Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 277/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 09/09/2021 ರಂದು ಬೆಳಿಗ್ಗೆ 11-00 ಗಂಟೆಗೆ  ಶ್ರೀ ಗೋಪಾಲರೆಡ್ಡಿ, ಪಿಎಸ್ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೇನೆಂದರೆ ಈ ದಿನ ದಿನಾಂಕ; 09-09-2021 ರಂದು  ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-309 ಮರಳು ಸಿದ್ದೇಶ್ವರಗೌಡ, ಸಿಪಿಸಿ- 131 ರಾಜಪ್ಪ ರವರು  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಗೂಳೂರು, ಐವಾರಪಲ್ಲಿ, ಮಾರಾಗಾನಕುಂಟೆ, ಕೊತ್ತಕೋಟೆ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಕೃಷ್ಣಾಪುರ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-309 ಮರಳು ಸಿದ್ದೇಶ್ವರಗೌಡ, ಸಿಪಿಸಿ- 131 ರಾಜಪ್ಪ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಕೊತ್ತಕೋಟೆ  ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಬೆಳಿಗ್ಗೆ 9-45 ಗಂಟೆಗೆ ಕೃಷ್ಣಾಪುರ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದ-ಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ  ಮರಳು ಸಿದ್ದೇಶ್ವರಗೌಡ, ರಾಜಪ್ಪ ರವರು ಹಿಡಿದುಕೊಂಡಿದ್ದು ಸದರಿ ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ನರಸಿಂಹಪ್ಪ ಬಿನ್ ನಾರಾಯಣಪ್ಪ, 45  ವರ್ಷ, ನಾಯಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಕೃಷ್ಣಾಪುರ ಗ್ರಾಮ,  ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ –421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 11-00 ಗಂಟೆ ಠಾಣೆಯಲ್ಲಿ  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 124/2021 ಕಲಂ. 25,27,29 INDIAN ARMS ACT, 1959 :-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ವಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ 06/09/2021 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ ನಾನು ಠಾಣಾ ಪ್ರಭಾರದಲ್ಲಿದ್ದಾಗ ಠಾಣಾ ವ್ಯಾಪ್ತಿಯ ಹನುಮಯ್ಯಗಾರಹಳ್ಳಿ ಗ್ರಾಮದ ವಾಸಿಗಳಾದ ನವೀನ ಬಿನ್ ಮಿಲ್ಟ್ರಿಕಿಟ್ಟಣ್ಣ ಹಾಗೂ ನರಸಿಂಹ ಬಿನ್ ವೆಂಕಟರವಣಪ್ಪ ರವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅವರ ಜಮೀನುಗಳ ಬಳಿ ನಾಡ ಬಂದೂಕುಗಳನ್ನು ಇಟ್ಟುಕೊಂಡಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಠಾಣೆಯ ಹೆಚ್.ಸಿ 08 ಪೈರೋಜ್ ಅಲೀ ರವರು ಸದರಿ ದಿನ ದಿನಾಂಕ 06/09/2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆಗೆ ಹನುಮಯ್ಯಗಾರಹಳ್ಳಿ ಗ್ರಾಮದ ವಾಸಿಯಾದ ನವೀನ ಬಿನ್ ಮಿಲ್ಟ್ರಿಕಿಟ್ಟಣ್ಣ ರವರ ಜಮೀನಿನ ಬಳಿಗೆ ಹೋಗಲಾಗಿ ಜಮೀನಿನ ಬಳಿ ನವೀನ್ ಬಿನ್ ಮಿಲ್ಟ್ರಿಕಿಟ್ಟಣ್ಣ ರವರು ಇದ್ದು ಸದರಿಯವರನ್ನು ಬಂದೂಕಿನ ಬಗ್ಗೆ ವಿಚಾರಿಸಲಾಗಿ ತಾನು ತನ್ನ ಆತ್ಮ ರಕ್ಷಣೆಗಾಗಿ ತನ್ನ ಜಮೀನಿನ ಬಳಿ ಬಂದೂಕನ್ನು ಇಟ್ಟುಕೊಂಡಿರುವುದಾಗಿ ನಮಗೆ ತಿಳಿಸಿ ನವೀನ ರವರು ಅವರ ಬಾಬತ್ತು ಜಮೀನಿನ ಬಳಿ ಇರುವ ಒಂದು ಬೇಲಿ ಗಿಡಗಳ ಪೊದೆಯಲ್ಲಿ ಇಟ್ಟಿದ್ದ ಒಂದು ಬಂದೂಕನ್ನು ತೆಗೆದುಕೊಟ್ಟಿದ್ದು ಸದರಿ ಬಂದೂಕನ್ನು ಪರಿಶೀಲಿಸಲಾಗಿ ಎಸ್.ಬಿ.ಎಂ.ಎಲ್ ನಾಡ ಬಂದೂಕು ಆಗಿದ್ದು ಸದರಿ ಬಂದೂಕಿನ ಪರವಾನಿಗೆಯ ಬಗ್ಗೆ ನವೀನ್ ರವರನ್ನು ವಿಚಾರಿಸಲಾಗಿ ತಾನು ಬಂದೂಕು ಪರವಾನಿಗೆಯನ್ನು ಹೊಂದಿರುವುದಾಗಿ ಪರವಾನಿಗೆ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾರೆ. ಸದರಿ ಬಂದೂಕನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆಪಡೆದುಕೊಂಡು ಹನುಮಯ್ಯಗಾರಹಳ್ಳಿ ಗ್ರಾಮದ ನವೀನ ಬಿನ್ ಮಿಲ್ಟ್ರಿಕಿಟ್ಟಣ್ಣ ರವರನ್ನು ನರಸಿಂಹ ಬಿನ್ ವೆಂಕಟರವಣಪ್ಪ ರವರ ಬಂದೂಕಿನ ಬಗ್ಗೆ ವಿಚಾರಿಸಲಾಗಿ ನರಸಿಂಹಪ್ಪ ರವರು ಅವರ ಬಾಬತ್ತು ಬಂದೂಕಿನ ಮರಕ್ಕೆ ತುಕ್ಕು ಹಿಡಿದಿದ್ದರಿಂದ ಅದನ್ನು ನೆನೆಸಲೆಂದು ತಮ್ಮ ಗ್ರಾಮದ ಹೊಸ ಕೆರೆಯ ನೀರಿನಲ್ಲಿ ಇಟ್ಟಿರುವುದಾಗಿ ತಿಳಿಸಿ ನವೀನ ರವರು ನಮ್ಮನ್ನು ಹನುಮಯ್ಯಗಾರಹಳ್ಳಿ ಗ್ರಾಮದ ಹೊಸ ಕೆರೆಯ ಬಳಿಗೆ ಕರೆದುಕೊಂಡು ಹೋಗಿ ಕೆರಯಲ್ಲಿ ಒಂದು ಹಳ್ಳದಲ್ಲಿ ನೀರಿನಲ್ಲಿ ಇದ್ದ ಒಂದು ಬಂದೂಕನ್ನು ತೆಗೆದುಕೊಟ್ಟಿದ್ದು ಸದರಿ ಬಂದೂಕನ್ನು ಪರಿಶೀಲಿಸಲಾಗಿ ಎಸ್.ಬಿ.ಎಂ.ಎಲ್ ಬಂದೂಕು ಆಗಿದ್ದು ಸದರಿ ಬಂದೂಕನ್ನು ಸಹ ವಶಕ್ಕೆ ಪಡೆದುಕೊಂಡು ಎರಡೂ ಬಂದೂಕುಗಳನ್ನು ತೆಗೆದುಕೊಂಡು ಠಾಣೆಗೆ ವಾಪಸ್ ಬಂದು ಬಂದೂಕುಗಳನ್ನು ಸುರಕ್ಷಿತವಾಗಿ ಠಾಣೆಯಲ್ಲಿ ಇಟ್ಟು ನರಸಿಂಹ ಬಿನ್ ವೆಂಕಟರವಣಪ್ಪ ಮತ್ತು ನವೀನ ಬಿನ್ ಮಿಲ್ಟ್ರಿಕಿಟ್ಟಣ್ಣ ರವರಿಗೆ ಅವರು ಹೊಂದಿದ್ದ ಬಂದೂಕುಗಳಿಗೆ ಸಂಬಂದಿಸಿದ ಪರವಾನಿಗೆಗಳನ್ನು ಎರಡು ದಿನಗಳ ಒಳಗೆ ತಂದು ಹಾಜರುಪಡಿಸುವಂತೆ ಸೂಚಿಸಿ ನೋಟೀಸ್ ನ್ನು ಜಾರಿಮಾಡಿರುತ್ತೇನೆ. ಸದರಿಯವರಿಗೆ ನೋಟೀಸ್ ಗಳನ್ನು ಜಾರಿಮಾಡಿ ಎರಡು ದಿನಗಳು ಕಳೆದರೂ ಸಹ ನರಸಿಂಹ ಮತ್ತು ನವೀನ ರವರು ಅವರು ಹೊಂದಿದ್ದ ಬಂದೂಕುಗಳಿಗೆ ಸಂಬಂದಿಸಿದಂತೆ ಯಾವುದೇ ದಾಖಲೆಗಳನ್ನು ತಂದು ಹಾಜರುಪಡಿಸದ ಕಾರಣ ಸದರಿಯವರು ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆಯನ್ನು ಹೊಂದದೆ ಬಂದೂಕುಗಳನ್ನು ಖರೀದಿಸಿ ಅವರ ಬಳಿ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದ್ದರಿಂದ ಮೇಲ್ಕಂಡಂತೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಬಂದೂಕುಗಳನ್ನು ಖರೀದಿಸಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ನವೀನ ಮತ್ತು ನರಸಿಂಹ ರವರ ವಿರುದ್ದ ಮುಂದಿನ ಕಾನೂನು ಕ್ರಮಕ್ಕಾಗಿ ಈ ದಿನ ದಿನಾಂಕ 08/09/2021 ರಂದು ಸಂಜೆ 7-30 ಗಂಟೆಗೆ ಸ್ವತಃ ವರದಿಯ ಮೇರೆಗೆ ಠಾಣಾ ಮೊ.ಸಂ 124/2021 ಕಲಂ 25, 27, 29 ಆರ್ಮ್ಸ್ ಆ್ಯಕ್ಟ್ 1959 ರೀತ್ಯ ಕೇಸು ದಾಖಲಿಸಿಕೊಂಡಿರುತ್ತೇನೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ. 85/2021 ಕಲಂ. 323,324,355,506 ರೆ/ವಿ 34 ಐಪಿಸಿ :-

     ಈ ದಿನ ದಿನಾಂಕ 08-09-2021 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 07-09-2021 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ  ನನ್ನ ಮಗನಾದ ಗಂಗಾಧರ ರವರು ಚಾಕವೇಲು ಗ್ರಾಮದ ಕೆನರ ಬ್ಯಾಂಕ್ ಮುಂದೆ ಎ.ಟಿ.ಎಂ ಬಳಿ ನಿಂತಿದ್ದಾಗ ಇದೇ ಗ್ರಾಮದ ವಾಸಿಯಾದ ಬಿಳ್ಳೂರು ಶ್ರೀನಿವಾಸ ಬಿನ್ ಸಂಜೀವಪ್ಪ ಎಂಬುವವನು ಹಳೇ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದು ಮಧ್ಯ ಸೇವಿಸಲು ಹಣ ಕೇಳಿದ ನನ್ನ ಮಗ ಹಣಯಿಲ್ಲ ಎಂದಾಗ ನೀನು ಗ್ರಾಮ ಪಂಚಾಯಿತಿ ಸದಸ್ಯ ಹಣ ಕೋಡಬೇಕು  ಎಂದು ದೌರ್ಜನ್ಯ ಮಾಡಿ ಗಲಾಟೆ ತೆಗೆದು ಇಟ್ಟಿಗೆಯಿಂದ ತಲೆಗೆ ಹೊಡೆದು ಎರಡು ಕಿವಿಗಳಿಂದ ರಕ್ತಬರುವ ತನಕ ಹಲ್ಲೇ ನಡೆಸಿದ್ದು ಇವನ ಹೆಂಡತಿ ರವಣಮ್ಮ ಕಟ್ಟಿಗೆಯಿಂದ ಎಡಕಾಲಿಗೆ ಹಾಕಿ ಕಾಲನ್ನು ಮುರಿದಿರುತ್ತಾರೆ  ಇವನ ಮಗನಾದ ಕಾರ್ತಿಕ್ ಚಪ್ಪಲಿಯಿಂದ ಹಾಕಿರುತ್ತಾನೆ  ಮತ್ತು ಆಂಜೀನಮ್ಮ ಕೋಂ ಲೇಟ್ ಕೋತ್ತನಾಗಪ್ಪಗಾರಿ ಲಕ್ಷ್ಮನ್ನ ಎಂಬುವವರು  ಮಚ್ಚನ್ನು ಶ್ರೀನಿವಾಸನ ಅಳಿಯನಿಗೆ  ಸಾಯಿಸುವಂತೆ ನೀಡಿರುತ್ತಾಳೆ  ಈ ಮಚ್ಚನ್ನು ಇದೇ ಗ್ರಾಮದ ಈಶ್ವರಯ್ಯ ಮತ್ತು ಇತರರು ಕೀತ್ತುಕೊಂಡಿರುತ್ತಾರೆ ಈ ಮೇಲ್ಕಂಡ  4 ಜನರು ಗುಂಫುಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುತ್ತಾರೆ ಹಾಗೂ ನನ್ನ ಮಗ ಮತ್ತು ಅಳಿಯ ಸೋಮಶೇಖರ್ ನ್ನು ಸಾಯಿಸುವುದಾಗಿ ಬೆದರಿಸಿರುತ್ತಾರೆ   ನಂತರ ನನ್ನ ಮಗನನ್ನು ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆ ಮತ್ತು ಚಿಕ್ಕಬಳ್ಳಾಪುರ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು ನಂತರ  ಬೆಂಗಳೂರಿ ನಿಮಾಸ್ಸ್ ನಲ್ಲಿ ಹೆಚ್ಚಿನ  ಚಿಕಿತ್ಸೆ ಪಡೆಯುತ್ತಿರುತ್ತಾನೆ ಆದ್ದರಿಂದ ನನ್ನ ಮಗನ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಕೋರಿ.

 

4. ಚೇಳೂರು ಪೊಲೀಸ್ ಠಾಣೆ ಮೊ.ಸಂ. 86/2021 ಕಲಂ. 143,323,324,504,506ರ ರೆ/ವಿ 149 ಐಪಿಸಿ :-

     ಈ ದಿನ ದಿನಾಂಕ 08-09-2021ರಂದು  ಗಾಯಾಳುವು ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ    . ದಿನಾಂಕ 07-09-2021 ರಂದು 10:00 ಗಂಟೆ ಸಮಯದಲ್ಲಿ  ಅಂಗಡಿಗೆ ಹೋಗುತ್ತಿದಾಗ ರಾಜು ಮನೆಯ ಮುಂದಿನ ರಸ್ತೆಯಲ್ಲಿ ನಮ್ಮ ಗ್ರಾಮದ ಗಂಗಾಧರ ಅಲ್ಲಿ ನಿಂತ್ತಿದ್ದು ನನಗೆ ಚೀಟಿ ಹಣ ಕೊಡಬೇಕಾಗಿ ಕೇಳಿದಕ್ಕೆ ಮಾತಿಗೆ ಮಾತು ಬೆಳದು ಗಂಗಾಧರ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮಗನೆ ನಿನ್ನ ಸಾಯಿಸಿಬಿಡುತ್ತೇನೆ  ಅಂತ ಪ್ರಾಣ ಬೆದಿರಿಕೆ ಹಾಕಿ ಅಲ್ಲಿಯೇ ಇದ್ದ ರಾಡುನಿಂದ ನನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ ಅವರ ಸಂಬಂದಿಯಾದ ಸೋಮು ಎಂಬುವವನು ದೊಣ್ಣೆಯಿಂದ ಭುಜಕ್ಕೆ ಹೊಡೆದಿರುತ್ತಾನೆ .ರಾಣಿ ಎಂಬುವರು ಕಲ್ಲಿನಿಂದ ನನ್ನ ತಲೆಗೆ ಹಾಕಿರುತ್ತಾರೆ .ಲಕ್ಷ್ಮಮ್ಮ ನನ್ನ ಗಲ್ಲಾಪಟ್ಟಿಯನ್ನು  ಹಿಡಿದು ಎಳೆದಾಡಿರುತ್ತಾಳೆ ಚಿನ್ನ ಗಂಗುಲಮ್ಮ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ  ನನ್ನನ್ನು ಕೆಳಗೆ ಬೀಳಿಸಿ ಹೊಡೆದಿರುತ್ತಾರೆ ಆ ಸಮಯಕ್ಕೆ  ಅಲ್ಲಿಯೇ ಇದ್ದ ಆಂಜಿನಪ್ಪ .ಅಕ್ಕುಲಪ್ಪಗಾರಿ ಆಂಜಿನಪ್ಪ, ರಘನಾಥ ಜಗಳವನ್ನು ಬಿಡಿಸಿರುತ್ತಾರೆ ನನಗೆ ರಕ್ತಗಾಯವಾಗಿದ್ದು ಮೈ ಕೈ ನೋವು ಜಾಸ್ತಿ ಇರುವುದರಿಂದ ನನ್ನ ಹೆಂಡತಿ ಅಟೋದಲ್ಲಿ ಸರ್ಕಾರಿ ಆಸ್ಪತ್ರೆ  ಚಾಕವೇಲುಗೆ  ಕರೆದು ಹೋಗಿದ್ದು ವೈದ್ಯರು ಇಲ್ಲದೆ ಇರುವುದರಿಂದ ಆಂಬುಲೇನ್ಸ್ 108 ರಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸೂಚನೆ ಮೇರಗೆ ಚಿಕ್ಕಬಳ್ಳಾಪುರ  ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಈ ದಿನ ಪುನಃ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಗೆ ಬಂದು ಚಿಕಿತ್ಸೆ ಪಡೆದಿರುತ್ತೇನೆ , ಆದ್ದರಿಂದ  ಮೇಲ್ಕಂಡ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 151/2021 ಕಲಂ. 353,354(B),427,504 ಐಪಿಸಿ :-

     ದಿನಾಂಕ:08-09-2021 ರಂದು 19-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕೆ.ಸಿ ತಿಮ್ಮಕ್ಕ ಕೊಂ ಮುನಿಯಪ್ಪ. 49 ವರ್ಷ ಪ.ಜಾತಿ, ನಲ್ಲಿಮರದಹಳ್ಳಿ ಗ್ರಾಮ. ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು 27 ವರ್ಷಗಳಿಂದ ನ್ಲಲಿಮರದಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ:07.09.2021 ರಂದು ಕೋವೀಡ್ ನಿಮಿತ್ತ ತಾನು ಅಂಗನವಾಡಿ ಸಹಾಯಕಿ ಶ್ರೀಮತಿ. ಅನಿತಾ ಆರ್ ಮತ್ತು ಆಶಾಕಾರ್ಯಕರ್ತೆಯಾದ ಶ್ರೀಮತಿ. ಜ್ಯೋತಿ ರವರು ಕಾರ್ಯ ನಿರ್ವಹಿಸುತ್ತಿದ್ದಾಗ ಆಶಾ ಕಾರ್ಯಕರ್ತೆ ಶ್ರೀಮತಿ.ಜ್ಯೋತಿ ರವರು ಅದೇ ಗ್ರಾಮದ ಮುನಿರಾಜು ರವರಿಗೆ ಕರೆ ಮಾಡಿ ಅಧಾರ್ ನಂಬರ್ ಕೊಡಿ ಎಂದು ಕೇಳಿದ್ದು ಅದಕ್ಕೆ ಮುನಿರಾಜು ರವರು ಅಂಗನವಾಡಿ ಕೇಂದ್ರಕ್ಕೆ ಕುಡಿದು ಬಂದು ಅಧಾರ್ ನಂಬರ್ ಕೊಟ್ಟು ಅನಾವಶ್ಯಕವಾಗಿ ಕೆಟ್ಟ ಪದಗಳಿಂದ ಬೈದು ಚೇರುಗಳನ್ನು ಮುರಿದು, ಮೊಬೈಲ್ ಹೊಡೆದು ಕಾರ್ಯಕರ್ತೆಯರ ಮೇಲೆ ಜಗಳ ಮಾಡಿ ತನ್ನ ಜುಟ್ಟು ಹಿಡಿದು ಹೊಡೆದು ಹೊಡೆದಿದ್ದಾನೆ.. ಈ ಘಟನೆಯು  ಮದ್ಯಾಹ್ನ 3-00 ಗಂಟೆಯಲ್ಲಿ ನಡೆದಿರುತ್ತದೆ. ಆದ್ದರಿಂದ ಮುನಿರಾಜು ಬಿನ್ ಮುನಿಶಾಮಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು, ತನ್ನ ಪತಿಯವರು ಮೇ ತಿಂಗಳಿನಿಂದ ಪಾರ್ಶುವಾಯು ಕಾಯಿಲೆಗೆ ತುತ್ತಾಗಿರುವುದರಿಂದ ಅವರ ಹಾರೈಕೆ ಮಾಡುತ್ತಿದ್ದರಿಂದ   ಈ ದಿನ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರ,ವ,ವರದಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 152/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ 09/09/2021 ರಂದು ಮಧ್ಯಾಹ್ನ 03-30 ಗಂಟೆಯಲ್ಲಿ ಪಿರ್ಯಾದಿದಾರರಾದ ಪಿ.ಎಸ್.ಐ ಕಾಸು ರವರು ನೀಡಿದ ವರದಿಯ ಸಾರಾಂಶವೇನೆಂದರೆ ಪಿರ್ಯಾದಿದಾರರು ಮಧ್ಯಾಹ್ನ 03-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ  ಅವರಿಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಮಾರಗಾನಹಳ್ಳಿ ಗ್ರಾಮದ ವಾಸಿ ನಾರಾಯಣಮ್ಮ ಕೋಂ ಲೇಟ್ ದೊಡ್ಡತಿಮ್ಮರಾಯಪ್ಪ, 65 ವರ್ಷ, ಕೂಲಿ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶಮಾಡಿಕೊಡುತ್ತಿರುವುದಾಗಿ ಖಚಿತವಾದ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಮೇಲ್ಕಂಡ ಆಸಾಮಿಯ ಕಾನೂನು ರೀತಿ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಈ ಪ್ರ,ವ,ವರದಿ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 67/2021 ಕಲಂ. 379 ಐಪಿಸಿ :-

     ದಿನಾಂಕ 09-9-2021 ರಂದು ಪಿರ್ಯಾದಾರಾದ ಕೆ ನರಸಿಂಹರೆಡ್ಡಿ ಬಿನ್ ಕೃಷ್ಣಪ್ಪ, 40 ವರ್ಷ, ದೊಡ್ಡಬಜನೆ ಮನೆ ರಸ್ತೆ ವಾರ್ಡ್ ನಂ 25 ಚಿಕ್ಕಬಳ್ಳಾಪುರ ನಗರ ರವರು  ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಬೆರಳಚ್ಚು ದೂರಿನ ಸಾರಾಂಶ ವೇನೆಂದರೆ ಪಿರ್ಯಾದಿದಾರರು ತನ್ನ ಅತ್ತೆಯ ಮಗನಾದ ನಾಗರ್ಜುನ ಎಸ್ ಅರ್ ರವರಿಂದ ಯಮಹಾ ಅರ್ ಎಕ್ಸ್ 135 ವಾಹನವನ್ನು ಖರಿದೀಸಿದ್ದು ಸದರಿ ವಾಹನದ ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾಯಿಸಿರುವುದಿಲ್ಲ ತಾನು ಪ್ರತಿ ದಿನ ಮನೆಯ ಕಾಂಪೌಟ್  ಒಳಗಡೆ ನಿಲ್ಲಿಸುತ್ತಿದ್ದು ದಿನಾಂಕ 18/07/2021 ರಂದು ತಾನು ಕೆಲಸ ಮುಗಿಸಿಕೊಂಡು ರಾತ್ರಿ 9-00 ಗಂಟೆಗೆ ಮನೆಗೆ ಬಂದು ಯಮಹಾ RX 135 ವಾಹನ ಸಂಖ್ಯೆ KA04 EH5174  ಅದರ  Chassis No ;- 04B4TL604071 ಮತ್ತು  ENGINE No;- 4TL604071 ವಾಹನವನ್ನು ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದು ದಿನಾಂಕ 19/07/2021 ರಂದು ಬೆಳಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ತಾನು ನಿಲ್ಲಿಸಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನವು ಇರುವುದಿಲ್ಲ ತಾನು ಮನೆಯ ಸುತ್ತಮುತ್ತ, ಹುಡುಕಾಡಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ  ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ದ್ವಿಚಕ್ರ ವಾಹನವನ್ನು ಮತ್ತು ಅರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ಕೋರಿದೆ.

 

8. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 168/2021 ಕಲಂ. 457-380 ಐಪಿಸಿ :-

     ದಿನಾಂಕ:08/09/2021 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ನೌಷದ್ ಪಾಷ ಬಿನ್ ಪ್ಯಾರೆಜಾನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಚಿಂತಾಮಣಿ ನಗರದ ಎಂ ಜಿ ರಸ್ತೆಯಲ್ಲಿ ಪರಹಾನ ಪ್ಯಾಷನ್ ಎಂಬ ಬಟ್ಟೆ ಅಂಗಡಿಯನ್ನು ಇಟ್ಟು ಕೊಂಡು ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ. ನನ್ನ ಅತ್ತೆ ಮನೆಯಾದ ಬೆಂಗಳೂರಿನ ಕೆ ಆರ್ ಪುರಂ ಗೆ ನನ್ನ ಹೆಂಡತಿ ಮತ್ತು ಮಕ್ಕಳು ಒಂದು ವಾರದ ಹಿಂದೆ ಹೋಗಿದ್ದು. ನಾನು ದಿನಾಂಕ 06/09/2021 ರಂದು ಬೆಂಗಳೂರಿನಲ್ಲಿ ಕೆಲಸವಿದ್ದ ಕಾರಣ ನಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ಸಂಜೆ 4.00 ಗಂಟೆಗೆ ಹೋಗಿರುತ್ತೇನೆ. ಆ ದಿನ ರಾತ್ರಿ ಬೆಂಗಳೂರಿನಲ್ಲಿ ತಡವಾಗಿದ್ದರಿಂದ ನಾನು ನಮ್ಮ ಅತ್ತೆ ಮನೆಗೆ ಹೋಗಿರುತ್ತೇನೆ. ಮತ್ತೆ ದಿನಾಂಕ07/09/2021 ರಂದು ರಾತ್ರಿ 11.30 ಗಂಟೆಗೆ ನಮ್ಮ ಮನೆಯ ಬಳಿ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲಿನ ಡೋರ್ ಲಾಕ್ ಕೊಕ್ಕಿ ಕಿತ್ತಿರುವಂತೆ ಕಂಡು ಬಂದಿದ್ದು ನಾನು ಒಳಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಲಾಕನ್ನು ಕಿತ್ತು ಮನೆಯ ರೂಂನಲ್ಲಿರುವ ಬೀರುವಿನ ಬೀಗವನ್ನು ಹೊಡೆದು ಹಾಕಿ ಬೀರುವಿನಲ್ಲಿದ್ದ ಬಂಗಾರದ ಒಂದು ನೆಕ್ಲೇಸ್ 20 ಗ್ರಾಂ, ಚಿಕ್ಕಮಕ್ಕಳ ಉಂಗುರಗಳು 2, ಬೆಳ್ಳಿ ಕಾಲು ಚೈನು 2 ಜೊತೆ ಒಂದು ಜೊತೆ ಕಿವಿ ಒಲೆ 10 ಗ್ರಾಂ ಒಂದು ರ್ಯಾಡೋ ವಾಚನ್ನು ಮತ್ತು ನಗದು ಹಣ 50,000/ ರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಬಂಗರದ ಒಡವೆಗಳನ್ನು ನಮ್ಮ ಮಾವ ಈಗ್ಗೆ 15 ವರ್ಷ ಹಿಂದೆ ನಮ್ಮ ಮದುವೆಗೆ ಕೊಟ್ಟಿದ್ದು ಹಳೆಯದ್ದಾಗಿರುತ್ತೆ. 30 ಗ್ರಾಂ ಬಂಗಾರದ ಬೆಲೆ 65.000/ ಬೆಳ್ಳಿ ಕಾಲು ಚೈನು 300 ಗ್ರಾಂ ಇದ್ದು ಇವುಗಳ ಬೆಲೆ 12.000/ ಹಾಗೂ ರಾಡೋ ವಾಚ್ 20.000/ ಆಗಿರುತ್ತೆ. ನಮ್ಮ ಮನೆಯಲ್ಲಿ ಯಾರೋ ಕಳ್ಳರು ಮನೆಯ ಡೋರ್ ಲಾಕನ್ನು ಕಿತ್ತು ಬೀರುವಿನಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಒಡವೆಗಳನ್ನು ದಿನಾಂಕ;06/09/2021 ರಂದು ರಾತ್ರಿ ಯಾವುದೋ ಸಮಯದಲ್ಲಿ ಕಳ್ಳತನ ಮಾಡಿಕೊಂಡು   ಹೋಗಿರುತ್ತಾರೆ. ಆದ್ದರಿಂದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 222/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ :31/08/2021 ರಂದು  ಮದ್ಯಾಹ್ನ 1.00 ಗಂಟೆಗೆ ಗೌರಿಬಿದನೂರು ತಾಲೂಕು ನಗರಗೆರೆ ಹೋಬಳಿಯ ಚಿಟ್ಟಾವಲಹಳ್ಳಿ ಗ್ರಾಮದ ವಾಸಿ  ಗಂಗಾಧರಪ್ಪ  ಬಿನ್ ರಾಮೇಗೌಡರವರ  ರವರ ಬಾಬತ್ತು  ಅಂಗಡಿಯ  ಮುಂಭಾಗದಲ್ಲಿ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಇದೇ ದಿನ ಮದ್ಯಾಹ್ನ 1.00 ಗಂಟೆಗೆ ಪಂಚರು ಮತ್ತು ಪೋಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ  ಚಿಟ್ಟಾವಲಹಳ್ಳಿ  ಗ್ರಾಮಕ್ಕೆ ಹೋಗಿ ಸರ್ಕಾರಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ದೂರ ನಡೆದುಕೊಂಡು ಹೋಗುವಷ್ಠರಲ್ಲಿ ಸಮವಸ್ರದಲ್ಲಿದ್ದ ನಮ್ಮಗಳನ್ನು ಕಂಡು ಮನೆಯ ಮುಂದೆ ಮದ್ಯಪಾನ ಮಾಡುತ್ತಿದ್ದ ಮೂವರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು,ಮತ್ತೊಬ್ಬ ಆಸಾಮಿ ಒಂದು ಪ್ಲಾಸ್ಟಿಕ್ ಬ್ಯಾಗ್ ಇಟ್ಟುಕೊಂಡಿರುತ್ತಾನೆ.ಆತನನ್ನು ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಗಂಗಾಧರಪ್ಪ  ಬಿನ್ ರಾಮೇಗೌಡ 59 ವರ್ಷ ಸಾದರ ಗೌಡ್ರು ಜನಾಂಗ  ಅಂಗಡಿ ವ್ಯಾಪಾರ ವಾಸ: ಚಿಟ್ಟಾವಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲುಕು ಅಂತ ತಿಳಿಸಿದ್ದು,ಆತನ ಬಳಿ ಪ್ಲಾಸ್ಟಿಕ್ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ಎಂ ಎಲ್ ಸಾಮರ್ಥ್ಯದ  ಮದ್ಯ ತುಂಬಿದ Hay wards cheers whiskey ಯ 14  ಟೆಟ್ರಾ ಪ್ಯಾಕೆಟ್ ಗಳು ಒಟ್ಟು ಮದ್ಯ 1260 ಎಂ ಎಲ್ ನದ್ದಾಗಿದ್ದು, ಇದರ ಬೆಲೆ 491 ರೂ ಆಗಿರುತ್ತೆ , ಅಂಗಡಿಯ ಮುಂದೆ  ಪರಿಶೀಲಿಸಲಾಗಿ 2) 90 ಎಂ ಎಲ್ ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು 3) ನಾಲ್ಕು ಪ್ಲಾಸ್ಟಿಕ್ ಲೋಟಗಳು ಇರುತ್ತವೆ. ಸದರಿ ಆಸಾಮಿಯನ್ನು ಮದ್ಯಪಾನ ಮಾಡಿಕೊಡಲು ಸ್ಥಳಾವಾಕಾಶ ಮಾಡಿಕೊಡಲು ಯಾವುದೇ ಪರವಾನಿಗೆ ಇದೇಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾನೆ. ಮಾಲಾದ  1)  ಮದ್ಯ ತುಂಬಿದ Hay wards cheers whiskey ಯ  14  ಟೆಟ್ರಾ ಪ್ಯಾಕೆಟ್ ಗಳು 2) 90 ಎಂ ಎಲ್ ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು 3) ನಾಲ್ಕು ಪ್ಲಾಸ್ಟಿಕ್ ಲೋಟಗಳನ್ನು ಪಂಚರ ಸಮಕ್ಷಮ  ಮದ್ಯಾಹ್ನ 1.30  ಗಂಟೆಯಿಂದ  2.00  ಗಂಟೆಯವರೆವಿಗು  ಪಂಚರ ಸಮಕ್ಷಮ ಅಮಾನತ್ತು  ಪಡಿಸಿಕೊಂಡಿರುತ್ತೆ. ಮಾಲನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ವಶಕ್ಕೆ ನೀಡಿ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ 09/09/2021 ರಂದು ಬೆಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 222/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್-1965 ರಿತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 139/2021 ಕಲಂ. 15(A),32(3) KARNATAKA EXCISE ACT, 1965 :-

     ದಿ;08/09/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ರವರು ೆನ್ ಸಿ ಆರ್ ನಂ:175/2021 ರಲ್ಲಿ ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರ್ ಪಡಿಸಿದ ಆದೇಶದ ಸಾರಾಂಶವೆನೆಂದರೆ ದಿ:13/08/2021 ರಂದು  ಮದ್ಯಾಹ್ನ 12-50  ಗಂಟೆಗೆ ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ ನೀಡಿದ ದೂರು ವರದಿಯ ವಿಚಾರವೆನೆಂದರೆ ದಿ:13/08/2021 ರಂದು ಬೆಳಗ್ಗೆ 11-00 ಗಂಟೆಯಲ್ಲಿ ತಾನು ಠಾಣಾ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ.-40.ಜಿ-281 ಜೀಪ್ನಲ್ಲಿ  ಚಾಲಕನಾದ ಎಪಿಸಿ-76. ಹರೀಶ, ಠಾಣಾ ಸಿಬ್ಬಂದಿಯಾದ ಪಿ.ಸಿ-282 ಶ್ರೀ.ರಮೇಶ್  ರವರೊಂದಿಗೆ ಗೌರಿಬಿದನೂರು ನಗರದ ಗಸ್ತು ಕರ್ತವ್ಯದಲ್ಲಿದ್ದಾಗ ಪಿ.ಸಿ-507.ಹನುಮಂತರಾಯಪ್ಪ ರವರು ಪೋನ್ ಮಾಡಿ ಗೌರಿಬಿದನೂರು ನಗರ ಪೊಲೀಸ್ ಠಾಣಾ ಸರಹದ್ದಿನ, ಗೌರಿಬಿದನೂರು ನಗರದ, ಹಿರೇಬಿದನೂರು ಬೈಪಾಸ್  ಮಾರ್ಗದ ರಸ್ತೆಯಿಂದ ಗಂಗಸಂದ್ರ ಗ್ರಾಮದ ಕಡೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ನಾನು ಮತ್ತು ಜೀಪ್ ಚಾಲಕ ಎಪಿಸಿ-76. ಹರೀಶ, ಪಿ.ಸಿ-282.ರಮೇಶ್  ರವರೊಂದಿಗೆ ಹಿರೇಬಿದನೂರು ಬೈಪಾಸ್ ವೃತ್ತದ ಬಿಳಿಗೆ  ಈದಿನ ದಿ:13/08/2021 ರಂದು ಬೆಳಗ್ಗೆ 11-10 ಗಂಟೆಗೆ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಪಂಚರನ್ನು ಮತ್ತು ಜೀಪ್ ಚಾಲಕ ಎಪಿಸಿ-76. ಹರೀಶ, ಪಿ.ಸಿ-282.ರಮೇಶ್  ರವರನ್ನು ನಮ್ಮ ಜೀಪ್ನಲ್ಲಿ  ಕರೆದುಕೊಂಡು ಈದಿನ ದಿ:13/08/2021 ರಂದು ಬೆಳಗ್ಗೆ 11-20 ಗಂಟೆಗೆ ಗೌರಿಬಿದನೂರು ನಗರದ, ಹಿರೇಬಿದನೂರು ಬೈಪಾಸ್  ಮಾರ್ಗದ ರಸ್ತೆಯಿಂದ ಗಂಗಸಂದ್ರ ಗ್ರಾಮದ ಕಡೆ ಹೋಗುವ ರಸ್ತೆಯ ಬಳಿಗೆ ಬಂದು ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಗೌರಿಬಿದನೂರು ನಗರದ, ಹಿರೇಬಿದನೂರು ಬೈಪಾಸ್  ಮಾರ್ಗದ ರಸ್ತೆಯಿಂದ ಗಂಗಸಂದ್ರ ಗ್ರಾಮದ ಕಡೆ ಹೋಗುವ  ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶವನ್ನು  ಮಾಡಿಕೊಟ್ಟು ಮಧ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ  ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತಾ, ಸ್ಥಳವಕಾಶವನ್ನು  ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದು ಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ.ನರಸಿಂಹಮೂರ್ತಿ ಬಿನ್ ಮುತ್ಯಾಲಪ್ಪ, ಸುಮಾರು 40 ವರ್ಷ, ಉಪ್ಪಾರ ಜನಾಂಗ, ಜಿರಾಯ್ತಿ ಮತ್ತು ಚಿಲ್ಲರೆ ಅಂಗಡಿ ವ್ಯಾಪಾರ, ಕಡಬೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, ಮೊಬೈಲ್ ನಂ.9740599162  ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ  ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವುದಾದರೂ ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮಥ್ರ್ಯದ ಮದ್ಯವಿರುವ 16 ಟೆಟ್ರಾ ಪಾಕೇಟ್ಗಳು, ಇವುಗಳ ಒಟ್ಟು ಮೌಲ್ಯ 562-08/-ರೂಗಳು, ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮಥ್ರ್ಯ 01 ಲೀಟರ್ 440 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್  ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಖಾಲಿ 04 ಟೆಟ್ರಾ ಪಾಕೇಟ್ಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಗ್ಗೆ 11-25 ಗಂಟೆಯಿಂದ ಮದ್ಯಾಹ್ನ 12-10 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಮದ್ಯಾಹ್ನ  12-20 ಗಂಟೆಗೆ ಬಂದು ಮದ್ಯಾಹ್ನ  12-50 ಗಂಟೆಗೆ ವರದಿಯನ್ನು ಸಿದ್ದಪಡಿಸಿ  ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು  ನಿಮ್ಮ ಮುಂದೆ ಹಾಜರ್ಪಡಿಸುತ್ತಿದ್ದು  ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ಠಾಣಾಧಿಕಾದಿಕಾರಿಗಳಾದ ನಿಮಗೆ ಸೂಚಿರುತ್ತೆ  ಎನ್ನುವ ದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ. 175/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ಈ ದಿನ ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂ:139/2021 ಕಲಂ 15(ಎ) 32(3) ಕೆ.ಇ . ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 140/2021 ಕಲಂ. 87 ಕೆ.ಪಿ. ಆಕ್ಟ್ :-

     ದಿ:08/09/2021 ರಂದು ಸಂಜೆ 6-15 ಗಂಟೆಗೆ ಘನ ನ್ಯಾಯಾಲಯದ ಸಿಬ್ಬಂದಿಯಾದ ಪಿ.ಸಿ.-318.ದೇವರಾಜು ರವರು ಠಾಣಾ ಎನ್.ಸಿ.ಆರ್.ನಂ.201/2021 ರಲ್ಲಿ ಆರೋಪಿಗಳ ವಿರುದ್ದ  ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯವು  ಅನುಮತಿಯನ್ನು ನೀಡಿರುವುದನ್ನು  ತಂದು ಹಾಜರ್ಪಡಿಸಿದ್ದು ಸದರಿ ಎನ್.ಸಿ.ಆರ್.ನಂ.201/2021 ರಲ್ಲಿನ ಸಾರಾಂಶವೇನೆಂದರೆ  ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ  ಆದ ತಾನು ದಿ:30/08/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ-40 ಜಿ-281 ರಲ್ಲಿ ಚಾಲಕ ಎ.ಪಿ.ಸಿ-76 ಹರೀಶ್ ರವರೊಂದಿಗೆ ಗಸ್ತು ಮಾಡುತ್ತೀರುವಾಗ ಸಂಜೆ 4-15 ಗಂಟೆಯಲ್ಲಿ ಗೌರಿಬಿದನೂರು ನಗರ ಪೊಲೀಸ್ ಗುಪ್ತ ಮಾಹಿತಿ ಸಿಬ್ಬಂದಿಯಾದ ಲೋಕೇಶ್ ಸಿ.ಹೆಚ್.ಸಿ-214 ರವರು ಪೋನ್ ಮಾಡಿ ಗೌರಿಬಿದನೂರು ನಗರದ, ಕಲ್ಲೂಡಿ ಗ್ರಾಮದ ಪಕ್ಕದಲ್ಲಿರುವ  ಸಾರ್ವಜನಿಕ ಸ್ಥಳವಾದ ಮೂಗನಹಳ್ಳಿದಲ್ಲಿ ಯಾರೋ ಕೆಲ ಅಸಾಮಿಗಳು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವನ್ನು ಆಡುತ್ತೀರುವುದಾಗಿ  ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು ಬೆಂಗಳೂರು ವೃತ್ತದ ಬಳಿ ಹೋಗಿ ಅಲ್ಲಿಗೆ ಠಾಣಾ ಸಿಬ್ಬಂದಿಯಾದ ಸಿ ಹೆಚ್ ಸಿ-12 ಶಿವಶಂಕರಪ್ಪ, ಸಿ.ಹೆಚ್.ಸಿ-213 ಶಿವಣ್ಣ, ಸಿಪಿಸಿ-507 ಹನುಮಂತರಾಯಪ್ಪ, ಸಿಪಿಸಿ-102 ಪ್ರತಾಪ್ ಕುಮಾರ್ ರವರನ್ನು ಸಂಜೆ 4-20 ಗಂಟೆ ಸಮಯಕ್ಕೆ ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ ಜೀಪ್ ನಲ್ಲಿ ಕರೆದುಕೊಂಡು ಕಲ್ಲೂಡಿ ಗ್ರಾಮಕ್ಕೆ ಸಂಜೆ 4-30 ಗಂಟೆ ಸಮಯಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಕಾಲದಲ್ಲಿ ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೆರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಮೂಗನಹಳ್ಳಕ್ಕೆ ಹೋಗಿ ರಸ್ತೆಯ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲ ಅಸಾಮಿಗಳು ಜಾಲಿ ಮರದ ಕೆಳಗೆ ಕುಳಿತುಕೊಂಡು ಅಂದರ್-200 ರೂಪಾಯಿ ಬಾಹರ್-200 ರುಪಾಯಿ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತೀರುವುದು ಖಚಿತ ಪಡಿಸಿಕೊಂಡು ನಂತರ ತಾವುಗಳು ಪಂಚರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಅವರನ್ನು ಸುತ್ತುವರೆದು  ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ 1] ಮದುಸೂದನ್ ಬಿನ್ ರಾಜಣ್ಣ, 28 ವರ್ಷ, ಸಾದರು ಗೌಡರು, ಬಿ.ಪಿ.ಸಿ.ಎಲ್. ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 2] ನಟರಾಜ್ ಬಿನ್ ಲೇಟ್ ಲಕ್ಷ್ಮೀನಾರಾಯಣ, 26 ವರ್ಷ, ಸಾದರು ಗೌಡರು, ಬಟ್ಟೆ ಅಂಗಡಿಯಲ್ಲಿ ಕೆಲಸ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 3] ನಾಗರಾಜ್ ಬಿನ್ ಗಂಗಾಧರಪ್ಪ, 36 ವರ್ಷ, ಮಡಿವಾಳ ಜನಾಂಗ, ಹಪ್ಪಳ ವ್ಯಾಪಾರ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 4] ಲಕ್ಷ್ಮೀನರಸಿಂಹ ಬಿನ್ ಲಕ್ಷ್ಮೀಪತಿ, 24 ವರ್ಷ, ನಾಯಕರು, ಜಿರಾಯ್ತಿ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 5] ನವೀನ್ ಬಿನ್ ನಾಗರಾಜ್, ನಾಯಕರು, ಖಾಸಗಿ ಪ್ಯಾಕ್ಟರಿಯಲ್ಲಿ ಕೆಲಸ, ವಾಸ: ಕಲ್ಲೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ವಿವಿದ ಮುಖ ಬೆಲೆಯ ಒಟ್ಟು 1380-00 ರೂಪಾಯಿಗಳು, 52 ಇಸ್ಟೀಟ್ ಎಲೆಗಳು, ಮತ್ತು ಒಂದು ನ್ಯೂಸ್ ಪೇಪರ್ ಈ   ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 4-45 ಗಂಟೆಯಿಂದ ಸಂಜೆ 5-45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಸಂಜೆ 6-00 ಗಂಟೆ ಸಮಯಕ್ಕೆ ಬಂದು  ಸಂಜೆ 6-30 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದೆ  ಅಂತ   ನೀಡಿದ  ದೂರು ವರದಿಯಾಗಿದ್ದು, ಈ ದೂರು ವರದಿಯನ್ನು ಶ್ರೀ.ಎ.ಎನ್.ನಾಗರಾಜ, ಎ.ಎಸ್.ಐ ರವರು ಪಡೆದುಕೊಂಡು ಠಾಣೆಯಲ್ಲಿ  ಎನ್.ಸಿ.ಆರ್.ನಂ. 201/2021 ರೀತ್ಯಾ ದಾಖಲಿಸಿಕೊಂಡು ಘನ ನ್ಯಾಯಾಲಯಕ್ಕೆ ಈ ಪ್ರಕರಣದಲ್ಲಿನ ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ಸಂಬಂಧ ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರ ಮೇರೆಗೆ ಆರೋಪಿತರ ವಿರುದ್ದ ಠಾಣೆಯಲ್ಲಿ ಮೊ.ಸಂ.140/2021 ಕಲಂ  87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 208/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ 07/09/2021 ರಂದು ಸಂಜೆ 4-30 ಗಂಟೆಗೆ ಗುಡಿಬಂಡೆ  ಪೊಲೀಸ್ ಠಾಣೆಯ ಎ.ಎಸ್.ಐ. ನಂಜುಂಡಶರ್ಮ ರವರು ಠಾಣೆಯಲ್ಲಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:07/09/2021 ರಂದು  ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ತನಗೆ ಠಾಣಾ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಹೆಚ್.ಸಿ.-73 ಶ್ರೀ ಹನುಮಂತರಾಯಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದ ಸರ್ಕಾರಿ ಕೆರೆಯಲ್ಲಿ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿರುತ್ತೆಂತ ತಿಳಿಸಿದರು ಅದರಂತೆ ನಾನು, ಠಾಣೆಯಲ್ಲಿದ್ದ ಸಿಬ್ಬಂದಿಗಳಾದ ಪಿಸಿ-141 ಸಂತೋಷ್ ಕುಮಾರ್ ಹೆಚ್.ಸಿ-127 ಕರಿಬಾಬು, ಹೆಚ್.ಸಿ-102 ಶ್ರೀ ಆನಂದ ದ್ವಿಚಕ್ರವಾಹನಗಳಲ್ಲಿ  ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದ ಬಸ್ಸು ನಿಲ್ದಾಣದ ಬಳಿ ಮದ್ಯಾಹ್ನ 2-30 ಗಂಟೆಗೆ ಹೋಗಿ ಅಲ್ಲಿದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ, ರವರನ್ನು ಹಾಗೂ ಅಲ್ಲಿಯೇ ಇದ್ದ  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ಹಂಪಸಂದ್ರ ಗ್ರಾಮದ ಸರ್ಕಾರಿ ಕೆರೆಯಲ್ಲಿ  ಸಾರ್ವಜನಿಕ ರಸ್ತೆಯ ಪಕ್ಕ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ  ಮಾಹಿತಿ ಬಂದಿದ್ದು,  ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ನಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸುತ್ತುವರೆದು 100/-ರೂ ಅಂದರ್ ಎಂತಲೂ 100/- ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಮದ್ಯಾಹ್ನ 2-45 ಗಂಟೆಗೆ  ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ದಾಳಿ ಮಾಡಿದಾಗ ಮೂರು ಜನ ಸ್ಥಳದಿಂದ ಹೋಡಿ ಹೋಗಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಆದಿನಾರಾಯಣ ಬಿನ್ ಅಶ್ವತ್ಥಪ್ಪ, 38 ವರ್ಷ, ದೋಬಿ ಜನಾಂಗ, ಜಿರಾಯ್ತಿ, ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು 2) ನಾಗರಾಜ ಬಿನ್ ಲೇಟ್ ವೆಂಕಟರೋಣಪ್ಪ,58 ವರ್ಷ, ಬಲಜಿಗ ಜನಾಂಗ, ವ್ಯವಸಾಯ, ಓಬನ್ನಗಾರಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 3) ರಾಜು ಬಿನ್ ಲೇಟ್ ಮಾರಪ್ಪ, 40ವರ್ಷ, ನಾಯಕ ಜನಾಂಗ, ಕಾರು ಚಾಲಕ ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಸದರಿಯವರನ್ನು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಸೂರಿ ಬಿನ್ ಕೃಷ್ಣಪ್ಪ 30 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ, , ಓಬನ್ನಗಾರಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, 2) ನಾರಾಯಣಸ್ವಾಮಿ ಬಿನ್ ಲೇಟ್ ನರಸಿಂಹಪ್ಪ, 50 ವರ್ಷ, ನಾಯಕರು, ಜಿರಾಯ್ತಿ, ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು, 3) ಹಫೀಜ್ ಬಿನ್ ಭಾಷ, 30 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದರು, ಸ್ಥಳದಲ್ಲಿ ಪಣವಾಗಿಟ್ಟಿದ್ದ 5130/- (ಐದುಸಾವಿರ ನೂರ ಮುವತ್ತು) ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಮದ್ಯಾಹ್ನ  3-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ಮಾಲನ್ನು ಪಂಚನಾಮೆಯೊಂದಿಗೆ ಸಂಜೆ 4-00 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 4-30 ಗಂಟೆಗೆ ನೀಡುತ್ತಿದ್ದು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ದೂರಿನ ಮೇರೆಗೆ ಠಾಣಾ NCR No 273/2021 ರಂತೆ ದಾಖಲು ಮಾಡಿಕೊಂಡು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಳ್ಳುಲು ಅನುಮತಿಯನ್ನು ಪಡೆದುಕೊಂಡು ಈ ದಿನ ದಿನಾಂಕ 08/09/2021 ರಂದು ಸಂಜೆ 5-45 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 209/2021 ಕಲಂ. 78(I),78(III) KARNATAKA POLICE ACT, 1963 :-

     ದಿನಾಂಕ:07/09/2021 ರಂದು ಮದ್ಯಾಹ್ನ 2-30 ಘಂಟೆಗೆ ಪಿರ್ಯಾಧಿ ಠಾಣೆಯಲ್ಲಿ ಹಾಜರಾಗಿ ಆರೋಪಿ, ಮಾಲು, ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಮಶವೇನೆಂದರೆ, ಈ ದಿನ ದಿನಾಂಕ:07/09/2021 ರಂದು ಬೆಳಿಗ್ಗೆ 11-45  ಗಂಟೆಯ ಸಮಯದಲ್ಲ್ಲಿ ತಾನು ಠಾಣೆಯಲ್ಲಿದ್ದಾಗ ಠಾಣಾ ಪಿಸಿ 86 ಶ್ರೀ ಅಬ್ದುಲ್ ಘನಿ ರವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ಚಿಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿರವುದಾಗಿ ತಿಳಿಸಿದ್ದರ ಮೇರೆಗೆ ಸದರಿ ಮಾಹಿತಿಯಂತೆ ನಾನು ಸಿಬ್ಬಂದಿಯವರಾದ ಪಿ.ಸಿ 92 ರವಿ ಜೀಪ್ ಚಾಲಕ ಮಧುಕುಮಾರ್ ರವರೊಂದಿಗೆ ಕೆಎ-40-ಜಿ-1777 ಸರ್ಕಾರಿ ಜೀಪಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸಾರ್ವಜನಿಕ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು 1/- ರೂ 70/- ರೂಗಳನ್ನು ನೀಡುವುದಾಗಿ ಮಟ್ಕಾ ಚೀಟಿ ಬರೆಯುತ್ತಾ ಹಣವನ್ನು ಪಣವನ್ನಾಗಿ ಇಡಲು ಸಾರ್ವಜನಿಕರಿಗೆ ಪ್ರೇರೇಪಿಸುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆಯುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿ ಆಸಾಮಿಯನ್ನು ಸುತ್ತುವರೆದು ಆತನನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ತಿಳಿಯಲಾಗಿ ಸೀತಪ್ಪ ಬಿನ್ ಲೇಟ್ ಬೈರಪ್ಪ, 52 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ವಾಸ: ಬಂಡಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯ ಅಂಗಶೋಧನೆ ಮಾಡಿ ನೋಡಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್, 350/- ರೂಗಳು ನಗದು ಹಣ ಇತ್ತು. ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-30 ಗಂಟೆಯಿಂದ ಮದ್ಯಾಹ್ನ 1-30 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ಅಸಲು ಪಂಚನಾಮೆ, ಮಾಲುಗಳು ಹಾಗೂ ಆರೋಪಿಯೊಂದಿಗೆ ಠಾಣೆಗೆ ಮದ್ಯಾಹ್ನ 2-15 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಮದ್ಯಾಹ್ನ 2-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಆರೋಪಿತನನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು  ಪ್ರಕರಣ ದಾಖಲಿಸಿರುತ್ತೆ.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 105/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:08-09-2021 ರಂದು ಮಧ್ಯಾಹ್ನ 3-10 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:08/09/2021 ರಂದು ಮಧ್ಯಾಹ್ನ 1-40 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದು ಮುದ್ದೇನಹಳ್ಳಿ ಗ್ರಾಮದ ಕಡೆಗೆ ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಹೆಚ್ ಸಿ-32 ಕೇಶವಮೂರ್ತಿ ಮತ್ತು ಸಿಪಿಸಿ-240 ಮಧುಸೂದನ್ ರವರೊಂದಿಗೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನಂದರೆ ನಶಿಕುಂಟೆ ಹೋಸೂರು ಗ್ರಾಮದ ಮುನಿರಾಜು ರವರ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಸೇವನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುತ್ತಾರೆಂದು  ಬಂದ ಮಾಹಿತಿಯಂತೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 2-00 ಗಂಟೆಗೆ ಹೋಗುವಷ್ಠರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಗಿರಾಕಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಮುಂಭಾಗದಲ್ಲಿ ಮದ್ಯದ ಟೇಟ್ರಾ ಪಾಕೇಟ್ ಗಳು,  ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ  ಹೆಸರು ವಿಳಾಸವನ್ನು ಕೇಳಲಾಗಿ ಮುನಿರಾಜು ಬಿನ್ ಲೇಟ್ ಚಿಕ್ಕದಾಸಪ್ಪ, 30 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರಿ, ನಶಿಕುಂಟೆ ಹೋಸೂರು ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ನಂತರ ಸ್ಥಳದಲ್ಲಿದ್ದ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 14 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು- 1260ML ಮದ್ಯವಿದ್ದು ಒಟ್ಟು ಬೆಲೆ 491 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಕಲ್ಲಿಸಿಕೊಟ್ಟ ಆಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮಧ್ಯಾಹ್ನ 2:10 ಗಂಟೆಯಿಂದ ಮಧ್ಯಾಹ್ನ 2:40 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

Last Updated: 09-09-2021 07:28 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080