ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 188,269,271 ಐ.ಪಿ.ಸಿ &  87 ಕೆ.ಪಿ ಆಕ್ಟ್ & THE KARNATAKA EPIDEMIC DISEASES ACT 2020:-

          ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ ಟಿ ಎನ್ ಪಾಪಣ್ಣ  ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ,  ದಿನಾಂಕ:09/05/2021 ರಂದು ಮಧ್ಯಾಹ್ನ 15-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ನಾಗರಾಜ ಹೊಸಹಳ್ಳಿ  ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಹೊಂಗೆಮರದ ಕೆಳಗಡೆ ಯಾರೋ ಆಸಾಮಿಗಳು ಸರ್ಕಾರದ ಕರೋನ ಸಾಂಕ್ರಾಮಿಕ ಖಾಯಿಲೆಯ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-36 ವಿಜಯ್ ಕುಮಾರ್, ಹೆಚ್ ಸಿ -139 ಶ್ರೀನಾಥ, ಸಿಪಿಸಿ - 262 ಅಂಬರೀಶ್, ರವರುಗಳೊಂದಿಗೆ ಜೀಪ್ ನಲ್ಲಿ ನಾಗರಾಜ ಹೊಸಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಕರೆದುಕೊಂಡು ಸರ್ಕಾರಿ ಕೆರೆಯ ಅಂಗಳಕ್ಕೆ ಮದ್ಯಾಹ್ನ 15-45 ಗಂಟೆಗೆ ಹೋಗಿ ದೂರದಲ್ಲಿ ಜೀಪ್  ನಿಲ್ಲಿಸಿ ನೋಡಲಾಗಿ ಕರೋನಾ ಸಾಂಕ್ರಾಮಿಕ ಖಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ  ಕರೋನ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಗುಂಪು ಸೇರದಂತೆ, ಸಾರ್ವಜನಿಕವಾಗಿ ಅನಗತ್ಯವಾಗಿ ಸಂಚರಿಸದಂತೆ  ಹಾಗೂ ಪೇಸ್ ಮಾಸ್ಕ್ ಧರಿಸುವಂತೆ  ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸರ್ಕಾರ ಲಾಕ್ ಡೌನ್ ಆದೇಶಿದ್ದರೂ  ಸಹ ಯಾರೋ ಆಸಾಮಿಗಳು ಹೊಂಗೆ ಮರದ ಕೆಳಗಡೆ ಗುಂಪಾಗಿ ಒಬ್ಬರ ಪಕ್ಕ ಒಬ್ಬರಂತೆ ವೃತ್ತಾಕಾರವಾಗಿ ಕುಳಿತು ಕರೋನ ಸಾಂಕ್ರಾಮಿಕ ಖಾಯಿಲೆಯ ಸರ್ಕಾರದ  ಲಾಕಡೌನ್ ಆದೇಶವನ್ನು ಉಲ್ಲಂಘಿಸಿ  ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ 8 ಜನ ಆಸಾಮಿಗಳ ಪೈಕಿ 4 ಜನ ಆಸಾಮಿಗಳು ಓಡಿ ಹೋಗಿದ್ದು, ಸಿಬ್ಬಂದಿಯವರು ಅವರುಗಳನ್ನು ಹಿಂಬಾಲಿಸಲಾಗಿ ಸಿಕ್ಕಿರುವುದಿಲ್ಲ,  ಉಳಿದ 4 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ಶಿವಣ್ಣ ಬಿನ್ ಲೇಟ್ ಕೊಂಡಪ್ಪ,40 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ನಂ: 9353393336 , 2) ಮುರಗೇಶ್ ಬಿನ್ ಲೇಟ್ ವೆಂಕಟಸ್ವಾಮಿ,25 ವರ್ಷ, ಗೊಲ್ಲರು, ನೇಯ್ಗೆಕೆಲಸ, ವಾಸ: ನಾಗರಾಜಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 8088710343. 3) ವೆಂಕಟಸುಬ್ಬಣ್ಣ ಬಿನ್ ಲೇಟ್ ವೆಂಕಟರಾಯಪ್ಪ, 51 ವರ್ಷ, ಬಲಜಿಗರು, ಕುರಿ ವ್ಯಾಪಾರ, ವಾಸ: ಬಟ್ಲಹಳ್ಳಿ  ಗ್ರಾಮ, ಚಿಂತಾಮಣಿ ತಾಲ್ಲೂಕು. 4) ಶ್ರೀರಾಮಪ್ಪ @ ಸಚಿನ್ ಬಿನ್ ನಾರಾಯಣಪ್ಪ, 40 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ವಾಸ: ಭುಜಂಗರಾಯನಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 8792343522. ಎಂದು ತಿಳಿಸಿದ್ದು, ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 5) ಮೂರ್ತಿ @ ನರಸಿಂಹ ಮೂರ್ತಿ ಬಿನ್ ಲೇಟ್ ನಾಗರಾಜ, 48 ವರ್ಷ, ಗೊಲ್ಲರು, ಹೋಮ್ ಗಾರ್ಡ್ ಕೆಲಸ, ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು, 6) ವೆಂಕಟರೆಡ್ಡಿ ಬಿನ್ ಶ್ರಿರಾಮರೆಡ್ಡಿ, 30 ವರ್ಷ,ಖಾಸಗಿ ಬಸ್ ನಿರ್ವಾಹಕ,ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು. 7) ಮಂಜುನಾಥ ಬಿನ್ ರಾಮಸ್ವಾಮಿ, 45 ವರ್ಷ, ವಕ್ಕಲಿಗರು, ವಾಟರ್ ಮ್ಯಾನ್ ಕೆಲಸ, ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು. 8) ಬೈರೆಡ್ಡಿ ಬಿನ್ ಮದ್ದಿರೆಡ್ಡಿ,40 ವರ್ಷ, ವಕ್ಕಲಿಗರು, ಮೊಟಾರ್ ಮೆಕಾನಿಕ್ ಕೆಲಸ,  ವಾಸ: ಮಾವುಕೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲ ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇದ್ದು, ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 1850/-  ರೂಗಳಿರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 4 ಜನ ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 1850/-  ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಸಂಜೆ 16-00 ಗಂಟೆಯಿಂದ 17-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಮಾಲುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಸಂಜೆ 17-30 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 70/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಹೆಚ್ ಸಿ 107 ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು ರಾತ್ರಿ 20-30 ಗಂಟೆಗೆ ಠಾಣೆಗೆ ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ ಸಂಖ್ಯೆ: 70/2021 ಕಲಂ: 87 ಕೆ ಪಿ ಆಕ್ಟ್ ಮತ್ತು ಕಲಂ: 188.269.271 ಐಪಿಸಿ ಮತ್ತು ಕಲಂ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾದೇಶ 2020 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.201/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ 09-05-2021 ರಂದು ರಾತ್ರಿ 9-00  ಗಂಟೆಗೆ ಶ್ರೀ ಶ್ರೀನಿವಾಸಪ್ಪ, ಸಿ.ಪಿ.ಐ ಚಿಂತಾಮಣಿ ಗ್ರಾ ವೃತ್ತ ರವರು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:- 09-05-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತಮ್ಮ ಸಿಬ್ಬಂದಿ ಯವರಾದ ಹೆಚ್.ಸಿ 190 ವೀರಭದ್ರಸ್ವಾಮಿ  ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ರಲ್ಲಿ ವೃತ್ತದ  ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 6-00 ಗಂಟೆ ಸಮಯದಲ್ಲಿ ಕೈವಾರ ಗ್ರಾಮದಲ್ಲಿ ಮಸ್ತೇನಹಳ್ಳಿ ಗ್ರಾಮದ ರಸ್ತೆಯ ನಿಸರ್ಗ ಪ್ರಾವಿಜನ್ ಸ್ಟೋರ್ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜುನಾಥ ಬಿನ್ ನಾರಾಯಣಪ್ಪ, 53 ವರ್ಷ, ಒಕ್ಕಲಿಗರು, ನಿಸರ್ಗ ಪ್ರಾವಿಜನ್ ಸ್ಟೋರ್  ಅಂಗಡಿ ಮಾಲೀಕರು, ವಾಸ: ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಇವರು ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.202/2021 ಕಲಂ. 15(ಎ) ಕೆ.ಇ ಆಕ್ಟ್ :-

     ದಿನಾಂಕ 10-05-2021 ರಂದು ಬೆಳಗ್ಗೆ 10-15 ಗಂಟೆಗೆ ಠಾಣೆಯ ಸಿ.ಹೆಚ್.ಸಿ 40 ಸೀನಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 10-05-2021 ರಂದು ಬೆಳಿಗ್ಗೆ ತಾನು ಮತ್ತು ಠಾಣೆಯ ಸತೀಶ ಕೆ.ಎ ಪಿಸಿ 504 ರವರು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಠಾಣಾ ವ್ಯಾಪ್ತಿಯ ತಿಮ್ಮಸಂದ್ರ, ಉಪ್ಪರಪೇಟೆ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಗ್ಗೆ 9-00 ಗಂಟೆಗೆ ಕೋನಪಲ್ಲಿ ಗ್ರಾಮದ ಬಳಿಗೆ ಹೋದಾಗ ಕೋನಪಲ್ಲಿ ಗ್ರಾಮದ ವಾಸಿ ನರಸಮ್ಮ ಕೊಂ ನಾರಾಯಣಸ್ವಾಮಿ ಎಂಬುವರು ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ನರಸಮ್ಮ ಕೊಂ ನಾರಾಯಣಸ್ವಾಮಿ, 60 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ 04 ಟೆಟ್ರಾ ಪ್ಯಾಕೆಟ್ ಗಳು 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್ 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಗ್ಗೆ 9-15 ಗಂಟೆಯಿಂದ ಬೆಳಗ್ಗೆ 10-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ನರಸಮ್ಮ ಕೊಂ ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ:10/05/2021 ರಂದು ಬೆಳಿಗ್ಗೆ 10-45 ಗಂಟೆಗೆ ಠಾಣಾ ಪಿ.ಸಿ-509 ಚಂದ್ರಪ್ಪ ರವರ ಮುಖೇನ ಮಾನ್ಯ ಪಿ.ಐ. ಸಾಹೇಬರು ಕಳುಹಿಸಿಕೊಟ್ಟಿರು ವರದಿಯನ್ನು ತಂದು ಹಾಜರುಪಡಿಸಿದ್ದು, ಸಾರಾಂಶವೇನೆಂದರೇ, ದಿನಾಂಕ:10/05/2021 ರಂದು ಬೆಳಿಗ್ಗೆ 6-00 ಗಂಟೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪಿ.ಐ. ಜೆ.ಎನ್.ಆನಂದಕುಮಾರ್ ರವರು  ಜೀಪ್ ಚಾಲಕ ಎ.ಹೆಚ್.ಸಿ-37 ಆಂಜನಪ್ಪ ಹಾಗು ಠಾಣೆಯ ಸಿಬ್ಬಂದಿಯವರಾದ ಸಿ.ಪಿ.ಸಿ-426 ಸರ್ವೇಶ್,  ಸಿ.ಪಿ.ಸಿ-509 ಚಂದ್ರಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ: ಕೆಎ-40-ಜಿ-3699 ರಲ್ಲಿ ರಾಜ್ಯದಂತ್ಯ ಹರಡುತ್ತಿರುವ ಕೋವಿಡ್-19 ಖಾಯಿಲೆ ತಡೆಗಟ್ಟುವ ಹಿನ್ನೆಲೆ ಹಾಗು ಲಾಕ್ ಡೌನ್ ಪ್ರಯುಕ್ತ ಚಿಂತಾಮಣಿ ನಗರದ ಡಬಲ್ ರಸ್ತೆ, ಬೆಂಗಳೂರು ರಸ್ತೆ ಕಡೆ ಗಸ್ತು ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಪಿ.ಐ ರವರಿಗೆ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ, ಯಾರೋ ಒಬ್ಬ ಅಸಾಮಿ ಚಿಂತಾಮಣಿ ಟೌನ್ ಎ.ಪಿ.ಎಂ.ಸಿ ಮಾರುಕಟ್ಟೆ-ಊಲವಾಡಿ ರಸ್ತೆಯ ಪಕ್ಕದಲ್ಲಿ ಒಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟದ ಬಗ್ಗೆ ವ್ಯವಹಾರ ಮಾಡುತ್ತಿದ್ದಾನೆಂದು ಮಾಹಿತಿ ಬಂದಿದ್ದು, ಕೂಡಲೇ ಸದರಿ ವಿಚಾರವನ್ನು ಮೇಲಾಧಿಕಾರಿಗಳಲ್ಲಿ ಮಾಹಿತಿಯನ್ನು ತಿಳಿಸಿ, ಚೇಳೂರು ಸರ್ಕಲ್ ಮುಖಾಂತರ ಚಿಂತಾಮಣಿ ಟೌನ್ ಎ.ಪಿ.ಎಂ.ಸಿ ಮಾರುಕಟ್ಟೆ-ಊಲವಾಡಿ ರಸ್ತೆಯಲ್ಲಿ ಹೋಗುತ್ತಿರುವಾಗ ವಿ.ಕೆ ಕನ್ವೆಂಕ್ಷನ್ ಹಾಲ್ ಗೇಟ್ ನಿಂದ ಸ್ವಲ್ಪ ದೂರ ರಸ್ತೆಯ ಎಡಬದಿಯಲ್ಲಿ ಒಂದು ದ್ವಿಚಕ್ರ ವಾಹನ ನಿಲ್ಲಿಸಿದ್ದು, ಸದರಿ ವಾಹನದ ಬಳಿ ನಾವು ಜೀಪ್ನ್ನು ನಿಲ್ಲಿಸಿ ನೋಡಲಾಗಿ ಯಾರೋ ಒಬ್ಬ ಅಸಾಮಿ ದ್ವಿಚಕ್ರ ವಾಹನದ ಟ್ಯಾಂಕ್ ಮೇಲೆ ಒಂದು ಸಿಮೆಂಟ್ ಕಲ್ಲರ್ ಬ್ಯಾಗ್ ಇಟ್ಟುಕೊಂಡಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ದ್ವಿಚಕ್ರ ವಾಹನ ಹಾಗು ಬ್ಯಾಗ್ ಅಲ್ಲಿಯೇ ಬಿಟ್ಟು ಓಡಲು ಪ್ರಾರಂಭಿಸಿದ್ದು, ಸಿಬ್ಬಂದಿಯವರು ಆತನನ್ನು ಹಿಂಬಾಲಿಸಿ ಹಿಡಿದುಕೊಂಡು ಪ್ರಶ್ನಿಸಲಾಗಿ ಆತನ ಹೆಸರು ಎಸ್.ಸಾಧೀಕ್ ಪಾಷ ಬಿನ್ ಲೇಟ್ ಮಸ್ತಾನ್ ಸಾಬ್, 26 ವರ್ಷ, ಮುಸ್ಲಿಂದ ಜನಾಂಗ, ರೇಷ್ಮೆ ರೀಲರ್ ಕೆಲಸ, ವಾಸ ರಹಮತ್ ನಗರ ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ದ್ವಿಚಕ್ರ ವಾಹನ ಟ್ಯಾಂಕ್ ಮೇಲೆ ಇದ್ದ ಬ್ಯಾಗ್ ನಲ್ಲಿ ಏನಿದೆ ಎಂದು ಕೇಳಲಾಗಿ ಆತನು ತೊದಲುತ್ತಾ ಬ್ಯಾಗ್ ನಲ್ಲಿ ಗಾಂಜಾ ಇರುವುದಾಗಿ ತಿಳಿಸಿದ್ದು, ದ್ವಿಚಕ್ರ ವಾಹನ ನೊಂದಣೆ ಸಂಖ್ಯೆ ಕೆಎ-40-ಈಡಿ-8857 ರ ಬಜಾಜ್ ಕಂಪನಿಯ ಪ್ಲಾಟೀನಾ ಮಾದರಿ ಆಗಿರುತ್ತೆ. ನಂತರ ಎಸ್.ಸಾಧೀಕ್ ಪಾಷ ರವರನ್ನು ವಿಚಾರ ಮಾಡಲಾಗಿ ತಾನು ಮುಳಬಾಗಲು ಬಳಿ ಆಂದ್ರ ಪ್ರದೇಶದ ವಾಸಿ ಯಾರೋ ಒಬ್ಬ ಅಸಾಮಿ ಆತನ ಮೊಬೈಲ್ ಸಂಖ್ಯೆ:7569427247 ರಿಂದ ನನ್ನ ಮೊಬೈಲ್ ಸಂಖ್ಯೆ:9980995034 ಗೆ ಕರೆ ಮಾಡಿ ನನ್ನ ಬಳಿ 4 ಕೆ.ಜಿ ಗಾಂಜಾ ಇದೇ ಇಲ್ಲಿಗೆ ಬಂದರೆ ಕೊಡುವುದಾಗಿ ಹೇಳಿದ್ದು, ಅದರಂತೆ ನಾನು ನೆನ್ನೆ ದಿನ ಮುಳಬಾಗಲುಗೆ ಹೋಗಿ ಮುಳಬಾಗಲು ಬಸ್ ನಿಲ್ದಾಣದಲ್ಲಿ ಇದ್ದಾಗ ಮೇಲ್ಕಂಡ ಅಸಾಮಿ ಅಲ್ಲಿಗೆ ಬಂದಿದ್ದು, ನಾನು ಆತನಿಗೆ 50,000 ರೂ ಹಣ ನೀಡಿ ಎರಡು ಪ್ಯಾಕೇಟ್ ಗಾಂಜಾವನ್ನು ತೆಗೆದುಕೊಂಡು ಬಂದು ಚಿಂತಾಮಣಿ ನಗರ ಹಾಗು ಶಿಡ್ಲಘಟ್ಟದಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು, ನನಗೆ ಗಾಂಜಾ ಕೊಟ್ಟ ಅಸಾಮಿ ಹೆಸರು ವಿಳಾಸ ತಿಳಿದಿರುವುದಿಲ್ಲವೆಂದು ತಿಳಿಸಿರುತ್ತಾನೆ. ಆದ್ದರಿಂದ ಸಾಧೀಕ್ ಪಾಷ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ತಯಾರು ಮಾಡಿ ಹಾಗು ಆರೋಪಿ ಅಂಗಶೋಧನೆ ಮತ್ತು ಮಾಲನ್ನು ಅಮಾನತ್ತುಪಡಿಸಿಕೊಳ್ಳಲು ಗೆಜೆಟೆಡ್ ಅಧಿಕಾರಿ ಒಬ್ಬರು ಮತ್ತು ಪಂಚಾಯ್ತಿದಾರರನ್ನು ಸ್ಥಳಕ್ಕೆ ಬರಲು ಮನವಿ ಪತ್ರಗಳನ್ನು ತಯಾರು ಮಾಡಿಕೊಂಡು ಬರಲು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-509 ಚಂದ್ರಪ್ಪ ರವರ ಮುಖೇನ ವರದಿಯನ್ನು ಬೆಳಿಗ್ಗೆ 10-45 ಗಂಟೆಗೆ ಠಾಣೆಗೆ ಕಳುಹಿಸಿಕೊಟ್ಟಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.54/2021 ಕಲಂ. 188,269,323,332,353,504,506 ಐ.ಪಿ.ಸಿ & 32,34 ಕೆ.ಇ ಆಕ್ಟ್:-

          ದಿನಾಂಕ 10/05/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-32 ಮಂಜುನಾಥರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 10/05/2021 ರಂದು ಠಾಣಾಧೀಕಾರಿಗಳು ಕೋವಿಡ್-19 ವೈರಸ್ ಹರಡುತ್ತಿರುವ ಕಾರಣ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ವಿಧಿಸಿದ್ದರಿಂದ ತನಗೆ ಸಾದಲಿ ಗ್ರಾಮಕ್ಕೆ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾನು ಈ ದಿನ ಬೆಳಗ್ಗೆ 6.00 ಗಂಟೆಗೆ ಸಾದಲಿ ಗ್ರಾಮಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು, ಸಾದಲಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಸ್ಕ ಧರಿಸಲು, ಸಾನಿಟರೈಜರ್ ಉಪಯೋಗಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸಲು ಸೂಚನೆಗಳನ್ನು ನೀಡಿ ಗಸ್ತು ಮಾಡುತ್ತಿದ್ದು, ಬೆಳಗ್ಗೆ ಸುಮಾರು 10.00 ಗಂಟೆಯಲ್ಲಿ ರಾಜ್ಯ ಸರ್ಕಾರದ ಲಾಕ್ ಡೌನ್ ಪ್ರಯುಕ್ತ ಸಾದಲಿ ಗ್ರಾಮದಲ್ಲಿನ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿಕೊಂಡು ಬರುತ್ತಿದ್ದಾಗ ಬೆಳಗ್ಗೆ ಸುಮಾರು 10.25 ಗಂಟೆಯಲ್ಲಿ ಯಾರೋ ಒಬ್ಬ ಬಾತ್ಮಿದಾರರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಪ್ರಶಾಂತ್ ಹೋಟಲ್ ಸಮೀಪ ರಸ್ತೆಯ ಬದಿಯಲ್ಲ್ಲಿ ಯಾರೋ ಒಬ್ಬ ಆಸಾಮಿ ಒಂದು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಮಧ್ಯ ಸಾಗಾಣಿಕೆ ಮಾಡಿಕೊಂಡುಹೋಗುತ್ತಿರುವುದಾಗಿ ಖಚಿತ ಮಾಹಿತಿ ನೀಡಿದ್ದು, ಅದರಂತೆ ತಾನು ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ಸದರಿ ಆಸಾಮಿಯ ಎಡಗೈಯಲ್ಲಿ ಒಂದು ಬಿಳಿ ಪ್ಲಾಸ್ಟಿಕ್ ಚೀಲವನ್ನು ಸಾಗಿಸುತ್ತಿದ್ದ, ಆಸಾಮಿಯನ್ನು ನಿಲ್ಲಿಸಿ ಸದರಿ ಚೀಲವನ್ನು ಬಿಚ್ಚಲು ತಿಳಿಸಿದಾಗ ಆಸಾಮಿಯು ನಿರಾಕರಿಸಿ ತನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ತಾನು ಸದರಿ ಚೀಲವನ್ನು ತೆಗೆದು ನೋಡಲಾಗಿ ಹೈವಾರ್ಡ್ಸ್ ಪಂಚ್ ಪೈನ್ ವಿಸ್ಕಿಯ 90 ಎಂ.ಎಲ್ ನ 96 ಟೆಟ್ರಾ ಪಾಕೆಟ್ ಗಳಿಂದ್ದು, ಸದರಿ ಒಂದು ಪಾಕೆಟ್ ಬೆಲೆ 35.13/-ರೂಗಳಾಗಿದ್ದು, ಇವುಗಳ ಒಟ್ಟು ಬೆಲೆ 3,372.48/-ರೂಗಳಾಗಿದ್ದು, ಇವುಗಳ ಒಟ್ಟು ಮಧ್ಯದ ಸಾಮಥ್ರ್ಯ 8.640 ಎಂ.ಎಲ್( 8 ಲೀಟರ್ 640 ಎಂ.ಎಲ್) ಇರುತ್ತೆ. ನಾನು ದೂರವಾಣಿ ಮುಖಾಮತರ ಸದರಿ ವಿಚಾರವನ್ನು ಠಾಣಾಧಿಕಾರಿಗಳಿಗೆ ತಿಳಿಸಿದ್ದು ಅವರೂ ಸಹ ಸಾದಲಿ ಗ್ರಾಮಕ್ಕೆ ಆದಷ್ಟು ಬೇಗ ಬರುವುದಾಗಿ ತಿಳಿಸುತ್ತಿದ್ದಂತೆ ಆಸಾಮಿಯು ಸಮವಸ್ತ್ರದಲ್ಲಿದ್ದ ತನ್ನನ್ನು ಈ ಮಾಲು ನನ್ನದು, ಯಾವನು ಮುಟ್ಟುತ್ತಾನೋ ನೋಡೋಣ, ನಾನು ಯಾರು ಗೊತ್ತಾ ನಿನಗೆ ನನ್ ಮಗನೆ, ಚೀಲ ಮುಟ್ಟಿದರೆ ನಿನ್ನನ್ನು ಇಲ್ಲಿಯೇ ಸಾಯಿಸುತ್ತೇನೆ ಎಂದು ಅವಾಚ್ಚವಾಗಿ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆಗ ತಾನು ಆತನನ್ನು ಮೊದಲು ನೀವು ಮಾಸ್ಕ್ ಹಾಕಿಕೊಂಡು, ಸ್ವಲ್ಪ ದೂರ ನಿಂತು ಮಾತನಾಡಿ, ನಾನು ಸರ್ಕಾರಿ ಕೆಲಸ ಮಾಡೊಕ್ಕೆ ಬಂದಿದ್ದು, ನನ್ನ ಕೆಲಸ ನಾನು ಮಾಡಿಕೊಳ್ಳೋಕ್ಕೆ ಬಿಡು ಎಂದಾಗ ಆತನು ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ತನ್ನ ಸಮವಸ್ತ್ರದ ಕತ್ತುಪಟ್ಟಿಯನ್ನು ಎಡಗೈಯಿಂದ ಹಿಡಿದು ಎಳೆದಾಡಿ ಮೇಲ್ಬಾಗದ ಗುಂಡಿಯನ್ನು ಕಿತ್ತುಹಾಕಿ, ಎಡಗೈನಿಂದಲೇ ತನ್ನ ಮೈ ಮೇಲೆ ಹೊಡೆದು, ಗಲಾಟೆಯು ಮಾಡುತ್ತಿದ್ದಾಗ ಬೆಳಗ್ಗೆ 10.35 ಗಂಟೆಗೆ ತಮ್ಮ ಠಾಣಾ ಎ.ಎಸ್.ಐ ಶ್ರೀ ಕೃಷ್ಣಪ್ಪ ಮತ್ತು ಜೀಪ್ ಚಾಲಕ ಬೈರಪ್ಪ ಎ.ಪಿ.ಸಿ-94, ಠಾಣಾ ಸಿಬ್ಬಂಧಿ ಹೆಚ್.ಸಿ-53 ಲೋಕೇಶ್ ಜಿ.ಎಂ ರವರು ಪೊಲೀಸ್ ಜೀಪಿನಲ್ಲಿ ಬಂದು ಗಲಾಟೆ ಬಿಡಿಸಿರುತ್ತಾರೆ. ನಂತರ ತನ್ನ ಮೇಲೆ ಗಲಾಟೆ ಮಾಡಿದ ಆಸಾಮಿಯನ್ನು ವಿಚಾರ ಮಾಡಿ ಅವರ ಹೆಸರು ಮತ್ತು ವಿಳಾಸ ಕೇಳಲಾಗಿ ಮಲ್ಲಿಕಾಜರ್ುನಪ್ಪ ಬಿನ್ ಲೇಟ್ ಪುಟ್ಟಣ್ಣ, 55 ವರ್ಷ, ಲಿಂಗಾಯತರು, ಜಿರಾಯ್ತಿ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದರು. ಆತನಿಗೆ ಮಧ್ಯ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಆತ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದರು. ನಂತರ ಎ.ಎಸ್.ಐ ರವರು ಸದರಿ ಮಾಲನ್ನು ಮತ್ತು ಆಸಾಮಿಯೊಂದಿಗೆ ಜೀಪಿನಲ್ಲಿ ಠಾಣೆಗೆ ವಾಪಸ್ಸು ಹೋಗಿರುತ್ತಾರೆ. ತಾನು ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಸಿಕೊಂಡು ಠಾಣೆಗೆ ಹಾಜರಾಗಿ ಸಮವಸ್ತ್ರದಲ್ಲಿದ್ದ ನನಗೆ ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿ, ತನ್ನ ಮೇಲೆ ಗಲಾಟೆ ಮಾಡಿ, ಅವಾಚ್ಚ ಶಬ್ದಗಳಿಂದ ಬೈದು, ಹೊಡೆದು ಪ್ರಾಣ ಬೆದರಿಕೆ ಹಾಕಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲನೆ ಮಾಡದೇ, ಕೋವಿಡ್-19 ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಮಧ್ಯ ಸಾಗಾಣಿಕೆ ಮಾಡಿದವರ ಮಾಡಿದವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.152/2021 ಕಲಂ. 279,337,338 ಐ.ಪಿ.ಸಿ :-

          ದಿನಾಂಕ:10-05-2021 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಫಿರ್ಯಾದಿದಾರರಾದ ಕಿರಣ್,ಎನ್  ಬಿನ್ ನಾರಾಯಣಪ್ಪ, ಸುಮಾರು 25 ವರ್ಷ, ಪ.ಜಾತಿ, ಕೂಲಿಕೆಲಸ ವಾಸ:ಬಳುವನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆಗೆ ತಾವು  ಮೂರು ಜನ ಮಕ್ಕಳಿದ್ದು ಇನ್ನೂ ಮದುವೆ ಆಗಬೇಕಾದ ಇಬ್ಬರು ಗಂಡುಮಕ್ಕಳು ಇದ್ದು, ಈಗಿರುವಲ್ಲಿ  ತಮ್ಮ ತಂದೆ ನಾರಾಯಣಪ್ಪ ದಿನಾಂಕ:04-05-2021 ರಂದು ಬೆಳಿಗ್ಗೆ ಸಮಯ ಸುಮಾರು 8-00 ಗಂಟೆಯಲ್ಲಿ ಕೂಲಿಕೆಲಸಕ್ಕೆ ತಮ್ಮ ಗ್ರಾಮದ ಒಕ್ಕಲಿಗರ ಜಾತಿಗೆ ಸೇರಿದ ಮುನೇಗೌಡ ರವರ ಕುಟುಂಬದ ವೆಂಕಟೇಶಪ್ಪನ ತೋಟಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ನಮ್ಮ ಗ್ರಾಮದ ಸೀತಾರಾಮ ಶಾಲೆಯ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಮಯ ಸುಮಾರು ಬೆಳಿಗ್ಗೆ 11-00 ಗಂಟೆಯಲ್ಲಿ ವೆಂಕಟೇಶಪ್ಪ ರವರ ಮಗನಾದ ಅನಿಲ್ ಎಂಬುವನು ಟ್ರಾಕ್ಟರ್ ನೊಂದಣಿ ಸಂಖ್ಯೆ ಕೆಎ-18 ಟಿ-9282 ಮತ್ತು ಕೆಎ-43 ಟಿ-2066 ಸಂಖ್ಯೆಯ ಟ್ರಾಕ್ಟರ್ ಅನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ತನ್ನ ತಂದೆ ನಾರಾಯಣಪ್ಪ ರವರಿಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಚಕ್ರವು ತಮ್ಮ ತಂದೆಯ ಎಡಗಾಲಿನ ಮೇಲೆ ಹರಿದು ಕಾಲುಮುರಿಯುವಂತೆ ಅಪಘಾತ ಉಂಟುಮಾಡಿರುತ್ತಾನೆ. ತಮಗೆ ಅಪಘಾತದ ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ವಿಚಾರ ತಿಳಿಸಿದ ತಕ್ಷಣ ತಾವು ಸ್ಥಳಕ್ಕೆ ಹೋಗಿ ಅಪಘಾತದಿಂದ ಗಾಯಗೊಂಡಿದ್ದ ತನ್ನ ತಂದೆಯನ್ನು ಅನಿಲ್ ರವರ ಕಾರಿನಲ್ಲಿಯೇ ಕರೆದುಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಟೌನ್ ನಲ್ಲಿರುವ ಲೀನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲುಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಗೌರವ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ ಈ ಅಪಘಾತದಿಂದ ತನ್ನ ತಂದೆಯ ಎಡಗಾಲು ಮುರಿದಿದ್ದು ತೀವ್ರತರಹದ ಗಾಯವಾಗಿರುತ್ತೆ, ಹಾಗೂ ಎಡ ಬುಜದ ಮೇಲೆ ತರುಚಿದಗಾಯಗಳಾಗಿರುತ್ತೆ, ಅದ್ದರಿಂದ ತನ್ನ ತಂದೆಯವರಿಗೆ ಅತಿವೇಗ ಮತ್ತು ಅಜಾಗರುಕತೆಯಿಂದ ಟ್ರಾಕ್ಟರ್ ಅನ್ನು ಚಾಲನೆ ಮಾಡಿಕೊಂಡು ಬಂದು ಅಪಘಾತ ಉಂಟುಮಾಡಿರುವ ಟ್ರಾಕ್ಟರ್ ಮತ್ತು ಅದರ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ.ಆಸ್ಪತ್ರೆಯಲ್ಲಿ ತಮ್ಮ ತಂದೆಯನ್ನು ನೋಡಿಕೊಂಡು ಚಿಕಿತ್ಸೆಗಾಗಿ ಹಣಹೊಂದಿಸಲು ಪ್ರಯತ್ನಪಡುತ್ತಿದ್ದರಿಂದ ಈ ದೂರನ್ನು ಈ ದಿನ ತಡವಾಗಿ ನೀಡುತ್ತಿದ್ದೆನೆಂದು ಇದ್ದ  ದೂರಿನ ಸಾರಾಂಶದ ಮೇರಗೆ ಠಾಣಾ ಮೊ.ಸಂ. 152/2021 ಕಲಂ 279,337,338 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.153/2021 ಕಲಂ. 323,353,504,506,269,271,34 ಐ.ಪಿ.ಸಿ &  4,5,10 THE KARNATAKA EPIDEMIC DISEASES ACT :-

          ದಿನಾಂಕ: 10-05-2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿ.ಹೆಚ್.ಸಿ-111 ರಮೇಶ್ ಬಿ.ವಿ. ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 10-05-2021 ರಂದು ಪಿ.ಎಸ್.ಐ ಸಾಹೇಬರು ತನಗೆ ಕೋವಿಡ್-19 ತಡೆೆಗಟ್ಟುವ ಸಲುವಾಗಿ ಶಿಡ್ಲಘಟ್ಟ ತಾಲ್ಲೂಕು ಚೀಮಂಗಲ ಗ್ರಾಮಕ್ಕೆ ಬಂದೋಬಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಬೆಳಿಗ್ಗೆ 8-00 ಗಂಟೆಗೆ ಚೀಮಂಗಲ ಗ್ರಾಮಕ್ಕೆ ಹೋಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ತಾನು ಚೀಮಂಗಲ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಈ ದಿನ ಬೆಳಿಗ್ಗೆ 11-20 ಗಂಟೆಯಲ್ಲಿ ಯಣ್ಣೂರು ಗ್ರಾಮದ ಹರೀಶ್ ಬಿನ್ ಗವಿವೀರಭದ್ರಪ್ಪ ಎಂಬುವರು ಆತನ ದ್ವಿಚಕ್ರ ವಾಹನದಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ನ್ನು ತೆಗೆದುಕೊಂಡು ಚೀಮಂಗಲ ಗ್ರಾಮದ ಕಡೆಗೆ ಬಂದಿದ್ದು ಚೀಮಂಗಲ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ತಾನು ಎಲ್ಲಾ ಅಂಗಡಿಗಳು ಬಂದ್ ಆಗಿವೆ ಯಾರೂ ಓಡಾಡಬಾರದು ವಾಪಸ್ಸು ಹೋಗಿ ಎಂದು ಹೇಳುತ್ತಿದ್ದಂತೆ ಅಲ್ಲಿಯೇ ಇದ್ದ ಯಣ್ಣೂರು ಗ್ರಾಮದ ಪರಮೇಶ ಬಿನ್ ಗವಿವೀರಭದ್ರಪ್ಪ, ಚೀಮಂಗಲ ಗ್ರಾಮದ ರಾಜೇಶ ಬಿನ್ ಪುಟ್ಟಣ್ಣ, ಮೂರ್ತಿ ಬಿನ್ ಚಿನ್ನಪ್ಪ ರವರುಗಳು ಮಾಸ್ಕ್ ಗಳನ್ನು ಸಹ ಧರಿಸದೇ ತನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದ ಹೊರಡಿಸಿರುವ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಅಕ್ರಮ ಗುಂಪು ಕಟ್ಟಿಕೊಂಡು ಸದರಿ 4 ಜನ ಆಸಾಮಿಗಳು ಒಟ್ಟಿಗೆ ಸೇರಿಕೊಂಡು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಏ ನೀನು ಯಾವನೋ ನಮ್ಮನ್ನು ಕೇಳುವುದಕ್ಕೆ ನಮ್ಮ ಗ್ರಾಮದಲ್ಲಿ ನಾವು ಯಾವಾಗ ಬೇಕಾದರೂ ಎಲ್ಲಿಬೇಕಾದರೂ ಓಡಾಡುತ್ತೇವೆ ಅದನ್ನು ಕೇಳುವುದಕ್ಕೆ ನೀನು ಯಾರೋ ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದಿದ್ದು ಆ ಪೈಕಿ ಪರಮೇಶ ಬಿನ್ ಗವಿವೀರಭದ್ರಪ್ಪ ಮತ್ತು ರಾಜೇಶ ಬಿನ್ ಪುಟ್ಟಣ್ಣ ರವರುಗಳು ನಾನು ಧರಿಸಿದ್ದ ಖಾಕಿ ಸಮವಸ್ತ್ರದ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ತನ್ನನ್ನು ಕೆಳಗಡೆ ತಳ್ಳಿ ಕೈಗಳಿಂದ ತನ್ನ ಮೇಲೆ ಹಲ್ಲೆ ಮಾಡಿ ತಾನು ಧರಿಸಿದ್ದ ಸಮವಸ್ತ್ರದ ಬಲಭಾಗದ ಜೇಬನ್ನು ಹಿಡಿದು ಹರಿದು ಹಾಕಿದ್ದು, ಹರೀಶ್ ಮತ್ತು ಮೂರ್ತಿ ರವರು ಕೈಗಳಿಂದ ತನ್ನ ಕೆನ್ನೆಗೆ ಹೊಡೆದಿದ್ದು, ಮೇಲ್ಕಂಡವರೆಲ್ಲರೂ ತನಗೆ ಏಕ ವಚನದಲ್ಲಿ ಏರುದ್ವನಿಯಲ್ಲಿ ನಮ್ಮ ಗ್ರಾಮದಲ್ಲಿ ನಾವು ಎಲ್ಲಿ ಬೇಕಾದರೂ ಓಡಾಡಿಕೊಂಡಿರುತ್ತೇವೆ. ಅದನ್ನೆಲ್ಲಾ ಕೇಳಲು ನೀನು ಯಾವನೋ ಎಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನೀನೇನಾದರೂ ನಮ್ಮನ್ನು ಕೇಳಿದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದು ಆಗ ಅಲ್ಲಿಯೇ ಇದ್ದ ಚೀಮಂಗಲ ಗ್ರಾಮದ ವಿಜಯ್ ಬಿನ್ ಕೆಂಪಣ್ಣ, ರಾಜು ಬಿನ್ ಪುಟ್ಟಣ್ಣಯ್ಯ ಮತ್ತು ಅತ್ತಿಗಾನಹಳ್ಳಿ ಗ್ರಾಮದ ಮುನಿಕೃಷ್ಣ ಬಿನ್ ಲೇಟ್ ಮುನಿಅಜ್ಜಪ್ಪ ರವರು ಗಲಾಟೆಯನ್ನು ಕಣ್ಣಾರೆ ನೋಡಿ ತನ್ನನ್ನು ಅವರಿಂದ ಬಿಡಿಸಿರುತ್ತಾರೆ. ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ ಹಾಗೂ ಸರ್ಕಾರ ಹೊರಡಿಸಿರುವ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ ಚೀಮಂಗಲ ಗ್ರಾಮದ ರಾಜೇಶ ಬಿನ್ ಪುಟ್ಟಣ್ಣ, ಯಣ್ಣೂರು ಗ್ರಾಮದ ಹರೀಶ ಬಿನ್ ಗವಿವೀರಭದ್ರಪ್ಪ, ಪರಮೇಶ ಬಿನ್ ಗವಿವೀರಭದ್ರಪ್ಪ ಮತ್ತು ಚೀಮಂಗಲ ಗ್ರಾಮದ ಮೂರ್ತಿ ಬಿನ್ ಚಿನ್ನಪ್ಪ ರವರ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ: 153/2021 ಕಲಂ 323, 353, 504, 506, 269, 271 ರೆ/ವಿ 34 ಐ.ಪಿ.ಸಿ ಮತ್ತು  ಕಲಂ 4, 5, 10 Epidemic Diseases Act-2020 ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 10-05-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080