ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 281/2021 ಕಲಂ. 279,337,304(A) ಐಪಿಸಿ :-

      ದಿನಾಂಕ:10/09/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಮ್ಮ ಕೋಂ ಲೇಟ್ ಚನ್ನರಾಯಪ್ಪ, 45 ವರ್ಷ, ವಕ್ಕಲಿಗರು,  ಕೂಲಿಕೆಲಸ,  ಬೀಚಗಾನಹಳ್ಳಿ ಕ್ರಾಸ್, (ಜೆ.ಪಿ,ನಗರ) ಗುಡಿಬಂಡೆ ತಾಲ್ಲೂಕು.    ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ-ತಾಯಿಗೆ  5 ಜನ ಮಕ್ಕಳಿದ್ದು, 1ನೇ ಯಾಮನ್ನ,  2ನೇ ನಾನು, 3ನೇ ಲಕ್ಷ್ಮೀ,  4ನೇ ವೆಂಕಟರವಣಪ್ಪ 5ನೇ ನಾಗಮ್ಮ ಆಗಿರುತ್ತಾರೆ, ಎಲ್ಲರಿಗೂ ಮದುವೆ ಯಾಗಿರುತ್ತೆ, 3ನೇ ಲಕ್ಷ್ಮೀ ರವರನ್ನು  ಆಂಧ್ರಪ್ರದೇಶ ಮದನಪಲ್ಲಿಗೆ ಕೊಟ್ಟು ಮದುವೆ ಮಾಡಿದ್ದು ಆಕೆಯ ಗಂಡ ಹರಿ ರವರು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ಆಗ್ಗಿನಿಂದ ನನ್ನ ತಂಗಿ ಲಕ್ಷ್ಮೀ ರವರು ಬೀಚಗಾನಹಳ್ಳಿಯಲ್ಲಿ ನಮ್ಮ ಜೊತೆಯಲ್ಲಿಯೇ ವಾಸವಾಗಿರುತ್ತಾರೆ, ನನ್ನ ತಮ್ಮ ವೆಂಕಟರವಣಪ್ಪ ರವರಿಗೆ ಎಂ ನಲ್ಲಗುಟ್ಲಪಲ್ಲಿ ಗ್ರಾಮದ ಶಿವಮ್ಮ ರವರೊಂದಿಗೆ ಮದುವೆಯಾಗಿದ್ದು, ವೆಂಕಟರವಣಪ್ಪ ರವರು ಎಂ ನಲ್ಲಗುಟ್ಲಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿಯೇ  ವಾಸವಾಗಿರು ತ್ತಾರೆ. ಈ ದಿನ ದಿನಾಂಕ:10/09/2021 ರಂದು ನನ್ನ ತಮ್ಮ ವೆಂಕಟರವಣಪ್ಪ ರವರು ನಮಗೆ ಅರಿಶಿಣ ಕುಂಕುಮ ತೆಗೆದುಕೊಂಡು ಬಂದಿದ್ದು, ಮದ್ಯಾಹ್ನ  ಸುಮಾರು 1:00 ಗಂಟೆ ಸಮಯದಲ್ಲಿ ನನ್ನ ತಂಗಿ ಲಕ್ಷ್ಮೀ ರವರನ್ನು ಎಂ ನಲ್ಲಗುಟ್ಲಪಲ್ಲಿ ಗ್ರಾಮಕ್ಕೆ ಕರೆದುಕೊಂಡು  ಹೋಗಲು ಆತನ ಬಾಬತ್ತು ಕೆ ಎ 40 ಇ.ಡಿ 5018 ಹೀರೂ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಲಕ್ಷ್ಮೀ ರವರನ್ನು ಕುಳ್ಳರಿಸಿಕೊಂಡು ವೆಂಕಟರವಣಪ್ಪ ರವರು ದ್ವಿ ಚಕ್ರ ವಾಹನವನ್ನು ಓಡಿಸಿಕೊಂಡು ಬೀಚಗಾನಹಳ್ಳಿ ಕ್ರಾಸ್ ನಿಂದ ಬಾಗೇಪಲ್ಲಿ ಕಡೆಗೆ ಹೊರಟಿರುತ್ತಾರೆ. ಮದ್ಯಾಹ್ನ ಸುಮಾರು 1:30 ಗಂಟೆ ಸಮಯದಲ್ಲಿ ನಮ್ಮ ಸಂಬಂಧಿ ರಾಧ ರವರು ನನಗೆ ದೂರವಾಣಿ ಕರೆ ಮಾಡಿ ವೆಂಕಟರವಣಪ್ಪ ರವರ ದ್ವಿ ಚಕ್ರ ವಾಹನಕ್ಕೆ ಅಪಘಾತವಾಗಿದ್ದು, ಲಕ್ಷ್ಮೀ ರವರು ಸ್ಥಳದಲ್ಲಿ ಮೃತಪಟ್ಟಿರುವುದಾಗಿ, ವೆಂಕಟರವಣಪ್ಪ ರವರಿಗೆ ಮೈಮೇಲೆ ಗಾಯಗಳಾಗಿ ಬಾಗೇಪಲ್ಲಿ ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ್ದು, ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ನಂತರ ಅಪಘಾತದ ಬಗ್ಗೆ ಸ್ಥಳದಲ್ಲಿದ್ದ ರಾಧ ರವರನ್ನು ವಿಚಾರಿಸಲಾಗಿ ಮದ್ಯಾಹ್ನ ಸುಮಾರು 1:30 ಗಂಟೆ ಸಮಯದಲ್ಲಿ  ನನ್ನ ತಮ್ಮ  ವೆಂಕಟರವಣಪ್ಪ ರವರು ತನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಎಂ ನಲ್ಲಗುಟ್ಲಪಲ್ಲಿ ಗ್ರಾಮಕ್ಕೆ ಹೋಗಲು ಸುಂಕಲಮ್ಮ ದೇವಸ್ಥಾನದ ಸಮೀಪ ವಡ್ಡರಪಾಳ್ಯ ಕ್ರಾಸ್ ಬಳಿ ಬರುತ್ತಿದ್ದಾಗ ಹಿಂಬದಿಯಿಂದ ಬೆಂಗಳೂರು ಕಡೆಯಿಂದ ಕೆ.ಎ-03-ಎನ್.ಬಿ-7713 ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಂಗಿ ಲಕ್ಷ್ಮೀ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೆಂಕಟರವಣಪ್ಪ ರವರಿಗೆ ಮೈ ಮೇಲೆ ಗಾಯಗಳಾಗಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಕೆ.ಎ-03-ಎನ್.ಬಿ-7713 ನೊಂದಣಿ ಸಂಖ್ಯೆಯ ಕಾರಿನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ತಮ್ಮ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು  ಅಪಘಾತನ್ನುಂಟು ಮಾಡಿದ  ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ .282/2021 ಕಲಂ. 279,337 ಐಪಿಸಿ & ಸೆಕ್ಷನ್ 187 NDIAN MOTOR VEHICLES ACT, 1988 :-

      ದಿನಾಂಕ: 10/10/2021 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜೇಶ್ ಬಿನ್ ನಾರಾಯಣಪ್ಪ, 35 ವರ್ಷ, ಬೋವಿ ಜನಾಂಗ, ವ್ಯಾಪಾರ, ವಾಸ ವಡ್ಡರಪಾಳ್ಯ ಗ್ರಾಮ, ಕಸಭಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 10/09/2021 ರಂದು ರಾತ್ರಿ 7-30 ಗಂಟೆಗೆ ನಾನು ಬಾಗೇಪಲ್ಲಿ ಟೌನ್ ನಲ್ಲಿದ್ದಾಗ ನನಗೆ ಪರಿಚಯವಿರುವ ರವಿ ರವರು ನನಗೆ ಪೋನ್ ಮಾಡಿ ನಿನ್ನ ತಮ್ಮ ಪ್ರಸಾದ್ ರವರಿಗೆ  ಸುಂಕಲಮ್ಮ ದೇವಾಸ್ಥಾನದ ಬಳಿ ಎನ್ ಹೆಚ್-44 ರಸ್ತೆಯಲ್ಲಿ ಅಪಘಾತವಾಗಿದ್ದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾರೆ.  ತಕ್ಷಣ ನಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿತ್ತು. ನಂತರ ವಿಚಾರ ಮಾಡಿ ತಿಳಿಯಲಾಗಿ ನನ್ನ ತಮ್ಮನಾದ ಪ್ರಸಾದ್ ಬಿನ್ ಶ್ರೀನಿವಾಸ, 23 ವರ್ಷ, ಬೋವಿ ಜನಾಂಗ ಮತ್ತು ಆತನ ಸ್ನೇಹಿತನಾದ ಗಂಗರಾಜು ಬಿನ್ ನಾರಾಯಣಸ್ವಾಮಿ, 24 ವರ್ಷ, ಗೊಲ್ಲ ಜನಾಂಗ, ಬೆಣ್ಣೆಪರ್ತಿ ಗ್ರಾಮ ರವರು ಇಬ್ಬರು ಪೂಲವಾರಿಪಲ್ಲಿ ಗ್ರಾಮದಿಂದ ಊಟ ತೆಗೆದುಕೊಂಡು ಎನ್.ಹೆಚ್.-44 ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಗೆ ಬರಲು  ಕೆ.ಎ-67-ಇ-0912 ನೊಂದಣಿ ಸಂಖ್ಯೆಯ ಆಕ್ಟಿವ್ ಹೋಂಡಾ ದ್ವಿ ಚಕ್ರ ವಾಹನದಲ್ಲಿ ಬೆಂಗಳೂರು-ಹೈದ್ರಾಬಾದ್ ಎನ್.ಹೆಚ್-44 ರಸ್ತೆಯಲ್ಲಿ ಸುಂಕಲಮ್ಮ ದೇವಾಸ್ಥಾನ ಬಳಿ ರಾತ್ರಿ ಸುಮಾರು 7-20 ಗಂಟೆಯಲ್ಲಿ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ  ಹಿಂಬದಿಯಿಂದ ಬಂದ ಕೆ.ಎ-53-ಪಿ-7469 ವ್ಯಾಗನಾರ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪ್ರಸಾದ್ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಅಪಘಾತವಾದ ಪರಿಣಾಮ ವಾಹನ ಜಖಂ ಗೊಂಡಿದ್ದು, ಪ್ರಸಾದ್ ಗೆ ಬಲಕಾಲಿನ ತೊಡೆಯ ಬಳಿ ಮೂಳೆ ಮುರಿದಂತಾಗಿರುತ್ತದೆ. ಗಂಗರಾಜು ರವರಿಗೆ ತರಚಿದ ಹಾಗೂ ಮೂಗೇಟುಗಳಾಗಿದ್ದು, ಗಾಯಾಳುಗಳನ್ನು  ಸ್ಥಳಿಯರು ಯಾವುದೋ ಆಟೋ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಪ್ರಸಾದ್ ರವರನ್ನು ವೈದ್ಯಾದಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿಕೊಟ್ಟಿರುತ್ತೆನೆ. ಕೆ.ಎ-53-ಪಿ-7469 ವ್ಯಾಗನಾರ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತವನ್ನುಂಟು ಮಾಡಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ .283/2021 ಕಲಂ. 379 ಐಪಿಸಿ :-

      ದಿನಾಂಕ: 11/09/2021 ರಮದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಜೀರ್ ಅಹಮದ್ ಬಿನ್ ಲೇಟ್ ಸಾಬ್ ಜಾನ್ ಸಾಬ್, 52 ವರ್ಷ, ಮುಸ್ಲಿಂ ಜನಾಂಗ, ಶಿಕ್ಷಕ ವೃತ್ತಿ, ವಾಸ ಶಾಂತಿ ನಿಕೇತನ ಶಾಲೆ ಹತ್ತಿರ, 4 ನೇ ವಾರ್ಡ, ಬಾಗೇಪಲ್ಲಿ ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 09/09/2021 ರಂದು ನಾನು ಕೆಲಸ ಮುಗಿಸಿಕೊಂಡು ಬಂದು ಸಂಜೆ 6-00 ಗಂಟೆಯಲ್ಲಿ ನಮ್ಮ ಮನೆಯ ಮುಂದೆ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದು, ರಾತ್ರಿ 11-00 ಗಂಟೆಯಲ್ಲಿ ಮಲಗಲು ಹೋದಾಗ ನನ್ನ ದ್ವಿ ಚಕ್ರ ವಾಹನವು ಮನೆಯ ಮುಂದೆಯೇ ಇತ್ತು. ನಂತರ ದಿನಾಂಕ 10/09/2021 ರಂದು ಬೆಳಿಗ್ಗೆ ಎದ್ದು ನೋಡಲಾಗಿ ನನ್ನ ದ್ವಿ ಚಕ್ರ ವಾಹನ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ಇದರ ಬೆಲೆ ಸುಮಾರು 25000/- ರೂ ಗಳಾಗಿರುತ್ತದೆ. ನನ್ನ ಬಾಬತ್ತು ಕೆ.ಎ-40-ವಿ-5831  ನೊಂದಣಿ ಸಂಖ್ಯೆ ಹೀರೋ ಫ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವ  ಕಳ್ಳರನ್ನು ಮತ್ತು ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

4. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 125/2021 ಕಲಂ. 87 ಕೆ.ಪಿ. ಆಕ್ಟ್ :-

      ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:10/09/2021 ರಂದು ಸಂಜೆ 04-00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಬೇಟಿ ಕರ್ತವ್ಯದಲ್ಲಿ ಸೋಮಕಲಹಳ್ಳಿ ಗ್ರಾಮದಲ್ಲಿ ಇದ್ದಾಗ ನನಗೆ ಠಾಣಾ ವ್ಯಾಪ್ತಿಯ ಅಂಕಾಲಮಡಗು ಗ್ರಾಮದ ಕೆರೆಯಲ್ಲಿನ ಜಾಲಿ ಮರಗಳ ಕೆಳಗೆ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಗೆ ಪೋನ್ ಮಾಡಿ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿಸಿ 262 ಶ್ರೀ.ಅಂಬರೀಶ್, ಪಿ.ಸಿ 101 ಶ್ರೀನಿವಾಸ, ಪಿ.ಸಿ 110 ಸುರೇಶ್ ರವರುಗಳನ್ನು ಅಂಕಾಲಮಡಗು ಗ್ರಾಮದ ಬಳಿಗೆ ಬರಮಾಡಿಕೊಂಡು ನಾನು ಅಲ್ಲಿಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯೊಂದಿಗೆ ನಾವುಗಳು ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 04-30 ಗಂಟೆಗೆ  ಅಂಕಾಲಮಡಗು ಗ್ರಾಮದ ಕೆರೆಯ ಬಳಿಗೆ ಹೋಗಿ ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನಾವುಗಳು ಸ್ವಲ್ಪ ದೂರ ಮುಂದೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಕೆರೆಯಲ್ಲಿನ ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ವೃತ್ತಾಕಾರದಲ್ಲಿ ಗುಂಪಾಗಿ ಕುಳಿತುಕೊಂಡು ಅಂದರ್ 100 ರೂ ಬಾಹರ್ 100 ರೂ ಎಂದು ಕೂಗುಗಳನ್ನು ಇಡುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಗುಂಪನ್ನು ಸುತ್ತುವರೆದು ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಸೂಚಿಸಿದರೂ ಸಹ ಸದರಿಯವರು ಓಡಿ ಹೋಗಲು ಯತ್ನಿಸಿದ್ದು ಅವರುಗಳನ್ನು ಸಿಬ್ಬಂದಿಯ ಸಹಾಯದಿಂದ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಾಗಿ 1) ನಾರಾಯಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ 70 ವರ್ಷ,ವಕ್ಕಲಿಗರು,ಜಿರಾಯ್ತಿ,ವಾಸ ಓಬಳಾಪುರ ಗ್ರಾಮ ಚಿಂತಾಮಣಿ ತಾಲ್ಲೂಕು ,  2) ಶಂಕರ ಬಿನ್ ಲೇಟ್ ಕೋನಪ್ಪ 42 ವರ್ಷ,ಆದಿಕರ್ನಾಟಕ ಜನಾಂಗ,ಕೂಲಿಕೆಲಸ,ವಾಸ ಅಂಕಾಲಮಡಗು ಗ್ರಾಮ, ಚಿಂತಾಮಣಿ ತಾಲ್ಲೂಕು, 3) ಮಂಜುನಾಥ ಬಿನ್ ಚೌಡಪ್ಪ 40 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಅಂಕಾಲಮಡಗು ಗ್ರಾಮ ಚಿಂತಾಮಣಿ ತಾಲ್ಲೂಕು, 4) ನಾಗರಾಜ ಬಿನ್ ಚಿಕ್ಕವೆಂಕಟರವಣಪ್ಪ 38 ವರ್ಷ ಗೊಲ್ಲರು ಜಿರಾಯ್ತಿ ವಾಸ ಅಂಕಾಲಮಡಗು ಚಿಂತಾಮಣಿ ತಾಲ್ಲೂಕು, ಮೊ.ನಂ – 8970288197 5) ವೆಂಕಟರೆಡ್ಡಿ ಬಿನ್ ಸುಬ್ಬರಾಯಪ್ಪ 49 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಅಂಕಾಲಮಡಗು ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-7899598456 ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 2450/- ರೂಗಳಿರುತ್ತೆ ಸ್ಥಳದಲ್ಲಿ ಇದ್ದ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 2450/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 04-45 ಗಂಟೆಯಿಂದ ಸಂಜೆ 05-45 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 06-30 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 175/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಪಿಸಿ 388 ಗದ್ದೆಪ್ಪ ಶಿವಪುರ ರವರ ಮುಖಾಂತರ ಮನವಿಯನ್ನು ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಈ ದಿನ ದಿನಾಂಕ 11/09/2021 ರಂದು  ಬೆಳಿಗ್ಗೆ 10-30 ಗಂಟೆಗೆ ಅನುಮತಿಯನ್ನು ಪಡೆದುಕೊಂಡು ಠಾಣೆಯ ಮೊ ಸಂಖ್ಯೆ: 125/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 153/2021 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ: 10-09-2021 ರಂದು ಸಂಜೆ 5-45  ಗಂಟೆಯ ಸಮಯಕ್ಕೆ ಶ್ರೀ ಬಿ.ಪಿ.ಮಂಜು ಪಿ.ಎಸ್.ಐ.  ಗ್ರಾಮಾಂತರ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು  ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10-09-2021  ರಂದು ಸಂಜೆ 4-00 ಸಮಯದಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ನಿರತನಾಗಿದ್ದಾಗ ತನಗೆ ಚಿಕ್ಕಬಳ್ಳಾಪುರ ತಾಲ್ಲೂಕು ಚಂಬಹಳ್ಳಿ  ಗ್ರಾಮದ ದಕ್ಷಿಣದ ಕಡೆ ಇರುವ ಸರ್ಕಾರಿ ಗುಟ್ಟದಲ್ಲಿ ಯಾರೋ ಅಸಾಮಿಗಳು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಅಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ತಾನು ಸಿಬ್ಬಂದಿಯವರಾದ ಹೆಚ್.ಸಿ,. 38 ಸುರೇಶ್, ಪಿಸಿ 359 ಶ್ರೀನಿವಾಸ, ಪಿ.ಸಿ 264 ನರಸಿಂಹಮೂರ್ತಿ. ಮತ್ತು ಪಿಸಿ-244 ಶಶಿಕುಮಾರ ಪಿಸಿ 108 ರಾಜಶೇಖರ್ ಪಿಸಿ 292. ಶ್ರೀ ಸಲೀಂಖಾನ್ ಮುಲ್ಲಾರವರನ್ನು ಕರೆದುಕೊಂಡು  ಠಾಣೆಗೆ ಒದಗಿಸಿದ್ದ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಚಂಬಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಚಂಬಹಳ್ಳಿ ಗ್ರಾಮದಿಂದ ದಕ್ಷಿಣದ ಕಡೆ ಇರುವ ಸರ್ಕಾರಿ ಬೆಟ್ಟದ ಕಡೆ  ಸ್ವಲ್ಪ ದೂರ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚಾಯ್ತಿದಾರರು  ಮತ್ತು ಸಿಬ್ಬಂದಿಯೊಂದಿಗೆ ತನಗೆ ಮಾಹಿತಿ ಬಂದ ಸ್ಥಳವಾದ  ಚಂಬಹಳ್ಳಿ ಗ್ರಾಮದಿಂದ ದಕ್ಷಿಣದ ಕಡೆ ಇರುವ ಸರ್ಕಾರಿ ಬೆಟ್ಟದ  ಬಂಡೆಯ ಬಳಿ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಬಂಡೆಯ ಬಳಿ ತಗ್ಗು ಪ್ರದೇಶದಲ್ಲಿ  04 ಜನರು ಗುಂಡಾಗಿ ಕುಳಿತುಕೊಂಡು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಇಸ್ವೀಟು ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ತಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಓಡಿ ಹೋಗಲು ಪ್ರಯತ್ನಿಸಿದ್ದು, ತಾನು ಮತ್ತು ಸಿಬ್ಬಂದಿಗಳು ಓಡಿ ಹೋಗಿ ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ (1) ಆರ್.ಮಂಜುನಾಥ ಬಿನ್ ರಾಮಸ್ವಾಮಿ 34ವರ್ಷ ಪರಿಶಿಷ್ಟ ಜಾತಿ ರಿಯಲ್ ಎಸ್ಟೇಟ್  ವ್ಯಾಪಾರ  ವಾಸ: HAL  2ನೇ ಹಂತ  1ನೇ ಕ್ರಾಸ್ ಅಂಬೇಡ್ಕರ್ ನಗರ ಬೆಂಗಳೂರು. (2) ಶ್ರೀಧರ  ಬಿನ್ ಸೀತಪ್ಪ 25ವರ್ಷ ವಕ್ಕಲಿಗರು  ಜಿರಾಯ್ತಿ. ವಾಸ: ಚಂಬಹಳ್ಳಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು  ಎಂತ ತಿಳಿಸಿದರು.  ಸದರಿಯವರನ್ನು ವಿಚಾರ ಮಾಡಲಾಗಿ ಸ್ಥಳದಿಂದ  ಓಡಿ ಹೋದ  ಆಸಾಮಿಗಳ ಹೆಸರು ವಿಳಾಸ (3) ನವೀನ್  ಬಿನ್  ಲೇಟ್ ಪುಟ್ಟಪ್ಪ 35ವರ್ಷ  ವಕ್ಕಲಿಗರು ಜಿರಾಯ್ತಿ ಚಂಬಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು (4) ಸುಬ್ಬಿರೆಡ್ಡಿ ಬಿನ್ ನರಸಿಂಹರೆಡ್ಡಿ ಚಂಬಹಳ್ಳಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಮೇಲೆ  ಚೆಲ್ಲಾಪಿಲ್ಲಿಯಾಗಿ 52 ಇಸ್ಪೀಟ್ ಎಲೆಗಳು ಮತ್ತು ಫಣಕ್ಕಿಟ್ಟಿದ್ದ  ಹಣ  ಬಿದ್ದಿದ್ದು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ (1)  ಹಳೆಯ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ (2)  ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 6000/- ರೂ. ಮತ್ತು (3) 52 ಇಸ್ವೀಟು ಎಲೆಗಳು ದೊರೆತಿದ್ದು ಮೇಲ್ಕಂಡ ಇಬ್ಬರು ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 6000/-ರೂ. ನಗದು ಹಣ, ಮತ್ತು  ಜೂಜಾಟ ಆಡಲು ಉಪಯೋಗಿಸಿದ್ದ  ಒಂದು  ಹಳೆಯ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಕೆ.ಪಿ.ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು  ಸೂಚಿಸಿ  ನೀಡಿದ ದೂರನ್ನು  ಪಡೆದುಕೊಂಡು ಠಾಣಾ ಎನ್.ಸಿ.ಆರ್. ನಂಬರ್ 221/2021 ರಂತೆ  ದಾಖಲಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.ಇದು ಅಸಂಜ್ಞೇಯ ಪ್ರಕರಣವಾಗಿದ್ದು ಸಂಜ್ಞೇಯ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ ಆದುದರಿಂದ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 399/2021 ಕಲಂ. 143,147,148,324,504,506 ರೆ/ವಿ 149 ಐಪಿಸಿ :-

      ದಿನಾಂಕ: 10/09/2021 ರಂದು ಠಾಣೆಯ ಸಿ.ಹೆಚ್.ಸಿ-39 ಬಾಬಾಜಾನ್ ರವರು ಕೋಲಾರ ನಗರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಮಧು.ಪಿ ಕೋಂ ರಮೇಶ್.ಕೆ.ಆರ್, 37 ವರ್ಷ, ಭಜಂತ್ರಿ ಜನಾಂಗ, ಅಂಗನವಾಡಿ ಶಿಕ್ಷಕಿ, 3ನೇ ಬ್ಲಾಕ್, ಬೆಟ್ಟದ ರಸ್ತೆ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.00 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೂ ಹಾಗೂ ತಮ್ಮ ಗ್ರಾಮದ, ತಮ್ಮ ಜನಾಂಗದ ಶಾರದಮ್ಮ ರವರಿಗೆ ಖಾಲಿ ನಿವೇಶನದ ಬಗ್ಗೆ ಆಗಾಗ ಜಗಳ ನಡೆಯುತ್ತಿದ್ದು, ಈ ಬಗ್ಗೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದು, ಸದರಿ ವಿಚಾರದ ಬಗ್ಗೆ ಪೊಲೀಸರು ಪಿ.ಡಿ.ಓ ರವರಿಗೆ ಮಾಹಿತಿ ನೀಡಿದ್ದು, ಸದರಿಯವರು ಬಂದು ಸಮಸ್ಯೆ ಬಗೆಹರಿಸುವವರೆಗೂ ಸುಮ್ಮನಿರಿ ಎಂದು ಬುದ್ದಿವಾದ ಹೇಳಿರುತ್ತಾರೆ.  ಹೀಗಿರುವಾಗ ದಿನಾಂಕ: 09/09/2021 ರಂದು ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ತಾನು ಶ್ರೀನಿವಾಸಪ್ಪ ರವರ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದ ಬಳಿ ಇದ್ದಾಗ ಖಾಲಿ ನಿವೇಶನದ ವಿಷಯವಾಗಿ ತಮ್ಮ ಗ್ರಾಮದ, ತಮ್ಮ ಜನಾಂಗದ 1).ಶ್ರೀನಿವಾಸ ಬಿನ್ ಲೇಟ್ ನಾಗಪ್ಪ, 2).ಶಾರಧಮ್ಮ ಕೋಂ ಶ್ರೀನಿವಾಸ, 3).ಸ್ವಪ್ನ ಬಿನ್ ಶ್ರೀನಿವಾಸ ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ತನ್ನ ಮೇಲೆ ಏಕಾ ಏಕೀಯಾಗಿ ಕೆಟ್ಟ ಮಾತುಗಳಿಂದ ಬೈದು, ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆಗ ಪಕ್ಕದಲ್ಲಿಯೇ ಇದ್ದ 4).ಚೇತನ್ ಬಿನ್ ಶ್ರೀನಿವಾಸ ರವರ ಚಾಕುವಿನಿಂದ ತನ್ನ ಎಡಕೈಗೆ ಹಾಕಿದ್ದು, ಆಗ ತನಗೆ ರಕ್ತಗಾಯವಾಗಿರುತ್ತೆ ಮತ್ತು 5).ವೆಂಕಟೇಶ್ ಬಿನ್ ನಾರಾಯಣ ರವರು ಸಹ ತನಗೆ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವೇಣುಗೋಪಾಲ್ ಬಿನ್ ವೆಂಕಟೇಶ್ ಮತ್ತು ಹರೀಶ್ ಕುಮಾರ್ ಬಿನ್ ಕೃಷ್ಣಪ್ಪ ರವರು ಗಾಯಗೊಂಡಿದ್ದ ತನ್ನನ್ನು ಯಾವುದೋ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅದರಂತೆ ತಾನು ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಮೇಲ್ಕಂಡಂತೆ ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ಮೇಲೆ ಗಲಾಟೆ ಮಾಡಿ, ಹಲ್ಲೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 400/2021 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-

      ದಿನಾಂಕ: 10/09/2021 ರಂದು ಠಾಣೆಯ ಸಿ.ಹೆಚ್.ಸಿ-39 ಬಾಬಾಜಾನ್ ರವರು ಕೋಲಾರ ನಗರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಶಾರಧಮ್ಮ ಕೋಂ ಶ್ರೀನಿವಾಸಪ್ಪ.ಕೆ.ಎನ್, 38 ವರ್ಷ, ಗೃಹಣಿ, ಭಜಂತ್ರಿ ಜನಾಂಗ, 3ನೇ ಬ್ಲಾಕ್, ಬೆಟ್ಟದ ರಸ್ತೆ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.30 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೂ ಹಾಗೂ ತಮ್ಮ ಗ್ರಾಮದ, ತಮ್ಮ ಜನಾಂಗದ ಮಧು.ಪಿ ರವರಿಗೆ ಈಗ್ಗೆ ಸುಮಾರು ಒಂದು ವರ್ಷದಿಂದ ಖಾಲಿ ನಿವೇಶನದ ಬಗ್ಗೆ ಆಗಾಗ ಜಗಳ ನಡೆಯುತ್ತಿರುತ್ತದೆ. ಈ ಬಗ್ಗೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದು, ಆಗ ಪೊಲೀಸರು ತಮಗೆ ಪಿ.ಡಿ.ಓ ರವರು ಬಂದು ಅಳತೆ ಮಾಡಿಕೊಡುತ್ತಾರೆ. ಅದುವರೆಗೂ ನೀವುಗಳು ಇಬ್ಬರೂ ಸುಮ್ಮನಿರಬೇಕೆಂದು ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿರುತ್ತಾರೆ. ಹೀಗಿರುವಲ್ಲಿ ದಿನಾಂಕ:  09/09/2021 ರಂದು ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಶ್ರೀನಿವಾಸಪ್ಪ ರವರ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಮಧು.ಪಿ ರವರು ಗೋಡೆಯನ್ನು ಕಟ್ಟುತ್ತಿದ್ದು, ಆಗ ತಾನು ಅವರನ್ನು ಕುರಿತು ನೀವುಗಳು ಏಕೆ ಗೋಡೆಯನ್ನು ಕಟ್ಟುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಮಧು.ಪಿ ರವರು ತನಗೆ ಅಲ್ಲಿಯೇ ಇದ್ದ ಇಟ್ಟಿಗೆಯಿಂದ ಮೈ ಕೈ ಮೇಲೆ ಹಾಕಿರುತ್ತಾರೆ ಮತ್ತು ತನ್ನ ಮಗಳಾದ ಸ್ವಪ್ನ ರವರಿಗೆ ಕೈ ಮತ್ತು ಮೈ ಮೇಲೆ ಓಡೆದಿರುತ್ತಾರೆ. ಶ್ರೀಕಾಂತ್ ರವರು ತನಗೆ ಕಲ್ಲಿನಿಂದ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ರಮೇಶ್ ಬಿನ್ ಲೇಟ್ ರಾಮದಾಸಪ್ಪ, ರಾಜು ಬಿನ್ ಲೇಟ್ ಮುನಿದಾಸಪ್ಪ, ರಾಜೇಶ್ ಬಿನ್ ಕೃಷ್ಣಪ್ಪ, ವಿಜಯ್ ಬಿನ್ ಕೃಷ್ಣಪ್ಪ ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ತನ್ನ ಮತ್ತು ತನ್ನ ಮಗಳಾದ ಸ್ವಪ್ನ ರವರ ಮೇಲೆ ಗಲಾಟೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆತ ತಮ್ಮ ಗ್ರಾಮದ ಮುನಿರಾಜು, ಉಷಾ, ಸುಜಾತ ರವರು ಗಾಯಗೊಂಡಿದ್ದ ತನ್ನನ್ನು ಹಾಗೂ ತನ್ನ ಮಗಳಾದ ಸ್ವಪ್ನ ರವರನ್ನು 108 ಆಂಬುಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಮ್ಮನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅದರಂತೆ ತಾವು ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಮೇಲ್ಕಂಡಂತೆ ತನ್ನ ಮೇಲೆ ಗಲಾಟೆ ಮಾಡಿ, ಹಲ್ಲೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 401/2021 ಕಲಂ. 379 ಐಪಿಸಿ :-

      ದಿನಾಂಕ: 10/09/2021 ರಂದು ಸಂಜೆ 5.00 ಗಂಟೆಗೆ ಜಿ.ರವೀಂದ್ರ ಗೌಡ ಬಿನ್ ಲೇಟ್ ಕೆ.ಟಿ.ಎಂ ಗೊಳೇಗೌಡ, 65 ವರ್ಷ. ವಕ್ಕಲಿಗರು, ಜಿರಾಯ್ತಿ, ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಕುರುಬೂರು ಕೋಳಿ ಫಾರಂನಲ್ಲಿ ಸುಮಾರು 35 ಸಾವಿರ ಬೆಲೆ ಬಾಳುವ ಸುಮಾರು 20  ಕೋಳಿಗಳನ್ನು ದಿನಾಂಕ: 08/09/2021 ಬುಧವಾರದ ರಾತ್ರಿ 9.00 ಗಂಟೆಯಿಂದ ಮಾರನೇ ದಿನ ದಿನಾಂಕ: 09/09/2021 ರಂದು ಬೆಳಿಗ್ಗೆ 06.00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ. ನಂತರ ಕಳ್ಳತನ ಮಾಡಿರುವರು ಯಾರು ಎಂದು ವಿಚಾರಣೆ ಮಾಡಿ ತಿಳಿದುಕೊಂಡಿರುತ್ತೇನೆ. ಆದ್ದರಿಂದ  ತಡವಾಗಿ ಈ ದಿನ ಕಂಪ್ಲೇಂಟ್ ಕೊಡುತ್ತಿದ್ದೇನೆ. ಈ ವಿಚಾರದಲ್ಲಿ ತಮ್ಮ ಗ್ರಾಮದ  ವಾಸಿಯಾದ ಗಿರೀಶ ಬಿನ್ ಶಿವಶಂಕರಪ್ಪ ಮತ್ತು ನಾಗಪ್ಪ ಬಿನ್ ಪಿಳ್ಳೋಡ ಇವರುಗಳು ಕಳ್ಳತನ ಮಾಡಿ ಕೋಲಾರದ ರವರಿಗೆ ಮಾರಿರುತ್ತಾರೆ. ತಮ್ಮ ಗ್ರಾಮದ ಗಾಜಲಹಳ್ಳಿ ರಸ್ತೆಯ ಬೆಟ್ಟದ ತಪ್ಪಲಿನಲ್ಲಿರುವ ದರ್ಗಾದಲ್ಲಿ ರಾತ್ರಿ ಕೋಳಿಗಳನ್ನು ಇಟ್ಟುಕೊಂಡು ಬೆಂಗಳೂರು ರಿಜಿಸ್ಟ್ರೇಷನ್ ನಂಬರ್ ಟಾಟಾ ಸುಮೊದಲ್ಲಿ ತೆಗೆದುಕೊಂಡು ಹೋಗಿದ್ದಾರೆಂದು ತನಗೆ ತಿಳಿದು ಬಂದಿರುತ್ತೆ. ಅದ್ದರಿಂದ ಈ ಕೂಡಲೇ ಮೇಲ್ಕಂಡ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ತನ್ನ ಬಾಬತ್ತು ಕಳುವಾಗಿರುವ  ಕೋಳಿಗಳನ್ನು  ಪತ್ತೆ ಮಾಡಿ ಕೊಟ್ಟು ಕಳವು ಮಾಡಿರುವ ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ  ಜರುಗಿಸಿಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 402/2021 ಕಲಂ. 279,337,304(A) ಐಪಿಸಿ & ಸೆಕ್ಷನ್ 134(A&B) INDIAN MOTOR VEHICLES ACT, 1988 :-

      ದಿನಾಂಕ: 11/09/2021 ರಂದು ಬೆಳಗ್ಗೆ 11.00 ಗಂಟೆಗೆ ಡಿ.ಎನ್.ಅಂಜಿನೇಯರೆಡ್ಡಿ ಬಿನ್ ಲೇಟ್ ನಾರಾಯಣಪ್ಪ, 51 ವರ್ಷ, ವಕ್ಕಲಿಗರು, ಜಿರಾಯ್ತಿ ವಾಸ: ದೊಡ್ಡಹಳ್ಳಿ ಗ್ರಾಮ, ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:11/09/2021 ರಂದು ಬೆಳಿಗ್ಗೆ ಸುಮಾರು 10.00 ಗಂಟೆ ಸಮಯದಲ್ಲಿ ಯಾರೋ ತನಗೆ ಪೋನ್ ಮಾಡಿ, ಪೆರಮಾಚನಹಳ್ಳಿ ಗೇಟ್ ಬಳಿ ನಿಮ್ಮ ಅಣ್ಣ ಹಾಗೂ ಇನ್ನೊಬ್ಬರು ಬರುತ್ತಿದ್ದ, ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆಯಿಸಿ, ಅಪಘಾತವಾಗಿರುವುದಾಗಿ ವಿಷಯ ತಿಳಿಸಿದರು, ಕೂಡಲೇ ತಾನು ತನ್ನ ಅಣ್ಣ ಡಿ.ಎನ್.ನಾಗರಾಜ್ ರವರ ಮನೆಯವರು ಪೆರಮಾಚನಹಳ್ಳಿ ಗೇಟ್ ಬಳಿಗೆ ಹೋಗಿ ನೋಡಲಾಗಿ, ವಿಷಯ ನಿಜವಾಗಿದ್ದು, ತನ್ನ ಅಣ್ಣ ಡಿ.ಎನ್.ನಾಗರಾಜ್ ಬಿನ್ ಲೇಟ್ ನಾರಾಯಣಪ್ಪ, ರವರಿಗೆ ತಲೆಗೆ ಹಾಗೂ ಮೈ- ಕೈ ಮೇಲೆ ತೀವ್ರವಾದ ರಕ್ತ ಗಾಯಗಳಾಗಿದ್ದು, ಮೃತಪಟ್ಟಿದ್ದ. ಈತನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ತಮ್ಮ ಗ್ರಾಮದ ದೇವಣ್ಣ ರವರಿಗೂ ಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿರುವ ವಿಷಯ ತಿಳಿಯಿತು. ಸ್ಥಳದಲ್ಲಿದ್ದ ಪೆರಮಾಚನಹಳ್ಳಿ ಗ್ರಾಮದ ವೆಂಕಟರಾಯಪ್ಪ ಹಾಗೂ ಇತರರನ್ನು ವಿಚಾರ ಮಾಡಲಾಗಿ ಈ ದಿನ ದಿನಾಂಕ: 11/09/2021 ರಂದು ಬೆಳಿಗ್ಗೆ ಸುಮಾರು 09.30 ಗಂಟೆ ಸಮಯದಲ್ಲಿ ತಮ್ಮ  ಗ್ರಾಮದ ದೇವಣ್ಣ ಹಾಗೂ ತನ್ನ ಅಣ್ಣ ಡಿ.ಎನ್.ನಾಗರಾಜ್ ರವರು ಪೆರಮಾಚನಹಳ್ಳಿ ಗ್ರಾಮದಿಂದ ಸ್ಪ್ಲೆಂಡರ್ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ ಕೆ.ಎ-43 ಕೆ-4548 ರಲ್ಲಿ ಚಿಂತಾಮಣಿ ರಸ್ತೆ ಕಡೆ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದಾಗ  ಹಿಂಭಾಗದ ಬೆಂಗಳೂರು ರಸ್ತೆ ಕಡೆಯಿಂದ ನೊಂದಣಿ ಸಂಖ್ಯೆ ಕೆ.ಎ-02 ಎ.ಹೆಚ್-6212 ಸ್ವೀಪ್ಟ್ ಕಾರ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೇಲ್ಕಂಡ ದ್ವಿಚಕ್ರ ವಾಹನಕ್ಕೆ ಹಿಂಬಂದಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಉಂಟು ಮಾಡಿದ್ದು, ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳುತ್ತಿದ್ದ ತನ್ನ ಅಣ್ಣ ಹಾಗೂ ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿದ್ದ ದೇವಣ್ಣ ರವರು ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಇಬ್ಬರಿಗೂ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡ ತನ್ನ ಅಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಾಳುವಾದ ದೇವಣ್ಣನನ್ನು ಅಸ್ಪತ್ರೆಗೆ ಸಾಗಿಸಿರುವುದಾಗಿ ವಿಷಯ  ತಿಳಿಯಿತು. ಸ್ಥಳದಲ್ಲಿ ಅಪಘಾತ ಪಡಿಸಿದ ಕಾರ್ ಸಹಾ ನಿಂತಿತ್ತು. ತನ್ನ ಅಣ್ಣನನ್ನು ಯಾವುದೂ ವಾಹನದಲ್ಲಿ ಹಾಕಿಕೊಂಡು ಚಿಂತಾಮಣಿಗೆ ಅಸ್ಪತ್ರೆಗೆ ಬಂದಿರುತ್ತೇವೆ. ಅಲ್ಲಿನ ವೈದ್ಯರು ನೋಡಿ ತನ್ನ ಅಣ್ಣ ಮೃತಪಟ್ಟಿರುವುದಾಗಿ ತಿಳಿಸಿದ್ದು, ಹಾಲಿ ತನ್ನ ಅಣ್ಣನ ಶವ ಅಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತೆ. ಈ ರೀತಿ ಅಪಘಾತ ಪಡಿಸಿ, ಪೊಲೀಸರಿಗೂ ತಿಳಿಸದೆ, ಗಾಯಾಳುಗಳಿಗೆ ಚಿಕಿತ್ಸೆಗೆ ಸಹಕರಿಸಿದೆ, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವ ಮೇಲ್ಕಂಡ ನೊಂದಣಿ ಸಂಖ್ಯೆ ಕೆ.ಎ-02 ಎ.ಹೆಚ್-6212 ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 403/2021 ಕಲಂ. 188,269,270 ರೆ/ವಿ 34 ಐಪಿಸಿ & ಸೆಕ್ಷನ್ 51(b) THE DISASTER MANAGEMENT ACT, 2005 :-

      ದಿನಾಂಕ: 11/09/2021 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-39 ಬಾಬಾಜಾನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 10/09/2021 ರಂದು ತನಗೆ ಠಾಣಾ ವ್ಯಾಪ್ತಿಯ ವಿವಿದ ಗ್ರಾಮಗಳ ಶ್ರೀಗಣೇಶೋತ್ಸವದ ವಿರ್ಸಜನೆ ಕಾರ್ಯದ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಊಲವಾಡಿ, ಹೆಬ್ಬರಿ ಗ್ರಾಮಗಳ ಗಣೇಶ ವಿರ್ಸಜನೆ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 6.00 ಗಂಟೆ ಸಮಯದಲ್ಲಿ ಐಮರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಿದ್ದು ಸದರಿ ಗ್ರಾಮದ ವೆಂಕಟರವಣಸ್ವಾಮಿ ದೇವಾಲಯದ ಬಳಿ ಸದರಿ ಗ್ರಾಮದ ಗ್ರಾಮಸ್ಥರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಗಣೇಶನ ಮೆರವಣಿಗೆ ಮಾಡುತ್ತಾ ಹಲಗೆಗಳನ್ನು ಹೊಡೆಯುತ್ತಾ, ಮಾಸ್ಕ್ ಧರಿಸದೇ ಸುಮಾರು 40-50 ಜನ ಗುಂಪು ಸೇರಿ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಕಾರ್ಯಕ್ರಮ ಮಾಡುತ್ತಿರುತ್ತಾರೆ. ಸದರಿ ಕಾರ್ಯಕ್ರಮವನ್ನು ಸದರಿ ಗ್ರಾಮದ ವಾಸಿ 1).ಸದಾಶಿವರೆಡ್ಡಿ @ ಸದಾ ಬಿನ್ ಚೌಡರೆಡ್ಡಿ, 35 ವರ್ಷ, ಢಾಬಾ ಮಾಲೀಕ, ವಕ್ಕಲಿಗ ಜನಾಂಗ, ಐಮರೆಡ್ಡಿಹಳ್ಳಿ ಗ್ರಾಮ, 2).ಸುನಿಲ್ ಬಿನ್ ವೆಂಕಟೇಶರೆಡ್ಡಿ, 28 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ಐಮರೆಡ್ಡಿಹಳ್ಳಿ ಗ್ರಾಮ, 3).ಆಶೋಕ ಬಿನ್ ಚೌಡಪ್ಪ, 27 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಐಮರೆಡ್ಡಿಹಳ್ಳಿ ಗ್ರಾಮ, 4).ಸಂತೋಷ ಬಿನ್ ವೆಂಕಟೇಶರೆಡ್ಡಿ, 25 ವರ್ಷ, ವಕ್ಕಲಿಗ ಜನಾಂಗ, ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಮೇಲ್ಕಂಡ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಆದ ಕಾರಣ ಕೋವಿಡ್ ರೋಗಾಣು ಸಂಬಂದ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಕಾರ್ಯಕ್ರಮ ಆಯೋಜಿಸಿದ ಮೇಲ್ಕಂಡ 04 ಜನ ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

11. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 169/2021 ಕಲಂ. 379 ಐಪಿಸಿ :-

      ದಿನಾಂಕ: 11/09/2021 ರಂದು ಪಿರ್ಯಾದಿದಾರರಾದ ಎಂ.ಮೋಹನ್ ಬಿನ್ ಮುನಿಶಾಮಪ್ಪ, 38 ವರ್ಷ, ವಕ್ಕಲಿಗರು, ಪ್ರಭಾಕರ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡದ ದೂರಿನ ಸಾರಾಂಶವೆನೆಂದರೆ  ತಾನು ಚಿಂತಾಮಣಿ ಟೌನ್ ಎ.ಪಿ.ಎಂ.ಸಿ ಯಾರ್ಡ್ ನಲ್ಲಿ ಎನ್.ಎಂ.ಎಂ. ಟ್ರೇಡರ್ಸ್ ಟಮೊಟೋ ಮಂಡಿ ಇಟ್ಟುಕೊಂಡಿದ್ದು, ರೈತರು ಬೆಳೆದಿರುವ   ಟಮೊಟೋವನ್ನು ವ್ಯಾಪರಸ್ಥರಿಗೆ ಮಾರಟ ಮಾಡಿ ರೈತರಿಗೆ ಹಣವನ್ನು ಕೊಡುತ್ತಿರುತ್ತೇನೆ. ಹಾಗೇಯೇ ನಮ್ಮ ಅಕ್ಕ ಪಕ್ಕದ ಮಂಡಿಗಳ ಮಾಲೀಕರಾದ 2) ಬಿ.ಮುನಿರಾಜು ಬಿನ್ ಚಿಕ್ಕಬಡ್ಡಪ್ಪ, 3)ಎಸ್.ವಿ.ಚೌಡರೆಡ್ಡಿ, 4) ಅನಿಲ್.ಕೆ.ಆರ್.ಬಿ 5) ಟಿ.ಆರ್.ಕೆ.ರವಿ 6) ಅಂಬರೀಶ್.ಕೆ.ಎ.ಎ 7) ಎಂ.ಎಸ್.ಎನ್.ಮಂಜು 8) ಆರ್.ಕೆ.ರವಿ 9) ಶ್ರೀನಿವಾಸ್ ವಿ.ಎಸ್.ಆರ್ 10) ಆನಂದ,ಎ.ಎ. ರವರುಗಳು ಸಹ ಟೆಮೊಟೋ ವ್ಯಾಪಾರ ಮಾಡುತ್ತಿರುತ್ತಾರೆ. ನಮ್ಮ ಮಂಡಿಗಳಿಗೆ ರೈತರು ಟೆಮೊಟೋವನ್ನು ತುಂಬಿಕೊಂಡು ಬರಲು ನಾವೇ ಸ್ವಂತ ಖರ್ಚಿನಲ್ಲಿ 15 ಕೆ.ಜಿ ಹಾಗು 25 ಕೆ.ಜಿ ತೂಕದ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಖರೀದಿಸಿ ರೈತರಿಗೆ ಬಾಡಿಗೆಗೆ ಕೊಡುತ್ತಿರುತ್ತೇವೆ. ನಾವು ರೈತರಿಗೆ ಕೊಡುವ ಖಾಲಿ ಪ್ಲಾಸ್ಟಿಕ್ ಕ್ರೇಟ್ ಗಳನ್ನು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಇಟ್ಟಿರುತ್ತೇವೆ. ಹೀಗಿರುವಲ್ಲಿ ದಿನಾಂಕ:04/09/2021 ರಿಂದ 9/09/2021 ರವರೆವಿಗೆ ರಾತ್ರಿ ವೇಳೆಯಲ್ಲಿ ತಮ್ಮ ಅಂಗಡಿಗಳ ಬಳಿ ಇರುವ 15 ಕೆ.ಜಿ ಹಾಗು 25 ಕೆ.ಜಿ ತೂಕದ ಸುಮಾರು ಐದು ಸಾವಿರ ಖಾಲಿ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಾವು ಬೇರೆಯವರ ಮಂಡಿಗಳ ಬಳಿ ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ. ನಂತರ ನಾವು ಬಂಬೂ ಬಜಾರ್ ರಜನಿ ಹಾರ್ಡ್ ವೇರ್ ಮುಂಭಾಗದಲ್ಲಿರುವ ಅಂಜದ್ ಎಂಬುವರ ಗುಜರಿ ಅಂಗಡಿಯಲ್ಲಿ ತಾವು ಖರೀದಿಸಿರುವ ಪ್ಲಾಸ್ಟಿಕ್ ಕ್ರೇಟ್ ಗಳು ಕಂಡು ಬಂದಿದ್ದು, ಅಂಜದ್ ರವರನ್ನು ವಿಚಾರ ಮಾಡಲಾಗಿ ಯಾರೋ ಅಸಾಮಿಗಳು ನಮಗೆ ತಂದು ಕೊಟ್ಟಿರುವ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಖರೀದಿಸಿರುವುದಾಗಿ ತಿಳಿಸಿರುತ್ತಾರೆ. ತಾನು ಮತ್ತು ಮೇಲ್ಕಂಡ ಮಾಲೀಕರ ಮಂಡಿಗಳ ಬಳಿ ಎಷ್ಟು ಪ್ಲಾಸ್ಟೀಕ್ ಕ್ರೇಟುಗಳು ಕಳುವು ಆಗಿರುವ ಬಗ್ಗೆ ಮಾಹಿತಿ ಪಡೆದು ಹಾಗು ಪ್ಲಾಸ್ಟಿಕ್ ಕ್ರೇಟ್ಗಳ ಬೆಲೆಯ ಬಗ್ಗೆ ಬಿಲ್ಲುಗಳನ್ನು  ತಂದು ಹಾಜರುಪಡಿಸುತ್ತೇವೆ. ಮೇಲ್ಕಂಡ ಮಾಲೀಕರು ಈ ವಿಚಾರದಲ್ಲಿ ತಾವು ಮಾತನಾಡಿಕೊಂಡು ಈ ದಿನ ಠಾಣೆಯಲ್ಲಿ ದೂರು ನೀಡಿರುತ್ತೇವೆ. ಆದ್ದರಿಂದ ಮೇಲ್ಕಂಡ ನಮ್ಮ ಮಂಡಿಗಳ ಬಳಿ ಇದ್ದ ಸುಮಾರು 5,000 ಪ್ಲಾಸ್ಟಿಕ್ ಕ್ರೇಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 225/2021 ಕಲಂ. 78(I),78(III) KARNATAKA POLICE ACT, 1963 :-

      ದಿನಾಂಕ:10/09/2021 ರಂದು ಬೆಳಿಗ್ಗೆ 9-45 ಗಂಟೆಗೆ ಗೌರೀಬಿದನೂರು ಘನ ನ್ಯಾಯಾಲಯ ಕರ್ತವ್ಯದ ಪಿ.ಸಿ-205 ಮೋಹನ್ ಕುಮಾರ್ ರವರು ಘನ ನ್ಯಾಯಾಲಯದಿಂದ ಅನುಮತಿಯ ಆದೇಶವನ್ನು ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-80, ಕೃಷ್ಣಪ್ಪ, ಎಸ್  ಮತ್ತು ಜಯಣ್ಣ, ಸಿಪಿಸಿ-152 ರವರು ಈ ದಿನ ನಮ್ಮಠಾಣೆಯ ಪಿ.ಎಸ್.ಐ. ಶ್ರೀಮತಿ ಸರಸ್ವತಮ್ಮ ರವರ ಆದೇಶದಂತೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ  ಗೌರಿಬಿದನೂರು ತಾಲ್ಲೂಕಿನ ವಿವಿಧ ಕಡೆ ಗಸ್ತು ಮಾಡಿಕೊಂಡು ಸಂಜೆ 4-00 ಗಂಟೆಗೆ ಗೌರಿಬಿದನೂರು ನಗರಕ್ಕೆ ಬಂದಾಗ ಭಾತ್ಮಿದಾರರಿಂದ ಇದೇ ತಾಲ್ಲೂಕಿನ ವಿಧುರಾಶ್ವತ್ಥ ಆಟೋ ನಿಲ್ದಾಣದಲ್ಲಿ  ಯಾರೋ ಒಬ್ಬ ಆಸಾಮಿ ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಾವು ಸಂಜೆ 4-15 ವಿಧುರಾಶ್ವತ್ಥಕ್ಕೆ  ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಪಂಚರೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಯಾರೋ ಒಬ್ಬ ಆಸಾಮಿಯು  ವಿಧುರಾಶ್ವತ್ಥ ಆಟೋ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುತ್ತೇನೆ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ನನ್ನ ಬಳಿ ಹಣವನ್ನು ಕಟ್ಟಿ ಅಂಕಿಗಳನ್ನು ಬರೆಯಿಸಿಕೊಂಡು ಹೋಗಿ ಎಂದು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವನ್ನು ತೋರಿಸಿ, ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಂಡು ಒಂದು  ಚೀಟಿಯಲ್ಲಿ ಅಂಕಿ ಸಂಖ್ಯೆಗಳ ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ವಿಧುರಾಶ್ವತ್ಥ ಆಟೋ ನಿಲ್ದಾಣದ ಬಳಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟೇಶ ಎನ್ ಬಿನ್ ಲೇಟ್ ಹರಿನಾಥ್, 32 ವರ್ಷ, ಬ್ರಾಹ್ಮಣ ಜನಾಂಗ, ಕೂಲಿ ಕೆಲಸ (ಪ್ಲವರ್ಸ್ ಡೊಕೊರೇಷನ್), ವಾಸ ಚಿಕ್ಕಕುರುಗೋಡು ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂತ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಆತನ ಬಳಿ ಪರಿಶೀಲಿಸಲಾಗಿ 1] ಒಂದು ಬಾಲ್ ಪಾಯಿಂಟ್ 2] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ ಮತ್ತು ರೂ 3] 1530/- ರೂಪಾಯಿಗಳಿದ್ದು ನಗದು ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ. ಹಾಗೂ  ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಆಸಾಮಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ ಆರ್ ನಂ.393/2021 ರಂತೆ ದಾಖಲಿಸಿ ನಂತರ ಸಂಜ್ಞೆಯ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ.225/2021 ಕಲಂ.78(i) 78(III) ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 226/2021 ಕಲಂ. 78(I),78(III) KARNATAKA POLICE ACT, 1963 :-

      ದಿನಾಂಕ:10/09/2021 ರಂದು ಮಾನ್ಯ ಘನ ನ್ಯಾಯಾಲದ ಪಿ.ಸಿ 205 ರವರು ತಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ: ದಿನಾಂಕ:04/09/2021 ರಂದು ರಾತ್ರಿ 7-45 ಗಂಟೆಗೆ ಪಿರ್ಯಾದಿದಾರರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯಿಂದಿಗೆ  ಠಾಣೆಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-80, ಕೃಷ್ಣಪ್ಪ, ಎಸ್  ಆದ ನಾನು ಮತ್ತು ಜಯಣ್ಣ, ಸಿಪಿಸಿ-152 ರವರು ಈ ದಿನ ನಮ್ಮಠಾಣೆಯ ಪಿ.ಎಸ್.ಐ. ಶ್ರೀಮತಿ ಸರಸ್ವತಮ್ಮ ರವರ ಆದೇಶದಂತೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ  ಗೌರಿಬಿದನೂರು ತಾಲ್ಲೂಕಿನ ಚಿಕ್ಕಕುರುಗೋಡು, ಹುದೂತಿ, ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 6-00 ಗಂಟೆಗೆ ನಾಗಸಂದ್ರ ಗ್ರಾಮಕ್ಕೆ ಬಂದಾಗ ಭಾತ್ಮಿದಾರರಿಂದ ಕದಿರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿ  ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಾವು ಸಂಜೆ  6-15 ಕದಿರೇನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಪಂಚರೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಯಾರೋ ಒಬ್ಬ ಆಸಾಮಿಯು  ಕದಿರೇನಹಳ್ಳಿ ಬಸ್  ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುತ್ತೇನೆ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ನನ್ನ ಬಳಿ ಹಣವನ್ನು ಕಟ್ಟಿ ಅಂಕಿಗಳನ್ನು ಬರೆಯಿಸಿಕೊಂಡು ಹೋಗಿ ಎಂದು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವನ್ನು ತೋರಿಸಿ, ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಂಡು ಒಂದು  ಚೀಟಿಯಲ್ಲಿ ಅಂಕಿ ಸಂಖ್ಯೆಗಳ ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ಕದಿರೇನಹಳ್ಳಿ ಬಸ್ ನಿಲ್ದಾಣದ ಬಳಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ರವಿಕುಮಾರ್ ಬಿನ್ ಲಕ್ಷ್ಮಣರೆಡ್ಡಿ, 29 ವರ್ಷ, ಗಾರೆ ಕೆಲಸ, ವಾಸ ಒಕ್ಕಲಿಗರು, ವಾಸ ವಿಧುರಾಕಾಲೋನಿ, ದೊಡ್ಡಕುರುಗೋಡು, ಪೋಸ್ಟ್ ಗೌರೀಬಿದನೂರು ತಾಲ್ಲೂಕು  ಎಂತ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಆತನ ಬಳಿ ಪರಿಶೀಲಿಸಲಾಗಿ 1] ಒಂದು ಬಾಲ್ ಪಾಯಿಂಟ್ 2] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ ಮತ್ತು ರೂ 3] 1570/- ರೂಪಾಯಿಗಳಿದ್ದು ನಗದು ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ. ಹಾಗೂ  ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಸದರಿ ಆಸಾಮಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ 394/2021 ರಂತೆ ದಾಖಲಿಸಿದ್ದು ಮಾನ್ಯ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಈ ದಿನ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

14. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 227/2021 ಕಲಂ. 78(I),78(III) KARNATAKA POLICE ACT, 1963 :-

      ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ ಶ್ರೀ ವಿಜಯ್ ಕುಮಾರ್ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 05/09/2021 ರಂದು ಸಂಜೆ 4-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಠಾಣೆಯಲ್ಲಿದ್ದಾಗ, ಗೌರೀಬಿದನೂರು ತಾಲ್ಲೂಕು, ವಿಧುರಾಶ್ವತ್ಥ ಗ್ರಾಮದ ಬಸ್ ನಿಲ್ದಾಣದಲ್ಲಿ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಹೆಚ್ ಸಿ 10 ಶ್ರೀರಾಮಯ್ಯ, ಪಿಸಿ 302 ಕುಮಾರ್ ನಾಯ್ಕ್  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.538 ರಲ್ಲಿ ವಿದುರಾಶ್ವತ್ಥ ಗ್ರಾಮಕ್ಕೆ ಸಂಜೆ 5-00 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ಆಸಾಮಿ ವಿದುರಾಶ್ವತ್ಥ ಬಸ್ ನಿಲ್ದಾಣದಲ್ಲಿ  ರಸ್ತೆಯಲ್ಲಿ  ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಅಜೀಮ್ ಬಾಷಾ ಬಿನ್ ಹಸೇನ್ ಸಾಬ್, 60ವರ್ಷ, ಮುಸ್ಲಿಂ ಜನಾಂಗ, ಡೆಕೋರೆಶನ್ ಕೆಲಸ,ವಿದುರಾಶ್ವತ್ಥ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 500/-  ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಅಜೀಮ್ ಬಾಷಾ ಬಿನ್ ಹಸೇನ್ ಸಾಬ್ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 500/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ. ದಿನಾಂಕ: 11/09/2021 ರಂದು ಬೆಳಿಗ್ಗೆ 09-30 ಗಂಟೆಗೆ  ಘನ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ 224/2021 ಕಲಂ 78 ಕ್ಲಾಸ್ (1) (3) ಕೆ ಪಿ ಆಕ್ಟ್ ರಿತ್ಯಾ ಪ್ರಕರಣ ದಾಖಲಿಸಿರುತ್ತೆ.

 

15. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 228/2021 ಕಲಂ. 78(I),78(III) KARNATAKA POLICE ACT, 1963 :-

      ದಿನಾಂಕ:06/09/2021 ರಂದು ಫಿರ್ಯಾದುದಾರರಾದ ಶ್ರೀಮತಿ ಲಲಿತಮ್ಮ WPSI ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ 06/09/2021 ರಂದು  ಮದ್ಯಾಹ್ನ 1-00  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ವಿದುರಾಶ್ವತ್ಥ  ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ-60 ರಿಜ್ವಾನುಲ್ಲಾ ಪಿ.ಸಿ-179 ಶಿವಶೇಖರ್  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40 ಜಿ.140 ರಲ್ಲಿ ಗ್ರಾಮಕ್ಕೆ   ಮದ್ಯಾಹ್ನ 2-00  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಇಬ್ಬರು  ಆಸಾಮಿಯು  ವಿದುರಾಶ್ವತ್ಥ ಗ್ರಾಮದ ಬಸ್ ನಿಲ್ದಾಣದ ಬಳಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಗಳನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು,   ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು   ಚಾಂದ್ ಪಾಷ ಬಿನ್ ಇಮಾಂ ಸಾಬ್, ಕದಿರೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ಚಾಂದ್ ಪಾಷ ಬಿನ್ ಇಮಾಂ ಸಾಬ್ ರವರ ಬಳಿ   ನಗದು ಹಣ 1590-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಚಾಂದ್ ಪಾಷ ಬಿನ್ ಇಮಾಂ ಸಾಬ್ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1590-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 2-30  ಗಂಟೆಯಿಂದ 3-30    ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ 4-00 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ. ದಿನಾಂಕ: 11/09/2021 ರಂದು ಬೆಳಿಗ್ಗೆ 11-30 ಗಂಟೆಗೆ  ಘನ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊ.ಸಂ 228/2021 ಕಲಂ 78 ಕ್ಲಾಸ್ (1) (3) ಕೆ ಪಿ ಆಕ್ಟ್ ರಿತ್ಯಾ ಪ್ರಕರಣ ದಾಖಲಿಸಿರುತ್ತೆ.

 

16. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 213/2021 ಕಲಂ. 15(A),32(3) KARNATAKA EXCISE ACT, 1965 :-

      ದಿನಾಂಕ:08/09/2021 ರಂದು ಪಿ,ಎಸ್,ಐ ಮಂಜುನಾಥ   ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:08/09/2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಪೆರೇಸಂದ್ರ ಠಾಣೆಯಲ್ಲಿದ್ದಾಗ ಠಾಣಾ  ಸಿಬ್ಬಂದಿ ಬಾಬಾಜಾನ್  ಹೆಚ್.ಸಿ-253ರವರು ತನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ   ತಾಲ್ಲೂಕು ಬುಶೆಟ್ಟಿಹಳ್ಳಿ ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಬುಶೆಟ್ಟಿಹಳ್ಳಿ ಗ್ರಾಮದ ವೇಣುಗೋಪಾಲ್ ರವರ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ಪೆರೇಸಂದ್ರ ಕ್ರಾಸ್ ನಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ.  ಅದರಂತೆ ತಾನು  ಮತ್ತು ಸಿಬ್ಬಂದಿಯಾದ ಶ್ರೀನಿವಾಸ ಸಿ.ಪಿ.ಸಿ-272  ರವರು ಕೆ.ಎ-40-ಜಿ-1777 ನೊಂದಣೆ ಸಂಖ್ಯೆಯ ಸಕರ್ಾರಿ ಜೀಪಿನಲ್ಲಿ   ಮದ್ಯಾಹ್ನ 2-45  ಗಂಟೆ ಸಮಯಕ್ಕೆ ಬುಶೆಟ್ಟಿಹಳ್ಳಿ   ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ  ಗ್ರಾಮದಲ್ಲಿನ ಮಾಹಿತಿ ಇದ್ದ  ಸ್ಥಳದಿಂದ  ಸ್ವಲ್ಪ ದೂರದ ಮರೆಯಲ್ಲಿ ಜೀಪನ್ನು  ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನ0ು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ  ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 3-00  ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಆಸಾಮಿಯ  ಹೆಸರು & ವಿಳಾಸ ತಿಳಿಯಲಾಗಿ ವೇಣುಗೋಪಾಲ್ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ ಬುಶೆಟ್ಟಿಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 11 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 440 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*11=562.08/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 4-30  ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 4-45  ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

17. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ .214/2021 ಕಲಂ. ಮನುಷ್ಯ ಕಾಣೆ :-

      ದಿನಾಂಕ 11/09/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶೈಲಜಾ ಕೊಂ ಶ್ರೀರಾಮಲು,  49 ವರ್ಷ, ಆರ್ಯ ವೈಶ್ಯರು,ಗೃಹಿಣಿ, ವಾಸ ಚಿಕ್ಕನಾಗವಲ್ಲಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ  ತಾಲ್ಲೂಕು.       ಪೋನ್ ನಂ-7019236741  ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತನಗೆ ಸುಮಾರು 30  ವರ್ಷಗಳ ಹಿಂದೆ ಶ್ರೀರಾಮುಲು  ರವರೊಂದಿಗೆ ಮದುವೆ ಯಾಗಿದ್ದು, ತಮಗೆ ಒಂದು ಹೆಣ್ಣು ಮಗು ಇರುತ್ತೆ. ತನ್ನ ಗಂಡ ಶ್ರೀರಾಮುಲುರವರು ಆದೇಗಾರಹಳ್ಳಿ ಗ್ರಾಮದಲ್ಲಿ ಚಿಕ್ಕ ಹೋಟೆಲ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿ ರುತ್ತಾರೆ. ದಿನಾಂಕ: 10-09-2021  ರಂದು ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ಎಂದಿನಂತೆ ವಾಯು ವಿಹಾರಕ್ಕೆಂದು  ಹೋದವರು ಸಂಜೆಯಾದರೂ ಮನೆಗೆ ವಾಪಸ್ಸು ಬರಲಿಲ್ಲ. ಇದುವರೆವಿಗೂ ತಾನು ತಮ್ಮ ಮನೆಯವರು ತಮ್ಮ ನೆಂಟರ ಮನೆಗಳಲ್ಲಿ ಮತ್ತು ತನ್ನ ಗಂಡನ ಸ್ನೇಹಿತರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ದಿನ ತಡವಾಗಿ ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ದೂರು.

 

18. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 162/2021 ಕಲಂ. 323,341,504,506 ರೆ/ವಿ 34 ಐಪಿಸಿ :-

      ದಿನಾಂಕ:11/069/2021 ರಂದು ಪಿರ್ಯಾದಿದಾರರಾದ ಶ್ರೀ ಚಿಂತಗಿಂಜಲ ರವಿ ಬಿನ್ ಸಿ ದಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು, ನನ್ನ ಸ್ನೇಹಿತರುಗಳಾದ ನರಸಿಂಹಮೂರ್ತಿ, ನರೇಶ, ಅಶೋಕ, ಜನಾರ್ದನ ಈಗ್ಗೆ ಸುಮಾರು 5 ತಿಂಗಳಿನಿಂದ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳೀ ಹೋಬಳಿ ಕೋಡಿಗಾನಹಳ್ಳಿ ಗ್ರಾಮದ ಸುಬ್ರಮಣಿರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ನಾವೆಲ್ಲರೂ ಕಂಟ್ರ್ಯಾಕ್ಷರ್ ಜಯಪ್ರಕಾಶ್ ರೆಡ್ಡಿರವರಿಗೆ ಮಂಜೂರಾಗಿರುವ ಗೌರಿಬಿದನೂರು ತಾಲ್ಲೂಕು ಬೀರಮಂಗಲ ಗೇಟ್ ನಿಂದ ತೊಂಡೇಬಾವಿ ಗ್ರಾಮದ ವರೆಗಿನ ರಸ್ತೆಯ ಕಾಮಗಾರಿ ಕೆಲಸವನ್ನು ಮಾಡಿಕೊಂಡಿರುತ್ತೇವೆ. ದಿನಾಂಕ: 10/09/2021 ರಂದು ರಾತ್ರಿ ನನಗೆ ದ್ವಾರಗಾನಹಳ್ಳೀ ಗ್ರಾಮದ ವಾಸಿ ಶಂಕರ್ ಎಂಬುವವರು ನನಗೆ ಪೋನ್ ಮಾಡಿ ನಾವು ರಸ್ತೆ ಕಾಮಗಾರಿಗೆ ಉಪಯೋಗಿಸುತ್ತಿರುವ ರೋಲರ್ ಯಂತ್ರವನ್ನು ತನ್ನ ಸ್ವಂತ ಕೆಲಸಕ್ಕೆ ಕಳುಹಿಸಿಕೊಡುವಂತೆ ಕೇಳಿದರು. ಅದಕ್ಕೆ ನಾನು ನಮ್ಮ ಕಂಟ್ರ್ಯಾಕ್ಟರ್ ರವರ ಬಳಿ ಕೇಳುವಂತೆ ತಿಳಿಸಿದ್ದಕ್ಕೆ ಶಂಕರ್ ರವರು ನನ್ನನ್ನು ಉದ್ದೇಶಿಸಿ “ಲೋಫರ್ ನನ್ನ ಮಗನೇ ನಿನ್ನಮ್ಮನೇ ಕ್ಯಾಯ ಕಂಟ್ರ್ಯಾಕ್ಟರ್ ನ್ನು ಕೇಳು ಎಂದು ಹೇಳುತ್ತೀಯಾ ನೀನು ಅದು ಹೇಗೆ ರಸ್ತೆ ಕೆಲಸ ಮಾಡುತ್ತೀಯಾ ನಾನು ನೋಡುತ್ತೇನೆ. ನೀನು ಎಲ್ಲಿದ್ದೀಯಾ ಹೇಳು ನಾನು ಅಲ್ಲಿಗೇ ಬರುತ್ತೇನೆ ಬಂದು ನಿನಗೆ ಒದ್ದು ಬಿಸಾಕುತ್ತೇನೆ” ಎಂದು ಬಾಯಿಗೆ ಬಂದಂತೆ ಬೈಯ್ದು ಧಮ್ಕಿ ಹಾಕಿದರು. ಅದೇ ದಿನ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಾನು ನನ್ನ ಸ್ನೇಹಿತರುಗಳು ಬಾಡಿಗೆಗೆ ಇದ್ದ ಮನೆಯಲ್ಲಿದ್ದಾಗ ಶಂಕರ್ ರವರು ತನ್ನೊಂದಿಗೆ ಮೂರು ಜನರನ್ನು ಕರೆದುಕೊಂಡು ಬಂದು ನನ್ನನ್ನು ಕೈಯನ್ನು ಹಿಡಿದು ತಡೆದು “ಏನು ನಾನು ರೋಲರನ್ನು ಕಳುಹಿಸಿಕೊಡು ಎಂದರೆ ಕಂಟ್ರ್ಯಾಕ್ಟರ್ ಕೇಳು ಎಂದು ಹೇಳುತ್ತೀಯಾ, ನೀನು ಮತ್ತು ನಿಮ್ಮ ವಾಹನಗಳು ಅದು ಹೇಗೆ  ಹೊರಗೆ ಹೋಗುತ್ತವೆ ಎಂದು ನೋಡುತ್ತೇನೆ. ನೀನು ನಿನ್ನ ಸ್ನೇಹಿತರುಗಳು ಈಗಲೇ ಇಲ್ಲಿಂದ ಮನೆ ಖಾಲಿಮಾಡಿ ಕೊಂಡು ಹೋಗಬೇಕು ಇಲ್ಲದಿದ್ದರೆ ನಿಮಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಪ್ರಾಣ ಬೆದರಿಕೆ ಹಾಕಿದರು. ಆಗ ನಮ್ಮ ರೂಮಿನಲ್ಲಿದ್ದ ನನ್ನ ಸ್ನೇಹಿತ ನರಸಿಂಹಮೂರ್ತಿ ರವರು ಬಂದು ಸಮಾದಾನ ಮಾಡಿ ಕಳುಹಿಸಿದರು. ಇದರಿಂದ ನಮಗೆ ಇಲ್ಲಿ ಕೆಲಸ ಮಾಡಲು ತೊಂದರೆ ಯಾಗಿರುತ್ತೆ. ನನಗೆ ಪೋನಿನಲ್ಲಿ ಬಾಯಿಗೆ ಬಂದಂತೆ ಬೈಯ್ದು, ಧಮಕಿ ಹಾಕಿ, ಮನೆಯ ಬಳಿ ಬಂದು ನನ್ನನ್ನು ತಡೆದು ಕೆಲಸ ಮಾಡಲು ಬಿಡದಂತೆ ಪ್ರಾಣಬೆದರಿಕೆ ಹಾಕಿರುವ ಶಂಕರ್ ಮತ್ತು ಇತರೆ ಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

19. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 106/2021 ಕಲಂ. 279,337 ಐಪಿಸಿ & ಸೆಕ್ಷನ್ 187 INDIAN MOTOR VEHICLES ACT, 1988 :-

      ದಿನಾಂಕ: 10-09-2021 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ, ತನಗೆ ಮೂರು ಜನ ಮಕ್ಕಳಿದ್ದು 1ನೇ ಮಗಳಾದ ಅಂಜಲಿ ಆರ್ , ಅವರಿಗೆ 6 ವರ್ಷ, ವಯಸ್ಸಾಗಿದ್ದು , 2ನೇ ಮಗಳು ಅನನ್ಯ ಆರ್ 3 ವರ್ಷ, ಮತ್ತು 3ನೇ ಮಗನಾದ ಅಜೀತ್ ಆರ್ ನಾವೆಲ್ಲರೂ ಒಟ್ಟಿಗೆ ಮಲ್ಲಾಂಡಹಳ್ಳಿ ಗ್ರಾಮದಲ್ಲಿ ವಾಸವಿರುತ್ತೇವೆ, ಹಿಗಿರುವಲ್ಲಿ ಒಂದು ವಾರದ ಹಿಂದೆ ತಮ್ಮ ಚಿಕ್ಕಮ್ಮಳಾದ ಕೊಳವನಹಳ್ಳಿ ಗ್ರಾಮದ ಲಕ್ಷ್ಮೀ  ದೇವಮ್ಮ ರವರ ಮನೆಗೆ ಕರೆದುಕೊಂಡು ಬಂದು ಬಿಟ್ಟುಹೋಗಿರುತ್ತೇನೆ. ದಿನಾಂಕ: 10-09-2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಶೈಲೇಶ್ ದೂರವಾಣಿ ಕರೆ ಮಾಡಿ ನಿನ್ನ ಮಗಳಾದ ಅಂಜಲಿ ರವರಿಗೆ ಅಪಘಾತವಾಗಿರುತ್ತದೆ ತಕ್ಷಣ ಬರಬೇಕೆಂದು ಕರೆದಾಗ ತಾನು  ಚಿಕ್ಕಬಳ್ಳಾಪುರ ನಗರದ ಖಾಸಗಿ ಜೀವನ್ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ನಿಜವಾಗಿದ್ದು, ಅಪಘಾತದ ಬಗ್ಗೆ ಸುಮಾ ರವರನ್ನು ವಿಚಾರಣೆ ಮಾಡಲಾಗಿ ಅವರು ದಿನಾಂಕ: 10-09-2021 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ನಿನ್ನ ಮಗಳಾದ ಅಂಜಲಿ ರವರು ಮನೆಯ ಬಳಿಯಿಂದ ತಮ್ಮ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಣಪತಿ ಇಟ್ಟುದ್ದು ಅದನ್ನು ನೋಡಲು ನೆಡೆದುಕೊಂಡು ರಸ್ತೆ ದಾಟುತಿದ್ದಾಗ ಬೊಮ್ಮನಹಳ್ಳಿ ಗ್ರಾಮದ ಕಡೆಯಿಂದ ಚದಲಪುರ ಕಡೆಗೆ ಅಶೋಕ್ ಲೈಲ್ಯಾಂಡ್ ಗುಡ್ಸ್ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡಸಿದ ಪರಿಣಾಮ ಅಂಜಲಿ ರಸ್ತೆಯ ಮೇಲೆ ಬಿದ್ದು ತಾನು ಹೋಗಿ ನೋಡಿದಾಗ ತಲೆಗೆ ಮತ್ತು ಹಣೆಗೆ ರಕ್ತದ ಗಾಯಾ ಮತ್ತು ಎಡಕೈಯ ಬುಜಕ್ಕೆ ಮೂಗೇಟು ಆಗಿದ್ದಾಗ ಅದೇ ವಾಹನದಲ್ಲಿ ತಾನು ಅಂಜಲಿ ರವರನ್ನು ಕರೆದುಕೊಂಡು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಬಳಿ ಇಳಿದು ಆಕೆಯನ್ನು ಒಳಗಡೆ ಕರೆದುಕೊಂಡು ಹೋದಾಗ ಸದರಿ ವಾಹನದ ಚಾಲಕ ವಾಹನವನ್ನು ತೆಗೆದುಕೊಂಡು ಪರಾರಿಯಾಗಿರುತ್ತಾನೆ. ತಾನು ಅಪಘಾತ ಪಡಿಸಿದ ಚಾಲಕನನ್ನು ನೋಡಿದ್ದು ಆತನನ್ನು ಪುನಃ ನೋಡಿದರೆ ಗುರ್ತಿಸುತ್ತೇನೆಂದು ತಿಳಿಸಿದರು, ತನ್ನ ಮಗಳನ್ನು ವೈಧ್ಯಾಧಿಕಾರಿಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ, ತನ್ನ ಮಗಳು ಅಂಜಲಿ ರವರಿಗೆ ಅಪಘಾತವನ್ನುಂಟುಮಾಡಿದ ಅಶೋಕ್ ಲೈಲ್ಯಾಂಡ ಗುಡ್ಸ್ ವಾಹನದ ಚಾಲಕನನ್ನು ಪತ್ತೆ ಮಾಡಿ ಚಾಲಕ ಮತ್ತು ವಾಹನದ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರವವರದಿ.

 

20. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 107/2021 ಕಲಂ. 15(A),32(3) KARNATAKA EXCISE ACT, 1965 :-

      ದಿನಾಂಕ:11-09-2021 ರಂದು ಬೆಳಿಗ್ಗೆ 11-25 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 11-09-2021 ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಕೊಳವನಹಳ್ಳಿ ಗ್ರಾಮದ ರಮೇಶ್ ಬಿನ್ ಲೇಟ್ ಚೆನ್ನಪ್ಪ ತನ್ನ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಗಿರಾಕಿಗಳಿಗೆ ಸ್ಥಳದಲ್ಲೇ ಮದ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯನ್ನು ಅನುಸರಿಸಿ ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಹೆಚ್ ಸಿ-85 ನರಸಿಂಹಮೂರ್ತಿ ಮತ್ತು ಸಿಪಿಸಿ-269 ನಾಗಪ್ಪ, ರವರೊಂದಿಗೆ ಸದರಿ ಸ್ಥಳದ ಮೇಲೆ ಧಾಳಿ ಮಾಡಿ ಕ್ರಮ ಜರುಗಿಸಲು ಕೊಳವನಹಳ್ಳಿ ಗ್ರಾಮದ ಹೋರವಲಯದಲ್ಲಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮ  ಬೆಳಿಗ್ಗೆ 10-15 ಗಂಟೆಯಲ್ಲಿ ಕೊಳವನಹಳ್ಳಿ ಗ್ರಾಮದಲ್ಲಿನ ರಮೇಶ್ ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಬಳಿ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯ ಸೇವನೆ ಸ್ಥಳವಾಕಾಶ ಮಾಡಿಕೊಟ್ಟ ಹೆಸರು ವಿಳಾಸವನ್ನು ಕೇಳಲಾಗಿ ರಮೇಶ್ ಬಿನ್ ಲೇಟ್ ಚೆನ್ನಪ್ಪ, 48 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರಿ, ವಕ್ಕಲಿಗರು, ಕೊಳವನಹಳ್ಳಿ ಗ್ರಾಮ ನಂದಿ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಅಂಗಡಿಯ ಮುಂಬಾಗದ ಬಳಿ  ಒಂದು ಕಪ್ಪು ಪ್ಲಾಸ್ಟಿಕ್ ಕವರ್ ಇದ್ದು  ಕವರಿನಲ್ಲಿದ್ದ ಮದ್ಯದ ಟೆಟ್ರಾ ಪ್ಯಾಕೇಟುಗಳು ಇರುವುದು ಕಂಡುಬಂದಿರುತ್ತದೆ, ಕವರಿನಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 10 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-900 ML ಮದ್ಯವಿದ್ದು ಒಟ್ಟು ಬೆಲೆ 351 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು, ರಮೇಶ್ ನನ್ನು ಗಿರಾಕಿಗಳಿಗೆ, ಮದ್ಯಸೇವನೆಗೆ  ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ನಿನ್ನಬಳಿ ಪರವಾನಿಗೆ, ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ ಸದರಿ ಆಸಾಮಿಯು ತನ್ನ ಬಳಿ ಯಾವುದೂ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10-20 ಗಂಟೆಯಿಂದ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

21. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 94/2021 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ:10-09-2021  ರಂದು ರಾತ್ರಿ 7-15 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ CPC-174 ಯಮನೂರಪ್ಪ ಹದರಿ ರವರು NCR.NO.131/2021 ರಲ್ಲಿ ಘನ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡು ಬಂದು ಹಾಜರ್ಪಡಿಸಿದ್ದು, ಪರಿಶೀಲಿಸಿ ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:10-09-2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ASI ಸೈಯದ್ ಅನ್ಸರ್ ರವರು KA-40-G-59 ಸರ್ಕಾರಿ ಜೀಪಿನಲ್ಲಿ ಸಿಬ್ಬಂದಿಯವರಾದ ಪಿಸಿ-234 ಸುರೇಶಕೊಂಡಗೂಳಿ, ಪಿಸಿ-73 ಲಾಲ ಸಾಬ್ ಷೇಖ್, ಪಿಸಿ-577 ಮಂಜುನಾಥ, ಪಿಸಿ-76 ಸುರೇಶ, ಪಿಸಿ-576 ಯಲ್ಲಪ್ಪ ತೋಳಮಟ್ಟಿ ರವರೊಂದಿಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಸೋಮನಾಥಪುರ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಮಾನ್ಯ ಸಿ.ಪಿ.ಐ., ಚೇಳೂರು ವೃತ್ತ ರವರು ASI ಸೈಯದ್ ಅನ್ಸರ್ ರವರಿಗೆ ದೂರವಾಣಿ ಕರೆ ಮಾಡಿ ಬಾಗೇಪಲ್ಲಿ ತಾಲ್ಲೂಕು ಮರಿಮಾಕಲಪಲ್ಲಿ ಗ್ರಾಮದ ಬಳಿ ಮದ್ದಿರೆಡ್ಡಿಕುಂಟ ಕೆರೆಯ ಡ್ಯಾಮ್ ಬಳಿ ಯಾರೋ ಕೆಲವರು ಅಕ್ರಮವಾಗಿ ಹಣವನ್ನು ಪಣವನ್ನಾಗಿ ಇಟ್ಟು ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ASI ಸೈಯದ್ ಅನ್ಸರ್ ರವರಿಗೆ ಸೂಚಿಸಿದ್ದರ ಮೇರೆಗೆ ASI ರವರು ಮೇಲ್ಕಂಡ ಸಿಬ್ಬಂದಿಯೊಂದಿಗೆ ಸೋಮನಾಥಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪಂಚರೊಂದಿಗೆ ಬಾಗೇಪಲ್ಲಿ ತಾಲ್ಲೂಕು ಮರಿಮಾಕಲಪಲ್ಲಿ ಗ್ರಾಮದ ಬಳಿ ಮದ್ದಿರೆಡ್ಡಿಕುಂಟ ಕೆರೆಯ ಡ್ಯಾಮ್ ಬಳಿಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಮೂರು ಜನರು ಜೋರಾಗಿ ಕೂಗಾಡುತ್ತ ಹಣವನ್ನು ಪಣವನ್ನಾಗಿಟ್ಟು ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದು, ಪಂಚರೊಂದಿಗೆ ಅವರ ಮೇಲೆ ದಾಳಿ ಮಾಡಲಾಗಿ ಮೂರು ಜನ ಆಸಾಮಿಗಳು ಸಿಕ್ಕಿ ಬಿದ್ದಿದ್ದು, ಸ್ಥಳದಲ್ಲಿದ್ದ 3 ಕೋಳಿ ಹುಂಜಗಳು, ಪಣಕ್ಕಾಗಿ ಇಟ್ಟಿದ್ದ 910/- ರೂಗಳನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 4-15 ರಿಂದ 5-00 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಸಿಕ್ಕಿಬಿದ್ದ ಆಸಾಮಿಗಳ ಹೆಸರು & ವಿಳಾಸ ಕೇಳಲಾಗಿ 1)ಅನಿಲ್ ಬಿನ್ ವೆಂಕಟರವಣಪ್ಪ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ:ದೇವಾರ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 2)ಬೈರೆಡ್ಡಿ ಬಿನ್ ಕೊಂಡಪ್ಪ, 48 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ:ದೊಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3)ಅಂಜಿನಪ್ಪ ಬಿನ್ ವೆಂಕಟರಾಯಪ್ಪ, 62 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ:ಮರಿಮಾಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

22. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 95/2021 ಕಲಂ. 143,147,323,324,448,504,506 ರೆ/ವಿ 149 ಐಪಿಸಿ :-

      ದಿನಾಂಕ:11-09-2021 ರಂದು ಹೆಚ್.ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ಪೂಜಪ್ಪ ಬಿನ್ ಹೊನ್ನೂರಪ್ಪ, ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ತಮಗೂ & ತಮ್ಮ ಗ್ರಾಮದ ಈರಪ್ಪ ರವರಿಗೂ 2 ವರ್ಷಗಳ ಹಿಂದೆ ಚರಂಡಿ ವಿಚಾರದಲ್ಲಿ ಗಲಾಟೆಗಳಾಗಿದ್ದು, ತಮ್ಮ ಗ್ರಾಮದ ದೊಡ್ಡ ಮನುಷ್ಯರು ರಾಜೀ-ಪಂಚಾಯ್ತಿ ಮಾಡಿರುವುದಾಗಿ ಅಂದಿನಿಂದ ತಮಗೂ ಅವರಿಗೂ ವೈಷಮ್ಯಗಳಿರುವುದಾಗಿ, ನೆನ್ನೆ ದಿನಾಂಕ:10-09-2021 ರಂದು ಸಂಜೆ 6-30 ಗಂಟೆಯಲ್ಲಿ ತಾನು ಕುರಿಗಳನ್ನು ಹೊಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಸರ್ಕಾರಿ ಶಾಲೆಯ ಬಳಿ ತಮ್ಮ ಗ್ರಾಮದ ನರಸಿಂಹಮೂರ್ತಿ ರವರು ಕಾರಿನಲ್ಲಿ ಅಡ್ಡ ಬಂದಿದ್ದು ತಾನು ಕುರಿಗಳು ಇವೆ ನಿಧಾನವಾಗಿ ಹೋಗು ಎಂದು ಹೇಳಿದ್ದಕ್ಕೆ ನರಸಿಂಹಮೂರ್ತಿ ರವರು ಈ ರಸ್ತೆ ನಿಮ್ಮ ಅಪ್ಪನದು ಅಲ್ಲಾ ಏನೂ ಇವಾಗ ಲೋಪರ್ ನನ್ನ ಮಗನೇ ಎಂದಿದ್ದು ತಾನು ಆತನನ್ನು ಬೈಯ್ದು ಮನೆಗೆ ಹೋಗಿದ್ದು, ಸಂಜೆ 6-45 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತಮ್ಮ ಗ್ರಾಮದ 1)ನರಸಿಂಹಮೂರ್ತಿ ಬಿನ್ ದೊಡ್ಡಮುನಿಸ್ವಾಮಿ 2)ಈರಪ್ಪ ಬಿನ್ ಪಿಸ್ಕಿ ಯಾಮನ್ನ 3)ಗಂಗಾಧರ ಬಿನ್ ಈರಪ್ಪ 4)ಸುರೇಶ ಬಿನ್ ಪಿಸ್ಕಿ ಯಾಮನ್ನ 5)ವೆಂಕಟರವಣಮ್ಮ ಕೋಂ ಈರಪ್ಪ 6)ನಾರಾಯಣಮ್ಮ ಕೋಂ ತಿಪ್ಪನ್ನ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತಮ್ಮ ಮನೆಯೊಳಗೆ ಪ್ರವೇಶಿಸಿ ಕೈಗಳಿಂದ ಹೊಡೆದು, ಈರಪ್ಪ ರವರು ಇಟ್ಟಿಗೆಯಿಂದ ಬೆನ್ನಿಗೆ ಹೊಡೆದಿರುವುದಾಗಿ, ಅಡ್ಡ ಬಂದ ಪಿರ್ಯಾದಿ ಹೆಂಡತಿ ಚಿನ್ನಬಿಡ್ಡಮ್ಮ @ ವೆಂಕಟರವಣಮ್ಮ ರವರಿಗೆ ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನು ಉಂಟು ಮಾಡಿರುವುದಾಗಿ ತಮ್ಮನ್ನು ಕುರಿತು ಲೋಪರ್ ನನ್ನ ಮಕ್ಕಳು ನಿಮ್ಮನ್ನು ಸಾಯಿಸುವವರೆಗೆ ಬಿಡುವುದಿಲ್ಲ, ಎಂದು ಬೆದರಿಕೆ ಹಾಕಿರುವುದಾಗಿ ಮೇಲ್ಕಂಡ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ.

 

23. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 96/2021 ಕಲಂ. 324,504,506 ರೆ/ವಿ 34 ಐಪಿಸಿ :-

      ದಿನಾಂಕ:11-09-2021 ರಂದು ಪಿ.ಸಿ-76 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ನರಸಿಂಹಮೂರ್ತಿ  ಬಿನ್ ಪೆದ್ದಮುನಿಸ್ವಾಮಿ, ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ದಿನಾಂಕ:10-09-2021 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ತಾನು ತನ್ನ ತಮ್ಮ ವಿ.ನರಸಿಂಹಮೂರ್ತಿ ರವರಿಗೆ ತಮ್ಮ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕಾರು ಚಾಲನೆ ಮಾಡುವುದನ್ನು ಕಲಿಸಿಕೊಡುತ್ತಿದ್ದಾಗ ತಮ್ಮ ಗ್ರಾಮದ ಪೂಜಪ್ಪ ಬಿನ್ ಹೊನ್ನೂರಪ್ಪ ರವರು ತನ್ನ ಬಳಿಗೆ ಬಂದು ಅವಾಚ್ಯವಾಗಿ ಬೈಯ್ಯುತ್ತಾ ಏಕೆ ನೀನು ಊರಿಗೆ ಬಂದಿರುವುದು ಎಂದು ಕೇಳಿದ್ದು, ಅದಕ್ಕೆ ತಾನು ಇದು ನಮ್ಮ ಗ್ರಾಮ ನಾನು ಏಕೆ ಬರಬಾರದು ಎಂದು ಹೇಳಿ ದೂರ ಹೋಗುತ್ತಿದ್ದಾಗ ಹಿಂಭಾಗದಿಂದ ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ಎಡಭುಜಕ್ಕೆ ಹೊಡೆದು ನನ್ನ ಮಗನೇ ಇನ್ನೊಂದು ಸಾರು ಊರಿನಲ್ಲಿ ಕಂಡರೆ ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಹೇಳಿ ಅಲ್ಲಿಂದ ಅವರ ಮನೆಗೆ ಹೋಗಿರುವುದಾಗಿ, ಈ ವಿಚಾರ ತಿಳಿದ ಪಿರ್ಯಾದು ಚಿಕ್ಕಪ್ಪ ಈರಪ್ಪ ಹಾಗೂ ಪಿರ್ಯಾದಿಯು ಅವರ ಮನೆಯ ಬಳಿಗೆ ಹೋದಾಗ ಗಂಗರಾಜು ಬಿನ್ ಪೂಜಪ್ಪ, ವೆಂಕಟರವಣಮ್ಮ ಕೋಂ ಪೂಜಪ್ಪ ರವರು ಏಕಾಏಕಿ ತಮ್ಮ ಮೇಲೆ ಗಲಾಟೆ ಮಾಡಿ ಮನೆಯಲ್ಲಿದ್ದ ಮುದ್ದೆಕೋಲಿನಿಂದ ತನಗೆ & ತಮ್ಮ ಚಿಕ್ಕಪ್ಪ ಈರಪ್ಪ ರವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ, ಇದರಿಂದಾಗಿ ತಮ್ಮ ಚಿಕ್ಕಪ್ಪನ ಎರಡೂ ಮೊಣಕಾಲಿಗೆ ತರಚಿದ ಗಾಯವಾಗಿರುವುದಾಗಿ, ಬಲಮುಂಗೈಗೆ ಮೂಗೇಟು ಆಗಿರುವುದಾಗಿ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ.

 

24. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 97/2021 ಕಲಂ. 15(A),32(3) KARNATAKA EXCISE ACT, 1965 :-

      ದಿನಾಂಕ:11-09-2021 ರಂದು CHC-209 ರವರು ಪಂಚನಾಮೆ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:11-09-2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ., ಚೇಳೂರು ವೃತ್ತ ರವರು ತನ್ನನ್ನು ಕರೆದು ಬಾಗೇಪಲ್ಲಿ ತಾಲ್ಲೂಕು ಬೈರೇಪಲ್ಲಿ ಗ್ರಾಮದ ರವಿ ಬಿನ್ ರಾಮರೆಡ್ಡಿ ರವರು ತಮ್ಮ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ  ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ತನ್ನನ್ನು ಮತ್ತು ಸಿಪಿಸಿ-281 ಶಂಕ್ರಪ್ಪ ಕಿರವಾಡಿ ರವರನ್ನು ಕಳುಹಿಸಿಕೊಟ್ಟಿದ್ದು, ಅದರಂತೆ ತಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ರವಿ ಬಿನ್ ರಾಮರೆಡ್ಡಿ ರವರು ತಮ್ಮ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಹಾಗೂ ಅಂಗಡಿ ಮಾಲೀಕರು ಅಲ್ಲಿಂದ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ರವಿ ಬಿನ್ ರಾಮರೆಡ್ಡಿ, 22 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಬೈರೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 20 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 800 ಎಂ.ಎಲ್, ಅದರ ಬೆಲೆ 700/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 13-00 ಗಂಟೆಯಿಂದ 13-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ರವಿ ಬಿನ್ ರಾಮರೆಡ್ಡಿ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 11-09-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080