ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.56/2021 ಕಲಂ. 32,34 ಕೆ.ಇ ಆಕ್ಟ್ :-

     ಈ ದಿನ ದಿನಾಂಕ 09-06-2021 ರಂದು ಪಿಎಸ್ ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆಂದರೆ ಪಿ ಎಸ್ ಐ ಮತ್ತು ಸಿಬ್ಬಂದಿಯವರಾದ ಹೆಚ್ ಸಿ 149 ಇನಾಯತ್ ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್ ಹಾಗೂ ಹೆಚ್ ಜಿ 551 ದೇವರಾಜ್, ಹೆಚ್ ಜಿ 570 ವೆಂಕಟರವಣಪ್ಪ ರವರೊಂದಿಗೆ  ಈ ದಿನ ದಿನಾಂಕ:09/06/2021 ರಂದು  ಮದ್ಯಾಹ್ನ 12:30 ಗಂಟೆಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ  ನಲ್ಲಗುಟ್ಲಪಲ್ಲಿ ಗ್ರಾಮದ  ಕಡೆ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಮೂಗಿರೆಡ್ಡಿಪಲ್ಲಿ ತಾಂಡ ಗ್ರಾಮದ ವಾಸಿಯಾದ ಸಂತೋಷ ಬಿನ್ ಕೃಷ್ಣಾ ನಾಯಕ ಎಂಬುವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯಲ್ಲಿ ಯಾರೂ ಇರಲಿಲ್ಲ ನಂತರ ಸ್ಥಳದಲ್ಲಿದ್ದ  ಅಂಗಡಿಯ ಮಾಲೀಕರಾದ ಸಂತೋಷ ರವರ ಹೆಂಡತಿ ಸುಜಾತ ಹಾಗೂ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 1) ಮದ್ಯ ತುಂಬಿರುವ 650 ಎಮ್ ಎಲ್ ನ ಕಿಂಗ್ ಫಿಶರ್ ಸ್ಟ್ರಾಂಗ್  ಬೀರ್ ನ 10 ಬಾಟಲ್ ಗಳಿದ್ದು  ಪ್ರತಿ ಬಾಟಲ್ ಮೇಲೆ 150 ರೂ ಎಂದು ನಮೂದಿಸಿದ್ದು ಒಟ್ಟು 1500 ರೂ ಗಳಾಗಿರುತ್ತೆ.  2) ಮಧ್ಯ ತುಂಬಿದ್ದ 375 ಎಮ್ ಎಲ್ ನ 8 ಪಿಎಮ್ ವಿಸ್ಕಿ ಕಂಪನಿಯ 06 ಬಾಟಲ್ ಗಳಿದ್ದು ಪ್ರತಿ ಬಾಟಲ್ ಮೇಲೆ 179.68 ರೂ ಎಂದು ನಮೂದಿಸಿದ್ದು ಒಟ್ಟು  1078.08 ರೂಗಳಾಗಿರುತ್ತೆ. 3) ಮಧ್ಯ ತುಂಬಿದ್ದ ಓಲ್ಡ್ ಟಾವೆರ್ನ್ ವಿಸ್ಕಿ ಕಂಪನಿಯ 01 ಬಾಟಲ್ ಯಿದ್ದು ಬಾಟಲ್ ನ ಮೇಲೆ 359.37  ರೂ ಎಂದು ನಮೂದಿಸಿರುತ್ತೆ, 4) 180 ಎಮ್ ಎಲ್  ನ ಮ್ಯಾಜಿಕ್ ಪೋರ್ಟ್ ವೈನ್ ಕಂಪನಿಯ  ನ 09 ಬಾಟಲ್ ಗಳಿದ್ದು ಪ್ರತಿ ಬಾಟಲ್ ಮೇಲೆ 31.65 ರೂ ಎಂದು ನಮೂದಿಸಿದ್ದು ಒಟ್ಟು 284.85 ರೂಗಳಾಗಿರುತ್ತೆ, 5) 180 ಎಮ್ ಎಲ್ ನ 8 ಪಿಎಮ್ ವಿಸ್ಕಿ ಕಂಪನಿಯ 02 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು, ಒಟ್ಟು 173.50 ರೂ ಎಂದು ನಮೂದಿಸಿರುತ್ತೆ, 6) 180 ಎಮ್ ಎಲ್ ನ ಬ್ಯಾಗ್ ಪೈಪರ್ ಕಂಪನಿಯ 04 ಟೆಟ್ರಾ ಪ್ಯಾಕೆಟ್ ಗಳಿದ್ದು  ಪ್ರತಿ ಪ್ಯಾಕೆಟ್ ನ ಮೇಲೆ 106.23 ರೂ ಎಂದು ನಮೂದಿಸಿದ್ದು ಒಟ್ಟು 424.92 ರೂಗಳಾಗಿರುತ್ತೆ, 7)180 ಎಮ್ ಎಲ್ ನ ಓಲ್ಡ್ ಟಾವೆರ್ನ್ ವಿಸ್ಕಿ ಕಂಪನಿಯ 61 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 5291.75 ರೂಗಳಾಗಿರುತ್ತೆ, 8) 90 ಎಮ್ ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 327 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 35.13 ರೂ ಎಂದು ನಮೂದಿಸಿದ್ದು,  ಇವುಗಳ ಒಟ್ಟು ಬೆಲೆ 11,487.51 ರೂಗಳಾಗಿರುತ್ತೆ, ಈ ಮೇಲ್ಕಂಡ ಎಲ್ಲಾ ಮದ್ಯದ ಪ್ಯಾಕೆಟ್ / ಬಾಟಲ್ ಗಳು ಒಟ್ಟು 52.610 ಲೀಟರ್ ಇದ್ದು , ಈ ಮೇಲ್ಕಂಡ ಎಲ್ಲಾ ಮಧ್ಯದ ಮಾಲುಗಳ ಒಟ್ಟು ಬೆಲೆ 20,599.98 ರೂ ಗಳಾಗಿರುತ್ತೆ. ಸದರಿ ಚಿಲ್ಲರೆ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸವನ್ನು ಅಲ್ಲಿಯೇ ಇದ್ದ ಆತನ ಹೆಂಡತಿಯಾದ ಸುಜಾತ ರವರ  ಬಳಿ ವಿಚಾರಿಸಲಾಗಿ ಸಂತೋಷ ಬಿನ್ ಕೃಷ್ಣಾ ನಾಯಕ, 32 ವರ್ಷ, ಲಂಬಾಣಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮೂಗಿರೆಡ್ಡಿಪಲ್ಲಿ ತಾಂಡ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು  ತಿಳಿಸಿದ್ದು  ಸದರಿಯವರು ಕೆಲಸದ ನಿಮಿತ್ತ  ಚೇಳೂರಿಗ ಹೋಗಿದ್ದಾರೆಂದು ತಿಳಿಸಿರುತ್ತಾರೆ. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು  D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಸಂತೋಷ ಬಿನ್ ಕೃಷ್ಣಾ ನಾಯಕ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ. ಮುಂದಿನ ಕ್ರಮಜರುಗಿಸಲು ಕೋರಿದೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ:09-06-2021 ರಂದು ಸಂಜೆ 5:30  ಗಂಟೆಗೆ  ಪಿರ್ಯಾಧಿದಾರರಾದ ಶ್ರೀ.ಪ್ರತಾಪ್ ಕೆ.ಆರ್ ಪಿ.ಎಸ್.ಐ ರವರು  ಮಾಲುಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ್ದರ ವರದಿಯ ಸಾರಾಂಶವೇನೆಂದರೆ    ಈ ದಿನ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ 149 ಇನಾಯತ್ ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್ ಹಾಗೂ ಹೆಚ್ ಜಿ 551 ದೇವರಾಜ್, ಹೆಚ್ ಜಿ 570 ವೆಂಕಟರವಣಪ್ಪ ರವರೊಂದಿಗೆ  ಈ ದಿನ ದಿನಾಂಕ:09/06/2021 ರಂದು  ಮದ್ಯಾಹ್ನ 3:00 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಮೂಗಿರೆಡ್ಡಿಪಲ್ಲಿ ಗ್ರಾಮದ  ಕಡೆ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಮೂಗಿರೆಡ್ಡಿಪಲ್ಲಿ ತಾಂಡ ಗ್ರಾಮದ ವಾಸಿಯಾದ ಪಿಟಿ ಚಂದ್ರಾನಾಯಕ ಬಿನ್ ಲೇಟ್ ತಿಪ್ಪೇನಾಯಕ ಎಂಬುವರು ತನ್ನ ಮನೆಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಮನೆಯ ಬಾಗಿಲು ಮುಚ್ಚಿದ್ದು ಮನೆಯ ಬಳಿಯಿದ್ದ ಪಿಟಿ ಚಂದ್ರನಾಯ್ಕ್ ರವರ ಅಕ್ಕ ಪೀರಮ್ಮ ಕೊಂ ಶ್ರೀರಾಮ ನಾಯ್ಕ ರವರ ಹಾಗೂ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 1) 330 ಎಮ್ ಎಲ್ ನ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ ನ 07 ಬಾಟಲ್ ಗಳಿದ್ದು ಪ್ರತಿ ಬಾಟಲ್ ಮೇಲೆ 85 ರೂ ಎಂದು ನಮೂದಿಸಿದ್ದು, ಒಟ್ಟು 595 ರೂಗಳಾಗಿರುತ್ತೆ, 2) 180 ಎಮ್ ಎಲ್ ನ ಬ್ಯಾಗ್ ಪೈಪರ್ ವಿಸ್ಕಿ ಕಂಪನಿಯ 05 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ಮೇಲೆ 106.23 ರೂ ಎಂದು ನಮೂದಿಸಿದ್ದು  ಒಟ್ಟು 531.15 ರೂಗಳಾಗಿರುತ್ತೆ, 3) 180 ಎಮ್ ಎಲ್ ನ  ಓಲ್ಡ್ ಟಾವೆರ್ನ್ ವಿಸ್ಕಿ ಕಂಪನಿಯ 26 ಟೆಟ್ರಾ ಪ್ಯಾಕೆಟ್ ಳಿದ್ದು  ಪ್ರತಿ ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು ಒಟ್ಟು 2255.50 ರೂ ಗಳಾಗಿರುತ್ತೆ, 4) 90 ಎಮ್ ಎಲ್ ನ ಹೈವಾರ್ಡ್ ಚೀರ್ಸ್ ವಿಸ್ಕಿ ಕಂಪನಿಯ 79 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 35.30 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 2788.70 ರೂಗಳಾಗಿರುತ್ತೆ, ಈ ಮೇಲ್ಕಂಡ ಎಲ್ಲಾ ಮದ್ಯದ ಪ್ಯಾಕೆಟ್ / ಬಾಟಲ್ ಗಳು ಒಟ್ಟು 15.140 ಲೀಟರ್ ಇದ್ದು , ಈ ಮೇಲ್ಕಂಡ ಎಲ್ಲಾ ಮಧ್ಯದ ಮಾಲುಗಳ ಒಟ್ಟು ಬೆಲೆ 6170.35 ರೂ ಗಳಾಗಿರುತ್ತೆ. ಸದರಿ ಮನೆಯ ಮಾಲೀಕನ ಹೆಸರು ಮತ್ತು ವಿಳಾಸವನ್ನು ಅಲ್ಲಿಯೇ ಇದ್ದ ಆತನ ಅಕ್ಕ ಪೀರಮ್ಮ ಕೊಂ ಶ್ರೀರಾಮ ನಾಯ್ಕ ರವರ ಬಳಿ ವಿಚಾರಿಸಲಾಗಿ ಪಿಟಿ ಚಂದ್ರ ನಾಯ್ಕ ಬಿನ್ ಲೇಟ್ ತಿಪ್ಪೇನಾಯ್ಕ, 35 ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ, ಮೂಗಿರೆಡ್ಡಿಪಲ್ಲಿ ತಾಂಡ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು  ತಿಳಿಸಿದ್ದು  ಸದರಿಯವರು ಕೆಲಸದ ನಿಮಿತ್ತ ಎಲ್ಲಿಯೋ ಹೋಗಿದ್ದಾರೆಂದು ತಿಳಿಸಿರುತ್ತಾರೆ. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಚಂದ್ರ ನಾಯ್ಕ ಬಿನ್ ಲೇಟ್ ತಿಪ್ಪೇನಾಯ್ಕ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಸೂಚಿಸಿ  ನೀಡಿದ್ದರ ವರದಿಯ  ಮೇರೆಗೆ ಠಾಣಾ ಮೊ.ಸಂ: 57/2021 ಕಲಂ: 32,34 ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ.

 

3. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 419,420 ಐ.ಪಿ.ಸಿ & 66(D),66(C) INFORMATION TECHNOLOGY ACT 2008 :-

     ದಿನಾಂಕ:10-06-2021 ರಂದು ದೂರುದಾರರಾದ ಶ್ರೀ ಎ.ಎನ್ ವಿಶ್ವಾಸ್ ಬಿನ್ ಎ,ಎನ್ ನಾಗರಾಜ ಪ್ರಶಾಂತ ನಗರ, ಚಿಕ್ಕಬಳ್ಳಾಪುರ, ಮೊಬೈಲ್ ನಂಬರ್-9449313546, 9449313530 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ವ್ಯವಹಾರದ ಉದ್ದೇಶದಿಂದ  ಚಿಕ್ಕಬಳ್ಳಾಪುರ ನಗರದಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ 64129139237 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ, ಈಗಿರುವಲ್ಲಿ ದಿನಾಂಕ: 07-06-2021 ರಂದು 7873572415 ಮತ್ತು 7001502521 ಸಂಖ್ಯೆಗಳಿಂದ ಮೇಲ್ಕಂಡ ನನ್ನ ನಂಬರಿಗೆ ನಿಮ್ಮ ಬಿ.ಎಸ್.ಎನ್.ಎಲ್ ನಂಬರ್ ನ ದಾಖಲಾತಿಗಳ ಅವಧಿ ಮುಕ್ತಾಯ ವಾಗಿದ್ದು ಈ ಕೂಡಲೇ ನೀವು ಸದರಿ ನಂಬರನ್ನು ರಿಚಾರ್ಜ್ ಮಾಡಬೇಕಾಗಿರುತ್ತದೆ ಎಂತ ಮೆಸೇಜ್ ಕಳುಹಿಸಿರುತ್ತಾರೆ, ನಂತರ ದಿನಾಂಕ:08-06-2021 ರಂದು ಪುನಃ ಅವರು ನನಗೆ ಪೋನ್ ಮಾಡಿ  ನನ್ನ  ಎಟಿಎಮ್ ಕಾರ್ಡಿನ ನಂಬರನ್ನು ತಿಳಿಸುವಂತೆ ಕೋರಿದ್ದು ಅದಕ್ಕೆ ನಾನು ಇವರು ಬಿ.ಎಸ್.ಎನ್.ಎಲ್ ನ ಅಧಿಕಾರಿಗಳೆಂತ ನಂಬಿ ನನ್ನ ಎಟಿಎಮ್ ಕಾರ್ಡಿನ ನಂಬರನ್ನು ಅವರಿಗೆ ತಿಳಿಸಿರುತ್ತೇನೆ, ನಂತರ ಅವರು ಬಿ.ಎಸ್.ಎನ್.ಎಲ್  ಟೀಮ್ ವ್ಯೂವರ್ ಕ್ವಿಕ್ ಸಪೋರ್ಟ್ ಎಂಬ ಆಫ್ ನ್ನು ಡೌನ್ ಲೋಡ್ ಮಾಡಲು ತಿಳಿಸಿದ್ದು ಅವರು ಹೇಳಿದ ಹಾಗೆ ಸದರಿ ಆಫ್ ನ್ನು ನನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿರುತ್ತೇನೆ, ನಂತರ ಅವರು ಹೇಳಿದ ಹಾಗೆ ಸದರಿ ಆಫ್ ನಲ್ಲಿ ನನ್ನ ಎಟಿಎಮ್ ಕಾರ್ಡಿನ ನಂಬರನ್ನು ಅದರಲ್ಲಿ ಫಿಲ್ ಮಾಡಿರುತ್ತೇನೆ, ನಂತರ ಅವರು ನಿಮ್ಮ ಮೊಬೈಲ್ ಗೆ ಬರುವ ಒಟಿಪಿ ನಂಬರ್ ಗಳನ್ನು ತಿಳಿಸುವಂತೆ ತಿಳಿಸಿದ್ದು, ನನಗೆ ಬಂದಂತಹ  ಮೂರು ಒಟಿಪಿ ನಂಬರ್ ಗಳನ್ನು ಅವರಿಗೆ ತಿಳಿಸಿದ್ದು ತಕ್ಷಣವೇ  ನನ್ನ ಮೊಬೈಲ್ ಗೆ  ಮೂರು ಬಾರಿ 25,000/-, 25,000/- ಹಾಗೂ 24,000/-ರೂಗಳು ನನ್ನ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ ಮೆಸೇಜ್ ಗಳು  ಬಂದಿರುತ್ತವೆ, ಆದುದರಿಂದ ತಾವುಗಳು ನಾವು ಬಿ.ಎಸ್.ಎನ್.ಎಲ್ ಅಧಿಕಾರಿಗಳೆಂದು ತಿಳಿಸಿ ಪೋನ್ ನಂಬರನ್ನು ರಿಚಾರ್ಜ್ ಮಾಡಬೇಕಾಗಿರುತ್ದೆ ಎಂತ ನಂಬಿಸಿ ನನ್ನ ಖಾತೆಯ ವಿವರಗಳನ್ನು ಪಡೆದು 74,000/-ರೂಗಳನ್ನು ವರ್ಗಾವಣೆ ಮಾಡಿಕೊಂಡಿರುವವರನ್ನು ಪತ್ತೆಮಾಡಿ ಸೂಕ್ತ ರೀತಿಯಲ್ಲಿ  ಕಾನೂನು ಕ್ರಮ ಕೈಗೊಂಡು ನನ್ನ ಹಣ ನನಗೆ ವಾಪಸ್ಸುಕೊಡಿಸಬೇಕೆಂದು ಕೋರಿ ನೀಡಿರುವ ದೂರಾಗಿರುತ್ತದೆ.

 

4. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ 10/06/2021 ರಂದು ಬೆಳಗ್ಗೆ 10.45 ಗಂಟೆಯಲ್ಲಿ ಠಾಣಾ ಸಿಬ್ಬಂಧಿ ಹೆಚ್.ಸಿ-32, ಮಂಜುನಾಥರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ:10/06/2021 ರಂದು ಬೆಳಗ್ಗೆ 06.00 ಗಂಟೆಯಲ್ಲಿ ಠಾಣಾಧಿಕಾರಿಗಳು ತನಗೆ ಮತ್ತು ಠಾಣಾ ಸಿಬ್ಬಂದಿಯಾದ  ಪಿ.ಸಿ -200 ಚಂದ್ರಶೇಖರ್ ರವರಿಗೆ ಕೋವಿಡ್ -19 ಪ್ರಯುಕ್ತ ದಿಬ್ಬೂರಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾವು ದಿಬ್ಬೂರಹಳ್ಳಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಗ್ಗೆ ಸುಮಾರು 9.00 ಗಂಟೆಗೆ ಯಾರೋ ಬಾತ್ಮಿದಾರರು ದಿಬ್ಬೂರಹಳ್ಳಿ ಗ್ರಾಮದ  ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ ರವರ ವಾಸದ ಚಿಕನ್ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿಸಿದ್ದು,  ಅದರಂತೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಪಂಚರಾಗಿ ಸಹಕರಿಸಲು ಕೋರಲಾಗಿ ಅವರು ಒಪ್ಪಿ ತಮ್ಮಗಳೊಂದಿಗೆ ದಿಬ್ಬೂರಹಳ್ಳಿ ಗ್ರಾಮದ  ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ ರವರ ವಾಸದ ಚಿಕನ್ ಅಂಗಡಿ ಬಳಿ ಬೆಳಗ್ಗೆ 09.15 ಗಂಟೆಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಬಾಗಿಲು ಸ್ವಲ್ಪ ತೆರೆದುಕೊಂಡಿದ್ದು, ತಾವು ಅಂಗಡಿಯ ಒಳಗೆ ಹೋಗುತ್ತಿದ್ದಂತೆ ಅಂಗಡಿಯಲ್ಲಿದ್ದ ಅಂಗಡಿ ಮಾಲೀಕ ವೆಂಕಟೇಶ @ ಶಾಟೋಡು ಬಿನ್ ರಾಮಪ್ಪರವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ತಮ್ಮಿಂದ ತಪ್ಪಿಸಿಕೊಂಡು ಓಡಿ ಹೋದರು. ನಂತರ ಪಂಚರ ಸಮಕ್ಷಮ ಅಂಗಡಿಯಲ್ಲಿ ಪರಿಶೀಲಿಸಲಾಗಿ  ಅಂಗಡಿಯ ಒಂದು ಟೇಬಲ್ ಮೇಲೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯ ತುಂಬಿದ ಪಾಕೆಟ್ ಗಳು ಕಂಡು ಬಂದಿದ್ದು, ಸದರಿ ಮಧ್ಯದ ಪಾಕೆಟ್ಗಳನ್ನು ಪರಿಶೀಲಿಸಲಾಗಿ ಒರಿಜಿನಲ್ ಚಾಯ್ಸ್ ನ 90 ಎಂ.ಎಲ್ ನ 41 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳ ಒಂದು ಟೆಟ್ರಾ ಪಾಕೆಟ್ ಬೆಲೆ 35.13/-ರೂಗಳಾಗಿರುತ್ತೆ. ಇವುಗಳಲ್ಲಿನ ಒಟ್ಟು ಮಧ್ಯದ ಸಾಮಾರ್ಥ್ಯ 3 ಲೀಟರ್ 690 ಎಂ.ಎಲ್ ಇದ್ದು, ಇವುಗಳ ಒಟ್ಟು ಮೊತ್ತ 1440.33/-ರೂಗಳಾಗಿರುತ್ತೆ. ಓಡಿ ಹೋದರು.  ಸದರಿ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ವೆಂಕಟೇಶ @ ಶಾಟೋಡು ಬಿನ್ ರಾಮಪ್ಪ, 45 ವರ್ಷ, ವಕ್ಕಲಿಗರು, ಚಿಕನ್ ಅಂಗಡಿ ವ್ಯಾಪಾರಿ, ದಿಬ್ಬುರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ಮೊ.ಸಂ-9036668066 ಎಂದು ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಬೆಳಗ್ಗೆ 09.30 ಗಂಟೆಯಿಂದ  10.30  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ ಮಧ್ಯದ ಪಾಕೆಟ್ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೇನೆ, ಮೇಲ್ಕಂಡ ಆಸಾಮಿಯು ತಮ್ಮ ಅಂಗಡಿಯಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವುದಾಗಿದ್ದು, ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 427,379,447 ಐ.ಪಿ.ಸಿ:-

     ದಿನಾಂಕ 10/06/2021 ರಂದು ಬೆಳಗ್ಗೆ 11.00 ಗಂಟೆಗೆ ಠಾಣಾ ಸಿಬ್ಬಂಧಿ ಪಿ.ಸಿ-490 ರವರು ಶಿಡ್ಲಘಟ್ಟ ಘನ ನ್ಯಾಯಾಲಯದಲ್ಲಿ ಪಡೆದು ತಂದು ಹಾಜರುಪಡಿಸಿದ ಪಿ.ಸಿ.ಆರ್ ಸಂಖ್ಯೆ 39/2020 ರಂತೆ  ಆದೇಶದ ಪ್ರತಿಯ ಸಾರಾಂಶವೇನೆಂದರೆ ದಿನಾಂಕ 03/12/2021 ರಂದು ಬೆಳಗ್ಗೆ 1.00 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ಮುನಿ ಅಕ್ಕಾಯಮ್ಮ ಕೊಂ ಲೇಟ್ ವೆಂಕಟರಾಯಪ್ಪರವರ ಬಾಬತ್ತು ಜಮೀನಿನಲ್ಲಿ ಬಶೆಟ್ಟಹಳ್ಳಿ ಗ್ರಾಮದ ವಾಸಿ ಆರೋಪಿ ನಾರಾಯಣಸ್ವಾಮಿ ಬಿನ್ ಲೇಟ್ ನಾಗಪ್ಪರವರು ಅಕ್ರಮ ಪ್ರವೇಶ ಮಾಡಿ, ಜಮೀನಿನಲ್ಲಿದ್ದ ರಾಗಿ ಬೆಳೆಯನ್ನು ನಾಶಪಡಿಸಿ ಹಾಗೂ ಸದರಿ ಜಮೀನಿನಲ್ಲಿದ್ದ ರಾಗಿಯನ್ನು ಕದ್ದು ತನ್ನ ಮನೆಗೆ ಸಾಗಿಸಿ ಸಂಗ್ರಹಣೆ ಮಾಡಿರುವುದಾಗಿದ್ದು, ಈ ಬಗ್ಗೆ ಆರೋಪಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ಘನ ನ್ಯಾಯಾಲಯದ ಆದೇಶವಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.135/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ: 09/06/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರು ಶ್ರೀ. ಶಶಿಧರ ಎಸ್.ಡಿ , ವೃತ್ತ ನಿರೀಕ್ಷಕರು, ಗೌರಿಬಿದನೂರು ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 09/06/2021 ರಂದು ನಾನು ಹಾಗೂ ವೃತ್ತ ಕಛೇರಿಯ ಸಿಬ್ಬಂದಿಯಾದ ಹೆಚ್.ಸಿ-224 ವೆಂಕಟೇಶ್ ಮತ್ತು ಜೀಪ್ ಚಾಲಕ ಎಪಿಸಿ-133 ಹೇಮಂತ ರವರೊಂದಿಗೆ ಕೆಎ-40-ಜಿ-1222 ರಲ್ಲಿ ಮುದ್ದಲೊಡು ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 1-00 ಗಂಟೆಯಲ್ಲಿ ನನಗೆ ಬಾತ್ಮಿದಾರರಿಂದ ಬಂದ ಕಚಿತ ಮಾಹಿತಿ ಏನೆಂದರೆ ಗೊಲ್ಲಹಳ್ಳಿ ಕಡೆಯಿಂದ ಮುಸಲ್ಮಾನಹಳ್ಳಿ ಕಡೆಗೆ ಯಾರೋ ಒಬ್ಬ ಆಸಾಮಿ ತನ್ನ ದ್ವಿಚಕ್ರ ವಾಹನದಲ್ಲಿ ಒಂದು ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಕರೆದುಕೊಂಡು ಜೀಪಿನಲ್ಲಿ ಮದ್ಯಾಹ್ನ 1-20 ಗಂಟೆಗೆ ನಾನು ಹಾಗೂ ಸಿಬ್ಬಂದಿಗಳು ಪಂಚರೊಂದಿಗೆ ಮುಸಲ್ಮಾನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಕಾಯುತ್ತಿದಾಗ ಯಾರೋ ಒಬ್ಬ ಆಸಾಮಿ ಗೊಲ್ಲಹಳ್ಳಿ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಒಂದು ಚೀಲವನ್ನು ಟ್ಯಾಂಕ್ ಮೇಲೆ ಇಟ್ಟುಕೊಂಡು ಬರುತ್ತಿದ್ದು ಸದರಿ ಆಸಾಮಿಯನ್ನು ಸಿಬ್ಬಂದಿಗಳು  ಹಿಡಿಯಲು ಹೊದಾಗ ಆಸಾಮಿಯು ತನ್ನ ದ್ವಿಚಕ್ರ ವಾಹನವನ್ನು ಅಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ, ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿದರೂ ಸಹಾ ಸಿಗದೆ ಪರಾರಿಯಾಗಿದ್ದು ಪಂಚರೊಂದಿಗೆ ದ್ವಿಚಕ್ರ ವಾಹನದ ಬಳಿ ಹೋಗಿ ನೋಡಲಾಗಿ ದ್ವಿಚಕ್ರ ವಾಹನವು ಎಪಿ-02-ಹೆಚ್-6730 ಎಂತ ನೊಂದಣಿ ಸಂಖ್ಯೆ ಇರುವ ದ್ವಿಚಕ್ರ ವಾಹನವಾಗಿದ್ದು ಚಿಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ ಎರಡು ರಟ್ಟಿನ ಬಾಕ್ಸ್ ಗಳಿದ್ದು ರಟ್ಟಿನ ಬಾಕ್ಸ್ ತೆಗೆದು ಪರಿಶಿಲಿಸಲಾಗಿದ್ದು  ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್ ನ 96 ಹೈವಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ಮತ್ತೊಂದು ರಟ್ಟಿನ ಬಾಕ್ಸ್ ನಲ್ಲಿ  90 ಎಂ.ಎಲ್ ನ 96 ಹೈವಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳಿದ್ದು ಒಟ್ಟು 192   ಟೆಟ್ರಾ ಪ್ಯಾಕೇಟ್ ಗಳಿರುತ್ತದೆ.  ಸದರಿ ಮದ್ಯ 17 ಲೀಟರ್ , 280 ಮಿಲಿ ಇದ್ದು ಇದರ ಬೆಲೆ  ಸುಮಾರು 6750 ರೂಗಳಾಗಿರುತ್ತೆ.  ಸದರಿ ಮದ್ಯ ಹಾಗೂ ದ್ವಿಚಕ್ರ  ವಾಹನವನ್ನು ಬಿಟ್ಟು ಓಡಿ ಹೋದವನ ಹೆಸರು ಮತ್ತು ವಿಳಾಸ  ಅಲ್ಲಿದ್ದವರಿಂದ  ತಿಳಿಯಲಾಗಿ ವೆಂಕಟೇಶ್ ರೆಡ್ಡಿ ಬಿನ್ ಸಂಜೀವ್ ರೆಡ್ಡಿ , 28 ವರ್ಷ, ವಕ್ಕಲಿಗರು, ಕೂಲಿ ಕೆಲಸ,  ವಾಸ ಪೆದ್ದನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ಸದರಿ ಒಂದೊಂದು ರಟ್ಟನ ಬಾಕ್ಸ್ ನಲ್ಲಿ 05 ಮದ್ಯ ತುಂಬಿರುವ ಟೆಟ್ರಾ  ಪ್ಯಾಕೆಟ್ ಗಳನ್ನು  ತೆಗೆದಿದ್ದು ಒಟ್ಟು 10 ಟೆಟ್ರಾ  ಪ್ಯಾಕೆಟ್ ಗಳನ್ನು   ರಾಸಾಯಿನಿಕ ಪರೀಕ್ಷೆಗಾಗಿ ಎಫ್.ಎಸ್.ಎಲ್. ಗೆ ಕಳುಹಿಸಿಕೊಡಲು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ  ಹೊಲೆದು  N  ಎಂಬ ಅಕ್ಷರದಿಂದ  ಸೀಲ್ ಮಾಡಿ ಪಂಚರ ಸಹಿ ಇರುವ ಚೀಟಿಯನ್ನು ಅಂಟಿಸಿ  ಸದರಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ  ದ್ವಿಚಕ್ರ ವಾಹನವನ್ನು ಪ<ಚರ ಸಮಕ್ಷಮ ಮದ್ಯಾಹ್ನ 1-30 ಗಂಟೆಯಿಂದ 2-30 ಗಂಟೆಯವರೆಗೆ  ಪಂಚನಾಮೆ ಮೂಲಕ  ಅಮಾನತ್ತುಪಡಿಸಿಕೊಂಡಿರುತ್ತದೆ. ಸದರಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ದ್ವಿಚಕ್ರ ವಾಹನವನ್ನು ಮುಂದಿನ ಕ್ರಮಕ್ಕಾಗಿ ತಮ್ಮ ವಶಕ್ಕೆ ನೀಡುತ್ತಿದ್ದು ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಿ ಓಡಿ ಹೋದವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.136/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ 10/06/2021 ರಂದು ಮದ್ಯಾಹ್ನ 12 -30 ಗಂಟೆಗೆ  ಪಿರ್ಯಾದಿದಾರರಾದ  ಶ್ರೀಮತಿ  ಮಣಿತ ಕೊಂ ನರಸಿಂಹ ಮೂರ್ತಿ ರೆಡ್ಡಿ,  20 ವರ್ಷ, ಗೃಹಿಣಿ, ಕುರುಬರು, , ವಾಸ  ಕೆಂಕರೆ  ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಒಂಬತ್ತು ತಿಂಗಳ ಹಿಂದೆ ನರಸಿಂಹ ಮೂರ್ತಿ ರೆಡ್ಡಿ  ಎಂಬುವರನನ್ಉ ಪ್ರಿತಿಸಿ ಮದುವೆಯಾಗಿದ್ದು   ಕುಟುಂಬಸ್ಥರ ವಿರೋಧವಾಗಿ ಮದುವೆ  ಆಗಿದ್ದರಿಂದ ತಾವು ತಮ್ಮ ಪಾಡಿಗೆ ಸದಾಶಿವ ಬಡಾವಣೆಯಲ್ಲಿ ವಾಸವಾಗಿದ್ದು ಅಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರಿಂದ  ಮನೆ ಮಾಲೀಕರು ಖಾಲಿ ಮಾಡಿಸಿದರು. ಆಗ ಕೆಂಕರೆಯಲ್ಲಿ  ಮೂರು ದಿನಗಳಿಂದ  ಹಿಂದೆ ಮನೆ ಮಾಡಿದ್ದರು. ದಿನಾಂಕ 08/06/2021 ರಂದು ಬೆಳಗ್ಗೆ 6-00 ಗಂಟೆಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಂದಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್  ಆಗಿರುತ್ತದೆ.  ತಮ್ಮ ಯಜಮಾನರು ವಕ್ಕಲಿಗ ಸಮುದಾಯಕ್ಕೆ ಸೇರಿದ್ದು, 31 ವರ್ಷ ವಯಸ್ಸಾಗಿದ್ದು , 6 ಅಡಿ , ಬಿಳಿ ಮೈ ಬಣ್ಣ , ಗುಂಗರು ಕೂದಲು ಹೊಂದಿರುತ್ತಾರೆ.  ಎಲ್ಲಾ ಕಡೆ ಹುಡುಕಾಡಲಾಗಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನ್ನ ಗಂಡ ನರಸಿಂಹ ಮೂರ್ತಿ ರೆಡ್ಡಿ ರವರನ್ನು ಪತ್ತೆ ಮಾಡಲು ಕೋರಿ ದೂರು.

 

8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.81/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ 09/06/2021 ರಂದು ಬೆಳಿಗ್ಗೆ 11:30 ಗಂಟೆಯಲ್ಲಿ ಶ್ರೀ ಪ್ರಸನ್ನ ಕುಮಾರ್ ಕೆ- ಪಿ.ಎಸ್.ಐ ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 09/06/2021 ರಂದು ಬೆಳಿಗ್ಗೆ 09:30 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಠಾಣಾ ಸಿಬ್ಬಂದಿಯವರಾದ ಪಿ.ಸಿ 318 ದೇವರಾಜು, ಪಿ.ಸಿ 282 ರಮೇಶ್  ಮತ್ತು ಜೀಪ್ ಚಾಲಕ ಎ.ಪಿ.ಸಿ 105 ಅಶ್ವತ್ಥಪ್ಪರವರೊಂದಿಗೆ ಸರ್ಕಾರಿ ಜೀಪಿನಲ್ಲಿ ಗಸ್ತು ಮಾಡುತ್ತಿರುವಾಗ ನದಿಗಡ್ಡೆಯ ಬ್ರಿಡ್ಜ್ ಸಮೀಪ ಯಾರೋ ಆಸಾಮಿ ಒಂದು ಬಿಳಿ ಚೀಲವನ್ನು ತನ್ನ ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದನು ಅನುಮಾನ ಬಂದು ಆಸಾಮಿಯನ್ನು ಸಿಬ್ಬಂದಿ ಸಹಕಾರದಿಂದ ನಿಲ್ಲಿಸಿ ಪಕ್ಕದಲ್ಲಿದ್ದ ಸಾರ್ವಜನಿಕರನ್ನು ಕರೆದು ಪಂಚಸಾಕ್ಷಿದಾರರಾಗಿ ಸಹಕರಿಸುವಂತೆ ತಿಳಿಸಿ ಆಸಾಮಿ ಬಳಿ ಇದ್ದ ಬಿಳಿ ಚೀಲವನ್ನು ತೆಗೆದು ನೋಡಲಾಗಿ ಚೀಲದಲ್ಲಿ 2 United Spirits Limited ನ 2 ಪಾಕೆಟ್ ಗಳು ಇದ್ದವು ಅದರ ಮೇಲೆ Haywards Cheers Whisky ಎಂದು ಪ್ರಿಂಟ್ ಮಾಡಲಾಗಿದ್ದು ಆ ಎರಡೂ ಪಾಕೆಟ್ ಗಳನ್ನು ಪಂಚರ ಸಮಕ್ಷಮ ತೆರೆದು ನೋಡಲಾಗಿ ಪ್ರತಿಯೊಂದು ಪಾಕೆಟ್ ನಲ್ಲಿ Haywards Cheers Whisky ಕಂಪನಿಯ 90 ಎಂ.ಎಲ್ ನ 96 ಟೆಟ್ರಾ ಪಾಕೆಟ್ ಗಳು ಇದ್ದವು. ಪ್ರತಿಯೊಂದು ಟೆಟ್ರಾ ಪಾಕೆಟ್ ಗಳ ಮೇಲೆ 35.11 ರೂಪಾಯಿ ಬೆಲೆ ಇದ್ದು ಒಟ್ಟು 6741 ರೂಪಾಯಿಗಳಾಗಿರುತ್ತೆ. ಒಟ್ಟು ಮದ್ಯದ ಪ್ರಮಾಣ 17.28 ಲೀಟರ್ ಆಗಿರುತ್ತೆ. ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟೇಶ್ ಬಿನ್ ಆವುಲಪ್ಪ, 36 ವರ್ಷ, ಪರಿಶಿಷ್ಟ ಜಾತಿ, ಡಿ ಪಾಳ್ಯ ಗ್ರಾಮ, ಮಂಚೇನಹಳ್ಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ವಿಚಾರಣೆ ಮಾಡಲಾಗಿ ಆತನು ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು. ಮದ್ಯವನ್ನು ಮಾರಾಟ ಮಾಡಲು ಅಥವಾ ಸಾಗಿಸಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಆತನು ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ ಪ್ರತಿಯೊಂದು ಪಾಕೆಟ್ ಗಳಲ್ಲಿ ಇದ್ದ Haywards Cheers Whisky ಕಂಪನಿಯ 90 ಎಂ.ಎಲ್ ನ 3 ಟೆಟ್ರಾ ಪಾಕೆಟ್ಗಳನ್ನು ವಿಧಿವಿಜ್ಞಾನ ಪರೀಕ್ಷೆಯ ಸಲುವಾಗಿ 2 ಪ್ರತ್ಯೇಕ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಕಟ್ಟಿ “k” ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತೇನೆ. ಉಳಿದ 186 Haywards Cheers Whisky ಕಂಪನಿಯ 90 ಎಂ.ಎಲ್ ನ ಟೆಟ್ರಾ ಪಾಕೆಟ್ಗಳನ್ನು 2 ಪ್ರತ್ಯೇಕ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ “k” ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತೇನೆ. ನಂತರ 4 ಚೀಟಿಗಳ ಮೇಲೆ ಪಂಚರ ಸಹಿಗಳನ್ನು ಪಡೆದು ನಂತರ ನಾನು ಸಹಿಯನ್ನು ಮಾಡಿ ಚೀಟಿಗಳನ್ನು ಮೊಹರು ಮಾಡಿದ 4 ಬಿಳಿ ಚೀಲಗಳ ಮೇಲೆ ಅಂಟಿಸಿರುತ್ತೇನೆ. ನಂತರ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.111/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:09/06/2021 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನರಸಿಂಹಮೂರ್ತಿ ಬಿನ್ ಲೇಟ್ ದ್ಯಾವಯ್ಯ 42 ವರ್ಷ, ವಕ್ಕಲಿಗರು. ಜಿರಾಯ್ತಿ ವಾಸ:ಯಲಕರಾಳ್ಳಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊ:9964649061 ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದ  ಸರ್ವೆ ನಂಬರ್  60/03 ರಲ್ಲಿ 1 ಎಕರೆ 21 ಗುಂಟೆ ಜಮೀನು ಇದ್ದು ದಿನಾಂಕ 9/6/2021 ರಂದು ಮದ್ಯಾಹ್ನ 1 ಗಂಟೆಯಲ್ಲಿ  ತಾನು ಸದರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವಾಗ ತಮ್ಮ ಗ್ರಾಮದ ವೆಂಕಟನಾರಾರಯಣರೆಡ್ಡಿ  ಬಿನ್ ಲೇಟ್ ವೆಂಕಟರಾಯಪ್ಪ, ಮಂಜುನಾಥ ಬಿನ್ ವೆಂಕಟನಾರಾರಯಣರೆಡ್ಡಿ, ಏಕ ಏಕಿ ಬಂದು ನೀವು ಉಳುಮೆ ಮಾಡುತ್ತಿರುವ ಜಮೀನು ನಮಗೆ ಸೇರುತ್ತದೆ ಎಂದು ಜಗಳ ತೆಗೆದು  ದೌರ್ಜನ್ಯ ಮಾಡಿ  ವೆಂಕಟನಾರಾಯಣರೆಡ್ಡಿ ರವರು ಹಿಡಿ ಗಾತ್ರದ ದೊಣ್ಣೆಯಿಂದ ಎಡಕಾಲಿನ ತೊಡೆಗೆ ಹೊಡೆದು ಮೂಗೇಟು ಉಂಟು ಮಾಡಿದ್ದು ಬಿಡಿಸಲು ಬಂದ ತನ್ನ ತಮ್ಮ ಶಿವ ಕುಮಾರ್ ರವರಿಗೆ ದೊಣ್ಣೆಯಿಂದ ತಲೆಯ ಮುಂಭಾಗಕ್ಕೆ ಹೊಡೆದು ರಕ್ತ ಗಾಯ ಪಡಿಸಿದನು ವೆಂಕಟನಾರಾರಯಣರೆಡ್ಡಿ ರವರ ಮಗ ಮಂಜುನಾಥನು ತನ್ನ ತಮ್ಮನಿಗೆ ದೊಣ್ಣೆಯಿಂದ ಹಾಗೂ ಕುಡುಗೋಲಿನಿಂದ ಎಡ ಅಂಗೈಗೆ ಹೊಡೆದು ಮೂಗೇಟು ಉಂಟು ಮಾಡಿದನು. ತಾನು ಮತ್ತು ತನ್ನ ತಮ್ಮ ಯಾವುದೋ ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಬರುತ್ತಿರುವಾಗ ಏ ಬೊಳಿ ತನ್ನ ಮಕ್ಕಳೇ ನೀವು ಇಲ್ಲಯೇ ಇದ್ದರೇ ನಿಮ್ಮ ಪ್ರಾಣಗಳನ್ನು ತೆಗೆಯುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದು ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

10. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.112/2021 ಕಲಂ. 143,147,148,323,324,504,149 ಐ.ಪಿ.ಸಿ:-

     ದಿನಾಂಕ:09/06/2021 ರಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವೆಂಕಟನಾರಾಯಣರೆಡ್ಡಿ ಬಿನ್ ವೆಂಕಟರಾಯಪ್ಪ 51 ವರ್ಷ ವಕ್ಕಲಿಗರು ಜಿರಾಯ್ತಿ ವಾಸ:ಯಲಕರಾಳ್ಳಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊ:9964337415 ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಮಗೂ ಹಾಗೂ ನಮ್ಮ ಗ್ರಾಮದ ನಿವಾಸಿಯಾದ 1.ನರಸಿಂಹಮುರ್ತಿ  ಬಿನ್ ದ್ಯಾವಪ್ಪ 2. ಶಿವಕುಮಾರ ಬಿನ ದ್ಯಾವಪ್ಪ 3.ನರಸಿಂಹರೆಡ್ಡಿ ಬಿನ್  ರಾಮಯ್ಯ 4.ಕೊಂಡಪ್ಪ ಬಿನ್ ರಾಮಯ್ಯ ರವರಿಗೂ ನಮ್ಮ ಗ್ರಾಮದ ಸರ್ವೆ ನಂ 60/2 ಬಿ ರಲ್ಲಿ 2 ಎಕರೆ 32 ಗುಂಟೆಯ ಜಮೀನಿನ ವಿಚಾರದಲ್ಲಿ ಈಗಾಗಲೆ ಹಿಂದೆ ಗಲಾಟೆ ಮಾಡಿಕೊಂಡಿದ್ದು ಆ ವಿಚಾರದಲ್ಲಿ ಅವರು ನಮ್ಮನ್ನು ಹೊಡೆದಿದ್ದು ನ್ಯಾಯಾಲಯದಲ್ಲಿ ನಮ್ಮ ಪರವಾಗಿರುತ್ತದ್ದೆ. ಸದರಿ ಜಮೀನನ್ನು  2 ಬಾರಿ ಸರ್ವೆ ಮಾಡಿಸಿದ್ದು ದಿನಾಂಕ 9/6/2021 ರಂದು ಮದ್ಯಾಹ್ನ 1 ಗಂಟೆಯಲ್ಲಿ  ಜಮೀನಿನಲ್ಲಿ ಉಳುಮೆಮಾಡಲು ಟ್ರಾಕ್ಟರನಲ್ಲಿ ಹೋದಾಗ ಮೇಲ್ಕಂಡ ಅಸಾಮಿಗಳು ಹಾಗೂ ಅವರ ಸಂಭಂದಿಕರಾದ ದೇವಿಕಾ ಕೋಂ ಕೋಂಡಪ್ಪಾ ಸುಜಾತಮ್ಮಾ ಕೋಂ ನರಸಿಂಹರೆಡ್ಡಿ ರತ್ನಮ್ಮಾ ಕೋಂ ಲೇಟ್ ದ್ಯಾವಪ್ಪ ತನ್ನ ಮೇಲೆ ಗಲಾಟೆಗೆ ಬಂದರೂ ಅವರೂ ನನ್ನನ್ನು ಕುರಿತು ನ್ಯಾಯಾಲಯದಲ್ಲಿ ಕ್ರೀಮಿನಲ್ ಕೇಸಗಳನ್ನು ವಾಪಸ್ ತೆಗೆದುಕೊ ಎಂದು ಅವಾಚ್ಯ ಶಬ್ದಗಳಿಂದ ಬೈದು ಅದರಲ್ಲಿ ನರಸಿಂಹಮೂರ್ತಿ ರವರು ತಾನೂ ತಂದಿದ್ದ ಮಚ್ಚಿನಿಂದ ಬಲಕಾಲಿನ ಕೆಳಗೆ ಹೊಡೆದು ಗಾಯ ಪಡಿಸಿದನು ಶಿವಕುಮಾರ ಹಾಗೂ ನರಸಿಂಹರೆಡ್ಡಿ ಮತ್ತು ಕೊಂಡಪ್ಪರವರು ಹೊಂಗೆ ಮರದ ಕಟ್ಟಿಗೆಯಿಂದ ಎಡಕಾಲಿನ ಮೊಣಕಾಲಿನ ಹಾಗೂ ತೊಡೆಯ ಭಾಗಕ್ಕೆ ಹೊಡೆದು ಮೂಗೆಟು ಉಂಟುಮಾಡಿದರು ಕಾಲುಗಳಿಗೆ ಊತ ಗಾಯವನ್ನುಂಟು ಮಾಡಿದರು ಹೆಂಗಸರು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದಿರುತ್ತಾರೆ.ನಂತರ ನಾನು ಕಿರುಚಿಕೊಂಡಾಗ ಎಲ್ಲರೂ ಓಡಿ ಹೋದರು ನಂತರ ನನ್ನ ಮಗನಾದ ಮಂಜುನಾಥ ಬಂದು 108 ಅಂಬುಲೇನ್ಸನಲ್ಲಿ ಗುಡಿಬಂಡೆಯ ಆಸ್ಪತ್ರೆಗೆ ದಾಖಲಿಸಿದ್ದು ನಾನು ಚಿಕಿತ್ಸೆಯನ್ನು ಪಡೆಯುತಿರುತ್ತೆನೆ. ಮೇಲ್ಕಂಡವರ ಜಮೀನಿಗೆ ಸಂಭದಿಸಿದಂತೆ ನಖಲು ದಾಖಲೆಗಳನ್ನು ಸೃಷ್ಟಿ ಮಾಢಿರುತ್ತಾರೆ ಅದುದ್ದರಿಂದ ನನ್ನ ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೇಂದು ನಾನು ನನ್ನ ಹೇಳಿಕೆಯನ್ನು ಗುಡಿಬಂಡೆ ಆಸ್ಪತ್ರೆಯಲ್ಲಿ ನೀಡಿರುತ್ತೆನೆ.

 

11. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 427,506,341,504,143,149,323 ಐ.ಪಿ.ಸಿ:-

     ದಿನಾಂಕ 10-06-2021 ರಂದು ಸಂಜೆ 04.00 ಗಂಟೆಗೆ ಪಿರ್ಯಾಧಿದಾರರಾದ ಸುಬ್ಬರಾಯಪ್ಪ ಬಿನ್ ಮುನಿಶಾಮಿ, 38 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಬಂದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 06-06-2021 ರಂದು ತಮ್ಮ ಸಂಬಂದಿಕರಾದ ಜಯಣ್ಣ ರವರ ಮಗನಾದ ಹರೀಶ ರವರ ಮದುವೆಯ ನಿಶ್ಚಿತಾರ್ಥಕ್ಕೆ ಹೋಗಲು ಬೆಳಿಗ್ಗೆ 07.00 ಗಂಟೆಯ ಸಮಯದಲ್ಲಿ ತಾನು, ತಮ್ಮ ಗ್ರಾಮದ ಜಯಣ್ಣ, ರತ್ನಮ್ಮ, ಹರೀಶ ರವರು ಕಾರಿನಲ್ಲಿ ದೇವನಹಳ್ಳಿಗೆ ಹೋಗಲು ತಮ್ಮ ಗ್ರಾಮದ ಸುಬ್ಬಮ್ಮ ಮನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ ತಮ್ಮ ಗ್ರಾಮದ ವೆಂಕಟರಾಯಪ್ಪ, ಸುಬ್ಬಕ್ಕ, ಸುಗುಣ, ನಿರಂಜನ್, ಆಂಜನೇಯ ರವರು ಏಕಾಏಕಿ ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ತಾವುಗಳು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ತಮ್ಮನ್ನು ಎಲ್ಲರೂ ಕಾರಿನಿಂದ ಆಚೆಗೆ ಎಳೆದುಕೊಂಡು ಎಲ್ಲರೂ ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ತನಗೆ ವೆಂಕಟರಾಯಪ್ಪ ರವರು ಕೈಗಳಿಂದ ಹೊಡೆದರು. ನಿರಂಜನ್ ಮತ್ತು ಆಂಜನೇಯ ರವರು ಹರೀಶ ಮತ್ತು ಜಯಣ್ಣ ರವರಿಗೆ ಮೈಮೇಲೆ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದರು. ಸುಬ್ಬಕ್ಕ, ಸುಗುಣ ರವರು ರತ್ನಮ್ಮ ರವರ ಜುಟ್ಟನ್ನು ಎಳೆದು ಕೈಗಳಿಂದ ಹೊಡೆದು ನೋವುಂಟು ಮಾಡಿದರು. ಸುಗುಣ ರವರು ಕಾರಿನ ಹಿಂಭಾಗದ ಇಂಡಿಕೇಟರ್ ಲೈಟಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿದರು. ವೆಂಕಟರಾಯಪ್ಪ, ಸುಬ್ಬಕ್ಕೆ, ಸುಗುಣ, ನಿರಂಜನ್, ಆಂಜನೇಯ ರವರು ಎಲ್ಲರೂ ಸೇರಿಕೊಂಡು ಇನ್ನು ಮುಂದೆ ಈ ರಸ್ತೆಯಲ್ಲಿ ಓಡಾಡಿದರೇ ನಿಮ್ಮನ್ನು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿದರು. ತಾವು ಮದುವೆಯ ನಿಶ್ಚಿತಾರ್ಥ ಕಾರ್ಯಕ್ಕೆ ಹೋಗುತ್ತಿದ್ದರಿಂದ ಮತ್ತು ತಮಗೆ ಮೈ ಕೈ ನೋವುಗಳು ಇದ್ದುದ್ದರಿಂದ ಆಸ್ವತ್ರೆಗೆ ಯಾರೂ ಹೋಗಿರುವುದಿಲ್ಲ.  ಗಲಾಟೆಯ ಬಗ್ಗೆ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡಿ ಬಗೆ ಹರಿಸಿಕೊಳ್ಳೋಣವೆಂದು ತಿಳಿಸಿದ್ದು ಯಾವುದೇ ಪಂಚಾಯ್ತಿ ನಡೆಯದ ಕಾರಣ  ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.190/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ:09-06-2021 ರಂದು  ರಾತ್ರಿ 8-15 ಗಂಟೆಯಲ್ಲಿ ಪಿರ್ಯಾದಿದಾರರಾದ ನಾರಾಯಣಪ್ಪ ಬಿನ್  ಲೇಟ್ ರಾಮಯ್ಯ, 62 ವರ್ಷ, ತಿಗಳರು, ವಾಸ:ನಾಗಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ಗಣಕೀಕೃತ ದೂರಿನ ಸಾರಾಂಶವೇನೆಂದರೆ ತನಗೆ  1ನೇ ಶ್ರೀಮತಿ ಸುಶೀಲಮ್ಮ ಹಾಗೂ 2ನೇ ಶ್ರೀಮತಿ ಜಾನಕಮ್ಮ ಎಂಬ ಇಬ್ಬರು ಹೆಂಡತಿಯರಿರುತ್ತಾರೆ. ತನ್ನ  1ನೇ ಹೆಂಡತಿ ಶ್ರೀಮತಿ ಸುಶೀಲಮ್ಮ ರವರಿಗೆ ರಾಮಕುಮಾರ ಎಂಬ ಒಬ್ಬನೇ ಮಗನಿದ್ದು ತನ್ನ 2ನೇ ಹೆಂಡತಿಯಾದ ಶ್ರೀಮತಿ ಜಾನಕಮ್ಮ ರವರಿಗೆ 1ನೇ ಲೋಕೇಶ್ ಹಾಗೂ 2ನೇ ಸಂತೋಷ್ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ತನ್ನ ಭಾಗಕ್ಕೆ  ತಮ್ಮ  ಗ್ರಾಮದಲ್ಲಿ 2 ಎಕರೆ ಜಮೀನು ಬಂದಿದ್ದು, ಸದರಿ ಜಮೀನಿನಲ್ಲಿ ತಾನು ಬೆಳೆದಿರುವ 25 ಮೂಟೆ ರಾಗಿಯನ್ನು ತನ್ನ ದೊಡ್ಡ ಹೆಂಡತಿಯ ಮನೆಯಲ್ಲಿ ಹಾಕಿದ್ದು ಈ ದಿನ ದಿನಾಂಕ: 09-06-2021 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿನಲ್ಲಿ ಸ್ವಲ್ಪ ರಾಗಿಯನ್ನು ತೆಗೆದುಕೊಂಡು ಬರೋಣವೆಂದು ಹೋಗಿದ್ದು, ಆಗ ತನ್ನ ದೊಡ್ಡ ಹೆಂಡತಿ ಮನೆಯಲ್ಲಿ ರಾಗಿಯನ್ನು ಚಿಕ್ಕ ಚಿಕ್ಕ ಮೂಟೆಗಳಲ್ಲಿ ತುಂಬಿಸಿ ಇಟ್ಟಿದ್ದು, ತಾನು ಏಕೆ ಚಿಕ್ಕ ಚಿಕ್ಕ ಮೂಟೆಗಳಲ್ಲಿ ಇಟ್ಟಿದ್ದೀರಿ ಎಂದು ಕೇಳಿದ್ದಕ್ಕೆ ತನ್ನ ಹೆಂಡತಿ ಸುಶೀಲಮ್ಮ, ಸುಶೀಲಮ್ಮನ ತಮ್ಮನಾದ  ಅರ್ಜುನ್, ಸುಶೀಲಮ್ಮನ ನಾದಿನಿಯಾದ ಲಕ್ಷ್ಮಮ್ಮ ಮತ್ತು ಅರ್ಜುನನ ಮಗನಾದ ವೆಂಕಟೇಶ ರವರು ತನ್ನನ್ನು ನೀನು ಯಾವೋನೋ ಲೋಪರ್ ಇದನ್ನು ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ಕೈಗಳಿಂದ ಮುಖಕ್ಕೆ ಹೊಡೆದು ಕೆಳಕ್ಕೆ ತಳ್ಳಿ ಅಲ್ಲಿಯೇ ಕೆಳಗೆ ಬಿದ್ದಿದ್ದ ಒಂದು ಕೋಲಿನಲ್ಲಿ ಅರ್ಜುನನು ತನ್ನ ತಲೆಗೆ ಹೊಡೆದು ಗಾಯಗೊಳಿಸಿದ್ದು, ಆಗ ತಾನು ಸುಸ್ತಾಗಿ ಕೆಳಗೆ ಬಿದ್ದಿದ್ದು ಆಗ ತಮ್ಮ ಗ್ರಾಮದವರಾದ ಶಿವರಾಜ್ ಬಿನ್ ಚಿನ್ನಪ್ಪ ಮತ್ತು ಮುನಿರಾಜು ಬಿನ್ ಎನ್. ಚಿನ್ನಪ್ಪ ರವರು ಗಲಾಟೆ ಬಿಡಿಸಿರುತ್ತಾರೆ. ತಾನು ಬೆಳೆದಿರುವ ರಾಗಿಯನ್ನು ಕೇಳಿದ್ದಕ್ಕೆ ತನ್ನನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು  ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 190/2021 ಕಲಂ 323,324,504 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 10-06-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080