ಅಭಿಪ್ರಾಯ / ಸಲಹೆಗಳು

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.07/2021  ಕಲಂ. 36 (1) (B),32,34 ಕೆ.ಇ ಆಕ್ಟ್:-

     ದಿನಾಂಕ:09/02/2021 ರಂದು ರಾತ್ರಿ 8:30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ ಸಿಇಎನ್ ಪೊಲೀಸ್ ಇನ್ಸ್ ಪೆಕ್ಟರ್  ರವರಾದ ಎನ್ ರಾಜಣ್ಣ  ರವರು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಎನ್. ರಾಜಣ್ಣ ಆದ ನಾನು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ದಿಬ್ಬೂರು, ಅಜ್ಜಕದಿರೇನಹಳ್ಳಿ, ದಿಬ್ಬೂರಹಳ್ಳಿ, ಪಾಳ್ಯಕೆರೆ ಹಾಗೂ ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 6-30 ಗಂಟೆಗೆ ಚೇಳೂರು ಸರ್ಕಲಿಗೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಹೊಸಹುಡ್ಯ ಗ್ರಾಮದ ವಾಸಿಯಾದ ಈಶ್ವರರೆಡ್ಡಿ ಬಿನ್ ಪೆದ್ದಂಟಿ ಸುಬ್ಬಾರೆಡ್ಡಿ, 38 ವರ್ಷ, ವಕ್ಕಲಿಗರು, ಜಿ.ವಿ.ಆರ್ ಡಾಬಾ ಮಾಲೀಕರು, ವಾಸ ಹೊಸಹುಡ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಹೊಸಹುಡ್ಯ ಗ್ರಾಮದಲ್ಲಿರುವ ತನ್ನ ಜಿ.ವಿ.ಆರ್ ಡಾಬಾದಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) ಕೆ.ಎಫ್ ಸ್ಟ್ರಾಂಗ್ 22 ಬಿಯರ್ ಬಾಟೆಲ್, 2) 650 ಎಂ.ಎಲ್ ಸಾಮರ್ಥ್ಯದ 12 ಟುಬೋರ್ಗ್ ಬಿಯರ್ ಬಾಟೆಲ್ 3) 180 ಎಂ.ಎಲ್ ಸಾಮರ್ಥ್ಯದ 10 ಓಲ್ಡ್ ಟವೆರನ್ ಟೆಟ್ರಾ ಪಾಕೆಟ್ 4) 180 ಎಂ.ಎಲ್ ಸಾಮರ್ಥ್ಯದ 11 ಬ್ಯಾಗ್ ಪೈಪರ್ ವಿಸ್ಕಿಯ ಟೆಟ್ರಾ ಪಾಕೆಟ್ 5) 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಟೆಟ್ರಾ ಪಾಕೆಟ್ 6) 180 ಎಂ.ಎಲ್ ಸಾಮರ್ಥ್ಯದ 05 ರಾಯಲ್ ಸ್ಟಾಗ್ ಡಿಲಕ್ಸ್ ವಿಸ್ಕಿಯ ಬಾಟೆಲ್ 7) 180 ಎಂ.ಎಲ್ ಸಾಮರ್ಥ್ಯದ 9 ಓಲ್ಡ್ ಅಡ್ಮಿರಲ್ ವಿಎಸ್ ಓಪಿ ಬ್ರಾಂದಿಯ ಟೆಟ್ರಾ ಪಾಕೆಟ್ ಗಳಿದ್ದು, ಇದರ ಒಟ್ಟು ಸಾಮರ್ಥ್ಯ 27 ಲೀಟರ್ 501 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 9906/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಆಸಾಮಿಗೆ ಮಾಲನ್ನು ಎಲ್ಲಿಂದ ತಂದಿರುವುದಾಗಿ ಕೇಳಿದ್ದು, ಸದರಿ ಆಸಾಮಿ ಚೇಳೂರಿನ ಐಶ್ವರ್ಯ ಬಾರ್ ಮತ್ತು ರೆಸ್ಟೊರೆಂಟಿನ ಕ್ಯಾಷಿಯರ್ ಆದ ಮಂಜುನಾಥ್ ರವರ ಬಳಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಈಶ್ವರರೆಡ್ಡಿ ಬಿನ್ ಪೆದ್ದಂಟಿ ಸುಬ್ಬಾರೆಡ್ಡಿ ಹಾಗೂ ಸರ್ಕಾರದ ಕಾನೂನು ಮತ್ತು ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿ ಮಧ್ಯವನ್ನು ವಿತರಿಸಿ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಅನುವು ಮಾಡಿದ ಚೇಳೂರಿನ ಐಶ್ವರ್ಯ ಬಾರ್ ಮತ್ತು ರೆಸ್ಟೊರೆಂಟಿನ ಕ್ಯಾಷಿಯರ್ ಆದ ಮಂಜುನಾಥ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊಸಂ:07/2021 ಕಲಂ 32,34,36(1)(B) KE Act ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

2. ಚೇಳೂರು ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 32,34,36 (1) (B)  ಕೆ.ಇ ಆಕ್ಟ್:-

     ದಿನಾಂಕ:09/02/2021 ರಂದು ರಾತ್ರಿ 9:45 ಗಂಟೆಗೆ  ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ ಸಿಇಎನ್  ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್  ರವರು ಮಾಲು , ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ಆದ ನಾನು ಮತ್ತು ಸಿಬ್ಬಂದಿಯವರಾದ ಕೃಷ್ಣಪ್ಪ, ಸಿ.ಹೆಚ್.ಸಿ-80, ಅಶೋಕ್, ಸಿಪಿಸಿ-142 ಹಾಗೂ ಜೀಪ್ ಚಾಲಕನಾದ ಮಹಬೂಬ್ ಬಾಷಾ, ಎಪಿಸಿ-138 ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಕಡೆ ಗಸ್ತು ಮಾಡಿಕೊಂಡು ರಾತ್ರಿ 8-15 ಗಂಟೆಗೆ ಬಾಗೇಪಲ್ಲಿ ತಾಲ್ಲೂಕಿನ ನಿಮ್ಮಕಾಯಲಪಲ್ಲಿ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಇದೇ ಗ್ರಾಮದ ವಾಸಿಯಾದ ವೆಂಕಟರವಣ ಬಿನ್ ಮಸ್ತಾನ್ ರೆಡ್ಡಿ, 52 ವರ್ಷ, ವಕ್ಕಲಿಗರು, ವಾಸ ನಿಮ್ಮಕಾಯಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ತನ್ನ ಭವಾನಿ ಡಾಬಾದಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) ಮಧ್ಯ ತುಂಬಿದ್ದ 650 ಎಂ.ಎಲ್ ಸಾಮರ್ಥ್ಯದ 12 ಟುಬೋರ್ಗ್ ಬಿಯರ್ ಬಾಟೆಲ್ 2) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 41 ಓಲ್ಡ್ ಟವೆರನ್ ವಿಸ್ಕಿಯ ಟೆಟ್ರಾ ಪಾಕೆಟ್ 3) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 31 ನಂಬರ್ 1 ಮ್ಯಾಕ್ ಡೋವೆಲ್ಸ್ ಇಂಡಿಯನ್ ಬ್ರಾಂದಿ ಟೆಟ್ರಾ ಪಾಕೆಟ್ ಗಳು 4) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 12 ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳು 5) ಮಧ್ಯ ತುಂಬಿದ್ದ 90 ಎಂ.ಎಲ್ ಸಾಮರ್ಥ್ಯದ 28 ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ ಮಧ್ಯ ತುಂಬಿದ ಟೆಟ್ರಾ ಪಾಕೆಟ್ ಗಳಿದ್ದು, ಇದರ ಒಟ್ಟು ಸಾಮರ್ಥ್ಯ 25 ಲೀಟರ್ 440 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 13041/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ  ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಆಸಾಮಿಗೆ ಮಾಲನ್ನು ಎಲ್ಲಿಂದ ತಂದಿರುವುದಾಗಿ ಕೇಳಿದ್ದು, ಸದರಿ ಆಸಾಮಿ ಚೇಳೂರಿನ ಭಾರತ್ ವೈನ್ಸಿನ ಕ್ಯಾಷಿಯರ್ ಆದ ಶ್ರೀನಿವಾಸರೆಡ್ಡಿ ರವರ ಬಳಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ವೆಂಕಟರವಣ ಬಿನ್ ಮಸ್ತಾನ್ ರೆಡ್ಡಿ ಹಾಗೂ ಸರ್ಕಾರದ ಕಾನೂನು ಮತ್ತು ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿ ಮಧ್ಯವನ್ನು ವಿತರಿಸಿ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಅನುವು ಮಾಡಿದ ಚೇಳೂರಿನ ಭಾರತ್ ವೈನ್ಸಿನ ಕ್ಯಾಷಿಯರ್ ಆದ ಶ್ರೀನಿವಾಸರೆಡ್ಡಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊಸಂ:08/2021 ಕಲಂ 32,34,36  (1)(B) KE Act ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

3. ಚೇಳೂರು ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 32,34,36 (1) (B) ಕೆ.ಇ ಆಕ್ಟ್:-

     ದಿನಾಂಕ:09/02/2021 ರಂದು ರಾತ್ರಿ 11:30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ ಸಿಇಎನ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ಆದ ನಾನು ಮತ್ತು ಸಿಬ್ಬಂದಿಯವರಾದ ರಾಜ್ ಗೋಪಾಲ್, ಸಿ.ಹೆಚ್.ಸಿ-192 ಹಾಗೂ ಜೀಪ್ ಚಾಲಕನಾದ ಮಹಬೂಬ್ ಬಾಷಾ, ಎಪಿಸಿ-138 ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಕಡೆ ಗಸ್ತು ಮಾಡಿಕೊಂಡು ರಾತ್ರಿ 9-40 ಗಂಟೆಗೆ ಚೇಳೂರು ಸರ್ಕಲಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಬಾಗೇಪಲ್ಲಿ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ವಾಸಿಯಾದ ವೆಂಕಟರೆಡ್ಡಿ ಬಿನ್ ಬಾಡ ಚೌಡಪ್ಪ, 50 ವರ್ಷ, ವಕ್ಕಲಿಗರು ರವರು ಹೊಸಹುಡ್ಯ ಗ್ರಾಮದಲ್ಲಿರುವ ತನ್ನ ಲಕ್ಷ್ಮೀ ಹೊಟೇಲಿನಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 25 ವಿಸ್ಕಿಯ ಟೆಟ್ರಾ ಪಾಕೆಟ್ ಗಳು 2) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 13 ಓಲ್ಡ್ ಅಡ್ಮಿರಲ್ ವಿಎಸ್ ಓಪಿ ಬ್ರಾಂದಿಯ ಟೆಟ್ರಾ ಪಾಕೆಟ್ 3) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 10 ಓಲ್ಡ್ ಟವೆರನ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳು 4) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 12 ನಂಬರ್1 ಎಂ.ಸಿ ಡೊವೆಲ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳು 5) ಮಧ್ಯ ತುಂಬಿದ್ದ 180 ಎಂ.ಎಲ್ ಸಾಮರ್ಥ್ಯದ 8 ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿಯ ಟೆಟ್ರಾ ಪಾಕೆಟ್ ಗಳು 5) ಮಧ್ಯ ತುಂಬಿದ್ದ 90 ಎಂ.ಎಲ್ ಸಾಮರ್ಥ್ಯದ 26 ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ ಪಾಕೆಟ್ ಗಳಿದ್ದು, ಇದರ ಒಟ್ಟು ಸಾಮರ್ಥ್ಯ 14 ಲೀಟರ್ 580 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 8025/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು D ಎಂಬ ಅಕ್ಷರದಿಂದ ಸೀಲು ಮಾಡುತ್ತಿದ್ದಾಗ ಸದರಿ ಆಸಾಮಿ ಸ್ಥಳದಿಂದ ಓಡಿ ಕತ್ತಲಿನಲ್ಲಿ ಪರಾರಿಯಾದನು. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ವೆಂಕಟರೆಡ್ಡಿ ಬಿನ್ ಬಾಡ ಚೌಡಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊಸಂ:09/2021 ಕಲಂ 32,34,36 (1)(B) KE Act ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

4. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ-10/02/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶಿವರುದ್ರಯ್ಯ ಬಿನ್ ಲೇಟ್ ಗಂಗಯ್ಯ,ಬೇವಿನಮಟ್ಟಿ ಗ್ರಾಮ,ಹುನಗುಂದ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ  ತನಗೆ ಇಬ್ಬರು ಗಂಡು ಮಕ್ಕಳಿದ್ದು  1 ನೇ ಗಂಗಯ್ಯ  24 ವರ್ಷ, 2 ನೇ ಬಸಯ್ಯ ಮಕ್ಕಳಿದ್ದು  1 ನೇ ಮಗನಾದ  ಶ್ರೀ ಗಂಗಯ್ಯ  ರವರು ಡಿಲೆವರಿ ಕಂಪನಿಯಲ್ಲಿ ಕೆಲಸಕ್ಕಾಗಿ ಸುಮಾರು 6 ವರ್ಷಗಳಿಂದ ಬಂದು  ಗೌರಿಬಿದನೂರು ನಗರ. ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಕೆಲಸ ಮಾಡಿಕೊಂಡು ಮುಂಬಡ್ತಿ ಹೊಂದಿ ಚಿಕ್ಕಬಳ್ಳಾಪುರ ನಗರಕ್ಕೆ ಈಗ್ಗೆ ಸುಮಾರು 2 ವರ್ಷಗಳ ಹಿಂದೆ  ಬಂದು ಕೆಲಸ ಮಾಡಿಕೊಂಡು ಚಿಕ್ಕಬಳ್ಳಾಪುರ ನಗರದ ಶನಿ ಮಹತ್ಮಾ ದೇವಾಲಯದ ಬಳಿಯಿರುವ ಅನುಗ್ರಹ ಪಿ.ಜಿ ಯಲ್ಲಿ ವಾಸ ಮಾಡಿಕೊಂಡಿಕೊಂಡಿರುತ್ತಾನೆ.ಮೂರು ತಿಂಗಳಿಗೊಮ್ಮೆ ನಮ್ಮ ಊರಿಗೆ ಬಂದು ಹೊಗುತ್ತಿದ್ದು ಆಗಾಗ ತನಗೆ ಮೊಬೈಲ್ ಗೆ ಕರೆ ಮಾಡಿ ನಮ್ಮೊಂದಿಗೆ ಆತನ ಕಷ್ಟ ಸುಖಗಳನ್ನು ಮಾತನಾಡುತ್ತಿದ್ದು ನಾನು ಸಹ ಬಿಡಿವಿನ ವೇಳೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ತನ್ನ ಮಗನಾದ ಗಂಗಯ್ಯ ರವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದೆ. ಈಗೀರುವಾಗ ಸುಮಾರು 20 ದಿನಗಳಿಂದ ತನಗೆ ಪೋನ್ ಮಾಡುತ್ತಿರಲಿಲ್ಲ. ದಿನಾಂಕ 06-02-2021 ರಂದು ತನ್ನ ಮಗ ಗಂಗಯ್ಯ ರವರು ತನ್ನ ತಮ್ಮ ಮಂಜುನಾಥ ರವರ ಮೊಬೈಲ್ ಗೆ ಕರೆ ಮಾಡಿದ್ದು ಆ ಸಮಯದಲ್ಲಿ ಅವರು ನೊಡಿಕೊಳ್ಳದೇ ಕರೆ ತೆಗೆದಿರುವುದಿಲ್ಲ ನಂತರ ಸಂಜೆ ಗಂಗಯ್ಯನ ಮೊಬೈಲ್ ಸಂಖ್ಯೆ 9606572458 ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆದ ಕಾರಣ ನಾವು ಡಿಲೆವರಿ ಕಂಪನಿಯ ಮ್ಯಾನೇಜರ್ ಸುರೇಶ್ ರವರಿಗೆ ಕರೆ ಮಾಡಿ ಕೇಳಲಾಗಿ ನಿಮ್ಮ ಮಗ ಊರಿಗೆ ಹೋಗಿ ಬರುವುದಾಗಿ ಎಂದು ಹೊಗಿರುವುದಾಗಿ ತಿಳಿಸಿರುತ್ತಾರೆ. ಆದರೆ ತನ್ನ ಮಗ ಊರಿಗೆ ಬಾರದ ಕಾರಣ ಮತ್ತು ಅತನ ಮೊಬೈಲ್ ಸ್ವಿಚ್ ಆಪ್ ಆದ ಕಾರಣ ಅನುಮಾನ ಗೊಂಡು ಈ ದಿನ ದಿನಾಂಕ 09-02-2021 ರಂದು ಚಿಕ್ಕಬಳ್ಳಾಪುರಕ್ಕೆ ಬಂದು ಡಿಲಿವೆರಿ ಕಂಪನಿಯ ಕಛೇರಿಯ ಬಳಿ ಬಂದು ನನ್ನ ಮಗನ ಬಗ್ಗೆ ವಿಚಾರಿಸಿದ್ದು ಮ್ಯಾನೇಜರ್ ಸುರೇಶ್ ರವರು ದಿನಾಂಕ 06-02-2021 ರಂದು ಬೆಳಗ್ಗೆ 9-00 ಗಂಟೆಗೆ  ಊರಿಗೆ ಹೋಗಿ ಬರುವುದಾಗಿ ಎಂದು ಹೇಳಿ ಹೋಗಿರುತ್ತಾನೆ ಎಂದು ತಿಳಿಸಿದ್ದು ಈತನ ಬಗ್ಗೆ ಪಿ.ಜಿ.ಯಲ್ಲಿ ಸಹ ವಿಚಾರಿಸಿದ್ದು ಬೇರೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದು ತಾನು ಮತ್ತು ತನ್ನ ತಮ್ಮ ಮಂಜುನಾಥ್ ರವರು ನಮ್ಮ ಸಂಬಂದಿಕರ ಮನೆಗಳಿಗೆ, ಮತ್ತು ಸ್ನೇಹಿತರ ಮನೆಗಳಿಗೆ ಕರೆ ಮಾಡಿ ತನ್ನ ಮಗನ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದು ತನ್ನ ಮಗನ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದ ಕಾರಣ ತನ್ನ ಮಗ ಗಂಗಯ್ಯ ಕಾಣೆಯಾಗಿರುವ ಬಗ್ಗೆ ಪತ್ತೆ ಮಾಡಿಕೊಡಲು ಕೋರಿ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 09/02/2021 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಣಿ.ಎನ್ ಬಿನ್ ಲೇಟ್ ನಾರಾಯಣಸ್ವಾಮಿ, 20 ವರ್ಷ, ಬೋವಿ ಜನಾಂಗ, ವಿದ್ಯಾರ್ಥಿ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 12.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 08/02/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಾಯಿ ರತ್ನಮ್ಮ ರವರು ತಮ್ಮ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿದ್ಯುತ್ ಲೈಟ್ ಹಾಕಲು ಎಂದಿನಂತೆ ಹೋಗಿದ್ದು, ಅಲ್ಲಿ ದೇವಸ್ಥಾನದಲ್ಲಿ ಲೈಟ್ ಹಾಕುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ತಮ್ಮ ಗ್ರಾಮದ ಸುರೇಂದ್ರ ಬಿನ್ ವೆಂಕಟರವಣಪ್ಪ, ನಾರಾಯಣಸ್ವಾಮಿ ಬಿನ್ ಈರಪ್ಪ, ಮುನಿರಾಜು ಬಿನ್ ನಾರಾಯಣಸ್ವಾಮಿ ಮತ್ತು ಮುನಿರತ್ನಮ್ಮ ಕೋಂ ಚಂದ್ರ ರವರುಗಳು ತನ್ನನ್ನು ಮತ್ತು ತನ್ನ ತಾಯಿಯನ್ನು ಕುರಿತು “ಲೋಫರ್ ನನ್ನ ಮಕ್ಕಳಾ, ಲೋಫರ್ ಮುಂಡೆ ದೇವಸ್ಥಾನದಲ್ಲಿ ಲೈಟ್ ಹಾಕಲು ನಿಮಗೆ ಏನು ಹಕ್ಕು ಇದೆ” ಎಂದು ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ಸುರೇಂದ್ರ ಮತ್ತು ಮುನಿರಾಜು ರವರು ಅವರ ಕೈಗಳಲ್ಲಿದ್ದ ಕಲ್ಲುಗಳಿಂದ ತನ್ನ ಎಡಕಿವಿಯ ಬಳಿ ಮತ್ತು ತನ್ನ ತಾಯಿ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಉಳಿದ ನಾರಾಯಣಸ್ವಾಮಿ ಮತ್ತು ರತ್ನಮ್ಮ ರವರು ಕೈಗಳಿಂದ ತನಗೆ ಹಾಗೂ ತನ್ನ ತಾಯಿಯ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಹಾಗೂ ಸದರಿಯವರು  ಗಲಾಟೆಯ ಸ್ಥಳದಿಂದ ಹೋಗುವಾಗ ಸುರೇಂದ್ರರವರು ತಮ್ಮನ್ನು ಕುರಿತು ದೇವಸ್ಥಾನದ ತಂಟೆಗೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 10-02-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080