ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 278/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 09/09/2021 ರಂದು ಮದ್ಯಾಹ್ನ 3-00 ಗಂಟೆಗೆ  ಶ್ರೀ ರಾಜು ಹೆಚ್ ಸಿ-56 ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ; 09-09-2021 ರಂದು  ಮದ್ಯಾಹ್ನ 1-45 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-344 ಮಹಂತೇಶ್ ರವರು ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಬಾಗೇಪಲ್ಲಿ ಪುರ, ಏಟಿಗಡ್ಡಪಲ್ಲಿ, ಘಂಟಂವಾರಿಪಲ್ಲಿ, ಟಿಬಿ ಕ್ರಾಸ್, ಮದರಸಾ ಕಡೆ ಗಸ್ತು ಮಾಡಿಕೊಂಡು ಸುಂಕಲಮ್ಮ ದೇವಸ್ಥಾನದ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಅಸಾಮಿಯು ಸುಂಕಲಮ್ಮ ದೇವಸ್ಥಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಂದು ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಮದ್ಯಪಾನವನ್ನು ಮಾಡುತ್ತಿದ್ದು, ನಾವುಗಳು ಹತ್ತಿರ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗುತ್ತಿದ್ದವನನ್ನು ಸಿಬ್ಬಂದಿಯಾದ ಮಹಾಂತೇಶ್ ರವರು ಹಿಡಿದುಕೊಂಡಿದ್ದು, ನಂತರ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಪಂಚನಾಮೆಗೆ ಸಹಕರಿಸುವಂತೆ ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ  ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಬಾಲಪ್ಪ ಬಿನ್ ಲೇಟ್ ಗಂಗಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ: ಭೋಗೇನಹಳ್ಳಿ ಗ್ರಾಮ, ಸೋಮೇನಹಳ್ಳಿ ಹೋಬಳಿ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 3-00 ಗಂಟೆಗೆ ಠಾಣೆಯಲ್ಲಿ  ಹಾಜರು ಪಡಿಸುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 279/2021 ಕಲಂ. 78(3) ಕೆ.ಪಿ. ಆಕ್ಟ್ :-

     ದಿನಾಂಕ:08.09.2021 ರಂದು ರಾತ್ರಿ 9-00 ಗಂಟೆಗೆ ಪಿಐ ಸಾಹೇಬರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ 08.09.2021 ರಂದು ಸಂಜೆ 7-45 ಗಂಟೆಯಲ್ಲಿ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ನ,  3 ನೇ ವಾರ್ಡ್ ನ ಚೆನ್ನಕೇಶವ ಬಿನ್ ದೊಡ್ಡಚೆನ್ನಪ್ಪ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-214 ಅಶೋಕ್, ಸಿಪಿಸಿ-319  ವಿನಾಯಕ, ಮಪಿಸಿ-591 ಕುಮಾರಿ ಪ್ರಮೀಳ ಮತ್ತು  ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1444 ವಾಹನದಲ್ಲಿ  ಗೂಳೂರು ವೃತ್ತದ ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ರಾತ್ರಿ 8-00 ಗಂಟೆಗೆ ಸ್ಥಳಕ್ಕೆ ಹೋಗಿ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚೆನ್ನಕೇಶವ ಬಿನ್ ದೊಡ್ಡಚೆನ್ನಪ್ಪ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅಸಾಮಿಗಳನ್ನು ಸುತ್ತುವರೆದಿದ್ದು, ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಓಡಿಹೋಗಲು ಯತ್ನಿಸಿದ ಅಸಾಮಿಗಳನ್ನು ಸಿಬ್ಬಂದಿಯಾದ ಅಶೋಕ್, ವಿನಾಯಕ್ ಮತ್ತು ಪ್ರಮೀಳ ರವರು ಹಿಡಿದುಕೊಂಡು ಅಸಾಮಿಗಳ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 3200/-ರೂ.ಹಣ ಇದ್ದು, ಅಸಾಮಿಗಳ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  1) ಚೆನ್ನಕೇಶವ ಬಿನ್ ದೊಡ್ಡಚೆನ್ನಪ್ಪ, 38 ವರ್ಷ, ದೋಬಿ ಜನಾಂಗ, ಹೋಟೆಲ್ ವ್ಯಾಪಾರ, ವಾಸ; ಶಾಂತಿನಿಕೇತನ್ ಶಾಲೆಯ ಮುಂಭಾಗ, 3 ನೇ ವಾರ್ಡ್, ಬಾಗೇಪಲ್ಲಿ ಪುರ 2) ಮಂಜುಳ ಕೋಂ ಚೆನ್ನಕೇಶವ, 33 ವರ್ಷ, ದೋಬಿ ಜನಾಂಗ, ಹೋಟೆಲ್ ವ್ಯಾಪಾರ, ವಾಸ; ಶಾಂತಿನಿಕೇತನ್ ಶಾಲೆಯ ಮುಂಭಾಗ, 3 ನೇ ವಾರ್ಡ್, ಬಾಗೇಪಲ್ಲಿ ಪುರ  ಎಂದು ತಿಳಿಸಿದ್ದು, ಸದರಿ ಅಸಾಮಿಗಳನ್ನು  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾರೆ. ಪಂಚಾಯ್ತಿದಾರರಾರ ಸಮಕ್ಷಮ ಅಸಾಮಿಗಳ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ಎಂದು ತಿಳಿಸಿರುತ್ತಾರೆ.  ಪಂಚಾಯ್ತಿದಾರರ ಸಮಕ್ಷಮ  ಒಂದು ಬಾಲ್ ಪಾಯಿಂಟ್ ಪೆನ್, ಹಾಗೂ ಒಂದು ಮಟ್ಕ ಚೀಟಿ, ಮತ್ತು 3200/- ರೂ ನಗದು ಹಣವನ್ನು  ಪಂಚನಾಮೆಯನ್ನು ಜರುಗಿಸಿ, ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡೆವು ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ರಾತ್ರಿ 9-00  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ನಿಮಗೆ ಸೂಚಿಸಿ ನೀಡಿದ ವರದಿಯನ್ನು ಸ್ವೀಕರಿಸಿ ಠಾಣಾ ಎನ್ ಸಿ ಆರ್ ನಂ-257/2021 ರೀತ್ಯಾ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 09-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 280/2021 ಕಲಂ. 280/2021 ಕಲಂ. 279,337 ಐಪಿಸಿ :-

     ದಿನಾಂಕ:09/09/2021 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀರಾಮರೆಡ್ಡಿ ಬಿನ್ ಲೇಟ್ ಪೆದ್ದಕೊಂಡಪ್ಪ,  42 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ಸಾಕೇವಾಂಡಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ದಿನಾಂಕ:09-09-2021 ರಂದು ಸಂಜೆ ಸುಮಾರು 6-45 ಗಂಟೆ ಸಮಯದಲ್ಲಿ ನಾನು, ಮತ್ತು ನಮ್ಮ ಗ್ರಾಮದ ನಮ್ಮ ಚಿಕ್ಕಪ್ಪನ ಮಗನಾದ ಪೆದ್ದಮದ್ದಿರೆಡ್ಡಿ ಬಿನ್ ಲೇಟ್ ಆದಿರೆಡ್ಡಿ, 64 ವರ್ಷ ಮತ್ತು ರವಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 65 ವರ್ಷ ನಾವು ಮೂರು ಜನರು ನಮ್ಮ ಜಮೀನಿನ ಬಳಿ ಕೆಲಸವನ್ನು ಮುಗಿಸಿಕೊಂಡು ಜಿ.ಮದ್ದೇಪಲ್ಲಿ ಕ್ರಾಸ್ ನಿಂದ ನಮ್ಮ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ನಾವುಗಳು ಬರುತ್ತಿದ್ದಾಗ ಹಿಂಬದಿಯಿಂದ ಅಂದರೆ ಜಿ.ಮದೇಪಲ್ಲಿ ಕ್ರಾಸ್ ಕಡೆಯಿಂದ ಬಂದ ದ್ವಿಚಕ್ರ ವಾಹನದ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ನಮ್ಮ ಅಣ್ಣನಾದ ಪೆದ್ದಮದ್ದಿರೆಡ್ಡಿ ರವರಿಗೆ ಡಿಕ್ಕಿ ಪಡಿಸಿ ಸವಾರನು ಗಾಡಿಯಿಂದ ಕೆಳಗೆ ಬಿದ್ದುಹೋಗಿದ್ದು, ಡಿಕ್ಕಿ ಹೊಡೆದ ಪರಿಣಾಮವಾಗಿ ನಮ್ಮ ಅಣ್ಣನಿಗೆ ತಲೆ ಮತ್ತು ಕೈ ಕಾಲುಗಳಿಗೆ ರಕ್ತಗಾಯಗಳಾಗಿದ್ದು, ದ್ವಿಚಕ್ರ ವಾಹನದ ಸವಾರನಿಗೂ ಮುಖಕ್ಕೆ ಗಾಯಗಳಾಗಿದ್ದು, ಗಾಯಗಳಾಗಿದ್ದ ಇಬ್ಬರನ್ನು ನಾನು ಮತ್ತು ರವಣಪ್ಪ ರವರು ಉಪಚರಿಸಿದ್ದು. ನಂತರ ಅಲ್ಲಿಯೇ ಇದ್ದ ದ್ವಿಚಕ್ರ ವಾಹನದ ಮೊಂದಣಿ ಸಂಖ್ಯೆಯನ್ನು ನೋಡಲಾಗಿ ಎಪಿ-39 ಸಿಜಿ-4063 ನೀಲಿ ಮತ್ತು ಬಿಳಿ ಬಣ್ಣದ ಡಿಯೋ ದ್ವಿಚಕ್ರ ವಾಹನವಾಗಿರುತ್ತದೆ. ವಾಹನದ ಸವಾರನ ಬಗ್ಗೆ ವಿಚಾರಿಸಲಾಗಿ ಶ್ರೀನಿವಾಸ, ನರಸನ್ನಗಾರಿಪಲ್ಲಿ ಗ್ರಾಮ, ಕದರಿ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂದು ತಿಳಿಸಿದ್ದು. ನಂತರ ನಮ್ಮ ಅಣ್ಣ ಪೆದ್ದಮದ್ದಿರೆಡ್ಡಿ ರವರನ್ನು ಚಿಕಿತ್ಸೆಗಾಗಿ ಯಾವುದೋ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದು, ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು, ನಂತರ ಅಲ್ಲಿಂದ ಬೆಂಗಳೂರಿಗೆ ಕಳುಹಿಸಿಕೊಟ್ಟಿರುತ್ತಾರೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಅಣ್ಣನಿಗೆ ಡಿಕ್ಕಿ ಹೊಡೆಸಿ ಗಾಯ ಪಡಿಸಿದ ಎಪಿ-39 ಸಿಜಿ-4063  ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರನಾದ ಶ್ರೀನಿವಾಸ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 398/2021 ಕಲಂ. 279,337 ಐಪಿಸಿ :-

     ದಿನಾಂಕ: 10/09/2021 ರಂದು ಮದ್ಯಾಹ್ನ 12.00 ಗಂಟೆಗೆ ಅನಿಲ್ ಕುಮಾರ್.ಬಿ ಬಿನ್ ಬಸವರಾಜು.ಜಿ.ಎನ್, 35 ವರ್ಷ, ಚಾಲಕ ವೃತ್ತಿ, ಲಿಂಗಾಯುತ ಜನಾಂಗ, ಸ್ವಂತ ಗ್ರಾಮ: ಏನಿಗದಲೆ ಗ್ರಾಮ, ಚಿಂತಾಮಣಿ ತಾಲ್ಲೂಕು. ಹಾಲಿ ವಾಸ: ಭಟ್ರಹಳ್ಳಿ, ಕೆ.ಆರ್.ಪುರಂ, ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿಯೇ ವಾಸವಾಗಿರುತ್ತೇನೆ. ತಮ್ಮ ತಂದೆ ಬಸವರಾಜು.ಜಿ.ಎನ್ ಬಿನ್ ಲೇಟ್ ಚಿಕ್ಕನಂಜುಂಡಪ್ಪ, 55 ವರ್ಷ, ಎಲೆಕ್ಟ್ರೀಷಿಯನ್ ಕೆಲಸ, ಮತ್ತು ನಮ್ಮ ತಾಯಿ ಗಿರಿಜಮ್ಮ.ಬಿ ಕೊಂ ಬಸವರಾಜು.ಜಿ.ಎನ್, 48 ವರ್ಷ, ಗೃಹಣಿ ರವರು ಏನಿಗದಲೆ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಹೀಗಿರುವಾಗ ದಿನಾಂಕ: 07/09/2021 ರಂದು ತಮ್ಮ ತಂದೆ ತಾಯಿ ಕೆ.ಆರ್ ಪುರಕ್ಕೆ ಬರುವ ಸಲುವಾಗಿ ತಮ್ಮ ಬಾಬತ್ತು ಕೆಎ-03 ಜೆಜೆಡ್-3342 ನೊಂದಣಿ ಸಂಖ್ಯೆಯ ಎಕ್ಸ್ ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ ಮನೆಯನ್ನು ಬಿಟ್ಟು ಬಂದಿರುತ್ತಾರೆ. ಅದೇ ದಿನ ನಂತರ ಸಂಜೆ ಸುಮಾರು 4.02 ಗಂಟೆ ಸಮಯದಲ್ಲಿ ತಾನು ಧರ್ಮಸ್ಥಳದಲ್ಲಿದ್ದಾಗ ತನಗೆ ಯಾರೋ ವ್ಯಕ್ತಿ 9741549717 ಸಂಖ್ಯೆಯಿಂದ ಕರೆ ಮಾಡಿ ನಿಮ್ಮ ತಂದೆ ತಾಯಿಯವರಿಗೆ ಚಿಂತಾಮಣಿ ತಾಲ್ಲೂಕು, ಕಡಪ ಬೆಂಗಳೂರು ರಸ್ತೆಯ ಜೋಡಿಹೊಸಹಳ್ಳಿ ಗೇಟ್ ಬಳಿ ಅಪಘಾತವಾಗಿದ್ದು ನಾನು ನನ್ನ ಬಾಬತ್ತು ಕಾರಿನಲ್ಲಿ ಕೈವಾರ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ತಾನು ಕೂಡಲೇ ತನ್ನ ಅಕ್ಕ ಸುನಿತಾ ಕೊಂ ಮುನಿರಾಜು ರವರಿಗೆ ಸದರಿ ವಿಚಾರವನ್ನು ತಿಳಿಸಿ ಆಸ್ವತ್ರೆಗೆ ಹೋಗಿ ನೋಡುವಂತೆ ತಿಳಿಸಿರುತ್ತೇನೆ. ಆಗ ತನ್ನ ಅಕ್ಕ ಸುನಿತಾ ರವರು ಕೈವಾರ ಆಸ್ವತ್ರೆಗೆ ಬಂದು ತಮ್ಮ ತಂದೆ ತಾಯಿಯವರಿಗೆ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ವತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ನಂತರ ತಾನು ಅದೇ ದಿನ ಮದ್ಯ ರಾತ್ರಿ ಸುಮಾರು 1.30 ಗಂಟೆಗೆ ಸೆಂಟ್ ಜಾನ್ಸ್ ಆಸ್ವತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ತಮ್ಮ ತಂದೆಯವರಿಗೆ ತಲೆಗೆ, ಬಲ ಕಾಲಿಗೆ, ಬಲ ಭುಜಕ್ಕೆ ರಕ್ತಗಾಯವಾಗಿರುತ್ತೆ. ತಮ್ಮ ತಾಯಿಯವರಿಗೆ ಎಡಗಣ್ಣಿನ ಉಬ್ಬಿನ ಬಳಿ, ಎಡಗೈ ಬೆರಳುಗಳಿಗೆ ಮತ್ತು ಬೆನ್ನು ಮೂಳೆ ಬಳಿ ಗಾಯಗಳಾಗಿರುತ್ತೆ. ನಂತರ ತಾನು ಸದರಿ ಅಪಘಾತದ ಬಗ್ಗೆ ತಮ್ಮ ತಂದೆಯವರನ್ನು ವಿಚಾರ ಮಾಡಲಾಗಿ ತಾನು ಮತ್ತು ನಿಮ್ಮ ತಾಯಿ ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ಕಡಪ-ಬೆಂಗಳೂರು ರಸ್ತೆಯ ಜೋಡಿ ಹೋಸಹಳ್ಳಿ ಗೇಟ್ ಬಳಿ ಮೇಲ್ಕಂಡ ಕೆಎ-03 ಜೆಜೆಡ್-3342 ನೊಂದಣಿ ಸಂಖ್ಯೆಯ ಎಕ್ಸ್ ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಕೆ.ಆರ್.ಪುರಂ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ದ್ವಿಚಕ್ರ ವಾಹನದ ಹಿಂಬದಿಯಿಂದ ಬಂದ ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ದ್ವಿಚಕ್ರವಾಹವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ನಿಮ್ಮ ತಾಯಿ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿದ್ದು, ಆಗ ತಮ್ಮ ದ್ವಿಚಕ್ರ ವಾಹನಕ್ಕೆ ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ-03 ಎಸಿ-1381 ನೊಂದಣಿ ಸಂಖ್ಯೆ ಚವರ್ಲೇಟ್ ಕಾರು ಆಗಿರುತ್ತದೆ. ನಂತರ ರಸ್ತೆಯಲ್ಲಿ ಬರುತ್ತಿದ್ದ ಯಾರೋ ಸಾರ್ವಜನಿಕರು ಮತ್ತು ತಮಗೆ ಅಪಘಾತಪಡಿಸಿದ ಸದರಿ ಕಾರಿನ ಚಾಲಕನು ತಮ್ಮನ್ನು ಉಪಚರಿಸಿ ಅದೇ ಕಾರಿನಲ್ಲಿಯೇ ಕೈವಾರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಸದರಿ ಕಾರಿನ ಚಾಲಕ ತಮಗೆ ಅಪಘಾತವಾದ ಬಗ್ಗೆ ನಿನಗೆ ಕರೆ ಮಾಡಿ ತಿಳಿಸಿರುತ್ತಾನೆ ಎಂದು ತಿಳಿಸಿರುತ್ತಾರೆ. ಹಾಲಿ ತಮ್ಮ ತಂದೆ-ತಾಯಿ ಸೆಂಟ್ ಜಾಸ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ತಾನು ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತಮ್ಮ ತಂದೆ-ತಾಯಿಗೆ ಅಪಘಾತಪಡಿಸಿದ ಮೇಲ್ಕಂಡ ಕೆಎ-03 ಎಸಿ-1381 ನೊಂದಣಿ ಸಂಖ್ಯೆಯ ಚವರ್ಲೇಟ್ ಕಾರಿನ ಚಾಲಕನ (ಮೊ.ಸಂ.9741549717) ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಮೊ.ಸಂ. 223/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:01/09/2021 ರಂದು ಸಂಜೆ 6-00 ಗಂಟೆಗೆ ಮಾನ್ಯ ಪಿ.ಎಸ್. ಐ ಸಾಹೇಬರಾದ ವಿಜಯಕುಮಾರ್ ಕೆ.ಸಿ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಆರೋಪಿಯೊಂದಿಗೆ ನಿಢಿದ ಮೆಮೋ ಮೇಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01/09/2021 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯ ಕುಡುಮಲಕುಂಟೆ  ಗ್ರಾಮದಲ್ಲಿ, ಚಿನ್ನಪ್ಪ ಬಿನ್ ಲೇಟ್ ಅಂಜಿನಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಗಸ್ತಿನ ಪಿ.ಸಿ-312 ಸೋಮನಾಥ ಮಾಲಗಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಸಂಜೆ 4-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಸಿ.ಎನ್ ಚಿನ್ನಪ್ಪ ಬಿನ್ ಲೇಟ್ ಅಂಜಿನಪ್ಪ, 52 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಕುಡುಮಲಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 18 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 620 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 632.34/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 18  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.390/2021 ರಂತೆ ದಾಖಲಿಸಿಕೊಂಡಿರುತ್ತೆ. ದಿನಾಂಕ 09/09/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 223/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್-1965 ರಿತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 224/2021 ಕಲಂ. 32,34 KARNATAKA EXCISE ACT, 1965 :-

     ದಿನಾಂಕ:09/09/2021 ರಂದು ಫಿರ್ಯಾದುದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ. ವಿಜಯಕುಮಾರ್   ಪಿ.ಎಸ್.ಐ. ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ  ಸೂಚಿಸುವುದೇನೆಂದರೆ, ಈ ದಿನ  ದಿನಾಂಕ: 09-09-2021 ರಂದು  ಸಂಜೆ 7-00 ಗಂಟೆಯಲ್ಲಿ  ನಾನು ಸಿಬ್ಬಂದಿಯವರಾದ ಪಿ.ಸಿ. 512 ರಾಜಶೇಖರ್ ಮತ್ತು ಪಿ,ಸಿ, 179 ಶಿವಶೇಖರ್ ಚಾಲಕ ಎ.ಪಿ.ಸಿ.143 ಮಹೇಶ ರವರೊಂದಿಗೆ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ದೇವಗಾನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಇದೇ ಗ್ರಾಮದಲ್ಲಿ  ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಗಳು ಅಕ್ರಮವಾಗಿ ಯಾವುದೆ ಪರವಾನಿಗಿಯಿಲ್ಲದೇ ಮದ್ಯವನ್ನು  ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಯಾರೋ ಒಬ್ಬ  ಆಸಾಮಿ ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ತೆಗೆದುಕೊಂಡು ಬಂದು ಮತ್ತೊಬ್ಬ ಆಸಾಮಿಗೆ ಸಾಗಾಟ ಮಾಡಲು ಕೊಡುತ್ತಿದ್ದು, ಪೊಲೀಸ್ ವಾಹನ ಮತ್ತು ನಮ್ಮನ್ನು ಕಂಡು ಮದ್ಯವನ್ನು ಸಾಗಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಆಸಾಮಿ ರಸ್ತೆಯ ಪಕ್ಕದಲ್ಲಿಯೇ ಚೀಲವನ್ನು ಬಿಸಾಡಿ ಅಲ್ಲಿಂದ ಓಡಿಹೋದನು, ಮದ್ಯವನ್ನು ಸಾಗಿಸಲು  ತಂದು ಕೊಡುತ್ತಿದ್ದ ಹೆಂಗಸು ಅಲ್ಲಿಯೇ ಇದ್ದು, ನಂತರ ಬಿಸಾಡಿದ್ದ  ಪ್ಲಾಸ್ಟೀಕ್ ಚೀಲವನ್ನು  ಪಂಚರ ಸಮಕ್ಷಮದಲ್ಲಿ  ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 95 ಟೆಟ್ರಾ ಪಾಕೆಟ್ ಗಳು ಇದ್ದು ಇವುಗಳ ಒಟ್ಟು ಸಾಮರ್ಥ್ಯ 8 ಲೀಟರ್ 640  ಎಂ.ಎಲ್. ಆಗಿರುತ್ತೆ ,ಬೆಲೆ 3,372/-  ರೂ.ಗಳಾಗಿರುತ್ತೆ ಮತ್ತು 90 ಎಂ.ಎಲ್ ಸಾಮರ್ಥ್ಯದ  ORGINAL CHOICE ನ 84 ಟೆಟ್ರಾ ಪಾಕೆಟ್ ಗಳು ಇದ್ದು ಇವುಗಳ ಒಟ್ಟು ಸಾಮರ್ಥ್ಯ 7 ಲೀಟರ್ 560  ಎಂ.ಎಲ್. ಆಗಿರುತ್ತೆ , ಇವುಗಳ ಒಟ್ಟು ಬೆಲೆ 2,950/-  ರೂ.ಗಳಾಗಿರುತ್ತೆ.  ಅಲ್ಲಿಯೇ ಇದ್ದ ಹೆಂಗಸಿನ ಹೆಸರು ವಿಳಾಸವನ್ನು ಕೇಳಲಾಗಿ ಪಾರ್ವತಮ್ಮ @ ಕೊಂಡೂರಮ್ಮ 63 ವರ್ಷ, ವಕ್ಕಲಿಗರು, ದೇವಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು.ಎಂದು ತಿಳಿಸಿದ್ದು ರಾತ್ರಿ ಅವೇಳೆ ಆದ್ದರಿಂದ ಆರೋಪಿ ಪಾರ್ವತಮ್ಮ ರವರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ಸ್ಥಳದಲ್ಲೆ ಬಿಟ್ಟು ಬಂದಿರುತ್ತೆ. ನಂತರ ಸ್ಥಳದಿಂದ ಓಡಿಹೋದವನ ಹೆಸರು ಮತ್ತು ವಿಳಾಸ ಕೇಳಲಾಗಿ ಶ್ರೀನಿವಾಸರೆಡ್ಡಿ ಬಿನ್ ಲೇಟ್ ನಂಜರೆಡ್ಡಿ, 38 ವರ್ಷ, ವಕ್ಕಲಿಗರು, ದೇವಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ಸದರಿ ಆಸಾಮಿಗಳು ಯಾವುದೇ ಪರವಾನಗಿಯನ್ನು ಹೊಂದಿಲ್ಲದೇ ಅಕ್ರಮವಾಗಿ ಮದ್ಯವನ್ನು ಕಾಳ ಸಂತೆಯಲ್ಲಿ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾರೆಂದು ತಿಳಿದು ಬಂದಿರುತ್ತೆ. ಸ್ಥಳದಲ್ಲಿ ಸಂಜೆ 7-15  ಗಂಟೆಯಿಂದ 8-15  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 94 ಟೆಟ್ರಾ ಪಾಕೆಟ್ ಗಳು 2) ORGINAL CHOICE ನ 83 ಟೆಟ್ರಾ ಪಾಕೆಟ್ ಗಳು 3) ಒಂದು ಪ್ಲಾಸ್ಟಿಕ್ ಚೀಲ,4) HAY WARDS CHEERS  WHISKY 90 ಎಂ.ಎಲ್. ನ  1  ಟೆಟ್ರಾ ಪಾಕೆಟ್ ಅನ್ನು  ಹಾಗೂ 5) ORGINAL CHOICE ನ 1 ಟೆಟ್ರಾ ಪಾಕೆಟ್ ಅನ್ನು ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  “AB” ಎಂಬ ಅಕ್ಷರಗಳಿಂದ ಸೀಲು ಮಾಡಿ ವಶಪಡಿಸಿಕೊಂಡು, ಠಾಣೆಗೆ ರಾತ್ರಿ 8-45 ಗಂಟೆಗೆ  ವಾಪಸ್ಸು ಬಂದಿದ್ದು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ದೂರಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 211/2021 ಕಲಂ. 15(A),32(3) KARNATAKA EXCISE ACT, 1965 :-

     ಘನ ನ್ಯಾಯಾಲಯದ ಪಿಸಿ. 430, ಪ್ರದೀಪ ಎಂ.ಬಿ. ರವರು ಎನ್ ಸಿ ಆರ್ ನಂ: 271/2021 ರಲ್ಲಿ ಪ್ರಕರಣ ದಾಖಲಿಸಿಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ನಂಜುಂಡಶರ್ಮ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಗುಡಿಬಂಡೆ ಪೊಲೀಸ್ ಠಾಣೆ ರವರು ಮದ್ಯಾಹ್ನ 1-30 ಠಾಣೆಗೆ ಹಾಜರಾಗಿ ಮಾಲಿನಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/09/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ತಾನು ಮತ್ತು ಪಿ.ಸಿ. 141 ಶ್ರೀ ಸಂತೋಷ್ ಕುಮಾರ್ ರವರು ಗುಡಿಬಂಡೆ ತಾಲ್ಲೂಕು ಯಲ್ಲೋಡು ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಪಿ.ಸಿ. 141 ಶ್ರೀ ಸಂತೋಷ್ ಕುಮಾರ್ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ  ತಾಲ್ಲೂಕು ಯಲ್ಲೋಡು ಗ್ರಾಮದ ಬುಳ್ಳಸಂದ್ರ ರಸ್ತೆಯಲ್ಲಿ ಮೋರಿ ಬಳಿ ಯಾರೊ ಒಬ್ಬ ಆಸಾಮಿ  ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಅವರವರೊಂದಿಗೆ ದ್ವಿಚಕ್ರವಾಹನದಲ್ಲಿ ಯಲ್ಲೋಡು ಗ್ರಾಮದ ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 11-15 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಬುಳ್ಳಸಂದ್ರ ರಸ್ತೆಯಲ್ಲಿನ ಮೋರಿಕಿಂತ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶಿವಾರೆಡ್ಡಿ ಬಿನ್ ಲೇಟ್ ಮಲ್ಲಪ್ಪ 67 ವರ್ಷ, ವಕ್ಕಲಿಗ ಜನಾಂಗ, ಕೂಲಿ ಕೆಲಸ ಕೋಟಪ್ಪನಹಳ್ಳಿ ಗ್ರಾಮ ನಗರಗೆರೆ ಹೋಬಳಿ ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದನು. ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್, ಪರವಾನಿಗೆಯನ್ನು ಕೇಳಲಾಗಿ ಅಂತ ಯಾವುದೇ ದಾಖಲೆಗಳು ಇಲ್ಲ ಎಂತ ತಿಳಿಸಿದನು. ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡಿರುವುದು ಕಂಡು ಬಂತು. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀಯರ್ಸ್ ವಿಸ್ಕಿ ಯ 90 ಎಂ.ಎಲ್ ಸಾಮಥ್ರ್ಯದ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರುವ ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮಾಲಿನೊಂದಿಗೆ ಮದ್ಯಾಹ್ನ 1-00 ಘಂಟೆಗೆ ಠಾಣೆಗೆ ಬಂದು 1-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರ.ವ.ವರದಿಯನ್ನು ದಾಖಲಿಸಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 212/2021 ಕಲಂ. 78(1)(a)(iii) KARNATAKA POLICE ACT, 1963 :-

     ಘನ ನ್ಯಾಯಾಲಯದ ಪಿಸಿ. 430, ಪ್ರದೀಪ ಎಂ.ಬಿ. ರವರು ಎನ್ ಸಿ ಆರ್ ನಂ: 276/2021 ರಲ್ಲಿ ಪ್ರಕರಣ ದಾಖಲಿಸಿಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ: ದಿನಾಂಕ:08/09/2021 ರಂದು ಸಂಜೆ 5-00 ಘಂಟೆಗೆ ಪಿರ್ಯಾಧಿ ಠಾಣೆಯಲ್ಲಿ ಹಾಜರಾಗಿ ಆರೋಪಿ, ಮಾಲು, ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಮಶವೇನೆಂದರೆ, ಈ ದಿನ ದಿನಾಂಕ:08/09/2021 ರಂದು ಮದ್ಯಾಹ್ನ 2-45  ಗಂಟೆಯ ಸಮಯದಲ್ಲ್ಲಿ ತಾನು ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ಟೌನ್ ನ ದೊಡ್ಡ ಮಸೀದಿ ಹತ್ತಿರ ಮೋರಿಯ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿರವುದಾಗಿ ತಿಳಿಸಿದ್ದರ ಮೇರೆಗೆ ಸದರಿ ಮಾಹಿತಿಯಂತೆ ನಾನು ಜೊತೆಯಲ್ಲಿದ್ದ ಸಿಬ್ಬಂದಿಯಾದ ಹೆಚ್.ಸಿ.102 ಶ್ರೀ ಆನಂದ ರವರೊಂದಿಗೆ ದ್ವಿಚಕ್ರವಾಹನದಲ್ಲಿ ಗುಡಿಬಂಡೆ ಟೌನ್ ತಾಲ್ಲೂಕು ಕಛೇರಿ ಮುಂಭಾಗಕ್ಕೆ ಹೋಗಿ ಅಲ್ಲಿದ್ದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರನ್ನು ಮತ್ತು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದೊಡ್ಡ ಮಸೀದಿ ಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು 1/- ರೂ 70/- ರೂಗಳನ್ನು ನೀಡುವುದಾಗಿ ಮಟ್ಕಾ ಚೀಟಿ ಬರೆಯುತ್ತಾ ಹಣವನ್ನು ಪಣವನ್ನಾಗಿ ಇಡಲು ಸಾರ್ವಜನಿಕರಿಗೆ ಪ್ರೇರೇಪಿಸುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಚೀಟಿಯನ್ನು ಬರೆದು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿ ಆಸಾಮಿಯನ್ನು ಸುತ್ತುವರೆದು ಆತನನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಾಂಜಿನಪ್ಪ ಬಿನ್ ಲೇಟ್ ಗಂಗಯ್ಯ, 48 ವರ್ಷ, ಬಲಜಿಗ ಜನಾಂಗ, ಕೂಲಿ ಕೆಲಸ, ವಾಸ: ಮರಿಪಡುಗು ಗ್ರಾಮ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯ ಅಂಗಶೋಧನೆ ಮಾಡಿ ನೋಡಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್, 720/- ರೂಗಳು ನಗದು ಹಣ ಇತ್ತು. ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 3-15 ಗಂಟೆಯಿಂದ ಸಂಜೆ 4-15 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ಅಸಲು ಪಂಚನಾಮೆ, ಮಾಲುಗಳು ಹಾಗೂ ಆರೋಪಿಯೊಂದಿಗೆ ಠಾಣೆಗೆ ಸಂಜೆ 4-30 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 5-00 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಆರೋಪಿತನನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 159/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:09.09.2021 ರಂದು ಪಿರ್ಯಾದಿದಾರರಾದ ಎ.ಎಸ್.ಐ. ಮನೋಹರಬಾಬು ರವರು ಆರೋಪಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 09-09-2020 ರಂದು ನಾನು ಮತ್ತು ಠಾಣೆಯ ಸಿಬ್ಬಂದಿ ಪಿ.ಸಿ 311 ಗೂಳಪ್ಪ  ಮತ್ತು 336 ಉಮೇಶ ರವರೊಂದಿಗೆ ಗಣೇಶ ಹಬ್ಬದ ಪ್ರಯುಕ್ತ  ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ,ನನಗೆ ಮದ್ಯಾಹ್ನ 3-45 ಗಂಟೆಗೆ ಬಂದ ಮಾಹಿತಿ ಏನೇಂದರೆ ಚೀಲೇನಹಳ್ಳಿ  ಗ್ರಾಮದ  ಮುನಿರಾಜು ಬಿನ್ ಲೇ. ನರಸಪ್ಪ ಎಂಬುವರು  ತನ್ನ  ಹೋಟೆಲ್ ನ  ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ   ಸಂಜೆ 4-00 ಗಂಟೆಯ ಸಮಯಕ್ಕೆ ಚೀಲೇನಹಳ್ಳಿ  ಗ್ರಾಮದ  ಮುನಿರಾಜು ರವರ  ಹೋಟೆಲ್ ಬಳಿ  ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ನನ್ನ ಸುಬ್ಬಂದಿಯವರು  ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ  ಮುನಿರಾಜು ಬಿನ್ ಲೇ. ನರಸಪ್ಪ 60 ವರ್ಷ  ನಾಯಕ  ಹೋಟೆಲ್ ವ್ಯಾಪಾರ ಚೀಲೇನಹಳ್ಳಿ ಗ್ರಾಮ  ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವರ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 18 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು 4.ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ ಸಂಜೆ 4-00 ಗಂಟೆಯಿಂದ 5-00  ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 632/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ಮತ್ತು 1 ಲೀ 620 ಮೀಲಿ  ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಮುನಿರಾಜು ಬಿನ್ ಲೇ. ನರಸಪ್ಪ 60 ವರ್ಷ  ನಾಯಕ  ಹೋಟೆಲ್ ವ್ಯಾಪಾರ ಚೀಲೇನಹಳ್ಳಿ ಗ್ರಾಮ  ಗೌರೀಬಿದನೂರು ತಾಲ್ಲೂಕು  ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 160/2021 ಕಲಂ. 15(A),32(3) KARNATAKA EXCISE ACT, 1965 :-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:10/09/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಕನಗಾನಕೊಪ್ಪ ಗ್ರಾಮದ  ಶ್ರೀನಾಥ.ಕೆ.ಎಸ್ ಬಿನ್ ಶ್ರೀರಾಮಪ್ಪ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.28 ಅಶ್ವತ್ಥನಾಯ್ಕ ಹಾಗೂ  ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ  ಕನಗಾನಕೊಪ್ಪ ಗ್ರಾಮದ ಶ್ರೀನಾಥ.ಕೆ.ಎಸ್ ಬಿನ್ ಶ್ರೀರಾಮಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಶ್ರೀನಾಥ.ಕೆ.ಎಸ್ ಬಿನ್ ಶ್ರೀರಾಮಪ್ಪ, 33 ವರ್ಷ, ಈಡಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಕನಗಾನಕೊಪ್ಪ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಬೆಳಿಗ್ಗೆ 11-45 ಗಂಟೆಯಿಂದ 12-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 545/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಶ್ರೀನಾಥ.ಕೆ.ಎಸ್ ಬಿನ್ ಶ್ರೀರಾಮಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 13-00 ಗಂಟೆಗೆ ಠಾಣೆಗೆ ವಾಪಾಸ್ ಬಂದು 160/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ. 

ಇತ್ತೀಚಿನ ನವೀಕರಣ​ : 10-09-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080