Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 181/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 08/07/2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ   ದಿನಾಂಕ:07/07/2021 ರಂದು ಸಂಜೆ 5-30 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು, ಮತ್ತು ಅಸಲು ಪಂನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:07-07-2021 ರಂದು ಮದ್ಯಾಹ್ನ 3-30 ಗಂಟೆ  ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಅಚೇಪಲ್ಲಿ ಕ್ರಾಸ್ ನಲ್ಲಿರುವ ಸರ್ಕಾರಿ ಫ್ರೌಢ ಶಾಲೆ ಆವರಣದಲ್ಲಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸುವ ಸಲುವಾಗಿ ನಾನು, ಪಿಎಸ್ಐ ಶ್ರೀ ಗೋಪಾಲರೆಡ್ಡಿ, ಪ್ರೋ ಪಿಎಸ್ಐ ಆಕಾಶ್ ಭ ಪತ್ತಾರ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ಶ್ರೀನಿವಾಸ್, ಹೆಚ್.ಸಿ 14 ಮುರಳಿ, ಹೆಚ್.ಸಿ-156 ನಟರಾಜ್, ಹೆಚ್.ಸಿ-178 ಶ್ರೀಪತಿ, ಹೆಚ್.ಸಿ 103 ಶಂಕರರೆಡ್ಡಿ, ಪಿಸಿ 278 ಶಬ್ಬೀರ್, ಪಿಸಿ 319 ವಿನಾಯಕ ಪಿಸಿ 423 ಬಸವರಾಜು ರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ರಲ್ಲಿ ಕುಳಿತುಕೊಂಡು ಆಚೇಪಲ್ಲಿ ಕ್ರಾಸ್ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು  ಪಂಚರೊಂದಿಗೆ ಮದ್ಯಾಹ್ನ 4-00 ಗಂಟೆಗೆ ಆಚೇಫಲ್ಲಿ ಕ್ರಾಸ್ನ ಬಳಿ ಜೀಪನ್ನು ನಿಲ್ಲಿಸಿ ಸರ್ಕಾರಿ ಫ್ರೌಢ ಶಾಲೆಯ ಬಳಿಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಯಾರೋ ಕೆಲವರು ಆಸಾಮಿಗಳು ಕುಳಿತುಕೊಂಡು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1. ಲಕ್ಷೀನಾರಾಯಣ ಬಿನ್ ಸತ್ಯಪ್ಪ, 27 ವರ್ಷ, ವಿಶ್ವಕರ್ಮ ಜನಾಂಗ, ಜಿರಾಯ್ತಿ, ವಾಸ:ಬೂರಗಮಡಗು ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2. ಲೋಕೆಶ್ ಬಿನ್ ಶ್ರೀನಿವಾಸ, 22 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ನೀರಗಂಟಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 3. ಲಕ್ಷೀಪತಿ ಬಿನ್ ನಂಜಿರೆಡ್ಡಿ, 29 ವರ್ಷ, ಒಕ್ಕಲಿಗರು, ಹೋಟೆಲ್ ವ್ಯಾಪಾರ, ವಾಸ: ನೀರಗಂಟಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 4. ವೀರೇಂದ್ರ ಬಿನ್ ಚಿನ್ನ ತಿಮ್ಮಯ್ಯ, 30 ವರ್ಷ, ಬಲಜಿಗರು, ಜಿರಾಯ್ತಿ ವಾಸ:ಗುರ್ರಾಲದಿನ್ನೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 5. ಪವನ್ ಕುಮಾರ್ ಬಿನ್ ಬ್ಶೆರೆಡ್ಡಿ, 24 ವರ್ಷ, ಒಕ್ಕಲಿಗರು, ಜಿರಾಯ್ತಿ ವಾಸ: ಗುರ್ರಾಲದಿನ್ನೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 6. ಆದಿನಾರಾಯಣ ಬಿನ್ ಚಿಕ್ಕವೆಂಕಟರಾಯಪ್ಪ, 22 ವರ್ಷ, ಮಾದರ ಜನಾಂಗ, ವಿದ್ಯಾರ್ಥಿ, ವಾಸ: :ಬೂರಗಮಡಗು ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 7. ಬೈರೆಡ್ಡಿ ಬಿನ್ ಆವುಲರೆಡ್ಡಿ, 34 ವರ್ಷ, ಒಕ್ಕಲಿಗರು, ಜಿರಾಯ್ತಿ ವಾಸ: ನೀರಗಂಟಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 8. ಮಂಜುನಾಥ ಬಿನ್ ಚಿನ್ನಪ್ಪಯ್ಯ, 25 ವರ್ಷ, ಭೋವಿ ಜನಾಂಗ, ಆಟೋ ಚಾಲಕ, ವಾಸ: ನೀರಗಂಟಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದರು. ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 5,580/- ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 8 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಬಾಗೇಪಲ್ಲಿ ಠಾಣೆಗೆ ಸಂಜೆ 5-30 ಗಂಟೆಗೆ ವಾಪಸ್ಸಾಗಿ ಮಾಲು ಮತ್ತು 8 ಜನ ಆಸಾಮಿಗಳನ್ನು, ಅಸಲು ಧಾಳಿ ಪಂಚನಾಮೆ ಮತ್ತು ವರಧಿಯನ್ನು ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು  ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ಎನ್ ಸಿಆರ್ ನಂ-177/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 08-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 104/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:09/07/2021 ರಂದು ಮಧ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಬಿನ್ ಚಿಕ್ಕವೆಂಕಟರಾಯಪ್ಪ, 51 ವರ್ಷ, ವಕ್ಕಲಿಗರು, ವಾರ್ಡ್ ನಂ 02 ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ದಿನಾಂಕ 21.06.2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದಿಂದ ತಮ್ಮ ಸ್ವ ಗ್ರಾಮವಾದ ಗಾಂಡ್ಲ ಹೊಸಹಳ್ಳಿಗೆ ದ್ವಿ ಚಕ್ರವಾಹನ ತೆರಳುತ್ತಿದ್ದಾಗ ಮರಳುಕುಂಟೆ ಸಮೀಪ ಪುಟ್ಟತಿಮ್ಮನಹಳ್ಳಿ ರಸ್ತೆ ಸಂಪರ್ಕಿಸುವ ತಿರುವಿನಲ್ಲಿ ತಮ್ಮ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ 40 ಹೆಚ್ 5319 ವಾಹನಕ್ಕೆ ಎದುರುಗಡೆಯಿಂದ ಬಂದ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ಮಹೇಶ್ ಬಿನ್  ವೆಂಕಟಸ್ವಾಮಿ ಮತ್ತು ಹಿಂಬದಿ ಸವಾರ  ಲಕ್ಷ್ಮಿಪತಿ ಬಿನ್ ನಾರಾಯಣಪ್ಪ ರವರುಗಳು ಅದೇ ಗ್ರಾಮದ ಮಂಜುನಾಥ ಬಿನ್ ಮಾರಪ್ಪ ಎಂಬುವರಿಗೆ ಸೇರಿದ ದ್ವಿ ಚಕ್ರ ವಾಹನವನ್ನು ವೇಗವಾಗಿ ಅಡ್ಡದಿಡ್ಡಿಯಾಗಿ ಚಾಲನೆ ಮಾಡಿಕೊಂಡು ರಸ್ತೆ ತಿರುವು ನೋಡದೇ ವೇಗವಾಗಿ ಬಂದು ತನ್ನ ವಾಹನಕ್ಕೆ ಡಿಕ್ಕಿ ರಭಸಕ್ಕೆ ತನ್ನ ವಾಹನವು ಜಖಂಗೋಂಡಿರುತ್ತೆ. ಮತ್ತು ತನಗೆ ಎಡಗಣ್ಣಿನ ಮೇಲ್ಬಾಗ ಹಾಗೂ ಮೂಗು.ಬಾಯಲ್ಲಿ ಹಲ್ಲು ಉದುರಿದ ಪರಿಣಾಮ ರಕ್ತಸ್ರಾವ ವಾಗಿರುತ್ತೆ ನಂತರ ತನ್ನನ್ನು ತನ್ನ ಸಹೋದರ ಬಂದು ಜೀವನ್ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ ನಂತರ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಔಷಧಿಗಳನ್ನು ಸೇವಿಸುತ್ತಾ ವಿಶ್ರಾಂತಿ ಪಡೆಯುತ್ತಿರುತ್ತೇನೆ ಆದ್ದರಿಂದ  ದಿನ ತಡವಾಗಿ ದೂರು ನೀಡಿರುತ್ತೇನೆ ಈ ಅಪಘಾತಕ್ಕೆ ಕಾರಣವಾಗಿರುವ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸದ್ದರ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 304/2021 ಕಲಂ. 323,324,504,506,34 ಐ.ಪಿ.ಸಿ :-

     ದಿನಾಂಕ: 08/07/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನಾಗೇಶ್ ಬಿನ್ ಮುನಿಸ್ವಾಮಿ, 56 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾವುಗಳು ತಮ್ಮ ತಂದೆ ತಾಯಿಯವರಿಗೆ 5 ಜನ ಮಕ್ಕಳಿದ್ದು, ಎಲ್ಲರೂ ಬೇರೆ ಬೇರೆಯಾಗಿ ಸಂಸಾರ ಮಾಡಿಕೊಂಡಿರುತ್ತೇವೆ. ತಮ್ಮ ಗ್ರಾಮದ ಬಳಿ ತಮ್ಮ ತಾಯಿಯ ಹೆಸರಿನಲ್ಲಿ ಸರ್ವೇ ನಂಬರ್ 57/1 ರಲ್ಲಿ 2 ಎಕರೆ ಜಮೀನಿದ್ದು, ಸದರಿ ಜಮೀನಿನ ವಿಚಾರವಾಗಿ ತನಗೂ ಮತ್ತು ತನ್ನ ಅಣ್ಣನಾದ ವೆಂಕಟೇಶ ರವರಿಗೆ ತಕರಾರುಗಳಿರುತ್ತೆ. ಈ ವಿಚಾರವಾಗಿ ವೆಂಕಟೇಶರವರು ಆಗಾಗ್ಗೆ ವಿನಾ ಕಾರಣ ತನ್ನ ಮೇಲೆ ಜಗಳ ತೆಗೆಯುತ್ತಿದ್ದು, ಈ ಬಗ್ಗೆ ತಮ್ಮ ಗ್ರಾಮಸ್ಥರು ಹಲವು ಬಾರಿ ವೆಂಕಟೇಶ ರವರಿಗೆ ಬುದ್ದಿವಾದ ಹೇಳಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 08/07/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ತಾನು ತನ್ನ ಮನೆಯ ಬಳಿ ಇದ್ದಾಗ ವೆಂಕಟೇಶ, ಅವರ ಮಗನಾದ ಸುರೇಶ್ ಬಾಬು ಮತ್ತು ವೆಂಕಟೇಶ್ ರವರ ಮಗಳಾದ ಸರಸ್ವತಿ ರವರು ತನ್ನ ಬಳಿ ಬಂದು ಆ ಪೈಕಿ ತನ್ನ ಅಣ್ಣ ವೆಂಕಟೇಶ ರವರು ತನ್ನನ್ನು “ಏನೋ ಲೋಫರ್ ನನ್ನ ಮಗನೇ ನಿನಗೆ ಎಷ್ಟು ಸಲ ಹೇಳುವುದು ಜಮೀನಿನ ಬಳಿ ಬರಬೇಡ ಈ ಜಮೀನು ನಮಗೆ ಸೇರಿದ್ದು” ಎಂದು ಹೇಳಿದ್ದು, ಆಗ ತಾನು ಈ ಜಮೀನು ನಿನ್ನದಲ್ಲ. ತಮ್ಮ ತಾಯಿ ಮುನಿಯಮ್ಮ ರವರದ್ದು ಎಂದು ಹೇಳಿದ್ದಕ್ಕೆ ವೆಂಕಟೇಶ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಎಡ ಕೈಗೆ ಹೊಡೆದು ಮೂಗೇಟನ್ನುಂಟು ಮಾಡಿದ್ದು ನಂತರ ಸುರೇಶ್ ಬಾಬು ರವರು ಅದೇ ದೊಣ್ಣೆಯಿಂದ ತನ್ನ ಎಡ ಕಿರು ಬೆರಳಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಸರಸ್ವತಿ ರವರು ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮಂಜುನಾಥ ಹಾಗೂ ವೆಂಕಟಮ್ಮ ಮತ್ತಿತರರು ಬಂದು ಗಲಾಟೆ ಬಿಡಿಸಿರುತ್ತಾರೆ. ಮೇಲ್ಕಂಡವರು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು ಇನ್ನೊಂದು ಸಲ ಜಮೀನಿನ ತಂಟೆಗೆ ಬಂದರೆ ನಿನ್ನ್ನು ಮುಗಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 125/2021 ಕಲಂ. 505(1)(B) ಐ.ಪಿ.ಸಿ & 66 INFORMATION TECHNOLOGY  ACT 2000 :-

     ದಿನಾಂಕ: 08/07/2021 ರಂದು ಮದ್ಯಾಹ್ನ 14:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಚಿಂತಾಮಣಿ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಾರೆಡ್ಡಿ ರವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಿ: 08.07.2021 ರಂದು ತಾನು ಶಾಸಕರ ಗೃಹ ಕಛೇರಿಯಲ್ಲಿ ಇದ್ದಾಗ  ತನ್ನ ಮೊಬೈಲ್ ನ ಫೇಸ್ ಬುಕ್ ಖಾತೆಯನ್ನು ನೋಡುತ್ತಿದ್ದ ವೇಳೆ “ ಚಿಂತಾಮಣಿ ಸಾಮಾನ್ಯ ಮತದಾರ is with ಸುಧಾಕರ್ ಯುವ ಸೇನೆ and others “ ಎಂಬ ಫೇಸ್ ಬುಕ್ ಖಾತೆಯಲ್ಲಿ  ನಮ್ಮ ಶಾಸಕರಾದ ಎಂ.ಕೃಷ್ಣಾರೆಡ್ಡಿ ರವರು ಮದ್ಯಸೇವನೆ ಮಾಡುತ್ತಿರುವ ಭಾವಚಿತ್ರವನ್ನು ಕಿಡೀಗೇಡಿಗಳು ಸೃಷ್ಟಿ ಮಾಡಿ (ಎಡಿಟಿಂಗ್ ) ಆಪ್ ಲೋಡ್ ಮಾಡಿರುತ್ತಾರೆ. ಚಿಂತಾಮಣಿ ಕ್ಷೇತ್ರದ ಜನಪ್ರಿಯ ಶಾಸಕರು ಆಗಿರುವ ತಮ್ಮ ಶಾಸಕರಿಗೆ ಅವಮಾನ ಮಾಡುವ ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಟೊಗಳನ್ನು ಆಪ್ ಲೋಡ್ ಮಾಡಿರುತ್ತಾರೆ. ಸಾರ್ವಜನಿಕರ ಹಾಗೂ ಸರ್ಕಾರದ ಸೇವೆ ಮಾಡುತ್ತಿರುವ ನಮ್ಮ ಶಾಸಕರಾದ ಎಂ. ಕೃಷ್ಣಾರೆಡ್ಡಿ ರವರ ವಿರುದ್ದ  ಈ ರೀತಿ ಕೃತ್ಯವನ್ನು ಎಸೆಗಿರುವುದರಿಂದ “ ಚಿಂತಾಮಣಿಯ ಸಾಮಾನ್ಯ ಮತದಾರ is with ಸುಧಾಕರ್ ಯುವ ಸೇನೆ and others “ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಅಪ್ ಲೋಡ್ ಮಾಡಿರುವವರ ವಿರುದ್ದ ಕೂಡಲೇ ಪ್ರಕರಣ ದಾಖಲು ಮಾಡಿಕೊಂಡು ಸಂಬಂಧಪಟ್ಟ ಕಿಡಿಗೇಡಿಗಳ ವಿರುದ್ದ ಕಾನೂನುನ ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ  ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 159/2021 ಕಲಂ. 143,323,324,506,149 ಐ.ಪಿ.ಸಿ :-

     ದಿನಾಂಕ 08-07-2021 ರಂಧು ಮಧ್ಯಾಹ್ನ 03-30 ಗಂಟೆಗೆ  ಪಿರ್ಯಾದಿದಾರರಾದ  ದೊಡ್ಡಆಕಲಪ್ಪ ಬಿನ್ ಲೇಟ್ ಗೆಜ್ಜಪ್ಪ, 65 ವರ್ಷ, ಬೋವಿ ಜನಾಂಗ,  ನರಸಾಪುರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ  ದಿನಾಂಕ 03-07-2021 ರಂದು  ರಾತ್ರಿ ಸುಮಾರು  08-00 ಗಂಟೆಯಲ್ಲಿ  ನನ್ನ ಹೆಂಡತಿಯಾದ ಲಕ್ಷ್ಮಮ್ಮ, ನನ್ನ ಮಗ  ಅಮರನಾಥ, (ಅಂಗವಿಕಲ), 35 ವರ್ಷ,  ಹಾಗೂ ನನ್ನನ್ನು ನಮ್ಮ ಗ್ರಾಮದ ವಾಸಿಗಳಾದ 1)ಅಶ್ವಥಪ್ಪ ಬಿನ್ ಶ್ರೀನಿವಾಸ, 35 ವರ್ಷ, 2)ಮಂಜುನಾಥ ಬಿನ್ ಅಶ್ವಥಪ್ಪ, 35 ವರ್ಷ, 3)ಶ್ರೀನಿವಾಸ ಬಿನ್  ಸುಬ್ಬಯ್ಯ , 4)ಸುಬ್ಬಯ್ಯ ಬಿನ್ ಲೇಟ್ ನಾರಾಯಣಪ್ಪ, 5) ವೆಂಕಟಮ್ಮ ಕೋಂ ಶ್ರೀನಿವಾಸ, 6)ವೆಂಕಟೇಶ ಬಿನ್ ಶ್ರೀನಿವಾಸ , 20 ವರ್ಷ, ರವರುಗಳು  ಏಕಾಏಕಿ  ನಮ್ಮ ಮನೆಯ ಬಳಿಗೆ ಬಂದು  ಸ.ನಂ.4/12 ರಲ್ಲಿರುವ ಜಮೀನು ನಮ್ಮದು ನಿವ್ಯಾಕೆ ಅದರಲ್ಲಿ ಉಳುಮೆ ಮಾಡುತ್ತೀರಾ, ಎಂದು  ಕೂಗಾಡುತ್ತಾ, ಕೈಯಲ್ಲಿ ಕೋಲಿನಿಂದ ಅಶ್ವಥಪ್ಪ ಎಂಬುವರು  ನನಗೂ ಮತ್ತು ನನ್ನ ಮಗನಿಗೆ ಏಕಾಏಕಿ ಹೊಡೆದು  ನನ್ನ  ಹೆಂಡತಿ ಬಿಡಿಸಲು ಮೇಲ್ಕಂಡವರೆಲ್ಲರೂ  ಗುಂಪುಕಟ್ಟಿಕೊಂಡು  ಬಂದು ಕೈಗಳಿಂದ ಹೊಡೆದು ಕೆಳಗಡೆ ಬೀಳಿಸಿ ಕಾಲಿನಿಂದ  ಒದ್ದು ಮೂಗೇಟುಗಳು ಮಾಡಿದರು,  ಆವೇಳೆಗೆ ಗ್ರಾಮಸ್ಥರಾದ ಅಕ್ಕುಲಪ್ಪ ಬಿನ್ ಕುರಲಪ್ಪ, ಪಿ. ಗಂಗರಾಜ ಬಿನ್ ಪಾಪಣ್ಣ, 50 ವರ್ಷ,ರವರು  ಗಲಾಟೆ ಬಿಡಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.  ನಂತರ ಮನೆಗೆ ವಾಪಸ್ಸಾಗಿದ್ದು ಗ್ರಾಮದವರು ನ್ಯಾಯಾ ಪಂಚಾಯ್ತಿಯನ್ನು ಮಾಡುತ್ತೇವೆಂದು ತಿಳಿಸಿದ್ದು  ಇದುವರೆವಿಗೂ ಮಾಡದೇ ಇದ್ದುದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ. 95/2021 ಕಲಂ. 429 ಐ.ಪಿ.ಸಿ, 4,8,11 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020, 11(1) (A),11(1) (D) PREVENTION OF CRUELTY TO ANIMALS ACT & 192(A),177 INDIAN MOTOR VEHICLES ACT :-

     ದಿ:09/07/2021 ರಂದು ಬೆಳಗಿನ ಜಾವ 05-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಪ್ರಕಾಶ್ ತೆಗ್ಗಳ್ಳಿ, ಪಿ.ಸಿ.569, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿ:08/07/2021 ರಂದು ನನಗೆ ಮತ್ತು ಶ್ರೀ.ಯೂನಸ್, ಗೃಹರಕ್ಷಕ ಸಿಬ್ಬಂದಿ-320  ರವರುಗಳಿಗೆ ರಾತ್ರಿ ನಾಗಪ್ಪ ಬ್ಲಾಕ್ ಬಳಿ ಚೆಕ್ ಪೋಸ್ಟ್ ಕರ್ತವ್ಯಕ್ಕೆ ಠಾಣಾಧಿಕಾರಿಗಳು ನೇಮಕ ಮಾಡಿದ್ದು ಅದರಂತೆ ನಾನು ಮತ್ತು ಗೃಹರಕ್ಷಕ ಸಿಬ್ಬಂದಿಯು  ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ಚೆಕ್ ಪೊಸ್ಟ್ನಲ್ಲಿ ರಾತ್ರಿ ಸಮಯದಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ  ದಿ:08-09/07/2021 ರಂದು ಬೆಳಗಿನ ಜಾವ 5-00 ಗಂಟೆ ಸಮಯದಲ್ಲಿ ಹಿಂದೂಪುರ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕೆ.ಎ-02ಎ.ಜಿ-8575 ನೊಂದಣಿ ಸಂಖ್ಯೆಯ ಕಂಟೈನರ್ ಬಂದಿದ್ದು ಅದನ್ನು  ತಪಾಸನೆ ಮಾಡಲು ತಡೆದು  ನಿಲ್ಲಿಸಿ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸೈಯದ್ ರೆಹಮಾನ್ ಬಿನ್ ಸೈಯದ್ ಜಮ್ಶೀದ್, 24 ವರ್ಷ, ಮುಸ್ಲಿಂ ಜನಾಂಗ, ಕಂಟೈನರ್ ಲಾರಿ ಚಾಲಕ, ವಾಸ: ನಂ.174, ಟ್ಯಾನಿ ಮೈನ್ ರೋಡ್,  ಟ್ಯಾಂಕ್ ಮೊಹಲ್ಲಾ ಮೋದಿ ರಸ್ತೆ, ಡಿ.ಜೆ.ಹಳ್ಳಿ, ಬೆಂಗಳೂರು, ಪೋನ್ ನಂ.6361496365 ಎಂದು ತಿಳಿಸಿದ್ದು ನಂತರ ಈ ಕಂಟೈನರ್ನಲ್ಲಿರುವುದು ಏನೆಂದು  ಕೇಳಿದಕ್ಕೆ ಸದರಿಯವರು 07 ಎತ್ತುಗಳು ಇರುವುದಾಗಿ ತಿಳಿಸಿದ್ದು  ಸದರಿ ಎತ್ತುಗಳನ್ನು ಎಲ್ಲಿಂದ ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವುದು ಹಾಗೂ ಎತ್ತುಗಳನ್ನು ಸಾಗಾಣಿಕೆ ಮಾಡಲು ಯಾವುದಾರರೂ ಪರವಾನಿಗೆ ಇದ್ದರೇ ತೋರಿಸುವಂತೆ  ಕೇಳಿದಕ್ಕೆ  ಈ ಎತ್ತುಗಳನ್ನು ವಿಜಯಪುರ ಜಿಲ್ಲೆಯ, ದೇವರಹಿಪ್ಪರಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಬಳಿ ತಲಾ ಒಂದು ಜೊತೆ ಎತ್ತುಗಳಿಗೆ 1] 40,000/- 2] 60,000/-, 3] 80,000/- ಮತ್ತು 4] ಒಂದು ಎತ್ತುಗೆ 80,000/- ರೂಪಾಯಿಗಳಂತೆ ಖರೀದಿ ಮಾಡಿರು ವುದಾಗಿ ತಿಳಿಸಿರುತ್ತಾನೆ. ಇವುಗಳನ್ನು ನಮ್ಮ ಕೆ-ಎ-02.ಎಜಿ-8575 ನೊಂದಣಿ ಸಂಖ್ಯೆಯ ಕಂಟೈನರ್ ಲಾರಿ ಮಾಲೀಕರಾದ ಅಲ್ಲಾವುದ್ದಿನ್ ಬಿನ್ ಜೀಯಾವುದ್ದಿನ್, ಸುಮಾರು 50 ವರ್ಷ, ವಾಸ: # 59, 2 ನೇ ಕ್ರಾಸ್, ಪಂಪಾನಗರ, ಯಶವಂತಪುರ, ಬೆಂಗಳೂರು ನಗರ ರವರ ಖಾಸಾಯಿ ಖಾನೆಗೆ  ಮತ್ತು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹಾಗೂ ತನ್ನ ಬಳಿ  ಎತ್ತುಗಳನ್ನು ಸಾಗಾಣಿಕೆ ಮಾಡಲು ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿತ್ತಾನೆ.  ಆದ್ದರಿಂದ ಅಕ್ರಮವಾಗಿ ಎತ್ತುಗಳನ್ನು ಉಸಿರಾಡದಂತೆ ಕಂಟೈನರ್ ಲಾರಿಯ ಒಳಗೆ ಹಾಕಿ ಬಾಗಿಲುಗಳನ್ನು ಮುಚ್ಚಿ ಅವುಗಳನ್ನು ಕದಲದಂತೆ ಕ್ರೂರವಾಗಿ ಕಟ್ಟಿ ಹಾಕಿರುವ ಮತ್ತು  ಯಾವುದೇ ಪರವಾನಿಗೆ ಇಲ್ಲದೇ ಎತ್ತುಗಳನ್ನು ಖಾಸಾಯಿಖಾನೆಗೆ ಸಾಗಿಸುತ್ತಿದ್ದ ಕಂಟೈನರ್ಲಾರಿ, ಲಾರಿಚಾಲಕ ಹಾಗೂ ಕಂಟೈನರ್ನಲ್ಲಿರುವ 07 ಎತ್ತುಗಳನ್ನು  ಹಾಜರ್ಪಡಿಸುತ್ತಿದ್ದು  ಚಾಲಕ ಸೈಯದ್ ರೆಹಮಾನ್ ಹಾಗೂ ಕಂಟೈನರ್ ಮಾಲೀಕರು ಹಾಗೂ ಖಾಸಾಯಿಖಾನೆ ನಡೆಸುವ ಅಲ್ಲಾವುದ್ದಿನ್ ಬಿನ್ ಜಿಯಾವುದ್ದಿನ್  ಮತ್ತು ಇತರರ ವಿರುದ್ದ ಕಾನೂನು ರೀತ್ಯಾ  ಕ್ರಮ ಜರುಗಿಸಲು ಕೋರಿರುತ್ತೇನೆಂತ ದೂರನ್ನು    ನೀಡಿರುವುದಾಗಿದ್ದು ಈ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ಕಾನೂನು ಕ್ರಮ ಜರುಗಿಸಲಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 150/2021 ಕಲಂ. 427,447 ಐ.ಪಿ.ಸಿ :-

     ದಿನಾಂಕ: 08/07/2021 ರಂದು ಮದ್ಯಾಹ್ನ 2-30ಗಂಟೆಗೆ ಪಿರ್ಯಾಧಿದಾರರಾದ ಮದ್ದರೆಡ್ಡಿ ಪಿ,ಡಿ,ಓ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿಯ ಅರೂರು ಗ್ರಾಮದ ಸರ್ವೆ ನಂ-112 ರಲ್ಲಿ 3-30 ಗುಂಟೆ ಜಮೀನನ್ನು  ಚಿಕ್ಕಅರೂರು ಹಾಗೂ ಬಸವನಪರ್ತಿ ಗ್ರಾಮದ ನಿವೇಶನ ರಹಿತರಿಗೆ  ನಿವೇಶನವನ್ನು ಹಂಚಲು ಮಾನ್ಯ ಜಿಲ್ಲಾಧಿಕಾರಿಗಳ  ಕಾರ್ಯಾಲಯ  ಚಿಕ್ಕಬಳ್ಳಾಪುರ ಜಿಲ್ಲೆ.  ಚಿಕ್ಕಬಳ್ಳಾಪುರ ರವರ ಅಧಿಕೃತ ಜ್ಞಾಪನ ಸಂಖ್ಯೆ  ಅಶ್ರಯ ಸಿ,ಆರ್, 37/2012-13 ದಿನಾಂಕ:22/0/2014 ರಂತೆ ಮಂಜೂರು ಮಾಡಿ ಆದೇಶಿಸಿರುತ್ತಾರೆ. ಅದರಂತೆ  ಮಾನ್ಯ ತಹಶೀಲ್ದಾರ್ ರವರ ಕಛೃಎಇಯ ಚಿಕ್ಕಬಳ್ಳಾಪುರ  ತಾಲ್ಲೂಕು ಸಂಖ್ಯೆ ಅಶ್ರಯ ಸಿ.ಆರ್.37/2012-13 ದಿನಾಂಕ:10-10-2014 ರಂದು ತಮಗೆ ಹಸ್ತಾಂತರ  ಮಾಡಿರುತ್ತಾರೆ.ಅದರಂತೆ ಗ್ರಾಮೀಣ ಅಶ್ರಯ ಯೋಜನೆಯ ಡಿಯಲ್ಲಿ ಅನುಧಾನ ಬಿಡುಗಡೆ  ಮಾಡಿರುವಂತೆ ಸದರಿ ಜಮೀನನ್ನು ಪ್ರದೇಶದಲ್ಲಿ ನಿವೇಶನಗಳನ್ನು ಹಂಚಲು ವಿನ್ಯಾಸ  ನಕ್ಷೆಯಂತೆ  ನಿವೇಶನಗಳನ್ನು ವಿಂಗಡಿಸಿ ರಸ್ತೆಗಳನ್ನು ನಿರ್ಮಿಸಿ ನಿವೇಶನಕ್ಕೆ ನಾಲ್ಕು ಕಡೆಕಲ್ಲುಗಳನ್ನು ಹಾಕಲಾಗಿರುತ್ತದೆ. ಹಕ್ಕು ಪತ್ರಗಳ ವಿತರಣೆ ಬಾಕಿ ಇರುತ್ತದೆ. ಈಗಿರುವಾಗ ದಿನಾಂಕ: 04/07/2021 ರಂದು ಮದ್ಯಾಹ್ನ 3-30 ಗಂಟೆಯಿಂದ 4-30 ಗಂಟೆ ನಡುವಿನ ಸಮಯದಲ್ಲಿ ಸಮಯದಲ್ಲಿ ಚಿಕ್ಕಅರೂರು ಗ್ರಾಮದ ವಾಸಿಯಾದ ಸಿ,ಟಿ ವೆಂಕಟೇಶಪ್ಪ ಬಿನ್ ಲೇಟ್ ತಿಮ್ಮಪ್ಪ ಎಂಬುವವರು ಏಕಾಏಕಿ ನಿವೇಶನಗಳಿಗಾಗಿ ಕಾಯ್ದಿರಿಸಿರುವ ಜಾಗದಲ್ಲಿನ ಕಲ್ಲುಗಳನ್ನು ಕಿತ್ತು ಹಾಕಿ ಉಳುಮೆ ಮಾಡಿರುತ್ತಾರೆ. ಸದರಿ ಜಾಗವು ಚಿಕ್ಕಅರೂರು ಗ್ರಾಮ ಮತ್ತು ಬಸವನಪರ್ತಿ ಗ್ರಾಮದ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಲು ಕಾಯ್ದಿರಿಸಿರುವ ಜಾಗವೆಂದು ತಿಳಿದಿದ್ದರು ಸಹ ಸದರಿ ವ್ಯಕ್ತಿ ಅನಧಿಕೃತವಾಗಿ  ಉಳೂಮೆ ಮಾಡಿರುತ್ತಾರೆ ಆದ್ದರಿಂದ ಸದರಿ ಮೇಲ್ಕಂಡ ವ್ಯಕ್ತಿಯ ವಿರುದ್ದ ಸೂಕ್ತ ಖಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 71/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ: 08-07-2021 ರಂದು ಸಂಜೆ 16-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಟಿ.ಎಸ್.ರಾಜಣ್ಣ ಬಿನ್ ಲೇಟ್ ಶ್ಯಾಮಣ್ಣ , 48 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ , ವಾಸ: ಈರಹಳ್ಳಿ ಅಂಚೆ,ತೈಲಗೇರೆ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರವರು ಠಾಣಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ನಾಲ್ಕೈದು ವರ್ಷ ಹಿಂದಿನಿಂದ ವಿಜಯಕುಮಾರ್ ಬಿನ್ ಲೇಟ್ ನಾರಾಯಣಚಾರ್ 45 ವರ್ಷ,ರವರು ಆಳುಗಳನ್ನು ಇಟ್ಟುಕೊಂಡು ಮನೆಗಳ ಪೈಟಿಂಗ್ ಕಂಟ್ಟ್ರಾಕ್ಟ್ ಕೆಲಸ ಮಾಡಿಕೊಂಡು ಬಾಡಿಗೆಗೆ ವಾಸವಾಗಿರುತ್ತಾರೆ. ದಿನಾಂಕ: 03-07-2021 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಸದರಿ ವಿಜಯಕುಮಾರ್ ತನಗೆ ಪೋನ್  ಮಾಡಿ ತಾನು ಗ್ರಾಮದಿಂದ –ನಂದಿ ಕ್ರಾಸ್ ಕಡೆಗೆ KA-43-W-7310 ದ್ವಿಚಕ್ರ ವಾಹನದಲ್ಲಿ  ಹೋಗುವಾಗ , ಮಧ್ಯಾಹ್ನ 2-30 ಗಂಟೆಯಲ್ಲಿ ದೊಡ್ಡಮರಳಿ ಗ್ರಾಮದ ಮಂಜುನಾಥ(ಅಣ್ಣಯ್ಯ) ರವರ ಮನೆಯ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆನಿಂದ ಅಂದರೆ ನಂದಿ ಗ್ರಾಮ ಕಡೆಯಿಂದ KA-04-JZ-8704 ರ ದ್ವಿಚಕ್ರ ವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ  ದ್ವಿಚಕ್ರ ವಾಹನದ  ಹಿಂಭಾಗಕ್ಕೆ  ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ ಪರಿಣಾಮ ತಾನು ಮತ್ತು ಅಪಘಾತ ಪಡಿಸಿದವರು ದ್ವಿಚಕ್ರವಾಹನ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ತನ್ನಗೆ  ಬಲಕಾಲು ,ಬಲಕ್ಕೆ ಇತರೆ ಮೈಮೇಲೆ ತೀವ್ರತರಹ ಮತ್ತು ಸಾಮಾನ್ಯ ಸ್ವರೂಪದ ಗಾಯಗಳು ಆಗಿದ್ದು ತಾನು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರು ಹಾಗೂ ರಸ್ತೆಯ ಪಕ್ಕದಲ್ಲಿ ಮನೆಯವರಾದ ಮಂಜುನಾಥ ರವರುಗಳು ನನ್ನನ್ನು  ಉಪಚರಿಸಿ ಆಂಬುಲೇನ್ಸ್ ಗೆ ಕರೆಮಾಡಿ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು ಎಂದು ಹೇಳಿದ್ದರ ಮೇರೆಗೆ ನಾನು ಅಪಘಾತವಾದ ಸ್ಥಳ ನಂದಿಗ್ರಾಮ-ನಂದಿಕ್ರಾಸ್ ಮಂಜುನಾಥ ರವರು ಮನೆಯ ಬಳಿ ಬಂದು ವಿಚಾರ ತಿಳಿದುಕೊಂಡು ನಂತರ ಆರ್ ಎಂ ವಿ ಆಸ್ಪತ್ರೆಗೆ ಬೇಟಿನೀಡಿ ವಿಜಯಕುಮಾರ್ ರವರಿಂದ ವಿಚಾರ ತಿಳಿದುಕೊಂಡಿದ್ದು ಮೇಲ್ಕಂಡಂತೆ ನಿಜವಾಗಿರುತ್ತದೆ, ಇದುವರೆಗೂ ವಿಜಯಕುಮಾರ ರವರಿಗೆ ಚಿಕಿತ್ಸೆ ಕೊಡಿಸಿಕೊಂಡಿದ್ದರಿಂದ ನಾನು ದೂರು ನೀಡುವದು ತಡವಾಗಿರುತ್ತದೆ. ಮೇಲ್ಕಂಡಂತೆ ವಿಜಯಕುಮಾರ್ ರವರಿಗೆ ಅಪಘಾತ ಪಡಿಸಿದ KA-04-JZ- 8704 ರ ಚಾಲಕನನ್ನು ಪತ್ತೆಮಾಡಿ ಅವರು ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ  ದೂರಿನ ಮೇರೆಗೆ  ಈ ಪ್ರ.ವರದಿ.

Last Updated: 09-07-2021 05:54 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080