ಅಭಿಪ್ರಾಯ / ಸಲಹೆಗಳು

 

1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.110/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:08/06/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಪಿರ್ಯಾದಿ ಎಸ್ ಭೂಪತಿ ಬಿನ್ ಎಸ್ ಲೇಟ್ ಷಣ್ಮುಗಂ, 48 ವರ್ಷ,     ಎಸ್,ಎಸ್, ಟ್ರಾನ್ಸಪೋರ್ಟನಲ್ಲಿ ಮ್ಯಾನೇಜರ್ ಕೆಲಸ, ವಾಸ:2/27, ಪಿ ನಾತಂಪಾಳ್ಯಂ ಗ್ರಾಮ, ಸೆಂಬಿಯಾನಲ್ಲೂರು ಪೋಸ್ಟ,ಅವಿನಾಶ್ ತಾಲ್ಲೂಕು ತಿರುಪೂರ್ ಜಿಲ್ಲೆ ತಮಿಳುನಾಡು ರಾಜ್ಯ ಮೊ:8870350990 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂವೇನೆಂದರೆ ತಾನು ತಮಿಳುನಾಡಿನ ಅವಿನಾಶ್ ನಗರದಲ್ಲಿರುವ ಎಸ್,ಎಸ್, ಟ್ರಾನ್ಸಪೋರ್ಟ ಕಂಪನಿಯಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿರುತ್ತೇನೆ. ನಮ್ಮ ಕಂಪನಿಯ ಬಾಬತ್ತು TN 39 CY 4671 ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಕಂಟೈನರ್ ವಾಹನಕ್ಕೆ ಚಾಲಕ ಶಾಹುಲ್ ಹಮೀದ್ ಬಿನ್ ಮಹಮ್ಮದ್ ಸುಲ್ತಾನ್ 46 ವರ್ಷ, ಮುಸ್ಲಿಂ ಜನಂಗ, ವಾಸ: 15 ಪಟ್ಟಪುಲಿ ಮಿಡಲ್ ಸ್ಟ್ರೀಟ್, ವಾಡಗರೈ ಪರಿಯಾಕುಲಂ ತಾಲ್ಲೂಕು ವಾಡಗರೈ ಥೇನೈ ಜಿಲ್ಲೆ ತಮಿಳುನಾಡು ರವರನ್ನು ಚಾಲಕರಾಗಿ ನೇಮಿಸಿ ಕೊಯಮತ್ತೂರಿನಲ್ಲಿರುವ SKYPET POLYMERS ಕಂಪನಿಯಲ್ಲಿ ನ್ಯೂ ಪ್ಲಾಸ್ಟಿಕ್ ಬಾಟಲ್ ಗಳನ್ನು ಲೋಡು ಮಾಡಿಕೊಂಡು ಹೈದರಾಬಾದ್ ನಲ್ಲಿನ RADICO KHAITAN LTD ಕಂಪನಿಯಲ್ಲಿ ಅನ್ ಲೋಡು ಮಾಡಿಕೊಂಡು ಬರಲು ಕಳುಹಿಸಿದ್ದು ನಂತರ ದಿನಾಂಕ:07/6/2021 ರಂದು ಸಂಜೆ 4-45 ಗಂಟೆ ಸಮಯದಲ್ಲಿ ಚಾಲಕ ಶಾಹುಲ್ ಹಮೀದ್ ರವರು ತನಗೆ ಕರೆ ಮಾಡಿ ತಿಳಿಸಿದ್ದೇನೆಂದರೆ. ತಮ್ಮ ಕಂಪನಿಯ TN 39 CY 4671 ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಕಂಟೈನರ್ ವಾಹನದಲ್ಲಿ ತಾನು ಚಾಲನೆ ಮಾಡಿಕೊಂಡು ಕೊಯಮತ್ತೂರಿನ SKYPET POLYMERS ಕಂಪನಿಯಲ್ಲಿ ನ್ಯೂ ಪ್ಲಾಸ್ಟಿಕ್ ಬಾಟಲ್ಗಳನ್ನು ಲೋಡು ಮಾಡಿಕೊಂಡು ಹೈದರಾಬಾದ್ ನಲ್ಲಿ RADICO KHAITAN LTD ಕಂಪನಿಯಲ್ಲಿ ಅನ್ ಲೋಡು ಮಾಡಲು ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಹೋಗುತ್ತಿರುವಾಗ ದಿನಾಂಕ:07/06/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ವರ್ಲಕೊಂಡ ಗ್ರಾಮದ ಬಳಿಯಿರುವ ರೆಡ್ಡಿ ಢಾಬದ ಮುಂಭಾಗದ ಎನ್,ಎಚ್ 44 ರಸ್ತೆಯ ಬದಿಯಲ್ಲಿ ವಾಹನವನ್ನು ನಿಲ್ಲಸಿ ತಾನು ಢಾಬಾದಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಬರಲು ಹೋದಾಗ ಬೆಂಗಳೂರು ಕಡೆಯಿಂದ  KA 43 9175  ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ನಿಲ್ಲಿಸಿದ್ದ ನಮ್ಮ ಕಂಪನಿಯ ಬಾಬತ್ತು TN 39 CY 4671 ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಕಂಟೈನರ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಡು ಅಪಘಾತ ಪಡಿಸಿದ ಪರಿಣಾಮ ನಮ್ಮ ವಾಹನದ ಹಿಂಬಾಗವು ಮತ್ತು ಮುಂಬಾಗವು ಜಖಂಗೊಂಡಿರುತ್ತೆ. ಟಿಪ್ಪರ್ ಲಾರಿಯ ಚಾಲಕನಿಗೆ ತಲೆಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದರು ನಂತರ ನಾನು ತಮಿಳುನಾಡಿನಿಂದ ಬಂದು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಸ್ಥಳವನ್ನು ಮತ್ತು ಲಾರಿಯನ್ನು ನೋಡಿ ಈ ದಿನ ತಡವವಾಗಿ ಠಾಣೆಗೆ ಹಾಜರಾಗಿ ದೂರು ನೀಡಿರುತ್ತೇನೆ. ಆದ್ದರಿಂದ ಅಪಘಾತ ಪಡಿಸಿದ KA 43  9175  ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ಲಾರಿಯ ಚಾಲಕನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.186/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ: 08-06-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರ ಸರ್ಕಾರಿ ಕೆರೆಯ ಅಂಗಳದ ಸರ್ಕಾರಿ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ.ವ. ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಘನ ನ್ಯಾಯಾಲಯಕ್ಕೆ ಪಿಸಿ-90 ರಾಜಕುಮಾರ್ ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಂಜೆ 6.00 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮನವಿಯ ಮೇರೆಗೆ ಆರೋಪಿಗಳ ವಿರುದ್ದ ಠಾಣಾ ಮೊ.ಸಂ. 186/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಪ್ರ.ವ. ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೇನೆ.

 

3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.187/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ09-06-2021 ರಂದು ಬೆಳ್ಳಿಗೆ 9-00 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಮದ್ಯದ ಮಾಲುಗಳನ್ನು ಮತ್ತು ಆರೋಪಿಯನ್ನು  ಠಾಣೆಯಲ್ಲಿ  ಹಾಜರುಪಡಿಸಿ ವರದಿಯ ಸಾರಾಂಶವೇನೆಂದರೆ, ದಿನಾಂಕ:09-06-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 8-30 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಪಶು ಚಿಕಿತ್ಸಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲುಡು ಗ್ರಾಮದ ಪಶು ಚಿಕಿತ್ಸಾಲಯ ಮುಂಭಾಗ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ಎಂ.ಪವನ್ ಬಿನ್ ಲೇಟ್ ಮುನಿರಾಜು, ಸುಮಾರು 20 ವರ್ಷ, ಭಜಂತ್ರಿ ಜನಾಂಗ, ಕೂಲಿಕೆಲಸ, ವಾಸ: ಪಲಿಚೇರ್ಲು ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ಸಾಮರ್ಥ್ಯದ 10  ORIGINAL CHOICE DELUXE WHISKY  ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ  ಬಿದ್ದಿದ್ದ 2 ಖಾಲಿ ಪ್ಲಾಸ್ಟಿಕ್ ಲೋಟಗಳು , 4 ಖಾಲಿ ವಾಟರ್ ಪಾಕೇಟ್ಗಳು ಮತ್ತು 90 ಎಂ.ಎಲ್. ಸಾಮರ್ಥ್ಯದ 4 ಖಾಲಿ ORIGINAL CHOICE DELUXE WHISKY  ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 9-00 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿದ್ದು ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಎಂ.ಪವನ್ ಬಿನ್ ಲೇಟ್ ಮುನಿರಾಜು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ವರದಿಯ ಮೇರೆಗೆ ಠಾಣಾ ಮೊ.ಸಂ. 187/2021   ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 09-06-2021 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080