ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 32,34 ಕೆ.ಇ ಆಕ್ಟ್ :-

          ದಿನಾಂಕ 10/05/2021 ರಂದು ರೆಡ್ಡಪ್ಪ, ಎ.ಎಸ್.ಐ ರವರು ಮದ್ಯಾಹ್ನ 4-45 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ದಿನಾಂಕ; 10-05-2021 ರಂದು ಠಾಣಾಧಿಕಾರಿಗಳು ನನಗೆ ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 1-30 ಗಂಟೆಯಲ್ಲಿ  ಅಶ್ವತ್ಥಪ್ಪ ಬಿನ್ ಲೇಟ್ ವೆಂಕಟಪ್ಪ, 45 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಕೊಲಿಮಿಪಲ್ಲಿ ಗ್ರಾಮ, ಗೂಳೂರು ಗ್ರಾಮ,  ಬಾಗೇಪಲ್ಲಿ ತಾಲ್ಲೂಕು ಎಂಬುವವರು  ಅಕ್ರಮವಾಗಿ  ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬೀಟ್ ಸಿಬ್ಬಂದಿಯಾದ 309 ಮರಳು ಸಿದ್ದೇಶ್ವರ ಗೌಡ ರವರಿಗೆ ಮಾಹಿತಿ ಬಂದಿರುವುದಾಗಿ ತಿಳಿಸಿದ್ದು, ಸದರಿ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಠಾಣಾ ಜೀಪ್ ಸಂಖ್ಯೆ ಕೆ.ಎ-40-ಜಿ-537 ರ ಜೀಪ್ ನಲ್ಲಿ ಜೀಪ್ ಚಾಲಕ ಪಿಸಿ-134 ಧನಂಜಯ್ ನಾನು ಮತ್ತು ಪಿಸಿ-309 ರವರು ಹೊರಟು ಗೂಳೂರು ಬಸ್ ನಿಲ್ದಾಣದ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದಾಳಿ ವಿಚಾರವನ್ನು ತಿಳಿಸಿ,  ಜೀಪಿನಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಹೊರಟು ಮದ್ಯಾಹ್ನ 2-30 ಗಂಟೆಗೆ ಕೊಲಿಮಿಪಲ್ಲಿ ಗ್ರಾಮದ ಅಶ್ವತ್ಥಪ್ಪ ಬಿನ್ ಲೇಟ್ ವೆಂಕಟಪ್ಪ ರವರು   ಅಂಗಡಿಯ ಮುಂದೆ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ  ಆಸಾಮಿಯು ಹೋದಾಗ ಪೊಲೀಸ್ ಜೀಪನ್ನು ಕಂಡು  ಓಡಿ ಹೋದಾಗ ಪಿಸಿ-309 ರವರು ಹಿಂಬಾಲಿಸಿ ಹಿಡಿದುಕೊಳ್ಳಲು ಹೋದಾಗ ಕೈಯಿಗೆ ಸಿಗದೇ ಓಡಿ ಹೋಗಿರುತ್ತಾನೆ. ನಂತರ  ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ 2 ಬಾಕ್ಸ್ ಗಳಿದ್ದು 1]  180ML ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳಿರುತ್ತವೆ, 2]  180ML ಸಾಮರ್ಥ್ಯದ HAYWARDS CHEERS WHISKY ಯ 84 ಟೆಟ್ರಾ ಪಾಕೇಟ್ ಗಳಿರುತ್ತವೆ, ಇವುಗಳು ಒಟ್ಟು 16 ಲೀಟರ್ 200 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 6,323 /- ರೂ.ಗಳಾಗಿರುತ್ತದೆ. ಸದರಿ ಆಸಾಮಿಯ  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಮೇಲ್ಕಂಡ  ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 4-45 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ಅಶ್ವತ್ಥಪ್ಪ ಬಿನ್ ಲೇಟ್ ವೆಂಕಟಪ್ಪ, 45 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಕೊಲಿಮಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಾಗಿರುತ್ತದೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 11/05/2021 ರಂದು ಮದ್ಯಾಹ್ನ 1-10 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 11/05/2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಅಗಲಗುರ್ಕಿ ಗ್ರಾಮದ ವಾಸಿ ಚೆನ್ನಕೃಷ್ಣಪ್ಪ ಬಿನ್ ರಾಮಸ್ವಾಮಿ, 40 ವರ್ಷ, ವಕ್ಕಲಿಗರು, ವ್ಯಾಪಾರ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 11/05/2021 ರಂದು  ಮದ್ಯಾಹ್ನ 3-00  ಗಂಟೆಯ ಸಮಯದಲ್ಲಿ  ಪಿರ್ಯಾದಿ ಶ್ರೀ. ಡಿ. ರಾಜಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು  ಈಗ್ಗೆ 02 ವರ್ಷಗಳಿಂದ ತಮಿಳುನಾಡಿನ ಚೆನ್ನೈ ನಲ್ಲಿರುವ ವೀರಮ್ ಟ್ರೇಡಿಂಗ್ಸ್ ಕಂಪನಿಯಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು  ಈ  ಕಂಪನಿಯಲ್ಲಿ   ಕೆ. ಸೆಲ್ವಮ್  ಬಿನ್ ಕುಪ್ಪುಸ್ವಾಮಿ ರವರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ.   ದಿನಾಂಕ: 08/05/2021  ರಂದು   ತಮಿಳುನಾಡಿನ ತಿರುಚಿ ಬಳಿ ಇರುವ  ಅರಿಯಲೂರ್ ನಲ್ಲಿರುವ ಚೆಟ್ಟಿನಾಡು ಸಿಮೆಂಟ್ ಪ್ಯಾಕ್ಟರಿಯಲ್ಲಿ  ವೀರಮ್ ಟ್ರೇಡಿಂಗ್ಸ್ ಕಂಪನಿಯ   ಲಾರಿ ನಂಬರ್; AP-39-X-6775   ರಲ್ಲಿ  ಸಿಮೆಂಟ್ ನ್ನು ಲೋಡು ಮಾಡಿಸಿ ಆಂದ್ರ ಪ್ರದೇಶದ  ಹಿಂದೂಪುರದಲ್ಲಿ ಅನ್ ಲೋಡು ಮಾಡಲು  ಚಾಲಕ ಕೆ.ಸೆಲ್ವಮ್ ಬಿನ್ ಕುಪ್ಪುಸ್ವಾಮಿ ರವರೊಂದಿಗೆ  ವಾಹನವನ್ನು  ಕಳುಹಿಸಿಕೊಟ್ಟಿದ್ದೆವು.  ಅದರಂತೆ ಚಾಲಕ ಸೆಲ್ವಂ ರವರು  ಹಿಂದೂಪುರಕ್ಕೆ  ಹೋಗಲು  ಚಿಕ್ಕಬಳ್ಳಾಪುರ ಮಾರ್ಗವಾಗಿ ಬಂದು  ದಿನಾಂಕ: 09/05/2021 ರಂದು ರಾತ್ರಿ  ಸುಮಾರು 9-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು  ಕಸಬಾ ಹೋಬಳಿ  ನ್ಯಾಸ್ತಿಮ್ಮನಹಳ್ಳಿ  ಗ್ರಾಮದ ಸಮೀಪ ಕಣಿವೆಯ ಚಿಕ್ಕಬಳ್ಳಾಪುರ - ಗೌರಿಬಿದನೂರು ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ರಸ್ತೆಯ ತಿರುವುನಲ್ಲಿ ವಾಹನವು  ಚಾಲಕನ ನಿಯಂತ್ರಣಕ್ಕೆ ಸಿಗದೇ  ರಸ್ತೆಯ  ಬಲ ಬದಿಯ ತಡೆ ಗೋಡೆಗೆ ಡಿಕ್ಕಿ ಹೊಡೆಯಿಸಿ  ಹಳ್ಳಕ್ಕೆ  ಉರುಳಿಸಿದ ಪರಿಣಾಮ ವಾಹನ ಜಖಂಗೊಂಡು ವಾಹನದಲ್ಲಿದ್ದ  ಚಾಲಕನಿಗೆ  ಮೈ ಮೇಲೆ ಗಾಯಗಳಾಗಿರುವುದಾಗಿ ಸದರಿ  ಲಾರಿಯ  ಮುಂಭಾಗದಲ್ಲಿ ಹೋಗುತ್ತಿದ್ದ ನಮ್ಮ ಸಂಸ್ಥೆಯ ಚಾಲಕ ಕುಮಾರ್ ರವರು ಗಾಯಗಳಾಗಿದ್ದ ಕೆ. ಸೆಲ್ವಂ ರವರನ್ನು  ಉಪಚರಿಸಿ, ಯಾವುದೋ ಆಂಬುಲೆನ್ಸ್ ವಾಹನದಲ್ಲಿ  ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಬಂದು ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ ನಂತರ  ವಾಹನದ ಬಳಿ ಹೋಗಿರುವುದಾಗಿ ವಿಚಾರ ತಿಳಿಸಿದನು. ತಾನು ಈ ವಿಚಾರವನ್ನು ವೀರಮ್ ಟ್ರೇಡಿಂಗ್ಸ್ ಟ್ರಾನ್ಸಪೋರ್ಟ್ಸ್  ಕಂಪನಿಯ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಅವರ ಸೂಚನೆಯಂತೆ  ಮತ್ತು  ಕರೋನ-19 ಪ್ರಯುಕ್ತ ಲಾಕ್ ಡೌನ್ ಇದ್ದುದರಿಂದ ಈ ದಿನ ದಿನಾಂಕ: 11/05/2021 ರಂದು ಬೆಳಗ್ಗೆ ಅಪಘಾತದ ಸ್ಥಳಕ್ಕೆ ಬಂದು ನೋಡಿದ್ದು  ಅಪಘಾತವಾಗಿರುವ ವಿಚಾರ  ನಿಜವಾಗಿರುತ್ತದೆ.  ಈ ಅಪಘಾತ ವನ್ನುಂಟು ಮಾಡಿದ  ಚಾಲಕ ಕೆ. ಸೆಲ್ವಂ ನನ್ನು ಚಿಕ್ಕಬಳ್ಳಾಪುರ  ನಗರದ ಜೀವನ್ ಆಸ್ಪತ್ರಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ  ನಂತರ  ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಈ ಅಪಘಾವು AP-39-X-6775 ನಂಬರಿನ ಲಾರಿಯ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿರುತ್ತದೆ. ಸದರಿ  ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.155/2021 ಕಲಂ. 307,504,149 ಐ.ಪಿ.ಸಿ:-

     ದಿನಾಂಕ:10-05-2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು    ದಿನಾಂಕ 08-05-2021 ರಂದು ಬೆಳಿಗ್ಗೆ 8 ಗಂಟೆಗೆ ಕಂಪ್ಲೆಂಟ್ ಕೊಡಲು ಬರಬೇಕಾದರೆ ನನ್ನ ಗಂಡ ನಾರಾಯಣಸ್ವಾಮಿ ಮಚ್ಚಿನಿಂದ ತನ್ನನ್ನು ಸಾಯಿಸಿಹಾಕಲು ಪ್ರಯತ್ನ ಪಟ್ಟಿರುತ್ತಾನೆ. ಸಾರ್ವಜನಿಕಜ ರಸ್ತೆಯಲ್ಲಿ ಅದನ್ನು ತಾನು ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿರುತ್ತೇನೆ. ಅಲ್ಲಿಂದ ತಪ್ಪಿಸಿಕೊಂಡು SP ಸಾಹೇಬರನ್ನು ನೋಡಲು ಹೋಗಿರುತ್ತೇನೆ. ಚಿಕ್ಕಬಳ್ಳಾಪುರಕ್ಕೆ SP ಸಾಹೇಬರಿಗೆ ದಿನಾಂಕ: 05-05-2021 ರಿಜಿಸ್ಟರ್ ಪೊಸ್ಟ್ ಮುಖಾಂತರ ದೂರು ಕೊಟ್ಟಿರುತ್ತೇನೆ. ವಿಚಾರ ಏನೆಂದರೆ ತನ್ನ ಗಂಡ ನಾರಾಯಣಸ್ವಾಮಿ ಮೊದಲನೆ ಹೆಂಡತಿ ಮಕ್ಕಳು ಅವರ ಹೆಸರು ಪುಷ್ಪಲತಾ ಮತ್ತು ಸೌಮ್ಯ ಇವಳ ಗಂಡನ ಹೆಸರು ದೇವರಾಜ್ ಏರ್ ಪೋಟ್ ನಲ್ಲಿ ಸೂಪರ್ ವೇಜರ್ ಕೆಲಸ ಮಾಡುತ್ತಿರುತ್ತಾನೆ. ಪುಷ್ಪಲತಾ ಚಿಕ್ಕಬಳ್ಳಾಪುರ ಕೆ.ವಿ.ಬಿ ಯಲ್ಲಿ ಪಿವನ್ ಕೆಲಸ ಮಾಡುತ್ತಿರುತ್ತಾರೆ. ಇವರೆಲ್ಲ ಸೇರಿಕೊಂಡು ದಿನಾಂಕ: 03-05-2021 ರಂದು ತನ್ನನ್ನು ಸಾಯಿಸಲು ಪ್ರಯತ್ನ ಪಟ್ಟಿರುತ್ತಾರೆ. ಅದಕ್ಕೆ ಸಂಬಂದ ಪಟ್ಟ ಎಲ್ಲಾ ದಾಖಲೆಗಳು ತನ್ನ ಹತ್ತಿರ ಇರುತ್ತದೆ. ಮನೆ ಹತ್ತಿರ ಲೈಟ್ ಕಂಬದ ಬಲ್ಪ್ ಗಳನ್ನು ಮತ್ತು ಮನೆಯ ಕರೆಂಟ್ ವೈಯರನ್ನು ಎಲ್ಲಾ ಕಿತ್ತು ಹಾಕಿ ಮನೆ ಹತ್ತಿರ ಕತ್ತಲಾಗಿ ಮಾಡಿರುತ್ತಾನೆ. ಮೇಕೆಗಳನ್ನು ಒಡೆದುಕೊಂಡು ಹೋಗಿರುತ್ತಾನೆ. ಮನೆ ಹತ್ತಿರ ಕತ್ತಲಿನಲ್ಲಿ ಕುಳಿತುಕೊಂಡಿದ್ದಾಗ ತಾನು ತನ್ನ ಮಕ್ಕಳು ಸುಮಾರು 9.00 ಗಂಟೆ ರಾತ್ರಿ ಸಮಯದಲ್ಲಿ ಮನೆಯತ್ತಿರ ತನ್ನ ಗಂಡ ಬಂದಾಗ ಯಾಕೆ ಈ ತರ ಮಾಡಿದ್ದಿಯ ಎಂದು ಕೇಳಿದಾಗ ನಿನ್ನನ್ನು ಸಾಯಿಸಲು ಕರೆಂಟ್ ತೆಗೆದಿದ್ದೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಇವಾಗಲೂ ಕೂಡ ಬಿಡುವುದಿಲ್ಲ ನಿನ್ನನ್ನು ನಿನ್ನ ಮಕ್ಕಳನ್ನು  ಸಾಯಿಸುತ್ತೇನೆಂದು ಸ್ಕೂಟಿಯಲ್ಲಿಂದ ಮಚ್ಚು ಎತ್ತಿಕೊಂಡನು. ತಾವು ತಾನು ತನ್ನ ಮಕ್ಕಳು ಮಚ್ಚಿಕೊಳ್ಳಲು ಹೊಡಿಹೋಗಿರುತ್ತೇವೆ. ಹೋಡಿ ಹೋಗಿ 112 ಕ್ಕೆ ಕರೆಮಾಡಿ ಅವರಿಗೆ ವಿಷಯ ತಿಳಿಸಿದೆ ಅವರು ಸ್ಥಳಕ್ಕೆ ಬಂದು ಎಲ್ಲಿ ನಿನ್ನ ಗಂಡ ಎಂದು ಕೇಳಿ ತನ್ನ ಗಂಡ ಶೋಭಮ್ಮನ ಮನೆಯಲ್ಲಿ ಇರುತ್ತಾನೆ. ಎಂದು ಹೇಳಿ ಶೋಭಮ್ಮನಿಗೂ ನಮಗೂ ಯಾವುದೇ ಸಂಬಂದವಿಲ್ಲ ಇಲ್ಲದ್ದಿದ್ದರೂ ಕೂಡ ಊಟ  ಮಾಡುವುದು ಅಲ್ಲೇ ಮಲಗುವುದು ಅಲ್ಲೆ ಇರುತ್ತಾನೆ. ಪೋಲಿಸ್ ರವರನ್ನು ಕರೆದು ಕೊಂಡು ಹೋದಾಗ ಪೊಲೀಸ್ ಮುಂದೆಯೆ ಗಲಾಟೆ ಆಯಿತು. ತನ್ನ ಮೇಲೆ ಗಲಾಟೆ ಮಾಡಿದ್ದರೂ ಸಹ ಪೊಲೀಸ್ ನವರು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಗಲಾಟೆ ಯಾಗಿರುವುದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿರುತ್ತೇನೆ. ತನ್ನನ್ನು ಹೊಡೆಯಲು ಬಂದಿರುತ್ತಾರೆ ನಾಲ್ಕು ಜನ ಇವರ ಹೆಸರು ಶೋಭಮ್ಮ ಅವರ ತಾಯಿ ಅಶ್ವತ್ಥಮ್ಮ, ಆತನ ತಮ್ಮ ಸುದಾಕರ್ ತಮ್ಮ ಮುರಳಿ ತನ್ನನ್ನು ಸಾಯಿಸಲು ಪ್ರಯತ್ನ ಪಟ್ಟಿರುತ್ತಾರೆ. ಶೋಭಮ್ಮ ರವರನ್ನು ಇಟ್ಟುಕೊಳ್ಳಲು ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತೆ. ಎಂದು ತನ್ನನ್ನು ಸಾಯಿಸಲು ಪ್ರಯತ್ನ ಪಟ್ಟಿರುತ್ತಾರೆ. ಇದನ್ನು ಪರಿಶೀಲಿಸಿ ಇವರ ಮುಂದೆನೆ ತನ್ನನ್ನು ಕರೆಸಿ ತಪಿತಸ್ಥತ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಕೋರಿ ನೀಡಿದ ದೂರಿನ ಮೇರೆಗ ಠಾಣಾ ಮೊ.ಸಂ:155/2021 ಕಲಂ 307, 504 ರೆ/ವಿ 149 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 11-05-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080