ಅಭಿಪ್ರಾಯ / ಸಲಹೆಗಳು

1.ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ 12/02/2021 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದಾರರಾದ ಯರಕಲ ನರಸಿಂಹ ಬಿನ್ ಯರಕಲ ರಾಮುಡು, 24 ವರ್ಷ, ಯಲಕಲ ಜನಾಂಗ, ಚಾಲಕ ವೃತ್ತಿ, ವಾಸ ದುಪ್ಪಲ್ಲಿ ಗ್ರಾಮ, ಮದನಪುರಂ ಮಂಡಲಂ, ಒಣಪರ್ತಿ ತಾಲ್ಲೂಕು ಮತ್ತು ಜಿಲ್ಲೆ, ತೆಲಂಗಾಣ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೆನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಚಾಲಕ ವೃತ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ನಾನು ಈಗ್ಗೆ 3 ತಿಂಗಳಿಂದ ಮೋಗಿಲನ್ನ ರವರ ವಾಹನ ಸಂಖ್ಯೆ ಟಿ.ಎಸ್.08-ಯು.ಎಫ್-1443 ನೊಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಮಿನಿ ಟ್ರಕ್ ವಾಹನಕ್ಕೆ  ಚಾಲಕನಾಗಿ ಕೆಲಸಕ್ಕೆ ಹೋಗುತ್ತಿರುತ್ತೇನೆ. ವಾಹನದ ಮಾಲೀಕರಾದ ಮೋಗಿಲನ್ನ ರವರಿಗೆ ಪರಿಚಯವಿರುವ ಆಲಿ ಎಂಬುವವರಿಗೆ ಕೇರಳಕ್ಕೆ ಬಾಡಿಗೆ ಹೋಗಲು, ಹುಸ್ಮಾನಿಯಾ ಬಿಸ್ಕತ್ ಗಳನ್ನು ಲೋಡ್ ಮಾಡಿಕೊಂಡು ದಿನಾಂಕ 10/02/2021 ರಂದು ಬೆಳಿಗ್ಗೆ 10-00 ಗಂಟೆಗೆ ಹೈದ್ರಾಬಾದ್ ನಿಂದ ಸದರಿ ವಾಹನದಲ್ಲಿ ಅಲಿ, ಮೋಗಿಲನ್ನ ಮತ್ತು ನಾನು ಚಾಲಕನಾಗಿ ಹೊರಟು ದಿನಾಂಕ 11/02/2021 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಕೇರಳದಲ್ಲಿ ಬಿಸ್ಕತ್ಗಳನ್ನು ಆನ್ ಲೋಡ್ ಮಾಡಿರುತ್ತೇನೆ. ನಂತರ ಅದೇ ದಿನ ರಾತ್ರಿ ಬೆಂಗಳೂರಿಗೆ ಬಂದು ರಾತ್ರಿ 9-00 ಗಂಟೆಗೆ ಕುಂಬಾಳಗೋಡಿನಲ್ಲಿ ಮೋಲ್ಡಗಳನ್ನು ಲೋಡ್ ಮಾಡಿಕೊಂಡು, ಯಲಹಂಕಕ್ಕೆ ಬಂದು ಊಟ ಮಾಡಿಕೊಂಡು ಹೈದ್ರಾಬಾದ್ ಕಡೆಗೆ ಹೊರಟಿರುತ್ತೇವೆ. ನಂತರ ದಿನಾಂಕ 12/02/2021 ರಂದು ಬೆಳಗಿನ ಜಾವ  ಸುಮಾರು 1-00 ಗಂಟೆಯಲ್ಲಿ ಬೆಂಗಳೂರು- ಹೈದ್ರಾಬಾದ್ ಎನ್ ಹೆಚ್-44 ರಸ್ತೆಯಲ್ಲಿ ಬರುವಾಗ ಜಯಂತಿ ಗ್ರಾಮದ ಬಳಿ ವಾಹನವನ್ನು ನಿಲ್ಲಿಸಿ ನಾನು ಟೀ ಕುಡಿಯಲು ಹೋದಾಗ, ಅಲಿಯನ್ನು ಟೀ ಕುಡಿಯಲು ಎಬ್ಬಿಸಿದಾಗ ನನಗೆ ಬೇಡ ಎಂತ ತಿಳಿಸಿದನು. ನಾನು ಟೀ ಕುಡಿದು ಬಾತ್ ರೂಂ ಗೆ ಹೋಗಿ ವಾಪಸ್ ಬಂದು ವಾಹನವನ್ನು ಚಾಲನೆ ಮಾಡಿಕೊಂಡು ಹೈವೆಯಲ್ಲಿ ಕಿಯಾ ಫ್ಯಾಕ್ಟರಿ  ಬಳಿ ಬಂದಾಗ ಟೀ ಕುಡಿಯಲು ವಾಹನವನ್ನು ನಿಲ್ಲಿಸಿದ್ದು ಮೂಗಿಲನ್ನ ಅಲಿಗೆ ಟೀ ಕುಡಿಯಲು ಎಬ್ಬಿಸು ಎಂದು ಹೇಳಿದಾಗ, ಹಿಂದೆ ಬಾಡಿಯಲ್ಲಿ ಮಲಗಿದ್ದ ಅಲಿಯನ್ನು ಎಬ್ಬಿಸಲು ಹೋದಾಗ ಆತನು ಅಲ್ಲಿ ಇಲ್ಲದೇ ಇದ್ದು ನಾವಿಬ್ಬರು ಹೈವೆಯಲ್ಲಿ ಅಲಿಯನ್ನು ಹುಡುಕಿಕೊಂಡು ಬಂದಾಗ  ಬೆಳಗಿನ ಜಾವ ಹೈವೆ ಟೋಲ್ ಪ್ಲಾಜಾ ಬಳಿ ಹೈವೆ ಆಂಬ್ಯೂಲೆನ್ಸ್ ಚಾಲಕ ಬಂದು ಈಗಲೇ ನಾನು ಒಂದು ಡೆಡ್ ಬಾಡಿಯನ್ನು ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆ ಸಾಗಿಸಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ನಾನು ಮತ್ತು ಓನರ್ ಮೋಗಿಲನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಲಿ ರವರ ಮೃತದೇಹವು ಇದ್ದು,  ತಲೆಗೆ ತೀವ್ರತರನಾದ ಗಾಯವಾಗಿರುತ್ತದೆ. ವಿಚಾರ ಮಾಡಿ ತಿಳಿಯಲಾಗಿ ಬೆಂಗಳೂರು-ಹೈದ್ರಾಬಾದ್ ಹೈವೆಯಲ್ಲಿ ಸಾಲುಮರದ ತಿಮ್ಮಕ್ಕ ಪಾರ್ಕ ಬಳಿ ರಸ್ತೆಯಲ್ಲಿ ಅಲಿ ನಡೆದುಕೊಂಡು ಬರುವಾಗ ಯಾವುದೋ ವಾಹನವು ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ಅಲಿಯ ತಲೆಗೆ ತೀವ್ರತರನಾದ ರಕ್ತ ಗಾಯವಾಗಿ ಮೃತಪಟ್ಟಿರುತ್ತಾನೆ. ಆದ್ದರಿಂದ ಅಲಿ ಹೈದ್ರಾಬಾದ್ ಕಡೆಗೆ ಬರಲು ಬೆಂಗಳೂರು-ಹೈದ್ರಾಬಾದ್ ಹೈವೆನಲ್ಲಿ ನಡೆದುಕೊಂಡು ಬರುವಾಗ ಯಾವುದೋ ವಾಹನ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ಅತನ ತಲೆಗೆ ತೀವ್ರತರನಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಮೃತದೇಹವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿತ್ತದೆ ಅಲಿಗೆ ಅಪಘಾತವನ್ನುಂಟು ಮಾಡಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

2.ಚೇಳೂರು ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 435  ಐ.ಪಿ.ಸಿ:-

     ದಿನಾಂಕ:11/02/2021 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರಾದ ವೆಂಕಟರಮಣರೆಡ್ಡಿ ಬಿನ್ ವೆಂಕಟಸ್ವಾಮಿರೆಡ್ಡಿ , ರಾಮಸ್ವಾಮಿಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ  ನಾನು ರಾಮಸ್ವಾಮಿಪಲ್ಲಿ ಗ್ರಾಮದ ನಿವಾಸಿಯಾಗಿದ್ದು  ವ್ಯವಸಾಯ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು  ನನ್ನ ಮನೆಯ ಪಕ್ಕದಲ್ಲಿ ನ ನಮ್ಮ  ಬಾಬತ್ತು ಸರ್ವೇ ನಂ 198 ರಲ್ಲಿ ಸುಮಾರು 20 ಟ್ರಾಕ್ಟರ್ ಲೋಡ್ ನಷ್ಟು  ಹುಲ್ಲಿನ  ಬಣವೆಯನ್ನು ಹಾಕಿದ್ದು ಇದು 2 ಲಕ್ಷ ಬೆಲೆಬಾಳುವಂತದ್ದಾಗಿದ್ದು, ಸದರಿ ಹುಲ್ಲಿನ ಬಣವೆಯನ್ನು ದಿನಾಂಕ:09/02/2021 ರ ಮಂಗಳವಾರ ರಾತ್ರಿ  ಸುಮಾರು 8:30 ಗಂಟೆಯ ಸಮಯದಲ್ಲಿ ದುಷ್ಕರ್ಮಿಗಳು ದುರುದ್ದೇಶದಿಂದ  ಬೆಂಕಿ ಹಚ್ಚಿ ಬಣವೆಯನ್ನು ನಾಷಪಡಿಸಿರುತ್ತಾರೆ. ಇದರಿಂದ ಮುಂದಿನ ಜೀವನ ಸಾಗಿಸುವುದು ಕಷ್ಟಕರವಾಗಿದ್ದು, ತಾವುಗಳು ಬೆಂಕಿಹಚ್ಚಿದ  ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರಿಗೆ ತಕ್ಕ ಶಿಕ್ಷೆ ವಿಧಿಸಿ  ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು  ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:10/2021 ಕಲಂ 435 ಐಪಿಸಿ ರೀತ್ಯ ಪ್ರಕರಣ ದಾಖಲಿರುತ್ತೇನೆ.

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ: 12/02/2021 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ನರಸಿಂಹಮೂರ್ತಿ ಬಿನ್ ದ್ಯಾವಪ್ಪ, 38 ವರ್ಷ, ಎ.ಕೆ ಜನಾಂಗ, ಕೂಲಿಕೆಲಸ, ನಾಯನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನೆನ್ನೆ ದಿನ ದಿನಾಂಕ: 11/02/2021 ರಂದು ಸಾಯಂಕಾಲ ನಮ್ಮ ತಂದೆ ದ್ಯಾವಪ್ಪ ಬಿನ್ ಲೇಟ್ ಮಂಡೇಲಪ್ಪ, 60 ವರ್ಷ ರವರು ಜಮೀನಿನ ಬಳಿ ಹೋಗಿದ್ದರು. ನಾನು ಸಂಜೆ ಹಾಲು ಕರೆದು ನಮ್ಮ ಗ್ರಾಮದ ಡೈರಿಗೆ ಹಾಲು ಹಾಕಿ ವಾಪಸ್ಸು ಮನೆಗೆ ನಡೆದುಕೊಂಡು ಹೋಗುವಾಗ ನನ್ನ ಮುಂದೆ ನಮ್ಮ ತಂದೆ ನಾಯನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರ-ಶಿಢ್ಲಘಟ್ಟ NH-234 ಟಾರು ರಸ್ತೆಯ ಎಡಭಾಗದಲ್ಲಿ ನಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನಮ್ಮ ಹಿಂದಿನಿಂದ ಅಂದರೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಹೀರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಸವಾರ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ನನ್ನ ಮುಂದೆ ನಮ್ಮ ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ನಮ್ಮ ತಂದೆಯರವರ ಬಲಕಾಲಿಗೆ ಹಿಂದಿನಿಂದ ಡಿಕ್ಕಿಹೊಡೆಸಿದನು. ಆ ಕೂಡಲೇ ನಮ್ಮ ತಂದೆ ಹಾಗೂ ಹೀರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನ ಸವಾರ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋದರು. ತಕ್ಷಣ ನಾನು ಹಾಗೂ ನಮ್ಮ ಮನೆಯ ಪಕ್ಕದಲ್ಲಿರುವ ವಾಸವಾಗಿರುವ ಮುನಿಕೃಷ್ಣ ಬಿನ್ ಕೃಷ್ಣಪ್ಪ ರವರುಗಳು ಓಡಿ ಹೋಗಿ ರಸ್ತೆಯಲ್ಲಿ ಬಿದ್ದು ಹೋಗಿದ್ದ ನಮ್ಮ ತಂದೆಯವರನ್ನು ಎತ್ತಿ ಉಪಚರಿಸಿದ್ದು, ನಮ್ಮ ತಂದೆಯವರಿಗೆ ಬಲಕಾಲಿಗೆ ರಕ್ತಗಾಯ ಹಾಗೂ ಸೊಂಟಕ್ಕೆ ಮೂಗೇಟಾಗಿತ್ತು. ಅಪಘಾತಮಾಡಿದ ಹೀರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನದ ನಂಬರ್ ನೋಡಲಾಗಿ KA-40, U-8634 ಆಗಿತ್ತು.  ಅದರ ಸವಾರನಿಗೂ ಸಹಾ ಗಾಯಗಳಾಗಿದ್ದವು. ತಕ್ಷಣ ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಗಾಯಗಳಾದವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದೆವು. ಅಪಘಾತ ಮಾಡಿದ ದ್ವಿಚಕ್ರ ವಾಹನ ಸವಾರನ ಹೆಸರು ತಿಳಿಯಬೇಕಾಗಿರುತ್ತೆ. ನಮ್ಮ ತಂದೆಯವರನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇದ್ದುದರಿಂದ ನಾನು ಅವರೊಂದಿಗೆ ಇದ್ದು ಉಪಚರಿಸುತ್ತಿದ್ದು, ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ತಂದೆಯವರಿಗೆ ಅಪಘಾತ ಮಾಡಿದ KA-40, U-8634 ಹೀರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನ ಮತ್ತು ಅದರ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:11/02/2021 ರಂದು ಪಿರ್ಯಾದಿದಾರರಾದ ಶ್ರೀ. ಮಲ್ಲಿಕಾರ್ಜುನ ಬಿನ್ ಲೇಟ್ ಚಿಕ್ಕನಾರಾಯಣಸ್ವಾಮಿ 45 ವರ್ಷ, ಬಲಜಿಗರು, ಜಿರಾಯ್ತಿ, ಮೂಗಚಿನ್ನೇಪಲ್ಲಿ ಗ್ರಾಮ, ಯಲ್ಲಂಪಲ್ಲಿ ಅಂಚೆ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ ದಿನಾಂಕ:-11/02/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ತಮ್ಮ ಚಿಕ್ಕಪ್ಪರವರಾದ ದೊಡ್ಡಕೃಷ್ಣಪ್ಪ ಬಿನ್ ಲೇಟ್ ಚಿಕ್ಕಅಶ್ವತ್ಥಪ್ಪ 65 ವರ್ಷ, ಬಲಜಿಗರು, ಜಿರಾಯ್ತಿ, ಮೂಗಚಿನ್ನೇಪಲ್ಲಿ ಗ್ರಾಮ, ಯಲ್ಲಂಪಲ್ಲಿ ಅಂಚೆ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ರವರು ಹಾಗೂ ಅವರ ಸ್ನೇಹಿತರಾದ ಶ್ರೀ. ರಾಮಾಂಜೀನಪ್ಪ ಬಿನ್ ಮುನಿಸ್ವಾಮಪ್ಪ 55 ವರ್ಷ, ವಕ್ಕಲಿಗರು, ವಾರ್ಡ್ ನಂ-04, ಪ್ರಶಾಂತನಗರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರೊಂದಿಗೆ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೇಳಿ ಹೋಗಿದ್ದು, ಮಧ್ಯಾಹ್ನ ಸುಮಾರು 3-40 ಗಂಟೆಯ ಸಮಯದಲ್ಲಿ ಯಾರೋ ಮೊಬೈಲ್ ಕರೆಮಾಡಿ ನಿಮ್ಮ ಚಿಕ್ಕಪ್ಪ ದೊಡ್ಡಕೃಷ್ಣಪ್ಪ ರವರು ಹಾಗೂ ಅವರ ಜೊತೆಯಲ್ಲಿದ್ದ ರಾಮಾಂಜೀನಪ್ಪ ರವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಫ್ಲೈಓವರ್ ಮೇಲೆ ಅಪಘಾತವಾಗಿ ನಿಮ್ಮ ಚಿಕ್ಕಪ್ಪ ದೊಡ್ಡಕೃಷ್ಣಪ್ಪ ರವರಿಗೆ ತಲೆಗೆ ಕೈ-ಕಾಲುಗಳಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಹಾಗೂ ಜೊತೆಯಲ್ಲಿದ್ದ ರಾಮಾಂಜೀನಪ್ಪ ರವರಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತಗಾಯಗಳಾಗಿರುವುದಾಗಿ ಮೃತದೇಹವನ್ನು ಹಾಗೂ ಗಾಯಾಳುವನ್ನು 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದು, ತಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಅಪಘಾತ ಬಗ್ಗೆ ವಿಚಾರಿಸಲಾಗಿ ದಿನಾಂಕ:-11/02/2021 ರಂದು ಮಧ್ಯಾಹ್ನ ಸುಮಾರು 3-30 ಗಂಟೆಯ ಸಮಯದಲ್ಲಿ ತಮ್ಮ ಚಿಕ್ಕಪ್ಪರವರಾದ ದೊಡ್ಡಕೃಷ್ಣಪ್ಪ ಹಾಗೂ ಅವರ ಸ್ನೇಹಿತ ರಾಮಾಂಜೀನಪ್ಪ ರವರು KA-40-Y-7032 ರ ಹಿರೋ ಡಿಲೆಕ್ಸ್ ದ್ವಿಚಕ್ರವಾಹನದಲ್ಲಿ ಅಗಲಗುರ್ಕಿ ಗ್ರಾಮದಿಂದ ಫ್ಲೈ ಓವರ್ ಬಳಿ ಇರುವ ಹೆಚ್.ಪಿ ಪೆಟ್ರೋಲ್ ಬಂಕ್ ಗೆ ಹೋಗಲು ಅಗಲಗುರ್ಕಿ ಫ್ಲೈ-ಓವರ್ ಬಳಿಯ ಯೂ-ಟರ್ನ ಹತ್ತಿರ ತಮ್ಮ ದ್ವಿಚಕ್ರವಾಹನವನ್ನು ಯೂ ಟರ್ನ್ ಮಾಡುತ್ತಿದ್ದಾಗ ಬಾಗೇಪಲ್ಲಿ ಕಡೆಯಿಂದ ಬಂದ AP-02-BF-2142 ರ ಟೊಯೋಟಾ ಇಟಿಯಾಸ್ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನದ ಹಿಂದೆ ಕುಳಿತಿದ್ದ ತಮ್ಮ ದೊಡ್ಡಕೃಷ್ಣಪ್ಪ ರವರಿಗೆ ತಲೆಯ ಹಿಂಭಾಗ, ಕೈ-ಕಾಲುಗಳಿಗೆ ತೀವ್ರತರವಾದ ಗಾಯಗಳಾಗಿ ಅಪಘಾತ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಹಾಗೂ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ರಾಮಾಂಜೀನಪ್ಪ ರವರಿಗೆ ತಲೆಗೆ, ಬಲ ಹಿಮ್ಮಡಿಗೆ, ಕೈ-ಕಾಲುಳಿಗೆ ರಕ್ತಗಾಯಗಳಾಗಿದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಗಂಗಾಧರ ಬಿನ್ ಆಂಜನೇಯಲು 42 ವರ್ಷ, ಕೊತ್ತಚೆರವು ಗ್ರಾಮ, ಅನಂತಪುರ ಎಂತ ತಿಳಿದಿದ್ದು, ಸದರಿ ಅಪಘಾತ ಪಡಿಸಿದ AP-02-BF-2142 ರ ಟೊಯೋಟಾ ಇಟಿಯಾಸ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ್ದರ ದೂರಿನ ಮೇರೆಗೆ ಈ ಪ್ರ.ವ.ವರದಿಯನ್ನುದಾಖಲಿಸಿರುತ್ತೆ.

5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 29/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:11/02/2021 ರಂದು ಪಿರ್ಯಾದಿದಾರರಾದ ಶ್ರೀ ಲಕ್ಷ್ಮೀನರಸಪ್ಪ.ಎ ಬಿನ್ ಲೇಟ್ ಅಪ್ಪಣ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನನ್ನ ತಮ್ಮನ ಮಗನಾದ ಹರ್ಷ ಬಿನ್ ಹನುಮಂತರೆಡ್ಡಿ ರವರು ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರತಿ ದಿನ ನಮ್ಮ ಊರಿನಿಂದ ಮಧುಗಿರಿಗೆ ಹೋಗಿ ಬರುತ್ತಿದ್ದು, ಹರ್ಷನನ್ನು ಅವರ ತಂದೆಯಾದ ಹನುಮಂತರೆಡ್ಡಿ ಬಿನ್ ಲೇಟ್ ಅಪ್ಪಣ್ಣಪ್ಪ, 54 ವರ್ಷ ರವರು ಪ್ರತಿ ದಿನ ಬೆಳಿಗ್ಗೆ ನಮ್ಮ ಗ್ರಾಮದಿಂದ ಗೌರಿಬಿದನೂರು ತಾಲ್ಲೂಕು ಕೋಟಾಲದಿನ್ನೆ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದು ನಂತರ ಸಂಜೆ ವಾಪಾಸ್ ಕರೆದುಕೊಂಡು ಬರುತ್ತಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ:11/02/2021 ರಂದು ಬೆಳಿಗ್ಗೆ ನನ್ನ ತಮ್ಮ ಹನುಮಂತರೆಡ್ಡಿ ರವರು ಕೊಟಾಲದಿನ್ನೆಗೆ ಹೋಗಿ ಹರ್ಷನನ್ನು ಬಿಟ್ಟು ಬಂದು ನಂತರ ಸಂಜೆ 6-00 ಗಂಟೆಗೆ ಮತ್ತೆ ಹೋಗಿ ವಾಪಾಸ್ ನಮ್ಮ ಊರಿಗೆ ಅವರ ಬಾಬತ್ತು ಕೆ.ಎ-51, ಎಲ್-603 ನೊಂದಣಿ ಸಂಖ್ಯೆಯ ಹಿರೋಹೊಂಡಾ ದ್ವಿಚಕ್ರ ವಾಹನದಲ್ಲಿ ನನ್ನ ತಮ್ಮ ಹನುಮಂತರೆಡ್ಡಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹರ್ಷರವರನ್ನು ಹಿಂಭಾಗ ಕೂರಿಸಿಕೊಂಡು ಸಂಜೆ 6-30 ಗಂಟೆಯ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ನಾಚಕುಂಟೆ ಕ್ರಾಸ್ ನಲ್ಲಿ ಬರುತ್ತಿರುವಾಗ ತೊಂಡೇಬಾವಿ ಕಡೆಯಿಂದ ಬಂದ ಕೆ.ಎ-40, ಎ-2138 ನೊಂದಣಿ ಸಂಖ್ಯೆಯ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಹನುಮಂತರೆಡ್ಡಿ ಮತ್ತು ಅವರ ಮಗ ಹರ್ಷ ರವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ತಮ್ಮ ಹನುಮಂತರೆಡ್ಡಿ ಮತ್ತು ಅವರ ಮಗನಾದ ಹರ್ಷ ರಸ್ತೆಯ ಮೇಲೆ ಬಿದ್ದು ಹೋಗಿ ಹರ್ಷ ರವರ ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದು, ನನ್ನ ತಮ್ಮ ಹನುಮಂತರೆಡ್ಡಿ ರವರಿಗೆ ಬಲಗಾಲಿಗೆ ತಲೆಗೆ ಮತ್ತು ಬೆನ್ನಿಗೆ ರಕ್ತಗಾಯಗಳಾಗಿರುವುದಾಗಿ ನಾಚಕುಂಟೆ ಕ್ರಾಸ್ ನಲ್ಲಿ ವಾಸವಾಗಿರುವ ರಾಮಚಂದ್ರಯ್ಯ ರವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಆಗ ತಕ್ಷಣ ಗಾಯಗೊಂಡಿದ್ದ ನನ್ನ ತಮ್ಮ ಹನುಮಂತರೆಡ್ಡಿ ರವರನ್ನು ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತ ಹರ್ಷ ರವರ ಮೃತ ದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅದ್ದರಿಂದ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಹನುಮಂತರೆಡ್ಡಿ ಮತ್ತು ಅವರ ಮಗ ಹರ್ಷ ರವರಿಗೆ ಅಪಘಾತ ಪಡಿಸಿದ ಕೆ.ಎ-40, ಎ-2138 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 30/2021 ಕಲಂ. 279,304A ಐ.ಪಿ.ಸಿ:-

     ದಿನಾಂಕ:12.02.2021 ರಂದು ಪಿರ್ಯಾದಿದಾರರಾದ ಪಾಪಣ್ಣ ಬಿನ ಲೇಟ್ ಸಿ.ನರಸಿಂಹಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗನಾದ ಪಿ. ಮುತ್ತೇಗೌಡ ಬಿನ್ ಪಾಪಣ್ಣ, 23 ವರ್ಷ, ಖಾಸಗಿ ವೃತ್ತಿ ರವರು ಎಂದಿನಂತೆ ದಿನಾಂಕ:11.02.2021 ರಂದು ದೊಡ್ಡಬಳ್ಳಾಪುರಕ್ಕೆ ಕೆಲಸಕ್ಕೆ ಹೋಗಿ ಸಂಜೆ 07.00 ಗಂಟೆಗೆ ವಾಪಸ್ಸು ಬಂದು ನಂತರ ಕೆಲಸದ ನಿಮಿತ್ತ ತೊಂಡೇಬಾವಿಗೆ ಹೋಗಿ ಬರುವುದಾಗಿ ತಿಳಿಸಿ ತನ್ನ ಬಾಬತ್ತು ಕೆಎ-40-ಇಬಿ-7556 ನೊಂದಣಿ ಸಂಖ್ಯೆ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಹೋಗಿದ್ದು ನನಗೆ ನಮ್ಮ ಗ್ರಾಮದ ಲಕ್ಷ್ಮಿಕಾಂತ ಬಿನ್ ನರಸಿಂಹಮೂರ್ತಿ ರವರು ದೂರವಾಣಿ ಕರೆ ಮಾಡಿ ನಿಮ್ಮ ಮಗ ಬೆಂಗಳೂರು ಗೌರಿಬಿದನೂರು ಎಸ್.ಹೆಚ್-9 ರಸ್ತೆಯ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿ ಇರುವ ದೀಪಂ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆಯಲ್ಲಿ ಮುತ್ತೇಗೌಡ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ತೊಂಡೇಬಾವಿ ಕಡೆಯಿಂದ ಬಂದ ಎಪಿ-21-ಟಿವೈ-5789 ನೊಂದಣಿ ಸಂಖ್ಯೆಯ ಲಾರಿ ಚಾಲಕ ಲಾರಿಯನ್ನು ಅತಿವೇಗ ದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ  ತಿಳಿಸಿದ್ದು ನಾನು ವಿಚಾರವನ್ನು ತಿಳಿದು ನನ್ನ ಮಗ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಎಪಿ-21-ಟಿವೈ-5789 ನೊಂದಣಿ ಸಂಖ್ಯೆ ಲಾರಿ ಚಾಲಕ ಅಪಘಾತ ಪಡಿಸಿದ್ದರಿಂದ ಮೃತಪಟ್ಟಿದ್ದು ಸದರಿ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 31/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ:12/02/2021 ರಂದು ಪಿರ್ಯಾದಿದಾರರಾದ ಶ್ರೀ ಮುತ್ತೇಗೌಡ ಬಿನ್ ತಿಪ್ಪೇಗೌಡ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:11/2/2021 ರಂದು ಬೆಳಗ್ಗೆ 08.45 ಗಂಟೆ ಸಮಯದಲ್ಲಿ ನಮ್ಮ ತಂದೆ ತಿಪ್ಪೇಗೌಡ ರವರು ಕೆಎ-43-ಕೆ-3280 ನಂಬರುಳ್ಳ ಎಕ್ಸ್ ಎಲ್ ಹೆವಿಡ್ಯೂಟಿ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ತೊಂಡೇಬಾವಿಗೆ ಬರುವ ಸಮಯದಲ್ಲಿ ಮಾರ್ಗ ಮದ್ಯೆ ತಿಪ್ಪಗಾನಹಳ್ಳಿ ಸರ್ಕಲ್ ಬಳಿ ಗೌರಿಬಿದನೂರು ಕಡೆಯಿಂದ ಬಂದ ಕೆಎ-53-ಎಂಎ-1782 ನಂಬರುಳ್ಳ ಶಿಫ್ಟ್ ಡಿಸೈರ್ ಕಾರ್ ಚಾಲಕ ಕಾರನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂದೆಯ ಎಡಗಾಲು ಮೂಳೆ ಮುರಿದಿದ್ದು ದ್ವಿಚಕ್ರ ವಾಹನ ಸಂಪೂರ್ಣ ಜಖಂ ಗೊಂಡಿದೆ ನಮ್ಮ ತಂದೆ ದಾರಿ ಪಕ್ಕದಲ್ಲಿ ಬಿದ್ದು ಹೋಗಿರುವುದಾಗಿ ತಿಪ್ಪಗಾನಹಳ್ಳಿ ಗ್ರಾಮಸ್ಥರು ನನಗೆ ಫೋನ್ ಮೂಲಕ ವಿಷಯ ತಿಳಿಸಿದ್ದು ಆಗ ನಾನು ತಕ್ಷಣ ಸ್ಥಳಕ್ಕೆ ಬಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ. ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆದ್ದರಿಂದ ಅಪಘಾತಕ್ಕೆ ಕಾರಣವಾದ  ಕೆಎ-53-ಎಂಎ-1782 ನಂಬರುಳ್ಳ ಶಿಫ್ಟ್ ಡಿಸೈರ್ ಕಾರಿನ ಚಾಲಕನ  ಮೇಲೆ  ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

8. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:11/02/2020 ರಂದು ಮದ್ಯಾಹ್ನ 3-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಮದ್ಯಾಹ್ನ ಸುಮಾರು 1-00 ಗಂಟೆಯಲ್ಲಿ ಸಿಬ್ಬಂದಿಯವರಾದ ಹೆಚ್.ಸಿ.97, ಸುಬ್ರಮಣಿ, ಪಿ.ಸಿ.280 ಶಶಿಕುಮಾರ್ ಮತ್ತು ಜೀಪು ಚಾಲಕ ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟದ ಮಯೂರ ಸರ್ಕಲ್ ನಲ್ಲಿರುವ  ವೆಂಕಟೇಶ ರವರ ಅಂಗಡಿಯ ಮುಂಭಾಗದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 1-30 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ  ವೆಂಕಟೇಶ್ ಬಿನ್ ಲೇಟ್ ಕೋದಂಡರಾಮಯ್ಯ, 45 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಮಯೂರ ವೃತ್ತ, ಶಿಡ್ಲಘಟ್ಟ ಟೌನ್ಎಂದು ತಿಳಿಸಿರುತ್ತಾರೆ. ಇವರು ಒಂದು ಬ್ಯಾಗ್ ನಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು   ಬ್ಯಾಗ್ ನಲ್ಲಿ ಪರಿಶೀಲಿಸಲಾಗಿ ORIGINAL CHOICE 90 ML ನ 08 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 08 ರ ಬೆಲೆ ಒಟ್ಟು 281 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ORIGINAL CHOICE 90 ML ನ 04 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಗಳನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.15/2021 ಕಲಂ.32(3), 15(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 12-02-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080