ಅಭಿಪ್ರಾಯ / ಸಲಹೆಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 195/2021 ಕಲಂ. 269,270,188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ: 08/05/2021 ರಂದು ಮದ್ಯಾಹ್ನ 1.00 ಗಂಟೆಗೆ ಠಾಣೆಯೆ ಶ್ರೀ.ಕೆ.ನಾರಾಯಣಸ್ವಾಮಿ, ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 08/05/2021 ಮದ್ಯಾಹ್ನ 12.00 ಗಂಟೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ಮತ್ತು ಸಿ.ಪಿ.ಸಿ-464 ಅರುಣ್ ಕುಮಾರ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-64ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಪಾಲೇಪಲ್ಲಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಮಾಲೀಕರಾದ ಶ್ರೀರಾಮರೆಡ್ಡಿ ಬಿನ್ ಲೇಟ್ ಮುನಿಯಪ್ಪರವರು ಅಂಗಡಿಯಲ್ಲಿ ದಿನಸಿ ಪದಾ ರ್ಥಗಳನ್ನು ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 12.30 ಗಂಟೆಗೆ ಪಾಲೇಪಲ್ಲಿ ಗ್ರಾಮದಲ್ಲಿ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀರಾಮರೆಡ್ಡಿ ಬಿನ್ ಲೇಟ್ ಮುನಿಯಪ್ಪ, 60 ವರ್ಷ, ವಕ್ಕಲಿಗರು, ವ್ಯಾಪಾರ, ಪಾಲೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 196/2021 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 08/05/2021 ರಂದು ಸಂಜೆ 5.45 ಗಂಟೆಗೆ ಠಾಣೆಗೆ ಶ್ರೀ.ಕೆ.ನಾರಾಯಣಸ್ವಾಮಿ, ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 08/05/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ತಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-430 ನರಸಿಂಹಯ್ಯರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಗಾಜಲಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಶ್ರೀರಾಮಪ್ಪ ಬಿನ್ ವೆಂಕಟಣ್ಣ ಎಂಬುವವರು ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಮನೆಯ ಬಳಿ ದಾಳಿ ಮಾಡುವ ಸಲುವಾಗಿ ಗಾಜಲಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಶ್ರೀರಾಮಪ್ಪ ಬಿನ್ ವೆಂಕಟಣ್ಣರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸುವಷ್ಟರಲ್ಲಿ ಮನೆಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮನೆಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮನೆಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಶ್ರೀರಾಮಪ್ಪ ಬಿನ್ ವೆಂಕಟಣ್ಣ, 60 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಗಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ 4.30 ಗಂಟೆಯಿಂದ 5.15 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಮನೆಯ ಮುಂದೆ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಶ್ರೀರಾಮಪ್ಪ ಬಿನ್ ವೆಂಕಟಣ್ಣರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 198/2021 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 09/05/2021 ರಂದು ಬೆಳಿಗ್ಗೆ 11.15 ಗಂಟೆಗೆ ಠಾಣೆಯೆ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 09/05/2021 ರಂದು ಬೆಳಿಗ್ಗೆ 9.00 ಗಂಟೆಗೆ ಸಂದೀಪ್ ಕುಮಾರ್ ಸಿ.ಹೆಚ್.ಸಿ-249 ಆದ ತನ್ನನ್ನು ಮತ್ತು ವೆಂಕಟರವಣ ಸಿ.ಪಿ.ಸಿ-544 ರವರನ್ನು ಮಾನ್ಯ ಪಿ.ಎಸ್.ಐ ರವರು ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ವ್ಯಾಪ್ತಿಯ ಚೊಕ್ಕರೆಡ್ಡಿಹಳ್ಳಿ, ಬಡಿಗವಾರಹಳ್ಳಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಿಗ್ಗೆ 9.30  ಗಂಟೆಗೆ ಕೃಷ್ಣರಾಜಪುರ ಗ್ರಾಮದ ಬಳಿಗೆ ಹೋದಾಗ ಸದರಿ ಗ್ರಾಮದ ವಾಸಿ ಶಿವಾರೆಡ್ಡಿ ಬಿನ್ ಲೇಟ್ ಲಕ್ಷ್ಮಣರೆಡ್ಡಿ ಎಂಬುವರು ಅವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶಿವಾರೆಡ್ಡಿ ಬಿನ್ ಲೇಟ್ ಲಕ್ಷ್ಮಣರೆಡ್ಡಿ, 50 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೃಷ್ಣರಾಜಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1).ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್  04 ಟೆಟ್ರಾ ಪ್ಯಾಕೆಟ್ ಗಳು, 2).ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 3).02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಶಿವಾರೆಡ್ಡಿ ಬಿನ್ ಲೇಟ್ ಲಕ್ಷ್ಮಣರೆಡ್ಡಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 199/2021 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-

     ದಿನಾಂಕ: 09/05/2021 ರಂದು ಮದ್ಯಾಹ್ನ 1.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ನಾಗರತ್ನಮ್ಮ ಕೋಂ ಆಂಜಪ್ಪ, 28 ವರ್ಷ, ಕೂಲಿಕೆಲಸ, ಬೋವಿ ಜನಾಂಗ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ: 03/05/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದ ತೋಟದ ಬಳಿ ಇದ್ದಾಗ ತಮ್ಮ ಗ್ರಾಮದ ವಾಸಿ ಹರೀಶ ಬಿನ್ ನಾರಾಯಣಪ್ಪ ಬುವವರು ತನ್ನ ಮೇಲೆ ವಿನಾ ಕಾರಣ ಗಲಾಟೆ ಮಾಡಿದ್ದು, ತಾನು ಭಯದಿಂದ ಮನೆಗೆ ಹೊರಟು ಹೋಗಿರುತ್ತೇನೆ. ನಂತರ ಅದೇ ದಿನ ಸಂಜೆ 6.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಹರೀಶ ಮತ್ತು ಅವರ ಕಡೆಯವರಾದ ಮಂಜುಳ, ಮುನಿರತ್ನ, ರೆಡ್ಡಿ, ಪ್ರದೀಪ ಮತ್ತು ಸೀನ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ತನ್ನ ಮೇಲೆ ಗಲಾಟೆ ಮಾಡಿ ಆ ಪೈಕಿ ಹರೀಶ ರವರು ತನ್ನನ್ನು ಕುರಿತು “ಏನೇ ಸೂಳೆ ಮುಂಡೆ ನೀನು ತೋಟದ ಬಳಿ ನನಗೆ ಎದುರು ಮಾತನಾಡುತ್ತೀಯಾ, ಎಷ್ಟು ಧೈರ್ಯ ನಿನಗೆ” ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಯಾವುದೋ ದೊಣ್ಣೆಯಿಂದ ತನ್ನ ಎಡಗೈಗೆ ಹೊಡೆದು ರಕ್ತಗಾಯಪಡಿಸಿದನು. ಮಂಜುಳ ಮತ್ತು ಮುನಿರತ್ನ ರವರು ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದಿರುತ್ತಾರೆ. ಪ್ರದೀಪ, ಸೀನ ಮತ್ತು ರೆಡ್ಡಿ ರವರು ಸಹ ತನಗೆ ಅವಾಚ್ಯಶಬ್ದಗಳಿಂದ ಬೈದು, ಈ ಮುಂಡೆಯನ್ನು ಈ ದಿನ ಬಿಡಬಾರದು, ಸಾಯಿಸಿ ಬಿಡಬೇಕೆಂದು ಪ್ರಾಣಬೆದರಿಕೆ ಹಾಕಿದರು. ಸದರಿ ಗಲಾಟೆಯ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು, ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ತಾನು ಈ ದಿನ ತಡವಾಗಿ ಠಾಣೆಗೆ ಬಂದು ತನ್ನ ಹೇಳಿಕೆಯನ್ನು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜುರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 200/2021 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 09/05/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ ಶ್ರೀ.ಕೆ.ನಾರಾಯಣಸ್ವಾಮಿ, ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 09/05/2021 ತಾನು ಠಾಣೆಗೆ ಒದಗಿಸಿರುವ ಕೆಎ-40 ಜಿ-326 ಸರ್ಕಾರಿ ಜೀಪ್ ನಲ್ಲಿ ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ಮತ್ತು ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಕೃಷ್ಣರಾಜಪುರ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿಯಾದ ರವಣಪ್ಪ ಬಿನ್ ವೆಂಕಟರವಣಪ್ಪ ರವರು ತನ್ನ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ರವಣಪ್ಪ ಬಿನ್ ವೆಂಕಟರವಣಪ್ಪ ರವರ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯಲ್ಲಿ ನೋಡಲಾಗಿ 1).ಬ್ಯಾಗ್ ಪೈಪರ್ ವಿಸ್ಕಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳು, 2) ಓಲ್ಟ್ ಟಾವರ್ನ್ ವಿಕ್ಸಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 1 ಟೆಟ್ರಾ ಪಾಕೆಟ್, 3).ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳಿದ್ದು, ಅಂಗಡಿಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 4).ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೆಟ್ ಗಳು, 5).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 6).ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು ಟೆಟ್ರಾ ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಅವುಗಳಲ್ಲಿ ಸ್ವಲ್ವ ಮದ್ಯವಿರುತ್ತೆ. ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ರವಣಪ್ಪ ಬಿನ್ ವೆಂಕಟರವಣಪ್ಪ, 50 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೃಷ್ಣರಾಜಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 1.00 ಗಂಟೆಯಿಂದ 1.45 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರವಣಪ್ಪ ಬಿನ್ ವೆಂಕಟರವಣಪ್ಪ  ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 72/2021 ಕಲಂ. 188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ 08/05/2021 ರಂದು ಮದ್ಯಾಹ್ನ 1-30 ಗಂಟೆಗೆ ನ್ಯಾಯಾಲಯದ ಪಿಸಿ 367 ರವರು ಠಾಣಾ ಎನ್ ಸಿ.ಆರ್ ನಂ 61/2021 ರಲ್ಲಿ ಪ್ರ.ವ.ವರದಿಯನ್ನು ದಾಖಲಿಸಲು ‍ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 07/05/2021 ರಂದು ಬೆಳಿಗ್ಗೆ  ನಾನು ಹಾಗೂ ಠಾಣಾ ಸಿಬ್ಬಂದಿ  ಹೆಚ್.ಸಿ 245 ಸೋಮಶೇಖರಚಾರಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಇದೇ ದಿನ ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ರಸ್ತೆ ಕಡೆ ಗಸ್ತು ಮಾಡುತ್ತಿದ್ದಾಗ ಸಾಯಿ ಕಾಂಪ್ಲೇಕ್ಸ್ ನಲ್ಲಿರುವ ನ್ಯಾಷನಲ್ ಆಟೋ ಮೊಬೈಲ್ಸ್ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಆಟೋ ಮೊಬೈಲ್ಸ್ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಆಟೋ ಮೊಬೈಲ್ಸ್ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಅಪ್ಸರ್ ಬಿನ್ ಪ್ಯಾರೇಜಾನ್, 49 ವರ್ಷ, ಮುಸ್ಲಿಂ ಜನಾಂಗ, ನ್ಯಾಷನಲ್ ಆಟೋ ಮೊಬೈಲ್ಸ್ ಮಾಲೀಕರು,  ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಆಟೋ ಮೊಬೈಲ್ಸ್ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ  ಘನ ನ್ಯಾಯಾಲಯದ ಅದೇಶದಂತೆ ಪ್ರಕರಣ ದಾಖಲಿಸಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 53/2021 ಕಲಂ. 20(b) (NARCOTIC DRUGS & PSYCHOTROPIC SUBSTANCES ACT, 1985 :-

     ದಿನಾಂಕ:08/05/2021 ರಂದು ಮಧ್ಯಾಹ್ನ 15-45 ಗಂಟೆಗೆ ಶಿಡ್ಲಘಟ್ಟ ವೃತ್ತದ ಸಿ.ಪಿ.ಐ ರವರಾದ ಶ್ರೀ ಸುರೇಶ್ ರವರು ಆಸಾಮಿಗಳೊಂದಿಗೆ  ಠಾಣೆಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೇಂದರೆ, ತಾನು ಮತ್ತು ಜೀಫ್ ಚಾಲಕನಾದ ಎ.ಪಿ.ಸಿ109     ನಾಗೇಶ್  ಹಾಗೂ ಸಿಬ್ಬಂದಿಯಾದ ಸಿ.ಹೆಚ್.ಸಿ 140 ನಾಗೇದ್ರ ಪ್ರಸಾದ್ ರವರು ಜನತಾ ಕರ್ಪೂ ಹಿನ್ನಲೆಯಲ್ಲಿ  ದಿನಾಂಕ:08/05/2021 ರಂದು ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲಿಸ್ ಠಾಣಾ ಸರಹದ್ದು ಕುದುಪಕುಂಟೆ ಕಡೆ ಗಸ್ತಿನಲ್ಲಿದ್ದಾಗ ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಕುದುಪುಕುಂಟೆ ಗ್ರಾಮದಲ್ಲಿ ಯಾರೋ ಮೂರು ಜನ  ಆಸಾಮಿಗಳು ಅಪ್ಪೆ ಆಟೋದಲ್ಲಿ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದು ನಮ್ಮನ್ನು ನೋಡಿ ಅಲ್ಲಿಂದ ಅನುಮಾನಸ್ಪದವಾಗಿ ವಾಹನ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದು ಇದರಿಂದ ಅನುಮಾನಗೊಂಡು ವಾಹನವನ್ನು ತಡೆದು ನಿಲ್ಲಿಸುವಷ್ಟರಲ್ಲಿ ಒಬ್ಬ ಆಸಾಮಿಯು ಓಡಿ ಹೋಗಿದ್ದು ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿಂದ ಸಿಬ್ಬಂದಿಯವರಾದ ಸಿ.ಪಿ.ಸಿ 200 ಚಂದ್ರ ಶೇಖರ್ , ಸಿ.ಪಿ.ಸಿ 490 ಸೋಮಶೇಖರ್,  ಸಿ.ಪಿ.ಸಿ 451 ರಾಮಾಂಜಿನೇಯ , ಸಿ.ಪಿ.ಸಿ 32 ಮಂಜುನಾಥ ರವರನ್ನು ಅಲ್ಲಿಗೆ ಕರೆಯಿಸಿಕೊಂಡು  ಸದರಿ ಆಟೋವನ್ನು ಪರಿಶೀಲಿಸಲಾಗಿ ಸದರಿ ಆಟೋದಲ್ಲಿ  ಪ್ಲಾಸ್ಟಿಕ್ ಸಾಮಾನುಗಳ ಕೆಳಗೆ  ಬಂಡೆಲ್ ರೀತಿಯ ಪೇಪರ್ ನಿಂದ ಸುತ್ತಿ ಅದಕ್ಕೆ ಸೆಲೋ ಟೇಪ್ ನಿಂದ ಸುತ್ತಿರುವ  ಪ್ಯಾಕೇಟ್ ಕಂಡು ಬಂದಿದ್ದು ಸದರಿ ಪ್ಯಾಕೇಟ್ ಗಳನ್ನು ಏಣಿಕೆ ಮಾಡಲಾಗಿ  17 ಪ್ಯಾಕೇಟ್ ಗಳು ಇದ್ದು ಸದರಿ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 17 ಪ್ಯಾಕೇಟ್ ಗಳ ಒಳಗೆ ಗಾಂಜಾ ಇದ್ದು ಒಂದೊಂದು ಪ್ಯಾಕೇಟ್  ಸುಮಾರು  2 ಕೆ.ಜಿ ತೂಕ ಇದ್ದು ಒಟ್ಟು ಸುಮಾರು 17 ಲಕ್ಷ ಮೌಲ್ಯದ ಸುಮಾರು 34 ಕೆ.ಜಿ ತೂಕದ ಗಾಂಜಾ ಇರುತ್ತೆ.  ಸದರಿ ಆಸಾಮಿಗಳ ಬಗ್ಗೆ ವಿಚಾರಿಸಲಾಗಿ  ಪ್ರಕಾಶ್ ಬಿನ್ ರಾಮಯ್ಯ ,55 ವರ್ಷ, ಕೊರಚರು,ಆಟೋ ಡ್ರೈವರ್ , ವಾಸ: ಓಬುಲನಾಗೇಪಲ್ಲಿ ಗ್ರಾಮ, ಚೆನ್ನೆಬಟ್ಟಪಲ್ಲಿ ತಾಲ್ಲೂಕು, ಧರ್ಮವರಂ ಮಡಲ, ಅನಂತಪುರ ಜಿಲ್ಲೆ ಆಂಧ್ರ ಪ್ರದೇಶ ರಾಜ್ಯ ಎಂದು ತಿಳಿದ್ದು ಆತನ ಜೊತೆಯಲ್ಲಿದ್ದ ಇನ್ನೊಬ್ಬ ಆಸಾಮಿಯ ಹೆಸರು ಕೇಳಲಾಗಿ ವೆಂಕಟರವಣಪ್ಪ ಬಿನ್ ಜಯಪ್ಪ, 45 ವರ್ಷ, ಕೊರಚರು, ಗಾರೆ ಕೆಲಸ, ಗೆರಿಗಿರೆಡ್ಡಿ ಪಾಳ್ಯ(ಗುರುಗುಟ್ಲು) ಗ್ರಾಮ, ಚೇಳೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಎಂತ ತಿಳಿಸಿದ್ದು ನಂತರ ಓಡಿ ಹೋದ ಆಸಾಮಿಯ ಬಗ್ಗೆ ಕೇಳಲಾಗಿ ಆತನ ಹೆಸರು ಶ್ರೀನಿವಾಸಲು ಬಿನ್ ಹನಮಂತು, 45 ವರ್ಷ, ಕೊರಚರು, ಬಾಗೇಪಲ್ಲಿ ಗ್ರಾಮ, ಪುಂಗನೂರು ಹತ್ತಿರ, ಚಿತ್ತೂರು ಜಿಲ್ಲೆ ಎಂದು  ತಿಳಿಸಿರುತ್ತಾನೆ. ಹಾಗೂ ಮಾಲಿನ ಬಗ್ಗೆ ವಿಚಾರ ಮಾಡಲಾಗಿ ನಾನು ಶ್ರೀನಿವಾಸಲು, ವೆಂಕಟರಮಣ ಹಾಗೂ ರೆಡ್ಡಮ್ಮ ಕೋಂ ಶ್ರೀನಿವಾಸಲು, 30 ವರ್ಷ, ಕೊರಚರು, ಬಾಗೇಪಲ್ಲಿ ಗ್ರಾಮ, ಪುಂಗನೂರು ಹತ್ತಿರ, ಚಿತ್ತೂರು ಜಿಲ್ಲೆ ಆಂಧ್ರಪ್ರದೇಶ ರವರುಗಳು ಲಾಭದ ಉದ್ದೇಶದಿಂದ ವೈಜಾಗ್(ವಿಶಾಖಪಟಂ) ನಿಂದ ಸದರಿ ಗಾಂಜಾವನ್ನು ತಂದು ಊರುಗಳಲ್ಲಿ ಗಾಂಜಾ ಸೇದುವವರಿಗೆ ಸ್ವಲ್ಪ ಸ್ವಲ್ಪ  ಮಾರಾಟ ಮಾಡಿ  ಹೆಚ್ಚಿನ ಲಾಭ ಗಳಿಸುತ್ತಿರುವುದಾಗಿ ತಿಳಿಸಿರುತ್ತಾರೆ. ನಂತರ ವಾಹನದ ಸಂಖ್ಯೆ ಪರಿಶೀಲಿಸಲಾಗಿ AP-39-TP-1220 ಆಗಿದ್ದು ಇದು ಮೂರು ಚಕ್ರದ ಆಪ್ಪೆ ಆಟೋ ಆಗಿರುತ್ತೆ. ಸದರಿ ಆಟೋವನ್ನು ಮತ್ತು ಮಾಲನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿಯೇ  ನಿಲ್ಲಿಸಿ ಅದರ ಬೆಂಗಾವಲಿಗೆ ಪೊಲೀಸ್ ಸಿಬ್ಬಂದಿಯವರಾದ ಸಿ.ಪಿ.ಸಿ 200 ಚಂದ್ರ ಶೇಖರ್ , ಸಿ.ಪಿ.ಸಿ 32 ಮಂಜುನಾಥ ರವರನ್ನು ನೇಮಿಸಿ ನಾನು  ಆರೋಪಿಗಳನ್ನು ಕೆರೆದುಕೊಂಡು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಮತ್ತು ಆರೋಪಿತರನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ  ಈ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು  ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:53/2021 ಕಲಂ:20(ಬಿ) ಎನ್.ಡಿ.ಪಿ.ಎಸ್. ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 119/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:08/05/2021 ರಂದು ಮದ್ಯಾಹ್ನ 12-00 ಗಂಟೆಗೆ ನ್ಯಾಯಾಲಯದ ಪಿ.ಸಿ-129 ರಾಮಚಂದ್ರ ರವರು ಘನ ನ್ಯಾಯಾಲಯದಿಂದ ಅನುಮತಿಯ ಆದೇಶ ಪ್ರತಿಯನ್ನು ಹಾಜರುಪಡಿಸಿದ್ದು  ಅದರ ಸಾರಾಂಶವೇನೆಂದರೆ, ದಿನಾಂಕ 07-04-2021 ರಂದು  ರಾತ್ರಿ 21-30 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಕೆಂಕರೆ ಗ್ರಾಮದಲ್ಲಿ  ಸರ್ಕಾರಿ ಸ್ಕೂಲ್  ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಮಧ್ಯೆ ಇರುವ ಅರಳಿಮರದ ಜಗುಲಿ ಕಟ್ಟೆಯ ಮೆಲೆ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿಯ ಮೇರೆಗೆ  ಸಿಬ್ಬಂದಿಯವರಾದ ಪಿ.ಸಿ. 518 ಆನಂದ, ಪಿ.ಸಿ. 512 ರಾಜಶೇಖರ, ಪಿ.ಸಿ. 520 ಶ್ರೀನಾಥ್ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.-40-ಜಿ-538 ವಾಹನದಲ್ಲಿ ಠಾಣೆಯನ್ನು ಬಿಟ್ಟು ಕೆಂಕರೆ ಗ್ರಾಮಕ್ಕೆ ಹೋಗಿ  ಪಂಚರನ್ನು ಕರೆಯಿಸಿಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ  ಹೋಗಿದ್ದು ಮರೆಯಹಲ್ಲಿ ವಾಹನವನ್ನು ನಿಲ್ಲಿಸಿ ನೋಡಲಾಗಿ ದೇವಸ್ಥಾನದ ಮುಂಭಾಗದಲ್ಲಿ ಆವರಣವಿದ್ದು ಆವರಣದಲ್ಲಿ  9 ಜನರು ಗುಂಪಾಗಿ ಕುಳಿತುಕೊಂಡು  ರಸ್ತೆಯ ಪಕ್ಕದಲ್ಲಿದ್ದ  ಬೀದಿ ದೀಪದ  ಬೆಳಕಿನಲ್ಲಿ ಅಂದರ್ ಗೆ 500/- ರೂ, ಬಾಹರ್ ಗೆ 500/- ರೂ ಎಂದು ಕೂಗುತ್ತಿದ್ದು  ಆಸಾಮಿಗಳು ಹಣವನ್ನು ಪಣವಾಗಿಟ್ಟು  ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು  ಸಬ್ ಇನ್ಸ್ ಪೆಕ್ಟರ್  ಮತ್ತು ಪೊಲೀಸ್ ಸಿಬ್ಬಂದಿಗಳು ಅವರನ್ನು ಸುತ್ತುವರೆದು   ಹಿಡಿದುಕೊಂಡಿದ್ದು ಹೆಸರು ವಿಳಾಸವನ್ನು ಕೇಳಲಾಗಿ  1)ಕೃಷ್ಣಪ್ಪ ಬಿನ್ ಲೇಟ್ ನ್ಯಾತಪ್ಪ, 40 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 2) ಶಿವಣ್ನ ಬಿನ್ ಲೇಟ್ ನರಸಿಂಹಪ್ಪ, 52 ವರ್ಷ,  ನಾಯಕ ಜನಾಂಗ, ವ್ಯವಸಾಯ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 3) ಲಿಂಗಣ್ಣ ಬಿನ್ ಲೇಟ್ ಮೈಲಾರಪ್ಪ, 46ವರ್ಷ,  ಲಿಂಗಾಯಿತರು,  ಕ್ಯಾಂಟರ್ ಡ್ರೈವರ್, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 4) ರವಿ ಬಿನ್ ವೆಂಕಟರೋಣಪ್ಪ, 37 ವರ್ಷ,  ನಾಯಕ, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 5)ನರಸಿಂಹ ಮೂರ್ತಿ ಬಿನ್ ಖಾದ್ರಪ್ಪ , 44 ವರ್ಷ, ೊಕ್ಕಲಿಗರು, ವ್ಯವಸಾಯ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 6) ಪ್ರಭಾಕರ ರೆಡ್ಡಿ ಬಿನ್  ಲೇಟ್ ಕೆ.ಪಿ.ರಾಮಯ್ಯ, 45 ವರ್ಷ,  ಒಕ್ಕಲಿಗರು, ಕೂಲಿ ಕೆಲಸ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 7)ಆರ್, ಸುರೇಶ ಬಿನ್  ರಾಮಕೃಷ್ಣಪ್ಪ, 24 ವರ್ಷ, ಕುರುಬ ಜನಾಂಗ, ಹೂವಿನ ವ್ಯಾಪಾರ, ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 8) ಈಶ್ವರ ಬಿನ್ ಲೇಟ್ ಬೈರಪ್ಪ,  53 ವರ್ಷ,  ಒಕ್ಕಲಿಗರು,  ಜಿರಾಯ್ತಿ, ವಾಸ ಹಳೇ ಉಪ್ಪಾರಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, 9)ಹನುಮಂತ ಬಿನ್ ಲೇಟ್ ನಂಜುಂಡಪ್ಪ, 55 ವರ್ಷ, ಒಕ್ಕಲಿಗರು, ಕೂಲಿ ಕೆಲಸ , ವಾಸ ಕೆಂಕರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ಸ್ಥಳದಲ್ಲಿ ನೆಲದ ಮೇಲೆ ನೋಡಲಾಗಿ  ಇಸ್ಪೀಟ್ ಎಲೆಗಳು ಬಿದ್ದಿದ್ದು ಎಣಿಸಲಾಗಿ 52 ಎಲೆಗಳು ಇದ್ದು  ನಗದು ಹಣ  ಇರುತ್ತೆ.  ಪಣಕ್ಕಿಟ್ಟಿದ್ದ ಹಣವನ್ನು ಎಣಿಸಲಾಗಿ 11770/- ರೂಗಳಿರುತ್ತೆ.  ಆಸಾಮಿಗಳು ಪಣಕ್ಕಿಟ್ಟಿದ್ದ 1)ನಗದು ಹಣ 11770/- ರೂ, 2) 52 ಇಸ್ಪೀಟ್ ಎಲೆಗಳನ್ನು ಪಂಚರ ಸ,ಮಕ್ಷಮದಲ್ಲಿ ಪಂಚನಾಮೆಯನ್ನು 22-00 ಗಂಟೆಯಿಂದ 23-00 ಗಂಟೆಯವರೆಗೆ  ಬೀದಿ ದೀಪದ ಬೆಳಕಿನಲ್ಲಿ ಹಾಗೂ ಸರ್ಕಾರಿ ವಾಹನದ ಬೆಳಕಿನಲ್ಲಿ ಜರುಗಿಸಿ 9 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಆಸಾಮಿಗಳು ಹಣವನ್ನು ಪಣವಾಗಿಟ್ಟು  ಇಸ್ಪೀಟ್ ಎಲೆಗಳಿಂದ ಅಕ್ರಮ ಅಂದರ್ – ಬಾಹರ್ ಜೂಜಾಟವನ್ನು ಆಡುತ್ತಿದ್ದು  ಆಸಾಮಿಗಳ ವಿರುದ್ದ  ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಎನ್.ಸಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 120/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ 08/05/2021 ರಂದು ಮದ್ಯಾಹ್ನ 1-00 ಗಂಟೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದು  ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ: 12/04/2021 ರಂದು  ಸಂಜೆ 3-00 ಗಂಟೆಯಲ್ಲಿ  ವೃತ್ತ ಕಛೇರಿಯಲ್ಲಿದ್ದಾಗ  ಜಿ ಕೊತ್ತೂರು ಗ್ರಾಮದಲ್ಲಿ  ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್ ಸಿ 224 ವೆಂಕಟೇಶ್ , ಎಪಿಸಿ 133  ಹೇಮಂತ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222  ರಲ್ಲಿ  ಜಿ.ಕೊತ್ತೂರು   ಗ್ರಾಮಕ್ಕೆ ಸಂಜೆ 4-00 ಗಂಟೆಗೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯು ಸಹ ಓಡಿಹೋಗಿರುತ್ತಾನೆ ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಗಂಗಾಧರ ಬಿನ್ ನಾರಾಯಣಪ್ಪ , 36 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಜಿ ಕೊತ್ತೂರು ಗ್ರಾಮ ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ  ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ  90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 6-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ  ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 121/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 08/04/2021 ರಂದು ಮದ್ಯಾಹ್ನ3-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಒಂಟಿಮನೆಹಳ್ಳಿ ಗ್ರಾಮದಲ್ಲಿದ್ದಾಗ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ಜಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ—426 ಲೋಹಿತ್, ಪಿ.ಸಿ-281 ಗುರುಸ್ವಾಮಿ, ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538ರಲ್ಲಿ ಒಂಟಿಮನೆಹಳ್ಳಿ ಗ್ರಾಮದಲ್ಲಿ ಪಂಚರೊಂದಿಗೆ ಒಂದು ಅಂಗಡಿಯ ಬಳಿ ಮದ್ಯಾಹ್ನ 3-15 ಗಂಟೆಗೆ ಹೋಗಿ ಅಲ್ಲಿ, ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ರಾಜಣ್ಣ ಬಿನ್ ರಾಮಾಂಜಿನಪ್ಪ, 49 ವರ್ಷ, ಈಡಿಗರು, ಜಿರಾಯ್ತಿ, ವಾಸ ಒಂಟಿಮನೆಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಮತ್ತು ಪ್ಲಾಸ್ಟಿಕ್ ‍ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ರಾಮಾಂಜಿ ಬಿನ್ ಹನುಮಂತಪ್ಪ, 44 ವರ್ಷ, ಕೊರಚರು, ವ್ಯಾಪಾರ, ವಾಸ ಗೌರಿಗಾನಹಳ್ಳಿ ಗ್ರಾಮ, ಲೇಪಾಕ್ಷಿ ಮಂಡಲಂ, ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 24 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 160 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 843.12 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 3-30 ಗಂಟೆಯಿಂದ ರಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 24 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 122/2021 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:08/05/2021 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದ ಪಿ.ಸಿ-129 ರಾಮಚಂದ್ರ ರವರು ಘನ ನ್ಯಾಯಾಲಯದ ಅನುಮತಿ ಆದೇಶವನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 13/04/2021  ರಂದು ಸಂಜೆ 4-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ, ಹೊಸಕೋಟೆ  ಗ್ರಾಮದಲ್ಲಿ  ಇರುವ  ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು ಪ್ರೊಬೆಷನರಿ ಸಬ್ ಇನ್ಸೆಪೆಕ್ಟರ್ ಮುತ್ತರಾಜು .ಕೆ  ಹಾಗೂ  ಸಿಬ್ಬಂದಿಯವರಾದ, ಹೆಚ್.ಸಿ-166 ಸಂಪಂಗಿರಾಮಯ್ಯ, ಹೆಚ್.ಸಿ-171 ಬಾಬು.ಸಿ, ಹೆಚ್.ಸಿ-170 ಜೂಲಪ್ಪ, ಪಿ.ಸಿ-512  ರಾಜಶೇಖರ, ಪಿ.ಸಿ-518 ಆನಂದ,  ಪಿ.ಸಿ-246 ಸಿಕಂದರ್ ಮುಲ್ಲಾ, ಪಿ.ಸಿ-433 ಬಾಬಾಜಾನ್,  ಪಿ.ಸಿ-381 ಜಗದೀಶ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-426 ಲೋಹಿತ್,  ಜೀಪಿನ ಚಾಲಕ ಎ.ಪಿ.ಸಿ- 143 ಮಹೇಶ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಮತ್ತು ಸಿಬ್ಬಂದಿಯ ದ್ವಿಚಕ್ರ ವಾಹನಗಳಲ್ಲಿ ಹೊಸಕೋಟೆ  ಗ್ರಾಮಕ್ಕೆ ಸಂಜೆ 5-00 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ  ಸರ್ಕಾರಿ ವಾಹನವನ್ನು ಮತ್ತು ಸಿಬ್ಬಂದಿಯ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ ಇರುವ ಸಾರ್ವಜನಿಕ ರಸ್ತೆಯಲ್ಲಿ  ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1) ನರಸಿಂಹರಾಜು ಬಿನ್ ಚಿಕ್ಕನರಸಪ್ಪ, 35 ವರ್ಷ, ಎ.ಕೆ ಜನಾಂಗ ಜಿರಾಯ್ತಿ ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 2) ರಾಮಾಂಜಿನಯ್ಯ ಬಿನ್ ಓಬಳಪ್ಪ, 30 ವರ್ಷ, ನಾಯಕ ಜನಾಂಗ, ಖಾಸಗಿ ಕೆಲಸ ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 3) ರಾಮಾಂಜಿ ಬಿನ್ ಮರಿಯಪ್ಪ, 28 ವರ್ಷ, ಎ.ಕೆ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಹೊಸಕೋಟೆ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 4) ನರಸಿಂಹಪ್ಪ ಬಿನ್ ಪುಟ್ಟನರಸಪ್ಪ, 32 ವರ್ಷ, ವಕ್ಕಲಿಗರು, ಗಾರೆ ಕೆಲಸ ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 5) ಉಗ್ರಪ್ಪ ಬಿನ್ ಲೇಟ್ ಎಳೇನರಸಪ್ಪ, 48 ವರ್ಷ, ವಕ್ಕಲಿಗರು, ಜಿರಾಯ್ತಿ ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 6) ಕೃಷ್ಣ ಬಿ, ಬಿನ್ ಬಾಬಯ್ಯ, 31 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ ವಾಸ ಹೊಸಕೋಟೆ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರುತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ,  7) ಗೋಪಾಲ ಬಿನ್ ಮಳ್ಳೂರಪ್ಪ, 48 ವರ್ಷ, ಗೊಲ್ಲರು , ಜಿರಾಯ್ತಿ ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 8) ರಮೇಶ ಬಿನ್ ತಿಮ್ಮಯ್ಯ, 42 ವರ್ಷ, ಬಲಜಿಗರು, ಚಾಲಕ ವೃತ್ತಿ, ಹೊಸೂರು ಗ್ರಾಮ, ಗೌರೀಬಿದನೂರು ತಾಲ್ಲೂಕು, 9) ನಾಗೇಶ ಬಿನ್ ನಾರಾಯಣಪ್ಪ, 30 ವರ್ಷ, ನಾಯಕರು ಜಿರಾಯ್ತಿ, ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, 10) ರಾಮಚಂದ್ರ ಬಿನ್ ಲೇಟ್ ಮುದ್ದ ಹನುಮಪ್ಪ, 45 ವರ್ಷ, ಜಿರಾಯ್ತಿ, ಎ.ಕೆ ಜನಾಂಗ, ವಾಸ ಹೊಸಕೋಟೆ ಗ್ರಾಮ , ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಎಂದು ತಿಳಿಸಿರುತ್ತಾರೆ.  ಇನ್ನೂ ಕೆಲವರು ಸ್ಥಳದಿಂದ ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು   ಎಣಿಸಲಾಗಿ 1)  6690/- ರೂ ಹಣ , 2) 52 ಸ್ಪೀಟ್ ಎಲೆಗಳು , 3) ಒಂದು ಪ್ಲಾಸ್ಟಿಕ್ ಚೀಲ ಇರುತ್ತೆ. ಸ್ಥಳದಲ್ಲಿ  ಸಂಜೆ 5-00 ಗಂಟೆಯಿಂದ 5-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮೇಲ್ಕಂಡ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ಸಂಜೆ 6-00   ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಳ್ಳಲು   ಸೂಚಿಸಿದ್ದರ ಮೇರೆಗೆ  ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡು ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ಠಾಣಾ ಮೊ.ಸಂ122/2021 ಕಲಂ.87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 09-05-2021 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080