ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 29/2021 ಕಲಂ. 15(A),32(3) KARNATAKA EXCISE ACT, 1965 :-

  ದಿನಾಂಕ:11/03/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಪಾಪಣ್ಣ  ಆದ ನಾನು  ಸಿಬ್ಬಂದಿ ಹೆಚ್.ಸಿ – 36 ವಿಜಯಕುಮಾರ್  ರವರೊಂದಿಗೆ  ಬೆಳಿಗ್ಗೆ 11-00 ಗಂಟೆಯಲ್ಲಿ ಚನ್ನರಾಯನಗಡ್ಡ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಚನ್ನರಾಯನಗಡ್ಡ ಗ್ರಾಮದ ವಾಸಿ ಗೋಪಾಲ ಸಿ ವಿ ಬಿನ್ ಚಿಕ್ಕವೆಂಕಟಸ್ವಾಮಿ ರವರು ಆತನ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಚನ್ನರಾಯನಗಡ್ಡ  ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 11- 15 ಗಂಟೆಗೆ ಮನೆಯ  ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಗೋಪಾಲ ಸಿ ವಿ ಬಿನ್ ಚಿಕ್ಕವೆಂಕಟಸ್ವಾಮಿ, 40 ವರ್ಷ, ಗೊಲ್ಲರು, ಖಾಸಗಿ ಬಸ್ ಚಾಲಕ, ವಾಸ: ಚನ್ನರಾಯನಗಡ್ಡ ಗ್ರಾಮ, ಚಿಂತಾಮಣಿ ತಾಲ್ಲುಕು ಮೊ ನಂ: 9482453168 ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 11-30  ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1.080 ಎಂ.ಎಲ್ ನ 421.56. ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 12 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 12-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:29/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 34/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ 10/03/2021 ರಂದು ಸಂಜೆ 6-00 ಗಂಟೆಗೆ ಪಿರ್ಯಾದುದಾರರಾದ ವಿ ಮಂಜುನಾಥ ಬಿನ್ ಜಿ ವೆಂಕಟಾಚಲಪತಿ,38 ವರ್ಷ, ದನಿಯಾ ವ್ಯಾಪಾರ, ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ನನಗೆ ಈಗ್ಗೆ ಸುಮಾರು 06 ವರ್ಷಗಳಿಂದ ಟಮೋಟ ವ್ಯಾಪಾರಸ್ಥರಾದ ಗೊಳ್ಳಪಲ್ಲಿ ದೇವರಾಜ್  ಎಂಬುವರು ಪರಿಚಯಸ್ಥರಾಗಿದ್ದು ಅವರಿಗೆ ಹಣದ ಅವಶ್ಯಕತೆ ಇದ್ದುದ್ದರಿಂದ ನನ್ನ ಬಳಿ ಒಂದು ವರ್ಷಗಳ ಹಿಂದೆ 2 ಲಕ್ಷ ರೂ ಹಣವನ್ನು 02 ತಿಂಗಳ ಒಳಗಾಗಿ ಮರು ಪಾವತಿ ಮಾಡುವುದಾಗಿ ಹೇಳಿ  ಪಡೆದುಕೊಂಡಿದ್ದು  ನಂತರ ಒಂದು ವರ್ಷವಾದರೂ ಕೊಡದೇ ಇದ್ದಾಗ  ದಿನಾಂಕ 08-03-2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ನಾನು ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿರುವ ದೇವರಾಜ್ ರವರ ಮನೆಯ ಬಳಿ  ಹೋಗಿ ನನಗೆ ಕೊಡಬೇಕಾದ ಹಣವನ್ನು ಕೇಳಿದಾಗ  ದೇವರಾಜ್ ರವರು ನನ್ನನ್ನು ಕುರಿತು ನಿನಗೆ ಯಾವುದೇ ಹಣ ಕೊಡುವಂತಿಲ್ಲವೆಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು  ಕಬ್ಬಿಣದ ರಾಡ್ ನಿಂದ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ಮತ್ತೆ ಯಾರೊ ಅಪರಿಚಿತರನ್ನು ಕರೆಯಿಸಿ ಅವರಿಂದಲೂ ಸಹ ಕೈಗಳಿಂದ ಹಾಗೂ ಕಾಲುಗಳಿಂದ ಹೊಡೆಸಿ ಇನ್ನೇನಾದರೂ ನೀನು ನನ್ನ ಬಳಿ ಸಾಲ ಕೇಳಲು ಬಂದರೆ ನಿನ್ನನ್ನು ಸುಪಾರಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುತ್ತಾನೆ.  ಇದುವರೆಗೂ ರಾಜಿ ಪಂಚಾಯ್ತಿ ಮಾಡಿದರೂ ಸರಿಹೋಗದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು  ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡ ದೇವರಾಜ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 58/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:10/03/2021 ರಂದು ಮದ್ಯಾಹ್ನ 14-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸರೋಜಮ್ಮ ಕೋಂ ನಾಗರಾಜು 48 ವರ್ಷ, ಕುರುಬರು, ಗೃಹಿಣಿ, ಮಿಟ್ಟೇನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಮಗಳ ಊರಾದ ಬೆಂಗಳೂರಿಗೆ ಹೋಗಿದ್ದು, ದಿನಾಂಕ 08/03/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ಗ್ರಾಮಕ್ಕೆ ವಾಪಸ್ಸು ಬಂದು ಮನೆಯಲ್ಲಿದ್ದಾಗ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ಇರುವ  ಮೆಕಾನಿಕ್ ಅನಿಲ್ ರವರು ಪಿರ್ಯಾದಿದಾರರ ಮನೆಯ ಬಳಿ ಬಂದು ನಿಮ್ಮ ಮಗ ರೂಪೇಶ ರವರಿಗೆ ಅಪಘಾತ ಆಗಿರುವುದಾಗಿ ಹೇಳಿ ಪಿರ್ಯಾದಿದಾರರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಮಗನಿಗೆ ಗಾಯಗಳಾಗಿ ಮಲಗಿದ್ದು, ವಿಚಾರಿಸಲಾಗಿ  ತನ್ನ ಮಗ ಎಂದಿನಂತೆ  ಕೂಲಿ ಕೆಲಸಕ್ಕೆ ಹೋಗಲು ತನ್ನ ಬಾಬತ್ತು ಕೆ.ಎ-43-ಜೆ-8474 ದ್ವಿಚಕ್ರ ವಾಹನದಲ್ಲಿ ದಿನಾಂಕ:08/03/2021 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಗೌರಿಬಿದನೂರು ನಿಂದ ಹಿಂದೂಪುರಕ್ಕೆ ಹೋಗುವ ಎಸ್.ಹೆಚ್.-09 ರಸ್ತೆಯ ಚೌಳೂರು ಗೇಟಿನ ಬಳಿ ಗೌರಿಬಿದನೂರು ಕಡೆಯಿಂದ ಹೋಗುತ್ತಿದ್ದಾಗ ಎದರುಗಡೆಯಿಂದ ಬಂದ  ಕೆ.ಎ-51-ಎಂ.ಕೆ-3606 ಜೆ.ಸಿ.ಬಿ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರ ಮಗನ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರಿಂದ  ದ್ವಿಚಕ್ರ ವಾಹನ ಜಖಂಗೊಂಡು ತನ್ನ ಮಗನಿಗೆ ಎಡಗಾಲಿನ ಹಿಮ್ಮಡಿ ಬಳಿ ರಕ್ತಗಾಯವಾಗಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದಲ್ಲಿ ಇರುವ ನವಚೇತನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಮಗನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆ.ಎ-51-ಎಂ.ಕೆ-3606 ಜೆ.ಸಿ.ಬಿ ವಾಹನದ ಚಾಲಕ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ದೂರು.

 

4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 49/2021 ಕಲಂ. 302 ಐ.ಪಿ.ಸಿ:-

  ದಿನಾಂಕ:10/03/2021 ರಂದು ಪಿರ್ಯಾದಿದಾರರಾದ ಶ್ರೀ ರಮೇಶ್ ಬಿನ್ ವೆಂಕಟೇಶಪ್ಪ, 26 ವರ್ಷ, ಬೋವಿ ಜನಾಂಗ, ವಾಸ ಬೆಳ್ಳಾವರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮಗೆ ವೆಂಕಟಾಪುರ ಗ್ರಾಮದ ಸರ್ವೆ ನಂಬರ್ 81 ರಲ್ಲಿ 2.1/2 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ನಾವುಗಳು ಬೋರ್ವೆಲ್ ಹಾಕಿಸಿಕೊಂಡು ವ್ಯವಸಾಯ ಮಾಡಿಕೊಂಡು ಇರುತ್ತೇವೆ. ನಮ್ಮ ತಂದೆಯವರು ಪ್ರತಿ ದಿನ ಸದರಿ ಜಮೀನಿನ ಬಳಿ ನೀರು ಹಾಯಿಸಲು ಮತ್ತು ಇತರೆ ಕೆಲಸಗಳಿಗೆ ಹೋಗಿ ಬರುತ್ತಿರುತ್ತಾರೆ. ನಮ್ಮ ಜಮೀನಿನಲ್ಲಿ ಕೆಲಸ ಮಾಡಲು ಸುತ್ತ ಮುತ್ತಲ ಗ್ರಾಮಗಳಾದ ವೆಂಕಟಾಪುರ, ಚಿಂಚಾನಹಳ್ಳಿ ಬಿ ಬೊಮ್ಮಸಂದ್ರ ಗ್ರಾಮಗಳಿಂದ ಕೂಲಿ ಆಳುಗಳು ಬರುತ್ತಿರುತ್ತಾರೆ. ಹೀಗಿರುವಾಗ ಸುಮಾರು 3 ತಿಂಗಳ ಹಿಂದೆ ಚಿಂಚಾನಹಳ್ಳಿ ಗ್ರಾಮದ ನರಸಿಂಹಪ್ಪ ಮತ್ತು ಅವರ ಹೆಂಡತಿಯಾದ ಚಂದ್ರಕಲಾ ರವರು ಸಹ ಕೆಲಸಕ್ಕೆ ಬಂದಿರುತ್ತಾರೆ. ಆ ದಿನ ಸದರಿ ಚಂದ್ರಕಲಾ ರವರು ಕೆಲಸ ಮಾಡುವಾಗ ಆಕಸ್ಮಿಕವಾಗಿ ಎಡವಿ ಬಿದ್ದಾಗ ನಮ್ಮ ತಂದೆ ಮಾನವೀಯತೆ ಧೃಷ್ಠಿಯಿಂದ ಅವರನ್ನು ಒಂದು ಕೈಹಿಡಿದು  ಮತ್ತೊಂದು ಕೈಯಿಂದ ಅವರ ಸೊಂಟವನ್ನು ಹಿಡಿದು ಎತ್ತಿದ್ದು, ಆಗ ನರಸಿಂಹಪ್ಪ ರವರು ನಮ್ಮ ತಂದೆಯವರ ಮೇಲೆ ತಪ್ಪು ಗ್ರಹಿಕೆಯಿಂದ ಬೈದನು ಆಗ ನಾವುಗಳು ಸಮಾಧಾನ ಮಾಡಿ ಕಳುಹಿಸಿಕೊಟ್ಟೆವು ಹೀಗಿರುವಾಗ ಅಂದಿನಿಂದ ಸದರಿ ನರಸಿಂಹಪ್ಪ ರವರು ನಮ್ಮ ತಂದೆಯ ಮೇಲೆ ದ್ವೇಷವನ್ನು ಇಟ್ಟುಕೊಂಡು ಸುಮಾರು 2 ತಿಂಗಳ ಹಿಂದೆ ನಮ್ಮ ತಂದೆ ತೋಟದಲ್ಲಿ ಒಬ್ಬರೆ ಕೆಲಸ ಮಾಡುವಾಗ ಕುಡುಗೋಲು ತೆಗೆದುಕೊಂಡು ಅಟ್ಟಿಸಿಕೊಂಡು ಬಂದಿರುತ್ತಾನೆ. ಈ ವಿಷಯವನ್ನು ನಮ್ಮ ತಂದೆ ನಂತರ ತಿಳಿಸಿದರು ನಂತರ ನಾವುಗಳು ನರಸಿಂಹಪ್ಪನಿಗೆ ತಿಳುವಳಿಕೆ ನೀಡಿ ಸಮಾಧಾನ ಮಾಡಿರುತ್ತೇವೆ. ನಂತರ ಸುಮಾರು 20 ದಿನಗಳ ಹಿಂದೆ ನಮ್ಮ ಹೊಲದ ಬಳಿ ಹೋಲ ಕಾಯಲು ಹಾಕಿಕೊಂಡಿದ್ದ 2 ಗುಡಿಸಲುಗಳಿಗೆ ಬೆಂಕಿಯನ್ನು ಸಹ ಹಚ್ಚಿರುತ್ತಾನೆ. ಆದರೂ ಸಹ ನಾವುಗಳು ಈಗ ಸರಿಯಾಗಬಹುದು ಆಗ ಸರಿಯಾಗಬಹುದೆಂದು ದೂರು ನೀಡದೆ ಸುಮ್ಮನಾದೆವು. ಹೀಗಿರುವಾಗ ಈ ದಿನ ದಿನಾಂಕ;10/03/2021 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ನಮ್ಮ ತಂದೆಯವರು ನಮ್ಮ ತೋಟಕ್ಕೆ ನೀರು ಹಾಯಿಸಲು ಹೊಲದ ಬಳಿ ಹೋಗಿದ್ದು, ನಾವು ನೀರು ಹಾಯಿಸಿ ಮನೆಗೆ ಬರಬಹುದೆಂದು ಸುಮ್ಮನಿದ್ದು, ರಾತ್ರಿ ಸುಮಾರು 7-30 ಗಂಟೆಯಾದರೂ ನಮ್ಮ ತಂದೆ ಮನೆಗೆ ಬರದೆ ಇದ್ದಾಗ ನಾನು ನಮ್ಮ ತಂದೆಯವರನ್ನು ಹುಡುಕಿಕೊಂಡು  7-45 ಗಂಟೆಗೆ ಹೊಲದ ಬಳಿ ಹೋದಾಗ ನಮ್ಮ ತಂದೆಯ ದ್ವಿಚಕ್ರ ವಾಹನ ಅಲ್ಲೆ ಇದ್ದು ಕೀ ಅದರಲ್ಲೆ ಇರುತ್ತದೆ. ಆಗ ನಾನು ನಮ್ಮ ತಂದೆಯವರು ಇಲ್ಲಿಯೇ ಎಲ್ಲೋ ಇದ್ದಾರೆಂದು ಹುಡುಕಿಕೊಂಡು ನಮ್ಮ ಹೊಲದಿಂದ ಸ್ವಲ್ಪ ಮುಂದೆ ಹೋದಾಗ ಅಲ್ಲಿ ರಕ್ತದ ಕಲೆಗಳು ಮತ್ತು ರಕ್ತವಾಗಿರುವ ಇಟ್ಟಿಗೆ ಬಿದ್ದಿದ್ದು, ಆಗ ನಾನು ಗಾಬರಿಯಿಂದ ಮುಂದೆ ನಮ್ಮ ತಂದೆಯನ್ನು ಹುಡುಕಿಕೊಂಡು ಹೋದಾಗ ನಮ್ಮ ತಂದೆಯವರು ಹೊಲದ ಬದುವಿನಿಂದ ಸ್ವಲ್ಪ ಮುಂದೆ ಬೇಲಿಯ ಪಕ್ಕದಲ್ಲಿ ಬಿದ್ದಿದ್ದು, ನಾನು ಹೋಗಿ ನೋಡಲಾಗಿ ನಮ್ಮ ತಂದೆಯವರ ಮೂಗಿನ ಮೇಲೆ ರಕ್ತಗಾಯವಾಗಿದ್ದು, ಹಣೆಯ ಮೇಲೆ, ತಲೆಯ ಹಿಂಭಾಗ, ಎಡ ಕಿವಿಯ ಬಳಿ, ನೆತ್ತಿಯ ಮೇಲೆ ಯಾವುದೋ ಹರಿತವಾದ ಆಯುಧದಿಂದ ಹಾಗೂ ಇಟ್ಟಿಗೆಯಿಂದ ಹೊಡೆದಿರುವ ಗಾಯಗಳಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ. ಈ ಹಿಂದಿನಿಂದಲೂ ಚಿಂಚಾನಹಳ್ಳಿ ಗ್ರಾಮದ ನರಸಿಂಹಪ್ಪರವರು ಅವರ ಹೆಂಡತಿಯ ವಿಚಾರಕ್ಕೆ ನಮ್ಮ ತಂದೆಯ ಮೇಲೆ ತಪ್ಪು ಗ್ರಹಿಕೆಯಿಂದ ದ್ವೇಷವನ್ನು ಮಾಡುತ್ತಲೇ ಬಂದಿದ್ದು, ಈ ಹಿಂದೆ ಹಲವಾರು ಬಾರಿ ನಮ್ಮ ತಂದೆಯನ್ನು ಹೊಡೆಯಲು ಹಾಗೂ ಸಾಯಿಸಲು ಪ್ರಯತ್ನಿಸಿ ಸಾಧ್ಯವಾಗದೆ ಈ ದಿನ ನಮ್ಮ ತಂದೆಯವರು ಹೊಲದ ಬಳಿ ನೀರು ಹಾಯಿಸಲು ಹೋದಾಗ ಯಾವುದೋ ಹರಿತವಾದ ಆಯುಧದಿಂದ ಹಾಗೂ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದು ನಮ್ಮ ತಂದೆಯವರನ್ನು ಕೊಲೆ ಮಾಡಿದ ನರಸಿಂಹಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 11-03-2021 05:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080