Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.232/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 09/08/2021 ರಂದು ಮದ್ಯಾಹ್ನ 3-45 ಗಂಟೆಗೆ  ಶ್ರೀ. ನಾಗರಾಜ್ ಡಿ ಆರ್. ಪೊಲೀಸ್ ಇನ್ಸ್ ಪೆಕ್ಟರ್, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ  ದಿನಾಂಕ:09-08-2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೆಮರಿ ಹೋಬಳಿ ಗಿರಿಯಪ್ಪಲ್ಲಿ  ಗ್ರಾಮದ ಆಂಜನೇಯಸ್ವಾಮಿ ದೇವಾಸ್ಥಾನದ ಬಳಿ   ಯಾರೋ ಇಬ್ಬರು  ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿಸಿ-276 ಸಾಗರ, ಪಿಸಿ-192 ವಿನೋದ್ ಕುಮಾರ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ರ ಜೀಪಿನಲ್ಲಿ ಮಿಟ್ಟೆಮರಿ ಗ್ರಾಮದ ಬಸ್ ನಿಲ್ದಾಣದ ಬಳಿ  ಹೋಗಿ ಅಲ್ಲಿಯೇ ಇದ್ದ ಪಂಚರನ್ನು  ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಮದ್ಯಾಹ್ನ  1- 45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು  ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ ಅಂಕಿಗಳ 2 ಮಟ್ಕಾ ಚೀಟಿ, ಎರಡು ಬಾಲ್ ಪೆನ್ ಹಾಗೂ ಅವರ  ಬಳಿ  ಇದ್ದ 570/-  ಮತ್ತು  430/- ರೂಗಳನ್ನು ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಲೋಕೇಶ್ ಬಿನ್ ಗೋವಿಂದಪ್ಪ, 22 ವರ್ಷ, ನಾಯಕ ಜನಾಂಗ, ಕೊಲಿಕೆಲಸ, ವಾಸ ಗಿರಿಯಪ್ಪಲ್ಲಿ ಗ್ರಾಮ, ಮಿಟ್ಟೆಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ಬಾಗೇಪಲ್ಲಿ ತಾಲ್ಲೂಕು, 2] ರಾಜೇಂದ್ರ ಬಿನ್ ನಾರಾಯಣಸ್ವಾಮಿ, 24 ವರ್ಷ, ನಾಯಕ ಜನಾಂಗ, ವ್ಯವಸಾಯ, ವಾಸ ಗಿರಿಯಪ್ಪಲ್ಲಿ, ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು   ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ಇಬ್ಬರು ತಿಳಿಸಿರುತ್ತಾರೆ.  ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ  3-45 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-223/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 10-08-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.34/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008 :-

       ದಿನಾಂಕ:11/08/2021 ರಂದು ಪಿರ್ಯಾದಿ ಶ್ರೀ ಮಂಜುನಾಥ ಎಸ್ ವಿ ಬಿನ್ ವೆಂಕಟೇಶಪ್ಪ,27 ವರ್ಷ, ಕುರುಬರು, SKB STONE CRUSER ನಲ್ಲಿ ಕೆಲಸ, ವಾಸ  ಸೀಗಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಮೊ ಸಂಖ್ಯೆ:9972360276 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಫೇರೆಸಂದ್ರ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಕೌಂಟ್ ನಂ:1293108018017 ರಂತೆ ಉಳಿತಾಯ ಖಾತೆಯನ್ನು ಹೊಂದಿದ್ದು ಅದಕ್ಕೆ ಎ ಟಿ ಎಂ ಕಾರ್ಡನ್ನು ಮತ್ತು ತನ್ನ ಮೇಲ್ಕಂಡ ಮೊಬೈಲ್ ನಂಬರ್ ನ್ನು ಲಿಂಕ್ ಮಾಡಿಕೊಂಡು ಗೂಗಲ್ ಫೇ  ವ್ಯಾಲೇಟ್ ಇನ್ಸಾಟಾಲ್ ಮಾಡಿಕೊಂಡು ಅದರಲ್ಲಿ ತನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ ದಿನಾಂಕ;10/8/2021 ರಂದು ತನ್ನ ಸ್ನೇಹಿತ ಮಹೇಶ್ ಎಂಬುವರು ಕರೆ ಮಾಡಿ ನಿನ್ನ ಮೊಬೈಲ್ ನಂಬರ್ಗೆ ಮತ್ತೊಂದು ಅಕೌಂಟ್ ತಾಜಾ ಪ್ರಾವಿಜನ್ ಸ್ಟೋರ್ ಎಂಬ ಹೆಸರಿನ ಬ್ಯಾಂಕ್ ಖಾತೆಯು ಲಿಂಕ್ ಆಗಿರುವುದಾಗಿ ನನ್ನ ಗೂಗಲ್ ಫೇ ನಲ್ಲಿ ತೋರಿಸುತ್ತಿದೆ ಎಂತ ತಿಳಿಸಿದ ನಂತರ ನಾನು ಬೇರೆ ಸ್ನೇಹಿತನ ಬಳಿ ಚಕ್ ಮಾಡಿ ನೊಡಲಾಗಿ ವಿಷಯ ನಿಜ ಆಗಿರುವುದು ತಿಳಿಯಿತು. ನಂತರ ನಾನು ಅದನ್ನು ತೆಗೆಸೋಣವೆಂತ ಗೂಗಲ್ ಕಸ್ಟಮರ್ ಕೇರ್ ನಂ:7436938443 ನ್ನು ಗೂಗಲ್ ನಲ್ಲಿ ಹುಡಕಿ ಸದರಿ ಸಂಖ್ಯೆಗೆ  ಕರೆ ಮಾಡಿ ವಿಷಯ ತಿಳಿಸಲಾಗಿ, ಅವರು ನಿಮ್ಮ ಮೊಬೈಲ್ ನಲ್ಲಿನ ಫ್ಲೇಸ್ಟೋರ್ ನಿಂದ “ANYDESK APP” ನ್ನು ಡೌನ್ ಲೋಡ್ ಮಾಡಿಕೊಂಡು ನಂತರ ಅದನ್ನು ಓಪನ್ ಮಾಡಿ ಅದರಲ್ಲಿನ  ಐಡಿ ನಂಬರ್ ಹೇಳುವಂತೆ ತಿಳಿಸಿ ಹಾಗೂ ನನ್ನ ಖಾತೆಯ ಎ ಟಿ ಎಂ ಕಾರ್ಢನ್ನು ಸ್ಕ್ಯಾನ್ ಮಾಡುವಂತೆ ತಿಳಿಸಿದ. ನಾನು ಅವರು ಗೂಗಲ್ ಕಸ್ಟಮರ್ ಕೇರ್ ನವರೆ ಅಂತ ನಂಬಿ ಅವರು ಹೇಳಿದಂತೆ ಮಾಡಿದೆ ಕೂಡಲೆ ನನ್ನ ಖಾತೆಯಿಂದ ಮೂರು ಭಾರಿ 25250/-,25250/- ಮತ್ತು 23999/- ರೂಗಳು ಒಟ್ಟು 74,499/- ರೂಗಳನ್ನು ಅವನು ನನ್ನ ಖಾತೆಯಿಂದ ವರ್ಗಾಯಿಸಿ ಕೊಂಡಿರುವ ಸಂದೇಶಗಳು ನನ್ನ ಮೊಬೈಲ್ ಬಂದಿದ್ದು, ಕೂಡಲೆ ನಾನು ನನ್ನ ಮೊಬೈಲ್ ನಲ್ಲಿ ಇನ್ಸಾಟಾಲ್ ಮಾಡಿದ್ದ “ANYDESK APP” ನ್ನು UNINSTAL  ಮಾಡಿಬಿಟ್ಟೆ. ನಂತರ ನನ್ನ ಖಾತೆಯಲ್ಲಿ ಇದ್ದ ಉಳಿಕೆ ಹಣ 23,765/- ಉಳಿದಿರುತ್ತದೆ. ಸದರಿ ಮೇಲ್ಕಂಡಂತೆ ಗೂಗಲ್ ಕಸ್ಟಮರ್ ಕೇರ್ ನವರು ಅಂತ ನಂಬಿಸಿ ನನ್ನಿಂದ ANYDESK APP” ನ್ನು ಇನ್ಸಾಟಾಲ್ ಮಾಡಿಸಿ ಹಾಗೂ ನನ್ನ  ATM CARD SCAN  ಮಾಡಿಸಿ ನನ್ನ ಖಾತೆಯ ಮಾಹಿತಿಯನ್ನು ಪಡೆದುಕೊಂಡು ನನಗೆ ಮೋಸ (ವಂಚಿಸಿರುವ) ಸೈಬರ್ ಅಪರಾಧಿಗಳನ್ನು ಪತ್ತೆ ಮಾಡಿ ಕಾನೂನು  ಕ್ರಮ ಜರಗಿಸಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಿಕೊಡಲು  ಕೋರಿ ನೀಡಿದ ದೂರು.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 436 ಐ.ಪಿ.ಸಿ :-

       ಪಿರ್ಯಾದಿದಾರರಾದ ರಾಘವೇಂದ್ರ ಕೆ.ವಿ ಬಿನ್ ಲೇಟ್ ಎಸ್.ವಿ ವೆಂಕಟೇಶಪ್ಪ, 41 ವರ್ಷ, ಕುರುಬ ಜನಾಂಗ, ಕಾಚಹಳ್ಳಿ ಗ್ರಾಮ ಕಸಬಾ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೆನೆಂದರೆ ನನ್ನ ತಂದೆ ಹೆಸರಿನಲ್ಲಿ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ವಾರ್ಡ್ ನಂ: 14, 07 ಕ್ರಾಸ್ ನಲ್ಲಿ ಶಿವಸೂರ್ಯ ಕಲ್ಯಾಣ ಮಂಟಪದ ನಗರ ಸಭೆ ಖಾತೆ ನಂ: 129/36/36 ವುಳ್ಳ ಪೂರ್ಣ ಪಶ್ಚಿಮ 90 ಅಡಿ, ಉ-ದ-113 ಅಡಿಗಳು ವಿಸ್ತೀರ್ಣ ಇದರಲ್ಲಿ 65*100 ಅಡಿಗಳು ಆಗಿರುತ್ತೇ. ಈ ಕಲ್ಯಾಣ ಮಂಟಪದಲ್ಲಿ ಶುಭ ವಿವಾಹ ಕಾರ್ಯಗಳಿಗೆ ಬಾಡಿಗೆಗೆ ನೀಡಿ ಜೀವನ ನಡೆಸಿಕೊಂಡು ಬರುತ್ತಿದ್ದು ಈ ಕಲ್ಯಾಣ ಮಂಟಪದ ಪಕ್ಕದಲ್ಲಿ ಕೆ.ಜಿ.ಎನ್ ಬಡಾವಣೆ ವಾಸಿಯಾದ ಎ. ಮಹಮ್ಮದ್ ನಜಾಮ್ ಬಿನ್ ಅಬ್ದುಲ್ ವಹಾಬ್ (9741709326) ರವರು ಗುಜರಿ ಅಂಗಡಿ ನಡೆಸುತ್ತಿದ್ದು ಸದರಿ ಮಾಲೀಕನಿಗೆ ನಾವು ಹಲವು ಬಾರಿ ಮೌಖಿಕವಾಗಿ ಸಾರ್ವಜನಿಕ ವಸತಿ ಪ್ರದೇಶದಲ್ಲಿ ಗುಜರಿ ಅಂಗಡಿ ನಡೆಸುವುದು ಸರಿಯಲ್ಲ. ಹಾಗೂ ಏನಾದರೂ ಅನಾಹುತ ಆಗಿದ್ದಲ್ಲಿ ಇಲ್ಲಿನ ವಸತಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತೆ ಎಂದು ತಿಳಿಸಿದರು ಗುಜರಿ ವ್ಯಾಪಾರ ನಡೆಸಿಕೊಂಡು ಬಂದಿರುತ್ತಾರೆ. ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡು ಎರಡು ವರ್ಷಗಳಿಂದ ಕಬ್ಬಿಣದ ಶೀಟ್ ಗಳಿಂದ ಗೋಡನ್ ನಿರ್ಮಾಣ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಗಾಳಿ ಬೆಳಕು ಬಾರದಂತೆ ನಿರ್ಮಾಣ ಮಾಡಿರುತ್ತಾನೆ. ಹಲವು ಬಾರಿ ಮೌಖಿಕವಾಗಿ ಶೀಟ್ ಗಳನ್ನು ತೆಗೆಯಲು ಹೇಳಿದರು ನಮ್ಮ ಮೇಲೆ ಹೇಳಿದರು ಗಲಾಟೆ ಮಾಡಿರುತ್ತಾನೆ. ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ಸಂದು ಜಾಗವು ನಮ್ಮ ಸ್ವಂತದ್ದಾಗಿದ್ದು, ಗಾಳಿ ಬೆಳಕು ಬರಲು ಬಿಟ್ಟಿಕೊಂಡಿದ್ದೆವು. ನಮ್ಮ ಮೇಲೆ ದುರುದ್ದೇಶದಿಂದ ಎ. ಮಹಮದ್ ನಜಾಮ್ ರವರು ದಿನಾಂಕ:04.08.2021 ರಂದು ರಾತ್ರಿ ಸುಮಾರು 10.50 ರ ಸಮಯದಲ್ಲಿ ನಮ್ಮ ಕಲ್ಯಾಣ ಮಂಟಪಕ್ಕೆ ತೊಂದರೆಯಾಗ ಬೇಕೆಂಬ ಉದ್ದೇಶದಿಂದ ಗುಜರಿ ಅಂಗಡಿಗೆ ಬೆಂಕಿ ಇಟ್ಟಿರುತ್ತಾನೆ. ಶಬ್ದವನ್ನು ಗಮನಿಸಿದ ಕಲ್ಯಾಣ ಮಂಟಪದಲ್ಲಿ ಮಲಗಿದ್ದ ನಾಗರಾಜ್ ರವರು ಎದ್ದು ನೋಡಿದಾಗ ಎ. ಮಹಮ್ಮದ್ ನಜಾಮ್ ಅಲ್ಲಿಂದ ಪರಾರಿಯಾಗಿರುತ್ತಾನೆ.  ಬೆಂಕಿಗಾಹುತಿಯಿಂದ ಕಲ್ಯಾಣ ಮಂಟಪದಲ್ಲಿ ನಷ್ಠವಾಗಿರುವ ವಸ್ತುಗಳು 13 ಪ್ಯಾನುಗಳು, 8 ಎಲಕ್ಟ್ರಿಕಲ್ ಸ್ವಿಚ್ ಬೋರ್ಡ್ ಗಳು, 40 ಎಲ್.ಇ.ಡಿ ಬಲ್ಬ್ ಮತ್ತು ಟ್ಯೂಬ್ ಲೈಟ್ ಗಳು, ನೆಲ ಮಹಡಿ ಮತ್ತು ಮೊದಲನೇ ಮಹಡಿ, ಗೋಡೆ ಹಾಗೂ ಕಿಟಕಿಗಳ ಸಂಪೂರ್ಣ ವೈರಿಂಗ್ ಹಾಗೂ ಕಿಟಕಿ ಬಾಗಿಲುಗಳು ಮತ್ತು ಟೈಲ್ಸ್ ಕಲ್ಯಾಣ ಮಂಟಪದ ಒಳಗಡೆ ಬಣ್ಣ ನಷ್ಠವುಂಟಾಗಿರುತ್ತೆ. ಆತನು ಗುಜರಿ ವ್ಯಾಪಾರ ನಡೆಸಲು ಕೆ.ಇ.ಬಿ ಯಿಂದ ತಗಡಿನ ಶಿಟ್ ನಿರ್ಮಾಣ ಮಾಡಿಕೊಂಡಿರುವ ಮೈದಾನಕ್ಕೆ ಅನಧಿಕೃತವಾಗಿ ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕವನ್ನು ಪಡೆದಿರುತ್ತಾನೆ. ಮತ್ತು ನಗರ ಸಭೆಯಿಂದ ವ್ಯಾಪಾರ ಪರವಾನಗಿಯನ್ನು ಪಡೆದಿರುವುದಿಲ್ಲ. ನಮ್ಮ ಕಟ್ಟಡದಲ್ಲಿ ಆಗಿರುವ ನಷ್ಠದ ಬಗ್ಗೆ ಸಿವಿಲ್ ಇಂಜಿನಿಯರ್ ರವರನ್ನು ಕರೆಯಿಸಿಕೊಂಡು ಪರಿಶೀಲಿಸಿ, ಆಗಿರುವ ನಷ್ಠದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯ ಬೇಕಾಗಿರುವ ಕಾರಣ ತಡವಾಗಿ ದೂರನ್ನು ನೀಡಿರುತ್ತೆ. ಆದ್ದರಿಂದ ಮಹಮದ್ ನಜಾಮ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿ ಕೋರಿ, ಕಲ್ಯಾಣ ಮಂಟಪದಲ್ಲಿ ಆಗಿರುವ ನಷ್ಠದ ಛಾಯಾ ಚಿತ್ರಗಳು ಸಿವಿಲ್ ಇಂಜಿನಿಯರ್ ನೀಡಿರುವ ನಷ್ಠದ ಅಂದಾಜು ಪಟ್ಟಿ, ಮತ್ತು ಅಗ್ನಿಶಾಮಕ ವರದಿಯನ್ನು ಲಗತ್ತಿಸಿ ಕೊಟ್ಟ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.106/2021 ಕಲಂ. 15(A),32(3) ಕೆ.ಇ ಆಕ್ಟ್:-

       ದಿನಾಂಕ:10/08/2021 ರಂದು ಮಧ್ಯಾಹ್ನ 15-45 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ವಲಸೇನಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ರವರನ್ನು ಜೀಪ್ ಚಾಲಕರಾಗಿ ಹಾಗೂ  ಸಿ.ಪಿ.ಸಿ 09 ನಾರಾಯಣಸ್ವಾಮಿ ರವರನ್ನು ಕರೆದುಕೊಂಡು ಮಧ್ಯಾಹ್ನ 16-15 ಗಂಟೆಗೆ ವಲಸೇನಹಳ್ಳಿ ಗ್ರಾಮಕ್ಕೆ ಹೋಗಿ ಮಾಹಿತಿದಾರರಿಂದ ಆಸಾಮಿಯ ಮತ್ತು ಸ್ಥಳದ ಬಗ್ಗೆ ಪುನಃ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ವಲಸೇನಹಳ್ಳಿ ಗ್ರಾಮದ  ರಾಮಚಂದ್ರಪ್ಪ ಬಿನ್ ಲೇಟ್ ವೆಂಕಟಸ್ವಾಮಿ ರವರ ಮನೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ರಾಮಚಂದ್ರಪ್ಪರವರು ತನ್ನ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ಸಿಬ್ಬಂದಿಯವರು ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ರಾಮಚಂದ್ರಪ್ಪ ಬಿನ್ ಲೇಟ್ ವೆಂಕಟಸ್ವಾಮಿ,45 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ವಲಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:8088003319 ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  20 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1800 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 702.6 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30 ಗಂಟೆಯಿಂದ ಸಂಜೆ 17-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ, ಆಸಾಮಿಯೊಂದಿಗೆ ಸಂಜೆ 18-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:106/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.107/2021 ಕಲಂ. 306,506,34 ಐ.ಪಿ.ಸಿ:-

        ದಿನಾಂಕ: 11/08/2021 ರಂದು ಪಿರ್ಯಾದುದಾರರಾದ ಶ್ರೀ.ನಾರಾಯಣಸ್ವಾಮಿ ಬಿನ್ ಲೇಟ್ ಬಚ್ಚನ್ನ  55 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಹೋಳೂರು ಗ್ರಾಮ, ಕೋಲಾರ (ತಾ) ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವನೇಂದರೆ, ತಾನು ಮೇಲ್ಕಂಡ ವಿಳಾಸದಾರನಾಗಿದ್ದು, ತನಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಯಾದ ಶಾಂತಮ್ಮ ರವರಿಗೆ ಇಬ್ಬರು ಮಕ್ಕಳಿದ್ದು, ಆ ಪೈಕಿ, ಮೊದಲನೇ ಮಗನಾದ ಅಶೋಕ ಹೆಚ್.ಎನ್ 28 ವರ್ಷ, 2ನೇ ಜಯಲಕ್ಷ್ಮಿ ರವರಾಗಿರುತ್ತಾರೆ. 2 ನೇ ಹೆಂಡತಿ ಭಾಗ್ಯಮ್ಮರವರಿಗೆ ಇಬ್ಬರು  ಮಕ್ಕಳಿದ್ದು, 1 ನೇ ಆರತಿ, 2 ನೇ ಅಮರನಾಥ ರವರಾಗಿರುತ್ತಾರೆ. ತನ್ನ ಮೊದಲನೇ ಹೆಂಡತಿ ಶಾಂತಮ್ಮ ರವರು ಮೃತಪಟ್ಟಿದ್ದು, ಅವರ ಮಗನಾದ ಅಶೋಕ  ರವರು 2011-12 ನೇ ಸಾಲಿನಿಂದ ಸಾದಲಿ ಗ್ರಾಮದ ಅಂಚೆ ಕಛೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಮಗ ಸದರಿ ಗ್ರಾಮದ ವಾಸಿ ದ್ಯಾವಪ್ಪ  ಬಿನ್  ವೆಂಕಟರವಣಪ್ಪ ರವರ ಬಾಬತ್ತು ರೂಮ್ ಬಾಡಿಗೆಗೆ ತೆಗೆದುಕೊಂಡು ಅಲ್ಲಿಯೇ ವಾಸವಿದ್ದು, ಸುಮಾರು ಒಂದು ತಿಂಗಳಿಗೊಮ್ಮೆ ತಮ್ಮ ಗ್ರಾಮಕ್ಕೆ ಬಂದು ಹೋಗುತ್ತಿದ್ದನು.  ಹೀಗಿರುವಲ್ಲಿ ದಿ:- 25/09/2017 ರಂದು ತನ್ನ ಮಗ  ತಾನಿದ್ದ ರೂಮಿನಲ್ಲಿ ಮೇಲ್ಚಾವಣೆಗೆ ಇದ್ದ ಕೊಂಡಿಗೆ ನೇಣುಹಾಕಿಕೊಂಡು, ಮೃತಪಟ್ಟಿದ್ದ ವಿಷಯವನ್ನು ಸಾದಲಿ ಗ್ರಾಮದ ಯಾರೋ ತಿಳಿಸಿದ್ದು, ನಾವುಗಳು ಸಾದಲಿ ಗ್ರಾಮಕ್ಕೆ ಬಂದು ನೋಡಲಾಗಿ ಸಾದಲಿ ಗ್ರಾಮದ ಆಸ್ಪತ್ರೆಯಲ್ಲಿ  ತನ್ನ ಮಗ ಅಶೋಕ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿರುತ್ತಾನೆ. ಈ ವಿಚಾರದಲ್ಲಿ  ಕಾನೂನು ಕ್ರಮ ಕೈಗೊಳ್ಳಲು ಕೋರಿ ಅದೇ ದಿನ ದಿ:_25/09/2017 ರಂದು ತಾನು  ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರನ್ನು ನೀಡಿದ್ದು, ಯು.ಡಿ.ಆರ್ ನಂ 08/2017 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ಸಹ ದಾಖಲಾಗಿರುತ್ತೆ. ದಿ:- 26/09/2017 ರಂದು ಪೊಲೀಸರು, ತನ್ನ ಮಗ ಸಾದಲಿ ಗ್ರಾಮದಲ್ಲಿ ವಾಸವಾಗಿದ್ದ ರೂಮ್ ನಲ್ಲಿ ತನಿಖೆ ಕೈಗೊಂಡ ಸಂಧರ್ಭದಲ್ಲಿ ತನ್ನ ಮಗನು ಬರೆದಿದ್ದ, ಡೆತ್ ನೋಟ್  ಸಿಕ್ಕಿದ್ದು,  ಸದರಿ ಡೆತ್ ನೋಟ್ ನಲ್ಲಿ ತನ್ನ ಮಗನು, ತನ್ನ ಸಾವಿಗೆ  ಹಣಕಾಸಿನ ವಿಚಾರದಲ್ಲಿ ಹಾಗೂ ಕೆಲಸದ ವಿಚಾರದಲ್ಲಿ ಸಾದಲಿ ಗ್ರಾಮದ ವಾಸಿ ಬಾರ್ ಮಂಜು  ಹಾಗೂ ಇತರರು  ತೊಂದರೆ ನೀಡಿದ್ದು,  ನನ್ನ ಸಾವಿಗೆ ಅವರೇ ಕಾರಣರೆಂತ ಬರೆದಿರುತ್ತಾನೆ. ಸದರಿ ಡೆತ್ ನೋಟ್ ನ್ನು ಪೊಲೀಸರು ಅದೇ ದಿನ ಅಮಾನತ್ತು ಪಡಿಸಿಕೊಂಡು, ಬರವಣಿಗೆ ತಜ್ಞರಿಗೆ ಕಳುಹಿಸಿಕೊಟ್ಟಿರುತ್ತಾರೆ. ಈಗ ಬರವಣಿಗೆ ತಜ್ಞರಿಂದ ವರದಿ ಬಂದಿದ್ದು,  ಸದರಿ ವರದಿಯಲ್ಲಿ ತನ್ನ ಮಗನು ಬರೆದಿರುವ ಡೆತ್ ನೋಟ್ ನಲ್ಲಿನ ಅಕ್ಷರಗಳು, ತನ್ನ ಮಗನ ಬರವಣಿಗೆಗೆ ಹೋಲಿಕೆಯಾಗಿರುವುದಾಗಿ, ಪೊಲೀಸರು ತಿಳಿಸಿರುತ್ತಾರೆ. ತನ್ನ ಮಗ ಅಶೋಕ ಬದುಕಿದ್ದಾಗ ತಮಗೆ ಸಾದಲಿ ಗ್ರಾಮದ ಬಾರ್ ಮಂಜು ಹಾಗೂ ಇತರರು ತನಗೆ ಹಣ ವಾಪಸ್ ನೀಡಬೇಕಾಗಿದ್ದು, ತಾನು ಕೇಳಿದಾಗಲೆಲ್ಲಾ, ನನಗೆ ಬೆದರಿಕೆ ಹಾಕಿ ನೀನು ಸತ್ತರೂ ನಾವು ಹಣಕೊಡುವುದಿಲ್ಲ. ಏನು ಮಾಡತೀಯೋ ಮಾಡಕೋ, ಎಂತ ಸಾಯುವಂತೆ ತನಗೆ ಪ್ರಚೋಧನೆ ನೀಡುತ್ತಿರುತ್ತಾರೆ ಹಾಗೂ ತೊಂದರೆ ಮಾಡುತ್ತಿರುತ್ತಾರೆಂತ  ವಿಷಯವನ್ನು ತನಗೆ ಹಾಗೂ ತನ್ನ ಹೆಂಡತಿಯ ಬಳಿ ಹೇಳಿಕೊಳ್ಳುತ್ತಿದ್ದ. ಆಗ ತಾವು ತನ್ನ ಮಗನಿಗೆ ಸಮಾಧಾನ ಮಾಡುತ್ತಿದ್ದೆವು. ಆದರೂ ಸಹ ತನ್ನ ಮಗ ದಿ:- 25/09/2017 ರಂದು ಮೇಲ್ಕಂವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋಧನೆ ನೀಡಿದ್ದರಿಂದ,  ಆತನು ವಾಸವಿದ್ದ ಸಾದಲಿ ಗ್ರಾಮದ ರೂಮ್ ನಲ್ಲಿ ಮೇಲ್ಚವಣೆಯ ಕೊಂಡಿಗೆ ನೇಣು ಹಾಕಿಕೊಂಡು  ಮೃತಪಟ್ಟಿರುತ್ತಾನೆ. ಆದ್ದರಿಂದ ತನ್ನ ಮಗನು ಡೆತ್ ನೋಟ್ ನಲ್ಲಿ ಬರೆದಿರುವಂತೆ ಸಾದಲಿ ಗ್ರಾಮದ ಬಾರ್ ಮಂಜು ಮತ್ತು ಇತರರು ನನ್ನ ಮಗನು ಆತ್ಮ ಹತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.188/2021 ಕಲಂ. 78(I),78(3) ಕೆ.ಪಿ ಆಕ್ಟ್:-

       ದಿನಾಂಕ:02/08/2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಶ್ರೀ.ವಿಜಯ್ ಕುಮಾರ್ ಪಿಎಸ್ಐ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಯಲ್ಲಿ ನೀಡಿದ ಮೆಮೋ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 02/08/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.512 ರಾಜಶೇಖರ, ಪಿ.ಸಿ.426 ಲೋಹಿತ್ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.538 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 12-00 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನರೇಶ ಬಿನ್ ಲೇಟ್ ನರಸಿಂಹಪ್ಪ, 35 ವರ್ಷ, ಆದಿ ಕರ್ನಾಟಕ, ಅಂಗಡಿ ವ್ಯಾಪಾರ, ವಾಟದಹೊಸಹಳ್ಳಿ ಗ್ರಾಮದ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಪರಿಶೀಲಿಸಲಾಗಿ ನಗದು ಹಣ 570-00 ರೂಗಳು, ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ . ನರೇಶ ಬಿನ್ ಲೇಟ್ ನರಸಿಂಹಪ್ಪ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 570-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 12-30 ಗಂಟೆಯಿಂದ ಮದ್ಯಾಹ್ನ 1-30 ಗಂಟಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಮದ್ಯಾಹ್ನ 2-30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ನಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಾಗಿರುತ್ತೆ.ದಿನಾಂಕ 11/08/2021 ರಂದು 9-45 ಗಂಟೆಗೆ ನ್ಯಾಯಾಲಯದ ಪಿಸಿ 302 ರವರು ನ್ಯಾಯಾಲಯದ ಅನುಮತಿಯನ್ನು NCR NO 343/2021 ರಲ್ಲಿ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT:-

       ದಿನಾಂಕ:11/08/2021 ರಂದು ಪಿರ್ಯಾದಿದಾರರಾದ ಗಂಗಾಧರನಾಯಕ ಬಿನ್ ಸೋಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಸುಮಾರು 2 ವರ್ಷದಿಂದ ಆರ್.ಸಿ.ಸಿ.ಎಲ್ ಟೋಲ್ ಕಂಪನಿಯಲ್ಲಿ ಅಂಬ್ಯೂಲೇನ್ಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:10/08/2021 ರಂದು ನಾನು ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10-30 ಗಂಟೆಗೆ ಗೌರಿಬಿದನೂರು ತಾಲ್ಲೂಕು ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿ ಇರುವ ಎಸ್.ಹೆಚ್.9 ರಸ್ತೆಯ BAYER ಕಂಪನಿಯ ಮುಂಭಾಗ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಅಪಘಾತ ಪಡಿಸಿ ಹೊರಟು ಹೋಗಿರುವುದಾಗಿ BAYER ಕಂಪನಿಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯಾದ ಮಂಜುನಾಥ ರವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಆಗ ನಾನು ಮತ್ತು ನಮ್ಮ ಟೋಲ್ ಕಂಪನಿಯ ಭದ್ರತಾ ಸಿಬ್ಬಂದಿಯಾದ ಸುರೇಶ್ ರವರು  ಅಂಬ್ಯೂಲೇನ್ಸ್ ನಲ್ಲಿ ಸದರಿ ಸ್ಥಳಕ್ಕೆ ಬಂದು ಅಪಘಾತದಿಂದ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ರಾತ್ರಿ ಸುಮಾರು 11-00 ಗಂಟೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಆಗ ವೈದ್ಯರು ಸದರಿ ಅಪರಿಚಿತ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-15 ಗಂಟೆಗೆ ಮೃತಪಟ್ಟಿದ್ದು, ಮೃತ ದೇಹವು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ ಮತ್ತು ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ,  ಅದ್ದರಿಂದ ಸದರಿ ಅಪರಿಚಿತ ವ್ಯಕ್ತಿಯ ವಾರಸುದಾರರನ್ನು ಹಾಗೂ ಸದರಿ ವ್ಯಕ್ತಿಗೆ ಅಪಘಾತ ಪಡಿಸಿದ ವಾಹನವನ್ನು ಮತ್ತು ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 323,324,504,506,34 ಐ.ಪಿ.ಸಿ :-

       ದಿನಾಂಕ: 10/08/2021 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಗಾಯಾಳು ಪಡೆದುದರ ಸಾರಾಂಶವೇನೆಂದರೆ ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ ಉಪ್ಪಾರ್ಲಪಲ್ಲಿ ಗ್ರಾಮದ ವೆಂಕಟರವಣ ಬಿನ್ ಶಂಕರಪ್ಪರವರು ನನ್ನ ಬಳಿ ಕೈ ಸಾಲವಾಗಿ ಎಂಟು ಸಾವಿರ ರೂ ತೆಗೆದುಕೊಂಡಿದ್ದು ಹಲವು ಬಾರಿ ಕೇಳಿದರು ಕೊಟ್ಟಿರುವುದಿಲ್ಲ ಆತನ ಅಣ್ಣನಾದ ಚಂದ್ರ ರವರು ನಮ್ಮ ಜಮೀನಿನಲ್ಲಿ ಗುತ್ತಿಗೆಗೆ ಬೆಳೆಯನ್ನಿಟ್ಟಿದ್ದು ಈಗ್ಗೆ ಸುಮಾರು ಎರಡು ತಿಂಗಳುಗಳ ಹಿಂದೆ ನಮ್ಮ ಜಮೀನಿನಲ್ಲಿ ಬೆಳೆದಿದ್ದ ಬತ್ತವನ್ನು ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಹಾಕಿರುತ್ತಾನೆ. ನಾನು ಹಲವು ಬಾರಿ ಸದರಿ ಬತ್ತವನ್ನು ಇಬ್ಬರು ಭಾಗ ಇಟ್ಟುಕೊಳ್ಳೂಣ ಬನ್ನಿ ಎಂದು ಚಂದ್ರರವರಿಗೆ ಹೇಳಿದರು ಅವರು ಬಂದಿರುವುದಿಲ್ಲ ಸದರಿ ಬತ್ತವನ್ನು ಇಲಿಗಳು ತಿಂದು ಪೋಲು ಮಾಡುತ್ತಿದ್ದರಿಂದ ಅವುಗಳನ್ನು ಮಾರಾಟ ಮಾಡಿ ಬಿಲ್ಲನ್ನು ಇಟ್ಟು ಕೊಂಡಿರುತ್ತೇನೆ ಈಗಿರುವಲ್ಲಿ ದಿನಾಂಕ -09/08/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಅವರ ಗ್ರಾಮದ ರಾಮಸ್ವಾಮಿ ದೇವಾಲಯದ ಮುಂದೆ ಕುಳಿತ್ತಿದ್ದಾಗ ಮೇಲ್ಕಂಡ ವೆಂಕಟರವಣ ರವರು ಅಲ್ಲಿಗೆ ಬಂದಿದ್ದು ಅತನಿಗೆ ನಮಗೆ ಕೊಡಬೇಕಾದ  ಹಣ ಕೊಡುವಂತೆ ಕೇಳಿದಾಗ ನಾನು ನಿನಗೆ ಹಣ ಕೊಡಬೇಕಾಗಿಲ್ಲ ನೀನೇ ನಮಗೆ ಕೊಡಬೇಕೆಂದು  ಎಂದು ಹೇಳಿ ಆತನ ಅಣ್ಣನಾದ ಚಂದ್ರರವನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಇಬ್ಬರು ಸಮಾನ ಉದ್ದೇಶದಿಂದ ನನ್ನ ಮೇಲೆ ಜಗಳ ತೆಗೆದು ಅವಾಛ್ಯ ಶಬ್ದಗಳಿಂದ ಬೈದು ಕೈಗಳಿಂದ ನನ್ನನ್ನು ಹೊಡೆದು ನೋವು ಉಂಟು ಮಾಡಿದ್ದು ಆ ಪೈಕಿ ಚಂದ್ರರವರು ಸ್ಥಳದಲ್ಲಿ ಬಿದ್ದಿದ್ದ ಕಲ್ಲಿನಿಂದ ನನ್ನ ಮೂಗಿಗೆ ನನಗೆ ಹೋಡೆದು ರಕ್ತಗಾಯಗಳನ್ನು ಉಂಟು ಮಾಡಿರುತ್ತಾನೆ ಅಷ್ಟರಲ್ಲಿ ನಮ್ಮ ಗ್ರಾಮದ ನಾಗೇಂದ್ರ ಮತ್ತು ವಿಶ್ವನಾಥ ರವರು ಬಂದು ಜಗಳ ಬಿಡಿಸಿರುತ್ತಾರೆ ಮೇಲ್ಕಂಡ ಇಬ್ಬರೂ ಸ್ಥಳದಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿನ್ನನ್ನು ಸಾಯಿಸುವವರೆಗೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ.ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

9. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.81/2021 ಕಲಂ. 87 ಕೆ.ಪಿ ಆಕ್ಟ್ :-

       ದಿನಾಂಕ:10-08-2021 ರಂದು ಸಂಜೆ 17-00 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಪಿಸಿ-174 ರವರು NCR NO.112/2021 ರಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:10-08-2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ PSI ಪಾತಪಾಳ್ಯ ಠಾಣೆ ರವರು ಬಿಳ್ಳೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಬಿಳ್ಳೂರು ಗ್ರಾಮದ ಶ್ರೀ.ಸ್ತಂಭ ಲಕ್ಷ್ಮೀನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-234 ಸುರೇಶ ಕೊಂಡಗುಳಿ,  ಸಿಪಿಸಿ-324 ಮುಸ್ತಾಕ್ ಅಹಮದ್, ಸಿಪಿಸಿ-321 ಮನೋಹರ್, ಸಿಪಿಸಿ-584 ಅಬ್ಬಾಸ್ ಅಲಿ, ಸಿಪಿಸಿ-436 ನಂದೀಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಚಾಲಕ ಸಿಪಿಸಿ-119 ಗಿರೀಶ.ಕೆ, ರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಕೇಳಲಾಗಿ 1)ಅಂಜಿನಪ್ಪ ಬಿನ್ ಲೇಟ್ ಕೃಷ್ಣಪ್ಪ, 40 ವರ್ಷ, ನಾಯಕರು, ಜಿರಾಯ್ತಿ, ವಾಸ: ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2)ಹುಸೇನ್ ಬಿನ್ ಲೇಟ್ ಫಕೃದ್ದೀನ್ ಸಾಬ್, 65 ವರ್ಷ,  ಮುಸ್ಲಿಂ ಜನಾಂಗ, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 3)ಶಂಕರ ಬಿನ್ ಲೇಟ್ ನರಸಿಂಹಪ್ಪ, 55 ವರ್ಷ, ನಾಯಕರು, ವ್ಯವಸಾಯ, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 4)ವೆಂಕಟೇಶ ಬಿನ್ ಶಂಕರಪ್ಪ, 35 ವರ್ಷ, ದೋಬಿ ಜನಾಂಗ, ಜಿರಾಯ್ತಿ, ಅರಿಗೇವಾರಿಗುಟ್ಟ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 5)ಮಲ್ಲಿಕಾರ್ಜುನ ಬಿನ್ ಲೇಟ್ ಮುನಿಯಪ್ಪ, 40ವರ್ಷ, ಬುಡಗಜಂಗಮ ಜನಾಂಗ, ಜಿರಾಯ್ತಿ, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಐದು ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  3,700/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಪೇಪರ್ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 12-15 ರಿಂದ 13-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

10. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 279,337,304(A) ಐ.ಪಿ.ಸಿ:-

      ದಿನಾಂಕ:10-08-2021 ರಂದು ಹೆಚ್.ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಮು @ ರಾಮಪ್ಪ ಬಿನ್ ಲೇಟ್ ನಾರಾಯಣಪ್ಪ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ದಾಖಲಿಸಿಕೊಂಡು ರಾತ್ರಿ 11-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಹೇಳಿಕೆ ದೂರನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:10-08-2021 ರಂದು ತಾನು & ತನ್ನ ಹೆಂಡತಿ ಹಾಗೂ ತಮ್ಮ ಗ್ರಾಮದ ನರಸಿಂಹಪ್ಪ ಎಂಬುವವರು ತಮ್ಮ ಗ್ರಾಮದ ಸಾದಿಕ್ ರವರ ಬಾಬತ್ತು ಬೀಟ್ ರೂಟ್ ತೊಳೆಯಲು ಕೂಲಿ ಕೆಲಸಕ್ಕೆ ಶಿವಪುರದ ಬಳಿಯಿರುವ ಮಿಷನ್ ಬಳಿಗೆ ಹೋಗಿದ್ದು, ಸಂಜೆ ಕೂಲಿ ಕೆಲಸ ಮುಗಿದ ನಂತರ ಪಿರ್ಯಾದಿಯು ತನ್ನ ಹೆಂಡತಿಯನ್ನು ಮನೆಗೆ ಕಳುಹಿಸಿ ತಾನು,  ತಮ್ಮ ಗ್ರಾಮದ ನರಸಿಂಹಪ್ಪ, ಸಾದಿಕ್ ಹಾಗೂ ಗೊಟ್ಲಪಲ್ಲಿ ಗ್ರಾಮದ ಬಾಬು ರವರು ಶಿವಪುರದಿಂದ ಸೋಮನಾಥಪುರಕ್ಕೆ ಹೋಗಿ ಅಲ್ಲಿ ಎಲ್ಲಾರೂ ಮದ್ಯಪಾನ ಮಾಡಿ ಬಾಬು ಗೊಟ್ಲಪಲ್ಲಿಗೆ ಹೋಗಿದ್ದು, ತಾನು ತಮ್ಮ ಗ್ರಾಮದ ನರಸಿಂಹಪ್ಪ, ಸಾದಿಕ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ನರಸಿಂಹಪ್ಪ ರವರು ಮಧ್ಯದಲ್ಲಿ ಕುಳಿತುಕೊಂಡು ಪಿರ್ಯಾದಿಯು ಹಿಂಬದಿ ಕುಳಿತುಕೊಂಡು ಸೋಮನಾಥಪುರದಿಂದ ಪಾತಪಾಳ್ಯಕ್ಕೆ ಬರುತ್ತಿದ್ದಾಗ ಸಂಜೆ ಸುಮಾರು 7-30 ಗಂಟೆಯಲ್ಲಿ ಸೋಮನಾಥಪುರ ಹೈಸ್ಕೂಲ್ ಬಳಿ ದ್ವಿಚಕ್ರವಾಹನ ಸವಾರ ಸಾದಿಕ್ ರವರು ದ್ವಿಚಕ್ರವಾಹನವನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಹಳ್ಳಕ್ಕೆ ಉರುಳಿಸಿದ ಪರಿಣಾಮ ಮದ್ಯದಲ್ಲಿ ಕುಳಿತಿದ್ದ ನರಸಿಂಹಪ್ಪ ಹಳ್ಳದಲ್ಲಿ ಕಲ್ಲುಗಳ ಮೇಲೆ ಬಿದ್ದು ಆತನ ತಲೆಯು ಕಲ್ಲಿಗೆ ಬಡಿದು ತೀವ್ರವಾದ ರಕ್ತಗಾಯವಾಗಿ ಮೈಮೇಲೆ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ, ತನ್ನ ತಲೆಗೆ & ಮೈಮೇಲೆ ತರಚಿದ ರಕ್ತಗಾಯಗಾಳಗಿರುವುದಾಗಿ ದ್ವಿಚಕ್ರವಾಹನ ಸವಾರ ಸಾದಿಕ್ ರವರಿಗೂ ಸಹ ತರಚಿದ ಹಾಗೂ ಮೂಗೇಟುಗಳಾಗಿರುವುದಾಗಿ ಮೇಲ್ಕಂಡ KA-51-HD-3414 ದ್ವಿಚಕ್ರವಾಹನದ ಸವಾರ ಸಾದಿಕ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.262/2021 ಕಲಂ. 323,504,34 ಐ.ಪಿ.ಸಿ:-

       ದಿನಾಂಕ:07-08-2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ನಾಗರಾಜು, ಸುಮಾರು 38 ಮೂರ್ತಿ, ನಾಯಕರು, ಕೂಲಿಕೆಲಸ, ಡಬರಗಾನಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ತಮ್ಮ ಗ್ರಾಮದ ಮುನಿಕೃಷ್ಣಪ್ಪ ಬಿನ್ ಮುನಿಶಾಮಪ್ಪ ರವರಿಗೂ ತಮಗೆ ಜಮೀನಿನ ವಿಚಾರದಲ್ಲಿ ತಕರಾರುಗಳು ಇರುತ್ತದೆ, ಹೀಗಿರುವಲ್ಲಿ ದಿನಾಂಕ:04-08-2021 ರಂದು ಮುನಿಕೃಷ್ಣಪ್ಪ ರವರು ಜಮೀನನ್ನು ಉಳಿಮೆ ಮಾಡಿದ್ದು ಈ ವಿಚಾರದಲ್ಲಿ ತಾನು ಮುನಿಕೃಷ್ಣಪ್ಪ  ಬಿನ್ ಮುನಿಶಾಮಪ್ಪ ರವರನ್ನು ದಿನಾಂಕ:06-08-2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಕೇಳಲು ಹೋದಾಗ ಮುನಿಕೃಷ್ಣಪ್ಪ ಮತ್ತು ಆತನ  ಕುಟುಂಬದವರಾದ ಕದಿರಪ್ಪ, ನಾಗೇಶ್ ರವರುಗಳು ತನ್ನನ್ನು ಅವಾಚ್ಯಶಬ್ದಗಳಿಂದ ಬೈದು ಈ ಜಮೀನು ತಮದ್ದೇ ನೀಯಮ್ಮನೆಕೇಯ ಎಂದು ಬೈದಿರುತ್ತಾರೆ, ಲಕ್ಷ್ಮೀದೇವಮ್ಮ ಕೋಂ ಮುನಿಕೃಷ್ಣಪ್ಪ ರವರು ತನ್ನನ್ನು ಕೆಳಕ್ಕೆ ತಳ್ಳಿ ಕಾಲಿನಿಂದ ಒದ್ದಿರುತ್ತಾಳೆ, ನಂತರ  ತನ್ನ ತಂಗಿ ಸುಮ  ಮತ್ತು ತಮ್ಮ ಗ್ರಾಮದವರು ಗಲಾಟೆಯನ್ನು ಬಿಡಿಸಿ ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ ಅದ್ದರಿಂದ ವಿನಾಕಾರಣ ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಇನ್ನೊಮ್ಮೆ ತನ್ನ ತಂಟೆಗೆ ಹಾಗೂ ಜಮೀನಿನ ತಂಟೆಗೆ ಬಾರದಂತೆ ಬಂದೋಬಸ್ತು ಮಾಡಿಕೊಡಲು ಕೋರಿ ನೀಡಿದ ಹೇಳಿಕೆಯ ಮೇರಗೆ ಠಾಣಾ ಎನ್.ಸಿ.ಆರ್, ನಂ:412/2021 ರಂತೆ ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿರುತ್ತೆ.   ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿರುವ ಕಾರಣ ಸದರಿ ಎನ್.ಸಿ.ಆರ್ ಪ್ರಕರಣದಲ್ಲಿ ಪ್ರ.ವ,ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಕೋರಿ ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲಿಸಿಕೊಂಡಿದ್ದು ದಿನಾಂಕ:10-08-02021 ರಂದು ಸಂಜೆ 5-30 ಗಂಟೆಯಲ್ಲಿ ಘನ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಸಿಪಿಸಿ-90 ರಾಜಕುಮಾರ್ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪತ್ರವನ್ನು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಠಾಣಾ ಮೊ.ಸಂ:262/2021 ಕಲಂ:323,504 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.262/2021 ಕಲಂ. 32(3),15(A) ಕೆ.ಇ ಆಕ್ಟ್:-

       ದಿನಾಂಕ:10/08/2021 ರಂದು ಸಂಜೆ 6-30 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:10-08-2021 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ತಾನು ಹೆಚ್.ಸಿ.97 ಸುಬ್ರಮಣಿ, ಪಿ.ಸಿ.126 ವೆಂಕಟೇಶ್ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟದ ರಹಮತ್ ನಗರದಲ್ಲಿ ಪೈರೋಜ್ ಪಾಷ ರವರ  ಅಂಗಡಿಯ ಮುಂಭಾಗದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಸಂಜೆ 5-30 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ ಪೈರೋಜ್ ಪಾಷ ಬಿನ್ ಸುಬಾನ್ ಪಾಷ, 42 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ರಹಮತ್ ನಗರ, ಶಿಡ್ಲಘಟ್ಟ ನಗರ ಮತ್ತು ಅಲ್ಲುಬಾ ಬಿನ್ ಪ್ಯಾರೇಜಾನ್, 38 ವರ್ಷ, ಮುಸ್ಲಿಂ ರೇಷ್ಮೆ ಕೆಲಸ, ರಹಮತ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಇವರನ್ನು ಮದ್ಯಪಾನ ಮಾರಾಟ ಮಾಡಲು ಪರಿವಾನಗಿ ಇದೆಯೇ ಎಂದು ಪ್ರಶ್ನಿಸಿದಾಗ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ ORIGINAL Choice Delux Whisky 90 ML ನ 18 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 18 ರ ಬೆಲೆ ಒಟ್ಟು 632-.00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ORIGINAL Choice Delux Whisky 90 ML ನ 02 ಖಾಲಿ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಸಂಜೆ 5-40 ರಿಂದ 6-10 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಪೈರೋಜ್ ಪಾಷ ಮತ್ತು ಅಲ್ಲುಬಾ ರವರನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 11-08-2021 07:07 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080