ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.269/2021 ಕಲಂ. 379 ಐ.ಪಿ.ಸಿ :-

          ದಿನಾಂಕ: 10/06/2021 ರಂದು ಸಂಜೆ 5.00 ಗಂಟೆಗೆ ಅರವಿಂದರೆಡ್ಡಿ.ಎಂ ಬಿನ್ ಮಂಜುನಾಥ, 25 ವರ್ಷ, ಸಹಾಯಕ ಅಭಿಯಂತರರು, ರೇಷ್ಮೆ ಕೃಷಿ ಮಹಾವಿದ್ಯಾಲಯ, ಕುರುಬೂರು, ಚಿಂತಾಮಣಿ ತಾಲ್ಲೂಕು, ಹಾಲಿ ವಾಸ: ಶ್ರೀನಿವಾಸಪುರ ಟೌನ್, ರಾಮಕೃಷ್ಣ ಬಡಾವಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 3 ವರ್ಷಗಳಿಂದ ರೇಷ್ಮೆ ಕೃಷಿ ಮಹಾವಿದ್ಯಾಲಯ ಕುರುಬೂರು ಕಛೇರಿಯಲ್ಲಿ ಸಹಾಯಕ ಅಭಿಯಂತರರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ. ತಾನು ಯಾವಾಗಲು ಶ್ರೀನಿವಾಸಪುರದಿಂದ ಬಂದು ಕರ್ತವ್ಯವನ್ನು ನಿರ್ವಹಿಸಿಕೊಂಡು ಸಂಜೆ 06.00 ಗಂಟೆಗೆ ಮನೆಗೆ ಹೋಗುತ್ತಿದ್ದೆನು. ಎಂದಿನಂತೆ ದಿನಾಂಕ;-09/06/2021 ರಂದು ಬೆಳಗ್ಗೆ 10.00 ಗಂಟೆಗೆ ಕಛೇರಿಗೆ ಬಂದಿರುತ್ತೇನೆ. ನಂತರ ಕಛೇರಿಯ ಆವರಣದಲ್ಲಿ ನೋಡಲಾಗಿ ಕಛೇರಿಯ ಆವರಣದಲ್ಲಿದ್ದ ಒಂದು ಹೆಚ್ ಪಿ ಮೊಟರ್ ಸುಮಾರು 8500-ರೂ ಬೆಲೆ ಬಾಳುವ ಮತ್ತು ಹಾಪ್ ಹೆಚ್ ಪಿ ಮೊಟರ್ ಸುಮಾರು 3500-/ರೂ ಬೆಲೆ ಬಾಳುವ ಮತ್ತು 100 ಮೀಟರ್ ಕಾಪರ್ ವೈರ್ ಸುಮಾರು 2000-/ರೂ ಬೆಲೆ ಬಾಳುವ ಮತ್ತು ಕಾಲೇಜು ಮೈನ್ ಗೇಟ್ ಬಳಿ ಬೋರ್ ವೇಲ್ಗೆ ಅಳವಡಿಸಿರುವ 30 ಮೀಟರ್ ಕೇಬಲ್ ವೈರ್ ಬೆಲೆ ಸುಮಾರು 3500-/ರೂ ಬೆಲೆ ಬಾಳುವ ವಸ್ತುಗಳು ಕಳವು ಆಗಿದ್ದು. ಇವುಗಳ ಒಟ್ಟು ಮೌಲ್ಯ 17500-/ರೂ ಆಗಿರುತ್ತದೆ. ಈ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ;-08/06/2021 ರಂದು ರಾತ್ರಿ ಸುಮಾರು 11.00 ಗಂಟೆಯಿಂದ ದಿನಾಂಕ;-09/06/2021 ರಂದು ಬೆಳಗ್ಗೆ 05.00 ಗಂಟೆ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ಮತ್ತು ಕಾಲೇಜಿನಲ್ಲಿ ಸೆಕ್ಯೂರೀಟಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ ಮತ್ತು ಮಂಜುನಾಥ ರವರು ಕಾಲೇಜು ಆವರಣ ಮತ್ತು ಅದರ ಸುತ್ತಮುತ್ತಲು ಮೇಲ್ಕಂಡ ಕಳುವಾಗಿರುವ ವಸ್ತುಗಳನ್ನು ಹುಡುಕಾಡಲಾಗಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪರಿಚಿತ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.270/2021 ಕಲಂ. 143,147,148,324 307,435, 427,504, 506,149 ಐ.ಪಿ.ಸಿ :-

          ದಿನಾಂಕ: 10/06/2021 ರಂದು ಸಂಜೆ 6.30 ಗಂಟೆಗೆ ಮಂಜುನಾಥರೆಡ್ಡಿ ಬಿನ್ ರಾಮರೆಡ್ಡಿ, 41 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುವ ಹವ್ಯಾಸವಿರುತ್ತೆ. ದಿನಾಂಕ 08/06/2021 ರಂದು ಬೆಳಿಗ್ಗೆ 11.00 ಗಂಟೆಗೆ ತಾನು, ತಮ್ಮ ಗ್ರಾಮದ ಲುಂಗಿ ಮಂಜು ಬಿನ್ ರಾಮಲಿಂಗಾರೆಡ್ಡಿ, ಜೆ.ಜೆ.ಕಾಲೋನಿ ವಾಸಿಯಾದ ಬಂಡೆ ನರೇಶ, ಪ್ರಭಾಕರ ಬಡಾವಣೆ ವಾಸಿ ನವೀನ್ @ ಕೆಂಚ, ವಿನೋಭಾ ಕಾಲೋನಿ ವಾಸಿ ಕೃಷ್ಣ, ಚಿಂತಾಮಣಿ ತಾಲ್ಲೂಕು ಬಂದಾರ್ಲಹಳ್ಳಿ ಗ್ರಾಮದ ಪುಗುಟ್ ಮಂಜುನಾಥ, ಕುರುಬೂರು ಗ್ರಾಮದ ಮಂಜುನಾಥ @ ಸ್ಟಾಲಿನ್, ಕಡಶೇನಹಳ್ಳಿ ಗ್ರಾಮದ ಅಂಬರೀಶ, ವೆಂಕಟಗಿರಿಕೋಟೆ ವಾಸಿಗಳಾದ ಟಿಪ್ಪು, ಮುನ್ಷೀರ್, ಮಚ್ಚಲ ಬಾಬು, ನಾಗರಾಜ, ಶಿಡ್ಲಘಟ್ಟ ತಾಲ್ಲೂಕು ಜೋಡಿ ಕಾಚಹಳ್ಳಿ ಗ್ರಾಮದ ನರಸಿಂಹ ಮತ್ತು ಚಿಂತಾಮಣಿ ನಗರ ಅಗ್ರಹಾರ ವಾಸಿ ನಟರಾಜ್ @ ನಟಿ ರವರು ಮುಂತಕದಿರೇನಹಳ್ಳಿ ಗ್ರಾಮದ ಬಳಿ ಇರುವ ಬಯಲಿನಲ್ಲಿ ಬೆಳೆದಿದ್ದ ಗಿಡಗಳ ಮರೆಯಲ್ಲಿಗೆ ಹೋಗಿ ನಾವೆಲ್ಲರೂ ಸೇರಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದೆವು. ಅದೇ ದಿನ ಮದ್ಯಾಹ್ನ ಸುಮಾರು 2.30 ಗಂಟೆ ಸಮಯದಲ್ಲಿ ವಿನೋಭಾ ಕಾಲೋನಿ ವಾಸಿಯಾದ ಪಿಲ್ಲಗುರ್ಕಿ ಶಿವ ಎಂಬುವನು ಅಲ್ಲಿಗೆ ಬಂದು ತನ್ನನ್ನು ಕುರಿತು “ಏನೋ ಬೋಳಿ ನನ್ನ ಮಗನೇ ನನಗೆ ತಿಳಿಯದೀರ ನೀನು ಆಟ ಆಡಿಸ್ತೀಯಾ ನೀನು ನನಗೆ ಕೊಡಬೇಕಾದ ಸಾಲದ ಹಣವನ್ನು ವಾಪಸ್ಸು ಕೊಡು” ಎಂದು ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದಾಗ, ತಾನು ಆತನನ್ನು ಕುರಿತು ನನ್ನ ಹತ್ತಿರ ಈಗ ಹಣ ಇಲ್ಲ ಇದ್ದಾಗ ಕೊಡುತ್ತೇನೆ ಎಂದು ತಿಳಿಸಿದಾಗ, ಅಲ್ಲಿದ್ದ ಮೇಲ್ಕಂಡವರು “ನಿನ್ನಿಂದ ನಾವು ಆಟ ಆಡುವುದಕ್ಕೆ ತೊಂದರೆ ಆಗುತ್ತಿದೆ ಅವನಿಗೆ ಕೊಡಬೇಕಾದ ಹಣವನ್ನು ಅವನಿಗೆ ಕೊಟ್ಟು ಕಳುಹಿಸು ಇಲ್ಲವೆಂದರೆ ನಾವೆಲ್ಲರೂ ಸೇರಿ ನಿನಗೆ ಕೈಕಾಲು ಮುರಿದು ಹಾಕುತ್ತೇವೆ” ಎಂದು ಅವನ ಪರವಾಗಿ ಮಾತನಾಡಿದಾಗ, ತಾನು ಚಿಂತಾಮಣಿಗೆ ಬರಲು ಮುಂತಕದಿರೇನಹಳ್ಳಿ ಗ್ರಾಮದ ಬಳಿ ಇರುವ ಚಿಂತಾಮಣಿ-ಕೋಟಗಲ್ ರಸ್ತೆಗೆ ಬಂದಾಗ 1)ಪಿಲ್ಲಗುರ್ಕಿ ಶಿವ, 2)ಲುಂಗಿ ಮಂಜು ಬಿನ್ ರಾಮಲಿಂಗಾರೆಡ್ಡಿ, 3)ವಿನೋಭಾ ಕಾಲೋನಿ ವಾಸಿ ಕೃಷ್ಣ, 4) ಚಿಂತಾಮಣಿ ತಾಲ್ಲೂಕು ಬಂದಾರ್ಲಹಳ್ಳಿ ಗ್ರಾಮದ ಪುಗುಟ್ ಮಂಜುನಾಥ, 5) ಕುರುಬೂರು ಗ್ರಾಮದ ಮಂಜುನಾಥ @ ಸ್ಟಾಲಿನ್, 6) ಕಡಶೇನಹಳ್ಳಿ ಗ್ರಾಮದ ಅಂಬರೀಶ, 7) ವೆಂಕಟಗಿರಿಕೋಟೆ ವಾಸಿಗಳಾದ ಟಿಪ್ಪು, 8) ಮಚ್ಚಲ ಬಾಬು ಮತ್ತು 9) ಚಿಂತಾಮಣಿ ನಗರ ಅಗ್ರಹಾರ ವಾಸಿ ನಟರಾಜ್ @ ನಟಿ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಬಂದು ತನ್ನ ಮೇಲೆ ಜಗಳ ತೆಗೆದು, ಆ ಪೈಕಿ ಪಿಲ್ಲಗುರ್ಕಿ ಶಿವ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತನ್ನ ಬಲಎದೆಯ ಮೇಲೆ ತಿವಿದು ರಕ್ತಗಾಯಪಡಿಸಿರುತ್ತಾನೆ. ಆಗ ಶಿಡ್ಲಘಟ್ಟ ತಾಲ್ಲೂಕು ಜೋಡಿ ಕಾಚಹಳ್ಳಿ ಗ್ರಾಮದ ನರಸಿಂಹ ರವರು ಜಗಳ ಬಿಡಿಸಲು ಬಂದಾಗ ಅದೇ ಚಾಕುವಿನಿಂದ ಆತನ ಹೊಟ್ಟೆಯ ಮೇಲೆ ತಿವಿದು ರಕ್ತಗಾಯಪಡಿಸಿರುತ್ತಾರೆ. ನಂತರ ಪಿಲ್ಲಗುರ್ಕಿ ಶಿವ ಮತ್ತಿತರೆ 8 ಜನರು ಸೇರಿಕೊಂಡು ಬಂಡೆ ನರೇಶ ಮತ್ತು ಮುನ್ಷೀರ್ ರವರ ದ್ವಿಚಕ್ರ ವಾಹನಗಳನ್ನು ರಸ್ತೆಗೆ ತಳ್ಳಿ ದ್ವಿಚಕ್ರ ವಾಹನದಲ್ಲಿದ್ದ ಪೆಟ್ರೋಲ್ ಅನ್ನು ಬಾಟಲ್ ಗೆ ತುಂಬಿ ಎರಡೂ ದ್ವಿಚಕ್ರ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ನಷ್ಟ ಪಡಿಸಿರುತ್ತಾರೆ. ಸದರಿ ದ್ವಿಚಕ್ರ ವಾಹನಗಳ ನೊಂದಣಿ ಸಂಖ್ಯೆ ಗೊತ್ತಿರುವುದಿಲ್ಲ. ಆಗ ಸ್ಥಳದಲ್ಲಿ ಇದ್ದ ನವೀನ್ @ ಕೆಂಚ ಮತ್ತು ನಾಗರಾಜ ಹಾಗೂ ಯಾರೋ ಸಾರ್ವಜನಿಕರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಪಿಲ್ಲಗುರ್ಕಿ ಶಿವ ಎಂಬುವನು ತಮ್ಮನ್ನು ಕುರಿತು ಈ ಘಟನೆಯ ಬಗ್ಗೆ ಪೊಲೀಸ್ ಕಂಪ್ಲೈಂಟ್ ನೀಡಿದರೆ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಉಳಿದವರೊಂದಿಗೆ ಸ್ಥಳದಿಂದ ಪರಾಗಿಯಾಗಿರುತ್ತಾನೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಪಿಲ್ಲಗುರ್ಕಿ ಶಿವ ತನಗೆ ಬೆದರಿಕೆ ಹಾಕಿದ್ದರಿಂದ ತಾನು ವೈದ್ಯರಿಗೆ ಜೂಜಾಟದ ವಿಚಾರದಲ್ಲಿ ಗಲಾಟೆ ಆಗಿರುವುದಾಗಿ ತಿಳಿಸದೆ ತಾನು ರಸ್ತೆ ಅಪಘಾತದಲ್ಲಿ ಬಿದ್ದು ಗಾಯಗೊಂಡಿರುವುದಾಗಿ ಹೇಳಿರುತ್ತೇನೆ. ನಂತರ ತಾನು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯ ಮೇರೆಗೆ ಅದೇ ದಿನ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಗೌರವ್ ಎಂಬ ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತೇನೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.271/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ 11/06/2021 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದಿದಾರರಾದ ಶಿವಮ್ಮ ಕೋಂ ಶಿವಪ್ಪ, 28 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿ ಕೆಲಸ, ವಾಸ: ನಂಬಿಹಳ್ಳಿ ಗ್ರಾಮ, ಶ್ರೀನಿವಾಸಪುರ       ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ತವರೂರು ಊಲವಾಡಿ ಗ್ರಾಮ ಚಿಂತಾಮಣಿ ತಾಲ್ಲೂಕು ಆಗಿರುತ್ತೆ. ದಿನಾಂಕ:21/05/2021 ರಂದು ತಾನು ತನ್ನ ತಮ್ಮನಾದ ವೆಂಕಟೇಶ್ ರವರ ಮದುವೆಗೆಂದು ಊಲವಾಡಿ ಗ್ರಾಮಕ್ಕೆ ಬಂದಿರುತ್ತೇನೆ. ತಮ್ಮನ ಮದುವೆಯ ನಂತರ ತಾನು ತನ್ನ ತವರು ಮನೆಯಲ್ಲಿಯೇ ಇದ್ದೆನು. ದಿನಾಂಕ:07/06/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿದ್ದಾಗ ಊಲವಾಡಿ ಗ್ರಾಮದ ಶಿವಪ್ಪ ಬಿನ್ ಈರಪ್ಪ ರವರ ಹೆಂಡತಿ ಭಾರತಮ್ಮ ರವರು ಬಂದು ನನ್ನ ಗಂಡ ಗಲಾಟೆ ಮಾಡುತ್ತಿದ್ದಾನೆ ನೀನು ಬಂದು ಬುದ್ದಿ ಹೇಳುವಂತೆ ಬಾ ಎಂದು ತನ್ನನ್ನು ಕರೆದುಕೊಂಡು ಹೋದಾಗ, ತಾನು ಶಿವಪ್ಪನಿಗೆ ಗಲಾಟೆ ಮಾಡಬೇಡ ಸುಮ್ಮನಿರು ಎಂದು ಹೇಳುತ್ತಿದ್ದಂತೆ ಶಿವಪ್ಪ ತನ್ನನ್ನು ಕುರಿತು “ಲೋಪರ್ ಮುಂಡೆ ನೀನು ಯಾರು ನನಗೆ ಹೇಳುವುದಕ್ಕೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ, ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿ, ಈ ದಿನ ನಿನ್ನನ್ನು ಬಿಡುವುದಿಲ್ಲ ಇಲ್ಲೇ ಹೂತು ಬಿಡುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದನು. ಭಾರತಮ್ಮ ಮತ್ತು ಮುನಿಯಮ್ಮ ರವರು ಸಹ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತನ್ನ ತಾಯಿಯಾದ ಮಂಜಮ್ಮ ಕೋಂ ತಿಪ್ಪಣ್ಣ, ಗ್ರಾಮದವರಾದ ನಿರ್ಮಲಮ್ಮ ಕೋಂ ಲೇಟ್.ರವಿತೇಜ ಮತ್ತು ಮಂಜಮ್ಮ ಕೋಂ ಲೇಟ್.ರಾಮಕೃಷ್ಣಪ್ಪ ರವರುಗಳು ಅಲ್ಲಿಗೆ ಬರುವಷ್ಟರಲ್ಲಿ ಶಿವಪ್ಪ ಅಲ್ಲಿದ್ದ ಹೊರಟುಹೋದನು. ನಂತರ ಗಾಯಗೊಂಡಿದ್ದ ತನ್ನನ್ನು ತನ್ನ ತಾಯಿ ಮಂಜಮ್ಮ ರವರು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು. ಈ ವಿಚಾರದಲ್ಲಿ ಗ್ರಾಮಸ್ಥರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆವಿಗೂ ಯಾವುದೇ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಮೇಲ್ಕಂಡವರ  ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.103/2021 ಕಲಂ. 188 ಐ.ಪಿ.ಸಿ & 51(b)  THE DISASTER MANAGEMENT ACT, 2005 :-

          ದಿನಾಂಕ: 10/06/2021 ರಂದು ಮದ್ಯಾಹ್ನ 12:30 ಗಂಟೆಗೆ ಪಿ. ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:10/06/2021 ರಂದು ಬೆಳಿಗ್ಗೆ  ತಾನು ಮತ್ತು ಠಾಣಾ  ಎ.ಎಸ್.ಐ ಮುಕ್ತಿಯಾರ್ ಪಾಷ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಗಾಂಧಿ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ  ಗಾಂಧಿನಗರದಿಂದ ಎ.ಪಿ.ಎಂ.ಸಿ ಮಾರುಕಟ್ಟೆ ಕಡೆ ಹೋಗುವ ರಸ್ತೆಯಲ್ಲಿರುವ ಶ್ರೀ ಸಾಯಿರಾಂ ಜನರಲ್ ಸ್ಟೋರ್ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ  ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಶ್ರೀನಿವಾಸರೆಡ್ಡಿ ಬಿನ್ ಲೆಟ್ ಅಂಜಿನಪ್ಪ, 52 ವರ್ಷ, ವಕ್ಕಲಿಗರು, ಶ್ರೀ ಸಾಯಿರಾಂ ಜನರಲ್ ಸ್ಟೋರ್ ಮಾಲೀಕರು ಗಾಂಧಿ ನಗರ ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.104/2021 ಕಲಂ. 188 ಐ.ಪಿ.ಸಿ & 51(b)  THE DISASTER MANAGEMENT ACT, 2005 :-

          ದಿನಾಂಕ: 10/06/2021 ರಂದು ಮದ್ಯಾಹ್ನ 12:40 ಗಂಟೆಗೆ ಪಿ ಎಸ್ ಐ (ಕಾ & ಸು - 1) ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:10/06/2021 ರಂದು ಬೆಳಿಗ್ಗೆ  ತಾನು ಮತ್ತು ಠಾಣಾ  ಸಿಬ್ಬಂದಿ ಸಿ.ಪಿ.ಸಿ-275 ಸಂಪತ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಎಂ.ಜಿ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಚಂದನ್ ಪಾಸ್ಟ್ ಪುಡ್  ನ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಪಾಸ್ಟ್ ಪುಡ್  ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ  ಪಾಸ್ಟ್ ಪುಡ್ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ವೇಣು ಗೋಪಾಲ್ ಬಿನ್ ಬೈಯ್ಯರೆಡ್ಡಿ, 49 ವರ್ಷ, ಚಂದನ ಪಾಸ್ಟ್ ಪುಡ್ ನ ಮಾಲೀಕರು, ವಾಸ: ಎಂ.ಜಿ ರಸ್ತೆ,  ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಪಾಸ್ಟ್ ಪುಡ್ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.105/2021 ಕಲಂ. 188 ಐ.ಪಿ.ಸಿ & 51(b)  THE DISASTER MANAGEMENT ACT, 2005 :-

          ದಿನಾಂಕ: 10/06/2021 ರಂದು ಮದ್ಯಾಹ್ನ 1:45 ಗಂಟೆಗೆ ಪಿ ಎಸ್ ಐ ( ಕಾ& ಸು - 1 ) ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:10/06/2021 ರಂದು ಬೆಳಿಗ್ಗೆ  ತಾನು ಮತ್ತು ಠಾಣಾ  ಸಿಬ್ಬಂದಿ ಸಿ.ಪಿ.ಸಿ-275 ಸಂಪತ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಮದ್ಯಾಹ್ನ 12-45  ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ನಗರದ ಮೀನಿನ ಮಾರ್ಕೇಟ್ ನಲ್ಲಿರುವ ಮಂಜುನಾಥ ರವರ ಮಾಂಸದ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಮಾಂಸದ ಅಂಗಡಿಯ  ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಣಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಮಂಜುನಾಥ ಬಿನ್ ಚೆನ್ನಕೃಷ್ಣಪ್ಪ, 38 ವರ್ಷ, ಗೊಲ್ಲರು, ವ್ಯಾಪಾರ, ವಾಸ: ಅಗ್ರಹಾರ, ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 10/06/2021 ರಂದು ಬೆಳಗ್ಗೆ 10.45 ಗಂಟೆಯಲ್ಲಿ ಠಾಣಾ ಸಿಬ್ಬಂಧಿ ಹೆಚ್.ಸಿ-32, ಮಂಜುನಾಥರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ:10/06/2021 ರಂದು ಬೆಳಗ್ಗೆ 06.00 ಗಂಟೆಯಲ್ಲಿ ಠಾಣಾಧಿಕಾರಿಗಳು ತನಗೆ ಮತ್ತು ಠಾಣಾ ಸಿಬ್ಬಂದಿಯಾದ  ಪಿ.ಸಿ -200 ಚಂದ್ರಶೇಖರ್ ರವರಿಗೆ ಕೋವಿಡ್ -19 ಪ್ರಯುಕ್ತ ದಿಬ್ಬೂರಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾವು ದಿಬ್ಬೂರಹಳ್ಳಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಗ್ಗೆ ಸುಮಾರು 9.00 ಗಂಟೆಗೆ ಯಾರೋ ಬಾತ್ಮಿದಾರರು ದಿಬ್ಬೂರಹಳ್ಳಿ ಗ್ರಾಮದ  ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ ರವರ ವಾಸದ ಚಿಕನ್ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿಸಿದ್ದು,  ಅದರಂತೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಪಂಚರಾಗಿ ಸಹಕರಿಸಲು ಕೋರಲಾಗಿ ಅವರು ಒಪ್ಪಿ ತಮ್ಮಗಳೊಂದಿಗೆ ದಿಬ್ಬೂರಹಳ್ಳಿ ಗ್ರಾಮದ  ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ ರವರ ವಾಸದ ಚಿಕನ್ ಅಂಗಡಿ ಬಳಿ ಬೆಳಗ್ಗೆ 09.15 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಬಾಗಿಲು ಸ್ವಲ್ಪ ತೆರೆದುಕೊಂಡಿದ್ದು, ತಾವು ಅಂಗಡಿಯ ಒಳಗೆ ಹೋಗುತ್ತಿದ್ದಂತೆ ಅಂಗಡಿಯಲ್ಲಿದ್ದ ಅಂಗಡಿ ಮಾಲೀಕ ವೆಂಕಟೇಶ @ ಶಾಟೋಡು ಬಿನ್ ರಾಮಪ್ಪರವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ತಮ್ಮಿಂದ ತಪ್ಪಿಸಿಕೊಂಡು ಓಡಿ ಹೋದರು. ನಂತರ ಪಂಚರ ಸಮಕ್ಷಮ ಅಂಗಡಿಯಲ್ಲಿ ಪರಿಶೀಲಿಸಲಾಗಿ  ಅಂಗಡಿಯ ಒಂದು ಟೇಬಲ್ ಮೇಲೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯ ತುಂಬಿದ ಪಾಕೆಟ್ ಗಳು ಕಂಡು ಬಂದಿದ್ದು, ಸದರಿ ಮಧ್ಯದ ಪಾಕೆಟ್ಗಳನ್ನು ಪರಿಶೀಲಿಸಲಾಗಿ ಒರಿಜಿನಲ್ ಚಾಯ್ಸ್ ನ 90 ಎಂ.ಎಲ್ ನ 41 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳ ಒಂದು ಟೆಟ್ರಾ ಪಾಕೆಟ್ ಬೆಲೆ 35.13/-ರೂಗಳಾಗಿರುತ್ತೆ. ಇವುಗಳಲ್ಲಿನ ಒಟ್ಟು ಮಧ್ಯದ ಸಾಮಾರ್ಥ್ಯ 3 ಲೀಟರ್ 690 ಎಂ.ಎಲ್ ಇದ್ದು, ಇವುಗಳ ಒಟ್ಟು ಮೊತ್ತ 1440.33/-ರೂಗಳಾಗಿರುತ್ತೆ. ಓಡಿ ಹೋದರು.  ಸದರಿ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ, 45 ವರ್ಷ, ವಕ್ಕಲಿಗರು, ಚಿಕನ್ ಅಂಗಡಿ ವ್ಯಾಪಾರಿ, ದಿಬ್ಬುರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಮೊ.ಸಂ-9036668066 ಎಂದು ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಬೆಳಗ್ಗೆ 09.30 ಗಂಟೆಯಿಂದ  10.30  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ ಮಧ್ಯದ ಪಾಕೆಟ್ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೇನೆ, ಮೇಲ್ಕಂಡ ಆಸಾಮಿಯು ತಮ್ಮ ಅಂಗಡಿಯಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವುದಾಗಿದ್ದು, ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 379,427,447 ಐ.ಪಿ.ಸಿ:-

          ದಿನಾಂಕ 10/06/2021 ರಂದು ಬೆಳಗ್ಗೆ 11.00 ಗಂಟೆಗೆ ಠಾಣಾ ಸಿಬ್ಬಂಧಿ ಪಿ.ಸಿ-490 ರವರು ಶಿಡ್ಲಘಟ್ಟ ಘನ ನ್ಯಾಯಾಲಯದಲ್ಲಿ ಪಡೆದು ತಂದು ಹಾಜರುಪಡಿಸಿದ ಪಿ.ಸಿ.ಆರ್ ಸಂಖ್ಯೆ 94/2020 ರಂತೆ  ಆದೇಶದ ಪ್ರತಿಯ ಸಾರಾಂಶವೇನೆಂದರೆ ದಿನಾಂಕ 03/12/2021 ರಂದು ಬೆಳಗ್ಗೆ 1.00 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ಮುನಿ ಅಕ್ಕಾಯಮ್ಮ ಕೊಂ ಲೇಟ್ ವೆಂಕಟರಾಯಪ್ಪರವರ ಬಾಬತ್ತು ಜಮೀನಿನಲ್ಲಿ ಬಶೆಟ್ಟಹಳ್ಳಿ ಗ್ರಾಮದ ವಾಸಿ ಆರೋಪಿ ನಾರಾಯಣಸ್ವಾಮಿ ಬಿನ್ ಲೇಟ್ ನಾಗಪ್ಪರವರು ಅಕ್ರಮ ಪ್ರವೇಶ ಮಾಡಿ, ಜಮೀನಿನಲ್ಲಿದ್ದ ರಾಗಿ ಬೆಳೆಯನ್ನು ನಾಶಪಡಿಸಿ ಹಾಗೂ ಸದರಿ ಜಮೀನಿನಲ್ಲಿದ್ದ ರಾಗಿಯನ್ನು ಕದ್ದು ತನ್ನ ಮನೆಗೆ ಸಾಗಿಸಿ ಸಂಗ್ರಹಣೆ ಮಾಡಿರುವುದಾಗಿದ್ದು, ಈ ಬಗ್ಗೆ ಆರೋಪಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ಘನ ನ್ಯಾಯಾಲಯದ ಆದೇಶವಾಗಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.97/2021 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:11/06/2021 ರಂದು ಬೆಳಗ್ಗೆ 7.30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಮಂಜುನಾಥ ಬಿನ್ ರಾಮಾಂಜಿನಪ್ಪ, 24 ವರ್ಷ, ಗೊಲ್ಲ ಜನಾಂಗ, ಜಿರಾಯ್ತಿ, ಉಜ್ಜಯಿನಿ ಹೊಸಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಯವರಾದ ರಾಮಾಂಜಿನಪ್ಪ ಬಿನ್ ಕೃಷ್ಣಪ್ಪ, 50 ವರ್ಷ, ಗೊಲ್ಲ ಜನಾಂಗ, ಲಾರಿ ಚಾಲಕ, ಉಜ್ಜಯಿನಿ ಹೊಸಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕುರವರು ಗೌರಿಬಿದನೂರು ರಾಧಿಕಾ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ:10/06/2021 ರಂದು ಸಂಜೆ 04.00 ಗಂಟೆ ಸಮಯದಲ್ಲಿ ಗೌರಿಬಿದನೂರಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ದಿನಾಂಕ:10/06/2021 ರಂದು ಲಾರಿಯಲ್ಲಿ ಜೋಳವನ್ನು ತುಂಬಿಕೊಂಡು ಗೌರಿಬಿದನೂರಿನಿಂದ ಪುಂಗನೂರಿಗೆ ಹೋಗಲು ಗೌರಿಬಿದನೂರು ಬಿಟ್ಟು NH-234-ರಸ್ತೆಯ ಪಿ.ನಾಗೇನಹಳ್ಳಿ ಗ್ರಾಮದ ಬಳಿ ರಾತ್ರಿ 8.30 ಗಂಟೆ ಸಮಯದಲ್ಲಿ ನಮ್ಮ ತಂದೆ ಲಾರಿ ನಂ:KA-40-5835 ರಲ್ಲಿ ಹೋಗುತ್ತಿರುವಾಗ ಚಿಕ್ಕಬಳ್ಳಾಪುರದ  ಕಡೆಯಿಂದ ಬಂದ TN-33-AQ-4686 ರ ಲಾರಿ ಚಾಲಕ ಅಪಘಾತ ಪಡಿಸಿರುವುದಾಗಿ ನಮ್ಮ ಸಂಬಂಧಿ ವಿಚಾರ ತಿಳಿದು 9.00 ಗಂಟೆಗೆ ನನಗೆ ತಿಳಿಸಿದ್ದು ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ  ಆಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಾನು ತಕ್ಷಣ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವೈದ್ಯರು ಅಪಘಾತದಲ್ಲಿ ಕೈ ಕಾಲುಗಳಿಗೆ ಮತ್ತು ತಲೆಗೆ ಗಾಯಗಳಾಗಿ ಮೃತಪಟ್ಟಿರುವುದಾಗಿ ತಿಳಿಸಿದರು. ನಮ್ಮ ತಂದೆ ಹೋಗುತ್ತಿದ್ದ ಲಾರಿಗೆ ಅಪಘಾತ ಪಡಿಸಿದ ಚಾಲಕನಿಗೂ ಸಹಾ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು. ನಮ್ಮ ತಂದೆಗೆ ಅಪಘಾತ ಪಡಿಸಿದ TN-33-AQ-4686 ರ ಲಾರಿ ಚಾಲಕ ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ. ಆಸ್ಪತ್ರೆಯಿಂದ  ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.98/2021 ಕಲಂ. 324,504,307 ಐ.ಪಿ.ಸಿ:-

          ದಿನಾಂಕ:11/06/2021 ರಂದು ಬೆಳಗ್ಗೆ 09.00  ಗಂಟೆಗೆ ಹೆಚ್.ಸಿ-137 ರವರು ಠಾಣೆಗೆ ಹಾಜರಾಗಿ ನೀಡಿದ ಆಸ್ಪತ್ರೆಯ ಮೆಮೊ ಮತ್ತು ಗಾಯಾಳು  ಹನುಮಂತರಾಯಪ್ಪ ಬಿನ್ ಲೇಟ್ ಕೊತ್ತ ನರಸಪ್ಪ, 45 ವರ್ಷ, ನಾಯಕರು, ಜಿರಾಯ್ತಿ, ವಾಸ:ಕದಿರದೇವರಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ  ನಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:10/06/2021 ರಂದು ನಾನು ಎಂದಿನಂತೆ ರಾತ್ರಿ ಊಟ ಮುಗಿಸಿ ಮನೆಯಲ್ಲಿ  ಮಲಗಿದೆನು. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ರಾಮಾಂಜಿನಮ್ಮ ಮಾತ್ರ ಇದ್ದೆವು. ರಾತ್ರಿ ಸುಮಾರು 12.30 ಗಂಟೆ ಸಮಯದಲ್ಲಿ ಮನೆ ಮುಂದೆ ಯಾರೋ ಕೂಗಿದ ಹಾಗೆ ಆಯಿತು ಹೊರಗೆ ಬಂದು ನೋಡಿದೆನು ಅಷ್ಟರಲ್ಲಿ ನಮ್ಮ ಗ್ರಾಮದ ನಮ್ಮ ಚಿಕ್ಕಪ್ಪನ ಮಗಳಾದ ಮಂಜುಳನನ್ನು ಮದುವೆ ಯಾಗಿದ್ದ ಗಂಗಸಂದ್ರ ಗ್ರಾಮದ ನರಸಿಂಹಮೂರ್ತಿ @ ಮಾಸ್ ಎಂಬುವವನು ಏನೋ ನಿಂದು ಜಾಸ್ತಿಯಾಗಿದೆ ಎಂತ ಕೂಗಾಡಿದನು. ಆಗ ನಾನು ಯಾಕಪ್ಪ ಇಷ್ಟು ಹೊತ್ತಿನಲ್ಲಿ ಬಂದು ಗಲಾಟೆ ಮಾಡುತ್ತಿದ್ದೀಯ ಎಂದು ಕೇಳುವಷ್ಟರಲ್ಲಿ ತನ್ನ ಜೊತೆಯಲ್ಲೇ ತಂದಿದ್ದ ಲಾಂಗ್ ನಿಂದ ನನ್ನ ಎಡಭಾಗದ ತಲೆಗೆ ಹೊಡೆದನು. ಕೂಡಲೆ ನಾನು ಕಿರುಚಾಡಿ ಕೊಂಡೆನು ನಂತರ ನನ್ನ ಹೆಂಡತಿ ಹಾಗೂ ನಮ್ಮ ಗ್ರಾಮಸ್ಥರು ಬಂದು ಉಪಚರಿಸಿದರು. ನನಗೆ ತಲೆಗೆ ತೀವ್ರ ತರಹದ ರಕ್ತಗಾಯವಾಗಿದ್ದರಿಂದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡು ಚೆತರಿಸಿಕೊಳ್ಳುತ್ತಿದ್ದೇನೆ. ನರಸಿಂಹಮೂರ್ತಿ ರವರ ಜೊತೆ ನವೀನ್ ಮತ್ತು ಕಾರ್ತಿಕ್ ಸಹ ಸ್ಥಳಕ್ಕೆ ಬಂದಿದ್ದರು ಆದರೆ ಅವರು ನನಗೆ ಹೊಡೆದಿರುವುದಿಲ್ಲ. ನರಸಿಂಹಮೂರ್ತಿ @ ಮಾಸ್ ರವರು ರಾತ್ರಿ KA-01-D-1951 ಆಟೋದಲ್ಲಿ ನಮ್ಮ ಮನೆಯ ಬಳಿಗೆ ಬಂದು ಜಮೀನು ವಿಚಾರವಾಗಿ ನನ್ನನ್ನು ಸಾಯಿಸಬೇಕೆಂದು ಲಾಂಗ್ ಅನ್ನು ಹಿಡಿದು ತಲೆಗೆ ಹೊಡೆದು ಗಾಯ ಪಡಿಸಿರುತ್ತಾರೆ. ಗಾಯಗೊಂಡ ಸಮಯದಲ್ಲಿ ನಮ್ಮ ಗ್ರಾಮದ ರಾಮಾಂಜಿ ಮತ್ತು ಅನಿಲ್ ರವರು ಗಲಾಟೆ ಬಿಡಿಸಿ ನನ್ನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನರಸಿಂಹಮೂರ್ತಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರು.

 

11. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 143,147,148,307,323,324,504,506,149 ಐ.ಪಿ.ಸಿ:-

          ದಿನಾಂಕ: 10-06-2021 ರಂದು ಘನ ನ್ಯಾಯಾಲಯದ ಹೆಚ್.ಸಿ-195 ಮುರಳಿಧರ್ ರವರು ಘನ ನ್ಯಾಯಾಲಯದ ಎಂ.ಟಿ ನಂ: 479/2021 ದಿನಾಂಕ:10-06-2021 ರ ಆದೇಶದಂತೆ ಸಾದರಾಗಿ ಬಂದ ದೂರನ್ನು ತಂದು ಹಾಜರ್ಪಡಿಸಿದ್ದನ್ನು ಪಡೆದು ಸಂಜೆ 6:00 ಗಂಟೆಗೆ ಪ್ರಕರಣ ದಾಖಲಿಸಿಕೊಂಡ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಶ್ರೀ. ಡಿ.ಎನ್ ಮುನಿಕೃಷ್ಣಪ್ಪ @ ರೆಡ್ಡಿ ಬಿನ್ ದೊಡ್ಡನಂಜಪ್ಪ, 45 ವರ್ಷ, ಹಾಲಿ ವಾಸ: ಪೇರೆಸಂದ್ರ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಸ್ವಂತ ವಾಸ: ಚೀಡಚಿಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಅಣ್ಣನಾದ ಮರಿಯಪ್ಪ ರವರು ಸುಮಾರು 5 ತಿಂಗಳ ಹಿಂದೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ಆರೋಪಿ-1 ತಮ್ಮೇಗೌಡ ರವರ ವಿರುದ್ದ ಸ್ಪರ್ಧಿಸಿದ್ದರಿಂದ ಮರಿಯಪ್ಪ ಮತ್ತು ಅವರ ಕುಟುಂಬದವರ ವಿರುದ್ದ ಆರೋಪಿತರು ದ್ವೇಷ ಸಾದೀಸಿರುತ್ತಾರೆ. ದಿನಾಂಕ:20-05-2021 ರಂದು ಮರಿಯಪ್ಪ ರವರ ಮಗ ಚಾಣುಕ್ಯಗೌಡ ಮತ್ತು ಈತನ ಸ್ನೇಹಿತರು ಪಾರಂಹೌಸ್ಗೆ ಹೋಗಿ ಮನೆಗೆ ವಾಪಸ್ಸು ಹೋಗಲು ಗ್ರಾಮದ ಡೈರಿಯ ಬಳಿ ಹೋಗುತ್ತಿದ್ದಾಗ ಚಾಣುಕ್ಯ ಗೌಡ ರವರು ಮಾಸ್ಕ್ ಹಾಕದ ವಿಚಾರದಲ್ಲಿ ಆರೋಪಿತರು ಹಳೇ ದ್ವೇಷ ಇಟ್ಟುಕೊಂಡು ಅನಾವಶ್ಯಕವಾಗಿ ಗಲಾಟೆ ಮಾಡಿ ಬೈದು, ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿಕೊಳ್ಳುವಂತೆ ಘನ ನ್ಯಾಯಾಲಯವು ಆದೇಶಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.191/2021 ಕಲಂ. 447,427,504,506,34 ಐ.ಪಿ.ಸಿ:-

          ದಿನಾಂಕ: 10-06-2021 ರಂದು ಮದ್ಯಾಹ್ನ 13-00 ಗಂಟೆಗೆ ಪಿರ್ಯಾಧಿದಾರರಾದ ನಾರಾಯಣಪ್ಪ ಬಿನ್ ಲೇಟ್ ಚಿಕ್ಕಮುನಿಯಪ್ಪ, ತಾತಹಳ್ಳಿ  ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾಧಿದಾರರಿಗೂ ಹಾಗೂ ಆರೋಪಿಗಳಿಗೆ ತಾತಹಳ್ಳಿ ಗ್ರಾಮದ ಸರ್ವೆ ನಂ 41/ಪಿ17 ಮತ್ತು ಇತರೆ ಜಮೀನಿನಲ್ಲಿ ವಿವಾದಗಳು  ಇರುತ್ತೆ. ಈಗಿದ್ದೂ ತಾತಹಳ್ಳಿ ಗ್ರಾಮದ ಎಂ.ಎನ್. ಶಿವಮೂರ್ತಿ ಬಿನ್ ಮುನಿವೆಂಕಟಪ್ಪ ರವರು ಸದರಿ ಜಮೀನಗಳ ಅನುಭಕ್ಕೆ ತೊಂದರೆ ಕೊಡುತ್ತಿದ್ದು ಪಿರ್ಯಾಧಿದಾರರು ಹಾಗೂ ಹನುಮಪ್ಪ, ಮಾರೇಶ, ಹೆಚ್.ಅಶೋಕ್, ಆನಂದ, ಶ್ರೀಮತಿ ಈಶ್ವರಮ್ಮ ಮತ್ತು ಶ್ರೀಮತಿ ರತ್ನಮ್ಮ ರವರುಗಳು ಶಿವಮೂರ್ತಿ ರವರ ವಿರುದ್ದ ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 147/2021 ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ. ಈಗಿರುವಲ್ಲಿ ದಿನಾಂಕ: 06-06-2021 ರಂದು ರಾತ್ರಿ ಪಿರ್ಯಾಧಿದಾರರು ಯಾರು ಇಲ್ಲದೇ ಇದ್ದ ಸಮಯದಲ್ಲಿ ಎಂ.ಎನ್ ಶಿವಮೂರ್ತಿ, ಶ್ರೀಮತಿ ಸುನಂದಮ್ಮ ಕೋಂ ಎಂ.ಎನ್ ಶಿವಮೂರ್ತಿ, ನಿಖಿಲ್ ಬಿನ್ ಎಂ.ಎನ್ ಶಿವಮೂರ್ತಿ ಹಾಗೂ ಚಿನ್ನಿ ಬಿನ್ ಎಂ.ಎನ್ ಶಿವಮೂರ್ತಿ ಮತ್ತು ಇತರರು ಪಿರ್ಯಾಧಿದಾರರ ಜಮೀನನಲ್ಲಿ ಇದ್ದ 170 ಆಲಸಿನ ಸಸಿಗಳನ್ನು ಕಿತ್ತು ನಾಶ ಮಾಡಿ 26,000-00 ರೂ ನಷ್ಟವುಂಟು ಮಾಡಿರುತ್ತಾರೆ. ಈ  ವಿಚಾರವನ್ನು ಕೇಳಲು ಅವರ ಮನೆ ಬಳಿ ಹೋದಾಗ ಮೇಲ್ಕಂಡವರು ತನ್ನನ್ನು ಕೆಟ್ಟ ಕೆಟ್ಟ ಮಾತುಗಳಿಂದ ನಿಂದನೆ ಮಾಡಿ ಈ ವಿಷಯವಾಗಿ ನಮ್ಮ ಮನೆ ಬಳಿ ಬಂದರೆ ನಿನ್ನ ಇಲ್ಲ ಅನ್ನಿಸಿ ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದು ಅ ಸಮಯದಲ್ಲಿ ಅಲ್ಲಿಯೇ ಇದ್ದ ನಮ್ಮ ಗ್ರಾಮಸ್ಥರು ಅವರಿಂದ ನನ್ನನ್ನು ಬಿಡಿಸಿದ್ದು ಮೇಲ್ಕಂಡವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಸಾರಂಶದ ಮೇರೆಗೆ ಠಾಣಾ ಮೊ ಸಂ: 191/2021 ಕಲಂ 447, 427, 504, 506, ರ/ಜೊ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.193/2021 ಕಲಂ. 427,506,504,143,147,149,447 ಐ.ಪಿ.ಸಿ:-

          ದಿನಾಂಕ:11-06-2021  ರಂದು ಮದ್ಯಾಹ್ನ 1-30 ಗಂಟೆಯಲ್ಲಿ  ಪಿರ್ಯಾದಿದಾರರಾದ ನಿಖಿಲ್ ಬಿನ್ ಎಂ.ಎನ್.ಶಿವಮೂರ್ತಿ ,ಸುಮಾರು 25 ವರ್ಷ, ನಾಯಕರು, ಜಿರಾಯ್ತಿ, ವಾಸ:ತಾತಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮ ತಂದೆಯಾದ ಎಂ.ಎನ್.ಶಿವಮೂರ್ತಿ  ಬಿನ್ ಮುನಿವೆಂಕಟಪ್ಪ  ರವರ ಹೆಸರಿನಲ್ಲಿ ತಾತಹಳ್ಳಿ  ಗ್ರಾಮದ ಸವರ್ೆ ನಂ:41/ಪಿ5 ರಲ್ಲಿ 4-00 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ತಾವು ನೇರಳೆ ಗಿಡಗಳನ್ನು ನೆಟ್ಟಿದ್ದು ಸುಮಾರು 2 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದು,ದಿನಾಂಕ:09-06-2021 ರಂದು ಸಂಜೆ 7-00 ಗಂಟೆಯಲ್ಲಿ ಇದೇ ತಾತಹಳ್ಳಿ ಗ್ರಾಮದ ವಾಸಿಗಳಾದ ಹನುಮಪ್ಪ, ನಾರಾಯಣಸ್ವಾಮಿ, ಮಾರೇಶ,ಅಶೋಕ, ಹೆಚ್.ಮಂಜು, ಆನಂದ, ಈಶ್ವರಮ್ಮ,  ರತ್ನಮ್ಮ, ಭಾಗ್ಯಮ್ಮ, ಮುರಳಿ ಮತ್ತು ರಾಜೇಶ್ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಬಂದು  ಮೇಲ್ಕಂಡ ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ತಾವು ನೆಟ್ಟಿದ್ದ  ನೇರಳೆ ಗಿಡಗಳನ್ನು ಕಡಿದು ನಾಶಮಾಡಿರುತ್ತಾರೆ, ಅ ಸಮಯದಲ್ಲಿ ತಮ್ಮ ತಂದೆ ಬೇರೆ ಕಡೆ ಇದ್ದುದ್ದರಿಂದ ತಾನು ಇದನ್ನು ಪ್ರಶ್ನೆ ಮಾಡಲು ಹೋದಾಗ ಮೇಲ್ಕಂಡವರೆಲ್ಲರೂ ತನ್ನ ಮೇಲೆ ಎರಗಿ ಏ ಮಗನೇ ನೀನೇನಾದರೂ ಅಡ್ಡ ಬಂದರೆ ನಿನ್ನನ್ನು ಮುಗಿಸಿ ಬಿಡುತ್ತೇವೆಂದು ಏಕಾ ಏಕಿ ದೊಣ್ಣೆ, ಮಚ್ಚುಗಳಿಂದ ತನ್ನನ್ನು ಹೊಡೆಯಲು ಬಂದು  ತನ್ನನ್ನು ಅಟ್ಟಾಡಿಸಿಕೊಂಡು ಬಂದಿರುತ್ತಾರೆ ಅಲ್ಲದೇ ತನ್ನನ್ನು  ಅವಾಚ್ಯಶಬ್ದಗಳಿಂದ ಬೈದು ನಿಂದಿಸಿರುತ್ತಾರೆ  ಈ ಜಮೀನಿಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿ ಒ.ಎಸ್.ನಂ:316/2019 ರಂತೆ ಹನುಮಪ್ಪ ಇತರರ ವಿರುದ್ದ ಪ್ರತಿಬಂಧಾಜ್ಞೆಯನ್ನು ನೀಡಿರುತ್ತಾರೆ, ಸದರಿ ವಿಚಾರವನ್ನು ತಾನು ತನ್ನ ತಂದೆಗೆ ತಿಳಿಸಿ ಈ  ದಿನ ತಡವಾಗಿ ದೂರು ನೀಡುತ್ತಿದ್ದು,  ಮೇಲ್ಕಂಡವರ ವಿರುದ್ದ  ಕಾನೂನು ಕ್ರಮ ಜರುಗಿಸಿಬೇಕಾಗಿ ನೀಡಿದ್ದ ದೂರಿನ ಸಾರಾಂಶದ ಮೇರಗೆ ಠಾಣಾ ಮೊ.ಸಂ 193/2020 ಕಲಂ 143,147,447,427,504,506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 323,324,307,504,506,114,34 ಐ.ಪಿ.ಸಿ:-

          ದಿನಾಂಕ.10.06.2021 ರಂದು ರಾತ್ರಿ 8.45 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಅಕ್ರಂ, ರಾಜೀವ್  ಗಾಂದೀ ಲೇಔಟ್, ಶಿಡ್ಲಘಟ್ಟ ಟೌನ್ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನಂದರೆ, ಈಗ್ಗೆ ಸುಮಾರು 2 ತಿಂಗಳ ಹಿಂದೆ ರಾಜೀವ್ ಗಾಂದೀ ಲೇಔಟ್ ವಾಸಿ ಸದ್ದಾಂ ಎಂಬುವರ ಬಳಿ 3500/-ರೂ ಕೈ ಸಾಲ ಪಡೆದುಕೊಂಡಿದ್ದು, ಆಗಾಗ ಬಂದು ಸದ್ದಾಂ ವಾಪಸ್ಸು ಕೊಡಲು ಕೇಳಿದಾಗ ತಾನು ಈಗ ಲಾಕ್ ಡೌನ್ ಆಗಿದೆ ಕೆಲಸ ಇಲ್ಲ. ಕೆಲಸ ಸಿಗದ ಕೂಡಲೇ ಹಣ ತಂದು ಕೊಡುತ್ತೇನೆಂದು ತಿಳಿಸಿದರೂ ವಾರದ ಹಿಂದೆ ಪುನಃ ಬಂದು ಹಣ ಕೊಡಲು ಜಗಳ ಮಾಡಿದಾಗ ಮುಂದಿನ ಭಾನುವಾರ ಅಥವಾ ಸೋಮವಾರ ಕೊಡುತ್ತೇನೆಂದು ಹೇಳಿ ವಾಪಸ್ಸು ಕಳುಹಿಸಿದೆ. ದಿನಾಂಕ.10.06.2021 ರಂದು ರಾತ್ರಿ ಸುಮಾರು 7.30 ಗಂಟೆಯಲ್ಲಿ ತಾನು ಮನೆಯಲ್ಲಿ ಊಟ ಮಾಡುತ್ತಿದ್ದಾಗ ರಾಜೀವ್ ಗಾಂಧೀಲೇಔಟ್ ವಾಸಿ ಸಿದ್ದೀಕ್ ಬಿನ್ ಅಲ್ಲಾಬಕಾಶ್ ಮತ್ತು ಸದ್ದಾಂ ರವರು ಮನೆಯ ಬಳಿ ಬಂದು ಆ ಪೈಕಿ ಸಿದ್ದೀಕ್ ಕಾಲುನಿಂದ ಬಾಗಿಲಿಗೆ ಒದ್ದು ನನ್ನ ಮಗನೇ ಹೊರಗೆ ಬಾರೋ ಎಂದು ಕೂಗಿದಾಗ  ತಾನು ಮನೆಯಿಂದ ಹೊರಗೆ ಬಂದಾಗ ಸಿದ್ದೀಕ್ ಏಕಾ ಏಕಿ ಅತನ ಕೈಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ತಲೆಗೆ ಹೊಡೆಯಲು ಬಂದಾಗ ತಾನು ಎಡಕೈ ಅಡ್ಡ ಇಟ್ಟಾಗ ಚಾಕು ಎಡಕೈ ಬೆರಳುಗಳಿಗೆ ತಗಲಿ ರಕ್ತಗಾಯವಾಗಿರುತ್ತೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅದೇ ಚಾಕುವಿನಿಂದ ಬೆನ್ನಿನ ಎಡಭಾಗ ಹೊಡೆದು ರಕ್ತಗಾಯ ಪಡಿಸಿದ್ದು, ಸದ್ದಾಂ ಈ ನನ್ನ ಮಗ ನನಗೆ ಹಣ ಕೊಡುತ್ತಿಲ್ಲ ಅವನಿಗೆ ಬೀಡಬೇಡ ಹೊಡೆದು ಸಾಯಿಸು ಎಂದು ಕುಮ್ಮಕ್ಕು ನೀಡುತ್ತಿದ್ದನು. ಆ ಸಮಯದಲ್ಲಿ ತನ್ನ ಬಳಿ ಬರುತ್ತಿದ್ದ ತನ್ನ 6 ವರ್ಷದ ಮಗ ಇಲಿಯಾಜ್ ಪಾಷ ರವರಿಗೆ ಸದ್ದಾಂ ಕೈಯಿಂದ ಹೊಡೆದು ತಳ್ಳಿದಾಗ ಕೆಳಗೆ ಬಿದ್ದು ಮಗನ ತಲೆಗೆ ರಕ್ತಗಾಯವಾಗಿರುತ್ತೆ. ಆಗ ನಾನು ಕಿರುಚಿಕೊಂಡಾಗ ಮನೆಯಲ್ಲಿದ್ದ ತನ್ನ ಹೆಂಡತಿ ಸಿರಿನ್ ತಾಜ್ ಮತ್ತು ಪಕ್ಕದ ಮನೆಯ ಶಮಾ ಜಗಳ ಬಿಡಿಸಿದಾಗ ಸಿದ್ದೀಕ್ ತನ್ನನ್ನು ಕುರಿತು ಸದ್ದಾಂಗೆ ಹಣ ಕೊಡದೆ ಯಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆಂತ, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಮೇರೆಗೆ ರಾತ್ರಿ 9.30 ಗಂಟೆಗೆ ವಾಪಸ್ಸು ಬಂದು ಈ ಪ್ರಕರಣ ದಾಖಲಿಸಿರುತ್ತೆ.

 

ಇತ್ತೀಚಿನ ನವೀಕರಣ​ : 11-06-2021 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080