ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.228/2021 ಕಲಂ. 78(3) ಕೆ.ಪಿ ಆಕ್ಟ್ :-

    ದಿನಾಂಕ: 07/08/2021 ರಂದು ಮದ್ಯಾಹ್ನ 3-15 ಗಂಟೆಗೆ  ಶ್ರೀ ಪಿ.ಐ. ನಾಗರಾಜ್ ಡಿ.ಆರ್, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ: 07.08.2021 ರಂದು ಮದ್ಯಾಹ್ನ 1-45 ಗಂಟೆಗೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ 16ನೇ ವಾರ್ಡಿನ ಸಂತೆ ಮೈದಾನದ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಟರಾಜ್ ಸಿ.ಹೆಚ್.ಸಿ-156, ನರಸಿಂಹಮೂರ್ತಿ ಹೆಚ್.ಸಿ-257 ಮತ್ತು ಜೀಪ್ ಚಾಲಕ ಎಹೆಚ್.ಸಿ-57 ನೂರ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-1444 ರಲ್ಲಿ ಮೇಲ್ಕಂಡ ಸ್ಥಳಕ್ಕೆ ಬಂದಿದ್ದು, ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಮದ್ಯಾಹ್ನ 2-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ, ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ ಅಂಕಿಗಳ 1 ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ 4,900/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಜಯಪ್ಪ ಬಿನ್ ಲೇಟ್ ವೆಂಕಟಪ್ಪ, 74 ವರ್ಷ, ಭಜಂತ್ರಿ, ಕುಲಕಸುಬು, ವಾಸ ಕೊತ್ತಕೋಟೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಮಾಲು, ಅಸಲು ಪಂಚನಾಮೆ  ಮತ್ತು ಆರೋಪಿಯೊಂದಿಗೆ  ಮದ್ಯಾಹ್ನ 3-15 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-222/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 09-08-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.229/2021 ಕಲಂ. 15(A),32(3) ಕೆ.ಪಿ  ಆಕ್ಟ್ :-

     ದಿನಾಂಕ:09/08/2021 ರಂದು ಮದ್ಯಾಹ್ನ 2-30 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ; 09.08.2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ನಾನು ಮತ್ತು  ಸಿ ಪಿ.ಸಿ 214 ಅಶೋಕ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿಪುರದಲ್ಲಿ ನ್ಯಾಷನಲ್ ಕಾಲೇಜಿನ ಕಡೆ ಗಸ್ತು ಮಾಡುತ್ತಿದ್ದಾಗ,  ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಹೊಸಹುಡ್ಯ ಗ್ರಾಮದ  ರಾಮಕೃಷ್ಣ ಬಿನ್ ಲೇಟ್ ಆದೆಪ್ಪರವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿ ಪಿ.ಸಿ 214 ಅಶೋಕ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಹೊಸಹುಡ್ಯ ಗ್ರಾಮದ ಶಾಲೆಯ ಮುಂಭಾಗದ ರಸ್ತೆಯಲ್ಲಿದ್ದ  ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 1.15  ಗಂಟೆಗೆ ಹೊಸಹುಡ್ಯ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಂಗಡಿಯ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಪ್ರಯತ್ನಿಸುತ್ತಿದ್ದವನನ್ನು ಸಿಬ್ಬಂದಿಯಾದ ಪಿಸಿ 214 ಅಶೋಕ್ ರವರು ಹಿಡಿದುಕೊಂಡು ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ರಾಮಕೃಷ್ಣ ಬಿನ್ ಲೇಟ್ ಆದೆಪ್ಪ, 50 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ವಾಸ ಹೊಸಹುಡ್ಯ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು  ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/ -ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯನ್ನು  ಮದ್ಯಾಹ್ನ 2.30  ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.106/2021 ಕಲಂ. 15(A),32(3) ಕೆ.ಇ  ಆಕ್ಟ್ :-

   ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:09/08/2021 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಕಡದನಮರಿ ಗ್ರಾಮದ ವಾಸಿಯಾದ ಮಂಜುನಾಥ ಬಿನ್ ಗಂಗುಲಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆ ನಾನು ಠಾಣೆಯ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಕಡದನಮರಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 01-00 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಕಡದನಮರಿ ಗ್ರಾಮದ ವಾಸಿ ಮಂಜುನಾಥ ಬಿನ್ ಗಂಗುಲಪ್ಪ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಮಂಜುನಾಥ ಬಿನ್ ಗಂಗುಲಪ್ಪ 39 ವರ್ಷ ಆದಿಕರ್ನಾಟಕ ಜನಾಂಗ ಚಾಲಕ ವೃತ್ತಿ ವಾಸ ಕಡದನಮರಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 10 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದ ಪ್ರತಿಯೊಂದರ ಮೇಲೆ ಬೆಲೆ 35.13 ರೂ ಎಂತ ಇದ್ದು ಒಟ್ಟು 900 ಎಂ.ಎಲ್ ನ 351 ರೂಗಳ ಮದ್ಯ ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 01-15 ಗಂಟೆಯಿಂದ ಮಧ್ಯಾಹ್ನ 02-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 02-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖ್ಯೆ: 106/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.107/2021 ಕಲಂ. 87 ಕೆ.ಪಿ  ಆಕ್ಟ್ :-

   ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ,  ದಿನಾಂಕ:09/08/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಬೇಟಿ ಕರ್ತವ್ಯದಲ್ಲಿ ಇರಗಂಪಲ್ಲಿ ಗ್ರಾಮದಲ್ಲಿ ಇದ್ದಾಗ ಠಾಣಾ ವ್ಯಾಪ್ತಿಯ ಸೀತಾರಾಂಪುರ ಗ್ರಾಮದ ವಾಸಿಯಾದ ಶ್ರೀನಿವಾಸ ಬಿನ್ ಲೇಟ್ ವೆಂಕಟೇಶ್ ರವರ ಬಾಬತ್ತು ಜಮೀನಿನ ಪಶ್ಚಿಮದ ಕಡೆಗೆ ಇರುವ ಸರ್ಕಾರಿ ಕುಂಟೆಯ ಬಳಿ ಹೊಂಗೆ ಮರದ ಕೆಳಗೆ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಗೆ ಪೋನ್ ಮಾಡಿ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಎಸ್.ಐ ವೆಂಕಟರವಣಪ್ಪ, ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ, ಹೆಚ್.ಸಿ 176 ಶ್ರೀ.ಮುನಿರಾಜು, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿಸಿ 262 ಶ್ರೀ.ಅಂಬರೀಶ್, ಪಿ.ಸಿ 415 ಪರಸಪ್ಪ ತ್ಯಾಗರ್ತಿ ರವರುಗಳನ್ನು ನಲ್ಲಗುಟ್ಲಹಳ್ಳಿ ಗ್ರಾಮದ ಬಳಿಗೆ ಬರಮಾಡಿಕೊಂಡು ನಾನು ಅಲ್ಲಿಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯೊಂದಿಗೆ ನಾವುಗಳು ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಬೆಳಿಗ್ಗೆ 10-13 ಗಂಟೆಗೆ  ಸೀತಾರಾಂಪುರ ಗ್ರಾಮದ ಶ್ರೀನಿವಾಸ ರವರ ಜಮೀನಿನ ಬಳಿಗೆ ಹೋಗಿ ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನಾವುಗಳು ಸ್ವಲ್ಪ ದೂರ ಮುಂದೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಶ್ರೀನಿವಾಸ ರವರ ಜಮೀನಿನ ಪಶ್ಚಿಮದ ಕಡೆಗೆ ಇರುವ ಕುಂಟೆಯ ಬಳಿ ಒಂದು ಹೊಂಗೆ ಮರದ ಕೆಳಗೆ ಯಾರೋ ಆಸಾಮಿಗಳು ವೃತ್ತಾಕಾರದಲ್ಲಿ ಗುಂಪಾಗಿ ಕುಳಿತುಕೊಂಡು ಅಂದರ್ 100 ರೂ ಬಾಹರ್ 100 ರೂ ಎಂದು ಕೂಗುಗಳನ್ನು ಇಡುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಗುಂಪನ್ನು ಸುತ್ತುವರೆದು ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಸೂಚಿಸಿದರೂ ಸಹ ಸದರಿಯವರು ಓಡಿ ಹೋಗಲು ಯತ್ನಿಸಿದ್ದು ಅವರ ಪೈಕಿ 3 ಜನ ಆಸಾಮಿಗಳನ್ನು ನಾವು ಹಿಡಿದುಕೊಂಡಿದ್ದು ಒಬ್ಬನು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ನಾವು ಹಿಡಿದುಕೊಂಡ ಮೂರು ಜನ ಆಸಾಮಿಗಳ ಹೆಸರು ವಿಳಾಸಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಾಗಿ 1)ಅಶೋಕ ಬಿನ್ ವೆಂಕಟೇಶಪ್ಪ, 30ವರ್ಷ, ಜೆಸಿಬಿ ಡ್ರೈವರ್ ಕೆಲಸ, ಬೋವಿ ಜನಾಂಗ, ಸೀತಾರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು, 7624949349, 2) ಶ್ರೀನಿವಾಸ ಬಿನ್ ಲೇಟ್ ವೆಂಕಟೇಶಪ್ಪ, 45ವರ್ಷ, ಟ್ರ್ಯಾಕ್ಟರ್ ಚಾಲಕ, ಬೋವಿ ಜನಾಂಗ, ಸೀತಾರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು, 7349642415 3) ನವೀನ ಬಿನ್ ಶಿವಣ್ಣ, 27ವರ್ಷ, ಜಿರಾಯ್ತಿ, ಬೋವಿ ಜನಾಂಗ, ಸೀತಾರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು 9591023097 ಎಂದು ತಿಳಿಸಿದ್ದು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋದ ಆಸಾಮಿಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ಆಂಜಿ ಬಿನ್ ಚಿನ್ನಪ್ಪಯ್ಯ, 38ವರ್ಷ, ಬೋವಿ ಜನಾಂಗ, ಬಿ.ಎಂ.ಟಿ.ಸಿ ಕಂಡೆಕ್ಟರ್ ಕೆಲಸ, ಸೀತಾರಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3210/- ರೂಗಳಿರುತ್ತೆ ಸ್ಥಳದಲ್ಲಿ ಇದ್ದ  3 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3210 /- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಬೆಳಿಗ್ಗೆ  10-30 ಗಂಟೆಯಿಂದ ಸಂಜೆ 11-30 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಮಧ್ಯಾಹ್ನ 12-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 145/2021 ರಂತೆ ದಾಖಲಿಸಿಕೊಂಡು ನಂತರ ಸದರಿ ಎನ್.ಸಿ.ಆರ್ ನಲ್ಲಿ ಕಂಡ ಮಾಲು ಮತ್ತು ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡಂತೆ ಪ್ರಕರಣ ದಾಖಲಿಸಿರುತ್ತೇನೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 379 ಐ.ಪಿ.ಸಿ & 102,41(1)(d) ಸಿ.ಆರ್.ಪಿ.ಸಿ :-

    ದಿನಾಂಕ:09-08-2021 ರಂದು ಬೆಳಗ್ಗೆ 5-15 ಗಂಟೆಯಲ್ಲಿ ಶ್ರೀ ಸೋಮಶೇಖರ್, ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:08-08-2021 ರಂದು ಮೇಲಾಧಿಕಾರಿಗಳು ನನಗೂ ಮತ್ತು ಸಿಬ್ಬಂದಿಯಾದ ಸುರೇಶ್, ಹೆಚ್.ಸಿ-38, ಶ್ರೀನಿವಾಸ, ಸಿ.ಪಿ.ಸಿ-359, ಮುರಳಿ, ಸಿ.ಪಿ.ಸಿ-138 ಮತ್ತು ನರಸಿಂಹಮೂರ್ತಿ, ಸಿ.ಪಿ.ಸಿ-264 ರವರಿಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಸರಹದ್ದಿನಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ನೇಮಕದಂತೆ ನಾವು ರಾತ್ರಿ 11-00 ಗಂಟೆಗೆ ಗಸ್ತನ್ನು ಪ್ರಾರಂಭಿಸಿ ಎನ್.ಹೆಚ್-44 ರಸ್ತೆ ಹೊನ್ನೇನಹಳ್ಳಿ ಗ್ರಾಮದಿಂದ ಶೆಟ್ಟಿಗೆರೆ ಕ್ರಾಸ್ ವರೆಗೆ ಗಸ್ತು ಮಾಡಿಕೊಂಡಿದ್ದು, ದಿನಾಂಕ:09-08-2021 ರ ಬೆಳಗಿನ ಜಾವ 4-30 ಗಂಟೆ ಸಮಯಕ್ಕೆ ದೊಡ್ಡಪೈಲಗುರ್ಕಿ ಗೇಟ್ ನಲ್ಲಿ ಇದ್ದಾಗ ಬಾಗೇಪಲ್ಲಿ ಕಡೆಯಿಂದ ಒಂದು ಅಶೋಕ ಲೈ ಲ್ಯಾಂಡ್ ದೋಸ್ತ್ ನೋಂದಣಿ ಸಂಖ್ಯೆಯ ನಂ ಕೆ.ಎ 45 ಎ 1633 ವಾಹನ ಬಂದಿದ್ದು, ಸದರಿ ವಾಹನವನ್ನು ತಡೆದು ನಿಲ್ಲಿಸಿ ಅದರ ಚಾಲಕ ಮತ್ತು ಪಕ್ಕದಲ್ಲಿದ್ದವರಿಗೆ ನೀವು ಎಲ್ಲಿಂದ ಬರುತ್ತಿರುವುದು ಎಂದು ವಿಚಾರ ಮಾಡಿದ್ದು, ಅವರು ತಡವರಿಸುತ್ತಾ ಒಂದು ಬಾರಿ ಹಿಂದೂಪುರ ಮತ್ತೊಂದು ಬಾರಿ ಅನಂತಪುರ ಎಂದು ಉತ್ತರಿಸಿರುತ್ತಾರೆ. ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ 1] ಮಂಜುನಾಥ.ಎನ್ ಬಿನ್ ನಾರಾಯಣಪ್ಪ, 36 ವರ್ಷ, ದೋಬಿ ಜನಾಂಗ, ಲಾರಿ ಚಾಲಕ ಕೆಲಸ, ವಾಸ: ಘಂಟಂವಾರಿಪಲ್ಲಿ ಗ್ರಾಮ, ಹೊಸಹುಡ್ಯ ಅಂಚೆ, ಬಾಗೇಪಲ್ಲಿ ತಾಲ್ಲೂಕು, ಎಂತಲೂ ಚಾಲಕನ ಪಕ್ಕದಲ್ಲಿದ್ದವನ ಹೆಸರು ವಿಳಾಸ ಕೇಳಲಾಗಿ 2] ಮುರಳಿ ಬಿನ್ ನರಸಿಂಹುಲು, 34 ವರ್ಷ, ದೋಬಿ ಜನಾಂಗ, ಆಟೋ ಚಾಲಕ ಕೆಲಸ, ವಾಸ: ಪಿಲವಂಕ ಕಾಲೋನಿ, ಮಗ್ಗಾಲ ಕ್ವಾಟ್ರಸ್, ಕದಿರಿ ನಗರ ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ಎಂದು ಮತ್ತು ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ 3] ಸಂಜಯ್.ಟಿ ಬಿನ್ ಶಂಕರ, 18 ವರ್ಷ, ದೋಬಿ ಜನಾಂಗ, ಆಟೋ ಚಾಲಕ ಕೆಲಸ, ವಾಸ: ಪಿಲವಂಕ ಕಾಲೋನಿ, ಮಗ್ಗಾಲ ಕ್ವಾಟ್ರಸ್, ಕದಿರಿ ನಗರ ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ಎಂತ ತಿಳಿಸಿದ್ದು, ಅಸಾಮಿಗಳಿಗೆ ಅಶೋಕ ಲೈಲ್ಯಾಂಡ್ ದಾಖಲೆಗಳನ್ನು ಕೇಳಿದಾಗ ತಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲವೆಂದು, ಸಮಂಜಸವಾದ ಉತ್ತರವನ್ನು ನೀಡದೇ ಇದ್ದು, ಸದರಿ ವಾಹನದಲ್ಲಿ ಒಂದು ರಾಡ್ ಇದ್ದು, ಆ ಸಮಯದಲ್ಲಿ ವಾಹನ ಚಾಲಕನ ಸೀಟಿನಲ್ಲಿ ಕುಳಿತಿದ್ದ ಚಾಲಕ ಮಂಜುನಾಥ ಎಂಬುವವನು ವಾಹನದ ಡೋರ್ ತೆಗೆದು ಕತ್ತಲಲ್ಲಿ ಓಡಿಹೋಗಿದ್ದು,ಈ ವಾಹನವು ಕಳವು ವಾಹನವಾಗಿರಬಹುದೆಂದು ಅನುಮಾನದ ಮೇರೆಗೆ ಇಬ್ಬರು ಅಸಾಮಿಗಳನ್ನು ಮತ್ತು ಸದರಿ ವಾಹನ ಹಾಗೂ ವಾಹನದಲ್ಲಿದ್ದ ರಾಡನ್ನು ವಶಕ್ಕೆ ಪಡೆದು ಬೆಳಿಗ್ಗೆ 5-15 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.42/2021 ಕಲಂ. 279,336 ಐ.ಪಿ.ಸಿ :-

    ದಿನಾಂಕ;-09-08-2021 ರಂದು ಬೆಳಗ್ಗೆ 9-10 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ  ದೂರಿನ ಸಾರಾಂಶವೇನೆಂದರೆ ತಾನು 2015 ನೇ ಸಾಲಿನಲ್ಲಿ ಕೆಎ-53-ಎಂಸಿ -2150 ಎಂಬ ಇನೋವಾ ಕಾರನ್ನು ಖರೀದಿಸಿ  ಚಿಕ್ಕಬಳ್ಳಾಪುರ  ಆರ್  ಟಿ ಓ  ಕಛೇರಿಯಲ್ಲಿ ನನ್ನ ಹೆಸರಿಗೆ  ನೊಂದಣಿ  ಮಾಡಿಸಿಕೊಂಡು  ನನ್ನ ಮನೆಯ ಕೆಲಸಗಳಿಗೆ ಬಳಸಿಕೊಂಡಿದ್ದೆನು,  ದಿನಾಂಕ;08-08-2021 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ  ನಮ್ಮ ಚಿಕ್ಕಪ್ಪನ ಮಗನಾದ ಮನೋಹರ ವಿ ರವರು ನನ್ನ ಬಾಬತ್ತು ಇನೋವಾ ಕಾರನ್ನು ದೇವನಹಳ್ಳಿಯ ಕೋರಮಂಗಲಕ್ಕೆ ಹೋಗಿ ಬರುವುದಾಗಿ ಕೇಳಿ ತೆಗದುಕೊಂಡು ಹೋದನು, ನಾನು ರಾತ್ರಿ  11-05 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ  ನಮ್ಮ ಗ್ರಾಮದ   ಹರಿಕೃಷ್ಣ ರವರು ನನ್ನ ಮೊಬೈಲಿಗೆ  ಕರೆ ಮಾಡಿ  ನಿನ್ನ ಬಾಬತ್ತು ಕಾರನ್ನು ಮನೋಹರ  ಗ್ರಾಮಕ್ಕೆ ವಾಪಸ್ಸು  ಬರಲು ಬರುತ್ತಿದ್ದಾಗ ಅಣಕನೂರು ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ  ಎಡಬದಿಯಲ್ಲಿನ ಮರಕ್ಕೆ ಗುದ್ದಿ ಹಳ್ಳದಲ್ಲಿ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದ್ದು ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ ಎಂದು  ನಾನು ಸ್ಥಳದಲ್ಲಿಯೇ  ಇರುವುದಾಗಿ  ಎಂದು ವಿಚಾರ  ತಿಳಿಸಿದನು, ತಕ್ಷಣ  ನಾನು ನಮ್ಮ ಅಣ್ಣ ದೇವರೆಡ್ಡಿ,ಹಾಗೂ ರವಿ ಬಿನ್ ವೆಂಕಟೇಶಪ್ಪ ರವರು ಸ್ಥಳಕ್ಕೆ ಬಂದಾಗ ವಿಚಾರ ನಿಜವಾಗಿದ್ದು ಅಣಕನೂರಿನ ರಸ್ತೆಯಲ್ಲಿನ ಟೈಲ್ಸ್ ಅಂಗಡಿ ಸಮೀಪ ರಸ್ತೆಯ ಎಡಬದಿಯಲ್ಲಿ ಹಳ್ಳದಲ್ಲಿ ಕಾರು ಬಿದ್ದು ಕಾರಿನ ಎಡಬದಿಯ ಚಕ್ರ ಹೊಡೆದುಹೋಗಿ ಕಾರಿನ  ಮುಂದಿನ ಬಂಪರ್, ಇಂಜನ್ ಭಾಗ, ಮುಂದಿನ ಗ್ಲಾಸ್ ,ಬಾಡಿ ಮತ್ತು ಹಿಂಭಾಗದ ಗ್ಲಾಸ್  ಹಾಗೂ ಛಾಸ್ಸಿ ಬೆಂಡ್ ಆಗಿರುತ್ತದೆ, ಹಾಗೂ ಎಡಬದಿಯ ಎರಡೂ ಡೋರುಗಳು ಜಖಂಗೊಂಡಿರುತ್ತೆ ಕಾರನ್ನು ಚಾಲನೆ ಮಾಡುತ್ತಿದ್ದ ಮನೋಹರನಿಗೆ ಯಾವುದೇ ಗಾಯಗಳು ಆಗಿರಲಿಲ್ಲಾ, ಈ ಒಂದು ಅಪಘಾತಕ್ಕೆ ಕಾರನ್ನು ಕೋರಮಂಗಲಕ್ಕೆ ಹೋಗಿ ಬರುವುದಾಗಿ ನನ್ನಿಂದ ಪಡೆದುಕೊಂಡು ಹೋಗಿದ್ದ ಮನೋಹರನ ಅತಿವೇಗದ ಚಾಲನಯೆ ಕಾರಣವಾಗಿದ್ದು ಇವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಿ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.354/2021 ಕಲಂ. 15(A),32(3) ಕೆ.ಇ ಆಕ್ಟ್:-

   ದಿನಾಂಕ: 08/08/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-167 ಶ್ರೀ.ವಿಜಯ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 08/08/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ-16 ಲೋಕೇಶ್ ರವರು ಠಾಣಾ ಸರಹದ್ದಿನ ಕರಿಯಪಲ್ಲಿ, ಕಾಗತಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಹಿರಣ್ಯಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಕದಿರಪ್ಪ ಬಿನ್ ಲೇಟ್ ನಲ್ಲಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಹಿರಣ್ಯಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು, 2) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 03 ಟೆಟ್ರಾ ಪಾಕೆಟ್ ಗಳು, 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕದಿರಪ್ಪ ಬಿನ್ ಲೇಟ್ ನಲ್ಲಪ್ಪ, 60 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಹಿರಣ್ಯಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಕದಿರಪ್ಪ ಬಿನ್ ಲೇಟ್ ನಲ್ಲಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.355/2021 ಕಲಂ. 279 ಐ.ಪಿ.ಸಿ:-

     ದಿನಾಂಕ: 08/08/2021 ರಂದು ಸಂಜೆ 5.45 ಗಂಟೆಗೆ ಭತ್ತುಲ ರವೀಂದ್ರ ಬಿನ್ ಭತ್ತುಲರಾಮಚಂದ್ರ, 35 ವರ್ಷ, ಗೊಲ್ಲರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಪ್ಲಾಟ್ ನಂ 303, ಪಾವನಿ ಲೇಕ್ ವ್ಯೂ, 2ನೇ ಕ್ರಾಸ್, ಬೋವಿನಹಳ್ಳಿ, ಬೆಂಗಳೂರು ನಗರ, ಸ್ವಂತ ಸ್ಥಳ ಪಾಮುರೋಳ್ಳಪಲ್ಲಿ, ಮದನಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಬಳಿ KA-03 NC- 3834 ನಂಬರಿನ ಮಾರುತಿ ಸುಜುಕಿ ಕಂಪನಿಯ ಬ್ರಿಜಾ ಕಾರು ಇದ್ದು ಇದರ ದಾಖಲೆಗಳು ತನ್ನ ಹೆಸರಿನಲ್ಲಿಯೇ ಇರುತ್ತವೆ. ದಿನಾಂಕ: 06/08/2021 ರಂದು ತಾನು ಮತ್ತು ತನ್ನ ಸ್ನೇಹಿತನಾದ ಪ್ರೇಮ್ ಕುಮಾರ್ ರವರು ಸ್ವಂತ ಗ್ರಾಮವಾದ ಆಂದ್ರಪ್ರದೇಶದ ಮದನಪಲ್ಲಿಗೆ ಹೋಗಲು ಸಂಜೆ 6.30 ಗಂಟೆಗೆ ಬೆಂಗಳೂರಿನಿಂದ ಹೊರಟೆವು. ಈ ಸಮಯದಲ್ಲಿ ಪ್ರೇಮ್ ಕುಮಾರ್ ಬಿನ್ ಸುಬ್ಬಾರಾವ್, 34 ವರ್ಷ, ಆರ್ಯವೈಶ್ಯ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಚಿನ್ನಪ್ಪನಹಳ್ಳಿ, ದೊಡ್ಡನೆಕ್ಕುಂದಿ, ಬೆಂಗಳೂರು ರವರು ಕಾರನ್ನು ಚಾಲನೆ ಮಾಡುತ್ತಿದ್ದರು. ತಾನು ಪಕ್ಕದಲ್ಲಿ ಕುಳಿತಿದ್ದೆ. ಬೆಂಗಳೂರು-ಕಡಪ ಮಾರ್ಗವಾಗಿ ಚಿಂತಾಮಣಿ ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮದ ಬಳಿ ರಾತ್ರಿ ಸುಮಾರು 8.30 ಗಂಟೆಗೆ ಬರುತ್ತಿದ್ದಾಗ ಪೆರಮಾಚನಹಳ್ಳಿ ಗ್ರಾಮದ ಪಶು ಆಸ್ಪತ್ರೆಯ ಬಳಿ ಬಂದಾಗ ಪ್ರೇಮ್ ಕುಮಾರ್ ಇದ್ದಕ್ಕಿದ್ದಂತೆ ಕಾರನ್ನು ಅತಿವೇಗವಾಗಿ ಚಾಲನೆ ಮಾಡಿ ರಸ್ತೆಯ ಬಲ ಬದಿಯಲ್ಲಿದ್ದ  ತಡೆಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನದ ಮುಂಬಾಗದ ಬಲಚಕ್ರದ ಮೇಲ್ಬಾಗದ ಹಾಗೂ ಇತರೆ ಕಡೆಗಳಲ್ಲಿ ಜಖಂಗೊಂಡಿರುತ್ತೆ. ಕಾರನ್ನು ಚಾಲನೆ ಮಾಡುತ್ತಿದ್ದ ಪ್ರೇಮ್ ಕುಮಾರ್ ರವರಿಗಾಗಲಿ, ಜೊತೆಯಲ್ಲಿದ್ದ ತನಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ. ಆದುದರಿಂದ ತನ್ನ ಬಾಬತ್ತು KA-03 NC- 3834 ಬ್ರಿಜಾ ಕಾರನ್ನು ಅತಿವೇಗವಾಗಿ ಚಾಲನೆ ಮಾಡಿ ಅಪಘಾತಪಡಿಸಿದ ಪ್ರೇಮ್ ಕುಮಾರ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ. ತಾನು ಪರಸ್ಥಳೀಯನಾಗಿದ್ದು ಕಾನೂನು ಅರಿವಿಲ್ಲದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತಾರೆ.

 

9. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:08/08/2021 ರಂದು ಮಧ್ಯಾಹ್ನ 15-30 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಬಶೆಟ್ಟಿಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 461 ಸಂತೋಷ್ ಕುಮಾರ್ ಮತ್ತು ಸಿ.ಹೆಚ್.ಸಿ 159 ಸೈಯದ್ ಮೊಹಮ್ಮದ್ ರವರನ್ನು ಕರೆದುಕೊಂಡು ಸಂಜೆ 16-00 ಗಂಟೆಗೆ ಬಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ ಮಾಹಿತಿದಾರರಿಂದ ಆಸಾಮಿ ಮತ್ತು ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಬಶೆಟ್ಟಿಹಳ್ಳಿ ಗ್ರಾಮದ  ದೇವರಾಜ್ ಬಿನ್ ಮುನಿಶಾಮಪ್ಪ ರವರ ಮನೆಯ ಮನೆಯ ಬಳಿ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ದೇವರಾಜ್ ಬಿನ್ ಮುನಿಶಾಮಪ್ಪ ರವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿ ಆಸಾಮಿಯ ಮೇಲೆ ಸಿಬ್ಬಂದಿಯವರು ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು  ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ದೇವರಾಜ್ @ ರಾಜ ಬಿನ್ ಮುನಿಶಾಮಪ್ಪ, 25 ವರ್ಷ, ಆದಿ ದ್ರಾವಿಡ ಜನಾಂಗ, ವಾಸ : ಬಶೆಟ್ಟಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೋನ್ ನಂಬರ್:7019899887 ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ HAYWARDS CHEERS WHISKY ಯ 08 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 720 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 281.04 ರೂ ಆಗಿದ್ದು ನಂತರ ಅದೇ ಪ್ಲಾಸ್ಟಿಕ್ ಕವರ್ ನಲ್ಲಿದ್ದ 180 ಎಂ,ಎಲ್ ನ BAGPIPER DELUXE WHISKY ಯ 06 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1080 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 106.23 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 637.38 ರೂಗಳ ಮಧ್ಯದ ಪ್ಯಾಕೇಟ್ ಗಳ  ಒಟ್ಟು ಮೌಲ್ಯ1800 ಎಂ.ಎಲ್ ಆಗಿದ್ದು ಅವುಗಳ ಬೆಲೆ 918.42 ರೂ ಆಗಿರುತ್ತೆ. ಸದರಿ ತುಂಬಿದ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ ಲ್ ನ HAYWARDS CHEERS WHISKY ಯ  ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-15 ಗಂಟೆಯಿಂದ ಸಂಜೆ 17-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ, ಆಸಾಮಿಯೊಂದಿಗೆ ಸಂಜೆ 17-30 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:103/2021 ಕಲಂ:15(A),32(3) K E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.104/2021 ಕಲಂ. 279,304(A) ಐ.ಪಿ.ಸಿ:-

    ದಿನಾಂಕ:09/08/2021 ರಂದು ಮಧ್ಯಾಹ್ನ 15-00 ಗಂಟೆಗೆ ಪಿರ್ಯಾದಿದಾರರಾದ ಪೆಮ್ಮರೆಡ್ಡಿ ಬಿನ್ ವೆಂಕಟರಾಯಪ್ಪ, 42 ವರ್ಷ, ವಕ್ಕಲಿಗರು, ಮೆಕಾನಿಕ್ ಕೆಲಸ, ವಾಸ:ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ ನಾನು ದಿಬ್ಬೂರಹಳ್ಳಿ ಗ್ರಾಮದಲ್ಲಿ ಟಿ.ವಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನನಗೆ ಈಗ್ಗೆ 10 ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೆಗೌಡನಹಳ್ಳಿ ಗ್ರಾಮದ ವಾಸಿಯಾದ ತಮ್ಮಣ್ಣ ರವರ ಮಗಳಾದ ಸುಮಿತ್ರಮ್ಮ(32 ವರ್ಷ)  ಎಂಬಾಕೆಯನ್ನು ಮದುವೆ ಮಾಡಿಕೊಂಡಿದ್ದು  ನಮಗೆ  ಇಬ್ಬರು ಮಕ್ಕಳು ಇರುತ್ತಾರೆ.  ನನ್ನ ಹೆಂಡತಿಯಾದ ಸುಮಿತ್ರಮ್ಮ  ರವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮರವೆನಹಳ್ಳಿ ಗ್ರಾಮದಲ್ಲಿ ಈಗ್ಗೆ 5-6 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿರುತ್ತಾಳೆ. ದಿನಾಂಕ:09/08/2021 ರಂದು ಬೆಳಗ್ಗೆ 9-30 ಗಂಟೆಯ ಸಮಯಕ್ಕೆ ನನ್ನ ಹೆಂಡತಿಯಾದ ಸುಮಿತ್ರಮ್ಮ  ರವರು ಮರೆವೆನಹಳ್ಳಿ ಗ್ರಾಮಕ್ಕೆ ಹೋಗಲು ದಿಬ್ಬೂರಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ಮರವೆನಹಳ್ಳಿ ಗ್ರಾಮದ ಮೇಲೆ ಚಿಕ್ಕಬಳ್ಳಾಪುರದ ಕಡೆಗೆ ಹೋಗುವ ಬಸ್ ಹೊರೆಟು ಹೋಗಿದ್ದು ಸದರಿ ವಿಚಾರವನ್ನು ನನಗೆ ತಿಳಿಸಿದ್ದು ಆದರಂತೆ ನಾನು ನಮ್ಮ ಅಣ್ಣ ಮಗನಾದ ಹರೀಶ್ ಬಿನ್ ರಾಮಾಂಜಿನಪ್ಪ,26 ವರ್ಷ, ವಕ್ಕಲಿಗರು,ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ: ದಿಬ್ಬೂರಹಳ್ಳಿ ಗ್ರಾಮ ರವರಿಗೆ ನನಗೆ ಪರಿಚಯಸ್ಥರಾದ ಗಿರೀಶ್ ಬಿನ್ ರಾಜೇಂದ್ರರೆಡ್ಡಿ,25 ವರ್ಷ,ಮೋಟರ್ ರಿವೈಂಡಿಗ್ ಕೆಲಸ, ವಾಸ: ದಿಬ್ಬೂರಹಳ್ಳಿ ಗ್ರಾಮ ರವರಿಂದ KA-40-V-3294  ಹಿರೋ ಸಿ.ಡಿ ಡಿಲೆಕ್ಸ್ ದ್ವಿ ಚಕ್ರವಾಹನವನ್ನು ಪಡೆದುಕೊಂಡು ನನಗೆ ಕೆಲಸವಿದ್ದ ಕಾರಣ ಹರೀಶ್ ರವರಿಗೆ ಸುಮಿತ್ರಮ್ಮ ರವರನ್ನು ಮರವೆನಹಳ್ಳಿ ಗ್ರಾಮದ ಅಂಗನವಾಡಿಯ ಬಳಿ ಡ್ರಾಪ್ ಮಾಡಿ ಬರುವಂತೆ ಹೇಳಿದ್ದು  ಹರೀಶ್ ರವರು ಸುಮಾರು 9-45 ಗಂಟೆಯ ಸಮಯದಲ್ಲಿ ನನ್ನ ಹೆಂಡತಿ ಸುಮಿತ್ರಮ್ಮ  ರವರನ್ನು   KA-40-V-3294  ಹಿರೋ ಸಿ.ಡಿ ಡಿಲೆಕ್ಸ್ ದ್ವಿ ಚಕ್ರವಾಹನದಲ್ಲಿ ಕರೆದುಕೊಂಡು ಮರವೆನಹಳ್ಳಿಯಲ್ಲಿಗೆ ಹೋಗುತ್ತಿದ್ದಾಗ ಸುಮಾರು 10-00 ಗಂಟೆಯ ಸಮಯದಲ್ಲಿ ನನಗೆ ಪರಿಚಯಸ್ಥನಾದ ಪ್ರಕಾಶ್ ಬಿನ್ ನಾರಾಯಣಸ್ವಾಮಿ ರವರ ಪೋನ್ ನಂಬರ್ 9591029983 ನಿಂದ ನನಗೆ ಪೋನ್ ಮಾಡಿ  ಶಿಡ್ಲಘಟ್ಟ ರಸ್ತೆಯಲ್ಲಿರುವ  ಸೀತಹಳ್ಳಿ ಗ್ರಾಮದ ಕ್ರಾಸ್  ನಿಂದ ಸುಮಾರು 50 ಮೀಟರ್ ದೂರದಲ್ಲಿ ಸುಮಿತ್ರಮ್ಮ ರವರಿಗೆ ಅಪಘಾತವಾಗಿದೆ ಎಂದು ಹೇಳಿದ್ದು ಆದರಂತೆ ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಹೆಂಡತಿ ಸುಮಿತ್ರಮ್ಮ ರವರ ಮೂಗಿನ ಬಳಿ ಮತ್ತು ತಲೆಯ ಹಿಂಭಾಗ, ಭುಜದ ಬಳಿ ರಕ್ತಗಾಯಗಳು ಆಗಿದ್ದು ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿತ್ತು ನಂತರ  ನಾನು ನಮ್ಮ ಅಣ್ಣ ಮಗನಾದ ಹರೀಶ್ ರವರನ್ನು ಕುರಿತು ಏನಾಯ್ತಿ ಎಂದು ವಿಚಾರ ಕೇಳಲಾಗಿ ತಾನು ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಸೀತಹಳ್ಳಿ ಗ್ರಾಮ ಕ್ರಾಸ್ ಬಿಟ್ಟು ಸುಮಾರು 50 ಮೀಟರ್ ದೂರ ಬಂದಾಗ ಇದ್ದಕ್ಕಿಂದಂತೆ ಒಂದು ನಾಯಿ ದ್ವಿ ಚಕ್ರವಾಹನಕ್ಕೆ ಅಡ್ಡ ಬಂದಿದ್ದು ತಕ್ಷಣ ನಾನು ಬೇಕ್ ಹಾಕಿದಾಗ ದ್ವಿ ಚಕ್ರವಾಹನದ ಮೇಲೆ ಕುಳಿತಿದ್ದ ನಮ್ಮ ಚಿಕ್ಕಮ್ಮನವರು ಟಾರ್ ರಸ್ತೆಯಲ್ಲಿ ಬೋರಲಾಗಿ ಬಿದ್ದು ಪಲ್ಟಿ ಹೊಡೆದ ಕಾರಣ ನಮ್ಮ ಚಿಕ್ಕಮ್ಮನ ಮುಖಕ್ಕೆ ಮತ್ತು ತಲೆಗೆ ಹಿಂಭಾಗಕ್ಕೆ ರಕ್ತ ಗಾಯಗಳು ಆಗಿರುತ್ತೆಂದು ತಿಳಿಸಿರುತ್ತಾನೆ.  ನನ್ನ ಹೆಂಡತಿಯಾದ ಸುಮಿತ್ರಮ್ಮ  ರವರ ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತ ಬರುತ್ತಿದ್ದು ಅದೇ ಸಮಯಕ್ಕೆ ಒಂದು ಕಾರು ಬಂದಿದ್ದು ಸದರಿ ಕಾರಿನಲ್ಲಿ ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದಾಗ ನನ್ನ ಹೆಂಡತಿ ಸುಮಿತ್ರಮ್ಮ ರವರು ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ. ಆದ್ದರಿಂದ ದಿನಾಂಕ:09/08/2021 ರಂದು ಬೆಳಗ್ಗೆ ಸುಮಾರು 10-00 ಗಂಟೆಯ ಸಮಯದಲ್ಲಿ ನನ್ನ ಅಣ್ಣ ಮಗನಾದ ಹರೀಶ್ ರವರು ದಿಬ್ಬೂರಹಳ್ಳಿ ಗ್ರಾಮದಿಂದ ಮರೆವೆನಹಳ್ಳಿ ಗ್ರಾಮಕ್ಕೆ ಹೋಗಲು KA-40-V-3294  ಹಿರೋ ಸಿ.ಡಿ ಡಿಲೆಕ್ಸ್ ದ್ವಿ ಚಕ್ರ ವಾಹನದಲ್ಲಿ ಸೀತಹಳ್ಳಿ ಗ್ರಾಮದ ಕ್ರಾಸ್ ನ ಬಳಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿ ಅಡ್ಡ ಬಂದಿದ್ದಕ್ಕೆ  ಅತೀವೆಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೇಕ್ ಹಾಕಿದ್ದರಿಂದ ನನ್ನ ಹೆಂಡತಿಯಾದ ಸುಮಿತ್ರಮ್ಮ ರವರು  ದ್ವಿಚಕ್ರವಾಹದಿಂದ ಜಾರಿ ಟಾರ್ ರಸ್ತೆಯಲ್ಲಿ ಬಿದ್ದು ಪಲ್ಟಿ ಹೊಡೆದ ಕಾರಣ ಮೂಗಿಗೆ, ತಲೆಯ ಹಿಂಭಾಗ, ಭುಜದ ಬಳಿ ರಕ್ತಗಾಯಗಳು ಆಗಿ ಮೃತ ಪಟ್ಟಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:104/2021 ಕಲಂ:279,304(A) IPC ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 09/08/2021 ರಂದು ಮದ್ಯಾಹ್ನ 1:30 ಗಂಟೆಯಲ್ಲಿ ಶ್ರೀನಾಗರಾಜ ASI ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಷಮೀರ್ ವಲಿ ಬಿನ್ ಲೇಟ್ ಅಬ್ದುಲ್ ಖಾದರ್ ಸಾಬ್, 60 ವರ್ಷ, ಮುಸ್ಲಿಂ ಜನಾಂಗ, ಆಜಾದ್ ನಗರ, ಗೌರಿಬಿದನೂರು ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ನಾನು ಕೋಳಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇನೆ. ದಿನಾಂಕ 09/08/2021 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ಕೋಳಿ ವ್ಯಾಪಾರಕ್ಕೆ ನನ್ನ ದ್ವಿಚಕ್ರ ವಾಹನ KA-40-J-5270 ರಲ್ಲಿ ತೊಂಡೇಬಾವಿಗೆ ಹೋಗಿದ್ದು ನಂತರ ಮದ್ಯಾಹ್ನ 12:30 ಗಂಟೆಯಲ್ಲಿ ನಾನು ಮತ್ತು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಯುಸೂಫ್ ಖಾನ್ ಬಿನ್ ರಹೀಮ್ ಖಾನ್, 52 ವರ್ಷ, ಟಿಪ್ಪು ನಗರ ರವರೊಂದಿಗೆ ಗೌರಿಬಿದನೂರು ನಗರಕ್ಕೆ ಬರುತ್ತಿರುವಾಗ ಗೌರಿಬಿದನೂರು ನಗರದ MCH ಆಸ್ಪತ್ರೆ ಬಳಿ ಬೈಪಾಸ್ ಕಡೆ ಹೋಗುವ ರಸ್ತೆಯ ಬಳಿ ಗೌರಿಬಿದನೂರು ನಗರದ ಕಡೆಯಿಂದ ಬಂದ ನಂಬರ್ KA-51-AD-8694 Eicher ವಾಹನವನ್ನು ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ KA-40-J-5270 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಎಡಕೈಗೆ ಗಾಯವಾಗಿದ್ದು ಹಾಗೂ ನನ್ನ ಜೊತೆಯಲ್ಲಿದ್ದ ಯೂಸೂಫ್ ಖಾನ್ ರವರ ತಲೆಗೆ ಗಾಯವಾಗಿರುತ್ತದೆ. ನಂತರ ನಮ್ಮನ್ನು 108 ರಲ್ಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆದ್ದರಿಂದ ಅಪಘಾತವುಂಟು ಮಾಡಿದ KA-51-AD-8694 Eicher ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.180/2021 ಕಲಂ. 279 ಐ.ಪಿ.ಸಿ:-

     ದಿನಾಂಕ 08/08/2021 ರಂದು ಮದ್ಯಾಹ್ನ 14-30 ಗಂಟೆಗೆ ಪಿರ್ಯಾದಿದಾರರು  ಪ್ರದೀಪ್ ಕುಮಾರ್ ಬಿನ್ ಬಿ. ಕುಳ್ಳಾಯಪ್ಪ. 25 ವರ್ಷ, ಬೆಸ್ತರು. ಚಾಲಕ ವೃತ್ತಿ. ವೇಣುಗೋಪಾಲ್ ನಗರ. # 18/1/704. ಅನಂತಪುರ ಜಿಲ್ಲೆ. ಆಂಧ್ರಪ್ರಧೇಶ. ಮೊಬೈಲ್ ನಂ: 9642010211 ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು ಒಂದು ವರ್ಷದಿಂದ ಅನಂತಪುರ ಜಿಲ್ಲೆ, ಗಾರ್ಲದಿನ್ನ ಮಂಡಲಂ ಗುಡ್ಡಾಲಪಲ್ಲಿ ಗ್ರಾಮದ ಜನಾರ್ಧನ ರೆಡ್ಡಿ ಬಿನ್ ಜಯಭಾಸ್ಕರರೆಡ್ಡಿಯವರ ಬಾಬತ್ತು ಎ.ಪಿ. 39. ಟಿ.ಕ್ಯೂ. 5697 ನೊಂದಣಿ ಸಂಖ್ಯೆಯ ವಾಹನಕ್ಕೆ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ವಾಹನದಲ್ಲಿ ದಿನಾಂಕ: 07.08.2021 ರಂದು ತಾನು ಮತ್ತು ಕ್ಲೀನರ್ ಪೆದ್ದನ್ನ,ಬಿ. ಬಿನ್ ಬಿ.ನಾರಾಯಣವರು ಬೆಂಗಳೂರಿನಿಂದ ಅನಂತಪುರಕ್ಕೆ ಕಬ್ಬಿಣದ ರೇಖುಗಳನ್ನು ಇತರೆ ಸಾಮಾನುಗಳನ್ನು ತುಂಬಿಕೊಂಡು ಸಂಜೆ 6-00 ಗಂಟೆಗೆ ಬಿಟ್ಟು ಅನಂತಪುರಕ್ಕೆ ಹೋಗುತ್ತಿದ್ದಾಗ ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ಪೆರೇಸಂದ್ರ ಕ್ರಾಸ್ ನ ಬಳಿ ಇರುವ ರೆಡ್ಡಿ ಡಾಭಾ ಬಳಿ ಬರುತ್ತಿದ್ದಾಗ ಹಿಂದೆಯಿಂದ ಬಂದ ಅಂದರೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಎಪಿ03.ಟಿಇ.9906 ಬಲ್ಕರ್ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು  ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ, ತಮ್ಮ ವಾಹನದ ಹಿಂಬದಿಯಲ್ಲಿ ಜಖಗೊಂಡು, ತಮ್ಮ ವಾಹನ ತನ್ನ ನಿಯಂತ್ರಣ ತಪ್ಪಿ ಆಡ್ಡಾದಿಡ್ಡಿ ರಸ್ತೆಯಲ್ಲಿ ಹೋಗಿ, ತಮ್ಮ ವಾಹನದಲ್ಲಿದ್ದ ಕಬ್ಬಿಣದ ರೇಖುಗಳು ಹಾಗೂ  ಇತರೆ ಸಾಮಾನುಗಳು ರಸ್ತೆಯಲ್ಲಿ ಬಿದ್ದು ಹೋಗಿರುತ್ತೆ. ತಮ್ಮ ವಾಹನಕ್ಕೆ ಹಿಂಬಂದಿಯಿಂದ ರಸ್ತೆ ಅಪಘಾತವನ್ನುಂಟು ಮಾಡಿದ ಬಲ್ಕರ್ ಲಾರಿಯ ನೊಂದಣಿ ಸಂಖ್ಯೆಯನ್ನು ನೋಡಲಾಗಿ ಎ.ಪಿ.03.ಟಿ.ಇ.9906 ಆಗಿರುತ್ತೆ. ಸದರಿ ಬಲ್ಕರ್ ಲಾರಿಯ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಈ ರಸ್ತೆ ಅಪಘಾತವನ್ನುಂಟು ಮಾಡಿರುವ ಬಲ್ಕರ್ ಲಾರಿ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ದೂರು.

 

13. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.181/2021 ಕಲಂ. 380,454 ಐ.ಪಿ.ಸಿ:-

    ದಿನಾಂಕ: 08.08.2021 ರಂದು ಮದ್ಯಾಹ್ನ 15-30 ಗಂಟೆ ಸಮಯದಲ್ಲಿ ಪಿರ್ಯಾದಿದಾರಾದ ಚಿಕ್ಕಬಳ್ಳಾಪುರ ತಾಲ್ಲೂಕು ಕದಿರದೇವರಹಳ್ಳಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ವೆಂಕಟನರಸಪ್ಪ ರವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾವು 06.08.2021 ರಂದು ಶುಕ್ರವಾರ ಹಗಲು ಹೊತ್ತಿನಲ್ಲಿ ಕುಟುಂಬ ಸಮೇತ ತೋಟದಲ್ಲಿ ಕಳತೆ ತೆಗೆಯಲು ಹೋಗಿದ್ದು ನನ್ನ ಹೆಂಡತಿ ಮತ್ತು ಮಗಳು 10-00 ಗಂಟೆ ಸುಮಾರಿಗೆ ಕೂಲಿಯವರಿಗೆ ಅಡುಗೆ ಮಾಡಿಕೊಂಡು ಜಮೀನಿನ ಹತ್ತಿರ ಬಂದಿದ್ದರು. ಸಂಜೆ 4-00 ಗಂಟೆ ಸಮಯದಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಮನೆಗೆ ಬಂದಾಗ ಮನೆ ಬೀಗ ತೆರೆದಿದ್ದು ನೋಡಿದರೂ ಬೀಗ ಹಾಕಿರುವುದು ಮರೆತಿರಬಬೇಕೆಂದು ಅದರ ಕಡೆಗೆ ಗಮನ ಕೊಟ್ಟಿರುವುದಿಲ್ಲ. ಮಾರನೇ ದಿನ ಅಂದರೆ ದಿ:07.08.2021 ರಂದು ಶನಿವಾರ ಬೆಳಿಗ್ಗೆ ಮನೆಯ ಖರ್ಚುಗಳಿಗೆ ಹಣದ ಅವಶ್ಯಕತೆಯಿಂದ ಬೀರುವನ್ನು ತೆರೆದಾಗ ಬೀರುವಿನಲ್ಲಿಟ್ಟಿದ್ದ 1500/- ರೂ (ಸಾವಿರದ ಐದನೂರು ರೂಪಾಯಿ) ಮತ್ತು ಚಿನ್ನದ ವಡವೆಗಳು ಕಾಣೆಯಾಗಿದ್ದವು. ವಡವೆಗಳ ವಿವರ ಒಂದು ಜೊತೆ ಓಲೆ, ಮತ್ತು ಹ್ಯಾಂಗಿಗ್ಸ್, 20 ಗ್ರಾಂ,  10 ಗ್ರಾಂ ಚಿನ್ನದ ಚೈನ್, ಉಂಗುರ 10 ಗ್ರಾಂ, ಕಳುವಾಗಿರುವುದು ಗಮನಕ್ಕೆ ಬಂದಿದೆ. ಮೇಲ್ಕಂಡ ಬಂಗಾರದ ವಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂಧ ತಾವು ದಯವಿಟ್ಟು ಸದರಿ ಬಂಗಾರದ ವಡವೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ. ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

14.ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.182/2021 ಕಲಂ. 279,337 ಐ.ಪಿ.ಸಿ:-

    ದಿ:08.08.2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಎಸ್ ನೂರ್ ಬಿನ್ ಮಹಮದ್ ಸಾಬ್, ರವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ದಿ: 06.08.2021 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಕಮ್ಮದೂರು ಗ್ರಾಮದಿಂದ ಕೋಲಾರಕ್ಕೆ ಕೆ.ಎ.64. 2093 ನೊಂದಣಿ ಸಂಖ್ಯೆಯ ಈಚರ್ ವಾಹನದಲ್ಲಿ ಟಮೋಟೋ ತುಂಬಿಕೊಂಡು ನಾನು ಮತ್ತು ಚಾಲಕರಾದ ಎಸ್ .ನಜೀರ್ ಬಿನ್ ಫಕೃದ್ದೀನ್ ರವರು ಹಾಗೂ ಇಬ್ರಾಹಿಂ ಖಾನ್ ಬಿನ್ ಮಾಬುಖಾನ್, ರವರು ಬರುತ್ತಿದ್ದು ದಿ:07.08.2021 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ತಮ್ಮ ಠಾಣಾ ವ್ಯಾಪ್ತಿಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬ್ರಿಡ್ಜ್ ಹತ್ತುತ್ತಿದ್ದಾಗ ಎದರುಗಡೆಯಿಂದ ಯಾವುದೋ ಅಪರಿಚಿತ ವಾಹನದ ಬೆಳಕು ನಮ್ಮ ಡ್ರೈವರ್ ಕಣ್ಣಿಗೆ ಬಿದ್ದಿದ್ದರಿಂದ ನಮ್ಮ ವಾಹನದ ಚಾಲಕ ವಾಹನವನ್ನು ಅಡ್ಡಾದಿಡ್ಡಿ ಓಡಿಸಿ ನಿಯಂತ್ರಣ ತಪ್ಪಿದ್ದರಿಂದ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗಿನ ಸರ್ವೀಸ್ ರಸ್ತೆಗೆ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ನಾವು ವಾಹನದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದು, ಅಕ್ಕಪಕ್ಕದ ಜನರು ಓಡಿ ಬಂದು  ನಮ್ಮನ್ನು ಬಿಡಿಸಿ ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸೇರಿರುತ್ತಾರೆ. ಆದ್ದರಿಂಧ ತಾವುಗಳು ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡು ನಮಗೆ ಸೂಕ್ತವಾಗಿ ಸಹಕರಿಸಿ ಕೊಡಲು ತಮ್ಮಲ್ಲಿ ಮನವಿ ಎಂದು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಈ ರಸ್ತೆ ಅಪಘಾತವನ್ನುಂಟು ಮಾಡಿರುವ ಎಸ್ ನಜೀರ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

15.ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ:9/08/2021 ರಂದು ಮದ್ಯಾಹ್ನ 3:20 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:09-08-2021 ರಂದು  ಮದ್ಯಾಹ್ನ 2:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವ ಮೂರ್ತಿ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ದೇವಿಶೆಟ್ಟಿಹಳ್ಳಿ ಗ್ರಾಮದ ಮುನಿಕೃಷ್ಣಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಮನೆಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಯಲುವಹಳ್ಳಿ ಗ್ರಾಮದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 2:15 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮುನಿಕೃಷ್ಣಪ್ಪ ಬಿನ್ ದೇಕಪ್ಪ, 52 ವರ್ಷ, ಪ.ಜಾತಿ, ಕುರಿ ಮೆಯಿಸುವ ಕೆಲಸ, ವಾಸ: ದೇವಿಶೆಟ್ಟಿಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 12 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 12 ಟೆಟ್ರಾ ಪ್ಯಾಕೇಟುಗಳ ಬೆಲೆ 421 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 80 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 7 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 6 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 2:20 ಗಂಟೆಯಿಂದ ಮದ್ಯಾಹ್ನ 3:00 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

16. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 324,326,504 ಐ.ಪಿ.ಸಿ:-

    ದಿನಾಂಕ: 08/08/2021 ರಂದು ಮದ್ಯಾಹ್ನ 3-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೊಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಅನಿಲ್ ಬಿನ್ ಲೇಟ್ ಗಂಗಪ್ಪ, ಸಿದ್ದಾರ್ಥ ನಗರ, ಶಿಡ್ಲಘಟ್ಟ ನಗರ ರವರ ಹೇಳಿಕೆ ಪಡೆದು ಸಂಜೆ 4-30 ಗಂಟೆಗೆ ವಾಪಸ್ಸು ಬಂದು ದಾಖಲಿಸಿದ ಹೇಳಿಕೆ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ: 08/08/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಮಂಜುನಾಥ ಬಾರ್ , ಟಿ.ಬಿ ರಸ್ತೆಯಲ್ಲಿ ಇದೇ ಸಿದಾರ್ಥ ನಗರದ ವಾಸಿಯಾದ ಮುರಳಿ @ ರಾಜುಬಾಬು @ ದೊರೆ ಬಿನ್ ಲೇಟ್ ಮುನಿಕೃಷ್ಣಪ್ಪ ಪ.ಜಾತಿ ರವರೊಂದಿಗೆ ಮದ್ಯಪಾನ ಮಾಡುತ್ತಿದ್ದು, ಈ ವೇಳೆಯಲ್ಲಿ ಮದ್ಯಪಾನ ಕದ್ದಿರುವ ವಿಚಾರವಾಗಿ ನಮ್ಮಿಬ್ಬರ ಮಧ್ಯೆ ಬಾಯಿ ಮಾತಿನ ಜಗಳವಾಗಿರುತ್ತದೆ. ನಂತರ ನಾನು ಮನೆಗೆ ಬಂದು ಊಟ ಮಾಡುತ್ತಿದ್ದಾಗ ಸದರಿ ಮುರಳಿರವರು ಅನಾವಶ್ಯಕವಾಗಿ ಮನೆಯ ಹತ್ತಿರ ಮದ್ಯಾಹ್ನ 2-15 ಗಂಟೆಗೆ ಬಂದು ಅವಾಚ್ಯ ಶಬ್ದಳಿಂದ ಬೈದು ತನ್ನ ಕೈಯಲ್ಲಿದ್ದ ಯಾವುದೋ ಒಂದು ಕಬ್ಬಿಣದ ಮಚ್ಚಿನಿಂದ ನನ್ನ ಬಾಯಿಗೆ ಹೊಡೆದಿದ್ದರಿಂದ ನನ್ನ ಮೂಗಿನ ತುದಿಗೆ ನನ್ನ ತುಟಿಗೆ ಹಾಗೂ ಮೇಲ್ಗಡೆಯ ಹಲ್ಲಿನ ದವಡೆಗೆ ರಕ್ತಗಾಯಯವಾಗಿ ಮೂರು ಹಲ್ಲುಗಳು ಮುರಿದು ಹೋಗಿರುತ್ತದೆ ಅಷ್ಟರಲ್ಲಿ ನಮ್ಮ ಚಿಕ್ಕಮ್ಮನಾದ ಮುನಿದ್ಯಾವಮ್ಮ ಕೋಂ ದ್ಯಾವಪ್ಪ ಮತ್ತು ಪ್ರಭು ಬಿನ್ ನಾರಾಯಣಪ್ಪ ಎಂಬುವರು ಜಗಳವನ್ನು ಬಿಡಿಸಿ ಯಾವುದೋ ವಾಹನದಲ್ಲಿ ಸರ್ಕಾರಿ ಆಸ್ಪತ್ರೆ ಶಿಡ್ಲಘಟ್ಟಕ್ಕೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ, ಅದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂ: 97/2021 ಕಲಂ: 324, 326, 504 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ. 

ಇತ್ತೀಚಿನ ನವೀಕರಣ​ : 09-08-2021 08:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080