Feedback / Suggestions

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 87 ಕೆ.ಪಿ ಆಕ್ಟ್ :-

          ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರಿ ಟಿ,ಎನ್ ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:10/04/2021 ರಂದು ಸಂಜೆ 16-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಚಿಂತಾಮಣಿ ತಾಲ್ಲೂಕು ಮಾವುಕೆರೆ ಗ್ರಾಮದ ಬಳಿ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ ಮೇರೆಗೆ ನಾನು ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-36 ವಿಜಯ್ ಕುಮಾರ್,ಹೆಚ್.ಸಿ-139 ಶ್ರೀನಾಥ,. ಸಿಪಿಸಿ - 262 ಅಂಬರೀಶ್,  ಸಿಪಿಸಿ-387 ಅನಿಲ್ ಕುಮಾರ್ ಸಿಪಿಸಿ 291 ಗಂಗಾಧರ ಹಾಗೂ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ರವರೊಂದಿಗೆ ಮಾವುಕೆರೆ ಗ್ರಾಮಕ್ಕೆ ಸಂಜೆ 16-15 ಗಂಟೆಗೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರೊಂದಿಗೆ ಮಾವುಕೆರೆ ಗ್ರಾಮದ ವಾಸಿ ಸೀತರಾಮಪ್ಪ ನವರ ಖಾಲಿ ಜಮೀನಿನ ಬಳಿಗೆ ಹೋಗಿ ಜೀಪ್ ನ್ನು  ನಿಲ್ಲಿಸಿ ನೋಡಲಾಗಿ ಯಾರೋ ಆಸಾಮಿಗಳು ಹುಣಸೇಮರದ ಕೆಳಗೆ ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳ ಪೈಕಿ 2 ಜನ  ಆಸಾಮಿಗಳು ಓಡಿ ಹೋಗಿದ್ದು ಹಿಂಬಾಲಿಸಲಾಗಿ ಸಿಕ್ಕಿರುವುದಿಲ್ಲ. ಉಳಿದ 3 ಜನರನ್ನು  ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ರಾಘವೇಂದ್ರ ಬಿನ್ ರೆಡ್ಡಪ್ಪ 30 ವರ್ಷ ನಾಯಕರು ಕೂಲಿಕೆಲಸ ವಾಸ ಮಾವುಕೆರೆ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9980640436  2). ಸುಬ್ರಮಣಿ ಬಿನ್ ಗಂಗಾಧರ 22 ವರ್ಷ ಭೋವಿ ಜನಾಂಗ,ಟ್ರ್ಯಾಕ್ಟರ್ ಚಾಲಕ,ವಾಸ ಮಾವುಕೆರೆ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-7338381451. 3.) ಶ್ರೀನಿವಾಸ್ ಬಿನ್ ನಾರಾಯಣಪ್ಪ 31 ವರ್ಷ,ನಾಯಕರು,ಕೂಲಿಕೆಲಸ ವಾಸ ಮಾವುಕೆರೆ ಗ್ರಾಮ,ಚಿಂತಾಮಣಿ ತಾಲ್ಲೂಕು ಮೊ.ನಂ-9449448173 ,ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 4) ನಾಗ@ನಾಗರಾಜ ಬಿನ್ ಮುನಿಯಪ್ಪ 22 ವರ್ಷ ಆದಿಕರ್ನಾಟಕ ಜನಾಂಗ ವ್ಯವಸಾಯ ವಾಸ ಮಾವುಕೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು  5) ದರ್ಶನ್ ಬಿನ್ ರಘುನಾಥರೆಡ್ಡಿ 20 ವರ್ಷ ವಕ್ಕಲಿಗರು,ಜಿರಾಯ್ತಿ,ವಾಸ ಸೋಮಕಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಪೇಪರ್  ನೆಲದಲ್ಲಿ ಹಾಸಿದ್ದು, ಸದರಿ ಪ್ಲಾಸ್ಟಿಕ್ ಪೇಪರ್ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇರುತ್ತೆ.  ಪಂಚರ ಸಮಕ್ಷಮ ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3100/- ರೂಗಳಿರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 3 ಜನ ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 3100/-  ರೂಗಳ ನಗದು ಹಣವನ್ನು, ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಸಂಜೆ 16-30 ಗಂಟೆಯಿಂದ 17-30 ಗಂಟೆಯವರೆಗೆ ಪಂಚರ ಸಮಕ್ಷಮ ಟಾರ್ಚ್ ಗಳ ಬೆಳಕಿನಲ್ಲಿ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡ ಮಾಲುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಸಂಜೆ 17-45 ಗಂಟೆಗೆ ಸ್ವತಃ ಠಾಣೆಯ ಎನ್ ಸಿ ಆರ್ ನಂ: 48/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಹೆಚ್ ಸಿ 107 ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು ರಾತ್ರಿ 20-15 ಗಂಟೆಗೆ ಠಾಣೆಗೆ ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ ಸಂಖ್ಯೆ: 52/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

          ದಿನಾಂಕ;10.04.2021 ರಂದು ಮದ್ಯಾಹ್ನ 12-00 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪೆತ್ರೆಯಿಂದ ಬಂದ ಮೆಮೊ ಮೇರೆಗೆ ಸರ್ಕಾರಿ ಅಸ್ಪೆತ್ರೆಗೆ ಭೇಟಿ ನೀಡಿ ಗಾಯಾಳು ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 12-45 ಗಂಟೆಗೆ ಗಾಯಾಳು ನೀಡಿದ ಹೇಳಿಕೆ ಸಾರಾಂಶವೆನೆಂದರೆ ದಿನಾಂಕ:10.04.2021 ರಂದು ತಾನು ಮತ್ತು ತನ್ನ ಮಗ ಬೆಂಗಳೂರಿನಿಂದ ತನ್ನ ಸ್ವಂತ ಗ್ರಾಮವಾದ ಮೂಗಿರೆಡ್ಡಿಪಲ್ಲಿ ಗ್ರಾಮಕ್ಕೆ ತನ್ನ ಬಾಬತ್ತು ಕೆ,ಎ 51 ಇಡಿ,8856 ಸುಜುಕಿ ಆಸೆಸ್ ದ್ವಿ ಚಕ್ರ ವಾಹನದಲ್ಲಿ ತನ್ನ ಮಗ ಚೇತನ್ ರವರು ಚಾಲನೆ ಮಾಡುತ್ತಿದ್ದು ತಾನು ಹಿಂಬದಿಯಲ್ಲಿ ಕುಳಿತು NH 44 ರಸ್ತೆಯ ಮೂಲಕ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ರಾಮದೇವರ ಗುಡಿ ಬಳಿ ತನ್ನ ಹಿಂದುಗಡೆಯಿಂದ ಬಂದ ಕಿತ್ತಲೆ ಬಣ್ಣದ ಪೋರ್ಡ್ ಕಂಪನಿಯ ಕಾರು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾರೆ, ಇದರ ಡಿಕ್ಕಿ ಹೊಡೆದ ಪರಿಣಾಮ ತನ್ನ ಬಲಗಾಲಿಗೆ,ಮೈ ಮೇಲೆ ರಕ್ತ ಗಾಯಾಗಳಾಗಿ ,ದ್ವಿ ಚಕ್ರವಾಹನ ಜಖಂಗೊಂಡಿದ್ದು ಹಾಗೂ ತನ್ನ ಮಗನಿಗೆ ಬಲಕೈ ಗಾಯಾಗಳಾಗಿರುತ್ತದೆ, ಸ್ಥಳದಲ್ಲಿದ್ದ ಸಾರ್ವಜನಿಕರು ಉಪಚರಿಸಿ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಅಸ್ಪೆತ್ರೆಗೆ ದಾಖಲಿಸಿರುತ್ತಾರೆ, ಈ ಅಪಘಾತಕ್ಕೆ ಕಾರಣನಾದ ನೊಂದಣೆ ಸಂಖ್ಯೆ ಇಲ್ಲದ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನೀಡಿದ ಹೇಳಿಕೆ ಮೇರೆಗೆ ಈ ಪ್ರ,ವ,ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.147/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 10/04/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಅಮರೇಶ.ಪಿ.ಎನ್. ಸಿ.ಹೆಚ್.ಸಿ-09 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 10/04/2021 ರಂದು ಪಿ.ಎಸ್.ಐ  ಸಾಹೇಬರ ಆಧೇಶದಂತೆ ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ತಾನು ಮತ್ತು ಸಿ.ಪಿ.ಸಿ-185 ಶ್ರೀನಿವಾಮೂರ್ತಿ ಹೋಗಿದ್ದು, ಠಾಣಾ ವ್ಯಾಪ್ತಿಯ ನಾರಾಯಣಹಳ್ಳಿ, ಕಾವಲುಗಾನಹಳ್ಳಿ, ದೊಡ್ಡಕೊಂಡ್ರಹಳ್ಳಿ, ಚಿಕ್ಕಕೊಂಡ್ರಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 3.15 ಗಂಟೆಗೆ ಮೈಲಾಪುರ ಗ್ರಾಮದ ಬಳಿಗೆ ಹೋದಾಗ ಮೈಲಾಪುರ ಗ್ರಾಮದ ವಾಸಿಯಾದ  ಈರೇಗೌಡ ಬಿನ್ ರಾಮಚಂದ್ರಪ್ಪ ಎಂಬುವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿ ದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಈರೇಗೌಡ ಬಿನ್ ರಾಮಚಂದ್ರಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಮೈಲಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1).ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 14 ಟೆಟ್ರಾ ಪ್ಯಾಕೆಟ್ ಗಳು 2).ಎರಡು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಎರಡು ನೀರಿನ ಪ್ಲಾಸ್ಟಿಕ್ ಬಾಟಲ್ 3).02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು ಸದರಿಯವುಗಳನ್ನು ಇದೇ ದಿನ ಸಂಜೆ 3.30 ಗಂಟೆಯಿಂದ 4.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿ ಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಈರೇಗೌಡ ಬಿನ್ ರಾಮಚಂದ್ರಪ್ಪರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4.  ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.148/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 10/04/2021 ರಂದು ಸಂಜೆ 7.30 ಗಂಟೆಗೆ ಠಾಣೆಯ ಅಮರೇಶ.ಪಿ.ಎನ್. ಸಿ.ಹೆಚ್.ಸಿ-09 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:10/04/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಮತ್ತು ಸಿ.ಪಿ.ಸಿ-197 ಅಂಭರೀಶ ರವರು ಠಾಣಾ ಸರಹದ್ದಿನ ಚಿನ್ನಸಂದ್ರ, ಪೆರಮಾಚನಹಳ್ಳಿ, ಕೆಂದನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆಯ ಸಮಯದಲ್ಲಿ ನಾಗದೇನಹಳ್ಳಿ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನಾಗರಾಜ್ ಬಿನ್ ರಾಮಕೃಷ್ಣಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ನಾಗದೇನಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 14 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ,  ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗರಾಜ್ ಬಿನ್ ಲೇಟ್ ರಾಮಕೃಷ್ಣಪ್ಪ, 40 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ನಾಗದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6.00 ರಿಂದ 7.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾಗರಾಜ್ ಬಿನ್ ರಾಮಕೃಷ್ಣಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 379 ಐ.ಪಿ.ಸಿ:-

          ದಿನಾಂಕ 10/04/2021 ರಂದು ರಾತ್ರಿ -9-00 ಗಂಟೆ ಸಮಯದಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್.   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಈ ದಿನಾಂಕ 10-04-2021 ರಂದು ರಾತ್ರಿ 7-00 ಗಂಟೆ  ಸಮಯದಲ್ಲಿ  ಗೌರೀಬಿದನೂರು ತಾಲ್ಲೂಕು, ಚನ್ನೇನಹಳ್ಳಿ  ಗ್ರಾಮದ ಬಳಿ ಇರುವ ಕೆರೆಯ  ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ  ಮರಳು ಕಳ್ಳತನವಾಗಿ ತುಂಬುತ್ತಿರುವ  ಬಗ್ಗೆ ಮಾಹಿತಿ ಬಂದ  ಮೇರೆಗೆ ನಾನು ಮತ್ತು ಸಿಬ್ಬಂಧಿಯಾದ ಹೆಚ್.ಸಿ-170 ಜೂಲಪ್ಪ, ಪಿ.ಸಿ-381 ಜಗದೀಶ   ಹಾಗು  ಪಿ.ಸಿ-302 ಕುಮಾರ್ ನಾಯಕ್   ಹಾಗೂ ಚನ್ನೇನಹಳ್ಳಿ ಗ್ರಾಮದಲ್ಲಿ ರಸ್ತೆಯಲ್ಲಿ  ಇದ್ದ ಪಂಚರನ್ನು ಕರೆದುಕೊಂಡು  ರಾತ್ರಿ 7-15  ಚನ್ನೇನಹಳ್ಳಿ ಗ್ರಾಮದ ಬಳಿ ಇರುವ ಕೆರೆಯ  ಅಂಗಳಕ್ಕೆ  ಹೋದಾಗ, ಯಾರೋ  ಟ್ರಾಕ್ಟರ್ ನಲ್ಲಿ  ಮರಳನ್ನು ತುಂಬಿಸುತ್ತಿದ್ದು, ನಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಟ್ರಾಕ್ಟರ್ ಅನ್ನು   ಸ್ಥಳದಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು ನಾನು ಮತ್ತು ಸಿಬ್ಬಂದಿಯು ಬೆನ್ನಟ್ಟಿದರೂ ಸಿಗದೇ  ಓಡಿ ಹೋಗಿರುತ್ತಾನೆ. ನಂತರ ಟ್ರಾಕ್ಟರ್ ಚಾಲಕನ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ  ಹರೀಶ ಬಿನ್ ನಂಜುಂಡಪ್ಪ, 35 ವರ್ಷ, ಕುರುಬರು, ಚಾಲಕ ವೃತ್ತಿ, ವಾಸ ಚನ್ನೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿದು ಬಂದಿರುತ್ತೆ.  ನಂತರ ಟ್ರಾಕ್ಟರ್ ಬಳಿ ಹೋಗಿ ಪರಿಶೀಲಿಸಿ ನೋಡಲಾಗಿ ಅದು ಮಹೀಂದ್ರ  ಕಂಪನಿಯ ಟ್ರ್ಯಾಕ್ಟರ್ ಆಗಿರುತ್ತೆ.   ಟ್ರಾಕ್ಟರ್ ನ ಇಂಜಿನ್ ನ ಮುಂಬಾಗದಲ್ಲಿ  ಕೆ.ಎ-40-ಟಿ.ಎ-5139 ನೊಂದಣಿ ಸಂಖ್ಯೆ  ಇರುತ್ತೆ.  ಟ್ರ್ಯಾಲಿಯಲ್ಲಿ ಬಾಡಿ ಲೆವೆಲ್ಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ  ಮರಳು ತುಂಬಿರುತ್ತೆ. ಟ್ರ್ಯಾಲಿಗೆ ಕೆ.ಎ-40-ಟಿ.ಎ-5140 ನೊಂದಣಿಇರುತ್ತೆ.  ಮರಳು ತೆಗೆದು ಸಾಗಾಣಿಕೆಯನ್ನು  ಮಾಡಲು  ಸರ್ಕಾರ ನಿಷೇದಿಸಿದ್ದರೂ ಸಹಾ  ಮೇಲ್ಕಂಡ ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ  ಅಕ್ರಮವಾಗಿ ಮರಳು ಕಳವು  ಮಾಡಿರುತ್ತಾರೆ. ಮರಳು ತುಂಬಿದ  ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯನ್ನು ರಾತ್ರಿ 7-30  ಗಂಟೆಯಿಂದ ರಾತ್ರಿ 8-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಕೃತಕ ವಿದ್ಯೂತ್ ಬೆಳಕಿನಲ್ಲಿ ಪಂಚನಾಮೆ ಜರುಗಿಸಿ  ವಶಕ್ಕೆ ತೆಗೆದುಕೊಂಡು ಠಾಣೆಗೆ ರಾತ್ರಿ 9-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್  ಚಾಲಕ ಮತ್ತು ಮಾಲೀಕನ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ     ಸೂಚಿಸಿದ ಮೇರೆಗೆ  ಕೇಸು ದಾಖಲಿಸಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 279 ಐ.ಪಿ.ಸಿ:-

          ದಿನಾಂಕ: 10/04/2021 ರಂದು ಪಿರ್ಯಾದಿದಾರರಾದ ಶ್ರೀಕಾಂತ್ ಬಿನ್ ಕೆ.ಪಿ. ರಂಗನಾಥ, 33 ವರ್ಷ,ಸಾದರು ಜನಾಂಗ, ಡ್ರೈವರ್ ಕೆಲಸ, ವಾಸ: ಕರೂಡಿ ಗ್ರಾಮ,  ಗೌರಿಬಿದನೂರು ತಾಲ್ಲೂಕು ರವು ಠಾಣೆಗ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೆನೆ. ತಾನು ಕೆಲಸ ನಿಮಿತ್ತ ದಿನಾಂಕ: 09/04/2021  ರಂದು ಬೆಂಗಳೂರಿಗೆ ಹೋಗಿದ್ದು ಕೆಲಸವನ್ನು ಮುಗಿಸಿಕೊಂಡು ತನ್ನ ಸಂಬಂದಿಕರ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದು ದಿನಾಂಕ;10/04/2021 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ನನ್ನ ಸ್ನೇಹಿತಾರದ ಮೋಹಿತ್.ಎಂ ಬಿನ್ ಮುಕುಂದ, ಮಡಿವಾಳರು, 25 ವರ್ಷ, ವ್ಯಾಪಾರ, ವಾಸ: #35, ಬಿ.ಡಿ.ಇ 5 ನೇ ಜಿ ಬ್ಲಾಕ್,ಡಿಎಕ್ಸ್ ಮ್ಯಾಕ್ಸ್ ಅರ್ಪಮೇಂಟ್, ಅಂಜಿನಾಪುರ ಬೆಂಗಳೂರು-560062 ರವರೊಂದಿಗೆ ಅವರ ಬಾಬತ್ತು ಕೆ.ಎ-03 ಎಂ,ಹೆಚ್-9803 ನೊಂದಣಿ ಸಂಖ್ಯೆ ಕಾರಿನಲ್ಲಿ ಆತನ ತಾಯಿ ಸಾವಿತ್ರವಮ್ಮ ರವರೊಂದಿಗೆ ತಾನು ಕಾರಿನಲ್ಲಿ ತಮ್ಮ ಗ್ರಾಮಕ್ಕೆ ಬರಲು ಹೊರಟಿದ್ದು, ಮೊಹಿತ್ ರವರು ಕಾರನ್ನು ಚಾಲನೆ ಮಾಡಿಕೊಂಡು ಗೌರಿಬಿನದೂರಿಗೆ ಬಂದು ಬೈಪಾಸ್ ನಲ್ಲಿ ರೈಮೇಂಡ್ಸ ಪ್ಯಾಕ್ಟರಿ ಬಳಿಯಿಂದ ಗುಂಡಾಪುರ ಗ್ರಾಮದ ಹತ್ತಿರ ಬೆಳಿಗ್ಗೆ 8-00 ಗಂಟೆಯಲ್ಲಿ ತನ್ನ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿತ್ತೀದ್ದಾಗ ಹಸು ಅಡ್ಡ ಬಂದಿದ್ದರಿಂದ ಕಾರನ್ನು ಬಲಭಾಗಕ್ಕೆ ತಿರುಗಸಿದಾಗ ರಸ್ತೆ ಬಲಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನಲ್ಲಿದ್ದ ತನಗೆ ಮತ್ತು ಮೊಹಿತ್ ರವರ ತಾಯಿಗೆ ಮೂಗೇಟುಗಳು ಉಂಟಾಗಿರುತ್ತೆ. ತಮಗೆ ಯಾವುದೇ ರಕ್ತ ಗಾಯಗಳು ಆಗಿರುವುದಿಲ್ಲ,  ಕಾರನ್ನು ಪರಿಶೀಲನೆ ಮಾಡಲಾಗಿ ಕಾರಿನ ಮುಂಭಾಗ ಜಕಂಗೊಂಡಿರುತ್ತೆ ಮತ್ತು ಹಿಂಭಾಗದಲ್ಲಿ ಜಕಂ ಗೊಂಡಿರುತ್ತೆ. ಕಾರಿನಲ್ಲಿದ್ದ ತಮಗೆ ಮೂಗೇಟು ಉಂಟಾಗಿದ್ದರಿಂದ ತಾವುಗಳು ಯಾವುದೇ ಅಸ್ಪತ್ರೆಯಲ್ಲಿ ತೋರಿಸಿಕೊಂಡಿರುವುದಿಲ್ಲ, ಅದ್ದರಿಂದ ಕೆ.ಎ-03 ಎಂ,ಹೆಚ್-9803 ನೊಂದಣಿ ಸಂಖ್ಯೆ ಕಾರನ್ನು ಅತೀವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿ ರಸ್ತೆ ಅಪಘಾತ ಮಾಡಿ ಮೊಹಿತ್ ಬಿನ್ ಮುಕುಂದ  ಮತ್ತು ಕಾರಿನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 143,147,148,323,324,504,506,149 ಐ.ಪಿ.ಸಿ:-

          ದಿನಾಂಕ:10/04/2021 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ಗಾಯಾಳು ಗಿರೀಶ್ ಬಿನ್ ಮುದ್ದಪ್ಪ 28 ವರ್ಷ, ಭೋವಿ ಜನಾಂಗ, ಟೈಲರ್ ಕೆಲಸ ವಾಸ: ಹಿರೇನಾಗವಲ್ಲಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ:10/04/2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ನಾನು ಟೈಲರ್ ಕೆಲಸ ಮುಗಿಸಿಕೊಂಡು ಬೋಯಿನಹಳ್ಳಿ ಗ್ರಾಮದ ನಮ್ಮ ಚಿಕ್ಕಪ್ಪನಾದ ಹನುಮಪ್ಪ ರವರ ಮನೆಗೆ ಹೋಗಿರುತ್ತೇನೆ. ನಂತರ ಸುಮಾರು 8-30 ಗಂಟೆ ಸಮಯದಲ್ಲಿ ನನ್ನ ತಮ್ಮನ ಹೆಂಡತಿಯಾದ ಮಂಜುಳಾ ರವರು ಮನೆಯ ಹತ್ತಿರ ಕುಳಿತುಕೊಂಡಿದ್ದು ಆಗ ಅವರ ಸಂಬಂಧಿಕರಾದ  ಗಂಗರಾಜು, ಕುರ್ಲಪ್ಪ ಬಿನ್ ಜಂಗಮಪ್ಪ, ವೆಂಕಟಮ್ಮ ಕೊಂ ಕುರ್ಲಪ್ಪ ಮಂಜುಳಾ ಅವರ ಅಕ್ಕ ಸುನಿತಾ ರವರು ಬಂದು ನೀವು ಯಾಕೆ. ಗಂಡನ ಮನೆಯ ಮುಂದೆ ಕುಳಿತಿಕೊಂಡಿದ್ದೀಯಾ ಒಳಗೆ ಹೋಗು ನಾವು ಇದ್ದೀವಿ ಅಂತ ಅವರನ್ನು ಗಂಡನ ಮನೆಯ ಒಳಗಡೆಗೆ ಕರೆದುಕೊಂಡು ಹೋಗಿದ್ರು ಆ ಸಮಯದಲ್ಲಿ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ರವರುಗಳು ನಮ್ಮ ಮನೆಯ ಒಳಗಡೆ ಬರಬೇಡ ನಿನ್ನ ಗಂಡನ ಹತ್ತಿರ ಹೋಗು ಎಂದು ತಿಳಿಸುವಷ್ಟರಲ್ಲಿ ಅಲ್ಲಿಯೇ ಇದ್ದ ಗಂಗರಾಜು ತನ್ನ ಕೈಯಲ್ಲಿದ್ದ ಕೋಲಿನಿಂದ ನನ್ನ ತಲೆಗೆ ಹೊಡೆದು ಗಾಯಪಡಿಸಿರುತ್ತಾರೆ. ಕುರ್ಲಪ್ಪ ರವರು ನಮ್ಮ ಚಿಕ್ಕಪ್ಪನಾದ ಹನುಮಪ್ಪ ರವರಿಗೆ ಎಡಕೈಗೆ ಕೋಲಿನಿಂದ ಹೊಡೆದು ಮೂಗೇಟು ಉಂಟು ಮಾಡಿದ್ದು ಮತ್ತು ವೆಂಕಟಮ್ಮ ಸುನೀತಮ್ಮ ಇವರ ಗಂಡ ಶಿವಪ್ಪ ರವರು ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ತಮ್ಮ ಮೇಲೆ ಗಲಾಟೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:10/04/2021 ರಂದು ಠಾಣಾ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ ದಿನಾಂಕ:09/04/2021 ರಂದು ಶ್ರೀ ಶಶಿಧರ.ಎಸ್.ಡಿ ಪೊಲೀಸ್ ವೃತ್ತ ನಿರೀಕ್ಷಕರು ಗೌರಿಬಿದನೂರು ವೃತ್ತ ರವರು ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:09/04/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ವೃತ್ತ ಕಛೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಅಲಕಾಪುರ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಬಂದು ಅಲ್ಲಿಂದ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿಯವರಾದ ಹೆಚ್.ಸಿ.187 ಶ್ರೀನಿವಾಸ, ಪಿಸಿ-537 ಆನಂದ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್, ಪಿ.ಸಿ.283 ಅರವಿಂದ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.100 ಮಹೇಶ, ಮತ್ತು ಪಿ.ಸಿ.483 ರಮೇಶ್ ಬಾಬು ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ಮತ್ತು ಕೆ.ಎ-40, ಜಿ-1222 ಗಳಲ್ಲಿ ಮದ್ಯಾಹ್ನ 4-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಮಹೇಶ್ ಬಿನ್ ಲೇಟ್ ನಾರಾಯಣಪ್ಪ, 36 ವರ್ಷ, ಸಾದರು ಜನಾಂಗ, ಜಿರಾಯ್ತಿ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ನವೀನ್ ಕುಮಾರ್ ಬಿನ್ ಗಂಗಾಧರಪ್ಪ, 27 ವರ್ಷ, ಕಾರ್ಖನೆಯಲ್ಲಿ ಕೆಲಸ, ಸಾದರು ಜನಾಂಗ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಪ್ರಕಾಶ್ ಬಿನ್ ಲೇಟ್ ನರಸೇಗೌಡ, 45 ವರ್ಷ, ಜಿರಾಯ್ತಿ, ಸಾದರು ಜನಾಂಗ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ಮನೋಜ್ ಬಿನ್ ಬಸವರಾಜು, 32 ವರ್ಷ, ಕಾರ್ಖನೆಯಲ್ಲಿ  ಕೆಲಸ, ಸಾದರು ಜನಾಂಗ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಶ್ರಿನಿವಾಸ ಬಿನ್ ಪುಟ್ಟನರಸಪ್ಪ, 33ವರ್ಷ, ಖಾಸಗಿ ಕಂಪನಿಯಲ್ಲಿ ಕೆಲಸ, ಸಾದರು ಜನಾಂಗ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 6) ಪ್ರತಾಪ್ ಬಿನ್ ಬಸವರಾಜು, 27 ವರ್ಷ, ಕೂಲಿ ಕೆಲಸ, ಸಾದರು ಜನಾಂಗ,  ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 7) ಶಿವರಾಜ ಬಿನ್ ನಾರಾಯಣಪ್ಪ, 30 ವರ್ಷ, ಚಾಲಕವೃತ್ತಿ, ನಾಯಕ ಜನಾಂಗ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 5800/- (ಐದು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ಮತ್ತು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ತಮ್ಮ ವಶಕ್ಕೆ ನೀಡುತ್ತಿದ್ದು, ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 104/2021 ರಂತೆ ದಾಖಲಿಸಿಕೊಂಡು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಸಿರುತ್ತದೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 10-04-2021 ರಂದು ಸಂಜೆ 5.15 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 10-04-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಬೋದಗೂರು, ಮಳಮಾಚನಹಳ್ಳಿ, ತಾದೂರು, ತೊಟ್ಲಗಾನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.30 ಗಂಟೆ ಸಮಯದಲ್ಲಿ ನಡಿಪಿನಾಯಕನಹಳ್ಳಿ ಗ್ರಾಮದ ಕಡೆ ಹೋಗಲು ನಡಿಪಿನಾಯಕನಹಳ್ಳಿ ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ನಡಿಪಿನಾಯಕನಹಳ್ಳಿ ಗ್ರಾಮದ ವೆಂಕಟೇಶ ಎನ್.ಎಂ. ಬಿನ್ ಮುತ್ತಪ್ಪ ರವರ ಚಿಲ್ಲರೆ ಅಂಗಡಿ ಮುಂಭಾಗದ ಸರ್ಕಾರಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ನಡಿಪಿನಾಯಕನಹಳ್ಳಿ ಗ್ರಾಮದ ವೆಂಕಟೇಶ ಎನ್.ಎಂ. ಬಿನ್ ಮುತ್ತಪ್ಪ ರವರ ಚಿಲ್ಲರೆ ಅಂಗಡಿ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ವೆಂಕಟೇಶ ಎನ್.ಎಂ. ಬಿನ್ ಮುತ್ತಪ್ಪ, 45 ವರ್ಷ, ಪ.ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ನಡಿಪಿನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 10 HAYWARDS DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದ ಚೀಲವನ್ನು ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ವೆಂಕಟೇಶ ಎನ್.ಎಂ. ಬಿನ್ ಮುತ್ತಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 99/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 11-04-2021 05:38 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080