೆಪಲ್ಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಒಂದು ಒಂಟಿ ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಆಗ ಅಲ್ಲಿಗೆ  ಬೊಮ್ಮೆಪಲ್ಲಿ ಗ್ರಾಮದ ಬಳ್ಳಾರಿ ಮಂಜು ರವರು ಬಂದು ಏಕಾ ಏಕಿ ನನ್ನನ್ನು “ಏ ಬೇವರ್ಸಿ ನನ್ನ ಮಗನೇ” ವೀರಪ್ಪರೆಡ್ಡಿಗೆ ಕೊಡಬೇಕಾದ ಹಣವನ್ನು ಏಕೆ ಕೊಡಲಿಲ್ಲವೆಂದು ಅಲ್ಲಿಯೇ ಇದ್ದ ದೊಣ್ಣೆಯಿಂದ ನನ್ನ ಎರಡು ಕೈಗಳ ಬೆರಳುಗಳ ಮೇಲೆ ಹೊಡೆದು ಬಲಕಾಲಿನ ಪಾದದ ಕೆಳಗೆ ಹೊಡೆದು ನೀನು ಅವರಿಗೆ ಹಣ ನೀಡದಿದ್ದರೆ ನಿನ್ನನ್ನು ಇಲ್ಲಿಯೇ ಹೂತು ಹಾಕುತ್ತೇನೆಂದು ಬೆದರಿಸಿರುತ್ತಾನೆ. ವೀರಪ್ಪರೆಡ್ಡಿ ಹಾಗೂ ಆತನ ಜೊತೆಯಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕೈ ಗಳಿಂದ ನನ್ನನ್ನು ಹೊಡೆದು ಮೂಗೇಟುಂಟು ಮಾಡಿರುತ್ತಾರೆ.  ನಂತರ ಅವರು ಯಾರು ಇಲ್ಲದ ಸಮಯದಲ್ಲಿ ನಾನು ತಪ್ಪಿಸಿಕೊಂಡು ಬಂದಿರುತ್ತೇನೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

6. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 143,147,323,354(B),448,504,506 ರೆ/ವಿ 149 ಐಪಿಸಿ :-

     ದಿನಾಂಕ 11-03-2021 ರಂದು ಹೆಚ್.ಸಿ 143 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಪದ್ಮ ಕೊಂ ಶ್ರೀನಿವಾಸ, 21 ವರ್ಷ, ಭೋವಿ ಜನಾಂಗ, ಗೃಹಿಣಿ, ರಾಮಲಿಂಗಾಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಬೆಳಿಗ್ಗೆ 11.30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದರ ಹೇಳಿಕೆಯ ಸಾರಾಂಶವೆನೆಂದರೆ ತನಗೆ ಈಗ್ಗೆ ಎರಡು ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕು ರಾಮಲಿಂಗಾಪುರದ ವಾಸಿ ಶ್ರೀನಿವಾಸರವರೊಂದಿಗೆ ವಿವಾಹವಾಗಿದ್ದು ತನ್ನ ಗಂಡನೊಂದಿಗೆ ರಾಮಲಿಂಗಾಪುರದಲ್ಲಿ ವಾಸವಾಗಿರುತ್ತೇನೆ. ತಮ್ಮ ಗ್ರಾಮದ ವಾಸಿ ತಿಮ್ಮಯ್ಯ ರವರ ಕುಟುಂಬದವರಿಗೂ ಹಾಗೂ ತನ್ನ ಭಾವನಾದ ವೆಂಕಟೇಶಪ್ಪರವರಿಗೂ ಈ ಹಿಂದೆ ಗಲಾಟೆಗಳಾಗಿದ್ದು ಅವರಿಗೆ ಹಳೆ ವೈಶಮ್ಯಗಳಿರುತ್ತವೆ. ದಿನಾಂಕ 10/03/2021 ರಂದು ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯದಲ್ಲಿ ತಾನು ತನ್ನ ಮನೆಯಲ್ಲಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ತಿಮ್ಮಯ್ಯ, ಅವರ ಮಗಳಾದ ಕಲಾವತಿ, ತಿಮ್ಮಯ್ಯರವರ ಹೆಂಡತಿ ವೆಂಕಟಮ್ಮ, ತಿಮ್ಮಯ್ಯರವರ ಮಗನಾದ ಗಣೇಶ ಹಾಗೂ ಬಾಬು ಬಿನ್ ವೆಂಕಟೇಶಪ್ಪ, ಶ್ರೀನಾಥ ಬಿನ್ ವೆಂಕಟೇಶಪ್ಪ ರವರು ತಮ್ಮ ಮನೆಯ ಬಳಿ ಬಂದು ತಮ್ಮನ್ನು ಅವಾಚ್ಯವಾಗಿ ಬೈಯ್ಯುತ್ತಿದ್ದು ತಾನು ತಾನು ಮನೆಯ ಒಳಗಿನಿಂದ ಬಂದು ತನ್ನ ಗಂಡ ಮನೆಯಲ್ಲಿರುವುದಿಲ್ಲ ಏಕೆ ವಿನಾ ಕಾರಣ ತಮ್ಮನ್ನು ಬೈಯ್ಯುತ್ತಿರಾ ಎಂತ ಕೇಳಿದ್ದಕ್ಕೆ ನೀವು ನಿಮ್ಮ ಭಾವನಾದ ವೆಂಕಟೇಶಪ್ಪರವರಿಗೆ ತನ್ನ ಮೇಲೆ ಗಲಾಟೆ ಮಾಡಲು ಸಪೋರ್ಟ ಮಾಡುತ್ತಿರಾ ಈ ದಿನ ತನಗೂ ಹಾಗೂ ತನ್ನ ಗಂಡನಿಗೆ ಒಂದು ಗತಿ ಕಾಣಿಸುತ್ತೇವೆಂತ ತಿಮ್ಮಯ್ಯ ಹಾಗೂ ವೆಂಕಟಮ್ಮ ತನ್ನನ್ನು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಗಣೇಶರವರು ತನ್ನ ಬಟ್ಟೆ ಹಿಡಿದು ಎಳೆದಾಡಿ ಕಾಲಿನಿಂದ ತನ್ನ ಹೊಟ್ಟಿಗೆ ಒದ್ದಿರುತ್ತಾನೆ. ಕಲಾವತಿ ರವರು ತನ್ನನ್ನು ಕೈಗಳಿಂದ ಹೊಡೆದು ಎಳೆದಾಡಿ ತನ್ನ ಕತ್ತಿನಲ್ಲಿದ್ದ ಕರಿಮಣಿ ಸರ ಕಿತ್ತು ಹಾಕಿರುತ್ತಾಳೆ. ನಂತರ ಬಾಬು, ವೆಂಕಟೇಶಪ್ಪ ರವರು ತನ್ನ ಗಂಡನನ್ನು ಹುಡುಕಾಡಿ ತಮ್ಮ ಮನೆಯೊಳಗೆ ನುಗ್ಗಿ ನಿನ್ನ ಗಂಡನು ಸಿಕ್ಕಿದರೆ ಆತನಿಗೆ ಒಂದು ಗತಿ ಕಾಣಿಸುತ್ತೇವೆಂತ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಪಕ್ಕದ ಮನೆಯ ವಾಸಿಗಳಾದ ದೇವರಾಜಪ್ಪ ಬಿನ್ ರಾಮಪ್ಪ ರವರು ಬಂದು ಅವರಿಂದ ತನ್ನನ್ನು ಬಿಡಿಸಿ ಅವರಿಗೆ ಸಮಾಧಾನ ಮಾಡಿ ಕಳುಹಿಸಿಕೊಟ್ಟಿರುತ್ತಾರೆ. ನಂತರ ತನಗೆ ಮೈ ಕೈ ಹಾಗೂ ಹೊಟ್ಟೆ ನೋವು ಜಾಸ್ತಿ ಆಗಿದ್ದರಿಂದ 108 ಆಂಬ್ಯೂಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 34/2021 ಕಲಂ. 306,506 ರೆ/ವಿ 34 ಐಪಿಸಿ ಸೆಕ್ಷನ್ 3(2)(va) ಎಸ್.ಸಿ./ಎಸ್.ಟಿ. ಪಿಓಎ ಆಕ್ಟ್ :-

     ದಿನಾಂಕ 11-03-2021 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾದಿದಾರರಾದ ಮುನಿರಾಜು ಬಿನ್ ಲೇಟ್ ನರಸಿಂಹಪ್ಪ, 33 ವರ್ಷ, ಆದಿ ದ್ರಾವಿಡ ಜನಾಂಗ, ಸೋಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತನ್ನ ತಮ್ಮನಾದ ಮುರಳಿರವರು ಸೋಮನಹಳ್ಳಿ ಗ್ರಾಮದಲ್ಲಿ ವಾಸವಿದ್ದು ಎಂ,ಕಾಂ, ಬಿ.ಎಡ್ ವಿದ್ಯಾಭ್ಯಾಸ ಮಾಡಿ ಕ್ರೇಂಬ್ರಿಡ್ಜ್ ವಿಶ್ವವಿದ್ಯಾಲಯ ನಾಗವಾರ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈಗಿರುವಾಗ ಇದೇ ತಾಲ್ಲೂಕು ಲಘುನಾಯಕನಹಳ್ಳಿ ಗ್ರಾಮದ ವಾಸಿಯಾದ ಗೊಲ್ಲರ ಜಾತಿಗೆ ಸೇರಿದ ಚಿಕ್ಕನರಸಿಂಹಪ್ಪ ರವರ ಮಗಳಾದ ಚೇತನ. ಸಿ ಬಿನ್ ಚಿಕ್ಕನರಸಿಂಹಪ್ಪರವರನ್ನು ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರವಾಗಿ ಪ್ರೀತಿ ಮಾಡಿಕೊಂಡಿದ್ದು ಸರಿ ಅಷ್ಟೆ. ಈಗಿರುವಾಗ ತನ್ನ ತಮ್ಮ ಮತ್ತು ಚೇತನ ಸಿ ರವರು ಸುಮಾರು ಬಾರಿ ಮದುವೆ ಮಾಡಿಕೊಳ್ಳಲು ಪ್ರಯತ್ನ ಮಾಡಿರುತ್ತಾರೆ. ಆದರೂ ಅವರ ಹುಡುಗಿಯವರ ಒತ್ತಡ ಮತ್ತು ಪ್ರಾಣಬೆದರಿಕೆಗಳಿಂದ ನೋಂದು ಅವರು ಸುಮಾರು ಬಾರಿ ಮದುವೆ ಮಾಡಿಕೊಳ್ಳುವುದು ತಪ್ಪಿಹೋಗಿರುತ್ತದೆ. ಈ ಹಿಂದೆ ಸುಮಾರು ಬಾರಿ ಹುಡುಗಿಯವರ ತಂದೆ ಮತ್ತು ತಾಯಿಯವರು ತಮ್ಮ ಮನೆಯ ಹತ್ತಿರ ಬಂದು ನೀನು ಕಮ್ಮಿಜಾತಿ ನನ್ನ ಮಗನು ನಮ್ಮ ಮಗಳ ತಂಟೆಗೆ ಏನಾದರೂ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ದಿನಾಂಕ 10/03/2021 ಬುಧವಾರದಂದು ರಾತ್ರಿ 10.00 ಗಂಟೆ ಸಮಯದಲ್ಲಿ ಇದ್ದವನು ತಮಗೆ ಬೆಳಗಿನ ಜಾವವಾದರೂ ಕಾಣಿಸಿರುವುದಿಲ್ಲ. ಅಲ್ಲಿ ಇಲ್ಲಿ ಹುಡುಕಿದರು ಸಿಕ್ಕಿರುವುದಿಲ್ಲ. ಆ ಮೇಲೆ ಬೆಳಿಗ್ಗೆ ಸುಮಾರು 6.00 ಗಂಟೆ ಸಮಯದಲ್ಲಿ ಸೋಮನಹಳ್ಳಿಯಿಂದ 11 ನೇ ಕ್ರಾಸ್ ಮೈಲಿ ಹೋಗುವ ರಸ್ತೆಯ ಎಡಭಾಗದಲ್ಲಿ ಹುಣಸೇಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿರುತ್ತಾನೆ. ಈ ವಿಚಾರವನ್ನು ಸೋಮನಹಳ್ಳಿ ಗ್ರಾಮದ ಜಯರಾಮಪ್ಪನವರ ಮಗನಾದ ರವಿಚಂದ್ರರವರು ನೋಡಿ ತನಗೆ ಮೊಬೈಲ್ ಮೂಲಕ ಕರೆಮಾಡಿ ತಿಳಿಸಿರುತ್ತಾನೆ.  ಆದ್ದರಿಂದ ಈ ಹಿಂದೆ ಲಘುನಾಯಕನಹಳ್ಳಿ ಗ್ರಾಮದ ವಾಸಿ ಚಿಕ್ಕನರಸಿಂಹಪ್ಪ, ಹುಡುಗಿಯ ತಾಯಿಯಾದ ಗಾಯಿತ್ರಮ್ಮ ಕೊಂ ಚಿಕ್ಕನರಸಿಂಹಪ್ಪ ರವರಿಂದ ತಮ್ಮ ಮನೆಯ ಹತ್ತಿರ ಗಲಾಟೆ ಮಾಡಿ ಹೋಗಿದ್ದು ಮತ್ತು ತನ್ನ ತಮ್ಮನಾದ ಮುರಳಿರವರು ಸದರಿ ಚಿಕ್ಕನರಸಿಂಹಪ್ಪ ಮತ್ತು ಗಾಯಿತ್ರಮ್ಮರವರ ಮೇಲೆ ಡೆತ್ ನೋಟ್ ಸಹ ಬರೆದಿಟ್ಟಿರುತ್ತಾನೆ. ಆದ್ದರಿಂದ ತಮಗೆ ಇವರ ಮೇಲೆ ಅನುಮಾನವಿರುತ್ತದೆ. ಆದ್ದರಿಂದ ತಾವುಗಳು ದಯಮಾಡಿ ನೊಂದ ದಲಿತ ಯುವಕನಿಗೆ ನ್ಯಾಯ ಕೊಡಿಸಿಕೊಟ್ಟು ಪ್ರಚೋದನೆ ಮಾಡಿರುವವರ ಮೇಲೆ ಹಾಗೂ ಡೆತ್ ನೋಟ್ ಅಲ್ಲಿ ತನ್ನ ತಮ್ಮ ನನ್ನ ಸಾವಿಗೆ ಡೆತ್ ನೋಟ್ ನಮೂದಿಸಿರುವ ವ್ಯಕ್ತಗಳೇ ಕಾರಣವೆಂದು ತಿಳಿಸಿರುತ್ತಾನೆ. ಆದ್ದರಿಂದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಿಕೊಡಬೇಕೆಂದು ನೀಡಿದ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2021 ಕಲಂ. 279,337 ಐಪಿಸಿ :-

     ದಿನಾಂಕ 11-03-2021 ರಂದು 19-00 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋವನ್ನು ಪಡೆದುಕೊಂಡು  19-15 ಗಂಟೆಗೆ ಗೌರಿಬಿದನೂರು ಸರ್ಕಾರಿ  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಜಯಣ್ಣ ಬಿನ್ ಗಂಗಪ್ಪ, 43 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ ಕಾಚಮಾಚೇನಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರ ಹೇಳಿಕೆಯನ್ನು 19-15 ಗಂಟೆಯಿಂದ 19-45 ಗಂಟೆಯವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ತಾನು ಗೌರಿಬಿದನೂರು ತಾಲ್ಲೂಕು ಶುಗರ್ ಫ್ಯಾಕ್ಟರಿಯ ಹಿಂಭಾಗದಲ್ಲಿರುವ  ಸೀಡ್ ವರ್ಕ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಫಾರಂ ನಲ್ಲಿ  3 ತಿಂಗಳಿನಿಂದ ಕೆಲಸವನ್ನು ಮಾಡುತ್ತಿರುತ್ತೇನೆ. ದಿನಾಂಕ 11-03-2021 ರಂದು ಬೆಳಿಗ್ಗೆ 08-00 ಗಂಟೆಗೆ ಕೆಲಸಕ್ಕೆ ಬಂದಿದ್ದು ಸಂಜೆ 05-00 ಗಂಟೆಗೆ ಕೆಲಸವನ್ನು ಮುಗಿಸಿಕೊಂಡು ತನ್ನ ಬಾಬತ್ತು  ಕೆ.ಎ.-40-ಇ.ಡಿ- 7848 ಟಿ,ವಿ,ಎಸ್, ಎಕ್ಸ್.ಎಲ್. ಹೆವಿ ಡ್ಯೂಟಿ ದ್ವಿಚಕ್ರವಾಹನದಲ್ಲಿ  ತನ್ನ ಗ್ರಾಮಕ್ಕೆ  ಹೋಗಲು  ಬೆಂಗಳೂರು- ಹಿಂದೂಪುರ ರಸ್ತೆಯಲ್ಲಿ ಬಂಬೂ ಡಾಬಾ ಮುಂಭಾಗದಲ್ಲಿರುವ  ವೇದಲವೇಣಿ ಗ್ರಾಮದ ರಸ್ತೆಗೆ  ತಿರುಗಿಸಿಕೊಳ್ಳುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಯಾವುದೋ ಒಂದು ನೊಂದಣಿ ಸಂಖ್ಯೆಯಿಲ್ಲದ ಹೊಂಡಾ ಡಿಯೋ  ದ್ವಿಚಕ್ರವಾಹನ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ್ದು ನಾನು ಕೆಳಗೆ ಬಿದ್ದು ನನಗೆ ಹಣೆಯ ಮೇಲೆ, ಎಡಮೊಣಕಾಲಿಗೆ, ರಕ್ತಗಾಯವಾಗಿರುತ್ತೆ, ಬಲಗೈಯಲ್ಲಿ ಮುಂಗೈ ಬಳಿ, ಬಲಮೊಣಕಾಲಿನ ಮೇಲೆ ತರಚಿದ ರಕ್ತಗಾಯವಾಗಿದ್ದು, ಎಡಗಣ್ಣಿನ ಬಳಿ, ಮೂಗಿನ ಕೆಳಗೆ ರಕ್ತಗಾಯವಾಗಿರುತ್ತೆ. ತನ್ನನ್ನು ಕೆಂಕೆರೆ ಗ್ರಾಮದ ವಾಸಿ ಸತೀಶ ಬಿನ್ ಚಿಕ್ಕನರಸಿಂಹಪ್ಪರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ನನಗೆ ಅಪಘಾತಪಡಿಸಿದ ನೊಂದಣಿ ಸಂಖ್ಯೆಯಿಲ್ಲದ ಹೊಂಡಾ ಡಿಯೋ  ದ್ವಿಚಕ್ರವಾಹನ ಸವಾರ ಮತ್ತು ದ್ವಿಚಕ್ರವಾಹನದ ಮೇಲೆ ಕಾನೂನು ಕ್ರಮ ಕೈಗೊಳ್ಲಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು 20-00 ಗಂಟೆಗೆ ಠಾಣೆಗೆ ವಾಪಸ್ಸಾಗಿ  ಪ್ರಕರಣ ದಾಖಲಿಸಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2021 ಕಲಂ. 323,324,341,504,506 ರೆ/ವಿ 34 ಐಪಿಸಿ :-

     ದಿನಾಂಕ:11-03-2021 ರಂದು ಮದ್ಯಾಹ್ನ 3-45 ಗಂಟೆಯಲ್ಲಿ  ಶಿಡ್ಲಘಟ್ಟ  ಸರ್ಕಾರಿ  ಆಸ್ಪತ್ರೆಯಿಂದ ಬಂದ ಮೇಮೊವನ್ನು ಪಡೆದುಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮನೋಹರ ಬಿನ್ ಮುನಿರಾಮಪ್ಪ, ಸುಮಾರು 29 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಕೆಂಪನಹಳ್ಳಿ  ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ತಾನು ಟ್ರಾಕ್ಟರ್ ಚಾಲಕ ವೃತ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ಈಗ್ಗೆ ಸುಮಾರು 2 ವರ್ಷಗಳ ಹಿಂದೆ ತನಗೆ ಪರಿಚಯವಿರುವ ವರದನಾಯಕನಹಳ್ಳಿ ಗ್ರಾಮದ ಮುನಿರೆಡ್ಡಿ ಬಿನ್ ಕಾಕಪ್ಪನವರ ಮುನಿಶಾಮಪ್ಪ ರವರ ಬಳಿ ಕೈಬದಲಿಗೆ ಹಣವನ್ನು ತೆಗೆದುಕೊಂಡಿದ್ದು ಈ ವಿಚಾರದಲ್ಲಿ ತನಗೆ ಮತ್ತು ಮುನಿರೆಡ್ಡಿ ರವರಿಗೆ ಹಣಕಾಸಿನ ವಿಚಾರದಲ್ಲಿ ವಿವಾದಗಳಿರುತ್ತೆ. ಹೀಗಿದ್ದು ಈ ದಿನ ದಿನಾಂಕ:11-03-2021 ರಂದು ಮದ್ಯಾಹ್ನ ಸುಮಾರು 2-30 ಗಂಟೆಯಲ್ಲಿ ತಾನು ಮತ್ತು ತನ್ನ ತಮ್ಮನಾದ ಮಣಿಕುಮಾರ್ ರವರೊಂದಿಗೆ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮದಿಂದ ಶಿಡ್ಲಘಟ್ಟಕ್ಕೆ ಬಂದು ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗಲು ಹೋಗುತ್ತಿದ್ದಾಗ ಚೀಮನಹಳ್ಳಿ ಗೇಟ್ ನಲ್ಲಿ ವರದನಾಯಕನಹಳ್ಳಿ ಗ್ರಾಮದ ಮುನಿರೆಡ್ಡಿ ಬಿನ್ ಮುನಿಶಾಮಪ್ಪ, ಮುರಳಿ ಮತ್ತು ಪಿಳ್ಳ ಎಂಬುವವರು ತಮ್ಮ ದ್ವಿಚಕ್ರವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದ್ದು ಆಗ ತನ್ನ ತಮ್ಮ ಮಣಿಕುಮಾರ್ ದ್ವಿಚಕ್ರವಾಹನವನ್ನು ನಿಲ್ಲಿಸದೇ ಮುಂದಕ್ಕೆ ಹೋದರು ಸಹ ಬಿಡದೇ ಹಿಂಬಾಲಿಸಿಕೊಂಡು ಬಂದು ಅಬ್ಲೂಡು ಗ್ರಾಮದ ಪಂಚರ್ ಶಾಪ್ ಮುಂಭಾಗ ರಸ್ತೆಯಲ್ಲಿ ತಮ್ಮ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ಮುನಿರೆಡ್ಡಿ ತನ್ನ ಬಳಿ ಇದ್ದ ಚಾಕುವಿನಿಂದ ತನ್ನ ಎಡಭಾಗದ ತುಟಿಯ ಬಳಿ, ಎಡಕಣ್ಣಿನ ಮೇಲ್ಭಾಗ ಹಾಗೂ ನಾಲಿಗೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು, ಮುರಳಿ ಯಾವುದೋ ಒಂದು ಕಲ್ಲಿನಲ್ಲಿ ತನ್ನ ಬಲಕಾಲಿಗೆ ಹೊಡೆದು ಗಾಯಗೊಳಿಸಿದ್ದು, ಆಗ ಮೇಲ್ಕಂಡ ಮೂರು ಜನರು ತನಗೆ ಲೋಫರ್ ನನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನದು ಜಾಸ್ತಿಆಯಿತು ಇನ್ನುಮುಂದೆ ತಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ಆಗ ಅಲ್ಲಿಯೇ ಇದ್ದ ತನ್ನ ತಮ್ಮ ಮಣಿಕುಮಾರ್ ಹಾಗೂ ಅಲ್ಲಿದ್ದ ಇತರರು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದ ತನ್ನನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ, ವಿನಾಕಾರಣ ತನ್ನ ಮೇಲೆ ಗಲಾಟೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಗಾಯಾಳು ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ 59/2021 ಕಲಂ 323.324,341,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 24/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985 :-

     ದಿನಾಂಕ:12/03/2021 ರಂದು ಬೆಳಿಗ್ಗೆ 10.10 ಗಂಟೆಗೆ ಪಿ.ಸಿ.126 ವೆಂಕಟೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನಂದರೆ, ಈ ದಿನ ದಿನಾಂಕ.12.03.2021 ರಂದು 7.30 ಗಂಟೆಗೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಸಿಬ್ಬಂದಿಯವರ ಹಾಜರಾತಿ ಪಡೆದು ಠಾಣೆಯ ಸಿ.ಪಿ.ಸಿ -126 ವೆಂಕಟೇಶ್ ಆದ ನನಗೆ ನಗರ ಗಸ್ತು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದು, ಅದರಂತೆ ನಾನು ಶಿಡ್ಲಘಟ್ಟ ನಗರದಲ್ಲಿ ಟಿ.ಬಿ.ರಸ್ತೆ, ಕೋಟೆ ಸರ್ಕಲ್, ಆಶೋಕರಸ್ತೆ, ಗಾಂದೀನಗರ, ರಾಜೀವ್ ಗಾಂಧೀಲೇಔಟ್ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 9-30 ಗಂಟೆಯ ಸಮಯದಲ್ಲಿ ತೈಬಾನಗರ ಕಡೆ ಗಸ್ತು ಮಾಡುತ್ತಿದ್ದ್ದಾಗ ಯಾರೋ ಬಾತ್ಮಿದಾರರಿಂದ ತೈಬಾನಗರದ ವಾಸಿ ಸಲೀಂವುದ್ದೀನ್ @  ಸಲೀಂ ಬಿನ್ ಸಲಾವುದ್ದೀನ್, 37 ವರ್ಷ, ಮುಸ್ಲಿಂ ಜನಾಂಗ, ರೇಷ್ಮೇ ಕೆಲಸ, ತೈಬಾನಗರ, ಶಿಡ್ಲಘಟ್ಟ ಟೌನ್ ಇವರು ಆಗಾಗ ಆತನ ವಾಸದ ಮನೆಯ ಮುಂದೆ ಖಾಲಿ ಮೈದಾನದಲ್ಲಿ ಹೊಸದಾಗಿ ಕಟ್ಟುತ್ತಿರುವ ಕಟ್ಟಡಗಳ ಬಳಿ ಯಾರೋ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 12-03-2021 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080