ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 185/2021 ಕಲಂ. 279,337,304(A) ಐ.ಪಿ.ಸಿ:-

  ದಿನಾಂಕ:11/07/2021 ರಂದು ಬೆಳಿಗ್ಗೆ 7-30 ಗಂಟೆಗೆ ಪಿರ್ಯಾದಿದಾರರಾದ ಆದಿರೆಡ್ಡಿ ಬಿ.ಎನ್ ಬಿನ್ ನರಸಿಂಹರೆಡ್ಡಿ, 44 ವರ್ಷ, ವಕ್ಕಲಿಗರು, ಜಿರಾಯ್ತಿ, ಕಡೇಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನನ್ನ ತಂದೆ ನರಸಿಂಹರೆಡ್ಡಿ ತಾಯಿ ಸರಸ್ವತಮ್ಮ ರವರಿಗೆ 4 ಜನ ಮಕ್ಕಳಿದ್ದು,  1ನೇ ಸುಗುಣಮ್ಮ, 2ನೇ ಆದಿರೆಡ್ಡಿ ಬಿ.ಎನ್ ಆದ ನಾನು, 3ನೇ ವನಜಮ್ಮ, 4ನೇ ರಾಘವೇಂಧ್ರರೆಡ್ಡಿ ಆಗಿರುತ್ತೇವೆ. ಎಲ್ಲರಿಗೂ ವಿವಾಹಗಳಾಗಿರುತ್ತೆ.  ನಾನು ನನ್ನ ತಮ್ಮ ನಮ್ಮ ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇವೆ. ಈಗ್ಗೆ ಎರಡು ವರ್ಷಗಳ ಹಿಂದೆ ನನ್ನ ಅಕ್ಕ ಸುಗುಣಮ್ಮ ರವರ ಮಗಳಾದ ಮಾನಸ ಎಸ್.ಎ ರವರನ್ನು ನನ್ನ ತಮ್ಮನಾದ ರಾಘವೇಂದ್ರ ರೆಡ್ಡಿ ರವರಿಗೆ ಮದುವೆ ಮಾಡಿಕೊಂಡಿರುತ್ತೇವೆ. ಇವರಿಗೆ ಮೆದಸ್ವಿ ಎಂಬ ಒಂದು ವರ್ಷದ ಒಂದು ಹೆಣ್ಣು ಮಗು ಇರುತ್ತದೆ. ನಮ್ಮ ಹೊಲದಲ್ಲಿ ಟೊಮೆಟೊ ಗಿಡಗಳನ್ನು ಇಟ್ಟಿದ್ದು, ದಿನಾಂಕ:10/07/2021 ರಂದು ಸಂಜೆ ಟೊಮೆಟೋ ಸಸಿಗಳಿಗೆ  ಕ್ರಿಮಿನಾಶಕವನ್ನು ತೆಗೆದುಕೊಂಡು ಬರಲು ನನ್ನ ತಮ್ಮ ರಾಘವೇಂದ್ರ ರೆಡ್ಡಿ ರವರು ನಮ್ಮ ಹೊಲದಲ್ಲಿ  ಕೂಲಿ ಕೆಲಸಕ್ಕೆ ಬರುತ್ತಿದ್ದ  ಆದಿನಾರಾಯಣಪ್ಪ ಬಿನ್ ಕುಂಟಿಗಂಗಪ್ಪ, ರವರೊಂದಿಗೆ ಅವರ ಬಾಬತ್ತು ಕೆ.ಎ- 03, ಹೆಚ್.ಓ-7990  ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿಗೆ ಹೋದರು. ನಂತರ  ರಾತ್ರಿ ಸುಮಾರು 8:15 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ ನಿನ್ನ ತಮ್ಮ ರಾಘವೇಂದ್ರ ರೆಡ್ಡಿ ರವರಿಗೆ ಗ್ರೀನ್ ಪಾರ್ಕ್ ಪಕ್ಕದ ಗುಡಿಬಂಡೆ ರಸ್ತೆಯಲ್ಲಿ ಅಪಘಾತವಾಗಿರುವುದಾಗಿ ವಿಚಾರ ತಿಳಿಸಿದರು. ತಕ್ಷಣ ನಾನು ನಮ್ಮ ತಂದೆ ನರಸಿಂಹರೆಡ್ಡಿ ರವರು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ಅಪಘಾತಕ್ಕೀಡಾದ ಆದಿನಾರಾಯಣಪ್ಪ ರವರ ಬಾಬತ್ತು ಕೆ.ಎ-03 ಹೆಚ್.ಓ-7990 ದ್ವಿಚಕ್ರ ವಾಹನ ಮತ್ತು ಅಪಘಾತವನ್ನುಂಟು ಮಾಡಿದ ಕೆ.ಎ-53 ಇ.ಡಿ-4188 ಹೊಂಡಾ ಶೈನ್ ದ್ವಿಚಕ್ರ ವಾಹನ ಸ್ಥಳದಲ್ಲಿದ್ದು,  ಎರಡೂ ವಾಹನಗಳು ಜಖಂಗೊಂಡಿದ್ದವು. ನನ್ನ ತಮ್ಮ ರಾಘವೇಂದ್ರ ರೆಡ್ಡಿರವರಿಗೆ ಬಲಕಾಲಿಗೆ ಮತ್ತು ಮೈಮೇಲೆ ರಕ್ತಗಾಯಗಳಾಗಿದ್ದವು. ಆದಿನಾರಾಯಣಪ್ಪ ರವರ ಬಲಕಾಲು, ಎಡಕೈಗೆ, ಮೈಮೇಲೆ ರಕ್ತಗಾಯಗಳಾಗಿದ್ವು.  ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನದಲ್ಲಿದ್ದ ಜಗದೀಶ ಮತ್ತು ಸುನೀಲ್ ಎಂಬುವವರಿಗೂ ರಕ್ತಗಾಯಗಳಾಗಿದ್ದು, ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ರಾಘವೇಂದ್ರರೆಡ್ಡಿಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪರೀಕ್ಷಿಸಿ ರಾಘವೇಂದ್ರರೆಡ್ಡಿ ಮೃತಪಟ್ಟಿರುವುದಾಗಿ ತಿಳಿಸಿದರು. ಆದಿನಾರಾಯಣಪ್ಪ ರವರನ್ನು ಹೆಚ್ಚಿನ ಚಿಕತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿಕೊಟ್ಟರು. ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ನನ್ನ ತಮ್ಮ ರಾಘವೇಂದ್ರ ರೆಡ್ಡಿ ಬಿ.ಎನ್ ರವರು ಆದಿನಾರಾಯಣಪ್ಪ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮಕ್ಕೆ ಬಾಗೇಪಲ್ಲಿಯಿಂದ ವಾಪಸ್ಸು ಬರುತ್ತಿದ್ದಾಗ, ರಾತ್ರಿ ಸುಮಾರು 8:00 ಗಂಟೆಯಲ್ಲಿ ಬಾಗೇಪಲ್ಲಿ ತಾಲ್ಲೂಕು ಗ್ರೀನ್ ಪಾರ್ಕ್ ಡಾಬಾ ಪಕ್ಕದ ಗುಡಿಬಂಡೆ ರಸ್ತೆಯಲ್ಲಿ ಗುಡಿಬಂಡೆ ಕಡೆಯಿಂದ ಎದುರಿಗೆ ಕೆ.ಎ-53 ಇ.ಡಿ-4188 ಹೊಂಡಾ ಶೈನ್ ದ್ವಿಚಕ್ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ನನ್ನ ತಮ್ಮ ಮತ್ತು ಆದಿನಾರಾಯಣಪ್ಪ ರವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಅದರ ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡು ಈ ಅಪಘಾತದಿಂದಾದ ಗಾಯಗಳ ದೆಸೆಯಿಂದ ನನ್ನ ತಮ್ಮ ರಾಘವೇಂದ್ರ ರೆಡ್ಡಿ ಬಿ.ಎನ್ ಬಿನ್ ಬಿ.ಎ ನರಸಿಂಹರೆಡ್ಡಿ, 35 ವರ್ಷ, ಜಿರಾಯ್ತಿ, ಕಡೇಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಮೃತಪಟ್ಟಿರುತ್ತಾನೆ. ರಾತ್ರಿ ಅವೇಳೆಯಾಗಿದ್ದರಿಂದ ನಮ್ಮ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿ ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು,   ಅಪಘಾತವನ್ನುಂಟು ಮಾಡಿದ ಕೆ.ಎ-53 ಇ.ಡಿ-4188 ಹೊಂಡಾ ಶೈನ್ ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 305/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ: 10/07/2021 ರಂದು ರಾತ್ರಿ 9.15 ಗಂಟೆಗೆ ರವಿಕುಮಾರ್ ಬಿನ್ ಶಿವಣ್ಣ, 36 ವರ್ಷ, ಕುರುಬರು, ಟೆಸ್ಟ್ ಕಂಟ್ರೋಲ್ ಕೆಲಸ, ಚನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತನ್ನ ತಮ್ಮನಾದ ಮಂಜುನಾಥ, 30 ವರ್ಷ ರವರು ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತಾನು ಮತ್ತು ತನ್ನ ತಮ್ಮ ಮಂಜುನಾಥ ರವರು ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಟೆಸ್ಟ್ ಕಂಟ್ರೋಲ್ ಕೆಲಸ ಮಾಡಿಕೊಂಡಿರುತ್ತೇವೆ. ತನ್ನ ತಂದೆಯಾದ ಶಿವಣ್ಣ ಮತ್ತು ತಾಯಿ ರತ್ನಮ್ಮ ರವರು ತನ್ನ ಜೊತೆ ಇರುತ್ತಾರೆ. ತನಗೆ ಮತ್ತು ತನ್ನ ತಮ್ಮನಿಗೆ ತಾವು ವಾಸವಿರುವ ವಾಸದ ಮನೆಯ ಭಾಗದ ವಿಚಾರದಲ್ಲಿ ಈಗ್ಗೆ ಸುಮಾರು 4-5 ತಿಂಗಳಿಂದ ತಕರಾರು ಇರುತ್ತೆ. ಈ ದಿನ ದಿನಾಂಕ 10/07/2021 ರಂದು ಆಸ್ಪತ್ರೆಯ ವರ್ಗದವರು ತನ್ನ ತಮ್ಮನನ್ನು ಕೆಲಸದಿಂದ ತೆಗೆದು ಹಾಕಿರುತ್ತಾರೆ. ಈ ವಿಚಾರದಲ್ಲಿ ಆತನು ತನ್ನ ಮೇಲೆ ಕೋಪದಿಂದಿರುತ್ತಾನೆ. ಈ ದಿನ ಸಂಜೆ ತಾನು ಕೆಲಸ ಮುಗಿಸಿಕೊಂಡು ಊರಿಗೆ ಬಂದು ಸಂಜೆ 7.15 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂಭಾಗದಲ್ಲಿ ಇದ್ದಾಗ, ತನ್ನ ತಮ್ಮನಾದ ಮಂಜುನಾಥ ಮತ್ತು ತನ್ನ ನಾಧಿನಿಯಾದ ಕವಿತ, 28 ವರ್ಷ ರವರು ಬಂದು ಆ ಪೈಕಿ ತನ್ನ ತಮ್ಮ ತನ್ನನ್ನು ಕುರಿತು “ಬೋಳಿ ನನ್ನ ಮಗನೇ ನೀನು ರಾಜಕೀಯ ಮಾಡಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೀಯಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ತನ್ನ ಎಡಮೊಣ ಕೈಗೆ ಹೊಡೆದು ಊತ ಗಾಯಪಡಿಸಿರುತ್ತಾನೆ. ತನ್ನ ನಾಧಿನಿ ಕವಿತ ಕೈಗಳಿಂದ ತನ್ನ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ನಿನ್ನನ್ನು ಸಾಯಿಸುವವರೆಗೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ಹನುಮಪ್ಪ ಬಿನ್ ಆಂಜಪ್ಪ, ಜಯಮ್ಮ ಕೋಂ ಹನುಮಪ್ಪ ಮತ್ತು ರಾಕೇಶ ಬಿನ್ ಹನುಮಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ತಾನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ವೈದ್ಯರು ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿರುತ್ತಾರೆ. ತಾನು ಆಸ್ಪತ್ರೆಯಿಂದ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 227/2021 ಕಲಂ. 323,341,504,506,149 ಐ.ಪಿ.ಸಿ:-

  ದಿನಾಂಕ:10-07-2021 ರಂದು ರಾತ್ರಿ 8-30 ಗಂಟೆಯಲ್ಲಿ ಪಿರ್ಯಾದಿದಾರರಾದ ರಾಜಶೇಖರ್ ವೈ.ಎನ್. ಬಿನ್ ನರಸಿಂಹಪ್ಪ,ಸುಮಾರು 38 ವರ್ಷ, ಪ.ಜಾತಿ, ಜಿರಾಯ್ತಿ,ವಾಸ: ಯಣ್ಣಂಗೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.ತಮ್ಮ ಗ್ರಾಮದ ಬಳಿ  ಸರ್ವೆ  ನಂ:86 ರ ಸರ್ಕಾರಿ ಜಮೀನು ಇರುತ್ತೆ , ತಮಗೆ ಗ್ರಾಮದ ಬಳಿ ಯಾವುದೇ ಜಮೀನು ಇಲ್ಲದೇ ಇದ್ದ ಕಾರಣ ಸರ್ವೆ  ನಂ:86 ರ ಸರ್ಕಾರಿ ಜಮೀನಿನಲ್ಲಿ ಒಂದು ಕಡೆ ತಾನು ಮತ್ತು ತನ್ನ ಅಕ್ಕನಾದ ಆಂಜಿನಮ್ಮ ಕೋಂ ಪಿಳ್ಳಪ್ಪ ರವರು ಕಸದ ತಿಪ್ಪೆಗಳನ್ನು ಹಾಕಿಕೊಂಡಿರುತ್ತೇವೆ, ಈಗಿರುವಲ್ಲಿ ನಮ್ಮ ಗ್ರಾಮದ ಮುನಿಯಪ್ಪ ಬಿನ್ ಭೈರಪ್ಪ,ರವಿಕುಮಾರ್ ಬಿನ್ ಲೇಟ್ ಚಿಕ್ಕಆಂಜಿನಪ್ಪ ಮತ್ತು ಭಾಗ್ಯಮ್ಮ ಕೋಂ ದೊಡ್ಡಆಂಜಿನಪ್ಪ ರವರುಗಳು ತಾನು ಮತ್ತು ತನ್ನ ಅಕ್ಕ ತಿಪ್ಪೆಗಳನ್ನು ಹಾಕಿರುವ ಜಾಗ ತಮಗೆ ಸೇರಬೇಕೆಂದು ಈಗ್ಗೆ ಸುಮಾರು ಒಂದು ತಿಂಗಳಿನಿಂದ ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದರು, ತಾವು ಅದು ಸರ್ಕಾರಿ ಜಾಗ ಎಂದು ಹೇಳಿದರೂ ಸಹ ಕೇಳದೇ ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದರು, ಈಗಿರುವಲ್ಲಿ ದಿನಾಂಕ:07-07-2021 ರಂದು ಮದ್ಯಾಹ್ನ 3-45 ಗಂಟೆಯಲ್ಲಿ ತಾನು ,ತನ್ನ ಹೆಂಡತಿ ಮಲ್ಲಿಕಾ ಮತ್ತು  ತನ್ನ ಅಕ್ಕನಾದ ಆಂಜಿನಮ್ಮ ರವರುಗಳು ಕಸವನ್ನು ತಿಪ್ಪೆಗಳಲ್ಲಿ ಹಾಕುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ತಮ್ಮ ಗ್ರಾಮದ ಮುನಿಯಪ್ಪ ಬಿನ್ ಭೈರಪ್ಪ,ರವಿಕುಮಾರ್ ಬಿನ್ ಲೇಟ್ ಚಿಕ್ಕಆಂಜಿನಪ್ಪ ,ಭಾಗ್ಯಮ್ಮ ಕೋಂ ಲೇಟ್ ದೊಡ್ಡಆಂಜಿನಪ್ಪ ,ರವಿಕುಮಾರ್ ಬಿನ್  ಲೇಟ್ ದೊಡ್ಡ ಆಂಜಿನಪ್ಪ , ವಿನಯ್ ಕುಮಾರ್ ಬಿನ್ ದೊಡ್ಡ ಆಂಜಿನಪ್ಪ, ಶಶಿಕಲಾ ಕೋಂ ರವಿಕುಮಾರ್, ರತ್ನಮ್ಮ ಕೋಂ ರಾಮಪ್ಪ ಮತ್ತು ಅರವಿಂದ್ ಬಿನ್ ರಾಮಪ್ಪ ರವರುಗಳು ತಮ್ಮನ್ನು  ತಿಪ್ಪೆಗಳಲ್ಲಿ ಕಸವನ್ನು ಹಾಕದಂತೆ ಅಡ್ಡಗಟ್ಟಿ  ಇದು ತಮ್ಮ ಜಾಗ ಇಲ್ಲಿ ಕಸಹಾಕಬೇಡಿ ಎಂದು ಹೇಳಿ ತಮ್ಮ ಮೇಲೆ ಗಲಾಟೆ ಮಾಡಿ  ಏ ಲೋಪರ್ ತನ್ನ ಮಕ್ಕಳೇ ಎಂದು ಅವಾಚ್ಯಶಬ್ದಗಳಿಂದ ಬೈದು ಅ ಪೈಕಿ ಮುನಿಯಪ್ಪ ಬಿನ್ ಭೈರಪ್ಪ,ರವಿಕುಮಾರ್ ಬಿನ್ ಲೇಟ್ ಚಿಕ್ಕಆಂಜಿನಪ,ರವಿಕುಮಾರ್ ಬಿನ್  ಲೇಟ್ ದೊಡ್ಡ ಆಂಜಿನಪ್ಪ,ವಿನಯ್ ಕುಮಾರ್ ಬಿನ್ ದೊಡ್ಡ ಆಂಜಿನಪ್ಪ ರವರುಗಳು ಕೈಗಳಿಂದ ತನ್ನ ಮೈಮೇಲೆ ಹಲ್ಲೆ ಮಾಡಿ ನೋವಿನ ಗಾಯವುಂಟು ಮಾಡಿರುತ್ತಾರೆ,ನಂತರ ಭಾಗ್ಯಮ್ಮ ಕೋಂ ಲೇಟ್ ದೊಡ್ಡಆಂಜಿನಪ,ಶಶಿಕಲಾ ಕೋಂ ರವಿಕುಮಾರ್, ರತ್ನಮ್ಮ ಕೋಂ ರಾಮಪ್ಪ ರವರುಳು ಸೇರಿಕೊಂಡು ಕೈಗಳಿಂದ  ತನ್ನ ಹೆಂಡತಿ ಮಲ್ಲಿಕಾ ಮತ್ತು ತನ್ನ ಅಕ್ಕನಾದ ಆಂಜಿನಮ್ಮ ರವರುಗಳ ಮೈ ಮೇಲೆ ಹೊಡೆದು ನೋವಿನ ಗಾಯವುಂಟುಮಾಡಿರುತ್ತಾರೆ ಮೇಲ್ಕಂಡ ಎಲ್ಲರೂ ಸೇರಿಕೊಂಡು ಇಲ್ಲಿ ಕಸವನ್ನು ಹಾಕಿದರೇ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ.ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ನರಸಿಂಹಮೂರ್ತಿ ಬಿನ್ ಚಿಕ್ಕರಾಮಪ್ಪ, ರಾಮಚಂದ್ರ ಬಿನ್ ಮುನಿಕೆಂಪಯ್ಯ ರವರುಗಳು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ತಮಗೆ ಸಣ್ಣಪುಟ್ಟ ನೋವಿನ ಗಾಯಗಳಾಗಿದ್ದರಿಂದ ತಾವು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡಿರುವುದಿಲ್ಲ, ಈ ಗಲಾಟೆ  ವಿಚಾರವಾಗಿ ಗ್ರಾಮದಲ್ಲಿ ಹಿರಿಯರು ಸೇರಿಕೊಂಡು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಅದರೇ ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಂದಿರುವುದಿಲ್ಲ ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತಮ್ಮ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 227/2021 ಕಲಂ 323, 341, 504, 506 ರ/ಜೊ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಶಿಡ್ಲಘಟ್ಟ ನಗರ ಪೊಲೀಸ್‌ ಠಾಣೆ ಮೊ.ಸಂ. 79/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ: 11/07/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ಆರೋಪಿಗಳು ಮತ್ತು ಮಾಲನ್ನು ಹಾಜರುಪಡಿಸಿ ನೀಡಿದ ದೂರು ಏನೆಂದರೆ,  ದಿನಾಂಕ:-11-07-2021 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಪ್ಯಾರಗಾನ್ ಶಾಲೆ ಹಿಂಭಾಗ ವಿಜಯಲಕ್ಷೀ ವೃತ್ತದ ಬಳಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ,  ಹೆಚ್.ಸಿ-115 ವೆಂಕಟರವಣಪ್ಪ, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 9-55 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಅಜ್ಗರ್ ಬಿನ್ ಲಾಲೂಸಾಬ್, 32 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಖಾಸಿಂಪಾಳ್ಯ, ಶಿಡ್ಲಘಟ್ಟ ನಗರ, 2] ಸಲೀಂಪಾಷ ಬಿನ್ ಪೀರ್ ಪಾಷ, 22 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ವಿಜಯಲಕ್ಷ್ಮೀ ವೃತ್ತ, ಶಿಡ್ಲಘಟ್ಟ ನಗರ, 3] ಇಮ್ರಾನ್ ಖಾನ್ ಬಿನ್ ಲೇಟ್ ಪ್ರಕೃದ್ದೀನ್ ಖಾನ್, 29 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ಮಯೂರ ವೃತ್ತ, ಶಿಡ್ಲಘಟ್ಟ ಟೌನ್ 4] ಅಮ್ಜದ್ ಖಾನ್ ಬಿನ್ ಎಜಾಜ್ ಖಾನ್, 27 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಕುರುಬರಪೇಟೆ, ಶಿಡ್ಲಘಟ್ಟ ನಗರ, 5] ನಾಗೇಶ್ ಬಿನ್ ಜಗದೀಶ್ @ ನಾಗೇಂದ್ರ, 25 ವರ್ಷ, ಲಿಂಗಾಯಿತರು, ರೇಷ್ಮೆ ಕೆಲಸ, ವಿಜಯಲಕ್ಷ್ಮೀ ವೃತ್ತ, ಶಿಡ್ಲಘಟ್ಟ ಟೌನ್, 6) ಪಿ.ರವಿ ಬಿನ್ ಪುಟ್ಟಪ್ಪ, 40 ವರ್ಷ, ಕುರುಬರು, ಆಟೋ ಡ್ರೈವರ್, ಕುರುಬರಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3,120/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಬೆಳಿಗ್ಗೆ 10-00 ಗಂಟೆಯಿಂದ 10-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 11-07-2021 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080