Feedback / Suggestions

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ: 10/04/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಶ್ರೀನಿವಾಸ, 45 ವರ್ಷ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಗಂಡ ಹುನೇಗಲ್ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಮಗೆ 1] ನೇ ನಂದಕುಮಾರ್, 24 ವರ್ಷ, 2] ನೇ ಅಂಬಿಕಾ, 22 ವರ್ಷ ಎಂಬ ಇಬ್ಬರು ಮಕ್ಕಳಿದ್ದು, ನನ್ನ ಮಗ ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ ಮಾಡಿರುತ್ತಾನೆ. ನಮ್ಮ ಜಮೀನಿನಲ್ಲಿ ನಮ್ಮೊಂದಿಗೆ ವ್ಯವಸಾಯ ಮಾಡಿಕೊಂಡಿದ್ದವನು ಒಂದು ವರ್ಷದಿಂದ ಬಾಡಿಗೆ ಕಾರಿಗೆ ಡ್ರೈವರ್ ಕೆಲಸಕ್ಕೆ ಹೋಗುತ್ತಿದ್ದನು. ನನ್ನ ಮಗಳನ್ನು ಮದುವೆ ಮಾಡಿದ್ದು, ಅವರ ಗಂಡನ ಮನೆಯಲ್ಲಿರುತ್ತಾಳೆ. ದಿನಾಂಕ: 05/04/2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನನ್ನ ಮಗ ನಂದಕುಮಾರ್ ಮನೆಯಲ್ಲಿ ಬಾಡಿಗೆ ಇದೆ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವನು. ವಾಪಸ್ಸು ಮನೆಗೆ ಬಂದಿರುವುದಿಲ್ಲ. ಆತನ ಮೊಬೈಲ್ ನಂ-6361246668 ಗೆ ಪೋನ್ ಮಾಡಿದರೆ ಸ್ವಿಚ್ ಆಪ್ ಆಗಿರುತ್ತೆ. ನನ್ನ ಮಗನ ಬಗ್ಗೆ ಆತನ ಸ್ನೇಹಿತರುಗಳಲ್ಲಿ, ನಮ್ಮ ನೆಂಟರು ಹಾಗೂ ಸಂಬಂದಿಕರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಇದುವರೆವಿಗೂ ನನ್ನ ಮಗ ಪತ್ತೆಯಾಗಿರುವುದಿಲ್ಲ. ನನ್ನ ಮಗನನ್ನು ಎಲ್ಲಾ ಕಡೆ ಹುಡುಕಾಡುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಮಗ ಹೆಚ್.ಎಸ್.ನಂದಕುಮಾರ್ ನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನನ್ವಯ ಪ್ರ.ವ.ವರದಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.145/2021 ಕಲಂ. 15(ಎ) ಕೆ.ಇ ಆಕ್ಟ್ :-

     ದಿನಾಂಕ: 09/04/2021 ರಂದು ಸಂಜೆ 5.00 ಗಂಟೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 09/04/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-75 ಅಂಜನರೆಡ್ಡಿ ರವರು ಠಾಣಾ ಸರಹದ್ದಿನ ಕೈವಾರ ಕ್ರಾಸ್, ತಳಗವಾರ,  ಟಿ.ಹೊಸಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.15 ಗಂಟೆಯ ಸಮಯದಲ್ಲಿ ಹಿರೇಪಾಳ್ಯ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ರಾಮಾಂಜಿನಪ್ಪ ಬಿನ್ ಗಂಗಾಧರಪ್ಪರವರು ಆತನ ಹೋಟೆಲ್ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಹಿರೇಪಾಳ್ಯ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಹೋಟೆಲ್ ಮುಂದೆ  ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2). 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4).ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಾಮಾಂಜಿನಪ್ಪ ಬಿನ್ ಗಂಗಾಧರಪ್ಪ, 40 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ಹಿರೇಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.30 ರಿಂದ ಸಂಜೆ 4.15 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರಾಮಾಂಜಿನಪ್ಪ ಬಿನ್ ಗಂಗಾಧರಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.146/2021 ಕಲಂ. 15(ಎ) ಕೆ.ಇ ಆಕ್ಟ್ :-

     ದಿನಾಂಕ: 09/04/2021 ರಂದು ಸಂಜೆ 6.00 ಗಂಟೆಗೆ ಠಾಣೆಯ ಎ.ಎಸ್.ಐ ವಿ.ಸುಬ್ರಮಣಿ ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮತ್ತು ಪಿ.ಸಿ 197 ಅಂಬರೀಶ್ ರವರಿಗೆ ಗ್ರಾಮಗಳ ಗಸ್ತಿಗೆ ನೇಮಿಸಿದ್ದು, ಅದರಂತೆ ತಾವು ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಿಡುಗುರ್ಕಿ  ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ವಿಜಯ್ ಕುಮಾರ್ ಬಿನ್ ಗಂಗಣ್ಣ ಎಂಬುವವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ವಿಜಯ್ ಕುಮಾರ್ ಬಿನ್ ಗಂಗಣ್ಣ ರವರ ಚಿಲ್ಲರೆ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯಲ್ಲಿ ನೋಡಲಾಗಿ 1) ಕಿಂಗ್ ಪಿಶರ್ ಸ್ಟ್ರಾಂಗ್ ಕಂಪನಿಯ 330 ಎಂ.ಎಲ್ ನ ಮದ್ಯ ತುಂಬಿರುವ 9 ಟಿನ್ ಬೀಯರ್ ಗಳು, 2) ಬ್ಯಾಗ್ ಪೈಪರ್ ವಿಸ್ಕಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳು, 3) ಓಲ್ಡ್ ಟಾವರ್ನ್ ವಿಕ್ಸಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 1 ಟೆಟ್ರಾ ಪಾಕೆಟ್ ಮತ್ತು 4) ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳಿದ್ದು, ಅಂಗಡಿಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 1) ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ 2 ಖಾಲಿ ಟೆಟ್ರಾ ಪಾಕೆಟ್ ಗಳು 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು  ಟೆಟ್ರಾ ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಆವುಗಳಲ್ಲಿ ಸ್ವಲ್ವ ಮದ್ಯವಿರುತ್ತೆ. ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ವಿಜಯ್ ಕುಮಾರ್ ಬಿನ್ ಗಂಗಣ್ಣ, 40 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ನಿಡುಗುರ್ಕಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಒಟ್ಟು ಮದ್ಯವು 3 ಲೀಟರ್ 960 ಮಿ.ಲಿ ಇದ್ದು, ಇವುಗಳ ಓಟ್ಟು ಮೌಲ್ಯ 1274/- ರೂಗಳಾಗಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4.45 ಗಂಟೆಯಿಂದ 5.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ವಿಜಯ್ ಕುಮಾರ್ ಬಿನ್ ಗಂಗಣ್ಣ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ: 10/04/2021 ರಂದು 00:15 ಗಂಟೆಗೆ ಗಾಯಾಳು ಶಾಂತಮ್ಮ ಕೋಂ ಲೇಟ್ ಗೋಪಾಲಪ್ಪ, 60 ವರ್ಷ, ಮೇದಾಜನಾಂಗ, ಕೀರ್ತಿನಗರ, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ ಹಾಜರಾಗಿ ಸಾರಾಂಶವೇನೆಂದರೆ ತನಗೆ ಒಂದು ಗಂಡು ಮತ್ತು 4 ಜನ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿರುತ್ತದೆ. ತನ್ನ ಗಂಡನಾದ ಗೋಪಾಲಪ್ಪ ರವರು ಮರಣ ಹೊಂದಿದ್ದು ತಾನು ಒಬ್ಬಳೆ ಮನೆಯಲ್ಲಿ ವಾಸವಾಗಿದ್ದು, ತನ್ನ ಕೊನೆಯ ಮಗಳಾದ ವೆಂಕಟರತ್ನ ರವರಿಗೆ ಕೋಲಾರದ ಬಂಬೂಬಜಾರ್ ವಾಸಿ ಸೀನಪ್ಪ ರವರ ಮಗನಾದ ಮಂಜುನಾಥ ರವರಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೂ  3 ಜನ ಸಹ ಮಕ್ಕಳಿರುತ್ತಾರೆ. ಹೀಗಿರುವಾಗ ತನ್ನ ಮಗಳಾದ ವೆಂಕಟರತ್ನ ರವರ ಮೇಲೆ ತನ್ನ ಅಳಿಯ  ಮಂಜುನಾಥ ರವರು ಸರಿಯಾಗಿ ನೋಡಿಕೊಳ್ಳದೆ ಗಲಾಟೆ ಮಾಡುತ್ತಿದ್ದು ಈ ವಿಚಾರದಲ್ಲಿ ಹಲವು ಬಾರಿ ರಾಜಿ ಪಂಚಾಯ್ತಿ ಮಾಡಿದರೂ ಸಹ ಸರಿಹೋಗಿರುವುದಿಲ್ಲ ತನ್ನ ಮಗಳು ಸಂಸಾರ ಮಾಡಲು ಆಗದೆ ಈಗ್ಗೆ 8 ವರ್ಷಗಳ ಹಿಂದೆ ಅಳಿಯನಿಂದ ದೂರವಾಗಿ ಬಂದು ತಮ್ಮ ಮನೆಯಲ್ಲಿಯೇ ವಾಸವಾಗಿರುತ್ತಾಳೆ. ಆದರೂ ಸಹ ತನ್ನ ಅಳಿಯ ತಮ್ಮ ಮನೆಗೆ ಆಗಾಗ ಬಂದು ತಮ್ಮ ಮಗಳ ಮೇಲೆ ಜಗಳ ಮಾಡಿಕೊಂಡು ಹೋಗುತ್ತಿದ್ದು ತನ್ನ ಮಗಳು ನಿನ್ನ ಜೊತೆ ಬರಲು ಇಷ್ಟವಿಲ್ಲವೆಂದು ಹೇಳಿದರೂ ಕೇಳಿರುವುದಿಲ್ಲ, ಹೀಗಿರುವಲ್ಲಿ ಈ ದಿನ ದಿ: 09/04/2021 ರಂದು ರಾತ್ರಿ ಸುಮಾರು 9:45 ಗಂಟೆಯಲ್ಲಿ ತಾನು ಮತ್ತು ತನ್ನ ಮಗಳು ವೆಂಕಟರತ್ನ ಮನೆಯಲ್ಲಿರುವಾಗ ತನ್ನ ಅಳಿಯ ಮಂಜುನಾಥ ರವರು ಕಂಠಪೂರ್ತಿ ಕುಡಿದುಕೊಂಡು ಬಂದು ಮನೆಯಲ್ಲಿದ್ದ ತಮ್ಮನ್ನು ಏ ಬೇವರಿಸಿ ಮುಂಡೆಗಳಾ ಆಚೆ ಬನ್ನಿ ನಿಮಗೆ ಒಂದು ಗತಿ ಕಾಣಿಸುತ್ತೇನೆಂತ ಕೆಟ್ಟ ಮಾತುಗಳಿಂದ ಬೈಯುತ್ತಿದ್ದಾಗ  ತಾನು ಮತ್ತು ತನ್ನ ಮಗಳು ಆಚೆ ಬಂದು ಯಾಕೆ ನೀನು ಮನೆಯ ಬಳಿ ಬಂದು ಈ ರೀತಿ ಗಲಾಟೆ ಮಾಡುತ್ತೀಯಾ ನಿನ್ನ ಜೊತೆ ಬರಲು ನನ್ನ ಮಗಳಿಗೆ ಇಷ್ಠವಿಲ್ಲವೆಂತ ಹೇಳಿದರೂ  ಕೇಳದೆ ಕೂಗಾಡಿ ತನ್ನ ಮೇಲೆ ಜಗಳ ಮಾಡಿ ಕೈಗಳಿಂದ ಮೈಮೇಲೆ  ಹೊಡೆದು ಆತನ ಬಳಿಯಿದ್ದ ಯಾವುದೋ ಒಂದು ಕಬ್ಬಿಣದ ಚಾಕುವಿನಿಂದ ತನ್ನ ಕತ್ತಿನ ಹಿಂಭಾಗದ ಬಳಿ ತಿವಿದು ರಕ್ತಗಾಯಪಡಿಸಿದ ಪುನಃ ಅದೇ ಚಾಕುವಿನಿಂದ ಮತ್ತೆ ತಿವಿಯಲು ಬಂದಾಗ ತನ್ನ ಕೈಗಳನ್ನು ಅಡ್ಡಇಟ್ಟಾಗ ಎರಡೂ ಕೈಗೆ ಚಾಕು ತಗುಲಿ ಗಾಯವಾಗಿರುತ್ತೆ, ನಂತರ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿದ್ದು ಅಷ್ಟರಲ್ಲಿ ತನ್ನ ಮಗಳು ಮತ್ತು ಪಕ್ಕದ ಮನೆಯವರು ಬಂದು ಜಗಳ ಬಿಡಿಸಿ ತನ್ನನ್ನು ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಮೇಲೆ ಜಗಳ ಮಾಡಿ ಕೈಗಳಿಂದ ಹೊಡೆದು ಚಾಕುವಿನಿಂದ ತಿವಿದು ರಕ್ತಗಾಯಗೊಳಿಸಿ ಪ್ರಾಣಬೆದರಿಕೆ ಹಾಕಿದ ಮೇಲ್ಕಂಡ ಮಂಜುನಾಥ ರವರ ಮೇಲೆ ಸೂಕ್ತ ಕಾನೂನು  ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 353,505(1)(B) ಐ.ಪಿ.ಸಿ & 66 INFORMATION TECHNOLOGY ACT 2008:-

     ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪ್ರಸ್ತುತ ದಿನಾಂಕ: 07.04.2021 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಂದ 06ನೇ ವೇತನ ಆಯೋಗದ ನಿಗಮಗಳಲ್ಲಿ ಅನುಷ್ಟಾನಕ್ಕೆ ಸಂಭಂದಿಸಿದಂತೆ ಆನಿರ್ಧಾಷ್ಠಾವಧಿ ಮುಷ್ಕರವನ್ನು ಹಮ್ಮಿಕೊಂಡಿರುತ್ತಾರೆ ಈ ಸಂಭಂದ ಕೆಲವು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಿ ಕರ್ತವ್ಯದ ಮೇಲೆ ನಿಯೋಜಿಸಲಾಗುತ್ತಿದೆ. ದಿನಾಂಕ: 08.04.2021 ರಂದು ಚಿಂತಾಮಣಿ ಘಟಕ ಶ್ರೀ ಬಿ.ವೆಂಕಟಚಲಪತಿ ಸಂಚಾರ ನಿಯಂತ್ರಕರು ಮತ್ತು ಶ್ರೀ ವಿ ನಾಗಪ್ಪ ಕುಶಲ ಕರ್ಮಿ ರವರು ಘಟಕಕ್ಕೆ ಹಾಜರಾಗಿದ್ದು ಪೊಲೀಸ್ ಬಂದೋಬಸ್ತ್ ಮಾರ್ಗಕ್ಕೆ ನಿಯೋಜಿಸಿ ಕಾರ್ಯಾಚರಣೆ ಮಾಡಲಾಗಿರುತ್ತದೆ. ಸದರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ ನಂತರ ಈ ಮೇಲ್ಕಂಡ ಇಬ್ಬರು ಸಿಬ್ಭಂದಿಗಳಿಗೆ ಸಂಭಂದಿಸಿದಂತೆ ಅತ್ಯಂತ ಆಕ್ಷೇಪಾರ್ಣಾರ್ಹ ಶ್ರದ್ದಾಂಜಲಿ) ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಹರಿಬಿಟ್ಟು ಅವರ ಮನೋಸ್ಥೈರ್ಯ ಕುಂದಿಸಿರುವುದಿಲ್ಲದೆ ಇತರೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವುದನ್ನು ಸಹ ಅಡ್ಡಿ ಪಡಿಸಿರುತ್ತಾರೆ ಈ ಆಕ್ಷೇಪಣಾರ್ಹ ವೀಡಿಯೋವನ್ನು ಕೆ ಎಸ್ ಆರ್ ಟಿ ಸಿ ಚಿಂತಾಮಣಿ ಘಟಕದ ಸಿಬ್ಬಂದಿಗಳ ವಾಟ್ಸಾಪ್ ಗ್ರೂಪ್ ಪೋನುಗಳಿಂದ ಫಾರ್ವರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿರುತ್ತಾರೆ ಈ ವಿಡಿಯೋಗಳನ್ನು ಹರಿಬಿಟ್ಟ ಸಂಭಂದ ಪ್ರಾಮಾಣಿಕ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಆಡಚಣೆ ಉಂಟು ಮಾಡಿರುವ ಹಾಗೂ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿರುವ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಈ ವಿಡಿಯೋ ಮೂಲಕ ಪ್ರಚೋದಿಸಿ ಸಾರ್ವಜನಿಕ ಪ್ರಮಾಣಿಕರಿಗೆ ಸಂಸ್ಥೆಯಿಂದ ಸಾರಿಗೆ ಸೌಲಭ್ಯವನ್ನು ಒದಗಿಸಲು ಆಡಚಣೆ ಉಂಟುಮಾಡಿರುವವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 78(III) ಕೆ.ಪಿ ಆಕ್ಟ್:-

     ದಿನಾಂಕ:09/04/2021 ರಂದು ಸಂಜೆ 7-30 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ 364 ರವರು ಘನ ನ್ಯಾಯಾಲಯದ ಅನುಮತಿ ತಂದು ನೀಡಿದ್ದರ ಸಾರಾಂಶವೆನೆಂದರೆ  ಗೌರಿಬಿದನೂರು ವೃತ್ತದ ಪೊಲಿಸ್ ವೃತ್ತ ನಿರೀಕ್ಷಕರಾದ ಎಸ್.ಡಿ ಶಶಿಧರ ಮದ್ಯಾಹ್ನ 3-45 ಗಂಟೆಯಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 30/03/2021 ರಂದು ಮದ್ಯಾಹ್ನ 1-30 ವೃತ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತನಗೆ ಬಾತ್ಮಿದಾರರಿಂದ ಗೌರಿಬಿದನೂರು ಹಿಂದೂಪುರ ವೃತ್ತದಲ್ಲಿ ಜಬೀವುಲ್ಲಾ ಬಿನ್ ಬಷೀರ್ ಸಾಬ್ ಎಮಬುವರು ತನ್ನ ಬಾಬತ್ತು ತಳ್ಳುವ ಬಾಳೆಹಣ್ಣಿನ ಗಾಡಿಯ ಮುಂಭಾಗ ಅಕ್ರಮವಾಗಿ ಸಾರ್ವಜನಿಕರಿಗೆ ಮಟ್ಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ವೃತ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಹೆಚ್.ಸಿ-224 ವೆಂಕಟೇಶ್ ರವರನ್ನು ಹಾಗೂ ಪಂಚರನ್ನು ಕರೆದುಕೊಂಡು ಕೆ.ಎ-40 ಜಿ-1222 ನೊಂದಣಿ ಸಕರ್ಾರಿ ಜೀಪ್ ನಲ್ಲಿ ಚಾಲಕ ಎಪಿಸಿ- 119 ಹೇಮಂತ್ ರವರೊಂದಿಗೆ ಹಿಂದೂಪುರ ವೃತ್ತದ ಬಳಿ ಹೋಗಿ ಸ್ವಲ್ಪ ದುರದಲ್ಲಿ ಜೀಪ್ನ್ನು ನಿಲ್ಲಿಸಿ ನಾವುಗಳು ಮರೆಯಲ್ಲಿ ನಿಂತು ನೊಡಲಾಗಿ ಯಾರೋ ಒಬ್ಬ ಅಸಾಮಿ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಒಮದು ರೂಪಾಯಿಗೆ ನಂಬರ್ ಹೊಡೆದರೆ 70 ರೂಪಾಯಿಗಳನ್ನು ಕೊಡುವುದಾಗಿ ಅಮೀಷಾ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತೀದ್ದನ್ನು ಖಚಿತಪಡಿಸಿಕೊಂಡು ಪಮಚರೊಂದಿಗೆ ಸದರಿ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಜಬೀವುಲ್ಲಾ ಬಿನ್ ಬಷೀರ್ ಸಾಬ್, ಮುಸ್ಲಿಂ ಜನಾಂಗ, ಬಾಳೆ ಹಣ್ಣಿನ ವ್ಯಾಪಾರ, ವಾಸ: ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಮದು ತಿಳಿಸಿದ್ದು ಈತನ ಕೈಯಲ್ಲಿ ನೀಲಿ ಬಣ್ಣದ ಬಾಲ್ ಪೆನ್ನು, ಮತ್ತೊಂದು ಕೈಯಲ್ಲಿ ವಿವಿದ ಅಂಕಿಗಳಿಗೆ ವಿವಿದ ಮೊತ್ತವನ್ನು ಬರೆದಿರುವ ಒಂದು ಮಟ್ಕಾ ಚೀಟಿ ಇದ್ದು ಹಣವನ್ನು ಪರಿಶೀಸಲಾಗಿ 1820-00 (ಒಂದು ಸಾವಿರ ಎಂಟು ನೂರ ಇಪ್ಪತ್ತು) ರೂಗಳಿದ್ದು ಸದರಿ ಮಟ್ಕಾ ಚಿಟಿ, ಬಾಲ್ ಪೆನ್ ಮತ್ತು ಹಣವನ್ನು ಮದ್ಯಾಹ್ನ 2-15 ಗಂಟೆಯಿಂದ 3-15 ಗಂಟೆಯವರೆಗೆ ಪಂಚರ ಸಮಕ್ಷಮ ಮುಂದಿನ ತನಿಖೆಯ ಬಗ್ಗೆ ಅಮಾನತ್ತುಪಡಿಸಿಕೊಂಡು ಮಾಲನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತಮ್ಮ ವಶಕ್ಕೆ ನೀಡಿತ್ತಿದ್ದು 78 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದೆ.

 

7. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 279 ಐ.ಪಿ.ಸಿ:-

     ದಿನಾಂಕ;09/04/2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ತನ್ನ ಹೆಂಡತಿ ರವರು ಹೀಗೆ ಸುಮಾರು 3 ವರ್ಷಗಳ ಹಿಂದೆ ಕೆಎ-12 ಎ-8758 ನೊಂದಣಿ ಸಂಖ್ಯೆಯ ಟಾಟಾ ಕಂಪನಿಯ ಕಂಟೈನರ್ ವಾಹನವನ್ನು ತಗೆದುಕೊಂಡಿದ್ದೆವು ,ಮತ್ತು ಇದನ್ನು ಮೂರು ವರ್ಷಗಳಿಂದ ಆಂದ್ರ ಪ್ರದೇಶದ ತುಮಕುಂಟಾ ಬಳಿಯಿರುವ ವಿಪ್ರೋ ಕಂಪನಿಗೆ ಬಾಡಿಗೆಗೆ ಬಿಟ್ಟಿರುತ್ತೇವೆ, ಮತ್ತು ಸುಮಾರು ಮೂರು ತಿಂಗಳಿಂದ ರಾಜೇಶ್ ಜೆ ಬಿನ್ ಜಯಪ್ಪ.21 ವರ್ಷ.ನಾಯಕರು,ವಾಸ;ಉಪ್ಪಾರಹಳ್ಳಿ ಗ್ರಾಮ ಗುಂಡಗಲ್ಲು ಪೋಸ್ಟ್ ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ, ರವರು ಮೇಲ್ಕಂಡ ವಾಹನವನ್ನು ಚಾಲಕನಾಗಿ ಚಾಲನೆ   ಮಾಡಿಕೊಂಡು ಇರುತ್ತಾನೆ. ಅದರಂತೆ ದಿನಾಂಕ;08/04/2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ತಾನು ತಮ್ಮ ಗ್ರಾಮದಲ್ಲಿ ಇದ್ದಾಗ ಚಾಲಕ ರಾಜೇಶ್ ರವರು ತನಗೆ ಕರೆ ಮಾಡಿ ಕಂಟನೈರ್ ಅಪಘಾತವಾಗಿರುವ ವಿಚಾರ ತಿಳಿಸಿದರು.ಅದರಂತೆ ತಾನು ಸ್ಥಳಕ್ಕೆ ಬಂದು  ನೋಡಲಾಗಿ ವಿಚಾರ ನಿಜವಾಗಿತ್ತು ನಂತರ ತಾನು ವಿಚಾರ ತಿಳಿಯಲಾಗಿ .ದಿನಾಂಕ08/04/2021 ರಂದು ಬೆಳಿಗ್ಗೆ 10-00 ಗಂಟೆಯಿಂದ ವಿಪ್ರೋ ಕಂಪನಿಯ ಕೆಎ-12 ಎ-8758 ನೊಂದಣಿ ಸಂಖ್ಯೆಯ ಕಂಟೈನರ್ ವಾಹನದಲ್ಲಿ  ಸುಮಾರು 4 ಅಡಿ ಉದ್ದದ 492 ಐರನ್ ರಾಡ್ ಗಳು ಲೋಡ್ ಮಾಡಿಕೊಂಡು ಬೆಂಗಳೂರಿನ ಪೀಣ್ಯಾ ಕೈಗಾರಿಕಾ  ಪ್ರದೇಶ್ ಕ್ಕೆ ಹೋಗಲು ಗೌರಿಬಿದನೂರು ನ ಬೈ ಪಾಸ್ ಮೂಲಕ ಬೆಳಿಗ್ಗೆ 10-45 ಗಂಟೆಯಲ್ಲಿ ಹೋಗುತ್ತಿದ್ದಾಗ ದರ್ಗಾ ಬಳಿ  ಹೋಗುತ್ತಿದ್ದಾಗ ಮೇಲ್ಕಂಡ ವಾಹನವನ್ನು ಅತಿವೇಗ ಮತ್ತು ಅಜಾಗರತೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಪರಿಣಾಮ ಕಂಟೈನರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಲಗಡೆಗೆ ಬಿದ್ದು ಹೋಗಿರುತ್ತೆ ಇದರ ಪರಿಣಾಮ ಕಂಟನೈರ್ ಬಲ ಬಾಗ ,ಮುಂಭಾಗ ಹಿಂಬಾಗ, ಜಖಂ ಆಗಿರುತ್ತೆ. ಮತ್ತು  ಚಾಲಕನಿಗೆ ಸಣ್ಣ ಪುಟ್ಟ  ಮೂಗೇಟುಗಳು ಆಗಿರುತ್ತೆ. ಆದ್ದರಿಂದ ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಮೇಲ್ಕಂಡ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ. ವಾಹನದಲ್ಲಿದ್ದ ಬೆಲೆ ಬಾಳುವ ಮೇಲ್ಕಂಡ ರಾಡ್ ಗಳನ್ನು ಬೇರೆ ವಾಹನಕ್ಕೆ ಸಾಗಿಸಿ ಕಂಪನಿಯವರು ನೀಡಿದ್ದ ಸ್ಥಳಕ್ಕೆ ಸಾಗಿಸಿಕೊಂಡು ಹೋಗಿ ಅವರಿಗೆ ನೀಡಿ ಬಂದಿದ್ದರಿಂದ ದೂರು ನೀಡಲು ತಡವಾಗಿದ್ದು .ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಿಸಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 323,324,307,504 ಐ.ಪಿ.ಸಿ:-

     ದಿನಾಂಕ:09/04/2021 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿ ರಾಮಲಕ್ಷ್ಮಮ್ಮ  ಕೊಂ ಲೇಟ್ ಮುನಿವೆಂಕಟಪ್ಪ 52 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ ವಾಸ: ಮಂಡಿಕಲ್ಲು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಒಟ್ಟು ನಾಲ್ಕು ಜನರು ಈ ಪೈಕಿ 1ನೇ ಸರಸ್ವತಿ 2ನೇ ವೆಂಕಟೇಶ 27 ವರ್ಷ, 3ನೇ ಶ್ರೀನಿವಾಸ, 4ನೇ ಪದ್ಮಾ ಆಗಿದ್ದು. ಈ ದಿನ ದಿನಾಂಕ 09/04/2021 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ತಾನು ನಮ್ಮ ಮನೆಯಿಂದ ತನ್ನ ಅಣ್ಣ ಚಿಕ್ಕಚೆನ್ನಪ್ಪ ರವರ ಮನೆಯ ಹತ್ತಿರ ಹೋಗಲು ನಮ್ಮ ಗ್ರಾಮದ ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಅಲ್ಲಿ ತನ್ನ ಮಗ ವೆಂಕಟೇಶ ರವರು ನಮ್ಮ ಗ್ರಾಮದ ನಮ್ಮ ಜನಾಂಗದ ಮಲ್ಲೇಶ ಬಿನ್ ಲೇಟ್ ಕೃಷ್ಣಪ್ಪ ರವರನ್ನು ಕುರಿತು ನಾನು ಕೊಟ್ಟಿರುವ ಹಣವನ್ನು ಕೊಡು ಎಂದು ಕೇಳಿದನು. ಆಗ ಮಲ್ಲೇಶ ನಾನು ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಎಂತ ಹೇಳಿ ಇದ್ದಕ್ಕಿದಂತೆ ಎದ್ದು ತನ್ನ ಮಗ ವೆಂಕಟೇಶನಿಗೆ ಕಾಲಿನಿಂದ ಒದ್ದು ಬೋಳಿ ನನ್ನ ಮಗನೇ ನನಗೆ ಹಣವನ್ನು ಕೇಳುತ್ತೀಯಾ ನೀನು ಇದ್ದರೆ ತಾನೇ ನನಗೆ ಹಣವನ್ನು ಕೇಳೋದು ಎಂತ ಹೇಳಿ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಸಾಯಿಸುತ್ತೇನೆಂತ ಹೇಳಿ ಸಾಯಿಸುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವನ್ನು ತೆಗೆದುಕೊಂಡು ತನ್ನ ಮಗನ ಹೊಟ್ಟೆಯ ಎಡಭಾಗಕ್ಕೆ ತಿವಿದು ರಕ್ತಗಾಯ ಉಂಟುಪಡಿಸಿದನು. ಆಗ ಅಲ್ಲಿಯೇ ಇದ್ದ ತಾನು ಮತ್ತು ಅಲ್ಲಿದ ತನ್ನ ಅಣ್ಣನ ಮಗ ನಾಭೂಷಣ ಬಿನ್ ದೊಡ್ಡಚೆನ್ನಪ್ಪ, 28 ವರ್ಷ, ಶಿವಕುಮಾರ್ ಬಿನ್ ಚಿಕ್ಕ ನರಸಿಂಹಪ್ಪ 29 ವರ್ಷ, ಹಾಗೂ ತನ್ನ ಅಕ್ಕನ ಮಗ ಚಿನ್ನಾಯಪ್ಪ ಬಿನ್ ವೆಂಕಟಪ್ಪ 35 ವರ್ಷ, ಮಂಡಿಕಲ್ಲು ಗ್ರಾಮ ರವರು ಜಗಳ ಬಿಡಿಸಿ ಸ್ಥಳದಲ್ಲಿ ಉಪಚರಿಸಿದವು ವಿಷಯ ತಿಳಿದು ಅಲ್ಲಿಗೆ ಬಂದ ತನ್ನ ಅಕ್ಕನ ಮಗ ಅಂಜಿ ಬಿನ್ ನರಸಿಂಹಪ್ಪ, 30 ವರ್ಷ ರವರು ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ ನಲ್ಲಿ  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೀಗಿರುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ ಇಲ್ಲಿನ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ವಿಚಾರ ತಿಳಿಯಿತು. ಮಲ್ಲೇಶ ತನ್ನ ಮಗನಿಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಚಾಕುವಿನಿಂದ ಹೊಟ್ಟೆ ಎಡಬಾಗಕ್ಕೆ ತಿವಿದು ರಕ್ತಗಾಯ ಉಂಟುಪಡಿಸಿದ್ದರಿಂದ ಮಲ್ಲೇಶನ ಮೇಲೆ ಕಾನೂನು ರೀತಿ ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.97/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ:09-04-2021 ರಂದು  ರಾತ್ರಿ 7-00 ಗಂಟೆಯಲ್ಲಿ   ಸಿಬ್ಬಂದಿಯಾದ  ಸಿಪಿಸಿ-543 ಸುಧಾಕರ ರವರು ಠಾಣೆಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ  ದಿನಾಂಕ: 09-04-2021 ರಂದು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು  ಹಂಡಿಗನಾಳ, ಚೌಡಸಂದ್ರ,ಮೇಲೂರು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-30 ಗಂಟೆ ಸಮಯದಲ್ಲಿ ಅಪ್ಪೇಗೌಡನಹಳ್ಳಿ  ಗ್ರಾಮದ ಕಡೆ ಹೋಗುತ್ತಿದ್ದಾಗ ಬಾತ್ಮಿದಾರರಿಂದ ಅಪ್ಪೆಗೌಡನಹಳ್ಳಿ ಗ್ರಾಮದ ಹನುಮಂತೇಗೌಡ ಬಿನ್ ಮುನಿಯಪ್ಪ ರವರು  ಒಂದು ಗೋಣಿ ಚೀಲದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಮತ್ತು ಬಾಟಲ್ ಗಳನ್ನು  ದಾಸ್ತಾನು ಮಾಡಿಕೊಂಡು ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ  ಯಾವುದೋ  ನಂಬರಿಲ್ಲದ ಆಟೋದಲ್ಲಿ  ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ  ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರಗೆ ನಾನು ದ್ವಿಚಕ್ರವಾಹನದಲ್ಲಿ ಶಿಡ್ಲಘಟ್ಟ- ಅಪ್ಪೇಗೌಡನಹಳ್ಳಿ ರಸ್ತೆಯ ಹನುಮಂತೆಗೌಡ ಬಿನ್ ಮುನಿಯಪ್ಪ ರವರ ಚಿಲ್ಲರೆ ಅಂಗಡಿಯಿಂದ ಸ್ವಲ್ಪ ಹಿಂದೆ ಹೋಗುತ್ತಿದ್ದಾಗ  ಹನುಮಂತೆಗೌಡ ರವರ ಚಿಲ್ಲರೆ ಅಂಗಡಿ ಮುಂಭಾಗ ರಸ್ತೆಯಲ್ಲಿ  ಒಂದು ಯಾವುದೋ ಒಂದು ನಂಬರಿಲ್ಲದ ಆಟೋ ನಿಲ್ಲಿಸಿದ್ದು  ಸದರಿ ಆಟೋದಿಂದ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟೀಕ್ ಗೋಣಿ ಚೀಲವನ್ನು ತೆಗೆದುಕೊಂಡು ಇಳಿದಿದ್ದು ಆಟೋ ಅಲ್ಲಿಂದ ಹೊರಟು ಹೋಗಿರುತ್ತೆ ನಂತರ ನಾನು ಸದರಿ  ವ್ಯಕ್ತಿಯ ಬಳಿ ಹೋಗುವಷ್ಠರಲ್ಲಿ ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ತನ್ನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಂತೆ ಆಸಾಮಿಯು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಅಲ್ಲಿಯೇ ಬಿಸಾಡಿ  ಓಡಿ ಹೋಗಿದ್ದು,  ಸದರಿ ಚೀಲವನ್ನು ಪರಿಶೀಲಿಸಲಾಗಿ 1] HAYWARDS  PUNCH WHISKY  90 ml ನ  10 ಟೆಟ್ರಾ ಪ್ಯಾಕೆಟ್ಗಳು, 2] ORIGINAL CHOICE WHISKY 90 ml ನ 15 ಟೆಟ್ರಾ ಪ್ಯಾಕೆಟ್ಗಳು, 3] Raja Whisky 90 ml ನ  5 ಟೆಟ್ರಾ ಪ್ಯಾಕೆಟ್ಗಳು 4]  Kingfisher Strong Premium Beer 650 ml ನ  9 ಬಾಟಲ್ ಗಳು  ಇದ್ದವು . ಸ್ಥಳದಿಂದ  ಪರಾರಿಯಾದ ಆಸಾಮಿಯ ಹೆಸರು ವಿಳಾಸವನ್ನು ಗ್ರಾಮಸ್ಥರಿಂದ ತಿಳಿಯಲಾಗಿ ಹನುಮಂತೆಗೌಡ ಬಿನ್ ಮುನಿಯಪ್ಪ, ಸುಮಾರು 45 ವರ್ಷ, ಜಿರಾಯ್ತಿ, ವಕ್ಕಲಿಗರು, ಅಪ್ಪೇಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿದ್ದ ಮದ್ಯದ ಟೆಟ್ರಾ ಪ್ಯಾಕೇಟ್ಗಳು/ಬಾಟಲ್ ಗಳು ಇದ್ದ  ಪ್ಲಾಸ್ಟೀಕ್ ಚೀಲವನ್ನು ವಶಕ್ಕೆ ಪಡೆದುಕೊಂಡು ರಾತ್ರಿ 7-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾ ಪ್ಯಾಕೇಟ್ಗಳು/ ಬಾಟಲ್ ಗಳನ್ನು  ಸಾರ್ವಜನಿಕರಿಗೆ ಮಾರಾಟ ಮಾಡುವು ಸಲುವಾಗಿ  ತೆಗೆದುಕೊಂಡು ಹೋಗುತ್ತಿದ್ದ ಹನುಮಂತೆಗೌಡ ಬಿನ್ ಮುನಿಯಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರಗೆ ಠಾಣಾ ಮೊ.ಸಂ 97/2021 ಕಲಂ 32,34 ಕೆ.ಇ.ಆಕ್ಟ್ ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 10-04-2021 05:19 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080