Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:10-02-2021 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಂಪಾಲ ನಾರಪ್ಪ ಬಿನ್ ಲೇಟ್ ಜಂಪಾಲ ನರಸಪ್ಪ 47 ವರ್ಷ, ಮಾದಿಗ ಜನಾಂಗ, ಕೂಲಿ ಕೆಲಸ, ಗುಂಡುವಾರಿಪಲ್ಲಿ ಗ್ರಾಮ, ಅಮಡಗೂರು ಮಂಡಲಂ.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂರೆ, ನನ್ನ ಅಣ್ಣ ಜಂಪಾಲ ವೆಂಕಟರಮಣರವರು ನಮ್ಮ ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ. ಇವರಿಗೆ 3 ಜನ ಮಕ್ಕಳಿದ್ದು, 1ನೇ ಪದ್ಮಾವತಿ, 2ನೇ ಜಂಪಾಲ ವೆಂಕಟೇಶ, 3ನೇ ಲಕ್ಷ್ಮೀದೇವಿ ಆಗಿರುತ್ತಾರೆ. ಜಂಪಾಲ ವೆಂಕಟೇಶ ಬಿನ್ ಜಂಪಾಲ ವೆಂಕಟರಮಣ,  28 ವರ್ಷ, ರವರು ಪದವಿ ವ್ಯಾಸಾಂಗ ವನ್ನು ಮುಗಿಸಿಕೊಂಡು ಬೆಂಗಳೂರಿನ ಖಾಸಗಿ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಗ್ರಾಮ ಪಂಚಾಯ್ತಿ ಚುನಾವಣೆಗಾಗಿ ಮತದಾನ ಮಾಡಲು ದಿನಾಂಕ:09/02/2021 ರಂದು ನಮ್ಮ ಗ್ರಾಮಕ್ಕೆ ಬಂದಿದ್ದು, ವಾಪಸ್ಸು ಬೆಂಗಳೂರಿಗೆ ಕೆಲಸಕ್ಕೆ ಹೋಗಲು ದಿನಾಂಕ:10/02/2021 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ  ಕೆ.ಎ-18 ಎಸ್-0555 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋದನು. ಬೆಳಿಗ್ಗೆ ಸುಮಾರು 7:30 ಗಂಟೆಯಲ್ಲಿ   ನಮ್ಮ ಗ್ರಾಮದ ಎನ್.ವೆಂಕಟರೆಡ್ಡಿ ಎಂಬುವವರು ನಮ್ಮ ಮನೆಯ ಬಳಿ ಬಂದು ಬೆಂಗಳೂರಿಗೆ ಹೋಗುತ್ತಿದ್ದ ಜಂಪಾಲ ವೆಂಕಟೇಶ ರವರಿಗೆ ಬಾಗೇಪಲ್ಲಿಯ ಬಳಿ ಅಪಘಾತವಾಗಿರುವುದಾಗಿ ತಿಳಿಸಿದನು. ಕೂಡಲೇ ನಾನು ಬಾಗೇಪಲ್ಲಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಬಳಿ ಬರುವಷ್ಟರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸಿನಲ್ಲಿ ನನ್ನ ತಮ್ಮ ನ ಮಗ ಜಂಪಾಲ ಹರೀಶ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಯಿತು. ನಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಜಂಪಾಲ ವೆಂಕಟೇಶನಿಗೆ ಹಣೆಗೆ, ಕೆನ್ನೆಗೆ,  ಬಲಕೈಗೆ, ಬಲಕಾಲಿಗೆ ಹಾಗೂ ದೇಹದ ಬಲಬಾಗಗಳಲ್ಲಿ ರಕ್ತಗಾಯಗಳಾಗಿದ್ದವು. ವಿಚಾರ ಮಾಡಲಾಗಿ ಜಂಪಾಲ ವೆಂಕಟೇಶನು ಬೆಂಗಳೂರಿಗೆ ಹೋಗಲು ಕೆ.ಎ-18 ಎಸ್-0555 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಬೆಳಿಗ್ಗೆ ಸುಮಾರು 7:15 ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಸಮೀಪ ಎನ್.ಹೆಚ್ 44 ರಸ್ತೆಯಲ್ಲಿ ಹಿಂಬದಿಯಿಂದ ಬಂದ ಎ.ಪಿ -39, ವಿ-2169 ಖಾಸಗಿ  ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಂಪಾಲ ವೆಂಕಟೇಶ ಹೋಗುತ್ತಿದ್ದ ಕೆ.ಎ-18 ಎಸ್-0555 ಬಜಾಜ್ ಪಲ್ಸರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಮೇಲ್ಕಂಡ ಗಾಯಗಳಾಗಿರುವುದಾಗಿ ತಿಳಿಯಿತು. ವೈದ್ಯರ ಸಲಹೆಯಂತೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ನನ್ನ ಅಣ್ಣನ ಮಗ ಜಂಪಾಲ ವೆಂಕಟೇಶನಿಗೆ ಅಪಘಾತವನ್ನುಂಟು ಮಾಡಿದ ಎ.ಪಿ-39 ವಿ-2169 ಖಾಸಗಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು  ಕೋರಿ ನೀಡಿದ ದೂರಾಗಿರುತ್ತೆ.

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 143,323,324,448,427,504,149 ಐ.ಪಿ.ಸಿ & 3(1)(r),3(1)(s),3(1)(w) The Scheduled Castes and the Scheduled Tribes (Prevention of Atrocities) Amendment Bill, 2015:-

     ದಿನಾಂಕ 11/02/2021 ರಂದು ಬೆಳಗಿನ ಜಾವ 00-30 ಗಂಟೆಗೆ ಠಾಣಾ ಸಿಬ್ಬಂದಿ ಹೆಚ್ ಸಿ-158 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ   ಗಾಯಾಳು ಆದಿನಾರಾಯಣ ಬಿನ್ ಲೇಟ್ ಪೆದ್ದಗಂಗುಲಪ್ಪ, 28 ವರ್ಷ, ಬೋವಿ ಜನಾಂಗ, ಕೊಲಿಕೆಲಸ , ವಾಸ ಮಾಮಿಡಿಕಾಯಿಲ ಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ  ಹೇಳಿಕೆ ಪಡೆದುಕೊಂಡ ಸಾರಾಂಶವೆನೆಂದರೆ ದಿನಾಂಕ 10/02/2021 ರಂದು ಬಾಗೇಪಲ್ಲಿ ತಾಲ್ಲೂಕು ಗೂಳೂರು  ಹೋಬಳಿ ಕೊತ್ತಕೋಟೆ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ನನ್ನ ತಾಯಿ ಲಕ್ಷ್ಮಿದೇವಮ್ಮ ರವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇದೆ ದಿನ ರಾತ್ರಿ ಸುಮಾರು 8-00 ಗಂಟೆಯಲ್ಲಿ ನಮ್ಮ ಗ್ರಾಮದ ಗೊಲ್ಲಜನಾಂಗದವರಾದ ಬಿಲ್ಲಾ ಶಿವಪ್ಪ ಮತ್ತು ಮಾಜಿ ಮೆಂಬರ್ ಈಶ್ವರಪ್ಪ ಇತರರು ಶಾಲೆ ಬಳಿ ಬೆಂಕಿ ಹಾಕಿಕೊಂಡು ಕಾಯಿಸುತ್ತಾ ಕುಳಿತುಕೊಂಡಿದ್ದರು. ಅಲ್ಲಿಗೆ ಬಂದ ಉಮಾಪತಿ ಬಿನ್ ಪೆದ್ದರಂಗಪ್ಪ, ಶ್ರೀಮತಿ ಸರೋಜಮ್ಮ ಕೋಂ ಪೆದ್ದರಂಗಪ್ಪ ಶಾಲೇ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಮೇಲ್ಕಂಡ ಬಿಲ್ಲಾ ಶಿವಪ್ಪ, ಮೆಂಬರ್  ಈಶ್ವರಪ್ಪ ಮತ್ತು ಇತರರು ಬೈದಾಡಿಕೊಳ್ಳುತ್ತಿದ್ದರು. ಆಗ ಅಲ್ಲೆ ಇದ್ದ ನನ್ನ ಅಣ್ಣ ಆನಂದ ರವರು ಯಾಕೆ ಹೀಗೆ ಜಗಳ ಮಾಡಿಕೊಳ್ಳುತ್ತಿದ್ದಿರಾ ನಿವೇಲ್ಲಾ ಒಂದೆ ಎಂದು ಹೇಳಿದ್ದಕ್ಕೆ ಹಾಗೂ ಬುದ್ದಿ ಮಾತು ಹೇಳಿದ್ದಕ್ಕೆ ಅಲ್ಲೆ ಇದ್ದ ನಾಗಭೂಷಣ ಬಿನ್ ಬಿಲ್ಲಾ ಶ್ರೀರಾಮಪ್ಪ, ಈಶ್ವರಪ್ಪ ಬಿನ್ ಚೌಡಪ್ಪ ರವರು ನಿನ್ಯಾರು ನಮಗೆ ಬುದ್ದಿಹೇಳೋನೋ ವಡ್ಡ ನನ್ನ ಮಗನೇ ಎಂದು ಬೈದು ಜಾತಿ ನಿಂದನೆ ಮಾಡಿ ಕೈಗಳಿಂದ ಹೊಡೆದು ಕಾಲಿಗೆ  ಮೈಕೈಗೆ ಹೊಡೆದು ಕೆಳಗೆ ತಳ್ಳಿದರು, ತಕ್ಷಣ ನಾನು ನನ್ನ ಅಣ್ಣನನ್ನು ಬಿಡಿಸಲು ಹೋದಾಗ ಈಶ್ವರಪ್ಪ ಬಿನ್ ಚೌಡಪ್ಪನು ದೊಣ್ಣೆಯಿಂದ ನನ್ನ ಅಣ್ಣನಿಗೆ ಹೊಡೆಯಲು ಬಂದಿದ್ದು ನಾನು ಅಣ್ಣ ಬಂದಿದ್ದಕ್ಕೆ ನನ್ನ ತಲೆಗೆ ರಕ್ತ ಗಾಯವಾಗಿರುತ್ತೆ. ಆಗ ರಾಜು ಬಿನ್ ರಾಮಕೃಷ್ಣಪ್ಪ ರವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಅಲ್ಲೆ ಇದ್ದ ಗೊಲ್ಲ ಜನಾಂಗ ವೆಂಕಟೇಶ ಬಿನ್ ಬಿಲ್ಲಾ ಶಿವಪ್ಪ, 26 ವರ್ಷ, ಶಿವಪ್ಪ ಬಿನ್ ಬಿಲ್ಲಾ ಶ್ರೀರಾಮಪ್ಪ, 60 ವರ್ಷ, ರವಿಶಂಕರ ಬಿನ್ ಬಿಲ್ಲಾ ಶಿವಪ್ಪ, ಬಿಟ್ರಾ ಈಶ್ವರಪ್ಪ ಬಿನ್ ನಾಗಪ್ಪ, 40 ವರ್ಷ, ನರಸಿಂಹಮೂರ್ತಿ ಬಿನ್ ಈಶ್ವರಪ್ಪ, 22 ವರ್ಷ, ಶ್ರೀನಿವಾಸ ಬಿನ್ ಶ್ರೀರಾಮಪ್ಪ, ಕೃಷ್ಣಪ್ಪ ಬಿನ್ ಬುಡ್ಡಪ್ಪ, ಲೋಕೇಶ್ ಬಿನ್ ದ್ಯಾವಳ್ಳು ಸೀನಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ದೊಣ್ಣೆ ಕಲ್ಲುಗಳನ್ನು ತೆಗೆದುಕೊಂಡು ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನ ಜಖಂಗೊಳಿಸಿ, ಮನೆಯಲ್ಲಿದ್ದ ಪ್ಲಾಸ್ಟಿಕ್ ಚೇರ್ ಅನ್ನು ಮುರಿದು ಹಾಕಿ ಕಲ್ಲುಗಳಿಂದ ಮನೆಯ ಮೇಲೆ ಎಸೆದಿರುತ್ತಾರೆ. ಇದನ್ನು ಕಂಡ ನಮ್ಮ ಪಕ್ಕದ ಮನೆಯ ಲಕ್ಷ್ಮಮ್ಮ ಕೋಂ ಲೇಟ್ ವೆಂಕಟರಾಯಪ್ಪ ರವರು ಬುದ್ದಿ ಹೇಳಲು ಹೋಗಿದ್ದಕ್ಕೆ ಈಶ್ವರಪ್ಪ ಬಿನ್ ನಾಗಪ್ಪ ಬೈದು ಕೆನ್ನೆಗೆ ಹೊಡೆದಿರುತ್ತಾನೆ. ಹಾಗೂ ಮನೆಯಲ್ಲಿದ್ದ ನನ್ನ ದೊಡ್ಡಪ್ಪನಾದ ಅಂಜಿನಪ್ಪ ಬಿನ್ ಲೇಟ್ ಆದೆಪ್ಪರವರಿ ಮೂಗೇಟು ಉಂಟಾಗಿರುತ್ತದೆ. ನಂತರ ಇದೆನ್ನೇಲ್ಲಾ ಕಂಡ ನಮ್ಮ ಗ್ರಾಮದವರಾದ ಶಿವಪ್ಪ ಬಿನ್ ವೆಂಕಟರಾಮಪ್ಪ, ಶ್ರೀನಿವಾಸ ಬಿನ್ ಲೇಟ್ ರಾಮಕೃಷ್ಣಪ್ಪ ರವರು ನನಗೆ ಮತ್ತು ಆನಂದ, ಲಕ್ಷ್ಮಮ್ಮ,ಅಂಜಿನಪ್ಪ ರವರಿಗೆ ಯಾವುದೋ ಕಾರಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 86,87 ಕೆ.ಎಫ್ ಆಕ್ಟ್:-

     ದಿನಾಂಕ:10/02/2021 ರಂದು ಮದ್ಯಾಹ್ನ 13:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಹುನೇಗಲ್ಲು ಗ್ರಾಮದ ಬಳಿ ಇರುವ ಶ್ರೀ ಆದಿ ಚುಂಚನಗಿರಿ ಮರಿಯಪ್ಪ ರಾಮಯ್ಯ ಚಾರಿಟಬಲ್ ಟ್ರಸ್ಟ್ ನ ತೋಟದಲ್ಲಿ ದಿನಾಂಕ:09.02.2021 ಮದ್ಯರಾತ್ರಿ ಸಮಯದಲ್ಲಿ ತೋಟದಲ್ಲಿರುವ ಒಂದು ಶ್ರೀ ಗಂಧದ ಮರವನ್ನು ಯಾರೋ ಕಳ್ಳರು ಮರವನ್ನು ಕಡಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.66/2021  ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 10/02/2021 ರಂದು ರಾತ್ರಿ 8.45 ಗಂಟೆಗೆ ಕದಿರಪ್ಪ ಬಿನ್ ಲೇಟ್ ವೆಂಕಟಪ್ಪ, 63 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಜೆ.ಜೆ ಕಾಲೋನಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:29/11/2020 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ಯಲಗಲಹಳ್ಳಿ ಗ್ರಾಮದ ತನ್ನ ಹೆಂಡತಿಯ ಅಕ್ಕರವರಾದ ನಾರಾಯಣಮ್ಮರವರು ಮರಣ ಹೊಂದಿದ್ದು ಅವರ ದಫನ್ ಕಾರ್ಯಕ್ರಮ ನೋಡಲು ತಾನು ತನ್ನ ಬಾಬತ್ತು ಕೆಎ-40 ಇಎ-7018 ನೊಂದಣಿ ಸಂಖ್ಯೆ ಟಿ.ವಿ.ಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ತಾನು ಚಾಲನೆ ಮಾಡಿಕೊಂಡು ಹೋಗಿ ನಂತರ ದಫನ್ ಕಾರ್ಯಕ್ರಮ ಮುಗಿಸಿಕೊಂಡು ಪುನಃ ಮನೆಗೆ ವಾಪಸ್ಸು ಬರಲು ಅದೇ ದಿನ ಸಂಜೆ 4.30 ಗಂಟೆ ಸಮಯದಲ್ಲಿ ಬಾಗೇಪಲ್ಲಿ-ಚಿಂತಾಮಣಿ ಹೆದ್ದಾರಿಯ ಧನಮಿಟೇನಹಳ್ಳಿ ಕ್ರಾಸ್ ಬಳಿ ಬರುವಷ್ಟರಲ್ಲಿ ಅದೇ ಸಮಯಕ್ಕೆ ತನ್ನ ದ್ವಿಚಕ್ರ ವಾಹನದ ಎದುರುಗಡೆಯಿಂದ ಬಂದ ಕೆಎ-40 ಆರ್-7647 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಪ್ಯಾಶನ್ ಪ್ರೋ ದ್ವಿಚಕ್ರ ವಾಹನದ ಸವಾರನು ಆತನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ಇದರಿಂದ ತನ್ನ ಬಲ ಮೊಣಕಾಲಿಗೆ ಮತ್ತು ಪಾದಕ್ಕೆ, ಹಣೆಗೆ ರಕ್ತ ಗಾಯಗಳಾಗಿರುತ್ತದೆ, ನಂತರ ಅಲ್ಲಿದ್ದ ಯಾರೋ ಸಾರ್ವಜನಿಕರು ತನ್ನನ್ನು ಉಪಚಚರಿಸಿ ದಾರಿಯಲ್ಲಿ ಬರುತ್ತಿದ್ದ ಯಾವುದೋ ಆಟೋವಿನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಸದರಿ ಅಪಘಾತದ ವಿಚಾರವನ್ನು ತಿಳಿದು ಆಸ್ಪತ್ರೆಗೆ ಬಂದ ತನ್ನ ಅಳಿಯನಾದ ಎನ್.ಬಾಬು ಬಿನ್ ಲೇಟ್ ನಾರಾಯಣಸ್ವಾಮಿ ಮತ್ತು ತನ್ನ ಮೊಮ್ಮಗನಾದ ನರೇಶ್ ಬಿನ್ ಚೆನ್ನರಾಯಪ್ಪರವರು ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ನಂತರ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ನಂತರ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಸಂಜಯ್ ಗಾಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ತಾನು ಆಸ್ಪತ್ರೆಯಲ್ಲಿ ಇದುವರೆಗೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರಿಂದ ಪೊಲೀಸ್ ಠಾಣೆಗೆ ದೂರನ್ನು ನೀಡಲು ಸಾದ್ಯವಾಗದೇ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಅಪಘಾತಪಡಿಸಿ ಸ್ಥಳದಲ್ಲಿಯೇ ನಿಲ್ಲಿಸದೇ ಹೊರಟು ಹೋಗಿರುವ ಮೇಲ್ಕಂಡ ಕೆಎ-40 ಆರ್-7647 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಪ್ಯಾಶನ್ ಪ್ರೋ ಸವಾರನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.21/2021  ಕಲಂ. ಮನುಷ್ಯ ಕಾಣೆ:-

     ದಿನಾಂಕ: 11/02/2021 ರಂದು ಪಿರ್ಯಾದಿದಾರರಾದ ಚಂದ್ರಶೇಖರ್ ಯಾದವ್ ಡಿ.ವಿ ಬಿನ್ ಡಿ.ವೆಂಕಟರವಣ, ಗೊಲ್ಲ ಜನಾಂಗ, 39 ವರ್ಷ, ವಾರ್ಡ್ ನಂ:26, ಮಹಬೂಬ್ ನಗರ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನ್ನ ತಂದೆಯಾದ ಡಿ.ವೆಂಕಟರವಣಪ್ಪ ರವರಿಗೆ 63 ವರ್ಷ ವಯಸ್ಸಾಗಿದ್ದು, ದಿನಾಂಕ: 15/08/2021 ರಂದು ಚಿಂತಾಮಣಿಯಿಂದ ನಮ್ಮ ಸಂಭಂಧಿಕರ ಮನೆಗೆ ಹೋಗಿ ಬರುತ್ತೆನೆಂದು ತಿರುಪತಿಗೆ ಹೋಗುತ್ತೆನೆಂದ ಆಂದ್ರಪ್ರದೇಶದ ರಾಯಚೂಟಿಗೆ ನಮ್ಮ ಸಂಭಂದಿಕರ ಮನೆಗೆ ಹೋಗಿರುತ್ತಾರೆ ನಂತರ ದಿನಾಂಕ: 16/08/2020 ರಂದು ನಮ್ಮ ಸಂಭಂದಿಕರ ಮನೆಗೆ ಬೇಟಿ ನೀಡಿ ತಿರುಪತಿಗೆ ಹೋಗುತ್ತಿರುವುದಾಗಿ ಹೇಳಿರುತ್ತಾರೆ ಇದೂ ವರೆಗೂ ಮನಗೆ ಬಂದಿರುವುದಿಲ್ಲ ಆದ್ದರಿಂದ ನಾವುಗಳು ಸಂಭಂದಿಕರ ಮನೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗದ ಕಾರಣ ದೂರನ್ನು ತಡವಾಗಿ ನೀಡಿರುತ್ತೆವೆಂದು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:10/02/2021 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರರಾದ ಹರೀಶ್ ಬಿನ್ ನಾಗರಾಜಪ್ಪ, 24 ವರ್ಷ, ನಾಯಕ ಜನಾಂಗ, ಕದಿರೇನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ತಂದೆಯವರ ತಾಯಿಯಾದ ಶ್ರೀಮತಿ ಲಕ್ಷ್ಮಮ್ಮ ಕೋಂ ಲೇಟ್ ನಾರಾಯಣಪ್ಪ ವಯಸ್ಸು ಸುಮಾರು 70 ವರ್ಷ, ನಾಯಕ ಜನಾಂಗ ಇವರು ಕದಿರೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ಪಿರ್ಯಾದಿದಾರರು ಈ ದಿನ  ದಿನಾಂಕ:10/02/2021 ರಂದು ಸಂಜೆ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಅಜಾಕ್ಸ್  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಸ್ನೇಹಿತನಾದ ನವೀನ್ ಬಿನ್ ನಂಜಪ್ಪ ಎಂಬುವವರು ತನ್ನ ಮೊಬೈಲ್ ಗೆ ಫೋನ್ ಮಾಡಿ, ದೊಡ್ಡಕುರುಗೋಡು ಸಮೀಪ  ಬಾಳೆ ಹಣ್ಣು ಶೀನಪ್ಪ ರವರ ಜಮೀನುಗಳ ಸಮೀಪ ತಮ್ಮ ಅಜ್ಜಿ ಲಕ್ಷ್ಮಮ್ಮರವರಿಗೆ ಅಪಘಾತವಾಗಿರುವುದಾಗಿ ಕೂಡಲೇ ಬರುವಂತೆ ತಿಳಿಸಿದಾಗ ಪಿರ್ಯಾದಿದಾರರು ಕೂಡಲೇ ತನ್ನ ದ್ವಿಚಕ್ರ  ವಾಹನದಲ್ಲಿ ಸ್ಥಳಕ್ಕೆ ಬಂದಾಗ, ತಮ್ಮ ಅಜ್ಜಿಗೆ ಅಪಘಾತವಾಗಿರುವುದು ನಿಜವಾಗಿತ್ತು. ವಿಚಾರ ಮಾಡಿದಾಗ, ಸ್ಥಳದಲ್ಲಿದ್ದ ಮಂಜುನಾಥ ಬಿನ್ ಎ.ಬಾಬು ಎಂಬುವವರು ತನಗೆ  ತಿಳಿಸಿದ್ದೇನೆಂದರೆ,  ಇದೇ ದಿನ ದಿನಾಂಕ: 10/02/2021 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ  ತಮ್ಮ ಅಜ್ಜಿ ಲಕ್ಷ್ಮಮ್ಮ ರವರು ದೊಡ್ಡಕುರುಗೋಡು ಗ್ರಾಮದ ಬಳಿ ಇರುವ ಬಾಳೇಹಣ್ಣು ಶೀನಪ್ಪರವರ ಜಮೀನಿನ ಸಮೀಪ ರಸ್ತೆ  ದಾಟುತ್ತಿದ್ದಾಗ, ಗೌರೀಬಿದನೂರು ಕಡೆಯಿಂದ ಹಿಂದೂಪುರ ಕಡೆಗೆ ಹೋಗುತ್ತಿದ್ದ, TN.28-P.9345 ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಜ್ಜಿ ಲಕ್ಷ್ಮಮ್ಮನಿಗೆ ಡಿಕ್ಕಿ ಹೊಡೆಸಿದ ಪರಿಣಾಮ,  ಲಕ್ಷ್ಮಮ್ಮನಿಗೆ ತಲೆಗೆ, ಮುಖಕ್ಕೆ ರಕ್ತಗಾಯಗಳಾಗಿ, ಎಡಕೈ ಮೂಳೆ ಮುರಿದು ತೀವ್ರವಾಗಿ ಗಾಯಗೊಂಡಿರುವುದಾಗಿ ತಿಳಿಯಿತು. ಕೂಡಲೆ ಗಾಯಾಳುವನ್ನುಸ್ಥಳಕ್ಕೆ ಬಂದ ಅಂಬುಲೆನ್ಸ್ ವಾಹನದಲ್ಲಿ  ರಾತ್ರಿ 8-00 ಗಂಟೆಗೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪಿರ್ಯಾದಿದಾರರ ಅಜ್ಜಿ ಮೃತಪಟ್ಟಿದ್ದು  ಮೃತ ದೇಹವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು,TN.28-P.9345 ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಜ್ಜಿ ಲಕ್ಷ್ಮಮ್ಮನಿಗೆ ಡಿಕ್ಕಿ ಹೊಡೆಸಿದ ಪರಿಣಾಮ,  ತೀವ್ರ ಸ್ವರೂಪದ ಗಾಯಗಳಾಗಿ ಮೃತಪಟ್ಟಿರುತ್ತಾಳೆ. ಅಪಘಾ-ತ ಮಾಡಿದ ಲಾರಿಯ ಚಾಲಕನ ಹೆಸರು ಬಾಲಸುಬ್ರಮಣಿ ಬಿನ್ ಪಳನಿಯಪ್ಪನ್ ಎಂದು ತಿಳಿದು ಬಂದಿರುತ್ತೆ.  ಆದುದರಿಂದ ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತದೆ.

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ 10/02/2021 ರಂದು ರಾತ್ರಿ 9.15 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಸಂಬಂದಿಕರಾದ ಮಂಜುನಾಥ ಪ್ರಸಾದ್ ರವರು ತನ್ನ ಹೆಂಡತಿ ಶೋಬಾ ಪ್ರಸಾದ್, ಮಗ ಕುನಾಲ್ ಪ್ರಸಾದ್ ಸೊಸೆ ಹನಿ ಪ್ರಸಾದ್ ಹಾಗೂ ಮೊಮ್ಮಗಳು ನೇಕ್ಷಾ ರವರೊಂದಿಗೆ ಮನೆ ನಂ 101 ಡಿ ಬ್ಲಾಕ್ ಗ್ರೀನ್ ವ್ಯಾಲಿ ಬನ್ನೇರು ಘಟ್ಟ ಬೆಂಗಳೂರಿನಲ್ಲಿ ವಾಸವಾಗಿದ್ದು ತಮ್ಮ ಮಾವ ಮಂಜುನಾಥ ಪ್ರಸಾದ್ ರವರು ದಿನಾಂಕ:05/02/2021 ರಂದು ಹೈದಾರಬಾದ್ ನಲ್ಲಿ ವಾಸವಾಗಿರುವ ತನ್ನ 2 ನೇ ಮಗಳು ನಿಖಿತ ರವರ ಮನೆಗೆ ತನ್ನ ಬಾಬತ್ತು ಕೆ,ಎ 51 ಎಮ್,ಜೆ 1219 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಇರ್ಟಿಗಾ ಕಾರಿನಲ್ಲಿ ಹೋಗುತ್ತಿರುವುದಾಗಿ ತಿಳಿಸಿದರು. ನಂತರ ದಿನಾಂಕ:10/02/2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹನಿ ಪ್ರಸಾದ್ ರವರು ತನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇನೆಂದರೆ ಈ ದಿನ ದಿನಾಂಕ:10/02/2021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬರಲು ಕೆ,ಎ 51 ಎಮ್,ಜೆ 1219 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಇರ್ಟಿಗಾ ಕಾರಿನಲ್ಲಿ ತನ್ನ ಗಂಡ ಕುನಾಲ್ ಪ್ರಸಾದ್ ರವರು ಚಾಲನೆ ಮಾಡಿಕೊಂಡು ತಾನು ತನ್ನ ಮಾವ ಮಂಜುನಾಥ ಪ್ರಸಾದ್ ತನ್ನ ಅತ್ತೆ ಶೋಭಾ ಪ್ರಸಾದ್ ತನ್ನ ಮಗಳು ನೇಕ್ಷಾ ರವರು ಕಾರಿನಲ್ಲಿ ಕುಳಿತುಕೊಂಡು ಈ ದಿನ ದಿನಾಂಕ:10/02/2021 ರಂದು ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ಹೈದರಾಬಾದ್ ಬೆಂಗಳೂರು ಎನ್,ಎಚ್-44 ರಸ್ತೆಯಲ್ಲಿ ಬರುತ್ತಿದ್ದಾಗ ಪೆರೇಸಂದ್ರ ಗ್ರಾಮದಿಂದ ಸುಮಾರು 200 ಮೀಟರ್ ದೂರದ ಬ್ರಿಡ್ಜ ಬಳಿ ತನ್ನ ಗಂಡ ಕುನಾಲ್ ಪ್ರಸಾದ್ ರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿ ಬಿದ್ದು ಕಾರು ಪೂರ್ತಿಯಾಗಿ ಜಖಂಗೊಂಡು ಅಪಘಾತವಾದ ಪರಿಣಾಮ ತಮ್ಮ ಅತ್ತೆ ಶೋಭಾ ಪ್ರಸಾದ್ ರವರಿಗೆ ಅಪಘಾತದಲ್ಲಿ ತೀವ್ರವಾದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ತಮ್ಮ ಮಾವ ಮಂಜುನಾಥ ಪ್ರಸಾದ್ ರವರಿಗೆ ತಲೆಯ ಮುಂಭಾಗಕ್ಕೆ  ರಕ್ತಗಾಯವಾಗಿದ್ದು ತನಗೆ ಎಡ ಕೈಗೆ ತರಚಿದ ಗಾಯವಾಗಿದ್ದು ತನ್ನ ಮಗಳು ನೇಕ್ಷಾ ರವರಿಗೆ ಎಡ ಕಾಲಿಗೆ ಊತಗಾಯವಾಗಿದ್ದರಿಂದ ತಾವುಗಳು 108 ಆಂಬುಲೆನ್ಸ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ತನ್ನ ಮಾವ ಮಂಜುನಾಥ ಪ್ರಸಾದ್ ರವರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಂತರ ತಾನು ಘಟನೆಯ ವಿಚಾರವನ್ನು ತಮ್ಮ ಅಣ್ಣ ಶ್ರೀಧರ ರವರಿಗೆ ತಿಳಿಸಿ ಇಬ್ಬರೂ ಕೂಡಲೇ ಚಿಕ್ಕಬಳ್ಳಾಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು ತಮ್ಮ ಅತ್ತೆ ಶೋಭಾ ಪ್ರಸಾದ್ ರವರ ಮೃತ ದೇಹವು ಶವಗಾರದಲ್ಲಿರುತ್ತೆ, ತಾನು ಅಪಘಾತ ನಡೆದ ಸ್ಥಳವನ್ನು ನೋಡಿಕೊಂಡು ಬಂದಿರುತ್ತೇನೆ. ಆದ್ದರಿಂದ ಕೆ,ಎ 51 ಎಮ್,ಜೆ 1219 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಇರ್ಟಿಗಾ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತ ಪಡಿಸಿದ ಕುನಾಲ್ ಪ್ರಸಾದ್ ಬಿನ್ ಮಂಜುನಾಥ ಪ್ರಸಾದ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ  ಮೇರೆಗೆ  ಪ್ರಕರಣ  ದಾಖಲಿಸಿರುತ್ತೆ.

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ ;10-02-2021 ರಂದು  16-30 ಗಂಟೆಗೆ  ಆ ಉ ನಿ ಸಾಹೇಬರು ದಾಳಿಯಿಂದ  ಆರೋಫಿ, ಪಂಚನಾಮೆ  ಹಾಗೂ ಅಮಾನತ್ತು ಪಡಿಸಿದ್ದ  ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ  ಸಾಹೇಬರು ಇದೇ ದಿನ  ಮದ್ಯಾಹ್ನ 14-00 ಗಂಟೆ ಸಮಯದಲ್ಲಿ ನಾನು ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಗೋಪಾಲ್ ಮತ್ತು ಪೆಂಚಲಪ್ಪ  ರವರೊಂದಿಗೆ ಮುದ್ದೇನಹಳ್ಳಿ ಗ್ರಾಮದ ಕಡೆ ಹಗಲು ಗಸ್ತಿನಲ್ಲಿದ್ದಾಗ  ಅವರಿಗೆ  ಬಂದ  ಖಚಿತವಾದ ಮಾಹಿತಿ ಎನೆಂದರೆ  ಮದುರೇನಹಳ್ಳಿ  ಗ್ರಾಮದ ಮುನಿರಾಜು  ಬಿನ್ ಲೇಟ್ ವೆಂಕಟರಾಯಪ್ಪ  ರವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ  ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು  ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಕಂಗಾನಹಳ್ಳಿ ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಮದ್ಯಾಹ್ನ 14-30 ಗಂಟೆಗೆ ಮುನಿರಾಜು  ಬಿನ್ ಲೇಟ್ ವೆಂಕಟರಾಯಪ್ಪ  ರವರ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯಲ್ಲಿದ್ದವನ  ಹೆಸರು ವಿಳಾಸವನ್ನು ಕೇಳಲಾಗಿ  ಮುನಿರಾಜು  ಬಿನ್ ಲೇಟ್ ವೆಂಕಟರಾಯಪ್ಪ  60 ವರ್ಷ  ನಾಯಕರು  ಚಿಲ್ಲರೆ ಅಂಗಡಿ ವ್ಯಾಪಾರಿ  ಮದುರೇನಹಳ್ಳಿ   ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಇವನ  ಅಂಗಡಿಯ  ಮುಂದೆ  ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 702.60/- ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಇವುಗಳನ್ನು ತನ್ನ ಮನೆಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿ ಮಾಲೀಕ ಮುನಿರಾಜು  ಬಿನ್ ಲೇಟ್ ವೆಂಕಟರಾಯಪ್ಪ  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 13-40 ಗಂಟೆಯಿಂದ 14-40 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ ಟೆಟ್ರಾ ಪ್ಯಾಕೇಟುಗಳನ್ನು ಮತ್ತು  ಅಂಗಡಿ  ಮಾಲೀಕ ಮುನಿರಾಜು  ಬಿನ್ ಲೇಟ್ ವೆಂಕಟರಾಯಪ್ಪ  ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ನೀಡಿದ ಜ್ಞಾಪನದ ಮೇರೆಗೆ ಈ ಪ್ರವವರದಿ,

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 379 ಐ.ಪಿ.ಸಿ:-

     ಈ ದಿನ ದಿನಾಂಕ 11.02.2021 ರಂದು ಮದ್ಯಾಹ್ನ 15-00 ಗಂಟೆಗೆ ಮಡುಕು ಹೊಸಹಳ್ಳಿ ಗ್ರಾಮದ ವಾಸಿಯಾದ ಮುಕುಂದ ಬಿನ್ ಲೇಟ್ ಮುನಿರಾಜು ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 2 ವರ್ಷಗಳ ಹಿಂದೆ ನಮ್ಮ ಮಾವ ರಮೇಶ ರವರ ಹೆಸರಿನಲ್ಲಿದ್ದ ಕೆಎ-40-ಇಡಿ-1481 ಬಜಾಜ್ ಪಲ್ಸರ್ ಎನ್ಎಸ್-200 ಪಲ್ಸರ್ ದ್ವಿಚಕ್ರ ವಾಹನವನ್ನು ಪಡೆದುಕೊಂಡು ಬಂದು ನನ್ನ ಸ್ವಂತ ಕೆಲಸಗಳಿಗೆ ಬಳಸುತ್ತಿದ್ದೆನು.  ಇದರ ಇಂಜಿನ್ ನಂಬರ್-JLYCJD97830 ಹಾಗೂ ಚಾರ್ಸಿ ನಂಬರ್-MD2A36FY7JCD53330 ಆಗಿರುತ್ತದೆ.  ದಿನಾಂಕ: 30.01.2021 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ತಾನು ವಾಸವಾಗಿರುವ ಮನೆಯ ಮುಂದೆ ಮೇಲ್ಕಂಡ ದ್ವಿಚಕ್ರ ವಾಹನವವನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಮನೆಯಲ್ಲಿ  ಮಲಗಿದ್ದು, ದಿನಾಂಕ: 31.01.2021 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆಯ ಮುಂದೆ ನಾನು ನಿಲ್ಲಿಸಿದ್ದ ಕೆಎ-40-ಇಡಿ-1481 ನೊಂದಣೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನವು ಕಳುವಾಗಿರುತ್ತದೆ. ನಾನು ಸುತ್ತ ಮುತ್ತ ಗ್ರಾಮಗಳಲ್ಲಿ ಹಾಗೂ ನನಗೆ ಪರಿಚಯಸ್ಥರ ಬಳಿ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಈ ವಾಹನದ ಬೆಲೆ 45000/- ರೂಗಳಾಗಿರುತ್ತದೆ. ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನನ್ನ ದ್ಚಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳನನ್ನು ಪತ್ತೆ ಮಾಡಿ ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿರುವ ದೂರಿನ ಮೇರೆಗೆ ಈ ಪ್ರ.ವ..ವರದಿ.

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 427,379,504,506,34  ಐ.ಪಿ.ಸಿ:-

     ದಿನಾಂಕ: 10-02-2021 ರಂದು ಸಂಜೆ 6.30 ಗಂಟೆಯಲ್ಲಿ ಪಿರ್ಯಾದಿದಾರರಾದ ಸೈಯದ್ ನೂರ್ ರಫೀವುಲ್ಲಾ ಬಿನ ಲೇಟ್ ನೂರ್ ಷಫೀವುಲ್ಲಾ, ಸುಮಾರು 46 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ವಾಸ: ಕಟ್ಟಿಗೇನಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ತಾನು ಈಗ್ಗೆ ಸುಮಾರು 5 ವರ್ಷದ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಹಾರಡಿ ಗ್ರಾಮದ ಬಳಿ ಸರ್ವೆ ನಂ 15, ಸರ್ವೆ ನಂ. 03, ಸರ್ವೆ ನಂ. 169 ಗಳಲ್ಲಿನ ಒಟ್ಟು 49 ಎಕರೆ ಜಮೀನನ್ನು ಖರೀದಿ ಮಾಡಿರುತ್ತೇನೆ ಸದರಿ ಜಮೀನುಗಳ ಮಾಲೀಕರ ಬಳಿ ಶುದ್ದ ಕ್ರಯದ ಕರಾರು ಪತ್ರ ನೋಂದಣಿ ಮತ್ತು ಜಿ.ಪಿ.ಎ ಮಾಡಿಕೊಂಡಿರುತ್ತೇನೆ, ಅಂದಿನಿಂದಲೂ ತಾನೇ ಸ್ವಾದೀನದಲ್ಲಿರುತ್ತೇನೆ,  ತಾನು ಆಗಾಗ ಹಾರಡಿ ಗ್ರಾಮದ ಬಳಿ ಬಂದು ತಮ್ಮ ಜಮೀನುಗಳನ್ನು ನೋಡಿಕೊಂಡು ಹೋಗುತ್ತಿದ್ದೆ ತನ್ನ ಬಾಬತ್ತು ಪೂರ್ತಿ 49 ಎಕರೆ ಜಮೀನಿಗೆ ಹಾಲೋ ಬ್ರಿಕ್ಸ್ ನಿಂದ ಕಾಂಪೌಂಡ್ ನಿರ್ಮಿಸಿ ಒಂದು ಕಡೆ ಕಬ್ಬಿಣದ ಗೇಟ್ ಇಟ್ಟಿದ್ದೆವು ಸದರಿ ಗೇಟ್ ಬಳಿ ಸೆಕ್ಯೂರಿಟಿ ರೂಮ್ ಅನ್ನು ಸಹ ಕಟ್ಟಿರುತ್ತೇವೆ, ತನ್ನ ಜಮೀನನ್ನು ನೋಡಿಕೊಳ್ಳಲು ಒಬ್ಬ ಸೆಕ್ಯೂರಿಟಿಯನ್ನು ನೇಮಿಸಿದ್ದು ತಾನು ಈಗ್ಗೆ ಕೊರೋನ ಕೊವಿಡ್-19 ಬಂದಿದ್ದರಿಂದ ತಾನು ದಿನಾಂಕ: 07-10-2020 ರಿಂದ ತಮ್ಮ ಜಮೀನನ್ನು ನೋಡಲು ಬಂದಿರುವುದಿಲ್ಲ ತಮ್ಮ ಸೆಕ್ಯೂರಿಟಿ ಸಹ ತಮ್ಮ ಜಮೀನಿನ ಬಳಿ ಬಂದಿರುವುದಿಲ್ಲ, ದಿನಾಂಕ: 08-02-2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಾನು ಹಾರಡಿ ಗ್ರಾಮದ ಬಳಿ ಇರುವ ತಮ್ಮ ಜಮೀನನ್ನು ನೋಡಿಕೊಂಡು ಹೋಗೋಣವೆಂದು ಬಂದು ನೋಡಿದಾಗ ತಾವು ಯಾರೂ ಇಲ್ಲದೇ ಇದ್ದ  ಸಮಯದಲ್ಲಿ ಹಾರಾಡಿ ಗ್ರಾಮದ ಬತ್ತಲೇಗೌಡ ಬಿನ್ ಭತ್ತಲೇಗೌಡ ಮತ್ತು ಆತನ ಮಕ್ಕಳಾದ ನರಸಿಂಹಮೂರ್ತಿ, ಬಾಲಜಿ ಮತ್ತು ಆತನ ಅಳಿಯನಾದ ಚಂದ್ರು ಮತ್ತು ಇತರೆಯವರು ಸೇರಿಕೊಂಡು ತಾನು ಮೇಲ್ಕಂಡ ಸರ್ವೆ ನಂಬರ್ ಗಳ ಒಟ್ಟು 49 ಎಕರೆಗೆ ನಿಮರ್ೀಸಿದ್ದ ಹಾಲೋ ಬ್ರಿಕ್ಸ್ ನಿಂದ ಕಾಪೌಂಡ್ ಅನ್ನು ಆಗಾಗ ಬಂದು ಪೂರ್ತಿ ಕಾಪೌಂಡ್ ಮತ್ತು ಸೆಕ್ಯೂರಿಟಿ ರೂಮ್ ಅನ್ನು ಯಾವುದೋ ಆಯುದಗಳಿಂದ ಹೊಡೆದು ಹಾಕಿ ನಾಶಪಡಿಸಿ ಸುಮಾರು ಲಕ್ಷಗಳಷ್ಠು ನಷ್ಠವುಂಟುಮಾಡಿರುತ್ತಾರೆ, ಸದರಿ ಕಾಪೌಂಡ್ ಗೆ ಇಟ್ಟಿದ್ದ ಸುಮಾರು ಒಂದು ಲಕ್ಷ ಬೆಲೆ ಬಾಳುವ ಒಂದು ಕಬ್ಬಿಣದ ಗೇಟ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ವಿಚಾರವನ್ನು ತಾನು ತಮ್ಮ ಜಮೀನನ್ನು ನೋಡಿಕೊಳ್ಳಲು ಹೇಳಿದ್ದವರಿಂದ ತಿಳಿದುಬಂದಿರುತ್ತೆ ಸದರಿ ವಿಚಾರದಲ್ಲಿ ತಾನು ಮೇಲ್ಕಂಡವರಲ್ಲಿ ಕೇಳಿದಕ್ಕೆ ತನ್ನ ಅವಾಚ್ಯ ಶಬ್ದಗಳಿಂದ ಬೈದು ತನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ಈ ಜಮೀನಿನ ಬಳಿ ಬಂದರೆ ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಅದ್ದರಿಂದ ತಾನು ತಮ್ಮ ಜಮೀನಿನ ಸುತ್ತಲು ನಿಮರ್ೀಸಿದ್ದ ಕಾಪೌಂಡ್ ಹೊಡೆದು ಹಾಕಿ ನಷ್ಠವುಂಟು ಮಾಡಿ ಕಬ್ಬಿಣದ ಗೇಟ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 35/2021 ಕಲಂ 427, 379, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:03/02/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:11-02-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಸಿಬ್ಬಂದಿಯವರಾದ  ಹೆಚ್.ಸಿ.97, ಸುಬ್ರಮಣಿ, ಪಿ.ಸಿ.280 ಶಶಿಕುಮಾರ್ ಮತ್ತು ಜೀಪು ಚಾಲಕ ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟದ ಮಯೂರ ಸರ್ಕಲ್ ನಲ್ಲಿರುವ  ನಾಗರಾಜ ರವರ ಅಂಗಡಿಯ ಮುಂಭಾಗದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-20 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ ನಾಗರಾಜ ಬಿನ್ ಹಳದಿ ನರಸಿಂಹಯ್ಯ, 65 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಮಯೂರ ವೃತ್ತ, ಶಿಡ್ಲಘಟ್ಟ ಟೌನ್ಎಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ ನಲ್ಲಿ ಪರಿಶೀಲಿಸಲಾಗಿ ಔಡಿರಟಿಚಿಟ ಅಠಛಿಜ 90 ಒಐ ನ 15 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 15 ರ ಬೆಲೆ ಒಟ್ಟು 526.95 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ಔಡಿರಟಿಚಿಟ ಅಠಛಿಜ 90 ಒಐ ನ 04 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 04 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಗಳನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

Last Updated: 11-02-2021 05:36 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080