ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 182/2021 ಕಲಂ. (KARNTAKA PREVENTION OF COW SLANGHTER & CATTLE PREVENTION ACT-1964 U/s 11,8,9 ; PREVENTION OF CRUELTY TO ANIMALS ACT, 1960 U/s 11 ; IPC 1860 U/s 429:-

  ದಿನಾಂಕ: 09-07-2021 ಬೆಳಿಗ್ಗೆ 6:50 ಗಂಟೆಗೆ ಶ್ರೀ.ನಾಗರಾಜು ಪೊಲೀಸ್ ಇನ್ಸ್ ಪೆಕ್ಟರ್ , ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 09/07/2021 ರಂದು ಬೆಳಿಗಿನ ಜಾವ ನಾನು ಮತ್ತು ಅಪರಾಧ ದಳ ಸಿಬ್ಬಂದಿಯವರಾದ ಹೆಚ್.ಸಿ-156 ನಟರಾಜ್, ಪಿಸಿ-278 ಶಬ್ಬೀರ್ ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಹೈದ್ರಾಬಾದ್ ಕಡೆಯಿಂದ ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಿಕೊಂಡು ಬರುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಮಾಹಿತಿ ಮೇರೆಗೆ ಬಾಗೇಪಲ್ಲಿ ಟೋಲ್ ಪ್ಲಾಜಾ  ಬಳಿ ಹೋಗಿ ಕಾಯುತ್ತಿದ್ದಾಗ ಬೆಳಗಿನ ಜಾವ ಸುಮಾರು 5-00 ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ ಕೆ.ಎ-40-ಎ-9508 ನೊಂದಣಿ ಸಂಖ್ಯೆಯ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಬರುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಯವರಾದ ಪಿಸಿ-278 ಶಬ್ಬೀರ್ ರವರು ಹಿಂಬಾಲಿಸಿ ಹಿಡಿದುಕೊಂಡು ಬಂದು ಹಾಜರುಪಡಿಸಿದವರನ್ನು ವಿಚಾರಿಸಲಾಗಿ 1.ಬಾಬಾಜಾನ್ ಬಿನ್ ದಸ್ತಗಿರಿ ಸಾಬ್, 30 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ವಾಸ ಗೋರೇಂಟ್ಲ ಟೌನ್ , ಹಿಂದೂಪುರ ತಾಲ್ಲೂಕು ಮತ್ತು ವಾಹನದಲ್ಲಿದ್ದ ಇನ್ನೂಬ್ಬ ಆಸಾಮಿಯನ್ನು ವಿಚಾರಿಸಲಾಗಿ ಬಾಬಾಜಾನ್ ಬಿನ್ ಅಬ್ದುಲ್ ಸಾಬ್, 45 ವರ್ಷ, ಮಸ್ಲಿಂ ಜನಾಂಗ, ಕ್ಲೀನರ್ ಕೆಲಸ, ವಾಸ ಬೂದಲಿ ಚಟ್ಟಪಲ್ಲಿ ಗ್ರಾಮ, ಚಿಲ್ಲಮತ್ತೂರು ಮಂಡಲ್ , ಹಿಂದೂಪುರ ತಾಲ್ಲೂಕು  ಎಂದು ತಿಳಿಸಿರುತ್ತಾರೆ. ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ವಾಹನವನ್ನು ಪರಿಶೀಲಿಸಲಾಗಿ 5 ಹಸುಗಳು ಮತ್ತು ಒಂದು ಎತ್ತು ಇದ್ದು  ಜಾನುವಾರುಗಳನ್ನು ಇಕ್ಕಟಿನಲ್ಲಿ  ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು, ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ತುಂಬಿರುವ ಕೆ.ಎ-40-ಎ-9508 ನೊಂದಣಿ ಸಂಖ್ಯೆಯ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳನ್ನು ಕೆ.ಎ-40-ಎ-9508 ನೊಂದಣಿ ಸಂಖ್ಯೆಯ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ಕ್ರಮವನ್ನು ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 183/2021 ಕಲಂ. KARNTAKA PREVENTION OF COW SLANGHTER & CATTLE PREVENTION ACT-1964 U/s 11,8,9 ; PREVENTION OF CRUELTY TO ANIMALS ACT, 1960 U/s 11 ; IPC 1860 U/s 429:-

  ದಿನಾಂಕ; 09/07/2021 ರಂದು ಬೆಳಿಗ್ಗೆ 6.50 ಗಂಟೆಗೆ  ಪಿ.ಎಸ್.ಐ ಗೋಪಾಲರೆಡ್ಡಿ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:09/07/2021 ರಂದು ಬೆಳಿಗ್ಗೆ 6:15 ಗಂಟೆಯಲ್ಲಿ ನಾನು ಮತ್ತು ಅಪರಾದ ವಿಭಾಗದ  ಸಿಬ್ಬಂದಿಯಾದ ಶಂಕರರೆಡ್ಡಿ ಹೆಚ್.ಸಿ 103 ಮತ್ತು ಅರುಣ್ ಪಿಸಿ-18 ರವರೊಂದಿಗೆ ಗಸ್ತು ಮಾಡುತ್ತಿದ್ದಾಗ, ಆಂದ್ರಪ್ರದೇಶ ರಾಜ್ಯದ ಕಡೆಯಿಂದ ಟಾಟಾ 407 ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಅಮಾನವೀಯವಾಗಿ ಕ್ರೂರತನದಿಂದ ಜಾನುವಾರಗಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳು ಬಾಗೇಪಲ್ಲಿ ತಾಲ್ಲೂಕು ಟೋಲ್ ಪ್ಲಾಜಾ ಬಳಿ ಎನ್ ಹೆಚ್-44 ರಸ್ತೆಯಲ್ಲಿ ಕಾಯುತ್ತಿದ್ದಾಗ ಬೆಳಿಗ್ಗೆ ಸುಮಾರು 6.30 ಗಂಟೆಯಲ್ಲಿ ಆಂದ್ರಪ್ರದೇಶದ ಒಂದು ಟಾಟಾ 407 ವಾಹನ ಬಂದಿದ್ದು ಪರಿಶೀಲಿಸಲಾಗಿ ವಾಹನದ ನೋಂದಣಿ ಸಂಖ್ಯೆ ಎಪಿ 02 ಯು 1871 ಆಗಿರುತ್ತೆ. ವಾಹನದ ಹಿಂಬದಿಯ ಟಾರ್ಪಲ್ ತೆಗೆದು ಪರಿಶೀಲಿಸಲಾಗಿ 6 ಎತ್ತುಗಳಿರುತ್ತವೆ. ಇವುಗಳನ್ನು ಒಂದರ ಪಕ್ಕ ಒಂದರಂತೆ ಕ್ಕಟ್ಟಿನಲ್ಲಿ ಅಮಾನವೀಯವಾಗಿ ಕ್ರೂರತನದಿಂದ ಹಗ್ಗಗಳಿಂದ ಕಟ್ಟಿಕೊಂಡು ಸಾಗಿಸುತ್ತಿದ್ದು ಸದರಿ ಚಾಲಕನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು 1.ರವಿ ಬಿನ್ ಲಕ್ಷ್ಮಣ್ಣ 36ವರ್ಷ, ವಡ್ಡಿ ಜನಾಂಗ, ಡ್ರೈವರ್ ಕೆಲಸ, ವಾಸ: ಕಮಲವಾಂಡ್ಲಪಲ್ಲಿ ಗ್ರಾಮ, ಗೋರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ. ಆಂದ್ರಪ್ರದೇಶ. ಎಂಬಂತೆ ತಿಳಿಸಿದ್ದು ಮತ್ತೊಬ್ಬ ಆಸಾಮಿ  ಹೆಸರು ವಿಳಾಸ ಕೇಳಲಾಗಿ 2.ಬಾಬು 48ವರ್ಷ, ಕುರುಬರು, ಕ್ಲೀನರ್ ಮತ್ತು ಕೂಲಿಕೆಲಸ, ವಾಸ:ಮಂಡಕ್ಕಿಭಟ್ಟಿ, ದಾವಣಗೆರೆ ಟೌನ್ ಎಂದು ತಿಳಿಸಿದ್ದು. ಚಾಲಕ ಮತ್ತು ಕ್ಲೀನರ್ ರವರನ್ನು ಜಾನುವಾರಗಳನ್ನು ಸಾಗಾಣಿಕೆ ಮಾಡಲು ಯಾವುದಾದರು ಪರವಾನಗಿ ಇದೆಯೆ ಎಂದು ಕೇಳಲಾಗಿ, ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಚಾಲಕ, ಕ್ಲೀನರ್, ವಾಹನ, ಮತ್ತು ಜಾನುವಾರಗಳನ್ನು ವಶಕ್ಕೆ ಪಡೆದು ವಾಹನ ಮತ್ತು 6 ಎತ್ತುಗಳನ್ನು ಠಾಣಾ ಮುಂಭಾಗದಲ್ಲಿ ನಿಲ್ಲಿಸಿದ್ದು ವಾಹನದ ಚಾಲಕ ಮತ್ತು ಕ್ಲೀನರ್ ನನ್ನ ಬೆಳಿಗ್ಗೆ 6.50 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದು ಮುಂದಿನ ಕ್ರಮಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 184/2021 ಕಲಂ.78(3) ಕೆ.ಪಿ ಆಕ್ಟ್:-

  ದಿನಾಂಕ-09-07-2021 ರಂದು ಮದ್ಯಾಹ್ನ 14-00 ಗಂಟೆಗೆ ಪಿ ಸಿ -235 ರವರು ಠಾಣಾ ಎನ್ ಸಿ ಆರ್ ನಂ;-180/2021 ರನ್ನು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ: 07/07/2021 ರಂದು ಸಂಜೆ 6.20 ಗಂಟೆಗೆ ಜಿ.ಆರ್.  ಗೋಪಾಲರೆಡ್ಡಿ  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ 07.07.2021 ರಂದು ರಂದು ಸಂಜೆ 7.00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಡಿವಿಜಿ ರಸ್ತೆಯಲ್ಲಿರುವ ಮುನಿಸಿಪಲ್ ಕಛೇರಿಯ ಪಕ್ಕದಲ್ಲಿರುವ ಮುನಿಸಿಪಲ್ ಕಾಂಪ್ಲೆಕ್ಸ್ ಕಟ್ಟಡದ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ನಾನು ಮತ್ತು ಸಿಬ್ಬಂದಿಯಾದ ಪಿ.ಸಿ-18 ಅರುಣ್ ರವರೊಂದಿಗೆ,  ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಜೀಪ್ ಚಾಲಕ ವೆಂಕಟೇಶ್ ಎಹೆಚ್ ಸಿ 14 ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ  ಸಂಜೆ 7.15  ಗಂಟೆಗೆ ಹೋಗಿ, ಮುನಿಸಿಪಲ್ ಕಛೇರಿಯ ಬಳಿ ಇದ್ದ  ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಕಾಂಪ್ಲೆಕ್ಸ್ ನ ಬಳಿ ಹೋಗಿ  ನೋಡಲಾಗಿ,  ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 5580/-ರೂ.ಹಣ ಇದ್ದು,  ಆತನ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಆನಂದ  ಬಿನ್ ಲೇಟ್ ಗೋವಿಂದಪ್ಪ, 52 ವರ್ಷ, ಬಲಜಿಗರು ಚಾಲಕ ವೃತ್ತಿ, ವಾಸ ಕೊಂಡಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು  ಎಂತ ತಿಳಿಸಿದ್ದು  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜಿನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ,ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ ಸಂಜೆ  5.20 ಗಂಟೆಯಿಂದ 6.10 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 6.20  ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-180/2021 ರಂತೆ ದಾಖಲಿಸಿಕೊಂಡಿರುತ್ತೆ.     ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 09-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 97/2021 ಕಲಂ. 15(A),32(3) ಕೆ.ಇ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:10/07/2021 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ಠಾಣೆಯ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಬಟ್ಲಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಯನಮಲಪಾಡಿ ಗ್ರಾಮದ ವಾಸಿಯಾದ ಶ್ರೀ.ಮುರುಳಿ.ಆರ್ ಬಿನ್ ರಾಮಕೃಷ್ಣ ರವರು ಅವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಸಿಬ್ಬಂದಿಯೊಂದಿಗೆ ಯನಮಲಪಾಡಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 01-00 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಯನಮಲಪಾಡಿ ಗ್ರಾಮದ ವಾಸಿ ಮುರುಳಿ.ಆರ್ ಬಿನ್ ರಾಮಕೃಷ್ಣ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮಧ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಮುರುಳಿ.ಆರ್ ಬಿನ್ ರಾಮಕೃಷ್ಣ 24 ವರ್ಷ,ಜಿರಾಯ್ತಿ,ನಾಯಕ ಜನಾಂಗ,ವಾಸ-ಯನಮಲಪಾಡಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 09 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದ ಪ್ರತಿಯೊಂದರ ಮೇಲೆ ಬೆಲೆ 35.13 ರೂ ಎಂತ ಇದ್ದು ಒಟ್ಟು 810 ಎಂ.ಎಲ್ ನ 316.17 ರೂಗಳ ಮದ್ಯ ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 01-15 ಗಂಟೆಯಿಂದ ಮಧ್ಯಾಹ್ನ 02-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 02-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖ್ಯೆ: 97/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 86/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:10/07/2021 ರಂದು ಮದ್ಯಾಹ್ನ 13.15 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳನ್ನು, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ 10/07/2021 ರಂದು ಬೆಳಗ್ಗೆ 09.00 ಗಂಟೆಯಲ್ಲಿ ತಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ  ತನಗೆ ಬಾತ್ಮೀದಾರರಿಂದ ಸಾದಲಿ ಗ್ರಾಮದ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಸರ್ಕಾರಿ ಬಂಡೆಯ ಮೇಲೆ ಯಾರೋ ಕೆಲವು ಆಸಾಮಿಗಳು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಬಾತ್ಮಿ ಬಂದಿದ್ದು, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಿ ಹಾಗೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಘನ ನ್ಯಾಯಾಲಯದಿಂದ ಠಾಣೆಯ ನ್ಯಾಯಾಲಯ ಸಿಬ್ಬಂದಿಯಾದ ಸಿ.ಪಿ.ಸಿ 490 ಸೋಮಶೇಖರ ರವರ ಮೂಲಕ ಅನುಮತಿಯನ್ನು ಪಡೆದುಕೊಂಡು, ನಂತರ ಠಾಣೆಯ ಸಿಬ್ಬಂಧಿಯವರಾದ ಸಿ.ಹೆಚ್.ಸಿ-186 ನರಸಿಂಹಯ್ಯ, ಹೆಚ್.ಸಿ-119 ಅಶ್ವತ್ಥ್, ಸಿ.ಪಿ.ಸಿ 91 ಮಂಜುನಾಥ  ಸಿ.ಪಿ.ಸಿ 451 ರಾಮಾಂಜಿನೇಯ ರವರೊಂದಿಗೆ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-60 ನಲ್ಲಿ ಸಾದಲಿ ಗ್ರಾಮಕ್ಕೆ ಬೇಟಿ ಮಾಡಿ, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರನ್ನು ಬರಮಾಡಿಕೊಂಡು ಪಂಚರೊಂದಿಗೆ ಬಾತ್ಮಿದಾರರು ತಿಳಿಸಿದಂತೆ ಸಾದಲಿ ಗ್ರಾಮದ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಸರ್ಕಾರಿ ಬಂಡೆಯ ಬಳಿ ಹೋಗಿ, ಮರೆಯಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಸದರಿ ಬಂಡೆಯ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಬಂಡೆಯ ಮೇಲೆ ಯಾರೋ 8 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು, ಒಬ್ಬ ಆಸಾಮಿಯು ಅಂದರ್ 100 ರೂ ಎಂತಲೂ ಮತ್ತೊಬ್ಬ ಆಸಾಮಿಯ ಬಾಹರ್ 100 ರೂ ಎಂತಲೂ, ಇನ್ನುಳಿದ ಆಸಾಮಿಗಳು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಆಸಾಮಿಗಳನ್ನು ಸುತ್ತುವರೆದು, ಅವರನ್ನು ಎಲ್ಲಿಯೂ ಓಡಬಾರದೆಂದು ಸೂಚಿಸಿದರೂ ಆಸಾಮಿಗಳು ಪರಾರಿಯಾಗಲು ಪ್ರಯತ್ನಿಸಿದ್ದು, ನಾವು ಅವರನ್ನು ಹಿಮ್ಮೆಟ್ಟಿಸಿ ಹಿಡಿದುಕೊಳ್ಳಲಾಗಿ 6 ಜನ ಆಸಾಮಿಗಳು ನಮ್ಮ ಕೈಗೆ ಸಿಕ್ಕಿದ್ದು, ಉಳಿದ ಇಬ್ಬರು ಆಸಾಮಿಗಳು ಪರಾರಿಯಾಗಿರುತ್ತಾರೆ. ನಮಗೆ ಸಿಕ್ಕಿದ್ದ ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 1) ಸಾದಿಲೇಶ ಬಿನ್ ಜಯರಾಮಪ್ಪ, 30 ವರ್ಷ, ಈಡಿಗರು, ಚಾಲಕ ವೃತ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಸುರೇಶ ಬಿನ್ ತಿಮ್ಮಪ್ಪ್ಪ, 35 ವರ್ಷ, ಬಲಜಿಗರು, ಜಿರಾಯ್ತಿ, ವಾಸ- ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ಮುನಿರಾಜು  ಬಿನ್ ವೆಂಕಟರಾಯಪ್ಪ, 46 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 4) ರಮೇಶ ಬಿನ್ ಶೇಖರ್, 25 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, , 5) ನಾಗರಾಜು @ ರಾಯುಡು ಬಿನ್ ಮುನಿಯಪ್ಪ 40 ವರ್ಷ, ಭಜಂತ್ರಿ ಜನಾಂಗ, ಜಿರಾಯ್ತಿ, ವಾಸ- ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 6) ಶ್ರೀನಾಥ ಬಿನ್ ಪೋತುಲಪ್ಪ, 35 ವರ್ಷ, ನಾಯಕರು, ಜಿರಾಯ್ತಿ, ವಾಸ ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾರೆ. ಸ್ಥಳದಿಂದ ಪರಾರಿಯಾದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  7) ಮಣಿ ಬಿನ್ ಗೋವಿಂದಪ್ಪ, 28 ವರ್ಷ, ಕೊರಚ ಜನಾಂಗ, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 8) ಅಶೋಕ ಬಿನ್ ಈರಪ್ಪ, 26 ವರ್ಷ, ನೇಕಾರರು, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾರೆ.  ಸದರಿ ಆಸಾಮಿಗಳಿಗೆ ಇಸ್ಪೀಟ್ ಜೂಜಾಟವಾಡುತ್ತಿದ್ದರ ಬಗ್ಗೆ ಪರವಾನಿಗೆಯನ್ನು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ, ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಇಸ್ಪೀಟ್ ಎಲೆಗಳು 52 ಇದ್ದು, ಹಣವನ್ನು ಎಣಿಕೆ ಮಾಡಲಾಗಿ 2,630/- ರೂ ನಗದು ಹಣ ಇದ್ದು, ಮೇಲ್ಕಂಡ  ನಗದು ಹಣವನ್ನು, 52 ಇಸ್ಪೀಟ್ ಎಲೆಗಳನ್ನು ಹಾಗು ಪ್ಲಾಸ್ಟಿಕ್ ಕವರ್ ನ್ನು ದಾಳಿ ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮದ್ಯಾಹ್ನ 13.40 ಗಂಟೆಗೆ ಠಾಣೆಗೆ ಹಾಜರಾಗಿ  ಠಾಣಾಧಿಕಾರಿಗಳ ವಶಕ್ಕೆ ನೀಡಿ ಆರೋಪಿಗಳ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 160/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 08/07/2021 ರಂದು 20-45 ಗಂಟೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರ ಕಛೇರಿ ಚಿಕ್ಕಬಳ್ಳಾಪುರ ಉಪ ವಿಭಾಗರವರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ-205 ರಮೇಶ್ ರವರು ಠಾಣೆಗೆ ಹಾಜರಾಗಿ , ಆರೋಪಿ, ಮಾಲು, ಮಹಜರ್ ಅನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೆನೇಂದರೆ ಈದಿನ ದಿನಾಂಕ: 08/07/2021 ರಂದು ಚಿಕ್ಕಬಳ್ಳಾಪುರ ಡಿವೈಎಸ್ ಪಿ ಕಛೇರಿಯಲ್ಲಿ ಕರ್ತ ವ್ಯ ನಿರ್ವಹಿಸುತ್ತಿರುವ ಹೆಚ್ ಸಿ 205 ರಮೇಶ್ ಹಾಗೂ ಹೆಚ್ ಸಿ 59 ಶ್ರೀನಿವಾಸ ಆದ ನಮಗೆ  ಮಾನ್ಯ ಡಿ ವೈ ಎಸ್ ಪಿ ಸಾಹೇಬರು ಗೌರಿಬಿದನೂರು ತಾಲ್ಲೂಕಿನ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ  ಮಾಹಿತಿ ಮತ್ತು ಧಾಳಿಗಾಗಿ ನೇಮಿಸಿದ್ದು, ಅದರಂತೆ ನಾವು ಈದಿನ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕಡೆ ಗಸ್ತು ಮಾಡುತ್ತಿದ್ದಾಗ ಸಂಜೆ ಸುಮಾರು 4-45 ನಿಮಿಷದಲ್ಲಿ ಭಾತ್ಮೀದಾರರಿಂದ  ಬಂದ ಮಾಹಿತಿ ಮೇರೆಗೆ  ಕುಡುಮಲಕುಂಟೆ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು, ಅವರಿಗೆ ಮಾಹಿತಿ ತಿಳಿಸಿ, ಅವರೊಂದಿಗೆ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಮುಂದೆ ಜಾಗವಿರುವ  ಎಸ್ ಹೆಚ್ 9 ರಸ್ತೆಯ ಚಿಲ್ಲರೆ ಅಂಗಡಿ ಮುಂಭಾಗ ಸಾರ್ವ ಜನಿಕ ಸ್ಥಳದಲ್ಲಿ  ಮದ್ಯಪಾನ ಮಾಡುತ್ತಿದ್ದ ಬಗ್ಗೆ ಧಾಳೀ ಮಾಡಿ ಸ್ಥಳದಲ್ಲಿದ್ದ 1) ಎರಡು HAYWARDS CHEERS WHISKY ಯ 90  ಎಂ ಎಲ್ ನ ಖಾಲಿಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ನೀರಿನ ಖಾಲಿ ಗ್ಲಾಸುಗಳು, 3) ನಾಲ್ಕು ಪ್ಲಾಸ್ಟಿಕ್ ಖಾಲಿ ವಾಟರ್ ಪಾಕೆಟ್ ಗಳು,  ಅಂಗಡಿಯಲ್ಲಿದ್ದ 4) 90 ಎಂ ಎಲ್ ನ HAYWARDS CHEERS WHISKY ಯ24 ಟೆಟ್ರಾ ಪಾಕೆಟ್ ಗಳಿದ್ದು,, ಇವುಗಳ  ಒಟ್ಟು ಸಾಮರ್ಥ್ಯ 2 ಲೀಟರ್ 160 ಎಂ ಎಲ್ ಆಗಿದ್ದು, ಒಂದು ಪಾಕೆಟ್ ಬೆಲೆ 35.13 ರೂಗಳಾಗಿದ್ದು, 24 ಟೆಟ್ರಾ ಪಾಕೆಟ್ ಗಳ ಬೆಲೆ ಒಟ್ಟು 843.12 ರೂಗಳಾಗಿದ್ದು ಸದರಿ ಮಾಲನ್ನು  ಅಮಾನತ್ತುಪಡಿಸಿಕೊಂಡು, ಸ್ಥಳಾವಕಾಶ ಮಾಡಿಕೊಟ್ಟಿದ್ದ  ಅಂಗಡಿಯ ಮಾಲೀಕ ರಾಮಾಂಜಿನಪ್ಪ ಬಿನ್ ಲೇಟ್ ಕದಿರಪ್ಪ, 40 ವರ್ಷ, ಆದಿಕರ್ನಾಟಕ ಜನಾಂಗ,  ಕುಡುಮಲಕುಂಟೆ ಗ್ರಾಮ ರವರನ್ನು ವಶಕ್ಕೆ ಪಡೆದುಕೊಂಡು, 20-45 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ದೂರಿನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮಜರುಗಿಸಲು ಕೋರಿದ್ದು,   ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.299/2021 ರಂತೆ ದಾಖಲಿಸಿಕೊಂಡಿರುತ್ತೇನೆ. ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 161/2021 ಕಲಂ. 32,34 ಕೆ.ಇ ಆಕ್ಟ್:-

  ದಿನಾಂಕ 09-07-2021 ರಂದು 17-00 ಗಂಟೆಗೆ ಪಿರ್ಯಾದಿದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ. ವಿಜಯಕುಮಾರ್ ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಂಎಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ   ಈ ದಿನ  ದಿನಾಂಕ: 09-07-2021 ರಂದು  ಮಧ್ಯಾಹ್ನ 03-00 ಗಂಟೆಯಲ್ಲಿ  ತಾನು  ಠಾಣೆಯಲ್ಲಿ  ಕರ್ತವ್ಯವನ್ನು  ನಿರ್ವಹಿಸುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಕೋಟಾಲದಿನ್ನೇ ಕ್ರಾಸ್ ನಲ್ಲಿ  ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಯು ಅಕ್ರಮವಾಗಿ ಯಾವುದೆ ಪರವಾನಿಗಿಯಿಲ್ಲದೇ ಮದ್ಯವನ್ನು ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ತಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ. 208 ತಿಪ್ಪೇಸ್ವಾಮಿ ಮತ್ತು ಪಿ,ಸಿ, 129 ರಾಮಚಂದ್ರ ಮತ್ತು  ಚಾಲಕ ಎ.ಪಿ.ಸಿ.143 ಮಹೇಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಗೌರಿಬಿದನೂರು  ಗ್ರಾಮಾಂತರ ಠಾಣೆಯನ್ನು ಬಿಟ್ಟು ಗೌರಿಬಿದನೂರು ಮಧುಗಿರಿ ರಸ್ತೆಯಲ್ಲಿ ಕೋಟಾಲದಿನ್ನೇ ಕ್ರಾಸ್ ನಲ್ಲಿ  ಹೊಸೂರು ಕಡೆಗೆ ಹೋಗುವ ಕ್ರಾಸ್ ರಸ್ತೆಯಲ್ಲಿ  ಯಾರೋ ಒಬ್ಬ  ಆಸಾಮಿಯು  ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದು  ಪೊಲೀಸ್ ವಾಹನ ಮತ್ತು ಪೊಲೀಸರನ್ನು ಕಂಡು  ರಸ್ತೆಯ ಪಕ್ಕದಲ್ಲಿ ಚೀಲವನ್ನು ಬಿಸಾಡಿ ಅಲ್ಲಿಂದ ಓಡಿಹೋದನು. ಸಿಬ್ಬಂದಿಯವರು ಬೆನ್ನಟ್ಟಿದರೂ ಸಹಾ ಸಿಗಲಿಲ್ಲ. ಆಸಾಮಿಯು ಬಿಸಾಡಿದ್ದ  ಪ್ಲಾಸ್ಟೀಕ್ ಚೀಲವನ್ನು  ಪಂಚರ ಸಮಕ್ಷಮದಲ್ಲಿ  ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 48  ಟೆಟ್ರಾ ಪಾಕೆಟ್ ಗಳು, ಒಟ್ಟು ಸಾಮರ್ಥ್ಯ 4 ಲೀಟರ್ 320  ಎಂ.ಎಲ್. ಆಗಿರುತ್ತೆ ,ಬೆಲೆ 1,686/-  ರೂ.ಗಳಾಗಿರುತ್ತೆ.  ನಂತರ ಭಾತ್ಮಿದಾರರಿಂದ ಮದ್ಯವನ್ನು ಬಿಸಾಡಿ ಓಡಿಹೋದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ಕೃಷ್ಣಪ್ಪ ಬಿನ್ ಲೇಟ್ ಗೋವಿಂದಪ್ಪ, 70 ವರ್ಷ, ಬೋವಿ ಜನಾಂಗ, ವಾಸ ಹುಣಸೇಕುಂಟೆ ಗ್ರಾಮ,  ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು.  ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ ಮದ್ಯವನ್ನು ಕಾಳ ಸಂತೆಯಲ್ಲಿ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ. ನಂತರ ಸ್ಥಳದಲ್ಲಿ  15-30 ಗಂಟೆಯಿಂದ 16-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY 90 ಎಂ.ಎಲ್. ನ  47 ಟೆಟ್ರಾ ಪಾಕೆಟ್, 2) ಒಂದು ಪ್ಲಾಸ್ಟಿಕ್ ಚೀಲ,3) HAY WARDS CHEERS  WHISKY 90 ಎಂ.ಎಲ್. ನ  1  ಟೆಟ್ರಾ ಪಾಕೆಟ್ ಅನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಎ.ಬಿ.. ಎಂಬ ಅಕ್ಷರಗಳಿಂದ ಸೀಲು ಮಾಡಿ ವಶಪಡಿಸಿಕೊಂಡು, ಠಾಣೆಗೆ 17-00  ಗಂಟೆಗೆ  ವಾಪಸ್ಸು ಬಂದಿದ್ದು ಆರೋಪಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿ ನೀಡಿದ ದೂರಾಗಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 151/2021 ಕಲಂ. 323,324,307,504,506,34 ಐ.ಪಿ.ಸಿ:-

  ದಿನಾಂಕ:09/07/2021 ರಂದು ಸಂಜೆ -5.00 ಗಂಟೆಯ ಸಮಯದಲ್ಲಿ  ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಂದೀಶ್ ಬಿನ್ ಮಲ್ಲಪ್ಪ   22 ವರ್ಷ ವಕ್ಕಲಿಗರು ಜಿರಾಯ್ತಿ ವಾಸ:ಚಿನ್ನಪ್ಪನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊ:9845508289 ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರ, ತಮಗೂ  ಹಾಗೂ ತಮ್ಮ ಗ್ರಾಮದ ವಾಸಿಗಳಾದ 1)ನಡಿಪಾಯಪ್ಪ ಬಿನ್ ಲೇಟ್ ಪೆದ್ದಗಂಗಪ್ಪ  2)ವೆಂಕಟರೆಡ್ಡಿ ಬಿನ್  ಲೇಟ್ ಪೆದ್ದಗಂಗಪ್ಪ  ರವರಿಗೂ ಜಮೀನಿನ ವಿಚಾರದಲ್ಲಿ ಆಗಾಗ ಗಲಾಟೆಗೆ ಬಂದಿರುತ್ತಾರೆ. ದಿನಾಂಕ:09-07-2021 ರಂದು ತಾನು  ಜಮೀನಿ ಬಳಿ ನೀರು ಹೋಗಲು ಕಾಲುವೆಯನ್ನು ಮಾಡುತ್ತಿದ್ದಾಗ ಮೇಲ್ಕಂಡ ಅಸಾಮಿಗಳು ವಿನಾಕಾರಣ ಗಲಾಟೆಯನ್ನು ಮಾಡಿರುತ್ತಾರೆ, ನಂತರ ಸುಮಾರು 3 -00 ಗಂಟೆಯ  ಸಮಯದಲ್ಲಿ ಪುನಃ ಗಲಾಟೆಗೆ ಬಂದು ನಡಿಪಾಯಪ್ಪ  ದೊಣ್ಣೆಯಿಂದ ತಲೆಗೆ ಹೋಡೆದು ರಕ್ತಗಾಯವನ್ನು ಉಂಟುಮಾಡಿರುತ್ತಾರೆ. ವೆಂಕಟರೆಡ್ಡಿ ರವರು ಬಟ್ಟೆಯನ್ನು ಹರಿದು ಹಾಕಿ ಕೈಗಳಿಂದ ಹೋಡೆದಿರುತ್ತಾರೆ. ನಂತರ ಇಬ್ಬರೂ ಅವಾಚ್ಯ ಶಬ್ದಗಳಿಂದ ಬೈದು  ಪ್ರಾಣ ತೆಗೆಯುವುದಾಗಿ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ ನಂತರ ತಾನು ಕಿರುಚಿಕೊಂಡಾಗ ತಮ್ಮ ಗ್ರಾಮದ ವಾಸಿಯಾದ 1)ಶಿವ ಕುಮಾರ್ ಬಿನ್ ನಾರಾಯಣಪ್ಪ 2)ಗಂಗರಾಜ ಬಿನ್ ನಾರಾಯಣಪ್ಪ ರವರು ಬಂದು ಗಲಾಟೆಯನ್ನು ಬಿಡಿಸಿದರು ಸದರಿ ಗಲಾಟೆ ತಮ್ಮ ಜಮೀನಿನ ಸರ್ವೇ ನಂಬರ್ -348 ರಲ್ಲಿ ನಡೆದಿರುತ್ತದೆ ನಂತರ ತಾನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು  ತನ್ನನ್ನು ಹೋಡೆದವರ ಮೇಲೆ ಕಾನೂನಿನ ಕ್ರಮ ಜರುಗಿಬೇಕೆಂದು ನೀಡಿದ ಹೇಳಿಕೆಯ ದೂರು .

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 72/2021 ಕಲಂ. 379 ಐ.ಪಿ.ಸಿ:-

  ದಿನಾಂಕ:09/07/2021 ರಂದು ಸಂಜೆ 5:00 ಗಂಟೆಗೆ ಪಿರ್ಯದಿದಾರರಾದ ರಮೇಶ ಬಿನ್ ಲಕ್ಷ್ಮಯ್ಯ, 45 ವರ್ಷ, ದೋಬಿ ಜನಾಂಗ, ರಾಮಯ್ಯ ತೋಟದ ಮೇಲ್ವಿಚಾರಕ, ವಾಸ: ಎಸ್.ಗೊಲ್ಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಎರಡು ವರ್ಷಗಳಿಂದ ಬೆಂಗಳೂರು ನಗರದ ವಾಸಿ ಗೀತಾ ರಾಮಯ್ಯ ರವರು ಚಿಕ್ಕಬಳ್ಳಾಪುರ ತಾಲ್ಲೂಕು ಚದಲಪುರ ಗ್ರಾಮದ ಸರ್ವೆ ನಂಬರ್:50/3-4 ರಲ್ಲಿ ಒಂದು ಎಕರೆ 30 ಗುಂಟೆ ಜಮೀನಿದ್ದು ಅದರಲ್ಲಿ ಬೋರ್ವೇಲ್ ಹಾಕಿದ್ದು ಅದರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿರುತ್ತೇನೆ. ಈ ಹಿಂದೆ 6-7 ವರ್ಷಗಳ ಹಿಂದೆ ಜಮೀನನ್ನು ತನ್ನ ಯಜಮಾನರಾದ ಗೀತಾ ರಾಮಯ್ಯ ರವರು ತೆಗೆದುಕೊಂಡಿರುತ್ತಾರೆ. ಆ ಸಮಯದಲ್ಲಿ ಅವರ ಜಮೀನು ಎನ್.ಹೆಚ್-44 ರಲ್ಲಿ ಪೂರ್ವ ದಿಕ್ಕಿಗೆ ಇದ್ದು ಆ ಸಮಯದಲ್ಲಿ ತನ್ನ ಜಮೀನಿಗೆ ಓಡಾಡಲು ರಸ್ತೆ ಪಕ್ಕದಲ್ಲಿ ಸಿಮೆಂಟ್ ಪೈಪುಗಳನ್ನು ಹಾಕಿಸಿದ್ದು ಈಗ ಎನ್.ಹೆಚ್-44 ರಸ್ತೆ ಪಕ್ಕದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಆ ಪೈಪುಗಳನ್ನು ತೆಗೆದು ತಮ್ಮ ಜಮೀನು ಪಕ್ಕದಲ್ಲಿ ಇಟ್ಟಿರುತ್ತಾರೆ. ತಾನು ದಿನಾಂಕ:09/07/2021 ರಂದು ಬೆಳಿಗ್ಗೆ 08:30 ಗಂಟೆಗೆ ತಮ್ಮ ಯಜಮಾನರ ಜಮೀನಿನಲ್ಲಿ ನೋಡಲಾಗಿ ಜಮೀನು ಪಕ್ಕದಲ್ಲಿ ಇಟ್ಟಿರುವ ಪೈಪುಗಳನ್ನು ಯಾರೋ ಕಳ್ಳರು ತೆಗೆದುಕೊಂಡು ಹೋಗಿದ್ದಾಗ ತಾನು ತಮ್ಮ ಯಜಮಾನರಾದ ಗೀತಾ ರಾಮಯ್ಯ ರವರಿಗೆ ವಿಚಾರ ತಿಳಿಸಿ ನಂತರ ಅವರು ಪಂಪ್ ಹೌಸ್ನಲ್ಲಿ ಸಿಸಿ ಕ್ಯಾಮಾರವನ್ನು ನೋಡುವಂತೆ ತಿಳಿಸಿದರು, ಆಗ ತಾನು ಹೋಗಿ ಸಿಸಿ ಕ್ಯಾಮಾರ ಆನ್ ಮಾಡಿ ನೋಡಿದಾಗ ಈ ದಿನ ಬೆಳಿಗ್ಗೆ 07:30 ಗಂಟೆ ಸಮಯದಲ್ಲಿ ಒಂದು ಕ್ಯಾಂಟರಿಗೆ ಕ್ರೈನ್ ಯಂತ್ರದಿಂದ ಪಕ್ಕದ ಗ್ರಾಮದವರಾದ ಗವಿಗಾನಹಳ್ಳಿಯ ನರಸಿಂಹಮೂರ್ತಿ ರವರ ಮುಂದಾಳತ್ವದಲ್ಲಿ ತುಂಬಿಸಿರುವ ಬಗ್ಗೆ ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುತ್ತದೆ, ತಾನು ತಮ್ಮ ಯಜಮಾನರಾದ ಗೀತಾ ರಾಮಯ್ಯ ರವರಿಗೆ ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ಬಗ್ಗೆ ದೂರವಾಣಿಯಲ್ಲಿ ವಿಚಾರ ತಿಳಿಸಿದಾಗ ಅವರು ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿರುತ್ತಾರೆ. ಸಿಮೆಂಟ್ ಪೈಪುಗಳ ಬೆಲೆ ತಿಳಿಯಬೇಕಾಗಿರುತ್ತದೆ. ಆದ್ದರಿಂದ ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 73/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:09/07/2021 ರಂದು ನಾನು ಠಾಣೆಯಲ್ಲಿರುವಾಗ ಸಂಜೆ 18:10 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಸುಲ್ತಾನಪೇಟೆ ಗ್ರಾಮದ ಕಣಿವೆಬಸವಣ್ಣ  ದೇವಾಲಯದ ಪಕ್ಕದ ರಸ್ತೆಯಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:69/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಆದೇಶ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಮುಂದಿನ ಕ್ರಮಕ್ಕಾಗಿ ಈ ಪ್ರ.ವ.ವರದಿ.

 

11. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ. 78/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:-10-07-2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಶ್ಯಾಮಣ್ಣಬಾವಿ ರಸ್ತೆಯಲ್ಲಿ ಅರಳಿಕಟ್ಟೆ ಬಳಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-280 ಶಶಿಕುಮಾರ್,  ಹೆಚ್.ಸಿ-115 ವೆಂಕಟರವಣಪ್ಪ, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 1-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ನಾಗರಾಜ ಬಿನ್ ಸುಬ್ಬಯ್ಯ, 48 ವರ್ಷ, ಪದ್ಮಶಾಲಿ ಜನಾಂಗ, ರೇಷ್ಮೆ ಕೆಲಸ, ದೇಶದಪೇಟೆ, ಶಿಡ್ಲಘಟ್ಟ ಟೌನ್, 2] ಮುನಿರಾಜು ಬಿನ್ ರಾಮಕೃಷ್ಣ, 45 ವರ್ಷ, ಬಲಜಿಗರು, ಟೈಲರ್ ಕೆಲಸ, ಶ್ಯಾಮಣ್ಣ ಬಾವಿ ರಸ್ತೆ, ಶಿಡ್ಲಘಟ್ಟ ಟೌನ್ 3] ರಾಜೇಶ್ ಬಿನ್ ಲೇಟ್ 36 ವರ್ಷ, ವಕ್ಕಲಿಗರು, ಡ್ರೈವರ್, ಅಗ್ರಹಾರ ಬೀದಿ, ಶಿಡ್ಲಘಟ್ಟ ಟೌನ್ 4] ಗೋವಿಂದರಾಜು ಬಿನ್ ಲೇಟ್ ರಾಮಣ್ಣ, 51 ವರ್ಷ, ರೇಷ್ಮೆ ಕೆಲಸ, ಕಾಮಾಟಿಗರಪೇಟೆ, ಶಿಡ್ಲಘಟ್ಟ ನಗರ, 5] ಮಹೇಶ್ ಬಿನ್ ಲೇಟ್ ನಾಗರಾಜ್, 37 ವರ್ಷ, ಬಲಜಿಗರು, ಆಟೋ ಡ್ರೈವರ್, ದೇಶದಪೇಟೆ, ಶಿಡ್ಲಘಟ್ಟ ಟೌನ್, 6) ಮಂಜುನಾಥ ಬಿನ್ ಕೆಂಪಣ್ಣ, 33 ವರ್ಷ ನಾಯಕರು, ಉರಿ ಮಿಷಿನ್ ಕೆಲಸ, ಶ್ಯಾಮಣ್ಣ ಬಾವಿ ರಸ್ತೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1,500/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಮದ್ಯಾಹ್ನ 1-40 ಗಂಟೆಯಿಂದ 2-15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 06 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

ಇತ್ತೀಚಿನ ನವೀಕರಣ​ : 11-07-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080