ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 64/2021 ಕಲಂ. 379 ಐ.ಪಿ.ಸಿ :-

  ದಿನಾಂಕ: 10-03-2021 ರಂದು ಮದ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಶಿವರಾಜ್ ಕುಮಾರ ಬಿನ್ ರಾಜಾರೆಡ್ಡಿ, 30 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ 23 ವಾರ್ಡ, ಬಾಗೇಪಲ್ಲಿ ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು 2016 ನೇ ಇಸವಿಯಲ್ಲಿ ಬುಲೆಟ್ ಖರೀಸಿದ್ದು, ತಾಂತ್ರಿಕ ಕಾರಣದಿಂದ ಇಲ್ಲಿಯವರೆವಿಗೂ ನೊಂದಣಿಯಾಗಿರುವುದಿಲ್ಲ. ದಿನಾಂಕ 05/03/2021 ರಂದು ಎಂದಿನಂತೆ ನನ್ನ ಬಾಬತ್ತು ನೊಂದಣಿ ಸಂಖ್ಯೆ ಇಲ್ಲದ ( ಚಾಸಿಸ್ ನಂ ME3U3S5C1GD582410 , ಎಂಜಿನ್ ನಂ  U3S5C180930 ) ಬುಲೆಟ್ ವಾಹನವನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಗೆ ಹೋಗಿರುತ್ತೆನೆ. ದಿನಾಂಕ 06/03/2021 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ಹೊರಗೆ ಬಂದು ನೋಡಲಾಗಿ ನನ್ನ ಬಾಬತ್ತು ಬುಲೆಟ್ ವಾಹನ  ಸ್ಥಳದಲ್ಲಿ ಇಲ್ಲದೇ ಇದ್ದು ಎಲ್ಲ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಆದ್ದರಿಂದ ನನ್ನ ಬಾಬತ್ತು 60,000/- ರೂ ಬೆಲೆ ಬಾಳುವ ನೊಂದಣಿ ಸಂಖ್ಯೆ ಇಲ್ಲದ ಬುಲೆಟ್ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ನನ್ನ ಬುಲೆಟ್ ವಾಹನ ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು . ಎಲ್ಲಾ ಕಡೆ ಹುಡುಕಾಡಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುತ್ತಾರೆ.

 

2. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 16/2021 ಕಲಂ. 420 ಐ.ಪಿ.ಸಿ & 66(D) INFORMATION TECHNOLOGY ACT 2000 :-

  ದಿನಾಂಕ:10-03-2021 ರಂದು ಪಿರ್ಯಾದಿ  ಶ್ರೀ  ಜಿ,ಎಮ್ ರೋಷನ್ ಬೇಗ್ ಬಿನ್ ಲೇಟ್ ಮಿರ್ಜಾ ಹಸೇನ್ ಬೇಗ್. 58 ವರ್ಷ, ಮುಸ್ಲೀಂ ಜನಾಂಗ, ವೆಲ್ಡಿಂಗ್ ಕೆಲಸ.  ವಾಸ ಜೈಬೀಮ್ ನಗರ, 12ನೇ ವಾರ್ಡ್. ಚಿಕ್ಕಬಳ್ಳಾಪುರ ನಗರ, ಮೊ-9342643352 ರವರು ಠಾಣೆಗೆ ಹಾಜರಾಗಿ ನಿಡಿದ  ದೂರು ಏನೆಂದರೆ ನಾನು ಚಿಕ್ಕಬಳ್ಳಾಪುರ ನಗರದಲ್ಲಿರುವ ಬ್ಯಾಂಕ್ ಆಪ್ ಬರೋಡ ಬ್ಯಾಂಕಿನಲ್ಲಿ 39270100014599  ರ ಸಂಖ್ಯೆಯ ಉಳಿತಾಯ ಖಾತೆಯನ್ನು ಮತ್ತು ಆ ಖಾತೆಗೆ ಎ ಟಿ ಎಂ ಕಾರ್ಡನ್ನು ಸಹ ಹೊಂದಿರುತ್ತೇನೆ. ಈಗಿರುವಲ್ಲಿ ದಿನಾಂಕ:02-03-2021 ರಂದು ನನಗೆ  7427958181, 8343964407 ಮತ್ತು 8017074282 ಸಂಖ್ಯೆಗಳಿಂದ   ನನ್ನ ಪೋನ್ ನಂಬರ್ ಗೆ ಪೋನ್ ಮಾಡಿ ನೀವು ಮೊದಲು 1200/-ರೂಗಳನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ 5600/-ರೂಗಳನ್ನು ಕಟ್ಟಿ ನಿಮಗೆ 2-3 ದಿನಗಳಲ್ಲಿ 20,000/- ರೂ ಕೊಡುತ್ತೇವೆಂತ ತಿಳಿಸಿದರು ನಾನು ಇದು ನಿಜವೆಂತ  ನಂಬಿ  ಅವರು ತಿಳಿಸಿದ ಹಾಗೆ ಅವರು ನೀಡಿದ್ದ ಐ.ಡಿ.ಬಿ.ಎಲ್. ಬ್ಯಾಂಕಿನ ಖಾತೆ ಸಂಖ್ಯೆ-1469104000166188 ಗೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿರುವ  ಮನಿ ಟ್ರಾನ್ಸ್ ಫರ್ ನಿಂದ ಹಣ ವರ್ಗಾವಣೆ ಮಾಡಿಸಿರುತ್ತೇನೆ, ನಂತರ  ಮತ್ತೆ ನೀವು 5600/-ರೂಗಳನ್ನು  ವರ್ಗಾವಣೆ ಮಾಡಬೇಕೆಂತ ತಿಳಿಸಿದ್ದು ಅದರಂತೆ ಅವರು ಹೇಳಿದ ಹಾಗೆ ಪುನಃ 56000/-ರೂಗಳನ್ನು  ಅವರ ಖಾತೆಗೆ ಹಣ ವರ್ಗಾವಣೆ ಮಾಡಿಸಿರುತ್ತೇನೆ,  ನಂತರ ಅವರು ಪುನಃ ನನಗೆ ಕಾಲ್ ಮಾಡಿ ನೀವು 42,000/-ರೂಗಳನ್ನು ನೀವು ಡಿಪಾಸಿಟ್ ಮಾಡಬೇಕೆಂತ ತಿಳಿಸಿದರು. ನಂತರ ಅವರು ಹೇಳಿದ ಹಾಗೆ ನನ್ನ ಬಳಿ ಇದ್ದ 22,000/-ರೂಗಳನ್ನು ಮೇಲ್ಕಂಡ ಅವರ ಖಾತೆಗೆ ಹಣ ವರ್ಗಾವಣೆ ಮಾಡಿಸಿರುತ್ತೇನೆ, ನಂತರ ದಿನಾಂಕ:03-03-2021 ರಂದು  ಎರಡು ಬಾರಿ 10.000/-ರೂಗಳಂತೆ ಒಟ್ಟು 20,000/- ರೂಗಳನ್ನು ಹಣ ವರ್ಗಾವಣೆ ಮಾಡಿಸಿರುತ್ತೇನೆ, ನಂತರ ಅವರು ಪುನಃ ಪೋನ್ ಮಾಡಿ ಇನ್ನೂ 25,000/-ರೂಗಳನ್ನು ಹಾಕಿ ನಂತರ ನಿಮ್ಮ ಖಾತೆಗೆ ಎಲ್ಲಾ ಹಣ ಜಮೆ ಆಗುತ್ತದೆ ಎಂತ ನಂಬಿಸಿ ನನ್ನ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದು,  ನಾನು ನಿಜವೆಂತ ನಂಬಿ ಪುನಃ ನನ್ನ ಬಳಿ ಇದ್ದ 15.000/-ರೂಗಳನ್ನು ಮೇಲ್ಕಂಡ ಅವರ  ಖಾತೆಗೆ ಹಣ ವರ್ಗಾವಣೆ ಮಾಡಿಸಿ ನನ್ನ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿರುತ್ತೇನೆ, ಆದರೆ ಸದರಿಯವರು ನನಗೆ ಹಣವನ್ನು ವಾಪಸ್ಸು ನೀಡದೇ ನಿಮ್ಮ ಹಣ ನಿಮಗೆ ಬರಲು ಇನ್ನು ನೀವು 26,000/ ರೂಗಳನ್ನು ಟ್ರಾನ್ಸ ಫರ್ ಮಾಡಬೇಕೆಂತ ತಿಳಿಸಿದ್ದು ಅದಕ್ಕೆ ನನಗೆ ಅನುಮಾನ ಬಂದು ಈದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದೇನೆ,  ನನಗೆ  ಹೆಚ್ಚಿನ ಹಣ  ಕೊಡುವುದಾಗಿ ನಂಬಿಸಿ ನನ್ನಿಂದ ಒಟ್ಟು 69,400/- ರೂಗಳನ್ನು ವರ್ಗಾವಣೆ ಮಾಡಿಸಿಕೊಂಡು  ವಂಚಿಸಿರುವ  ಮೇಲ್ಕಂಡ ಮೊಬೈಲ್ ಸಂಖ್ಯೆಯವರನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 14/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-09/03/2021 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಮುನಿವೆಂಕಟರೋಣಪ್ಪ ಬಿನ್ ಲೇಟ್ ಬ್ಯಾಟೆಪ್ಪ 65 ವರ್ಷ, ಗೊಲ್ಲರು ಜನಾಂಗ, ಜಿರಾಯ್ತಿ, ದೊಡ್ಡಕಿರುಗುಂಬೆ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:06/03/2021 ರಂದು ತನ್ನ ಮಗನಾದ ನರಸಿಂಹಮೂರ್ತಿ  45 ವರ್ಷ, ಜಿರಾಯ್ತಿ ರವರು ತಮ್ಮ KA-53-EC-9172 ರ ದ್ವಿಚಕ್ರವಾಹನದಲ್ಲಿ ತರಕಾರಿಯನ್ನು ತರಲು ಚಿಕ್ಕಬಳ್ಳಾಪುರಕ್ಕೆ ಬಂದು  ವಾಪಸ್ಸು ಗ್ರಾಮಕ್ಕೆ ಬರಲು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಶಿಡ್ಲಘಟ್ಟ ಎನ್.ಎಚ್-234 ಎಂ.ಜಿ ರಸ್ತೆಯ ವಿಶ್ವೇಶ್ವರಯ್ಯ ಶಾಲೆಯ ಮುಂಭಾಗದ ರಸ್ತೆಯ ಬಳಿ ಬರುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬಂದ ಯಾವುದೋ ಆಟೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ನರಸಿಂಹಮೂರ್ತಿ ರವರು ಚಾಲನೆ ಮಾಡುತ್ತಿದ್ದ KA-53-EC-9172 ರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಸದೇ ಹೊರಟು ಹೋದ ಪರಿಣಾಮ ತನ್ನ ಮಗ ನರಸಿಂಹಮೂರ್ತಿ ರವರು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತಲೆಯ ಹಿಂಭಾಗ, ಬಲ ಕಾಲಿಗೆ ಹಾಗೂ ಬಲ ಕೈಗೆ ರಕ್ತ ಗಾಯಗಳಾಗಿದ್ದು ತಕ್ಷಣ ಅಲ್ಲಿನ ಸ್ಥಳಿಯರ ಸಹಾಯದಿಂದ ಅಲ್ಲಿಯೇ ಇದ್ದ ತಮ್ಮ ಗ್ರಾಮದ ನಾಗೇಶ್ ಡಿ.ಎಂ ಬಿನ್ ಲೇಟ್ ಮುನಿಪಾಪಣ್ಣ 28 ವರ್ಷ ರವರು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುವುದಾಗಿ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ತಾನು ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಅಪಘಾತ ಪಡಿಸಿದ ಆಟೋ ಚಾಲಕನ ಬಗ್ಗೆ ಕೇಳಲಾಗಿ ಸದರಿ ಯಾವುದೋ ಆಟೋ ಚಾಲಕ ಅಪಘಾತ ಪಡಿಸಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು ತನ್ನ ಮಗ ನರಸಿಂಹಮೂರ್ತಿ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಲಹಂಕದ ಅಶ್ವಿನಿ ಆಸ್ಪತ್ರೆಗೆ ಸೇರಿಸಿ ಗಾಯಾಳುವಿಗೆ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ದಿನಾಂಕ:-09/03/2021 ರಂದು ಸದರಿ ಅಪಘಾತ ಪಡಿಸಿ ಸ್ಥಳದಿಂದ ವಾಹನ ಸಮೇತ ಹೊರಟು ಹೋದ ಯಾವುದೋ ಆಟೋ ಹಾಗೂ ಚಾಲಕನನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 323,324,341,504,506 ಐ.ಪಿ.ಸಿ :-

  ದಿನಾಂಕ: 08.03.2021 ರಂದು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ದೇವರಾಜರೆಡ್ಡಿ ಬಿನ್ ಲೇಟ್ ನಾರಾಯಣಪ್ಪ, 40 ವರ್ಷ, ವಕ್ಕಲಿಗ, ಬಲಜಿಗರು, ವಾಸ: ಜೀವಜಲ ಫ್ಯಾಕ್ಟರಿ ಪಕ್ಕ, ಪ್ರಭಾಕರ ಬಡಾವಣೆ, ಚಿಂತಾಮಣಿ ನಗರ ರವರಯ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಚಿಂತಾಮಣಿ ನಗರದ ಎಪಿಎಂಸಿ ಯಾರ್ಡ್ ಜಿಡಿಆರ್ ಎಂಬ ಟಮೋಟೊ ಮಂಡಿಯನ್ನು ಇಟ್ಟುಕೊಂಡಿರುತ್ತೆನೆ. ಹೀಗ್ಗೆ ಒಂದು ವರ್ಷದಿಂದ ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ ರೈಸ್ ಯಾರ್ಡ್ ನಲ್ಲಿ ದನಿಯಾ ಹಾಗೂ ಮೇಣಸಿನ ಕಾಯಿ ಮಂಡಿ ಇಟ್ಟುಕೊಂಡಿರುವ ಮಂಜುನಾಥ್ ಊಲವಾಡಿ ರವರು ನನಗೆ ಪರಿಚಯವಿದ್ದು ಹೀಗೆ ಸುಮಾರು 2-3 ತಿಂಗಳಿನಿಂದ ಹಣಕಾಸಿನ ವ್ಯಾವಹಾರದಲ್ಲಿ ತಕರಾರು ಆಗಿ ಇಬ್ಬರಿಗೂ ಮನಸ್ಥಾಪ ಉಂಟಾಗಿ ನಾನು ಮಂಜುನಾಥ್ ರವರ ಜೊತೆ ಮಾತನಾಡುತ್ತಿರುವುದಿಲ್ಲ ಹೀಗಿರುವಾಗ ದಿನಾಂಕ: 08.03.2021 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ನನ್ನ ಸ್ನೇಹಿತನಾದ ಸತೀಶ್ ರವರು ನೀನು ಮಂಜುನಾಥ್ ರವರಿಗೆ ಹಣ ಕೊಡದೇ ಮೋಸ ಮಾಡಿರುತ್ತಿಯಾ ಎಂದು ನನ್ನ ಬಳಿ ಹೇಳಿದ್ದಾನೆ ಎಂದು ತಿಳಿಸಿದ್ದು ಅದಕ್ಕೆ ನಾನು ಮಂಜುನಾಥ್ ರವರಿಗೆ ಯಾವುದೇ ಹಣ ಕೊಡಬೇಕಾಗಿದ್ದರೂ ಸಹ ಈ ರೀತಿ ಸುಳ್ಳು ಹೇಳುತ್ತಿದ್ದರಿಂದ ನಾನು ಮಂಜುನಾಥ್ ರವರಿಗೆ ಪೋನ್ ಮಾಡಿ ಮಂಜುನಾಥ್ ರವರನ್ನು ಕುರಿತು ಏಕೆ ನೀನು ನನ್ನ ಮೇಲೆ ಸುಳ್ಳು ಹೇಳಿದ್ದಿಯಾ ಎಂದು ಕೇಳಿದಾಗ ಏ ಲೋಪರ್ ನನ್ನ ಮಗನೆ ನೀನು ಎಲ್ಲಿದ್ದಿಯಾ ಅಲ್ಲೇ ಇರು ನಾನು ಬರುತ್ತೆನೆಂದು ಅವಾಚ್ಯ ಶಬ್ದಗಳಿಂದ ಬೈದು ಪೋನ್ ಕಟ್ ಮಾಡಿರುತ್ತಾನೆ ನಂತರ ಇದೇ ದಿನ ಬೆಳಿಗ್ಗೆ 11:30 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಿಂದ ಜೀವ ಜಲದ ಕಡೆ ಹೋಗುತ್ತಿದ್ದಾಗ ಮಂಜುನಾಥ್ ರವರು ಬಂದು ನನ್ನನ್ನು ಅಡ್ಡಗಟ್ಟಿ ಏ ನನ್ನ ಮಗನೇ ಏಕೆ ನೀನು ನನಗೆ ಪೋನ್ ಮಾಡಿದ್ದು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಮಚ್ಚಿನಿಂದ ನನ್ನ ಕೈಗೆ ಹಾಗೂ ಬಾಯಿಯ ಬಳಿ ಹಾಕಿ ರಕ್ತಗಾಯ ಪಡಿಸಿರುತ್ತೆನೆ ನಂತರ ಕೈಯಿಂದ ನನ್ನ ಹಣೆಗೆ ಗುದ್ದಿ ಊತಗಾಯವನ್ನುಂಟು ಮಾಡಿ ಕೇಳಕ್ಕೆ ತಳ್ಳಿ ಬೆನ್ನಿಗೆ ಹಾಗೂ ಕಾಲಿಗೆ ಒದ್ದು ಮೂಗೇಟುಉಂಟು ಮಾಡಿ ಇನ್ನೊಂದು ಸಾರಿ ನನ್ನ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬೀಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ನಂತರ ಅಲ್ಲಿಯೇ ಇದ್ದ ಕೃಷ್ಣಪ್ರಸಾದ್ @ ಬಬ್ಲೂ ಬಿನ್ ಸೀತಾರಾಂ ಹಾಗೂ ಸತೀಶ್ ಬಿನ್ ಮೇಲೂರಪ್ಪ ತಪಥೇಶ್ವರ ಕಾಲೋನಿ ರವರು ಜಗಳ ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಆದ್ದರಿಂದ ನನಗೆ ಮಚ್ಚಿನಿಂದ ಹಲ್ಲೇ ಮಾಡಿ ಕೈಗಳಿಂದ ಹೊಡೆದು ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 32/2021 ಕಲಂ. 511,315 ಐ.ಪಿ.ಸಿ :-

  ದಿನಾಂಕ: 10/03/2021 ರಂದು ಶಿಡ್ಲಘಟ್ಟ ತಾಲ್ಲೂಕು, ಲಕ್ಕೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ. ಪ್ರಿಯಾಂಕ ಕೋಂ ವೆಂಕಟರಮಣ 28 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ಸ್ವಂತ ಸ್ಥಳ ಚಿಂತಾಮಣಿ ನಗರದ ಆಶ್ರಯ ಬಡಾವಣೆ ಆಗಿರುತ್ತೆ. ಸುಮಾರು 8-9 ವರ್ಷಗಳ ಹಿಂದೆ ತನಗೆ ಲಕ್ಕೇನಹಳ್ಳಿ ಗ್ರಾಮದ ವಾಸಿ ವೆಂಕಟರಮಣ ಎಂಬುವವರೊಂದಿಗೆ ಮದುವೆಯಾಗಿದ್ದು ತಮಗೆ ಈ ಹಿಂದೆ ನಾಲ್ಕು ಹೆಣ್ಣು ಮಕ್ಕಳು ಆಗಿದ್ದು ಆ ಪೈಕಿ ಮೂರು ಹೆಣ್ಣು ಮಕ್ಕಳು ಮೃತರಾಗಿದ್ದು ಒಂದು ಹೆಣ್ಣು ಮಗು ಇರುತ್ತೆ. ತಾನು 4 ರಿಂದ 5 ತಿಂಗಳ ಹಿಂದೆ ಮತ್ತೆ ಗರ್ಭವತಿಯಾಗಿರುತ್ತೇನೆ. ದಿನಾಂಕ: 08/03/2021 ರಂದು ತನ್ನ ಗಂಡನಾದ ವೆಂಕಟರಮಣ ರವರು ಚೊಕ್ಕರೆಡ್ಡಿಹಳ್ಳಿ ಗ್ರಾಮದಿಂದ ಬಂದು ನೀನು ಗರ್ಭವತಿಯಾಗಿದ್ದು ನಮಗೆ ಹುಟ್ಟುವ ಮಕ್ಕಳನ್ನು ನಮಗೆ ಸಾಕಲು ಆಗುವುದಿಲ್ಲ ಗರ್ಭಪಾತದ ಮಾತ್ರೆಗಳನ್ನು ತಂದಿರುವುದಾಗಿ ತಿಳಿಸಿ ದಿನಾಂಕ: 08/03/2021 ರಂದು ಒಂದು ಮಾತ್ರೆ ಹಾಗು ದಿನಾಂಕ: 09/03/2021 ರಂದು ಒಂದು ಮಾತ್ರೆಯನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದು ಅದರಂತೆ ಮಾತ್ರೆಗಳನ್ನು ತೆಗೆದುಕೊಂಡಿರುತ್ತೇನೆ. ತನಗೆ ಹೊಟ್ಟೆ ನೋವು ಜಾಸ್ತಿ ಆಗಿದ್ದರಿಂದ ದಿನಾಂಕ: 09/03/2021 ರಂದು ರಾತ್ರಿ ಸುಮಾರು 10.00 ಗಂಟೆಗೆ ತನ್ನ ಮೈದುನನಾದ ಗೋವಿಂದರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ಆದ್ದರಿಂದ ತನಗೆ ಗರ್ಭಪಾತದ ಮಾತ್ರೆಗಳನ್ನು ನೀಡಿರುವ ತನ್ನ ಗಂಡ ವೆಂಕಟರಮಣ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 57/2021 ಕಲಂ. 279,337,304(A) ಐ.ಪಿ.ಸಿ :-

  ದಿನಾಂಕ:10/03/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ಬಿನ್ ಪುಟ್ಟರಾಜು, ಗೊಲ್ಲರು, ವಿದ್ಯಾರ್ಥಿ, ವಾಸ ಪುಟ್ಟಲಿಂಗಯ್ಯನಪಾಳ್ಯ, ದೊಡ್ಡಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ತಂದೆ ಪುಟ್ಟರಾಜು ಬಿನ್ ನರಸಿಂಹಮೂರ್ತಿ ವಯಸ್ಸು ಸುಮಾರು 50 ವರ್ಷ, ವ್ಯವಸಾಯ ವೃತ್ತಿ, ವಾಸ ಪುಟ್ಟಲಿಂಗಯ್ಯನ ಪಾಳ್ಯ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರು ಈ ದಿನ ದಿನಾಂಕ:10/03/2021 ರಂದು ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಪಿರ್ಯಾದಿದಾರರಿಗೆ ಪರಿಚಯವಿರುವ ಪಕ್ಕದ ಗ್ರಾಮ ಗುಂಡಪ್ಪನಾಯಕನಹಳ್ಳಿ ವಾಸಿ,  ಶಿವಕುಮಾರ್ ಬಿನ್ ನರಸಿಂಹಯ್ಯ, ವಯಸ್ಸು ಸುಮಾರು 35 ವರ್ಷ ಇವರೊಂದಿಗೆ KA-43-W-0131 ದ್ವಿಚಕ್ರ ವಾಹನದಲ್ಲಿ ಕೆಲಸದ ಮೇಲೆ  ಹಿಂದೂಪುರಕ್ಕೆ ಹೋಗಿದ್ದು, ಇದೇ ದಿನ ಮಧ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಯಾರೋ ಪಿರ್ಯಾದಿದಾರರ ಮೊಬೈಲ್ ಗೆ ಕರೆ ಮಾಡಿ, ನಿಮ್ಮ ತಂದೆ ಪುಟ್ಟರಾಜು ಹಾಗೂ ಶಿವಕುಮಾರ್ ಎಂಬುವವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ, ಇವರನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಕೂಡಲೇ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯ ಬಳಿಗೆ ಬಂದು ನೋಡಲಾಗಿ, ತಂದೆ ಪುಟ್ಟರಾಜು ರವರಿಗೆ ಹಣೆ, ಮೂಗು,ಬಲ ಮುಂಗೈಗೆ ಎಡಕಾಲಿನ ಮೇಲೆ ತರಚಿದ ಗಾಯಗಳಾಗಿ,  ಬಲಮೊಣಕಾಲಿನಲ್ಲಿ ತೀವ್ರವಾದ ರಕ್ತಗಾಯವಾಗಿ ಮೃತಪಟ್ಟಿದ್ದರು. ಶಿವಕುಮಾರ್ ರವರಿಗೂ ಸಹ ಮುಖ ಹಾಗು ಕೈಕಾಲುಗಳಿಗೆ ತರಚಿದ ಹಾಗು ರಕ್ತಗಾಯಗಳಾಗಿದ್ದವು.  ವಿಚಾರಿಸಲಾಗಿ,  ಈ ದಿನ ದಿನಾಂಕ; 10/03/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಪಿರ್ಯಾದಿದಾರರ ಗ್ರಾಮದಿಂದ ಹಿಂದೂಪುರಕ್ಕೆ KA-43-W-0131 ದ್ವಿಚಕ್ರ ವಾಹನದಲ್ಲಿ ಹೋಗಿ, ಕೆಲಸ ಮುಗಿಸಿಕೊಂಡು, ವಾಪಸ್ಸು ಗ್ರಾಮಕ್ಕೆ ಬರಲು  ಬೆಳಿಗ್ಗೆ ಸುಮಾರು 11-20 ಗಂಟೆಯಲ್ಲಿ ವಿಧುರಾಶ್ವತ್ಥ ಕ್ರಾಸ್ ಸಮೀಪ ಬರುತ್ತಿದ್ದಾಗ, ಗೌರೀಬಿದನೂರು ಕಡೆಯಿಂದ ಹಿಂದೂಪುರಕೆ ಕಡೆಗೆ ಹೋಗುತ್ತಿದ್ದ KA.04.MS.1410 ಕಾರಿನ ಚಾಲಕ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, KA-43-W-0131 ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ,  ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ  ಶಿವಕುಮಾರ್ ರವರಿಗೆ ಮುಖ, ಬಲಭುಜ, ಬಲ ಮೊಣಕೈ, ಬಲ ಮೊಣಕಾಲು, ಎಡಕೈಗೆ ತರಚಿದ ಗಾಯಗಳಾಗಿದ್ದು, ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ತಂದೆ ಪುಟ್ಟಟರಾಜುರವರಿಗೆ ಮುಖಕ್ಕೆ ತರಚಿದ ಹಾಗು ರಕ್ತ ಗಾಯಗಳಾಗಿ, ಎಡಮೊಣಕಾಲಿಗೆ ತರಚಿದ ಗಾಯಗಳಾಗಿ,  ಬಲ ಮೊಣಕಾಲಿಗೆ ರಕ್ತಗಾಯವಾಗಿ, ಮೂಳೆ ಮುರಿದು ತೀವ್ರವಾಗಿ ಗಾಯಗೊಂಡಿದ್ದು, ಸಾರ್ವಜನಿಕರು ಆಂಬುಲೆನ್ಸ್ ಕರೆಸಿ, ಅದರಲ್ಲಿ ಮಧ್ಯಾಹ್ನ 12-00 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಮ್ಮ ತಂದೆ ಮೃತಪಟ್ಟಿರುತ್ತಾರೆಂದು ತಿಳಿಯಿತು. ದಿನಾಂಕ:10/03/2021 ರಂದು ಬೆಳಿಗ್ಗೆ ಸುಮಾರು 11-20 ಗಂಟೆಯ ಸಮಯದಲ್ಲಿ ವಿದುರಾಶ್ವತ್ಥ ಕ್ರಾಸ್ ಬಳಿ KA-43-W-0131 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಶಿವಕುಮಾರ್ ಹಾಗು ಪಿರ್ಯಾದಿದಾರರ ತಂದೆ ಪಟ್ಟರಾಜು ರವರಿಗೆ  ಗೌರೀಬಿದನೂರು ಕಡೆಯಿಂದ ಹೋದ, KA.04.MS.1410 ಕಾರಿನ ಚಾಲಕ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಹೊಡೆಸಿದ ಪರಿಣಾಮ, ಪಿರ್ಯಾದಿದಾರರ ತಂದೆ ಹಾಗು ಶಿವಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ತಂದೆಯನ್ನು  ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಮೃತಪಟ್ಟಿರುತ್ತಾರೆ.ಅಪಘಾತ ಮಾಡಿದ    KA.04.MS.1410 ಕಾರಿನ ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ತಿಳಿಯಬೇಕಾಗಿರುತ್ತೆ.   ಈ ಅಪಘಾತ ಮಾಡಿದ KA.04.MS.1410 ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 57/2021 ಕಲಂ. 457,380  ಐ.ಪಿ.ಸಿ :-

  ದಿನಾಂಕ: 10-03-2021 ರಂದು ಮದ್ಯಾಹ್ನ 12.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಾರ್ತೀಕ್ ಪಿ.ಬಿ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಹೇಮಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು ಒಂದುವರೆ ವರ್ಷದಿಂದ ಶಿಡ್ಲಘಟ್ಟ ತಾಲ್ಲೂಕು ಹೇಮಾರ್ಲಹಳ್ಳಿ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸವನ್ನು ಮಾಡಿಕೊಂಡಿರುತ್ತೇನೆ. ತಾನು ಮತ್ತು ತಮ್ಮ ಆಸ್ಪತ್ರೆಯ ಸಿಬ್ಬಂಧಿಯವರು ಪ್ರತಿ ದಿನ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-30 ಗಂಟೆಯವರೆಗೆ ಕೆಲಸವನ್ನು ಮಾಡಿಕೊಂಡು ಆಸ್ಪತ್ರೆಗೆ ಬೀಗವನ್ನು ಹಾಕಿಕೊಂಡು ಹೋಗುತ್ತಿದ್ದು, ದಿನಾಂಕ: 09-03-2021 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಸಂಜೆ 4-30 ಗಂಟೆಗೆ ಆಸ್ಪತ್ರೆಗೆ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿದ್ದು, ಹೀಗಿರುವಾಗ ಈ ದಿನ ದಿನಾಂಕ: 10-03-2021 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರನಾದ ಗಣೇಶ್ ರವರು ತನಗೆ ಪೋನ್ ಮಾಡಿ ಆಸ್ಪತ್ರೆಯಲ್ಲಿ ಕಳ್ಳತನವಾಗಿರುವುದಾಗಿ ವಿಷಯವನ್ನು ತಿಳಿಸಿದ್ದು, ನಂತರ ತಾನು ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ನಿನ್ನೆ ದಿನ ರಾತ್ರಿ ಯಾರೋ ಕಳ್ಳರು ತಮ್ಮ ಆಸ್ಪತ್ರೆಯ ಮೇಲ್ಭಾಗದಲ್ಲಿರುವ ಡೋರ್ ಅನ್ನು ಯಾವುದೋ ಆಯುಧದಿಂದ ಮೀಟಿ ಆಸ್ಪತ್ರೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ನಂತರ ಮುಂಬದಿಯ ಡೋರ್ ಲಾಕ್ ಅನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು, ನಂತರ ತಾನು ಆಸ್ಪತ್ರೆಯಲ್ಲಿ ಕಳ್ಳತನವಾಗಿರುವ ವಸ್ತುಗಳನ್ನು ಪರಿಶೀಲಿಸಲಾಗಿ 1) 2.25 ಕೆ.ವಿ ಸಾಮಥ್ರ್ಯದ ಲುಮಿನಸ್ ಕಂಪನಿಯ ಒಂದು ಯುಪಿಎಸ್-13,861-00 ರೂ, 2) 120 ಎ.ಹೆಚ್ ನ ಟುಬಲರ್ ಪೂಷನ್ ಕಂಪನಿಯ 2 ಬ್ಯಾಟರಿಗಳು-18,960-00 ರೂ, 3) ಒಂದು ಎಲ್.ಇ.ಡಿ ಟಿ.ವಿ-24,000-00 ರೂ, 4) ಒಂದು ಡಿ.ವಿ.ಆರ್ ಮತ್ತು ಅದರ ಹಾರ್ಡ್ ಡಿಸ್ಕ್-18,000 ರೂ ಬೆಲೆ ಒಟ್ಟು 74,821-00 ರೂ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಆದ ಕಾರಣ ನಮ್ಮ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 10-03-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080