ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.230/2021 ಕಲಂ. 395 ಐ.ಪಿ.ಸಿ :-

    ದಿನಾಂಕ:10/08/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಬಿನ್ ಲೇಟ್ ವೆಂಕಟರವಣಪ್ಪ, 30 ವರ್ಷ, ನಾಯಕರು, ಚಾಲಕ ವೃತ್ತಿ, ದೊಡ್ಡಮಲ್ಲಕರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿ ದೂರಿನ ಸಾರಾಂಶವೇನೆಂದರೆ, ನಾನು ಅಧಿತ್ಯಾ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿಯಲ್ಲಿ ಈಗ್ಗೆ ಸುಮಾರು 3 ತಿಂಗಳಿನಿಂದ ಚಾಲಕ ಕೆಲಸವನ್ನು ಮಾಡಿಕೊಂಡಿರುತ್ತೇನೆ, ದಿನಾಂಕ:09/08/2021 ರಂದು ನನಗೆ ನಮ್ಮ ಟ್ರಾವೆಲ್ಸ್ ಕಛೇರಿಯಿಂದ ಪೋನ್ ಮಾಡಿ ಕೆ ಎ 04 ಎಸಿ 4762 ಕ್ಯಾಂಟರ್ ವಾಹನಕ್ಕೆ ಮನೆಯ ಸಾಮಾನುಗಳು ಮತ್ತು 3 ದ್ವಿ ಚಕ್ರ ವಾಹನಗಳು ಲೋಡ್ ಆಗಿವೆ ಅವುಗಳನ್ನು ಹೈದ್ರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ಅನ್ ಲೋಡ್ ಮಾಡಿ ಬರಬೇಕಾಗಿದೆ, ನೀವು  ಕೆಲಸಕ್ಕೆ ಬನ್ನಿ ಎಂದು ತಿಳಿಸಿದರು, ಅದರಂತೆ ನಾನು ನಿನ್ನೆ ಸಂಜೆ 6:00 ಗಂಟೆಗೆ ಬೆಂಗಳೂರಿನ ಮಾರುತಹಳ್ಳಿ ಪಕ್ಕ ಇರುವ ಗುಂಜೂರು ಪಾಳ್ಯದಲ್ಲಿ ಇರುವ ನಮ್ಮ ಕಛೇರಿಗೆ ಹೋಗಿ ಸಂಜೆ 7:00 ಗಂಟೆಗೆ ಕ್ಯಾಂಟರ್ ವಾಹನವನ್ನು ತೆಗೆದುಕೊಂಡು ಹೈದ್ರಾಬಾದ್ಗೆ ಹೋಗಲು ಬಂದಿರುತ್ತೇನೆ, ವಾಹನದಲ್ಲಿರುವ ಸಾಮಾನುಗಳನ್ನು ಡಿಲಿವರಿ ಮಾಡಲು ಹಾಗೂ ಕ್ಲೀನರ್ ಕೆಲಸಕ್ಕಾಗಿ  ನನ್ನ ಸಹಾಯಕ್ಕೆ 1) ಅಶೋಕ ಕುಮಾರ್ ಬಿನ್ ಲೇಟ್ ಕೃಷ್ಣಪ್ಪ 2) ನರಸಿಂಹಮೂರ್ತಿ ಬಿನ್ ನರಸಿಂಹಪ್ಪ ರವರು ಬಂದಿರುತ್ತಾರೆ, ರಾತ್ರಿ ಸುಮಾರು 11:30 ಗಂಟೆಗೆ ಬಾಗೇಪಲ್ಲಿ ಟೋಲ್ಗೆ ಬಂದಿದ್ದು, ಟೋಲ್ ಬಿಟ್ಟು ಮುಂದೆ ಆರ್ ಟಿ ಓ ಚೆಕ್ ಪೋಸ್ಟ್  ಸಮೀಪ ಹೋಗುತ್ತಿದ್ದಾಗ, ಸುಮಾರು 5-6 ಜನರು ಬಂದು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು ನಾನು ವಾಹನವನ್ನು ಎಡಗಡೆಗೆ ಹಾಕಿ ನೋಡಲಾಗಿ ಈ ಹಿಂದೆ ನಮ್ಮ ಕಂಪನಿಯಲ್ಲಿ ಚಾಲಕ ಕೆಲಸ ಮಾಡುತ್ತಿದ್ದ ಗಂಗರಾಜು ಬಿನ್ ವೆಂಕಟಸ್ವಾಮಿ ಮತ್ತು ಇತರೆ 5 ಜನರು ಇದ್ದು, ತಕ್ಷಣ ಗಂಗರಾಜು ನನ್ನ ಬಳಿ ಬಂದು ನನ್ನನ್ನು ಪಕ್ಕಕ್ಕೆ ತಳ್ಳಿ ಕ್ಯಾಂಟರ್ ವಾಹನದ ಕೀಯನ್ನು ಕಿತ್ತುಕೊಂಡನು, ನಾನು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೊಟ್ಟಿದ್ದೀನಿ, ಸ್ಟೇಷನ್ ಹತ್ತಿರ ನಡಿ ಮಾತನಾಡೋಣ ಎಂದು ಕ್ಯಾಂಟರ್ ವಾಹನದಲ್ಲಿ ಕುಳಿತುಕೊಂಡನು ಅಷ್ಟೋತ್ತಿಗೆ ಇನ್ನೋವಾ ಕಾರು ಅಲ್ಲಿಗೆ ಬಂದಿದ್ದು, ಅಲ್ಲಿದ್ದ ಉಳಿದ 5 ಜನ ಅವರ ಕಡೆಯವರು ಅದರಲ್ಲಿ ಕುಳಿತುಕೊಂಡರು, ಗಂಗರಾಜನು ನನ್ನನ್ನು ಪಕ್ಕಕ್ಕೆ ತಳ್ಳಿ ಕ್ಯಾಂಟರ್ನ್ನು ಆತನೇ ಚಾಲನೆ ಮಾಡಿಕೊಂಡು ಮಡಕಶಿರಾ ತಾಲ್ಲೂಕು ಮತ್ತು ಮಂಡಲಂ ಕೇತಪ್ಪಲ್ಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅವರ ಮನೆಯ ಬಳಿ ನಿಲ್ಲಿಸಿಕೊಂಡನು, ಇನ್ನೂವಾ ಕಾರು ನಮ್ಮನ್ನು ಹಿಂಭಾಲಿಸುತ್ತಾ ಅಲ್ಲಿಗೆ ಬಂತು, ನಂತರ ಗಂಗರಾಜು ನಾನು ಪೊಲೀಸನವರ ಹತ್ತಿರ ಮಾತನಾಡಿಕೊಳ್ಳುತ್ತೇನೆ ಇಲ್ಲೇ ಇರಿ ಎಂದು ಹೇಳಿದನು, ನಾನು ಮತ್ತು ನನ್ನ ಜೊತೆ ಇದ್ದ ಇಬ್ಬರೂ ಕ್ಯಾಂಟರ್ ವಾಹನದಲ್ಲಿಯೇ ಇದ್ದೆವು. ಕ್ಯಾಂಟರ್ ವಾಹನ ಮತ್ತು ಅದರಲ್ಲಿರುವ ಮಾಲುಗಳು ಸುಮಾರು 30,00,000/- ರೂ ಬೆಲೆ ಬಾಳುವವು ಆಗಿರುತ್ತವೆ.  ನಂತರ ನಾನು ನಡೆದ ಘಟನೆಯನ್ನು ನಮ್ಮ ಮಾಲೀಕರಾದ ಶರತ್ ಚಂದ್ರ ರವರಿಗೆ ಪೋನ್ ಮಾಡಿ ವಿಚಾರವನ್ನು ತಿಳಿಸಿರುತ್ತೇನೆ, ಅವರು ನಮ್ಮ ಕಂಪನಿಯ ಮ್ಯಾನೇಜರ್ ಆದ ಪಾರ್ಥ ಸಾರಧಿ ಬಿನ್ ಚೂಡಾನಂದ ರವರನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದು, ಅವರ ಜೊತೆಯಲ್ಲಿ ಬಂದು ತಡವಾಗಿ ಠಾಣೆಗೆ ದೂರನ್ನು ನೀಡುತ್ತಿದ್ದು, ಗಂಗರಾಜು ಮತ್ತು ಇತರೆಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 87 ಕೆ.ಪಿ ಆಕ್ಟ್ :-

    ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:09/08/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಬೇಟಿ ಕರ್ತವ್ಯದಲ್ಲಿ ಮುಂಗಾನಹಳ್ಳಿ ಗ್ರಾಮದಲ್ಲಿ ಇದ್ದಾಗ ಠಾಣಾ ವ್ಯಾಪ್ತಿಯ ಯನಮಲಪಾಡಿ ಗ್ರಾಮದ ಕೆರೆಯ ಅಂಗಳದಲ್ಲಿ ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಗೆ ಪೋನ್ ಮಾಡಿ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ, ಹೆಚ್.ಸಿ 176 ಶ್ರೀ.ಮುನಿರಾಜು, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿಸಿ 262 ಶ್ರೀ.ಅಂಬರೀಶ್, ಪಿ.ಸಿ 416 ಸಚಿನ್ ಕುಮಾರ್ ಬೋಲ್ಗೊಂಡ ರವರುಗಳನ್ನು ಮುಂಗಾನಹಳ್ಳಿ ಗ್ರಾಮದ ಬಳಿಗೆ ಬರಮಾಡಿಕೊಂಡು ನಾನು ಸಿಬ್ಬಂದಿಯೊಂದಿಗೆ ಯನಮಪಾಡಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯೊಂದಿಗೆ ನಾವುಗಳು ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನ 3-45 ಗಂಟೆಗೆ  ಯನಮಲಪಾಡಿ ಗ್ರಾಮದ ಕೆರೆಯ ಅಂಗಳಕ್ಕೆ ಹೋಗಿ ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನಾವುಗಳು ಸ್ವಲ್ಪ ದೂರ ಮುಂದೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯನಮಲಪಾಡಿ ಗ್ರಾಮದ ಕೆರೆಯ ಅಂಗಳದಲ್ಲಿ ಒಂದು ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ವೃತ್ತಾಕಾರದಲ್ಲಿ ಗುಂಪಾಗಿ ಕುಳಿತುಕೊಂಡು ಅಂದರ್ 100 ರೂ ಬಾಹರ್ 100 ರೂ ಎಂದು ಕೂಗುಗಳನ್ನು ಇಡುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಗುಂಪನ್ನು ಸುತ್ತುವರೆದು ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಸೂಚಿಸಿದರೂ ಸಹ ಸದರಿಯವರು ಓಡಿ ಹೋಗಲು ಯತ್ನಿಸಿದ್ದು ಅವರುಗಳನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು ಅವರುಗಳ ಹೆಸರು ಮತ್ತು ವಿಳಾಸಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಾಗಿ 1) ಶ್ರೀ.ಶಂಕರ ಬಿನ್ ವೆಂಕಟರವಣ, 30ವರ್ಷ, ಮರಾಠಿ ಜನಾಂಗ, ವ್ಯಾಪಾರ, ವರೋಳ್ಳಪಲ್ಲಿ ಗ್ರಾಮ, ತಂಬಾಲಪಲ್ಲಿ ತಾಲ್ಲೂಕು, ಬಿ.ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ, 2) ವೆಂಕಟರವಣ ಬಿನ್ ಲೇಟ್ ಕೋನಪ್ಪ, 35ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವರೋಳ್ಳಪಲ್ಲಿ ಗ್ರಾಮ, ತಂಬಾಲಪಲ್ಲಿ ತಾಲ್ಲೂಕು, ಬಿ.ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ, 3)ನರಸಿಂಹಮೂರ್ತಿ ಬಿನ್ ಲೇಟ್ ಈರಪ್ಪ, 32ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಯನಮಲಪಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು 4) ರಾಮುಲು ಬಿನ್ ವೆಂಕಟರವಣ, 22ವರ್ಷ, ಮರಾಟಿ ಜನಾಂಗ, ವ್ಯಾಪಾರ, ವರೋಳ್ಳಪಲ್ಲಿ ಗ್ರಾಮ, ತಂಬಾಲಪಲ್ಲಿ ತಾಲ್ಲೂಕು, ಬಿ.ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ, 5) ಚಾಂದ್ ಪಾಷ ಬಿನ್ ಲೇಟ್ ಲಾಲುಸಾಬ್, 45ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಯನಮಲಪಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು, 6) ಬಾಬಯ್ಯ ಬಿನ್ ವಲ್ಲಿಸಾಬ್, 37ವರ್ಷ, ಮುಸ್ಲಿಂ ಜನಾಂಗ, ಹಾಸಿಗೆ ಹೊಲಿಗೆ ಕೆಲಸ, ಯನಮಲಪಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 2360/- ರೂಗಳಿರುತ್ತೆ ನಂತರ ಇಸ್ಪೀಟ್ ಜೂಜಾಟವಾಡುತ್ತಿದ್ದ 6 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 2360 /- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 5-30 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 146/2021 ರಂತೆ ದಾಖಲಿಸಿಕೊಂಡಿರುತ್ತೆ. ಆರೋಪಿಗಳು ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಆಪ್ ಮುಖಾಂತರ ರವಾನಿಸಿಕೊಂಡು ಈ ದಿನ ದಿನಾಂಕ 10-08-2021 ರಂದು ಬೆಳಗ್ಗೆ 10.45 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ 108/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 15(A),32(3) ಕೆ.ಇ ಆಕ್ಟ್ :-

       ದಿನಾಂಕ: 09/08/2021 ರಂದು ರಾತ್ರಿ 7-30 ಗಂಟೆಯಲ್ಲಿ ಚಿಕ್ಕಬಳ್ಳಾಪುರ   ಉಪ  ವಿಭಾಗದ  ಮಾನ್ಯ ಡಿವೈಎಸ್ಪಿ ಸಾಹೇಬರವರ ಕಚೇರಿಯಲ್ಲಿ  ಕರ್ತವ್ಯ  ನಿರ್ವಹಿಸುತ್ತಿರುವ ಶ್ರೀ  ರಮೇಶ್  ಹೆಚ್.ಸಿ. 205    ರವರು ಠಾಣೆಗೆ ಹಾಜರಾಗಿ ನೀಡಿದ  ದೂರು ಮತ್ತು  ಹಾಜರು ಪಡಿಸಿದ  ಮಾಲು  ಹಾಗೂ ಆರೋಫಿಯನ್ನು  ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ದಿನಾಂಕ: 09/08/2021 ರಂದು  ಮಾನ್ಯ  ಪೊಲೀಸ್ ಉಪಾಧೀಕ್ಷಕರು  ಚಿಕ್ಕಬಳ್ಳಾಪುರ  ಉಪ ವಿಭಾಗ ಚಿಕ್ಕಬಳ್ಳಾಪುರ  ರವರು ಸಿಬ್ಬಂದಿಯಾದ ಹೆಚ್.ಸಿ. 205/ ಹೆಚ್.ಸಿ. 59 ರವರೊಂದಿಗೆ ಅಕ್ರಮ ಚಟುವಟಿಕೆಗಳ ಬಗ್ಗೆ  ಮಾಹಿತಿ ಸಂಗ್ರಹಿಸಲು ನೇಮಿಸಿದ್ದು ಮಾಹಿತಿಯಂತೆ ಸಿಬ್ಬಂದಿಯವರು ಸಂಜೆ 4-30  ಗಂಟೆಯಲ್ಲಿ  ಗಸ್ತಿನಲ್ಲಿದ್ದಾಗ  ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ತಿಪ್ಪೇನಹಳ್ಳಿ  ಗ್ರಾಮದ  ಆರೋಪಿ ರಮೇಶ ರವರು ಅವರ   ವಾಸದ ಮನೆಯ  ವರಂಡ ಮತ್ತು ಸಾರ್ವಜನಿಕರ ರಸ್ತೆಯ ಪಕ್ಕದಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ  ಮಾಹಿತಿಯಂತೆ ಸಂಜೆ  4-45 ಗಂಠಟೆಯಿಂದ 5-45 ಗಂಟೆಯವರೆವಿಗೆ ಪಂಚಾಯ್ತಿದಾರರ ಸಮಕ್ಷಮ  ದಾಳಿ ನಡೆಸಿ 807/-ರೂಪಾಯಿ ಬೆಲೆ  ಬಾಳುವ ಮದ್ಯವನ್ನು  ಅಮಾನತ್ತು ಪಡಿಸಿಕೊಂಡು ಈ ಬಗ್ಗೆ ಮಾಲು ಮತ್ತು ಆರೋಫಿಯನ್ನು  ದೂರಿನೊಂದಿಗೆ  ಠಾಣೆಯಲ್ಲಿ ಹಾಜರ್ ಪಡಿಸಿ  ಕಾನೂನು ರೀತ್ಯಾ ಕ್ರಮ   ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ ವರದಿ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.43/2021 ಕಲಂ. 279,337 ಐ.ಪಿ.ಸಿ :-

    ದಿನಾಂಕ;- 09-08-2021 ರಂದು  ಬೆಂಗಳೂರು ನಗರದ ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಬಂದ ಪೋನ ಕರೆಯ ಮೇರೆಗೆ  ಹೇಳಿಕೆಯನ್ನು ದಾಖಲಿಸಿಕೊಂಡು ಬರಲು ಹೆಚ್ ಸಿ 173 ರವರನ್ನು ನೇಮಕ ಮಾಡಿ  ಕಳುಹಿಸಿದ್ದು  ಸದರಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ  ರಾಮಾಂಜನೇಯ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದುಕೊಂಡು  ಠಾಣೆಗೆ ರಾತ್ರಿ 9-15 ಗಂಟೆಗೆ ಹಾಜರ್ಪಡಿಸಿದನ್ನು ಸ್ವೀಕರಿಸಿ  ಪರಿಶೀಲಿಸಲಾಗಿ  ಗಾಯಾಳು ಕೂಲಿಯಿಂದ ಜೀವನವನ್ನು ನಡೆಸುತ್ತಿದ್ದು  ಪಿರ್ಯಾದುದಾರರು ನಾಗೇಶ್ ರವರ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡು ಸದರಿ ಜಮೀನಿನಲ್ಲಿ ಟಮೋಟ ಬೆಳೆಯನ್ನಿಟ್ಟಿದ್ದು  ಟಮೋಟವನ್ನು ಕೋಲಾರಕ್ಕೆ ಹಾಕುತ್ತಿರುತ್ತೇನೆ,  ಅದರಂತೆ ದಿನಾಂಕ 08-08-2021 ರಂದು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಟಮೋಟವನ್ನು ರಾತ್ರಿ ಸುಮಾರು 8-00 ಗಂಟೆಗೆ ಮುತ್ಯಾಲಪ್ಪ ರವರ ಬಾಬತ್ತು ಕೆಎ-06-ಡಿ-8769 ನೊಂದಣಿಯ ಕ್ಯಾಂಟರಿಗೆ ತುಂಬಿಕೊಂಡು  ಚಾಲಕ ರುದ್ರಯ್ಯ ರವರೊಂದಿಗೆ  ಬಾಗೇಪಲ್ಲಿ ಮುಖಾಂತರ ದಿನಾಂಕ 09-08-2021 ರಂದು ಮುಂಜಾನೆ 1-30 ಗಂಟೆಯ ಸಮಯದಲ್ಲಿ  ಚಿಕ್ಕಬಳ್ಳಾಪುರ ಸಮೀಪದ ಕೊತ್ತನೂರು ಗೇಟಿನ ಬಳಿ ಎನ್ ಎಚ್-7 ರಸ್ತೆಯಲ್ಲಿ ಹೋಗುತ್ತಿದ್ದಾಗ ನಮ್ಮ  ಮುಂದೆ  UK-06-CB-5179   ಕಂಟೈನರ್ ಲಾರಿ ಹೋಗುತ್ತಿದ್ದು  ಅದರ ಚಾಲಕ ಯಾವುದೆ  ಸೂಚನೆಯನ್ನು ಕೊಡದೆ ಬಲಬದಿಯಿಂದ ಎಡಬದಿಗೆ ಸಡನ್ನಾಗಿ ವೇಗದಿಂದ ತಿರುಗಿಸಿದ ಕಾರಣ  ನಾವು ಹೋಗುತ್ತಿದ್ದ ವಾಹನ ಕಂಟೈನರ್ ಹಿಂಬಾಗ ತಗುಲಿ ನಮ್ಮ ಕ್ಯಾಂಟರ್ ಮುಂಬಾಗ ಜಖಂಗೊಂಡಿತು, ಈ ಅಪಘಾತದಲ್ಲಿ ನನಗೆ ಎರಡು ಕಾಲುಗಳಿಗೆ ಗಾಯಗಳಾಗಿ ಮೂಗೇಟುಗಳಾಗಿದ್ದು ಚಾಲಕ ರುದ್ಯಯ್ಯ ರವರಿಗೆ ಕಾಲುಗಳಿಗೆ ಗಾಯಗಳಾದವು,   ರಸ್ತೆಯಲ್ಲಿ ಹೋಗುತ್ತಿದ್ದ ಚಾಲಕರು 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ದ್ದು  ಅಲ್ಲಿಗೆ ಬಂದ ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರಗೆ ಕರೆತಂದು ದಾಖಲಿಸಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತೇನೆ, ಈ ಅಪಘಾತಕ್ಕೆ ಕಾರಣನನಾದ UK-06-CB-5179   ಕಂಟೈನರ್ ಲಾರಿ  ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸ ಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಈ ಪ್ರವವರದಿ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.105/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ:09/08/2021 ರಂದು ಮಧ್ಯಾಹ್ನ 15-45 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಅಮೂರತಿಮ್ಮನಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ರವರನ್ನು ಜೀಪ್ ಚಾಲಕರಾಗಿ ಹಾಗೂ  ಸಿ.ಪಿ.ಸಿ 09 ನಾರಾಯಣಸ್ವಾಮಿ ರವರನ್ನು ಕರೆದುಕೊಂಡು ಮಧ್ಯಾಹ್ನ 16-15 ಗಂಟೆಗೆ ಅಮೂರತಿಮ್ಮನಹಳ್ಳಿ  ಗ್ರಾಮಕ್ಕೆ ಹೋಗಿ ಮಾಹಿತಿದಾರರಿಂದ ಆಸಾಮಿಯ ಮತ್ತು ಸ್ಥಳದ ಬಗ್ಗೆ ಪುನಃ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಅಮೂರತಿಮ್ಮನಹಳ್ಳಿ ಗ್ರಾಮದ  ಶ್ರೀನಿವಾಸ ಬಿನ್ ಲೇಟ್ ನಾರಾಯಣಪ್ಪ ರವರ ಮನೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀನಿವಾಸ ರವರು ತನ್ನ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ಸಿಬ್ಬಂದಿಯವರು ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಶ್ರೀನಿವಾಸ ಬಿನ್ ಲೇಟ್ ನಾರಾಯಣಪ್ಪ.32 ವರ್ಷ, ಗಾರೆ ಕೆಲಸ, ಬೋವಿ ಜನಾಂಗ,ವಾಸ: ಅಮೂರತಿಮ್ಮನಹಳ್ಳಿ ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:9902501839 ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  14 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1260 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 491.82 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ  3 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30 ಗಂಟೆಯಿಂದ ಸಂಜೆ 17-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ, ಆಸಾಮಿಯೊಂದಿಗೆ ಸಂಜೆ 18-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:105/2021 ಕಲಂ:15(A),32(3) K E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.187/2021 ಕಲಂ. 87 ಕೆ.ಪಿ  ಆಕ್ಟ್ :-

       ದಿನಾಂಕ:08/08/2021 ರಂದು ಸಂಜೆ 5-45 ಗಂಟೆಗೆ ಮಾನ್ಯ ಪಿ.ಎಸ್.ಐ ವಿಜಯಕುಮಾರ್. ಕೆ.ಸಿ ರವರು ಮಾಲುಗಳು, ಆಸಾಮಿಗಳನ್ನು, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೇಮೋವಿನ ಸಾರಾಂಶವೇನೆಂದರೆ,  ಈ ದಿನ ದಿನಾಂಕ:08/08/2021  ರಂದು  ಮದ್ಯಾಹ್ನ 3-30  ಗಂಟೆಯಲ್ಲಿ  ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಮಗಾನಹಳ್ಳಿ ಗ್ರಾಮದ ಕುಮದ್ವತಿ ನದಿ ದಡದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಸಿ.ಪಿ.ಸಿ-512 ರಾಜಶೇಖರ, ಸಿ.ಪಿ.ಸಿ- 582 ಮಂಜುನಾಥ ಕಾಲೇಳ, ಸಿ.ಪಿ.ಸಿ-518 ಆನಂದ,  ಸಿ.ಪಿ.ಸಿ.579 ಚೇತನ್  ಹಾಗೂ ಚಾಲಕ ಎ.ಪಿ.ಸಿ- 143 ಮಹೇಶ್ ರವರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಕಾಮಗಾನಹಳ್ಳಿ ಗ್ರಾಮಕ್ಕೆ ಸಾಯಂಕಾಲ 4-00  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-538 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಕಾಮಗಾನಹಳ್ಳಿ ಗ್ರಾಮದ ಕುಮದ್ವತಿ ನದಿ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಕಾಮಗಾನಹಳ್ಳಿ ಗ್ರಾಮದ ಕುಮದ್ವತಿ ನದಿ ದಡದಲ್ಲಿ  ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು ಮೇಲೆ ಎದ್ದೇಳದಂತೆ ಸೂಚಿಸಿದರೂ ಕೆಲವರು ಸ್ಥಳದಿಂದ ಓಡಿಹೋಗಿದ್ದು, ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸವನ್ನು ಕೆಳಲಾಗಿ 1) ಕೆ.ನಂಜುಂಡರೆಡ್ಡಿ ಬಿನ್ ಲೇಟ್ ಕೊಂಡಪ್ಪ, 68 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ ಕಲ್ಲಿನಾಯಕನಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರೀಬಿದನೂರು ತಾಲ್ಲೂಕು, 2) ಶ್ರೀನಿವಾಸ @ ಸೀನಪ್ಪ ಬಿನ್ ಲೇಟ್ ಗಂಗಯ್ಯ, 66 ವರ್ಷ, ಬಲಜಿಗರು, ತರಕಾರಿ ವ್ಯಾಪಾರ, ವಾಸ ನದಿಗಡ್ಡೆ, ಆಂಜನಯ್ಯ ಸ್ವಾಮಿ ದೇವಸ್ಥಾನ ಸಮೀಪ, ಗೌರೀಬಿದನೂರು ಟೌನ್, 3) ಶಾಂತಪ್ಪ ಬಿನ್ ಲೇಟ್ ರಾಮಪ್ಪ, 47 ವರ್ಷ, ಈಡಿಗರು, ಸೆಕ್ಯೂರಿಟಿ ಕೆಲಸ, ವಾಸ ತೊಂಡೇಬಾವಿ ಗ್ರಾಮ, ಮತ್ತು ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ, ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ  ತಿಳಿಬಂದಿರುವುದಿಲ್ಲ, ಜೂಜಾಟಕ್ಕೆ ಉಪಯೋಗಿಸಿದ್ದ ದ್ವಿ ಚಕ್ರವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟಿದ್ದು ಪಂಚರ ಸಮಕ್ಷಮ ಪರಿಶೀಲಿಸಲಾಗಿ 1) KA-40, EE-5893,  ಹೀರೋ ಸ್ಪಲೆಂಡರ್ ಪ್ಲಸ್, 2) KA-40, Y-1884  ಪ್ಯಾಷನ್ ಪ್ರೋ, 3) KA-02, HA-7888 ಟಿ.ವಿ.ಎಸ್ ವಿಕ್ಟರ್, 4) KA-40, EE-0827 ಡಿಯೋ, 5) KA-43, U-9335 ಡಿಯೋ, ಹಾಗೂ  6) ನಂಬರ್ ಇಲ್ಲದ JF39E7-4016919 ಇಂಜಿನ್ ನಂಬರ್ ಇರುವ ಹೊಸ ಡಿಯೋ ಹಳದಿ ಬಣ್ಣದ ದ್ವಿ ಚಕ್ರವಾಹನಗಳು ಇದ್ದು, ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 8,500/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಸಾಯಂಕಾಲ 4-15 ಗಂಟೆಯಿಂದ    5-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸಂಜೆ 5-45 ಠಾಣೆಗೆ ಠಾಣೆಗೆ ವಾಪಸ್ ಬಂದು ಈ ಮೆಮೋನೊಂದಿಗೆ ಮೇಲ್ಕಂಡ ಮಾಲುಗಳು, ಆಸಾಮಿಗಳನ್ನು ಮತ್ತು ಅಸಲು ಪಂಚನಾಮೆಯನ್ನು ನೀಡುತ್ತಿದ್ದು  ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.354/2021 ರಂತೆ ದಾಖಲಿಸಿಕೊಂಡಿರುತ್ತೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಆರೋಪಿಗಳ ವಿರುದ್ದ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುವುದಾಗಿದೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 15(A),32(3) ಕೆ.ಇ ಆಕ್ಟ್ :-

    ದಿನಾಂಕ:10/08/2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:10-08-2021 ರಂದು  ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-169 ರಮೇಶ ಮತ್ತು ಮಹಿಳಾ ಪಿಸಿ-164 ಶ್ರೀಮತಿ ರತ್ನಮ್ಮ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಸುಲ್ತಾನಪೇಟೆ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮೊಡುಕುಹೊಸಹಳ್ಳಿ ಗ್ರಾಮದ ಮಧು ಬಿನ್ ನಂಜೇಗೌಡ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಅಂಗಡಿಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಮೊಡುಕುಹೊಸಹಳ್ಳಿ ಗ್ರಾಮದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 11:25 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮಧು ಬಿನ್ ನಂಜೇಗೌಡ, 25 ವರ್ಷ, ಒಕ್ಕಲಿಗರು, ಅಂಗಡಿಯ ವ್ಯಾಪಾರ, ವಾಸ: ಮೊಡುಕುಹೊಸಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 10 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 10 ಟೆಟ್ರಾ ಪ್ಯಾಕೇಟುಗಳ ಬೆಲೆ 351ರೂಪಾಯಿ ಆಗಿದ್ದು ಓಟ್ಟು ಮದ್ಯ 900 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10:30 ಗಂಟೆಯಿಂದ ಬೆಳಿಗ್ಗೆ 11:10 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ:10/08/2021 ರಂದು ಮದ್ಯಾಹ್ನ 1:15 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:10-08-2021 ರಂದು  ಬೆಳಿಗ್ಗೆ  ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವ ಮೂರ್ತಿ ಮತ್ತು ಮಪಿಸಿ-164 ರತ್ನಮ್ಮ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಡಕಹೋಸಹಳ್ಳಿ ಗ್ರಾಮದ ಶ್ರೀಮತಿ ರತ್ನಮ್ಮ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಚಿಲ್ಲರೆ ಅಂಗಡಿ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ನಂದಿ ಗ್ರಾಮದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 12:05 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಶ್ರೀಮತಿ ರತ್ನಮ್ಮ ಕೋಂ ಲೇಟ್ ನಂಜೇಗೌಡ, 42 ವರ್ಷ,ವಕ್ಕಲಿಗರು, ಮಡಕಹೋಸಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 15 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 15 ಟೆಟ್ರಾ ಪ್ಯಾಕೇಟುಗಳ ಬೆಲೆ 526 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 350 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 12:10 ಗಂಟೆಯಿಂದ ಮದ್ಯಾಹ್ನ 12:50 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.261/2021 ಕಲಂ. 447,341,504,506 ಐ.ಪಿ.ಸಿ:-

     ದಿನಾಂಕ:09-08-2021 ರಂದು ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ.ಜಿ.ಸುಮಿತ್ರ ಕೋಂ ಮಂಜುನಾಥ.ಹೆಚ್, ಸುಮಾರು 38 ವರ್ಷ, ವಾಸ:ಆನೂರು  ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಆನೂರು ಗ್ರಾಮದ ಸರ್ವೆ ನಂ:111 ರಲ್ಲಿ  5 ಎಕರೆ 16 ಗುಂಟೆ ಜಮೀನಿದ್ದು ಸದರಿ ಜಮೀನು ತನ್ನ ಪತಿ ಮಂಜುನಾಥ ರವರ ಪಿತ್ರಾರ್ಜಿತ ಸ್ವತ್ತಾಗಿರುತ್ತದೆ, ಸದರಿ ಸ್ವತ್ತಿನಲ್ಲಿ ಗೋಡಂಬಿ ಗಿಡಗಳನ್ನು ಹಾಕಿದ್ದು ಉಳಿದ ಜಮೀನಿನಲ್ಲಿ ಸಹ ಗೋಡಂಬಿ ಗಿಡಗಳನ್ನು ಹಾಕಲು ಸಿದ್ದತೆ ಮಾಡಿಕೊಂಡಿದ್ದು, ಈ ಜಮೀನಿನ ಪಹಣಿ ಖಾತೆ ಮ್ಯೂಟೇಷನ್, ಇ.ಸಿ ಎಲ್ಲಾ ದಾಖಲಾತಿಗಳು  ತನ್ನ ಪತಿಯ ಹೆಸರಿನಲ್ಲಿದ್ದ  ತಾವೇ ಸ್ವಾದೀನಾನುಭವದಲ್ಲಿರುತ್ತಾರೆ. ಅಲ್ಲದೇ ಸದರಿ ಜಮೀನಿನ ಮೇಲೆ ಶಿಡ್ಲಘಟ್ಟ ರೇಷ್ಮೆ ಬೆಳೆಗಾರರ ರೈತರ ಸೇವಾ ನಿಯಮಿತಿ ಬ್ಯಾಂಕಿನಿಂದ 2,50,000/- ರೂ ಸಾಲ ಸಹ ಪಡೆದುಕೊಂಡಿರುತ್ತಾರೆ, ಶ್ರೀಮತಿ ಪಾರ್ವತಮ್ಮ ಕೋಂ ಲೇಟ್ ಮನೋಹರ ರವರು  ಈ ಜಮೀನು  ತಮ್ಮದೆಂದು ಈ ಹಿಂದೆ 2-3 ಬಾರಿ ತನ್ನ ಹಾಗೂ ತನ್ನ ಪತಿಯ ಮೇಲೆ ಗಲಾಟೆ ಮಾಡಿದ್ದು, ಈ ಬಗ್ಗೆ ಠಾಣೆಯಲ್ಲಿ ಪರಸ್ಪರರ ಮೇಲೆ ಎನ್.ಸಿ.ಆರ್ ದೂರು ದಾಖಲಾಗಿರುತ್ತದೆ, ಅ ಸಮಯದಲ್ಲಿ ತಾವು ಅವರ ತಂಟೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದು ಆಕೆ ಸಹ ತಮ್ಮ ತಂಟೆಗೆ ಬರುವುದಿಲ್ಲ ಎಂದು ಠಾಣೆಯಲ್ಲಿ ಹೇಳಿಕೆ ನೀಡಿರುತ್ತಾರೆ, ಈಗಾಗಲೇ ಶ್ರೀಮತಿ ಪಾರ್ವತಮ್ಮ ರವರು ಸದರಿ ಸ್ವತ್ತಿನ ಮೇಲೆ ಸಿವಿಲ್ ದಾವೆ ಹಾಕಿದ್ದು ಒ.ಎಸ್.ನಂ:355/15 ರಂತೆ ವಿಚಾರಣೆಯಲ್ಲಿರುತ್ತದೆ. ಹೀಗಿರುವಲ್ಲಿ ದಿನಾಂಕ:07-08-2021 ರಂದು ಮದ್ಯಾಹ್ನ ಸುಮಾರು 1-15 ಗಂಟೆ ಸಮಯದಲ್ಲಿ ತಾನು ಹಾಗೂ  ತನ್ನ ಪತಿ ಸದರಿ ಸ್ವತ್ತಿನಲ್ಲಿರಬೇಕಾದರೆ ಪಾರ್ವತಮ್ಮ ರವರು ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿ ಸ್ವತ್ತಿನಲ್ಲಿ ಕೆಲಸ ಮಾಡುತ್ತಿದ್ದ ತಮ್ಮನ್ನು ತಡೆದು ಈ ಜಾಗ ನಮ್ಮದು ಇಲ್ಲಿಂದ ಜಾಗ ಖಾಲಿ ಮಾಡುವಂತೆ ಇಲ್ಲದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೇವರ್ಸಿಗಳು, ಲೋಪರ್ ಗಳೆಂದು ಕೆಟ್ಟದಾಗಿ ಬೈದು ಬೆದರಿಕೆ ಹಾಕಿರುತ್ತಾರೆ.ಶ್ರೀಮತಿ ಪಾರ್ವತಮ್ಮ ರವರ ಹೆಸರಿನಲ್ಲಿ ಈ ಮೇಲ್ಕಂಡ ಸ್ವತ್ತಿಗೆ ಸಂಬಂದಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದಿದ್ದರು ಸಹ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿ ತಮ್ಮನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ಪಾರ್ವತಮ್ಮ ರವರ ಮೇಲೆ ಕೇಸು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:261/2021 ಕಲಂ:447,341,504,506 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 10-08-2021 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080